19.07.24         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ- ನೀವು ಡಬಲ್ ಕಿರೀಟಧಾರಿ ರಾಜರಾಗಬೇಕೆಂದರೆ ಬಹಳ ಸರ್ವೀಸ್ ಮಾಡಿ, ಪ್ರಜೆಗಳನ್ನು ಮಾಡಿಕೊಳ್ಳಿ, ಸಂಗಮಯುಗದಲ್ಲಿ ನೀವು ಸರ್ವೀಸ್ ಮಾಡಲೇಬೇಕಾಗಿದೆ, ಇದರಲ್ಲಿಯೇ ಕಲ್ಯಾಣವಿದೆ”

ಪ್ರಶ್ನೆ:
ಹಳೆಯ ಪ್ರಪಂಚದ ವಿನಾಶಕ್ಕೆ ಮೊದಲು ಪ್ರತಿಯೊಬ್ಬರು ಯಾವ ಶೃಂಗಾರ ಮಾಡಿಕೊಳ್ಳಬೇಕು?

ಉತ್ತರ:
ನೀವು ಮಕ್ಕಳು ಯೋಗಬಲದಿಂದ ತಮ್ಮ ಶೃಂಗಾರ ಮಾಡಿಕೊಳ್ಳಿ. ಈ ಯೋಗಬಲದಿಂದಲೇ ಇಡೀ ವಿಶ್ವವು ಪಾವನವಾಗುವುದು. ತಾವೀಗ ವಾನಪ್ರಸ್ಥದಲ್ಲಿ ಹೋಗಬೇಕಾಗಿದೆ ಆದ್ದರಿಂದ ಈ ಶರೀರದ ಶೃಂಗಾರ ಮಾಡಿಕೊಳ್ಳುವ ಅವಶ್ಯಕತೆಯಿಲ್ಲ. ಇದಂತೂ ಕಾಸಿಗೂ ಬೆಲೆಯಿಲ್ಲದಂತಾಗಿದೆ. ಇದರಿಂದ ಮಮತ್ವವನ್ನು ತೆಗೆದುಹಾಕಿ. ವಿನಾಶಕ್ಕೆ ಮೊದಲೇ ತಂದೆಯ ಸಮಾನ ದಯಾಹೃದಯಿಗಳಾಗಿ. ತಮ್ಮ ಮತ್ತು ಅನ್ಯರ ಶೃಂಗಾರ ಮಾಡಿ. ಅಂಧರಿಗೆ ಊರುಗೋಲಾಗಿ.

ಓಂ ಶಾಂತಿ.
ಈಗ ನೀವು ಮಕ್ಕಳು ಇದನ್ನಂತೂ ಚೆನ್ನಾಗಿ ತಿಳಿದುಕೊಂಡಿದ್ದೀರಿ- ತಂದೆಯು ಪಾವನರಾಗುವ ಮಾರ್ಗವನ್ನು ತಿಳಿಸಲು ಬರುತ್ತಾರೆ. ಬಂದು ನಮ್ಮನ್ನು ಪತಿತರಿಂದ ಪಾವನರನ್ನಾಗಿ ಮಾಡಿ ಎಂದು ಇದೊಂದೇ ಮಾತಿಗಾಗಿಯೇ ಅವರನ್ನು ಕರೆಯಲಾಗುತ್ತದೆ ಏಕೆಂದರೆ ಪಾವನ ಪ್ರಪಂಚವು ಕಳೆದು ಈಗ ಪತಿತ ಪ್ರಪಂಚವಾಗಿದೆ. ಪಾವನ ಪ್ರಪಂಚದಿಂದ ಯಾವಾಗ ಬದಲಾಯಿತು, ಎಷ್ಟು ಸಮಯವಾಯಿತು ಇದನ್ನಂತೂ ಯಾರೂ ತಿಳಿದುಕೊಂಡಿಲ್ಲ. ನೀವು ಮಕ್ಕಳಿಗೆ ಗೊತ್ತಿದೆ, ತಂದೆಯು ಮತ್ತೆ ಈ ಶರೀರದಲ್ಲಿ ಬಂದಿದ್ದಾರೆ. ಬಾಬಾ, ಬಂದು ನಾವು ಪತಿತರಿಗೆ ಮಾರ್ಗವನ್ನು ತಿಳಿಸಿ, ನಾವು ಹೇಗೆ ಪಾವನರಾಗುವುದು ಎಂದು ನೀವೇ ಕರೆದಿರಿ. ಇದೂ ನಿಮಗೆ ತಿಳಿದಿದೆ- ನಾವು ಪಾವನ ಪ್ರಪಂಚದಲ್ಲಿದ್ದೆವು, ಈಗ ಪತಿತ ಪ್ರಪಂಚದಲ್ಲಿದ್ದೇವೆ. ಈಗ ಈ ಪ್ರಪಂಚವು ಬದಲಾಗುತ್ತಿದೆ, ಹೊಸಪ್ರಪಂಚ ಕಾಲಾವಧಿಯೆಷ್ಟು, ಹಳೆಯ ಪ್ರಪಂಚದ ಕಾಲಾವಧಿ ಎಷ್ಟು ಎಂದು ಯಾರೂ ತಿಳಿದುಕೊಂಡಿಲ್ಲ. ಗಟ್ಟಿಮುಟ್ಟಾದ ಮನೆಯನ್ನು ಕಟ್ಟಿಸಿದಾಗ ಇದರ ಆಯಸ್ಸು ಇಷ್ಟು ವರ್ಷಗಳಿರುತ್ತದೆಯೆಂದು ಹೇಳುತ್ತಾರೆ. ಮನೆಯು ಸರಿಯಾಗಿ ಕಟ್ಟದಿದ್ದರೆ ಅದಕ್ಕೂ ಅದು ಇಷ್ಟು ವರ್ಷಗಳಿರಬಹುದೆಂದು ಹೇಳುತ್ತಾರೆ. ಇದು ಎಷ್ಟು ವರ್ಷಗಳು ನಡೆಯಬಹುದೆಂದು ತಿಳಿದುಕೊಳ್ಳುತ್ತಾರೆ. ಮನುಷ್ಯರಿಗೆ ಈ ಇಡೀ ಪ್ರಪಂಚದ ಆಯಸ್ಸು ಎಷ್ಟಿದೆ ಎಂದು ಗೊತ್ತೇ ಇಲ್ಲ ಅಂದಮೇಲೆ ಅವಶ್ಯವಾಗಿ ತಂದೆಯೇ ಬಂದು ತಿಳಿಸಬೇಕಾಗುತ್ತದೆ. ತಂದೆಯು ತಿಳಿಸುತ್ತಾರೆ- ಮಕ್ಕಳೇ, ಈಗ ಈ ಹಳೆಯ ಪ್ರಪಂಚವು ಕೊನೆಯಾಗಲಿದೆ. ಹೊಸ ಪಾವನಪ್ರಪಂಚವು ಸ್ಥಾಪನೆಯಾಗುತ್ತಾ ಇದೆ. ಹೊಸ ಪ್ರಪಂಚದಲ್ಲಿ ಕಡಿಮೆ ಜನಸಂಖ್ಯೆಯಿತ್ತು, ಹೊಸ ಪ್ರಪಂಚವು ಸತ್ಯಯುಗವಾಗಿದೆ, ಅದಕ್ಕೆ ಸುಖಧಾಮವೆಂದು ಹೇಳುತ್ತಾರೆ. ಇದು ದುಃಖಧಾಮವಾಗಿದೆ ಅಂದಮೇಲೆ ಇದರ ಅಂತ್ಯವು ಅವಶ್ಯವಾಗಿ ಆಗಬೇಕಾಗಿದೆ. ಇದರ ನಂತರ ಸುಖಧಾಮದ ಇತಿಹಾಸವು ಪುನರಾವರ್ತನೆಯಾಗಲಿದೆ. ಎಲ್ಲರಿಗೆ ಇದನ್ನು ತಿಳಿಸಬೇಕಾಗಿದೆ. ತಂದೆಯು ಆದೇಶ ನೀಡುತ್ತಾರೆ- ಮಕ್ಕಳೇ, ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿ ಮತ್ತೆ ಅನ್ಯರಿಗೂ ಈ ಮಾರ್ಗವನ್ನು ತಿಳಿಸಿ. ಲೌಕಿಕ ತಂದೆಯನ್ನಂತೂ ಎಲ್ಲರೂ ತಿಳಿದುಕೊಂಡಿದ್ದಾರೆ, ಪಾರಲೌಕಿಕ ತಂದೆಯನ್ನು ಯಾರೂ ತಿಳಿದುಕೊಂಡಿಲ್ಲ, ಸರ್ವವ್ಯಾಪಿ ಎಂದು ಹೇಳಿಬಿಡುತ್ತಾರೆ. ಮೀನು-ಮೊಸಳೆಯ ಅವತಾರ ಅಥವಾ 84 ಲಕ್ಷ ಯೋನಿಗಳಲ್ಲಿ ತೆಗೆದುಕೊಂಡು ಹೋಗಿದ್ದಾರೆ, ಪ್ರಪಂಚದಲ್ಲಿ ಯಾರೂ ತಂದೆಯನ್ನು ಅರಿತುಕೊಂಡಿಲ್ಲ. ತಂದೆಯನ್ನು ಅರಿತುಕೊಂಡಾಗ ತಿಳಿಯುತ್ತದೆ, ಒಂದುವೇಳೆ ಕಲ್ಲು-ಮುಳ್ಳಿನಲ್ಲಿದ್ದರೆ ಆಸ್ತಿಯ ಮಾತೇ ಇರುತ್ತಿರಲಿಲ್ಲ. ದೇವತೆಗಳ ಪೂಜೆಯನ್ನೇ ಮಾಡುತ್ತಾರೆ ಆದರೆ ಯಾರ ಪರಿಚಯವನ್ನೂ ತಿಳಿದುಕೊಂಡಿಲ್ಲ. ಸಂಪೂರ್ಣ ಈ ಮಾತುಗಳಲ್ಲಿ ಅಜ್ಞಾನಿಗಳಾಗಿದ್ದಾರೆ ಆದ್ದರಿಂದ ಮೊಟ್ಟಮೊದಲು ಮೂಲಮಾತನ್ನು ತಿಳಿಸಬೇಕು. ಚಿತ್ರಗಳಿಂದ ಯಾರೂ ತಿಳಿದುಕೊಳ್ಳುವುದಿಲ್ಲ, ಮನುಷ್ಯರು ತಂದೆಯನ್ನೂ ತಿಳಿದುಕೊಂಡಿಲ್ಲ. ಪ್ರಾರಂಭದಿಂದ ಹಿಡಿದು ಈ ರಚನೆಯು ಹೇಗೆ ರಚಿಸಲ್ಪಟ್ಟಿದೆಯೆಂದು ತಿಳಿದುಕೊಂಡಿಲ್ಲ. ದೇವತೆಗಳ ರಾಜ್ಯವು ಯಾವಾಗ ಇತ್ತು, ಯಾರನ್ನು ಪೂಜಿಸುತ್ತಾರೆ ಅವರ ಬಗ್ಗೆ ಏನೂ ಗೊತ್ತಿಲ್ಲ. ಲಕ್ಷಾಂತರ ವರ್ಷಗಳು ಸೂರ್ಯವಂಶಿ ರಾಜಧಾನಿಯು ನಡೆಯಿತು ನಂತರ ಚಂದ್ರವಂಶಿ ರಾಜ್ಯವು ಲಕ್ಷಾಂತರ ವರ್ಷಗಳು ನಡೆಯಿತೆಂದು ತಿಳಿಯುತ್ತಾರೆ. ಇದಕ್ಕೆ ಅಜ್ಞಾನವೆಂದು ಹೇಳಲಾಗುತ್ತದೆ. ಈಗ ನೀವು ಮಕ್ಕಳಿಗೆ ತಂದೆಯು ತಿಳಿಸಿದ್ದಾರೆ, ಮತ್ತೆ ನೀವು ಅದನ್ನು ಪುನರಾವರ್ತಿಸುತ್ತೀರಿ. ತಂದೆಯು ಪುನರಾವರ್ತಿಸುತ್ತಾರಲ್ಲವೆ. ಹೀಗೆ ತಿಳಿಸಿಕೊಡಿ, ಸಂದೇಶ ಕೊಡಿ ಇಲ್ಲವೆಂದರೆ ರಾಜಧಾನಿಯು ಹೇಗೆ ಸ್ಥಾಪನೆಯಾಗುತ್ತದೆ! ಇಲ್ಲಿ ಕುಳಿತುಬಿಡುವುದರಿಂದ ಆಗುವುದಿಲ್ಲ. ಹಾ! ಮನೆಯಲ್ಲಿ ಕುಳಿತುಕೊಳ್ಳುವವರು ಬೇಕು, ಅವರಂತೂ ನಾಟಕದನುಸಾರ ಕುಳಿತಿದ್ದಾರೆ. ಯಜ್ಞದ ಸಂಭಾಲನೆ ಮಾಡುವವರೂ ಬೇಕು, ತಂದೆಯ ಬಳಿ ಮಿಲನ ಮಾಡುವುದಕ್ಕಾಗಿ ಬಹಳ ಮಕ್ಕಳು ಬರುತ್ತಾರೆ ಏಕೆಂದರೆ ಶಿವತಂದೆಯಿಂದಲೇ ಆಸ್ತಿಯನ್ನು ತೆಗೆದುಕೊಳ್ಳಬೇಕಾಗಿದೆ. ಲೌಕಿಕ ತಂದೆಯ ಬಳಿ ಮಗನು ಬಂದರೆ ನಾವು ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳಬೇಕೆಂದು ತಿಳಿಯುತ್ತಾರೆ. ಮಗಳಂತೂ ಹೋಗಿ ಅರ್ಧಾಂಗಿಯಾಗುತ್ತಾಳೆ. ಸತ್ಯಯುಗದಲ್ಲಿ ಎಂದೂ ಆಸ್ತಿಗಾಗಿ ಜಗಳವಾಡುವುದೇ ಇಲ್ಲ. ಇಲ್ಲಿ ಕಾಮವಿಕಾರದ ಮೇಲೆ ಜಗಳವಾಗುತ್ತದೆ. ಅಲ್ಲಂತೂ ಈ ಐದು ಭೂತಗಳೇ ಇರುವುದಿಲ್ಲ ಆದ್ದರಿಂದ ದುಃಖದ ಹೆಸರು, ಗುರುತೂ ಇರುವುದಿಲ್ಲ ಎಲ್ಲರೂ ನಷ್ಟಮೋಹಿಗಳಾಗಿರುತ್ತಾರೆ. ಇದನ್ನಂತೂ ತಿಳಿಯುತ್ತಾರೆ- ಸ್ವರ್ಗವಿತ್ತು, ಅದು ಕಳೆದುಹೋಯಿತು. ಚಿತ್ರಗಳೂ ಇವೆ ಆದರೆ ಈ ವಿಚಾರವು ನೀವು ಮಕ್ಕಳಿಗೆ ಈಗಲೇ ಬರುತ್ತದೆ. ನೀವು ತಿಳಿದುಕೊಂಡಿದ್ದೀರಿ, ಈ ಚಕ್ರವು ಪ್ರತೀ 5000 ವರ್ಷಗಳ ನಂತರ ಪುನರಾವರ್ತನೆಯಾಗುತ್ತದೆ. ಸೂರ್ಯವಂಶಿ, ಚಂದ್ರವಂಶಿ ರಾಜಧಾನಿಗಳು 2500 ವರ್ಷಗಳು ನಡೆಯಿತೆಂದು ಯಾವುದೇ ಶಾಸ್ತ್ರಗಳಲ್ಲಿ ಬರೆದಿಲ್ಲ. ಪತ್ರಿಕೆಯಲ್ಲಿ ಬಂದಿತು ಆದರೆ ರಾಜಭವನದಲ್ಲಿ ರಾಮಾಯಣವನ್ನು ಕೇಳುತ್ತಿದ್ದಾರೆ ಎಂದು. ಏನೇ ಆಪತ್ತುಗಳು ಬಂದರೆ ಮನುಷ್ಯರು ಭಗವಂತನನ್ನು ಖುಷಿಪಡಿಸಲು ಭಕ್ತಿಯಲ್ಲಿ ತೊಡಗುತ್ತಾರೆ ಆದರೆ ಭಗವಂತನು ರಾಜಿಯಾಗುವುದಿಲ್ಲ. ಇದಂತೂ ನಾಟಕದಲ್ಲಿ ನಿಗಧಿಯಾಗಿದೆ, ಭಕ್ತಿಯಿಂದ ಎಂದೂ ಭಗವಂತನು ಖುಷಿಪಡುವುದಿಲ್ಲ, ನೀವು ಮಕ್ಕಳಿಗೆ ಗೊತ್ತಿದೆ- ಅರ್ಧಕಲ್ಪ ಭಕ್ತಿಯು ನಡೆಯುತ್ತದೆ, ತಾವೇ ದುಃಖವನ್ನು ಪಡೆಯುತ್ತಿರುತ್ತಾರೆ, ಭಕ್ತಿ ಮಾಡುತ್ತಾ-ಮಾಡುತ್ತಾ ಎಲ್ಲಾ ಹಣವನ್ನು ಸಮಾಪ್ತಿ ಮಾಡಿಬಿಡುತ್ತಾರೆ. ಈ ಮಾತುಗಳನ್ನು ಕೆಲವರೇ ವಿರಳವಾಗಿ ತಿಳಿದುಕೊಳ್ಳುತ್ತಾರೆ. ಯಾವ ಮಕ್ಕಳು ಸರ್ವೀಸಿನಲ್ಲಿರುತ್ತಾರೆಯೋ ಅವರು ಸಮಾಚಾರವನ್ನು ತಿಳಿಸುತ್ತಿರುತ್ತಾರೆ. ತಿಳಿಸಲಾಗುತ್ತದೆ- ಇದು ಈಶ್ವರೀಯ ಪರಿವಾರವಾಗಿದೆ. ಈಶ್ವರನಂತೂ ದಾತನಾಗಿದ್ದಾರೆ, ಅವರು ತೆಗೆದುಕೊಳ್ಳುವವರಲ್ಲ, ಅವರಿಗೆ ಯಾರೂ ಕೊಡುವುದೂ ಇಲ್ಲ. ಇನ್ನೂ ಎಲ್ಲವನ್ನೂ ನಷ್ಟಮಾಡುತ್ತಿರುತ್ತಾರೆ.

ತಂದೆಯು ನೀವು ಮಕ್ಕಳನ್ನು ಕೇಳುತ್ತಿರುತ್ತಾರೆ- ಮಕ್ಕಳೇ- ನಿಮಗೆ ಎಷ್ಟೊಂದು ಹಣವನ್ನು ಕೊಟ್ಟೆನು, ನಿಮ್ಮನ್ನು ಸ್ವರ್ಗದ ಮಾಲೀಕರನ್ನಾಗಿ ಮಾಡಿದೆನು ಮತ್ತೆ ಅದೆಲ್ಲವೂ ಎಲ್ಲಿಗೆ ಹೋಯಿತು? ಇಷ್ಟೊಂದು ಕಂಗಾಲರು ಹೇಗಾದಿರಿ? ಈಗ ನಾನು ಪುನಃ ಬಂದಿದ್ದೇನೆ. ನೀವು ಎಷ್ಟು ಪದಮಾಪದಮ ಭಾಗ್ಯವಂತರಾಗುತ್ತಿದ್ದೀರಿ, ಮನುಷ್ಯರಂತೂ ಈ ಮಾತುಗಳನ್ನು ತಿಳಿದುಕೊಂಡೇ ಇಲ್ಲ. ನಿಮಗೆ ಗೊತ್ತಿದೆ, ಈಗ ಹಳೆಯ ಪ್ರಪಂಚದಲ್ಲಿ ನಾವು ಇರಬಾರದು, ಇದಂತೂ ಸಮಾಪ್ತಿಯಾಗುವುದಿದೆ. ಮನುಷ್ಯರ ಬಳಿಯಲ್ಲಿ ಎಷ್ಟು ಹಣವಿದೆಯೋ ಅದು ಯಾರ ಕೈಯಲ್ಲಿಯೂ ಬರುವುದಿಲ್ಲ. ವಿನಾಶವಾದರೆ ಎಲ್ಲವೂ ಸಮಾಪ್ತಿಯಾಗಿಬಿಡುತ್ತದೆ. ಎಷ್ಟೊಂದು ಮೈಲಿಗಳಲ್ಲಿ ದೊಡ್ಡ-ದೊಡ್ಡ ಕಟ್ಟಡಗಳು ನಿರ್ಮಾಣಗೊಂಡಿದೆ. ಬಹಳಷ್ಟು ಇವೆ ಇದೆಲ್ಲವೂ ಸಮಾಪ್ತಿಯಾಗಿಬಿಡುತ್ತವೆ ಏಕೆಂದರೆ ನೀವು ತಿಳಿದುಕೊಂಡಿದ್ದೀರಿ- ಯಾವಾಗ ನಮ್ಮ ರಾಜ್ಯವಿತ್ತೋ ಆಗ ಮತ್ತ್ಯಾರೂ ಇರಲಿಲ್ಲ. ಅಲ್ಲಿ ಅಪಾರ ಸಂಪತ್ತು ಇತ್ತು. ನೀವು ಮುಂದೆಹೋದಂತೆ ಏನೇನಾಗುತ್ತದೆ ಎಂದು ನೋಡುತ್ತಾ ಇರುತ್ತೀರಿ. ಅವರಲ್ಲಿ ಎಷ್ಟೊಂದು ಚಿನ್ನ, ಬೆಳ್ಳಿ, ನೋಟುಗಳು ಇತ್ಯಾದಿಯಿದೆಯೇ ಅದೆಲ್ಲಾ ಬಜೆಟ್ ಹೊರಗೆ ಬರುತ್ತದೆ. ಇಷ್ಟು ಆದಾಯವಿದೆ, ಇಷ್ಟು ಖರ್ಚಿದೆ ಎಂದು ಘೋಷಿಸುತ್ತಾರೆ. ಸಿಡಿಮದ್ದುಗಳಿಗೆ ಎಷ್ಟೊಂದು ಖರ್ಚಾಗಿದೆ, ಈಗ ಸಿಡಿಮದ್ದುಗಳಿಗಾಗಿ ಇಷ್ಟೊಂದು ಖರ್ಚು ಮಾಡುತ್ತಾರೆ. ಅದರಿಂದ ಏನೂ ಲಾಭವಿಲ್ಲ, ಇವು ಇಟ್ಟುಕೊಳ್ಳುವ ವಸ್ತುಗಳಂತೂ ಅಲ್ಲ, ಚಿನ್ನ ಮತ್ತು ಬೆಳ್ಳಿಯಂತೂ ಇಟ್ಟುಕೊಳ್ಳಬೇಕಾಗುತ್ತದೆ. ಪ್ರಪಂಚವು ಸ್ವರ್ಣೀಮಯುಗವಾಗಿದ್ದಾಗ ಚಿನ್ನದ ನಾಣ್ಯಗಳಿರುತ್ತವೆ. ತ್ರೇತಾಯುಗದಲ್ಲಿ ಬೆಳ್ಳಿಯ ನಾಣ್ಯಗಳಿರುತ್ತವೆ. ಅಲ್ಲಂತೂ ಅಪಾರವಾಗಿರುತ್ತವೆ ನಂತರ ಕಡಿಮೆಯಾಗುತ್ತಾ ಬಂದಿದೆ. ಕಾಗದವಂತೂ ಕೆಲಸಕ್ಕೆ ಬರುವ ವಸ್ತುವಲ್ಲ. ಅಲ್ಲಂತೂ ಅಪಾರವಾಗಿರುತ್ತವೆ ನಂತರ ಕಡಿಮೆಯಾಗುತ್ತಾ-ಆಗುತ್ತಾ ಈಗ ನೋಡಿ ಏನು ಬಂದಿವೆ!! ಕಾಗದದ ನೋಟುಗಳು. ವಿದೇಶದಲ್ಲಿಯೂ ಕಾಗದದ ನೋಟುಗಳು ಬಂದಿವೆ. ಕಾಗದವಂತೂ ಕೆಲಸಕ್ಕೆ ಬರುವ ವಸ್ತುವಲ್ಲ ಬಾಕಿ ಇನ್ನೇನಿರುತ್ತದೆ, ಈ ದೊಡ್ಡ-ದೊಡ್ಡ ಕಟ್ಟಡಗಳು ಸಮಾಪ್ತಿಯಾಗುತ್ತವೆ ಆದ್ದರಿಂದ ತಂದೆಯು ತಿಳಿಸುತ್ತಾರೆ- ಮಧುರಾತಿ ಮಧುರ ಮಕ್ಕಳೇ, ಇದೆಲ್ಲವನ್ನೂ ನೋಡುತ್ತೀರಿ ಇದೇನೂ ಇಲ್ಲವೆಂದು ತಿಳಿಯಿರಿ. ಇದೆಲ್ಲವೂ ಸಮಾಪ್ತಿಯಾಗುವುದಿದೆ. ಶರೀರವೂ ಸಹ ಹಳೆಯದು, ಕೆಲಸಕ್ಕೆ ಬಾರದ್ದಾಗಿದೆ. ಭಲೆ ಯಾರೇ ಎಷ್ಟೇ ಸುಂದರವಾಗಿರಲಿ, ಈ ಪ್ರಪಂಚಕ್ಕೆ ಇನ್ನು ಸ್ವಲ್ಪವೇ ಸಮಯವಿದೆ, ಯಾವುದೇ ನೆಲೆಯಿಲ್ಲ. ಕುಳಿತು-ಕುಳಿತಿದ್ದಂತೆಯೇ ಮನುಷ್ಯರಿಗೆ ಏನೇನೋ ಆಗಿಬಿಡುತ್ತದೆ, ಹೃದಯಾಘಾತವಾಗಿಬಿಡುತ್ತದೆ. ಮನುಷ್ಯರದು ಯಾವುದೇ ಭರವಸೆಯಿಲ್ಲ, ಸತ್ಯಯುಗದಲ್ಲಿ ಈ ರೀತಿಯಿರುವುದಿಲ್ಲ. ಅಲ್ಲಂತೂ ಯೋಗಬಲದಿಂದ ಕಾಯವು ಕಲ್ಪತರು ಸಮಾನವಾಗಿರುತ್ತದೆ. ಈಗ ನೀವು ಮಕ್ಕಳಿಗೆ ತಂದೆಯು ಸಿಕ್ಕಿದ್ದಾರೆ, ತಿಳಿಸುತ್ತಾರೆ, ಮಕ್ಕಳೇ ಈ ಪ್ರಪಂಚದಲ್ಲಿ ನೀವು ಇರುವಂತಿಲ್ಲ. ಇದು ಛೀ ಛೀ ಪ್ರಪಂಚವಾಗಿದೆ, ಈಗ ಯೋಗಬಲದಿಂದ ತಮ್ಮ ಶೃಂಗಾರ ಮಾಡಿಕೊಳ್ಳಬೇಕಾಗಿದೆ. ಸತ್ಯಯುಗದಲ್ಲಂತೂ ಮಕ್ಕಳೂ ಸಹ ಯೋಗಬಲದಿಂದ ಜನ್ಮ ಪಡೆಯುತ್ತಾರೆ. ಅಲ್ಲಿ ವಿಕಾರದ ಮಾತೇ ಇರುವುದಿಲ್ಲ. ಯೋಗಬಲದಿಂದ ನೀವು ಇಡೀ ವಿಶ್ವವನ್ನು ಪಾವನವನ್ನಾಗಿ ಮಾಡುತ್ತೀರೆಂದರೆ ಇನ್ನು ದೊಡ್ಡ ಮಾತೇನಿದೆ! ಈ ಮಾತುಗಳನ್ನೂ ಯಾರು ನಮ್ಮ ಮನೆತನದವರಾಗಿರುವರೋ ಅವರೇ ತಿಳಿದುಕೊಳ್ಳುತ್ತಾರೆ ಉಳಿದವರೆಲ್ಲರೂ ಶಾಂತಿಧಾಮಕ್ಕೆ ಹೋಗಬೇಕಾಗಿದೆ. ಅದು ಆತ್ಮಗಳ ಮನೆಯಾಗಿದೆ ಆದರೂ ಮನುಷ್ಯರು ತಿಳಿದುಕೊಳ್ಳುವುದಿಲ್ಲ. ಒಂದು ಆತ್ಮವು ಹೋಗುತ್ತದೆ, ಇನ್ನೊಂದು ಬರುತ್ತಾ ಇರುತ್ತದೆ. ಸೃಷ್ಟಿಯು ವೃದ್ಧಿಯನ್ನು ಹೊಂದುತ್ತಾ ಇರುತ್ತದೆಯೆಂದು ಅವರು ಹೇಳುತ್ತಾರೆ. ರಚಯಿತ ಮತ್ತು ರಚನೆಯನ್ನು ನೀವು ತಿಳಿದುಕೊಂಡಿದ್ದೀರಿ ಆದ್ದರಿಂದ ಅನ್ಯರಿಗೂ ತಿಳಿಸುವ ಪ್ರಯತ್ನಪಡುತ್ತೀರಿ. ಇವರು ತಂದೆಯ ವಿದ್ಯಾರ್ಥಿಯಾಗಲಿ, ಎಲ್ಲವನ್ನೂ ಅರಿತುಕೊಳ್ಳಲಿ, ಖುಷಿಯಲ್ಲಿ ಬಂದುಬಿಡಲೆಂದು ನೀವು ಅನ್ಯರಿಗೆ ತಿಳಿಸಿಕೊಡುತ್ತೀರಿ. ನಾವಂತೂ ಈಗ ಅಮರ ಲೋಕದಲ್ಲಿ ಹೋಗುತ್ತೇವೆ, ಅರ್ಧ ಕಲ್ಪ ಸುಳ್ಳು ಕಥೆಗಳನ್ನು ಕೇಳಿದ್ದೇವೆ, ಈಗಂತೂ ನಾವು ಅಮರಲೋಕದಲ್ಲಿ ಹೋಗುತ್ತೇವೆಂದು ಬಹಳ ಖುಷಿಯಿರಬೇಕು. ಈಗ ಮೃತ್ಯುಲೋಕದ ಅಂತ್ಯವಾಗಿದೆ. ಇಲ್ಲಿಂದ ನಾವು ಖುಷಿಯ ಖಜಾನೆಯನ್ನು ತುಂಬಿಕೊಂಡು ಹೋಗುತ್ತೇವೆ ಅಂದಮೇಲೆ ಈ ಸಂಪಾದನೆಯನ್ನು ಸಂಪಾದಿಸುವುದರಲ್ಲಿ, ಜೋಳಿಗೆಯನ್ನು ತುಂಬಿಕೊಳ್ಳುವುದರಲ್ಲಿ ಒಳ್ಳೆಯ ರೀತಿಯಲ್ಲಿ ತೊಡಗಬೇಕು. ಸಮಯವನ್ನು ವ್ಯರ್ಥವಾಗಿ ಕಳೆಯಬಾರದು. ಈಗಂತೂ ನಾವು ಅನ್ಯರ ಸೇವೆ ಮಾಡಬೇಕು, ಜೋಳಿಗೆಯನ್ನು ತುಂಬಿಕೊಳ್ಳಬೇಕು. ಇಷ್ಟೇ ಸಾಕು. ದಯಾಹೃದಯಿಗಳು ಹೇಗಾಗುವುದೆಂದು ತಂದೆಯು ತಿಳಿಸಿಕೊಡುತ್ತಾರೆ. ಅಂಧರಿಗೆ ಊರುಗೋಲಾಗಿ. ಈ ಪ್ರಶ್ನೆಯನ್ನೂ ಯಾವುದೇ ಸನ್ಯಾಸಿಗಳು, ವಿದ್ವಾಂಸ ಮೊದಲಾದವರು ಕೇಳಲು ಸಾಧ್ಯವಿಲ್ಲ. ಸ್ವರ್ಗವೆಲ್ಲಿದೆ, ನರಕವೆಲ್ಲಿರುತ್ತದೆ ಎಂದು ಪಾಪ ಅವರಿಗೇನು ಗೊತ್ತಿರುತ್ತದೆ. ಭಲೆ ಎಷ್ಟೇ ದೊಡ್ಡ-ದೊಡ್ಡ ಸ್ಥಾನಮಾನದವರಿರಬಹುದು, ವಾಯುಸೇನಾಧಿಕಾರಿ ಇರಬಹುದು, ಭೂಸೇನಾಧಿಕಾರಿ ಆಗಿರಬಹುದು ಆದರೆ ಇವರೆಲ್ಲರೂ ನಿಮ್ಮ ಮುಂದೆ ಏನು! ನಿಮಗೆ ಗೊತ್ತಿದೆ, ಇನ್ನು ಸ್ವಲ್ಪ ಸಮಯವಿದೆ, ಸ್ವರ್ಗದ ಬಗ್ಗೆ ಯಾರಿಗೂ ಗೊತ್ತಿಲ್ಲ. ಈ ಸಮಯದಲ್ಲಿ ಎಲ್ಲಾ ಕಡೆ ಯುದ್ಧಗಳು ನಡೆಯುತ್ತವೆ ಅವರಿಗೆ ವಿಮಾನಗಳು ಅಥವಾ ಸೈನ್ಯ ಮೊದಲಾದ ಅವಶ್ಯಕತೆಯಿರುವುದಿಲ್ಲ. ಇವರೆಲ್ಲರೂ ಸಮಾಪ್ತಿಯಾಗುತ್ತಾರೆ, ಕೆಲವರು ಮನುಷ್ಯರು ಉಳಿಯುತ್ತಾರೆ. ಈ ವಿಮಾನಗಳು ದೀಪಗಳು ಇತ್ಯಾದಿ ಇರುತ್ತದೆ ಆದರೆ ಪ್ರಪಂಚವು ಬಹಳ ಚಿಕ್ಕದಾಗಿರುತ್ತದೆ, ಭಾರತವೇ ಇರುತ್ತದೆ. ಹೇಗೆ ಚಿಕ್ಕಮಾದರಿಯನ್ನು ಮಾಡಿಡುತ್ತಾರಲ್ಲವೆ. ಹಾಗೆಯೇ ಈ ಪ್ರಪಂಚವಿರುತ್ತದೆ. ಕೊನೆಗೂ ಮೃತ್ಯುವು ಯಾವಾಗ ಬರುವುದೆಂದು ಮತ್ತ್ಯಾರ ಬುದ್ಧಿಯಲ್ಲಿಯೂ ಇಲ್ಲ. ನಿಮಗೆ ತಿಳಿದಿದೆ, ಈಗ ಮೃತ್ಯು ಸನ್ಮುಖದಲ್ಲಿ ನಿಂತಿದೆ. ನಾವು ಇಲ್ಲಿ ಕುಳಿತಿದ್ದಂತೆಯೇ ಬಾಂಬುಗಳನ್ನು ಎಸೆಯುತ್ತೇವೆಂದು ಅವರು ಹೇಳುತ್ತಾರೆ ಹಾಗೂ ಎಲ್ಲಿ ಬೀಳುವುದೋ ಅಲ್ಲಿ ಎಲ್ಲವೂ ಸಮಾಪ್ತಿಯಾಗಿಬಿಡುತ್ತದೆ. ಯಾವುದೇ ಸೇನೆಯ ಅವಶ್ಯಕತೆಯಿಲ್ಲ. ಒಂದೊಂದು ವಿಮಾನವೂ ಸಹ ಕೋಟ್ಯಾಂತರ ರೂಪಾಯಿಗಳಷ್ಟು ಖರ್ಚನ್ನು ತಿಂದುಬಿಡುತ್ತದೆ. ಎಲ್ಲರ ಬಳಿ ಎಷ್ಟೊಂದು ಚಿನ್ನವಿರುತ್ತದೆ. ಕೆಲವೊಂದು ಟನ್ಗಳಷ್ಟು ಚಿನ್ನ ಇರುತ್ತದೆ. ಅದೆಲ್ಲವೂ ಸಮುದ್ರದಲ್ಲಿ ಹೊರಟುಹೋಗುತ್ತದೆ.

ಇಡೀ ರಾವಣರಾಜ್ಯವು ಒಂದು ದ್ವೀಪವಾಗಿದೆ, ಎಣಿಸಲಾರದಷ್ಟು ಮನುಷ್ಯರಿದ್ದಾರೆ, ನೀವೆಲ್ಲರೂ ತಮ್ಮ ರಾಜ್ಯವನ್ನು ಸ್ಥಾಪನೆ ಮಾಡುತ್ತಿದ್ದೀರಿ ಅಂದಮೇಲೆ ಸರ್ವೀಸಿನಲ್ಲಿ ತತ್ಪರರಾಗಿರಬೇಕು, ಎಲ್ಲಿಯಾದರೂ ಬರಗಾಲ ಬಂದರೆ ನೋಡಿ, ಹೇಗೆ ತತ್ಪರರಾಗಿಬಿಡುತ್ತಾರೆ. ಎಲ್ಲರಿಗೆ ಆಹಾರವನ್ನು ತಲುಪಿಸುವ ಸೇವೆಯಲ್ಲಿ ತೊಡಗುತ್ತಾರೆ. ನೀರು ಬರುತ್ತದೆಯೆಂದರೆ ಮೊದಲೇ ಓಡಲು ಪ್ರಾರಂಭಿಸುತ್ತಾರೆ ಅಂದಾಗ ವಿಚಾರ ಮಾಡಿ, ಎಲ್ಲರೂ ಹೇಗೆ ಸಮಾಪ್ತಿಯಾಗಬಹುದು? ಸೃಷ್ಟಿಯ ಸುತ್ತಲೂ ಸಾಗರವಿದೆ. ವಿನಾಶವಾದರೆ ಎಲ್ಲವೂ ಜಲಮಯವಾಗಿಬಿಡುತ್ತದೆ, ನೀರೇ ನೀರು ತುಂಬಿಬಿಡುತ್ತದೆ. ಬುದ್ಧಿಯಲ್ಲಿರುತ್ತದೆ, ನಮ್ಮ ರಾಜ್ಯವಿದ್ದಾಗ ಈ ಬಾಂಬೆ, ಕರಾಚಿ ಯಾವುದೂ ಇರಲಿಲ್ಲ. ಕೊನೆಗೆ ಭಾರತವು ಎಷ್ಟು ಚಿಕ್ಕದಾಗಿರುತ್ತದೆ, ಅದೂ ಸಹ ಸಿಹಿನೀರಿನ ತೀರದಲ್ಲಿರುತ್ತದೆ. ಅಲ್ಲಿ ಬಾವಿ ಇತ್ಯಾದಿಗಳ ಅವಶ್ಯಕತೆಯಿರುವುದಿಲ್ಲ. ನೀರು ಬಹಳ ಸ್ವಚ್ಛಕುಡಿಯಲು ಯೋಗ್ಯವಾಗಿರುತ್ತದೆ, ನದಿಗಳಲ್ಲಿ ಆಟಗಳನ್ನು ಆಡುತ್ತಾರೆ, ಅಲ್ಲಿ ಕೊಳಕಿನ ಮಾತಿಲ್ಲ, ಹೆಸರೇ ಆಗಿದೆ- ಸ್ವರ್ಗ, ಅಮರಲೋಕ. ಹೆಸರನ್ನು ಕೇಳುತ್ತಿದ್ದಂತೆಯೇ ಬೇಗ-ಬೇಗನೆ ತಂದೆಯಿಂದ ಪೂರ್ಣ ಓದಿ ಆಸ್ತಿಯನ್ನು ಪಡೆಯಬೇಕೆಂದು ಮನಸ್ಸಾಗುತ್ತದೆ. ಓದಬೇಕು ಮತ್ತು ಓದಿಸಬೇಕು ಎಲ್ಲರಿಗೆ ಸಂದೇಶ ಕೊಡಬೇಕೆಂದು ಬಯಕೆಯಾಗುತ್ತದೆ. ಕಲ್ಪದ ಹಿಂದೆ ಯಾರು ಆಸ್ತಿಯನ್ನು ಪಡೆದುಕೊಂಡಿದ್ದರೋ ಅವರೇ ಪಡೆಯುತ್ತಾರೆ. ಪುರುಷಾರ್ಥ ಮಾಡುತ್ತಾರೆ ಏಕೆಂದರೆ ಪಾಪ! ಮನುಷ್ಯರು ತಂದೆಯನ್ನು ಅರಿತುಕೊಂಡಿಲ್ಲ. ತಂದೆಯು ತಿಳಿಸುತ್ತಾರೆ- ಪವಿತ್ರರಾಗಿ. ಪವಿತ್ರರಾದವರಿಗೆ ಅಂಗೈಯಲ್ಲಿ ಸ್ವರ್ಗವು ಸಿಗುತ್ತದೆ ಅಂದಮೇಲೆ ಅವರು ಏಕೆ ಪವಿತ್ರರಾಗಿರುವುದಿಲ್ಲ. ಹೇಳಿ, ನಮಗೆ ವಿಶ್ವದ ರಾಜ್ಯಭಾಗ್ಯವೇ ಸಿಗುತ್ತದೆಯೆಂದರೆ ನಾವೇಕೆ ಒಂದು ಜನ್ಮ ಪವಿತ್ರರಾಗಬಾರದು! ಭಗವಾನುವಾಚ- ನಾವು ಈ ಅಂತಿಮಜನ್ಮದಲ್ಲಿ ಪವಿತ್ರರಾದರೆ 21 ಜನ್ಮಗಳಿಗಾಗಿ ಪವಿತ್ರ ಪ್ರಪಂಚದ ಮಾಲೀಕರಾಗುತ್ತೇವೆ. ಕೇವಲ ಒಂದು ಜನ್ಮದಲ್ಲಿ ಶ್ರೀಮತದಂತೆ ನಡೆಯಿರಿ. ರಕ್ಷಾಬಂಧನವೂ ಸಹ ಇದರ ಸಂಕೇತವಾಗಿದೆ ಅಂದಾಗ ನಾವೇಕೆ ಪವಿತ್ರರಾಗಿರಲು ಸಾಧ್ಯವಿಲ್ಲ? ಬೇಹದ್ದಿನ ತಂದೆಯು ಗ್ಯಾರಂಟಿ ಕೊಡುತ್ತಾರೆ. ತಂದೆಯೂ ಭಾರತಕ್ಕೆ ಸ್ವರ್ಗದ ಆಸ್ತಿಯನ್ನು ಕೊಟ್ಟಿದ್ದರು, ಅದಕ್ಕೆ ಸುಖಧಾಮವೆಂದು ಹೇಳುತ್ತಾರೆ. ಅಲ್ಲಿ ಅಪಾರ ಸುಖವಿತ್ತು, ಇದು ದುಃಖಧಾಮವಾಗಿದೆ. ಯಾರಾದರೂ ದೊಡ್ಡವರೊಬ್ಬರಿಗೆ ನೀವು ಈ ರೀತಿ ತಿಳಿಸಿದರೆ ಎಲ್ಲರೂ ಕೇಳುತ್ತಾ ಇರುತ್ತಾರೆ. ಯೋಗದಲ್ಲಿದ್ದು ತಿಳಿಸಿದರೆ ಎಲ್ಲರಿಗೆ ಸಮಯವೇ ಮರೆತುಹೋಗುತ್ತದೆ, ಅವರು ಏನನ್ನೂ ಹೇಳಲು ಸಾಧ್ಯವಾಗುವುದಿಲ್ಲ. 15-20 ನಿಮಿಷಗಳಿಗೆ ಬದಲು ಒಂದು ಗಂಟೆಯಾದರೂ ಕೇಳುತ್ತಲೇ ಇರುತ್ತಾರೆ ಆದರೆ ನಿಮ್ಮಲ್ಲಿ ಆ ಶಕ್ತಿಯು ಬೇಕು. ದೇಹಾಭಿಮಾನ ಇರಬಾರದು. ಇಲ್ಲಂತೂ ಸೇವೆಯೇ ಸೇವೆಯನ್ನು ಮಾಡಬೇಕು ಆಗಲೇ ಕಲ್ಯಾಣವಾಗುವುದು. ರಾಜರಾಗಬೇಕೆಂದರೆ ಪ್ರಜೆಗಳನ್ನು ಎಲ್ಲಿ ಮಾಡಿಕೊಂಡಿದ್ದೀರಿ! ತಂದೆಯು ಹಾಗೆಯೇ ತಲೆಯ ಮೇಲೆ ಕಿರೀಟವನ್ನಿಟ್ಟುಬಿಡುತ್ತಾರೆಯೇ? ಪ್ರಜೆಗಳು ಡಬಲ್ ಕಿರೀಟಧಾರಿ ಆಗುತ್ತಾರೆಯೇ! ಡಬಲ್ ಕಿರೀಟಧಾರಿಗಳಾಗುವುದೇ ನಿಮ್ಮ ಗುರಿಯಾಗಿದೆ. ತಂದೆಯಂತೂ ಮಕ್ಕಳಿಗೆ ಉಲ್ಲಾಸವನ್ನು ತರಿಸುತ್ತಾರೆ. ಜನ್ಮ-ಜನ್ಮಾಂತರದ ತಲೆಯ ಮೇಲಿರುವ ಪಾಪಗಳು ಯೋಗಬಲದಿಂದಲೇ ತುಂಡಾಗುತ್ತದೆ. ಬಾಕಿ ಈ ಜನ್ಮದಲ್ಲಿ ಏನನ್ನು ಮಾಡಿದ್ದೀರೋ ಅದನ್ನು ನೀವೇ ತಿಳಿದುಕೊಳ್ಳಬಹುದಲ್ಲವೆ. ಪಾಪವನ್ನು ನಾಶ ಮಾಡಿಕೊಳ್ಳಲು ಯೋಗವನ್ನು ಕಲಿಸಲಾಗುತ್ತದೆ. ಬಾಕಿ ಈ ಜನ್ಮದ ಯಾವುದೇ ಮಾತಿಲ್ಲ. ತಮೋಪ್ರಧಾನದಿಂದ ಸತೋಪ್ರಧಾನರಾಗುವ ಯುಕ್ತಿಯನ್ನು ತಂದೆಯು ಕುಳಿತು ತಿಳಿಸುತ್ತಾರೆ. ಬಾಕಿ ಕೃಪೆ ಇತ್ಯಾದಿಯನ್ನು ಹೋಗಿ ಸಾಧುಗಳ ಬಳಿ ಕೇಳಿ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳ ಪ್ರತಿ ಮಾತಾ-ಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ, ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಅಮರಲೋಕದಲ್ಲಿ ಹೋಗಲು ಸಂಗಮಯುಗದಲ್ಲಿ ಖುಷಿಯ ಖಜಾನೆಯನ್ನು ತುಂಬಿಕೊಳ್ಳಬೇಕಾಗಿದೆ. ಸಮಯವನ್ನು ವ್ಯರ್ಥವಾಗಿ ಕಳೆಯಬಾರದು, ತಮ್ಮ ಜೋಳಿಗೆಯನ್ನು ತುಂಬಿಕೊಂಡು ದಯಾಹೃದಯಿಗಳಾಗಿ ಅಂಧರಿಗೆ ಊರುಗೋಲಾಗಬೇಕಾಗಿದೆ.

2. ಅಂಗೈಯಲ್ಲಿ ಸ್ವರ್ಗವನ್ನು ತೆಗೆದುಕೊಳ್ಳಲು ಅವಶ್ಯವಾಗಿ ಪವಿತ್ರರಾಗಬೇಕಾಗಿದೆ. ಸ್ವಯಂನ್ನು ಸತೋಪ್ರಧಾನರನ್ನಾಗಿ ಮಾಡಿಕೊಳ್ಳುವ ಯುಕ್ತಿಗಳನ್ನು ರಚಿಸಿ, ತಮ್ಮ ಮೇಲೆ ತಾವೇ ಕೃಪೆ ತೋರಿಸಿಕೊಳ್ಳಬೇಕು. ಯೋಗಬಲವನ್ನು ಜಮಾ ಮಾಡಿಕೊಳ್ಳಬೇಕಾಗಿದೆ.

ವರದಾನ:
ಹುಜೂರ್(ಮಾಲೀಕ) ನನ್ನು ಸದಾ ಜೊತೆಯಲ್ಲಿಟ್ಟುಕೊಂಡು ಕಂಬೈಂಡ್ ಸ್ವರೂಪದ ಅನುಭವ ಮಾಡುವಂತಹ ವಿಶೇಷ ಪಾತ್ರಧಾರಿ ಭವ

ಮಕ್ಕಳು ಯಾವಾಗ ಹೃದಯದಿಂದ ಬಾಬಾ ಎಂದು ಹೇಳುತ್ತಾರೆ ಆಗ ದಿಲಾರಾಮ ಹಾಜಿರ್ ಆಗಿಬಿಡುತ್ತಾರೆ. ಇದಕ್ಕಾಗಿ ಹೇಳುತ್ತಾರೆ ಹುಜೂರ್ ಹಾಜಿರ್ ಆಗಿದ್ದಾರೆ ಎಂದು. ಮತ್ತು ವಿಶೇಷ ಆತ್ಮಗಳಂತೂ ಸದಾ ಕಂಬೈಂಡ್ ಆಗೇ ಇರುತ್ತಾರೆ. ಜನ ಹೇಳುತ್ತಾರೆ ಎಲ್ಲಿ ನೋಡಿದರೂ ಅಲ್ಲಿ ನೀನೇ ಇರುವೆ ಎಂದು ಮತ್ತು ಮಕ್ಕಳು ಹೇಳುತ್ತಾರೆ ನಾವು ಏನೇ ಮಾಡುತ್ತೇವೆ, ಎಲ್ಲೇ ಹೋಗುತ್ತೇವೆ ಅಲ್ಲಿ ತಂದೆ ಜೊತೆಯಲ್ಲೇ ಇರುತ್ತಾರೆ ಎಂದು. ಹೇಳಲಾಗುತ್ತದೆ ಮಾಡಿ ಮಾಡಿಸುವಂತಹವನು, ಅಂದಮೇಲೆ ಮಾಡುವವನು ಮತ್ತು ಮಾಡಿಸುವವನು ಕಂಬೈಂಡ್ ಆಗಿಹೋದರು. ಇದೇ ಸ್ಮೃತಿಯಲ್ಲಿರುತ್ತಾ ಪಾತ್ರ ಅಭಿನಯಿಸುವಂತಹವರು ವಿಶೇಷ ಪಾತ್ರಧಾರಿಗಳಾಗಿಬಿಡುವರು.

ಸ್ಲೋಗನ್:
ಸ್ವಯಂ ತನ್ನನ್ನು ಈ ಹಳೆಯ ಪ್ರಪಂಚದಲ್ಲಿ ನಾನೊಬ್ಬ ಅಥಿತಿ ಎಂದು ತಿಳಿದುಕೊಳ್ಳಿ ಆಗ ಹಳೆಯ ಸಂಸ್ಕಾರ ಮತ್ತು ಸಂಕಲ್ಪಗಳಿಗೆ (ಗೆಟ್ಔಟ್) ಹೊರದೂಡಬಹುದಾಗಿದೆ.