19.07.25 Morning Kannada Murli Om Shanti
BapDada Madhuban
ಮಧುರ ಮಕ್ಕಳೇ - ಸದಾ
ನಮಗೆ ಯಾರು ಓದಿಸುತ್ತಾರೆಂಬ ಖುಷಿಯಲ್ಲಿರಿ, ಇದೂ ಸಹ ಮನ್ಮನಾಭವವಾಗಿದೆ, ನಿಮಗೆ ಖುಷಿಯಿದೆ- ನಾವು
ನೆನ್ನೆಯ ದಿನ ಕಲ್ಲು ಬುದ್ಧಿಯವರಾಗಿದ್ದೆವು ಇಂದು ಪಾರಸ ಬುದ್ಧಿಯವರಾಗುತ್ತೇವೆ.
ಪ್ರಶ್ನೆ:
ಭಾಗ್ಯವು
ತೆರೆಯುವ ಆಧಾರವೇನಾಗಿದೆ?
ಉತ್ತರ:
ನಿಶ್ಚಯ.
ಒಂದುವೇಳೆ ಭಾಗ್ಯವು ತೆರೆಯುವುದರಲ್ಲಿ ತಡವಾದರೆ ಅವರು ಪುರುಷಾರ್ಥದಲ್ಲಿ ಕುಂಟುತ್ತಾ ಇರುತ್ತಾರೆ.
ನಿಶ್ಚಯ ಬುದ್ಧಿಯವರು ಚೆನ್ನಾಗಿ ಓದಿ ಮುಂದುವರೆಯುತ್ತಿರುತ್ತಾರೆ. ಯಾವುದೇ ಮಾತಿನಲ್ಲಿ
ಸಂಶಯವಿದ್ದರೆ ಹಿಂದುಳಿದು ಬಿಡುತ್ತಾರೆ. ಯಾರು ನಿಶ್ಚಯ ಬುದ್ಧಿಯವರಾಗಿ ತಮ್ಮ ಬುದ್ಧಿಯನ್ನು
ತಂದೆಯ ಕಡೆ ಓಡಿಸುತ್ತಾ ಇರುತ್ತಾರೆಯೋ ಅವರು ಸತೋಪ್ರಧಾನರಾಗಿ ಬಿಡುತ್ತಾರೆ.
ಓಂ ಶಾಂತಿ.
ವಿದ್ಯಾರ್ಥಿಗಳೆಲ್ಲರೂ ಶಾಲೆಯಲ್ಲಿ ಓದುವಾಗ ಅವರಿಗೆ ನಾವು ಓದಿ ಏನಾಗುತ್ತೇವೆಂದು ತಿಳಿದಿರುತ್ತದೆ
ಹಾಗೆಯೇ ಮಧುರಾತಿ ಮಧುರ ಆತ್ಮೀಯ ಮಕ್ಕಳ ಬುದ್ಧಿಯಲ್ಲಿ ಬರಬೇಕು- ನಾವು ಸತ್ಯಯುಗ, ಪಾರಸಪುರಿಯ
ಮಾಲೀಕರಾಗುತ್ತೇವೆ. ಈ ದೇಹದ ಸಂಬಂಧ ಇತ್ಯಾದಿಗಳೆಲ್ಲವನ್ನೂ ಬಿಡಬೇಕಾಗಿದೆ. ನಾವೀಗ ಪಾರಸಪುರಿಯ
ಮಾಲೀಕರು ಪಾರಸನಾಥರಾಗಬೇಕಾಗಿದೆ, ಇಡೀ ದಿನ ಈ ಖುಷಿಯಿರಲಿ. ಪಾರಸಪುರಿಯೆಂದು ಯಾವುದಕ್ಕೆ
ಹೇಳಲಾಗುತ್ತದೆಯೆಂದು ನಿಮಗೆ ತಿಳಿದಿದೆ. ಸತ್ಯಯುಗದಲ್ಲಿ ಮನೆಗಳೆಲ್ಲವೂ
ಚಿನ್ನ-ಬೆಳ್ಳಿಯದಾಗಿರುತ್ತದೆ. ಇಲ್ಲಂತೂ ಕಲ್ಲು, ಇಟ್ಟಿಗೆಗಳ ಮನೆಗಳಾಗಿವೆ. ನೀವೀಗ ಕಲ್ಲು
ಬುದ್ಧಿಯವರಿಂದ ಪಾರಸ ಬುದ್ಧಿಯವರಾಗುತ್ತೀರಿ. ಯಾವಾಗ ಪಾರಸನಾಥರನ್ನಾಗಿ ಮಾಡುವ ತಂದೆಯು ಬರುವರೋ
ಆಗಲೇ ಕಲ್ಲು ಬುದ್ಧಿಯನ್ನು ಪಾರಸ ಬುದ್ಧಿಯನ್ನಾಗಿ ಮಾಡುವರಲ್ಲವೆ. ನೀವಿಲ್ಲಿ ಕುಳಿತಿದ್ದೀರಿ,
ನಮ್ಮ ಶಾಲೆಯು ಶ್ರೇಷ್ಠಾತಿ ಶ್ರೇಷ್ಠವಾಗಿದೆ ಎಂದು ತಿಳಿದಿದೆ. ಇದಕ್ಕಿಂತ ದೊಡ್ಡ ಶಾಲೆಯು
ಮತ್ತ್ಯಾವುದೂ ಇರುವುದಿಲ್ಲ. ಈ ಶಾಲೆಯಿಂದ ನೀವು ಕೋಟ್ಯಾಧಿಪತಿಗಳು ವಿಶ್ವದ ಮಾಲೀಕರಾಗುತ್ತೀರಿ.
ಅಂದಮೇಲೆ ನಿಮಗೆ ಎಷ್ಟು ಖುಷಿಯಿರಬೇಕು! ಇದು ಕಲ್ಲಿನ ಪುರಿಯಿಂದ ಪಾರಸಪುರಿಯಲ್ಲಿ ಹೋಗುವ
ಪುರುಷೋತ್ತಮ ಸಂಗಮಯುಗವಾಗಿದೆ. ನೆನ್ನೆ ನೀವು ಕಲ್ಲು ಬುದ್ಧಿಯವರಾಗಿದ್ದಿರಿ, ಇಂದು ಪಾರಸ
ಬುದ್ಧಿಯವರಾಗುತ್ತೀರಿ. ಈ ಮಾತು ಸದಾ ಬುದ್ಧಿಯಲ್ಲಿದರೂ ಸಹ ಮನ್ಮನಾಭವವೇ ಆಗಿದೆ. ಶಾಲೆಯಲ್ಲಿ
ಶಿಕ್ಷಕರು ಓದಿಸಲು ಬರುತ್ತಾರೆ, ಈಗ ಶಿಕ್ಷಕರು ಬಂದೇ ಬಿಟ್ಟರೆಂದು ವಿದ್ಯಾರ್ಥಿಗಳ
ಬುದ್ಧಿಯಲ್ಲಿರುತ್ತದೆ. ನೀವು ಮಕ್ಕಳೂ ಸಹ ತಿಳಿದುಕೊಂಡಿದ್ದೀರಿ- ನಮ್ಮ ಶಿಕ್ಷಕನಂತೂ ಸ್ವಯಂ
ಭಗವಂತನಾಗಿದ್ದಾರೆ, ಅವರು ನಮ್ಮನ್ನು ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತಾರೆ ಅಂದಮೇಲೆ ಅವಶ್ಯವಾಗಿ
ಸಂಗಮದಲ್ಲಿಯೇ ಬರುತ್ತಾರೆ. ಮನುಷ್ಯರು ಭಗವಂತನನ್ನು ಕರೆಯುತ್ತಾ ಇರುತ್ತಾರೆ ಮತ್ತು ಅವರು ಇಲ್ಲಿ
ಬಂದುಬಿಟ್ಟಿದ್ದಾರೆಂದು ನಿಮಗೆ ಅರ್ಥವಾಗಿದೆ. ಕಲ್ಪದ ಮೊದಲೂ ಸಹ ಈ ರೀತಿಯಾಗಿತ್ತು ಆದ್ದರಿಂದಲೇ
ವಿನಾಶಕಾಲೇ ವಿಪರೀತ ಬುದ್ಧಿಯೆಂದು ಬರೆಯಲ್ಪಟ್ಟಿದೆ ಏಕೆಂದರೆ ಅವರು ಕಲ್ಲು ಬುದ್ಧಿಯವರಾಗಿದ್ದಾರೆ.
ನಿಮ್ಮದು ವಿನಾಶಕಾಲದಲ್ಲಿ ಪ್ರೀತಿ ಬುದ್ಧಿಯಾಗಿದೆ. ನೀವೀಗ ಪಾರಸಬುದ್ಧಿಯವರಾಗುತ್ತಿದ್ದೀರಿ
ಅಂದಾಗ ಇಂತಹ ಯಾವುದಾದರೂ ಯುಕ್ತಿಯನ್ನು ರಚಿಸಿ, ಅದರಿಂದ ಮನುಷ್ಯರು ಬೇಗನೆ ಅರ್ಥ
ಮಾಡಿಕೊಳ್ಳುವಂತಿರಲಿ. ಇಲ್ಲಿಯೂ ಸಹ ಅನೇಕರನ್ನು ಕರೆತರುತ್ತಾರೆ ಆದರೂ ಸಹ ಹೇಳುತ್ತಾರೆ- ಶಿವ
ತಂದೆಯು ಬ್ರಹ್ಮಾರವರ ತನುವಿನಲ್ಲಿ ಹೇಗೆ ಓದಿಸಬಹುದು! ಹೇಗೆ ಬರಬಹುದು! ಏನನ್ನೂ
ತಿಳಿದುಕೊಂಡಿರುವುದಿಲ್ಲ. ಎಷ್ಟೊಂದು ಮಂದಿ ಸೇವಾಕೇಂದ್ರಕ್ಕೆ ಬರುತ್ತಾರೆ,
ನಿಶ್ಚಯಬುದ್ಧಿಯಿದೆಯಲ್ಲವೆ. ಶಿವ ಭಗವಾನುವಾಚ- ಶಿವನೇ ಎಲ್ಲರ ತಂದೆಯಾಗಿದ್ದಾರೆಂದು ಎಲ್ಲರೂ
ಹೇಳುತ್ತಾರೆ. ಕೃಷ್ಣನನ್ನು ಎಲ್ಲರ ತಂದೆಯೆಂದು ಹೇಳುವರೇ? ಇದರಲ್ಲಿ ತಬ್ಬಿಬ್ಬಾಗುವ ಮಾತಿಲ್ಲ ಆದರೆ
ಅದೃಷ್ಟವು ತಡವಾಗಿ ತೆರೆಯುವುದಿದ್ದರೆ ಅಂತಹವರು ಕುಂಟುತ್ತಿರುತ್ತಾರೆ. ಕಡಿಮೆ ಓದುವವರಿಗೆ ಇವರು
ಕುಂಟುತ್ತಾರೆಂದು ಹೇಳಲಾಗುತ್ತದೆ. ಸಂಶಯ ಬುದ್ಧಿಯವರು ಹಿಂದುಳಿಯುತ್ತಾರೆ. ನಿಶ್ಚಯ ಬುದ್ಧಿಯ
ಚೆನ್ನಾಗಿ ಓದುವವರು ಮುಂದುವರೆಯುತ್ತಾ ಇರುತ್ತಾರೆ. ಎಷ್ಟು ಸಹಜವಾಗಿ ತಿಳಿಸಲಾಗುತ್ತದೆ. ಹೇಗೆ
ಮಕ್ಕಳು ಓಟವನ್ನು ಓಡುತ್ತಾ ಗುರಿಯನ್ನು ಮುಟ್ಟಿ ಹಿಂತಿರುಗಿ ಬರುತ್ತಾರೆ. ತಂದೆಯು ತಿಳಿಸುತ್ತಾರೆ-
ಬುದ್ಧಿಯನ್ನು ಬಹುಬೇಗನೆ ಶಿವ ತಂದೆಯ ಬಳಿ ಓಡಿಸುತ್ತೀರೆಂದರೆ ಸತೋಪ್ರಧಾನರಾಗುತ್ತೀರಿ.
ಇಲ್ಲಿರುವಾಗ ಚೆನ್ನಾಗಿ ತಿಳಿದುಕೊಳ್ಳುತ್ತಾರೆ, ಬಾಣವು ನಾಟುತ್ತದೆ ಆದರೆ ಹೊರಗಡೆ ಹೋದಾಗ
ಸಮಾಪ್ತಿಯಾಗಿ ಬಿಡುತ್ತದೆ. ತಂದೆಯು ಜ್ಞಾನದ ಇಂಜೆಕ್ಷನ್ನ್ನು ಹಾಕುತ್ತಾರೆ ಅಂದಮೇಲೆ ಅದರ
ನಶೆಯೇರಬೇಕಲ್ಲವೆ ಆದರೆ ಏರುವುದೇ ಇಲ್ಲ. ಇಲ್ಲಿ ಜ್ಞಾನಾಮೃತದ ಪಾನ ಮಾಡಿದಾಗ ಅದರ ಪ್ರಭಾವ
ಬೀರುತ್ತದೆ ನಂತರ ಹೊರಗಡೆ ಹೋಗುತ್ತಿದ್ದಂತೆಯೇ ಮರೆತು ಹೋಗುತ್ತಾರೆ. ಮಕ್ಕಳಿಗೆ ತಿಳಿದಿದೆ-
ಜ್ಞಾನಸಾಗರ, ಪತಿತ-ಪಾವನ, ಸದ್ಗತಿದಾತ, ಮುಕ್ತಿದಾತನು ಒಬ್ಬರೇ ತಂದೆಯಾಗಿದ್ದಾರೆ. ಅವರೇ
ಪ್ರತಿಯೊಂದು ಮಾತಿನ ಆಸ್ತಿಯನ್ನು ಕೊಡುತ್ತಾರೆ. ಮಕ್ಕಳೇ ನೀವೂ ಸಹ ಪೂರ್ಣ ಸಾಗರರಾಗಿ, ನನ್ನಲ್ಲಿ
ಎಷ್ಟು ಜ್ಞಾನವಿದೆಯೋ ಅಷ್ಟು ನೀವು ಧಾರಣೆ ಮಾಡಿಕೊಳ್ಳಿರಿ ಎಂದು ತಿಳಿಸಿಕೊಡುತ್ತಾರೆ.
ಶಿವ ತಂದೆಗೆ ದೇಹದ
ನಶೆಯಿಲ್ಲ. ತಂದೆಯು ತಿಳಿಸುತ್ತಾರೆ- ಮಕ್ಕಳೇ, ನಾನಂತೂ ಶಾಂತಿಯಲ್ಲಿರುತ್ತೇನೆ, ನಿಮಗೂ ಸಹ ಈ
ದೇಹವಿಲ್ಲದಿದ್ದಾಗ ನಶೆ (ಅಭಿಮಾನ) ಇರಲಿಲ್ಲ. ಇದು ನನ್ನ ವಸ್ತುವೆಂದು ಶಿವ ತಂದೆಯು ಹೇಳುತ್ತಾರೆಯೇ?
ಈ ಶರೀರವನ್ನು ಲೋನ್ ಆಗಿ ತೆಗೆದುಕೊಂಡಿದ್ದಾರೆ. ಲೋನ್ ಆಗಿ ಪಡೆದಿರುವ ವಸ್ತು ತನ್ನದು ಹೇಗಾಯಿತು?
ನಾನು ಇವರಲ್ಲಿ ಪ್ರವೇಶ ಮಾಡಿದ್ದೇನೆ, ಸೇವಾರ್ಥವಾಗಿ ಸ್ವಲ್ಪ ಸಮಯಕ್ಕಾಗಿ, ಈಗ ನೀವು ಮಕ್ಕಳು
ಹಿಂತಿರುಗಿ ಮನೆಗೆ ಹೋಗಬೇಕಾಗಿದೆ. ಭಗವಂತನೊಂದಿಗೆ ಮಿಲನ ಮಾಡಲು ಓಡೋಡಿ ಹೋಗಬೇಕಾಗಿದೆ. ಇಷ್ಟೊಂದು
ಯಜ್ಞ, ತಪ, ದಾನ-ಪುಣ್ಯಗಳನ್ನು ಮಾಡುತ್ತಿರುತ್ತಾರೆ ಆದರೆ ಅವರು ಹೇಗೆ ಸಿಗುತ್ತಾರೆಂಬುದನ್ನು
ತಿಳಿದುಕೊಂಡಿದ್ದಾರೆಯೇ? ಯಾವುದಾದರೊಂದು ರೂಪದಲ್ಲಿ ಭಗವಂತನು ಬರುವರೆಂದು ತಿಳಿಯುತ್ತಾರೆ.
ತಂದೆಯಂತೂ ಬಹಳಷ್ಟು ಸಹಜವಾಗಿ ತಿಳಿಸುತ್ತಾರೆ. ಪ್ರದರ್ಶನಿಯಲ್ಲಿಯೂ ತಿಳಿಸಿಕೊಡಿ- ಸತ್ಯಯುಗ,
ತ್ರೇತಾಯುಗದ ಕಾಲಾವಧಿಯನ್ನು ಬರೆಯಲಾಗಿದೆ, ಇದರಲ್ಲಿ 2500 ವರ್ಷಗಳವರೆಗೆ ಸಂಪೂರ್ಣ ನಿಖರವಾಗಿದೆ.
ಸೂರ್ಯವಂಶಿಯರ ನಂತರ ಚಂದ್ರವಂಶಿಯರು ಬರುತ್ತಾರೆ. ಅದರನಂತರ ರಾವಣ ರಾಜ್ಯವು ಆರಂಭವಾಯಿತೆಂಬುದನ್ನು
ತೋರಿಸಿ. ಆಗಿನಿಂದ ಭಾರತವು ಪತಿತವಾಗಲಾರಂಭಿಸಿತು. ದ್ವಾಪರ-ಕಲಿಯುಗದಲ್ಲಿ ರಾವಣ ರಾಜ್ಯವಾಯಿತು.
ತಿಥಿ-ತಾರೀಖನ್ನು ಹಾಕಲಾಗಿದೆ. ಮಧ್ಯದಲ್ಲಿ ಸಂಗಮಯುಗವನ್ನಿಡಿ. ರಥಿಯೂ ಅವಶ್ಯವಾಗಿ ಬೇಕಲ್ಲವೆ. ಈ
ರಥದಲ್ಲಿ (ಬ್ರಹ್ಮಾ) ಪ್ರವೇಶವಾಗಿ ತಂದೆಯು ರಾಜಯೋಗವನ್ನು ಕಲಿಸುತ್ತಾರೆ. ಇದರಿಂದ ಈ
ಲಕ್ಷ್ಮೀ-ನಾರಾಯಣರಾಗುತ್ತೀರಿ. ಇದನ್ನು ಅನ್ಯರಿಗೆ ತಿಳಿಸಿಕೊಡುವುದು ಬಹಳ ಸಹಜವಾಗಿದೆ.
ಲಕ್ಷ್ಮೀ-ನಾರಾಯಣರ ರಾಜಧಾನಿಯು ಎಷ್ಟು ಸಮಯ ನಡೆಯುತ್ತದೆ. ಮತ್ತೆಲ್ಲಾ ಮನೆತನಗಳು ಹದ್ದಿನವಾಗಿವೆ.
ಇದು ಬೇಹದ್ದಿನದಾಗಿದೆ. ಈ ಬೇಹದ್ದಿನ ಚರಿತ್ರೆ-ಭೂಗೋಳವನ್ನು ಅರಿತುಕೊಳ್ಳಬೇಕಾಗಿದೆ. ಈಗ
ಸಂಗಮಯುಗವಾಗಿದೆ ನಂತರ ದೈವೀ ರಾಜ್ಯವು ಸ್ಥಾಪನೆಯಾಗುತ್ತಿದೆ. ಈ ಕಲ್ಲಿನ ಪುರಿ ಹಳೆಯ ಪ್ರಪಂಚದ
ವಿನಾಶವಾಗುವುದಿದೆ. ವಿನಾಶವಾಗದಿದ್ದರೆ ಹೊಸ ಪ್ರಪಂಚವು ಹೇಗಾಗುವುದು? ನವದೆಹಲಿಯೆಂದು ಹೇಳುತ್ತಾರೆ
ಆದರೆ ನವದೆಹಲಿಯು ಯಾವಾಗ ಆಗುವುದು ಎಂಬುದನ್ನು ನೀವು ತಿಳಿದುಕೊಂಡಿದ್ದೀರಿ. ಹೊಸ ಪ್ರಪಂಚದಲ್ಲಿ
ಹೊಸ ದೆಹಲಿಯಿರುತ್ತದೆ. ಜಮುನಾ ನದಿಯ ತೀರದಲ್ಲಿ ಮಹಲುಗಳಿರುತ್ತವೆ ಎಂದು ಗಾಯನ ಮಾಡುತ್ತಾರೆ.
ಯಾವಾಗ ಈ ಲಕ್ಷ್ಮೀ-ನಾರಾಯಣರ ರಾಜ್ಯವಿರುವುದೋ ಆಗ ಹೊಸ ದೆಹಲಿ, ಪಾರಸ ಪುರಿಯೆಂದು ಹೇಳುತ್ತಾರೆ.
ಹೊಸ ರಾಜ್ಯವಂತೂ ಸತ್ಯಯುಗದಲ್ಲಿ ಲಕ್ಷ್ಮೀ-ನಾರಾಯಣರದೇ ಇರುತ್ತದೆ. ನಾಟಕವು ಹೇಗೆ
ಪ್ರಾರಂಭವಾಗುತ್ತದೆ ಎಂಬುದನ್ನು ಮನುಷ್ಯರು ಮರೆತು ಹೋಗಿದ್ದಾರೆ. ಯಾರ್ಯಾರು ಮುಖ್ಯ
ಪಾತ್ರಧಾರಿಗಳಾಗಿದ್ದಾರೆ ಎಂಬುದನ್ನಾದರೂ ಅರಿತುಕೊಳ್ಳಬೇಕಲ್ಲವೆ. ಪಾತ್ರಧಾರಿಗಳಂತೂ ಅನೇಕರಿದ್ದಾರೆ
ಆದ್ದರಿಂದ ಮುಖ್ಯ ಪಾತ್ರಧಾರಿಗಳನ್ನು ನೀವು ತಿಳಿದುಕೊಂಡಿದ್ದೀರಿ. ನೀವೂ ಸಹ ಮುಖ್ಯ
ಪಾತ್ರಧಾರಿಗಳಾಗಿದ್ದೀರಿ. ಎಲ್ಲರಿಗಿಂತ ಮುಖ್ಯವಾದ ಪಾತ್ರವನ್ನು ನೀವು ಅಭಿನಯಿಸುತ್ತಿದ್ದೀರಿ.
ನೀವು ಆತ್ಮೀಯ ಸಮಾಜ ಸೇವಕರಾಗಿದ್ದೀರಿ. ಉಳಿದೆಲ್ಲರೂ ಸ್ಥೂಲ ಸಮಾಜ ಸೇವಕರಾಗಿದ್ದಾರೆ. ನೀವು
ಆತ್ಮರಿಗೆ ತಿಳಿಸುತ್ತೀರಿ - ಆತ್ಮವೇ ಓದುತ್ತದೆ, ಶರೀರವು ಓದುತ್ತದೆಯೆಂದು ತಿಳಿಯುತ್ತಾರೆ ಆದರೆ
ಆತ್ಮವೇ ಈ ಕರ್ಮೇಂದ್ರಿಯಗಳ ಮೂಲಕ ಓದುತ್ತದೆಯೆಂಬುದು ಯಾರಿಗೂ ತಿಳಿದಿಲ್ಲ. ನಾನಾತ್ಮನು
ವಕೀಲನಾಗುತ್ತೇನೆ, ತಂದೆಯು ನಮಗೆ ಓದಿಸುತ್ತಾರೆ. ಸಂಸ್ಕಾರವೂ ಆತ್ಮದಲ್ಲಿಯೇ ಬರುತ್ತದೆ.
ಸಂಸ್ಕಾರವನ್ನು ತೆಗೆದುಕೊಂಡು ಹೋಗುತ್ತೀರಿ ನಂತರ ಬಂದು ಹೊಸ ರಾಜ್ಯದಲ್ಲಿ ರಾಜ್ಯಭಾರ ಮಾಡುತ್ತೀರಿ.
ಹೇಗೆ ಸತ್ಯಯುಗದಲ್ಲಿ ರಾಜಧಾನಿಯು ನಡೆದಿತ್ತೋ ಅದೇರೀತಿ ಆರಂಭವಾಗುವುದು. ಇದರಲ್ಲಿ ಏನೂ ಕೇಳುವ
ಅವಶ್ಯಕತೆಯಿಲ್ಲ. ಮುಖ್ಯವಾದ ಮಾತೇನೆಂದರೆ ದೇಹಾಭಿಮಾನದಲ್ಲಿ ಎಂದೂ ಬರಬೇಡಿ. ತಮ್ಮನ್ನು ಆತ್ಮನೆಂದು
ತಿಳಿಯಿರಿ, ಯಾವುದೇ ವಿಕರ್ಮ ಮಾಡಬೇಡಿ. ನೆನಪಿನಲ್ಲಿರಿ ಇಲ್ಲವಾದರೆ ಒಂದು ವಿಕರ್ಮದ ಹೊರೆಯು
ನೂರುಪಟ್ಟು ಹೆಚ್ಚಾಗಿ ಬಿಡುವುದು. ಒಮ್ಮೆಲೆ ಮೂಳೆಗಳು ಪುಡಿ-ಪುಡಿಯಾಗುತ್ತವೆ, ಅದರಲ್ಲಿ
ಮುಖ್ಯವಾದ ವಿಕಾರವು ಕಾಮ ಆಗಿದೆ. ಮಕ್ಕಳು ತೊಂದರೆ ಕೊಡುತ್ತಾರೆ ಆಗ ಅವರನ್ನು ಹೊಡೆಯಬೇಕಾಗುತ್ತದೆ
ಎಂದು ಕೆಲವರು ತಂದೆಯೊಂದಿಗೆ ಹೇಳುತ್ತಾರೆ. ಈಗ ಇದೇನೂ ಕೇಳುವ ಮಾತಲ್ಲ. ಏಕೆಂದರೆ ಇದು
ಅತಿಚಿಕ್ಕದಾದ ನಯಾಪೈಸೆಯ ಪಾಪವೆಂದು ಹೇಳಬಹುದು ಆದರೆ ನಿಮ್ಮ ತಲೆಯ ಮೇಲೆ ಜನ್ಮ-ಜನ್ಮಾಂತರದ
ಪಾಪವಿದೆ, ಮೊದಲು ಅದನ್ನು ಭಸ್ಮ ಮಾಡಿಕೊಳ್ಳಿ. ತಂದೆಯು ಪಾವನರಾಗುವ ಸಹಜ ಉಪಾಯವನ್ನು
ತಿಳಿಸುತ್ತಾರೆ. ನೀವು ಒಬ್ಬ ತಂದೆಯ ನೆನಪಿನಿಂದ ಪಾವನರಾಗಿ ಬಿಡುತ್ತೀರಿ. ಭಗವಾನುವಾಚ ಮಕ್ಕಳ
ಪ್ರತಿ- ನೀವಾತ್ಮಗಳೊಂದಿಗೆ ಮಾತನಾಡುತ್ತೇನೆ ಮತ್ತ್ಯಾವ ಮನುಷ್ಯರು ಹೀಗೆ ತಿಳಿದುಕೊಳ್ಳಲು
ಸಾಧ್ಯವಿಲ್ಲ. ಅವರಂತೂ ತಮ್ಮನ್ನು ಶರೀರವೆಂದೇ ತಿಳಿಯುತ್ತಾರೆ. ತಂದೆಯು ತಿಳಿಸುತ್ತಾರೆ- ನಾನು
ಆತ್ಮಗಳಿಗೆ ತಿಳಿಸುತ್ತೇನೆ. ಗಾಯನವೂ ಇದೆ, ಆತ್ಮಗಳು ಮತ್ತು ಪರಮಾತ್ಮನ ಮೇಳವಾಗುತ್ತದೆ, ಇದರಲ್ಲಿ
ಯಾವುದೇ ಸದ್ದು ಮಾಡುವ ಅವಶ್ಯಕತೆಯಿಲ್ಲ. ಇದು ವಿದ್ಯೆಯಾಗಿದೆ, ದೂರ-ದೂರದಿಂದ ತಂದೆಯ ಬಳಿ
ಬರುತ್ತಾರೆ, ನಿಶ್ಚಯ ಬುದ್ಧಿಯವರಿಗೆ ಮುಂದೆ ಹೋದಂತೆ ಬಹಳ ಸೆಳೆತವಾಗುವುದು. ಈಗಿನ್ನೂ ಯಾರಿಗೂ
ಅಷ್ಟೊಂದು ಆಕರ್ಷಣೆಯಾಗುತ್ತಿಲ್ಲ ಏಕೆಂದರೆ ನೆನಪು ಮಾಡುತ್ತಿಲ್ಲ. ಯಾತ್ರೆಯಿಂದ ಹಿಂತಿರುಗುವಾಗ
ಮನೆಯು ಸಮೀಪಸುತ್ತಿದ್ದಂತೆ ಮನೆಯು ನೆನಪಿಗೆ ಬರುವುದು. ಮಕ್ಕಳೂ ನೆನಪಿಗೆ ಬರುವರು. ಮನೆಗೆ
ತಲುಪುತ್ತಿದ್ದಂತೆಯೇ ಖುಷಿಯಲ್ಲಿ ಬಂದು ಮಿಲನ ಮಾಡುತ್ತಾರೆ. ಖುಷಿಯು ಹೆಚ್ಚಾಗುತ್ತಾ ಹೋಗುತ್ತದೆ.
ಮೊಟ್ಟ ಮೊದಲು ಸ್ತ್ರೀ ನೆನಪಿಗೆ ಬರುವರು ನಂತರ ಮಕ್ಕಳು, ಮರಿಗಳು ಇತ್ಯಾದಿ ಎಲ್ಲರೂ ನೆನಪಿಗೆ
ಬರುವರು. ನಿಮಗಂತೂ ಇದೇ ನೆನಪು ಬರುವುದು- ನಾವು ಈಗ ಮನೆಗೆ (ಪರಮಧಾಮ) ಹೋಗುತ್ತೇವೆ. ಅಲ್ಲಿ ತಂದೆ
ಮತ್ತು ನಾವು ಮಕ್ಕಳೇ ಇರುತ್ತೇವೆ. ಡಬಲ್ ಖುಷಿಯಾಗುತ್ತದೆ. ಶಾಂತಿಧಾಮ ಮನೆಗೆ ಹೋಗುತ್ತೇವೆ ನಂತರ
ರಾಜಧಾನಿಯಲ್ಲಿ ಬರುತ್ತೇವೆ. ಇದರಲ್ಲಿ ಕೇವಲ ನೆನಪು ಮಾಡಬೇಕಾಗಿದೆ. ತಂದೆಯು ತಿಳಿಸುತ್ತಾರೆ-
ಮನ್ಮನಾಭವ. ತಮ್ಮನ್ನು ಆತ್ಮನೆಂದು ತಿಳಿದು ತಂದೆ ಮತ್ತು ಆಸ್ತಿಯನ್ನು ನೆನಪು ಮಾಡಿ. ತಂದೆಯು ನೀವು
ಮಕ್ಕಳನ್ನು ಹೂಗಳನ್ನಾಗಿ ಮಾಡಿ ತಮ್ಮ ನಯನಗಳ ಮೇಲೆ ಕೂರಿಸಿಕೊಂಡು ಜೊತೆಯಲ್ಲಿ ಕರೆದುಕೊಂಡು
ಹೋಗುತ್ತಾರೆ. ಸ್ವಲ್ಪವೂ ಕಷ್ಟವಾಗುವುದಿಲ್ಲ. ಹೇಗೆ ಸೊಳ್ಳೆಗಳ ಗುಂಪು ಹಾರುತ್ತದೆಯಲ್ಲವೆ.
ನೀವಾತ್ಮಗಳೂ ಸಹ ತಂದೆಯ ಜೊತೆ ಈ ರೀತಿ ಹೋಗುವಿರಿ. ಪಾವನರಾಗಲು ನೀವು ತಂದೆಯನ್ನು ನೆನಪು
ಮಾಡುತ್ತೀರಿ, ಮನೆಯನ್ನಲ್ಲ.
ತಂದೆಯ ದೃಷ್ಟಿಯು ಮೊಟ್ಟ
ಮೊದಲಿಗೆ ಬಡ ಮಕ್ಕಳ ಕಡೆ ಹೋಗುತ್ತದೆ. ತಂದೆಯು ಬಡವರ ಬಂಧುವಲ್ಲವೆ. ನೀವೂ ಸಹ ಹಳ್ಳಿಯಲ್ಲಿ
ಸರ್ವೀಸ್ ಮಾಡಲು ಹೋಗುತ್ತೀರಿ. ಅದೇರೀತಿ ತಂದೆಯು ಹೇಳುತ್ತಾರೆ- ನಾನೂ ಸಹ ನಿಮ್ಮ ಹಳ್ಳಿ (ಭಾರತಕ್ಕೆ)ಗೆ
ಬಂದು ಪಾರಸಪುರಿಯನ್ನಾಗಿ ಮಾಡುತ್ತೇನೆ. ಈಗಂತೂ ಇದು ನರಕ ಹಳೆಯ ಪ್ರಪಂಚವಾಗಿದೆ. ಅಂದಮೇಲೆ ಇದನ್ನು
ಅವಶ್ಯವಾಗಿ ಬೀಳಿಸಬೇಕಾಗುವುದು. ಹೊಸ ಪ್ರಪಂಚದಲ್ಲಿ ಹೊಸ ದೆಹಲಿ ಸತ್ಯಯುಗದಲ್ಲಿಯೇ ಇರುವುದು.
ಅಲ್ಲಿ ರಾಜ್ಯವೂ ನಿಮ್ಮದಾಗಿರುವುದು. ನಾವು ಪುನಃ ನಮ್ಮ ರಾಜಧಾನಿಯನ್ನು ಸ್ಥಾಪನೆ ಮಾಡುತ್ತೇವೆ.
ಹೇಗೆ ಕಲ್ಪದ ಮೊದಲು ಮಾಡಿದ್ದೆವು ಎಂದು ನಿಮಗೆ ನಶೆಯೇರುತ್ತದೆ. ನಾವು ಇಂತಿಂತಹ ಮನೆಗಳನ್ನು
ಕಟ್ಟಿಸುತ್ತೇವೆ ಎಂದೇನೂ ಹೇಳುವುದಿಲ್ಲ. ನೀವೇ ಸತ್ಯಯುಗದಲ್ಲಿ ಹೋಗುತ್ತೀರಿ, ಅಲ್ಲಿ ತಾನಾಗಿಯೇ
ನೀವು ಮಹಲುಗಳನ್ನು ಕಟ್ಟಿಸತೊಡಗುತ್ತೀರಿ ಏಕೆಂದರೆ ಆತ್ಮದಲ್ಲಿ ಆ ಪಾತ್ರವು ಅಡಕವಾಗಿದೆ. ಇಲ್ಲಿನ
ಪಾತ್ರವು ಕೇವಲ ಓದುವುದಾಗಿದೆ. ಅಲ್ಲಿ ನಿಮ್ಮ ಬುದ್ಧಿಯಲ್ಲಿ ಹೀಗ್ಹೀಗೆ ನಾವು ಮಹಲುಗಳನ್ನು
ಕಟ್ಟಿಸಬೇಕೆಂದು ತಾನಾಗಿಯೇ ಹೊಳೆಯುವುದು. ಹೇಗೆ ಕಲ್ಪದ ಹಿಂದೆ ಕಟ್ಟಿಸಿದ್ದಿರೋ ಅದೇರೀತಿ
ಕಟ್ಟಿಸುತ್ತಾ ಹೋಗುತ್ತೀರಿ. ಆತ್ಮದಲ್ಲಿಯೇ ಮೊದಲಿನಿಂದಲೂ ಎಲ್ಲವೂ ನಿಗಧಿಯಾಗಿದೆ. ನೀವು ಅದೇ
ಮಹಲುಗಳನ್ನು ಕಟ್ಟಿಸುತ್ತೀರಿ ಯಾವ ಮಹಲುಗಳಲ್ಲಿ ನೀವು ಕಲ್ಪ-ಕಲ್ಪಾಂತರವೂ ಇರುತ್ತೀರಿ. ಈ
ಮಾತುಗಳನ್ನು ಹೊಸಬರು ತಿಳಿದುಕೊಳ್ಳಲು ಸಾಧ್ಯವಿಲ್ಲ. ನೀವೇ ತಿಳಿದುಕೊಳ್ಳುತ್ತೀರಿ- ನಾವು
ಬರುತ್ತೇವೆ, ಹೊಸ-ಹೊಸ ವಿಷಯಗಳನ್ನು ಕೇಳಿ ರಿಫ್ರೆಷ್ ಆಗಿ ಹೋಗುತ್ತೇವೆ. ಹೊಸ-ಹೊಸ ವಿಷಯಗಳು
ಹೊರಬರುತ್ತವೆ, ಅದೂ ಸಹ ನಾಟಕದಲ್ಲಿ ನಿಗಧಿಯಾಗಿದೆ.
ತಂದೆಯು ತಿಳಿಸುತ್ತಾರೆ-
ಮಕ್ಕಳೇ, ನಾನು ಎತ್ತಿನ (ರಥ) ಮೇಲೆ ಸದಾ ಸವಾರಿ ಮಾಡಲು ಬರುತ್ತೇನೆ, ಇದರಲ್ಲಿ ನನಗೆ
ಸುಖವೆನಿಸುವುದಿಲ್ಲ. ನಾನಂತೂ ನೀವು ಮಕ್ಕಳಿಗೆ ಓದಿಸಲು ಬರುತ್ತೇನೆ. ನಾನು ಸದಾ ಎತ್ತಿನ ಮೇಲೆ
ಕುಳಿತೇ ಇರುತ್ತೇನೆ ಎಂದಲ್ಲ. ರಾತ್ರಿ-ಹಗಲು ಎತ್ತಿನ ಮೇಲೆ ಸವಾರಿಯಾಗುತ್ತದೆಯೇ? ಕೇವಲ
ಸೆಕೆಂಡಿನಲ್ಲಿ ಹೋಗುವುದು-ಬರುವುದು ನಡೆಯುತ್ತದೆ. ಸದಾ ಕುಳಿತುಕೊಳ್ಳುವ ಕಾಯಿದೆಯೇ ಇಲ್ಲ. ತಂದೆಯು
ಓದಿಸಲು ಎಷ್ಟು ದೂರದಿಂದ ಬರುತ್ತಾರೆ, ಅದು ಅವರ ಮನೆಯಲ್ಲವೆ. ಇಡೀ ದಿನ ಶರೀರದಲ್ಲಿ
ಕುಳಿತಿರುವುದಿಲ್ಲ. ಅವರಿಗೆ ಇದರಲ್ಲಿ ಸುಖದ ಅನುಭವವಾಗುವುದಿಲ್ಲ. ಹೇಗೆ ಪಂಜರದಲ್ಲಿ ಗಿಳಿಯು
ಸಿಕ್ಕಿ ಹಾಕಿಕೊಂಡಂತಾಗುತ್ತದೆ. ನಾನಂತೂ ನಿಮಗೆ ತಿಳಿಸುವುದಕ್ಕಾಗಿ ಈ ಶರೀರವನ್ನು ಲೋನ್ ಆಗಿ
ತೆಗೆದುಕೊಳ್ಳುತ್ತೇನೆ. ಜ್ಞಾನ ಸಾಗರ ತಂದೆಯು ನಮಗೆ ಓದಿಸಲು ಬರುತ್ತಾರೆಂದು ನೀವು ಹೇಳುತ್ತೀರಿ
ಅಂದಾಗ ಖುಷಿಯಲ್ಲಿ ರೋಮಾಂಚನವಾಗಿ ಬಿಡಬೇಕು. ಆ ಖುಷಿಯೇಕೆ ಕಡಿಮೆಯಾಗುವುದು! ಈ ಮಾಲೀಕ (ಬ್ರಹ್ಮ)ನಂತೂ
ಸ್ಥಿರವಾಗಿ ಕುಳಿತಿದ್ದಾರೆ. ಒಂದು ಎತ್ತಿನ ಮೇಲೆ ಇಬ್ಬರ ಸವಾರಿಯಾಗುತ್ತದೆಯೇ? ಶಿವ ತಂದೆಯು ತಮ್ಮ
ಧಾಮದಲ್ಲಿರುತ್ತಾರೆ, ಇಲ್ಲಿಗೆ ಬರುತ್ತಾರೆ, ಬರುವುದರಲ್ಲಿ ತಡವಾಗುವುದಿಲ್ಲ. ರಾಕೇಟ್ ನೋಡಿ ಎಷ್ಟು
ತೀಕ್ಷ್ಣವಾಗಿ ಹೋಗುತ್ತದೆ! ಶಬ್ಧಕ್ಕಿಂತಲೂ ಅತಿ ವೇಗವಾಗಿ ಹೋಗುತ್ತದೆ. ಆತ್ಮವೂ ಸಹ ಬಹಳ ಚಿಕ್ಕ
ರಾಕೇಟ್ ಆಗಿದೆ. ಆತ್ಮವು ಹೇಗೆ ಓಡುತ್ತದೆ, ಇಲ್ಲಿಂದ ತಕ್ಷಣ ಲಂಡನ್ಗೆ ಬೇಕಾದರೂ ಹೋಗುವುದು. ಒಂದು
ಸೆಕೆಂಡಿನಲ್ಲಿ ಜೀವನ್ಮುಕ್ತಿಯೆಂದು ಗಾಯನವಿದೆ. ತಂದೆಯೂ ಸಹ ರಾಕೇಟ್ ಆಗಿದ್ದಾರೆ, ತಿಳಿಸುತ್ತಾರೆ-
ನಾನು ನೀವು ಮಕ್ಕಳಿಗೆ ಓದಿಸಲು ಬರುತ್ತೇನೆ. ನಂತರ ನನ್ನ ಮನೆಗೆ ಹೋಗುತ್ತೇನೆ. ಈ ಸಮಯದಲ್ಲಿ ಬಹಳ
ಬ್ಯುಜಿಯಾಗಿರುತ್ತೇನೆ. ದಿವ್ಯ ದೃಷ್ಟಿಯ ದಾತನಾಗಿರುತ್ತೇನೆ ಆದ್ದರಿಂದ ಭಕ್ತರನ್ನೂ ಖುಷಿ
ಪಡಿಸಬೇಕಾಗುತ್ತದೆ. ನಿಮಗೆ ಓದಿಸುತ್ತೇನೆ, ಭಕ್ತರಿಗೆ ಮನಸ್ಸಾಗುತ್ತದೆ- ಸಾಕ್ಷಾತ್ಕಾರವಾಗಲಿ ಎಂದು.
ಅಥವಾ ಏನಾದರೊಂದು ಬೇಡುತ್ತಲೇ ಇರುತ್ತಾರೆ. ಎಲ್ಲರಿಗಿಂತ ಹೆಚ್ಚಿನ ಭಿಕ್ಷೆಯನ್ನು ಜಗದಂಬೆಯಿಂದ
ಬೇಡುತ್ತಾರೆ. ನೀವು ಜಗದಂಬೆಯರಾಗಿದ್ದೀರಲ್ಲವೆ. ನೀವು ವಿಶ್ವದ ರಾಜ್ಯಭಾಗ್ಯದ ಭಿಕ್ಷೆಯನ್ನು
ನೀಡುತ್ತೀರಿ. ಬಡವರಿಗೇ ಭಿಕ್ಷೆ ಸಿಗುತ್ತದೆಯಲ್ಲವೆ. ನಾವೂ ಸಹ ಬಡವರಾಗಿದ್ದೇವೆ, ಆದ್ದರಿಂದ ಶಿವ
ತಂದೆಯು ಸ್ವರ್ಗದ ರಾಜ್ಯಭಾಗ್ಯವನ್ನು ಭಿಕ್ಷೆ (ದಾನ)ಯಲ್ಲಿ ನೀಡುತ್ತಾರೆ. ಭಿಕ್ಷೆಯು ಮತ್ತೇನೂ
ಅಲ್ಲ ಕೇವಲ ಹೇಳುತ್ತಾರೆ. ತಂದೆಯನ್ನು ನೆನಪು ಮಾಡಿದರೆ ವಿಕರ್ಮಗಳು ವಿನಾಶವಾಗುತ್ತವೆ,
ಶಾಂತಿಧಾಮಕ್ಕೆ ಹೊರಟು ಹೋಗುತ್ತೀರಿ. ನನ್ನನ್ನು ನೆನಪು ಮಾಡಿದ್ದೇ ಆದರೆ ನಾನು ಗ್ಯಾರಂಟಿ
ಕೊಡುತ್ತೇನೆ, ನಿಮ್ಮ ಆಯಸ್ಸು ಧೀರ್ಘವಾಗುವುದು. ಸತ್ಯಯುಗದಲ್ಲಿ ಮೃತ್ಯುವಿನ ಹೆಸರು ಇರುವುದಿಲ್ಲ,
ಅದು ಅಮರ ಲೋಕವಾಗಿದೆ. ಮೃತ್ಯುವಿನ ಹೆಸರು ಇರುವುದಿಲ್ಲ. ಕೇವಲ ಒಂದು ವಸ್ತ್ರವನ್ನು ಬಿಟ್ಟು
ಇನ್ನೊಂದನ್ನು ತೆಗೆದುಕೊಳ್ಳುತ್ತಾರೆ. ಇದಕ್ಕೆ ಮೃತ್ಯುವೆಂದು ಹೇಳುತ್ತಾರೆಯೇ? ಅದು
ಅಮರಪುರಿಯಾಗಿದೆ. ನಾನು ಮಗುವಾಗುತ್ತೇನೆಂದು ಸಾಕ್ಷಾತ್ಕಾರವಾಗುತ್ತದೆ. ಇದು ಖುಷಿಯ ಮಾತಾಗಿದೆ.
ನಾನು ಹೋಗಿ ಚಿಕ್ಕ ಮಗುವಾಗುತ್ತೇನೆಂದು ಈ ತಂದೆಗೆ (ಬ್ರಹ್ಮಾ) ಬಹಳ ಖುಷಿಯಾಗುತ್ತದೆ ಏಕೆಂದರೆ
ಸತ್ಯಯುಗದಲ್ಲಿ ಬಾಯಲ್ಲಿ ಚಿನ್ನದ ಚಮಚವಿರುತ್ತದೆಯೆಂದು ತಿಳಿದಿದೆ. ಒಬ್ಬರೇ ತಂದೆಯ ಅನನ್ಯ
ಮಗುವಾಗಿದ್ದೇನೆ, ತಂದೆಯು ದತ್ತು ಮಾಡಿಕೊಂಡಿದ್ದಾರೆ. ನಾನು ಅನನ್ಯ ಮಗುವಾಗಿದ್ದೇನೆ. ಆದ್ದರಿಂದ
ತಂದೆಯು ಎಷ್ಟು ಪ್ರೀತಿ ಮಾಡುತ್ತಾರೆ! ಒಮ್ಮೆಲೆ ಪ್ರವೇಶ ಮಾಡಿಬಿಡುತ್ತಾರೆ. ಇದೂ ಸಹ ಆಟವಲ್ಲವೆ.
ಯಾವಾಗಲೂ ಆಟದಲ್ಲಿ ಖುಷಿಯಿರುತ್ತದೆ. ಇದೂ ಸಹ ತಿಳಿದಿದೆ- ಅವಶ್ಯವಾಗಿ ಇವರು ಬಹಳ-ಬಹಳ ಭಾಗ್ಯಶಾಲಿ
ರಥವಾಗಿರುವರು. ಇದಕ್ಕಾಗಿಯೇ ಜ್ಞಾನ ಸಾಗರನು ಇವರಲ್ಲಿ ಪ್ರವೇಶವಾಗಿ ನಿಮಗೆ ಜ್ಞಾನವನ್ನು
ಕೊಡುತ್ತಾರೆಂದು ಗಾಯನವಿದೆ. ನೀವು ಮಕ್ಕಳಿಗಾಗಿ ಒಂದು ಮಾತಿನ ಬಹಳ ಖುಷಿಯಿದೆ- ಸ್ವಯಂ ಭಗವಂತನೇ
ಬಂದು ಓದಿಸುತ್ತಾರೆ. ಭಗವಂತನು ಸ್ವರ್ಗದ ರಾಜಧಾನಿಯನ್ನು ಸ್ಥಾಪನೆ ಮಾಡುತ್ತಾರೆ. ನಾವು ಅವರ
ಮಕ್ಕಳಾಗಿದ್ದೇವೆ ಅಂದಮೇಲೆ ನಾವೇಕೆ ನರಕದಲ್ಲಿದ್ದೇವೆ, ಇದು ಯಾರ ಬುದ್ಧಿಯಲ್ಲಿಯೂ ಬರುವುದಿಲ್ಲ.
ನೀವಂತೂ ಭಾಗ್ಯಶಾಲಿಗಳಾಗಿದ್ದೀರಿ. ವಿಶ್ವದ ಮಾಲೀಕರಾಗಲು ಓದುತ್ತೀರಿ. ಇಂತಹ ವಿದ್ಯೆಯ ಮೇಲೆ
ಎಷ್ಟೊಂದು ಗಮನವಿರಬೇಕು. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ಸುಪ್ರಭಾತ.
ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಇದೇ ಡಬಲ್
ಖುಷಿಯಲ್ಲಿರಿ-ಈಗ ಯಾತ್ರೆಯು ಪೂರ್ಣವಾಯಿತು, ಮೊದಲು ನಾವು ನಮ್ಮ ಮನೆಯಾದ ಶಾಂತಿಧಾಮದಲ್ಲಿ
ಹೋಗುತ್ತೇವೆ. ನಂತರ ನಮ್ಮ ರಾಜಧಾನಿಯಲ್ಲಿ ಬರುತ್ತೇವೆ.
2. ತಲೆಯ ಮೇಲೆ
ಜನ್ಮ-ಜನ್ಮಾಂತರದ ಯಾವ ಪಾಪಗಳ ಹೊರೆಯಿದೆಯೋ ಅದನ್ನು ಭಸ್ಮ ಮಾಡಿಕೊಳ್ಳಬೇಕಾಗಿದೆ. ದೇಹಾಭಿಮಾನದಲ್ಲಿ
ಬಂದು ಯಾವುದೇ ವಿಕರ್ಮ ಮಾಡಬಾರದು.
ವರದಾನ:
ಶ್ರೇಷ್ಠ
ಸಂಕಲ್ಪಗಳ ಸಹಯೋಗದ ಮೂಲಕ ಸರ್ವರಲ್ಲಿ ಶಕ್ತಿಯನ್ನು ತುಂಬುವಂತಹ ಶಕ್ತಿಶಾಲಿ ಆತ್ಮ ಭವ.
ಸದಾ ಶಕ್ತಿಶಾಲಿ ಭವದ
ವರದಾನ ಪ್ರಾಪ್ತಿ ಮಾಡಿಕೊಂಡು ಸರ್ವ ಆತ್ಮರಲ್ಲಿ ಶ್ರೇಷ್ಠ ಸಂಕಲ್ಪಗಳ ಮೂಲಕ ಬಲವನ್ನು ತುಂಬುವಂತಹ
ಸೇವೆ ಮಾಡಿ. ಹೇಗೆ ಇತ್ತೀಚಿನ ದಿನಗಳಲ್ಲಿ ಸೂರ್ಯನ ಶಕ್ತಿಯನ್ನು ಜಮಾ ಮಾಡಿಕೊಂಡು ಎಷ್ಟೋ
ಕಾರ್ಯಗಳನ್ನು ಸಫಲ ಮಾಡುತ್ತಾರೆ. ಹಾಗೆಯೆ ಶ್ರೇಷ್ಠ ಸಂಕಲ್ಪಗಳ ಶಕ್ತಿ ಇಷ್ಟು ಜಮಾ ಆಗಲಿ
ಯಾವುದರಿಂದ ಬೇರೆಯವರ ಸಂಕಲ್ಪದಲ್ಲಿ ಶಕ್ತಿ ತುಂಬ ಬೇಕು. ಈ ಸಂಕಲ್ಪ ಇನ್ಜೆಕ್ಷನ್ ನ ಕೆಲಸಮಾಡುವುದು.
ಇದರಿಂದ ಆಂತರಿಕವಾಗಿ ವೃತ್ತಿಯಲ್ಲಿ ಶಕ್ತಿ ಬರುವುದು. ಆದ್ದರಿಂದ ಈಗ ಶ್ರೇಷ್ಠ ಭಾವನೆ ಅಥವಾ
ಶ್ರೇಷ್ಠ ಸಂಕಲ್ಪದಿಂದ ಪರಿವರ್ತನೆ ಮಾಡುವುದು - ಈ ಸೇವೆಯ ಅವಶ್ಯಕತೆ ಇದೆ.
ಸ್ಲೋಗನ್:
ಮಾಸ್ಟರ್
ದುಃಖಹರ್ತ ಆಗಿ ದುಃಖವನ್ನೂ ಸಹಾ ಆತ್ಮೀಯ ಸುಖದಲ್ಲಿ ಪರಿವರ್ತನೆ ಮಾಡಬೇಕು- ಇದೇ ನಿಮ್ಮ ಶ್ರೇಷ್ಠ
ಕರ್ತವ್ಯವಾಗಿದೆ.
ಅವ್ಯಕ್ತ ಸೂಚನೆ:
ಸಂಕಲ್ಪ ಶಕ್ತಿಯನ್ನು ಜಮಾ ಮಾಡಿ ಶ್ರೇಷ್ಠ ಸೇವೆಗೆ ನಿಮಿತ್ತರಾಗಿ.
ಕೆಲ ಮಕ್ಕಳು ಕೆಲವು ಬಾರಿ
ದೊಡ್ಡ ಆಟವನ್ನು ತೋರಿಸುತ್ತಾರೆ. ವ್ಯರ್ಥ ಸಂಕಲ್ಪ ಇಷ್ಟು ವೇಗವಾಗಿ ಬರುತ್ತದೆ, ಕಂಟ್ರೋಲ್ ಮಾಡಲು
ಸಾಧ್ಯವಾಗುವುದಿಲ್ಲ, ನಂತರ ಆ ಸಮಯದಲ್ಲಿ ಹೇಳುತ್ತಾರೆ ಏನು ಮಾಡುವುದು ನಡೆದು ಹೋಯಿತು! ನಿಲ್ಲಿಸಲು
ಸಾಧ್ಯವಾಗಿಲ್ಲ, ಏನು ಬಂದಿತು ಅದು ಮಾಡಿ ಬಿಟ್ಟೆವು ಆದರೆ ವ್ಯರ್ಥಕ್ಕೆ ಕಂಟ್ರೋಲಿಂಗ್ ಪವರ್
ಬೇಕಾಗಿದೆ. ಹೇಗೆ ಒಂದು ಸಮರ್ಥ ಸಂಕಲ್ಪದ ಫಲ ಪದಮದಷ್ಟು ಸಿಗುವುದು ಇದೇ ರೀತಿ ಒಂದು ವ್ಯರ್ಥ
ಸಂಕಲ್ಪಗಳ ಲೆಕ್ಕ - ಉದಾಸವಾಗುವುದು ಹೃದಯ ವಿಧಿರ್ಣವಾಗುವುದು ಹಾಗೂ ಖುಷಿ ಮಾಯೆಯಾಗುವುದು - ಇದು
ಸಹ ಒಂದಕ್ಕೆ ಬಹಳಷ್ಟು ಪಟ್ಟು ಅನುಭವ ಮಾಡುವಿರಿ.