19.09.24 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ-
ತಮ್ಮೊಂದಿಗೆ ತಾವು ಮಾತನಾಡಿಕೊಳ್ಳಿ, ಪಾವನರಾಗುವುದು ನಿಮ್ಮ ಕೆಲಸವಾಗಿದೆ. ಅನ್ಯ ಆತ್ಮಗಳ
ಚಿಂತನೆಯಲ್ಲಿ ತಮ್ಮ ಸಮಯವನ್ನು ವ್ಯರ್ಥ ಮಾಡಬೇಡಿ”
ಪ್ರಶ್ನೆ:
ಯಾವ ಮಾತು
ಬುದ್ದಿಯಲ್ಲಿ ಬಂದುಬಿಟ್ಟರೆ ಹಳೆಯ ಎಲ್ಲಾ ಹವ್ಯಾಸಗಳು (ಚಟ) ಬಿಟ್ಟುಹೋಗುತ್ತವೆ?
ಉತ್ತರ:
ನಾವು ಬೇಹದ್ದಿನ
ತಂದೆಯ ಸಂತಾನರಾಗಿದ್ದೇವೆ. ಅಂದರೆ ವಿಶ್ವದ ಮಾಲೀಕರಾದೆವು. ನಾವೀಗ ದೇವತೆಗಳಾಗಬೇಕಾಗಿದೆ. ಈ ಮಾತು
ಬುದ್ಧಿಯಲ್ಲಿ ಹೊಳೆದರೆ ಎಲ್ಲಾ ಹಳೆಯ ಹವ್ಯಾಸಗಳು ಬಿಟ್ಟುಹೋಗುತ್ತವೆ. ನೀವು ಹೇಳಿ, ಹೇಳದಿರಿ ತಾನೇ
ಬಿಟ್ಟುಬಿಡುತ್ತಾರೆ. ಉಲ್ಟಾ-ಪಲ್ಟಾ ಆಹಾರ-ಪಾನೀಯ ಮಧ್ಯಪಾನ ಇತ್ಯಾದಿಗಳನ್ನು ತಾವೇ
ಬಿಟ್ಟುಬಿಡುತ್ತಾರೆ ಮತ್ತು ಹೇಳುತ್ತಾರೆ- ವಾಹ್! ನಾವಂತೂ ಈ ಲಕ್ಷ್ಮೀ-ನಾರಾಯಣರಾಗಬೇಕಾಗಿದೆ. 21
ಜನ್ಮಗಳ ರಾಜ್ಯಭಾಗ್ಯವು ಸಿಗುತ್ತದೆಯೆಂದರೆ ಏಕೆ ಪವಿತ್ರರಾಗಿರಬಾರದು.
ಓಂ ಶಾಂತಿ.
ತಂದೆಯೇ ಪದೇ-ಪದೇ ಮಕ್ಕಳ ಗಮನವನ್ನು ಸೆಳೆಯುತ್ತಾರೆ- ತಂದೆಯ ನೆನಪಿನಲ್ಲಿ ಕುಳಿತಿದ್ದೀರಾ?
ಬುದ್ಧಿಯು ಬೇರೆಕಡೆ ಓಡುವುದಿಲ್ಲವೆ? ಬಾಬಾ, ಬಂದು ನಮ್ಮನ್ನು ಪಾವನ ಮಾಡಿ ಎಂದೇ ಕರೆದಿರಿ,
ಪಾವನರಂತೂ ಅವಶ್ಯವಾಗಿ ಆಗಬೇಕಾಗಿದೆ ಮತ್ತು ಜ್ಞಾನವನ್ನು ನೀವು ಯಾರಿಗೆ ಬೇಕಾದರೂ ತಿಳಿಸಬಹುದು. ಈ
ಸೃಷ್ಟಿಚಕ್ರವು ಹೇಗೆ ಸುತ್ತುತ್ತದೆ ಇದನ್ನೂ ನೀವು ಯಾರಿಗೆ ತಿಳಿಸಿದರೂ ಸಹ ತಕ್ಷಣ
ತಿಳಿದುಕೊಳ್ಳುತ್ತಾರೆ. ಭಲೇ ಪವಿತ್ರರಾಗಿರದಿದ್ದರೂ ಸಹ ಜ್ಞಾನವನ್ನಂತೂ ಓದುತ್ತಾರೆ. ಯಾವುದೇ
ದೊಡ್ಡ ಮಾತಿಲ್ಲ. 84 ಜನ್ಮಗಳ ಚಕ್ರ ಮತ್ತು ಪ್ರತಿಯೊಂದು ಯುಗದ ಆಯಸ್ಸು ಇಷ್ಟಿದೆ. ಇಷ್ಟು
ಜನ್ಮಗಳಿರುತ್ತವೆ. ಎಲ್ಲವೂ ಸಹಜವಾಗಿರುತ್ತದೆ. ಇದರ ಸಂಬಂಧವು ನೆನಪಿನೊಂದಿಗೆ ಇಲ್ಲ. ಇದು
ವಿದ್ಯೆಯಾಗಿದೆ. ತಂದೆಯು ಯಥಾರ್ಥವಾದ ಮಾತನ್ನು ತಿಳಿಸುತ್ತಾರೆ. ನೆನಪಿನಿಂದಲೇಸತೋಪ್ರಧಾನ
ಆಗುತ್ತೀರಿ. ನೆನಪು ಮಾಡದಿದ್ದರೆ ಬಹಳ ಚಿಕ್ಕದಾದ ಪದವಿಯನ್ನು ಪಡೆಯುತ್ತೀರಿ. ಇಷ್ಟು
ಶ್ರೇಷ್ಠಪದವಿಯನ್ನು ಪಡೆಯಲು ಸಾಧ್ಯವಿಲ್ಲ. ಆದ್ದರಿಂದ ಅಟೆನ್ಶನ್ ಎಂದು ಹೇಳುತ್ತಾರೆ.
ಬುದ್ಧಿಯೋಗವು ತಂದೆಯ ಜೊತೆಯಿರಲಿ. ಇದಕ್ಕೆ ಪ್ರಾಚೀನ ರಾಜಯೋಗವೆಂದು ಹೇಳಲಾಗುತ್ತದೆ. ಶಿಕ್ಷಕರ
ಜೊತೆ ಯೋಗವಂತೂ ಪ್ರತಿಯೊಬ್ಬರದೂ ಇರುತ್ತದೆ. ಮೂಲಮಾತು ನೆನಪಿನದಾಗಿದೆ. ನೆನಪಿನ ಯಾತ್ರೆಯಿಂದಲೇ
ಸತೋಪ್ರಧಾನರಾಗ ಬೇಕಾಗಿದೆ. ಮತ್ತು ಸತೋಪ್ರಧಾನರಾಗಿ ಹಿಂತಿರುಗಿ ಮನೆಗೆ ಹೋಗಬೇಕಾಗಿದೆ. ಉಳಿದಂತೆ
ವಿದ್ಯೆ ಯಂತೂ ಬಹಳ ಸಹಜವಾಗಿದೆ. ಚಿಕ್ಕ ಮಗುವೂ ಸಹ ಅರಿತುಕೊಳ್ಳಬಹುದು. ನೆನಪಿನಲ್ಲಿಯೇ ಮಾಯೆಯ
ಯುದ್ಧವು ನಡೆಯುತ್ತದೆ. ನೀವು ತಂದೆಯನ್ನು ನೆನಪು ಮಾಡುತ್ತೀರಿ ಮತ್ತೆ ಮಾಯೆಯ ನೆನಪಿನಲ್ಲಿಯೇ
ಯುದ್ಧವು ನಡೆಯುತ್ತದೆ. ನೀವು ತಂದೆಯನ್ನು ನೆನಪು ಮಾಡುತ್ತೀರಿ ಮತ್ತೆ ಮಾಯೆಯು ತನ್ನಕಡೆ ಸೆಳೆದು
ಮರೆಸಿಬಿಡುತ್ತದೆ. ನನ್ನಲ್ಲಿ ಶಿವತಂದೆಯು ಕುಳಿತಿದ್ದಾರೆ. ನಾನು ಶಿವನಾಗಿದ್ದೇನೆಂದು
ಹೇಳುವುದಿಲ್ಲ ನಾನಾತ್ಮನಾಗಿದ್ದೇನೆ. ಶಿವತಂದೆಯನ್ನು ನೆನಪು ಮಾಡಬೇಕಾಗಿದೆ. ನನ್ನಲ್ಲಿಯೇ ಶಿವನ
ಪ್ರವೇಶವಾಗಿದೆ ಎಂದು ಹೇಳಲು ಸಾಧ್ಯವಿಲ್ಲ. ತಂದೆಯು ತಿಳಿಸುತ್ತಾರೆ- ನಾನು ಯಾರಲ್ಲಿಯೂ
ಹೋಗುವುದಿಲ್ಲ. ನಾನು ಈ ರಥದಲ್ಲಿ ಸವಾರನಾಗಿ ಈ ಮಕ್ಕಳಿಗೆ ತಿಳಿಸುತ್ತೇನೆ. ಹಾ! ಯಾರಾದರೂ
ಮಂದಬುದ್ಧಿಯ ಮಕ್ಕಳ ಬಳಿ ಒಳ್ಳೆಯ ವ್ಯಕ್ತಿಗಳು ಬಂದಾಗ ಅವರ ಸೇವಾರ್ಥವಾಗಿ ನಾನು ಪ್ರವೇಶ ಮಾಡಿ
ದೃಷ್ಟಿಯನ್ನು ಕೊಡುತ್ತೇನೆ. ಹೋಗಿ ಅವರಲ್ಲಿ ಸದಾ ಕುಳಿತುಕೊಳ್ಳುವುದಿಲ್ಲ. ಬಹುರೂಪ ಧಾರಣೆ ಮಾಡಿ
ಅನ್ಯರ ಕಲ್ಯಾಣ ಮಾಡುತ್ತೇನೆ. ಆದರೆ ನನ್ನಲ್ಲಿಯೇ ಶಿವತಂದೆಯ ಪ್ರವೇಶವಾಗಿದೆ. ನನಗೆ ಶಿವತಂದೆಯು
ಇದನ್ನು ಹೇಳುತ್ತಾರೆ ಎಂದು ಯಾರೂ ಹೇಳಲು ಸಾಧ್ಯವಿಲ್ಲ. ಶಿವತಂದೆಯಂತೂ ಮಕ್ಕಳಿಗೇ ತಿಳಿಸುತ್ತಾರೆ-
ಮೂಲಮಾತು ಪಾವನರಾಗುವುದಾಗಿದೆ. ಇದರಿಂದಲೇ ಪಾವನ ಪ್ರಪಂಚದಲ್ಲಿ ಹೋಗಲು ಸಾಧ್ಯ. 84 ಜನ್ಮಗಳ
ಚಕ್ರವನ್ನು ತಂದೆಯು ಬಹಳ ಸಹಜವಾಗಿ ತಿಳಿಸುತ್ತಾರೆ. ಚಿತ್ರಗಳೂ ಸನ್ಮುಖದಲ್ಲಿವೆ. ತಂದೆಯ ವಿನಃ ಈ
ಜ್ಞಾನವನ್ನು ಮತ್ತ್ಯಾರೂ ಕೊಡಲು ಸಾಧ್ಯವಿಲ್ಲ. ಆತ್ಮಕ್ಕೆ ಈ ಜ್ಞಾನವು ಸಿಗುತ್ತದೆ. ಅದನ್ನೇ
ಜ್ಞಾನದ ಮೂರನೆಯ ನೇತ್ರವೆಂದು ಹೇಳಲಾಗುತ್ತದೆ. ಆತ್ಮಕ್ಕೆ ಸುಖ-ದುಃಖವಾಗುತ್ತದೆ. ಅದಕ್ಕೆ ಈ
ಶರೀರವಿದೆಯಲ್ಲವೆ. ಆತ್ಮವೇ ದೇವತೆಯಾಗುತ್ತದೆ. ಯಾವುದೇ ಬ್ಯಾರಿಸ್ಟರ್ ಇತ್ಯಾದಿ ಆತ್ಮವೇ ಆಗುತ್ತದೆ
ಅಂದಾಗ ಈಗ ತಂದೆಯು ಕುಳಿತು ಆತ್ಮಗಳೊಂದಿಗೆ ಮಾತನಾಡುತ್ತಾರೆ. ತಮ್ಮ ಪರಿಚಯವನ್ನು ಕೊಡುತ್ತಾರೆ.
ನೀವು ದೇವತೆಗಳಾಗಿದ್ದಾಗ ಮನುಷ್ಯರೇ ಆಗಿದ್ದೀರಿ ಆದರೆ ಪವಿತ್ರ ಆತ್ಮಗಳಾಗಿದ್ದೀರಿ. ಈಗ ನೀವು
ಪವಿತ್ರರಲ್ಲ. ಆದ್ದರಿಂದ ನಿಮಗೆ ದೇವತೆಗಳೆಂದು ಹೇಳಲು ಸಾಧ್ಯವಿಲ್ಲ. ಈಗ ದೇವತೆಗಳಾಗಲು ಅವಶ್ಯವಾಗಿ
ಪವಿತ್ರರಾಗಬೇಕಾಗಿದೆ. ಆದ್ದರಿಂದ ತಂದೆಯನ್ನು ನೆನಪು ಮಾಡಬೇಕಾಗಿದೆ. ಬಹಳಷ್ಟು ಮಂದಿ ಇದನ್ನೇ
ಹೇಳುತ್ತಾರೆ- ಬಾಬಾ, ನನ್ನಿಂದ ಈ ತಪ್ಪಾಯಿತು. ನಾನು ದೇಹಾಭಿಮಾನದಲ್ಲಿ ಬಂದುಬಿಟ್ಟೆ. ತಂದೆಯು
ಕುಳಿತು ಮಕ್ಕಳಿಗೆ ತಿಳಿಸುತ್ತಾರೆ- ಮಕ್ಕಳೇ, ಅವಶ್ಯವಾಗಿ ಪವಿತ್ರರಾಗಬೇಕು. ಯಾವುದೇ ಪಾಪಗಳು
ಮಾಡಬಾರದು. ನೀವು ಸರ್ವಗುಣ ಸಂಪನ್ನರಾಗಬೇಕು. ಪಾವನರಾಗುವುದರಿಂದ ಮುಕ್ತಿಧಾಮಕ್ಕೆ ಹೊರಟು
ಹೋಗುತ್ತೀರಿ. ಮತ್ತ್ಯಾವುದೇ ಪ್ರಶ್ನೆಯನ್ನು ಹೇಳುವ ಮಾತೇ ಇಲ್ಲ. ನೀವು ತಮ್ಮೊಂದಿಗೆ ಮಾತನಾಡಿ
ಅನ್ಯ ಆತ್ಮಗಳ ಚಿಂತೆಯನ್ನು ಮಾಡಬೇಡಿ. ಯುದ್ಧದಲ್ಲಿ 2 ಕೋಟಿ ಆತ್ಮಗಳು ಸತ್ತರು. ಇಷ್ಟೆಲ್ಲಾ
ಆತ್ಮಗಳು ಎಲ್ಲಿಗೆ ಹೋದರೆಂದು ಕೇಳುತ್ತಾರೆ. ಅರೆ! ಅವರು ಎಲ್ಲಿಯಾದರೂ ಹೋಗಲಿ, ಅದರಲ್ಲಿ
ನಿಮ್ಮದೇನು ಹೋಗುತ್ತದೆ. ಆ ಚಿಂತನೆಯಲ್ಲಿ ನೀವೇಕೆ ತಮ್ಮ ಸಮಯವನ್ನು ವ್ಯರ್ಥ ಮಾಡುತ್ತೀರಿ?
ಮತ್ತ್ಯಾವುದೇ ಮಾತನ್ನು ಕೇಳುವ ಅವಶ್ಯಕತೆಯಿಲ್ಲ. ಪಾವನರಾಗಿ, ಪಾವನಪ್ರಪಂಚದ ಮಾಲೀಕರಾಗುವುದು
ನಿಮ್ಮ ಕೆಲಸವಾಗಿದೆ. ಅನ್ಯಮಾತುಗಳಲ್ಲಿ ಹೋಗುವುದರಿಂದ ತಬ್ಬಿಬ್ಬಾಗುತ್ತೀರಿ. ಯಾರಿಗಾದರೂ ಪೂರ್ಣ
ಉತ್ತರ ಸಿಕ್ಕದಿದ್ದರೆ ತಬ್ಬಿಬ್ಬಾಗುತ್ತಾರೆ.
ತಂದೆಯು ತಿಳಿಸುತ್ತಾರೆ-
ಮನ್ಮನಾಭವ ದೇಹಸಹಿತ ದೇಹದ ಎಲ್ಲಾ ಸಂಬಂಧಗಳನ್ನು ಬಿಡಿ. ನನ್ನ ಬಳಿಯೇ ನೀವು ಬರಬೇಕಾಗಿದೆ.
ಮನುಷ್ಯರು ಶರೀರವನ್ನು ಬಿಟ್ಟಾಗ ಸ್ಮಶಾನಕ್ಕೆ ತೆಗೆದುಕೊಂಡು ಹೋಗುವಾಗ ಮುಖವನ್ನು ಈ ಕಡೆ ಮತ್ತು
ಕಾಲುಗಳನ್ನು ಸ್ಮಶಾನದ ಕಡೆ ಇಡುತ್ತಾರೆ ಮತ್ತೆ ಸ್ಮಶಾನದ ಹತ್ತಿರ ತಲುಪಿದಾಗ ಕಾಲುಗಳನ್ನು ಈ ಕಡೆ
ಮತ್ತು ಮುಖವನ್ನು ಸ್ಮಶಾನದ ಕಡೆ ತಿರುಗಿಸುತ್ತಾರೆ. ನಿಮ್ಮದೂ ಸಹ ಮನೆಯು ಮೇಲಿದೆಯಲ್ಲವೇ! ಪತಿತರು
ಯಾರೂ ಮೇಲೆ ಹೋಗಲು ಸಾಧ್ಯವಿಲ್ಲ. ಪಾವರಾಗಲು ಬುದ್ಧಿಯೋಗವನ್ನು ತಂದೆಯ ಜೊತೆ ಜೋಡಿಸಬೇಕಾಗಿದೆ.
ತಂದೆಯ ಬಳಿ ಮುಕ್ತಿಧಾಮದಲ್ಲಿ ಹೋಗಬೇಕಾಗಿದೆ. ಪತಿತರಾಗಿದ್ದಾರೆ. ಆದ್ದರಿಂದಲೇ ಬಂದು ನಾವು
ಪತಿತರನ್ನು ಪಾವನ ಮಾಡಿ, ಮುಕ್ತರನ್ನಾಗಿ ಮಾಡಿ ಎಂದು ತಂದೆಯನ್ನು ಕರೆಯುತ್ತಾರೆ. ಆದ್ದರಿಂದ
ತಂದೆಯು ತಿಳಿಸುತ್ತಾರೆ. ಈಗ ಪವಿತ್ರರಾಗಿ ತಂದೆಯು ಯಾವ ಭಾಷೆಯಲ್ಲಿ ತಿಳಿಸುತ್ತಾರೆಯೋ ಅದರಲ್ಲಿಯೇ
ಕಲ್ಪ-ಕಲ್ಪವೂ ತಿಳಿಸುತ್ತಾರೆ. ಇವರದು ಯಾವ ಭಾಷೆಯಾಗಿರುವುದೋ ಆ ಭಾಷೆಯಲ್ಲಿಯೇ ತಿಳಿಸುತ್ತಾರಲ್ಲವೆ.
ಇತ್ತೀಚೆಗಂತೂ ಹಿಂದಿಭಾಷೆಯು ಬಹಳ ನಡೆಯುತ್ತದೆ. ತಂದೆಯ ಭಾಷೆಯು ಬದಲಾಗುತ್ತದೆ ಎಂದಲ್ಲ. ದೇವತೆಗಳ
ಭಾಷೆಯು ಸಂಸ್ಕೃತವಲ್ಲ. ಹಿಂದೂ ಧರ್ಮದ ಭಾಷೆಯೂ ಸಂಸ್ಕೃತವಲ್ಲ. ಹಿಂದಿಯೇ ಆಗಿರಬೇಕು. ಮತ್ತೆ
ಸಂಸ್ಕøತವನ್ನು ಏಕೆ ತೆಗೆದುಕೊಳ್ಳುತ್ತಾರೆ. ಅಂದಾಗ ತಂದೆಯು ತಿಳಿಸುತ್ತಾರೆ- ಇಲ್ಲಿ
ಕುಳಿತುಕೊಂಡಾಗ ತಂದೆಯ ನೆನಪಿನಲ್ಲಿಯೇ ಕುಳಿತುಕೊಳ್ಳಬೇಕಾಗಿದೆ. ಮತ್ತ್ಯಾವುದೇ ಮಾತಿನಲ್ಲಿ ನೀವು
ಹೋಗಲೇಬೇಡಿ. ಇಷ್ಟೊಂದು ಸೊಳ್ಳೆಗಳು ಎಲ್ಲಿ ಹೋಗುತ್ತವೆ? ಭೂಕಂಪದಲ್ಲಿ ಅನೇಕ ಆತ್ಮಗಳು ಶರೀರ
ಬಿಡುತ್ತಾರೆ. ಆತ್ಮಗಳು ಎಲ್ಲಿಗೆ ಹೋಗುತ್ತಾರೆ? ಎಂದು ಆಲೋಚನೆ ಮಾಡುವುದರಲ್ಲಿ ನಿಮಗೇನು
ಸಿಗುತ್ತದೆ? ನಿಮಗಂತೂ ತಂದೆಯು ಶ್ರೀಮತವನ್ನು ಕೊಟ್ಟಿದ್ದಾರೆ. ತಮ್ಮ ಉನ್ನತಿಗಾಗಿ ಪುರುಷಾರ್ಥ
ಮಾಡಿ ಅನ್ಯರ ಚಿಂತನೆಯಲ್ಲಿ ಹೋಗಬೇಡಿ. ಹೀಗೆ ಹೋದರೆ ಅನೇಕ ಮಾತುಗಳ ಚಿಂತನೆಯಾಗಿಬಿಡುತ್ತದೆ. ಕೇವಲ
ನನ್ನೊಬ್ಬನನ್ನು ನೆನಪು ಮಾಡಿ. ಯಾವುದಕ್ಕಾಗಿ ಕರೆದಿರೋ ಆ ಯುಕ್ತಿಯಲ್ಲಿ ನಡೆಯಿರಿ. ನೀವು
ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳಬೇಕಾಗಿದೆ. ಅನ್ಯಮಾತುಗಳಲ್ಲಿ ಹೋಗಬಾರದು. ಆದ್ದರಿಂದ ತಂದೆಯು
ಹೇಳುತ್ತಾರೆ- ಅಟೆನ್ಶನ್. ಬುದ್ಧಿಯು ಎಲ್ಲಿಯೂ ಹೋಗುವುದಿಲ್ಲ. ಭಗವಂತನ ಶ್ರೀಮತವನ್ನು
ಪಾಲಿಸಬೇಕಲ್ಲವೆ. ಅನ್ಯಮಾತುಗಳಲ್ಲಿ ಲಾಭವಿಲ್ಲ. ಮುಖ್ಯಮಾತು ಪಾವನರಾಗುವುದಾಗಿದೆ. ಇದನ್ನು ಪಕ್ಕಾ
ನೆನಪಿಡಿ - ನಮ್ಮ ಬಾಬಾ ತಂದೆಯೂ, ಶಿಕ್ಷಕನೂ, ಸದ್ಗುರುವೂ ಆಗಿದ್ದಾರೆ. ಇದನ್ನು ಅವಶ್ಯವಾಗಿ
ಮನಸ್ಸಿನಲ್ಲಿಟ್ಟುಕೊಳ್ಳಬೇಕು. ತಂದೆಯೂ ಆಗಿದ್ದಾರೆ. ನಮಗೆ ಓದಿಸುತ್ತಾರೆ. ಯೋಗವನ್ನು
ಕಲಿಸುತ್ತಾರೆ. ಶಿಕ್ಷಕರು ಓದಿಸುತ್ತಾರೆಂದರೆ ಬುದ್ಧಿಯೋಗವು ಶಿಕ್ಷಕರಲ್ಲಿ ಮತ್ತು ವಿದ್ಯೆಯಲ್ಲಿಯೇ
ಹೋಗುತ್ತದೆ. ಇದನ್ನೇ ತಂದೆಯೂ ಹೇಳುತ್ತಾರೆ. ನೀವು ತಂದೆಯ ಮಕ್ಕಳಂತೂ ಆಗಿಬಿಟ್ಟಿರಿ,
ಮಕ್ಕಳಾಗಿರುವ ಕಾರಣವೇ ಇಲ್ಲಿ ಕುಳಿತಿದ್ದೀರಿ, ಶಿಕ್ಷಕರಿಂದ ಓದುತ್ತಿದ್ದೀರಿ. ಎಲ್ಲಿಯೇ ಇದ್ದರೂ
ತಂದೆಯ ಮಕ್ಕಳಂತೂ ಆಗಿದ್ದೀರೆಂದ ಮೇಲೆ ವಿದ್ಯೆಯ ಮೇಲೆ ಗಮನ ಕೊಡಬೇಕಾಗಿದೆ. ಶಿವತಂದೆಯನ್ನು ನೆನಪು
ಮಾಡುತ್ತೀರೆಂದರೆ ವಿಕರ್ಮಗಳು ವಿನಾಶವಾಗುತ್ತವೆ ಮತ್ತು ನೀವು ಸತೋಪ್ರಧಾನರಾಗಿಬಿಡುತ್ತೀರಿ. ಈ
ಜ್ಞಾನವನ್ನು ಮತ್ತ್ಯಾರೂ ಕೊಡಲು ಸಾಧ್ಯವಿಲ್ಲ. ಮನುಷ್ಯರಂತೂ ಘೋರ ಅಂಧಕಾರದಲ್ಲಿದ್ದಾರಲ್ಲವೆ.
ಜ್ಞಾನವನ್ನು ನೋಡಿ, ಎಷ್ಟೊಂದು ಶಕ್ತಿಯಿದೆ. ಶಕ್ತಿಯು ಎಲ್ಲಿಂದ ಸಿಗುತ್ತದೆ? ತಂದೆಯಿಂದ ಶಕ್ತಿಯು
ಸಿಗುತ್ತದೆ. ಅದರಿಂದ ನೀವು ಪಾವನರಾಗುತ್ತೀರಿ. ವಿದ್ಯೆಯು ಸಹಜವಾಗಿದೆ. ಆ ವಿದ್ಯೆಯಲ್ಲಂತೂ
ಬಹಳಷ್ಟು ತಿಂಗಳುಗಳು ಹಿಡಿಸುತ್ತವೆ. ಇಲ್ಲಿ ಕೇವಲ ಏಳುದಿನಗಳ ಸಾಪ್ತಾಹಿಕ ಶಿಕ್ಷಣವಾಗಿದೆ.
ಇದರಿಂದ ನೀವು ಎಲ್ಲವನ್ನೂ ಅರಿತುಕೊಳ್ಳುತ್ತೀರಿ. ಮತ್ತೆ ಇದು ಬುದ್ಧಿಯ ಮೇಲೆ ಆಧಾರಿತವಾಗಿದೆ.
ಕೆಲವರಿಗೆ ಹೆಚ್ಚಿನ ಸಮಯ ಹಿಡಿಸುತ್ತದೆ. ಕೆಲವರು ಕಡಿಮೆ. ಕೆಲವರಂತೂ 2-3 ದಿನಗಳಲ್ಲಿ ಬಹಳ
ಚೆನ್ನಾಗಿ ತಿಳಿದುಕೊಳ್ಳುತ್ತಾರೆ. ಮೂಲಮಾತು ತಂದೆಯನ್ನು ನೆನಪು ಮಾಡುವುದು. ಪವಿತ್ರರಾಗುವುದಾಗಿದೆ.
ಅದೇ ಕಷ್ಟವಾಗುತ್ತದೆ. ಬಾಕಿ ವಿದ್ಯೆಯಂತೂ ಬಹಳ ಸಹಜವಾಗಿದೆ. ಸ್ವದರ್ಶನ ಚಕ್ರಧಾರಿಗಳಾಗಬೇಕಾಗಿದೆ.
ಒಂದುದಿನದ ಶಿಕ್ಷಣದಲ್ಲಿಯೂ ನೀವು ಎಲ್ಲವನ್ನು ಅರಿತುಕೊಳ್ಳಬಹುದು. ನಾವಾತ್ಮಗಳಾಗಿದ್ದೇವೆ.
ಬೇಹದ್ದಿನ ತಂದೆಯ ಸಂತಾನರಾಗಿದ್ದೇವೆ. ಅಂದಮೇಲೆ ನಾವು ಅವಶ್ಯವಾಗಿ ವಿಶ್ವದ ಮಾಲೀಕರಾದೆವು. ಇದು
ಬುದ್ಧಿಯಲ್ಲಿ ಬರುತ್ತದೆಯಲ್ಲವೆ. ದೇವತೆಗಳಾಗಬೇಕೆಂದರೆ ದೈವೀಗುಣಗಳನ್ನು ಧಾರಣೆ ಮಾಡಬೇಕಾಗಿದೆ.
ಯಾರಿಗೆ ಬುದ್ದಿಯಲ್ಲಿ ಬಂದುಬಿಡುವುದೋ ಎಲ್ಲಾ ಹವ್ಯಾಸಗಳನ್ನು ಬಿಟ್ಟುಬಿಡುತ್ತಾರೆ. ನೀವು ಹೇಳಿ
ಅಥವಾ ಹೇಳದಿರಿ ಎಲ್ಲವನ್ನೂ ತಾವಾಗಿಯೇ ಬಿಟ್ಟುಬಿಡುತ್ತಾರೆ. ಉಲ್ಟಾ-ಪಲ್ಟಾ, ಆಹಾರ-ಪಾನೀಯ,
ಮಧ್ಯಪಾನ ಇತ್ಯಾದಿಗಳನ್ನು ತಾವಾಗಿಯೇ ಬಿಟ್ಟುಬಿಡುತ್ತಾರೆ. ನಾವಂತೂ ವಾಹ್! ಈ ಲಕ್ಷ್ಮೀ-ನಾರಾಯಣರ
ಸಮಾನರಾಗಬೇಕಾಗಿದೆ. 21 ಜನ್ಮಗಳಿಗಾಗಿ ರಾಜ್ಯಭಾಗ್ಯವು ಸಿಗುತ್ತದೆ. ಅಂದಮೇಲೆ ನಾವೇಕೆ ಬಿಡಬೇಕು.
ಹಿಡಿದುಕೊಂಡುಬಿಡಬೇಕು. ಮುಖ್ಯಮಾತು ನೆನಪಿನ ಯಾತ್ರೆಯಾಗಿದೆ. ಬಾಕಿ 84 ಜನ್ಮಗಳ ಚಕ್ರವಂತೂ ಒಂದು
ಸೆಕೆಂಡಿನಲ್ಲಿ ಸಿಕ್ಕಿಬಿಡುತ್ತದೆ. ನೋಡುವುದರಿಂದಲೇ ಅರಿತುಕೊಳ್ಳುತ್ತಾರೆ. ಹೊಸ ವೃಕ್ಷವು
ಅವಶ್ಯವಾಗಿ ಚಿಕ್ಕದಾಗಿರುವುದು. ಈಗಂತೂ ಎಷ್ಟು ದೊಡ್ಡವೃಕ್ಷ, ತಮೋಪ್ರಧಾನವಾಗಿಬಿಟ್ಟಿದೆ. ನಾಳೆ
ಮತ್ತೆ ಹೊಸ ಚಿಕ್ಕವೃಕ್ಷವಾಗಿ ಬಿಡುವುದು. ನಿಮಗೆ ಗೊತ್ತಿದೆ. ಈ ಜ್ಞಾನವು ನಿಮಗೆ ಎಂದೂ ಯಾರಿಂದಲೂ
ಸಿಗಲು ಸಾಧ್ಯವಿಲ್ಲ. ಇದು ವಿದ್ಯೆ, ಇಲ್ಲಿನ ಮೊದಲ ಮುಖ್ಯಶಿಕ್ಷಣ ತಂದೆಯನ್ನು ನೆನಪು ಮಾಡಿ ಎಂದು.
ತಂದೆಯು ಓದಿಸುತ್ತಿದ್ದಾರೆ ಎಂಬುದನ್ನು ನಿಶ್ಚಯ ಮಾಡಿಕೊಳ್ಳಿ. ಭಗವಾನುವಾಚ- ನಾನು ನಿಮಗೆ
ರಾಜಯೋಗವನ್ನು ಕಲಿಸುತ್ತೇನೆ ಉಳಿದ ಮನುಷ್ಯರು ಈ ರೀತಿ ಹೇಳುವುದಿಲ್ಲ. ಶಿಕ್ಷಕರು
ಓದಿಸುತ್ತಾರೆಂದರೆ ಅವಶ್ಯವಾಗಿ ಶಿಕ್ಷಕರನ್ನು ನೆನಪು ಮಾಡುತ್ತಾರಲ್ಲವೆ. ಬೇಹದ್ದಿನ ತಂದೆಯೇ
ಆಗಿದ್ದಾರೆ. ತಂದೆಯೇ ನಮ್ಮನ್ನು ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತಾರೆ. ಆದರೆ ಆತ್ಮವು ಹೇಗೆ
ಪವಿತ್ರವಾಗುತ್ತದೆ. ಇದನ್ನು ಯಾರೂ ತಿಳಿಸಲು ಸಾಧ್ಯವಿಲ್ಲ. ಭಲೇ ತಮ್ಮನ್ನು ಭಗವಂತನೆಂದು
ಹೇಳಿಕೊಳ್ಳಲಿ, ಏನಾದರೂ ಹೇಳಿಕೊಳ್ಳಲಿ ಆದರೆ ಪಾವನರನ್ನಾಗಿ ಮಾಡಲು ಸಾಧ್ಯವಿಲ್ಲ. ಇತ್ತೀಚೆಗೆ
ಅನೇಕರು ಭಗವಂತರಾಗಿಬಿಟ್ಟಿದ್ದಾರೆ ಇದರಲ್ಲಿ ಮನುಷ್ಯರು ತಬ್ಬಿಬ್ಬಾಗುತ್ತಾರೆ. ಹೇಳುತ್ತಾರೆ-
ಅನೇಕ ಧರ್ಮಗಳು ಸ್ಥಾಪನೆಯಾಗುತ್ತವೆ. ಯಾವುದು ಸರಿ ಎಂದು ಏನು ಗೊತ್ತು? ಭಲೇ ನಿಮ್ಮ ಪ್ರದರ್ಶನಿ
ಹಾಗೂ ಮ್ಯೂಸಿಯಂನ ಉದ್ಘಾಟನೆ ಮಾಡುತ್ತಾರೆ. ಆದರೆ ಏನೂ ತಿಳಿದುಕೊಂಡಿಲ್ಲ. ವಾಸ್ತವದಲ್ಲಿ
ಉದ್ಘಾಟನೆಯಂತೂ ಆಗಿಯೇ ಬಿಟ್ಟಿದೆ. ಮೊದಲು ಪೌಂಡೇಷನ್ ಬೀಳುತ್ತದೆ ನಂತರ ಯಾವಾಗ ಮನೆಯಾಗಿ
ತಯಾರಾಗುವುದೋ ಆಗ ಉದ್ಘಾಟನೆಯಾಗುತ್ತದೆ. ಪೌಂಡೇಷನ್ ಹಾಕಲು ಕರೆಸಲಾಗುತ್ತದೆ. ಅಂದಾಗ ಇದನ್ನೂ ಸಹ
ತಂದೆಯು ಸ್ಥಾಪನೆ ಮಾಡಿಬಿಟ್ಟಿದ್ದಾರೆ. ಬಾಕಿ ಹೊಸ ಪ್ರಪಂಚದ ಉದ್ಘಾಟನೆಯು ಆಗಲೇಬೇಕಾಗಿದೆ.
ಅದರಲ್ಲಿ ಯಾರು ಉದ್ಘಾಟನೆ ಮಾಡುವ ಅವಶ್ಯಕತೆಯಿಲ್ಲ. ಉದ್ಘಾಟನೆಯಂತೂ ಸ್ವತಃ ಆಗಿಯೇಬಿಟ್ಟಿದೆ. ನಾವು
ಇಲ್ಲಿ ಓದಿ ಹೊಸಪ್ರಂಚಕ್ಕೆ ಹೊರಟು ಹೋಗುತ್ತೇವೆ.
ನೀವು
ತಿಳಿದುಕೊಂಡಿದ್ದೀರಿ- ಈಗ ನಾವು ಸ್ಥಾಪನೆ ಮಾಡುತ್ತಿದ್ದೇವೆ. ಅದಕ್ಕಾಗಿಯೇ
ಪರಿಶ್ರಮಪಡುತ್ತಿದ್ದೇವೆ ಮತ್ತೆ ಈ ಪ್ರಪಂಚವೇ ಬದಲಾಗುತ್ತದೆ. ಮತ್ತೆ ನೀವು ಹೊಸಪ್ರಪಂಚದಲ್ಲಿ
ರಾಜ್ಯ ಮಾಡಲು ಬರುತ್ತೀರಿ. ಸತ್ಯಯುಗದ ಸ್ಥಾಪನೆಯನ್ನು ತಂದೆಯು ಮಾಡಿದ್ದಾರೆ. ಮತ್ತೆ ನೀವು
ಬರುತ್ತೀರೆಂದರೆ ಸ್ವರ್ಗದ ರಾಜಧಾನಿ ಸಿಗುತ್ತದೆ. ಅದರ ಉದ್ಘಾಟನಾ ಸಮಾರಂಭವನ್ನು ಯಾರು ಮಾಡುತ್ತಾರೆ?
ತಂದೆಯಂತೂ ಸ್ವರ್ಗದಲ್ಲಿ ಬರುವುದಿಲ್ಲ. ಸ್ವರ್ಗವು ಹೇಗಿರುತ್ತದೆ ಎಂಬುದನ್ನು ಮುಂದೆ ಹೋದಂತೆ
ನೋಡಬೇಕಾಗಿದೆ. ಅಂತಿಮದಲ್ಲಿ ಏನಾಗುತ್ತದೆ ಎಂಬುದನ್ನು ಮುಂದೆ ಹೋದಂತೆ ತಿಳಿದುಕೊಳ್ಳುತ್ತೀರಿ.
ನೀವು ಮಕ್ಕಳಿಗೆ ಗೊತ್ತಿದೆ. ಪವಿತ್ರತೆಯ ವಿನಃ ಗೌರವಪೂರ್ಣವಾಗಿ ಸ್ವರ್ಗದಲ್ಲಿ ಹೋಗಲು
ಸಾಧ್ಯವಿಲ್ಲ. ಮತ್ತೆ ಇಷ್ಟು ಪದವಿಯನ್ನೂ ಪಡೆಯಲು ಸಾಧ್ಯವಿಲ್ಲ. ಆದ್ದರಿಂದ ತಂದೆಯು ತಿಳಿಸುತ್ತಾರೆ-
ಹೆಚ್ಚಿನ ಪುರುಷಾರ್ಥ ಮಾಡಿ, ಉದ್ಯೋಗ-ವ್ಯವಹಾರಗಳನ್ನು ಭಲೇ ಮಾಡಿ ಆದರೆ ಹೆಚ್ಚಿನ ಹಣವನ್ನು ಏನು
ಮಾಡುತ್ತೀರಿ! ಹಣವನ್ನಂತೂ ತಿನ್ನಲು ಸಾಧ್ಯವಿಲ್ಲ. ನಿಮ್ಮ ಮಕ್ಕಳು-ಮರಿಮಕ್ಕಳು ಮೊದಲಾದವರು ಯಾರೂ
ತಿನ್ನುವುದಿಲ್ಲ. ಎಲ್ಲವೂ ಮಣ್ಣು ಪಾಲಾಗಿಬಿಡುತ್ತದೆ. ಆದ್ದರಿಂದ ಯುಕ್ತಿಯಿಂದ ಸ್ವಲ್ಪ ಹಣವನ್ನು
ಶೇಖರಣೆ ಮಾಡಿ. ಉಳಿದೆಲ್ಲವನ್ನೂ ವರ್ಗಾವಣೆ ಮಾಡಿಬಿಡಿ. ಎಲ್ಲರೂ ವರ್ಗಾವಣೆ ಮಾಡುವುದಿಲ್ಲ.
ಅರ್ಥಾತ್ ಸಫಲ ಮಾಡುವುದಿಲ್ಲ. ಬಡವರೇ ಬೇಗನೆ ಸಫಲ ಮಾಡುತ್ತಾರೆ. ಭಕ್ತಿಮಾರ್ಗದಲ್ಲಿ ಒಂದು
ಜನ್ಮಕ್ಕಾಗಿ ದಾನ-ಪುಣ್ಯವನ್ನು ಮಾಡುತ್ತಾರೆ. ಆದರೆ ಅದು ಪರೋಕ್ಷವಾಗಿದೆ. ಇದು ಪ್ರತ್ಯಕ್ಷವಾಗಿದೆ.
ಪತಿತ ಮನುಷ್ಯರದು ಪತಿತರೊಂದಿಗೆ ಲೇವಾದೇವಿ(ಕೊಡುವುದು-ತೆಗೆದುಕೊಳ್ಳುವುದು)ಯಿದೆ. ಈಗಂತೂ ತಂದೆಯು
ಬಂದಿದ್ದಾರೆ. ನಿಮಗೆ ಪತಿತರೊಂದಿಗೆ ಲೇವಾದೇವಿಯಿಲ್ಲ. ನೀವು ಬ್ರಾಹ್ಮಣರಾಗಿದ್ದೀರಿ.
ಬ್ರಾಹ್ಮಣರಿಗೆ ನೀವು ಸಹಯೋಗ ಕೊಡಬೇಕಾಗಿದೆ. ಯಾರು ಸರ್ವೀಸ್ ಮಾಡುವರೋ ಅವರಿಗೆ ಸಹಯೋಗದ
ಅವಶ್ಯಕತೆಯಿಲ್ಲ. ಇಲ್ಲಿ ಬಡವರು-ಸಾಹುಕಾರರು ಎಲ್ಲರೂ ಬರುತ್ತಾರೆ. ಆದರೆ ಕೋಟ್ಯಾಧೀಶ್ವರರು
ಬರುವುದು ಬಹಳ ವಿರಳ. ತಂದೆಯು ತಿಳಿಸುತ್ತಾರೆ- ನಾನು ಬಡವರ ಬಂಧುವಾಗಿದ್ದೇನೆ. ಭಾರತವು ಬಹಳ
ಬಡರಾಷ್ಟ್ರವಾಗಿದೆ. ನಾನು ಬರುವುದೇ ಭಾರತದಲ್ಲಿ, ಅದರಲ್ಲಿಯೂ ಈ ಅಬುಪರ್ವತವು ಎಲ್ಲದಕ್ಕಿಂತ
ದೊಡ್ಡ ತೀರ್ಥಸ್ಥಾನವಾಗಿದೆ. ತಂದೆಯು ಇಲ್ಲಿಗೆ ಬಂದು ಇಡೀ ವಿಶ್ವದ ಸದ್ಗತಿ ಮಾಡುತ್ತಾರೆ. ಇದು
ನರಕವಾಗಿದೆ. ನರಕದಿಂದ ಮತ್ತೆ ಸ್ವರ್ಗವು ಹೇಗಾಗುತ್ತದೆ ಎಂಬುದು ನಿಮಗೆ ತಿಳಿದಿದೆ. ಈಗ ನಿಮ್ಮ
ಬುದ್ಧಿಯಲ್ಲಿ ಪೂರ್ಣ ಜ್ಞಾನವಿದೆ. ತಂದೆಯು ಇಂತಹ ಯುಕ್ತಿಯನ್ನು ತಿಳಿಸುತ್ತಾರೆ. ಅದರಿಂದ ಎಲ್ಲರ
ಕಲ್ಯಾಣ ಮಾಡುತ್ತಾರೆ. ಸತ್ಯಯುಗದಲ್ಲಿ ಯಾವುದೇ ಅಕಲ್ಯಾಣದ ಮಾತಾಗಲಿ, ಅಳುವುದು-ದುಃಖಿಸುವುದು
ಯಾವುದೇ ಮಾತಿರುವುದಿಲ್ಲ. ಈಗಂತೂ ತಂದೆಯು ಜ್ಞಾನಸಾಗರ, ಸುಖದಸಾಗರ ಎಂಬ ಯಾವ ಮಹಿಮೆಯಿದೆ ಅದು
ನಿಮ್ಮದೂ ಆಗಿದೆ. ನೀವೂ ಸಹ ಆನಂದದ ಸಾಗರರಾಗುತ್ತೀರಿ. ಅನೇಕರಿಗೆ ಸುಖವನ್ನೂ ಕೊಡುತ್ತೀರಿ ಮತ್ತೆ
ಯಾವಾಗ ನಿಮ್ಮ ಆತ್ಮವು ಸಂಸ್ಕಾರವನ್ನು ತೆಗೆದುಕೊಂಡು ಹೋಗುವುದೋ ಆಗ ಅಲ್ಲಿ ನಿಮ್ಮ ಆತ್ಮವು
ಸಂಸ್ಕಾರವನ್ನು ತೆಗೆದುಕೊಂಡು ಹೋಗುವುದೋ ಆಗ ಅಲ್ಲಿ ನಿಮ್ಮ ಮಹಿಮೆಯು ಬದಲಾಗುವುದು ಆಗ ನಿಮಗೆ
ಸರ್ವಗುಣ ಸಂಪನ್ನರೆಂದು ಹೇಳುತ್ತಾರೆ. ಈಗ ನೀವು ನರಕದಲ್ಲಿ ಕುಳಿತಿದ್ದೀರಿ. ಇದಕ್ಕೆ ಮುಳ್ಳಿನ
ಕಾಡೆಂದು ಹೇಳಲಾಗುತ್ತದೆ. ತಂದೆಗೆ ಮಾಲೀಕ, ಅಂಬಿಗನೆಂದು ಹೇಳಲಾಗುತ್ತದೆ. ನಮ್ಮ ದೋಣಿಯನ್ನು ಪಾರು
ಮಾಡಿ ಎಂದು ಹಾಡುತ್ತಾರೆ. ಏಕೆಂದರೆ ದುಃಖಯಾಗಿದ್ದಾರೆ. ಆದ್ದರಿಂದ ಆತ್ಮವು ಕರೆಯುತ್ತದೆ. ಭಲೇ
ಮಹಿಮೆಯನ್ನು ಹಾಡುತ್ತಾರೆ. ಆದರೆ ಏನೂ ತಿಳಿದುಕೊಂಡಿಲ್ಲ. ಏನು ಬಂದರೆ ಅದನ್ನು ಹೇಳಿಬಿಡುತ್ತಾರೆ.
ಸರ್ವಶ್ರೇಷ್ಠ ಭಗವಂತನ ನಿಂದನೆ ಮಾಡುತ್ತಿರುತ್ತಾರೆ. ನಾವಂತೂ ಆಸ್ತಿಕರಾಗಿದ್ದೇವೆ. ಸರ್ವರ
ಸದ್ಗತಿದಾತ ತಂದೆಯನ್ನು ನಾವು ಅರಿತುಕೊಂಡಿದ್ದೇವೆಂದು ನೀವು ಹೇಳುತ್ತೀರಿ. ತಂದೆಯೇ ತಮ್ಮ
ಪರಿಚಯವನ್ನು ಕೊಟ್ಟಿದ್ದಾರೆ. ನೀವು ಭಕ್ತಿ ಮಾಡುವುದಿಲ್ಲ. ಆದ್ದರಿಂದ ಎಷ್ಟೊಂದು ತೊಂದರೆ
ಕೊಡುತ್ತಾರೆ! ಅವರದೂ ಮೆಜಾರಿಟಿಯಿದೆ. ನಿಮ್ಮದೂ ಮೆಜಾರಿಟಿಯಿದೆ. ಯಾವಾಗ ನಿಮ್ಮದು ಹೆಚ್ಚಾಗುವುದೋ
ಆಗ ಅವರಿಗೂ ಆಕರ್ಷಿತವಾಗುವುದು. ಬುದ್ಧಿಯ ಬೀಗವು ತೆರೆಯುತ್ತಾ ಹೋಗುತ್ತದೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳ ಪ್ರತಿ ಮಾತಾಪಿತ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ
ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ತಮ್ಮ
ಉನ್ನತಿಯದೇ ಚಿಂತನೆ ಮಾಡಬೇಕಾಗಿದೆ. ಅನ್ಯ ಯಾವುದೇ ಮಾತಿನಲ್ಲಿ ಹೋಗಬಾರದು. ವಿದ್ಯೆ ಮತ್ತು
ನೆನಪಿನ ಮೇಲೆ ಗಮನ ಕೊಡಬೇಕಾಗಿದೆ. ಬುದ್ಧಿಯನ್ನು ಅಲೆದಾಡಿಸಬಾರದು.
2. ತಂದೆಯು ಡೈರೆಕ್ಟ್
ಬಂದಿದ್ದಾರೆ. ಆದ್ದರಿಂದ ತಮ್ಮದೆಲ್ಲವನ್ನೂ ಯುಕ್ತಿಯಿಂದ ವರ್ಗಾವಣೆ (ಸಫಲ) ಮಾಡಿಬಿಡಬೇಕಾಗಿದೆ.
ಪತಿತ ಆತ್ಮಗಳೊಂದಿಗೆ ಲೇವಾದೇವಿ ಮಾಡಬಾರದು. ಗೌರವಪೂರ್ಣವಾಗಿ ಸ್ವರ್ಗದಲ್ಲಿ ಹೋಗಲು ಅವಶ್ಯವಾಗಿ
ಪವಿತ್ರರಾಗಬೇಕಾಗಿದೆ.
ವರದಾನ:
ಮನಸ್ಸು ಮತ್ತು
ಬುದ್ಧಿಯನ್ನು ವ್ಯರ್ಥದಿಂದ ಮುಕ್ತವಾಗಿರಿಸಿ ಬ್ರಾಹ್ಮಣ ಸಂಸ್ಕಾರ ಮಾಡಿಕೊಳ್ಳುವಂತಹ ರೂಲರ್ (ಆಡಳಿತಾಧಿಕಾರಿ)
ಭವ.
ಯಾವುದೇ ಸಣ್ಣ ವ್ಯರ್ಥ
ಮಾತು, ವ್ಯರ್ಥ ವಾತಾವರಣ ಹಾಗೂ ವ್ಯರ್ಥ ದೃಶ್ಯದ ಫ್ರಭಾವ ಮೊದಲು ಮನಸ್ಸಿನ ಮೇಲೆ ಬೀಳುವುದು ನಂತರ
ಬುದ್ಧಿ ಅದಕ್ಕೆ ಸಹಯೋಗ ನೀಡುವುದು. ಮನಸ್ಸು ಮತ್ತು ಬುದ್ಧಿ ಒಂದು ವೇಳೆ ಅದೇ ಪ್ರಕಾರದಲ್ಲಿ
ನಡೆಯುತ್ತಿದ್ದರೆ ಅದರಿಂದ ಸಂಸ್ಕಾರವಾಗಿ ಬಿಡುವುದು. ನಂತರ ಭಿನ್ನ-ಭಿನ್ನ ಸಂಸ್ಕಾರಗಳು ಕಂಡು
ಬರುವುದು, ಯಾವುದೂ ಬ್ರಾಹ್ಮಣ ಸಂಸ್ಕಾರವೇ ಅಲ್ಲ. ಯಾವುದೇ ವ್ಯರ್ಥ ಸಂಸ್ಕಾರದ ವಶ ಆಗುವುದು,
ತಮ್ಮಲ್ಲಿಯೇ ಯುದ್ಧ ಮಾಡುವುದು, ಗಳಿಗೆ-ಗಳಿಗೆ ಖುಷಿ ಕಳೆದುಕೊಳ್ಳುವುದು-ಇದು ಕ್ಷತ್ರಿಯತನದ
ಸಂಸ್ಕಾರವಾಗಿದೆ. ಬ್ರಾಹ್ಮಣ ಅರ್ಥಾತ್ ರೂಲರ್( ಸ್ವಯಂ ನ ರಾಜ) ವ್ಯರ್ಥ ಸಂಸ್ಕಾರಗಳಿಂದ
ಮುಕ್ತರಾಗುವಿರಿ, ಪರವಶ ಅಲ್ಲ.
ಸ್ಲೋಗನ್:
ಮಾಸ್ಟರ್
ಸರ್ವಶಕ್ತಿವಾನ್ ಅವರೇ ಆಗಿದ್ದಾರೆ ಯಾರು ದೃಢ ಪ್ರತಿಜ್ಞೆಯಿಂದ ಸರ್ವ ಸಮಸ್ಯೆಗಳನ್ನು ಸಹಜವಾಗಿ
ಪಾರು ಮಾಡುವವರು.