19.10.24 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ- ಸದಾ
ಖುಷಿಯಲ್ಲಿರಿ ಆಗ ನೆನಪಿನ ಯಾತ್ರೆಯು ಸಹಜವಾಗಿಬಿಡುವುದು, ನೆನಪಿನಿಂದಲೇ 21 ಜನ್ಮಗಳಿಗಾಗಿ
ಪುಣ್ಯಾತ್ಮರಾಗಿಬಿಡುತ್ತೀರಿ”
ಪ್ರಶ್ನೆ:
ನಿಮ್ಮ
ಎಲ್ಲದಕ್ಕಿಂತ ಒಳ್ಳೆಯ ಸೇವಕ ಅಥವಾ ಗುಲಾಮನು ಯಾರು?
ಉತ್ತರ:
ಪ್ರಾಕೃತಿಕ
ವಿಕೋಪಗಳು ಹಾಗೂ ವಿಜ್ಞಾನದ ಅನ್ವೇಷಣೆಯಿಂದಲೇ ಇಡೀ ವಿಶ್ವದ ಕೊಳಕು ಸ್ವಚ್ಛವಾಗುತ್ತದೆ. ಇವು
ನಿಮ್ಮ ಎಲ್ಲದಕ್ಕಿಂತ ಒಳ್ಳೆಯ ಸೇವಕ ಅಥವಾ ಗುಲಾಮನಾಗಿದೆ. ಸ್ವಚ್ಛಗೊಳಿಸುವುದರಲ್ಲಿ ಇದೇ
ಸಹಯೋಗಿಯಾಗುತ್ತದೆ. ಇಡೀ ಪ್ರಕೃತಿಯು ನಿಮ್ಮ ಅಧಿಕಾರದಲ್ಲಿರುತ್ತದೆ.
ಓಂ ಶಾಂತಿ.
ಮಧುರಾತಿ ಮಧುರ ಆತ್ಮಿಕ ಮಕ್ಕಳು ಏನು ಮಾಡುತ್ತಿದ್ದೀರಿ. ಯುದ್ಧದ ಮೈದಾನದಲ್ಲಿ ನಿಂತಿದ್ದೀರಿ.
ಹಾಗೆಂದರೆ ನೀವೇನೂ ನಿಂತಿಲ್ಲ, ಕುಳಿತಿದ್ದೀರಲ್ಲವೆ! ನಿಮ್ಮ ಸೇನೆಯು ಎಷ್ಟು ಚೆನ್ನಾಗಿದೆ. ಇದಕ್ಕೆ
ಆತ್ಮಿಕ ತಂದೆಯ ಆತ್ಮಿಕ ಸೇನೆಯೆಂದು ಹೇಳಲಾಗುತ್ತದೆ. ಆತ್ಮಿಕ ತಂದೆಯ ಜೊತೆ ಯೋಗವನ್ನಿಟ್ಟು ರಾವಣನ
ಮೇಲೆ ಜಯಗಳಿಸುವ ಎಷ್ಟೊಂದು ಸಹಜ ಪುರುಷಾರ್ಥವನ್ನು ಮಾಡಿಸುತ್ತೇನೆ. ನಿಮಗೆ ಗುಪ್ತ ಯೋಧರು, ಗುಪ್ತ
ಮಹಾವೀರರೆಂದು ಕರೆಯಲಾಗುತ್ತದೆ. ಪಂಚವಿಕಾರಗಳ ಮೇಲೆ ನೀವು ವಿಜಯಗಳಿಸುತ್ತೀರಿ ಅದರಲ್ಲಿಯೂ ಮೊದಲು
ದೇಹಾಭಿಮಾನವಾಗಿದೆ. ತಂದೆಯು ವಿಶ್ವದ ಮೇಲೆ ಜಯಗಳಿಸಲು ಹಾಗೂ ವಿಶ್ವದಲ್ಲಿ ಶಾಂತಿಯನ್ನು ಸ್ಥಾಪನೆ
ಮಾಡುವುದಕ್ಕಾಗಿ ಎಷ್ಟು ಸಹಜ ಯುಕ್ತಿಯನ್ನು ತಿಳಿಸುತ್ತಾರೆ. ನೀವು ಮಕ್ಕಳ ವಿನಃ ಮತ್ತ್ಯಾರೂ
ತಿಳಿದುಕೊಂಡಿಲ್ಲ. ನೀವು ವಿಶ್ವದಲ್ಲಿ ಶಾಂತಿಯ ರಾಜ್ಯವನ್ನು ಸ್ಥಾಪನೆ ಮಾಡುತ್ತಿದ್ದೀರಿ. ಅಲ್ಲಿ
ಅಶಾಂತಿ, ದುಃಖದ ಹೆಸರು, ಗುರುತೂ ಇರುವುದಿಲ್ಲ. ಈ ವಿದ್ಯೆಯು ನಿಮ್ಮನ್ನು ಹೊಸ ಪ್ರಪಂಚದ
ಮಾಲೀಕರನ್ನಾಗಿ ಮಾಡುತ್ತದೆ. ತಂದೆಯು ತಿಳಿಸುತ್ತಾರೆ- ಮಧುರಾತಿ ಮಧುರ ಮಕ್ಕಳೇ, ಕಾಮವಿಕಾರದ ಮೇಲೆ
ಜಯಗಳಿಸುವುದರಿಂದ ನೀವು 21 ಜನ್ಮಗಳಿಗಾಗಿ ಜಗತ್ಜೀತರಾಗುತ್ತೀರಿ. ಇದು ಬಹಳ ಸಹಜವಾಗಿದೆ! ನೀವು
ಶಿವತಂದೆಯ ಆತ್ಮೀಯ ಸೇನೆಯಾಗಿದ್ದೀರಿ. ರಾಮನ ಮಾತಿಲ್ಲ, ಕೃಷ್ಣನ ಮಾತೂ ಇಲ್ಲ. ಪರಮಪಿತ
ಪರಮಾತ್ಮನಿಗೆ ಹೃದಯರಾಮನೆಂದು ಹೇಳಲಾಗುತ್ತದೆ. ಬಾಕಿ ಅವರು ಯಾವ ರಾಮನ ಸೈನ್ಯವನ್ನು ತೋರಿಸುತ್ತಾರೆ,
ಅದೆಲ್ಲವೂ ತಪ್ಪಾಗಿದೆ. ಜ್ಞಾನಸೂರ್ಯ ಪ್ರಕಟ ಅಜ್ಞಾನ ಅಂಧಕಾರ ವಿನಾಶವೆಂದು ಗಾಯನವಿದೆ. ಕಲಿಯುಗವು
ಘೋರ ಅಂಧಕಾರವಾಗಿದೆ. ಎಷ್ಟೊಂದು ಜಗಳ-ಕಲಹ, ಹೊಡೆದಾಟವಿದೆ. ಸತ್ಯಯುಗದಲ್ಲಿ ಇದೇನೂ ಇರುವುದಿಲ್ಲ.
ನೀವು ತಮ್ಮ ರಾಜ್ಯವನ್ನು ನೋಡಿ, ಹೇಗೆ ಸ್ಥಾಪಿಸುತ್ತೀರಿ? ಇದರಲ್ಲಿ ಯಾವುದೇ ಕೈ-ಕಾಲುಗಳನ್ನು
ಬಳಸುವ ಅವಶ್ಯಕತೆಯಿಲ್ಲ. ಇದರಲ್ಲಿ ದೇಹಾಭಿಮಾನವನ್ನು ತೆಗೆಯಬೇಕಾಗಿದೆ. ಮನೆಯಲ್ಲಿರುತ್ತೀರೆಂದರೂ
ಸಹ ಮೊಟ್ಟಮೊದಲು ನಾವಾತ್ಮಗಳಾಗಿದ್ದೇವೆ, ದೇಹವಲ್ಲ ಎಂದು ನೆನಪು ಮಾಡಿ. ನೀವಾತ್ಮರೇ 84
ಜನ್ಮಗಳನ್ನು ತೆಗೆದುಕೊಳ್ಳುತ್ತೀರಿ. ಈಗ ನಿಮ್ಮದು ಅಂತಿಮ ಜನ್ಮವಾಗಿದೆ. ಹಳೆಯ ಪ್ರಪಂಚವು
ಸಮಾಪ್ತಿಯಾಗಲಿದೆ. ಇದಕ್ಕೆ ಪುರುಷೋತ್ತಮ ಸಂಗಮಯುಗದ ಅತಿಚಿಕ್ಕದಾದ ಯುಗವೆಂದು ಹೇಳಲಾಗುತ್ತದೆ.
ಶಿಖೆಯು ಚಿಕ್ಕದಾಗಿರುತ್ತದೆಯಲ್ಲವೆ! ಬ್ರಾಹ್ಮಣರ ಶಿಖೆಯು ಪ್ರಸಿದ್ಧವಾಗಿದೆ. ತಂದೆಯು ಎಷ್ಟು
ಸಹಜವಾಗಿ ತಿಳಿಸುತ್ತಾರೆ. ನೀವು ಪ್ರತೀ 5000 ವರ್ಷಗಳ ನಂತರ ಬಂದು ತಂದೆಯಿಂದ ರಾಜ್ಯಭಾಗ್ಯವನ್ನು
ಪ್ರಾಪ್ತಿ ಮಾಡಿಕೊಳ್ಳುವುದಕ್ಕಾಗಿ ಈ ವಿದ್ಯೆಯನ್ನು ಓದುತ್ತೀರಿ. ಶಿವತಂದೆಯಿಂದ ನಾವು ಈ
ರೀತಿಯಾಗಬೇಕೆಂದು ಗುರಿ-ಧ್ಯೇಯವೂ ನಿಮ್ಮ ಮುಂದೆ ಇದೆ. ಹೌದು ಮಕ್ಕಳೇ, ಏಕಿಲ್ಲ. ಕೇವಲ
ದೇಹಾಭಿಮಾನವನ್ನು ಬಿಟ್ಟು ತನ್ನನ್ನು ಆತ್ಮನೆಂದು ತಿಳಿದು ತಂದೆಯಾದ ನನ್ನನ್ನು ನೆನಪು ಮಾಡಿ
ಅದರಿಂದ ಪಾಪಗಳು ಭಸ್ಮವಾಗುತ್ತವೆ. ನಿಮಗೆ ತಿಳಿದಿದೆ, ಈ ಜನ್ಮದಲ್ಲಿ ಪಾವನರಾಗುವುದರಿಂದ ನಾವು 21
ಜನ್ಮಗಳಿಗೆ ಪುಣ್ಯಾತ್ಮರಾಗುತ್ತೀರಿ. ಮತ್ತೆ ಇಳಿಯುವಿಕೆಯು ಪ್ರಾರಂಭವಾಗುತ್ತದೆ. ನಿಮಗೆ ಇದೂ ಸಹ
ತಿಳಿದಿದೆ- ನಮ್ಮದೇ 84 ಜನ್ಮಗಳ ಚಕ್ರವಾಗಿದೆ, ಇಡೀ ಪ್ರಪಂಚದವರಂತೂ ಬರುವುದಿಲ್ಲ. 84 ಜನ್ಮಗಳ
ಚಕ್ರವನ್ನು ಸುತ್ತುವವರು ಮತ್ತು ಈ ಧರ್ಮದವರೇ ಬರುತ್ತಾರೆ. ಸತ್ಯಯುಗ ಮತ್ತು ತ್ರೇತಾಯುಗವನ್ನು
ತಂದೆಯೇ ಸ್ಥಾಪನೆ ಮಾಡುತ್ತಾರೆ. ಅದನ್ನು ಈಗ ಸ್ಥಾಪನೆ ಮಾಡುತ್ತಿದ್ದಾರೆ. ಇದರನಂತರ
ದ್ವಾಪರ-ಕಲಿಯುಗವು ರಾವಣನ ಸ್ಥಾಪನೆಯಾಗಿದೆ. ರಾವಣನ ಚಿತ್ರವೂ ಇದೆ. ರಾವಣನ ತಲೆಯ ಮೇಲೆ ಕತ್ತೆಯ
ತಲೆಯನ್ನು ತೋರಿಸಿದ್ದಾರೆ. ಅಂದರೆ ಮನುಷ್ಯರು ವಿಕಾರಿ, ಅವಿವೇಕತನದ ಕತ್ತೆಯ ಸಮಾನರಾಗಿಬಿಡುತ್ತಾರೆ.
ನಾವು ಮೊದಲು ಏನಾಗಿದ್ದೆಂಬುದನ್ನು ನೀವೂ ಸಹ ತಿಳಿದುಕೊಳ್ಳುತ್ತೀರಿ. ಇದು ಪಾಪಾತ್ಮರ
ಪ್ರಪಂಚವಾಗಿದೆ. ಪಾಪಾತ್ಮರ ಪ್ರಪಂಚದಲ್ಲಿ ಕೋಟ್ಯಾಂತರ ಮನುಷ್ಯರಿದ್ದಾರೆ, ಪುಣ್ಯಾತ್ಮರ
ಪ್ರಪಂಚದಲ್ಲಿ ಪ್ರಾರಂಭದಲ್ಲಿ ಕೇವಲ 9 ಲಕ್ಷ ಜನಸಂಖ್ಯೆಯಿರುತ್ತದೆ. ನೀವೀಗ ವಿಶ್ವದ
ಮಾಲೀಕರಾಗುತ್ತೀರಿ. ಈ ಲಕ್ಷ್ಮೀ-ನಾರಾಯಣರು ವಿಶ್ವದ ಮಾಲೀಕರಾಗಿದ್ದರಲ್ಲವೆ! ಸ್ವರ್ಗದ
ರಾಜ್ಯಭಾಗ್ಯವನ್ನು ಕೊಡಲು ಬಂದಿದ್ದೇನೆ ಅಂದಮೇಲೆ ಈಗ ಅವಶ್ಯವಾಗಿ ಪಾರನರಾಗಬೇಕಾಗುತ್ತದೆ. ಅದೂ ಈ
ಮೃತ್ಯುಲೋಕದ ಅಂತಿಮಜನ್ಮದಲ್ಲಿ ಬರುತ್ತಾರಲ್ಲವೆ. ಈ ಹಳೆಯ ಪ್ರಪಂಚದ ವಿನಾಶವು ಸನ್ಮುಖದಲ್ಲಿ
ತಯಾರಾಗಿ ನಿಂತಿದೆ. ಅಣುಬಾಂಬು ಇತ್ಯಾದಿಗಳೆಲ್ಲವನ್ನೂ ಈ ರೀತಿ ತಯಾರು ಮಾಡುತ್ತಾರೆ, ಅವರು
ಮನೆಯಲ್ಲಿಯೇ ಕುಳಿತು ಎಲ್ಲವನ್ನೂ ಸಮಾಪ್ತಿ ಮಾಡುತ್ತಾರೆ. ಮನೆಯಲ್ಲಿ ಕುಳಿತಿದ್ದಂತೆಯೇ ಹಳೆಯ
ಪ್ರಪಂಚದ ವಿನಾಶ ಮಾಡಿಬಿಡುತ್ತೇವೆಂದೂ ಸಹ ಹೇಳುತ್ತಾರೆ. ಮನೆಯಲ್ಲಿ ಕುಳಿತುಕೊಂಡೇ ಬಾಂಬುಗಳನ್ನು
ಈ ರೀತಿ ಹಾಕುತ್ತಾರೆ ಅದರಿಂದ ಇಡೀ ಪ್ರಪಂಚವನ್ನು ನಾಶ ಮಾಡುತ್ತಾರೆ. ನೀವು ಮಕ್ಕಳು ಮನೆಯಲ್ಲಿ
ಕುಳಿತೇ ಯೋಗಬಲದಿಂದ ವಿಶ್ವದ ಮಾಲೀಕರಾಗಿಬಿಡುತ್ತೀರಿ. ಯೋಗಬಲದಿಂದ ನೀವು ಶಾಂತಿಯ ಸ್ಥಾಪನೆ
ಮಾಡುತ್ತಿದ್ದೀರಿ. ಅವರು ವೈಜ್ಞಾನಿಕ ಬಲದಿಂದ ಇಡೀ ಪ್ರಪಂಚವನ್ನೇ ಸಮಾಪ್ತಿ ಮಾಡುತ್ತಾರೆ. ಅದು
ನಿಮ್ಮ ಸೇವಕನಾಗಿದೆ, ನಿಮ್ಮ ಸೇವೆ ಮಾಡುತ್ತಿದ್ದಾರೆ. ಹಳೆಯ ಪ್ರಪಂಚವನ್ನು ಸಮಾಪ್ತಿ
ಮಾಡಿಬಿಡುತ್ತಾರೆ. ಪ್ರಾಕೃತಿಕ ವಿಕೋಪ ಮೊದಲಾದವುಗಳೆಲ್ಲವೂ ನಿಮ್ಮ ಗುಲಾಮನಾಗುತ್ತದೆ. ಇಡೀ
ಪ್ರಕೃತಿಯು ನಿಮ್ಮ ಗುಲಾಮನಾಗಿಬಿಡುತ್ತದೆ. ಕೇವಲ ನೀವು ತಂದೆಯ ಜೊತೆ ಬುದ್ಧಿಯೋಗವನ್ನಿಡುತ್ತೀರಿ
ಅಂದಮೇಲೆ ನೀವು ಮಕ್ಕಳಿಗೆ ಬಹಳ ಖುಷಿಯಿರಬೇಕು. ಇಂತಹ ಅತಿಪ್ರಿಯ ತಂದೆಯನ್ನು ಎಷ್ಟೊಂದು ನೆನಪು
ಮಾಡಬೇಕು. ಇದೇ ಭಾರತವು ಸಂಪೂರ್ಣ ಶಿವಾಲಯವಾಗಿತ್ತು, ಸತ್ಯಯುಗದಲ್ಲಿ ಸಂಪೂರ್ಣ ನಿರ್ವಿಕಾರಿಗಳು,
ಇಲ್ಲಿ ವಿಕಾರಿಗಳಾಗಿದ್ದಾರೆ. ಅವಶ್ಯವಾಗಿ ಕೆಟ್ಟದ್ದನ್ನು ಕೇಳಬೇಡಿ ಅರ್ಥಾತ್ ಕೊಳಕು ಮಾತುಗಳನ್ನು
ಕೇಳಬೇಡಿ ಎಂದು ತಂದೆಯು ನಮಗೆ ಹೇಳಿದ್ದಾರೆ ಎಂಬುದು ನಮಗೆ ಸ್ಮೃತಿಯು ಬಂದಿದೆ. ಕೇವಲ ಕೇಳುವುದಷ್ಟೇ
ಅಲ್ಲ ಬಾಯಿಂದ ಕೆಟ್ಟಮಾತುಗಳನ್ನು ಮಾತನಾಡಲೂಬಾರದು. ತಂದೆಯು ತಿಳಿಸಿದ್ದಾರೆ- ನೀವು ಎಷ್ಟೊಂದು
ಕೊಳಕರಾಗಿಬಿಟ್ಟಿದ್ದೀರಿ, ನಿಮ್ಮಲ್ಲಿ ಅಪಾರ ಧನವಿತ್ತು, ನೀವು ಸ್ವರ್ಗದ ಮಾಲೀಕರಾಗಿದ್ದಿರಿ. ಈಗ
ನೀವು ಸ್ವರ್ಗದ ಬದಲು ನರಕದ ಮಾಲೀಕರಾಗಿಬಿಟ್ಟಿದ್ದೀರಿ. ಇದೂ ಸಹ ನಾಟಕದಲ್ಲಿ ಮಾಡಲ್ಪಟ್ಟಿದೆ.
ಪ್ರತೀ 5000 ವರ್ಷಗಳ ನಂತರ ನಾನು ನಿಮ್ಮನ್ನು ರೌರವ ನರಕದಿಂದ ಬಿಡಿಸಿ ಸ್ವರ್ಗದಲ್ಲಿ ಕರೆದುಕೊಂಡು
ಹೋಗುತ್ತೇನೆ. ಆತ್ಮಿಕ ಮಕ್ಕಳೇ, ನೀವು ನನ್ನ ಮಾತನ್ನು ಪಾಲಿಸುವುದಿಲ್ಲವೆ? ನೀವು ಪವಿತ್ರಪ್ರಪಂಚದ
ಮಾಲೀಕರಾಗಿ ಎಂದರೆ ನೀವು ಆಗುವುದಿಲ್ಲವೆ?
ವಿನಾಶವಂತೂ ಅವಶ್ಯವಾಗಿ
ಆಗುವುದು. ಈ ಯೋಗಬಲದಿಂದಲೇ ನಿಮ್ಮ ಜನ್ಮ-ಜನ್ಮಾಂತರದ ಪಾಪಗಳು ತುಂಡಾಗುತ್ತವೆ ಬಾಕಿ
ಜನ್ಮ-ಜನ್ಮಾಂತರದ ಪಾಪಗಳನ್ನು ಭಸ್ಮವಾಗುವುದರಲ್ಲಿ ಸಮಯ ಹಿಡಿಸುತ್ತದೆ. ಕೆಲವು ಮಕ್ಕಳು
ಪ್ರಾರಂಭದಿಂದಲೇ ಬಂದಿದ್ದಾರೆ ಆದರೆ 10% ಕೂಡ ಯೋಗವನ್ನು ಮಾಡುವುದಿಲ್ಲ ಆದ್ದರಿಂದಲೇ ಪಾಪಗಳು
ತುಂಡಾಗುತ್ತಿಲ್ಲ. ಹೊಸ-ಹೊಸ ಮಕ್ಕಳು ಬಹುಬೇಗನೆ ಯೋಗಿಗಳಾಗಿಬಿಡುತ್ತೀರೆಂದರೆ ಪಾಪಗಳು
ತುಂಡಾಗುತ್ತವೆ ಮತ್ತು ಸೇವೆ ಮಾಡಲು ತೊಡಗುತ್ತಾರೆ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ- ಈಗ ನಾವು
ಹಿಂತಿರುಗಿ ಹೋಗಬೇಕಾಗಿದೆ. ತಂದೆಯು ಕರೆದುಕೊಂಡು ಹೋಗಲು ಬಂದಿದ್ದಾರೆ. ಪಾಪಾತ್ಮರಂತೂ ಶಾಂತಿಧಾಮ,
ಸುಖಧಾಮದಲ್ಲಿ ಹೋಗಲು ಸಾಧ್ಯವಿಲ್ಲ. ಅವರಂತೂ ದುಃಖಧಾಮದಲ್ಲಿ ಹೋಗುತ್ತಾರೆ ಆದ್ದರಿಂದ ಈಗ ತಂದೆಯು
ತಿಳಿಸುತ್ತಾರೆ- ಮಕ್ಕಳೇ, ನನ್ನನ್ನು ನೆನಪು ಮಾಡುವುದರಿಂದ ನಿಮ್ಮ ಪಾಪಗಳು ಭಸ್ಮವಾಗುತ್ತವೆ. ಅರೆ!
ಮಕ್ಕಳೇ ಹೂಗಳಾಗಿ, ದೈವೀಕುಲಕ್ಕೆ ಕಳಂಕ ತರಬೇಡಿ. ನೀವು ವಿಕಾರಿಗಳಾಗುವ ಕಾರಣವೇ
ದುಃಖಿಯಾಗಿಬಿಟ್ಟಿದ್ದೀರಿ. ಇದೂ ಸಹ ನಾಟಕವು ಮಾಡಲ್ಪಟ್ಟಿದೆ. ಪವಿತ್ರರಾಗಿರದಿದ್ದರೆ
ಪವಿತ್ರಪ್ರಪಂಚ, ಸ್ವರ್ಗದಲ್ಲಿ ಬರುವುದಿಲ್ಲ. ಭಾರತವು ಸ್ವರ್ಗವಾಗಿತ್ತು, ಕೃಷ್ಣಪುರಿಯಲ್ಲಿತ್ತು,
ಈಗ ನರಕವಾಸಿಯಾಗಿದೆ. ಅಂದಾಗ ನೀವು ಮಕ್ಕಳಂತೂ ಬಹಳ ಖುಷಿಯಿಂದ ವಿಕಾರಗಳನ್ನು ಬಿಡಬೇಕು. ವಿಷ
ಕುಡಿಯುವುದನ್ನು ತಕ್ಷಣ ಬಿಟ್ಟುಬಿಡಬೇಕಾಗಿದೆ. ವಿಷವನ್ನು ಕುಡಿಯುತ್ತಾ-ಕುಡಿಯುತ್ತಾ ನೀವು
ವೈಕುಂಠದಲ್ಲಿ ಹೋಗಲು ಸಾಧ್ಯವೇ! ನೀವು ವೈಕುಂಠದಲ್ಲಿ ಹೋಗಲು ಪವಿತ್ರರಾಗಬೇಕಾಗಿದೆ. ಇವರು ಈ
ರಾಜ್ಯಭಾಗ್ಯವನ್ನು ಹೇಗೆ ಪ್ರಾಪ್ತಿ ಮಾಡಿಕೊಂಡಿದ್ದಾರೆಂದು ನೀವು ತಿಳಿಸಬಹುದು. ಇವರು
ರಾಜಯೋಗದಿಂದಲೇ ಈ ಪದವಿಯನ್ನು ಪಡೆದಿದ್ದಾರೆ. ಇದು ವಿದ್ಯೆಯಾಗಿದೆಯಲ್ಲವೆ. ಹೇಗೆ ಬ್ಯಾರಿಸ್ಟರಿ
ಯೋಗ, ಸರ್ಜನ್ ಯೋಗವಿರುತ್ತದೆ. ಸರ್ಜನ್ನೊಂದಿಗೆ ಯೋಗವಿದ್ದಾಗ ಸರ್ಜನ್ ಆಗುತ್ತಾರೆ ಆದರೆ ಇದು
ಭಗವಾನುವಾಚವಾಗಿದೆ. ರಥದಲ್ಲಿ ಹೇಗೆ ಪ್ರವೇಶ ಮಾಡುತ್ತಾರೆ? ಹೇಳುತ್ತಾರೆ- ನಾನು ಇವರ ಅನೇಕ
ಜನ್ಮಗಳ ಅಂತಿಮದಲ್ಲಿ ಇವರಲ್ಲಿ ಕುಳಿತು ನೀವು ಮಕ್ಕಳಿಗೆ ವಿದ್ಯೆಯನ್ನು ಓದಿಸುತ್ತೇನೆ. ನೀವೇ
ವಿಶ್ವದ ಮಾಲೀಕರು ಪವಿತ್ರರಾಗಿದ್ದಿರಿ. ಈಗ ಪತಿತ, ಕಂಗಾಲರಾಗಿದ್ದೀರಿ. ಈಗ ಮತ್ತೆ ಮೊದಲನೆಯ
ನಂಬರಿನಲ್ಲಿ ಇವರು ಹೋಗುತ್ತಾರೆಂದು ನಮಗೆ ತಿಳಿದಿದೆ. ಇವರಲ್ಲಿಯೇ ಪ್ರವೇಶ ಮಾಡಿ ನೀವು ಮಕ್ಕಳಿಗೆ
ಜ್ಞಾನವನ್ನು ತಿಳಿಸುತ್ತೇನೆ. ಮಕ್ಕಳೇ, ಪವಿತ್ರರಾಗಿ ಆಗ ನೀವು ಸದಾ ಸುಖಿಯಾಗುತ್ತೀರಿ. ಸತ್ಯಯುಗವು
ಅಮರಲೋಕವಾಗಿದೆ, ದ್ವಾಪರ-ಕಲಿಯುಗವು ಮೃತ್ಯುಲೋಕವಾಗಿದೆ. ಮಕ್ಕಳಿಗೆ ತಂದೆಯು ಎಷ್ಟು ಚೆನ್ನಾಗಿ
ತಿಳಿಸುತ್ತಾರೆ. ಇಲ್ಲಿ ದೇಹೀ-ಅಭಿಮಾನಿಯಾಗುತ್ತಾರೆ ಮತ್ತೆ ದೇಹಾಭಿಮಾನದಲ್ಲಿ ಬಂದು ಮಾಯೆಯಿಂದ
ಸೋಲನ್ನನುಭವಿಸುತ್ತಾರೆ. ಮಾಯೆಯ ಪೆಟ್ಟು ಈ ರೀತಿ ಬೀಳುತ್ತದೆ ಒಮ್ಮೆಲೆ ಕಂದಕದಲ್ಲಿ ಬೀಳುತ್ತಾರೆ.
ತಂದೆಯು ತಿಳಿಸುತ್ತಾರೆ- ಇದು ಕಂದಕವಾಗಿದೆ. ಇಲ್ಲಿ ಯಾವುದೇ ಸುಖವಿಲ್ಲ. ಸ್ವರ್ಗವು ಹೇಗಿರುತ್ತದೆ!
ಈ ದೇವತೆಗಳ ಮಾತು, ಚಲನೆ ನೋಡಿ ಹೇಗಿದೆ! ಹೆಸರೇ ಆಗಿದೆ ಸ್ವರ್ಗ, ನಿಮ್ಮನ್ನು ಸ್ವರ್ಗಕ್ಕೆ
ಮಾಲೀಕರನ್ನಾಗಿ ಮಾಡುತ್ತೇನೆಂದರೂ ಸಹ ಮತ್ತೆ ನಾವು ವಿಷವನ್ನೇ ಕುಡಿಯುತ್ತೇವೆಂದು ಹೇಳುತ್ತಾರೆ
ಅಂದಾಗ ಅಂತಹವರು ಸ್ವರ್ಗದಲ್ಲಿ ಬರಲು ಸಾಧ್ಯವಿಲ್ಲ. ಬಹಳ ಶಿಕ್ಷೆಯನ್ನೂ ಅನುಭವಿಸುತ್ತಾರೆ.
ಮಾಯೆಯೊಂದಿಗೆ ನೀವು ಮಕ್ಕಳ ಯುದ್ಧವಿದೆ. ದೇಹಾಭಿಮಾನಿಗಳು ಬಂದು ಬಹಳ ಛೀ ಛೀ ಕೆಲಸವನ್ನು
ಮಾಡುತ್ತಾರೆ. ನಮ್ಮನ್ನು ಯಾರು ನೋಡುತ್ತಾರೆಂದು ತಿಳಿಯುತ್ತಾರೆ. ಲೋಭ-ಕ್ರೋಧವು
ಗುಪ್ತವಾಗಿರುವುದಿಲ್ಲ, ಕಾಮ ಗುಪ್ತವಾಗಿ ನಡೆಯುತ್ತದೆ, ಮುಖವನ್ನು ಕಪ್ಪು ಮಾಡಿಕೊಳ್ಳುತ್ತಾರೆ.
ಮುಖವನ್ನು ಕಪ್ಪು ಮಾಡಿಕೊಳ್ಳುತ್ತಾ-ಮಾಡಿಕೊಳ್ಳುತ್ತಾ ನೀವು ಸುಂದರರಿಂದ ಶ್ಯಾಮನಾಗಿಬಿಟ್ಟಿರಿ
ಆದ್ದರಿಂದಲೇ ಇಡೀ ಪ್ರಪಂಚವು ನಿಮ್ಮ ಹಿಂದೆ ಅವನತಿಯಲ್ಲಿ ಬಂದಿತು. ಇಂತಹ ಪತಿತ ಪ್ರಪಂಚವು
ಅವಶ್ಯವಾಗಿ ಪರಿವರ್ತನೆಯಾಗಬೇಕಾಗಿದೆ. ತಂದೆಯು ತಿಳಿಸುತ್ತಾರೆ- ನಿಮಗೆ ನಾಚಿಕೆಯಾಗುವುದಿಲ್ಲವೆ?
ಒಂದು ಜನ್ಮಕ್ಕಾಗಿ ಪವಿತ್ರರಾಗುವುದಿಲ್ಲವೆ!
ಭಗವಾನುವಾಚ- ಕಾಮ
ಮಹಾಶತ್ರುವಾಗಿದೆ. ವಾಸ್ತವದಲ್ಲಿ ನೀವು ಸ್ವರ್ಗವಾಸಿಗಳಾಗಿದ್ದಿರಿ. ಬಹಳ ಧನವಂತರಾಗಿದ್ದಿರಿ, ಇದರ
ಮಾತೇ ಕೇಳಬೇಡಿ! ಮಕ್ಕಳು ಹೇಳುತ್ತಾರೆ- ಬಾಬಾ, ನಮ್ಮ ನಗರಕ್ಕೆ ನಡೆಯಿರಿ ಎಂದು. ಮುಳ್ಳುಗಳ
ಕಾಡಿನಲ್ಲಿ ಕೋತಿಗಳನ್ನು ನೋಡಲು ಬರಲೆ? ನೀವು ಮಕ್ಕಳಂತೂ ಡ್ರಾಮಾನುಸಾರ ಸರ್ವೀಸ್ ಮಾಡಲೇಬೇಕಾಗಿದೆ
ಎಂದು ತಂದೆಯು ತಿಳಿಸುತ್ತಾರೆ. ತಂದೆಯು ಮಕ್ಕಳನ್ನು ಪ್ರತ್ಯಕ್ಷ ಮಾಡುತ್ತಾರೆಂದು ಗಾಯನವಿದೆ, ನೀವು
ಮಕ್ಕಳೇ ಹೋಗಿ ಎಲ್ಲರ ಕಲ್ಯಾಣ ಮಾಡಬೇಕಾಗಿದೆ. ತಂದೆಯು ಮಧುರ ಮಕ್ಕಳಿಗೆ ತಿಳಿಸುತ್ತಾರೆ- ನಾವು
ಯುದ್ಧದ ಮೈದಾನದಲ್ಲಿದ್ದೇವೆ ಎಂಬುದನ್ನು ಮರೆಯಬೇಡಿ, ನಿಮ್ಮ ಯುದ್ಧವು ಪಂಚವಿಕಾರಗಳೊಂದಿಗೆ ಇದೆ.
ಈ ಜ್ಞಾನಮಾರ್ಗವು ಸಂಪೂರ್ಣ ಬೇರೆಯಾಗಿದೆ. ತಂದೆಯು ತಿಳಿಸುತ್ತಾರೆ- ನಾನು ನಿಮ್ಮನ್ನು 21
ಜನ್ಮಗಳಿಗಾಗಿ ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತೇನೆ. ಮತ್ತೆ ನಿಮ್ಮನ್ನು ನರಕವಾಸಿಯನ್ನಾಗಿ ಯಾರು
ಮಾಡುತ್ತಾರೆ? ರಾವಣ. ಅವರಂತೂ ನೋಡುತ್ತೀರಲ್ಲವೆ. ಜನ್ಮ-ಜನ್ಮಾಂತರದಿಂದ ನೀವು ಗುರುಗಳನ್ನು
ಮಾಡಿಕೊಂಡಿರಿ. ಇವರಿಗೆ ಸದ್ಗುರುವೆಂದು ಹೇಳಲಾಗುತ್ತದೆ. ಸದ್ಗುರು ಅಕಾಲಮೂರ್ತರೆಂದು ಸಿಖ್ಖರೂ ಸಹ
ಹೇಳುತ್ತಾರಲ್ಲವೆ. ಅವರನ್ನೆಂದೂ ಕಾಲವು ಕಬಳಿಸುವುದಿಲ್ಲ. ಆ ಸದ್ಗುರುವು ಕಾಲರಕಾಲನಾಗಿದ್ದಾರೆ.
ತಂದೆಯು ತಿಳಿಸುತ್ತಾರೆ- ನಾನು ನೀವೆಲ್ಲಾ ಮಕ್ಕಳನ್ನು ಕಾಲದ ಪಂಜರದಿಂದ ಬಿಡಿಸಲು ಬಂದಿದ್ದೇನೆ.
ಸತ್ಯಯುಗದಲ್ಲಿ ಕಾಲ (ಮೃತ್ಯು) ಬರುವುದೇ ಇಲ್ಲ. ಅದಕ್ಕೆ ಅಮರಲೋಕವೆಂದು ಕರೆಯಲಾಗುತ್ತದೆ. ಈಗ ನೀವು
ಶ್ರೀಮತದಂತೆ ಅಮರಲೋಕವಾದ ಸತ್ಯಯುಗದ ಮಾಲೀಕರಾಗುತ್ತಿದ್ದೀರಿ. ನಿಮ್ಮ ಯುದ್ಧವು ನೋಡಿ ಹೇಗಿದೆ! ಇಡೀ
ಪ್ರಪಂಚವು ಪರಸ್ಪರ ಹೊಡೆದಾಡುತ್ತಾ-ಜಗಳವಾಡುತ್ತಿರುತ್ತಾರೆ. ಇಲ್ಲಿ ನಿಮ್ಮದು ರಾವಣನ ಪಂಚವಿಕಾರಗಳ
ಜೊತೆ ಯುದ್ಧವಾಗಿದೆ. ಅದರಮೇಲೆ ಜಯಗಳಿಸುತ್ತೀರಿ. ಇದು ಅಂತಿಮ ಜನ್ಮವಾಗಿದೆ.
ತಂದೆಯು ತಿಳಿಸುತ್ತಾರೆ-
ನಾನು ಬಡವರ ಬಂಧುವಾಗಿದ್ದೇನೆ, ಇಲ್ಲಿ ಬಡವರೇ ಬರುತ್ತಾರೆ, ಸಾಹುಕಾರರಂತೂ ಅದೃಷ್ಟದಲ್ಲಿ ಇಲ್ಲವೇ
ಇಲ್ಲ. ಧನದ ನಶೆಯಲ್ಲಿ ಮಗ್ನರಾಗಿಬಿಡುತ್ತಾರೆ. ಆದರೆ ಇದೆಲ್ಲವೂ ಸಮಾಪ್ತಿಯಾಗಲಿದೆ. ಇನ್ನು
ಸ್ವಲ್ಪ ಸಮಯವೇ ಇದೆ. ನಾಟಕದ ಯೋಜನೆಯಾಗಿದೆಯಲ್ಲವೆ! ಇಷ್ಟೊಂದು ಅಣುಬಾಂಬುಗಳನ್ನು
ತಯಾರಿಸಿದ್ದಾರೆಂದರೆ ಅವೆಲ್ಲವೂ ಅವಶ್ಯವಾಗಿ ಕೆಲಸಕ್ಕೆ ಬರುತ್ತವೆ. ಮೊದಲು ಯುದ್ಧವು ಬಾಣಗಳಿಂದ,
ಕತ್ತಿಗಳಿಂದ, ಬಂದೂಕುಗಳಿಂದ ಮಾಡುತ್ತಿದ್ದರು. ಈಗಂತೂ ಇಂತಹ ಅಣುಬಾಂಬುಗಳು ತಯಾರಾಗಿವೆ,
ಅವುಗಳಿಂದ ಮನೆಯಲ್ಲಿ ಕುಳಿತುಕೊಂಡೇ ಎಲ್ಲವನ್ನೂ ಸಮಾಪ್ತಿ ಮಾಡಬಹುದಾಗಿದೆ. ಈ ಅಣ್ವಸ್ತ್ರಗಳನ್ನು
ಸುಮ್ಮನೆ ಇಟ್ಟುಕೊಳ್ಳುವುದಕ್ಕಾಗಿ ತಯಾರಿಸಿಲ್ಲ. ಎಲ್ಲಿಯತನಕ ಇಟ್ಟುಕೊಳ್ಳುತ್ತಾರೆ! ತಂದೆಯು
ಬಂದಿದ್ದಾರೆಂದರೆ ವಿನಾಶವು ಅವಶ್ಯವಾಗಿ ಆಗಬೇಕಾಗಿದೆ. ನಾಟಕದ ಚಕ್ರವು ಸುತ್ತುತ್ತಾ ಇರುತ್ತದೆ.
ನಿಮ್ಮ ರಾಜಧಾನಿಯು ಅವಶ್ಯವಾಗಿ ಸ್ಥಾಪನೆಯಾಗಲಿದೆ. ಈ ಲಕ್ಷ್ಮೀ-ನಾರಾಯಣರು ಎಂದೂ ಯುದ್ಧ
ಮಾಡುವುದಿಲ್ಲ. ಭಲೆ ಅಸುರರು ಮತ್ತು ದೇವತೆಗಳ ಯುದ್ಧವಾಯಿತೆಂದು ಶಾಸ್ತ್ರಗಳಲ್ಲಿ ತೋರಿಸುತ್ತಾರೆ
ಆದರೆ ದೇವತೆಗಳು ಸತ್ಯಯುಗದಲ್ಲಿದ್ದರು, ಅಸುರರು ಕಲಿಯುಗದಲ್ಲಿದ್ದರು. ಯುದ್ಧವಾಗಲು ಇಬ್ಬರು
ಯಾವಾಗ ಮಿಲನವಾಗುತ್ತಾರೆ! ನೀವು ತಿಳಿದುಕೊಳ್ಳುತ್ತೀರಿ. ನಾವು ಪಂಚ ವಿಕಾರಗಳೊಂದಿಗೆ ಯುದ್ಧ
ಮಾಡುತ್ತಿದ್ದೇವೆ. ಇದರ ಮೇಲೆ ಜಯಗಳಿಸಿ ಸಂಪೂರ್ಣ ನಿರ್ವಿಕಾರಿಗಳಾಗಿ ನಿರ್ವಿಕಾರಿಪ್ರಪಂಚದ
ಮಾಲೀಕರಾಗಿಬಿಡುತ್ತೇವೆ. ಏಳುತ್ತಾ-ಕುಳಿತುಕೊಳ್ಳುತ್ತಾ ತಂದೆಯನ್ನು ನೆನಪು ಮಾಡಬೇಕಾಗಿದೆ.
ಯೋಗಬಲವಿದ್ದಾಗಲೇ ವಿಕರ್ಮ ವಿನಾಶವಾಗುತ್ತದೆ. ಸಂಪೂರ್ಣರಾದಾಗಲೇ ಸಂಪೂರ್ಣ ಪ್ರಪಂಚದಲ್ಲಿ ಬರಲು
ಸಾಧ್ಯ. ತಂದೆಯೂ ಸಹ ಶಂಖಧ್ವನಿ ಮಾಡುತ್ತಿರುತ್ತಾರೆ. ಇದಕ್ಕೆ ಅವರು ಮತ್ತೆ ಭಕ್ತಿಮಾರ್ಗದಲ್ಲಿ
ಶಂಖು ಅಥವಾ ತುತ್ತೂರಿಯನ್ನು ತೋರಿಸಿದ್ದಾರೆ. ತಂದೆಯಂತೂ ಇವರ ಮುಖದ ಮೂಲಕ ತಿಳಿಸುತ್ತಾರೆ. ಇದು
ರಾಜಯೋಗದ ವಿದ್ಯೆಯಾಗಿದೆ. ಬಹಳ ಸಹಜವಾದ ವಿದ್ಯೆಯಾಗಿದೆ- ತಂದೆಯನ್ನು ನೆನಪು ಮಾಡಿ ಮತ್ತು
ರಾಜ್ಯಭಾಗ್ಯವನ್ನು ನೆನಪು ಮಾಡಿ. ಬೇಹದ್ದಿನ ತಂದೆಯನ್ನು ಅರಿತುಕೊಳ್ಳಿ ಮತ್ತು ರಾಜ್ಯಭಾಗ್ಯವನ್ನು
ಪಡೆಯಿರಿ. ಈ ಪ್ರಪಂಚವನ್ನು ಮರೆತುಹೋಗಿ ನೀವು ಬೇಹದ್ದಿನ ಸನ್ಯಾಸಿಗಳಾಗಿದ್ದೀರಿ. ನಿಮಗೆ ತಿಳಿದಿದೆ-
ಹಳೆಯ ಪ್ರಪಂಚವೆಲ್ಲವೂ ಸಮಾಪ್ತಿಯಾಗಲಿದೆ. ಈ ಲಕ್ಷ್ಮೀ-ನಾರಾಯಣರ ರಾಜ್ಯದಲ್ಲಿ ಕೇವಲ ಭಾರತವೇ ಇತ್ತು.
ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ
ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ತಮ್ಮ
ದೈವೀಕುಲಕ್ಕೆ ಕಳಂಕ ತರಬಾರದು, ಹೂಗಳಾಗಬೇಕು. ಅನೇಕ ಆತ್ಮಗಳ ಕಲ್ಯಾಣದ ಸೇವೆ ಮಾಡಿ ತಂದೆಯ
ಪ್ರತ್ಯಕ್ಷತೆ ಮಾಡಬೇಕಾಗಿದೆ.
2. ಸಂಪೂರ್ಣ
ನಿರ್ವಿಕಾರಿಗಳಾಗಲು ಕೆಟ್ಟಮಾತುಗಳನ್ನು ಕೇಳಲೂಬಾರದು, ಹೇಳಲೂಬಾರದು. ಹಿಯರ್ ನೋ ಈವಿಲ್, ಟಾಕ್ ನೋ
ಇವಿಲ್..... ದೇಹಾಭಿಮಾನಕ್ಕೆ ವಶರಾಗಿ ಯಾವುದೇ ಪತಿತ ಕೆಲಸಗಳನ್ನು ಮಾಡಬಾರದು.
ವರದಾನ:
ಮನ್ಮನಾಭವದ
ಮಂತ್ರದ ಮೂಲಕ ಮನಸ್ಸಿನ ಬಂಧನದಿಂದ ಬಿಡಿಸಿಕೊಳ್ಳುವಂತಹ ನಿರ್ಬಂಧನ, ಟ್ರಸ್ಟಿ ಭವ
ಯಾವುದೇ ಬಂಧನ
ಪಂಜರವಾಗಿದೆ. ಪಂಜರದ ಪಕ್ಷಿ ಈಗ ನಿರ್ಬಂಧನ ಹಾರುವ ಪಕ್ಷಿ ಯಾಗಿದೆ. ಒಂದು ವೇಳೆ ಯಾವುದಾದರೂ
ತನುವಿನ ಬಂಧನ ವಿದ್ದರೂ ಸಹ ಮನಸ್ಸು ಹಾರುವ ಪಕ್ಷಿಯಾಗಿದೆ ಏಕೆಂದರೆ ಮನ್ಮನಾಭವವಾಗಿರುವುದರಿಂದ
ಮನಸ್ಸಿನ ಬಂಧನ ಬಿಟ್ಟುಹೋಗುವುದು. ಪ್ರಕೃತಿಯನ್ನು ಸಂಭಾಲನೆ ಮಾಡುವುದೂ ಸಹಾ ಬಂಧನ ಅಲ್ಲ.
ಟ್ರಸ್ಟಿಯಾಗಿರುತ್ತಾ ಸಂಭಾಲನೆ ಮಾಡುವವರು ಸದಾ ನಿರ್ಬಂಧನರಾಗಿದ್ದಾರೆ ನಂತರ ಹಾರುವ ಕಲೆಯಿಂದ
ಸೆಕೆಂಡ್ ನಲ್ಲಿ ಸ್ವೀಟ್ ಹೋಂ ತಲುಪಲು ಸಾಧ್ಯ.
ಸ್ಲೋಗನ್:
ಉದಾಸಿತನವನ್ನು
ತಮ್ಮ ದಾಸಿ ಮಾಡಿಕೊಳ್ಳಿ, ಅದು ಮುಖದ ಮೇಲೆ ಕಾಣಲು ಬಿಡಬೇಡಿ.