19.10.25 Avyakt Bapdada
Kannada
Murli 31.03.2007 Om Shanti Madhuban
“ಸುಪುತ್ರರಾಗಿ ತಮ್ಮ
ಚಹರೆಯಿಂದ ತಂದೆಯ ರೂಪವನ್ನು ತೋರಿಸಿರಿ, ನಿರ್ಮಾಣ (ಸೇವೆ) ದ ಜೊತೆಗೆ ನಿರ್ಮಲ ವಾಣಿ, ನಿರ್ಮಾನ
ಸ್ಥಿತಿಯ ಬ್ಯಾಲೆನ್ಸ್ ಇಟ್ಟುಕೊಳ್ಳಿರಿ''
ಇಂದು ಬಾಪ್ದಾದಾ
ನಾಲ್ಕಾರು ಕಡೆಯ ಮಕ್ಕಳ ಭಾಗ್ಯದ ರೇಖೆಗಳನ್ನು ನೋಡಿ ಹರ್ಷಿತರಾಗುತ್ತಿದ್ದೇವೆ. ಎಲ್ಲಾ ಮಕ್ಕಳ
ಮಸ್ತಕದಲ್ಲಿ ಬೆಳಗುತ್ತಿರುವ ಜ್ಯೋತಿಯ ರೇಖೆಯು ಕಾಣಿಸುತ್ತಿದೆ. ನಯನಗಳಲ್ಲಿ ಆತ್ಮೀಯತೆಯ ಭಾಗ್ಯದ
ರೇಖೆಯು ಕಂಡು ಬರುತ್ತಿದೆ. ಮುಖದಲ್ಲಿ ಶ್ರೇಷ್ಠ ವಾಣಿಯ ಭಾಗ್ಯದ ರೇಖೆಯು ಕಾಣುತ್ತಿದೆ,
ತುಟಿಗಳಲ್ಲಿ ಆತ್ಮಿಕ ಮುಗುಳ್ನಗೆಯನ್ನು ನೋಡುತ್ತಿದ್ದೇವೆ ಹಾಗೂ ಹಸ್ತಗಳಲ್ಲಿ ಸರ್ವ ಪರಮಾತ್ಮ
ಖಜಾನೆಗಳ ರೇಖೆಯು ಕಾಣಿಸುತ್ತಿದೆ. ಪ್ರತೀ ನೆನಪಿನ ಹೆಜ್ಜೆಯಲ್ಲಿ ಪದುಮಗಳ ರೇಖೆಯನ್ನು
ನೋಡುತ್ತಿದ್ದೇವೆ. ಪ್ರತಿಯೊಬ್ಬರ ಹೃದಯದಲ್ಲಿ ತಂದೆಯ ಪ್ರೀತಿಯಲ್ಲಿ ಲವಲೀನರಾಗಿರುವ ರೇಖೆಯನ್ನು
ನೋಡುತ್ತಿದ್ದೇವೆ. ಪ್ರತಿಯೊಬ್ಬ ಮಗು ಇಂತಹ ಶ್ರೇಷ್ಠ ಭಾಗ್ಯದ ಅನುಭವ ಮಾಡುತ್ತಿದ್ದೀರಲ್ಲವೆ!
ಏಕೆಂದರೆ ಈ ಭಾಗ್ಯದ ರೇಖೆಗಳನ್ನು ಸ್ವಯಂ ತಂದೆಯೇ ಪ್ರತಿಯೊಬ್ಬರ ಶ್ರೇಷ್ಠ ಕರ್ಮದ ಲೇಖನಿಯಿಂದ
ಎಳೆದಿದ್ದಾರೆ. ಇಂತಹ ಶ್ರೇಷ್ಠ ಭಾಗ್ಯ ಯಾವುದು ಅವಿನಾಶಿಯಾಗಿದೆ, ಕೇವಲ ಈ ಜನ್ಮಕ್ಕಾಗಿಯೇ ಅಲ್ಲ
ಅನೇಕ ಜನ್ಮಗಳ ಅವಿನಾಶಿ ಭಾಗ್ಯದ ರೇಖೆಗಳಾಗಿವೆ, ತಂದೆಯೂ ಅವಿನಾಶಿಯಾಗಿದ್ದಾರೆ ಮತ್ತು ಅವಿನಾಶಿ
ಭಾಗ್ಯದ ರೇಖೆಗಳಾಗಿವೆ. ಈ ಸಮಯದ ಶ್ರೇಷ್ಠ ಕರ್ಮದ ಆಧಾರದ ಮೇಲೆ ಸರ್ವ ರೇಖೆಗಳು
ಪ್ರಾಪ್ತಿಯಾಗುತ್ತವೆ. ಈ ಸಮಯದ ಪುರುಷಾರ್ಥವು ಅನೇಕ ಜನ್ಮಗಳ ಪ್ರಾಲಬ್ಧವನ್ನು ರೂಪಿಸುತ್ತದೆ.
ಬಾಪ್ದಾದಾ ಎಲ್ಲಾ ಮಕ್ಕಳ
ಈ ಸಮಯದಲ್ಲಿಯೂ ಯಾವ ಪ್ರಾಲಬ್ಧವು ಅನೇಕ ಜನ್ಮಗಳವರೆಗೆ ಪ್ರಾಪ್ತಿಯಾಗುವುದಿದೆಯೋ ಅದು ಈ ಜನ್ಮದಲ್ಲಿ
ಪುರುಷಾರ್ಥದ ಪ್ರಾಲಬ್ಧದ ಪ್ರಾಪ್ತಿಯನ್ನು ಈಗಲೂ ನೋಡಲು ಬಯಸುತ್ತೇವೆ. ಕೇವಲ ಭವಿಷ್ಯವಲ್ಲ ಆದರೆ
ಈಗಲೂ ಸಹ ಇವೆಲ್ಲಾ ರೇಖೆಗಳು ಅನುಭವದಲ್ಲಿ ಬರಲಿ ಏಕೆಂದರೆ ಈಗಿನ ಈ ದಿವ್ಯ ಸಂಸ್ಕಾರವು ತಮ್ಮ ಹೊಸ
ಸಂಸಾರವನ್ನು ರೂಪಿಸುತ್ತಿದೆ ಅಂದಮೇಲೆ ಪರಿಶೀಲನೆ ಮಾಡಿಕೊಳ್ಳಿರಿ, ಪರಿಶೀಲಿಸಿಕೊಳ್ಳುವುದು
ಬರುತ್ತದೆಯಲ್ಲವೆ. ತಮಗೆ ತಾವೇ ಚೆಕ್ಕರ್ ಆಗಿರಿ ಅಂದಾಗ ಸರ್ವ ಭಾಗ್ಯದ ರೇಖೆಗಳು ಈಗಲೂ
ಅನುಭವವಾಗುತ್ತದೆಯೇ? ಈ ಪ್ರಾಲಬ್ಧವಂತು ಅಂತ್ಯದಲ್ಲಿ ಕಾಣಿಸುತ್ತದೆ ಎಂದು ತಿಳಿದುಕೊಳ್ಳುವುದಿಲ್ಲ
ತಾನೇ? ಪ್ರಾಪ್ತಿಯು ಈಗಲೇ ಇದೆ ಅಂದಮೇಲೆ ಪ್ರಾಲಬ್ಧದ ಅನುಭವವನ್ನೂ ಈಗಲೇ ಮಾಡಬೇಕಾಗಿದೆ. ಭವಿಷ್ಯ
ಸಂಸಾರದ ಸಂಸ್ಕಾರವು ಈಗ ಪ್ರತ್ಯಕ್ಷ ಜೀವನದಲ್ಲಿ ಅನುಭವ ಆಗಬೇಕಾಗಿದೆ ಅಂದಮೇಲೆ ಏನನ್ನು ಪರಿಶೀಲನೆ
ಮಾಡಿಕೊಳ್ಳುತ್ತೀರಿ? ಭವಿಷ್ಯ ಸಂಸಾರದ ಸಂಸ್ಕಾರಗಳ ಗಾಯನ ಮಾಡುತ್ತೀರಿ – ಭವಿಷ್ಯ ಸಂಸಾರದಲ್ಲಿ
ಒಂದು ರಾಜ್ಯವಿರುವುದು ಎಂದು. ಆ ಸಂಸಾರವು ನೆನಪಿದೆಯಲ್ಲವೆ! ಆ ಸಂಸಾರದಲ್ಲಿ ಎಷ್ಟುಬಾರಿ ರಾಜ್ಯ
ಮಾಡಿದ್ದೀರಿ? ನೆನಪಿದೆಯೇ? ಅಥವಾ ನೆನಪಿಗೆ ತರಿಸಿದಾಗ ನೆನಪು ಬರುತ್ತದೆಯೇ? ಹೇಗಿದ್ದಿರಿ, ಅದು
ಸ್ಮೃತಿಯಲ್ಲಿದೆಯಲ್ಲವೇ? ಆದರೆ ಅದೇ ಸಂಸ್ಕಾರವು ಈಗಿನ ಜೀವನದಲ್ಲಿಯೂ ಪ್ರತ್ಯಕ್ಷ ರೂಪದಲ್ಲಿದೆಯೇ?
ಆದ್ದರಿಂದ ಪರಿಶೀಲಿಸಿಕೊಳ್ಳಿರಿ - ಈಗಲೂ ಮನಸ್ಸಿನಲ್ಲಿ, ಬುದ್ಧಿಯಲ್ಲಿ, ಸಂಬಂಧ-ಸಂಪರ್ಕದಲ್ಲಿ,
ಜೀವನದಲ್ಲಿ ಒಂದು ರಾಜ್ಯವಿದೆಯೇ? ಅಥವಾ ಕೆಲಕೆಲವೊಮ್ಮೆ ಆತ್ಮನ ರಾಜ್ಯದ ಜೊತೆ ಜೊತೆಗೆ ಮಾಯೆಯ
ರಾಜ್ಯವಂತೂ ಇಲ್ಲ ಅಲ್ಲವೆ? ಹೇಗೆ ಭವಿಷ್ಯ ಪ್ರಾಲಬ್ಧದಲ್ಲಿ ಒಂದೇ ರಾಜ್ಯವಿರುತ್ತದೆ ಎರಡಲ್ಲ
ಅಂದಮೇಲೆ ಈಗಲೂ ಸಹ ಎರಡು ರಾಜ್ಯಗಳಂತೂ ಇಲ್ಲ ತಾನೇ? ಹೇಗೆ ಭವಿಷ್ಯ ರಾಜ್ಯದಲ್ಲಿ ಒಂದು ರಾಜ್ಯದ
ಜೊತೆಗೆ ಒಂದು ಧರ್ಮವಿರುತ್ತದೆ, ಆ ಧರ್ಮವು ಯಾವುದಾಗಿದೆ? ಸಂಪೂರ್ಣ ಪವಿತ್ರತೆಯ ಧಾರಣೆಯ
ಧರ್ಮವಾಗಿದೆ ಅಂದಾಗ ಈಗ ನೋಡಿಕೊಳ್ಳಿರಿ - ಪವಿತ್ರತೆಯು ಸಂಪೂರ್ಣವಾಗಿದೆಯೇ? ಸ್ವಪ್ನದಲ್ಲಿಯೂ
ಅಪವಿತ್ರತೆಯ ಹೆಸರು, ಗುರುತು ಇರಬಾರದು. ಪವಿತ್ರತೆ ಅರ್ಥಾತ್ ಸಂಕಲ್ಪ, ಮಾತು, ಕರ್ಮ ಹಾಗೂ
ಸಂಬಂಧ-ಸಂಪರ್ಕದಲ್ಲಿ ಒಂದೇ ಸಂಪೂರ್ಣ ಪವಿತ್ರತೆಯ ಧಾರಣೆಯಿರಲಿ. ಬ್ರಹ್ಮಾಚಾರಿಗಳಾಗಿದ್ದೀರಿ,
ತಮ್ಮನ್ನು ಪರಿಶೀಲಿಸಿಕೊಳ್ಳುವುದು ಬರುತ್ತದೆಯೇ? ಯಾರಿಗೆ ಬರುತ್ತದೆಯೋ ಅವರು ಕೈಯೆತ್ತಿರಿ.
ಬರುತ್ತದೆಯೋ ಅಥವಾ ಮಾಡಿಕೊಳ್ಳುತ್ತೀರೋ? ಪರಿಶೀಲನೆ ಮಾಡಿಕೊಳ್ಳುತ್ತೀರಾ? ನಿಮಿತ್ತ ಶಿಕ್ಷಕಿಯರಿಗೆ
ಬರುತ್ತದೆಯೇ? ಡಬಲ್ ವಿದೇಶಿಯರಿಗೆ ಬರುತ್ತದೆಯೇ? ಏಕೆ? ಈಗಿನ ಪವಿತ್ರತೆಯ ಕಾರಣ ತಮ್ಮ ಜಡ
ಚಿತ್ರದಿಂದಲೂ ಪವಿತ್ರತೆಯನ್ನು ಕೇಳುತ್ತಾರೆ. ಪವಿತ್ರತೆ ಅರ್ಥಾತ್ ಒಂದು ಧರ್ಮ, ಈಗಿನ
ಸ್ಥಾಪನೆಯಾಗಿದೆ. ಇದು ಭವಿಷ್ಯದಲ್ಲಿಯೂ ನಡೆಯುತ್ತದೆ. ಹಾಗೆಯೇ ಭವಿಷ್ಯದ ಗಾಯನವೇನಿದೆ? ಒಂದು
ರಾಜ್ಯ, ಒಂದು ಧರ್ಮ ಮತ್ತು ಜೊತೆಯಲ್ಲಿ ಸದಾ ಸುಖ, ಶಾಂತಿ, ಸಂಪತ್ತು, ಅಖಂಡ ಸುಖ, ಅಖಂಡ ಶಾಂತಿ,
ಅಖಂಡ ಸಂಪತ್ತು. ಅಂದಮೇಲೆ ಈಗಿನ ತಮ್ಮ ಸ್ವರಾಜ್ಯದ ಜೀವನದಲ್ಲಿ ಅದಂತೂ ವಿಶ್ವದ ರಾಜ್ಯವಾಗಿದೆ
ಮತ್ತು ಈ ಸಮಯದಲ್ಲಿ ಸ್ವರಾಜ್ಯವಿದೆ ಅಂದಮೇಲೆ ಪರಿಶೀಲಿಸಿಕೊಳ್ಳಿರಿ - ಅವಿನಾಶಿ ಸುಖ, ಪರಮಾತ್ಮ
ಸುಖ, ಅವಿನಾಶಿ ಅನುಭವವಾಗುತ್ತದೆಯೇ? ಯಾವುದೇ ಸಾಧನಗಳು ಅಥವಾ ಯಾವುದೇ ಸಾಲ್ವೇಷನ್ನಿನ ಆಧಾರದ ಮೇಲೆ
ಸುಖದ ಅನುಭವ ಆಗುತ್ತಿಲ್ಲ ತಾನೇ? ಇಂದೂ ಸಹ ಯಾವುದೇ ಕಾರಣದಿಂದ ದುಃಖದ ಅಲೆಯು ಅನುಭವದಲ್ಲಿ
ಬರಬಾರದು. ಯಾವುದೇ ಹೆಸರು, ಸ್ಥಾನ-ಮಾನದ ಆಧಾರದ ಮೇಲಂತೂ ಸುಖದ ಅನುಭವ ಆಗುವುದಿಲ್ಲ ತಾನೇ? ಏಕೆ?
ಈ ಹೆಸರು, ಸ್ಥಾನ-ಮಾನ, ಸಾಧನ, ಸಾಲ್ವೇಷನ್ ಇವೆಲ್ಲವೂ ವಿನಾಶಿಯಾಗಿದೆ, ಅಲ್ಪಕಾಲದ್ದಾಗಿದೆ
ಆದ್ದರಿಂದ ವಿನಾಶಿ ಆಧಾರದಿಂದ ಅವಿನಾಶಿ ಸುಖ ಸಿಗುವುದಿಲ್ಲ. ಪರಿಶೀಲಿಸಿಕೊಳ್ಳುತ್ತಾ ಹೋಗಿರಿ -
ಈಗಲೂ ಕೇಳುತ್ತಲೂ ಹೋಗಿ ಮತ್ತು ತಮ್ಮಲ್ಲಿ ಪರಿಶೀಲನೆಯನ್ನೂ ಮಾಡಿಕೊಳ್ಳುತ್ತಾ ಹೋಗಿರಿ ಆಗ ಈಗಿನ
ಸಂಸ್ಕಾರ ಮತ್ತು ಭವಿಷ್ಯ ಸಂಸಾರದ ಪ್ರಾಲಬ್ಧದಲ್ಲಿ ಎಷ್ಟು ಅಂತರವಿದೆಯೆಂಬುದು ಅರ್ಥವಾಗುತ್ತದೆ.
ತಾವೆಲ್ಲರೂ ಜನ್ಮ ಪಡೆಯುತ್ತಿದ್ದಂತೆಯೇ ಬಾಪ್ದಾದಾರವರೊಂದಿಗೆ ಪ್ರತಿಜ್ಞೆ ಮಾಡುತ್ತೀರಿ, ಆ
ಪ್ರತಿಜ್ಞೆಯು ನೆನಪಿದೆಯೇ? ನೆನಪಿದೆಯೇ ಅಥವಾ ಮರೆತು ಹೋಗಿದ್ದೀರೋ? ಇದೇ ಪ್ರತಿಜ್ಞೆ ಮಾಡಿದಿರಿ -
ನಾವೆಲ್ಲರೂ ತಂದೆಯ ಜೊತೆಗಾರರಾಗಿ ವಿಶ್ವ ಕಲ್ಯಾಣಕಾರಿಗಳಾಗಿ ಹೊಸ ಸುಖ - ಶಾಂತಿಮಯ ಸಂಸಾರವನ್ನು
ಸ್ಥಾಪಿಸುವವರಾಗಿದ್ದೇವೆ. ಈ ತಮ್ಮ ಪ್ರತಿಜ್ಞೆಯು ನೆನಪಿದೆಯೇ? ಕೈಯೆತ್ತಿರಿ. ಹಿಂದೆ ಇರುವವರು
ಕೈಯೆತ್ತುತ್ತಿದ್ದಾರೆ, ಇಲ್ಲಿಯೂ ಎತ್ತುತ್ತಿದ್ದಾರೆ. ಪಕ್ಕಾ ಪ್ರತಿಜ್ಞೆಯೋ ಅಥವಾ ಸ್ವಲ್ಪ
ಗಡಿಬಿಡಿಯಾಗುತ್ತದೆಯೋ? ಹೊಸ ಸಂಸಾರವನ್ನು ಈಗ ಪರಮಾತ್ಮ ಸಂಸ್ಕಾರದ ಆಧಾರದಿಂದ
ರೂಪಿಸುವವರಾಗಿದ್ದೀರಿ ಅಂದಮೇಲೆ ಈಗ ಕೇವಲ ಪುರುಷಾರ್ಥ ಮಾಡಬಾರದು, ಜೊತೆಗೆ ಪುರುಷಾರ್ಥದ
ಪ್ರಾಲಬ್ಧವನ್ನು ಈಗಲೇ ಅನುಭವ ಮಾಡಬೇಕಾಗಿದೆ. ಸುಖದ ಜೊತೆಗೆ ಶಾಂತಿಯನ್ನೂ ಪರಿಶೀಲಿಸಿಕೊಳ್ಳಿರಿ -
ಅಶಾಂತ ಪರಿಸ್ಥಿತಿ, ಅಶಾಂತ ವಾಯು ಮಂಡಲ ಅದರಲ್ಲಿಯೂ ತಾವು ಶಾಂತಿಯ ಸಾಗರನ ಮಕ್ಕಳು ಸದಾ ಕಮಲ
ಪುಷ್ಫ ಸಮಾನ ಅಶಾಂತಿಯನ್ನೂ ಸಹ ಶಾಂತಿಯ ವಾಯುಮಂಡಲದಲ್ಲಿ ಪರಿವರ್ತನೆ ಮಾಡಲು ಸಾಧ್ಯವಿಲ್ಲವೇ?
ಶಾಂತ ವಾಯುಮಂಡಲದಲ್ಲಿ ತಾವು ಶಾಂತಿಯ ಅನುಭವ ಮಾಡುವುದು ದೊಡ್ಡ ಮಾತಲ್ಲ ಆದರೆ ತಮ್ಮ
ಪ್ರತಿಜ್ಞೆಯಾಗಿದೆ - ಅಶಾಂತಿಯನ್ನೂ ಶಾಂತಿಯಲ್ಲಿ ಪರಿವರ್ತನೆ ಮಾಡುವವರಾಗಿದ್ದೇವೆ ಎಂದು. ಅಂದಮೇಲೆ
ಪರಿಶೀಲನೆ ಮಾಡಿಕೊಳ್ಳಿರಿ - ಮಾಡಿಕೊಳ್ಳುತ್ತಿದ್ದೀರಲ್ಲವೆ? ಪರಿವರ್ತಕರಾಗಿದ್ದೀರಾ? ಪರವಶರಲ್ಲ
ತಾನೇ, ಪರಿವರ್ತಕರಾಗಿದ್ದೀರಿ. ಪರಿವರ್ತಕರು ಎಂದೂ ಪರವಶರಾಗಲು ಸಾಧ್ಯವಿಲ್ಲ. ಇದೇ ಪ್ರಕಾರದಿಂದ
ಅಕೂಟ ಸಂಪತ್ತು - ಆ ಸ್ವರಾಜ್ಯ ಅಧಿಕಾರಿಗಳ ಸಂಪತ್ತು ಏನಾಗಿದೆ? ಜ್ಞಾನ, ಗುಣ ಮತ್ತು ಶಕ್ತಿಗಳು
ಸ್ವರಾಜ್ಯ ಅಧಿಕಾರಿಯ ಸಂಪತ್ತಾಗಿದೆ ಅಂದಮೇಲೆ ನೋಡಿಕೊಳ್ಳಿರಿ - ಜ್ಞಾನದ ಇಡೀ ವಿಸ್ತಾರದ ಸಾರವನ್ನು
ಸ್ಪಷ್ಟವಾಗಿ ಅರಿತುಕೊಂಡಿದ್ದೀರಲ್ಲವೆ! ಕೇವಲ ಭಾಷಣ ಮಾಡುವುದು, ಕೋರ್ಸ್ ಕೊಡುವುದು ಜ್ಞಾನದ
ಅರ್ಥವಲ್ಲ. ಜ್ಞಾನದ ಅರ್ಥವಾಗಿದೆ - ಅರಿವು (ತಿಳುವಳಿಕೆ) ಅಂದಮೇಲೆ ಪ್ರತೀ ಸಂಕಲ್ಪ, ಪ್ರತೀ ಕರ್ಮ
ಹಾಗೂ ಮಾತನ್ನು ಜ್ಞಾನ ಅರ್ಥಾತ್ ತಿಳುವಳಿಕೆಯುಳ್ಳವರು ಜ್ಞಾನಪೂರ್ಣರಾಗಿ ಮಾಡುತ್ತೀರಾ? ಸರ್ವ
ಗುಣಗಳು ಪ್ರತ್ಯಕ್ಷ ಜೀವನದಲ್ಲಿ ಇಮರ್ಜ್ ಆಗಿರುತ್ತವೆಯೇ? ಸರ್ವ ಗುಣಗಳೂ ಇವೆಯೇ ಅಥವಾ ಯಥಾ ಶಕ್ತಿ
ಇವೆಯೋ? ಇದೇ ಪ್ರಕಾರ ಸರ್ವ ಶಕ್ತಿಗಳು - ತಮ್ಮ ಬಿರುದಾಗಿದೆ, ಮಾ|| ಸರ್ವಶಕ್ತಿವಂತರು, ಕೇವಲ
ಶಕ್ತಿವಂತರಲ್ಲ ಅಂದಾಗ ಸರ್ವಶಕ್ತಿಗಳು ಸಂಪನ್ನವಾಗಿವೆಯೇ? ಎರಡನೆಯ ಮಾತು – ಸರ್ವ ಶಕ್ತಿಗಳು
ಸಮಯದಲ್ಲಿ ಕಾರ್ಯ ನಿರ್ವಹಿಸುತ್ತವೆಯೇ? ಸಮಯದಲ್ಲಿ ಹಾಜರಾಗುತ್ತವೆಯೋ ಅಥವಾ ಸಮಯವು ಕಳೆದನಂತರ
ನೆನಪಿಗೆ ಬರುತ್ತದೆಯೋ? ಆದ್ದರಿಂದ ಪರಿಶೀಲನೆ ಮಾಡಿಕೊಳ್ಳಿರಿ – ಮೂರೂ ಮಾತುಗಳು, ಒಂದು ರಾಜ್ಯ,
ಒಂದು ಧರ್ಮ ಮತ್ತು ಅವಿನಾಶಿ ಸುಖ-ಶಾಂತಿ-ಸಂಪತ್ತು ಏಕೆಂದರೆ ಹೊಸ ಸಂಸಾರದಲ್ಲಿ ಈ ಮಾತುಗಳು ಈಗಿನ
ಸ್ವರಾಜ್ಯದ ಸಮಯದ ಯಾವ ಅನುಭವವಿದೆಯೋ ಈ ಅನುಭವ ಅಲ್ಲಿರಲು ಸಾಧ್ಯವಿಲ್ಲ. ಈಗ ಇವೆಲ್ಲಾ ಮಾತುಗಳ
ಅನುಭವ ಮಾಡಬಲ್ಲಿರಿ. ಈಗಿನಿಂದ ಈ ಸಂಸ್ಕಾರವು ಇಮರ್ಜ್ ಆದಾಗಲೇ ಅನೇಕ ಜನ್ಮಗಳು ಪ್ರಾಲಬ್ಧದ
ರೂಪದಲ್ಲಿ ನಡೆಯುತ್ತದೆ. ಧಾರಣೆ ಮಾಡಿಕೊಳ್ಳುತ್ತಿದ್ದೇವೆ, ಆಗಿ ಬಿಡುತ್ತದೆ. ಅಂತ್ಯದಲ್ಲಿ
ತಯಾರಾಗಿಯೇ ಬಿಡುತ್ತೇವೆ, ಈ ರೀತಿ ತಿಳಿದುಕೊಳ್ಳುತ್ತಿಲ್ಲ ತಾನೇ?
ಬಾಪ್ದಾದಾ ಮೊದಲೇ ಸೂಚನೆ
ನೀಡಿದ್ದೆವು – ಬಹಳ ಕಾಲದ ಈಗಿನ ಅಭ್ಯಾಸವು ಬಹಳ ಕಾಲದ ಪ್ರಾಪ್ತಿಗೆ ಆಧಾರವಾಗಿದೆ. ಅಂತ್ಯದಲ್ಲಿ
ಆಗಿ ಬಿಡುತ್ತೇವೆಂದು ಯೋಚಿಸಬೇಡಿ, ಆಗಿ ಬಿಡುವುದಲ್ಲ ಆಗಲೇಬೇಕಾಗಿದೆ - ಏಕೆ? ಸ್ವರಾಜ್ಯದ ಯಾವ
ಅಧಿಕಾರವಿದೆಯೋ ಅದು ಈಗ ಬಹಳಕಾಲದ ಅಭ್ಯಾಸ ಬೇಕಾಗಿದೆ. ಒಂದುವೇಳೆ ಒಂದು ಜನ್ಮದಲ್ಲಿ ಅಧಿಕಾರಿಯಾಗಲು
ಸಾಧ್ಯವಿಲ್ಲ, ಅಧೀನರಾಗಿ ಬಿಡುತ್ತೀರೆಂದರೆ ಅನೇಕ ಜನ್ಮಗಳು ಹೇಗಾಗುತ್ತೀರಿ? ಆದ್ದರಿಂದ ಬಾಪ್ದಾದಾ
ನಾಲ್ಕಾರು ಕಡೆಯ ಎಲ್ಲಾ ಮಕ್ಕಳಿಗೆ ಪದೇ-ಪದೇ ಸೂಚನೆ ನೀಡುತ್ತಿದ್ದೇವೆ. ಈಗ ಸಮಯದ ಗತಿಯು ತೀವ್ರ
ಗತಿಯಲ್ಲಿ ಹೋಗುತ್ತಿದೆ ಆದ್ದರಿಂದ ಎಲ್ಲಾ ಮಕ್ಕಳು ಈಗ ಕೇವಲ ಪುರುಷಾರ್ಥಿಗಳಾಗುವುದಲ್ಲ, ಬದಲಾಗಿ
ತೀವ್ರ ಪುರುಷಾರ್ಥಿಗಳಾಗಿ. ಪುರುಷಾರ್ಥದ ಪ್ರಾಲಬ್ಧದ ಅನುಭವವನ್ನು ಈಗ ಬಹಳ ಕಾಲದಿಂದ ಮಾಡಬೇಕಾಗಿದೆ.
ತೀವ್ರ ಪುರುಷಾರ್ಥದ ಚಿಹ್ನೆಗಳನ್ನು ಬಾಪ್ದಾದಾ ಮೊದಲೂ ತಿಳಿಸಿದ್ದೇವೆ. ತೀವ್ರ ಪುರುಷಾರ್ಥಿಗಳು
ಸದಾ ಮಾ|| ದಾತಾ ಆಗಿರುತ್ತಾರೆ. ಲೇವತಾ (ತೆಗೆದುಕೊಳ್ಳುವವರು) ಅಲ್ಲ, ದೇವತಾ ಅರ್ಥಾತ್
ನೀಡುವವರಾಗಿರುತ್ತಾರೆ. ಇವರಿದ್ದರೆ ನನ್ನ ಪುರುಷಾರ್ಥ ನಡೆಯುತ್ತದೆ, ಇವರು ಮಾಡಿದರೆ ನಾನೂ
ಮಾಡುವೆನು, ಇವರು ಬದಲಾದರೆ ನಾನೂ ಬದಲಾಗುವೆನು, ಇವರು ಬದಲಾಗಲಿ, ಇವರು ಮಾಡಲಿ - ಇವು ದಾತನ
ಲಕ್ಷಣಗಳಲ್ಲ. ಯಾರು ಮಾಡಲಿ, ಮಾಡದಿರಲಿ ಆದರೆ ನಾನು ಬಾಪ್ದಾದಾರವರ ಸಮಾನ ಮಾಡುವೆನು. ಬ್ರಹ್ಮಾ
ತಂದೆಯ ಸಮಾನವೂ ಕೂಡ. ಸಾಕಾರದಲ್ಲಿಯೂ ನೋಡಿದಿರಿ, ಮಕ್ಕಳು ಮಾಡಿದರೆ ನಾನು ಮಾಡುವೆನು ಎಂದು
ಬ್ರಹ್ಮಾ ತಂದೆಯು ಎಂದಿಗೂ ಹೇಳಲಿಲ್ಲ. ನಾನು ಮಾಡಿ ಮಕ್ಕಳಿಂದ ಮಾಡಿಸುವೆನು ಎನ್ನುವಂತಿದ್ದರು.
ತೀವ್ರ ಪುರುಷಾರ್ಥದ ಎರಡನೇ ಲಕ್ಷಣವಾಗಿದೆ - ಸದಾ ನಿರ್ಮಾಣ, ಕಾರ್ಯ ಮಾಡುತ್ತಿದ್ದರೂ ನಿರ್ಮಾನ
ಅರ್ಥಾತ್ ನಿರಹಂಕಾರಿ. ಈಗ ನಿರ್ಮಾಣ ಮತ್ತು ನಿರ್ಮಾನ ಎರಡರ ಬ್ಯಾಲೆನ್ಸ್ ಬೇಕು - ಏಕೆ?
ನಿರ್ಮಾಣರಾಗಿ ಕಾರ್ಯ ಮಾಡುವುದರಲ್ಲಿ ಸರ್ವರ ಮುಖಾಂತರ ಹೃದಯದ ಸ್ನೇಹ ಮತ್ತು ಆಶೀರ್ವಾದಗಳು
ಸಿಗುತ್ತವೆ. ಬಾಪ್ದಾದಾ ನೋಡಿದೆವು - ನಿರ್ಮಾಣ ಅರ್ಥಾತ್ ಸೇವಾ ಕ್ಷೇತ್ರದಲ್ಲಿ ಇತ್ತೀಚೆಗೆ ಎಲ್ಲರೂ
ಒಳ್ಳೆಯ ಉಮ್ಮಂಗ-ಉತ್ಸಾಹದಿಂದ ಹೊಸ-ಹೊಸ ಯೋಜನೆಗಳನ್ನು ರೂಪಿಸುತ್ತಿದ್ದಾರೆ. ಇದಕ್ಕಾಗಿ ಬಾಪ್ದಾದಾ
ನಾಲ್ಕೂ ಕಡೆಯ ಮಕ್ಕಳಿಗೆ ಅಭಿನಂದನೆಗಳನ್ನು ಕೊಡುತ್ತಿದ್ದೇವೆ.
ಬಾಪ್ದಾದಾರವರ ಬಳಿ
ನಿರ್ಮಾಣದ, ಸೇವೆಯ ಬಹಳ ಒಳ್ಳೊಳ್ಳೆಯ ಯೋಜನೆಗಳು ಬಂದಿವೆ ಆದರೆ ಬಾಪ್ದಾದಾ ನೋಡಿದೆವು - ನಿರ್ಮಾಣದ
ಕಾರ್ಯವಂತೂ ಬಹಳ ಚೆನ್ನಾಗಿದೆ. ಆದರೆ ಸೇವೆಯ ಕಾರ್ಯದಲ್ಲಿ ಎಷ್ಟು ಉಮ್ಮಂಗ-ಉತ್ಸಾಹವಿದೆಯೋ ಅಷ್ಟೇ
ಒಂದುವೇಳೆ ನಿರ್ಮಾಣ ಸ್ಥಿತಿಯ ಸಮತೋಲನೆ ಇದ್ದಿದ್ದೇ ಆದರೆ ನಿರ್ಮಾಣ ಅರ್ಥಾತ್ ಸೇವೆಯ ಕಾರ್ಯದಲ್ಲಿ
ಮತ್ತಷ್ಟು ಸಫಲತೆಯು ಹೆಚ್ಚು ಪ್ರತ್ಯಕ್ಷ ರೂಪದಲ್ಲಿ ಕಾಣುತ್ತದೆ. ಬಾಪ್ದಾದಾ ಮೊದಲೂ ತಿಳಿಸಿದ್ದೇವೆ
- ನಿರ್ಮಾನ ಸ್ವಭಾವ, ನಿರ್ಮಾಣ ಮಾತು ಮತ್ತು ನಿರ್ಮಾಣ ಸ್ಥಿತಿಯಿಂದ ಸಂಬಂಧ-ಸಂಪರ್ಕದಲ್ಲಿ ಬನ್ನಿರಿ.
ದೇವತೆಗಳ ಗಾಯನ ಮಾಡುತ್ತಾರೆ ಆದರೆ ವಾಸ್ತವದಲ್ಲಿ ಇದು ಬ್ರಾಹ್ಮಣರ ಗಾಯನವಾಗಿದೆ. ದೇವತೆಗಳ
ಮುಖದಿಂದ ಹೊರ ಬರುವ ಮಾತುಗಳು ವಜ್ರ ಮುತ್ತುಗಳಂತೆ ಅಮೂಲ್ಯವಾಗಿರುತ್ತವೆ. ನಿರ್ಮಲ ವಾಣಿ, ನಿರ್ಮಲ
ಸ್ವಭಾವ ಇರುತ್ತದೆಯೆಂದು ದೇವತೆಗಳಿಗೆ ಗಾಯನ ಮಾಡುತ್ತಾರೆ. ಈಗ ಬಾಪ್ದಾದಾ ನೋಡುತ್ತೇವೆ -
ಫಲಿತಾಂಶವನ್ನು ತಿಳಿಸಿ ಬಿಡುವುದೇ? ಏಕೆಂದರೆ ಇದು ಸೀಜನ್ನಿನ ಕೊನೆಯ ಸರದಿಯಾಗಿದೆ ಆದ್ದರಿಂದ
ಬಾಪ್ದಾದಾ ನೋಡಿದೆವು – ನಿರ್ಮಲ ವಾಣಿ, ನಿರ್ಮಾನ ಸ್ಥಿತಿ, ಇದರಲ್ಲಿ ಇನ್ನೂ ಅಟೇಂನ್ಷನ್ ಬೇಕಾಗಿದೆ.
ಬಾಪ್ದಾದಾ ಮೊದಲು
ಖಜಾನೆಗಳ ಮೂರು ಖಾತೆಗಳನ್ನು ಜಮಾ ಮಾಡಿಕೊಳ್ಳಿರಿ ಎಂದು ಮೊದಲು ತಿಳಿಸಿದ್ದೇವೆ. ಅಂದಮೇಲೆ
ಫಲಿತಾಂಶವನ್ನೇನು ನೋಡಿದೆವು? ಆ ಮೂರು ಖಾತೆಗಳು ಯಾವುದಾಗಿದೆ? ಅದು ನೆನಪಿರಬೇಕಲ್ಲವೆ! ಆದರೂ
ಮತ್ತೆ ಸ್ಮೃತಿಗೆ ತರಿಸುತ್ತಿದ್ದೇವೆ. ಒಂದಾಗಿದೆ - ತಮ್ಮ ಪುರುಷಾರ್ಥದಿಂದ ಜಮಾದ ಖಾತೆಯನ್ನು
ಹೆಚ್ಚಿಸಿಕೊಳ್ಳಿ, ಎರಡನೆಯದು - ಸದಾ ಸ್ವಯಂ ಸಂತುಷ್ಟವಾಗಿದ್ದು ಅನ್ಯರನ್ನೂ ಸಂತುಷ್ಟ ಪಡಿಸುವುದು,
ಭಿನ್ನ-ಭಿನ್ನ ಸಂಸ್ಕಾರಗಳನ್ನು ತಿಳಿದುಕೊಂಡಿದ್ದರೂ ಸಂತುಷ್ಟವಾಗಿರುವುದು ಮತ್ತು ಸಂತುಷ್ಟ
ಪಡಿಸುವುದರಿಂದ ಆಶೀರ್ವಾದಗಳ ಖಾತೆಯು ಜಮಾ ಆಗುತ್ತದೆ. ಒಂದುವೇಳೆ ಯಾವುದೇ ಕಾರಣದಿಂದ ಸಂತುಷ್ಟ
ಪಡಿಸುವುದರಲ್ಲಿ ಕೊರತೆಯು ಉಳಿದುಕೊಂಡರೆ ಪುಣ್ಯದ ಖಾತೆಯಲ್ಲಿ ಜಮಾ ಆಗುವುದಿಲ್ಲ. ಸಂತುಷ್ಟತೆಯು
ಪುಣ್ಯದ ಚಾಬಿಯಾಗಿದೆ. ಭಲೆ ಇರಿ ಅಥವಾ ಅನ್ಯರನ್ನು ಮಾಡಿರಿ ಮತ್ತು ಮೂರನೆಯದಾಗಿದೆ - ಸೇವೆಯಲ್ಲಿಯೂ
ಸದಾ ನಿಸ್ವಾರ್ಥತೆ. ನಾನು ಎಂಬುದಿಲ್ಲ, ನಾನು ಮಾಡಿದೆನು ಅಥವಾ ನನ್ನದಾಗಬೇಕು. ಈ ನಾನು ಮತ್ತು
ನನ್ನತನವು ಎಲ್ಲಿ ಸೇವೆಯಲ್ಲಿ ಬಂದು ಬಿಡುತ್ತದೆಯೋ ಅಲ್ಲಿ ಪುಣ್ಯದ ಖಾತೆಯು ಜಮಾ ಆಗುವುದಿಲ್ಲ.
ಅನುಭವಿಗಳಾಗಿದ್ದೀರಿ, ಈ ರಾಯಲ್ರೂಪದ ನನ್ನತನವು ಬಹಳಷ್ಟಿದೆ. ರಾಯಲ್ರೂಪದ ನನ್ನತನದ ಪಟ್ಟಿಯು
ಸಾಧಾರಣ ನನ್ನತನಕ್ಕಿಂತಲೂ ಉದ್ದಗಲವಾಗಿದೆ. ಅಂದಾಗ ಎಲ್ಲಿ ನಾನು ಮತ್ತು ನನ್ನತನದ ಸ್ವಾರ್ಥವು ಬಂದು
ಬಿಡುತ್ತದೆಯೋ, ನಿಸ್ವಾರ್ಥತೆಯಿಲ್ಲವೋ ಅಲ್ಲಿ ಪುಣ್ಯದ ಖಾತೆಯು ಜಮಾ ಆಗುವುದರಲ್ಲಿ ಕಡಿಮೆಯಾಗಿ
ಬಿಡುತ್ತದೆ. ನನ್ನತನದ ಪಟ್ಟಿಯನ್ನು ಮತ್ತೆಂದಾದರೂ ತಿಳಿಸುತ್ತೇವೆ. ಬಹಳ ಉದ್ದವಾಗಿದೆ ಮತ್ತು ಬಹಳ
ಸೂಕ್ಷ್ಮವಾಗಿದೆ ಅಂದಾಗ ಬಾಪ್ದಾದಾ ನೋಡಿದೆವು - ತಮ್ಮ ಪುರುಷಾರ್ಥದಿಂದ ಎಲ್ಲರೂ ಯಥಾಶಕ್ತಿ
ತಮ್ಮ-ತಮ್ಮ ಖಾತೆಯನ್ನು ಜಮಾ ಮಾಡಿಕೊಳ್ಳುತ್ತಿದ್ದಾರೆ ಆದರೆ ಆಶೀರ್ವಾದಗಳ ಖಾತೆ ಮತ್ತು ಪುಣ್ಯದ
ಖಾತೆಯನ್ನು ಈಗ ತುಂಬಿಸಿಕೊಳ್ಳುವ ಅವಶ್ಯಕತೆಯಿದೆ ಆದ್ದರಿಂದ ಮೂರೂ ಖಾತೆಗಳನ್ನು ಜಮಾ
ಮಾಡಿಕೊಳ್ಳುವ ಅಟೇಂನ್ಷನ್! ಈಗಲೂ ಸಹ ವಿಭಿನ್ನ ಸಂಸ್ಕಾರಗಳು ಕಂಡು ಬರುತ್ತಿವೆ. ಎಲ್ಲರ ಸಂಸ್ಕಾರವು
ಇನ್ನೂ ಸಂಪನ್ನವಾಗಿಲ್ಲ, ಆದರೆ ನಮ್ಮ ಮೇಲೆ ಅನ್ಯರ ನಿರ್ಬಲ ಸ್ವಭಾವ, ನಿರ್ಬಲ ಸಂಸ್ಕಾರಗಳ ಪ್ರಭಾವ
ಬೀರಬಾರದು. ನಾನು ಮಾ|| ಸರ್ವಶಕ್ತಿವಂತನಾಗಿದ್ದೇನೆ, ನಿರ್ಬಲ ಸಂಸ್ಕಾರವು ಶಕ್ತಿಶಾಲಿಯಲ್ಲ. ನಾನು
ಮಾ|| ಸರ್ವಶಕ್ತಿವಂತನ ಮೇಲೆ ನಿರ್ಬಲ ಸಂಸ್ಕಾರದ ಪ್ರಭಾವವು ಬೀಳಬಾರದು ಆದ್ದರಿಂದ ಬಾಪ್ದಾದಾರವರ
ಛತ್ರಛಾಯೆಯಲ್ಲಿರುವುದೇ ಸುರಕ್ಷತೆಯ ಸಾಧನವಾಗಿದೆ. ಬಾಪ್ದಾದಾರವರ ಜೊತೆ ಕಂಬೈಂಡ್ ಆಗಿ ಇರಿ,
ಶ್ರೀಮತವೇ ಅವರ ಛತ್ರಛಾಯೆಯಾಗಿದೆ.
ಈಗ ಈ ಸೀಜನ್ನಿನ ಅಂತಿಮ
ಸರದಿಯಾಗಿದೆ. ಮುಂದಿನ ಸೀಜನ್ ಸಮಯ ಪ್ರಮಾಣ ಆರಂಭವಾಗುವುದು ಆದರೆ ಹೇಗೆ ಮಿಲನವನ್ನಾಚರಿಸುವ ಹೊಸ
ಸೀಜನ್ ಆರಂಭವಾಗುವುದು, ಅದರಲ್ಲಿ ಯಾವ ನವೀನತೆಯನ್ನು ತೋರಿಸುತ್ತೀರಿ? ತಮಗಾಗಿ ಯಾವುದಾದರೂ ಹೊಸ
ಯೋಜನೆಯನ್ನು ರೂಪಿಸಿದ್ದೀರಾ? ಹೇಗೆ ಸೇವೆಗಾಗಿ ಹೊಸ-ಹೊಸ ಯೋಜನೆಗಳನ್ನು ರೂಪಿಸಲು
ಯೋಚಿಸುತ್ತೀರಲ್ಲವೆ. ಹಾಗೆಯೇ ಈಗ ಸ್ವಯಂನ ಪ್ರತಿ ಯಾವ ಹಳೆಯ ಮಾತುಗಳಿವೆಯೋ ಅದರಲ್ಲಿ ಯಾವ
ನವೀನತೆಯ ಬಗ್ಗೆ ಆಲೋಚಿಸಿದ್ದೀರಿ? ಒಂದುವೇಳೆ ಇನ್ನೂ ಆಲೋಚಿಸಿಲ್ಲವೆಂದರೆ ಬಾಪ್ದಾದಾ ಈಗಲೂ ಸೂಚನೆ
ನೀಡುತ್ತಿದ್ದೇವೆ – ಸ್ವ ಪ್ರತಿ ಪ್ರತಿಯೊಬ್ಬರೂ ಸಂಕಲ್ಪ, ಮಾತು, ಸಂಬಂಧ-ಸಂಪರ್ಕ, ಕರ್ಮದಲ್ಲಿ
ನವೀನತೆಯನ್ನು ತರುವ ಯೋಜನೆಯನ್ನು ರೂಪಿಸಲೇಬೇಕಾಗಿದೆ. ಬಾಪ್ದಾದಾ ಮೊದಲು ಫಲಿತಾಂಶವನ್ನು
ನೋಡುತ್ತೇವೆ, ಯಾವ ನವೀನತೆಯನ್ನು ತಂದಿರಿ ಎಂದು. ಹಳೆಯ ಸಂಸ್ಕಾರವನ್ನು ಧೃಡ ಸಂಕಲ್ಪದಿಂದ
ಪರಿವರ್ತನೆ ಮಾಡಿಕೊಂಡರೆ ಎಂದು ಮೊದಲು ಫಲಿತಾಂಶವನ್ನು ನೋಡುತ್ತೇವೆ. ಏನನ್ನು ಆಲೋಚಿಸುತ್ತೀರಿ?
ಹೀಗೆ ಮಾಡುವಿರಾ? ಯಾರು ಮಾಡುವಿರೋ ಅವರು ಕೈಯೆತ್ತಿ. ಮಾಡುತ್ತೀರಾ ಅಥವಾ ಅನ್ಯರನ್ನು ನೋಡುತ್ತೀರಾ?
ಏನು ಮಾಡುವಿರಿ? ಅನ್ಯರನ್ನು ನೋಡಬೇಡಿ, ಬಾಪ್ದಾದಾರವರನ್ನು ನೋಡಿರಿ, ತಮ್ಮ ಹಿರಿಯ ದಾದೀಜಿಯನ್ನು
ನೋಡಿ. ಅವರದು ಎಷ್ಟು ಭಿನ್ನ ಮತ್ತು ಪ್ರಿಯ ಸ್ಥಿತಿಯಾಗಿದೆ. ಬಾಪ್ದಾದಾ ಹೇಳುತ್ತೇವೆ, ಒಂದುವೇಳೆ
ಯಾರನ್ನಾದರೂ ನಾನು ಮತ್ತು ಹದ್ದಿನ ನನ್ನತನದಿಂದ ಭಿನ್ನವಾಗಿ ನೋಡಲು ಬಯಸುವುದಾದರೆ ತಮ್ಮ
ಬಾಪ್ದಾದಾರವರ ಹೃದಯ ಸಿಂಹಾಸನಾಧಿಕಾರಿ ದಾದಿಯನ್ನು ನೋಡಿರಿ. ಇಡೀ ಜೀವನದಲ್ಲಿ ಹದ್ದಿನ ನನ್ನತನ,
ಹದ್ದಿನ ನಾನು ಎಂಬುದರಿಂದ ಭಿನ್ನವಾಗಿದ್ದರು. ಅದರ ಫಲಿತಾಂಶವಾಗಿ ಭಲೆ ಎಷ್ಟೇ ಖಾಯಿಲೆಯಿರಬಹುದು
ಆದರೆ ದುಃಖ, ನೋವಿನ ಅನುಭವದಿಂದ ದೂರವಿದ್ದಾರೆ. ಒಂದೇ ಶಬ್ಧವು ಪಕ್ಕಾ ಆಗಿದೆ - ಯಾರಾದರೂ ದಾದಿ
ಏನಾದರೂ ನೋವಿದೆಯೇ? ಏನಾಗುತ್ತಿದೆ? ಎಂದು ಕೇಳಿದರೆ ದಾದಿಯು ಯಾವ ಉತ್ತರ ಕೊಡುತ್ತಾರೆ - ಏನೂ
ಇಲ್ಲ ಎಂದು ಹೇಳುತ್ತಾರೆ ಏಕೆಂದರೆ ನಿಸ್ವಾರ್ಥ ಮತ್ತು ವಿಶಾಲ ಹೃದಯಿ ಎಲ್ಲವನ್ನು ತನ್ನಲ್ಲಿ
ಸಮಾವೇಶ ಮಾಡಿಕೊಳ್ಳುವವರು. ಸರ್ವರಿಗೆ ಪ್ರಿಯರು. ಇದರ ಪ್ರತ್ಯಕ್ಷ ಚಿಹ್ನೆಗಳನ್ನು
ನೋಡುತ್ತಿದ್ದೀರಿ. ಬ್ರಹ್ಮಾ ತಂದೆಯ ಮಾತನ್ನು ಹೇಳುವಾಗ ಅವರಲ್ಲಂತೂ ಶಿವ ತಂದೆಯಿದ್ದರಲ್ಲವೆ ಎಂದು
ಹೇಳುತ್ತೀರಿ ಆದರೆ ದಾದಿಯಂತೂ ತಮ್ಮ ಜೊತೆ ಪ್ರಭು ಪಾಲನೆಯಲ್ಲಿದ್ದರು, ವಿದ್ಯಾಭ್ಯಾಸದಲ್ಲಿದ್ದರು.
ಸೇವೆಯಲ್ಲಿ ಜೊತೆಗಾರರಾಗಿದ್ದರು ಅಂದಮೇಲೆ ಯಾವಾಗ ನಿಸ್ವಾರ್ಥ ಸ್ಥಿತಿಯಲ್ಲಿ ಅವರು ಸಂಪೂರ್ಣರಾದರು
ಅಂದಮೇಲೆ ತಾವೆಲ್ಲರೂ ಆಗಲು ಸಾಧ್ಯವಿಲ್ಲವೇ? ಆಗಬಹುದಲ್ಲವೇ? ತಾವೇ ಆಗಬೇಕಾಗಿದೆ ಎಂಬುದು
ಬಾಪ್ದಾದಾರವರಿಗೆ ನಿಶ್ಚಯವಿದೆ. ಎಷ್ಟು ಬಾರಿ ಆಗಿದ್ದೀರಿ? ನೆನಪಿದೆಯೇ? ಅನೇಕ ಕಲ್ಪಗಳು ತಂದೆಯ
ಸಮಾನ ಆಗಿದ್ದೀರಿ ಮತ್ತು ಈಗಲೂ ತಾವೇ ಆಗುವವರಿದ್ದೀರಿ. ಇದೇ ಉಮ್ಮಂಗ-ಉತ್ಸಾಹದಿಂದ ಹಾರುತ್ತಾ
ಹೋಗಿರಿ. ತಂದೆಗೆ ತಮ್ಮಲ್ಲಿ ನಿಶ್ಚಯವಿದೆ ಅಂದಮೇಲೆ ತಾವೂ ತಮ್ಮನ್ನು ಸದಾ ನಿಶ್ಚಯ
ಬುದ್ಧಿಯವರಾಗಲೇಬೇಕಾಗಿದೆ. ಇಂತಹ ನಿಶ್ಚಯ ಬುದ್ಧಿಯವರಾಗಿ ಹಾರುತ್ತಾ ಇರಿ. ತಂದೆಯೊಂದಿಗೆ
ಪ್ರೀತಿಯಿದೆ, ಪ್ರೀತಿಯಲ್ಲಿ 100%ಗಿಂತಲೂ ಹೆಚ್ಚಿನದಾಗಿದೆ. ಹೀಗೆ ಹೇಳುತ್ತೀರಿ, ಇದು ಸರಿಯೇ?
ಯಾರೆಲ್ಲರೂ ಕುಳಿತಿದ್ದೀರಿ ಅಥವಾ ಯಾರೆಲ್ಲರೂ ತಮ್ಮ-ತಮ್ಮ ಸ್ಥಾನಗಳಲ್ಲಿ ಕೇಳುತ್ತಿದ್ದೀರಿ
ಅವರೆಲ್ಲರೂ ಪ್ರೀತಿಯ ಸಬ್ಜೆಕ್ಟ್ನಲ್ಲಿ ತಮ್ಮನ್ನು 100% ಎಂದು ತಿಳಿದುಕೊಳ್ಳುತ್ತೀರಾ? ಹಾಗಿದ್ದರೆ
ಕೈಯೆತ್ತಿರಿ. 100% ಪ್ರೀತಿಯಿದೆಯೇ? (ಎಲ್ಲರೂ ಕೈಯೆತ್ತಿದರು) ಒಳ್ಳೆಯದು - ಹಿಂದೆ ಇರುವವರು
ಉದ್ದವಾಗಿ ಕೈಯೆತ್ತಿರಿ. ಕೈಗಳನ್ನು ಅಲುಗಾಡಿಸಿರಿ. ಇದರಲ್ಲಿ ಎಲ್ಲರೂ ಕೈಯೆತ್ತಿದರು ಅಂದಾಗ
ಪ್ರೀತಿಯ ಚಿಹ್ನೆಯಾಗಿದೆ - ಸಮಾನರಾಗುವುದು. ಯಾರೊಂದಿಗೆ ಪ್ರೀತಿಯಿರುತ್ತದೆಯೋ ಅವರಂತೆಯೇ
ಮಾತನಾಡುವುದು, ಅವರಂತೆಯೇ ನಡೆಯುವುದು, ಅವರಂತೆಯೇ ಸಂಬಂಧ-ಸಂಪರ್ಕವನ್ನು ನಿಭಾಯಿಸುವುದು, ಇದು
ಪ್ರೀತಿಯ ಗುರುತಾಗಿದೆ.
ಇಂದು ಬಾಪ್ದಾದಾರವರು
ಎಲ್ಲರಲ್ಲೂ ಇದನ್ನು ನೋಡಲು ಬಯಸುತ್ತಾರೆ, ಈಗೀಗ ನೋಡಲು ಬಯಸುತ್ತಾರೆ. ಒಂದು ಕ್ಷಣದಲ್ಲಿ
ಸ್ವರಾಜ್ಯದ ಸೀಟಿನಲ್ಲಿ ಕಂಟ್ರೋಲಿಂಗ್ ಪವರ್, ರೂಲಿಂಗ್ ಪವರ್ನ ಸಂಸ್ಕಾರವನ್ನು ಇಮರ್ಜ್ ರೂಪದಲ್ಲಿ
ಒಂದು ಕ್ಷಣದಲ್ಲಿ ಕುಳಿತುಕೊಳ್ಳಲು ಸಾಧ್ಯವೇ! ಹಾಗಾದರೆ ಒಂದು ಕ್ಷಣದಲ್ಲಿ 2-3 ನಿಮಿಷಕ್ಕಾಗಿ
ರಾಜ್ಯಾಧಿಕಾರಿಯ ಸೀಟಿನಲ್ಲಿ ಸೆಟ್ ಆಗಿ ಬಿಡಿ. ಒಳ್ಳೆಯದು.
ನಾಲ್ಕಾರು ಕಡೆಯ ಮಕ್ಕಳ
ನೆನಪು, ಪ್ರೀತಿಯ ಪತ್ರದ ಜೊತೆ-ಜೊತೆ ವಿಜ್ಞಾನದ ಸಾಧನದಿಂದ ನೆನಪು, ಪ್ರೀತಿ ಬಾಪ್ದಾದಾರವರಿಗೆ
ತಲುಪಿ ಬಿಟ್ಟಿದೆ. ತಮ್ಮ ಹೃದಯದ ಸಮಾಚಾರವನ್ನು ಅನೇಕ ಮಕ್ಕಳು ಬರೆಯುತ್ತಾರೆ ಮತ್ತು ಆತ್ಮಿಕ
ಸಂಭಾಷಣೆಯಲ್ಲೂ ತಿಳಿಸುತ್ತಾರೆ, ಬಾಪ್ದಾದರವರು ಅಂತಹ ಎಲ್ಲಾ ಮಕ್ಕಳಿಗೆ ಪ್ರತಿ ಉತ್ತರ
ಕೊಡುತ್ತಿದ್ದಾರೆ - ಸದಾ ಸತ್ಯ ಹೃದಯಕ್ಕೆ ಸಾಹೆಬ್ ರಾಜಿ ಆಗಿ ಬಿಡುತ್ತಾರೆ. ಹೃದಯದ ಆಶೀರ್ವಾದಗಳು
ಮತ್ತು ಹೃದಯದ ಪ್ರೀತಿ ವಿಶೇಷವಾಗಿ ಆ ಆತ್ಮರ ಪ್ರತಿ ಇದೆ. ನಾಲ್ಕಾರು ಕಡೆ ಯಾರೆಲ್ಲಾ ಸಮಾಚಾರವನ್ನು
ಕೊಡುತ್ತಾರೆ, ಎಲ್ಲರೂ ಒಳ್ಳೊಳ್ಳೆ ಉಮಂಗ-ಉತ್ಸಾಹದ ಪ್ಲಾನ್ನ್ನು ಮಾಡಿದ್ದಾರೆ, ಅದಕ್ಕಾಗಿ
ಬಾಪ್ದಾದಾರವರು ಶುಭಾಶಯಗಳನ್ನು ಕೊಡುತ್ತಿದ್ದಾರೆ ಮತ್ತೆ ವರದಾನವನ್ನು ಕೊಡುತ್ತಿದ್ದಾರೆ.
ಮುಂದುವರೆಯುತ್ತಿರಿ, ಮುಂದುವರೆಯಿಸುತ್ತಾ ನಡೆಯಿರಿ.
ನಾಲ್ಕಾರು ಕಡೆಯ
ಬಾಪ್ದಾದಾರವರ ಕೋಟಿಯಲ್ಲಿ ಕೆಲವರು, ಕೆಲವರಲ್ಲಿ ಕೆಲವರು ಶ್ರೇಷ್ಠ ಭಾಗ್ಯವಂತ ಮಕ್ಕಳಿಗೆ
ಬಾಪ್ದಾದಾರವರ ವಿಶೇಷ ನೆನಪು, ಪ್ರೀತಿ. ಬಾಪ್ದಾದಾರವರು ಎಲ್ಲಾ ಮಕ್ಕಳಿಗೆ ಧೈರ್ಯ ಮತ್ತು
ಉಮಂಗ-ಉತ್ಸಾಹದ ಶುಭಾಶಯಗಳನ್ನು ಕೊಡುತ್ತಿದ್ದಾರೆ. ಮುಂದೆ ತೀವ್ರ ಪುರುಷಾರ್ಥಿ ಆಗಲು ಸಮತೋಲನೆಯ
ಪದಮಾಪದಮದಷ್ಟು ಆಶೀರ್ವಾದಗಳನ್ನು ಕೊಡುತ್ತಿದ್ದಾರೆ. ಎಲ್ಲರ ಭಾಗ್ಯದ ನಕ್ಷತ್ರ ಸದಾ
ಹೊಳೆಯುತ್ತಿರಲಿ ಮತ್ತು ಅನ್ಯರ ಭಾಗ್ಯ ಮಾಡುತ್ತಾ ಹೋಗಿ, ಇದರ ಆಶೀರ್ವಾದವನ್ನೂ ಕೊಡುತ್ತಿದ್ದಾರೆ,
ನಾಲ್ಕಾರು ಕಡೆಯ ಮಕ್ಕಳು ತಮ್ಮ-ತಮ್ಮ ಸ್ಥಾನಗಳಲ್ಲಿ ಕೇಳುತ್ತಲೂ ಇದ್ದಾರೆ, ನೋಡುತ್ತಲೂ ಇದ್ದಾರೆ
ಮತ್ತೆ ಬಾಪ್ದಾದಾರವರು ಎಲ್ಲಾ ನಾಲ್ಕಾರು ಕಡೆಯ ಮತ್ತು ದೂರದಲ್ಲಿ ಕುಳಿತಿರುವ ಮಕ್ಕಳನ್ನು
ನೋಡಿ-ನೋಡಿ ಖುಷಿ ಪಡುತ್ತಿದ್ದಾರೆ. ನೋಡುತ್ತಾಯಿರಿ ಮತ್ತು ಮಧುಬನದ ಶೋಭೆಯನ್ನು ಸದಾ
ಹೆಚ್ಚಿಸುತ್ತಿರಿ, ಎಲ್ಲಾ ಮಕ್ಕಳಿಗೆ ಹೃದಯದ ಆಶೀರ್ವಾದದ ಜೊತೆ ನಮಸ್ತೆ.
ವರದಾನ:
ಗಮನ (ಅಟೇಂನ್ಷನ್)
ರೂಪಿ ತುಪ್ಪದ ಮುಖಾಂತರ ಆತ್ಮಿಕ ಸ್ವರೂಪದ ನಕ್ಷತ್ರದ ಹೊಳಪನ್ನು ಹೆಚ್ಚಿಸುವಂತಹ ಆಕರ್ಷಣಾ ಮೂರ್ತಿ
ಭವ.
ಯಾವಾಗ ತಂದೆಯ ಮುಖಾಂತರ,
ಜ್ಞಾನದ ಮುಖಾಂತರ, ಆತ್ಮಿಕ ಸ್ವರೂಪದ ನಕ್ಷತ್ರ ಹೊಳೆದಿದ್ದೇ ಆದರೆ ಅದು ನಂದಿಹೋಗಲು ಸಾಧ್ಯವಿಲ್ಲ.
ಈ ನಕ್ಷತ್ರ ಸದಾ ಹೊಳೆಯುತ್ತಿದ್ದು ಎಲ್ಲರನ್ನು ಆಕರ್ಷಣೆ ಯಾವಾಗ ಮಾಡುವುದೆಂದರೆ ಯಾವಾಗ ಪ್ರತಿದಿನ
ಅಮೃತವೇಳೆ ಗಮನ (ಅಟೇಂನ್ಷನ್)ರೂಪಿ ತುಪ್ಪ ಹಾಕುತ್ತಿರುವಿರಿ ಆಗ. ಹೇಗೆ ದೀಪದಲ್ಲಿ ತುಪ್ಪ
ಹಾಕುತ್ತಾರೆ ಆಗ ಅದು ಏಕರಸವಾಗಿ ಉರಿಯುತ್ತಿರುತ್ತದೆ. ಆ ರೀತಿ ಸಂಪೂರ್ಣ ಗಮನ ಕೊಡುವುದು ಅರ್ಥಾತ್
ತಂದೆಯ ಸರ್ವಗುಣ ಹಾಗೂ ಶಕ್ತಿಗಳನ್ನು ಸ್ವಯಂನಲ್ಲಿ ಧಾರಣೆ ಮಾಡುವುದು ಇದೇ ಅಟೇಂನ್ಷನ್ನಿಂದ
ಆಕರ್ಷಣಾಮೂರ್ತಿಯಾಗಿ ಬಿಡುವುದು.
ಸ್ಲೋಗನ್:
ಅಪರಿಮಿತ
ವೈರಾಗ್ಯ ವೃತ್ತಿಯ ಮುಖಾಂತರ ಸಾಧನಾ ರೂಪಿ ಬೀಜವನ್ನು ಪ್ರತ್ಯಕ್ಷ ಮಾಡಿ.
ಅವ್ಯಕ್ತ ಸೂಚನೆ:-
ಸ್ವಯಂನ ಮತ್ತು ಸರ್ವರ ಪ್ರತಿ ಮನಸ್ಸಾ ಮೂಲಕ ಯೋಗದ ಶಕ್ತಿಗಳ ಪ್ರಯೋಗ ಮಾಡಿ.
ಯೋಗದ ಶಕ್ತಿ ಜಮಾ
ಮಾಡುವುದಕ್ಕಾಗಿ ಕರ್ಮ ಮತ್ತು ಯೋಗದ ಸಮತೋಲನವನ್ನು ಹೆಚ್ಚಿಸಿರಿ. ಕರ್ಮ ಮಾಡುತ್ತಾ ಯೋಗದ
ಶಕ್ತಿಶಾಲಿ ಸ್ಥಿತಿಯಿರಲಿ - ಇದರ ಅಭ್ಯಾಸವನ್ನು ಹೆಚ್ಚಿಸಿರಿ. ಹೇಗೆ ಸೇವೆಗಾಗಿ ಆವಿಷ್ಕಾರ
ಮಾಡುತ್ತಾರೆ ಹಾಗೆಯೇ ಈ ವಿಶೇಷ ಅನುಭವಗಳ ಅಭ್ಯಾಸಕ್ಕಾಗಿ ಸಮಯ ತೆಗೆಯಿರಿ ಮತ್ತು ನವೀನತೆಯನ್ನು
ತಂದು ಎಲ್ಲರ ಮುಂದೆ ಉದಾಹರಣೆಯಾಗಿರಿ.
ಸೂಚನೆ: ಇಂದು ತಿಂಗಳಿನ
ಮೂರನೇ ರವಿವಾರವಾಗಿದೆ, ಎಲ್ಲಾ ರಾಜಯೋಗಿ ತಪಸ್ವಿ ಸಹೋದರ ಸಹೋದರಿಯರು ಸಂಜೆ 6.30 ರಿಂದ 7.30
ರವರೆಗೆ, ವಿಶೇಷ ಯೋಗ ಅಭ್ಯಾಸದ ಸಮಯ ಮಾಸ್ಟರ್ ಸರ್ವ ಶಕ್ತಿವಂತನ ಶಕ್ತಿಶಾಲಿ ಸ್ವರೂಪದಲ್ಲಿ
ಸ್ಥಿತರಾಗಿ ಪ್ರಕೃತಿ ಸಹಿತ ಸರ್ವ ಆತ್ಮರಿಗೆ ಪವಿತ್ರತೆಯ ಕಿರಣಗಳನ್ನು ಕೊಡಿ, ಸತೋಪ್ರಧಾನರನ್ನಾಗಿ
ಮಾಡುವಂತಹ ಸೇವೆಯನ್ನು ಮಾಡಿ.