19.11.24 Morning Kannada Murli Om Shanti
BapDada Madhuban
"*ಮಧುರ ಮಕ್ಕಳೇ –
ನಿಮ್ಮ ನೆನಪು ಬಹಳ ಅದ್ಭುತವಾಗಿದೆ ಏಕೆಂದರೆ ನೀವು ಒಮ್ಮೆಯೇ ತಂದೆ, ಶಿಕ್ಷಕ ಹಾಗೂ ಸದ್ಗುರು -
ಮೂವರನ್ನೂ ನೆನಪು ಮಾಡುತ್ತೀರಿ*"
ಪ್ರಶ್ನೆ:
ತಂದೆಯು ತನ್ನ
ಮಕ್ಕಳಿಗೆ ಯಾವ ಮಾತಿನಲ್ಲಿ ಅಪ್ಪಣೆ ಕೊಡುತ್ತಾರೆ?
ಉತ್ತರ:
ತಂದೆಯು
ಹೇಳುತ್ತಾರೆ - ಮಧುರ ಮಕ್ಕಳೇ, ಎಂದೂ ಸಹ ಮುರುಳಿಯನ್ನು ತಪ್ಪಿಸಬಾರದು. ಅವರನ್ನು ಮಾಯೆಯು
ಅಹಂಕಾರಿಯನ್ನಾಗಿ ಮಾಡಿಬಿಡುತ್ತದೆ. ಅವರು ದೇಹಾಭಿಮಾನದಲ್ಲಿ ಬಂದು ಮುರುಳಿಯನ್ನು ನಿರ್ಲಕ್ಷ್ಯ
ಮಾಡುತ್ತಾರೆ. ನಮಗೆ ಶಿವತಂದೆಯ ಜೊತೆಯೇ ಸಂಬಂಧವಿದೆಯೆಂದು ಹೇಳುತ್ತಾರೆ ಆದರೆ ನೀವು ಮಕ್ಕಳು ಎಂದೂ
ಸಹ ಮುರುಳಿಯನ್ನು ತಪ್ಪಿಸಬಾರದು. ಇದರ ಬಗ್ಗೆ ಬಹಳ ಗಮನವಿರಲಿ.
ಓಂ ಶಾಂತಿ.
ಮಧುರಾತಿ ಮಧುರ ಅಗಲಿಹೋಗಿ ಮರಳಿ ಸಿಕ್ಕಿರುವ ಮಕ್ಕಳಿಗೆ ಆತ್ಮೀಕ ತಂದೆಯು ಕೇಳುತ್ತಾರೆ - ನೀವು
ಯಾರ ನೆನಪಿನಲ್ಲಿ ಕುಳಿತಿದ್ದೀರಿ? (ತಂದೆ-ಶಿಕ್ಷಕ-ಸದ್ಗುರು) ಎಲ್ಲರೂ ಮೂವರ ನೆನಪಿನಲ್ಲಿ
ಕುಳಿತಿದ್ದೀರಾ? ಪ್ರತಿಯೊಬ್ಬರೂ ತಮ್ಮನ್ನು ತಾವು ಕೇಳಿಕೊಳ್ಳಿ - ಇಲ್ಲಿ ಕೇವಲ ಕುಳಿತೇ ನೆನಪು
ಮಾಡುತ್ತಿದ್ದೀರಾ ಅಥವಾ ನಡೆಯುತ್ತಾ- ತಿರುಗಾಡುತ್ತಾ ನೆನಪಿರುತ್ತದೆಯೋ? ಏಕೆಂದರೆ ಇದು ವಂಡರ್‌ಫುಲ್
ಮಾತಾಗಿದೆ. ಅನ್ಯ ಆತ್ಮಗಳಿಗೆ ಎಂದೂ ಸಹ ಈ ರೀತಿ ಹೇಳಲಾಗುವುದಿಲ್ಲ. ಒಂದುವೇಳೆ ಲಕ್ಷ್ಮಿ-ನಾರಾಯಣರು
ವಿಶ್ವದ ಮಾಲೀಕರಾಗಿದ್ದರೂ ಸಹ ಆ ಆತ್ಮನಿಗೂ ಸಹ ಇವರು ತಂದೆ-ಶಿಕ್ಷಕ-ಸದ್ಗುರುವೆಂದು
ಹೇಳಲಾಗುವುದಿಲ್ಲ. ಒಟ್ಟಾರೆ ಇಡೀ ಪ್ರಪಂಚದಲ್ಲಿ ಇರುವಂತಹ ಯಾವುದೇ ಜೀವಾತ್ಮಗಳಿಗೆ ಇದನ್ನು
ಹೇಳುವುದಿಲ್ಲ. ನೀವು ಮಕ್ಕಳು ಮಾತ್ರವೇ ಈ ರೀತಿ ನೆನಪು ಮಾಡುತ್ತೀರಿ. ನಿಮ್ಮ ಆಂತರ್ಯದಲ್ಲಿ
ತಂದೆಯು ತಂದೆಯೂ ಆಗಿದ್ದಾರೆ, ಶಿಕ್ಷಕನೂ ಆಗಿದ್ದಾರೆ ಹಾಗೂ ಸದ್ಗುರುವೂ ಸಹ ಆಗಿದ್ದಾರೆಂದು ನಿಮ್ಮ
ಆಂತರ್ಯದಲ್ಲಿ ಬರುತ್ತದೆ, ಅದರಲ್ಲಿಯೂ ಸಹ ಸರ್ವಶ್ರೇಷ್ಠನಾಗಿದ್ದಾರೆ. ಈ ಮೂವರನ್ನೂ ನೆನಪು
ಮಾಡುತ್ತೀರೋ ಅಥವಾ ಒಬ್ಬರನ್ನೋ? ಅವರು ಒಬ್ಬರೇ ಆಗಿದ್ದಾರೆ ಆದರೆ ಈ ಮೂರುಗುಣಗಳಿಂದ ನೆನಪು
ಮಾಡುತ್ತೀರಿ. ಶಿವತಂದೆಯು ನಮ್ಮ ತಂದೆಯೂ ಆಗಿದ್ದಾರೆ, ಶಿಕ್ಷಕ ಹಾಗೂ ಸದ್ಗುರುವೂ ಆಗಿದ್ದಾರೆ.
ಇದನ್ನು ವಿಶೇಷವೆಂದು ಕರೆಯಲಾಗುವುದು. ಇಲ್ಲಿ ಯಾವಾಗ ಕುಳಿತುಕೊಳ್ಳುತ್ತೀರಿ,
ನಡೆಯುತ್ತಾ-ಓಡಾಡುತ್ತೀರಿ, ಈ ನೆನಪಿನಲ್ಲಿ ಇರಬೇಕು. ತಂದೆಯೂ ಕೇಳುತ್ತಾರೆ - ಇವರು ನಮ್ಮ
ತಂದೆ-ಶಿಕ್ಷಕ- ಸದ್ಗುರುವಾಗಿದ್ದಾರೆಂದು ನೆನಪು ಮಾಡುತ್ತೀರಾ? ಈ ರೀತಿ ಯಾವುದೇ ದೇಹಧಾರಿಯಿರಲು
ಸಾಧ್ಯವಿಲ್ಲ, ದೇಹಧಾರಿಗಳಲ್ಲಿಯೂ ನಂಬರ್‌ವನ್ ಕೃಷ್ಣನಾಗಿದ್ದಾನೆ. ಆದರೂ ಸಹ ಕೃಷ್ಣನಿಗೆ
ತಂದೆ-ಶಿಕ್ಷಕ-ಸದ್ಗುರುವೆಂದು ಹೇಳಲು ಸಾಧ್ಯವಿಲ್ಲ. ಆದುದರಿಂದ ಮೂರು ರೂಪದಲ್ಲಿಯೂ ನೆನಪು
ಮಾಡುತ್ತೀರೆನ್ನುವುದನ್ನು ಸತ್ಯವಾಗಿ ಹೇಳಬೇಕು. ಊಟಕ್ಕೆ ಕುಳಿತುಕೊಂಡಾಗಲೂ ಶಿವತಂದೆಯ ನೆನಪಿನಲ್ಲಿ
ಕುಳಿತುಕೊಳ್ಳುತ್ತೀರೋ ಅಥವಾ ಮೂವರ ನೆನಪೂ ಬರುತ್ತಾರೆಯೋ? ಈ ರೀತಿ ಅನ್ಯ ಆತ್ಮಗಳು ಕೇಳುವುದಿಲ್ಲ.
ಇದು ವಂಡರ್‌ಫುಲ್ ಮಾತಾಗಿದೆ. ಇದು ತಂದೆಯ ವಿಚಿತ್ರ ಮಾತಾಗಿದೆ ಆದುದರಿಂದ ತಂದೆಯನ್ನೂ ಹಾಗೆಯೇ
ನೆನಪು ಮಾಡಬೇಕು. ತಂದೆಯಕಡೆ ಬುದ್ದಿಯು ತಾನೇ ತಾನಾಗಿ ಹೋಗುವಷ್ಟು ವಂಡರ್‌ಫುಲ್ ಆಗಿದ್ದಾರೆ.
ತಂದೆಯೇ ಕುಳಿತು ತನ್ನ ಪರಿಚಯವನ್ನು ಕೊಡುತ್ತಾರೆ, ನಂತರ ಇಡೀ ಚಕ್ರದ ಜ್ಞಾನವನ್ನು ಕೊಡುತ್ತಾರೆ.
ಈಗ ಇಂತಹದ್ದಾಗಿದೆ, ಇಷ್ಟು ವರ್ಷಗಳಾಗಿದೆ ಎಂಬುದು ತಿರುಗುತ್ತಿರುತ್ತದೆ. ಈ ಜ್ಞಾನವನ್ನೂ ಆ
ರಚಯಿತ ತಂದೆಯೇ ಕೊಡುತ್ತಾರೆ ಆದುದರಿಂದ ಅವರನ್ನು ನೆನಪು ಮಾಡುವುದರಲ್ಲಿ ಬಹಳ ಸಹಯೋಗ ಸಿಗುತ್ತದೆ.
ತಂದೆ-ಶಿಕ್ಷಕ- ಸದ್ಗುರು - ಒಬ್ಬರೇ ಆಗಿದ್ದಾರೆ. ಇಷ್ಟೊಂದು ಶ್ರೇಷ್ಠಾತ್ಮರು ಅನ್ಯರಾರೂ ಆಗಲು
ಸಾಧ್ಯವಿಲ್ಲ ಆದರೆ ಮಾಯೆಯು ಇಂತಹ ತಂದೆಯನ್ನೂ ಸಹ ಮರೆಯುವಂತೆ ಮಾಡಿ ಶಿಕ್ಷಕ ಹಾಗೂ ಗುರುವನ್ನು
ಮರೆಸಿಬಿಡುತ್ತದೆ. ಇದನ್ನು ಪ್ರತಿಯೊಬ್ಬರೂ ಸಹ ತಮಗೆ ತಾವು ಕೇಳಿಕೊಳ್ಳಬೇಕು. ತಂದೆಯು ನಮ್ಮನ್ನು
ಇಂತಹ ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆ. ಬೇಹದ್ದಿನ ತಂದೆಯ ಆಸ್ತಿಯೂ ಸಹ
ಬೇಹದ್ದಿನದಾಗಿರುತ್ತದೆ. ಜೊತೆಜೊತೆಯಲ್ಲಿ ಅವರ ಮಹಿಮೆಯೂ ಸಹ ಬುದ್ದಿಯಲ್ಲಿ ಬರಲಿ,
ನಡೆಯುತ್ತಾ-ಓಡಾಡುತ್ತಾ ಮೂವರ ನೆನಪು ಬರಲಿ. ಈ ಒಂದು ಆತ್ಮನಿಗೆ ಮಾತ್ರ ಮೂರುಸೇವೆಯೂ
ಜೊತೆಜೊತೆಯಲ್ಲಿದೆ ಆದುದರಿಂದ ಅವರಿಗೆ ಸರ್ವೋತ್ತಮರೆಂದು ಕರೆಯಲಾಗುವುದು.
ಈಗ ಸಮ್ಮೇಳನ
ಮೊದಲಾದುವುಗಳಲ್ಲಿ ಕರೆಯುತ್ತೀರಿ. ವಿಶ್ವದಲ್ಲಿ ಹೇಗೆ ಶಾಂತಿಯಿತ್ತೆಂದು ಹೇಳುತ್ತಾರೆ. ಈಗ ಅದು
ಆಗುತ್ತಿದೆ ಬಂದು ತಿಳಿದುಕೊಳ್ಳಿ. ಯಾರು ಶಾಂತಿಸ್ಥಾಪನೆ ಮಾಡುತ್ತಿದ್ದಾರೆ? ಆಗ ನೀವು ತಂದೆಯ
ಕರ್ತವ್ಯವನ್ನು ಸಿದ್ಧ ಮಾಡಿ ತಿಳಿಸಬೇಕು. ತಂದೆ ಹಾಗೂ ಕೃಷ್ಣನ ಕರ್ತವ್ಯದಲ್ಲಿ ಬಹಳ ಅಂತರವಿದೆ.
ಅನ್ಯರೆಲ್ಲರ ಹೆಸರನ್ನು ಶರೀರದ ಹೆಸರಿನಿಂದ ಗುರುತಿಸಲಾಗುತ್ತದೆ. ಆ ಶರೀರದಲ್ಲಿರುವ ಆತ್ಮದ
ಹೆಸರನ್ನು ಗಾಯನ ಮಾಡಲಾಗುತ್ತದೆ, ಆ ಆತ್ಮವು ತಂದೆಯೂ ಆಗಿದ್ದಾರೆ, ಶಿಕ್ಷಕ-ಗುರುವೂ ಆಗಿದ್ದಾರೆ.
ಆತ್ಮನಲ್ಲಿ ಜ್ಞಾನವಿದೆ ಆದರೆ ಅದನ್ನು ಹೇಗೆ ಕೊಡುವುದು? ಶರೀರದ ಮೂಲಕ ಕೊಡುತ್ತಾರಲ್ಲವೆ. ಯಾವಾಗ
ಕೊಡುತ್ತಾರೆಯೋ ಆಗ ಅವರ ಮಹಿಮೆ ಮಾಡಲಾಗುತ್ತದೆ. ಶಿವಜಯಂತಿಯಲ್ಲಿ ಮಕ್ಕಳು ಸಮ್ಮೇಳನ ಮಾಡುತ್ತಾರೆ,
ಎಲ್ಲಾ ಧರ್ಮದ ನೇತರನ್ನೂ ಆಹ್ವಾನಿಸುತ್ತಾರೆ ಆಗ ನೀವು ಈಶ್ವರ ಸರ್ವವ್ಯಾಪಿಯಲ್ಲ ಎಂದು ತಿಳಿಸಬೇಕು.
ಒಂದುವೇಳೆ ಎಲ್ಲರಲ್ಲಿಯೂ ಈಶ್ವರನಿದ್ದಾನೆಂದಾಗ ಪ್ರತಿಯೊಂದು ಆತ್ಮವು ತಂದೆಯೂ, ಶಿಕ್ಷಕನೂ, ಗುರುವೂ
ಸಹ ಆಗಿದ್ದಾರೆಯೇ! ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಜ್ಞಾನವಿದೆಯೇ? ಹೇಳಿ. ಇದನ್ನಂತೂ ಯಾರೂ ಸಹ ಹೇಳಲು
ಸಾಧ್ಯವಿಲ್ಲ.
ನೀವು ಮಕ್ಕಳ
ಆಂತರ್ಯದಲ್ಲಿ ಬರಬೇಕಾಗಿದೆ - ತಂದೆಯದು ಎಷ್ಟೊಂದು ಶ್ರೇಷ್ಠಾತಿಶ್ರೇಷ್ಠ ಮಹಿಮೆಯಿದೆ, ಅವರು ಇಡೀ
ವಿಶ್ವವನ್ನು ಪಾವನ ಮಾಡುವವರಾಗಿದ್ದಾರೆ. ಪ್ರಕೃತಿಯೂ ಸಹ ಪಾವನವಾಗಿಬಿಡುತ್ತದೆ. ಸಮ್ಮೇಳನದಲ್ಲಿ
ಮೊಟ್ಟಮೊದಲು ನೀವು ಗೀತೆಯ ಭಗವಂತನು ಯಾರು ಎಂದು ಕೇಳುತ್ತೀರಿ. ಸತ್ಯಯುಗೀ ದೇವಿ-ದೇವತಾಧರ್ಮದ
ಸ್ಥಾಪನೆ ಮಾಡುವವರು ಯಾರು? ಒಂದುವೇಳೆ ಕೃಷ್ಣನೆಂದು ಹೇಳಿದರೆ ತಂದೆಯನ್ನು ಮರೆಮಾಡುತ್ತಾರೆ ಅಥವಾ
ನಾಮ- ರೂಪದಿಂದ ಭಿನ್ನ ಎಂದು ಹೇಳಿಬಿಡುತ್ತಾರೆ ಅಂದರೆ ಅವರು ಇಲ್ಲವೇ ಇಲ್ಲವೆಂದರ್ಥವಾಗಿದೆ.
ಹಾಗಾದರೆ ತಂದೆಯಿಲ್ಲದೆ ಅನಾಥರಾಗಿಬಿಟ್ಟರಲ್ಲವೆ! ಬೇಹದ್ದಿನ ತಂದೆಯನ್ನೇ ತಿಳಿದುಕೊಂಡಿಲ್ಲ.
ಪರಸ್ಪರ ಕಾಮವಿಕಾರದಿಂದ ಕಷ್ಟಕೊಡುತ್ತಾರೆ. ಪರಸ್ಪರ ದುಃಖವನ್ನು ಕೊಡುತ್ತಾರೆ ಅಂದಾಗ ಈ ಎಲ್ಲಾ
ಮಾತುಗಳು ನಿಮ್ಮ ಬುದ್ಧಿಯಲ್ಲಿ ವಿಚಾರವು ನಡೆಯಬೇಕು. ಈ ಲಕ್ಷ್ಮಿ - ನಾರಾಯಣರು ಭಗವಾನ್-
ಭಗವತಿಯಾಗಿದ್ದಾರೆ, ಅವರ ವಂಶಾವಳಿಯೂ ಇದೆಯಲ್ಲವೆ. ಈ ರೀತಿ ಹೋಲಿಕೆಯನ್ನು ತಿಳಿಸಬೇಕು ಆಗ
ಅಗತ್ಯವಾಗಿ ಎಲ್ಲರೂ ದೇವಿ-ದೇವತೆಗಳಾಗಿರಬೇಕು. ನೀವು ಎಲ್ಲಾ ಧರ್ಮದವರನ್ನು ಆಹ್ವಾನಿಸಿ, ಅವರಿಗೆ
ತಂದೆಯ ಪರಿಚಯವನ್ನು ಕೊಡಲು ನಿಮ್ಮಲ್ಲಿ ಯಾರು ಬಹಳ ಒಳ್ಳೆಯ ವಿದ್ಯಾವಂತರಿದ್ದಾರೆ, ತಂದೆಯ ಪರಿಚಯ
ಕೊಡಲು ಸಾಧ್ಯವಿದೆ ಅಂತಹವರನ್ನು ಆಹ್ವಾನಿಸಬೇಕು. ನೀವು ಹೀಗೆ ಬರೆಯಬಹುದು - ಯಾರು ಇಲ್ಲಿಗೆ ಬಂದು
ರಚಯಿತ ಹಾಗೂ ರಚನೆಯ ಆದಿ-ಮಧ್ಯ-ಅಂತ್ಯದ ಪರಿಚಯವನ್ನು ಕೊಡುತ್ತಾರೆಯೋ ಅವರಿಗಾಗಿ ನಾವು ಬಂದು-
ಹೋಗಲು, ಇರಲು ಎಲ್ಲದರ ಪ್ರಬಂಧವನ್ನು ಮಾಡುತ್ತೇವೆ. ಇದನ್ನಂತೂ ತಿಳಿದಿದ್ದೀರಿ - ಯಾರೂ ಸಹ ಈ
ಜ್ಞಾನವನ್ನು ಕೊಡಲು ಸಾಧ್ಯವಿಲ್ಲ. ಒಂದುವೇಳೆ ಯಾರಾದರೂ ವಿದೇಶದಿಂದ ಬರಲಿ, ರಚಯಿತ ಹಾಗೂ ರಚನೆಯ
ಆದಿ-ಮಧ್ಯ- ಅಂತ್ಯದ ಪರಿಚಯವನ್ನು ಕೊಟ್ಟರೆ ನಾವೇ ಅದಕ್ಕಾಗಿ ಖರ್ಚನ್ನು ಕೊಡುತ್ತೇವೆ. ಇಂತಹ
ಜಾಹೀರಾತುಗಳ ಮೂಲಕ ಯಾರೂ ಸಹ ಪ್ರಚಾರ ಮಾಡಲು ಸಾಧ್ಯವಿಲ್ಲ. ನೀವು ಬಹದ್ದೂರ್ ಅಲ್ಲವೆ,
ಮಹಾವೀರ-ಮಹಾವೀರಿಣಿಯರಾಗಿದ್ದೀರಿ. ನಿಮಗೆ ತಿಳಿದಿದೆ - ಇವರು (ಲಕ್ಷ್ಮಿ-ನಾರಾಯಣ) ವಿಶ್ವದ
ರಾಜ್ಯಭಾಗ್ಯವನ್ನು ಪಡೆದರು, ಯಾವ ಬಹದ್ದೂರಿತನವನ್ನು ತೋರಿಸಿದರು? ಬುದ್ಧಿಯಲ್ಲಿ ಈ ಎಲ್ಲಾ
ಮಾತುಗಳು ಬರಬೇಕು, ನೀವು ಎಷ್ಟೊಂದು ಶ್ರೇಷ್ಠಕಾರ್ಯವನ್ನು ಮಾಡುತ್ತಿದ್ದೀರಿ, ಇಡೀ ವಿಶ್ವವನ್ನು
ಪಾವನ ಮಾಡುತ್ತಿದ್ದೀರಿ ಆದುದರಿಂದ ತಂದೆಯನ್ನು ನೆನಪು ಮಾಡಬೇಕು, ಆಸ್ತಿಯನ್ನೂ ನೆನಪು ಮಾಡಬೇಕು.
ಕೇವಲ ಶಿವತಂದೆಯು ನೆನಪಿದ್ದಾರೆಂದಲ್ಲ, ಅವರ ಮಹಿಮೆಯನ್ನು ತಿಳಿಸಬೇಕು. ಇದು ನಿರಾಕಾರನ
ಮಹಿಮೆಯಾಗಿದೆ ಆದರೆ ನಿರಾಕಾರನು ತನ್ನ ಪರಿಚಯವನ್ನು ಹೇಗೆ ಕೊಡುತ್ತಾರೆ? ಅಗತ್ಯವಾಗಿ ರಚನೆಯ ಆದಿ-
ಮಧ್ಯ-ಅಂತ್ಯದ ಜ್ಞಾನವನ್ನು ಕೊಡಲು ಮುಖ ಬೇಕಲ್ಲವೆ. ಮುಖದ ಮಹಿಮೆಯೂ ಎಷ್ಟೊಂದಿದೆ. ಮನುಷ್ಯರು
ಗೋಮುಖವೆಂದು ಹೋಗುತ್ತಾರೆ, ಎಷ್ಟೊಂದು ಕಷ್ಟಪಡುತ್ತಾರೆ. ಎಂತೆಂತಹ ಮಾತುಗಳನ್ನು
ಮಾಡಿಬಿಟ್ಟಿದ್ದಾರೆ! ಬಾಣ ಬಿಟ್ಟಾಗ ಗಂಗೆಯು ಬಂದಿತು ಎಂದು ಹೇಳುತ್ತಾರೆ, ಆ ಗಂಗೆಯನ್ನು
ಪತಿತ-ಪಾವನಿ ಎಂದು ತಿಳಿಯುತ್ತಾರೆ. ಈಗ ಗಂಗೆಯು ಹೇಗೆ ಪತಿತರಿಂದ ಪಾವನ ಮಾಡಲು ಸಾಧ್ಯ?
ಪತಿತ-ಪಾವನ ಒಬ್ಬ ತಂದೆಯೇ ಆಗಿದ್ದಾರೆ. ಹೀಗೆ ತಂದೆಯು ನೀವು ಮಕ್ಕಳಿಗೆ ಎಷ್ಟೊಂದು
ಕಲಿಸುತ್ತಿರುತ್ತಾರೆ. ತಂದೆಯಂತೂ ತಿಳಿಸುತ್ತಾರೆ - ಯಾರು ಬಂದು ತಂದೆ, ರಚಯಿತ ಹಾಗೂ ರಚನೆಯ
ಪರಿಚಯವನ್ನು ಕೊಡುತ್ತೀರಿ, ಸಾಧು-ಸಂತ ಮೊದಲಾದವರೂ ಸಹ ಇದನ್ನು ತಿಳಿದುಕೊಂಡಿಲ್ಲ. ಋಷಿ-ಮುನಿ
ಮೊದಲಾದವರೂ ಸಹ ನೇತಿ-ನೇತಿ ಎಂದು ಹೇಳುತ್ತಾರೆ ಅಂದರೆ ನಾವು ತಿಳಿದುಕೊಂಡಿಲ್ಲ ಅರ್ಥಾತ್
ನಾಸ್ತಿಕರಾಗಿದ್ದರು ಎಂದರ್ಥ. ಈಗ ನೋಡಿ, ಯಾರಾದರೂ ನಾಸ್ತಿಕರು ಬರುತ್ತಾರೆಯೇ? ಈಗ ನೀವು ಮಕ್ಕಳು
ನಾಸ್ತಿಕರಿಂದ ಆಸ್ತಿಕರಾಗುತ್ತಿದ್ದೀರಿ. ನೀವು ಬೇಹದ್ದಿನ ತಂದೆಯನ್ನು ತಿಳಿದುಕೊಂಡಿದ್ದೀರಿ,
ಅಂದಾಗ ತಂದೆಯು ನಿಮ್ಮನ್ನು ಶ್ರೇಷ್ಠರನ್ನಾಗಿ ಮಾಡುತ್ತಾರೆ. ಓ ಪರಮಪಿತ ಪರಮಾತ್ಮ, ನಮ್ಮನ್ನು
ಬಿಡುಗಡೆ ಮಾಡು ಎಂದು ಬೇಡುತ್ತಾರೆ. ತಂದೆಯು ತಿಳಿಸುತ್ತಾರೆ - ಈ ಸಮಯದಲ್ಲಿ ಇಡೀ ವಿಶ್ವದಲ್ಲಿ
ರಾವಣನ ರಾಜ್ಯವಿದೆ. ಎಲ್ಲರೂ ಭ್ರಷ್ಟಾಚಾರಿಗಳಾಗಿದ್ದಾರೆ ನಂತರ ಶ್ರೇಷ್ಠಾಚಾರಿಗಳು ಇರುತ್ತಾರಲ್ಲವೆ!
ನೀವು ಮಕ್ಕಳ ಬುದ್ದಿಯಲ್ಲಿದೆ - ಮೊದಲಿಗೆ ಪವಿತ್ರ ಪ್ರಪಂಚವಿತ್ತು, ತಂದೆಯು ಅಪವಿತ್ರ
ಪ್ರಪಂಚವನ್ನು ರಚಿಸುತ್ತಾರೇನು? ತಂದೆಯಂತೂ ಬಂದು ಪಾವನಪ್ರಪಂಚದ ಸ್ಥಾಪನೆ ಮಾಡುತ್ತಾರೆ, ಅದನ್ನು
ಶಿವಾಲಯವೆಂದು ಕರೆಯಲಾಗುವುದು. ಶಿವತಂದೆಯು ಶಿವಾಲಯವನ್ನು ಮಾಡುತ್ತಾರೆ, ಅದನ್ನು ಹೇಗೆ
ಮಾಡುತ್ತಾರೆಂದು ನೀವು ತಿಳಿದುಕೊಂಡಿದ್ದೀರಿ. ಮಹಾಪ್ರಳಯ, ಜಲಮಯ ವಾಗುವುದಿಲ್ಲ, ಶಾಸ್ತ್ರಗಳಲ್ಲಂತೂ
ಏನೇನೋ ಬರೆದುಬಿಟ್ಟಿದ್ದಾರೆ, ಪಂಚಪಾಂಡವರು ಉಳಿದು ಹಿಮಾಲಯಬೆಟ್ಟದ ಮೇಲೆ ಕರಗಿಹೋದರೆಂದು ಹೇಳುತ್ತಾ
ಅಂತಿಮ ಫಲಿತಾಂಶವೇ ಯಾರಿಗೂ ತಿಳಿಯದಾಗಿದೆ. ಈ ಎಲ್ಲಾ ಮಾತುಗಳನ್ನು ತಂದೆಯು ಕುಳಿತು ತಿಳಿಸುತ್ತಾರೆ.
ಇದನ್ನು ನೀವು ಮಾತ್ರವೇ ತಿಳಿದುಕೊಂಡಿದ್ದೀರಿ, ಆ ತಂದೆಯು ತಂದೆಯೂ ಆಗಿದ್ದಾರೆ, ಶಿಕ್ಷಕನೂ
ಆಗಿದ್ದಾರೆ, ಸದ್ಗುರುವೂ ಆಗಿದ್ದಾರೆ. ಅಲ್ಲಂತೂ ಈ ಮಂದಿರಗಳಿರುವುದಿಲ್ಲ. ಈ ದೇವತೆಗಳು ಇಲ್ಲಿ
ಇದ್ದು ಹೋಗಿರುವುದರಿಂದ ಅವರ ನೆನಪಾರ್ಥವಾಗಿ ಮಂದಿರಗಳಿವೆ. ಇದೆಲ್ಲವೂ ನಾಟಕದಲ್ಲಿ
ನೊಂದಾವಣೆಯಾಗಿದೆ. ಸೆಕೆಂಡ್ ಬೈ ಸೆಕೆಂಡ್ ಹೊಸ ಮಾತುಗಳಿರುತ್ತದೆ, ಚಕ್ರವು ಸುತ್ತುತ್ತಿರುತ್ತದೆ.
ಈಗ ತಂದೆಯು ಮಕ್ಕಳಿಗೆ ಒಳ್ಳೆಯ ಮಾರ್ಗದರ್ಶನ ಕೊಡುತ್ತಿರುತ್ತಾರೆ. ಬಹಳ ದೇಹಾಭಿಮಾನಿ ಮಕ್ಕಳು
ತಿಳಿದುಕೊಳ್ಳುತ್ತಾರೆ - ನಾವಂತೂ ಎಲ್ಲವನ್ನೂ ತಿಳಿದುಕೊಂಡಿದ್ದೇವೆ, ಮುರುಳಿಯ ಬಗ್ಗೆ ಗೌರವವೇ
ಇರುವುದಿಲ್ಲ ಆದ್ದರಿಂದ ತಂದೆಯು ಅಪ್ಪಣೆ ಮಾಡುತ್ತಾರೆ. ಕೆಲವೊಮ್ಮೆ ಮುರುಳಿಯು ಚೆನ್ನಾಗಿ
ನಡೆಯುತ್ತದೆ, ತಪ್ಪಿಸಬಾರದಾಗಿದೆ. 10-15 ದಿನದ ಮುರುಳಿ ತಪ್ಪಿಹೋಗುತ್ತದೆಯೆಂದರೆ ಅದನ್ನು ಕುಳಿತು
ಓದಬೇಕಾಗಿದೆ. ಇದನ್ನೂ ಸಹ ತಂದೆಯು ತಿಳಿಸುತ್ತಾರೆ – ಈ ರೀತಿ ಚಾಲೆಂಜ್ ಮಾಡಿ - ಇಲ್ಲಿ ರಚಯಿತ
ಹಾಗೂ ರಚನೆಯ ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ಬಂದುಕೊಟ್ಟರೆ ನಾವು ಅವರ ಖರ್ಚೆಲ್ಲವನ್ನೂ
ಕೊಡುತ್ತೇವೆ. ಇಂತಹ ಚಾಲೆಂಜನ್ನು ತಿಳಿದುಕೊಂಡಿರುವವರು ಪರಿಚಯವನ್ನು ಕೊಡುತ್ತಾರಲ್ಲವೆ. ಶಿಕ್ಷಕನು
ತಿಳಿದುಕೊಂಡಿರುವುದರಿಂದ ಅನ್ಯರನ್ನೂ ಕೇಳುತ್ತಾರಲ್ಲವೆ! ತಿಳಿಯದೇ ಏನು ಕೇಳುತ್ತಾರೆ?
ಕೆಲವು ಮಕ್ಕಳು
ಮುರುಳಿಯನ್ನೂ ಸಹ ನಿರ್ಲಕ್ಷಿಸುತ್ತಾರೆ. ನಮಗಂತೂ ಸೀದಾ ಶಿವತಂದೆಯ ಜೊತೆ ಸಂಬಂಧವಿದೆ ಎಂದು
ಹೇಳುತ್ತಾರೆ ಆದರೆ ಶಿವತಂದೆಯು ಏನನ್ನು ಹೇಳುತ್ತಾರೆಯೋ ಅದನ್ನೂ ಕೇಳಬೇಕಾಗಿರುವುದರ ವಿನಃ ಅವರನ್ನು
ಕೇವಲ ನೆನಪು ಮಾಡುವುದಷ್ಟೇ ಅಲ್ಲ. ತಂದೆಯು ಮಕ್ಕಳಿಗೆ ಬಹಳ ಮಧುರಾತಿ ಮಧುರ ಮಾತುಗಳನ್ನು
ತಿಳಿಸುತ್ತಾರೆ ಆದರೆ ಮಾಯೆಯು ಸಂಪೂರ್ಣವಾಗಿ ಅಭಿಮಾನಿಗಳನ್ನಾಗಿ ಮಾಡಿಬಿಡುತ್ತದೆ.
ಹೇಳುತ್ತಾರಲ್ಲವೆ – ಇಲಿಗೆ ಹರಿಶಿನದ ಗಂಟು ಸಿಕ್ಕಿದರೆ ನಾನೇ ಮಾಲೀಕನೆಂದು ತಿಳಿಯುತ್ತದೆ.
ಬಹಳಷ್ಟು ಮಕ್ಕಳು ಮುರುಳಿಯನ್ನು ಓದುವುದೇ ಇಲ್ಲ, ಮುರುಳಿಯಲ್ಲಿ ಹೊಸ-ಹೊಸ ಮಾತುಗಳು
ಬರುತ್ತಿರುತ್ತವೆ. ಆ ಎಲ್ಲಾ ಮಾತುಗಳು ತಿಳಿದುಕೊಳ್ಳುವಂತಹದ್ದಾಗಿದೆ. ಯಾವಾಗ ತಂದೆಯ ನೆನಪಿನಲ್ಲಿ
ಕುಳಿತುಕೊಳ್ಳುತ್ತೀರಿ ಆಗ ಆ ತಂದೆಯು ಶಿಕ್ಷಕನೂ ಆಗಿದ್ದಾರೆ ಹಾಗೂ ಸದ್ಗುರುವೂ ಆಗಿದ್ದಾರೆ ಎಂಬ
ನೆನಪಿರಬೇಕು. ಇಲ್ಲವೆಂದರೆ ಹೇಗೆ ಓದುತ್ತೀರಿ? ತಂದೆಯಂತೂ ಮಕ್ಕಳಿಗೆ ಎಲ್ಲವನ್ನೂ
ತಿಳಿಸಿಬಿಟ್ಟಿದ್ದಾರೆ. ಮಕ್ಕಳೇ ತಂದೆಯನ್ನು ಪ್ರತ್ಯಕ್ಷ ಮಾಡುತ್ತಾರಲ್ಲವೆ! 'ಸನ್ ಶೋಜ್ ಫಾದರ್'
ನಂತರ ಮಕ್ಕಳ ಪ್ರತ್ಯಕ್ಷತೆಯನ್ನು ತಂದೆಯು ಮಾಡುತ್ತಾರೆ. ನಂತರ ಮಕ್ಕಳ ಕೆಲಸ ತಂದೆಯನ್ನು
ಪ್ರತ್ಯಕ್ಷ ಮಾಡುವುದು. ನಂತರ ತಂದೆಯು ಬಿಡುತ್ತಾರೇನು! ಇಂತಹ ಸ್ಥಾನಕ್ಕೆ ಹೋಗಿ, ನೀವು ಇಂತಹ
ಸ್ಥಾನಕ್ಕೆ ಹೋಗಿ ಎಂದು ತಂದೆಯು ಹೇಳುತ್ತಾರೆ. ಅವರಿಗೆ ಯಾರೂ ಸಹ ಆದೇಶ ಕೊಡುವವರಿಲ್ಲ. ಈ ಎಲ್ಲಾ
ಆಮಂತ್ರಣವು ಸಮಾಚಾರ ಪತ್ರಿಕೆಯಲ್ಲಿ ಬರುತ್ತದೆ. ಈ ಸಮಯದಲ್ಲಿ ಇಡೀ ಪ್ರಪಂಚವು ನಾಸ್ತಿಕವಾಗಿದೆ,
ತಂದೆಯು ಬಂದು ಆಸ್ತಿಕರನ್ನಾಗಿ ಮಾಡುತ್ತಾರೆ. ಈ ಸಮಯವು ಇಡೀ ಪ್ರಪಂಚವೂ ನಯಾ ಪೈಸೆಗೆ ಸಮಾನವಾಗಿದೆ.
ಅಮೇರಿಕಾದವರ ಬಳಿ ಎಷ್ಟೊಂದು ಸಂಪತ್ತಿದೆ ಆದರೂ ಸಹ ನಯಾಪೈಸೆಗೆ ಸಮಾನವಾಗಿದೆ. ಇದೆಲ್ಲವೂ
ನಾಶವಾಗಿಬಿಡುತ್ತದೆ. ಇಡೀ ಪ್ರಪಂಚದಲ್ಲಿ ನೀವು ವರ್ತ್‌ಪೌಂಡ್ (ಶ್ರೇಷ್ಠ) ಆಗುತ್ತಿದ್ದೀರಿ. ಅಲ್ಲಿ
ಯಾರೂ ಸಹ ಬಡವರಿರುವುದೇ ಇಲ್ಲ.
ನೀವು ಮಕ್ಕಳು ಸದಾ
ಜ್ಞಾನದ ಸ್ಮರಣೆ ಮಾಡಿ ಹರ್ಷಿತರಾಗಿರಬೇಕಾಗಿದೆ. ಅದಕ್ಕಾಗಿ ಗಾಯನವಿದೆ- ಅತೀಂದ್ರಿಯ ಸುಖವನ್ನು
ಕೇಳಬೇಕೆಂದರೆ ಗೋಪ-ಗೋಪಿಕೆಯರನ್ನು ಕೇಳಿ, ಇದು ಸಂಗಮಯುಗದ ಮಾತುಗಳಾಗಿವೆ. ಸಂಗಮಯುಗವನ್ನು ಯಾರೂ
ಸಹ ತಿಳಿದುಕೊಂಡಿಲ್ಲ. ವಿಹಂಗಮಾರ್ಗದ ಸೇವೆಯನ್ನು ಮಾಡುವುದರಿಂದ ಬಹುಷಃ ಮಹಿಮೆಯಾಗಬಹುದು. ಅಹೋ
ಪ್ರಭು ನಿನ್ನ ಲೀಲೆ ಎಂಬ ಗಾಯನವೂ ಇದೆ. ಓಹೋ ಪ್ರಭು ನಿನ್ನ ಲೀಲೆಯೆಂದೂ ಗಾಯನವೂ ಇದೆ. ಭಗವಂತ ತಂದೆ,
ಶಿಕ್ಷಕ, ಸದ್ಗುರುವಾಗಿದ್ದಾರೆಂದು ಯಾರೂ ಸಹ ತಿಳಿದುಕೊಂಡಿಲ್ಲ. ಈಗ ತಂದೆಯಂತೂ ಮಕ್ಕಳಿಗೆ
ತಿಳಿಸಿಕೊಡುತ್ತಿರುತ್ತಾರೆ. ಮಕ್ಕಳಿಗೆ ಈ ನಶೆಯು ಸದಾ ಇರಬೇಕಾಗಿದೆ. ಅಂತ್ಯದವರೆಗೆ ಈ ನಶೆಯಿರಬೇಕು.
ಈಗಂತೂ ನಶೆಯು ಸೋಡಾ ವಾಟರ್ ಆಗಿಬಿಡುತ್ತದೆ. ಸೋಡಾ ಹಾಗೆಯೇ ಇರುತ್ತದೆಯಲ್ಲವೆ. ಸ್ವಲ್ಪಸಮಯ ಅದನ್ನು
ಹಾಗೆಯೇ ಇಟ್ಟರೆ ಉಪ್ಪು ನೀರಾಗಿಬಿಡುತ್ತದೆ. ಆ ರೀತಿಯಾಗಬಾರದು. ಯಾರಿಗಾದರೂ ತಿಳಿಸಿಕೊಟ್ಟಾಗ ಅವರು
ಆಶ್ಚರ್ಯಪಡಬೇಕು. ಈ ಜ್ಞಾನವು ಬಹಳ ಚೆನ್ನಾಗಿದೆ ಎಂದು ಹೇಳುತ್ತಾರೆ ಆದರೆ ಸಮಯವನ್ನು ತೆಗೆದು
ತಿಳಿದುಕೊಳ್ಳಬೇಕು. ಜೀವನವನ್ನು ಸಾಗಿಸುವುದು ಬಹಳ ಕಷ್ಟವಾಗುತ್ತದೆ. ವ್ಯಾಪಾರ ಮೊದಲಾದುವುಗಳನ್ನು
ಮಾಡಬಾರದೆಂದು ತಂದೆಯೇನು ಹೇಳುವುದಿಲ್ಲ. ಪವಿತ್ರರೂ ಆಗಿ ಮತ್ತು ನಾನು ಓದಿಸುವಂತಹದ್ದನ್ನು ನೆನಪು
ಮಾಡಿಕೊಳ್ಳಿ. ಇವರು ಶಿಕ್ಷಕರಾಗಿದ್ದಾರಲ್ಲವೆ ಹಾಗೂ ಇದು ಅಸಾಧಾರಣ ವಿದ್ಯೆಯಾಗಿದೆ. ಇದನ್ನು
ಮನುಷ್ಯರಾರೂ ಓದಿಸಲು ಸಾಧ್ಯವಿಲ್ಲ. ಅದಕ್ಕಾಗಿ ಭಾಗ್ಯಶಾಲಿ ರಥದಲ್ಲಿ ಬಂದು ಓದಿಸುತ್ತಾರೆ. ತಂದೆಯು
ತಿಳಿಸುತ್ತಾರೆ - ಇದು ನಿಮ್ಮ ಸಿಂಹಾಸನವಾಗಿದೆ, ಇದರಲ್ಲಿ ಅಕಾಲಮೂರ್ತಿ ಆತ್ಮವು ಬಂದು
ಕುಳಿತುಕೊಳ್ಳುತ್ತದೆ. ಆತ್ಮನಿಗೆ ಈ ಎಲ್ಲಾ ಪಾತ್ರವು ದೊರಕಿರುತ್ತದೆ. ಈಗ ಇದನ್ನು ನೀವು
ನಿಜಮಾತಾಗಿದೆಯೆಂದು ತಿಳಿದುಕೊಂಡಿದ್ದೀರಿ. ಉಳಿದೆಲ್ಲಾ ಮಾತುಗಳು ನಕಲಿ ಮಾತುಗಳಾಗಿವೆ. ಇವುಗಳನ್ನು
ಚೆನ್ನಾಗಿ ಧಾರಣೆ ಮಾಡಿ ಗಂಟುಹಾಕಿಕೊಳ್ಳಿ. ಅದಕ್ಕೆ ಕೈತಾಕಿದಾಗ ನೆನಪು ಬರುತ್ತದೆ. ಆದರೆ ಏಕೆ
ಗಂಟನ್ನು ಹಾಕಿಕೊಂಡೆವು ಎಂಬುದನ್ನು ಮರೆತುಬಿಡುತ್ತಾರೆ. ನೀವಂತೂ ಇದನ್ನು ಪಕ್ಕಾ ನೆನಪು
ಮಾಡಿಕೊಳ್ಳಬೇಕು. ತಂದೆಯ ನೆನಪಿನೊಂದಿಗೆ ಜ್ಞಾನವೂ ಬೇಕಾಗಿದೆ. ಮುಕ್ತಿಯಿದೆಯೆಂದಾಗ
ಜೀವನ್ಮುಕ್ತಿಯೂ ಇದೆ. ಬಹಳ-ಬಹಳ ಮಧುರ ಮಕ್ಕಳಾಗಿ, ತಂದೆಯು ತಿಳಿಯುತ್ತಾರೆ - ಕಲ್ಪ-ಕಲ್ಪವೂ ಈ
ಮಕ್ಕಳೇ ಓದುತ್ತಿರುತ್ತಾರೆ. ನಂಬರ್‌ವಾರ್ ಪುರುಷಾರ್ಥದನುಸಾರ ಆಸ್ತಿಯನ್ನು ಪಡೆಯುತ್ತಾರೆ ಆದರೂ
ಸಹ ಓದಿಸುವಂತಹ ಶಿಕ್ಷಕ ಪುರುಷಾರ್ಥ ಮಾಡಿಸುತ್ತಾರಲ್ಲವೆ. ನೀವು ಮತ್ತೆ-ಮತ್ತೆ ಮರೆತುಹೋಗುವ ಕಾರಣ
ನೆನಪನ್ನು ತರಿಸಲಾಗುತ್ತದೆ. ಶಿವತಂದೆಯನ್ನು ನೆನಪು ಮಾಡಿ, ಅವರು ತಂದೆ, ಶಿಕ್ಷಕ,
ಸದ್ಗುರುವಾಗಿದ್ದಾರೆ. ಚಿಕ್ಕಮಗು ಹೀಗೆ ನೆನಪು ಮಾಡುವುದಿಲ್ಲ. ಕೃಷ್ಣನಿಗೆ ತಂದೆ, ಶಿಕ್ಷಕ,
ಸದ್ಗುರುವಾಗಿದ್ದಾರೆಂದು ಈ ರೀತಿ ಹೇಳಲಾಗುತ್ತದೆಯೇನು? ಹೇಳುವುದಾದರೆ ಸತ್ಯಯುಗದ ರಾಜಕುಮಾರ
ಶ್ರೀಕೃಷ್ಣನು ಗುರು ಹೇಗಾಗುತ್ತಾನೆ? ದುರ್ಗತಿಯಲ್ಲಿ ಗುರುವು ಬೇಕಾಗುತ್ತದೆ. ಗಾಯನವೂ ಇದೆ -
ತಂದೆಯು ಬಂದು ಸರ್ವರ ಸದ್ಗತಿಯನ್ನು ಮಾಡುತ್ತಾರೆ. ಕೃಷ್ಣನನ್ನಂತೂ ಕಪ್ಪು ಇದ್ದಲಿನಂತೆ
ಮಾಡಿಬಿಡುತ್ತಾರೆ. ತಂದೆಯು ತಿಳಿಸುತ್ತಾರೆ - ಈ ಸಮಯ ಎಲ್ಲರೂ ಕಾಮಚಿತೆಯನ್ನೇರಿ ಕಪ್ಪು
ಇದ್ದಲಿನಂತೆ ತೋರಿಸಿದ್ದಾರೆ. ಆದ್ದರಿಂದ ಪತಿತ ಎಂದು ಹೇಳಲಾಗುವುದು. ಇವೆಲ್ಲವೂ ಎಷ್ಟೊಂದು
ತಿಳಿದುಕೊಳ್ಳುವ ಮಾತುಗಳಾಗಿವೆ. ಗೀತೆಯನ್ನಂತೂ ಎಲ್ಲರೂ ಓದುತ್ತಾರೆ, ಭಾರತವಾಸಿಗಳೇ ಎಲ್ಲಾ
ಶಾಸ್ತ್ರಗಳನ್ನು ಒಪ್ಪುತ್ತಾರೆ, ಎಲ್ಲರ ಚಿತ್ರಗಳನ್ನು ಇಡುತ್ತಾರೆ. ಅದಕ್ಕೆ ಹೇಳುವುದೇನು!
ವ್ಯಭಿಚಾರಿ ಭಕ್ತಿಯಾಯಿತಲ್ಲವೆ! ಒಬ್ಬ ಶಿವನದ್ದು ಅವ್ಯಭಿಚಾರಿ ಭಕ್ತಿಯಾಗಿದೆ, ಒಬ್ಬ ಶಿವನಿಂದಲೇ
ಜ್ಞಾನವು ಸಿಗುತ್ತದೆ, ಆ ಜ್ಞಾನವು ಭಿನ್ನವಾಗಿದೆ. ಇದನ್ನು ಆತ್ಮಿಕ ಜ್ಞಾನವೆಂದು ಕರೆಯಲಾಗುವುದು.
ಒಳ್ಳೆಯದು-
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್‌ದಾದಾರವರ ನೆನಪು ಪ್ರೀತಿ ಹಾಗೂ
ನಮಸ್ತೆ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ವಿನಾಶಿ
ನಶೆಯನ್ನು ಬಿಟ್ಟು ಈ ಅಲೌಕಿಕ ನಶೆಯಲ್ಲಿರಿ - ನಾವೀಗ ವರ್ತ್ ನಾಟ್ ಪೆನ್ನಿ (ಕನಿಷ್ಠ) ಯಿಂದ ವರ್ತ್‌ಪೌಂಡ್
(ಶ್ರೇಷ್ಠ) ಆಗುತ್ತಿದ್ದೇವೆ. ಸ್ವಯಂ ಭಗವಂತ ನಮಗೆ ಓದಿಸುತ್ತಿದ್ದಾರೆ. ನಮ್ಮ ವಿದ್ಯೆಯು
ಅಸಾಮಾನ್ಯವಾಗಿದೆ.
2. ಆಸ್ತಿಕರಾಗಿ ತಂದೆಯ
ಶೋ ಮಾಡುವ ಸೇವೆ ಮಾಡಬೇಕು. ಎಂದಿಗೂ ಅಹಂಕಾರದಲ್ಲಿ ಬಂದು ಮುರುಳಿಯನ್ನು ತಪ್ಪಿಸಬಾರದು.
ವರದಾನ:
ಪವಿತ್ರತೆಯ
ಬುನಾದಿಯ ಮೂಲಕ ಸದಾ ಶ್ರೇಷ್ಠ ಕರ್ಮವನ್ನು ಮಾಡುವಂತಹ ಪೂಜ್ಯಾತ್ಮ ಭವ.
ಪವಿತ್ರತೆಯು
ಪೂಜ್ಯರನ್ನಾಗಿ ಮಾಡಿಸುತ್ತದೆ. ಪೂಜ್ಯರು ಅವರೇ ಆಗುವರು, ಯಾರು ಸದಾ ಶ್ರೇಷ್ಠ ಕರ್ಮವನ್ನು
ಮಾಡುತ್ತಾರೆ. ಆದರೆ ಪವಿತ್ರತೆಯು ಕೇವಲ ಬ್ರಹ್ಮಚರ್ಯವಲ್ಲ, ಮನಸ್ಸಾ ಸಂಕಲ್ಪದಲ್ಲಿಯೂ, ಯಾರ
ಪ್ರತಿಯೂ ನಕಾರಾತ್ಮಕ ಸಂಕಲ್ಪದ ಉತ್ಪತ್ತಿಯಾಗಬಾರದು, ಮಾತೂ ಸಹ ಆಯಥಾರ್ಥವಿರಬಾರದು, ಸಂಬಂಧ -ಸಂಪರ್ಕದಲ್ಲಿಯೂ
ಅಂತರವಿರಬಾರದು, ಎಲ್ಲರೊಂದಿಗೂ ಒಂದೇ ರೀತಿ, ಒಂದೇ ಸಂಬಂಧವಿರಲಿ. ಮನಸ್ಸಾ - ವಾಚಾ-ಕರ್ಮಣಾ
ಯಾವುದರಲ್ಲಿಯೂ ಪವಿತ್ರತೆಯ ಖಂಡನೆಯಾಗಬಾರದು, ಆಗಲೇ ಪೂಜ್ಯಾತ್ಮ ಎಂದು ಹೇಳಲಾಗುತ್ತದೆ. ನಾನು ಪರಮ
ಪೂಜ್ಯ ಆತ್ಮನಾಗಿದ್ದೇನೆ - ಈ ಸ್ಮೃತಿಯಿಂದ ಪವಿತ್ರತೆಯ ಬುನಾದಿಯನ್ನು ಶಕ್ತಿಶಾಲಿಯನ್ನಾಗಿ ಮಾಡಿರಿ.
ಸ್ಲೋಗನ್:
ಸದಾ ಇದೇ
ಅಲೌಕಿಕ ನಶೆಯಿರಲಿ - "ವಾಹ್ ನಾನಾತ್ಮನೇ", ಆಗ ಮನಸ್ಸು ಮತ್ತು ತನುವಿನಿಂದ ಸ್ವಾಭಾವಿಕ ಖುಷಿಯ
ನರ್ತನ ಮಾಡುತ್ತಿರುತ್ತೀರಿ.