19.12.24         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ಈ ಪುರುಷೋತ್ತಮ ಸಂಗಮಯುಗವು ವರ್ಗಾವಣೆಯಾಗುವ ಯುಗವಾಗಿದೆ, ಈಗ ನೀವು ಕನಿಷ್ಠರಿಂದ ಉತ್ತಮ ಪುರುಷರಾಗಬೇಕಾಗಿದೆ”

ಪ್ರಶ್ನೆ:
ತಂದೆಯ ಜೊತೆಜೊತೆಗೆ ಎಂತಹ ಮಕ್ಕಳ ಮಹಿಮೆಯನ್ನು ಗಾಯನ ಮಾಡಲಾಗುತ್ತದೆ?

ಉತ್ತರ:
ಯಾರು ಶಿಕ್ಷಕರಾಗಿ ಅನೇಕರ ಕಲ್ಯಾಣ ಮಾಡಲು ನಿಮಿತ್ತರಾಗುತ್ತಾರೆಯೋ ಅವರ ಮಹಿಮೆಯೂ ಸಹ ತಂದೆಯ ಜೊತೆಜೊತೆಯಲ್ಲಿ ಗಾಯನವಾಗುತ್ತದೆ. ಮಾಡಿ-ಮಾಡಿಸುವಂತಹ ತಂದೆಯು ಮಕ್ಕಳಿಂದ ಅನೇಕರ ಕಲ್ಯಾಣ ಮಾಡಿಸುತ್ತಾರೆ ಆದ್ದರಿಂದ ಮಕ್ಕಳಿಗೂ ಮಹಿಮೆಯಾಗುತ್ತದೆ. ಹೇಳುತ್ತಾರೆ - ಬಾಬಾ, ನಮ್ಮ ಮೇಲೆ ದಯೆತೋರಿದರು. ನಾವು ಹೇಗಿದ್ದವರು ಹೇಗಾಗಿಬಿಟ್ಟೆವು! ಶಿಕ್ಷಕರಾಗದ ವಿನಃ ಆಶೀರ್ವಾದಗಳು ಸಿಗುವುದಿಲ್ಲ.

ಓಂ ಶಾಂತಿ.
ಆತ್ಮಿಕ ತಂದೆಯು ಆತ್ಮಿಕ ಮಕ್ಕಳಿಗೆ ಹೇಳುತ್ತಾರೆ. ತಿಳಿಸಿಕೊಡುತ್ತಾರೆ ಮತ್ತೆ ಕೇಳುತ್ತಲೂ ಇರುತ್ತಾರೆ. ಈಗ ಮಕ್ಕಳು ತಂದೆಯನ್ನು ಅರಿತಿದ್ದೀರಿ. ಭಲೆ ಕೆಲವರು ಸರ್ವವ್ಯಾಪಿಯೆಂದೂ ಹೇಳುತ್ತಾರೆ ಆದರೆ ಅದಕ್ಕೆ ಮೊದಲು ತಂದೆಯು ಯಾರೆಂಬುದನ್ನು ಅರಿತುಕೊಳ್ಳಬೇಕಲ್ಲವೆ. ಅರಿತುಕೊಂಡು ನಂತರ ಹೇಳಬೇಕು - ತಂದೆಯ ನಿವಾಸಸ್ಥಾನವು ಎಲ್ಲಿದೆ? ತಂದೆಯನ್ನು ಅರಿತುಕೊಂಡೇ ಇಲ್ಲವೆಂದರೆ ಅವರ ನಿವಾಸಸ್ಥಾನದ ಬಗ್ಗೆ ಹೇಗೆ ತಿಳಿಯುತ್ತದೆ? ಅವರು ನಾಮ-ರೂಪದಿಂದ ಭಿನ್ನವಾಗಿದ್ದಾರೆ ಎಂದು ಹೇಳುತ್ತಾರೆ ಅಂದರೆ ಅರ್ಥ ಅವರು ಇಲ್ಲವೇ ಇಲ್ಲ ಎಂದು. ಅಂದಮೇಲೆ ಯಾವ ವಸ್ತುವಿಲ್ಲವೋ ಅದು ಇರುವ ಸ್ಥಾನದ ಬಗ್ಗೆ ಹೇಗೆ ವಿಚಾರ ಮಾಡುವುದು? ಇದನ್ನು ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ತಂದೆಯು ಮೊಟ್ಟಮೊದಲಿಗೆ ತಮ್ಮ ಪರಿಚಯವನ್ನು ಕೊಡುತ್ತಾರೆ ನಂತರ ಇರುವಂತಹ ಸ್ಥಾನವನ್ನು ತಿಳಿಸಿದ್ದಾರೆ. ಮಕ್ಕಳೇ, ನಾನು ಈ ರಥದ ಮೂಲಕ ಪರಿಚಯವನ್ನು ಕೊಡಲು ಬಂದಿದ್ದೇನೆ. ನಾನು ನಿಮ್ಮೆಲ್ಲರ ತಂದೆಯಾಗಿದ್ದೇನೆ. ಯಾರಿಗೆ ಪರಮಪಿತನೆಂದು ಹೇಳಲಾಗುತ್ತದೆ. ಆತ್ಮನನ್ನೇ ಯಾರೂ ತಿಳಿದುಕೊಂಡಿಲ್ಲ. ತಂದೆಯ ನಾಮ, ರೂಪ, ದೇಶ, ಕಾಲವನ್ನೇ ಅರಿತುಕೊಂಡಿಲ್ಲವೆಂದರೆ ಮತ್ತೆ ಮಕ್ಕಳ ಪರಿಚಯವೆಲ್ಲಿಂದ ಬರುತ್ತದೆ. ತಂದೆಯೇ ನಾಮ-ರೂಪದಿಂದ ಭಿನ್ನರಾಗಿರುವರೆಂದರೆ ಮತ್ತೆ ಮಕ್ಕಳೆಲ್ಲಿಂದ ಬಂದರು. ಮಕ್ಕಳು ಇರುವರೆಂದರೆ ಅವಶ್ಯವಾಗಿ ತಂದೆಯೂ ಇದ್ದಾರೆ. ಇದರಿಂದಲೇ ಅವರು ನಾಮ, ರೂಪದಿಂದ ಭಿನ್ನವಾಗಿಲ್ಲವೆಂಬುದು ಸಿದ್ಧವಾಗುತ್ತದೆ. ಮಕ್ಕಳಿಗೂ ನಾಮ, ರೂಪವಿದೆ. ಭಲೆ ಎಷ್ಟೇ ಸೂಕ್ಷ್ಮವಾಗಿರಬಹುದು, ಆಕಾಶವು ಸೂಕ್ಷ್ಮವಾಗಿದೆ ಆದರೂ ಸಹ ಆಕಾಶವೆಂದು ಹೆಸರಿದೆಯಲ್ಲವೆ. ಹೇಗೆ ಈ ಆಕಾಶವು ಸೂಕ್ಷ್ಮವಾಗಿದೆಯೋ ಹಾಗೆಯೇ ತಂದೆಯೂ ಬಹಳ ಸೂಕ್ಷ್ಮವಾಗಿದ್ದಾರೆ. ಮಕ್ಕಳು ವರ್ಣನೆ ಮಾಡುತ್ತೀರಿ. ತಂದೆಯು ಅದ್ಭುತ ನಕ್ಷತ್ರವಾಗಿದ್ದಾರೆ. ಆ ತಂದೆಯು ಇವರಲ್ಲಿ (ಬ್ರಹ್ಮ) ಪ್ರವೇಶ ಮಾಡುತ್ತಾರೆ, ಇವರಿಗೆ ಆತ್ಮನೆಂದು ಹೇಳುತ್ತಾರೆ. ತಂದೆಯು ಪರಮಧಾಮದಲ್ಲಿಯೇ ಇರುತ್ತಾರೆ. ಅದು ಇರುವ ಸ್ಥಾನವಾಗಿದೆ. ಬುದ್ಧಿಯು ಮೇಲೆ ಹೋಗುತ್ತದೆಯಲ್ಲವೆ. ಬೆರಳನ್ನು ಮೇಲಕ್ಕೆ ತೋರಿಸಿ ನೆನಪು ಮಾಡುತ್ತಾರೆ ಅಂದಮೇಲೆ ಅವಶ್ಯವಾಗಿ ಯಾರನ್ನು ನೆನಪು ಮಾಡುವರೋ ಅವರು ಇದ್ದಾರೆಂದರ್ಥ. ಪರಮಪಿತ ಪರಮಾತ್ಮ ಎಂದು ಹೇಳುತ್ತಾರಲ್ಲವೆ. ಆದರೂ ಸಹ ಮತ್ತೆ ನಾಮ, ರೂಪದಿಂದ ಭಿನ್ನ ಎಂದು ಹೇಳುವುದು ಅಜ್ಞಾನವಾಗಿದೆ. ತಂದೆಯನ್ನು ಅರಿತುಕೊಳ್ಳುವುದಕ್ಕೆ ಜ್ಞಾನವೆಂದು ಹೇಳಲಾಗುತ್ತದೆ. ನೀವೂ ಸಹ ತಿಳಿದುಕೊಂಡಿದ್ದೀರಿ - ಮೊದಲು ನಾವು ಅಜ್ಞಾನಿಗಳಾಗಿದ್ದೆವು. ತಂದೆಯನ್ನೂ ತಿಳಿದುಕೊಂಡಿರಲಿಲ್ಲ, ತಮ್ಮನ್ನೂ ತಿಳಿದುಕೊಂಡಿರಲಿಲ್ಲ, ಈಗ ತಿಳಿದುಕೊಂಡಿದ್ದೀರಿ - ನಾವಾತ್ಮಗಳಾಗಿದ್ದೇವೆ, ಈ ಶರೀರವಲ್ಲ. ಆತ್ಮಕ್ಕೆ ಅವಿನಾಶಿ ಎಂದು ಹೇಳಲಾಗುತ್ತದೆ ಅಂದಮೇಲೆ ಆತ್ಮವೆನ್ನುವ ಯಾವುದೋ ವಸ್ತುವಿದೆಯಲ್ಲವೆ. ಅವಿನಾಶಿ ಎಂಬುದು ಯಾವುದೇ ಹೆಸರಿಲ್ಲ. ಅವಿನಾಶಿ ಎಂದರೆ ಅದು ವಿನಾಶವನ್ನು ಹೊಂದುವುದಿಲ್ಲವೆಂದರ್ಥ. ಅಂದಮೇಲೆ ಅಂತಹ ಯಾವುದೋ ವಸ್ತುವಿದೆ! ಮಕ್ಕಳಿಗೆ ಬಹಳ ಚೆನ್ನಾಗಿ ತಿಳಿಸಿದ್ದಾರೆ. ಮಧುರಾತಿ ಮಧುರ ಮಕ್ಕಳು, ಯಾರಿಗೆ ಮಕ್ಕಳೇ, ಮಕ್ಕಳೇ ಎಂದು ಹೇಳುವರೋ ಆ ಆತ್ಮಗಳು ಅವಿನಾಶಿಯಾಗಿದ್ದೀರಿ. ಇಲ್ಲಿ ಆತ್ಮಗಳ ತಂದೆ ಪರಮಪಿತ ಪರಮಾತ್ಮನ ಕುರಿತು ತಿಳಿಸುತ್ತಾರೆ. ಈ ಆಟವು ಒಂದೇಬಾರಿ ನಡೆಯುತ್ತದೆ. ಯಾವಾಗ ತಂದೆಯು ಬಂದು ಮಕ್ಕಳಿಗೆ ತಮ್ಮ ಪರಿಚಯವನ್ನು ಕೊಡುತ್ತಾರೆ - ಮಕ್ಕಳೇ, ನಾನೂ ಸಹ ಪಾತ್ರಧಾರಿಯಾಗಿದ್ದೇನೆ, ನಾನು ಹೇಗೆ ಪಾತ್ರವನ್ನಭಿನಯಿಸುತ್ತೇನೆಂದು ನಿಮ್ಮ ಬುದ್ಧಿಯಲ್ಲಿದೆ. ಹಳೆಯ ಅರ್ಥಾತ್ ಪತಿತ ಆತ್ಮಗಳನ್ನು ಹೊಸ, ಪಾವನರನ್ನಾಗಿ ಮಾಡುತ್ತಾರೆ. ಅದರಿಂದ ನಿಮ್ಮ ಶರೀರವೂ ಸಹ ಸತ್ಯಯುಗದಲ್ಲಿ ಪಾವನವಾಗಿರುತ್ತದೆ. ಇದು ಬುದ್ಧಿಯಲ್ಲಿದೆಯಲ್ಲವೆ.

ಈಗ ನೀವು ಬಾಬಾ, ಬಾಬಾ ಎಂದು ಹೇಳುತ್ತೀರಿ. ಈ ಪಾತ್ರವು ನಡೆಯುತ್ತಿದೆಯಲ್ಲವೆ. ಆತ್ಮವೇ ಹೇಳುತ್ತದೆ, ನಾವು ಮಕ್ಕಳನ್ನು ಶಾಂತಿಧಾಮ, ಮನೆಗೆ ಕರೆದುಕೊಂಡು ಹೋಗಲು ತಂದೆಯು ಬಂದಿದ್ದಾರೆ. ಶಾಂತಿಧಾಮದ ನಂತರ ಸುಖಧಾಮವಿದೆ. ಶಾಂತಿಧಾಮದ ನಂತರ ದುಃಖಧಾಮವಿರಲು ಸಾಧ್ಯವಿಲ್ಲ. ಹೊಸಪ್ರಪಂಚದಲ್ಲಿ ಸುಖವೆಂದೇ ಹೇಳಲಾಗುತ್ತದೆ. ಒಂದುವೇಳೆ ಈ ದೇವಿ-ದೇವತೆಗಳು ಚೈತನ್ಯವಾಗಿದ್ದಾಗ ಯಾರಾದರೂ ತಾವು ಎಲ್ಲಿರುತ್ತೀರಿ ಎಂದು ಕೇಳಿದರೆ ನಾವು ಸ್ವರ್ಗದ ನಿವಾಸಿಗಳಾಗಿದ್ದೇವೆ ಎಂದು ಹೇಳುತ್ತಾರೆ. ಈಗ ಈ ಜಡಮೂರ್ತಿಯಂತೂ ಹೇಳಲು ಸಾಧ್ಯವಿಲ್ಲ. ನಾವು ಮೂಲತಃ ಸ್ವರ್ಗದ ನಿವಾಸಿಗಳು ದೇವಿ-ದೇವತೆಗಳಾಗಿದ್ದೇವೆ ನಂತರ 84 ಜನ್ಮಗಳನ್ನು ಸುತ್ತಿ ಈಗ ಸಂಗಮಯುಗದಲ್ಲಿ ಬಂದಿದ್ದೇವೆಂದು ಹೇಳುತ್ತೀರಲ್ಲವೆ. ಈ ಪುರುಷೋತ್ತಮ ಸಂಗಮಯುಗವು ವರ್ಗಾವಣೆಯಾಗುವ ಯುಗವಾಗಿದೆ. ಮಕ್ಕಳು ತಿಳಿದುಕೊಂಡಿದ್ದೀರಿ, ನಾವು ಬಹಳ ಉತ್ತಮ ಪುರುಷರಾಗುತ್ತೇವೆ. ನಾವು ಪ್ರತೀ 5000 ವರ್ಷಗಳ ನಂತರ ಸತೋಪ್ರಧಾನರಾಗುತ್ತೇವೆ, ಸತೋಪ್ರಧಾನದಲ್ಲಿಯೂ ನಂಬರ್ವಾರ್ ಎಂದು ಹೇಳುತ್ತಾರೆ. ಅಂದಾಗ ಇದೆಲ್ಲಾ ಪಾತ್ರವು ಆತ್ಮಕ್ಕೆ ಸಿಕ್ಕಿದೆ. ಮನುಷ್ಯರಿಗೆ ಪಾತ್ರವು ಸಿಕ್ಕಿದೆಯೆಂದು ಹೇಳುವುದಿಲ್ಲ, ನಾನಾತ್ಮನಿಗೇ ಪಾತ್ರವು ಸಿಕ್ಕಿದೆ ಎಂದು ಹೇಳುತ್ತಾರೆ. ನಾನಾತ್ಮನೇ 84 ಜನ್ಮಗಳನ್ನು ತೆಗೆದುಕೊಳ್ಳುತ್ತೇನೆ, ವಾರಸುಧಾರನಾಗಿದ್ದೇನೆ. ಯಾವಾಗಲೂ ಪುರುಷರೇ ವಾರಸುಧಾರರಾಗುತ್ತಾರೆ, ಸ್ತ್ರೀಯರಲ್ಲ. ಆದ್ದರಿಂದ ಈಗ ನೀವು ಮಕ್ಕಳು ಇದನ್ನು ಪಕ್ಕಾ ತಿಳಿಯಬೇಕಾಗಿದೆ - ನಾವೆಲ್ಲಾ ಆತ್ಮಗಳು ಪುರುಷರಾಗಿದ್ದೇವೆ. ಎಲ್ಲರಿಗೆ ಬೇಹದ್ದಿನ ತಂದೆಯಿಂದ ಆಸ್ತಿಯು ಸಿಗುತ್ತದೆ. ಲೌಕಿಕತಂದೆಯಿಂದ ಕೇವಲ ಗಂಡುಮಕ್ಕಳಿಗೆ ಆಸ್ತಿಯನ್ನು ಕೊಡುತ್ತಾರೆ, ಹೆಣ್ಣು ಮಕ್ಕಳಿಗಲ್ಲ. ಆತ್ಮವು ಸದಾ ಸ್ತ್ರೀಯಾಗುತ್ತದೆಯೆಂದಲ್ಲ. ತಂದೆಯು ತಿಳಿಸುತ್ತಾರೆ - ನೀವಾತ್ಮಗಳು ಕೆಲವೊಮ್ಮೆ ಪುರುಷನ, ಇನ್ನೂ ಕೆಲವೊಮ್ಮೆ ಸ್ತ್ರೀಯ ಶರೀರವನ್ನು ಧಾರಣೆ ಮಾಡುತ್ತೀರಿ. ಈ ಸಮಯದಲ್ಲಿ ನೀವೆಲ್ಲರೂ ಪುರುಷರಾಗಿದ್ದೀರಿ. ಎಲ್ಲಾ ಆತ್ಮಗಳಿಗೆ ಒಬ್ಬ ತಂದೆಯಿಂದ ಆಸ್ತಿಯು ಸಿಗುತ್ತದೆ. ಎಲ್ಲರೂ ಮಕ್ಕಳೇ ಆಗಿದ್ದೀರಿ, ಎಲ್ಲರಿಗೆ ತಂದೆಯು ಒಬ್ಬರೇ ಆಗಿದ್ದಾರೆ. ತಂದೆಯೂ ಸಹ ತಿಳಿಸುತ್ತಾರೆ - ಹೇ ಮಕ್ಕಳೇ, ನೀವೆಲ್ಲಾ ಆತ್ಮಗಳು ಪುರುಷರಾಗಿದ್ದೀರಿ, ನನ್ನ ಆತ್ಮಿಕ ಮಕ್ಕಳಾಗಿದ್ದೀರಿ. ಪಾತ್ರವನ್ನಭಿನಯಿಸುವುದಕ್ಕಾಗಿ ಸ್ತ್ರೀ-ಪುರುಷರಿಬ್ಬರೂ ಬೇಕು ಆಗಲೇ ಮನುಷ್ಯ ಸೃಷ್ಟಿಯ ವೃದ್ಧಿಯಾಗುವುದು. ಈ ಮಾತುಗಳು ನಿಮ್ಮ ವಿನಃ ಯಾರೂ ತಿಳಿದುಕೊಂಡಿಲ್ಲ. ಭಲೆ ನಾವೆಲ್ಲಾ ಸಹೋದರರೆಂದು ಹೇಳುತ್ತಾರೆ ಆದರೆ ಅರಿತುಕೊಂಡಿಲ್ಲ.

ಈಗ ನೀವು ಹೇಳುತ್ತೀರಿ - ಬಾಬಾ, ತಮ್ಮಿಂದ ನಾವು ಅನೇಕರಬಾರಿ ಆಸ್ತಿಯನ್ನು ತೆಗೆದುಕೊಂಡಿದ್ದೇವೆ. ಆತ್ಮಕ್ಕೆ ಇದು ನಿಶ್ಚಯವಾಗಿಬಿಡುತ್ತದೆ. ಆತ್ಮವು ತಂದೆಯನ್ನು ಅವಶ್ಯವಾಗಿ ನೆನಪು ಮಾಡುತ್ತದೆ - ಓ ತಂದೆಯೇ ದಯೆತೋರಿಸಿ, ತಾವೀಗ ಬಂದುಬಿಡಿ. ನಾವೆಲ್ಲರೂ ತಮ್ಮ ಮಕ್ಕಳಾಗುತ್ತೇವೆ. ದೇಹಸಹಿತ ದೇಹದ ಎಲ್ಲಾ ಸಂಬಂಧಗಳನ್ನು ತೊರೆದು ನಾವಾತ್ಮಗಳು ತಾವೊಬ್ಬರನ್ನೇ ನೆನಪು ಮಾಡುತ್ತೇವೆ ಅಂದಾಗ ತಮ್ಮನ್ನು ಆತ್ಮನೆಂದು ತಿಳಿದು ತಂದೆಯಾದ ನನ್ನನ್ನು ನೆನಪು ಮಾಡಿ ಎಂದು ತಂದೆಯು ತಿಳಿಸಿದ್ದಾರೆ. ತಂದೆಯಿಂದ ನಾವು ಆಸ್ತಿಯನ್ನು ಹೇಗೆ ಪಡೆಯುತ್ತೇವೆ. ಪ್ರತೀ 5000 ವರ್ಷಗಳ ನಂತರ ನಾವು ಹೇಗೆ ಈ ದೇವತೆಗಳಾಗುತ್ತೇವೆ ಎಂಬುದನ್ನು ಅರಿತುಕೊಳ್ಳಬೇಕಲ್ಲವೆ. ಸ್ವರ್ಗದ ಆಸ್ತಿಯು ಯಾರಿಂದ ಸಿಗುತ್ತದೆ ಎಂಬುದನ್ನು ನೀವೀಗ ತಿಳಿದುಕೊಂಡಿದ್ದೀರಿ. ಮಕ್ಕಳನ್ನು ಸ್ವರ್ಗವಾಸಿಗಳನ್ನಾಗಿ ಮಾಡುತ್ತಾರೆಯೇ ಹೊರತು ತಂದೆಯು ಸ್ವರ್ಗವಾಸಿಯಲ್ಲ. ತಾವು ಮಾತ್ರ ನರಕದಲ್ಲಿಯೇ ಬರುತ್ತೀರಿ. ನೀವು ತಂದೆಯನ್ನು ನರಕದಲ್ಲಿಯೇ ತಮೋಪ್ರಧಾನರಾದಾಗ ಕರೆಯುತ್ತೀರಿ. ಇದು ತಮೋಪ್ರಧಾನ ಪ್ರಪಂಚವಾಗಿದೆ. ಸತೋಪ್ರಧಾನ ಪ್ರಪಂಚವಿತ್ತು, 5000 ವರ್ಷಗಳ ಹಿಂದೆ ಇವರ ರಾಜ್ಯವಿತ್ತು. ಈ ಮಾತುಗಳನ್ನು, ವಿದ್ಯೆಯನ್ನು ನೀವು ಈಗಲೇ ತಿಳಿದುಕೊಂಡಿದ್ದೀರಿ. ಇದು ಮನುಷ್ಯರಿಂದ ದೇವತೆಗಳಾಗುವ ವಿದ್ಯೆಯಾಗಿದೆ. ಮನುಷ್ಯರಿಂದ ದೇವತೆಗಳನ್ನಾಗಿ ಮಾಡಿದರು ಸದ್ಗುರು...... ಮಕ್ಕಳಾಗಿ ವಾರಸುಧಾರರಾದರೆಂದರೆ ತಂದೆಯು ತಿಳಿಸುತ್ತಾರೆ - ನೀವೆಲ್ಲಾ ಆತ್ಮಗಳು ನನ್ನ ಮಕ್ಕಳಾಗಿದ್ದೀರಿ, ನಿಮಗೆ ಆಸ್ತಿಯನ್ನು ಕೊಡುತ್ತೇನೆ. ನೀವೆಲ್ಲರೂ ಪರಸ್ಪರ ಸಹೋದರರಾಗಿದ್ದೀರಿ, ನಿವಾಸಸ್ಥಾನವೂ ಸಹ ಮೂಲವತನ ಅಥವಾ ನಿರ್ವಾಣಧಾಮವಾಗಿದೆ. ಅದಕ್ಕೆ ನಿರಾಕಾರಿ ಪ್ರಪಂಚವೆಂದೂ ಹೇಳುತ್ತೀರಿ. ಎಲ್ಲಾ ಆತ್ಮಗಳು ಅಲ್ಲಿರುತ್ತೀರಿ. ಈ ಸೂರ್ಯ-ಚಂದ್ರರಿಗಿಂತಲೂ ಅತೀ ಮೇಲೆ ನಿಮ್ಮ ಮಧುರ ಶಾಂತಿಧಾಮವಿದೆ. ಆದರೆ ಅಲ್ಲಿ ಹೋಗಿ ಕುಳಿತುಬಿಡುವಂತಿಲ್ಲ. ಅಲ್ಲಿ ಕುಳಿತುಕೊಂಡು ಏನು ಮಾಡುತ್ತೀರಿ? ಅದು ಜಡಸ್ಥಿತಿಯಾಗಿಬಿಡುತ್ತದೆ. ಆತ್ಮವು ಇಲ್ಲಿ ಪಾತ್ರದಲ್ಲಿ ಬಂದಾಗ ಚೈತನ್ಯವೆಂದು ಕರೆಸಿಕೊಳ್ಳುವಿರಿ. ಆತ್ಮವೂ ಚೈತನ್ಯವೇ ಆಗಿದೆ ಆದರೆ ಪಾತ್ರವನ್ನಭಿನಯಿಸದಿದ್ದರೆ ಜಡವಾಯಿತಲ್ಲವೆ. ನೀವು ಇಲ್ಲಿ ನಿಂತುಬಿಡಿ, ಕೈ-ಕಾಲುಗಳನ್ನು ಅಲುಗಾಡಿಸಬೇಡಿ ಆಗ ಜಡವಾದಿರಲ್ಲವೆ. ಸತ್ಯಯುಗದಲ್ಲಂತೂ ಸ್ವಾಭಾವಿಕ ಶಾಂತಿಯಿರುತ್ತದೆ. ಆತ್ಮಗಳು ಜಡವಾಗಿರುತ್ತಾರೆ. ಪಾತ್ರವನ್ನೇನೂ ಅಭಿನಯಿಸುವುದಿಲ್ಲ. ಆದರೆ ಪಾತ್ರವನ್ನಭಿನಯಿಸುವುದರಲ್ಲಿಯೇ ಶೋಭೆಯಿದೆ, ಶಾಂತಿಧಾಮದಲ್ಲೇನೂ ಶೋಭೆಯಿರುವುದು? ಆತ್ಮವು ಸುಖ-ದುಃಖದ ಅನುಭವದಿಂದ ದೂರವಿರುತ್ತಾರೆ, ಪಾತ್ರವನ್ನೇ ಅಭಿನಯಿಸಲಿಲ್ಲವೆಂದರೆ ಅಲ್ಲಿರುವುದರಿಂದ ಏನು ಪ್ರಯೋಜನ? ಮೊಟ್ಟಮೊದಲು ಸುಖದ ಪಾತ್ರವನ್ನಭಿನಯಿಸಬೇಕಾಗಿದೆ. ಪ್ರತಿಯೊಬ್ಬರಿಗೂ ಪಾತ್ರವು ಮೊದಲಿನಿಂದಲೇ ಸಿಕ್ಕಿದೆ. ಕೆಲವರು ಹೇಳುತ್ತಾರೆ - ನಮಗಂತೂ ಮೋಕ್ಷವು ಬೇಕು, ನೀರಿನ ಗುಳ್ಳೆಯು ನೀರಿನಲ್ಲಿ ಸೇರಿಹೋಯಿತು. ಆತ್ಮವೆಂದರೆ ಏನೂ ಇಲ್ಲ ಎಂದು ಹೇಳುತ್ತಾರೆ. ಪಾತ್ರವನ್ನೇನೂ ಅಭಿನಯಿಸದಿದ್ದರೆ ಜಡವೆಂದು ಹೇಳುತ್ತಾರೆ. ಚೈತನ್ಯವಾಗಿದ್ದರೂ ಜಡವಾಗಿದ್ದರೆ ಏನು ಪ್ರಯೋಜನ? ಆ ಪಾತ್ರವನ್ನಂತೂ ಎಲ್ಲರೂ ಅಭಿನಯಿಸಲೇಬೇಕಾಗಿದೆ. ನಾಯಕ-ನಾಯಕಿಯ ಪಾತ್ರವು ಮುಖ್ಯವೆಂದು ಹೇಳಲಾಗುತ್ತದೆ. ನೀವು ಮಕ್ಕಳಿಗೆ ನಾಯಕ-ನಾಯಕಿಯ ಬಿರುದು ಸಿಗುತ್ತದೆ. ಆತ್ಮವೇ ಪಾತ್ರವನ್ನಭಿನಯಿಸುತ್ತದೆ. ಮೊದಲು ಸುಖದ ರಾಜ್ಯ ಮಾಡುತ್ತದೆ ನಂತರ ರಾವಣನ ದುಃಖದ ರಾಜ್ಯದಲ್ಲಿ ಹೋಗುತ್ತದೆ. ಈಗ ತಂದೆಯು ತಿಳಿಸುತ್ತಾರೆ - ನೀವು ಮಕ್ಕಳು ಎಲ್ಲರಿಗೆ ಈ ಸಂದೇಶವನ್ನು ಕೊಡಿ, ಶಿಕ್ಷಕರಾಗಿ ಅನ್ಯರಿಗೂ ತಿಳಿಸಿ. ಯಾರು ಶಿಕ್ಷಕರಾಗುವುದಿಲ್ಲವೋ ಅವರ ಪದವಿಯು ಕಡಿಮೆಯಾಗುವುದು. ಶಿಕ್ಷಕರಾಗದೆ ಆಶೀರ್ವಾದವು ಹೇಗೆ ಸಿಗುವುದು? ಯಾರಿಗಾದರೂ ಹಣಕೊಟ್ಟರೆ ಅವರು ಖುಷಿಯಾಗುತ್ತಾರಲ್ಲವೇ. ಈ ಬ್ರಹ್ಮಾಕುಮಾರ-ಕುಮಾರಿಯರು ನಮ್ಮ ಮೇಲೆ ದಯೆತೋರಿಸುತ್ತಾರೆ. ನಮ್ಮನ್ನು ಹೇಗಿದ್ದವರನ್ನು ಹೇಗೆ ಮಾಡುತ್ತಾರೆಂದು ಆಂತರ್ಯದಲ್ಲಿ ತಿಳಿಯುತ್ತಾರೆ. ಹಾಗೆ ನೋಡಿದರೆ ಮಹಿಮೆಯೆಲ್ಲವೂ ಒಬ್ಬ ತಂದೆಗೆ ಮಾಡುತ್ತಾರೆ - ವಾಹ್! ಬಾಬಾ ತಾವು ಈ ಮಕ್ಕಳ ಮೂಲಕ ನಮ್ಮ ಎಷ್ಟೊಂದು ಕಲ್ಯಾಣ ಮಾಡುತ್ತೀರಿ. ಯಾರದೋ ಮುಖಾಂತರವಂತೂ ಆಗುತ್ತದೆಯಲ್ಲವೆ. ತಂದೆಯು ಮಾಡಿ-ಮಾಡಿಸುವವರಾಗಿದ್ದಾರೆ. ನಿಮ್ಮ ಮೂಲಕ ಮಾಡಿಸುತ್ತಾರೆ. ನಿಮ್ಮದೂ ಕಲ್ಯಾಣವಾಗುತ್ತದೆ ಮತ್ತು ನೀವು ಅನ್ಯರ ಕಲ್ಯಾಣವನ್ನು ಮಾಡುತ್ತೀರಿ. ಯಾರು ಹೇಗ್ಹೇಗೆ ಸೇವೆ ಮಾಡುವರೋ ಅಷ್ಟು ಶ್ರೇಷ್ಠಪದವಿಯನ್ನು ಪಡೆಯುವರು. ರಾಜರಾಗಬೇಕೆಂದರೆ ಪ್ರಜೆಗಳನ್ನೂ ತಯಾರು ಮಾಡಬೇಕಾಗಿದೆ ಮತ್ತೆ ಯಾರು ಒಳ್ಳೆಯ ನಂಬರಿನಲ್ಲಿ ಬರುವರೋ ಅವರೂ ಸಹ ರಾಜರಾಗುತ್ತಾರೆ. ಮಾಲೆಯಾಗುತ್ತದೆಯಲ್ಲವೆ ಅಂದಾಗ ನಾವು ಮಾಲೆಯಲ್ಲಿ ಯಾವ ನಂಬರಿನವರಾಗುತ್ತೇವೆ ಎಂದು ತಮ್ಮನ್ನು ಕೇಳಿಕೊಳ್ಳಬೇಕು. ನವರತ್ನಗಳೇ ಮುಖ್ಯವಾಗಿದೆಯಲ್ಲವೆ. ಅದರ ನಡುವೆ ವಜ್ರವನ್ನಿಡುತ್ತಾರೆ. ಅಂದರೆ ನಡುವೆ ವಜ್ರವನ್ನಾಗಿ ಮಾಡುವ ತಂದೆಯ ಚಿಹ್ನೆಯಾಗಿ ವಜ್ರವನ್ನು ತೋರಿಸುತ್ತಾರೆ. ಮಾಲೆಯಲ್ಲಿ ಮೇಲೆ ಹೂವಿರುತ್ತದೆಯಲ್ಲವೆ. ಈ ಹೂವಿನ ಸಂಕೇತವೂ ಸಹ ತಂದೆಯದಾಗಿದೆ. ಯಾರು ಮುಖ್ಯಮಣಿಗಳಾಗುತ್ತಾರೆ, ಯಾರು ರಾಜ್ಯದಲ್ಲಿ ಬರುತ್ತಾರೆ - ಇದೆಲ್ಲವೂ ಅಂತಿಮದಲ್ಲಿ ನಿಮಗೆ ತಿಳಿಯುತ್ತದೆ. ಅಂತಿಮದಲ್ಲಿ ನಿಮಗೆ ಎಲ್ಲಾ ಸಾಕ್ಷಾತ್ಕಾರಗಳು ಆಗುತ್ತವೆ. ಹೇಗೆ ಇವರೆಲ್ಲರೂ ಶಿಕ್ಷೆಯನ್ನನುಭವಿಸುತ್ತಾರೆ ಎಂಬುದನ್ನು ನೀವು ನೋಡುತ್ತೀರಿ. ಆರಂಭದಲ್ಲಿ ಸೂಕ್ಷ್ಮವತನದಿಂದ ನೋಡುತ್ತಿದ್ದಿರಿ. ಹಾಗೆಯೇ ಇದೂ ಸಹ ಗುಪ್ತವಾಗಿದೆ. ಆತ್ಮವು ಶಿಕ್ಷೆಗಳನ್ನು ಎಲ್ಲಿ ಅನುಭವಿಸುತ್ತದೆ ಎನ್ನುವುದೂ ಸಹ ನಾಟಕದಲ್ಲಿದೆ. ಗರ್ಭಜೈಲಿನಲ್ಲಿ ಶಿಕ್ಷೆಗಳು ಸಿಗುತ್ತವೆ. ಜೈಲಿನಲ್ಲಿ ಧರ್ಮರಾಜನನ್ನು ನೋಡುತ್ತಾರೆ ನಂತರ ನಮ್ಮನ್ನು ಹೊರಗೆ ತೆಗೆಯಿರಿ ಎಂದು ಹೇಳುತ್ತಾರೆ. ರೋಗ ಇತ್ಯಾದಿಗಳು ಬರುತ್ತವೆಯೆಂದರೂ ಸಹ ಇದೂ ಕರ್ಮದ ಲೆಕ್ಕಾಚಾರವಲ್ಲವೆ. ಇವೆಲ್ಲವೂ ತಿಳಿದುಕೊಳ್ಳುವುದಾಗಿದೆ. ತಂದೆಯು ಅವಶ್ಯವಾಗಿ ಸತ್ಯವನ್ನೇ ತಿಳಿಸುತ್ತಾರೆ. ನೀವೀಗ ಸತ್ಯವಂತರಾಗುತ್ತೀರಿ. ಯಾರು ತಂದೆಯಿಂದ ಶಕ್ತಿಯನ್ನು ಪಡೆಯುವರೋ ಅವರಿಗೇ ಸತ್ಯವಂತರೆಂದು ಕರೆಯಲಾಗುವುದು.

ನೀವು ವಿಶ್ವದ ಮಾಲೀಕರಾಗುತ್ತೀರಲ್ಲವೆ. ಎಷ್ಟೊಂದು ಶಕ್ತಿಯಿರುತ್ತದೆ, ಅಲ್ಲಿ ಯಾವುದೇ ಏರುಪೇರಿನ ಮಾತಿಲ್ಲ. ಶಕ್ತಿಯು ಕಡಿಮೆಯಿದ್ದರೆ ಎಷ್ಟೊಂದು ಏರುಪೇರುಗಳಾಗುತ್ತವೆ. ನೀವು ಮಕ್ಕಳಿಗೆ ಈಗ ಅರ್ಧಕಲ್ಪಕ್ಕಾಗಿ ಶಕ್ತಿಯು ಸಿಗುತ್ತದೆ. ಅದರಲ್ಲಿಯೂ ನಂಬರ್ವಾರ್ ಪುರುಷಾರ್ಥದನುಸಾರ ಯಾರೆಷ್ಟು ಮಾಡುವರೋ ಅಷ್ಟು ಶಕ್ತಿಯನ್ನು ಪಡೆಯುತ್ತಾರೆ. ಎಲ್ಲರೂ ಒಂದೇ ಸಮನಾದ ಶಕ್ತಿಯನ್ನು ಪಡೆಯುವುದಿಲ್ಲ ಅಥವಾ ಒಂದೇ ಸಮನಾದ ಪದವಿಯನ್ನು ಪಡೆಯಲು ಸಾಧ್ಯವಿಲ್ಲ. ಇದೂ ಸಹ ಮೊದಲೇ ನಿಗಧಿಯಾಗಿದೆ. ನಾಟಕದಲ್ಲಿ ಅನಾದಿ ನೊಂದಾವಣೆಯಾಗಿದೆ. ಕೆಲವರು ಅಂತಿಮದಲ್ಲಿ ಬರುತ್ತಾರೆ. ಒಂದೆರಡು ಜನ್ಮಗಳನ್ನು ತೆಗೆದುಕೊಂಡು ಶರೀರಬಿಡುತ್ತಾರೆ. ಹೇಗೆ ದೀಪಾವಳಿಯಲ್ಲಿ ಸೊಳ್ಳೆಗಳು ರಾತ್ರಿಯಲ್ಲಿ ಜನ್ಮ ತೆಗೆದುಕೊಳ್ಳುತ್ತವೆ ಮತ್ತು ಬೆಳಗ್ಗೆ ಸತ್ತುಹೋಗುತ್ತವೆ. ಅವಂತೂ ಲೆಕ್ಕವಿಲ್ಲದಷ್ಟಿರುತ್ತವೆ. ಮನುಷ್ಯರಿಗಾದರೂ ಲೆಕ್ಕವಿರುತ್ತದೆ, ಮೊಟ್ಟಮೊದಲು ಯಾವ ಆತ್ಮಗಳು ಬರುವರೋ ಅವರ ಆಯಸ್ಸು ಎಷ್ಟು ಧೀರ್ಘವಾಗಿರುತ್ತದೆ! ನಾವು ಬಹಳ ಧೀರ್ಘಾಯಸ್ಸಿನವರಾಗುತ್ತೇವೆಂದು ನೀವು ಮಕ್ಕಳಿಗೆ ಖುಷಿಯಾಗಬೇಕು. ನೀವು ಪೂರ್ಣ ಪಾತ್ರವನ್ನು ಅಭಿನಯಿಸುತ್ತೀರಿ, ನೀವು ಹೇಗೆ ಪೂರ್ಣ ಪಾತ್ರವನ್ನು ಅಭಿನಯಿಸುತ್ತೀರೆಂದು ತಂದೆಯು ನಿಮಗೆ ತಿಳಿಸುತ್ತಾರೆ. ವಿದ್ಯೆಯನುಸಾರ ಪಾತ್ರವನ್ನಭಿನಯಿಸಲು ಮೇಲಿನಿಂದ ಬರುತ್ತೀರಿ. ನಿಮ್ಮದು ಇದು ಹೊಸ ಪ್ರಪಂಚಕ್ಕಾಗಿ ಹೊಸವಿದ್ಯೆಯಾಗಿದೆ. ತಂದೆಯು ತಿಳಿಸುತ್ತಾರೆ - ನಾನು ನಿಮಗೆ ಅನೇಕಬಾರಿ ಓದಿಸುತ್ತೇನೆ. ನಂತರ ಈ ವಿದ್ಯೆಯು ಅವಿನಾಶಿಯಾಗಿಬಿಡುತ್ತದೆ. ಇದರಿಂದ ನೀವು ಅರ್ಧಕಲ್ಪದ ಪ್ರಾಲಬ್ಧವನ್ನು ಪಡೆಯುತ್ತೀರಿ. ಆ ವಿನಾಶಿ ವಿದ್ಯೆಯಿಂದ ಅಲ್ಪಕಾಲದ ಸುಖವು ಸಿಗುತ್ತದೆ. ಈಗ ಯಾರಾದರೂ ವಕೀಲರಾಗುತ್ತಾರೆಂದರೆ ಮತ್ತೆ ಕಲ್ಪದ ನಂತರವೂ ವಕೀಲರಾಗುತ್ತಾರೆ. ನೀವು ತಿಳಿದುಕೊಂಡಿದ್ದೀರಿ, ಯಾವುದೆಲ್ಲಾ ಎಲ್ಲರ ಪಾತ್ರವಿದೆಯೋ ಅದೇ ಪಾತ್ರವು ಕಲ್ಪ-ಕಲ್ಪವೂ ಅಭಿನಯಿಸಲ್ಪಡುತ್ತಾ ಇರುವುದು. ದೇವತೆಗಳಾಗಿರಲಿ ಅಥವಾ ಶೂದ್ರರಾಗಿರಲಿ, ಕಲ್ಪ-ಕಲ್ಪವೂ ಯಾವ ಪಾತ್ರವನ್ನು ಅಭಿನಯಿಸುತ್ತಾ ಬಂದಿರುವರೋ ಅದೇ ಪಾತ್ರವು ಈಗ ಅಭಿನಯಿಸಲ್ಪಡುತ್ತದೆ. ಅದರಲ್ಲಿ ಯಾವುದೇ ವ್ಯತ್ಯಾಸವಾಗಲು ಸಾಧ್ಯವಿಲ್ಲ. ಪ್ರತಿಯೊಬ್ಬರೂ ತಮ್ಮ ಪಾತ್ರವನ್ನು ಅಭಿನಯಿಸುತ್ತಿರುತ್ತಾರೆ. ಇದು ಮಾಡಿ-ಮಾಡಲ್ಪಟ್ಟ ನಾಟಕವಾಗಿದೆ. ಪುರುಷಾರ್ಥವು ದೊಡ್ಡದೋ ಅಥವಾ ಪ್ರಾಲಬ್ಧವು ದೊಡ್ಡದೋ ಎಂದು ಕೇಳುತ್ತಾರೆ. ಈಗ ಪುರುಷಾರ್ಥವಿಲ್ಲದೆ ಪ್ರಾಲಬ್ಧವು ಸಿಗುವುದಿಲ್ಲ. ನಾಟಕದನುಸಾರ ಪುರುಷಾರ್ಥದಿಂದ ಪ್ರಾಲಬ್ಧವು ಸಿಗುತ್ತದೆ. ಇದೆಲ್ಲಾ ಭಾರವು ನಾಟಕದ ಮೇಲೆ ಬಂದುಬಿಡುವುದು. ಕೆಲವರು ಪುರುಷಾರ್ಥ ಮಾಡುತ್ತಾರೆ ಕೆಲವರು ಮಾಡುವುದಿಲ್ಲ. ಬರುತ್ತಾರೆ ಆದರೂ ಸಹ ಪುರುಷಾರ್ಥ ಮಾಡದೇ ಇದ್ದರೆ ಪ್ರಾಲಬ್ಧವು ಸಿಗುವುದಿಲ್ಲ. ಇಡೀ ಪ್ರಪಂಚದಲ್ಲಿ ಯಾವುದೆಲ್ಲಾ ಪಾತ್ರವು ನಡೆಯುತ್ತದೆಯೋ ಇದೆಲ್ಲವೂ ಮಾಡಿ-ಮಾಡಿಲ್ಪಟ್ಟ ನಾಟಕವಾಗಿದೆ. ಆತ್ಮದಲ್ಲಿ ಆದಿಯಿಂದ ಅಂತ್ಯದವರೆಗೆ ಮೊದಲಿನಿಂದಲೇ ಪಾತ್ರವು ನಿಗಧಿಯಾಗಿದೆ. ಹೇಗೆ ನೀವಾತ್ಮಗಳಲ್ಲಿ 84 ಜನ್ಮಗಳ ಪಾತ್ರವಿದೆ. ಆತ್ಮವು ವಜ್ರಸಮಾನವೂ ಆಗುತ್ತದೆ ಮತ್ತು ಕವಡೆಯ ಸಮಾನವೂ ಆಗುತ್ತದೆ. ಇದೆಲ್ಲಾ ಮಾತುಗಳನ್ನು ಈಗ ನೀವು ಈ ಸಮಯದಲ್ಲಿ ಕೇಳುತ್ತೀರಿ. ಶಾಲೆಯಲ್ಲಿ ಒಂದುವೇಳೆ ಯಾರಾದರೂ ಅನುತ್ತೀರ್ಣರಾಗಿಬಿಟ್ಟರೆ ಇವರು ಬುದ್ಧಿಹೀನರಾಗಿದ್ದಾರೆ. ಇವರಿಗೆ ಧಾರಣೆಯಾಗುವುದಿಲ್ಲ ಎಂದು ಹೇಳುತ್ತಾರೆ. ಇದಕ್ಕೆ ವಿಭಿನ್ನವೃಕ್ಷ, ವಿಭಿನ್ನ ಲಕ್ಷಣಗಳೆಂದು ಹೇಳಲಾಗುತ್ತದೆ. ಈ ವಿಭಿನ್ನ ವೃಕ್ಷದ ಜ್ಞಾನವನ್ನು ತಂದೆಯೇ ತಿಳಿಸುತ್ತಾರೆ. ಕಲ್ಪವೃಕ್ಷವನ್ನು ಕುರಿತು ತಿಳಿಸುತ್ತಾರೆ - ಆಲದಮರದ ಉದಾಹರಣೆಯೂ ಸಹ ಇದರ ಮೇಲಿದೆ. ಅದರ ಶಾಖೆಗಳು ಬಹಳ ಹರಡುತ್ತವೆ.

ಮಕ್ಕಳು ತಿಳಿದುಕೊಂಡಿದ್ದೀರಿ - ಆತ್ಮವು ಅವಿನಾಶಿಯಾಗಿದೆ, ಶರೀರವಂತೂ ವಿನಾಶವಾಗಿಬಿಡುತ್ತದೆ, ಆತ್ಮವೇ ಧಾರಣೆ ಮಾಡುತ್ತದೆ, ಆತ್ಮವೇ 84 ಜನ್ಮಗಳನ್ನು ತೆಗೆದುಕೊಳ್ಳುತ್ತದೆ. ಶರೀರಗಳಂತೂ ಬದಲಾಗುತ್ತಾ ಹೋಗುತ್ತವೆ. ಆತ್ಮವು ಅದೇ ಆಗಿದೆ, ಆತ್ಮವೇ ಭಿನ್ನ-ಭಿನ್ನ ಶರೀರವನ್ನು ತೆಗೆದುಕೊಂಡು ಪಾತ್ರವನ್ನಭಿನಯಿಸುತ್ತದೆ. ಇದು ಹೊಸ ಮಾತಾಗಿದೆಯಲ್ಲವೆ. ನೀವು ಮಕ್ಕಳಿಗೂ ಸಹ ಈ ತಿಳುವಳಿಕೆಯು ಈಗ ಸಿಕ್ಕಿದೆ. ಕಲ್ಪದ ಹಿಂದೆಯೂ ಸಹ ಇದನ್ನು ತಿಳಿದುಕೊಂಡಿದ್ದಿರಿ. ತಂದೆಯು ಭಾರತದಲ್ಲಿಯೇ ಬರುತ್ತಾರೆ, ಈಗ ನೀವು ಎಲ್ಲರಿಗೆ ಸಂದೇಶವನ್ನು ಕೊಡುತ್ತಾ ಇರುತ್ತೀರಿ. ಸಂದೇಶವು ಸಿಗದೇ ಇರುವಂತಹ ಮನುಷ್ಯರು ಯಾರೂ ಇಲ್ಲ. ಈ ಸಂದೇಶವನ್ನು ತಿಳಿದುಕೊಳ್ಳಲು ಎಲ್ಲರಿಗೆ ಅಧಿಕಾರವಿದೆ. ಮತ್ತೆ ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತಾರೆ. ಸ್ವಲ್ಪ ಕೇಳಿದರೂ ಸಹ ತಂದೆಯ ಮಕ್ಕಳಾದರಲ್ಲವೆ ಅಂದಾಗ ತಂದೆಯು ತಿಳಿಸುತ್ತಾರೆ - ನಾನು ನೀವಾತ್ಮಗಳ ತಂದೆಯಾಗಿದ್ದೇನೆ, ನನ್ನ ಮೂಲಕ ಈ ರಚನೆಯ ಆದಿ-ಮಧ್ಯ-ಅಂತ್ಯವನ್ನು ಅರಿತುಕೊಳ್ಳುವುದರಿಂದ ಈ ಪದವಿಯನ್ನು ಪಡೆಯುತ್ತೀರಿ. ಉಳಿದೆಲ್ಲಾ ಆತ್ಮಗಳು ಮುಕ್ತಿಧಾಮದಲ್ಲಿ ಹೋಗುತ್ತಾರೆ. ತಂದೆಯು ಎಲ್ಲರ ಸದ್ಗತಿ ಮಾಡುತ್ತಾರೆ. ಓಹೋ ತಂದೆಯೇ ನಿಮ್ಮ ಲೀಲೆಯು ಅಪರಮಪಾರವೆಂದು ಹಾಡುತ್ತಾರೆ ಅಂದಮೇಲೆ ಯಾವ ಲೀಲೆ, ಎಂತಹ ಲೀಲೆ, ಈ ಪ್ರಪಂಚವನ್ನು ಪರಿವರ್ತಿಸುವ ಲೀಲೆಯಾಗಿದೆ. ಇದನ್ನು ತಿಳಿಯಬೇಕಲ್ಲವೆ. ಮನುಷ್ಯರೇ ತಿಳಿದುಕೊಳ್ಳುತ್ತಾರೆ. ತಂದೆಯೇ ಬಂದು ನೀವು ಮಕ್ಕಳಿಗೆ ಇವೆಲ್ಲಾ ಮಾತುಗಳನ್ನು ತಿಳಿಸಿಕೊಡುತ್ತಾರೆ. ತಂದೆಯು ಜ್ಞಾನಸಾಗರನಾಗಿದ್ದಾರೆ ಆದ್ದರಿಂದ ನೀವು ಮಕ್ಕಳನ್ನೂ ಸಹ ಜ್ಞಾನಪೂರ್ಣರನ್ನಾಗಿ ಮಾಡುತ್ತಾರೆ. ನೀವು ನಂಬರ್ವಾರ್ ಜ್ಞಾನಪೂರ್ಣರಾಗುವಿರಿ, ವಿದ್ಯಾರ್ಥಿವೇತನವನ್ನು ತೆಗೆದುಕೊಳ್ಳುವವರು ಜ್ಞಾನಪೂರ್ಣರೆಂದು ಕರೆಸಿಕೊಳ್ಳುತ್ತಾರಲ್ಲವೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ನಮಸ್ತೆ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಸದಾ ಇದೇ ಸ್ಮೃತಿಯಲ್ಲಿರಬೇಕಾಗಿದೆ - ನಾವಾತ್ಮಗಳು ಪುರುಷರಾಗಿದ್ದೇವೆ, ನಾವು ತಂದೆಯಿಂದ ಪೂರ್ಣ ಆಸ್ತಿಯನ್ನು ತೆಗೆದುಕೊಳ್ಳಬೇಕಾಗಿದೆ. ಮನುಷ್ಯರಿಂದ ದೇವತೆಗಳಾಗುವ ವಿದ್ಯೆಯನ್ನು ಓದಬೇಕು ಮತ್ತು ಓದಿಸಬೇಕಾಗಿದೆ.

2. ಇಡೀ ಪ್ರಪಂಚದಲ್ಲಿ ಯಾವುದೆಲ್ಲಾ ಪಾತ್ರವು ನಡೆಯುತ್ತದೆಯೋ ಇದೆಲ್ಲವೂ ಮಾಡಿ-ಮಾಡಲ್ಪಟ್ಟಂತಹ ನಾಟಕವಾಗಿದೆ. ಇದರಲ್ಲಿ ಪುರುಷಾರ್ಥ ಮತ್ತು ಪ್ರಾಲಬ್ಧ ಎರಡೂ ನಿಗಧಿಯಾಗಿದೆ. ಪುರುಷಾರ್ಥವಿಲ್ಲದೆ ಪ್ರಾಲಬ್ಧವು ಸಿಗಲು ಸಾಧ್ಯವಿಲ್ಲ, ಈ ಮಾತನ್ನು ಬಹಳ ಚೆನ್ನಾಗಿ ಅರಿತುಕೊಳ್ಳಬೇಕಾಗಿದೆ.

ವರದಾನ:
ಯಾವುದೇ ಸೇವೆ ಸತ್ಯ ಮನಸ್ಸಿನಿಂದ ಹಾಗೂ ಲಗನ್ ನಿಂದ ಮಾಡುವಂತಹ ಸತ್ಯ ಆತ್ಮೀಯ ಸೇವಾಧಾರಿ ಭವ.

ಸೇವೆ ಯಾವುದೇ ಆಗಿರಲಿ ಆದರೆ ಅದನ್ನು ಸತ್ಯ ಹೃದಯದಿಂದ, ಲಗನ್ ನಿಂದ ಮಾಡಿದ್ದೆ ಆದರೆ ಅದಕ್ಕೆ 100 ಮಾಕ್ರ್ಸ್ ಸಿಗುವುದು. ಸೇವೆ ಸಿಡುಕಿನಿಂದ ಕೂಡಿರಬಾರದು, ಸೇವೆ ಕೆಲಸ ಮುಗಿಸುವುದಕ್ಕಾಗಿ ಮಾಡುವುದಲ್ಲ. ನಿಮ್ಮ ಸೇವೆಯೇ ಆಗಿದೆ ಕೆಟ್ಟಿರುವುದನ್ನು ಸರಿ ಪಡಿಸುವುದು ಎಲ್ಲರಿಗೂ ಸುಖ ಕೊಡುವುದು, ಆತ್ಮಗಳಿಗೆ ಯೋಗ್ಯ ಮತ್ತು ಯೋಗಿಗಳನ್ನಾಗಿ ಮಾಡುವುದು, ಅಪಕಾರಿಗಳ ಮೇಲೂ ಉಪಕಾರ ಮಾಡಬೇಕು, ಸಮಯದಲ್ಲಿ ಪ್ರತಿಯೊಬ್ಬರಿಗೂ ಜೊತೆ ಹಾಗೂ ಸಹಯೋಗ ಕೊಡಬೇಕು, ಇಂತಹ ಸೇವೆ ಮಾಡುವವರೆ ಸತ್ಯ ಆತ್ಮೀಯ ಸೇವಾಧಾರಿಯಾಗಿದ್ದಾರೆ.

ಸ್ಲೋಗನ್:
ಪವಿತ್ರತೆಯೇ ಬ್ರಾಹ್ಮಣ ಜೀವನದ ನವೀನತೆಯಾಗಿದೆ, ಇದೇ ಜ್ಞಾನದ ಫೌಂಡೇಷನ್ ಆಗಿದೆ.