20.01.25         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ಜ್ಞಾನದ ಧಾರಣೆಯ ಜೊತೆಜೊತೆಗೆ ಸತ್ಯಯುಗೀ ರಾಜ್ಯಭಾಗ್ಯಕ್ಕಾಗಿ ನೆನಪು ಮತ್ತು ಪವಿತ್ರತೆಯ ಬಲವನ್ನು ಜಮಾ ಮಾಡಿಕೊಳ್ಳಿ”

ಪ್ರಶ್ನೆ:
ಈಗ ನೀವು ಮಕ್ಕಳ ಪುರುಷಾರ್ಥದ ಲಕ್ಷ್ಯವು ಏನಾಗಿರಬೇಕು?

ಉತ್ತರ:
ಸದಾ ಖುಷಿಯಲ್ಲಿರುವುದು, ಬಹಳ-ಬಹಳ ಮಧುರರಾಗುವುದು, ಎಲ್ಲರನ್ನೂ ಪ್ರೀತಿಯಿಂದ ನಡೆಸುವುದು..... ಇದೇ ನಿಮ್ಮ ಪುರುಷಾರ್ಥದ ಲಕ್ಷ್ಯವಾಗಿದೆ. ಇದರಿಂದ ನೀವು ಸರ್ವಗುಣ ಸಂಪನ್ನ, 16 ಕಲಾಸಂಪೂರ್ಣರಾಗುತ್ತೀರಿ.

ಪ್ರಶ್ನೆ:
ಯಾರ ಕರ್ಮವು ಶ್ರೇಷ್ಠವಾಗಿದೆಯೋ ಅವರ ಲಕ್ಷಣಗಳೇನಾಗಿರುತ್ತವೆ?

ಉತ್ತರ:
ಅವರ ಮೂಲಕ ಯಾರಿಗೂ ದುಃಖವಾಗುವುದಿಲ್ಲ, ಹೇಗೆ ತಂದೆಯು ದುಃಖಹರ್ತ-ಸುಖಕರ್ತನಾಗಿದ್ದಾರೆ ಹಾಗೆ0iÉುೀ ಶ್ರೇಷ್ಠಕರ್ಮವನ್ನು ಮಾಡುವಂತಹವರೂ ಸಹ ದುಃಖಹರ್ತ-ಸುಖಕರ್ತನಾಗಿರುತ್ತಾರೆ.

ಗೀತೆ:
ಆಕಾಶ ಸಿಂಹಾಸನವನ್ನು ಬಿಟ್ಟುಬಾ..........

ಓಂ ಶಾಂತಿ.
ಮಧುರಾತಿ ಮಧುರ ಆತ್ಮೀಯ ಮಕ್ಕಳು ಗೀತೆಯನ್ನು ಕೇಳಿದಿರಿ. ಮಧುರಾತಿ ಮಧುರ ಆತ್ಮೀಯ ಮಕ್ಕಳೆ ಎಂದು ಯಾರು ಹೇಳಿದರು? ಇಬ್ಬರು ತಂದೆಯರೂ ಹೇಳಿದರು. ನಿರಾಕಾರನೂ ಸಹ ಹೇಳಿದರು, ಸಾಕಾರನೂ ಹೇಳಿದರು. ಆದ್ದರಿಂದ ಇವರಿಗೆ ತಂದೆ ಅಥವಾ ಅಣ್ಣ ಹೇಳುತ್ತಾರೆ. ಅಣ್ಣ ಸಾಕಾರಿಯಾಗಿದ್ದಾರೆ, ಈ ಹಾಡು ಭಕ್ತಿಮಾರ್ಗದ್ದಾಗಿದೆ. ಮಕ್ಕಳಿಗೆ ತಿಳಿದಿದೆ - ತಂದೆಯು ಬಂದು ಇಡೀ ಸೃಷ್ಟಿಚಕ್ರದ ಜ್ಞಾನವನ್ನು ಬುದ್ಧಿಯಲ್ಲಿ ಕೂಡಿಸಿದರು. ನೀವು ಮಕ್ಕಳ ಬುದ್ಧಿಯಲ್ಲಿ ನಾವು ಹೇಗೆ 84 ಜನ್ಮಗಳನ್ನು ಪೂರ್ಣಮಾಡಿದೆವು, ಈಗ ನಾಟಕವು ಪೂರ್ಣವಾಗುತ್ತಿದೆ ಎಂಬುದಿದೆ. ನಾವೀಗ ಯೋಗ ಅಥವಾ ನೆನಪಿನಿಂದ ಪಾವನರಾಗಬೇಕು. ನೆನಪು ಮತ್ತು ಜ್ಞಾನ - ಇದು ಪ್ರತಿಯೊಂದು ಮಾತಿನಲ್ಲಿ ನಡೆಯುತ್ತದೆ. ಬ್ಯಾರಿಸ್ಟರ್ನ್ನು ಅವರು ನೆನಪು ಮಾಡುತ್ತಾರೆ, ಅವರಿಂದಲೇ ಜ್ಞಾನವನ್ನು ಪಡೆಯುತ್ತಾರೆ, ಇದಕ್ಕೂ ಸಹ ಯೋಗ ಅಥವಾ ಜ್ಞಾನದ ಬಲವೆಂದು ಹೇಳಲಾಗುತ್ತದೆ. ಇಲ್ಲಂತೂ ಹೊಸಮಾತಾಗಿದೆ, ಆ ಜ್ಞಾನ ಮತ್ತು ಯೋಗದಿಂದ ಹದ್ದಿನ ಶಕ್ತಿಯು ಸಿಗುತ್ತದೆ. ಈ ಜ್ಞಾನ ಮತ್ತು ಯೋಗದಿಂದ ಬೇಹದ್ದಿನ ಶಕ್ತಿಯು ಸಿಗುತ್ತದೆ ಏಕೆಂದರೆ ಸರ್ವಶಕ್ತಿವಂತನ ಶಕ್ತಿಯಿದೆ. ನಾನು ಜ್ಞಾನಸಾಗರನಾಗಿದ್ದೇನೆಂದು ತಂದೆಯು ತಿಳಿಸುತ್ತಾರೆ. ನೀವು ಮಕ್ಕಳೀಗ ಸೃಷ್ಟಿಚಕ್ರವನ್ನು ತಿಳಿದುಕೊಂಡಿದ್ದೀರಿ. ಮೂಲವತನ, ಸೂಕ್ಷ್ಮವತನ ಎಲ್ಲವೂ ನೆನಪಿದೆ. ಯಾವ ಜ್ಞಾನವು ತಂದೆಯಲ್ಲಿದೆಯೋ ಅದೂ ಸಹ ದೊರೆತಿದೆ ಅಂದಾಗ ಜ್ಞಾನವನ್ನೇ ಧಾರಣೆ ಮಾಡಿ ಮತ್ತು ರಾಜ್ಯವನ್ನು ಪಡೆಯಲು ತಂದೆಯು ಮಕ್ಕಳಿಗೆ ಯೋಗ ಮತ್ತು ಪವಿತ್ರತೆಯನ್ನು ಕಲಿಸುತ್ತಾರೆ. ನೀವು ಪವಿತ್ರರೂ ಸಹ ಆಗುತ್ತೀರಿ, ತಂದೆಯಿಂದ ರಾಜ್ಯವನ್ನೂ ಪಡೆದುಕೊಳ್ಳುತ್ತೀರಿ. ತಂದೆಯು ತನಗಿಂತಲೂ ಹೆಚ್ಚು ಸ್ಥಾನಮಾನವನ್ನು ನೀಡುತ್ತಾರೆ. ನೀವು 84 ಜನ್ಮಗಳನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ಸ್ಥಾನಮಾನಗಳನ್ನು ಕಳೆದುಕೊಂಡುಬಿಡುತ್ತೀರಿ. ನೀವು ಮಕ್ಕಳಿಗೆ ಈಗ ಸ್ಥಾನಮಾನವು ಸಿಕ್ಕಿದೆ. ಶ್ರೇಷ್ಠಾತಿಶ್ರೇಷ್ಠರಾಗುವ ಜ್ಞಾನವು ಶ್ರೇಷ್ಠಾತಿಶ್ರೇಷ್ಠ ತಂದೆಯ ಮೂಲಕ ಸಿಗುತ್ತದೆ. ನಾವು ಬಾಪ್ದಾದಾರವರ ಮನೆಯಲ್ಲಿ ಕುಳಿತಿದ್ದೇವೆಂದು ಮಕ್ಕಳು ತಿಳಿದುಕೊಂಡಿದ್ದೀರಿ. ಈ ದಾದಾ (ಬ್ರಹ್ಮಾ) ತಾಯಿಯೂ ಸಹ ಆಗಿದ್ದಾರೆ. ಆ ತಂದೆಯು ಬೇರೆ, ಇವರು ತಾಯಿಯೂ ಸಹ ಆಗಿದ್ದಾರೆ ಆದರೆ ಇವರು ಪುರುಷನ ಶರೀರವಾಗುವಕಾರಣ ಮತ್ತೆ ತಾಯಿಯನ್ನು ನಿಮಿತ್ತ ಮಾಡಲಾಗುತ್ತದೆ. ಅವರನ್ನೂ ಸಹ ದತ್ತುಮಾಡಲಾಗುತ್ತದೆ. ಇದರಿಂದ ಇವರ (ಬ್ರಹ್ಮಾ) ಮೂಲಕ ರಚನೆಯನ್ನೂ ದತ್ತುಮಾಡಿಕೊಳ್ಳಲಾಗುತ್ತದೆ. ತಂದೆಯು ಮಕ್ಕಳನ್ನು ಆಸ್ತಿಯನ್ನು ಕೊಡುವುದಕ್ಕಾಗಿ ದತ್ತುಮಾಡಿಕೊಳ್ಳುತ್ತಾರೆ. ಬ್ರಹ್ಮಾರವರನ್ನೂ ದತ್ತುಮಾಡಿಕೊಂಡಿದ್ದಾರೆ. ಪ್ರವೇಶ ಮಾಡುವುದು ಅಥವಾ ದತ್ತುಮಾಡಿಕೊಳ್ಳುವುದು ಒಂದೇ ಆಗಿದೆ. ಮಕ್ಕಳು ತಿಳಿದುಕೊಂಡು ತಿಳಿಸಿಕೊಡುತ್ತಾರೆ. ನಂಬರ್ವಾರ್ ಪುರುಷಾರ್ಥದನುಸಾರ ಎಲ್ಲರಿಗೂ ಇದನ್ನೇ ತಿಳಿಸಿಕೊಡಬೇಕು - ನಾವು ನಮ್ಮ ಪರಮಪಿತ ಪರಮಾತ್ಮನ ಶ್ರೀಮತದಂತೆ ಈ ಭಾರತವನ್ನು ಮತ್ತೆ ಶ್ರೇಷ್ಠಾತಿಶ್ರೇಷ್ಠವನ್ನಾಗಿ ಮಾಡುತ್ತೇವೆ ಅಂದಾಗ ನಾವೂ ಸಹ ಅಂತಹವರಾಗಬೇಕು. ನಾನು ಶ್ರೇಷ್ಠನಾಗಿದ್ದೇನೆಯೇ ಎಂದು ನೋಡಿಕೊಳ್ಳಬೇಕು. ಯಾವುದಾದರೂ ಭ್ರಷ್ಟಾಚಾರದ ಕೆಲಸ ಮಾಡಿ ಯಾರಿಗೂ ದುಃಖವನ್ನು ಕೊಡುವುದಿಲ್ಲ ತಾನೆ? ತಂದೆಯು ಬಂದಿರುವುದೇ ತಾವು ಮಕ್ಕಳನ್ನು ಸುಖಿಗಳನ್ನಾಗಿ ಮಾಡಲು ಅಂದಾಗ ನೀವೂ ಸಹ ಎಲ್ಲರಿಗೂ ಸುಖ ಕೊಡಬೇಕು. ತಂದೆಯು ಯಾರಿಗೂ ದುಃಖವನ್ನು ಕೊಡಲು ಸಾಧ್ಯವಿಲ್ಲ. ಅವರ ಹೆಸರೇ ಆಗಿದೆ - ದುಃಖಹರ್ತ, ಸುಖಕರ್ತನೆಂದು. ಮಕ್ಕಳು ತಮ್ಮನ್ನು ಪರಿಶೀಲನೆ ಮಾಡಿಕೊಳ್ಳಬೇಕು - ಮನಸ್ಸಾ-ವಾಚಾ-ಕರ್ಮಣಾ ಯಾರಿಗೂ ದುಃಖ ಕೊಡುತ್ತಿಲ್ಲವೆ? ಶಿವತಂದೆಯು ಎಂದೂ ಯಾರಿಗೂ ದುಃಖ ಕೊಡುವುದಿಲ್ಲ. ನಾನು ಕಲ್ಪ-ಕಲ್ಪ ನೀವು ಮಕ್ಕಳಿಗೆ ಈ ಬೇಹದ್ದಿನ ಕಥೆಯನ್ನು ತಿಳಿಸಿಕೊಡುತ್ತೇನೆಂದು ತಂದೆಯು ತಿಳಿಸುತ್ತಾರೆ. ಈಗ ತಮ್ಮ ಬುದ್ಧಿಯಲ್ಲಿ ನಾವು ನಮ್ಮ ಮನೆಗೆ ಹೋಗುತ್ತೇವೆ ನಂತರ ಹೊಸಜಗತ್ತಿನಲ್ಲಿ ಬರುತ್ತೇವೆ ಎಂಬುದಿದೆ. ಈಗ ವಿದ್ಯೆಯನುಸಾರ ಅಂತ್ಯದಲ್ಲಿ ತಾವು ವರ್ಗಾಯಿಸಲ್ಪಡುತ್ತೀರಿ. ಹಿಂತಿರುಗಿ ಮನೆಗೆ ಹೋಗಿ ನಂತರ ನಂಬರ್ವಾರ್ ಪಾತ್ರವನ್ನಭಿನಯಿಸಲು ಬರುತ್ತೀರಿ. ಈ ರಾಜಧಾನಿಯು ಸ್ಥಾಪನೆಯಾಗುತ್ತಾ ಇದೆ.

ಈಗ ಯಾರು ಪುರುಷಾರ್ಥ ಮಾಡುತ್ತಾರೆಯೋ ಅದೇ ಪುರುಷಾರ್ಥ ಕಲ್ಪ-ಕಲ್ಪವೂ ನಿಮ್ಮದು ಸಿದ್ಧವಾಗುತ್ತದೆ ಎಂಬುದನ್ನು ಮಕ್ಕಳು ತಿಳಿದುಕೊಂಡಿದ್ದೀರಿ. ಇದನ್ನು ಮತ್ತೆ-ಮತ್ತೆ ಎಲ್ಲರ ಬುದ್ಧಿಯಲ್ಲಿ ಕೂರಿಸಬೇಕು. ರಚಯಿತ ಮತ್ತು ರಚನೆಯ ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ತಂದೆಯನ್ನು ಬಿಟ್ಟು ಯಾರೂ ಸಹ ತಿಳಿದುಕೊಂಡಿಲ್ಲ. ಶ್ರೇಷ್ಠಾತಿಶ್ರೇಷ್ಠ ತಂದೆಯ ಹೆಸರನ್ನೇ ಇಲ್ಲದಂತೆ ಮಾಡಿಬಿಟ್ಟಿದ್ದಾರೆ. ತ್ರಿಮೂರ್ತಿಯೆಂದು ಹೆಸರಿದೆ, ತ್ರಿಮೂರ್ತಿ ಮಾರ್ಗವೂ ಸಹ ಇದೆ, ತ್ರಿಮೂರ್ತಿಭವನವೂ ಸಹ ಇದೆ, ತ್ರಿಮೂರ್ತಿಯೆಂದು ಬ್ರಹ್ಮಾ-ವಿಷ್ಣು-ಶಂಕರರಿಗೆ ಹೇಳಲಾಗುತ್ತದೆ - ಈ ಮೂವರ ರಚಯಿತ ಶಿವತಂದೆಯಾಗಿದ್ದಾರೆ ಆದರೆ ಅವರ ಮೂಲಹೆಸರನ್ನೇ ಇಲ್ಲದಂತೆ ಮಾಡಿಬಿಟ್ಟಿದ್ದಾರೆ. ಶ್ರೇಷ್ಠಾತಿಶ್ರೇಷ್ಠ ಶಿವತಂದೆ ನಂತರ ತ್ರಿಮೂರ್ತಿಗಳೆಂದು ನೀವು ಮಕ್ಕಳು ತಿಳಿದುಕೊಂಡಿದ್ದೀರಿ. ಶಿವತಂದೆಯಿಂದ ನಾವು ಮಕ್ಕಳು ಆ ಆಸ್ತಿಯನ್ನು ಪಡೆದುಕೊಳ್ಳುತ್ತೇವೆ. ತಂದೆ ಮತ್ತು ತಂದೆಯ ಜ್ಞಾನ ಮತ್ತು ಆಸ್ತಿ- ಇವೆರಡರ ಸ್ಮೃತಿಯಿದ್ದಿದ್ದೇ ಆದರೆ ಸದಾಕಾಲ ಹರ್ಷಿತರಾಗಿರುತ್ತೀರಿ. ತಂದೆಯ ನೆನಪಿನಲ್ಲಿದ್ದು ನೀವು ಯಾರಿಗಾದರೂ ಜ್ಞಾನದ ಬಾಣವನ್ನು ಬಿಡುತ್ತೀರೆಂದರೆ ಒಳ್ಳೆಯ ಪ್ರಭಾವಬೀರುತ್ತದೆ. ಅದರಲ್ಲಿ ಶಕ್ತಿಯು ಬರುತ್ತಾಹೋಗುತ್ತದೆ. ನೆನಪಿನ ಯಾತ್ರೆಯಿಂದಲೇ ಶಕ್ತಿಯು ಬರುತ್ತದೆ. ಈಗ ಶಕ್ತಿಯು ಗುಪ್ತವಾಗಿದೆ ಏಕೆಂದರೆ ಆತ್ಮವು ಪತಿತ, ತಮೋಪ್ರಧಾನವಾಗಿಬಿಟ್ಟಿದೆ. ನಾವು ತಮೋಪ್ರಧಾನರಿಂದ ಸತೋಪ್ರಧಾನರಾಗಬೇಕೆಂಬ ಮೂಲಚಿಂತೆಯಿರಬೇಕು. ಮನ್ಮನಾಭವದ ಅರ್ಥವೂ ಸಹ ಇದೇ ಆಗಿದೆ. ಗೀತೆಯನ್ನು ಯಾರು ಓದುತ್ತಾರೆಯೋ ಅವರನ್ನು ಕೇಳಬೇಕು - ಮನ್ಮನಾಭವದ ಅರ್ಥವೇನು? ನನ್ನನ್ನು ನೆನಪು ಮಾಡಿದ್ದೇ ಆದರೆ ಆಸ್ತಿಯು ಸಿಗುತ್ತದೆ ಎಂದು ಯಾರು ಹೇಳಿದರು. ಹೊಸಪ್ರಪಂಚದ ಸ್ಥಾಪನೆಯನ್ನು ಕೃಷ್ಣನೇನೂ ಮಾಡುವುದಿಲ್ಲ, ಅವನು ರಾಜಕುಮಾರನಾಗಿದ್ದಾನೆ. ಬ್ರಹ್ಮಾರವರ ಮೂಲಕ ಸ್ಥಾಪನೆಯೆಂದು ಗಾಯನವಿದೆ. ಈಗ ಕರ್ತವ್ಯವನ್ನು ಮಾಡಿಸುವಂತಹವರು ಯಾರು? ಇದನ್ನು ಮರೆತುಬಿಟ್ಟಿದ್ದಾರೆ. ಅದಕ್ಕಾಗಿ ಸರ್ವವ್ಯಾಪಿಯೆಂದು ಹೇಳಿಬಿಡುತ್ತಾರೆ. ಬ್ರಹ್ಮಾ-ವಿಷ್ಣು-ಶಂಕರ ಎಲ್ಲರಲ್ಲಿಯೂ ಅವರೇ ಇದ್ದಾರೆಂದು ಹೇಳುತ್ತಾರೆ. ಇದಕ್ಕೆ ಅಜ್ಞಾನವೆಂದು ಕರೆಯಲಾಗುತ್ತದೆ. ನಿಮಗೆ ಪಂಚವಿಕಾರರೂಪಿ ರಾವಣನು ನಿಮ್ಮನ್ನು ಎಷ್ಟೊಂದು ತಿಳುವಳಿಕೆಹೀನರನ್ನಾಗಿ ಮಾಡಿದ್ದಾನೆಂದು ತಂದೆಯು ಹೇಳುತ್ತಾರೆ. ನಾವೂ ಸಹ ಮೊದಲು ಹೀಗೆಯೇ ಇದ್ದೆವು. ಮೊದಲು ಉತ್ತಮರಿಗಿಂತ ಉತ್ತಮರು ನಾವೇ ಆಗಿದ್ದೆವು ನಂತರ ಕೆಳಗಿಳಿಯುತ್ತಾ ಮಹಾನ್ ಪತಿತರಾದೆವು. ಶಾಸ್ತ್ರದಲ್ಲಿ ರಾಮ ಭಗವಂತ ಕಪಿಸೈನ್ಯವನ್ನು ಕಟ್ಟಿದ್ದನೆಂದು ತೋರಿಸುತ್ತಾರೆ. ಇದೂ ಸಹ ಸರಿಯಾಗಿದೆ. ನಾವು ಮೊದಲು ಕಪಿಯ ಸಮಾನರಾಗಿದ್ದೆವೆಂಬುದು ನಿಮಗೆ ತಿಳಿದಿದೆ. ಇದು ಭ್ರಷ್ಟಾಚಾರಿ ಪ್ರಪಂಚವಾಗಿದೆ ಎಂಬುದು ಈಗ ಅನುಭೂತಿಯಾಗುತ್ತಿದೆ. ಒಬ್ಬರಿಗೊಬ್ಬರು ನಿಂದನೆಯನ್ನು ಮಾಡುತ್ತಾ ಮುಳ್ಳನ್ನು ಚುಚ್ಚುತ್ತಿರುತ್ತಾರೆ. ಇದು ಮುಳ್ಳಿನ ಕಾಡಾಗಿದೆ, ಅದು ಹೂದೋಟವಾಗಿದೆ. ಕಾಡು ಬಹಳ ದೊಡ್ಡದಾಗಿರುತ್ತದೆ, ಹೂದೋಟವು ಬಹಳ ಚಿಕ್ಕದಾಗಿರುತ್ತದೆ, ಇದು ದೊಡ್ಡದಿರುವುದಿಲ್ಲ. ಈ ಸಮಯದಲ್ಲಿ ಇದು ಬಹಳ ದೊಡ್ಡ ಮುಳ್ಳಿನ ಕಾಡಾಗಿದೆ ಎಂಬುದನ್ನು ಮಕ್ಕಳು ತಿಳಿದುಕೊಂಡಿದ್ದೀರಿ. ಸತ್ಯಯುಗದಲ್ಲಿ ಹೂದೋಟವು ಎಷ್ಟು ಚಿಕ್ಕದಾಗಿರುತ್ತದೆ, ಇವೆಲ್ಲಾ ಮಾತುಗಳನ್ನು ನೀವು ಮಕ್ಕಳೂ ಸಹ ನಂಬರ್ವಾರ್ ಪುರುಷಾರ್ಥದನುಸಾರ ತಿಳಿದುಕೊಂಡಿದ್ದೀರಿ. ಯಾರಲ್ಲಿ ಜ್ಞಾನ-ಯೋಗವಿಲ್ಲ, ಸೇವೆಯನ್ನೂ ಸಹ ಮಾಡುವುದಿಲ್ಲ ಅಂತಹವರಿಗೆ ಆಂತರಿಕ ಖುಷಿಯಲ್ಲಿರಲು ಸಾಧ್ಯವಿಲ್ಲ. ದಾನ ಮಾಡುವುದರಿಂದ ಮನುಷ್ಯರಿಗೆ ಖುಷಿಯಾಗುತ್ತದೆ. ಇವರು ಹಿಂದಿನ ಜನ್ಮದಲ್ಲಿ ದಾನ-ಪುಣ್ಯವನ್ನು ಮಾಡಿದ್ದಾರೆ, ಅದಕ್ಕಾಗಿ ಎಷ್ಟು ಒಳ್ಳೆಯ ಜನ್ಮವನ್ನು ಪಡೆದುಕೊಂಡಿದ್ದಾರೆಂದು ತಿಳಿಯುತ್ತಾರೆ. ಕೆಲವರು ಭಕ್ತರಾಗಿರುತ್ತಾರೆ, ಅವರು ನಾವು ಒಳ್ಳೆಯ ಭಕ್ತರ ಮನೆಯಲ್ಲಿ ಹೋಗಿ ಜನ್ಮಪಡೆಯುತ್ತೇವೆ ಎಂದು ತಿಳಿದುಕೊಳ್ಳುತ್ತಾರೆ. ಒಳ್ಳೆಯ ಕರ್ಮದ ಫಲವೂ ಸಹ ಒಳ್ಳೆಯದೇ ಸಿಗುತ್ತದೆ. ತಂದೆಯು ಕುಳಿತು ಕರ್ಮ, ಅಕರ್ಮ, ವಿಕರ್ಮದ ಗತಿಯನ್ನು ಮಕ್ಕಳಿಗೆ ತಿಳಿಸಿಕೊಡುತ್ತಾರೆ. ಜಗತ್ತು ಈ ಎಲ್ಲಾ ಮಾತುಗಳನ್ನು ತಿಳಿದುಕೊಂಡಿಲ್ಲ. ಈಗ ರಾವಣನ ರಾಜ್ಯವಿರುವಕಾರಣ ಮನುಷ್ಯರ ಜನ್ಮವು ವಿಕಾರದಿಂದಲೇ ಆಗುತ್ತದೆ ಎಂಬುದು ನಿಮಗೆ ತಿಳಿದಿದೆ. ಪತಿತರಂತೂ ಆಗಲೇಬೇಕಾಗಿದೆ, ಐದುವಿಕಾರಗಳು ಎಲ್ಲರಲ್ಲಿಯೂ ಪ್ರವೇಶವಾಗಿದೆ. ಭಲೆ ದಾನ-ಪುಣ್ಯವನ್ನು ಮಾಡುತ್ತಾರೆ, ಅಲ್ಪಕಾಲಕ್ಕಾಗಿ ಅದರ ಫಲವು ಸಿಗುತ್ತದೆ. ಆದರೂ ಸಹ ಪಾಪವನ್ನೇ ಮಾಡುತ್ತಿರುತ್ತಾರೆ. ರಾವಣರಾಜ್ಯದಲ್ಲಿ ಯಾವುದೇ ಕೊಡುವ-ತೆಗೆದುಕೊಳ್ಳುವುದಿದೆ ಅದೆಲ್ಲವೂ ಪಾಪದಿಂದ ಕೂಡಿದೆ. ದೇವತೆಗಳ ಮುಂದೆ ಎಷ್ಟೊಂದು ಸ್ವಚ್ಛತೆಯಿಂದ ಭೋಗವನ್ನಿಡುತ್ತಾರೆ. ಸ್ವಚ್ಛರಾಗಿ ಬರುತ್ತಾರೆ, ಆದರೆ ಏನನ್ನೂ ತಿಳಿದುಕೊಂಡಿಲ್ಲ. ಬೇಹದ್ದಿನ ತಂದೆಯನ್ನು ಎಷ್ಟೆಲ್ಲಾ ನಿಂದನೆ ಮಾಡಿದ್ದಾರೆ. ನಾವು ಇದನ್ನು ಮಹಿಮೆ ಮಾಡುತ್ತಿದ್ದೇವೆಂದು ತಿಳಿದುಕೊಂಡಿದ್ದಾರೆ. ಈಶ್ವರ ಸರ್ವವ್ಯಾಪಿ, ಸರ್ವಶಕ್ತಿವಂತನೆಂದು ಮಹಿಮೆ ಮಾಡುತ್ತಾರೆ. ಆದರೆ ಇದೆಲ್ಲವೂ ಇವರ ಉಲ್ಟಾಮತವಾಗಿದೆ ಎಂದು ತಂದೆಯು ಹೇಳುತ್ತಾರೆ.

ನೀವು ಮೊಟ್ಟಮೊದಲು ತಂದೆಯ ಮಹಿಮೆಯನ್ನು ತಿಳಿಸುತ್ತೀರಿ - ಶ್ರೇಷ್ಠಾತಿಶ್ರೇಷ್ಠ ಭಗವಂತ ಒಬ್ಬರೇ ಆಗಿದ್ದಾರೆ, ನಾವು ಅವರನ್ನೇ ನೆನಪು ಮಾಡುತ್ತೇವೆ. ರಾಜಯೋಗದ ಗುರಿ-ಧ್ಯೇಯವು ಎದುರಿನಲ್ಲಿದೆ. ಈ ರಾಜಯೋಗವನ್ನು ತಂದೆ0iÉುೀ ಕಲಿಸುತ್ತಾರೆ. ಕೃಷ್ಣನಿಗೆ ತಂದೆಯೆಂದು ಹೇಳುವುದಿಲ್ಲ, ಅವನು ಮಗುವಾಗಿದ್ದಾನೆ. ಶಿವನಿಗೆ ತಂದೆಯೆಂದು ಕರೆಯಲಾಗುತ್ತದೆ. ಅವರಿಗೆ ತನ್ನದೇ ಆದ ಶರೀರವಿಲ್ಲ, ನಾನು ಇದನ್ನು ಲೋನ್ ಆಗಿ ತೆಗೆದುಕೊಳ್ಳುತ್ತೇನೆ ಆದ್ದರಿಂದ ಇವರಿಗೆ ಬಾಪ್ದಾದಾ ಎಂದು ಕರೆಯಲಾಗುತ್ತದೆ. ಅವರು ಶ್ರೇಷ್ಠಾತಿಶ್ರೇಷ್ಠ ನಿರಾಕಾರ ತಂದೆಯಾಗಿದ್ದಾರೆ, ರಚನೆಗೆ ರಚನೆಯಿಂದ ಆಸ್ತಿಯು ಸಿಗಲು ಸಾಧ್ಯವಿಲ್ಲ. ಲೌಕಿಕ ಸಂಬಂಧದಲ್ಲಿ ಮಕ್ಕಳಿಗೆ ತಂದೆಯಿಂದ ಆಸ್ತಿಯು ಸಿಗುತ್ತದೆ, ಮಗಳಿಗೆ ಸಿಗಲು ಸಾಧ್ಯವಿಲ್ಲ.

ಈಗ ತಂದೆಯು ತಿಳಿಸಿದ್ದಾರೆ - ನೀವಾತ್ಮಗಳು ನಮ್ಮ ಮಕ್ಕಳಾಗಿದ್ದೀರಿ. ಪ್ರಜಾಪಿತ ಬ್ರಹ್ಮಾರವರ ಮಕ್ಕಳೂ ಆಗಿದ್ದೀರಿ. ಬ್ರಹ್ಮಾರವರಿಂದ ಆಸ್ತಿಯು ಸಿಗುವುದಿಲ್ಲ. ತಂದೆಯ ಮಕ್ಕಳಾಗುವುದರಿಂದಲೇ ಆಸ್ತಿಯು ಸಿಗಲು ಸಾಧ್ಯವಿದೆ. ಆ ತಂದೆಯು ತಾವು ಮಕ್ಕಳ ಸಮ್ಮುಖದಲ್ಲಿ ಕುಳಿತು ತಿಳಿಸಿಕೊಡುತ್ತಾರೆ, ಇವರದು ಯಾವುದೇ ಶಾಸ್ತ್ರವಿರಲು ಸಾಧ್ಯವಿಲ್ಲ. ಭಲೆ ನೀವು ಬರೆಯುತ್ತೀರಿ - ಸಾಹಿತ್ಯವನ್ನು ಮುದ್ರಿಸುತ್ತೀರಿ ಆದರೂ ಸಹ ಶಿಕ್ಷಕರಿಲ್ಲದೆ ಯಾರೂ ಸಹ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಶಿಕ್ಷಕರಿಲ್ಲದೆ ಪುಸ್ತಕದಿಂದ ಯಾರೂ ಸಹ ತಿಳಿದುಕೊಳ್ಳಲು ಸಾಧ್ಯವಿಲ್ಲ. ನೀವು ಆತ್ಮೀಯ ಶಿಕ್ಷಕರಾಗಿದ್ದೀರಿ, ತಂದೆಯು ಬೀಜರೂಪನಾಗಿದ್ದಾರೆ. ಅವರ ಬಳಿ ಇಡೀ ವೃಕ್ಷದ ಆದಿ-ಮಧ್ಯ-ಅಂತ್ಯದ ಜ್ಞಾನವಿದೆ. ಶಿಕ್ಷಕನ ರೂಪದಲ್ಲಿ ಕುಳಿತು ನಿಮಗೆ ತಿಳಿಸಿಕೊಡುತ್ತಾರೆ - ನಮಗೆ ಪರಮಪಿತನೇ ನಮ್ಮನ್ನು ತನ್ನ ಮಕ್ಕಳನ್ನಾಗಿ ಮಾಡಿಕೊಂಡಿದ್ದಾರೆ ಎಂದು ಮಕ್ಕಳಿಗೆ ಸದಾಕಾಲ ಖುಷಿಯಿರಬೇಕು. ಅವರೇ ನಮಗೆ ಸತ್ಯಶಿಕ್ಷಕನಾಗಿ ಓದಿಸುತ್ತಾರೆ, ಸತ್ಯಸದ್ಗುರುವೂ ಆಗಿದ್ದಾರೆ, ಜೊತೆಯಲ್ಲಿ ಕರೆದುಕೊಂಡು ಹೋಗುತ್ತಾರೆ. ಸರ್ವರ ಸದ್ಗತಿದಾತ ಒಬ್ಬರೇ ಆಗಿದ್ದಾರೆ. ಶ್ರೇಷ್ಠಾತಿಶ್ರೇಷ್ಠ ತಂದೆಯೇ ಆಗಿದ್ದಾರೆ ಅವರೇ ಪ್ರತೀ 5000 ವರ್ಷಗಳ ನಂತರ ಆಸ್ತಿಯನ್ನು ಕೊಡುತ್ತಾರೆ. ಅವರ ಶಿವಜಯಂತಿಯನ್ನೂ ಆಚರಿಸುತ್ತೀರಿ. ವಾಸ್ತವದಲ್ಲಿ ಶಿವನ ಜಯಂತಿಯ ಜೊತೆ ತ್ರಿಮೂರ್ತಿಯನ್ನುವುದು ಇರಬೇಕಾಗಿದೆ. ನೀವು ತ್ರಿಮೂರ್ತಿ ಶಿವಜಯಂತಿಯನ್ನು ಆಚರಿಸುತ್ತೀರಿ ಕೇವಲ ಶಿವಜಯಂತಿಯನ್ನಾಚರಿಸುವುದರಿಂದ ಯಾವುದೇ ಮಾತು ಸಿದ್ಧವಾಗುವುದಿಲ್ಲ. ತಂದೆಯು ಬರುತ್ತಾರೆ ನಂತರ ಬ್ರಹ್ಮನ ಜನ್ಮವಾಗುತ್ತದೆ. ಮಕ್ಕಳಾದಿರೆಂದರೆ ಬ್ರಾಹ್ಮಣರಾದಿರಿ ಮತ್ತು ಗುರಿ-ಧ್ಯೇಯವು ಎದುರಿನಲ್ಲಿಯೇ ಇದೆ. ತಂದೆಯು ತಾವೇ ಬಂದು ಸ್ಥಾಪನೆ ಮಾಡುತ್ತಾರೆ. ಗುರಿ-ಧ್ಯೇಯವೂ ಸಹ ಸಂಪೂರ್ಣ ಸ್ಪಷ್ಟವಾಗಿದೆ. ಕೇವಲ ಕೃಷ್ಣನ ಹೆಸರನ್ನು ಹಾಕುವುದರಿಂದ ಪೂರ್ಣಗೀತೆಯ ಮಹತ್ವವೇ ಹೊರಟುಹೋಗಿದೆ. ಇದೂ ಸಹ ಡ್ರಾಮಾದಲ್ಲಿ ನೊಂದಣಿಯಾಗಿದೆ. ಇದೇ ತಪ್ಪು ಮತ್ತೆ ಆಗಲಿದೆ. ಜ್ಞಾನ ಮತ್ತು ಭಕ್ತಿಯ ಆಟವಾಗಿದೆ. ಮುದ್ದಾದ ಮಕ್ಕಳೇ, ಸುಖಧಾಮ-ಶಾಂತಿಧಾಮವನ್ನು ನೆನಪು ಮಾಡಿ ಎಂದು ತಂದೆಯು ತಿಳಿಸುತ್ತಾರೆ. ತಂದೆ ಮತ್ತು ಆಸ್ತಿ - ಎಷ್ಟು ಸಹಜವಾಗಿದೆ. ಮನ್ಮನಾಭವದ ಅರ್ಥವೇನು? ಎಂದು ಯಾರನ್ನಾದರೂ ಕೇಳಿ. ನೋಡಿ, ಏನು ಹೇಳುತ್ತಾರೆ? ಭಗವಂತನೆಂದು ಯಾರಿಗೆ ಹೇಳಲಾಗುತ್ತದೆ? ಶ್ರೇಷ್ಠಾತಿಶ್ರೇಷ್ಠ ಭಗವಂತನಾಗಿದ್ದಾರೆ ಅವರಿಗೆ ಸರ್ವವ್ಯಾಪಿ0iÉುಂದು ಹೇಳಲಾಗುತ್ತದೆ0iÉುೀ! ಅವರು ಎಲ್ಲರ ತಂದೆಯಾಗಿದ್ದಾರೆ, ಈ ತ್ರಿಮೂರ್ತಿ ಶಿವಜಯಂತಿ ಬರುತ್ತದೆ. ನೀವು ತ್ರಿಮೂರ್ತಿ ಶಿವನ ಚಿತ್ರವನ್ನು ಮುದ್ರಣ ಮಾಡಿಸಬೇಕು. ಶ್ರೇಷ್ಠಾತಿಶ್ರೇಷ್ಠ ಶಿವ ನಂತರ ಸೂಕ್ಷ್ಮವತನವಾಸಿ ಬ್ರಹ್ಮಾ-ವಿಷ್ಣು-ಶಂಕರ. ಶ್ರೇಷ್ಠಾತಿಶ್ರೇಷ್ಠ ಶಿವತಂದೆಯು ಭಾರತವನ್ನು ಸ್ವರ್ಗವನ್ನಾಗಿ ಮಾಡುತ್ತಾರೆ, ಅವರ ಜಯಂತಿಯನ್ನು ನೀವು ಏಕೆ ಆಚರಿಸುವುದಿಲ್ಲ? ಅವಶ್ಯವಾಗಿ ಭಾರತಕ್ಕೆ ಆಸ್ತಿಯನ್ನು ಕೊಟ್ಟಿದ್ದರು. ಅವರ ರಾಜ್ಯವಿತ್ತು, ಇದರಲ್ಲಿ ತಮಗೆ ಆರ್ಯಸಮಾಜದವರೂ ಸಹ ಸಹಾಯ ಮಾಡುತ್ತಾರೆ ಏಕೆಂದರೆ ಅವರೂ ಸಹ ಶಿವನನ್ನು ಒಪ್ಪಿಕೊಳ್ಳುತ್ತಾರೆ. ನೀವು ನಿಮ್ಮ ಬಾವುಟವನ್ನು ಹಾರಿಸಿ. ಒಂದುಕಡೆ ನಿಮ್ಮ ಬಾವುಟ, ಇನ್ನೊಂದುಕಡೆ ವೃಕ್ಷ, ಇದೇ ಬಾವುಟವು ವಾಸ್ತವದಲ್ಲಿ ಇರಬೇಕು. ಇದು ಆಗಲು ಸಾಧ್ಯವಿದೆಯಲ್ಲವೆ! ನೀವು ಬಾವುಟವನ್ನು ಹಾರಿಸಿದಾಗ ಎಲ್ಲರೂ ನೋಡಲಿ. ಎಲ್ಲದರ ತಿಳುವಳಿಕೆಯು ಇದರಲ್ಲಿಯೇ ಇದೆ. ಕಲ್ಪವೃಕ್ಷ ಮತ್ತು ನಾಟಕ - ಇದರಲ್ಲಿ ಸಂಪೂರ್ಣ ಸ್ಪಷ್ಟವಾಗಿದೆ. ನಮ್ಮ ಧರ್ಮವು ಮತ್ತೆ ಯಾವಾಗ ಬರುತ್ತದೆಯೆಂಬುದು ಎಲ್ಲರಿಗೂ ತಿಳುವಳಿಕೆಗೆ ಬರುತ್ತದೆ. ತಮಗೆ ತಾವೇ ಲೆಕ್ಕವನ್ನು ಮಾಡುತ್ತಾರೆ. ಎಲ್ಲರಿಗೂ ಈ ಚಕ್ರ ಮತ್ತು ವೃಕ್ಷದ ಬಗ್ಗೆ ತಿಳಿಸಿಕೊಡಬೇಕು. ಕ್ರಿಸ್ತನು ಯಾವಾಗ ಬಂದರು? ಇಷ್ಟು ಸಮಯ ಆ ಆತ್ಮಗಳು ಎಲ್ಲಿರುತ್ತಾರೆ? ಅಂದಾಗ ತಕ್ಷಣ ನಿರಾಕಾರಿ ಲೋಕದಲ್ಲಿರುತ್ತಾರೆಂದು ಹೇಳುತ್ತಾರೆ. ನಾವಾತ್ಮಗಳು ರೂಪ ಬದಲಾಯಿಸಿಕೊಂಡು ಇಲ್ಲಿಗೆ ಬಂದು ಸಾಕಾರಿಗಳಾಗುತ್ತೇವೆ. ತಾವು ರೂಪವನ್ನು ಬದಲಾಯಿಸಿ, ಸಾಕಾರದಲ್ಲಿ ಬನ್ನಿ ಎಂದು ತಂದೆಗೂ ಸಹ ಹೇಳುತ್ತೀರಲ್ಲವೆ. ಇಲ್ಲಿಯೇ ಬರುತ್ತಾರಲ್ಲವೆ, ಸೂಕ್ಷ್ಮವತನದಲ್ಲಂತೂ ಬರುವುದಿಲ್ಲ. ಹೇಗೆ ನಾವು ರೂಪವನ್ನು ಬದಲಾಯಿಸಿಕೊಂಡು ಪಾತ್ರವನ್ನಭಿನಯಿಸುತ್ತೇವೆಯೋ ತಾವೂ ಸಹ ಬನ್ನಿ ಮತ್ತೆ ಬಂದು ರಾಜಯೋಗವನ್ನು ಕಲಿಸಿ. ರಾಜಯೋಗವಿರುವುದೇ ಭಾರತವನ್ನು ಸ್ವರ್ಗವನ್ನಾಗಿ ಮಾಡಲು, ಇದು ಬಹಳ ಸಹಜವಾದ ಮಾತಾಗಿದೆ. ಮಕ್ಕಳಿಗೆ ಬಹಳ ಉತ್ಸುಕತೆಯಿರಬೇಕು - ಸ್ವಯಂ ಧಾರಣೆ ಮಾಡಿ ಮತ್ತೆ ಅನ್ಯರಿಗೆ ಧಾರಣೆ ಮಾಡಿಸಬೇಕು ಅದಕ್ಕಾಗಿ ಓದು-ಬರಹ ಕಲಿತಿರಬೇಕು. ತಂದೆಯು ಭಾರತಕ್ಕೆ ಬಂದು ಸ್ವರ್ಗವನ್ನಾಗಿ ಮಾಡುತ್ತಾರೆ. ಕ್ರಿಸ್ತನಿಗೆ 3000 ವರ್ಷಕ್ಕೆ ಮೊದಲು ಭಾರತವು ಸ್ವರ್ಗವಾಗಿತ್ತೆಂದು ಹೇಳುತ್ತಾರೆ ಆದ್ದರಿಂದ ತ್ರಿಮೂರ್ತಿ ಶಿವನ ಚಿತ್ರವನ್ನು ಎಲ್ಲರಿಗೂ ಕಳುಹಿಸಿಕೊಡಬೇಕು. ತ್ರಿಮೂರ್ತಿ ಶಿವನ ಸ್ಟಾಂಪ್ ಮುದ್ರಿಸಬೇಕು. ಈ ಸ್ಟಾಂಪ್ ಮಾಡುವಂತಹವರ ವಿಭಾಗವಿರುತ್ತದೆ. ದೆಹಲಿಯಲ್ಲಿ ಬಹಳಷ್ಟು ಓದು-ಬರಹವುಳ್ಳವರಿದ್ದಾರೆ, ಈ ಕೆಲಸವನ್ನು ಮಾಡಲು ಸಾಧ್ಯವಿದೆ. ನಿಮ್ಮ ರಾಜಧಾನಿಯು ದೆಹಲಿಯಾಗಬೇಕು. ಮೊದಲು ದೆಹಲಿಯನ್ನು ಪರಿಸ್ಥಾನವೆಂದು ಹೇಳಲಾಗುತ್ತಿತ್ತು, ಈಗಂತೂ ಸ್ಮಶಾನವಾಗಿದೆ. ಈ ಎಲ್ಲಾ ಮಾತುಗಳು ಮಕ್ಕಳ ಬುದ್ಧಿಯಲ್ಲಿರಬೇಕು.

ಈಗ ನೀವು ಸದಾ ಖುಷಿಯಲ್ಲಿರಬೇಕು, ಬಹಳ-ಬಹಳ ಮಧುರರಾಗಬೇಕು, ಎಲ್ಲರನ್ನೂ ಪ್ರೀತಿಯಿಂದ ನಡೆಸಬೇಕು, ಸರ್ವಗುಣ ಸಂಪನ್ನ 16 ಕಲಾಸಂಪೂರ್ಣರಾಗುವ ಪುರುಷಾರ್ಥ ಮಾಡಬೇಕು. ನಿಮ್ಮ ಪುರುಷಾರ್ಥದ ಲಕ್ಷ್ಯವೂ ಇದೇ ಆಗಿದೆ ಆದರೆ ಇಲ್ಲಿಯವರೆಗೂ ಯಾರೂ ಆಗಿಲ್ಲ. ಈಗ ನಿಮ್ಮದು ಏರುವಕಲೆಯಾಗುತ್ತಿದೆ, ನಿಧಾನ-ನಿಧಾನವಾಗಿ ಏರುತ್ತಾ ಹೋಗುತ್ತೀರಲ್ಲವೆ. ಅಂದಾಗ ತಂದೆಯು ಎಲ್ಲಾ ಪ್ರಕಾರದಿಂದ ಶಿವಜಯಂತಿಯ ಸೇವೆಯನ್ನು ಮಾಡಬೇಕೆಂದು ಸೂಚನೆಯನ್ನು ಕೊಡುತ್ತಾರೆ. ಇದರಿಂದ ಮನುಷ್ಯರು ಇವರ ಜ್ಞಾನವು ಬಹಳ ಉತ್ತಮವಾದದ್ದು ಎಂದು ತಿಳಿದುಕೊಳ್ಳುತ್ತಾರೆ. ಮನುಷ್ಯರಿಗೆ ತಿಳಿಸಿಕೊಳ್ಳುವುದರಲ್ಲಿ ಎಷ್ಟೊಂದು ಪರಿಶ್ರಮವೆನಿಸುತ್ತದೆ. ಶ್ರಮವಿಲ್ಲದೆ ರಾಜಧಾನಿಯು ಹೇಗೆ ಸ್ಥಾಪನೆಯಾಗುತ್ತದೆ! ಏರುತ್ತಾರೆ, ಬೀಳುತ್ತಾರೆ ಮತ್ತೆ ಏರುತ್ತಾರೆ. ಮಕ್ಕಳಿಗೂ ಸಹ ಒಂದಲ್ಲಒಂದು ಬಿರುಗಾಳಿಗಳು ಬರುತ್ತವೆ, ಮೂಲಮಾತು ನೆನಪಿನದಾಗಿದೆ. ನೆನಪಿನಿಂದಲೇ ಸತೋಪ್ರಧಾನರಾಗಬೇಕು. ಜ್ಞಾನವಂತೂ ಬಹಳ ಸಹಜವಾಗಿದೆ. ಮಕ್ಕಳು ಬಹಳ ಮಧುರಾತಿ ಮಧುರರಾಗಬೇಕು. ಗುರಿ-ಧ್ಯೇಯವು ಎದುರಿನಲ್ಲಿದೆ. ಲಕ್ಷ್ಮಿ-ನಾರಾಯಣರು ಎಷ್ಟೊಂದು ಮಧುರರಾಗಿದ್ದಾರೆ. ಇವರನ್ನು ನೋಡಿ ಎಷ್ಟೊಂದು ಸಂತೋಷವಾಗುತ್ತದೆ. ನಾವು ವಿದ್ಯಾರ್ಥಿಗಳ ಗುರಿ-ಧ್ಯೇಯವು ಇದಾಗಿದೆ. ಓದಿಸುವಂತಹವರು ಭಗವಂತನಾಗಿದ್ದಾರೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ನಮಸ್ತೆ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ತಂದೆಯ ಮೂಲಕ ಸಿಕ್ಕಿರುವ ಜ್ಞಾನ ಮತ್ತು ಆಸ್ತಿಯ ಸ್ಮೃತಿಯನ್ನು ಇಟ್ಟುಕೊಂಡು ಸದಾಕಾಲ ಹರ್ಷಿತರಾಗಿರಬೇಕು. ಜ್ಞಾನ ಮತ್ತು ಯೋಗವು ಇದ್ದಿದ್ದೇ ಆದರೆ ಸೇವೆಯಲ್ಲಿ ತತ್ಪರರಾಗಿರಬೇಕು.

2. ಸುಖಧಾಮ ಮತ್ತು ಶಾಂತಿಧಾಮವನ್ನು ನೆನಪು ಮಾಡಬೇಕು. ದೇವತೆಗಳ ರೀತಿ ಮಧುರರಾಗಬೇಕು. ಅಪಾರ ಖುಷಿಯಲ್ಲಿರಬೇಕು. ಆತ್ಮೀಯ ಶಿಕ್ಷಕರಾಗಿ ಜ್ಞಾನದ ದಾನ ಮಾಡಬೇಕು.

ವರದಾನ:
ದೇಹ, ದೇಹದ ಸಂಬಂಧ, ಮತ್ತು ವೈಭವಗಳ ಬಂಧನಗಳಿಂದ ಸ್ವತಂತ್ರ ತಂದೆಯ ಸಮಾನ ಕರ್ಮಾತೀತ ಭವ

ಯಾರು ನಿಮಿತ್ತಮಾತ್ರ ಸೂಚನೆಯ ಪ್ರಮಾಣ ಪ್ರವೃತ್ತಿಯನ್ನು ಸಂಭಾಲನೆ ಮಾಡುತ್ತಾ ಆತ್ಮಿಕ ಸ್ವರೂಪದಲ್ಲಿರುತ್ತಾರೆ, ಮೋಹದ ಕಾರಣದಿಂದಲ್ಲ, ಅಂತಹವರು ಒಂದುವೇಳೆ ಈಗೀಗ ನಡೆಯಿರಿ ಬಂದುಬಿಡಿ ಎಂದು ಆದೇಶ ಸಿಕ್ಕಿದೊಡನೆ ಬಂದುಬಿಡುವರು. ತುತ್ತೂರಿ ಊದಿದರೂ ಮತ್ತೆ ಯೋಚನೆ ಮಾಡುವುದರಲ್ಲಿಯೇ ಸಮಯ ಕಳೆದು ಹೋಗಬಾರದು- ಆಗ ಹೇಳಲಾಗುತ್ತದೆ ನಷ್ಟಮೋಹ ಅದಕ್ಕಾಗಿ ಸದಾ ತಮ್ಮನ್ನು ಚೆಕ್ ಮಾಡಿಕೊಳ್ಳಬೇಕು ದೇಹದ, ಸಂಬಂಧಗಳ, ವೈಭವಗಳ ಬಂಧನ ತನ್ನಕಡೆ ಸೆಳೆಯುತ್ತಿಲ್ಲ ತಾನೆ. ಎಲ್ಲಿ ಬಂಧನ ಇರುತ್ತದೆ ಅಲ್ಲಿ ಆಕರ್ಷಣೆ ಇರುತ್ತದೆ. ಆದರೆ ಯಾರು ಸ್ವತಂತ್ರರಾಗಿರುತ್ತಾರೆ ಅವರು ತಂದೆಯ ಸಮಾನ ಕರ್ಮಾತೀತ ಸ್ಥಿತಿಗೆ ಸಮೀಪವಿರುತ್ತಾರೆ.

ಸ್ಲೋಗನ್:
ಸ್ನೇಹ ಮತ್ತು ಸಹಯೋಗದ ಜೊತೆ ಶಕ್ತಿರೂಪವಾದರೆ ರಾಜಧಾನಿಯಲ್ಲಿ ಮುಂದಿನ ನಂಬರ್ ಸಿಕ್ಕಿಬಿಡುತ್ತದೆ.

ತಮ್ಮ ಶಕ್ತಿಶಾಲಿ ಮನಸ್ಸಾ ಮೂಲಕ ಸಕಾಶ ಕೊಡುವ ಸೇವೆಯನ್ನು ಮಾಡಿರಿ

ಎಷ್ಟು ಈಗ ತನು, ಮನ, ಧನ ಮತ್ತು ಸಮಯ ತೊಡಗಿಸುತ್ತೀರಿ, ಅದರಿಂದ ಮನಸ್ಸಾ ಶಕ್ತಿಗಳ ಮೂಲಕ ಸೇವೆ ಮಾಡುವುದರಿಂದ ಬಹಳ ಸ್ವಲ್ಪ ಸಮಯದಲ್ಲಿ ಸಫಲತೆ ಹೆಚ್ಚು ಸಿಗುತ್ತದೆ. ಈಗ ಯಾರು ತಮ್ಮ ಪ್ರತಿ ಕೆಲ-ಕೆಲವೊಮ್ಮೆ ಪರಿಶ್ರಮ ಮಾಡಬೇಕಾಗುತ್ತದೆ – ತಮ್ಮ ಸ್ವಭಾವವನ್ನು ಪರಿವರ್ತನೆ ಮಾಡುವ ಅಥವಾ ಸಂಘಟನೆಯಲ್ಲಿ ನಡೆಯುವ ಅಥವಾ ಸೇವೆಯಲ್ಲಿ ಸಫಲತೆ ಕೆಲವೊಮ್ಮೆ ಕಡಿಮೆ ನೋಡಿ ಹೃದಯವಿಧೀರ್ಣರಾಗುವುದು, ಇದೆಲ್ಲವೂ ಸಮಾಪ್ತಿಯಾಗುವುದು.