20.02.25 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ಈಗ
ವಿಕಾರಗಳ ದಾನವನ್ನು ಕೊಟ್ಟಿದ್ದೇ ಆದರೆ ಗ್ರಹಣವು ಇಳಿಯುವುದು ಮತ್ತು ಈ ತಮೋಪ್ರಧಾನ ಪ್ರಪಂಚವು
ಸತೋಪ್ರಧಾನವಾಗುವುದು”
ಪ್ರಶ್ನೆ:
ನೀವು ಮಕ್ಕಳಿಗೆ
ಯಾವ ಮಾತಿಗೆ ಎಂದೂ ಬೇಸರವಾಗಬಾರದು?
ಉತ್ತರ:
ನಿಮಗೆ ನಿಮ್ಮ
ಜೀವನದ ಮೇಲೆ ಎಂದೂ ಬೇಸರವಾಗಬಾರದು ಏಕೆಂದರೆ ಇದು ವಜ್ರಸಮಾನ ಜನ್ಮವೆಂದು ಗಾಯನವಿದೆ, ಇದರ
ಸಂಭಾಲನೆಯನ್ನೂ ಮಾಡಬೇಕಾಗಿದೆ. ಆರೋಗ್ಯವಂತರಾಗಿದ್ದರೆ ಜ್ಞಾನವನ್ನು ಕೇಳುತ್ತಾ ಇರುತ್ತೀರಿ. ಇಲ್ಲಿ
ಎಷ್ಟು ದಿನಗಳು ಜೀವಿಸಿರುತ್ತೀರೋ ಅಷ್ಟು ಸಂಪಾದನೆಯಾಗುತ್ತಾ ಇರುವುದು. ಲೆಕ್ಕಾಚಾರಗಳು
ಸಮಾಪ್ತಿಯಾಗುತ್ತಾ ಇರುವುದು.
ಗೀತೆ:
ಓಂ ನಮಃ ಶಿವಾಯ...
...
ಓಂ ಶಾಂತಿ.
ಇಂದು ಗುರುವಾರವಾಗಿದೆ. ನೀವು ಮಕ್ಕಳು ಸತ್ಗುರುವಾರವೆಂದು ಹೇಳುತ್ತೀರಿ ಏಕೆಂದರೆ ಸತ್ಯಯುಗದ
ಸ್ಥಾಪನೆ ಮಾಡುವವರೂ ಇದ್ದಾರೆ, ಪ್ರತ್ಯಕ್ಷದಲ್ಲಿ ಸತ್ಯನಾರಾಯಣನ ಕಥೆಯನ್ನೂ ತಿಳಿಸುತ್ತಾರೆ.
ನರನಿಂದ ನಾರಾಯಣನನ್ನಾಗಿ ಮಾಡುತ್ತಾರೆ. ಸರ್ವರ ಸದ್ಗತಿದಾತನೆಂದು ಗಾಯನವನ್ನು ಮಾಡಲಾಗುತ್ತದೆ
ಮತ್ತೆ ವೃಕ್ಷಪತಿಯೂ ಆಗಿದ್ದಾರೆ. ಇದು ಮನುಷ್ಯಸೃಷ್ಟಿಯ ವೃಕ್ಷವಾಗಿದೆ, ಯಾವುದಕ್ಕೆ
ಕಲ್ಪವೃಕ್ಷವೆಂದು ಹೇಳುತ್ತಾರೆ. ಕಲ್ಪ-ಕಲ್ಪವೂ ಅರ್ಥಾತ್ 5000 ವರ್ಷಗಳ ನಂತರ ಪುನಃ ಚಾಚೂ ತಪ್ಪದೆ
ಪರಿವರ್ತನೆಯಾಗುತ್ತದೆ ಹೇಗೆ ವೃಕ್ಷವೂ ಪುನರಾವರ್ತನೆಯಾಗುತ್ತದೆಯಲ್ಲವೆ. 6 ತಿಂಗಳು ಹೂವನ್ನು
ಬಿಡುತ್ತದೆ ನಂತರ ಮಾಲಿಯು ಗಿಡದ ಗೆಡ್ಡೆಯನ್ನು ತೆಗೆದು ಮತ್ತೆ ಅದನ್ನು ನಾಟಿ ಮಾಡಿದಾಗ ಹೂಗಳನ್ನು
ಬಿಡುತ್ತದೆ.
ಇದಂತೂ ಮಕ್ಕಳಿಗೆ
ತಿಳಿದಿದೆ - ತಂದೆಯ ಜಯಂತಿಯನ್ನು ಅರ್ಧಕಲ್ಪ ಆಚರಿಸುತ್ತಾರೆ, ಇನ್ನರ್ಧಕಲ್ಪ ಮರೆತುಹೋಗುತ್ತಾರೆ.
ಭಕ್ತಿಮಾರ್ಗದಲ್ಲಿ ಅರ್ಧಕಲ್ಪ ಭಕ್ತಿಮಾಡುತ್ತಾರೆ, ತಂದೆಯು ಯಾವಾಗ ಬಂದು ಹೂದೋಟವನ್ನು ಸ್ಥಾಪನೆ
ಮಾಡುತ್ತಾರೆ. ದೆಶೆಗಳಲ್ಲಿಯೂ ಬಹಳ ಪ್ರಕಾರವಿರುತ್ತದೆ. ಬೃಹಸ್ಪತಿಯ ದೆಶೆಯೂ ಇದೆ, ಇಳಿಯುವ ಕಲೆಯ
ದೆಶೆಯೂ ಇರುತ್ತದೆ. ಈ ಸಮಯದಲ್ಲಿ ಭಾರತದ ಮೇಲೆ ರಾಹುವಿನ ಗ್ರಹಣವು ಕುಳಿತಿದೆ. ಚಂದ್ರನಿಗೂ ಸಹ
ಯಾವಾಗ ಗ್ರಹಣ ಹಿಡಿಯುತ್ತದೆಯೋ ಆಗ ದಾನ ಕೊಟ್ಟರೆ ಗ್ರಹಣವು ಬಿಡುವುದೆಂದು ಕೂಗುತ್ತಾರೆ. ಈಗ
ತಂದೆಯೂ ಸಹ ತಿಳಿಸುತ್ತಾರೆ - ಮಕ್ಕಳೇ, ಈ ಪಂಚವಿಕಾರಗಳ ದಾನವನ್ನು ಕೊಟ್ಟುಬಿಡಿ ಆಗ ಗ್ರಹಣವು
ಬಿಟ್ಟುಹೋಗುತ್ತದೆ. ಈಗ ಇಡೀ ಸೃಷ್ಟಿಯ ಮೇಲೆ ಗ್ರಹಣವು ಹಿಡಿದಿದೆ. ಪಂಚತತ್ವಗಳ ಮೇಲೂ ಸಹ ಗ್ರಹಣವು
ಹಿಡಿದಿದೆ ಏಕೆಂದರೆ ತಮೋಪ್ರಧಾನವಾಗಿಬಿಟ್ಟಿದೆ. ಪ್ರತಿಯೊಂದು ವಸ್ತುವು ಹೊಸದರಿಂದ ಹಳೆಯದು
ಅವಶ್ಯವಾಗಿ ಆಗುತ್ತದೆ. ಹೊಸ ವಸ್ತುವಿಗೆ ಸತೋಪ್ರಧಾನ, ಹಳೆಯದಕ್ಕೆ ತಮೋಪ್ರಧಾನವೆಂದು
ಹೇಳಲಾಗುತ್ತದೆ. ಚಿಕ್ಕಮಕ್ಕಳನ್ನೂ ಸಹ ಸತೋಪ್ರಧಾನರು, ಮಹಾತ್ಮರಿಗಿಂತಲೂ ಶ್ರೇಷ್ಠರೆಂದು
ಹೇಳುತ್ತಾರೆ ಏಕೆಂದರೆ ಅವರಲ್ಲಿ ಪಂಚವಿಕಾರಗಳಿರುವುದಿಲ್ಲ. ಭಕ್ತಿಯನ್ನಂತೂ ಸನ್ಯಾಸಿಗಳೂ ಸಹ
ಬಾಲ್ಯದಲ್ಲಿಯೇ ಮಾಡುತ್ತಾರೆ. ಹೇಗೆ ರಾಮತೀರ್ಥನು ಕೃಷ್ಣನ ಪೂಜಾರಿಯಾಗಿದ್ದರು, ನಂತರ ಯಾವಾಗ
ಸನ್ಯಾಸತ್ವವನ್ನು ಸ್ವೀಕರಿಸಿದರೋ ಆಗ ಪೂಜೆಯು ನಿಂತುಹೋಯಿತು. ಸೃಷ್ಟಿಯಲ್ಲಿ ಪವಿತ್ರತೆಯು
ಬೇಕಲ್ಲವೆ. ಭಾರತವು ಮೊದಲು ಎಲ್ಲದಕ್ಕಿಂತ ಪವಿತ್ರವಾಗಿತ್ತು, ನಂತರ ದೇವತೆಗಳು ವಾಮಮಾರ್ಗದಲ್ಲಿ
ಹೋಗುತ್ತಾರೆಂದರೆ ಭೂಕಂಪ ಇತ್ಯಾದಿಗಳಲ್ಲಿ ಸ್ವರ್ಗದ ಎಲ್ಲಾ ಸಾಮಗ್ರಿಗಳು, ಚಿನ್ನದ ಮಹಲುಗಳು
ಇತ್ಯಾದಿಗಳೆಲ್ಲವೂ ಸಮಾಪ್ತಿಯಾಗುತ್ತವೆ ನಂತರ ಹೊಸದಾಗಿ ಆರಂಭವಾಗುತ್ತವೆ. ವಿನಾಶವು ಅವಶ್ಯವಾಗಿ
ಆಗುತ್ತದೆ. ಯಾವಾಗ ರಾವಣರಾಜ್ಯವು ಆರಂಭವಾಗುತ್ತದೆಯೋ ಆಗ ಉಪದ್ರವಗಳಾಗುತ್ತವೆ. ಈ ಸಮಯದಲ್ಲಿ
ಎಲ್ಲರೂ ಪತಿತರಾಗಿದ್ದಾರೆ. ಸತ್ಯಯುಗದಲ್ಲಿ ದೇವತೆಗಳು ರಾಜ್ಯ ಮಾಡುತ್ತಾರೆ. ಅಸುರರು ಮತ್ತು
ದೇವತೆಗಳ ಯುದ್ಧವನ್ನು ತೋರಿಸಿದ್ದಾರೆ ಆದರೆ ದೇವತೆಗಳಿರುವುದು ಸತ್ಯಯುಗದಲ್ಲಿ ಅಂದಮೇಲೆ ಅಲ್ಲಿ
ಯುದ್ಧವಾಗಲು ಹೇಗೆ ಸಾಧ್ಯ! ಸಂಗಮಯುಗದಲ್ಲಂತೂ ದೇವತೆಗಳಿರಲು ಸಾಧ್ಯವೇ ಇಲ್ಲ. ನಿಮ್ಮ ಹೆಸರಾಗಿದೆ
- ಪಾಂಡವರು. ಪಾಂಡವರು-ಕೌರವರ ಯುದ್ಧವೂ ಆಗುವುದಿಲ್ಲ, ಇದೆಲ್ಲವೂ ಸುಳ್ಳಾಗಿದೆ. ಎಷ್ಟು
ಎಣಿಸಲಾರದಷ್ಟು ಎಲೆಗಳಿವೆ ಅದರ ಲೆಕ್ಕವನ್ನು ತೆಗೆಯಲು ಯಾರಿಂದಲೂ ಸಾಧ್ಯವಿಲ್ಲ. ಸಂಗಮಯುಗದಲ್ಲಂತೂ
ದೇವತೆಗಳಿರುವುದಿಲ್ಲ. ತಂದೆಯು ಕುಳಿತು ಆತ್ಮಗಳಿಗೇ ತಿಳಿಸುತ್ತಾರೆ. ಆತ್ಮಗಳೇ ಕೇಳುತ್ತಾ
ತಲೆಯನ್ನು ಅಲುಗಾಡಿಸುತ್ತದೆ. ನಾವು ಆತ್ಮಗಳಾಗಿದ್ದೇವೆ, ತಂದೆಯು ನಮಗೆ ಓದಿಸುತ್ತಾರೆ, ಇದನ್ನು
ಪಕ್ಕಾ ಮಾಡಿಕೊಳ್ಳಬೇಕು. ತಂದೆಯು ನಮ್ಮನ್ನು ಪತಿತರಿಂದ ಪಾವನರನ್ನಾಗಿ ಮಾಡುತ್ತಾರೆ. ಒಳ್ಳೆಯ ಹಾಗೂ
ಕೆಟ್ಟಸಂಸ್ಕಾರವು ಆತ್ಮದಲ್ಲಿಯೇ ಇರುತ್ತದೆಯಲ್ಲವೆ. ತಂದೆಯೇ ನಮಗೆ ಓದಿಸುತ್ತಾರೆಂದು ಆತ್ಮವು
ಕರ್ಮೇಂದ್ರಿಯಗಳ ಮೂಲಕ ಹೇಳುತ್ತದೆ. ತಂದೆಯು ತಿಳಿಸುತ್ತಾರೆ - ನನಗೂ ಸಹ ಕರ್ಮೇಂದ್ರಿಯಗಳು ಬೇಕು,
ಕರ್ಮೇಂದ್ರಿಯಗಳ ಮೂಲಕವೇ ತಿಳಿಸುತ್ತೇನೆ. ತಂದೆಯು ಪ್ರತೀ 5000 ವರ್ಷಗಳ ನಂತರ ನಮಗೆ ತಿಳಿಸಲು
ಬರುತ್ತಾರೆಂದು ಆತ್ಮಕ್ಕೆ ಖುಷಿಯಾಗುತ್ತದೆ. ನೀವಂತೂ ಸನ್ಮುಖದಲ್ಲಿ ಕುಳಿತಿದ್ದೀರಲ್ಲವೆ.
ಮಧುಬನದ್ದೇ ಮಹಿಮೆಯಿದೆ, ಆತ್ಮಗಳ ತಂದೆಯಂತೂ ಅವರೇ ಆಗಿದ್ದಾರೆ, ಎಲ್ಲರೂ ಅವರನ್ನೇ ಕರೆಯುತ್ತಾರೆ.
ನಿಮಗೆ ಇಲ್ಲಿ ಸನ್ಮುಖದಲ್ಲಿ ಕುಳಿತುಕೊಳ್ಳುವುದರಿಂದ ಆನಂದವಾಗುತ್ತದೆ ಆದರೆ ಎಲ್ಲರೂ ಇಲ್ಲಿ ಇರಲು
ಸಾಧ್ಯವಿಲ್ಲ. ತಮ್ಮ ಕಾರೋಬಾರ್, ಸೇವೆ ಎಲ್ಲವನ್ನೂ ನೋಡಿಕೊಳ್ಳಬೇಕಾಗಿದೆ. ಆತ್ಮಗಳು ಸಾಗರನ ಬಳಿ
ಬರುತ್ತೀರಿ, ಧಾರಣೆ ಮಾಡಿಹೋಗಿ ಮತ್ತೆ ಅನ್ಯರಿಗೂ ತಿಳಿಸಬೇಕಾಗಿದೆ ಇಲ್ಲವೆಂದರೆ ಅನ್ಯರ
ಕಲ್ಯಾಣವನ್ನು ಹೇಗೆ ಮಾಡುತ್ತೀರಿ? ನಾವು ಹೋಗಿ ಅನ್ಯರಿಗೂ ತಿಳಿಸಬೇಕೆಂದು ಜ್ಞಾನಿ ಮತ್ತು ಯೋಗಿ
ಆತ್ಮಗಳಿಗೆ ಅಭಿರುಚಿಯಿರುತ್ತದೆ. ಶಿವಜಯಂತಿಯನ್ನು ಆಚರಣೆ ಮಾಡಲಾಗುತ್ತದೆಯಲ್ಲವೆ. ಭಗವಾನುವಾಚವೂ
ಇದೆ. ಭಗವಾನುವಾಚವೆಂದು ಕೃಷ್ಣನಿಗಾಗಿ ಹೇಳಲು ಸಾಧ್ಯವಿಲ್ಲ. ಕೃಷ್ಣನು ದೈವೀ ಗುಣವಂತ
ಮನುಷ್ಯನಾಗಿದ್ದಾನೆ. ದೇವತಾಧರ್ಮವೆಂದು ಹೇಳಲಾಗುತ್ತದೆ. ಈಗ ಮಕ್ಕಳು ತಿಳಿದುಕೊಂಡಿದ್ದೀರಿ - ಈಗ
ದೇವಿ-ದೇವತಾಧರ್ಮವಿಲ್ಲ, ಈಗ ಸ್ಥಾಪನೆಯಾಗುತ್ತಾ ಇದೆ. ನಾವೀಗ ದೇವಿ-ದೇವತಾಧರ್ಮದವರಾಗಿದ್ದೇವೆಂದು
ನೀವು ಹೇಳುವುದಿಲ್ಲ. ನೀವೀಗ ಬ್ರಾಹ್ಮಣ ಧರ್ಮದವರಾಗಿದ್ದೀರಿ, ದೇವಿ-ದೇವತಾಧರ್ಮದವರಾಗುತ್ತಿದ್ದೀರಿ.
ಈ ಪತಿತ ಸೃಷ್ಟಿಯ ಮೇಲೆ ದೇವತೆಗಳ ನೆರಳೂ ಬೀಳಲು ಸಾಧ್ಯವಿಲ್ಲ, ಇದರಲ್ಲಿ ದೇವತೆಗಳು ಬರಲು
ಸಾಧ್ಯವಿಲ್ಲ. ನೀವು ದೇವತೆಗಳಾದಾಗ ನಿಮಗಾಗಿ ಹೊಸಪ್ರಪಂಚವು ಬೇಕು. ಲಕ್ಷ್ಮಿಯ ಪೂಜೆಯನ್ನು
ಮಾಡುವಾಗ ಮನೆಯನ್ನು ಸಂಪೂರ್ಣ ಸ್ವಚ್ಛಗೊಳಿಸುತ್ತಾರೆ. ಅದೇ ರೀತಿ ಈಗ ಈ ಸೃಷ್ಟಿಯದು ಎಷ್ಟೊಂದು
ಸ್ವಚ್ಛವಾಗಬೇಕಾಗಿದೆ. ಇಡೀ ಹಳೆಯ ಪ್ರಪಂಚವೇ ಸಮಾಪ್ತಿಯಾಗಬೇಕಾಗಿದೆ. ಲಕ್ಷ್ಮಿಯಿಂದ ಮನುಷ್ಯರು
ಹಣವನ್ನೇ ಕೇಳುತ್ತಾರೆ. ಲಕ್ಷ್ಮಿಯು ದೊಡ್ಡವರೋ ಅಥವಾ ಜಗದಂಬೆಯು ದೊಡ್ಡವರೋ? (ಜಗದಂಬೆ). ಜಗದಂಬೆಯ
ಮಂದಿರಗಳು ಬಹಳಷ್ಟಿವೆ. ಮನುಷ್ಯರಿಗೆ ಏನೂ ತಿಳಿದಿಲ್ಲ. ನೀವು ತಿಳಿದುಕೊಂಡಿದ್ದೀರಿ -
ಲಕ್ಷ್ಮಿಯಂತೂ ಸ್ವರ್ಗದ ಮಾಲೀಕರಾಗಿದ್ದಾರೆ ಮತ್ತು ಜಗದಂಬೆಗೆ ಸರಸ್ವತಿ ಎಂದು ಹೇಳುತ್ತಾರೆ ಆ
ಜಗದಂಬೆಯೇ ನಂತರ ಲಕ್ಷ್ಮಿಯಾಗುತ್ತಾಳೆ. ನಿಮ್ಮ ಪದವಿಯು ಶ್ರೇಷ್ಠವಾಗಿದೆ, ದೇವತೆಗಳ ಪದವಿಯು
ಕಡಿಮೆಯಾಗಿದೆ. ಬ್ರಾಹ್ಮಣರ ಶಿಖೆಯು ಸರ್ವಶ್ರೇಷ್ಠವಾಗಿದೆಯಲ್ಲವೆ. ನೀವು ಎಲ್ಲರಿಗಿಂತಲೂ
ಶ್ರೇಷ್ಠರಾಗಿದ್ದೀರಿ. ಸರಸ್ವತಿ, ಜಗದಂಬೆಯೆಂದು ನಿಮ್ಮ ಮಹಿಮೆಯಿದೆ, ಅವರಿಂದ ಏನು ಸಿಗುತ್ತದೆ?
ಸೃಷ್ಟಿಯ ರಾಜ್ಯಭಾಗ್ಯ. ಅಲ್ಲಿ ನೀವು ಧನವಂತರಾಗುತ್ತೀರಿ, ವಿಶ್ವದ ರಾಜ್ಯಭಾಗ್ಯವು ಸಿಗುತ್ತದೆ
ನಂತರ ಬಡವರಾದಾಗ ಭಕ್ತಿಮಾರ್ಗವು ಆರಂಭವಾಗುತ್ತದೆ. ನೀವು ಲಕ್ಷ್ಮಿಯನ್ನು ನೆನಪು ಮಾಡುತ್ತೀರಿ.
ಪ್ರತೀ ವರ್ಷವು ಲಕ್ಷ್ಮಿಯ ಪೂಜೆಯು ನಡೆಯುತ್ತದೆ. ಲಕ್ಷ್ಮಿಯನ್ನು ಪ್ರತೀ ವರ್ಷವು
ಆಹ್ವಾನಿಸುತ್ತಾರೆ. ಜಗದಂಬೆಯನ್ನು ಯಾರು ಪ್ರತೀ ವರ್ಷವೂ ಆಹ್ವಾನ ಮಾಡುವುದಿಲ್ಲ. ಜಗದಂಬೆಗೆ ಸದಾ
ಪೂಜೆಯು ನಡೆಯುತ್ತಲೇ ಇರುತ್ತದೆ, ಯಾವಾಗ ಬೇಕೋ ಆಗ ಜಗದಂಬೆಯ ಮಂದಿರಕ್ಕೆ ಹೋಗುತ್ತಾರೆ. ಇಲ್ಲಿಯೂ
ಸಹ ಯಾವಾಗ ಬೇಕೋ ಆಗ ಜಗದಂಬಾರವರೊಂದಿಗೆ (ಮಮ್ಮಾ) ಮಿಲನ ಮಾಡಬಹುದಾಗಿದೆ. ನೀವೂ ಸಹ
ಜಗದಂಬೆಯರಾಗುತ್ತೀರಲ್ಲವೆ! ಎಲ್ಲರಿಗೆ ವಿಶ್ವಕ್ಕೆ ಮಾಲೀಕರಾಗುವ ಮಾರ್ಗವನ್ನು
ತಿಳಿಸುವವರಾಗಿದ್ದೀರಿ. ಜಗದಂಬೆಯ ಬಳಿ ಹೋಗಿ ಎಲ್ಲವನ್ನೂ ಬೇಡುತ್ತಾರೆ. ಲಕ್ಷ್ಮಿಯಿಂದ ಕೇವಲ
ಹಣವನ್ನು ಬೇಡುತ್ತಾರೆ ಆದರೆ ಜಗದಂಬೆಯ ಬಳಿ ಎಲ್ಲಾ ಕಾಮನೆಗಳನ್ನಿಟ್ಟುಕೊಳ್ಳುತ್ತಾರೆ ಅಂದಾಗ
ಎಲ್ಲರಿಗಿಂತ ಶ್ರೇಷ್ಠಪದವಿಯು ನಿಮ್ಮದು ಈ ಸಮಯದಲ್ಲಿದೆ. ಯಾವಾಗ ನೀವು ಬಂದು ತಂದೆಗೆ
ಮಕ್ಕಳಾಗಿದ್ದೀರಿ, ತಂದೆಯು ಆಸ್ತಿಯನ್ನು ಕೊಡುತ್ತಾರೆ.
ಈಗ ನೀವು ಈಶ್ವರೀಯ
ಸಂಪ್ರದಾಯದವರಾಗಿದ್ದೀರಿ ಮತ್ತೆ ನೀವೇ ದೈವೀಸಂಪ್ರದಾಯದವರಾಗುತ್ತೀರಿ. ಭವಿಷ್ಯಕ್ಕಾಗಿ ಎಲ್ಲಾ
ಕಾಮನೆಗಳು ಈ ಸಮಯದಲ್ಲಿ ಪೂರ್ಣವಾಗುತ್ತವೆ. ಮನುಷ್ಯರಿಗೆ ಕಾಮನೆಗಳಂತೂ ಇರುತ್ತವೆ, ನಿಮ್ಮ ಎಲ್ಲಾ
ಕಾಮನೆಗಳು ಈಡೇರುತ್ತವೆ. ಈಗಂತೂ ಆಸುರೀ ಪ್ರಪಂಚವಾಗಿದೆ. ಎಷ್ಟೊಂದು ಮಕ್ಕಳಿಗೆ ಜನ್ಮ
ಕೊಡುತ್ತಿರುತ್ತಾರೆ ನೋಡಿ! ಸತ್ಯಯುಗದಲ್ಲಿ ಕೃಷ್ಣನ ಜನ್ಮವು ಹೇಗಾಗುತ್ತದೆಯೆಂಬುದನ್ನು ನೀವು
ಮಕ್ಕಳಿಗೆ ಸಾಕ್ಷಾತ್ಕಾರ ಮಾಡಿಸಲಾಗುತ್ತದೆ. ಅಲ್ಲಂತೂ ಎಲ್ಲವೂ ನಿಯಮದನುಸಾರವೇ ಆಗುತ್ತದೆ, ದುಃಖದ
ಹೆಸರೂ ಇರುವುದಿಲ್ಲ. ಅದಕ್ಕೆ ಸುಖಧಾಮವೆಂದು ಕರೆಯಲಾಗುತ್ತದೆ. ನೀವು ಅನೇಕ ಬಾರಿ
ಸುಖವನ್ನನುಭವಿಸಿದ್ದೀರಿ, ಅನೇಕ ಬಾರಿ ಸೋಲನ್ನೂ ಅನುಭವಿಸಿದ್ದೀರಿ ಮತ್ತು ಜಯವನ್ನೂಗಳಿಸಿದ್ದೀರಿ.
ನಮಗೀಗ ತಂದೆಯು ಓದಿಸುತ್ತಾರೆಂಬ ಸ್ಮೃತಿಯು ಬಂದಿದೆ. ಶಾಲೆಯಲ್ಲಿ ವಿದ್ಯೆಯನ್ನು ಓದುತ್ತಾರೆ,
ಜೊತೆಜೊತೆಗೆ ಒಳ್ಳೆಯ ನಡುವಳಿಕೆಯನ್ನು ಕಲಿಯುತ್ತಾರಲ್ಲವೆ ಅಂದರೆ ಅಲ್ಲಿ ಈ ಲಕ್ಷ್ಮಿ-ನಾರಾಯಣರಂತಹ
ನಡವಳಿಕೆಯನ್ನು (ಗುಣ) ಕಲಿಯುವುದಿಲ್ಲ. ಈಗ ನೀವು ದೈವೀಗುಣಗಳನ್ನು ಧಾರಣೆ ಮಾಡುತ್ತೀರಿ. ಅವರದೇ
ಮಹಿಮೆಯನ್ನು ಮಾಡುತ್ತಾರೆ - ಸರ್ವಗುಣ ಸಂಪನ್ನ..... ಅಂದಮೇಲೆ ಈಗ ನೀವು ಆ ರೀತಿಯಾಗಬೇಕಾಗಿದೆ.
ನೀವು ಮಕ್ಕಳಿಗೆ ತಮ್ಮ ಈ ಜೀವನದಿಂದ ಎಂದಿಗೂ ಸಾಕಾಗಬಾರದು ಏಕೆಂದರೆ ಇದು ವಜ್ರಸಮಾನ ಜನ್ಮವೆಂದು
ಗಾಯನ ಮಾಡಲಾಗಿದೆ, ಇದರ (ಶರೀರ) ಸಂಭಾಲನೆಯನ್ನೂ ಮಾಡಬೇಕಾಗುತ್ತದೆ ಏಕೆಂದರೆ ಆರೋಗ್ಯವಂತರಾಗಿದ್ದರೆ
ಜ್ಞಾನವನ್ನು ಕೇಳುತ್ತಾ ಇರುತ್ತೀರಿ. ಖಾಯಿಲೆಯ ಸಮಯದಲ್ಲಿಯೂ ಸಹ ಕೇಳಬಲ್ಲಿರಿ, ತಂದೆಯನ್ನು ನೆನಪು
ಮಾಡಬಲ್ಲಿರಿ. ಇಲ್ಲಿ ಎಷ್ಟು ದಿನಗಳು ಜೀವಿಸಿರುತ್ತೀರೋ ಅಷ್ಟು ಸುಖಿಯಾಗಿ ಜೀವಿಸುತ್ತೀರಿ ಏಕೆಂದರೆ
ಇಲ್ಲಿ ಸಂಪಾದನೆಯಾಗುತ್ತಾ ಇರುವುದು, ಲೆಕ್ಕಾಚಾರಗಳೆಲ್ಲವೂ ಸಮಾಪ್ತಿಯಾಗುತ್ತಾ ಇರುವುದು. ಬಾಬಾ,
ಸತ್ಯಯುಗವು ಯಾವಾಗ ಬರುವುದು? ಇದು ಬಹಳ ಕೊಳಕು ಪ್ರಪಂಚವಾಗಿದೆ ಎಂದು ಮಕ್ಕಳು ಕೇಳುತ್ತಾರೆ.
ಇದಕ್ಕೆ ತಂದೆಯು ತಿಳಿಸುತ್ತಾರೆ - ಅರೆ! ಮೊದಲು ತಮ್ಮ ಕರ್ಮಾತೀತ ಸ್ಥಿತಿಯನ್ನು ಮಾಡಿಕೊಳ್ಳಿ,
ಸಾಧ್ಯವಾದಷ್ಟು ಪುರುಷಾರ್ಥ ಮಾಡುತ್ತಾ ಇರಿ. ಶಿವತಂದೆಯನ್ನು ನೆನಪು ಮಾಡಿ ಎಂದು ಮಕ್ಕಳಿಗೂ ಸಹ
ಕಲಿಸಿಕೊಡಬೇಕು. ಇದು ಅವ್ಯಭಿಚಾರಿ ನೆನಪಾಗಿದೆ. ಒಬ್ಬ ಶಿವನ ಭಕ್ತಿ ಮಾಡುವುದು ಅವ್ಯಭಿಚಾರಿಭಕ್ತಿ,
ಸತೋಪ್ರಧಾನ ಭಕ್ತಿಯಾಗಿದೆ. ಮತ್ತೆ ದೇವಿ-ದೇವತೆಗಳನ್ನು ನೆನಪು ಮಾಡುವುದು ಸತೋ ಭಕ್ತಿಯಾಗಿದೆ.
ತಂದೆಯು ತಿಳಿಸುತ್ತಾರೆ - ಮಕ್ಕಳೇ, ಏಳುತ್ತಾ-ಕುಳಿತುಕೊಳ್ಳುತ್ತಾ ತಂದೆಯಾದ ನನ್ನನ್ನು ನೆನಪು
ಮಾಡಿ. ಹೇ ಪತಿತ-ಪಾವನ, ಹೇ ಮುಕ್ತಿದಾತ, ಮಾರ್ಗದರ್ಶಕ ಎಂದು ಮಕ್ಕಳೇ ಕರೆಯುತ್ತೀರಿ. ಇದನ್ನು
ಆತ್ಮವು ಹೇಳಿತಲ್ಲವೆ.
ಮಕ್ಕಳು ನೆನಪು
ಮಾಡುತ್ತೀರಿ, ತಂದೆಯು ಈಗ ಸ್ಮೃತಿ ತರಿಸುತ್ತಾರೆ, ಹೇ ದುಃಖಹರ್ತ-ಸುಖಕರ್ತನೇ ಬನ್ನಿ, ಬಂದು
ನಮ್ಮನ್ನು ದುಃಖದಿಂದ ಬಿಡುಗಡೆ ಮಾಡಿ, ಶಾಂತಿಧಾಮದಲ್ಲಿ ಕರೆದುಕೊಂಡು ಹೋಗಿ ಎಂದು ನೀವು ನೆನಪು
ಮಾಡುತ್ತಾ ಬಂದಿದ್ದೀರಿ ಆದ್ದರಿಂದ ನಾನು ನಿಮ್ಮನ್ನು ಶಾಂತಿಧಾಮದಲ್ಲಿ ಕರೆದುಕೊಂಡು ಹೋಗುತ್ತೇನೆ
ಮತ್ತೆ ಸುಖಧಾಮದಲ್ಲಿ ನಾನು ನಿಮ್ಮ ಜೊತೆ ಬರುವುದಿಲ್ಲ, ಈ ಸಮಯದಲ್ಲಿಯೇ ಜೊತೆಯಿರುತ್ತೇನೆ. ಎಲ್ಲಾ
ಆತ್ಮಗಳನ್ನು ಮನೆಗೆ ಕರೆದುಕೊಂಡು ಹೋಗುತ್ತೇನೆ. ಈಗ ನನ್ನದು ಓದಿಸುವ ಜೊತೆತನವಿದೆ ನಂತರ ಮನೆಗೆ
ಹಿಂತಿರುಗಿ ಕರೆದುಕೊಂಡು ಹೋಗುವ ಜೊತೆತನವಿರುತ್ತದೆ. ನಾನು ನನ್ನ ಪರಿಚಯವನ್ನು ನೀವು ಮಕ್ಕಳಿಗೆ
ಬಹಳ ಚೆನ್ನಾಗಿ ತಿಳಿಸಿಕೊಡುತ್ತೇನೆ. ಯಾರು ಹೇಗೇಗೆ ಪುರುಷಾರ್ಥ ಮಾಡುತ್ತಾರೆಯೋ ಹಾಗೆಯೇ
ಪ್ರಾಲಬ್ಧ ಪಡೆಯುತ್ತಾರೆ. ತಂದೆಯು ಬಹಳಷ್ಟು ತಿಳುವಳಿಕೆ ನೀಡುತ್ತಾರೆ. ಎಷ್ಟು ಸಾಧ್ಯವೋ ನನ್ನನ್ನು
ನೆನಪು ಮಾಡಿ ಅದರಿಂದ ವಿಕರ್ಮವು ವಿನಾಶವಾಗುತ್ತದೆ ಮತ್ತು ಹಾರಲು ರೆಕ್ಕೆಗಳು ಪ್ರಾಪ್ತಿಯಾಗುತ್ತದೆ.
ಆತ್ಮಕ್ಕೆ ಯಾವುದೇ ಸ್ಥೂಲ ರೆಕ್ಕೆಗಳಿಲ್ಲ. ಆತ್ಮವು ಒಂದು ಸೂಕ್ಷ್ಮಬಿಂದುವಾಗಿದೆ, ಆತ್ಮದಲ್ಲಿ
ಹೇಗೆ 84 ಜನ್ಮಗಳ ಪಾತ್ರವು ನೊಂದಾವಣೆಯಾಗಿದೆ ಎಂಬುದು ಯಾರಿಗೂ ತಿಳಿದಿಲ್ಲ. ಆತ್ಮನ ಪರಿಚಯವಾಗಲಿ,
ಪರಮಾತ್ಮನ ಪರಿಚಯವಾಗಲಿ ಇಲ್ಲ ಆದ್ದರಿಂದಲೇ ತಂದೆಯು ತಿಳಿಸುತ್ತಾರೆ - ನಾನು ಯಾರಾಗಿದ್ದೇನೆ,
ಹೇಗಿದ್ದೇನೆ ಹಾಗೆಯೇ ಯಥಾರ್ಥವಾಗಿ ನನ್ನನ್ನು ಯಾರೂ ಅರಿತುಕೊಳ್ಳುವುದಿಲ್ಲ. ನನ್ನ ಮೂಲಕವೇ
ನನ್ನನ್ನು ಮತ್ತು ನನ್ನ ರಚನೆಯ ಬಗ್ಗೆ ಅರಿತುಕೊಳ್ಳುತ್ತೀರಿ. ನಾನೇ ಬಂದು ನನ್ನ ಮಕ್ಕಳಿಗೆ ಪರಿಚಯ
ಕೊಡುತ್ತೇನೆ. ಆತ್ಮವೆಂದರೇನು ಎಂಬುದನ್ನೂ ಸಹ ತಿಳಿಸುತ್ತೇನೆ. ಇದಕ್ಕೆ ಆತ್ಮಾನುಭೂತಿ ಎಂದು
ಹೇಳಲಾಗುತ್ತದೆ. ಆತ್ಮವು ಭೃಕುಟಿಯ ಮಧ್ಯದಲ್ಲಿರುತ್ತದೆ, ಭೃಕುಟಿಯ ನಡುವೆ ಹೊಳೆಯುವ ನಕ್ಷತ್ರವೆಂದು
ಹೇಳುತ್ತಾರೆ ಆದರೆ ಆತ್ಮವೆಂದರೇನು ಎಂಬುದನ್ನು ಯಾರೂ ಅರಿತುಕೊಂಡಿಲ್ಲ. ನಮಗೆ ಆತ್ಮದ
ಸಾಕ್ಷಾತ್ಕಾರವಾಗಬೇಕೆಂದು ಯಾರಾದರೂ ಹೇಳಿದಾಗ ಅವರಿಗೆ ತಿಳಿಸಿಕೊಡಿ - ಭೃಕುಟಿಯ ಮಧ್ಯೆ ಹೊಳೆಯುವ
ನಕ್ಷತ್ರವೆಂದು ನೀವೇ ಹೇಳುತ್ತೀರಿ ಅಂದಮೇಲೆ ನಕ್ಷತ್ರವನ್ನೇನು ನೋಡುತ್ತೀರಿ? ತಿಲಕವನ್ನೂ ಸಹ
ನಕ್ಷತ್ರರೂಪದಲ್ಲಿಯೇ ಇಟ್ಟುಕೊಳ್ಳುತ್ತಾರೆ. ಚಂದ್ರಮನಲ್ಲಿಯೂ ನಕ್ಷತ್ರವನ್ನು ತೋರಿಸುತ್ತಾರೆ.
ವಾಸ್ತವದಲ್ಲಿ ಆತ್ಮವು ನಕ್ಷತ್ರ ಮಾದರಿಯಾಗಿದೆ. ಈಗ ತಂದೆಯು ತಿಳಿಸಿದ್ದಾರೆ - ನೀವು
ಜ್ಞಾನನಕ್ಷತ್ರಗಳಾಗಿದ್ದೀರಿ ಉಳಿದಂತೆ ಅ ಸೂರ್ಯ, ಚಂದ್ರ, ನಕ್ಷತ್ರಗಳು ಈ ಸೃಷ್ಟಿನಾಟಕ
ರಂಗಮಂಚಕ್ಕೆ ಬೆಳಕನ್ನು ಕೊಡುತ್ತದೆ. ಸೂರ್ಯ, ಚಂದ್ರರು ದೇವತೆಗಳಲ್ಲ, ಭಕ್ತಿಮಾರ್ಗದಲ್ಲಿ
ಸೂರ್ಯನಿಗೂ ಸಹ ನೀರನ್ನು ಅರ್ಪಣೆ ಮಾಡುತ್ತಾರೆ. ಭಕ್ತಿಮಾರ್ಗದಲ್ಲಿ ಈ ಬ್ರಹ್ಮಾತಂದೆಯೂ ಸಹ
ಇವೆಲ್ಲವನ್ನೂ ಮಾಡುತ್ತಿದ್ದರು. ಸೂರ್ಯ ದೇವತಾಯ ನಮಃ, ಚಂದ್ರ ದೇವತಾಯ ನಮಃ ಎಂದು ಹೇಳುತ್ತಾ
ಜಲಾರ್ಪಣೆ ಮಾಡುತ್ತಿದ್ದರು. ಇದೆಲ್ಲವೂ ಭಕ್ತಿಮಾರ್ಗವಾಗಿದೆ. ಇವರಂತೂ ಬಹಳ ಭಕ್ತಿಯನ್ನು
ಮಾಡಿದ್ದಾರೆ, ಇವರೇ ನಂಬರ್ವನ್ ಪೂಜ್ಯನಾಗಿದ್ದರು ಮತ್ತೆ ಇವರೇ ನಂಬರ್ವನ್ ಪೂಜಾರಿಯಾಗುತ್ತಾರೆ.
ಸಂಖ್ಯೆಗಳನ್ನು ಎಣಿಸಲಾಗುತ್ತದೆಯಲ್ಲವೆ! ರುದ್ರಮಾಲೆಯಲ್ಲಿಯೇ ಸಂಖ್ಯೆಗಳಿವೆ. ಭಕ್ತಿಯನ್ನೂ ಸಹ
ಎಲ್ಲರಿಗಿಂತ ಹೆಚ್ಚಿನದಾಗಿ ಇವರೇ ಮಾಡಿದ್ದಾರೆ. ಈಗ ತಂದೆಯು ತಿಳಿಸುತ್ತಾರೆ - ಮಕ್ಕಳೇ, ಈಗ
ಹಿರಿಯರು-ಕಿರಿಯರು ಎಲ್ಲರದೂ ವಾನಪ್ರಸ್ಥ ಸ್ಥಿತಿಯಾಗಿದೆ. ಈಗ ನಾನು ಎಲ್ಲರನ್ನೂ ಹಿಂತಿರುಗಿ
ಕರೆದುಕೊಂಡು ಹೋಗುತ್ತೇನೆ, ಪುನಃ ನೀವು ಇದೇ ಪ್ರಪಂಚದಲ್ಲಿ ಬರುವುದಿಲ್ಲ. ಉಳಿದಂತೆ ಪ್ರಳಯವಾಯಿತು,
ಪೂರ್ಣ ಜಲಮಯವಾಯಿತು ನಂತರ ಆಲದ ಎಲೆಯ ಮೇಲೆ ಕೃಷ್ಣನು ತೇಲಿ ಬಂದನೆಂದು ಯಾವ ಮಾತನ್ನು
ಶಾಸ್ತ್ರಗಳಲ್ಲಿ ತೋರಿಸುತ್ತಾರೆಯೋ ಅದು ವಾಸ್ತವಿಕವಲ್ಲ. ತಂದೆಯು ತಿಳಿಸುತ್ತಾರೆ - ಇಲ್ಲಿ ಸಾಗರದ
ಯಾವುದೇ ಮಾತಿಲ್ಲ ಅಂದರೆ ಸತ್ಯಯುಗದಲ್ಲಿ ಗರ್ಭವು ಮಹಲಿನ ಸಮಾನವಾಗಿರುತ್ತದೆ. ಮಕ್ಕಳು ಬಹಳ ಸುಖದ
ಅನುಭವ ಮಾಡುತ್ತಾರೆ, ಇಲ್ಲಿ ಗರ್ಭಕ್ಕೆ ಜೈಲು ಎಂದು ಹೇಳಲಾಗುತ್ತದೆ. ಪಾಪದ ಶಿಕ್ಷೆಯು
ಗರ್ಭದಲ್ಲಿಯೇ ಸಿಗುತ್ತದೆ ಆದ್ದರಿಂದ ಪುನಃ ತಂದೆಯು ಸ್ಮೃತಿಯನ್ನು ತರಿಸುತ್ತಾರೆ - ‘ಮನ್ಮನಾಭವ’,
ನನ್ನೊಬನನ್ನೇ ನೆನಪು ಮಾಡಿ. ಪ್ರದರ್ಶನಿಯಲ್ಲಿಯೂ ಸಹ ಕೆಲವರು ಏಣಿಯ ಚಿತ್ರದಲ್ಲಿ
ಅನ್ಯಧರ್ಮದವರನ್ನು ಏಕೆ ತೋರಿಸಿಲ್ಲವೆಂದು ಪ್ರಶ್ನಿಸುತ್ತಾರೆ. ಅವರಿಗೆ ತಿಳಿಸಿ, ಅನ್ಯಧರ್ಮದವರು
ಯಾರೂ ಸಹ 84 ಜನ್ಮಗಳನ್ನು ತೆಗೆದುಕೊಳ್ಳುವುದಿಲ್ಲ, ಎಲ್ಲಾ ಜನ್ಮಗಳನ್ನು ವೃಕ್ಷದ ಚಿತ್ರದಲ್ಲಿ
ತೋರಿಸಲಾಗಿದೆ ಅದರಿಂದ ನೀವು ಎಷ್ಟು ಜನ್ಮವನ್ನು ತೆಗೆದುಕೊಳ್ಳುತ್ತೇವೆಂದು ಲೆಕ್ಕತೆಗೆಯಿರಿ.
ನಾವಂತೂ 84 ಜನ್ಮಗಳ ಏಣಿಯ ಚಿತ್ರವನ್ನು ತೋರಿಸಬೇಕಾಗಿದೆ. ಉಳಿದೆಲ್ಲರನ್ನೂ ಚಕ್ರ ಮತ್ತು ವೃಕ್ಷದ
ಚಿತ್ರದಲ್ಲಿ ತೋರಿಸಿದ್ದಾರೆ. ಇದರಲ್ಲಿ ಎಲ್ಲಾ ಮಾತುಗಳನ್ನು ತಿಳಿಸಿದ್ದೇವೆ. ನಕ್ಷೆಯನ್ನು
ನೋಡಿದಾಗ ಲಂಡನ್ ಎಲ್ಲಿದೆ ಅಥವಾ ಇಂತಹ ನಗರವು ಎಲ್ಲಿದೆ ಎಂಬುದೆಲ್ಲವೂ ಬುದ್ಧಿಯಲ್ಲಿ
ಬಂದುಬಿಡುತ್ತದೆಯಲ್ಲವೆ. ಹಾಗೆಯೇ ತಂದೆಯು ಇಷ್ಟು ಸಹಜ ಮಾಡಿ ತಿಳಿಸಿಕೊಡುತ್ತಾರೆ. ಎಲ್ಲರಿಗೂ
ಇದನ್ನೇ ತಿಳಿಸಿಕೊಡಿ - 84 ಜನ್ಮಗಳ ಚಕ್ರವು ಈ ರೀತಿಯಾಗಿ ಸುತ್ತುತ್ತದೆ. ಈಗ ತಮೋಪ್ರಧಾನರಿಂದ
ಸತೋಪ್ರಧಾನರಾಗಬೇಕೆಂದರೆ ಬೇಹದ್ದಿನ ತಂದೆಯನ್ನು ನೆನಪು ಮಾಡಿ ಆಗ ನೀವು ಪಾವನರಾಗಿಬಿಡುತ್ತೀರಿ.
ಪಾವನರಾಗಿ ಪಾವನ ಪ್ರಪಂಚದಲ್ಲಿ ಹೋಗುತ್ತೀರಿ. ಯಾವುದೇ ಕಷ್ಟದ ಮಾತಿಲ್ಲ. ಸಮಯವು ಸಿಕ್ಕಿದಾಗ
ತಂದೆಯನ್ನು ನೆನಪು ಮಾಡಿ ಆಗ ಅದು ಬಲವಾದ ಹವ್ಯಾಸವಾಗಿಬಿಡುವುದು. ತಂದೆಯ ನೆನಪಿನಲ್ಲಿ ನೀವು
ದೆಹಲಿಯವರೆಗೆ ಪಾದಯಾತ್ರೆ ಮಾಡಿದರೂ ಸಹ ಸುಸ್ತಾಗುವುದಿಲ್ಲ. ಸತ್ಯವಾದ ನೆನಪಿದ್ದರೆ ದೇಹದ ಪರಿವೆಯು
ತುಂಡರಿಸುತ್ತಾ ಹೋಗುವುದು ಮತ್ತೆ ದಣಿವೂ ಸಹ ಆಗುವುದಿಲ್ಲ. ಕೊನೆಯಲ್ಲಿ ಬರುವವರು ನೆನಪಿನಲ್ಲಿ
ಇನ್ನೂ ತೀಕ್ಷ್ಣವಾಗುತ್ತಾ ಹೋಗುತ್ತಾರೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾ ರವರ ನೆನಪು, ಪ್ರೀತಿ ಹಾಗೂ
ಸುಪ್ರಭಾತ. ಆತ್ಮಿಕ ತಂದೆಯ ಆತ್ಮಿಕ ಮಕ್ಕಳಿಗೆ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಒಬ್ಬ ತಂದೆಯ
ಅವ್ಯಭಿಚಾರಿ ನೆನಪಿನಲ್ಲಿದ್ದು ದೇಹದ ಪರಿವೆಯನ್ನು ಕಳೆಯಬೇಕಾಗಿದೆ. ತಮ್ಮ ಕರ್ಮಾತೀತ ಸ್ಥಿತಿಯನ್ನು
ಪ್ರಾಪ್ತಿ ಮಾಡಿಕೊಳ್ಳುವ ಪುರುಷಾರ್ಥ ಮಾಡಬೇಕಾಗಿದೆ. ಈ ಶರೀರದಲ್ಲಿದ್ದು ಅವಿನಾಶಿ ಸಂಪಾದನೆಯನ್ನು
ಜಮಾ ಮಾಡಿಕೊಳ್ಳಬೇಕಾಗಿದೆ.
2. ಜ್ಞಾನಿ ಆತ್ಮಗಳಾಗಿ
ಅನ್ಯರ ಸೇವೆ ಮಾಡಬೇಕಾಗಿದೆ. ತಂದೆಯಿಂದ ಏನನ್ನು ಕೇಳಿದ್ದೀರೋ ಅದನ್ನು ಧಾರಣೆ ಮಾಡಿ ಅನ್ಯರಿಗೂ
ತಿಳಿಸಬೇಕು. ಪಂಚವಿಕಾರಗಳ ದಾನ ಮಾಡಿ ರಾಹುವಿನ ಗ್ರಹಣದಿಂದ ಮುಕ್ತರಾಗಬೇಕು.
ವರದಾನ:
ಏಕಮತ ಮತ್ತು
ಏಕರಸ ಅವಸ್ಥೆಯ ಮೂಲಕ ಧರಣಿಯನ್ನು ಫಲದಾಯಕ ಮಾಡುವಂತಹ ಸಾಹಸವಂತ ಭವ
ಯಾವಾಗ ನೀವು ಮಕ್ಕಳು
ಸಾಹಸವಂತರಾಗಿ ಸಂಗಟನೆಯಲ್ಲಿ ಎಕಮತ ಮತ್ತು ಏಕರಸ ಅವಸ್ಥೆಯಲ್ಲಿ ಇರುತ್ತಾ ಹಾಗೂ ಒಂದೇ ಕೆಲಸದಲ್ಲಿ
ತೊಡಗಿರುವಿರಿ ಆಗ ಸ್ವಯಂ ಕೂಡಾ ಪ್ರಫುಲ್ಲಿತರಾಗಿರುತ್ತಾರೆ ಮತ್ತು ಧರಣಿಯನ್ನೂ ಸಹ ಫಲದಾಯಕ
ಮಾಡುವಿರಿ. ಹೇಗೆ ಇತ್ತೀಚೆಗೆ ಸೈನ್ಸ್ ಮೂಲಕ ಈಗೀಗ ಬೀಜ ಬಿತ್ತಿದರೆ, ಈಗೀಗ ಫಲ ಸಿಗುತ್ತದೆ,
ಅದೇರೀತಿ ಸೈಲೆನ್ಸ್ ನ ಬಲದಿಂದ ಸಹಜ ಮತ್ತು ತೀವ್ರಗತಿಯಿಂದ ಪ್ರತ್ಯಕ್ಷತೆಯನ್ನು ನೋಡುತ್ತಾರೆ.
ಯಾವಾಗ ಸ್ವಯಂ ನಿರ್ವಿಘ್ನ ಒಬ್ಬ ತಂದೆಯ ಲಗನ್ನಲ್ಲಿ ಮಗನ್, ಏಕಮತ ಮತ್ತು ಎಕರಸರಾಗಿರುವಿರಿ ಆಗ
ಅನ್ಯ ಆತ್ಮಗಳೂ ಸಹ ಸ್ವತಃವಾಗಿ ಸಹಯೋಗಿಗಳಾಗುವರು ಮತ್ತು ಧರಣಿ ಫಲದಾಯಕವಾಗಿಬಿಡುವುದು.
ಸ್ಲೋಗನ್:
ಯಾರು
ಅಭಿಮಾನವನ್ನು ತಮ್ಮ ಘನತೆ ಎಂದು ತಿಳಿಯುತ್ತಾರೆ. ಅವರು ನಿರ್ಮಾನರಾಗಿರಲು ಸಾಧ್ಯವಿಲ್ಲ.
ಅವ್ಯಕ್ತ ಸೂಚನೆ:
ಏಕಾಂತಪ್ರಿಯರಾಗಿ ಏಕತೆ ಮತ್ತು ಏಕಾಗ್ರತೆಯನ್ನು ತಮ್ಮದಾಗಿಸಿಕೊಳ್ಳಿ
ಏಕಾಂತವಾಸಿ ಮತ್ತು
ರಮಣೀಕತೆ! ಎರಡು ಶಬ್ದಗಳಲ್ಲಿ ಬಹಳ ಅಂತರವಿದೆ, ಆದರೆ ಸಂಪೂರ್ಣತೆಯಲ್ಲಿ ಎರಡರ ಸಮಾನತೆಯಿರಲಿ,
ಎಷ್ಟು ಏಕಾಂತವಾಸಿ ಅಷ್ಟೇ ಜೊತೆ-ಜೊತೆಯಲ್ಲಿ ರಮಣೀಕತೆಯಿರಲಿ. ಏಕಾಂತದಲ್ಲಿ ರಮಣೀಕತೆ ಮರೆಯಾಗಬಾರದು.
ಎರಡು ಸಮಾನ ಮತ್ತು ಜೊತೆ-ಜೊತೆಯಲ್ಲಿ ಇರಲಿ. ಈಗೀಗ ಏಕಾಂತವಾಸಿ, ಈಗೀಗ ರಮಣೀಕ, ಎಷ್ಟು ಗಂಭೀರತೆ
ಅಷ್ಟೇ ಮಿಲನಸಾರವೂ ಇರಲಿ. ಮಿಲನಸಾರ ಅರ್ಥಾತ್ ಸರ್ವ ಸಂಸ್ಕಾರ ಮತ್ತು ಸ್ವಭಾವಗಳ ಜೊತೆ ಸೇರುವರು.