20.03.25         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ಈ ಹಳೆಯ ಪ್ರಪಂಚದಲ್ಲಿ ಅಲ್ಪಕಾಲದ ಕ್ಷಣಭಂಗುರ ಸುಖವಿದೆ, ಇದು ಜೊತೆಯಲ್ಲಿ ಬರುವುದಿಲ್ಲ, ಅವಿನಾಶಿ ಜ್ಞಾನರತ್ನಗಳೇ ಜೊತೆಯಲ್ಲಿ ಬರುತ್ತವೆ ಆದ್ದರಿಂದ ಅವಿನಾಶಿ ಸಂಪಾದನೆಯನ್ನು ಜಮಾ ಮಾಡಿಕೊಳ್ಳಿ”

ಪ್ರಶ್ನೆ:
ತಂದೆಯ ವಿದ್ಯೆಯಲ್ಲಿ ನಿಮಗೆ ಯಾವ ವಿದ್ಯೆಯನ್ನು ಕಲಿಸಲಾಗುವುದಿಲ್ಲ?

ಉತ್ತರ:
ಭೂತವಿದ್ಯೆ. ಯಾರದೇ ಸಂಕಲ್ಪಗಳನ್ನು ರೀಡ್ (ಗುರುತಿಸುವ) ಮಾಡುವುದೇ ಭೂತವಿದ್ಯೆಯಾಗಿದೆ. ನಿಮಗೆ ಈ ವಿದ್ಯೆಯನ್ನು ಕಲಿಸಲಾಗುವುದಿಲ್ಲ. ತಂದೆಯು ಥಾಟ್ ರೀಡರ್ ಅಲ್ಲ, ಅವರು ತಿಳಿದು-ತಿಳಿಸಿಕೊಡುವವರು ಅರ್ಥಾತ್ ಜ್ಞಾನಪೂರ್ಣನಾಗಿದ್ದಾರೆ. ತಂದೆಯು ನಿಮಗೆ ಆತ್ಮಿಕ ವಿದ್ಯೆಯನ್ನು ಓದಿಸಲು ಬರುತ್ತಾರೆ. ಈ ವಿದ್ಯೆಯಿಂದ ನಿಮಗೆ 21 ಜನ್ಮಗಳಿಗಾಗಿ ವಿಶ್ವದ ರಾಜ್ಯಭಾಗ್ಯವು ಸಿಗುತ್ತದೆ.

ಓಂ ಶಾಂತಿ.
ಭಾರತದಲ್ಲಿ ಪರಮಾತ್ಮ ಮತ್ತು ಆತ್ಮಗಳು ಬಹಳ ಕಾಲ ಅಗಲಿಹೋಗಿದ್ದರೆಂದು ಭಾರತವಾಸಿಗಳು ಹಾಡುತ್ತಾರೆ. ಈಗ ಮಕ್ಕಳು ತಿಳಿದುಕೊಂಡಿದ್ದೀರಿ, ನಾವಾತ್ಮಗಳ ತಂದೆ ಪರಮಪಿತ ಪರಮಾತ್ಮನು ನಮಗೆ ರಾಜಯೋಗವನ್ನು ಕಲಿಸುತ್ತಿದ್ದಾರೆ. ತಮ್ಮ ಪರಿಚಯವನ್ನು, ಸೃಷ್ಟಿಚಕ್ರದ ಆದಿ-ಮಧ್ಯ-ಅಂತ್ಯದ ಪರಿಚಯವನ್ನೂ ಕೊಡುತ್ತಿದ್ದಾರೆ. ಕೆಲವರಂತೂ ಪಕ್ಕಾ ನಿಶ್ಚಯಬುದ್ಧಿಯವರಿದ್ದಾರೆ, ಇನ್ನೂ ಕೆಲವರು ಕಡಿಮೆ ತಿಳಿದುಕೊಳ್ಳುತ್ತಾರೆ. ನಂಬರ್ವಾರ್ ಅಂತೂ ಇದ್ದಾರಲ್ಲವೆ. ಮಕ್ಕಳಿಗೆ ತಿಳಿದಿದೆ, ನಾವು ಜೀವಾತ್ಮರು ಪರಮಪಿತ ಪರಮಾತ್ಮನ ಸನ್ಮುಖದಲ್ಲಿ ಕುಳಿತಿದ್ದೇವೆ. ಆತ್ಮಗಳು ಪರಮಾತ್ಮನಿಂದ ಬಹಳ ಕಾಲ ಅಗಲಿದ್ದರೆಂದು ಗಾಯನವಿದೆ. ಆತ್ಮಗಳು ಮೂಲವತನದಲ್ಲಿದ್ದಾಗ ಅಗಲುವ ಮಾತೇ ಇರುವುದಿಲ್ಲ. ಇಲ್ಲಿಗೆ ಬಂದು ಜೀವಾತ್ಮರಾದಾಗ ಅರ್ಥಾತ್ ಶರೀರವನ್ನು ಧಾರಣೆ ಮಾಡಿದಾಗ ಎಲ್ಲಾ ಆತ್ಮಗಳು ಪರಮಾತ್ಮ ತಂದೆಯಿಂದ ಅಗಲಿಹೋಗುತ್ತೀರಿ, ಪರಮಪಿತ ಪರಮಾತ್ಮನಿಂದ ಅಗಲಿ ಇಲ್ಲಿ ಪಾತ್ರವನ್ನಭಿನಯಿಸಲು ಬರುತ್ತೀರಿ. ಮೊದಲು ಅರ್ಥವಿಲ್ಲದೆ ಹಾಡುತ್ತಿದ್ದಿರಿ. ಈಗ ತಂದೆಯು ಕುಳಿತು ತಿಳಿಸಿಕೊಡುತ್ತಾರೆ. ಮಕ್ಕಳಿಗೆ ತಿಳಿದಿದೆ - ಪರಮಪಿತ ಪರಮಾತ್ಮನಿಂದ ಬೇರೆಯಾಗಿ ಇಲ್ಲಿ ಪಾತ್ರವನ್ನಭಿನಯಿಸಲು ಬರುತ್ತೇವೆ. ಮೊಟ್ಟಮೊದಲಿಗೆ ನೀವೇ ತಂದೆಯಿಂದ ಅಗಲಿದ್ದೀರಿ ಆದ್ದರಿಂದ ಶಿವತಂದೆಯೂ ಸಹ ಮೊಟ್ಟಮೊದಲಿಗೆ ನಿಮ್ಮೊಂದಿಗೇ ಮಿಲನ ಮಾಡುತ್ತಾರೆ. ನಿಮಗಾಗಿ ತಂದೆಯು ಬರಬೇಕಾಗುತ್ತದೆ. ಕಲ್ಪದ ಹಿಂದೆಯೂ ಸಹ ಇದೇ ಮಕ್ಕಳಿಗೆ ಓದಿಸಿದ್ದೆನು, ಅವರೇ ಸ್ವರ್ಗದ ಮಾಲೀಕರಾದರು. ಆ ಸಮಯದಲ್ಲಿ ಮತ್ತ್ಯಾವುದೇ ಖಂಡವಿರಲಿಲ್ಲ. ಮಕ್ಕಳಿಗೆ ಗೊತ್ತಿದೆ, ನಾವು ಆದಿಸನಾತನ ದೇವಿ-ದೇವತಾಧರ್ಮದವರಾಗಿದ್ದೆವು, ಅದಕ್ಕೆ ದೇವತಾಧರ್ಮ, ದೈವೀ ಮನೆತನದವರೆಂದು ಹೇಳುತ್ತಾರೆ. ಪ್ರತಿಯೊಬ್ಬರಿಗೆ ತಮ್ಮ ಧರ್ಮವಿರುತ್ತದೆ, ಧರ್ಮವೇ ಶಕ್ತಿಯೆಂದು ಹೇಳಲಾಗುತ್ತದೆ. ಧರ್ಮದಲ್ಲಿ ಶಕ್ತಿಯಿರುತ್ತದೆ. ನೀವು ಮಕ್ಕಳೂ ಸಹ ತಿಳಿದುಕೊಂಡಿದ್ದೀರಿ - ಈ ಲಕ್ಷ್ಮೀ-ನಾರಾಯಣರು ಎಷ್ಟೊಂದು ಶಕ್ತಿಶಾಲಿಗಳಾಗಿದ್ದರು, ಭಾರತವಾಸಿಗಳು ತಮ್ಮ ಧರ್ಮವನ್ನೇ ತಿಳಿದುಕೊಂಡಿಲ್ಲ. ಭಾರತದಲ್ಲಿ ಅವಶ್ಯವಾಗಿ ಇವರದೇ ಧರ್ಮವಿತ್ತೆಂದು ಯಾರ ಬುದ್ಧಿಯಲ್ಲಿಯೂ ಬರುವುದಿಲ್ಲ. ಧರ್ಮವನ್ನು ಅರಿತುಕೊಳ್ಳದಕಾರಣ ಅಧರ್ಮಿಗಳಾಗಿಬಿಟ್ಟಿದ್ದಾರೆ. ಧರ್ಮದಲ್ಲಿ ಬಂದಾಗ ನಿಮ್ಮಲ್ಲಿ ಎಷ್ಟೊಂದು ಶಕ್ತಿಯಿರುತ್ತದೆ! ನೀವು ಕಲಿಯುಗೀ ಕಬ್ಬಿಣ ಸಮಾನ ಪರ್ವತವನ್ನು ಹಾರಿಸಿ ಸತ್ಯಯುಗೀ ಚಿನ್ನದ ಪರ್ವತವನ್ನಾಗಿ ಮಾಡಿಬಿಡುತ್ತೀರಿ. ಭಾರತವನ್ನು ಚಿನ್ನದ ಪರ್ವತವನ್ನಾಗಿ ಮಾಡುತ್ತೀರಿ, ಅಲ್ಲಂತೂ ಗಣಿಗಳಲ್ಲಿ ಚಿನ್ನವು ಹೇರಳವಾಗಿ ತುಂಬಿರುತ್ತದೆ. ಚಿನ್ನದ ಪರ್ವತಗಳಿರುತ್ತವೆ ಮತ್ತೆ ಚಿನ್ನವನ್ನು ಕರಗಿಸಿ ಅದರ ಇಟ್ಟಿಗೆಗಳನ್ನು ಮಾಡಲಾಗುತ್ತದೆ. ಮನೆಯನ್ನು ದೊಡ್ಡ ಇಟ್ಟಿಗೆಗಳಿಂದಲೇ ಮಾಡುತ್ತಾರಲ್ಲವೆ. ಮಾಯಾಮಚ್ಚಂದರನ ಆಟವನ್ನೂ ತೋರಿಸುತ್ತಾರೆ. ಇವೆಲ್ಲವೂ ಕಥೆಗಳಾಗಿವೆ, ತಂದೆಯು ತಿಳಿಸುತ್ತಾರೆ - ನಾನು ಇದೆಲ್ಲದರ ಸಾರವನ್ನು ನಿಮಗೆ ತಿಳಿಸುತ್ತೇನೆ, ಹೇಳುತ್ತಾರೆ ಧ್ಯಾನದಲ್ಲಿ ಹೋದಾಗ ಅಲ್ಲಿ ಯಥೇಚ್ಛವಾಗಿ ಇರುವುದನ್ನು ನೋಡಿ ಚಿನ್ನವನ್ನು ಜೋಳಿಗೆಗಳಲ್ಲಿ ತುಂಬಿಕೊಂಡು ಹೋಗೋಣವೆಂದು ವಿಚಾರ ಮಾಡಿದತಕ್ಷಣ ಧ್ಯಾನದಿಂದ ಕೆಳಗಿಳಿದರು ಆಗ ಏನೂ ಇರಲಿಲ್ಲ. ಹಾಗೆಯೇ ನಿಮ್ಮದೂ ಸಹ ಆಗುತ್ತದೆ, ಇದಕ್ಕೆ ದಿವ್ಯದೃಷ್ಟಿಯೆಂದು ಹೇಳಲಾಗುತ್ತದೆ. ಇದರಲ್ಲಿ ಏನೂ ಇಲ್ಲ. ಬಹಳಷ್ಟು ನೌಧಾಭಕ್ತಿಯನ್ನು ಮಾಡುತ್ತಾರೆ, ಆ ಭಕ್ತಮಾಲೆಯೇ ಬೇರೆಯಾಗಿದೆ, ಈ ಜ್ಞಾನಮಾಲೆಯೇ ಬೇರೆಯಾಗಿದೆ. ಈ ರುದ್ರಮಾಲೆ ಮತ್ತು ವಿಷ್ಣುವಿನ ಮಾಲೆಯಿದೆಯಲ್ಲವೆ. ಅದೇ ರೀತಿ ಅದು ಭಕ್ತಿಯ ಮಾಲೆಯಾಗಿದೆ. ನೀವೀಗ ರಾಜ್ಯಭಾಗ್ಯಕ್ಕಾಗಿ ಓದುತ್ತಿದ್ದೀರಿ. ನಿಮ್ಮ ಬುದ್ಧಿಯೋಗವು ಶಿಕ್ಷಕರ ಜೊತೆ ಮತ್ತು ರಾಜಧಾನಿಯ ಜೊತೆಯಿದೆ. ಹೇಗೆ ಕಾಲೇಜಿನಲ್ಲಿ ಓದುವಾಗ ಬುದ್ಧಿಯು ಶಿಕ್ಷಕರ ಜೊತೆಯಿರುತ್ತದೆ. ವಕೀಲರು ಓದಿಸಿ ತಮ್ಮ ಸಮಾನರನ್ನಾಗಿ ಮಾಡುತ್ತಾರೆ ಆದರೆ ಇಲ್ಲಿ ಶಿವತಂದೆಯಂತೂ ಆಗುವುದಿಲ್ಲ. ಇಲ್ಲಿ ಇದು ಆಶ್ಚರ್ಯದ ಮಾತಾಗಿದೆ. ನಿಮ್ಮದು ಇದು ಆತ್ಮಿಕ ವಿದ್ಯೆಯಾಗಿದೆ. ನಿಮ್ಮ ಬುದ್ಧಿಯೋಗವು ಶಿವತಂದೆಯ ಜೊತೆಯಿದೆ, ಅವರಿಗೆ ಜ್ಞಾನಪೂರ್ಣ, ಜ್ಞಾನಸಾಗರನೆಂದು ಹೇಳಲಾಗುತ್ತದೆ. ತಿಳಿದು-ತಿಳಿಸಿಕೊಡುವವರೆಂದರೆ ಇವರಲ್ಲಿ ಏನು ನಡೆಯುತ್ತಿದೆ ಎಲ್ಲರ ಹೃದಯಗಳನ್ನುಹೊಕ್ಕು ನೋಡುವವರೆಂದಲ್ಲ. ಆ ಥಾಟ್ ರೀಡರ್ಗಳು ಎಲ್ಲವನ್ನೂ ತಿಳಿಸುತ್ತಾರೆ ಅದಕ್ಕೆ ಭೂತವಿದ್ಯೆಯೆಂದು ಕರೆಯಲಾಗುತ್ತದೆ. ಇಲ್ಲಂತೂ ತಂದೆಯು ಮನುಷ್ಯರಿಂದ ದೇವತೆಗಳನ್ನಾಗಿ ಮಾಡಲು ಓದಿಸುತ್ತಾರೆ. ಮನುಷ್ಯರಿಂದ ದೇವತೆಗಳನ್ನಾಗಿ ಮಾಡಿದರೆಂದು ಗಾಯನವಿದೆ. ಈಗ ನೀವು ಮಕ್ಕಳು ತಿಳಿದುಕೊಳ್ಳುತ್ತೀರಿ - ನಾವೀಗ ಬ್ರಾಹ್ಮಣರಾಗಿದ್ದೇವೆ, ನಂತರದ ಜನ್ಮದಲ್ಲಿ ದೇವತೆಗಳಾಗುತ್ತೇವೆ, ಆದಿಸನಾತನ ದೇವಿ-ದೇವತಾಧರ್ಮವೆಂದೇ ಗಾಯನವಿದೆ. ಶಾಸ್ತ್ರಗಳಲ್ಲಿ ಅನೇಕ ಕಥೆಗಳನ್ನು ಬರೆದುಬಿಟ್ಟಿದಾರೆ. ಇಲ್ಲಿ ತಂದೆಯು ಸನ್ಮುಖದಲ್ಲಿ ಕುಳಿತು ಓದಿಸುತ್ತಾರೆ.

ಭಗವಾನುವಾಚ - ಭಗವಂತನೇ ಜ್ಞಾನಸಾಗರ, ಸುಖದಸಾಗರ, ಶಾಂತಿಯ ಸಾಗರರಾಗಿದ್ದಾರೆ, ನೀವು ಮಕ್ಕಳಿಗೆ ಆಸ್ತಿಯನ್ನು ಕೊಡುತ್ತಾರೆ. ಈ ನಿಮ್ಮ ವಿದ್ಯೆಯು 21 ಜನ್ಮಗಳಿಗಾಗಿ ಇದೆ. ಅಂದಮೇಲೆ ಒಳ್ಳೆಯ ರೀತಿಯಲ್ಲಿ ಓದಬೇಕಲ್ಲವೆ. ಈ ಆತ್ಮಿಕ ವಿದ್ಯೆಯನ್ನು ತಂದೆಯು ಒಂದೇ ಬಾರಿ ಬಂದು ಹೊಸ ಪ್ರಪಂಚದ ಸ್ಥಾಪನೆ ಮಾಡಲು ಓದಿಸುತ್ತಾರೆ. ಹೊಸಪ್ರಪಂಚದಲ್ಲಿ ಈ ದೇವಿ-ದೇವತೆಗಳ ರಾಜ್ಯವಿತ್ತು. ತಂದೆಯು ತಿಳಿಸುತ್ತಾರೆ - ನಾನು ಬ್ರಹ್ಮಾರವರ ಮೂಲಕ ಆದಿಸನಾತನ ದೇವಿ-ದೇವತಾಧರ್ಮದ ಸ್ಥಾಪನೆ ಮಾಡುತ್ತಿದ್ದೇನೆ. ಯಾವಾಗ ಈ ಧರ್ಮವಿತ್ತೋ ಆಗ ಮತ್ತ್ಯಾವುದೇ ಧರ್ಮಗಳಿರಲಿಲ್ಲ. ಈಗ ಮತ್ತೆಲ್ಲಾ ಧರ್ಮಗಳಿವೆ ಆದ್ದರಿಂದ ತ್ರಿಮೂರ್ತಿ ಚಿತ್ರದಲ್ಲಿ ಬ್ರಹ್ಮಾರವರ ಮೂಲಕ ಒಂದು ಧರ್ಮದ ಸ್ಥಾಪನೆಯೆಂದು ತಿಳಿಸುತ್ತೀರಿ. ಈಗ ಆ ಧರ್ಮವಿಲ್ಲ, ನಾನು ನಿರ್ಗುಣನಲ್ಲಿ ಯಾವುದೇ ಗುಣವಿಲ್ಲ, ತಾವೇ ದಯೆ ತೋರಿಸಿ ಎಂದು ಹಾಡುತ್ತಾರೆ. ನಮ್ಮಲ್ಲಿ ಯಾವುದೇ ಗುಣವಿಲ್ಲವೆಂದು ಹೇಳಿದಾಗ ಬುದ್ಧಿಯು ಭಗವಂತನ ಕಡೆಗೆಹೋಗುತ್ತದೆ. ಅವರನ್ನೇ ದಯಾಸಾಗರನೆಂದು ಕರೆಯಲಾಗುತ್ತದೆ. ತಂದೆಯು ಮಕ್ಕಳ ಎಲ್ಲಾ ದುಃಖವನ್ನು ಸಮಾಪ್ತಿ ಮಾಡಿ 100% ಸುಖ ಕೊಡುವುದಕ್ಕಾಗಿಯೇ ಬರುತ್ತಾರೆ, ಎಷ್ಟೊಂದು ದಯೆ ಮಾಡುತ್ತಾರೆ. ನೀವು ತಿಳಿದುಕೊಂಡಿದ್ದೀರಿ - ನಾವು ತಂದೆಯ ಬಳಿ ಬಂದಿದ್ದೇವೆಂದರೆ ಪೂರ್ಣ ಸುಖವನ್ನು ಪಡೆಯಬೇಕಾಗಿದೆ. ಅದು ಸುಖಧಾಮ, ಇದು ದುಃಖಧಾಮವಾಗಿದೆ ಅಂದಾಗ ಚಕ್ರವನ್ನೂ ಸಹ ಒಳ್ಳೆಯ ರೀತಿಯಲ್ಲಿ ಅರಿತುಕೊಳ್ಳಬೇಕಾಗಿದೆ. ಶಾಂತಿಧಾಮ, ಸುಖಧಾಮವನ್ನು ನೆನಪು ಮಾಡಿದರೆ ಅಂತಿಮಗತಿ ಸೋಗತಿಯಾಗಿಬಿಡುವುದು. ಶಾಂತಿಧಾಮವನ್ನು ನೆನಪು ಮಾಡುವುದರಿಂದ ಶರೀರವನ್ನು ಬಿಟ್ಟಾಗ ಆತ್ಮಗಳು ಶಾಂತಿಧಾಮದಲ್ಲಿ ಹೋಗುತ್ತೀರಿ. ಒಬ್ಬ ತಂದೆಯ ವಿನಃ ಮತ್ತ್ಯಾರ ನೆನಪೂ ಬರಬಾರದು. ಒಮ್ಮೆಲೆ ಬುದ್ಧಿಯೋಗವು ಸ್ಪಷ್ಟವಾಗಿರಬೇಕು. ಒಬ್ಬ ತಂದೆಯನ್ನು ನೆನಪು ಮಾಡುವುದರಿಂದಲೇ ಒಳಗೆ ಖುಷಿಯ ನಶೆಯೇರುತ್ತದೆ. ಈ ಹಳೆಯಪ್ರಪಂಚದಲ್ಲಂತೂ ಅಲ್ಪಕಾಲದ ಕ್ಷಣಭಂಗುರ ಸುಖವಿದೆ. ಅವಿನಾಶಿ ಜ್ಞಾನರತ್ನಗಳೇ ನಮ್ಮ ಜೊತೆ ಬರುತ್ತವೆ ಅಂದರೆ ಈ ಜ್ಞಾನರತ್ನಗಳ ಸಂಪಾದನೆಯೇ ಜೊತೆ ಬರುತ್ತ್ತದೆ. ಅದನ್ನು ನೀವು 21 ಜನ್ಮಗಳ ಪ್ರಾಲಬ್ಧವನ್ನು ಪಡೆಯುತ್ತೀರಿ. ಹಾ! ವಿನಾಶಿ ಧನವೂ ಸಹ, ಯಾರು ತಂದೆಗೆ ಸಹಯೋಗ ಕೊಡುತ್ತಾರೆಯೋ ಅವರ ಜೊತೆ ಬರುತ್ತದೆ. ಬಾಬಾ, ನಮ್ಮಲ್ಲಿರುವ ಕವಡೆಗಳನ್ನು ತೆಗೆದುಕೊಂಡು ಸತ್ಯಯುಗದಲ್ಲಿ ಮಹಲುಗಳನ್ನು ಕೊಡಿ ಎಂದು ಹೇಳುತ್ತಾರೆ. ತಂದೆಯು ಕವಡೆಗಳ ಬದಲಾಗಿ ಎಷ್ಟೊಂದು ರತ್ನಗಳನ್ನು ಕೊಡುತ್ತಾರೆ! ಹೇಗೆ ಅಮೇರಿಕನ್ನರು ಬಹಳಷ್ಟು ಹಣವನ್ನು ಖರ್ಚು ಮಾಡಿ ಪುರಾತನ ವಸ್ತುಗಳನ್ನು ಖರೀದಿ ಮಾಡುತ್ತಾರೆ. ಮನುಷ್ಯರು ಹಳೆಯ ವಸ್ತುಗಳಿಗೆ ಬಹಳಷ್ಟು ಬೆಲೆಯನ್ನಿಡುತ್ತಾರೆ. ಅಮೇರಿಕನ್ನರಿಂದ ಅತಿಚಿಕ್ಕದಾದ ವಸ್ತುವಿಗೂ ಸಹ ಸಾವಿರಾರು ರೂಪಾಯಿಗಳನ್ನು ತೆಗೆದುಕೊಳ್ಳುತ್ತಾರೆ. ತಂದೆಯೂ ಸಹ ಎಷ್ಟು ಒಳ್ಳೆಯ ಗ್ರಾಹಕನಾಗಿದ್ದಾರೆ! ಭೋಲಾನಾಥನೆಂದು ಗಾಯನವಿದೆಯಲ್ಲವೆ. ಮನುಷ್ಯರಿಗೆ ಇದೂ ಸಹ ತಿಳಿದಿಲ್ಲ, ಆದ್ದರಿಂದ ಶಿವ-ಶಂಕರ ಒಂದೇ ಎಂದು ಹೇಳಿಬಿಡುತ್ತಾರೆ. ಮತ್ತು ಶಂಕರನ ಮುಂದೆ ಹೋಗಿ ಜೋಳಿಗೆಯನ್ನು ತುಂಬಿಸು ಎಂದು ಹೇಳುತ್ತಾರೆ. ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ- ನಮಗೆ ಜ್ಞಾನರತ್ನಗಳು ಸಿಗುತ್ತವೆ, ಇದರಿಂದ ನಮ್ಮ ಜೋಳಿಗೆಯು ತುಂಬುತ್ತದೆ. ಇವರು ನಮ್ಮ ಬೇಹದ್ದಿನ ತಂದೆಯಾಗಿದ್ದಾರೆ. ಆದರೆ ಅವರು ಇದನ್ನು ಶಂಕರನಿಗೆ ಹೇಳುತ್ತಾರೆ ಮತ್ತು ಶಂಕರನು ದತ್ತೂರಿಯನ್ನು ಸೇವಿಸುತ್ತಿದ್ದರು, ಭಂಗೀಸೊಪ್ಪನ್ನು ಸೇದುತ್ತಿದ್ದರೆಂದು ಹೇಳುತ್ತಾರೆ. ಏನೇನೋ ಮಾತುಗಳನ್ನು ಬರೆದಿದ್ದಾರೆ. ನೀವು ಮಕ್ಕಳು ಈಗ ಸದ್ಗತಿಗಾಗಿ ಓದುತ್ತಿದ್ದೀರಿ. ಈ ವಿದ್ಯೆಯೇ ಸಂಪೂರ್ಣ ಶಾಂತಿಯಲ್ಲಿರುವಂತದ್ದಾಗಿದೆ. ಇಷ್ಟೊಂದು ವಿದ್ಯುತ್ದೀಪಗಳು ಬೆಳಗಿಸಿ ಏಕೆ ಶೋ ಮಾಡಲಾಗುತ್ತದೆಯೆಂದರೆ ಮನುಷ್ಯರು ಬಂದು ನಾವು ಶಿವಜಯಂತಿಯನ್ನು ಏಕೆ ಇಷ್ಟು ಚೆನ್ನಾಗಿ ಆಚರಣೆ ಮಾಡುತ್ತೀರಿ ಎಂದು ಕೇಳಿ ತಿಳಿದುಕೊಳ್ಳಲಿ ಎಂದು. ಶಿವನೇ ಭಾರತವನ್ನು ಧನವಂತನನ್ನಾಗಿ ಮಾಡುತ್ತಾರಲ್ಲವೆ. ಈ ಲಕ್ಷ್ಮೀ-ನಾರಾಯಣರನ್ನು ಯಾರು ಲಕ್ಷ್ಮೀ-ನಾರಾಯಣರನ್ನಾಗಿ ಮಾಡುತ್ತಾರೆಂದು ತಿಳಿದುಕೊಂಡಿದ್ದೀರಿ. ಈ ಲಕ್ಷ್ಮಿ-ನಾರಾಯಣರು ಹಿಂದಿನ ಜನ್ಮದಲ್ಲಿ ಯಾರಾಗಿದ್ದರು? ಇವರು ಹಿಂದಿನ ಜನ್ಮದಲ್ಲಿ ಜಗದಂಬಾ, ಜ್ಞಾನಜ್ಞಾನೇಶ್ವರಿಯಾಗಿದ್ದರು, ಅವರೇ ನಂತರ ರಾಜರಾಜೇಶ್ವರಿಯಾಗುತ್ತಾರೆ ಅಂದಾಗ ಯಾರ ಪದವಿ ಶ್ರೇಷ್ಠವಾಯಿತು. ನೋಡುವುದಕ್ಕೆ ಇವರು ಸ್ವರ್ಗದ ಮಾಲೀಕರಾಗಿದ್ದಾರೆ ಆದರೆ ಜಗದಂಬಾ ಎಲ್ಲಿಯ ಮಾಲೀಕರಾಗಿದ್ದರು? ಅಂದಮೇಲೆ ಇವರ ಬಳಿ ಎಲ್ಲರೂ ಏಕೆ ಹೋಗುತ್ತಾರೆ? ಬ್ರಹ್ಮನಿಗೆ 100 ಭುಜಧಾರಿ, 200 ಭುಜಧಾರಿ, ಸಾವಿರಾರು ಭುಜಧಾರಿಯನ್ನಾಗಿ ತೋರಿಸುತ್ತಾರೆ. ಎಷ್ಟು ಮಂದಿ ಮಕ್ಕಳಾಗುತ್ತಾ ಹೋಗುತ್ತೀರೋ ಅಷ್ಟು ಭುಜಗಳು ಹೆಚ್ಚಾಗುತ್ತಾ ಹೋಗುತ್ತವೆ. ಜಗದಂಬೆಗೂ ಸಹ ಲಕ್ಷ್ಮೀಗಿಂತಲೂ ಹೆಚ್ಚಿನ ಭುಜಗಳನ್ನು ತೋರಿಸುತ್ತಾರೆ. ಜಗದಂಬೆಯ ಬಳಿಯೇ ಹೋಗಿ ಎಲ್ಲರೂ ಬೇಡುತ್ತಾರೆ. ಮಕ್ಕಳು ಬೇಕು, ಇದು ಬೇಕು, ಅದು ಬೇಕು ಎಂದು ಬಹಳಷ್ಟು ಕೋರಿಕೆಗಳನ್ನಿಟ್ಟುಕೊಂಡು ಹೋಗುತ್ತಾರೆ. ಲಕ್ಷ್ಮಿಯ ಬಳಿ ಎಂದೂ ಇಂತಹ ಆಸೆಗಳನ್ನಿಟ್ಟುಕೊಂಡು ಹೋಗುವುದಿಲ್ಲ. ಲಕ್ಷ್ಮೀಯು ಕೇವಲ ಧನವಂತಳಾಗಿದ್ದಾಳೆ. ಜಗದಂಬೆಯಿಂದ ಸ್ವರ್ಗದ ರಾಜ್ಯಭಾಗ್ಯವು ಸಿಗುತ್ತದೆ. ಜಗದಂಬೆಯಿಂದ ಏನು ಕೇಳಬೇಕೆಂದು ಯಾರಿಗೂ ತಿಳಿದಿಲ್ಲ. ಇದು ವಿದ್ಯೆಯಾಗಿದೆಯಲ್ಲವೆ! ಜಗದಂಬೆ ಏನನ್ನು ಓದಿಸುತ್ತಾರೆ? ರಾಜಯೋಗ. ಇದಕ್ಕೇ ಬುದ್ಧಿಯೋಗವೆಂದೂ ಹೇಳಲಾಗುತ್ತದೆ. ನಿಮ್ಮ ಬುದ್ಧಿಯು ಎಲ್ಲಾ ಕಡೆಯಿಂದ ದೂರವಾಗಿ ಒಬ್ಬ ತಂದೆಯಕಡೆ ತೊಡಗುತ್ತದೆ. ಬುದ್ಧಿಯು ಅನೇಕ ಕಡೆ ಓಡುತ್ತದೆಯಲ್ಲವೆ. ಈಗ ತಂದೆಯು ತಿಳಿಸುತ್ತಾರೆ - ನನ್ನ ಜೊತೆ ಬುದ್ಧಿಯೋಗವನ್ನಿಡಿ ಇಲ್ಲವಾದರೆ ವಿಕರ್ಮಗಳು ವಿನಾಶವಾಗುವುದಿಲ್ಲ ಆದ್ದರಿಂದ ತಂದೆಯು ಭಾವಚಿತ್ರವನ್ನು ತೆಗೆಯುವುದಕ್ಕೂ ನಿರಾಕರಿಸುತ್ತಾರೆ. ಇದಂತೂ ಇವರ ದೇಹವಲ್ಲವೆ.

ಸ್ವಯಂ ತಂದೆಯೇ ದಲ್ಲಾಳಿಯಾಗಿ ತಿಳಿಸುತ್ತಾರೆ. ನಿಮ್ಮ ಆ ಮಾಂಗಲ್ಯವನ್ನು ನಿಷೇಧಿಸಲಾಗಿದೆ. ಕಾಮಚಿತೆಯಿಂದ ಇಳಿದು ಜ್ಞಾನಚಿತೆಯ ಮೇಲೆ ಕುಳಿತುಕೊಳ್ಳಿ. ಕಾಮಚಿತೆಯಿಂದ ಇಳಿಯಿರಿ. ತಮ್ಮನ್ನು ಆತ್ಮವೆಂದು ತಿಳಿದು ತಂದೆಯಾದ ನನ್ನನ್ನು ನೆನಪು ಮಾಡಿ ಆಗ ವಿಕರ್ಮಗಳು ವಿನಾಶವಾಗುತ್ತವೆ. ಮತ್ತ್ಯಾವ ಮನುಷ್ಯರೂ ಈ ರೀತಿ ಹೇಳಲು ಸಾಧ್ಯವಿಲ್ಲ. ಮನುಷ್ಯರಿಗೆ ಭಗವಂತನೆಂದು ಹೇಳಲು ಸಾಧ್ಯವಿಲ್ಲ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ – ತಂದೆಯೇ ಪತಿತ-ಪಾವನನಾಗಿದ್ದಾರೆ, ಅವರೇ ಬಂದು ಕಾಮಚಿತೆಯಿಂದ ಇಳಿಸಿ ಜ್ಞಾನಚಿತೆಯ ಮೇಲೆ ಕುಳ್ಳರಿಸುತ್ತಾರೆ. ಅವರು ಆತ್ಮಿಕ ತಂದೆಯಾಗಿದ್ದಾರೆ. ಆ ತಂದೆಯು ಈ ಬ್ರಹ್ಮಾರವರಲ್ಲಿ ಕುಳಿತು ತಿಳಿಸುತ್ತಾರೆ. ನೀವೂ ಆತ್ಮಗಳಾಗಿದ್ದೀರಿ, ಅನ್ಯರಿಗೂ ಇದನ್ನೇ ತಿಳಿಸುತ್ತಾ ಇರಿ - ಮನ್ಮನಾಭವ. ಮನ್ಮನಾಭವ ಎಂದು ಹೇಳುವುದರಿಂದಲೆ ಸ್ಮೃತಿಯು ಬಂದುಬಿಡುತ್ತದೆ. ಈ ಹಳೆಯಪ್ರಪಂಚದ ವಿನಾಶವೂ ಸನ್ಮುಖದಲ್ಲಿ ನಿಂತಿದೆ. ತಂದೆಯು ತಿಳಿಸುತ್ತಾರೆ - ಇದು ಮಹಾಭಾರಿ ಮಹಾಭಾರತದ ಯುದ್ಧವಾಗಿದೆ. ಯುದ್ಧವು ವಿದೇಶದಲ್ಲಿಯೂ ಆಗುತ್ತದೆ ಆದರೆ ಇದಕ್ಕೆ ಏಕೆ ಮಹಾಭಾರತ ಯುದ್ಧವೆಂದು ಹೇಳುತ್ತೀರೆಂದು ಪ್ರಶ್ನೆ ಮಾಡುತ್ತಾರೆ. ಭಾರತದಲ್ಲಿಯೇ ಯಜ್ಞವನ್ನು ರಚಿಸಲಾಗಿದೆ, ಇದರಿಂದಲೇ ವಿನಾಶಜ್ವಾಲೆಯು ಹೊರಟಿದೆ. ನಿಮಗಾಗಿ ಹೊಸಪ್ರಪಂಚವು ಬೇಕೆಂದರೆ ಮಧುರವಾದಂತಹ ಮಕ್ಕಳೇ, ಹಳೆಯ ಪ್ರಪಂಚದ ವಿನಾಶವು ಅವಶ್ಯವಾಗಿ ಆಗಲೇಬೇಕು ಆದ್ದರಿಂದ ಈ ಯುದ್ಧದ ಬೇರು ಇಲ್ಲಿಂದಲೇ ಹೊರಡುತ್ತದೆ. ಈ ರುದ್ರಜ್ಞಾನಯಜ್ಞದಿಂದ ಈ ಮಹಾಬಾರಿ ಯುದ್ಧ, ವಿನಾಶದ ಜ್ವಾಲೆಯು ಪ್ರಜ್ವಲಿತವಾಯಿತು. ಭಲೆ ಶಾಸ್ತ್ರಗಳಲ್ಲಿ ಬರೆದಿದ್ದಾರೆ ಆದರೆ ಇದನ್ನು ಯಾರು ಹೇಳಿದ್ದಾರೆ ಎಂಬುದನ್ನು ತಿಳಿದುಕೊಂಡಿಲ್ಲ. ಈಗ ತಂದೆಯು ಹೊಸಪ್ರಪಂಚಕ್ಕಾಗಿ ತಿಳಿಸುತ್ತಿದ್ದಾರೆ - ನೀವೀಗ ರಾಜ್ಯಭಾಗ್ಯವನ್ನು ಪಡೆಯುತ್ತೀರಿ, ನೀವು ದೇವಿ-ದೇವತೆಗಳಾಗುತ್ತೀರಿ. ನಿಮ್ಮ ರಾಜ್ಯದಲ್ಲಿ ಮತ್ತ್ಯಾರೂ ಇರುವಂತಿಲ್ಲ. ಈ ಆಸುರೀ ಪ್ರಪಂಚವು ವಿನಾಶವಾಗುತ್ತದೆ. ಬುದ್ಧಿಯಲ್ಲಿ ನೆನಪಿರಬೇಕು - ನೆನ್ನೆಯ ದಿನ ನಾವು ರಾಜ್ಯಭಾರ ಮಾಡುತ್ತಿದ್ದೆವು, ತಂದೆಯು ರಾಜ್ಯವನ್ನು ಕೊಟ್ಟಿದ್ದರು ನಂತರ ನಾವು 84 ಜನ್ಮಗಳನ್ನು ತೆಗೆದುಕೊಳ್ಳುತ್ತಾ ಬಂದೆವು. ಈಗ ಪುನಃ ತಂದೆಯು ಬಂದಿದ್ದಾರೆ, ನೀವು ಮಕ್ಕಳಲ್ಲಂತೂ ಜ್ಞಾನವಿದೆಯಲ್ಲವೆ. ತಂದೆಯು ಈ ಜ್ಞಾನವನ್ನು ಕೊಟ್ಟಿದ್ದಾರೆ. ದೇವತಾಧರ್ಮದ ಸ್ಥಾಪನೆಯಾಗುತ್ತದೆಯೆಂದರೆ ಉಳಿದೆಲ್ಲಾ ಆಸುರೀ ಪ್ರಪಂಚದ ವಿನಾಶವಾಗುತ್ತದೆ. ತಂದೆಯು ಬ್ರಹ್ಮಾರವರ ಮೂಲಕ ಎಲ್ಲಾ ಮಾತುಗಳನ್ನು ತಿಳಿಸುತ್ತಾರೆ. ಬ್ರಹ್ಮನೂ ಸಹ ಶಿವನ ಮಗನಾಗಿದ್ದಾರೆ. ವಿಷ್ಣುವಿನ ರಹಸ್ಯವನ್ನೂ ಸಹ ತಂದೆಯೇ ತಿಳಿಸುತ್ತಾರೆ - ಬ್ರಹ್ಮನಿಂದ ವಿಷ್ಣು, ವಿಷ್ಣುವಿನಿಂದ ಬ್ರಹ್ಮನಾಗುತ್ತಾರೆ. ಈಗ ನಿಮಗೆ ಅರ್ಥವಾಗಿದೆ - ನಾವು ಬ್ರಾಹ್ಮಣರಾಗಿದ್ದೇವೆ, ಮತ್ತೆ ದೇವತೆಗಳಾಗುತ್ತೇವೆ ನಂತರ 84 ಜನ್ಮಗಳನ್ನು ತೆಗೆದುಕೊಳ್ಳುತ್ತೇವೆ. ಈ ಜ್ಞಾನವನ್ನು ತಿಳಿಸುವವರು ಒಬ್ಬರೇ ತಂದೆಯಾಗಿದ್ದಾರೆ ಅಂದಮೇಲೆ ಯಾವುದೇ ಮನುಷ್ಯರಿಂದ ಈ ಜ್ಞಾನವು ಸಿಗಲು ಹೇಗೆ ಸಾಧ್ಯ? ಇದರಲ್ಲಿ ಎಲ್ಲವೂ ಬುದ್ಧಿಯ ಮಾತಾಗಿದೆ, ತಂದೆಯು ತಿಳಿಸುತ್ತಾರೆ -ಎಲ್ಲಾ ಕಡೆಯಿಂದ ನಿಮ್ಮ ಬುದ್ಧಿಯನ್ನು ತೆಗೆಯಿರಿ. ಬುದ್ಧಿಯೇ ಕೆಟ್ಟುಹೋಗುತ್ತದೆ. ತಂದೆಯು ತಿಳಿಸುತ್ತಾರೆ - ನನ್ನನ್ನು ನೆನಪು ಮಾಡಿದರೆ ವಿಕರ್ಮಗಳು ವಿನಾಶವಾಗುತ್ತದೆ. ಭಲೆ ಗೃಹಸ್ಥ ವ್ಯವಹಾರದಲ್ಲಿರಿ, ಲಕ್ಷ್ಯವಂತೂ ಸನ್ಮುಖದಲ್ಲಿದೆ. ನಾವು ಓದಿ ಈ ರೀತಿಯಾಗುತ್ತೇವೆಂಬುದನ್ನು ನೀವು ತಿಳಿದುಕೊಂಡಿದ್ದೀರಿ. ನಿಮ್ಮ ವಿದ್ಯೆಯೇ ಸಂಗಮಯುಗದ್ದಾಗಿದೆ. ಈಗ ನೀವು ಆಕಡೆಯೂ ಇಲ್ಲ, ಈ ಕಡೆಯೂ ಇಲ್ಲ. ನೀವು ಹೊರಗೆ ಇದ್ದೀರಿ. ತಂದೆಯನ್ನು ಅಂಬಿಗನೆಂದೂ ಹೇಳುತ್ತೀರಿ. ನಮ್ಮ ದೋಣಿಯನ್ನು ಪಾರುಮಾಡಿ ಎಂದು ಹಾಡುತ್ತಾರೆ. ಇದರ ಮೇಲೆ ಒಂದುಕಥೆಯನ್ನೂ ರಚಿಸಿದ್ದಾರೆ. ಕೆಲವರು ನಿಂತುಬಿಡುತ್ತಾರೆ, ಕೆಲವರು ಮುಂದೆ ಸಾಗುತ್ತಾರೆ. ಈಗ ತಂದೆಯು ತಿಳಿಸುತ್ತಾರೆ - ನಾನು ಈ ಬ್ರಹ್ಮಾರವರ ಮುಖದ ಮೂಲಕ ತಿಳಿಸುತ್ತೇನೆ. ಬ್ರಹ್ಮನೆಲ್ಲಿಂದ ಬಂದರು? ಪ್ರಜಾಪಿತನಂತೂ ಅವಶ್ಯವಾಗಿ ಇಲ್ಲಿಯೇ ಬೇಕಲ್ಲವೆ. ನಾನು ಇವರನ್ನು ದತ್ತು ಮಾಡಿಕೊಳ್ಳುತ್ತೇನೆ. ಇವರಿಗೆ ಹೆಸರನ್ನೂ ಇಡುತ್ತೇನೆ. ನೀವೂ ಸಹ ಬ್ರಹ್ಮಾಮುಖವಂಶಾವಳಿ ಬ್ರಾಹ್ಮಣರಾಗಿದ್ದೀರಿ, ಕಲಿಯುಗದ ಅಂತಿಮದಲ್ಲಿದ್ದೀರಿ. ಮತ್ತೆ ನೀವೇ ಸತ್ಯಯುಗದ ಆದಿಯಲ್ಲಿ ಬರುತ್ತೀರಿ, ನೀವೇ ಮೊಟ್ಟಮೊದಲಿಗೆ ತಂದೆಯಿಂದ ಅಗಲಿ ಪಾತ್ರವನ್ನಭಿನಯಿಸಲು ಬಂದಿದ್ದೀರಿ. ನಿಮ್ಮಲ್ಲಿಯೂ ಎಲ್ಲರೂ ಮೊಟ್ಟಮೊದಲಿಗೆ ಬರುವುದಿಲ್ಲ. ಯಾರು ಪೂರ್ಣ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾರೆಂದು ಅರ್ಥವಾಗುತ್ತದೆ. ಈ ಲಕ್ಷ್ಮೀ-ನಾರಾಯಣರಿಗಂತೂ ಗ್ಯಾರಂಟಿ ಇದೆಯಲ್ಲವೆ. ಶ್ಯಾಮಸುಂದರನೆಂದು ಇವರಿಗಾಗಿಯೇ ಗಾಯನವಿದೆ. Œದೇವಿ-ದೇವತೆಗಳು ಸುಂದರನಾಗಿದ್ದರು, ಶ್ಯಾಮನಿಂದ ಸುಂದರರಾಗಿದ್ದಾರೆ. ಹಳ್ಳಿಯ ಬಾಲಕನಿಂದ ಸುಂದರನಾಗಿಬಿಡುತ್ತಾರೆ. ಈ ಸಮಯದಲ್ಲಿ ಎಲ್ಲರೂ ಕನಿಷ್ಠರಾಗಿದ್ದಾರೆ. ಇದು ಬೇಹದ್ದಿನ ಮಾತಾಗಿದೆ. ಇದನ್ನು ಯಾರೂ ಅರಿತುಕೊಂಡಿಲ್ಲ. ತಂದೆಯು ಎಷ್ಟು ಒಳ್ಳೊಳ್ಳೆಯ ತಿಳುವಳಿಕೆಯನ್ನು ನೀಡುತ್ತಾರೆ. ಎಲ್ಲರಿಗೂ ಒಬ್ಬರೇ ವೈದ್ಯರಾಗಿದ್ದಾರೆ, ಇವರು ಅವಿನಾಶಿ ತಜ್ಞ ವೈದ್ಯರಾಗಿದ್ದಾರೆ.

ಯೋಗಕ್ಕೆ ಅಗ್ನಿಯೆಂದು ಹೇಳಲಾಗುತ್ತದೆ ಏಕೆಂದರೆ ಯೋಗದಿಂದಲೇ ತುಕ್ಕು ಬಿಟ್ಟುಹೋಗುತ್ತದೆ. ಯೋಗಾಗ್ನಿಯಿಂದ ತಮೋಪ್ರಧಾನ ಆತ್ಮವು ಸತೋಪ್ರಧಾನವಾಗುತ್ತದೆ. ಒಂದುವೇಳೆ ಬೆಂಕಿಯು ತಣ್ಣಗಾದರೆ ತುಕ್ಕು ಬಿಡುವುದಿಲ್ಲ. ನೆನಪಿಗೆ ಯೋಗಾಗ್ನಿಯೆಂದು ಕರೆಯಲಾಗುತ್ತದೆ, ಇದರಿಂದ ವಿಕರ್ಮಗಳು ವಿನಾಶವಾಗುತ್ತದೆ. ಆದ್ದರಿಂದ ತಂದೆಯು ತಿಳಿಸುತ್ತಾರೆ - ಮಕ್ಕಳೇ, ನಾನು ಎಷ್ಟೊಂದು ತಿಳಿಸುತ್ತೇನೆ! ಧಾರಣೆಯೂ ಬೇಕಲ್ಲವೆ. ಒಳ್ಳೆಯದು ಮನ್ಮನಾಭವ. ಇದರಲ್ಲಿ ಸುಸ್ತಾಗಬಾರದು. ತಂದೆಯನ್ನು ನೆನಪು ಮಾಡುವುದನ್ನೇ ಮರೆತುಹೋಗುತ್ತಾರೆ. ಇವರು ಪತಿಯರ ಪತಿಯಾಗಿದ್ದಾರೆ, ಜ್ಞಾನದಿಂದ ನಿಮ್ಮ ಎಷ್ಟೊಂದು ಶೃಂಗಾರ ಮಾಡುತ್ತಾರೆ. ನಿರಾಕಾರ ತಂದೆಯು ತಿಳಿಸುತ್ತಾರೆ - ಮತ್ತೆಲ್ಲದರಿಂದ ಬುದ್ಧಿಯೋಗವನ್ನು ತೆಗೆದು ತಂದೆಯಾದ ನನ್ನನ್ನು ನೆನಪು ಮಾಡಿ. ತಂದೆಯು ಎಲ್ಲರಿಗೂ ಒಬ್ಬರೇ ಆಗಿದ್ದಾರೆ, ನಿಮ್ಮದು ಈಗ ಏರುವಕಲೆಯಾಗುತ್ತದೆ. ಏರುವಕಲೆಯಿಂದ ಸರ್ವರ ಉದ್ಧಾರವೆಂದು ಹೇಳುತ್ತಾರಲ್ಲವೆ. ತಂದೆಯು ಎಲ್ಲರ ಉದ್ಧಾರ ಮಾಡಲು ಬಂದಿದ್ದಾರೆ. ರಾವಣನಂತೂ ಎಲ್ಲರನ್ನೂ ದುರ್ಗತಿಯಲ್ಲಿ ತೆಗೆದುಕೊಂಡು ಹೋಗುತ್ತಾನೆ. ರಾಮನು ಎಲ್ಲರನ್ನು ಸದ್ಗತಿಯಲ್ಲಿ ಕರೆದುಕೊಂಡು ಹೋಗುತ್ತಾರೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು , ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ತಂದೆಯ ನೆನಪಿನಿಂದ ಅಪಾರ ಸುಖದ ಅನುಭವ ಮಾಡಲು ಬುದ್ಧಿಯೋಗವು ಸ್ಪಷ್ಟವಾಗಿರಬೇಕು. ಯಾವಾಗ ನೆನಪು ಅಗ್ನಿರೂಪ ತಾಳುವುದೋ ಆಗಲೇ ಆತ್ಮವು ಸತೋಪ್ರಧಾನವಾಗುವುದು.

2. ತಂದೆಯು ಕವಡೆಗಳ ಬದಲಾಗಿ ರತ್ನಗಳನ್ನು ಕೊಡುತ್ತಾರೆ, ಇಂತಹ ಭೋಲಾನಾಥ ತಂದೆಯಿಂದ ತಮ್ಮ ಜೋಳಿಗೆಯನ್ನು ತುಂಬಿಸಿಕೊಳ್ಳಬೇಕಾಗಿದೆ. ಶಾಂತಿಯಲ್ಲಿರುವ ವಿದ್ಯೆಯನ್ನು ಓದಿ ಸದ್ಗತಿಯನ್ನು ಪ್ರಾಪ್ತಿ ಮಾಡಿಕೊಳ್ಳಬೇಕಾಗಿದೆ.

ವರದಾನ:
ಮಾಯೆಯ ಬಂಧನಗಳಿಂದ ಸದಾ ನಿರ್ಬಂಧನರಾಗಿರುವಂತಹ ಯೋಗಯುಕ್ತ, ಬಂಧನಮುಕ್ತ ಭವ

ಬಂಧನಮುಕ್ತರ ನಿಶಾನಿಯಾಗಿದೆ ಸದಾ ಯೋಗಯುಕ್ತ. ಯೋಗಯುಕ್ತ ಮಕ್ಕಳು ಜವಾಬ್ದಾರಿಗಳ ಬಂಧನ ಮತ್ತು ಮಾಯೆಯ ಬಂಧನಗಳಿಂದ ಮುಕ್ತರಾಗಿರುತ್ತಾರೆ. ಮನಸ್ಸಿನ ಬಂಧನವೂ ಸಹ ಇರಬಾರದು. ಲೌಕಿಕ ಜವಾಬ್ದಾರಿಯಂತೂ ಆಟವಾಗಿದೆ, ಆದ್ದರಿಂದ ಡೈರೆಕ್ಷನ್ ಅನುಸಾರ ಆಟದ ರೀತಿಯಿಂದ ನಗುನಗುತ್ತಾ ಆಟವಾಡಿ ಆಗ ಎಂದೂ ಸಣ್ಣ-ಪುಟ್ಟ ಮಾತುಗಳಲ್ಲಿ ಸುಸ್ತಾಗುವುದಿಲ್ಲ. ಒಂದುವೇಳೆ ಬಂಧನ ಎಂದು ತಿಳಿದರೆ ಆಗ ತೊಂದರೆಯಾಗುತ್ತದೆ. ಏನು, ಏಕೆ ಎನ್ನುವ ಪ್ರಶ್ನೆಗಳು ಏಳುತ್ತವೆ. ಆದರೆ ಜವಾಬ್ದಾರಿಯುತ ತಂದೆಯಿದ್ದಾರೆ ನೀವು ನಿಮಿತ್ತರಾಗಿರುವಿರಿ. ಈ ಸ್ಮøತಿಯಿಂದ ಬಂಧನ ಮುಕ್ತರಾಗಿ ಆಗ ಯೋಗಯುಕ್ತರಾಗಿಬಿಡುವಿರಿ.

ಸ್ಲೋಗನ್:
ಮಾಡಿಮಾಡಿಸುವಂತಹವರು ಎನ್ನುವ ಸ್ಮøತಿಯಿಂದ ಬಾನ ಮತ್ತು ಅಭಿಮಾನವನ್ನು ಸಮಾಪ್ತಿ ಮಾಡಿ.

ಅವ್ಯಕ್ತ ಸೂಚನೆ - ಸತ್ಯ ಮತ್ತು ಸಭ್ಯತೆ ರೊಪಿ ಕಲ್ಚರ್(ಸಂಸ್ಕೃತಿಯನ್ನು) ತಮ್ಮದಾಗಿಸಿಕೊಳ್ಳಿರಿ

ಪವಿತ್ರತೆ ಕೇವಲ ಅನ್ಯರಿಗೆ ದುಃಖ ಕೊಡುವುದು ಅಥವಾ ಪಾಪ ಕರ್ಮ ಮಾಡುವುದು ಅಲ್ಲ ಆದರೆ ಸ್ವಯಂನಲ್ಲಿ ಸತ್ಯತೆ, ಸ್ವಚ್ಛತೆ ಒಂದುವೇಳೆ ವಿಧಿಪೂರ್ವಕವಾಗಿ ಅನುಭವ ಮಾಡುತ್ತೀರಿ ಎಂದರೆ ತಾವು ಪವಿತ್ರರಾಗಿದ್ದೀರಿ. ಹೇಗೆ ಹೇಳಿಕೆ ಇದೆ- ಸತ್ಯತೆಯ ದೋಣಿ ಮುಳುಗುವುದಿಲ್ಲ ಆದರೆ ಅಲುಗಾಡುತ್ತದೆ. ಅಂದ ಮೇಲೆ ವಿಶ್ವಾಸದ ದೋಣಿ ಸತ್ಯತೆ ಆಗಿದೆ, ಪ್ರಾಮಾಣಿಕತೆಯಾಗಿದೆ ಯಾವುದು ಏರುಪೇರಿನಲ್ಲಿ ಬರುವುದು ಆದರೆ ಎಂದು ಸಹ ಮುಳುಗುವುದಿಲ್ಲ ಆದ್ದರಿಂದ ಸತ್ಯತೆಯ ಸಾಹಸದಿಂದ ಪರಮಾತ್ಮ ಪ್ರತ್ಯಕ್ಷತೆಯ ನಿಮಿತ್ತರಾಗಿ.