20.04.25    Avyakt Bapdada     Kannada Murli    18.01.2005     Om Shanti     Madhuban


ಸೆಕೆಂಡ್ನಲ್ಲಿ ದೇಹ ಭಾನದಿಂದ ಮುಕ್ತರಾಗಿ ಜೀವನ ಮುಕ್ತ ಸ್ಥಿತಿಯ ಅನುಭವ ಮಾಡಿ ಹಾಗೂ ಮಾಸ್ಟರ್ ಮುಕ್ತಿ ಜೀವನ ಮುಕ್ತಿದಾತ ಆಗಿ


ಇಂದು ಬಾಪ್ದಾದಾರವರು ನಾಲ್ಕಾರು ಕಡೆಯ ಲಕ್ಕಿ( ಭಾಗ್ಯಶಾಲಿ) ಹಾಗೂ ಲವ್ಲಿ(ಪ್ರಿಯ) ಮಕ್ಕಳನ್ನು ನೋಡುತ್ತಿದ್ದರು. ಪ್ರತಿಯೊಬ್ಬ ಮಗು ಸಹ ಸ್ನೇಹದಲ್ಲಿ ಸಮಾವೇಶ ಆಗಿದ್ದಾರೆ. ಈ ಪರಮಾತ್ಮ ಸ್ನೇಹ ಅಲೌಕಿಕ ಸ್ನೇಹವಾಗಿದೆ. ಈ ಸ್ನೇಹವೇ ಮಕ್ಕಳನ್ನು ತಂದೆಯವರನ್ನಾಗಿ ಮಾಡಿದೆ. ಸ್ನೇಹವೇ ಸಹಜ ವಿಜಯೀ ಆಗಿ ಮಾಡಿದೆ. ಇಂದು ಅಮೃತ ವೇಳೆಯಿಂದ ನಾಲ್ಕಾರು ಕಡೆಯ ಪ್ರತಿಯೊಬ್ಬ ಮಗು ಸಹ ತನ್ನ ಸ್ನೇಹದ ಮಾಲೆಯನ್ನು ತಂದೆಗೆ ತೊಡಿಸಿದರು ಏಕೆಂದರೆ ಪ್ರತಿ ಮಗು ತಿಳಿದಿದೆ- ಈ ಪರಮಾತ್ಮ ಸ್ನೇಹ ಹೇಗಿದ್ದವರನ್ನು ಹೇಗೆ ಮಾಡಿಬಿಡುತ್ತದೆ. ಸ್ನೇಹದ ಅನುಭೂತಿ, ಅನೇಕ ಪರಮಾತ್ಮ ಖಜಾನೆಗಳ ಮಾಲೀಕರನ್ನಾಗಿ ಮಾಡುವಂತಹದ್ದಾಗಿದೆ. ಹಾಗೂ ಸರ್ವ ಪರಮಾತ್ಮ ಖಜಾನೆಗಳ ಗೋಲ್ಡನ್ ಚಾವಿಯನ್ನು ತಂದೆಯು ಸರ್ವ ಮಕ್ಕಳಿಗೂ ಕೊಟ್ಟುಬಿಟ್ಟಿದ್ದಾರೆ. ತಿಳಿದಿದ್ದೀರಲ್ಲವೇ! ಆ ಗೋಲ್ಡನ್ ಚಾವಿ ಏನಾಗಿದೆ? ಆ ಗೋಲ್ಡನ್ ಬೀಗದ ಕೈ ಆಗಿದೆ-” ನನ್ನ ಬಾಬಾ”. ನನ್ನ ಬಾಬಾ ಎಂದು ಹೇಳಿದ್ದೀರಿ ಹಾಗೂ ಸರ್ವ ಖಜಾನೆಗಳ ಅಧಿಕಾರಿ ಆಗಿಬಿಟ್ಟಿರಿ ಸರ್ವ ಪ್ರಾಪ್ತಿಗಳ ಅಧಿಕಾರದಿಂದ ಸಂಪನ್ನರಾಗಿಬಿಟ್ಟಿರಿ, ಸರ್ವ ಶಕ್ತಿಗಳಿಂದ ಸಮರ್ಥರಾಗಿ ಬಿಟ್ಟಿರಿ, ಮಾಸ್ಟರ್ ಸರ್ವಶಕ್ತಿವಂತ ಆತ್ಮ ಆಗಿಬಿಟ್ಟಿರಿ. ಇಂತಹ ಸಂಪನ್ನ ಆತ್ಮರ ಹೃದಯದಿಂದ ಯಾವ ಗೀತೆ ಹೊರಬರುತ್ತದೆ? ನಾವು ಬ್ರಾಹ್ಮಣರ ಖಜಾನೆಯಲ್ಲಿ ಯಾವುದೇ ವಸ್ತುವಿನ ಅಪ್ರಾಪ್ತಿ ಇಲ್ಲ.

ಇಂದಿನ ದಿನಕ್ಕೆ ಸ್ಮೃತಿ ದಿವಸ ಎಂದು ಹೇಳುತ್ತೀರಿ, ಇಂದು ಎಲ್ಲಾ ಮಕ್ಕಳಿಗೆ ವಿಶೇಷ ಆದಿದೇವ ಬ್ರಹ್ಮ ತಂದೆ ಬಹಳ ಸ್ಮೃತಿಯಲ್ಲಿ ಬರುತ್ತಿದ್ದಾರೆ. ಬ್ರಹ್ಮಾ ತಂದೆ ನೀವು ಬ್ರಾಹ್ಮಣ ಮಕ್ಕಳನ್ನು ನೋಡಿ ಖುಷಿಯಾಗುತ್ತಿದ್ದಾರೆ, ಏಕೆ? ಪ್ರತಿಯೊಬ್ಬ ಬ್ರಾಹ್ಮಣ ಮಗುವು ಕೋಟಿಯಲ್ಲಿ ಕೆಲವರು ಭಾಗ್ಯವಂತ ಮಕ್ಕಳಾಗಿದ್ದಾರೆ. ತಮ್ಮ ಭಾಗ್ಯವನ್ನು ತಿಳಿದುಕೊಂಡಿದ್ದೀರಿ ಅಲ್ಲವೇ! ಬಾಪ್ದಾದಾರವರು ಪ್ರತಿಯೊಬ್ಬ ಮಗುವಿನ ಮಸ್ತಕದಲ್ಲಿ ಹೊಳೆಯುತ್ತಿರುವ ಭಾಗ್ಯದ ನಕ್ಷತ್ರವನ್ನು ನೋಡಿ ಹರ್ಷಿತರಾಗುತ್ತಿದ್ದಾರೆ. ಇಂದು ಸ್ಮೃತಿ ದಿವಸ ವಿಶೇಷವಾಗಿ ಬಾಪ್ದಾದಾರವರು ವಿಶ್ವಸೇವೆಯ ಜವಾಬ್ದಾರಿಯನ್ನು ಹಾಗೂ ಮಕ್ಕಳನ್ನು ಅರ್ಪಿತ ಮಾಡಿದರು. ಎಂದ ಮೇಲೆ ಈ ಸ್ಮೃತಿ ದಿವಸ ನೀವು ಮಕ್ಕಳ ರಾಜ್ಯ ತಿಲಕದ ದಿವಸವಾಗಿದೆ. ಮಕ್ಕಳಿಗೆ ವಿಶೇಷ ಸಹಕಾರ ಸ್ವರೂಪದಲ್ಲಿ ವಿಲ್ ಪವರ್ಸ್ ವಿಲ್ ಮಾಡುವ ದಿನವಾಗಿದೆ. ಸನ್ ಶೋಸ್ ಫಾದರ್ (ಮಗ ತಂದೆಯನ್ನು ಪ್ರತ್ಯಕ್ಷ ತೋರಿಸುತ್ತಾನೆ) ಇದನ್ನು ಸಾಕಾರದಲ್ಲಿ ಮಾಡುವ ದಿನವಾಗಿದೆ. ಬಾಪ್ದಾದಾರವರು ಮಕ್ಕಳ ನಿಮಿತ್ತರಾಗಿ ನಿಸ್ವಾರ್ಥ ವಿಶ್ವ ಸೇವೆಯನ್ನು ನೋಡಿ ಖುಷಿ ಪಡುತ್ತಿದ್ದಾರೆ. ಬಾಪ್ ದಾದರವರು ಮಾಡಿಸುವಂತಹವರಾಗಿ, ಮಾಡುವಂತಹ ಮಕ್ಕಳ ಪ್ರತಿಯೊಂದು ಹೆಜ್ಜೆಯನ್ನು ನೋಡಿ ಖುಷಿಪಡುತ್ತಾರೆ ಏಕೆಂದರೆ ಸೇವೆಯ ಸಫಲತೆಯ ವಿಶೇಷ ಆಧಾರವೇ ಆಗಿದೆ- ಮಾಡಿಸುವಂತಹ ತಂದೆ ನಾನು ಮಾಡುವಂತಹ ಆತ್ಮನ ಮೂಲಕ ಮಾಡಿಸುತ್ತಿದ್ದಾರೆ. ನಾನು ಆತ್ಮ ನಿಮಿತ್ತನಾಗಿದ್ದೇನೆ ಏಕೆಂದರೆ ನಿಮಿತ್ತ ಭಾವದಿಂದ ನಿರ್ಮಾಣ ಸ್ಥಿತಿ ಸ್ವತಹವಾಗಿ ಬಂದುಬಿಡುತ್ತದೆ. ನನ್ನತನ ಯಾವುದು ದೇಹ ಬಾನದಲ್ಲಿ ತರುತ್ತದೆ ಅದು ಸ್ವತಹವಾಗಿಯೇ ನಿರ್ಮಾಣ ಭಾವದಿಂದ ಸಮಾಪ್ತಿಯಾಗಿ ಹೋಗುತ್ತದೆ. ಈ ಬ್ರಾಹ್ಮಣ ಜೀವನದಲ್ಲಿ ಎಲ್ಲದಕ್ಕಿಂತ ಹೆಚ್ಚು ವಿಜ್ಞ ರೂಪ ಈ ದೇಹ ಬಾಣದ ನನ್ನತನವೇ ಆಗುತ್ತದೆ. ಮಾಡಿಸುವಂತಹವರು ಮಾಡಿಸುತ್ತಿದ್ದಾರೆ, ನಾನು ನಿಮಿತ್ತ ಮಾಡುವಂತಹವನಾಗಿ ಮಾಡುತ್ತಿದ್ದೇನೆ, ಎಂದಾಗ ಸಹಜವಾಗಿಯೇ ದೇಹ ಅಭಿಮಾನ ಮುಕ್ತ ಆಗಿಬಿಡುತ್ತೇವೆ ಹಾಗೂ ಜೀವನ್ ಮುಕ್ತಿಯ ಸುಖದ ಅನುಭವ ಮಾಡುತ್ತೇವೆ. ಭವಿಷ್ಯದಲ್ಲಿ ಜೀವನಮುಕ್ತಿ ಅಂತೂ ಪ್ರಾಪ್ತಿಯಾಗಲೇಬೇಕು ಆದರೆ ಈಗ ಸಂಗಮ ಯುಗದಲ್ಲಿ ಜೀವನಮುಕ್ತಿಯ ಅಲೌಕಿಕ ಆನಂದ ಇನ್ನಷ್ಟು ಅಲೌಕಿಕವಾಗಿದೆ. ಹೇಗೆ ಬ್ರಹ್ಮಾ ತಂದೆಯನ್ನು ನೋಡಿದಿರಿ- ಕರ್ಮ ಮಾಡುತ್ತಾ ಕರ್ಮದ ಬಂಧನದಿಂದ ಭಿನ್ನ. ಜೀವನದಲ್ಲಿ ಇರುತ್ತಾ ಕಮಲ ಪುಷ್ಪದ ಸಮಾನ ಭಿನ್ನ ಹಾಗೂ ಪ್ರಿಯ. ಇಷ್ಟು ದೊಡ್ಡ ಪರಿವಾರದ ಜವಾಬ್ದಾರಿ, ಜೀವನದ ಜವಾಬ್ದಾರಿ, ಯೋಗಿ ಆಗುವ ಜವಾಬ್ದಾರಿ, ಫರಿಷ್ತೆ ಇಂದ ದೇವತೆ ಆಗುವ ಜವಾಬ್ದಾರಿ ಇದ್ದರೂ ಸಹ ನಿಶ್ಚಿಂತ ಚಕ್ರವರ್ತಿ. ಇದಕ್ಕೆ ಜೀವನ ಮುಕ್ತ ಸ್ಥಿತಿ ಎಂದು ಹೇಳಲಾಗುತ್ತದೆ ಆದ್ದರಿಂದ ಭಕ್ತಿ ಮಾರ್ಗದಲ್ಲಿಯೂ ಸಹ ಬ್ರಹ್ಮಾನ ಆಸನವಾಗಿ ಕಮಲಪುಷ್ಪವನ್ನು ತೋರಿಸುತ್ತಾರೆ. ಕಮಲ ಹಾಸನದಾರಿ ಆಗಿ ತೋರಿಸುತ್ತಾರೆ. ಎಂದ ಮೇಲೆ ತಾವೆಲ್ಲ ಮಕ್ಕಳಿಗೂ ಸಹ ಸಂಗಮದಲ್ಲಿಯೇ ಜೀವನಮುಕ್ತಿಯ ಅನುಭವ ಮಾಡಲೇಬೇಕು. ಬಾಪ್ದಾದಾರವರಿಂದ ಮುಕ್ತಿ ಜೀವನಮುಕ್ತಿಯ ಆಸ್ತಿ ಈ ಸಮಯದಲ್ಲಿಯೇ ಪ್ರಾಪ್ತಿಯಾಗುತ್ತದೆ. ಈ ಸಮಯದಲ್ಲಿಯೇ ಮಾಸ್ಟರ್ ಮುಕ್ತಿ ಜೀವನಮುಕ್ತಿದಾತ ಆಗಬೇಕು. ಆಗಿದ್ದೀರಿ ಹಾಗೂ ಆಗಲೇಬೇಕು. ಮುಕ್ತಿಜೀವನ ಮುಕ್ತಿಯ ಮಾಸ್ಟರ್ ದಾತ ಆಗುವ ವಿಧಿಯಾಗಿದೆ- ಸೆಕೆಂಡ್ನಲ್ಲಿ ದೇಹ ಬಾನದಿಂದ ಮುಕ್ತರಾಗಿ ಬಿಡಿ. ಈ ಅಭ್ಯಾಸದ ಅವಶ್ಯಕತೆ ಈಗ ಇದೆ. ಮನಸ್ಸಿನ ಮೇಲೆ ಇಂತಹ ನಿಯಂತ್ರಣ ಶಕ್ತಿ ಇರಲಿ, ಹೇಗೆ ಸ್ಥೂಲ ಕರ್ಮೇಂದ್ರಿಯಗಳು ಕೈಕಾಲುಗಳಿವೆ, ಅವುಗಳನ್ನು ಯಾವಾಗ ಬೇಕು ಹೇಗೆ ಬೇಕು ಹಾಗೆ ಮಾಡುತ್ತೀರಿ, ಅದರಲ್ಲಿ ಸಮಯ ಹಿಡಿಸುತ್ತದೆ! ಈಗ ಯೋಚಿಸಿ ಕೈಯನ್ನು ಮೇಲೆ ಮಾಡಬೇಕು, ಸಮಯ ಹಿಡಿಸುತ್ತದೆ? ಮಾಡಲು ಆಗುತ್ತದೆ ಅಲ್ಲವೇ! ಈಗ ಬಾಪ್ದಾದಾರವರು ಹೇಳುತ್ತಾರೆ ಕೈಯನ್ನು ಮೇಲೆತ್ತಿ ಎಂದರೆ ಎಲ್ಲರೂ ಮಾಡುತ್ತೀರಿ ಅಲ್ಲವೇ! ಮಾಡಬೇಡಿ, ಮಾಡಲು ಆಗುತ್ತದೆ. ಅದೇ ರೀತಿ ಮನಸ್ಸಿನ ಮೇಲೆ ಇಂತಹ ನಿಯಂತ್ರಣ ಇರಬೇಕು, ಎಲ್ಲಿ ಏಕಾಗ್ರ ಮಾಡಲು ಬಯಸುತ್ತೀರಿ, ಅಲ್ಲಿ ಏಕಾಗ್ರವಾಗಿ ಬಿಡಬೇಕು. ಮನಸ್ಸು, ಕೈ ಕಾಲಿಗಿಂತ ಸೂಕ್ಷ್ಮವಾಗಿದೆ ಆದರೆ ನಿಮ್ಮದೇ ಆಗಿದೆ ಅಲ್ಲವೇ! ನನ್ನ ಮನಸ್ಸು ಎಂದು ಹೇಳುತ್ತೀರಿ ಅಲ್ಲವೇ, ನಿನ್ನ ಮನಸ್ಸು ಎಂದು ಹೇಳುವುದಿಲ್ಲ ಅಲ್ಲವೇ! ಎಂದ ಮೇಲೆ ಹೇಗೆ ಸ್ಥೂಲ ಕಮೇರ್ಂದ್ರಿಯಗಳು ಹಿಡಿತದಲ್ಲಿ ಇರುತ್ತದೆ ಅದೇ ರೀತಿ ಮನಸ್ಸು ಬುದ್ಧಿ ಸಂಸ್ಕಾರ ನಿಯಂತ್ರಣದಲ್ಲಿ ಇರಬೇಕು ಆಗ ಹೇಳಲಾಗುವುದು ನಂಬರ್ ಒನ್ ವಿಜಯ್. ಸೈನ್ಸ್ನವರಂತೂ ರಾಕೆಟ್ ಮುಖಾಂತರ ತಮ್ಮ ಸಾಧನಗಳ ಮುಖಾಂತರ ಇದೇ ಲೋಕದವರೆಗೂ ತಲುಪುತ್ತಾರೆ, ಜಾಸ್ತಿ ಎಂದರೆ ಜಾಸ್ತಿ ಗ್ರಹಗಳವರೆಗೂ ತಲುಪುತ್ತಾರೆ. ಆದರೆ ತಾವು ಬ್ರಾಹ್ಮಣ ಆತ್ಮಗಳು ಮೂರು ಲೋಕದವರೆಗೂ ತಲುಪಬಹುದು. ಸೆಕೆಂಡಿನಲ್ಲಿ ಸೂಕ್ಷ್ಮ ಲೋಕ, ನಿರಾಕರಿ ಲೋಕ ಹಾಗೂ ಸ್ಥೂಲದಲ್ಲಿ ಮಧುಬನದವರೆಗೂ ತಲುಪಬಹುದು ಅಲ್ಲವೇ! ಒಂದು ವೇಳೆ ಮನಸ್ಸಿಗೆ ಆರ್ಡರ್ ಮಾಡಿ ಮಧುಬನಕೆ ತಲುಪಿ ಎಂದರೆ ಸೆಕೆಂಡಿನಲ್ಲಿ ತಲುಪಲು ಸಾಧ್ಯವೇ? ತನುವಿನಿಂದ ಅಲ್ಲ, ಮನಸ್ಸಿನಿಂದ. ಆರ್ಡರ್ ಮಾಡಿ ಸೂಕ್ಷ್ಮವತನಕ್ಕೆ ಹೋಗಬೇಕು, ನಿರಾಕರಿ ವತನಕ್ಕೆ ಹೋಗಬೇಕು ಎಂದರೆ ಮೂರು ಲೋಕದಲ್ಲಿ ಯಾವಾಗ ಬೇಕು ಆಗ ಮನಸ್ಸಿನಿಂದ ತಲುಪಬಹುದೇ? ಈ ಅಭ್ಯಾಸ ಇದೆಯೇ? ಈಗ ಈ ಅಭ್ಯಾಸದ ಅವಶ್ಯಕತೆ ಜಾಸ್ತಿ ಇದೆ. ಬಾಪ್ದಾದಾರವರು ನೋಡಿದ್ದಾರೆ ಅಭ್ಯಾಸವನ್ನಂತು ಮಾಡುತ್ತೀರಿ, ಆದರೆ ಯಾವಾಗ ಬೇಕು, ಎಷ್ಟು ಸಮಯ ಬೇಕು ಏಕಾಗ್ರವಾಗಿ ಬಿಡಬೇಕು, ಆಚಲವಾಗಿರಬೇಕು, ಏರುಪೇರಿನಲ್ಲಿ ಬರಬಾರದು,. ಇದರ ಮೇಲೆ ಗಮನ ಕೊಡಿ. ಮನಸ್ಸನ್ನು ಗೆದ್ದವನು ಜಗತ್ತನ್ನೇ ಗೆಲ್ಲಬಹುದು ಎಂಬ ಗಾಯನವಿದೆ, ಕೆಲವೊಮ್ಮೆ ಮನಸ್ಸು ಮೋಸ ಮಾಡುತ್ತದೆ.

ಬಾಪ್ದಾದಾರವರು ಇಂದಿನ ಸಮರ್ಥ ದಿವಸದಂದು ಇದೇ ಸಮರ್ಥಿಯನ್ನು ವಿಶೇಷ ಗಮನದಲ್ಲಿ ತರಿಸುತ್ತಿದ್ದಾರೆ. ಹೇ ಸ್ವರಾಜ್ಯ ಅಧಿಕಾರಿ ಮಕ್ಕಳೇ, ಈಗ ಈ ವಿಶೇಷ ಅಭ್ಯಾಸ ವನ್ನು ನಡೆಯುತ್ತಾ ಓಡಾಡುತ್ತಾ ಪರಿಶೀಲಿಸಿಕೊಳ್ಳಿ ಏಕೆಂದರೆ ಸಮಯ ಪ್ರಮಾಣ ಈಗ ಇದ್ದಕ್ಕಿದ್ದಂತೆ ನಡೆಯುವ ಆಟಗಳನ್ನು ಬಹಳ ನೋಡುತ್ತೀರಿ. ಇದಕ್ಕಾಗಿ ಏಕಾಗ್ರತೆಯ ಶಕ್ತಿ ಅವಶ್ಯಕವಾಗಿದೆ. ಏಕಾಗ್ರತೆಯ ಶಕ್ತಿಯಿಂದ ದೃಢತೆಯ ಶಕ್ತಿಯು ಸಹಜವಾಗಿ ಬಂದುಬಿಡುತ್ತದೆ ಹಾಗೂ ದೃಢತೆ ಸಫಲತೆಯನ್ನು ಸ್ವತಹವಾಗಿ ಪ್ರಾಪ್ತಿ ಮಾಡಿಸುತ್ತದೆ. ವಿಶೇಷ ಸಮರ್ಥ ದಿವಸದಂದು ಈ ಸಮರ್ಥಿಯ ಅಭ್ಯಾಸವನ್ನು ವಿಶೇಷ ಗಮನದಲ್ಲಿ ಇಟ್ಟುಕೊಳ್ಳಿ ಹಾಗಾಗಿ ಭಕ್ತಿ ಮಾರ್ಗದಲ್ಲಿಯೂ ಹೇಳುತ್ತಾರೆ ಮನಸ್ಸನ್ನು ಸೋತವರು ಸೋತರು, ಮನಸ್ಸನ್ನು ಗೆದ್ದವರು ಗೆದ್ದರು. ಯಾವಾಗ ನನ್ನ ಮನಸ್ಸು ಎಂದು ಹೇಳುತ್ತೀರಿ, ಎಂದ ಮೇಲೆ ನನ್ನದರ ಮಾಲೀಕನಾಗಿ ಶಕ್ತಿಗಳ ಹಿಡಿತದಿಂದ ವಿಜಯ ಪ್ರಾಪ್ತಿ ಮಾಡಿ. ಈ ಹೊಸ ವರ್ಷದಲ್ಲಿ ಈ ಮನೆ ಕೆಲಸದ ಮೇಲೆ ವಿಶೇಷ ಗಮನ ಹರಿಸಿ! ಇದಕ್ಕೆ ಹೇಳಲಾಗುತ್ತದೆ- ಯೋಗಿಯಂತೂ ಆಗಿದ್ದೀರಿ ಆದರೆ ಈಗ ಪ್ರಯೋಗಿ ಆಗಿ.

ಬಾಕಿ ಇಂದಿನ ದಿನದ ಸ್ನೇಹದ ಆತ್ಮಿಕ ವಾರ್ತಾಲಾಪ, ಸ್ನೇಹದ ದೂರುಗಳು ಹಾಗೂ ಸಮಾನರಾಗುವ ಉಮಂಗ ಉತ್ಸಾಹ ಮೂರು ಪ್ರಕಾರದ ಆತ್ಮಿಕ ವಾರ್ತಾಲಾಪ ಬಾಪ್ದಾದಾರವರ ಬಳಿ ತಲುಪಿತು. ನಾಲ್ಕಾರು ಕಡೆಯ ಮಕ್ಕಳ ಸ್ನೇಹ ತುಂಬಿದ ನೆನಪು, ಸ್ನೇಹ ತುಂಬಿದ ಪ್ರೀತಿ ಬಾಪ್ದಾದಾರವರ ಬಳಿ ತಲುಪಿತು. ಪತ್ರವೂ ತಲುಪಿತು ಹಾಗೂ ಆತ್ಮಿಕ ವಾರ್ತಾಲಾಪಗಳು ಸಹ ತಲುಪಿತು, ಸಂದೇಶವು ತಲುಪಿತು, ಬಾಪ್ದಾದಾರವರು ಮಕ್ಕಳ ಸ್ನೇಹವನ್ನು ಸ್ವೀಕಾರ ಮಾಡಿದರು. ಹೃದಯದಿಂದ ರಿಟರ್ನ್ನಲ್ಲಿ ನೆನಪು ಪ್ರೀತಿಯನ್ನು ಸಹ ಕೊಟ್ಟರು. ಹೃದಯದ ಆಶೀರ್ವಾದವನ್ನು ಸಹ ಕೊಟ್ಟರು. ಒಬ್ಬೊಬ್ಬರ ಹೆಸರನ್ನಂತೂ ತೆಗೆದುಕೊಳ್ಳಲು ಸಾಧ್ಯವಿಲ್ಲ ಅಲ್ಲವೇ. ಬಹಳ ಇದ್ದಾರೆ. ಆದರೆ ಕೋಣೆ ಕೋಣೆ, ಒಂದೊಂದು ಊರು, ಒಂದೊಂದು ನಗರ ಎಲ್ಲಾ ಕಡೆಯ ಮಕ್ಕಳ, ಬಂಧನದಲ್ಲಿರುವವರ, ವಿಲಾಪ ಮಾಡುವವರ ಎಲ್ಲರ ನೆನಪು ಪ್ರೀತಿ ತಲುಪಿದೆ. ಈಗ ಬಾಪ್ದಾದಾರವರು ಇದನ್ನೇ ಹೇಳುತ್ತಾರೆ- ಸ್ನೇಹದ ರಿಟರ್ನ್ ನಲ್ಲಿ ಈಗ ತಮ್ಮನ್ನು ತಾವು ಟರ್ನ್ ಮಾಡಿ, ಪರಿವರ್ತನೆ ಮಾಡಿ. ಈಗ ಸ್ಟೇಜಿನ ಮೇಲೆ ತಮ್ಮ ಸಂಪನ್ನ ಸ್ವರೂಪವನ್ನು ಪ್ರತ್ಯಕ್ಷ ಮಾಡಿ. ನಿಮ್ಮ ಸಂಪನ್ನತೆಯಿಂದ ದುಃಖ ಹಾಗೂ ಅಶಾಂತಿ ಸಮಾಪ್ತಿ ಆಗಬೇಕಾಗಿದೆ. ಈಗ ತಮ್ಮ ಸಹೋದರ ಸಹೋದರಿಯರಿಗೆ ಇನ್ನಷ್ಟು ದುಃಖವನ್ನು ನೋಡಲು ಬಿಡಬೇಡಿ. ಈ ದುಃಖ ಅಶಾಂತಿಯಿಂದ ಮುಕ್ತಿ ಕೊಡಿಸಿ. ಬಹಳ ಭಯಭೀತರಾಗಿದ್ದಾರೆ. ಏನು ಮಾಡುವುದು, ಏನಾಗುವುದು... ಈ ಅಂದಕಾರದಲ್ಲಿ ಅಲೆದಾಡುತ್ತಿದ್ದಾರೆ. ಈಗ ಆತ್ಮಗಳಿಗೆ ಬೆಳಕಿನ ಮಾರ್ಗವನ್ನು ತೋರಿಸಿ. ಉಮಂಗ ಬರುತ್ತದೆಯೇ? ದಯೆ ಬರುತ್ತದೆಯೇ? ಈಗ ಅಪರಿಮಿತವಾಗಿ ನೋಡಿ. ದೇಹದಲ್ಲಿ. ದೃಷ್ಟಿ ಹಾಕಿ. ಒಳ್ಳೆಯದು. ಹೋಂವರ್ಕ್ ಅಂತೂ ನೆನಪಿರುತ್ತದೆ ಅಲ್ಲವೇ! ಮರೆತು ಹೋಗಬೇಡಿ. ಬಹುಮಾನವನ್ನು ಕೊಡುತ್ತೇವೆ. ಯಾರು ಒಂದು ತಿಂಗಳಿನಲ್ಲಿ ಮನಸ್ಸನ್ನು ನಿಯಂತ್ರಿಸುವ ಶಕ್ತಿಯಿಂದ ಇಡೀ ತಿಂಗಳು ಎಲ್ಲಿ ಬೇಕೋ, ಯಾವಾಗ ಬೇಕು ಅಲ್ಲಿ ಏಕಾಗ್ರ ಮಾಡುತ್ತಾರೆ, ಈ ಚಾರ್ಟಿನ ಫಲಿತಾಂಶದಲ್ಲಿ ಬಹುಮಾನವನ್ನು ಕೊಡುತ್ತೇವೆ. ಸರಿಯೇ? ಯಾರು ಬಹುಮಾನವನ್ನು ತೆಗೆದುಕೊಳ್ಳುತ್ತಾರೆ? ಪಾಂಡವರು, ಪಾಂಡವರು ಮೊದಲು. ಪಾಂಡವರಿಗೆ ಶುಭಾಶಯಗಳು, ಹಾಗೂ ಶಕ್ತಿಯರು? ಎವನ್. ಪಾಂಡವರು ನಂಬರ್ ವನ್ ಹಾಗೂ ಶಕ್ತಿಯರು ಎವನ್. ಶಕ್ತಿಯರು ಎವನ್ ಆಗದಿದ್ದರೆ ಪಾಂಡವರು ಎವನ್. ಈಗ ಸ್ವಲ್ಪ ವೇಗವನ್ನು ತೀವ್ರಗೊಡಿಸಿ. ಆರಾಮದಿಂದ ಅಲ್ಲ. ತೀವ್ರ ಗತಿಯಿಂದಲೇ ಆತ್ಮರ ದುಃಖ ನೋವು ಸಮಾಪ್ತಿಯಾಗುವುದು. ದಯೆಯ ಛತ್ರ ಛಾಯೆಯನ್ನು ಆತ್ಮಗಳ ಮೇಲೆ ಹಾಕಿ. ಒಳ್ಳೆಯದು.

ಡಬಲ್ ವಿದೇಶಿ ಸಹೋದರ ಸಹೋದರಿಯರೊಂದಿಗೆ:- ಡಬಲ್ ವಿದೇಶಿ, ಬಾಪ್ದಾದಾರವರು ಹೇಳುತ್ತಾರೆ ಡಬಲ್ ವಿದೇಶಿ ಎಂದರೆ ಡಬಲ್ ಪುರುಷಾರ್ಥದಲ್ಲಿ ಮುಂದುವರೆಯುವವರು. ಹೇಗೆ ಡಬಲ್ ವಿದೇಶಿಯರ ಟೈಟಲ್ ಇದೆಯಲ್ಲವೇ, ನಿಮ್ಮ ಚಿಹ್ನೆ ಇದೆ ಅಲ್ಲವೇ. ಇದೇ ರೀತಿ ಡಬಲ್ ವಿದೇಶಿಯರು ನಂಬರ್ ಒನ್ ತೆಗೆದುಕೊಳ್ಳುವುದರಲ್ಲೂ ಸಹ ಡಬಲ್ ವೇಗದೊಂದಿಗೆ ಮುಂದುವರೆಯುವವರು. ಒಳ್ಳೆಯದು. ಪ್ರತಿಯೊಂದು ಗುಂಪಿನಲ್ಲೂ ಬಾಪ್ದಾದಾರವರು ಡಬಲ್ ವಿದೇಶಿಯರನ್ನು ನೋಡಿ ಖುಷಿಯಾಗುತ್ತಾರೆ ಏಕೆಂದರೆ, ಭಾರತವಾಸಿಯರು ನಿಮ್ಮನ್ನು ನೋಡಿ ಖುಷಿಯಾಗುತ್ತಾರೆ. ಬಾಪ್ದಾದಾರವರು ಸಹ ವಿಶ್ವಕಲ್ಯಾಣಕಾರಿ ಟೈಟಲ್ ಅನ್ನು ನೋಡಿ ಖುಷಿಯಾಗುತ್ತಾರೆ. ಈಗ ಡಬಲ್ ವಿದೇಶಿಯವರು ಯಾವ ಪ್ಲಾನ್ ಮಾಡುತ್ತಿರುವಿರಿ? ಬಾಪ್ದಾದಾರವರಿಗೆ ಖುಷಿಯಾಯಿತು, ಆಫ್ರಿಕಾದವರು ತೀವ್ರ ಪುರುಷಾರ್ಥ ಮಾಡುತ್ತಿದ್ದಾರೆ. ಎಂದ ಮೇಲೆ ನೀವು ಎಲ್ಲರೂ ಸಹ ಅಕ್ಕಪಕ್ಕದಲ್ಲಿ ಯಾರೆಲ್ಲಾ ನಿಮ್ಮ ಸಹೋದರ ಸಹೋದರಿಯರು ಉಳಿದುಕೊಂಡು ಬಿಟ್ಟಿದ್ದಾರೆ, ಅವರೆಲ್ಲರಿಗೂ ಸಂದೇಶವನ್ನು ಕೊಡುವ ಉಮೆಂಗ ಉತ್ಸಾಹವನ್ನು ಇಟ್ಟುಕೊಳ್ಳಿ, ದೂರು ಉಳಿದುಕೊಂಡು ಬಿಡಬಾರದು. ವೃತ್ತಿ ಆಗುತ್ತಿದೆ ಇನ್ನಷ್ಟು ಆಗುತ್ತಾ ಇರುತ್ತದೆ ಆದರೆ ಈಗ ದೂರನ್ನು ಸಮಾಪ್ತಿ ಮಾಡಬೇಕು. ಈ ಡಬಲ್ ವಿದೇಶಿಯರ ವಿಶೇಷತೆಯನ್ನಂತೂ ಕೇಳುತ್ತಲೇ ಬಂದಿದ್ದೀರಿ- ಬೋಲಾ ತಂದೆಯನ್ನು ಒಪ್ಪಿಸುವ ಸಾಧನ- ಸತ್ಯ ಹೃದಯದ ಮೇಲೆ ಸಾಹೇಬರು ಒಪ್ಪಿಕೊಳ್ಳುತ್ತಾರೆ, ಇದೇ ಡಬಲ್ ವಿದೇಶಿಯರ ವಿಶೇಷತೆಯಾಗಿದೆ. ತಂದೆಯನ್ನು ಒಪ್ಪಿಸುವುದು ಬಹಳ ಬುದ್ಧಿವಂತಿಕೆಯಿಂದ ಬರುತ್ತದೆ. ಸತ್ಯ ಹೃದಯ ತಂದೆಗೆ ಏಕೆ ಪ್ರಿಯ ಎನಿಸುತ್ತದೆ? ಏಕೆಂದರೆ ತಂದೆಯನ್ನು ಸತ್ಯ ಎಂದು ಹೇಳುತ್ತಾರೆ. ಗಾಡ್ ಇಸ್ ಟ್ರೂಥ್( ಭಗವಂತ ಸತ್ಯ) ಎಂದು ಹೇಳುತ್ತಾರೆ. ಅಲ್ಲವೇ! ಎಂದ ಮೇಲೆ ಬಾಪ್ದಾದಾರವರಿಗೆ ಶುದ್ಧ ಹೃದಯ, ಸತ್ಯ ಹೃದಯದವರು ಬಹಳ ಪ್ರಿಯ ಎನಿಸುತ್ತಾರೆ, ಹೀಗೆ ಇದೆ ಅಲ್ಲವೇ! ಶುದ್ಧ ಹೃದಯ, ಸತ್ಯ ಹೃದಯ. ಸತ್ಯತೆಯೇ ಬ್ರಾಹ್ಮಣ ಜೀವನದ ಮಹಾನತೆಯಾಗಿದೆ. ಆದ್ದರಿಂದ ಡಬಲ್ ವಿದೇಶಿಯರನ್ನು ಬಾಪ್ದಾದಾರವರು ಸದಾ ನೆನಪು ಮಾಡುತ್ತಾರೆ. ಭಿನ್ನ-ಭಿನ್ನ ದೇಶದಲ್ಲಿ ಆತ್ಮಗಳಿಗೆ ಸಂದೇಶವನ್ನು ನೀಡುವ ನಿಮಿತ್ತರಾಗಿಬಿಟ್ಟಿದ್ದೀರಿ. ನೋಡಿ ಎಷ್ಟು ದೇಶದವರು ಬರುತ್ತಾರೆ? ಎಂದ ಮೇಲೆ ಈ ಎಲ್ಲಾ ದೇಶಗಳ ಕಲ್ಯಾಣ ಆಯಿತಲ್ಲವೇ! ಎಂದ ಮೇಲೆ ಬಾಪ್ದಾದಾರವರು, ಇಲ್ಲಂತೂ ನಿಮ್ಮ ನಿಮಿತ್ತ ಬಂದಿದ್ದಾರೆ ಆದರೆ ನಾಲ್ಕಾರು ಕಡೆಯ ಡಬಲ್ ವಿದೇಶಿ ಮಕ್ಕಳಿಗೆ, ನಿಮಿತ್ತರಾಗಿರುವ ಮಕ್ಕಳಿಗೆ ಶುಭಾಶಯವನ್ನು ಕೊಡುತ್ತಿದ್ದಾರೆ, ಶುಭಾಶಯ ಕೊಡುತ್ತಿದ್ದಾರೆ, ಹಾರುತ್ತಾ ಇರಿ ಹಾಗೂ ಹಾರಿಸುತ್ತಾ ಇರಿ. ಹಾರುವ ಕಲೆ ಎಲ್ಲರಿಗೂ ಒಳಿತು ಆಗಲೇಬೇಕು. ಎಲ್ಲರೂ ರಿಫ್ರೆಶ್ ಆಗುತ್ತಿದ್ದೀರಾ? ರಿಫ್ರೆಶ್ ಆಗಿದ್ದೀರಾ? ಸದಾ ಅಮರರಾಗಿರುತ್ತೀರಾ ಅಥವಾ ಮಧುಬನದಲ್ಲಿಯೇ ಅರ್ಧ ಬಿಟ್ಟು ಹೋಗುತ್ತೀರಾ? ಜೊತೆಯಲ್ಲಿ ಇರುತ್ತದೆಯೇ? ಸದಾ ಇರುತ್ತದೆಯೇ? ಅಮರಭವದ ವರದಾನ ಇದೆ ಅಲ್ಲವೇ! ಎಂದ ಮೇಲೆ ಯಾವ ಪರಿವರ್ತನೆ ಮಾಡಿದ್ದೀರಿ ಅದು ಸದಾ ವೃದ್ಧಿಯಾಗುತ್ತಾ ಇರುವುದು. ಅಮರವಾಗಿ ಇರುವುದು. ಒಳ್ಳೆಯದು. ಬಾಪ್ದಾದಾರವರು ಖುಷಿಯಾಗಿದ್ದಾರೆ ಹಾಗೂ ನೀವು ಸಹ ಖುಷಿಯಾಗಿದ್ದೀರಿ ಅನ್ಯರಿಗೂ ಖುಷಿಯನ್ನು ಕೊಡಿ. ಒಳ್ಳೆಯದು.

ಜ್ಞಾನ ಸರೋವರಕ್ಕೆ ಹತ್ತು ವರ್ಷಗಳಾಯಿತು:- ಒಳ್ಳೆಯದು, ಒಳ್ಳೆಯದು ಜ್ಞಾನ ಸರೋವರ ಒಂದು ವಿಶೇಷತೆಯನ್ನು ಆರಂಭ ಮಾಡಿತು. ಎಂದಿನಿಂದ ಜ್ಞಾನ ಸರೋವರ ಶುರುವಾಯಿತು ಅಂದಿನಿಂದ ವಿಐಪಿ, ಐಪಿ ಯರ ವಿಶೇಷ ವಿಧಿ ಪೂರ್ವಕ ಪ್ರೋಗ್ರಾಮ್ ಶುರುವಾಯಿತು. ಪ್ರತಿವರ್ಷದ ಪ್ರೋಗ್ರಾಮ್ ಒಂದರ ಹಿಂದೆ ಒಂದು ನಡೆಯುತ್ತಾ ಇರುತ್ತದೆ. ನೋಡಲಾಗಿದೆ- ಜ್ಞಾನ ಸರೋವರದಲ್ಲಿ ಬರುವಂತಹ ಆತ್ಮರ ಸ್ಥ್ಟೂಲ ಸೇವೆ ಹಾಗೂ ಅಲೌಕಿಕ ಸೇವೆ ಬಹಳ ಒಳ್ಳೆಯ ಆಸಕ್ತಿಯಿಂದ ಮಾಡುತ್ತಾರೆ ಆದ್ದರಿಂದ ಜ್ಞಾನ ಸರೋವರದವರಿಗೆ ಪಾಪದವರು ವಿಶೇಷ ಶುಭಾಶಯವನ್ನು ಕೊಡುತ್ತಿದ್ದಾರೆ- ಸೇವೆಯ ಫಲಿತಾಂಶದಲ್ಲಿ ಎಲ್ಲರೂ ಖುಷಿಯಾಗಿ ಹೋಗುತ್ತಾರೆ ಹಾಗೂ ಖುಷಿ ಖುಷಿಯಿಂದ ಇನ್ನು ಜೊತೆಗಾರರನ್ನು ಜೊತೆಯಲ್ಲಿ ಕರೆತರುತ್ತಾರೆ. ನಾಲ್ಕಾರು ಕಡೆ ಶಬ್ಧ ಹರಡಿಸುವ ನಿಮಿತ್ತ ಜ್ಞಾನ ಸರೋವರದವರು ಆಗಿದ್ದಾರೆ. ಶುಭಾಶಯಗಳು ಹಾಗೂ ಸದಾ ಶುಭಾಶಯಗಳು ಪಡೆಯುತ್ತಾ ಇರಿ. ಒಳ್ಳೆಯದು.

ಈಗ ಒಂದು ಸೆಕೆಂಡಿನಲ್ಲಿ ಮನಸ್ಸನ್ನು ಏಕಾಗ್ರ ಮಾಡಲು ಸಾಧ್ಯವೇ? ಎಲ್ಲರೂ ಒಂದು ಸೆಕೆಂಡಿನಲ್ಲಿ ಬಿಂದು ರೂಪದಲ್ಲಿ ಸ್ಥಿತರಾಗಿ ಬಿಡಿ. (ಬಾಪ್ದಾದಾರವರು ಡ್ರಿಲ್ ಮಾಡಿಸಿದರು) ಒಳ್ಳೆಯದು- ಈ ಅಭ್ಯಾಸವನ್ನು ನಡೆಯುತ್ತಾ ಓಡಾಡುತ್ತಾ ಮಾಡುತ್ತಾ ಇರಿ.

ನಾಲ್ಕಾರು ಕಡೆಯ ಸ್ನೇಹಿ, ಲವಲಿನ ಆತ್ಮರಿಗೆ, ಸದಾ ದಯಾ ಹೃದಯ ಆಗಿ ಪ್ರತಿ ಆತ್ಮವನ್ನು ದುಃಖ ಅಶಾಂತಿಯಿಂದ ಮುಕ್ತ ಮಾಡುವಂತಹ ಶ್ರೇಷ್ಠ ಆತ್ಮಗಳಿಗೆ, ಸದಾ ನನ್ನ ಮನಸ್ಸು, ಬುದ್ಧಿ, ಸಂಸ್ಕಾರವನ್ನು ಕಂಟ್ರೋಲಿಂಗ್ ಪವರ್ ಮೂಲಕ ಕಂಟ್ರೋಲ್ ನಲ್ಲಿ ಇಡುವಂತಹ ಮಹಾವೀರ ಆತ್ಮರಿಗೆ ಸದಾ ಸಂಗಮಯುಗದ ಜೀವನ ಮುಕ್ತ ಸ್ಥಿತಿಯನ್ನು ಅನುಭವ ಮಾಡುವಂತಹ ತಂದೆಯ ಸಮಾನ ಆತ್ಮಗಳಿಗೆ ಬಾಪದಾರವರ ಪಧಮದಷ್ಟು ನೆನಪು ಪ್ರೀತಿ ಹಾಗೂ ನಮಸ್ತೆ.

ವರದಾನ:
ಮಾಯೆಯ ಬಂಧನಗಳಿಂದ ಸದಾ ನಿರ್ಬಂಧನರಾಗಿರುವಂತಹ ಯೋಗಯುಕ್ತ, ಬಂಧನಮುಕ್ತ ಭವ

ಬಂಧನಮುಕ್ತರ ನಿಶಾನಿಯಾಗಿದೆ ಸದಾ ಯೋಗಯುಕ್ತ. ಯೋಗಯುಕ್ತ ಮಕ್ಕಳು ಜವಾಬ್ದಾರಿಗಳ ಬಂಧನ ಮತ್ತು ಮಾಯೆಯ ಬಂಧನಗಳಿಂದ ಮುಕ್ತರಾಗಿರುತ್ತಾರೆ. ಮನಸ್ಸಿನ ಬಂಧನವೂ ಸಹ ಇರಬಾರದು. ಲೌಕಿಕ ಜವಾಬ್ದಾರಿಯಂತೂ ಆಟವಾಗಿದೆ, ಆದ್ದರಿಂದ ಡೈರೆಕ್ಷನ್ ಅನುಸಾರ ಆಟದ ರೀತಿಯಿಂದ ನಗುನಗುತ್ತಾ ಆಟವಾಡಿ ಆಗ ಎಂದೂ ಸಣ್ಣ-ಪುಟ್ಟ ಮಾತುಗಳಲ್ಲಿ ಸುಸ್ತಾಗುವುದಿಲ್ಲ. ಒಂದುವೇಳೆ ಬಂಧನ ಎಂದು ತಿಳಿದರೆ ಆಗ ತೊಂದರೆಯಾಗುತ್ತದೆ. ಏನು, ಏಕೆ ಎನ್ನುವ ಪ್ರಶ್ನೆಗಳು ಏಳುತ್ತವೆ. ಆದರೆ ಜವಾಬ್ದಾರಿಯುತ ತಂದೆಯಿದ್ದಾರೆ ನೀವು ನಿಮಿತ್ತರಾಗಿರುವಿರಿ. ಈ ಸ್ಮೃತಿಯಿಂದ ಬಂಧನ ಮುಕ್ತರಾಗಿ ಆಗ ಯೋಗಯುಕ್ತರಾಗಿಬಿಡುವಿರಿ.

ಸ್ಲೋಗನ್:
ಮಾಡಿಮಾಡಿಸುವಂತಹವರು ಎನ್ನುವ ಸ್ಮೃತಿಯಿಂದ ಬಾನ ಮತ್ತು ಅಭಿಮಾನವನ್ನು ಸಮಾಪ್ತಿ ಮಾಡಿ.

ಅವ್ಯಕ್ತ ಸೂಚನೆ: ಕಂಬೈಂಡ್ ರೂಪದ ಸ್ಮೃತಿಯಿಂದ ಸದಾ ವಿಜಯಿಯಾಗಿರಿ

ನಾನು ಮತ್ತು ನನ್ನ ಬಾಬಾ, ಇದೇ ಸ್ಮೃತಿಯಲ್ಲಿ ಕಂಬೈಂಡ್ ಆಗಿರಿ ಆಗ ಮಾಯಾಜೀತ್ ಆಗಿ ಬಿಡುವಿರಿ. ಮಾಡಿ- ಮಾಡಿಸುವವರು – ಈ ಶಬ್ದದಲ್ಲಿ ತಂದೆ ಮತ್ತು ಮಕ್ಕಳು ಇಬ್ಬರು ಕಂಬೈಂಡ್ ಆಗಿದ್ದಾರೆ. ಕೈ ಮಕ್ಕಳದ್ದು ಮತ್ತು ಕೆಲಸ ತಂದೆಯದ್ದು. ಕೈ ಮುಂದೆ ಮಾಡುವಂತಹ ಸುವರ್ಣ ಅವಕಾಶ ಮಕ್ಕಳಿಗೇ ಸಿಗುತ್ತದೆ. ಆದರೆ ಅನುಭವವಾಗುತ್ತದೆ ಮಾಡಿಸುವಂತಹವರು ಮಾಡಿಸುತ್ತಿದ್ದಾರೆ. ನಿಮಿತ್ತರನ್ನಾಗಿ ನಡೆಸುತ್ತಿದ್ದಾರೆ – ಇದೇ ಶಬ್ದ ಮನಸ್ಸಿನಿಂದ ಬರುತ್ತದೆ.