20.06.24         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ- ಈಗ ಹಿಡಿಕಡಲೆಯ ಹಿಂದೆ ತಮ್ಮ ಸಮಯವನ್ನು ನಷ್ಟಮಾಡಿಕೊಳ್ಳಬೇಡಿ, ಈಗ ತಂದೆಯ ಸಹಯೋಗಿಗಳಾಗಿ, ತಂದೆಯ ಹೆಸರನ್ನು ಪ್ರಸಿದ್ಧ ಮಾಡಿ”

ಪ್ರಶ್ನೆ:
ಈ ಜ್ಞಾನಮಾರ್ಗದಲ್ಲಿ ನಿಮ್ಮ ಹೆಜ್ಜೆಯು ಮುಂದುವರೆಯುತ್ತಿದೆ ಎಂಬುದಕ್ಕೆ ಗುರುತೇನಾಗಿದೆ?

ಉತ್ತರ:
ಯಾವ ಮಕ್ಕಳಿಗೆ ಶಾಂತಿಧಾಮ ಮತ್ತು ಸುಖಧಾಮವು ಸದಾ ನೆನಪಿರುತ್ತದೆ, ನೆನಪಿನ ಸಮಯದಲ್ಲಿ ಬುದ್ಧಿಯು ಎಲ್ಲಿಯೂ ಅಲೆದಾಡುವುದಿಲ್ಲ, ಬುದ್ಧಿಯಲ್ಲಿ ವ್ಯರ್ಥ ವಿಚಾರಗಳು ಬರುವುದಿಲ್ಲ, ಬುದ್ಧಿಯು ಏಕಾಗ್ರವಾಗಿರುವುದೋ, ತೂಕಡಿಸುವುದಿಲ್ಲವೋ, ಖುಷಿಯ ನಶೆಯು ಏರಿರುವುದೋ ಆಗ ಇದರಿಂದ ಜ್ಞಾನಮಾರ್ಗದಲ್ಲಿ ನಮ್ಮ ಹೆಜ್ಜೆ ಮುಂದೆ ಹೋಗುತ್ತಿದೆಯೆಂದು ಸಿದ್ಧವಾಗುತ್ತದೆ.

ಓಂ ಶಾಂತಿ.
ಮಕ್ಕಳು ಇಷ್ಟೊಂದು ಸಮಯ ಇಲ್ಲಿ ಕುಳಿತಿದ್ದಿರಿ. ನಾವು ಶಿವಾಲಯದಲ್ಲಿ ಕುಳಿತಿದ್ದೇವೆಂದು ನಿಮ್ಮ ಮನಸ್ಸಿನಲ್ಲಿ ಬರುತ್ತದೆ. ಶಿವತಂದೆಯೂ ನೆನಪಿಗೆ ಬಂದುಬಿಡುತ್ತಾರೆ. ಸ್ವರ್ಗವು ನೆನಪಿಗೆ ಬರುತ್ತಿದೆ. ನೆನಪಿನಿಂದಲೇ ಸುಖವು ಸಿಗುತ್ತದೆ. ನಾವು ಶಿವಾಲಯದಲ್ಲಿ ಕುಳಿತಿದ್ದೇವೆಂದು ನೆನಪಿದ್ದಾಗಲೂ ಸಹ ಖುಷಿಯಿರುತ್ತದೆ. ಕೊನೆಗೆ ಎಲ್ಲರೂ ಶಿವಾಲಯದಲ್ಲಿ ಹೋಗಬೇಕಾಗಿದೆ. ಶಾಂತಿಧಾಮದಲ್ಲಿ ಯಾರೂ ಹೋಗಿ ಕುಳಿತುಬಿಡುವಂತಿಲ್ಲ. ವಾಸ್ತವದಲ್ಲಿ ಶಾಂತಿಧಾಮಕ್ಕೂ ಶಿವಾಲಯವೆಂದು ಹೇಳುತ್ತಾರೆ, ಸುಖಧಾಮಕ್ಕೂ ಶಿವಾಲಯವೆಂದು ಹೇಳುತ್ತಾರೆ. ಏಕೆಂದರೆ ಅದನ್ನೂ ತಂದೆಯೇ ಸ್ಥಾಪನೆ ಮಾಡುತ್ತಾರೆ ನೀವು ಮಕ್ಕಳು ಎರಡನ್ನೂ ನೆನಪು ಮಾಡಬೇಕಾಗಿದೆ. ಒಂದು ಶಿವಾಲಯ(ಪರಮಧಾಮ) ಶಾಂತಿಗಾಗಿ ಇದೆ, ಮತ್ತೊಂದು ಶಿವಾಲಯವು ಸುಖಕ್ಕಾಗಿ ಇದೆ. ಇದು ದುಃಖಧಾಮವಾಗಿದೆ. ಈಗ ನೀವು ಸಂಗಮದಲ್ಲಿ ಕುಳಿತಿದ್ದೀರಿ. ಶಾಂತಿಧಾಮ ಮತ್ತು ಸುಖಧಾಮದ ವಿನಃ ಮತ್ತ್ಯಾವುದೂ ನೆನಪಿರಬಾರದು. ಭಲೆ ಎಲ್ಲಿಯೇ ಕುಳಿತಿರಿ, ವ್ಯಾಪಾರ-ವ್ಯವಹಾರಗಳಲ್ಲಿ ಇದ್ದರೂ ಬುದ್ಧಿಯಲ್ಲಿ ಎರಡೂ ಶಿವಾಲಯಗಳು ನೆನಪಿಗೆ ಬರಬೇಕು. ದುಃಖಧಾಮವನ್ನು ಮರೆತುಬಿಡಬೇಕು. ಮಕ್ಕಳಿಗೆ ಗೊತ್ತಿದೆ, ಈ ವೇಶ್ಯಾಲಯ, ದುಃಖಧಾಮವು ಈಗ ಸಮಾಪ್ತಿಯಾಗುವುದಿದೆ.

ಇಲ್ಲಿ ಕುಳಿತು ನೀವು ಮಕ್ಕಳು ತೂಕಡಿಸಬಾರದು. ಅನೇಕರ ಬುದ್ಧಿಯು ಎಲ್ಲೆಲ್ಲೋ ಬೇರೆಕಡೆ ಹೊರಟುಹೋಗುತ್ತದೆ, ಮಾಯೆಯ ವಿಘ್ನಗಳು ಬೀಳುತ್ತವೆ. ತಾವು ಮಕ್ಕಳಿಗೆ ತಂದೆಯು ಪದೇ-ಪದೇ ತಿಳಿಸುತ್ತಾರೆ- ಮಕ್ಕಳೇ, ಮನ್ಮನಾಭವ. ಭಿನ್ನ-ಭಿನ್ನ ಪ್ರಕಾರದ ಯುಕ್ತಿಗಳನ್ನು ತಿಳಿಸುತ್ತಾರೆ. ಇಲ್ಲಿ ಕುಳಿತಿದ್ದೀರಿ ಅಂದಾಗ ಬುದ್ಧಿಯಲ್ಲಿ ಇದನ್ನು ನೆನಪು ಮಾಡಿ. ನಾವು ಮೊದಲು ಶಾಂತಿಧಾಮ ಶಿವಾಲಯದಲ್ಲಿ ಹೋಗುತ್ತೇವೆ ನಂತರ ಸುಖಧಾಮದಲ್ಲಿ ಬರುತ್ತೇವೆ. ಈ ರೀತಿ ನೆನಪು ಮಾಡುವುದರಿಂದ ಪಾಪಗಳು ತುಂಡಾಗುತ್ತಾ ಹೋಗುತ್ತದೆ. ಎಷ್ಟು ನೀವು ನೆನಪು ಮಾಡುತ್ತೀರೋ ಅಷ್ಟು ಹೆಜ್ಜೆಯನ್ನು ಮುಂದಿಡುತ್ತೀರಿ. ಇಲ್ಲಿ ಮತ್ತೆ ಯಾವುದೇ ವಿಚಾರಗಳಲ್ಲಿ ಕುಳಿತುಕೊಳ್ಳಬಾರದು. ಇಲ್ಲವೆಂದರೆ ನೀವು ಅನ್ಯರಿಗೂ ನಷ್ಟ ಮಾಡುತ್ತೀರೆಂದರ್ಥ. ಲಾಭದ ಬದಲು ಇನ್ನೂ ನಷ್ಟ ಮಾಡಿಕೊಳ್ಳುತ್ತೀರಿ. ಪ್ರಾರಂಭದಲ್ಲಿ ಯಾವಾಗ ಕುಳಿತುಕೊಳ್ಳುತ್ತಿದ್ದರೋ ಆಗ ಸನ್ಮುಖದಲ್ಲಿ ಯಾರು ತೂಕಡಿಸುತ್ತಾರೆ, ಯಾರು ಕಣ್ಣುಮುಚ್ಚಿ ಕುಳಿತುಕೊಳ್ಳುತ್ತಾರೆ ಎಂಬುದನ್ನು ಪರಿಶೀಲನೆ ಮಾಡಲು ಯಾರನ್ನಾದರೂ ಕುಳ್ಳರಿಸಲಾಗುತ್ತಿತ್ತು ಆದ್ದರಿಂದ ಬಹಳ ಎಚ್ಚರಿಕೆಯಿಂದಿರುತ್ತಿದ್ದರು. ಇವರ ಬುದ್ಧಿಯೋಗವು ಎಲ್ಲಿಯೂ ಅಲೆದಾಡುವುದಿಲ್ಲವೆ ಅಥವಾ ತೂಕಡಿಸುತ್ತಾರೆಯೇ ಎಂದು ತಂದೆಯೂ ನೋಡುತ್ತಿದ್ದರು. ಇಂತಹವರು ಅನೇಕರು ಬರುತ್ತಾರೆ, ಅವರು ಏನನ್ನೂ ತಿಳಿದುಕೊಳ್ಳುವುದಿಲ್ಲ. ಬ್ರಾಹ್ಮಿಣಿಯರು ಕರೆದುಕೊಂಡು ಬರುತ್ತಾರೆ, ಶಿವತಂದೆಯ ಮುಂದೆ ಬಹಳ ಒಳ್ಳೆಯವರು ಬೇಕು, ಹುಡುಗಾಟಿಕೆಯಲ್ಲಿ ಇರಬಾರದು ಏಕೆಂದರೆ ಇವರು ಯಾವುದೇ ಸಾಮಾನ್ಯ ಶಿಕ್ಷಕರಲ್ಲ. ತಂದೆಯೇ ಕುಳಿತು ತಿಳಿಸುತ್ತಾರೆ ಅಂದಮೇಲೆ ಇಲ್ಲಿ ಬಹಳ ಎಚ್ಚರಿಕೆಯಿಂದ ಕುಳಿತುಕೊಳ್ಳಬೇಕು. ತಂದೆಯು 15 ನಿಮಿಷಗಳ ಕಾಲ ಶಾಂತಿಯಲ್ಲಿ ಕುಳ್ಳರಿಸುತ್ತಾರೆ. ನೀವಂತೂ ಗಂಟೆ, ಎರಡು ಗಂಟೆಗಳ ಕಾಲ ಯೋಗದಲ್ಲಿ ಕುಳಿತುಕೊಳ್ಳುತ್ತೀರಿ. ಎಲ್ಲರೂ ಮಹಾರಥಿಗಳೇನಲ್ಲ, ಯಾರು ಕಚ್ಚಾ ಆಗಿರುವರೋ ಅವರನ್ನು ಎಚ್ಚರಿಸಬೇಕು, ಎಚ್ಚರಿಸಿದಾಗ ಜಾಗೃತರಾಗಿಬಿಡುತ್ತಾರೆ. ಯಾರು ನೆನಪಿನಲ್ಲಿರುವುದಿಲ್ಲವೋ, ವ್ಯರ್ಥವಿಚಾರಗಳನ್ನು ನಡೆಸುತ್ತಿರುತ್ತಾರೆಯೋ, ಅವರು ವಿಘ್ನಗಳನ್ನು ಹಾಕುತ್ತಿರುತ್ತಾರೆ ಏಕೆಂದರೆ ಬುದ್ಧಿಯು ಎಲ್ಲೆಲ್ಲಿಯೋ ಅಲೆದಾಡುತ್ತಿರುತ್ತದೆ. ಇಲ್ಲಿ ಮಹಾರಥಿಗಳು, ಕುದುರೆಸವಾರರು, ಕಾಲಾಳುಗಳು ಎಲ್ಲರೂ ಕುಳಿತ್ತಿದ್ದೀರಿ.

ಬಾಬಾರವರು ಇಂದು ವಿಚಾರಸಾಗರ ಮಂಥನ ಮಾಡಿ ಬಂದಿದ್ದರು- ಮ್ಯೂಜಿಯಂನಲ್ಲಿ ಅಥವಾ ಪ್ರದರ್ಶನಿಯಲ್ಲಿ ನೀವು ಮಕ್ಕಳು ಶಿವಾಲಯ, ವೇಶ್ಯಾಲಯ ಮತ್ತು ಪುರುಷೋತ್ತಮ ಸಂಗಮಯುಗ- ಈ ಮೂರರ ಬಗ್ಗೆಯೂ ತಿಳಿಸುತ್ತೀರಿ. ಇದು ತಿಳಿಸಲು ಬಹಳ ಚೆನ್ನಾಗಿದೆ. ಈ ಚಿತ್ರಗಳನ್ನು ಬಹಳ ದೊಡ್ಡ-ದೊಡ್ಡದಾಗಿ ಮಾಡಿಸಬೇಕು ಇದಕ್ಕಾಗಿ ಒಳ್ಳೆಯ ದೊಡ್ಡ ಹಾಲ್ ಇರಬೇಕು, ಅದರಿಂದ ಮನುಷ್ಯರ ಬುದ್ಧಿಯಲ್ಲಿ ಬೇಗನೆ ಕುಳಿತುಕೊಳ್ಳುವಂತಿರಬೇಕು. ಇದರಲ್ಲಿ ನಾವು ಹೇಗೆ ಅಭಿವೃದ್ಧಿಯನ್ನು ತರುವುದು ಎಂದು ಮಕ್ಕಳು ವಿಚಾರ ಮಾಡಬೇಕು. ಪುರುಷೋತ್ತಮ ಸಂಗಮಯುಗವನ್ನು ಬಹಳ ಚೆನ್ನಾಗಿ ಮಾಡಿಸಬೇಕು ಅದರಿಂದ ಮನುಷ್ಯರಿಗೆ ಬಹಳ ಒಳ್ಳೆಯ ತಿಳುವಳಿಕೆಯು ಸಿಗುತ್ತದೆ. ತಪಸ್ಸಿನಲ್ಲಿಯೂ ಸಹ ನೀವು 5-6 ಜನರನ್ನು ಕೂರಿಸುತ್ತೀರಿ ಆದರೆ ಇದಕ್ಕೆ ಬದಲಾಗಿ 10-15 ಜನರನ್ನು ತಪಸ್ಸಿನಲ್ಲಿ ಕೂರಿಸಬೇಕು. ದೊಡ್ಡ-ದೊಡ್ಡ ಚಿತ್ರಗಳನ್ನು ಮಾಡಿಸಿ ಸ್ಪಷ್ಟವಾದ ಅಕ್ಷರಗಳಲ್ಲಿ ಬರೆಸಬೇಕಾಗಿದೆ. ನೀವು ಇಷ್ಟೊಂದು ತಿಳಿಸುತ್ತೀರಿ ಆದರೂ ತಿಳಿದುಕೊಳ್ಳುವುದಿಲ್ಲ. ನೀವು ತಿಳಿಸಲು ಪರಿಶ್ರಮಪಡುತ್ತೀರಿ, ಕಲ್ಲುಬುದ್ಧಿಯವರಾಗಿದ್ದಾರಲ್ಲವೆ ಆದ್ದರಿಂದ ಎಷ್ಟು ಸಾಧ್ಯವೋ ಅಷ್ಟು ಬಹಳ ಚೆನ್ನಾಗಿ ತಿಳಿಸಬೇಕು. ಯಾರು ಸರ್ವೀಸಿನಲ್ಲಿ ಇರುತ್ತಾರೆಯೋ ಅವರು ಸರ್ವೀಸನ್ನು ಹೆಚ್ಚಿಸುವ ವಿಚಾರ ಮಾಡಬೇಕು. ಪ್ರೋಜೆಕ್ಟರ್, ಪ್ರದರ್ಶನಿಯಲ್ಲಿ ಮಜಾ ಇರುವುದಿಲ್ಲ, ಮ್ಯೂಜಿಯಂನಲ್ಲಿ ಬಹಳ ಸರ್ವೀಸ್ ನಡೆಯುತ್ತದೆ. ಪ್ರೋಜೆಕ್ಟರ್ನಿಂದ ಏನನ್ನೂ ತಿಳಿದುಕೊಳ್ಳುವುದಿಲ್ಲ. ಭಲೆ ಚಿಕ್ಕದಾಗಿರಲಿ ಆದರೆ ಎಲ್ಲದಕ್ಕಿಂತ ಒಳ್ಳೆಯದು ಮ್ಯೂಜಿಯಂ ಆಗಿದೆ. ಒಂದು ಕೊಠಡಿಯಲ್ಲಿ ಶಿವಾಲಯ, ವೇಶ್ಯಾಲಯ ಮತ್ತು ಪುರುಷೋತ್ತಮ ಸಂಗಮಯುಗದ ದೃಶ್ಯವಿರಲಿ, ತಿಳಿಸುವುದರಲ್ಲಿಯೂ ಬಹಳ ವಿಶಾಲಬುದ್ಧಿಯಿರಬೇಕು.

ಬೇಹದ್ದಿನ ತಂದೆ, ಬೇಹದ್ದಿನ ಶಿಕ್ಷಕರು ಬಂದಿದ್ದಾರೆಂದರೆ ಮಕ್ಕಳು ಎಂ.ಎ., ಬಿ.ಎ., ತೇರ್ಗಡೆ ಮಾಡಲೆಂದು ಕುಳಿತುಬಿಡುತ್ತಾರೆಯೇ! ಅಂದರೆ ತಂದೆಯು ಇಲ್ಲಿಯೇ ಇರುತ್ತಾರೇನು. ಸ್ವಲ್ಪ ಸಮಯವಿದ್ದು ಹೊರಟುಹೋಗುತ್ತಾರೆ. ಇನ್ನೂ ಸ್ವಲ್ಪ ಸಮಯವಿದೆಯೆಂದರೂ ಸಹ ಜಾಗೃತರಾಗುವುದಿಲ್ಲ. ಒಳ್ಳೊಳ್ಳೆಯ ಕುಮಾರಿಯರು ಹೇಳುತ್ತಾರೆ- ಈ 4-5 ನೂರು ರೂಪಾಯಿಗಳಿಗಾಗಿ ನಾವು ನಮ್ಮ ಸಮಯವನ್ನು ಸುಮ್ಮನೆ ಏಕೆ ನಷ್ಟ ಮಾಡಿಕೊಳ್ಳಬೇಕು. ನಷ್ಟ ಮಾಡಿಕೊಂಡರೆ ಶಿವಾಲಯದಲ್ಲಿ ನಾವು ಏನು ಪದವಿ ಪಡೆಯುತ್ತೇವೆ! ತಂದೆಯು ನೋಡುತ್ತಾರೆ- ಕುಮಾರಿಯರಂತೂ ಬಂಧನಮುಕ್ತರಾಗಿದ್ದಾರೆ, ಭಲೆ ಎಷ್ಟೇ ದೊಡ್ಡ ಸಂಬಂಳವಿದ್ದರೂ ಸಹ ಅದು ಹಿಡಿಕಡಲೆಯ ಸಮಾನ. ಇದೆಲ್ಲವೂ ಸಮಾಪ್ತಿಯಾಗಿ ಬಿಡುತ್ತದೆ, ಏನೂ ಉಳಿಯುವುದಿಲ್ಲ. ತಂದೆಯು ಈ ಹಿಡಿಕಡಲೆಯನ್ನು ಬಿಡಿಸಲು ಬಂದಿದ್ದಾರೆ ಆದರೆ ಬಿಡುವುದೇ ಇಲ್ಲ. ಆ ನೌಕರಿಯಲ್ಲಿ ಹಿಡಿಕಡಲೆಯಿದೆ ಅಷ್ಟೇ. ಆದರೆ ಇದರಲ್ಲಿ ವಿಶ್ವದ ರಾಜ್ಯಭಾಗ್ಯವಿದೆ. ಆ ಬಿಡುಗಾಸಿನ ಕಡಲೆಯ ಹಿಂದೆ ಎಷ್ಟೊಂದು ತಲೆಕೆಡಿಸಿಕೊಳ್ಳುತ್ತಾರೆ. ಕುಮಾರಿಯರಂತೂ ಬಂಧನಮುಕ್ತರಾಗಿದ್ದೀರಿ. ಆ ವಿದ್ಯೆಯಂತೂ ಬಿಡುಗಾಸಿನದಾಗಿದೆ ಅದನ್ನು ಬಿಟ್ಟು ಜ್ಞಾನವನ್ನು ಓದುತ್ತೀರೆಂದರೆ ಬುದ್ಧಿಯ ಬೀಗವು ತೆರೆಯುತ್ತದೆ. ಇಂತಹ ಚಿಕ್ಕ-ಚಿಕ್ಕ ಕುಮಾರಿಯರು ಕುಳಿತು ದೊಡ್ಡ-ದೊಡ್ಡವರಿಗೆ ಜ್ಞಾನವನ್ನು ತಿಳಿಸಬೇಕು- ತಂದೆಯು ಶಿವಾಲಯವನ್ನು ಸ್ಥಾಪಿಸಲು ಬಂದಿದ್ದಾರೆ. ಇದಂತೂ ಗೊತ್ತಿದೆ, ಇಲ್ಲಿಯದೆಲ್ಲವೂ ಸಹ ಮಣ್ಣುಪಾಲಾಗಿಬಿಡುತ್ತದೆ. ಈ ಹಿಡಿಕಡಲೆಯೂ ಸಹ ಅದೃಷ್ಟದಲ್ಲಿ ಬರುವುದಿಲ್ಲ. ಯಾರದೇ ಕೈಯಲ್ಲಿ ಭಲೆ 5 ಕಡಲೆ ಅರ್ಥಾತ್ 5 ಲಕ್ಷ ರೂಪಾಯಿಗಳೇ ಇರಬಹುದು ಅದೂ ಸಹ ಸಮಾಪ್ತಿಯಾಗಿ ಬಿಡುತ್ತದೆ. ಈಗ ಸಮಯವು ಬಹಳ ಕಡಿಮೆಯಿದೆ, ದಿನ-ಪ್ರತಿದಿನ ಪರಿಸ್ಥಿತಿ ಹಾಳಾಗುತ್ತಾ ಹೋಗುತ್ತದೆ. ಆಕಸ್ಮಿಕವಾಗಿ ಆಪತ್ತುಗಳು ಒದಗುತ್ತವೆ, ಮೃತ್ಯುವೂ ಸಹ ಆಕಸ್ಮಿಕವಾಗಿ ಆಗುತ್ತಿರುತ್ತವೆ, ಕೈಯಲ್ಲಿ ಕಡಲೆಯಿದ್ದರೂ ಸಹ ಪ್ರಾಣವು ಹೊರಟುಹೋಗುತ್ತದೆ ಆದ್ದರಿಂದ ಮನುಷ್ಯರನ್ನು ಮಂಗತನದಿಂದ ಬಿಡಿಸಬೇಕಾಗಿದೆ. ಕೇವಲ ಮ್ಯೂಜಿಯಂ ನೋಡಿ ಖುಷಿಯಾಗಿಬಿಡಬಾರದು, ಚಮತ್ಕಾರ ಮಾಡಿ ತೋರಿಸಬೇಕಾಗಿದೆ ಬಾಕಿ ಇನ್ನ್ಯಾರಿಗೂ ಕಡಲೆಯೂ ಭಾಗ್ಯದಲ್ಲಿ ಬರುವುದಿಲ್ಲ, ಎಲ್ಲವೂ ಸಮಾಪ್ತಿಯಾಗಿ ಬಿಡುತ್ತದೆ. ಇದಕ್ಕಿಂತ ತಂದೆಯಿಂದ ಏಕೆ ರಾಜ್ಯಭಾಗ್ಯವನ್ನು ಪಡೆಯಬಾರದು! ಯಾವುದೇ ಕಷ್ಟದ ಮಾತಿಲ್ಲ ಕೇವಲ ತಂದೆಯನ್ನು ನೆನಪು ಮಾಡಬೇಕು ಮತ್ತು ಸ್ವದರ್ಶನ ಚಕ್ರವನ್ನು ತಿರುಗಿಸಬೇಕಾಗಿದೆ. ಕಡಲೆಯ ಹಿಡಿಯನ್ನು ಖಾಲಿ ಮಾಡಿ ಮುಷ್ಠಿಯಲ್ಲಿ ವಜ್ರರತ್ನಗಳನ್ನು ತುಂಬಿಸಿಕೊಂಡು ಹೋಗಬೇಕಾಗಿದೆ.

ತಂದೆಯು ತಿಳಿಸುತ್ತಾರೆ- ಮಧುರ ಮಕ್ಕಳೇ, ಈ ಹಿಡಿಕಡಲೆಯ ಹಿಂದೆ ನೀವು ತಮ್ಮ ಸಮಯವನ್ನೇಕೆ ವ್ಯರ್ಥ ಮಾಡುತ್ತೀರಿ? ಹಾ! ಯಾರಾದರೂ ವೃದ್ಧರಿದ್ದಾರೆ, ಬಹಳಮಂದಿ ಮಕ್ಕಳಿದ್ದಾರೆಂದರೆ ಅವರನ್ನು ಸಂಭಾಲನೆ ಮಾಡಬೇಕಾಗಿದೆ. ಕುಮಾರಿಯರಿಗಂತೂ ಬಹಳ ಸಹಜ, ಯಾರಾದರೂ ಬರಲಿ ತಿಳಿಸಿ- ತಂದೆಯು ನಮಗೆ ಈ ರಾಜ್ಯಭಾಗ್ಯವನ್ನು ಕೊಡುತ್ತಾರೆ ಅಂದಾಗ ರಾಜ್ಯಭಾಗ್ಯವನ್ನು ತೆಗೆದುಕೊಳ್ಳಬೇಕಲ್ಲವೆ. ಈಗ ನಿಮ್ಮ ಕೈಗಳು ವಜ್ರಗಳಿಂದ ತುಂಬುತ್ತಿವೆ. ಉಳಿದೆಲ್ಲವೂ ವಿನಾಶವಾಗಿಬಿಡುತ್ತವೆ. ತಂದೆಯು ತಿಳಿಸುತ್ತಾರೆ- ನೀವು 63 ಜನ್ಮಗಳಿಂದ ಪಾಪ ಮಾಡಿದ್ದೀರಿ ಮತ್ತು ಎರಡನೆಯ ಪಾಪವಾಗಿದೆ- ತಂದೆ ಮತ್ತು ದೇವತೆಗಳನ್ನು ನಿಂದನೆ ಮಾಡುವುದು, ವಿಕಾರಿಗಳೂ ಆಗಿದ್ದೀರಿ ಮತ್ತು ನಿಂದನೆಯನ್ನೂ ಮಾಡಿದ್ದೀರಿ. ತಂದೆಗೆ ಎಷ್ಟೊಂದು ನಿಂದನೆ ಮಾಡಿದ್ದೀರಿ. ತಂದೆಯು ಮಕ್ಕಳಿಗೆ ತಿಳಿಸುತ್ತಾರೆ- ಮಕ್ಕಳೇ, ಸಮಯವನ್ನು ವ್ಯರ್ಥ ಮಾಡಬಾರದು. ನಾವು ತಂದೆಯ ನೆನಪಿನಲ್ಲಿರಲು ಸಾಧ್ಯವಿಲ್ಲ ಎಂದಲ್ಲ. ಹೇಳಿ, ಬಾಬಾ ನಾವು ನಮ್ಮನ್ನು ಆತ್ಮನೆಂದು ನೆನಪು ಮಾಡಲು ಆಗುತ್ತಿಲ್ಲ ಮರೆತು ಹೋಗುತ್ತೇವೆ. ದೇಹಾಭಿಮಾನದಲ್ಲಿ ಬರುವುದೆಂದರೆ ತಮ್ಮನ್ನು ಮರೆಯುವುದು. ತಮ್ಮನ್ನು ಆತ್ಮವೆಂದು ನೆನಪು ಮಾಡಲು ಸಾಧ್ಯವಿಲ್ಲವೆಂದರೆ ಮತ್ತೆ ತಂದೆಯನ್ನು ಹೇಗೆ ನೆನಪು ಮಾಡುತ್ತೀರಿ! ಇದು ಬಹಳ ದೊಡ್ಡ ಗುರಿಯಾಗಿದೆ. ಬಹಳ ಸಹಜವೂ ಆಗಿದೆ. ಹಾ! ಮಾಯೆಯ ಹೋರಾಟ ನಡೆಯುತ್ತದೆ.

ಮನುಷ್ಯರು ಗೀತೆ ಮೊದಲಾದುವನ್ನು ಓದುತ್ತಾರೆ ಆದರೆ ಅದರ ಅರ್ಥವನ್ನೇ ತಿಳಿದುಕೊಂಡಿಲ್ಲ. ಭಾರತದ್ದು ಮುಖ್ಯವಾಗಿ ಗೀತೆಯಾಗಿದೆ. ಪ್ರತಿಯೊಂದು ಧರ್ಮಕ್ಕೆ ತಮ್ಮ-ತಮ್ಮದೇ ಆದ ಒಂದು ಶಾಸ್ತ್ರವಿದೆ, ಯಾರು ಧರ್ಮಸ್ಥಾಪನೆ ಮಾಡುವರೋ ಅವರನ್ನು ಸದ್ಗುರುವೆಂದು ಹೇಳಲು ಸಾಧ್ಯವಿಲ್ಲ. ಇದು ದೊಡ್ಡ ತಪ್ಪಾಗಿದೆ. ಸದ್ಗುರುವಂತೂ ಒಬ್ಬರೇ ಆಗಿದ್ದಾರೆ, ಬಾಕಿ ಗುರುಗಳೆಂದು ಕರೆಸಿಕೊಳ್ಳುವವರು ಅನೇಕರಿದ್ದಾರೆ. ಯಾರಾದರೂ ಬಡಗಿಯ ಕೆಲಸವನ್ನು ಕಲಿಸಿದರೆ, ಇಂಜಿನಿಯರ್ ಕೆಲಸವನ್ನು ಕಲಿಸಿದರೆಂದರೆ ಅವರೂ ಗುರುಗಳಾಗುತ್ತಾರೆ. ಪ್ರತಿಯೊಂದನ್ನು ಕಲಿಸುವವರು ಗುರುವಾಗುತ್ತಾರೆ ಆದರೆ ಸದ್ಗುರು ಒಬ್ಬರೇ ಇದ್ದಾರೆ. ಆ ಸದ್ಗುರು ಈಗ ನಿಮಗೆ ಸಿಕ್ಕಿದ್ದಾರೆ, ಅವರು ನಿಮ್ಮ ಸತ್ಯ ತಂದೆಯೂ ಆಗಿದ್ದಾರೆ, ಸತ್ಯಶಿಕ್ಷಕನೂ ಆಗಿದ್ದಾರೆ ಆದ್ದರಿಂದ ಮಕ್ಕಳು ಹೆಚ್ಚಿನ ಹುಡುಗಾಟಿಕೆ ಮಾಡಬಾರದು. ಬಹಳ ಚೆನ್ನಾಗಿ ರಿಫ್ರೆಷ್ ಆಗಿ ಇಲ್ಲಿಂದ ಹೋಗುತ್ತಾರೆ ನಂತರ ಮನೆಗೆ ಹೋದಾಗ ಇಲ್ಲಿಯದೆಲ್ಲವನ್ನೂ ಮರೆತುಬಿಡುತ್ತಾರೆ. ಗರ್ಭಜೈಲಿನಲ್ಲಿ ಬಹಳ ಶಿಕ್ಷೆ ಸಿಗುತ್ತವೆ. ಸತ್ಯಯುಗದಲ್ಲಂತೂ ಗರ್ಭವು ಮಹಲಾಗಿರುತ್ತದೆ, ಶಿಕ್ಷೆಯನ್ನು ಅನುಭವಿಸಲು ಯಾವುದೇ ವಿಕರ್ಮವಾಗುವುದಿಲ್ಲ. ಇಲ್ಲಿ ನೀವು ಮಕ್ಕಳು ತಿಳಿಯುತ್ತೀರಿ- ಇಲ್ಲಿ ತಂದೆಯಿಂದ ನಾವು ಸನ್ಮುಖದಲ್ಲಿ ಓದುತ್ತಿದ್ದೇವೆ, ಹೊರಗೆ ತಮ್ಮ ಮನೆಯಲ್ಲಂತೂ ಈ ರೀತಿ ಹೇಳುವುದಿಲ್ಲ. ಅಲ್ಲಿ ಸಹೋದರರು ಓದಿಸುತ್ತಾರೆಂದು ತಿಳಿಯುತ್ತೀರಿ ಆದರೆ ಇಲ್ಲಿ ನೇರವಾಗಿ ತಂದೆಯ ಬಳಿ ಬಂದಿದ್ದೀರಿ. ಇಲ್ಲಿ ತಂದೆಯು ಮಕ್ಕಳಿಗೆ ಬಹಳ ಚೆನ್ನಾಗಿ ತಿಳಿಸಿಕೊಡುತ್ತಾರೆ. ತಂದೆ ಮತ್ತು ಮಕ್ಕಳು ತಿಳಿಸುವುದರಲ್ಲಿ ಅಂತರವಾಗಿಬಿಡುತ್ತವೆ. ಈಗ ತಂದೆಯು ಕುಳಿತು ಮಕ್ಕಳಿಗೆ ಎಚ್ಚರಿಕೆ ನೀಡುತ್ತಾರೆ- ಮಕ್ಕಳೇ, ಮಕ್ಕಳೇ ಎಂದು ತಿಳಿಸಿಕೊಡುತ್ತಾರೆ. ನೀವು ಶಿವಾಲಯ ಮತ್ತು ವೇಶ್ಯಾಲಯವನ್ನು ತಿಳಿದಿದ್ದೀರಿ. ಇದು ಬೇಹದ್ದಿನ ಮಾತಾಗಿದೆ. ಇದನ್ನು ಸ್ಪಷ್ಟಮಾಡಿ ತಿಳಿಸಿದಾಗ ಮನುಷ್ಯರಿಗೆ ಅದರಲ್ಲಿ ಮಜಾ ಬರುತ್ತದೆ. ಅಲ್ಲಂತೂ ಹೀಗೆಯೇ ಹಾಸ್ಯದಿಂದ ತಿಳಿಸುತ್ತೀರಿ, ಗಂಭೀರವಾಗಿ ತಿಳಿಸಿಕೊಟ್ಟಿದ್ದೇ ಆದರೆ ಚೆನ್ನಾಗಿ ತಿಳಿದುಕೊಳ್ಳುತ್ತಾರೆ. ತಮ್ಮಮೇಲೆ ದಯೆ ತೋರಿಸಿಕೊಳ್ಳಿ, ತಾವು ಈ ವೇಶ್ಯಾಲಯದಲ್ಲಿಯೇ ಇರಬೇಕೆ! ಮಕ್ಕಳಿಗೆ ಹೇಗೆ ತಿಳಿಸಬೇಕೆಂದು ತಂದೆಗೆ ವಿಚಾರ ಬರುತ್ತದೆ. ಮಕ್ಕಳು ಎಷ್ಟೊಂದು ಪರಿಶ್ರಮ ಪಡುತ್ತಾರೆ ಆದರೂ ಸಹ ಖಾಲಿ ಡಬ್ಬದಂತೆ. ಹೌದು, ಹೌದು ಬಹಳ ಚೆನ್ನಾಗಿದೆ, ನಮ್ಮ ಗ್ರಾಮದಲ್ಲಿ ಹೋಗಿ ತಿಳಿಸಬೇಕೆಂದು ಹೇಳಿಹೋಗುತ್ತಾರೆ. ಆದರೆ ತಾವಂತೂ ಅರ್ಥಮಾಡಿಕೊಳ್ಳುವುದಿಲ್ಲ. ಹಣವಿರುವ ಸಾಹುಕಾರರು ತಿಳಿದುಕೊಳ್ಳುವುದೇ ಇಲ್ಲ, ಗಮನ ಕೊಡುವುದೇ ಇಲ್ಲ. ಅವರು ಕೊನೆಯಲ್ಲಿ ಬರುತ್ತಾರೆ ಆಗ ಬಹಳ ತಡವಾಗಿಬಿಟ್ಟಿರುತ್ತದೆ. ಅವರ ಹಣವೂ ಕೆಲಸಕ್ಕೆ ಬರುವುದಿಲ್ಲ ಅಥವಾ ಅವರು ಯೋಗ ಮಾಡುವುದಕ್ಕೂ ಆಗುವುದಿಲ್ಲ ಬಾಕಿ ಅಲ್ಪಸ್ವಲ್ಪ ಕೇಳಿಹೋದರೆ ಪ್ರಜೆಗಳಲ್ಲಿ ಬರುತ್ತಾರೆ. ಬಡವರು ಬಹಳ ಉನ್ನತ ಪದವಿಯನ್ನು ಪಡೆಯುತ್ತಾರೆ, ನೀವು ಕನ್ಯೆಯರ ಬಳಿ ಏನಿದೆ! ಕನ್ಯೆಯರಿಗೆ ಬಡವರೆಂದು ಹೇಳಲಾಗುತ್ತದೆ ಏಕೆಂದರೆ ತಂದೆಯ ಆಸ್ತಿಯಂತೂ ಗಂಡು ಮಕ್ಕಳಿಗೆ ಸಿಗುತ್ತದೆ ಬಾಕಿ ಕನ್ಯಾದಾನ ಮಾಡಿದಾಗ ವಿಕಾರದಲ್ಲಿ ಹೋಗುತ್ತಾರೆ. ನೀವು ವಿವಾಹ ಮಾಡಿಕೊಂಡರೆ ಹಣ ಕೊಡುತ್ತೇವೆಂದು ಹೇಳುತ್ತಾರೆ. ಪವಿತ್ರರಾಗಿರಬೇಕೆಂದರೆ ಒಂದು ಪೈಸೆಯನ್ನೂ ಕೊಡುವುದಿಲ್ಲ, ಮನೋವೃತ್ತಿ ಹೇಗಿದೆ ಎಂದು ನೋಡಿ! ನೀವು ಯಾರಿಗೂ ಹೆದರಬಾರದು, ತೆರೆದ ಹೃದಯದಿಂದ ತಿಳಿಸಿ. ಬಹಳ ಸ್ಪೂರ್ತಿಯಿರಬೇಕು. ನೀವಂತೂ ಸಂಪೂರ್ಣ ಸತ್ಯವನ್ನೇ ಹೇಳುತ್ತೀರಿ, ಇದು ಸಂಗಮಯುಗವಾಗಿದೆ. ಆ ಕಡೆ ಹಿಡಿಕಡಲೆಯಿದೆ, ಈ ಕಡೆ ವಜ್ರಗಳ ಹಿಡಿಯಿದೆ, ಈಗ ನೀವು ಮಂಗನಿಂದ ಮಂದಿರಕ್ಕೆ ಯೋಗ್ಯರಾಗುತ್ತಿದ್ದೀರಿ ಅಂದಮೇಲೆ ಪುರುಷಾರ್ಥ ಮಾಡಿ ವಜ್ರ ಸಮಾನ ಜನ್ಮವನ್ನು ಪಡೆಯಬೇಕಲ್ಲವೆ. ನಿಮ್ಮ ಮುಖವೂ ಸಹ ವೀರ ಸಿಂಹಿಣಿಯಂತಿರಬೇಕು. ಕೆಲಕೆಲವರ ಮುಖವು ಮೇಕೆಯ ಮುಖದಂತಿರುತ್ತದೆ. ಸ್ವಲ್ಪ ಶಬ್ಧಕ್ಕೂ ಹೆದರಿಬಿಡುತ್ತಾರೆ ಆದ್ದರಿಂದ ತಂದೆಯು ಎಲ್ಲಾ ಮಕ್ಕಳಿಗೆ ಎಚ್ಚರ ನೀಡುತ್ತಾರೆ. ಕನ್ಯೆಯರಂತೂ ಬಂಧನಕ್ಕೊಳಗಾಗಬಾರದು. ಬಂಧನಕ್ಕೊಳಗಾದರೆ ನಂತರ ವಿಕಾರಕ್ಕಾಗಿ ಬಹಳ ಪೆಟ್ಟನ್ನು ತಿನ್ನುತ್ತೀರಿ. ಜ್ಞಾನವನ್ನು ಒಳ್ಳೆಯ ರೀತಿಯಲ್ಲಿ ಧಾರಣೆ ಮಾಡುತ್ತೀರೆಂದರೆ ವಿಶ್ವದ ಮಹಾರಾಣಿಯಾಗುತ್ತೀರಿ. ನಾನು ನಿಮಗೆ ವಿಶ್ವದ ರಾಜ್ಯಭಾಗ್ಯವನ್ನು ಕೊಡಲು ಬಂದಿದ್ದೇನೆ ಆದರೆ ಇದು ಕೆಲವರ ಅದೃಷ್ಠದಲ್ಲಿಲ್ಲ ಎಂದು ತಂದೆಯು ತಿಳಿಸುತ್ತಾರೆ. ತಂದೆಯು ಬಡವರ ಬಂಧುವಾಗಿದ್ದಾರೆ. ಕನ್ಯೆಯರು ಬಡವರಾಗಿದ್ದಾರೆ. ತಂದೆ-ತಾಯಿಯು ಕನ್ಯೆಗೆ ವಿವಾಹ ಮಾಡಿಸಲು ಸಾಧ್ಯವಾಗದಿದ್ದರೆ ಸೇವೆಗೆ ದಾನವಾಗಿ ಕೊಡುತ್ತಾರೆ ಅಂದಮೇಲೆ ಅವರಿಗೆ ನಶೆಯೇರಬೇಕು- ನಾವು ಬಹಳ ಚೆನ್ನಾಗಿ ಓದಿ ಒಳ್ಳೆಯ ಪದವಿಯನ್ನು ಪಡೆಯಬೇಕು. ಯಾರು ಒಳ್ಳೆಯ ವಿದ್ಯಾರ್ಥಿಗಳಿರುವರೋ ಅವರು ನಾವು ಒಳ್ಳೆಯ ಅಂಕಗಳಿಂದ ತೇರ್ಗಡೆಯಾಗಬೇಕೆಂದು ವಿದ್ಯೆಯ ಮೇಲೆ ಗಮನ ಕೊಡುತ್ತಾರೆ. ಅಂತಹವರಿಗೆ ವಿದ್ಯಾರ್ಥಿವೇತನವು ಸಿಗುತ್ತದೆ. ಎಷ್ಟು ಪುರುಷಾರ್ಥ ಮಾಡುತ್ತೀರೋ ಅಷ್ಟು ಶ್ರೇಷ್ಠ ಪದವಿಯನ್ನು ಪಡೆಯುತ್ತೀರಿ ಅದೂ 21 ಜನ್ಮಗಳಿಗಾಗಿ. ಇಲ್ಲಿ ಅಲ್ಪಕಾಲ ಸುಖವಿದೆ. ಇಂದು ಯಾವುದಾದರೂ ಪದವಿ ಸಿಕ್ಕಿತು, ನಾಳೆ ಮೃತ್ಯುವು ಬಂದುಬಿಟ್ಟಿತೆಂದರೆ ಎಲ್ಲವೂ ಸಮಾಪ್ತಿ. ಯೋಗಿ ಮತ್ತು ಭೋಗಿಗಳಲ್ಲಿ ಅಂತರವಿದೆಯಲ್ಲವೆ! ಆದ್ದರಿಂದಲೇ ತಂದೆಯು ತಿಳಿಸುತ್ತಾರೆ- ಬಡವರ ಮೇಲೆ ಹೆಚ್ಚಿನ ಗಮನ ಕೊಡಿ. ಸಾಹುಕಾರರು ಜ್ಞಾನವನ್ನು ತಿಳಿಯುವುದು ಬಹಳ ವಿರಳ. ಕೇವಲ ಬಹಳ ಚೆನ್ನಾಗಿದೆ, ಈ ಸಂಸ್ಥೆಯು ಬಹಳ ಒಳ್ಳೆಯದಾಗಿದೆ, ಅನೇಕರ ಕಲ್ಯಾಣ ಮಾಡುತ್ತದೆ ಎಂದು ಹೇಳುತ್ತಾರೆ. ತಮ್ಮ ಕಲ್ಯಾಣವನ್ನಂತೂ ಮಾಡಿಕೊಳ್ಳುವುದಿಲ್ಲ. ಬಹಳ ಒಳ್ಳೆಯ ಜ್ಞಾನವೆಂದು ಹೇಳಿ ಹೊರಗಡೆ ಹೋದರೆ ಎಲ್ಲವೂ ಸಮಾಪ್ತಿ. ಮಾಯೆಯು ದೊಣ್ಣೆಯನ್ನು ಹಿಡಿದು ಕುಳಿತಿದೆ, ಒಂದೇ ಪಟ್ಟಿಗೆ ಆಕಾಂಕ್ಷೆಯನ್ನು ಮಾಯೆ ಮಾಡಿಬಿಡುತ್ತದೆ ಬುದ್ಧಿಯನ್ನು ಭ್ರಷ್ಟ ಮಾಡಿಬಿಡುತ್ತದೆ. ತಂದೆ ತಿಳಿಸುತ್ತಾರೆ ಭಾರತದ ಸ್ಥಿತಿ ನೋಡಿ ಏನಾಗಿದೆ! ಮಕ್ಕಳು ನಾಟಕದ ಜ್ಞಾನವನ್ನಂತೂ ಬಹಳ ಚೆನ್ನಾಗಿ ಅರಿತುಕೊಂಡಿದ್ದೀರಿ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಹಿಡಿಕಡಲೆಯನ್ನು ಬಿಟ್ಟು ತಂದೆಯಿಂದ ವಿಶ್ವದ ರಾಜ್ಯಭಾಗ್ಯವನ್ನು ಪಡೆಯುವ ಪೂರ್ಣ ಪುರುಷಾರ್ಥ ಮಾಡಬೇಕು, ಯಾವುದೇ ಮಾತಿನಲ್ಲಿ ಹೆದರಬಾರದು, ನಿರ್ಭಯರಾಗಿ ಬಂಧನಗಳಿಂದ ಮುಕ್ತರಾಗಬೇಕು. ತಮ್ಮ ಸಮಯವನ್ನು ಸತ್ಯಸಂಪಾದನೆಯಲ್ಲಿ ಸಫಲ ಮಾಡಿಕೊಳ್ಳಬೇಕು.

2. ಈ ದುಃಖಧಾಮವನ್ನು ಮರೆತು ಶಿವಾಲಯ ಅರ್ಥಾತ್ ಶಾಂತಿಧಾಮ, ಸುಖಧಾಮವನ್ನು ನೆನಪು ಮಾಡಬೇಕು. ಮಾಯೆಯ ವಿಘ್ನಗಳನ್ನು ತಿಳಿದು ಅದರಿಂದ ಎಚ್ಚರಿಕೆಯಿಂದಿರಬೇಕು.

ವರದಾನ:
ಗೀತಾ ಪಾಠವನ್ನು ಓದುವ ಮತ್ತು ಓದಿಸುವಂತಹ ನಷ್ಟಮೋಹ ಸ್ಮೃತಿ ಸ್ವರೂಪ ಭವ

ಗೀತಾ ಜ್ಞಾನದ ಮೊದಲ ಪಾಠವಾಗಿದೆ- ಅಶರೀರಿ ಆತ್ಮನಾಗಿರಿ ಮತ್ತು ಅಂತಿಮ ಪಾಠವಾಗಿದೆ- ನಷ್ಟಮೋಹ ಸ್ಮೃತಿ ಸ್ವರೂಪರಾಗಿರಿ. ಮೊದಲ ಪಾಠವಾಗಿದೆ- ವಿಧಿ ಮತ್ತು ಅಂತಿಮ ಪಾಠವಾಗಿದೆ- ವಿಧಿಯಿಂದ ಸಿದ್ಧಿ. ಅಂದಮೇಲೆ ಪ್ರತೀ ಸಮಯದಲ್ಲಿ ಮೊದಲನೆಯದಾಗಿ ಸ್ವಯಂಗೆ ಈ ಪಾಠವನ್ನು ಓದಿಸಿ ನಂತರ ಅನ್ಯರಿಗೆ ಓದಿಸಿರಿ. ಇಂತಹ ಶ್ರೇಷ್ಠ ಕರ್ಮವನ್ನು ಮಾಡಿ ತೋರಿಸಬೇಕು, ತಮ್ಮ ಯಾವ ಶ್ರೇಷ್ಠಕರ್ಮವನ್ನು ನೋಡಿ ಅನೇಕ ಆತ್ಮರು ಶ್ರೇಷ್ಠ ಕರ್ಮವನ್ನು ಮಾಡುತ್ತಾ ತಮ್ಮ ಭಾಗ್ಯದ ರೇಖೆಯನ್ನು ಶ್ರೇಷ್ಠವನ್ನಾಗಿ ಮಾಡಿಕೊಳ್ಳಲು ಸಾಧ್ಯವಾಗಲಿ.

ಸ್ಲೋಗನ್:
ಪರಮಾತ್ಮನ ಸ್ನೇಹದಲ್ಲಿ ಸಮಾವೇಶವಾಗಿರಿ ಆಗ ಪರಿಶ್ರಮದಿಂದ ಮುಕ್ತರಾಗಿಬಿಡುತ್ತೀರಿ.