20.07.24 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ -
ಮಾಯಾರಾವಣನ ಸಂಗದಲ್ಲಿ ಬಂದು ನೀವು ಬಹಳ ಅಲೆದಾಡಿದಿರಿ, ಪವಿತ್ರವಾಗಿದ್ದ ಸಸಿಗಳು
ಅಪವಿತ್ರವಾಗಿಬಿಟ್ಟಿರಿ, ಈಗ ಮತ್ತೆ ಪವಿತ್ರರಾಗಿ”
ಪ್ರಶ್ನೆ:
ಪ್ರತಿಯೊಬ್ಬ
ಮಗುವಿಗೆ ತಮ್ಮ ಮೇಲೆ ತಮಗೆ ಯಾವ ಆಶ್ಚರ್ಯವಾಗುತ್ತದೆ? ತಂದೆಗೆ ಮಕ್ಕಳ ಮೇಲೆ ಯಾವ
ಆಶ್ಚರ್ಯವಾಗುತ್ತದೆ?
ಉತ್ತರ:
ಮಕ್ಕಳಿಗೆ
ಆಶ್ಚರ್ಯವೆನಿಸುತ್ತದೆ - ನಾವು ಹೇಗಿದ್ದೆವು, ಯಾರ ಮಕ್ಕಳಾಗಿದ್ದೆವು, ಅಂತಹ ತಂದೆಯ ಆಸ್ತಿಯು ನಮಗೆ
ಸಿಕ್ಕಿತು. ಆ ತಂದೆಯನ್ನೇ ನಾವು ಮರೆತು ಹೋದೆವು. ರಾವಣನು ಬಂದನು, ಎಷ್ಟೊಂದು ಹಿಮವು
ಬಂದುಬಿಟ್ಟಿತು, ಅದರಿಂದ ರಚಯಿತ ಮತ್ತು ರಚನೆ ಎಲ್ಲವೂ ಮರೆತುಹೋಯಿತು. ತಂದೆಗೆ ಮಕ್ಕಳ ಮೇಲೆ
ಆಶ್ಚರ್ಯವಾಗುತ್ತದೆ - ಯಾವ ಮಕ್ಕಳನ್ನು ನಾನು ಇಷ್ಟು ಶ್ರೇಷ್ಠರನ್ನಾಗಿ ಮಾಡಿದೆನು,
ರಾಜ್ಯಭಾಗ್ಯವನ್ನು ಕೊಟ್ಟೆನೋ ಆ ಮಕ್ಕಳೇ ನನ್ನ ನಿಂದನೆ ಮಾಡಿದರು. ರಾವಣನ ಸಂಗದಲ್ಲಿ ಬಂದು
ಎಲ್ಲವನ್ನು ಕಳೆದುಕೊಂಡರು.
ಓಂ ಶಾಂತಿ.
ಏನು ಯೋಚಿಸುತ್ತಿದ್ದೀರಿ? ನಂಬರ್ವಾರ್ ಪುರುಷಾರ್ಥದನುಸಾರ ಪ್ರತಿಯೊಂದು ಜೀವಾತ್ಮವು ಈಗ ತಮ್ಮ ಮೇಲೆ
ತಮಗೆ ಆಶ್ಚರ್ಯಚಕಿತ ಆಗಬಹುದು - ನಾವು ಹೇಗಿದ್ದೆವು, ಯಾರ ಮಕ್ಕಳಾಗಿದ್ದೆವು ಮತ್ತು ಆ ತಂದೆಯಿಂದ
ಸಿಕ್ಕಿದ ಆಸ್ತಿಯನ್ನು ಹೇಗೆ ಮರೆತು ಹೋದೆವು! ನಾವು ಸತೋಪ್ರಧಾನ ಪ್ರಪಂಚದಲ್ಲಿ ಇಡೀ ವಿಶ್ವದ
ಮಾಲೀಕರಾಗಿದ್ದೆವು, ಬಹಳ ಸುಖಿಯಾಗಿದ್ದೆವು. ಮತ್ತೆ ನಾವು ಏಣಿಯನ್ನು ಇಳಿಯುತ್ತಾ ಹೋದೆವು. ರಾವಣ
ಬಂದರೆ ಇಷ್ಟೊಂದು ಮಂಜು ಕವಿಯಿತು ಅದರಿಂದ ರಚಯಿತ ಮತ್ತು ರಚನೆಯ ಜ್ಞಾನವನ್ನೇ ಮರೆತು ಹೋದೆವು.
ಮಂಜುಕವಿದಿದ್ದಾಗ ಮನುಷ್ಯರು ಮಾರ್ಗವನ್ನೇ ಮರೆತು ಹೋಗುತ್ತಾರಲ್ಲವೇ ಅಂದಾಗ ನಮ್ಮ ಮನೆಯು ಎಲ್ಲಿದೆ,
ಎಲ್ಲಿಯ ನಿವಾಸಿಗಳಾಗಿದ್ದೇವೆ ಎಂಬುದೆಲ್ಲವನ್ನೂ ಸಹ ಮರೆತು ಹೋದೆವು. ಈಗ ತಂದೆಯು ನೋಡುತ್ತಿದ್ದಾರೆ
- ನನ್ನ ಮಕ್ಕಳು ಯಾರಿಗೆ ನಾನು ಇಂದಿಗೆ 5000 ವರ್ಷಗಳ ಮೊದಲು ರಾಜ್ಯಭಾಗ್ಯವನ್ನು ಕೊಟ್ಟು ಹೋದೆನು,
ಬಹಳ ಖುಷಿ ಮತ್ತು ಆನಂದದಲ್ಲಿ ಇದ್ದರು, ಅಂತಹ ಭೂಮಿ ಇಂದು ಏನಾಗಿಬಿಟ್ಟಿದೆ! ಹೀಗೆ ರಾವಣನ
ರಾಜ್ಯದಲ್ಲಿ ಬಂದುಬಿಟ್ಟಿದ್ದಾರೆ! ಪರರಾಜ್ಯದಲ್ಲಂತೂ ಅವಶ್ಯವಾಗಿ ದುಃಖವೇ ಸಿಗುತ್ತದೆ, ಮಕ್ಕಳು
ಎಷ್ಟೊಂದು ಅಲೆದಾಡಿದಿರಿ, ಅಂಧಶ್ರದ್ದೆಯಲ್ಲಿ ತಂದೆಯನ್ನು ಹುಡುಕುತ್ತಾ ಹೋದಿರಿ ಆದರೆ ಎಲ್ಲಿ
ಸಿಕ್ಕಿದರು! ತಂದೆಯನ್ನೇ ಕಲ್ಲು-ಮುಳ್ಳಿನಲ್ಲಿ ಇದ್ದಾರೆಂದು ಹೇಳಿಬಿಟ್ಟಿರಿ ಎಂದಮೇಲೆ
ಸಿಗುವುದಾದರೂ ಹೇಗೆ? ಅರ್ಧಕಲ್ಪ ನೀವು ಅಲೆದಾಡಿ - ಅಲೆದಾಡಿ.... ತಮ್ಮದೇ ಅಜ್ಞಾನದ ಕಾರಣ
ರಾವಣರಾಜ್ಯದಲ್ಲಿ ಎಷ್ಟೊಂದು ದುಃಖಿಗಳಾಗಿದಿರಿ. ಭಾರತವು ಭಕ್ತಿಮಾರ್ಗದಲ್ಲಿ ಬಡ ಭಾರತ ಆಗಿದೆ,
ತಂದೆಯು ಮಕ್ಕಳ ಕಡೆ ನೋಡಿದಾಗ ಇಡೀ ವಿಚಾರವು ಬರುತ್ತದೆ - ಭಕ್ತಿ ಮಾರ್ಗದಲ್ಲಿ ಎಷ್ಟೊಂದು
ಅಲೆದಾಡಿದಿರಿ, ಅರ್ಧಕಲ್ಪ ಭಕ್ತಿ ಮಾಡಿದಿರಿ, ಏತಕ್ಕಾಗಿ? ಭಗವಂತನೊಂದಿಗೆ ಮಿಲನ ಮಾಡುವುದಕ್ಕಾಗಿ.
ಭಕ್ತಿಯ ನಂತರವೇ ಭಗವಂತನು ಫಲವನ್ನು ಕೊಡುತ್ತಾರೆ. ಏನನ್ನು ಕೊಡುತ್ತಾರೆ? ಮನುಷ್ಯರಂತೂ ಇದನ್ನು
ತಿಳಿದುಕೊಂಡಿಲ್ಲ. ಸಂಪೂರ್ಣ ಮಂದಬುದ್ಧಿಯವರಾಗಿಬಿಟ್ಟಿದ್ದಾರೆ. ಇವೆಲ್ಲಾ ಮಾತುಗಳು ಬುದ್ಧಿಯಲ್ಲಿ
ಬರಬೇಕು - ನಾವು ಹೇಗಿದ್ದೆವು ಮತ್ತೆ ಹೇಗೆ ರಾಜ್ಯಭಾರ ಮಾಡುತ್ತಿದ್ದೆವು, ಹೇಗೆ ಏಣಿಯನ್ನು
ಇಳಿಯುತ್ತಾ-ಇಳಿಯುತ್ತಾ ರಾವಣನ ಬಂಧನಗಳಲ್ಲಿ ಬಂಧಿತರಾಗುತ್ತಾ ಹೋದಿರಿ. ಅಪರಮಪಾರ ದುಃಖವಿತ್ತು,
ಮೊಟ್ಟಮೊದಲು ನೀವು ಅಪರಮಪಾರ ಸುಖದಲ್ಲಿ ಇದ್ದಿರಿ ಅಂದಮೇಲೆ ಈಗ ಮನಸ್ಸಿನಲ್ಲಿ ಬರಬೇಕು-ನಮ್ಮ
ರಾಜ್ಯದಲ್ಲಿ ಇಷ್ಟೊಂದು ಸುಖವಿತ್ತು ಮತ್ತೆ ಪರರಾಜ್ಯದಲ್ಲಿ ಎಷ್ಟು ದುಃಖವನ್ನು ಅನುಭವಿಸಿದ್ದೇವೆ.
ಬ್ರಿಟೀಷರ ರಾಜ್ಯದಲ್ಲಿ ನಾವು ದುಃಖವನ್ನೇ ಪಡೆದೆವು ಎಂದು ಮನುಷ್ಯರು ತಿಳಿಯುತ್ತಾರೆ, ಈಗ ನೀವು
ಇಲ್ಲಿ ಕುಳಿತಿದ್ದೀರೆಂದರೆ ನಾವು ಯಾರಾಗಿದ್ದೆವು, ಯಾರ ಮಕ್ಕಳಾಗಿದ್ದೆವು? ಎಂದು ನಿಮ್ಮಲ್ಲಿ ಈ
ವಿಚಾರವು ಬರಬೇಕು. ತಂದೆಯು ನಮಗೆ ಇಡೀ ವಿಶ್ವದ ರಾಜ್ಯಭಾಗ್ಯವನ್ನು ಕೊಟ್ಟರು ಮತ್ತೆ ಹೀಗೆ
ರಾವಣನರಾಜ್ಯದಲ್ಲಿ ಕಳೆದುಕೊಂಡೆವು, ಎಷ್ಟೊಂದು ದುಃಖ ನೋಡಿದೆವು, ಎಷ್ಟು ಕೆಟ್ಟ ಕರ್ಮಗಳನ್ನು
ಮಾಡಿದೆವು, ಸೃಷ್ಟಿ ದಿನ ಪ್ರತಿ ದಿನ ಇಳಿಯುತ್ತಲೇ ಹೋಗಿದೆ. ಮನುಷ್ಯರ ಸಂಸ್ಕಾರವು ದಿನ ಕಳೆದಂತೆ
ವಿಕಾರಿ ಆಗುತ್ತಾ ಹೋಗಿದೆ. ಅಂದಾಗ ಮಕ್ಕಳಿಗೆ ಸ್ಮೃತಿಯಲ್ಲಿ ಬರಬೇಕು. ತಂದೆಯು ಹೇಳುತ್ತಾರೆ -
ಯಾವ ಮಕ್ಕಳು ಪವಿತ್ರ ಸಸಿಗಳಾಗಿದ್ದರು, ಯಾರಿಗೆ ರಾಜ್ಯಭಾಗ್ಯವನ್ನು ಕೊಟ್ಟೆನೋ ಅವರೇ ಮತ್ತೆ ನನ್ನ
ಯಥಾರ್ಥ ಪರಿಚಯವನ್ನು ಮರೆತು ಹೋದರು. ಈಗ ಮತ್ತೆ ನೀವು ತಮೋಪ್ರಧಾನರಿಂದ ಸತೋಪ್ರಧಾನರಾಗಲು
ಬಯಸುತ್ತೀರೆಂದರೆ ತಂದೆಯಾದ ನನ್ನನ್ನು ನೆನಪು ಮಾಡಿ ಆಗ ಪಾಪಗಳು ಎಲ್ಲವೂ ಭಸ್ಮವಾಗುತ್ತವೆ, ಆದರೆ
ನೆನಪೇ ಮಾಡುವುದಿಲ್ಲ. ಬಾಬಾ ನಾವು ಮರೆತುಹೋಗುತ್ತೇವೆ ಎಂದು ಪದೇ-ಪದೇ ಹೇಳುತ್ತಾರೆ. ಅರೇ! ನೀವು
ನೆನಪು ಮಾಡದಿದ್ದರೆ ಪಾಪಗಳು ಹೇಗೆ ಪರಿಹಾರವಾಗುತ್ತವೆ? ಒಂದಂತೂ ನೀವು ವಿಕಾರಗಳಲ್ಲಿ ಬಿದ್ದು
ಪತಿತರಾದಿರಿ ಮತ್ತು ಇನ್ನೊಂದು ತಂದೆಯನ್ನು ನಿಂದನೆ ಮಾಡಲು ತೊಡಗಿದಿರಿ, ಮಾಯೆಯ ಸಂಗದಲ್ಲಿ ನೀವು
ಇಷ್ಟೊಂದು ಕೆಳಗೆ ಬಿದ್ದಿರಿ, ಯಾರು ನಿಮ್ಮನ್ನು ಆಕಾಶಕ್ಕೆ ಏರಿಸಿದರೋ ಅರ್ಥಾತ್ ಶ್ರೇಷ್ಠರನ್ನಾಗಿ
ಮಾಡಿದರೋ ಅವರನ್ನೇ ಕಲ್ಲು-ಮುಳ್ಳಿನಲ್ಲಿ ತೆಗೆದುಕೊಂಡುಹೋದಿರಿ. ಮಾಯೆಯ ಸಂಗದಲ್ಲಿ ನೀವು ಎಂತಹ
ಕೆಲಸವನ್ನು ಮಾಡಿದಿರಿ! ಬುದ್ಧಿಯಲ್ಲಿ ಬರಬೇಕಲ್ಲವೇ. ಇಷ್ಟೊಂದು ಕಲ್ಲುಬುದ್ಧಿಯವರಂತೂ ಆಗಬಾರದು.
ತಂದೆಯು ಪ್ರತಿನಿತ್ಯವು ತಿಳಿಸುತ್ತಾರೆ - ಮಕ್ಕಳೇ ನಾನು ನಿಮಗೆ ಬಹಳ ಒಳ್ಳೊಳ್ಳೆಯ ಜ್ಞಾನ
ಬಿಂದುಗಳನ್ನು ಹೇಳುತ್ತಿರುತ್ತೇನೆ.
ಹೀಗೆ ಮುಂಬೈನಲ್ಲಿ ಸಂಘಟನೆಯಾಯಿತು ಅದರಲ್ಲಿ ನೀವು ತಿಳಿಸಬಹುದು - ತಂದೆಯು ತಿಳಿಸುತ್ತಾರೆ, ಹೇ
ಭಾರತವಾಸಿಗಳೇ, ನಾನು ನಿಮಗೆ ರಾಜ್ಯಭಾಗ್ಯವನ್ನು ಕೊಟ್ಟೆನು, ನೀವು ದೇವತೆಗಳು ಸ್ವರ್ಗದಲ್ಲಿ
ಇದ್ದಿರಿ ಮತ್ತೆ ನೀವು ರಾವಣನ ರಾಜ್ಯದಲ್ಲಿ ಹೀಗೆ ಬಂದಿರಿ, ಇದು ನಾಟಕದಲ್ಲಿ ಪಾತ್ರವಿದೆ, ನೀವು
ರಚಯಿತ ಮತ್ತು ರಚನೆಯ ಆದಿ-ಮಧ್ಯ-ಅಂತ್ಯವನ್ನು ತಿಳಿಯಿರಿ ಆಗ ಶ್ರೇಷ್ಠ ಪದವಿಯನ್ನು ಪಡೆಯುತ್ತೀರಿ
ಮತ್ತು ನನ್ನನ್ನೇ ನೆನಪು ಮಾಡಿ ಅದರಿಂದ ನಿಮ್ಮ ವಿಕರ್ಮಗಳು ವಿನಾಶವಾಗುತ್ತವೆ. ಭಲೆ ಎಲ್ಲರೂ ಇಲ್ಲಿ
ಕುಳಿತಿದ್ದೀರಿ ಆದರೆ ಕೆಲ-ಕೆಲವರ ಬುದ್ಧಿ ಕೆಲ-ಕೆಲವೊಂದೆಡೆ ಇದೆ. ಬುದ್ಧಿಯಲ್ಲಿಯೂ ಬರಬೇಕು -
ನಾವು ಎಲ್ಲಿದ್ದೇವೆ? ಈಗ ನಾವು ಪರ ರಾವಣರಾಜ್ಯದಲ್ಲಿ ಬಂದುಬಿಟ್ಟಿದ್ದೇವೆ. ಅಂದಾಗ ಎಷ್ಟು ದುಃಖಿ
ಆಗಿದ್ದೇವೆ. ನಾವು ಶಿವಾಲಯದಲ್ಲಿ ಬಹಳ ಸುಖಿ ಆಗಿದ್ದೆವು, ಈಗ ತಂದೆಯು ವೇಶ್ಯಾಲಯದಿಂದ ಬಿಡಿಸಲು
ಬಂದಿದ್ದಾರೆ. ಆದರೂ ಸಹ ಇದರಿಂದ ಹೊರ ಬರುವುದೇ ಇಲ್ಲ. ತಂದೆಯು ತಿಳಿಸುತ್ತಾರೆ, ನೀವು
ಶಿವಾಲಯದಲ್ಲಿ ಹೋಗುತ್ತೀರಿ, ಅಲ್ಲಿ ಈ ವಿಷ ಇರುವುದಿಲ್ಲ. ಇಲ್ಲಿಯ ತರಹ ಕೊಳಕು, ಆಹಾರ, ಪಾನಿಯಗಳು
ಸಿಗುವುದಿಲ್ಲ. ಇವರಂತೂ ವಿಶ್ವದ ಮಾಲೀಕರಾಗಿದ್ದರಲ್ಲವೇ. ಅಂದಮೇಲೆ ಮತ್ತೆ ಎಲ್ಲಿ ಹೋದರು? ಈಗ ಪುನಃ
ತಮ್ಮ ರಾಜ್ಯಭಾಗ್ಯವನ್ನು ತೆಗೆದುಕೊಳ್ಳುತ್ತಿದ್ದಾರೆ. ಎಷ್ಟು ಸಹಜವಾಗಿದೆ! ಇದನ್ನಂತೂ ತಂದೆಯು
ತಿಳಿಸುತ್ತಾರೆ, ಎಲ್ಲರೂ ಸೇವಾಧಾರಿಗಳು ಆಗಿರುವುದಿಲ್ಲ, ನಂಬರ್ವಾರ್ ರಾಜಧಾನಿಯನ್ನು ಸ್ಥಾಪನೆ
ಮಾಡಬೇಕಾಗಿದೆ. ಹೇಗೆ 5000 ವರ್ಷಗಳ ಮೊದಲು ಮಾಡಿದ್ದರು. ಸತೋಪ್ರಧಾನರಾಗಬೇಕಾಗಿದೆ. ಇದು
ತಮೋಪ್ರಧಾನ-ಹಳೆಯ ಪ್ರಪಂಚವಾಗಿದೆ. ಯಾವಾಗ ನಿಖರವಾಗಿ ಹಳೆಯದಾಗುವುದೋ ಆಗಲೇ ತಂದೆಯು
ಬರುತ್ತಾರಲ್ಲವೇ. ತಂದೆಯ ವಿನಃ ಬೇರೆ ಯಾರೂ ತಿಳಿಸಲು ಸಾಧ್ಯವಿಲ್ಲ. ಭಗವಂತನು ಈ ರಥದ ಮೂಲಕ ನಮಗೆ
ಓದಿಸುತ್ತಿದ್ದಾರೆ. ಇದು ನೆನಪಿದ್ದರೂ ಸಹ ಬುದ್ಧಿಯಲ್ಲಿ ಜ್ಞಾನವಿದ್ದಂತೆ. ನಂತರ ಅನ್ಯರಿಗೆ
ತಿಳಿಸಿ ತಮ್ಮ ಸಮಾನರನ್ನಾಗಿಯೂ ಮಾಡಿಕೊಳ್ಳಿ. ಮೊದಲು ನಿಮ್ಮದು ವಿಕಾರಿ ನಡವಳಿಕೆ ಇತ್ತು, ಇದು
ಬಹಳ ಪರಿಶ್ರಮದಿಂದಲೇ ಸುಧಾರಣೆ ಆಗುತ್ತದೆ. ಈ ಕಣ್ಣುಗಳ ವಿಕಾರ ದೃಷ್ಟಿಯು ಹೋಗುವುದಿಲ್ಲ. ಒಂದಂತೂ
ಕಾಮದ ವಿಕಾರವು ಬಹಳ ಪರಿಶ್ರಮದಿಂದ ಬಿಡುಗಡೆ ಆಗುತ್ತದೆ ಮತ್ತೆ ಜೊತೆಯಲ್ಲಿ ಪಂಚವಿಕಾರಗಳು ಇವೆ.
ಕ್ರೋಧದ ವಿಕಾರವೂ ಸಹ ಎಷ್ಟೊಂದು ಇದೆ. ಕುಳಿತು-ಕುಳಿತಿದ್ದಂತೆಯೇ ಭೂತ (ಕ್ರೋಧ) ವು
ಬಂದುಬಿಡುತ್ತದೆ. ಇದೂ ಸಹ ವಿಕಾರವಾಗಿದೆ, ನಿರ್ವಿಕಾರಿಗಳಂತೂ ಆಗಿಲ್ಲವೆಂದರೆ ಅದರ
ಪರಿಣಾಮವೇನಾಗಬಹುದು! ಒಂದಕ್ಕೆ 100 ರಷ್ಟು ಪಾಪವಾಗಿಬಿಡುವುದು. ಪದೇ-ಪದೇ ಕ್ರೋಧ
ಮಾಡುತ್ತಿರುತ್ತಾರೆ. ತಂದೆಯು ತಿಳಿಸಿಕೊಡುತ್ತಾರೆ ನೀವೀಗ ರಾವಣನರಾಜ್ಯದಲ್ಲಿ ಇಲ್ಲ, ಆದರೆ
ಈಶ್ವರನ ಸನ್ಮುಖದಲ್ಲಿ ಕುಳಿತಿದ್ದೀರಿ. ಅಂದಮೇಲೆ ಈ ವಿಕಾರದಿಂದ ಮುಕ್ತರಾಗುವ ಪ್ರತಿಜ್ಞೆ
ಮಾಡಬೇಕಾಗಿದೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ಈಗ ನನ್ನನ್ನು ನೆನಪು ಮಾಡಿ. ಕ್ರೊಧ ಮಾಡಬೇಡಿ,
ಈ ಪಂಚವಿಕಾರಗಳೇ ನಿಮ್ಮನ್ನು ಅರ್ಧಕಲ್ಪದಿಂದ ಬೀಳಿಸುತ್ತಾ ಬಂದಿದೆ. ಎಲ್ಲರಿಗಿಂತ ಶ್ರೇಷ್ಠರು
ನೀವಾಗಿದ್ದೀರಿ, ಈಗ ಎಲ್ಲರಿಗಿಂತ ಹೆಚ್ಚಿನದಾಗಿ ಕೆಳಗೆ ಇಳಿದಿರುವವರು ನೀವೇ ಆಗಿದ್ದೀರಿ. ಈ ಪಂಚ
ಭೂತಗಳು ನಿಮ್ಮನ್ನು ಬೀಳಿಸಿದೆ. ಈಗ ಶಿವಾಲಯದಲ್ಲಿ ಹೋಗಲು ಈ ವಿಕಾರಗಳನ್ನು ತೆಗೆಯಬೇಕು. ಈಗ ಈ
ವೇಶ್ಯಾಲಯದಿಂದ ಮನಸ್ಸನ್ನು ದೂರ ಮಾಡಿ ತಂದೆಯನ್ನು ನೆನಪು ಮಾಡಿ ಆಗ ಅಂತಿಮತಿ ಸೋ ಗತಿ ಆಗುತ್ತದೆ.
ನೀವು ಮನೆಗೆ ತಲುಪುತ್ತೀರಿ, ಈ ಮಾರ್ಗವನ್ನು ಮತ್ತ್ಯಾರೂ ತಿಳಿಸಲು ಸಾಧ್ಯವಿಲ್ಲ. ಭಗವಾನುವಾಚ -
ನಾನು ಸರ್ವವ್ಯಾಪಿ ಎಂದು ನಾನಂತೂ ಎಂದೂ ಹೇಳಿಲ್ಲ. ನಾನು ರಾಜಯೋಗವನ್ನು ಕಲಿಸಿದೆನು ಮತ್ತು
ನಿಮ್ಮನ್ನು ವಿಶ್ವದ ಮಾಲೀಕರನ್ನಾಗಿ ಮಾಡುತ್ತೇನೆ ಅಂದಾಗ ಮತ್ತೆ ಸತ್ಯಯುಗದಲ್ಲಂತೂ ಈ ಜ್ಞಾನದ
ಅವಶ್ಯಕತೆಯೇ ಇರುವುದಿಲ್ಲ. ಮನುಷ್ಯರಿಂದ ದೇವತೆಗಳಾಗಿಬಿಡುತ್ತೀರಿ, ಆಸ್ತಿಯನ್ನು ಪಡೆಯುತ್ತೀರಿ.
ಇದರಲ್ಲಿ ಹಠಯೋಗ ಮೊದಲಾದ ಮಾತಿಲ್ಲ. ತಮ್ಮನ್ನು ಆತ್ಮವೆಂದು ತಿಳಿಯಿರಿ. ತಮ್ಮನ್ನು ಶರೀರ ಎಂದು ಏಕೆ
ತಿಳಿಯುತ್ತೀರಿ. ಶರೀರ ಎಂದು ತಿಳಿಯುವುದರಿಂದ ಮತ್ತೆ ಈ ಜ್ಞಾನವನ್ನು ತೆಗೆದುಕೊಳ್ಳಲು
ಸಾಧ್ಯವಿಲ್ಲ. ಇದೂ ಸಹ ಪೂರ್ವ ನಿಶ್ಚಿತವಾಗಿದೆ. ನೀವು ತಿಳಿಯುತ್ತೀರಿ - ನಾವು ರಾವಣರಾಜ್ಯದಲ್ಲಿ
ಇದ್ದೆವು. ಈಗ ರಾಮರಾಜ್ಯದಲ್ಲಿ ಹೋಗಲು ಪುರುಷಾರ್ಥ ಮಾಡುತ್ತಿದ್ದೇವೆ. ಈಗ ನಾವು ಪುರುಷೊತ್ತಮ
ಸಂಗಮಯುಗವಾಸಿಗಳಾಗಿದ್ದೇವೆ.
ಭಲೆ ಗೃಹಸ್ಥದಲ್ಲಿ ಇರಿ, ಎಲ್ಲರೂ ಬಂದು ಎಲ್ಲಿ ಇರುತ್ತೀರಿ? ಬ್ರಾಹ್ಮಣರಾಗಿ ಎಲ್ಲರೂ ಬ್ರಹ್ಮಾರವರ
ಬಳಿಯೇ ಇರಲು ಸಾಧ್ಯವಿಲ್ಲ ಆದ್ದರಿಂದ ತಮ್ಮ ಮನೆಯಲ್ಲಿಯೇ ಇರಬೇಕು ಮತ್ತು ಬುದ್ಧಿಯಿಂದ ತಿಳಿಯಬೇಕು,
ನಾವು ಶೂದ್ರರಲ್ಲ, ಬ್ರಾಹ್ಮಣರಾಗಿದ್ದೇವೆ. ಬ್ರಾಹ್ಮಣರ ಶಿಖೆಯು ಎಷ್ಟು ಚಿಕ್ಕದಾಗಿದೆ, ಆದ್ದರಿಂದ
ಗೃಹಸ್ಥದಲ್ಲಿ ಇರುತ್ತಾ ಶರೀರ ನಿರ್ವಹಣೆಗಾಗಿ ವ್ಯಾಪಾರ-ವ್ಯವಹಾರಗಳನ್ನು ಮಾಡುತ್ತಾ ಕೇವಲ
ತಂದೆಯನ್ನು ನೆನಪು ಮಾಡಿ. ನಾವು ಯಾರಾಗಿದ್ದೆವು, ಈಗ ನೀವು ಪರರಾಜ್ಯದಲ್ಲಿ ಕುಳಿತಿದ್ದೀರಿ. ನಾವು
ಎಷ್ಟು ದುಃಖಿ ಆಗಿದ್ದೆವು, ಈಗ ತಂದೆಯು ನಮ್ಮನ್ನು ಪುನಃ ಕರೆದುಕೊಂಡು ಹೋಗುತ್ತಾರೆ ಅಂದಮೇಲೆ ಆ
ಸ್ಥಿತಿಯನ್ನು ಮಾಡಿಕೊಳ್ಳಬೇಕಾಗಿದೆ. ಪ್ರಾರಂಭದಲ್ಲಿ ಎಷ್ಟು ದೊಡ್ಡ-ದೊಡ್ಡ ವೃಕ್ಷಗಳು ಬಂದವು,
ಎಷ್ಟು ದೊಡ್ಡ-ದೊಡ್ಡವರು ಬಂದರು, ಮತ್ತೆ ಅವರಲ್ಲಿ ಕೆಲವರು ಉಳಿದರು. ಉಳಿದವರು ಹೊರಟುಹೋದರು.
ನಿಮ್ಮ ಬುದ್ಧಿಯಲ್ಲಿದೆ - ನಾವು ನಮ್ಮ ರಾಜ್ಯದಲ್ಲಿ ಇದ್ದೆವು ಮತ್ತೆ ಈಗ ಎಲ್ಲಿಗೆ
ಬಂದುಬಿಟ್ಟಿದ್ದೇವೆ ಮತ್ತೆ ನಮ್ಮ ರಾಜ್ಯದಲ್ಲಿ ಹೋಗುತ್ತೇವೆ. ಬಾಬಾ, ಇಂತಹವರು ಬಹಳ ನಿಯಮಿತವಾಗಿ
ಬರುತ್ತಿದ್ದರು, ಈಗ ಬರುತ್ತಿಲ್ಲ ಎಂದು ನೀವು ತಂದೆಗೆ ಪತ್ರ ಬರೆಯುತ್ತೀರಿ. ಅವರು
ಬರುತ್ತಿಲ್ಲವೆಂದರೆ ಅರ್ಥ ವಿಕಾರದಲ್ಲಿ ಬಿದ್ದರು ಅಂತಹವರಿಗೆ ಮತ್ತೆ ಜ್ಞಾನದ ಧಾರಣೆ ಆಗಲು
ಸಾಧ್ಯವಿಲ್ಲ. ಉನ್ನತಿಯ ಬದಲು ಬೀಳುತ್ತಾ-ಬೀಳುತ್ತಾ ಬಿಡಿಗಾಸಿನ ಪದವಿಯನ್ನು ಪಡೆಯುತ್ತಾರೆ. ರಾಜನು
ಎಲ್ಲಿ, ಸಾಧಾರಣ ಪದವಿ ಎಲ್ಲಿ! ಭಲೆ ಅಲ್ಲಿ ಅಪಾರ ಸುಖವಂತೂ ಇರುತ್ತದೆ ಆದರೆ ಶ್ರೇಷ್ಠ ಪದವಿಯನ್ನು
ಪಡೆಯುವ ಪುರುಷಾರ್ಥವನ್ನೇ ಮಾಡಬೇಕು. ತಮ್ಮ ಪದವಿಯನ್ನು ಯಾರು ಪಡೆಯುತ್ತಾರೆ? ಇದನ್ನಂತೂ ಎಲ್ಲರೂ
ತಿಳಿಯಬಹುದು - ಈಗ ಎಲ್ಲರೂ ಪುರುಷಾರ್ಥ ಮಾಡುತ್ತಿದ್ದಾರೆ.ಬೋಪಾಲ್ನ ರಾಜ ಮಹೇಂದ್ರರೂ ಸಹ
ಪುರುಷಾರ್ಥ ಮಾಡುತ್ತಿದ್ದಾರೆ. ಆ ರಾಜ್ಯಾಧಿಕಾರವಂತೂ ನಯಾಪೈಸೆಯದ್ದಾಗಿದೆ ಆದರೆ ಸೂರ್ಯವಂಶಿ
ರಾಜಧಾನಿಯಲ್ಲಿ ಹೋಗುವ ಪುರುಷಾರ್ಥ ಮಾಡಬೇಕಾಗಿದೆ. ಇಂತಹ ಪುರುಷಾರ್ಥವಿರಲಿ, ಅದರಿಂದ ವಿಜಯ
ಮಾಲೆಯಲ್ಲಿ ಹೋಗುವಂತೆ ಆಗಬೇಕು. ತಂದೆಯು ಮಕ್ಕಳಿಗೆ ತಿಳಿಸಿಕೊಡುತ್ತಾರೆ - ಮಕ್ಕಳೇ ತಮ್ಮ
ಹೃದಯದಲ್ಲಿ ಪರಿಶೀಲನೆ ಮಾಡಿಕೊಳ್ಳುತ್ತಿರಬೇಕು - ನಮ್ಮ ಕಣ್ಣುಗಳು ವಿಕಾರಿಯಂತೂ ಆಗುತ್ತಿಲ್ಲವೇ?
ಒಂದುವೇಳೆ ನಿರ್ವಿಕಾರಿ ಆಗಿಬಿಟ್ಟರೆ ಮತ್ತೆ ಏನು ಬೇಕು? ಭಲೆ ವಿಕಾರದಲ್ಲಿ ಹೋಗುವುದಿಲ್ಲ ಆದರೆ
ಕಣ್ಣುಗಳು ಯಾವುದಾದರೂ ಒಂದು ಮೋಸ ಮಾಡುತ್ತಿರುತ್ತದೆ. ಮೊದಲನೆಯದು ಕಾಮವಾಗಿದೆ. ಕುದೃಷ್ಟಿಯು ಬಹಳ
ಕೆಟ್ಟದ್ದಾಗಿದೆ, ಆದ್ದರಿಂದ ಹೆಸರೇ ಇದೆ ಕುದೃಷ್ಟಿ, ನಿರ್ವಿಕಾರಿದೃಷ್ಟಿ. ಬೇಹದ್ದಿನ ತಂದೆಯು
ಮಕ್ಕಳು ಎಂತಹ ಕರ್ಮ ಮಾಡುತ್ತಾರೆ, ಎಷ್ಟು ಸರ್ವೀಸ್ ಮಾಡುತ್ತಾರೆ ಎಂದು ಮಕ್ಕಳ ಬಗ್ಗೆ
ಅರಿತುಕೊಂಡಿರುತ್ತಾರಲ್ಲವೇ. ಇಂತಹವರ ಕುದೃಷ್ಟಿಯು ಇಲ್ಲಿಯವರೆಗೆ ಹೋಗಿಲ್ಲ ಎಂದು ಈಗಲೂ ಸಹ ಇಂತಹ
ಗುಪ್ತ ಸಮಾಚಾರಗಳು ಬರುತ್ತವೆ. ಮುಂದೆ ಹೋದಂತೆ ಇನ್ನೂ ನಿಖರವಾಗಿ ಬರೆಯುತ್ತಾರೆ. ಇದು ಅವರಿಗೂ ಸಹ
ತಿಳಿಯುತ್ತದೆ - ನಾವಂತೂ ಇಷ್ಟು ಸಮಯ ಸುಳ್ಳನ್ನು ಹೇಳುತ್ತಾ, ಬೀಳುತ್ತಾ ಬಂದಿದ್ದೇವೆ ಎಂದು.
ಬುದ್ಧಿಯಲ್ಲಿ ಪೂರ್ಣ ಜ್ಞಾನವು ಕುಳಿತುಕೊಂಡಿರಿರಲಿಲ್ಲ, ಇದೇ ಕಾರಣದಿಂದ ನಮ್ಮ ಸ್ಥಿತಿಯು
ಶಕ್ತಿಶಾಲಿ ಆಗಲಿಲ್ಲ. ತಂದೆಯೊಂದಿಗೆ ನಾವು ಮುಚ್ಚಿಡುತ್ತಿದ್ದೆವು ಎಂದು ಪಶ್ಚಾತ್ತಾಪವಾಗುತ್ತದೆ.
ಈ ರೀತಿ ಅನೇಕರು ಮುಚ್ಚಿಡುತ್ತಾರೆ. ವೈದ್ಯರೊಂದಿಗೆ ಪಂಚವಿಕಾರಗಳ ರೋಗವನ್ನು ಮುಚ್ಚಿಡಬಾರದು. ಬಾಬಾ
ನಮ್ಮ ಬುದ್ಧಿಯು ಈ ಕಡೆ ಹೋಗುತ್ತದೆ, ಶಿವತಂದೆಯ ಕಡೆ ಹೋಗುವುದಿಲ್ಲವೆಂದು ಸತ್ಯವನ್ನು ತಿಳಿಸಬೇಕು,
ತಿಳಿಸದಿದ್ದರೆ ಆ ಖಾಯಿಲೆಯು ಇನ್ನೂ ವೃದ್ಧಿ ಆಗುತ್ತಿರುತ್ತದೆ. ಈಗ ತಂದೆಯು ತಿಳಿಸುತ್ತಾರೆ -
ಮಕ್ಕಳೇ, ಈಗ ಆತ್ಮಾಭಿಮಾನಿಗಳಾಗಿ ತಮ್ಮನ್ನು ಆತ್ಮನೆಂದು ತಿಳಿಯಿರಿ. ಆತ್ಮಗಳು
ಸಹೋದರ-ಸಹೋದರರಾಗಿದ್ದೀರಿ. ನೀವು ಪೂಜ್ಯರಾಗಿದ್ದಾಗ ಎಷ್ಟೊಂದು ಸುಖಿಯಾಗಿದ್ದಿರಿ! ಈಗ ನೀವು
ಪೂಜಾರಿಗಳು, ದುಃಖಿಗಳಾಗಿಬಿಟ್ಟಿದ್ದೀರಿ. ನಿಮಗೆ ಏನಾಗಿ ಹೋಯಿತು! ಈ ಗೃಹಸ್ಥಾಶ್ರಮವಂತೂ
ಪರಂಪರೆಯಿಂದ ನಡೆಯುತ್ತಾ ಬಂದಿದೆ ಎಂದು ಎಲ್ಲರೂ ಹೇಳುತ್ತಾರೆ. ಏನು ರಾಮ-ಸೀತೆಗೆ ಮಕ್ಕಳು
ಇರಲಿಲ್ಲವೇ! ಆದರೆ ಅಲ್ಲಿ ವಿಕಾರದಿಂದ ಮಕ್ಕಳು ಜನಿಸುವುದಿಲ್ಲ. ಅದಂತೂ ಸಂಪೂರ್ಣ ನಿರ್ವಿಕಾರಿ
ಪ್ರಪಂಚ, ಭ್ರಷ್ಟಾಚಾರದಿಂದ ಜನನ ಆಗುವುದಿಲ್ಲ, ವಿಕಾರ ಇರಲಿಲ್ಲ. ಅಲ್ಲಂತೂ ಈ ರಾವಣರಾಜ್ಯವೇ
ಇರುವುದಿಲ್ಲ, ಅದು ರಾಮರಾಜ್ಯವಾಗಿದೆ. ಅಂದಮೇಲೆ ಅಲ್ಲಿ ರಾವಣನು ಎಲ್ಲಿಂದ ಬರುತ್ತಾನೆ! ಮನುಷ್ಯರ
ಬುದ್ಧಿಯು ಸಂಪೂರ್ಣ ವಶೀಭೂತವಾಗಿಬಿಟ್ಟಿದೆ. ಯಾರು ಮಾಡಿದ್ದಾರೆ? ನಾನಂತೂ ನಿಮ್ಮನ್ನು
ಸತೋಪ್ರಧಾನರನ್ನಾಗಿ ಮಾಡಿದೆನು, ನಿಮ್ಮ ಜೀವನ ಧೋಣಿಯನ್ನು ಪಾರು ಮಾಡಿದ್ದೆನು ನಂತರ ನಿಮ್ಮನ್ನು
ತಮೋಪ್ರಧಾನರನ್ನಾಗಿ ಯಾರು ಮಾಡಿದರು? ರಾವಣ. ಇದನ್ನೂ ಸಹ ನೀವು ಮರೆತು ಹೋಗಿದ್ದೀರಿ. ಇದಂತೂ
ಪರಂಪರೆಯಿಂದ ನಡೆಯುತ್ತಾ ಬಂದಿದೆ ಎಂದು ಹೇಳುತ್ತಾರೆ. ಅರೆ! ಪರಂಪರೆ ಎಂದರೆ ಯಾವಾಗಿನಿಂದ,
ಲೆಕ್ಕವನ್ನಾದರೂ ತಿಳಿಸಿ. ಮನುಷ್ಯರು ಏನನ್ನೂ ತಿಳಿದುಕೊಂಡಿಲ್ಲ, ಆದ್ದರಿಂದ ತಂದೆಯು
ತಿಳಿಸುತ್ತಾರೆ - ಮಕ್ಕಳೇ ನಿಮಗೆ ಎಷ್ಟು ರಾಜ್ಯಭಾಗ್ಯವನ್ನು ಕೊಟ್ಟು ಹೋದೆನು? ನೀವು ಭಾರತವಾಸಿಗಳು
ಬಹಳ ಖುಷಿಯಲ್ಲಿ ಇದ್ದಿರಿ. ಆಗ ಮತ್ತ್ಯಾವ ಧರ್ಮದವರು ಇರಲಿಲ್ಲ. ಸ್ವರ್ಗವಿತ್ತು ಎಂದು
ಕ್ರಿಶ್ಚಯನ್ನರು ಹೇಳುತ್ತಾರೆ. ದೇವತೆಗಳ ಚಿತ್ರಗಳಿವೆ. ಅದಕ್ಕಿಂತ ಹಳೆಯ ವಸ್ತುಗಳು ಏನೂ ಇಲ್ಲ.
ಹಳಬರಿಗಿಂತ ಹಳಬರು ಎಂದರೆ ಈ ಲಕ್ಷ್ಮೀ-ನಾರಾಯಣರೇ ಆಗುತ್ತಾರೆ ಅಥವಾ ಇವರ ವಸ್ತುಗಳಾಗಿರುತ್ತವೆ.
ಎಲ್ಲರಿಗಿಂತ ಹಳಬರಿಗಿಂತ ಹಳಬರು ಶ್ರೀಕೃಷ್ಣನಾಗಿದ್ದಾನೆ. ಹೊಸಬರಿಗಿಂತಲೂ ಹೊಸಬರು
ಶ್ರೀಕೃಷ್ಣನಾಗಿದ್ದಾನೆ, ಹಳಬರು ಎಂದು ಏಕೆ ಹೇಳುತ್ತಾರೆ. ಏಕೆಂದರೆ ಇದ್ದು ಹೋದರಲ್ಲವೇ. ನೀವೇ
ಸುಂದರರಾಗಿದ್ದಿರಿ ಮತ್ತೆ ಕಪ್ಪಾಗಿದ್ದೀರಿ. ಕಪ್ಪು ಕೃಷ್ಣನನ್ನೂ ಸಹ ನೋಡಿ ಬಹಳ ಖುಷಿ ಆಗುತ್ತಾರೆ.
ಕಪ್ಪಾದ ಕೃಷ್ಣನನ್ನು ಉಯ್ಯಾಲೆಯಲ್ಲಿ ತೂಗುತ್ತಾರೆ ಆದರೆ ಕೃಷ್ಣನು ಯಾವಾಗ ಸುಂದರನಾಗಿದ್ದನೆಂದು
ಅವರಿಗೇನು ಗೊತ್ತಿದೆ. ಕೃಷ್ಣನನ್ನು ಎಷ್ಟೊಂದು ಪ್ರೀತಿ ಮಾಡುತ್ತಾರೆ ಹಾಗಾದರೆ ರಾಧೆ ಏನು ಮಾಡಿದಳು?
ತಂದೆಯು ತಿಳಿಸುತ್ತಾರೆ - ನೀವು ಇಲ್ಲಿ ಸತ್ಯ ಸಂಗದಲ್ಲಿ ಕುಳಿತಿದ್ದೀರಿ, ಹೊರಗೆ ಕೆಟ್ಟ ಸಂಗದಲ್ಲಿ
ಹೋಗುವುದರಿಂದ ಮರೆತು ಹೋಗುತ್ತೀರಿ. ಮಾಯೆಯು ಬಹಳ ಶಕ್ತಿಶಾಲಿ ಆಗಿದೆ. ಗಜವನ್ನು ಮೊಸಳೆ
ನುಂಗಿಬಿಡುತ್ತದೆ. ಓಡಿ ಹೋಗೋಣ ಎನ್ನುವವರು ಇದ್ದಾರೆ ತಮ್ಮ ಸ್ವಲ್ಪ ಅಹಂಕಾರ ಬಂದರೂ ಸಹ ತಮ್ಮ
ಸತ್ಯನಾಶ ಮಾಡಿಕೊಳ್ಳುತ್ತಾರೆ. ಬೇಹದ್ದಿನ ತಂದೆಯಂತೂ ತಿಳಿಸುತ್ತಲೇ ಇರುತ್ತಾರೆ. ಇದರಲ್ಲಿ
ತಬ್ಬಿಬ್ಬಾಗಬಾರದು. ತಂದೆ ಹೀಗೆ ಏಕೆ ಹೇಳಿದರು? ನನ್ನ ಮರ್ಯಾದೆ ಹೋಯಿತು! ಅರೇ! ಮರ್ಯಾದೆಯಂತೂ
ರಾವಣರಾಜ್ಯದಲ್ಲಿ ಹೊರಟೇ ಹೋಗಿದೆ. ದೇಹಾಭಿಮಾನದಲ್ಲಿ ಬರುವುದರಿಂದ ತಮ್ಮದೇ ನಷ್ಟ
ಮಾಡಿಕೊಳ್ಳುತ್ತೀರಿ, ಪದವಿ ಭ್ರಷ್ಟವಾಗಿಬಿಡುತ್ತದೆ. ಕ್ರೋಧ, ಲೋಭವೂ ಸಹ ವಿಕಾರಿ ದೃಷ್ಟಿಯಾಗಿದೆ.
ಕಣ್ಣುಗಳಿಂದ ವಸ್ತುಗಳನ್ನು ನೋಡುತ್ತೀರಿ, ಅದರಿಂದಲೇ ಲೋಭವು ಬಂದುಬಿಡುತ್ತದೆ. ತಂದೆಯು ಬಂದು
ತಮ್ಮ ಹೂದೋಟವನ್ನು ನೋಡುತ್ತಾರೆ - ಯಾವ-ಯಾವ ಪ್ರಕಾರದ ಹೂಗಳಿವೆ, ಎಂದು ಹೇಳಿ ಇಲ್ಲಿಂದ ಹೋಗಿ
ಮತ್ತೆ ಆ ತೋಟದ ಹೂಗಳನ್ನು ನೋಡುತ್ತಾರೆ. ಶಿವಲಿಂಗಕ್ಕೆ ಅವಶ್ಯವಾಗಿ ಹೂಗಳನ್ನು ಹಾಕುತ್ತಾರೆ.
ತಂದೆಯಂತೂ ನಿರಾಕಾರ, ಚೈತನ್ಯ ಹೂವಾಗಿದ್ದಾರೆ. ಈಗ ನೀವು ಪುರುಷಾರ್ಥ ಮಾಡಿ ಇಂತಹ ಹೂಗಳು
ಆಗುತ್ತೀರಿ. ತಂದೆಯು ತಿಳಿಸುತ್ತಾರೆ - ಮಧುರಾತಿಮಧುರ ಮಕ್ಕಳೇ, ಏನೆಲ್ಲವೂ ಕಳೆಯಿತೋ ಅದನ್ನು
ನಾಟಕ ಎಂದು ತಿಳಿಯಿರಿ. ಯೋಚಿಸಬೇಡಿ. ಎಷ್ಟೊಂದು ಪರಿಶ್ರಮ ಪಡುತ್ತೇವೆ ಆದರೆ ಏನೂ ಆಗುತ್ತಿಲ್ಲ,
ಯಾರೂ ನಿಲ್ಲುತ್ತಿಲ್ಲ ಎಂದು ತಿಳಿಯಬೇಡಿ. ಅರೇ! ಪ್ರಜೆಗಳಂತೂ ಬೇಕಲ್ಲವೇ. ಸ್ವಲ್ಪ ಜ್ಞಾನವನ್ನು
ಕೇಳಿದರೂ ಸಹ ಅವರು ಪ್ರಜೆಗಳು ಆಗುತ್ತಾರೆ, ಅನೇಕರು ಪ್ರಜೆಗಳು ಆಗುತ್ತಾರೆ. ಜ್ಞಾನವೆಂದೂ ವಿನಾಶ
ಹೊಂದುವುದಿಲ್ಲ. ಒಂದು ಬಾರಿ ಕೇಳಿದರೂ ಸಾಕು ಪ್ರಜೆಗಳಲ್ಲಿ ಬಂದುಬಿಡುತ್ತಾರೆ, ಈಗ ನಿಮ್ಮಲ್ಲಿ ಈ
ಸ್ಮೃತಿ ಬರಬೇಕು - ನಾವು ಯಾವ ರಾಜ್ಯದಲ್ಲಿ ಇದ್ದೇವೆ, ಅದನ್ನು ಈಗ ಪುನಃ ಪಡೆಯುತ್ತಿದ್ದೇವೆ
ಅದಕ್ಕಾಗಿ ಪೂರ್ಣ ಪುರುಷಾರ್ಥ ಮಾಡಬೇಕು, ಸಂಪೂರ್ಣ ನಿಖರವಾಗಿ ಸೇವೆಯು ನಡೆಯುತ್ತಿದೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು
ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಶಿವಾಲಯಕ್ಕೆ
ಹೋಗಲು ಈ ವಿಕಾರಗಳನ್ನು ತೆಗೆಯಬೇಕಾಗಿದೆ. ಈ ವೇಶ್ಯಾಲಯದಿಂದ ಮನಸ್ಸನ್ನು ತೆಗೆಯುತ್ತಾ
ಹೋಗಬೇಕಾಗಿದೆ. ಶೂದ್ರರ ಸಂಗದಿಂದ ದೂರವಾಗಬೇಕಾಗಿದೆ.
2. ಕಳೆದು ಹೋಗಿದ್ದನ್ನು
ನಾಟಕವೆಂದು ತಿಳಿದು ಯಾವುದೇ ವಿಚಾರ ಮಾಡಬಾರದು. ಅಹಂಕಾರದಲ್ಲಿ ಎಂದೂ ಬರಬಾರದು. ಶಿಕ್ಷಣವು
ಸಿಗುವಾಗ ತಬಿಬ್ಬಾಗಬಾರದು.
ವರದಾನ:
ಖುಷಿಯ
ಖಜಾನೆಯಿಂದ ಸಂಪನ್ನರಾಗಿ ದುಃಖಿ ಆತ್ಮರಿಗೆ ಖುಶಿಯ ದಾನ ಕೊಡುವಂತಹ ಪುಣ್ಯ ಆತ್ಮ ಭವ
ಈ ಸಮಯ ಪ್ರಪಂಚದಲ್ಲಿ
ಪ್ರತೀ ಸಮಯ ದುಃಖವಿದೆ ಮತ್ತು ನಿಮ್ಮ ಬಳಿ ಪ್ರತೀ ಸಮಯದ ಖುಶಿಯಿದೆ. ಅಂದರೆ ದುಃಖಿ ಆತ್ಮರಿಗೆ
ಖುಷಿಯನ್ನು ಕೊಡಬೇಕು ಇದು ಎಲ್ಲಕ್ಕಿಂತಲೂ ದೊಡ್ಡ ಪುಣ್ಯವಾಗಿದೆ. ಪ್ರಪಂಚದ ಜನರು ಖುಶಿಗಾಗಿ ಎಷ್ಟು
ಸಮಯ, ಸಂಪತ್ತು ಖರ್ಚು ಮಾಡುತ್ತಾರೆ ಮತ್ತು ನಿಮಗೆ ಸಹಜವಾಗಿ ಅವಿನಾಶಿ ಖುಷಿಯ ಖಜಾನೆ
ಸಿಕ್ಕಿಬಿಟ್ಟಿದೆ. ಈಗ ಕೇವಲ ಏನು ಸಿಕ್ಕಿದೆ ಅದನ್ನು ಹಂಚುತ್ತ ಹೋಗಿ. ಹಂಚುವುದು ಎಂದರೆ ವೃದ್ಧಿ
ಮಾಡಿಕೊಳ್ಳುವುದು. ಯಾರೇ ನಿಮ್ಮ ಸಂಬಂಧದಲ್ಲಿ ಬರಲಿ ಅವರು ಅನುಭವ ಮಾಡಬೇಕು ಇವರಿಗೆ ಏನೋ ಶ್ರೇಷ್ಠ
ಪ್ರಾಪ್ತಿಯಾಗಿದೆ ಅದರಿಂದ ಖುಷಿಯಾಗಿದ್ದಾರೆ ಎಂದು.
ಸ್ಲೋಗನ್:
ಅನುಭವಿ ಆತ್ಮಗಳು
ಎಂದೂ ಯಾವುದೇ ಮಾತಿನಲ್ಲಿ ಮೋಸ ಹೋಗುವುದಿಲ್ಲ, ಅವರು ಸದಾ ವಿಜಯಿಗಳಾಗಿರುತ್ತಾರೆ.