20.10.24    Avyakt Bapdada     Kannada Murli    28.03.2002     Om Shanti     Madhuban


ಈ ವರ್ಷವನ್ನು ನಿರ್ಮಾಣ, ನಿರ್ಮಲ ವರ್ಷ ಮತ್ತು ವ್ಯರ್ಥದಿಂದ ಮುಕ್ತರಾಗುವ ಮುಕ್ತಿ ವರ್ಷವನ್ನಾಗಿ ಆಚರಿಸಿ


ಇಂದು ಬಾಪ್ದಾದಾ ತನ್ನ ನಾಲ್ಕೂ ಕಡೆಯ ಮಕ್ಕಳ ಮಸ್ತಕದಲ್ಲಿ ಹೊಳೆಯುತ್ತಿರುವ ಮೂರು ರೇಖೆಗಳನ್ನು ನೋಡುತ್ತಿದ್ದಾರೆ. ಮೊದಲನೆಯ ರೇಖೆ ಪ್ರಭು ಪಾಲನೆಯ ರೇಖೆಯಾಗಿದೆ. ಎರಡನೆಯ ರೇಖೆ ಶ್ರೇಷ್ಠ ವಿದ್ಯಾ - ರೇಖೆ ಹಾಗೂ ಮೂರನೆಯ ರೇಖೆ ಶ್ರೇಷ್ಠ ಮತದ ರೇಖೆಯಾಗಿದೆ. ಈ ರೀತಿ ಮೂರು ರೇಖೆಗಳು ಹೊಳೆಯುತ್ತಿವೆ. ಈ ಮೂರು ರೇಖೆಗಳು ಸರ್ವರ ಭಾಗ್ಯದ ರೇಖೆಗಳಾಗಿವೆ. ನೀವು ಎಲ್ಲರೂ ಸಹ ತಮ್ಮ ಮೂರು ರೇಖೆಗಳನ್ನು ನೋಡುತ್ತಿದ್ದೀರಲ್ಲವೇ! ಪ್ರಭು ಪಾಲನೆಯ ಭಾಗ್ಯ ನೀವು ಬ್ರಾಹ್ಮಣ ಆತ್ಮಗಳ ವಿನಃ ಮತ್ತೆ ಯಾರಿಗೂ ಸಹ ಪ್ರಾಪ್ತಿಯಾಗುವುದಿಲ್ಲ. ಪರಮಾತ್ಮ ಪಾಲನೆ...! ಈ ಪಾಲನೆಯಿಂದ ಎಷ್ಟೊಂದು ಶ್ರೇಷ್ಠ ಪೂಜ್ಯನೀಯರಾಗುತ್ತೀರಿ. ನಾನು ಆತ್ಮನಿಗೆ ಪರಮಾತ್ಮ ವಿದ್ಯೆಯ ಅಧಿಕಾರ ಪ್ರಾಪ್ತಿ ಆಗುವುದೆಂದು ಸ್ವಪ್ನದಲ್ಲಿ ಎಂದಾದರೂ ಯೋಚಿಸಿದ್ದೀರೇನು! ಆದರೆ ಈಗ ಅದನ್ನು ಸಾಕಾರದಲ್ಲಿ ಅನುಭವ ಮಾಡುತ್ತಿದ್ದೀರಿ. ಸ್ವಯಂ ಸದ್ಗುರು ಅಮೃತವೇಳೆಯಿಂದ ರಾತ್ರಿಯ ತನಕ ಪ್ರತಿಯೊಂದು ಕರ್ಮದ ಸಲುವಾಗಿ ಶ್ರೇಷ್ಠ ಮತವನ್ನು ಕೊಟ್ಟು ಕರ್ಮಬಂಧನವನ್ನು ಕರ್ಮ ಸಂಬಂಧದಲ್ಲಿ ಪರಿವರ್ತನೆ ಮಾಡುವ ಶ್ರೀಮತವನ್ನು ನೀಡಲು ನಿಮಿತ್ತ ಮಾಡುವರೆಂದೂ ಸಹ ಸ್ವಪ್ನದಲ್ಲಿಯೂ ಇರಲಿಲ್ಲ. ಆದರೆ ಈಗ ನಮ್ಮ ಪ್ರತಿಯೊಂದು ಕರ್ಮ ಶ್ರೀಮತದಂತೆ ನಡೆಯುತ್ತಿದೆಯೆಂದು ಅನುಭವದಿಂದ ಹೇಳುತ್ತೀರಿ. ಇಂತಹ ಅನುಭವವಿದೆಯೇ? ಇಂತಹ ಶ್ರೇಷ್ಠ ಭಾಗ್ಯವನ್ನು ಪ್ರತಿಯೊಂದು ಮಗುವಿನಲ್ಲಿ ಬಾಪ್ದಾದಾರವರೂ ಸಹ ನೋಡಿ ನೋಡಿ ಹರ್ಷಿತರಾಗುತ್ತಿದ್ದೇವೆ. ವಾಹ್ ನನ್ನ ಶ್ರೇಷ್ಠ ಭಾಗ್ಯವಂತ ಮಕ್ಕಳೇ ವಾಹ್! ಮಕ್ಕಳು ಹೇಳುತ್ತೀರಿ ಹೇಳುತ್ತಾರೆ ವಾಹ್! ಮಕ್ಕಳೇ ವಾಹ್! ವಾಹ್! ಬಾಬಾ ವಾಹ್! ಮತ್ತು ತಂದೆ ಹೇಳುತ್ತಾರೆ ವಾಹ್! ಮಕ್ಕಳೇ ವಾಹ್!

ಇಂದು ಅಮೃತವೇಳೆಯಿಂದ ಎರಡು ಸಂಕಲ್ಪಗಳಿಂದ ಮಕ್ಕಳ ನೆನಪು ಬಾಪ್ದಾದಾರವರ ಬಳಿ ತಲುಪಿತು. ಮೊದಲನೆಯದಾಗಿ ಕೆಲವು ಮಕ್ಕಳಿಗೆ ಚಾರ್ಟ್ ಒಪ್ಪಿಸುವ ನೆನಪಿತ್ತು. ಎರಡೆನೆಯದಾಗಿ ತಂದೆಯ ಸಂಗದ ರಂಗಿನ ಹೋಳಿಯ ನೆನಪಿತ್ತು. ಎಲ್ಲರೂ ಹೋಳಿಯನ್ನು ಆಚರಿಸಲು ಬಂದಿದ್ದೀರಲ್ಲನೇ ಬ್ರಾಹ್ಮಣರ ಭಾಷೆಯಲ್ಲಿ ಆಚರಿಸುವುದು ಅರ್ಥಾತ್ ಆಚರಣೆಯಂತೆ ಆಗುವುದಾಗಿದೆ. ಹೋಳಿಯನ್ನು ಆಚರಿಸುವುದು ಅರ್ಥಾತ್ ಹೋಲಿ(ಪವಿತ್ರ)ಆಗುವುದಾಗಿದೆ. ಬ್ರಾಹ್ಮಣ ಮಕ್ಕಳು ಪರಮಪವಿತ್ರರಾಗುವುದು ಸರ್ವರಿಂದ ಭಿನ್ನ ಹಾಗೂ ಪ್ರಿಯಾವಾಗಿರುವುದನ್ನು ಬಾಪ್ದಾದಾ ನೋಡುತ್ತಿದ್ದಾರೆ. ಹಾಗೆ ನೋಡುವುದಾದರೆ ದ್ವಾಪರದ ಆದಿಯ ಮಹಾನ್ ಆತ್ಮರು ಮತ್ತು ಸಮಯ ಪ್ರತಿ ಸಮಯ ಬಂದಿರುವಂತಹ ಧರ್ಮ ಪಿತರೂ ಸಹ ಪವಿತ್ರವಾಗಿದ್ದಾರೆ. ಆದರೆ ನಿಮ್ಮ ಪವಿತ್ರತೆ ಎಲ್ಲರಿಗಿಂತ ಶ್ರೇಷ್ಠವಾಗಿದೆ ಹಾಗೂ ಭಿನ್ನವಾಗಿದೆ. ಇಡೀ ಕಲ್ಪದಲ್ಲಿ ಯಾವುದೇ ಮಹಾನ್ ಆತ್ಮ, ಧರ್ಮಾತ್ಮ, ಧರ್ಮ ಪಿತನಾಗಿರಬಹುದು, ಆದರೆ ನಿಮ್ಮ ಆತ್ಮ, ಶರೀರ ಹಾಗೂ ಪ್ರಕೃತಿಯೂ ಸಹ ಪವಿತ್ರವಾಗಿದೆ. ಇಂತಹ ಪರಮಪವಿತ್ರ ಇದುವರೆಗೂ ಯಾರೂ ಸಹ ಆಗಿಲ್ಲ, ಹಾಗೂ ಆಗಲೂ ಸಾಧ್ಯವಿಲ್ಲ. ತಮ್ಮ ಭವಿಷ್ಯ ಸ್ವರೂಪವನ್ನು ಮುಂದೆ ತಂದು ಕೊಳ್ಳಿ, ತಂದುಕೊಂಡಿರಾ? ಎಲ್ಲರ ಮುಂದೆ ತಮ್ಮ ಭವಿಷ್ಯ ರೂಪ ಬಂದಿತೇ! ಆಗುತ್ತೇನೋ ಅಥವಾ ಇಲ್ಲವೋ!ಎಂದು ತಮ್ಮ ಭವಿಷ್ಯ ರೂಪ ಗೊತ್ತಿಲ್ಲವೇ? ಏನಾಗುತ್ತೇನೋ! ಏನೇ ಆದರೂ ಸಹ ಪವಿತ್ರರಲ್ಲವೇ? ಶರೀರವೂ ಸಹ ಪವಿತ್ರ, ಆತ್ಮವೂ ಸಹ ಪವಿತ್ರ, ಪಾವನ, ಸುಖದಾಯಿ...... ನಿಮ್ಮ ನಿಶ್ಚಯದ ಲೇಖನಿಯಿಂದ ಭವಿಷ್ಯದ ಚಿತ್ರವನ್ನು ಮುಂದೆ ತರಲು ಸಾಧ್ಯವಿದೆಯೇ. ನಿಶ್ಚಯವಿದೆಯೇ! ಶಿಕ್ಷಕಿಯರಿಗೆ ನಿಶ್ಚಯವಿದೆಯೇ? ಒಳ್ಳೆಯದು. ಒಂದು ಸೆಕೆಂಡಿನಲ್ಲಿ ತನ್ನ ಭವಿಷ್ಯ ಚಿತ್ರವನ್ನು ಮುಂದೆ ತರಲು ಸಾಧ್ಯವಿದೆಯೇ! ಒಂದುವೇಳೆ ಕೃಷ್ಣನಂತೂ ಆಗದಿರಬಹುದು, ಆದರೆ ಕೃಷ್ಣನ ಜೊತೆಗಾರರಂತೂ ಆಗುತ್ತೀರಲ್ಲವೇ! ಜೊತೆಗಾರರಾಗುವುದೂ ಸಹ ಎಷ್ಟೊಂದು ಚೆನ್ನಾಗಿರುತ್ತದೆ. ಆದರೆ ಚಿತ್ರಕಾರರಾಗಲು ಬರುತ್ತದೆಯೋ ಅಥವಾ ಇಲ್ಲವೋ? ಕೇವಲ ನಿಮ್ಮ ಮುಂದೆ ನಿಮ್ಮನ್ನು ನೋಡಿಕೊಳ್ಳಿ, ಈಗಂತು ಸಾಧಾರಣನಾಗಿದ್ದೇನೆ, ನಾಳೆ (ನಾಟಕದ ನಾಳೆ) ಪವಿತ್ರ ಶರೀರಧಾರಿಯಾಗಲೇ ಬೇಕಾಗಿದೆ. ಪಾಂಡವರು ಏನೆಂದು ತಿಳಿದು ಕೊಳ್ಳುತ್ತೀರಿ? ಪಕ್ಕಾ ಅಲ್ಲವೇ, ಗೊತ್ತಿಲ್ಲ ಆಗುತ್ತೇನೋ ಇಲ್ಲವೋ?ಎಂಬ ಸಂಶಯವಂತು ಇಲ್ಲ ತಾನೆ! ಸಂಶಯವೇ? ಇಲ್ಲವಲ್ಲವೇ! ಪಕ್ಕಾ ಅಲ್ಲವೇ? ರಾಜಯೋಗಿ ಆಗಿರುವಿರೆಂದಾಗ ರಾಜ್ಯಾಧಿಕಾರಿಗಳಾಗಲೇ ಬೇಕಾಗಿದೆ. ಬಾಪ್ದಾದಾ ಅನೇಕ ಸಲ ನೆನಪನ್ನು ತರಿಸುತ್ತೇವೆ....! ತಂದೆ ನಿಮಗಾಗಿ ಉಡುಗೊರೆಯನ್ನು ತಂದಿದ್ದೇವೆ, ಹಾಗಾದರೆ ಯಾವ ಉಡುಗೂರೆಯನ್ನು ತಂದಿದ್ದೇವೆ? ಸ್ವರ್ಣಿಮ ಪ್ರಪಂಚ, ಸತೋಪ್ರಧಾನ ಜಗತ್ತಿನ ಉಡುಗೊರೆ ತಂದಿದ್ದಾರೆ. ಈ ನಿಶ್ಚಯವಿದೆಯೇ! ನಿಶ್ಚಯದ ಗುರುತು ಆತ್ಮಿಕ ನಶೆಯಲ್ಲಿರುವುದಾಗಿದೆ. ಎಷ್ಟೆಷ್ಟು ನಿಮ್ಮ ರಾಜ್ಯದ, ಮನೆಯ ಹಾಗೂ ತಮ್ಮ ರಾಜ್ಯದ ಸಮೀಪ ಬರುತ್ತೀರಿ, ಆಗ ನಿಮಗೆ ಮತ್ತೆ-ಮತ್ತೆ ನಿಮ್ಮ ಮಧುರ ಮನೆಯ ಮತ್ತು ಮಧುರ ರಾಜ್ಯದ ಸ್ಮೃತಿ ಸ್ಪಷ್ಟವಾಗಿ ಬರಲೇ ಬೇಕಾಗುತ್ತದೆ. ಇದು ಸಮಯ ಸಮೀಪ ಬರುವುದರ ಚಿನ್ಹೆಯಾಗಿದೆ. ಹೀಗೆ ನಿಮ್ಮ ಮನೆ, ನಿಮ್ಮ ರಾಜ್ಯ ಸ್ಪಷ್ಟವಾಗಿ ಸ್ಮೃತಿಗೆ ಬರಬೇಕು, ಮೂರನೆಯ ನೇತ್ರದ ಮುಖಾಂತರ ಸ್ಪಷ್ಟವಾಗಿ ಕಾಣಬೇಕು. ಇಂದು ಬ್ರಾಹ್ಮಣರು, ನಾಳೆ ದೇವತೆಗಳೆಂದು ಅನುಭವವಾಗಬೇಕು. ಎಷ್ಟು ಬಾರಿ ಪಾತ್ರ ಪೂರ್ತಿ ಮಾಡಿ ತಮ್ಮ ಮನೆ ಮತ್ತು ತಮ್ಮ ರಾಜ್ಯದಲ್ಲಿ ಹೋಗಿದ್ದೀರೆಂದು ನೆನಪಿಗೆ ಬರುತ್ತದೆಯೇ? ಪುನಃ ಈಗ ಹೋಗಬೇಕಾಗಿದೆ.

ಬಾಪ್ದಾದಾ ವರ್ತಮಾನ ಸಮಯದ ಎಲ್ಲರ ಫಲಿತಾಂಶವನ್ನು ನೋಡಿದರು. ಡಬ್ಬಲ್ ವಿದೇಶದವರಾಗಿರಬಹುದು, ಅಥವಾ ಭಾರತವಾಸಿಯರಾಗಿರಬಹುದು, ಎಲ್ಲಾ ಮಕ್ಕಳ ಫಲಿತಾಂಶದಲ್ಲಿ ವರ್ತಮಾನ ಸಮಯದಲ್ಲಿ ಹುಡುಗಾಟಿಕೆತನ ಬಹಳ ಹೊಸ-ಹೊಸ ರೂಪದಲ್ಲಿರುವುದನ್ನು ನೋಡಿದರು. ಅನೇಕ ಪ್ರಕಾರದ ಹುಡುಗಾಟಿಕೆ ಇದೆ. ತನ್ನ ಮನಸ್ಸಿನಲ್ಲಿಯೇ ಯೋಚಿಸುತ್ತಾರೆ, ಈ ರೀತಿ ಎಲ್ಲವೂ ನಡೆಯುತ್ತದೆ. ಇತ್ತೀಚಿನ ದಿನಗಳಲ್ಲಿ ಎಲ್ಲಾ ಮಾತಿನಲ್ಲಿ ಇದು ವಿಶೇಷ ಸ್ಲೋಗನ್ ಆಗಿದೆ ಎಲ್ಲಾ ನಡೆಯುತ್ತದೆ. ಇದು ಹುಡುಗಾಟಿಕೆಯಾಗಿದೆ. ಜೊತೆಯಲ್ಲಿ ಸ್ವಲ್ಪ-ಸ್ವಲ್ಪ ಭಿನ್ನ-ಭಿನ್ನ ಪ್ರಕಾರದ ಪುರುಷಾರ್ಥ ಅಥವಾ ಸ್ವ ಪರಿವರ್ತನೆಯಲ್ಲಿ ಹುಡುಗಾಟಿಕೆ ಜೊತೆ ಸ್ವಲ್ಪ ಪಸೆರ್ಂಟೇಜಿನಲ್ಲಿ ಆಲಸ್ಯವೂ (ಸೋಮಾರಿತನವು) ಇದೆ. ಆಗಿಬಿಡುತ್ತದೆ, ಮಾಡುತ್ತೇವೆ. ಈ ರೀತಿ ಹೊಸ-ಹೊಸ ಪ್ರಕಾರದ ಹುಡುಗಾಟಿಕೆಯ ಮಾತನ್ನು ಬಾಪ್ದಾದಾ ನೋಡುತ್ತಿದ್ದಾರೆ. ಆದರಿಂದ ತನ್ನ ಸತ್ಯ ಹೃದಯದಿಂದ, ಹುಡುಗಾಟಿಕೆಯುಂದ ಅಲ್ಲ, ಚಾರ್ಟನ್ನು ಖಂಡಿತವಾಗಿ ಇಡಬೇಕು.

ಬಾಪ್ದಾದಾ ಫಲಿತಾಂಶವನ್ನು ಹೇಳುತ್ತಿದ್ದಾರೆ. ಹೇಳಿದ್ದಾರಲ್ಲವೇ! ಇಲ್ಲವೆಂದರೆ ಕೇವಲ ಪ್ರೀತಿ ಮಾಡಬೇಕೇನು? ಇದೂ ಸಹ ಪ್ರೀತಿಯಾಗಿದೆ. ಎಲ್ಲಾ ಮಕ್ಕಳೊಂದಿಗೆ ಬಾಪ್ದಾದಾರವರಿಗೆ ಎಷ್ಟೊಂದು ಪ್ರೀತಿ ಇದೆ. ಎಲ್ಲಾ ಮಕ್ಕಳು ಬ್ರಹ್ಮಾ ತಂದೆಯ ಜೊತೆ-ಜೊತೆಗೆ ತನ್ನ ಮನೆಗೆ ಹೋಗಬೇಕು. ಹಿಂದೆ -ಹಿಂದೆ ಬರಬಾರದು. ಜೊತೆಯಲ್ಲಿಯೇ ಹೋಗಬೇಕು. ಜೊತೆಯಲ್ಲಿ ಹೋಗಲು ಸಮಾನರಂತೂ ಆಗಬೇಕಲ್ಲವೇ! ಸಮಾನತೆ ಇಲ್ಲದೆ ಜೊತೆಯಾಗಿ ಹೋಗಲು ಸಾಧ್ಯವಿಲ್ಲ. ಮತ್ತು ನಿಮ್ಮ ರಾಜ್ಯದಲ್ಲಿ, ಮೊದಲನೆಯ ಜನ್ಮದಲ್ಲಿ ಮೊದಲನೆಯವರೇ ಹೋಗುತ್ತಾರಲ್ಲವೇ! ಒಂದುವೇಳೆ ಎರಡನೆಯ ಮೂರನೆಯ ಜನ್ಮದಲ್ಲಿ ಬಂದು ಒಳ್ಳೆಯ ರಾಜನಾದರೂ ಸಹ, ಎರಡನೆಯವರು, ಮೂರನೆಯವರು ಎಂದೇ ಹೇಳಲಾಗುತ್ತದಲ್ಲವೇ! ಜೊತೆಯಲ್ಲಿ ಹೋಗಬೇಕು ಮತ್ತು ಜೊತೆಯಲ್ಲಿ ಬ್ರಹ್ಮಾತಂದೆಯಂತೆ ಮೊದಲನೆಯ ಜನ್ಮಕ್ಕೆ ಅಧಿಕಾರಿ ಆಗಬೇಕು. ಇವರಾಗಿದ್ದಾರೆ ನಂಬರ್ವನ್ ಪಾಸ್ ವಿತ್ ಆನರ್ ಆಗುವವರು. ಅಂದಾಗ ಪಾಸ್ ವಿತ್ ಆನರ್ ಆಗಬೇಕೋ ಅಥವಾ ಪಾಸ್ ಮಾರ್ಕ್ಸ್ ತೆಗೆದುಕೊಂಡರೆ ಸರಿಯೇನು? ನಾವು ಏನನ್ನು ಮಾಡುತ್ತಿದ್ದೇವೆ, ಏನಾಗುತ್ತಿದೆ ಇದನ್ನು ಬಾಪ್ದಾದಾ ನೋಡುವುದಿಲ್ಲ ಎಂದು ಎಂದೂ ಸಹ ಈ ರೀತಿ ಯೋಚಿಸಬೇಡಿ. ಇದರಲ್ಲಿ ಎಂದೂ ಸಹ ಹುಡುಗಾಟಿಕೆಯಲ್ಲಿ ಬರಬಾರದು. ಬಾಪ್ದಾದಾರವರನ್ನು ಒಂದುವೇಳೆ ಯಾವುದೇ ಮಗು ತನ್ನ ಹೃದಯದ ಚಾರ್ಟನ್ನು ಕೇಳಿದರೆ, ಹೇಳಬಹುದು. ಆದರೆ ಈಗ ಹೇಳುವುದಿಲ್ಲ. ಬಾಪ್ದಾದಾರವರು ಪ್ರತಿಯೊಬ್ಬ ಮಹಾರಥಿ, ಕುದರೆ ಸವಾರ, ಎಲ್ಲರ ಚಾರ್ಟನ್ನು ನೋಡುತ್ತಿದ್ದಾರೆ. ಕೆಲವೊಮ್ಮೆ ಬಾಪ್ದಾದಾರವರಿಗೆ ಬಹಳ ಕನಿಕರ ಬರುತ್ತದೆ. ಇವರು ಯಾರಾಗಿದ್ದಾರೆ ಆದರೆ ಇವರು ಏನು ಮಾಡುತ್ತಿದ್ದಾರೆ? ಬ್ರಹ್ಮಾತಂದೆ ಹೇಳುತ್ತಿದ್ದರಲ್ಲವೇ. ಏನೆಂದು ಹೇಳುತ್ತಿದ್ದರು? ಬೆಲ್ಲಕ್ಕೆ ಗೊತ್ತು ಚೀಲಕ್ಕೆ ಗೊತ್ತು. ಶಿವಬಾಬಾರವರಿಗೆ ಗೊತ್ತು ಮತ್ತು ಬ್ರಹ್ಮಾಬಾಬಾರವರಿಗೆ ಗೊತ್ತು. ಏಕೆಂದರೆ ಬಾಪ್ದಾದಾರವರಿಗೆ ಬಹಳ ದಯೆ ಬರುತ್ತದೆ. ಆದರೆ ಇಂತಹ ಮಕ್ಕಳು ಬಾಪ್ದಾದಾರವರ ದಯಾ ಸಂಕಲ್ಪವನ್ನು ಕ್ಯಾಚ್ ಮಾಡಲು ಸಾಧ್ಯವಿಲ್ಲ, ಅಂತಹವರು ಬಾಪ್ದಾದಾರವರ ಸಂಕಲ್ಪವನ್ನೂ ಸಹ ಸ್ಪರ್ಷ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಬಾಪ್ದಾದಾರವರಿಗೆ ಮಕ್ಕಳ ಭಿನ್ನ - ಭಿನ್ನ ಪ್ರಕಾರದ ಹುಡುಗಾಟಿಕೆಯನ್ನು ನೋಡುತ್ತಿರುತ್ತಾರೆ. ಈ ದಿನ ಬಾಪ್ದಾದಾರವರು ಮಕ್ಕಳ ಮೇಲಿನ ದಯೆಯಿಂದ ಹೇಳುತ್ತಾರೆಂದು ತಿಳಿಯಬಾರದು. ಸತ್ಯಯುಗದಲ್ಲಿಯಂತೂ ಯಾರು ಏನಾಗುತ್ತಾರೆ ಎಂದು ಯಾರಿಗೂ ತಿಳಿಯುವುದಿಲ್ಲ. ಕೆಲವು ಮಕ್ಕಳು ತಿಳಿದುಕೊಳ್ಳುತ್ತಾರೆ, ಈಗಲೇ ಮಜಾ ಮಾಡೋಣ. ಈಗ ಏನು ಮಾಡಬೇಕೆಂದಿದ್ದೀರೋ ಮಾಡಿಕೊಳ್ಳಿ, ನಮ್ಮನ್ನು ಯಾರೂ ತಡೆಯುವವರಾಗಲಿ, ನೋಡುವವರಾಗಲಿ, ಇರುವುದಿಲ್ಲವೆಂದು ಕೆಲವು ಮಕ್ಕಳು ತಿಳಿದುಕೊಳ್ಳುತ್ತಾರೆ. ಆದರೆ ಈ ತಿಳುವಳಿಕೆ ತಪ್ಪಾಗಿದೆ. ಆದರೆ ಬಾಪ್ದಾದಾ ಯಾರ ಹೆಸರನ್ನು ಹೇಳುವುದಿಲ್ಲ. ಒಂದುವೇಳೆ ಹೆಸರು ಹೇಳಿದರೆ ನಾಳೆ ಸರಿಯಾಗಬಹುದು.

ಏನು ಮಾಡಬೇಕೆಂದು ಪಾಂಡವರು ತಿಳಿದುಕೊಂಡಿರೋ ಅಥವಾ ಇಲ್ಲವೋ? ಹಾ! ಹೀಗೆಲ್ಲಾ ನಡೆಯುತ್ತದೆ.....! ನಡೆಯುತ್ತದೆ? ಆದರೆ ನಡೆಯುವುದಿಲ್ಲ. ಏಕೆಂದರೆ ಬಾಪ್ದಾದಾರವರ ಬಳಿ ಪ್ರತಿಯೊಬ್ಬರಿಂದ ಪ್ರತಿದಿನದ ರಿಪೋರ್ಟ್ ಬರುತ್ತದೆ. ಬಾಪ್ದಾದಾ ಪರಸ್ಪರ ವಾರ್ತಾಲಾಪ ಮಾಡುತ್ತಾರೆ. ಬಾಪ್ದಾದಾ ಎಲ್ಲಾ ಮಕ್ಕಳಿಗೆ ಮತ್ತೊಮ್ಮೆ ಸೂಚನೆಯನ್ನು ಕೊಡುತ್ತಿದ್ದಾರೆ. ಈಗ ಸಮಯ ಎಲ್ಲಾ ಪ್ರಕಾರದಿಂದ ಅತಿಯಾಗಿ ಹೋಗುತ್ತಿದೆ. ಮಾಯೆ ಹಾಗೂ ಪ್ರಕೃತಿಯೂ ಸಹ ತಮ್ಮ ಅತಿಯಾದ ಪಾತ್ರ ಮಾಡುತ್ತಿವೆ. ಇಂತಹ ಸಮಯದಲ್ಲಿ ಬ್ರಾಹ್ಮಣ ಮಕ್ಕಳು ತನ್ನ ಕಡೆ ಗಮನವನ್ನೂ ಸಹ ಅತಿಯಾಗಿ ಅರ್ಥಾತ್ ಮನ, ವಚನ, ಕರ್ಮದಲ್ಲಿ ಅತಿಯಾದ ಗಮನವಿರಬೇಕು. ಅರ್ಥಾತ್ ಬ್ರಾಹ್ಮಣ ಮಕ್ಕಳಲ್ಲಿ ಸಾಧಾರಣ ಪುರುಷಾರ್ಥವಿರಬಾರದು. ಈಗ ಸಮಯವು ಎಲ್ಲಾ ರೀತಿಯಲ್ಲಿ ಅತಿಯಾಗಿ ಹೋಗುತ್ತದೆ ಎಂದು ಬಾಪ್ದಾದಾ ಸೂಚನೆಯನ್ನೂ ಸಹ ಕೊಟ್ಟಿದ್ದೇವೆ. ಬಾಪ್ದಾದಾ ನೋಡುತ್ತಿದ್ದಾರೆ - ಸೇವೆಯ ಜೊತೆ ಸೆಳತ ಬಹಳ ಚೆನ್ನಾಗಿದೆ. ಸೇವೆಗೋಸ್ಕರ ಸದಾ ಸಿದ್ದರಾಗಿರುತ್ತೀರಿ. ಒಂದುವೇಳೆ ಸೇವೆಯ ಅವಕಾಶ ಸಿಕ್ಕಿದರೆ ಪ್ರೀತಿಯಿಂದ ಸೇವೆಗಾಗಿ ತಕ್ಷಣ ತಯಾರಾಗುತ್ತೀರಿ. ಆದರೆ ಈಗ ಸೇವೆಯಲ್ಲಿ ವಾಣಿಯ ಜೊತೆ-ಜೊತೆಗೆ ಮನಸ್ಸಾ ಸ್ವಯಂ ಆತ್ಮ ವಿಶೇಷವಾಗಿ ಒಂದಲ್ಲ ಒಂದು ಪ್ರಾಪ್ತಿ ಸ್ವರೂಪದ ಸ್ಥಿತಿಯಲ್ಲಿ ಸ್ಥಿತರಾಗಿ ಸೇವೆ ಮಾಡುವುದನ್ನು ವಾಣಿಯಿಂದ ಸೇವೆ ಮಾಡಿದಾಗ ಸೇರಿಸಿಕೊಳ್ಳಬೇಕು. ನೀವು ಭಾಷಣ ಮಾಡುತ್ತಿದ್ದೀರೆಂದು ತಿಳಿದುಕೊಳ್ಳಿ, ಮಾತಿನಿಂದ ಭಾಷಣವನ್ನು ಚೆನ್ನಾಗಿ ಮಾಡುತ್ತಿದ್ದೀರಿ. ಆದರೆ ಆ ಸಮಯ ತಮ್ಮ ಆತ್ಮಿಕ ಸ್ಥಿತಿಯಲ್ಲಿ ವಿಶೇಷವಾಗಿ ಶಕ್ತಿ, ಶಾಂತಿ ಹಾಗೂ ಪರಮಾತ್ಮನ ಪ್ರೀತಿ...... ಈ ರೀತಿ ಒಂದಲ್ಲ ಒಂದು ವಿಶೇಷ ಅನುಭೂತಿಯ ಸ್ಥಿತಿಯಲ್ಲಿ ಸ್ಥಿತರಾಗಿ ಮನಸ್ಸಾ ಮೂಲಕ ಆತ್ಮಿಕ ಸ್ಥಿತಿಯ ಪ್ರಭಾವವನ್ನು ವಾಯುಮಂಡಲದಲ್ಲಿ ಹರಡುತ್ತಾ ಜೊತೆ-ಜೊತೆಯಲ್ಲಿ ವಾಣಿಯಿಂದ ಸಂದೇಶವನ್ನು ನೀಡುವ ಸೇವೆಯನ್ನು ಮಾಡಿ. ಹೀಗೆ ವಾಣಿಯ ಮೂಲಕ ಸಂದೇಶವನ್ನು ನೀಡುತ್ತಾ ಮನಸ್ಸಿನ ಆತ್ಮಿಕ ಸ್ಥಿತಿಯ ಮೂಲಕ ಅನುಭೂತಿಯನ್ನು ಮಾಡಿಸಿ. ಭಾಷಣದ ಸಮಯದಲ್ಲಿ ನಿಮ್ಮ ಮಾತು, ನಿಮ್ಮ ಮಸ್ತಕದಿಂದ, ನಿಮ್ಮ ನಯನಗಳಿಂದ, ನಿಮ್ಮ ಚೆಹರೆಯಿಂದ ಅನುಭೂತಿಯ ಲಕ್ಷಣ ಈ ರೀತಿ ಕಾಣಬೇಕು....ಇಂದು ಭಾಷಣವಂತೂ ಕೇಳಿದೆವು, ಆದರೆ ಇಂದಿನ ಭಾಷಣದಲ್ಲಿ ಪರಮಾತ್ಮನ ಪ್ರೀತಿಯ ಬಹಳ ಒಳ್ಳೆಯ ಅನುಭವವಾಗುತ್ತಿತ್ತು. ಹೇಗೆ ಭಾಷಣದ ಫಲಿತಾಂಶವನ್ನು ನೀವು ಬಹಳ ಚೆನ್ನಾಗಿ ಮಾತನಾಡಿದಿರಿ, ಬಹಳ ಉತ್ತಮ, ಒಳ್ಳೆಯ ಮಾತುಗಳನ್ನು ಹೇಳಿದಿರಿ ಎಂದು ವರ್ಣನೆ ಮಾಡುವಂತೆ ಹಾಗೆಯೇ ತಮ್ಮ ಆತ್ಮ ಸ್ವರೂಪದ ಅನುಭೂತಿಯ ವರ್ಣನೆಯನ್ನೂ ಸಹ ಮಾಡಬೇಕು. ಆ ಅನುಭೂತಿಯೂ ಮನುಷ್ಯಾತ್ಮಗಳಿಗೆ ವೈಬ್ರೇಷನ್ಸ್ (ಪ್ರಕಂಪನ) ರೂಪದಲ್ಲಿ ತಲುಪಿ ವಾಯುಮಂಡಲದಲ್ಲಿ ಹರಡಬೇಕು. ಒಂದುವೇಳೆ ವಾತಾವರಣ ಶೀತಲವಾಗಿರಬೇಕೆಂದರೆ ವಿಜ್ಞಾನದ ಸಾಧನಗಳಿಂದ ಶೀತಲ ವಾತಾವರಣವನ್ನು ಮಾಡಲು ಸಾಧ್ಯವಿದೆ. ಆಗ ಬಹಳ ತಂಪಾಗಿದೆ ಎಂದು ಎಲ್ಲರಿಗೂ ಅನುಭೂತಿಯಾಗುತ್ತದೆ. ಅದೇ ರೀತಿ ಬಿಸಿಯ ವಾತಾವರಣವನ್ನೂ ಸಹ ಅನುಭವ ಮಾಡಿಸಲು ಸಾಧ್ಯವಿದೆ. ಈ ರೀತಿ ವಿಜ್ಞಾನದಿಂದ ಚಳಿಯಲ್ಲಿ ಬಿಸಿಯ ಅನುಭವ, ಬಿಸಿಯಲ್ಲಿ ಚಳಿಯ ಅನುಭವ ಮಾಡಿಸಲು ಸಾಧ್ಯವಿದೆ, ಅಂದಾಗ ನಿಮ್ಮ ಸೈಲೆನ್ಸ್ ಶಕ್ತಿಯಿಂದ ಪ್ರೇಮ ಸ್ವರೂಪ, ಸುಖ ಸ್ವರೂಪ, ಶಾಂತಿ ಸ್ವರೂಪ ವಾಯುಮಂಡಲದ ಅನುಭವವನ್ನು ಮಾಡಿಸಲು ಸಾಧ್ಯವಿಲ್ಲವೇ! ಈಗ ಇದನ್ನು ರೀಸರ್ಚ್ (ಸಂಶೋದನೆ) ಮಾಡಿ. ಕೇವಲ ಚೆನ್ನಾಗಿದೆ, ಚೆನ್ನಾಗಿದೆ ಎಂದು ಹೇಳುವುದು ಮಾತ್ರವಲ್ಲ, ಆದರೆ ತಾವೂ ಒಳ್ಳೆಯವರಾಗಬೇಕು.... ಆಗ ಸಮಾಪ್ತಿಯ ಸಮಯವನ್ನು ಸಮಾಪ್ತಿ ಮಾಡಿ ನಿಮ್ಮ ರಾಜ್ಯವನ್ನು ತರುತ್ತೀರಿ. ತಮಗೆ ತಮ್ಮ ರಾಜ್ಯದ ನೆನಪು ಏಕೆ ಬರುವುದಿಲ್ಲ? ಸಂಗಮಯುಗ ಶ್ರೇಷ್ಠ ವಜ್ರಸಮಾನವಾಗಿರುವುದು ಸಹ ಸರಿಯಾಗಿದೆ. ಆದರೆ ಹೇ ದಯಾ ಹೃದಯಿ ವಿಶ್ವಕಲ್ಯಾಣಕಾರಿ ಮಕ್ಕಳೇ – ದುಃಖ, ಅಶಾಂತಿಯಲ್ಲಿರುವ ನಿಮ್ಮ ಸಹೋದರ- ಸಹೋದರಿಯರ ಮೇಲೆ ದಯೆ ಬರುವುದಿಲ್ಲವೇ? ದುಃಖಮಯ ಜಗತ್ತನ್ನು ಸುಖಮಯವಾಗಿ ಮಾಡುವ ಉತ್ಸಾಹ ಬರುವುದಿಲ್ಲವೇ! ಈ ಉಮ್ಮಂಗ ಬರುವುದಿಲ್ಲವೆ? ದುಃಖವನ್ನು ನೋಡಲು ಇಷ್ಟ ಪಡುವುದಾದರೆ, ಬೇರೆಯವರ ದುಃಖವನ್ನು ನೋಡಿ, ಅವರು ನಿಮ್ಮದೇ ಸಹೋದರ-ಸಹೋದರಿಯರ ದುಃಖವನ್ನು ನೋಡಲು ಇಷ್ಟವಾಗುತ್ತದೆಯೇನು? ಈಗ ನಿಮ್ಮ ದಯಾಸ್ವರೂಪ, ಕೃಪಾ ಸ್ವರೂಪವನ್ನು ಪ್ರತ್ಯಕ್ಷ ಮಾಡಿಕೊಳ್ಳಿ. ಈ ಕಾರ್ಯಕ್ರಮವನ್ನು ಮಾಡುತ್ತಾ, ಆ ಕಾರ್ಯಕ್ರಮವನ್ನು ಮಾಡುತ್ತಾ... ವರ್ಷವೂ ಸಹ ಸಮಾಪ್ತಿಯಾಯಿತೆಂದು ಕೇವಲ ಸೇವೆಯಲ್ಲಿ ವ್ಯಸ್ತ (ಬಿಜಿ) ರಾಗಬೇಡಿ. ಈಗ ದಯಾಹೃದಯಿಗಳಾಗಿ. ದೃಷ್ಟಿಯಿಂದಾಗಲಿ, ಅನುಭವದಿಂದಾಗಲಿ, ಆತ್ಮಿಕ ಸ್ಥಿತಿಯ ಪ್ರಭಾವದಿಂದಾಗಲಿ, ಈ ರೀತಿ ಹೇಗಾದರೂ ದಯೆಯನ್ನು ತೋರಿಸಿ ದಯಾಹೃದಯಿಗಳಾಗಬೇಕು.

ಬಾಪ್ದಾದಾರವರು ಮತ್ತೊಂದು ವಿಷಯವನ್ನು ನೋಡಿದ್ದಾರೆ. ಅದನ್ನು ತಿಳಿಸುವುದು ಚೆನ್ನಾಗಿರುವುದಿಲ್ಲ. ಕೆಲವೊಮ್ಮೆ ಕೆಲವು ಉತ್ತಮ ಪುರುಷಾರ್ಥಿ ಮಕ್ಕಳೂ ಸಹ ಬೇರೆಯವರ ಮಾತಿನಲ್ಲಿ ಬಹಳ ಪ್ರವೇಶವಾಗುತ್ತಾರೆ. ಬೇರೆಯವರ ಮಾತನ್ನು ನೋಡುವುದು, ಬೇರೆಯವರ ಮಾತನ್ನು ವರ್ಣನೆ ಮಾಡುವುದು ಹಾಗೂ ನೋಡುವುದೂ ಸಹ ವ್ಯರ್ಥ ಮಾತಾಗಿದೆ. ಪರಸ್ಪರ ಅನ್ಯರ ವಿಶೇಷತೆಗಳನ್ನು ವರ್ಣನೆ ಮಾಡುವುದು ಕಡಿಮೆ. ಪ್ರತಿಯೊಬ್ಬರ ವಿಶೇಷತೆ ನೋಡುವುದು, ವಿಶೇಷತೆಯನ್ನು ವರ್ಣನೆ ಮಾಡುವುದು, ಹಾಗೂ ಅವರ ವಿಶೇಷತೆ ಮೂಲಕ ಅವರಿಗೆ ಉಮ್ಮಂಗ ಉತ್ಸಾಹವನ್ನು ತರಿಸುವುದು ಕಡಿಮೆ. ಆದರೆ ಯಾವ ವ್ಯರ್ಥ ಮಾತುಗಳನ್ನು ಬಾಪ್ದಾದಾರವರು ಬಿಡಲು ಹೇಳುತ್ತಾರೋ ಅದನ್ನು ಸ್ವಯಂ ಬಿಡಲು ಪ್ರಯತ್ನವನ್ನೂ ಸಹ ಮಾಡುತ್ತಿದ್ದಾರೆ, ಆದರೆ ಬೇರೆಯವರದನ್ನು ನೋಡುವ ಅಭ್ಯಾಸವೂ ಸಹ ಇದೆ. ಇದರಲ್ಲಿ ಹೆಚ್ಚು ಸಮಯ ಹೋಗುತ್ತದೆ. ಬಾಪ್ದಾದಾ ಒಂದು ವಿಶೇಷ ಶ್ರೀಮತವನ್ನು ಕೊಡುತ್ತಿದ್ದಾರೆ - ಅದು ಸಾಧಾರಣ ವಿಷಯವಾಗಿದೆ, ಆದರೆ ಆದರಿಂದ ಹೆಚ್ಚು ಸಮಯ ವ್ಯರ್ಥವಾಗುತ್ತಿದೆ. ಮಾತಿನಲ್ಲಿ ನಿರ್ಮಾಣತೆಯುಳ್ಳವರಾಗಬೇಕು. ಮಾತಿನಲ್ಲಿ ನಿರ್ಮಾಣತೆಯು ಕಡಿಮೆಯಾಗಬಾರದು. ಒಂದುವೇಳೆ ಸಾಧಾರಣವಾಗಿ ಮಾತನಾಡಿ ಈ ರೀತಿ ಮಾತನಾಡಬೇಕಾಗುತ್ತದೆ ಎಂದು ತಿಳಿದುಕೊಳ್ಳುತ್ತಾರೆ. ಆದರೆ ನಿರ್ಮಾಣತೆಯ ಬದಲಾಗಿ ಯಾವುದೇ ಅಧಿಕಾರದಿಂದ ನಿರ್ಮಾಣತೆಯಿಂದ ಮಾತನಾಡದೆ ಇದ್ದಾಗ......ಸ್ವಲ್ಪ ತಮ್ಮ ಕರ್ತವ್ಯದ, ಐದು ಪಸೆರ್ಂಟ್ ಅಭಿಮಾನವು ಕಾಣುತ್ತಿರುತ್ತದೆ. ನಿರ್ಮಾಣತೆಯು ಬ್ರಾಹ್ಮಣ ಜೀವನದ ವಿಶೇಷ ಶೃಂಗಾರವಾಗಿದೆ. ಮನದಲ್ಲಿ, ಮಾತಿನಲ್ಲಿ, ಸಂಬಂಧ ಸಂಪರ್ಕದಲ್ಲಿ ಈ ಮೂರು ವಿಷಯದಲ್ಲಿ ನಿರ್ಮಾಣತೆ ಇದ್ದು ಒಂದು ಮಾತಿನಲ್ಲಿ ಕಡಿಮೆ ಇದ್ದರೂ ಸಹ ಬಹಳ ನಷ್ಟವಾಗುತ್ತದೆ. ಈ ರೀತಿ ಒಂದು ಕಡಿಮೆಯೂ ಸಹ ಪಾಸ್ ವಿತ್ ಆನರ್ ಆಗಲು ಬಿಡುವುದಿಲ್ಲ. ನಿರ್ಮಾಣತೆಯು ಮಹಾನತೆಯಾಗಿದೆ. ಕೆಲವು ಮಕ್ಕಳು ತಮಾಷೆಯಲ್ಲಿ ಈ ರೀತಿ ಹೇಳುತ್ತಾರೆ.......ಸದಾ ನಾವೇ ಬಾಗಬೇಕೇನು, ಬೇರೆಯವರು ಸಹ ಬಾಗಲಿ, ಆದರೆ ನಿರ್ಮಾಣತೆಯೆಂದರೆ ನಾವೇ ಬಾಗುವುದಲ್ಲ, ನಾವು ಬಾಗುವುದೆಂದರೆ ಅನ್ಯರನ್ನು ಬಾಗಿಸುವುದಾಗಿದೆ. ಆತ್ಮಗಳ ಮಾತು ಒಂದು ಕಡೆ ಇರಲಿ. ವಾಸ್ತವಿಕವಾಗಿ ನಾವು ಬಾಗುವುದೆಂದರೆ ಪರಮಾತ್ಮನೂ ಸಹ ತಮಗೆ ಅರ್ಪಣೆ(ಬಾಗುತ್ತಾರೆ)ಯಾಗುತ್ತಾರೆ. ನಿರ್ಮಾಣತೆಯು ಸ್ವತಃವಾಗಿ ನಿರಹಂಕಾರಿಯನ್ನಾಗಿ ಮಾಡಿಸುತ್ತದೆ. ನಿರಂಹಂಕಾರಿ ಆಗುವ ಪುರುಷಾರ್ಥ ಮಾಡಬೇಕಾಗಿಲ್ಲ. ನಿಮ್ಮ ನಿರ್ಮಾಣತೆಯು ಪ್ರತಿಯೊಬ್ಬರ ಮನದಲ್ಲಿ ನಿಮಗಾಗಿ ಪ್ರೀತಿಯಿಂದ ಸ್ಥಾನವನ್ನು ಕೊಡಿಸುತ್ತದೆ. ನಿರ್ಮಾಣತೆಯು ಪ್ರತಿಯೊಬ್ಬರ ಮನದಿಂದ ನಿಮಗಾಗಿ ಆಶಿರ್ವಾದಗಳನ್ನು ಕೊಡಿಸುತ್ತದೆ. ಬಹಳ ಆಶೀರ್ವಾದಗಳು ಸಿಗುತ್ತವೆ. ಪುರುಷಾರ್ಥದಲ್ಲಿ ಆಶೀರ್ವಾದಗಳು ಲಿಫ್ಟಿನ ಬದಲಾಗಿ ರಾಕೆಟ್ಟಿನ ಕೆಲಸವನ್ನು ಮಾಡುತ್ತವೆ. ಯಾರು ಎಂತಹವರೇ ಆಗಿರಲಿ, ಎಷ್ಟೇ ವ್ಯಸ್ತರಾಗಿರಲಿ, ಎಷ್ಟೇ ಕಠೋರ ಹೃದಯದವರಾಗಿರಲಿ, ಎಷ್ಟೇ ಕ್ರೋಧಿಗಳಾಗಲಿ, ಆದರೆ ನಿರ್ಮಾಣತೆಯು ನಿಮಗೆ ಎಲ್ಲರ ಮೂಲಕ ಸಹಯೋಗವನ್ನು ಕೊಡಿಸುವುದಕ್ಕಾಗಿ ನಿಮಿತ್ತವಾಗುತ್ತದೆ. ನಿರ್ಮಾಣತೆಯು ಪ್ರತಿಯೊಬ್ಬರ ಸಂಸ್ಕಾರದವರೊಂದಿಗೂ ಸ್ವಯಂನ್ನು ಹೊಂದಿಕೊಂಡು ನಡೆದುಕೊಳ್ಳುವ ಹಾಗೆ ಮಾಡಿಸುತ್ತದೆ. ಸ್ವಯಂನ ನಿರ್ಮಾಣತೆಯು ಅಪ್ಪಟ ಚಿನ್ನ ಆಗಿರುವ ಕಾರಣ ಸ್ವಯಂನ್ನು ಹೇಗೆ ಬೇಕೋ ಹಾಗೆ ಅಳವಡಿಸಿಕೊಳ್ಳುವ ವಿಶೇಷತೆಯೂ ಬರುತ್ತದೆ. ಮಾತು-ಚಲನೆಯಲ್ಲಿ, ಸಂಬಂಧ-ಸಂಪರ್ಕದಲ್ಲಿ, ಸೇವೆಯಲ್ಲಿ ಪರಸ್ಪರ ಜೊತೆಯಲ್ಲಿರುತ್ತಾ ನಿಮ್ಮ ನಿರ್ಮಾಣತೆಯ ಸ್ವಭಾವ ವಿಜಯವನ್ನು ಪ್ರಾಪ್ತಿ ಮಾಡಿಸುತ್ತದೆ. ಆದುದರಿಂದ ಬಾಪ್ದಾದಾರವರು ಈ ವರ್ಷಕ್ಕೆ ವಿಶೇಷವಾಗಿ ನಿರ್ಮಾಣ, ನಿರ್ಮಲ ವರ್ಷವೆಂದು ಹೆಸರು ಕೊಡುತ್ತಿದ್ದಾರೆ. ಈ ರೀತಿಯಾಗಿ ಈ ವರ್ಷವನ್ನು ಆಚರಿಸುತ್ತೀರಲ್ಲವೇ.

ಬಾಪ್ದಾದಾ ಪ್ರತಿಯೊಬ್ಬ ಮಗುವಿಗೆ ವ್ಯರ್ಥದಿಂದ ಮುಕ್ತರಾಗುವುದನ್ನು ನೋಡಲು ಬಯಸುತ್ತಾರೆ. ಮುಕ್ತಿ ವರ್ಷವನ್ನು ಆಚರಿಸಿ. ಯಾವುದೇ ಕಡಿಮೆ ಇದ್ದರೂ ಆ ಕಡಿಮೆಗೆ ಮುಕ್ತಿಯನ್ನು ನೀಡಿ, ಏಕೆಂದರೆ ಎಲ್ಲಿಯವರೆಗೆ ಮುಕ್ತಿಯನ್ನು ಕೊಡುವುದಿಲ್ಲವೆಂದರೆ ಮುಕ್ತಿಧಾಮದಕ್ಕೆ ತಂದೆಯ ಜೊತೆ ಹೋಗಲು ಸಾಧ್ಯವಿಲ್ಲ. ಮುಕ್ತಿಯನ್ನು ಕೊಡುತ್ತೀರಾ? ಮುಕ್ತಿವರ್ಷವನ್ನು ಆಚರಿಸುತ್ತೀರಾ? ಯಾರು ಆಚರಿಸುತ್ತೀರಿ, ಅವರು ಕೈ ಅಲುಗಾಡಿಸಿ. ಆಚರಿಸುತ್ತೀರಾ? ಪರಸ್ಪರ ನೋಡಿದ್ದೀರಲ್ಲವೇ? ಆಚರಿಸುತ್ತೀರಾ! ಒಳ್ಳೆಯದು, ಒಂದುವೇಳೆ ಮುಕ್ತಿ ವರ್ಷವನ್ನು ಆಚರಿಸಿದರೆಂದರೆ ಬಾಪ್ದಾದಾ ರತ್ನಾಭರಣಗಳಿಂದ ತುಂಬಿದ ತಟ್ಟೆಗಳಲ್ಲಿ ಬಹಳ ಬಹಳ ಶುಭಾಶಯಗಳನ್ನು, ವಂದನೆಗಳನ್ನು ಅಭಿನಂದನೆಗಳನ್ನು ನೀಡುತ್ತಾರೆ. ಒಳ್ಳೆಯದು. ತನ್ನನ್ನೂ ಸಹ ಮುಕ್ತರನ್ನಾಗಿ ಮಾಡಿ, ತಮ್ಮ ಸಹೋದರ ಸಹೋದರಿಯರನ್ನು ದುಃಖದಿಂದ ದೂರ ಮಾಡಿ. ಇಂತಹ ಅಸಹಾಯಕತೆಗೆ ಮನಃಪೂರ್ವಕವಾಗಿಯೂ ಸಹ ಖುಷಿಯಿಂದ ಈ ಮಾತು ಬರಬೇಕು.... ನಮ್ಮ ತಂದೆ ಬಂದು ಬಿಟ್ಟಿದ್ದಾರೆ ಎಂದು. ಸರಿ ತಾನೆ. ಒಳ್ಳೆಯದು.

ನಾಲ್ಕೂ ಕಡೆಯ ಸರ್ವ ಪರಮ ಪವಿತ್ರ ಆತ್ಮರಿಗೆ, ಸದಾ ನಿರ್ಮಾಣರಾಗಿ ನಿರ್ಮಾಣ ಮಾಡುವಂತಹ ಬಾಪ್ದಾದಾರವರ ಸಮೀಪ ಆತ್ಮಗಳಿಗೆ ಸದಾ ತಮ್ಮ ಪುರುಷಾರ್ಥದ ವಿಧಿಯನ್ನು ತೀವ್ರ ಮಾಡಿಕೊಂಡು ತೀವ್ರತೆಯಿಂದ ಸಂಪನ್ನರಾಗುವಂತಹ ಸ್ನೇಹಿ ಆತ್ಮಗಳಿಗೆ, ಸದಾ ತಮ್ಮ ಉಳಿತಾಯದ ಖಾತೆಯನ್ನು ಉಳಿತಾಯ ಮಾಡುವಂತಹ ತೀವ್ರ ಪುರುಷಾರ್ಥಿ, ತೀವ್ರ ಬುದ್ದಿಯುಳ್ಳ ಮಕ್ಕಳಿಗೆ, ವಿಶಾಲ ಬುದ್ದಿಯ ಶುಭಾಶಯಗಳು. ನೆನಪು ಪ್ರೀತಿಯ ಜೊತೆಯಲ್ಲಿ ಎಲ್ಲಾ ಮಕ್ಕಳಿಗೆ ನಮಸ್ತೆ.

ವರದಾನ:
ಒಂದೇ ಬಲ ಒಂದೇ ಭರವಸೆಯ ಆಧಾರದ ಮೇಲೆ ಮಾಯೆಯನ್ನು ಸರೆಂಡರ್ ಮಾಡಿಸುವಂತಹ ಶಕ್ತಿಶಾಲಿ ಆತ್ಮ ಭವ

ಒಂದೇ ಬಲ ಒಂದೇ ಭರವಸೆ ಅರ್ಥಾತ್ ಸದಾ ಶಕ್ತಿಶಾಲಿ. ಎಲ್ಲಿ ಒಂದು ಬಲ ಒಂದು ಭರವಸೆ ಇದೆ ಅಲ್ಲಿ ಯಾರೂ ಅಲುಗಾಡಿಸಲು ಸಾಧ್ಯವಿಲ್ಲ. ಅವರ ಮುಂದೆ ಮಾಯೆ ಮೂರ್ಚಿತವಾಗಿಬಿಡುವುದು, ಸರೆಂಡರ್ ಆಗಿಬಿಡುವುದು. ಮಾಯೆ ಸರೆಂಡರ್ ಆಯಿತೆಂದರೆ ಸದಾ ವಿಜಯಿಯಾಗೇ ಇರುತ್ತಾರೆ. ಅಂದಾಗ ಇದೇ ನಶೆಯಿರಲಿ ವಿಜಯ ನಮ್ಮ ಜನ್ಮಸಿದ್ಧ ಅಧಿಕಾರವಾಗಿದೆ. ಈ ಅಧಿಕಾರವನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಹೃದಯದಲ್ಲಿ ಈ ಸ್ಮøತಿ ಇಮರ್ಜ್ ಆಗಿರಲಿ ನಾವೇ ಕಲ್ಪ-ಕಲ್ಪದ ಶಕ್ತಿಯರು ಮತ್ತು ಪಾಂಡವರು ವಿಜಯಿಗಳಾಗಿದ್ದೆವು, ಆಗಿರುವೆವು ಮತ್ತೆ ಆಗುವೆವು.

ಸ್ಲೋಗನ್:
ಹೊಸ ಪ್ರಪಂಚದ ಸ್ಮøತಿಯಿಂದ ಸರ್ವ ಗುಣಗಳ ಆಹ್ವಾನ ಮಾಡಿ ಮತ್ತು ತೀವ್ರಗತಿಯಿಂದ ಮುಂದುವರೆಯಿರಿ.

ಸೂಚನೆ: ಇಂದು ತಿಂಗಳಿನ ಮೂರನೇ ರವಿವಾರ ಅಂತರರಾಷ್ಟ್ರೀಯ ಯೋಗ ದಿವಸವಾಗಿದೆ, ಎಲ್ಲಾ ಬ್ರಹ್ಮಾ ವತ್ಸರು ಸಂಘಟಿತ ರೂಪದಲ್ಲಿ ಸಂಜೆ 6.30ಯಿಂದ 7.30ರವರೆಗೆ ವಿಶೇಷ ಸಂತುಷ್ಟಮಣಿಯಾಗಿ ವಾಯುಮಂಡಲದಲ್ಲಿ ಸಂತುಷ್ಟತೆಯ ಕಿರಣಗಳನ್ನು ಹರಡಿಸಿರಿ. ಅಸಂತುಷ್ಟ ಆತ್ಮರಿಗೆ ಸಂತುಷ್ಟರಾಗಿರುವಂತಹ ಶಕ್ತಿ ಕೊಡಿ, ಮನಸ್ಸಾ ಸೇವೆಯನ್ನು ಮಾಡಿ.