20.10.25 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ತಂದೆಯು
ನಿಮಗೆ ಬಹಳ ರುಚಿಯಿಂದ ಓದಿಸಲು ಬಂದಿದ್ದಾರೆ, ನೀವೂ ಸಹ ರುಚಿಯಿಂದ ಓದಿರಿ, ನಶೆಯಿರಲಿ - ನಮಗೆ
ಓದಿಸುವವರು ಸ್ವಯಂ ಭಗವಂತನಾಗಿದ್ದಾರೆ”
ಪ್ರಶ್ನೆ:
ನೀವು
ಬ್ರಹ್ಮಾಕುಮಾರ-ಕುಮಾರಿಯರ ಉದ್ದೇಶ ಹಾಗೂ ಶುದ್ಧ ಭಾವನೆ ಯಾವುದಾಗಿದೆ?
ಉತ್ತರ:
ಕಲ್ಪದ 5000
ವರ್ಷಗಳ ಹಿಂದಿನ ತರಹ ಪುನಃ ಶ್ರೀಮತದನುಸಾರ ವಿಶ್ವದಲ್ಲಿ ಸುಖ ಮತ್ತು ಶಾಂತಿಯ ರಾಜ್ಯವನ್ನು
ಸ್ಥಾಪನೆ ಮಾಡುವುದೇ ನಿಮ್ಮ ಉದ್ದೇಶವಾಗಿದೆ. ನಿಮ್ಮ ಶುದ್ಧ ಭಾವನೆಯಾಗಿದೆ - ಶ್ರೀಮತದಂತೆ ನಾವು
ಇಡೀ ವಿಶ್ವದ ಸದ್ಗತಿ ಮಾಡುತ್ತೇವೆ, ನಾವು ಎಲ್ಲರಿಗೆ ಸದ್ಗತಿಯನ್ನು ಕೊಡುವವರಾಗಿದ್ದೇವೆಂದು ನೀವು
ನಶೆಯಿಂದ ಹೇಳುತ್ತೀರಿ. ನಿಮಗೆ ತಂದೆಯಿಂದ ಶಾಂತಿಯ ಪುರಸ್ಕಾರವು ಸಿಗುತ್ತದೆ. ನರಕವಾಸಿಗಳಿಂದ
ಸ್ವರ್ಗವಾಸಿಗಳಾಗುವುದೇ ಪುರಸ್ಕಾರವನ್ನು ಪಡೆಯುವುದಾಗಿದೆ.
ಓಂ ಶಾಂತಿ.
ವಿದ್ಯಾರ್ಥಿಗಳು ಓದುವಾಗ ಖುಷಿ-ಖುಷಿಯಿಂದ ಓದುತ್ತಾರೆ, ಶಿಕ್ಷಕರೂ ಸಹ ಬಹಳ ಖುಷಿಯಿಂದ, ರುಚಿಯಿಂದ
ಓದಿಸುತ್ತಾರೆ. ಆತ್ಮಿಕ ಮಕ್ಕಳಿಗೆ ಇದು ತಿಳಿದಿದೆ - ಬೇಹದ್ದಿನ ತಂದೆಯು ಶಿಕ್ಷಕರೂ ಆಗಿದ್ದಾರೆ.
ಅವರು ನಮಗೆ ಬಹಳ ರುಚಿಯಿಂದ ಓದಿಸುತ್ತಾರೆ. ಆ ವಿದ್ಯೆಯಲ್ಲಾದರೆ ತಂದೆಯೇ ಬೇರೆ, ಶಿಕ್ಷಕರೇ
ಬೇರೆಯಿರುತ್ತಾರೆ, ಓದಿಸುತ್ತಾರೆ. ಕೆಲಕೆಲವರಿಗೆ ತಮ್ಮ ತಂದೆಯೇ ಶಿಕ್ಷಕರಾಗಿದ್ದರೆ ತಮ್ಮ ಮಗು
ಓದುತ್ತಿರುವ ಕಾರಣ ಬಹಳ ರುಚಿಯಿಂದ ಓದಿಸುತ್ತಾರೆ ಏಕೆಂದರೆ ರಕ್ತ ಸಂಬಂಧವಿರುತ್ತದೆಯಲ್ಲವೆ.
ತನ್ನವರೆಂದು ತಿಳಿದು ಬಹಳ ರುಚಿಯಿಂದ ಓದಿಸುತ್ತಾರೆ. ಈ ತಂದೆಯು ನಿಮಗೆ ಎಷ್ಟು ರುಚಿಯಿಂದ
ಓದಿಸುತ್ತಾರೆಂದ ಮೇಲೆ ಮಕ್ಕಳೂ ಸಹ ಬಹಳ ರುಚಿಯಿಂದ ಓದಬೇಕಾಗಿದೆ, ಸ್ವಯಂ ತಂದೆಯೇ ಓದಿಸುತ್ತಾರೆ
ಮತ್ತು ಇದೊಂದೇ ಬಾರಿ ಓದಿಸುತ್ತಾರೆ ಆದ್ದರಿಂದ ಮಕ್ಕಳಿಗೆ ಬಹಳ ಉಮ್ಮಂಗವಿರಬೇಕು. ಭಗವಂತ ತಂದೆಯೇ
ನಮಗೆ ಓದಿಸುತ್ತಾರೆ ಮತ್ತು ಪ್ರತಿಯೊಂದು ಮಾತನ್ನು ಬಹಳ ಚೆನ್ನಾಗಿ ತಿಳಿಸುತ್ತಿರುತ್ತಾರೆ. ಕೆಲವು
ಮಕ್ಕಳಿಗೆ ಓದುತ್ತಾ-ಓದುತ್ತಾ ವಿಚಾರಗಳು ಬರುತ್ತವೆ - ಇದೇನು ಡ್ರಾಮಾದಲ್ಲಿ ಈ ಆವಾಗಮನ (ಜನನ-ಮರಣ)ದ
ಚಕ್ರವಿದೆ, ಈ ನಾಟಕವನ್ನು ರಚಿಸಿದ್ದಾದರೂ ಏಕೆ? ಇದರಿಂದೇನು ಲಾಭ? ಕೇವಲ ಈ ಚಕ್ರದಲ್ಲಿಯೇ
ಸುತ್ತುತ್ತಿರುತ್ತೇವೆ, ಇದರಿಂದ ಮುಕ್ತರಾಗುವುದು ಒಳ್ಳೆಯದು ಎಂದು ತಿಳಿಯುತ್ತಾರೆ. ಈ 84 ಜನ್ಮಗಳ
ಚಕ್ರವನ್ನು ಸುತ್ತುತ್ತಲೇ ಇರಬೇಕಾಗಿದೆ ಎಂಬುದನ್ನು ನೋಡಿದಾಗ ಇಂತಿಂತಹ ಸಂಕಲ್ಪಗಳು ಬರುತ್ತವೆ,
ಭಗವಂತನು ಇಂತಹ ಆಟವನ್ನು ಏಕೆ ರಚಿಸಿದರು, ಯಾವ ಚಕ್ರದಿಂದ ನಾವು ಮುಕ್ತರಾಗುವುದಕ್ಕೇ ಸಾಧ್ಯವಿಲ್ಲ.
ಇದಕ್ಕಿಂತಲೂ ಮೋಕ್ಷವು ಸಿಕ್ಕಿದರೆ ಒಳ್ಳೆಯದೆಂದು ಕೆಲವು ಮಕ್ಕಳಿಗೆ ಸಂಕಲ್ಪಗಳು ಬರುತ್ತವೆ. ಈ
ಆವಾಗಮನದಿಂದ, ಸುಖ-ದುಃಖದಿಂದ ಮುಕ್ತರಾಗಬೇಕೆಂದು ತಿಳಿದುಕೊಳ್ಳುತ್ತಾರೆ ಆದರೆ ತಂದೆಯು
ತಿಳಿಸುತ್ತಾರೆ - ಇದೆಂದಿಗೂ ಸಾಧ್ಯವಿಲ್ಲ. ಮೋಕ್ಷವನ್ನು ಪಡೆಯಲು ಪ್ರಯತ್ನ ಪಡುವುದೇ
ವ್ಯರ್ಥವಾಗುತ್ತದೆ. ತಂದೆಯು ತಿಳಿಸಿದ್ದಾರೆ - ಯಾವ ಆತ್ಮನೂ ಪಾತ್ರದಿಂದ ಮುಕ್ತರಾಗಲು
ಸಾಧ್ಯವಿಲ್ಲ. ಆತ್ಮದಲ್ಲಿ ಅವಿನಾಶಿ ಪಾತ್ರವು ತುಂಬಲ್ಪಟ್ಟಿದೆ. ಇದು ಅನಾದಿ-ಅವಿನಾಶಿಯಾಗಿದೆ.
ಸಂಪೂರ್ಣ ನಿಖರ ಪಾತ್ರಧಾರಿಗಳಿದ್ದಾರೆ, ಒಬ್ಬರೂ ಹೆಚ್ಚು-ಕಡಿಮೆಯಿರಲು ಸಾಧ್ಯವಿಲ್ಲ. ನೀವು
ಮಕ್ಕಳಿಗೆ ಸಂಪೂರ್ಣ ಜ್ಞಾನವಿದೆ. ಈ ಡ್ರಾಮಾದ ಪಾತ್ರದಿಂದ ಯಾರೂ ಮುಕ್ತರಾಗಲು ಸಾಧ್ಯವಿಲ್ಲ.
ಮೋಕ್ಷವನ್ನು ಪಡೆಯುವುದಕ್ಕೂ ಸಾಧ್ಯವಿಲ್ಲ. ಎಲ್ಲಾ ಧರ್ಮದವರು ನಂಬರ್ವಾರ್ ಬರಲೇಬೇಕಾಗಿದೆ. ಇದು
ಮಾಡಿ-ಮಾಡಲ್ಪಟ್ಟ ಅವಿನಾಶಿ ನಾಟಕವೆಂದು ತಂದೆಯು ತಿಳಿಸುತ್ತಾರೆ. ನೀವೂ ಸಹ ಹೇಳುತ್ತೀರಿ - ಬಾಬಾ,
ಹೇಗೆ ನಾವು 84 ಜನ್ಮಗಳ ಚಕ್ರವನ್ನು ಸುತ್ತುತ್ತೇವೆ ಎಂಬುದನ್ನು ಈಗ ಅರಿತುಕೊಂಡೆವು. ಮೊಟ್ಟ
ಮೊದಲಿಗೆ ಯಾರು ಬರುತ್ತಾರೆ, ಅವರೇ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾರೆ. ಕೊನೆಯಲ್ಲಿ ಬರುವವರದು
ಅವಶ್ಯವಾಗಿ ಕಡಿಮೆ ಜನ್ಮಗಳಿರುತ್ತವೆ ಎಂಬುದನ್ನೂ ಸಹ ತಿಳಿದುಕೊಳ್ಳುತ್ತೀರಿ. ಇಲ್ಲಂತೂ
ಪುರುಷಾರ್ಥ ಮಾಡಬೇಕಾಗಿದೆ. ಹಳೆಯ ಪ್ರಪಂಚದಿಂದ ಹೊಸ ಪ್ರಪಂಚವು ಅವಶ್ಯವಾಗಿ ಆಗಬೇಕಾಗಿದೆ. ತಂದೆಯು
ಪ್ರತಿಯೊಂದು ಮಾತನ್ನು ಪದೇ-ಪದೇ ತಿಳಿಸುತ್ತಿರುತ್ತಾರೆ ಏಕೆಂದರೆ ಹೊಸ-ಹೊಸ ಮಕ್ಕಳು
ಬರುತ್ತಿರುತ್ತಾರೆ. ಅಂದಮೇಲೆ ಅವರಿಗೆ ಹಿಂದಿನ ವಿದ್ಯೆಯನ್ನು ಯಾರು ಓದಿಸುವರು, ಆದ್ದರಿಂದ ತಂದೆಯು
ಹೊಸ-ಹೊಸ ಮಕ್ಕಳನ್ನು ನೋಡಿ ಮತ್ತೆ ಹಳೆಯ (ಹಿಂದಿನ) ಮಾತುಗಳನ್ನೇ ಪುನರಾವರ್ತಿಸುತ್ತಿರುತ್ತಾರೆ.
ನಿಮ್ಮ ಬುದ್ಧಿಯಲ್ಲಿ
ಸಂಪೂರ್ಣ ಜ್ಞಾನವಿದೆ. ಆರಂಭದಿಂದ ಹಿಡಿದು ನಾವು ಹೇಗೆ ಪಾತ್ರವನ್ನಭಿನಯಿಸುತ್ತಾ ಬಂದಿದ್ದೇವೆಂದು
ತಿಳಿದುಕೊಂಡಿದ್ದೀರಿ. ಹೇಗೆ ನಂಬರ್ವಾರ್ ಬರುತ್ತಾರೆ, ಎಷ್ಟು ಜನ್ಮಗಳನ್ನು ತೆಗೆದುಕೊಳ್ಳುತ್ತಾರೆ
ಎಂಬುದನ್ನು ನೀವು ಯಥಾರ್ಥವಾಗಿ ತಿಳಿದುಕೊಂಡಿದ್ದೀರಿ. ಈ ಸಮಯದಲ್ಲಿಯೇ ತಂದೆಯು ಬಂದು ಜ್ಞಾನದ
ಮಾತುಗಳನ್ನು ತಿಳಿಸುತ್ತಾರೆ. ಸತ್ಯಯುಗದಲ್ಲಂತೂ ಪ್ರಾಲಬ್ಧವಿರುತ್ತದೆ ಆದ್ದರಿಂದ ಈ ಸಮಯದಲ್ಲಿಯೇ
ನಿಮಗೆ ತಿಳಿಸಲಾಗುತ್ತದೆ. ಗೀತೆಯಲ್ಲಿಯೂ ಆರಂಭದಲ್ಲಿ ಮತ್ತು ಕೊನೆಯಲ್ಲಿ ಇದೇ ಮಾತು ಬರುತ್ತದೆ -
ಮನ್ಮನಾಭವ. ಪದವಿಯನ್ನು ಪಡೆಯುವುದಕ್ಕಾಗಿ ನಿಮಗೆ ಓದಿಸಲಾಗುತ್ತದೆ. ನೀವೀಗ ರಾಜರಾಗಲು ಪುರುಷಾರ್ಥ
ಮಾಡುತ್ತಿದ್ದೀರಿ. ಅನ್ಯ ಧರ್ಮದವರಂತೂ ನಂಬರ್ವಾರ್ ಬರುತ್ತಾರೆ. ಧರ್ಮ ಸ್ಥಾಪಕರ ಹಿಂದೆ ಎಲ್ಲರೂ
ಬರಬೇಕಾಗುತ್ತದೆ. ಅವರದು ರಾಜಧಾನಿಯ ಮಾತಿಲ್ಲ. ಒಂದೇ ಗೀತಾ ಶಾಸ್ತ್ರವಾಗಿದೆ. ಇದಕ್ಕೆ ಬಹಳ
ಮಹಿಮೆಯಿದೆ. ಭಾರತದಲ್ಲಿಯೇ ತಂದೆಯು ಬಂದು ತಿಳಿಸುತ್ತಾರೆ ಮತ್ತು ಎಲ್ಲರ ಸದ್ಗತಿ ಮಾಡುತ್ತಾರೆ.
ಎಲ್ಲಾ ಧರ್ಮ ಸ್ಥಾಪಕರು ಯಾರೆಲ್ಲಾ ಬರುವರೋ ಅವರು ಮರಣ ಹೊಂದಿದಾಗ ದೊಡ್ಡ-ದೊಡ್ಡ ತೀರ್ಥ
ಸ್ಥಾನಗಳನ್ನಾಗಿ ಮಾಡಿ ಬಿಡುತ್ತಾರೆ. ವಾಸ್ತವದಲ್ಲಿ ಎಲ್ಲರ ತೀರ್ಥ ಸ್ಥಾನವು ಈ ಭಾರತವೇ ಆಗಿದೆ
ಇಲ್ಲಿ ಬೇಹದ್ದಿನ ತಂದೆಯು ಬರುತ್ತಾರೆ. ತಂದೆಯು ಭಾರತದಲ್ಲಿಯೇ ಬಂದು ಸರ್ವರ ಸದ್ಗತಿ ಮಾಡುತ್ತಾರೆ.
ತಂದೆಯು ತಿಳಿಸುತ್ತಾರೆ - ನೀವು ನನ್ನನ್ನು ಮುಕ್ತಿದಾತ, ಮಾರ್ಗದರ್ಶಕನೆಂದು ಹೇಳುತ್ತೀರಲ್ಲವೆ.
ನಾನು ನಿಮಗೆ ಈ ಹಳೆಯ ಪ್ರಪಂಚ, ದುಃಖದ ಪ್ರಪಂಚದಿಂದ ಮುಕ್ತಗೊಳಿಸಿ ಶಾಂತಿಧಾಮ, ಸುಖಧಾಮದಲ್ಲಿ
ಕರೆದುಕೊಂಡು ಹೋಗುತ್ತೇನೆ. ತಂದೆಯು ನಮ್ಮನ್ನು ಶಾಂತಿಧಾಮ, ಸುಖಧಾಮಕ್ಕೆ ಕರೆದುಕೊಂಡು ಹೋಗುತ್ತಾರೆ
ಎಂಬುದು ಮಕ್ಕಳಿಗೆ ತಿಳಿದಿದೆ. ಉಳಿದೆಲ್ಲರೂ ಶಾಂತಿಧಾಮಕ್ಕೆ ಹೋಗುತ್ತಾರೆ. ತಂದೆಯು ಬಂದು
ದುಃಖದಿಂದ ಮುಕ್ತರನ್ನಾಗಿ ಮಾಡುತ್ತಾರೆ, ಅವರಿಗಂತೂ ಜನನ-ಮರಣವಿಲ್ಲ. ತಂದೆಯು ಬರುತ್ತಾರೆ ಮತ್ತೆ
ಹೊರಟು ಹೋಗುತ್ತಾರೆ. ಅವರು ಮರಣ ಹೊಂದಿದರೆಂದು ಹೇಳುವುದಿಲ್ಲ. ತಂದೆಯದು ದಿವ್ಯ ಅವತರಣೆಯಾಗಿದೆ.
ಹೇಗೆ ಆ ಶಿವಾನಂದರಿಗಾಗಿ ಶರೀರವನ್ನು ಬಿಟ್ಟರೆಂದು ಹೇಳುತ್ತಾರೆ, ಮತ್ತೆ ಕ್ರಿಯಾಕರ್ಮಗಳನ್ನು
ಮಾಡುತ್ತಾರೆ ಆದರೆ ಶಿವ ತಂದೆಯು ಹೋದ ಮೇಲೆ ಇವರ ಕ್ರಿಯಾ ಕರ್ಮ ಸಮಾರಂಭ ಏನನ್ನೂ ಆಚರಣೆ
ಮಾಡುವಂತಿಲ್ಲ. ಅವರು ಬರುವುದೂ ಸಹ ತಿಳಿಯುವುದಿಲ್ಲ, ಕ್ರಿಯಾ ಕರ್ಮಗಳ ಮಾತೂ ಇಲ್ಲ. ಮತ್ತೆಲ್ಲಾ
ಮನುಷ್ಯರಿಗೆ ಕ್ರಿಯಾ ಕರ್ಮಗಳನ್ನು ಮಾಡುತ್ತಾರೆ. ತಂದೆಗೆ ಇದ್ಯಾವುದೂ ಇಲ್ಲ ಏಕೆಂದರೆ ಅವರಿಗೆ
ಶರೀರವೇ ಇಲ್ಲ. ಎಲ್ಲಾ ಮನುಷ್ಯರು ಸಾಸಿವೆಯ ತರಹ ನುಚ್ಚು ನೂರಾಗಿ ಸಿಡಿದು ಸಮಾಪ್ತಿಯಾಗುತ್ತಾರೆ.
ಸತ್ಯಯುಗದಲ್ಲಿ ಈ ಜ್ಞಾನದ ಮಾತುಗಳಿರುವುದಿಲ್ಲ. ಇವು ಈಗಲೇ ನಡೆಯುತ್ತದೆ. ಮತ್ತೆಲ್ಲರೂ
ಭಕ್ತಿಯನ್ನೇ ಕಲಿಸುತ್ತಾರೆ. ಅರ್ಧಕಲ್ಪ ಭಕ್ತಿಯಾಗಿದೆ, ಅರ್ಧಕಲ್ಪದ ನಂತರ ತಂದೆಯು ಬಂದು ಜ್ಞಾನದ
ಆಸ್ತಿಯನ್ನು ಕೊಡುತ್ತಾರೆ. ಜ್ಞಾನವು ಸತ್ಯಯುಗದ ಜೊತೆ ಬರುವುದಿಲ್ಲ. ಅಲ್ಲಿ ತಂದೆಯನ್ನು ನೆನಪು
ಮಾಡುವ ಅವಶ್ಯಕತೆಯೇ ಇರುವುದಿಲ್ಲ, ಮುಕ್ತಿಯಲ್ಲಿರುತ್ತೀರಿ. ಅಲ್ಲಿ ನೆನಪು ಮಾಡಲಾಗುತ್ತದೆಯೇ?
ದುಃಖದ ದೂರುಗಳೇ ಅಲ್ಲಿರುವುದಿಲ್ಲ, ಭಕ್ತಿಯೂ ಸಹ ಮೊದಲು ಅವ್ಯಭಿಚಾರಿ ನಂತರ ವ್ಯಭಿಚಾರಿಯಾಗುತ್ತದೆ.
ಈ ಸಮಯದಲ್ಲಿ ಅತೀ ವ್ಯಭಿಚಾರಿ ಭಕ್ತಿಯಿದೆ, ಇದಕ್ಕೆ ರೌರವ ನರಕವೆಂದು ಹೇಳಲಾಗುತ್ತದೆ. ಒಮ್ಮೆಲೆ
ಸಂಪೂರ್ಣ ನರಕವಾಗುತ್ತದೆ, ಮತ್ತೆ ತಂದೆಯು ಬಂದು ಸಂಪೂರ್ಣ ಸ್ವರ್ಗವನ್ನಾಗಿ ಮಾಡುತ್ತಾರೆ. ಈ
ಸಮಯದಲ್ಲಿ 100% ದುಃಖವಿದೆ, ನಂತರ ಅಲ್ಲಿ 100% ಸುಖ-ಶಾಂತಿಯಿರುವುದು. ಆತ್ಮವು ಹೋಗಿ ತನ್ನ
ಮನೆಯಲ್ಲಿ ವಿಶ್ರಾಂತಿಯನ್ನು ಪಡೆಯುತ್ತದೆ. ತಿಳಿಸುವುದು ಬಹಳ ಸಹಜವಾಗಿದೆ, ತಂದೆಯು ತಿಳಿಸುತ್ತಾರೆ
- ಯಾವಾಗ ಹೊಸ ಪ್ರಪಂಚದ ಸ್ಥಾಪನೆ ಮಾಡಿ ಹಳೆಯದರ ವಿನಾಶ ಮಾಡಬೇಕಾಗುವುದೋ ಆಗಲೇ ನಾನು ಬರುತ್ತೇನೆ.
ಇಷ್ಟು ದೊಡ್ಡ ಕಾರ್ಯವನ್ನು ಒಬ್ಬರೇ ಮಾಡಲು ಸಾಧ್ಯವಿಲ್ಲ. ಸಹಯೋಗಿಗಳೂ ಬಹಳ ಜನ ಬೇಕಲ್ಲವೆ. ಈ
ಸಮಯದಲ್ಲಿ ನೀವು ತಂದೆಗೆ ಸಹಯೋಗಿ ಮಕ್ಕಳಾಗಿದ್ದೀರಿ. ವಿಶೇಷವಾಗಿ ಭಾರತದ ಸತ್ಯ ಸೇವೆ ಮಾಡುತ್ತೀರಿ.
ಸತ್ಯ ತಂದೆಯು ಸತ್ಯ ಸೇವೆಯನ್ನು ಕಲಿಸುತ್ತಾರೆ. ತಮ್ಮ ಭಾರತದ ಮತ್ತು ವಿಶ್ವದ ಕಲ್ಯಾಣ ಮಾಡುತ್ತೀರಿ
ಅಂದಮೇಲೆ ಎಷ್ಟು ರುಚಿಯಿಂದ ಓದಬೇಕು! ತಂದೆಯು ಎಷ್ಟು ರುಚಿಯಿಂದ ಸರ್ವರ ಸದ್ಗತಿ ಮಾಡುತ್ತಾರೆ.
ಈಗಲೂ ಸಹ ಸರ್ವರ ಸದ್ಗತಿ ಖಂಡಿತ ಆಗಬೇಕಾಗಿದೆ. ಇದು ಶುದ್ಧ ಅಹಂಕಾರ, ಶುದ್ಧ ಭಾವನೆಯಾಗಿದೆ.
ನೀವು ಸತ್ಯ-ಸತ್ಯವಾದ
ಸೇವೆ ಮಾಡುತ್ತೀರಿ ಆದರೆ ಗುಪ್ತ. ಆತ್ಮವು ಶರೀರದ ಮೂಲಕ ಮಾಡುತ್ತದೆ, ನಿಮ್ಮೊಂದಿಗೆ ಬಹಳ ಮಂದಿ
ಕೇಳುತ್ತಾರೆ - ನೀವು ಬ್ರಹ್ಮಾಕುಮಾರ-ಕುಮಾರಿಯರ ಉದ್ದೇಶವೇನು? ಆಗ ತಿಳಿಸಿ-
ಬ್ರಹ್ಮಾಕುಮಾರ-ಕುಮಾರಿಯರ ಉದ್ದೇಶವೇ ಆಗಿದೆ, ವಿಶ್ವದಲ್ಲಿ ಸತ್ಯಯುಗೀ ಸುಖ-ಶಾಂತಿಯ
ಸ್ವರಾಜ್ಯವನ್ನು ಸ್ಥಾಪನೆ ಮಾಡುವುದು. ನಾವು ಪ್ರತೀ 5000 ವರ್ಷಗಳ ನಂತರ ಶ್ರೀಮತದಂತೆ ವಿಶ್ವದಲ್ಲಿ
ಶಾಂತಿಯನ್ನು ಸ್ಥಾಪನೆ ಮಾಡಿ ವಿಶ್ವ ಶಾಂತಿಯ ಬಹುಮಾನವನ್ನು ತೆಗೆದುಕೊಳ್ಳುತ್ತೇವೆ. ಯಥಾ ರಾಜ-ರಾಣಿ
ತಥಾ ಪ್ರಜೆ ಎಲ್ಲರೂ ಬಹುಮಾನವನ್ನು ತೆಗೆದುಕೊಳ್ಳುತ್ತಾರೆ. ನರಕವಾಸಿಗಳಿಂದ ಸ್ವರ್ಗವಾಸಿಗಳಾಗುವುದು
ಚಿಕ್ಕ ಬಹುಮಾನವೇ! ಅವರು ಶಾಂತಿಯ ಪುರಸ್ಕಾರವನ್ನು ಪಡೆದು ಖುಷಿಯಾಗುತ್ತಿರುತ್ತಾರೆ ಆದರೆ
ಸಿಗುವುದೇನೂ ಇಲ್ಲ. ವಿಶ್ವದ ರಾಜ್ಯಭಾಗ್ಯದ ಸತ್ಯ-ಸತ್ಯವಾದ ಪುರಸ್ಕಾರವನ್ನು ನಾವೀಗ ತಂದೆಯಿಂದ
ಪಡೆಯುತ್ತಿದ್ದೇವೆ, ನಮ್ಮ ಭಾರತವು ಶ್ರೇಷ್ಠ ದೇಶವಾಗಿದೆ ಎಂದು ಹೇಳುತ್ತಾರಲ್ಲವೆ. ಎಷ್ಟೊಂದು
ಮಹಿಮೆ ಮಾಡುತ್ತಾರೆ! ನಾವು ಭಾರತದ ಮಾಲೀಕರೆಂದು ಎಲ್ಲರೂ ತಿಳಿಯುತ್ತಾರೆ ಆದರೆ ಎಲ್ಲಿ
ಮಾಲೀಕರಾಗಿದ್ದಾರೆ? ನೀವು ಮಕ್ಕಳು ಈಗ ತಂದೆಯ ಶ್ರೀಮತದಿಂದ ರಾಜ್ಯವನ್ನು ಸ್ಥಾಪನೆ ಮಾಡುತ್ತೀರಿ,
ಯಾವುದೇ ಆಯುಧಗಳಿಲ್ಲ. ದೈವೀ ಗುಣಗಳನ್ನು ಧಾರಣೆ ಮಾಡುತ್ತೀರಿ ಆದ್ದರಿಂದ ನಿಮ್ಮದೇ ಗಾಯನ,
ಪೂಜೆಯಿದೆ. ಜಗದಂಬೆಗೆ ನೋಡಿ, ಎಷ್ಟೊಂದು ಪೂಜೆಯಾಗುತ್ತದೆ ಆದರೆ ಜಗದಂಬೆ ಯಾರು? ಬ್ರಾಹ್ಮಣಿಯೇ
ಅಥವಾ ದೇವತೆಯೇ? ಇದನ್ನು ತಿಳಿದುಕೊಂಡಿಲ್ಲ. ಅಂಬಾ, ಕಾಳಿ, ದುರ್ಗಾ, ಸರಸ್ವತಿ ಇತ್ಯಾದಿ.... ಹೀಗೆ
ಬಹಳಷ್ಟು ಹೆಸರುಗಳಿವೆ. ಇಲ್ಲಿಯೂ (ಅಬು ಪರ್ವತ) ಕೆಳಗೆ ಜಗದಂಬೆಯ ಚಿಕ್ಕದಾದ ಮಂದಿರವಿದೆ.
ಜಗದಂಬೆಗೆ ಎಷ್ಟೊಂದು ಭುಜಗಳನ್ನು ತೋರಿಸುತ್ತಾರೆ ಆದರೆ ಈ ರೀತಿಯಂತೂ ಇಲ್ಲ, ಇದಕ್ಕೇ ಅಂಧ
ಶ್ರದ್ಧೆಯೆಂದು ಹೇಳಲಾಗುತ್ತದೆ. ಕ್ರೈಸ್ಟ್, ಬುದ್ಧ, ಮೊದಲಾದವರು ಬಂದರು, ಅವರು ತಮ್ಮ-ತಮ್ಮ
ಧರ್ಮವನ್ನು ಸ್ಥಾಪನೆ ಮಾಡಿದರು. ತಿಥಿ-ತಾರೀಖು ಎಲ್ಲವನ್ನೂ ತಿಳಿಸುತ್ತಾರೆ, ಅಲ್ಲಿ ಅಂಧ
ಶ್ರದ್ಧೆಯ ಮಾತೇ ಇಲ್ಲ. ಆದರೆ ಇಲ್ಲಿ ಭಾರತವಾಸಿಗಳಿಗೆ ನಮ್ಮ ಧರ್ಮವು ಯಾವಾಗ ಮತ್ತು ಯಾರು ಸ್ಥಾಪನೆ
ಮಾಡಿದರು ಎಂಬುದೇನೂ ತಿಳಿದಿಲ್ಲ ಆದ್ದರಿಂದ ಅಂಧಶ್ರದ್ಧೆಯೆಂದು ಹೇಳಲಾಗುತ್ತದೆ. ನೀವೀಗ
ಪೂಜಾರಿಗಳಾಗಿದ್ದೀರಿ, ನಂತರ ಪೂಜ್ಯರಾಗುತ್ತೀರಿ. ನಿಮ್ಮ ಆತ್ಮವು ಪೂಜ್ಯವಾದಾಗ ಶರೀರವೂ
ಪೂಜ್ಯವಾಗುತ್ತದೆ. ನಿಮ್ಮ ಆತ್ಮಕ್ಕೂ ಪೂಜೆ ನಡೆಯುತ್ತದೆ, ದೇವತೆಗಳಾದಾಗಲೂ ಪೂಜೆ ನಡೆಯುತ್ತದೆ.
ತಂದೆಯಂತೂ ನಿರಾಕಾರನಾಗಿದ್ದಾರೆ, ಅವರು ಸದಾ ಪೂಜ್ಯರಾಗಿದ್ದಾರೆ. ಅವರೆಂದಿಗೂ
ಪೂಜಾರಿಯಾಗುವುದಿಲ್ಲ. ತಾವೇ ಪೂಜ್ಯ ಮತ್ತು ತಾವೇ ಪೂಜಾರಿಯೆಂದು ನೀವು ಮಕ್ಕಳಿಗಾಗಿಯೇ
ಹೇಳಲಾಗುತ್ತದೆ. ತಂದೆಯಂತೂ ಸದಾ ಪೂಜ್ಯನಾಗಿದ್ದಾರೆ. ಇಲ್ಲಿ ಬಂದು ತಂದೆಯು ಸತ್ಯವಾದ ಸೇವೆ
ಮಾಡುತ್ತಾರೆ. ಎಲ್ಲರಿಗೂ ಸದ್ಗತಿ ಕೊಡುತ್ತಾರೆ. ತಂದೆಯು ತಿಳಿಸುತ್ತಾರೆ. ಈಗ ನನ್ನೊಬ್ಬನನ್ನೇ
ನೆನಪು ಮಾಡಿ, ಮತ್ತ್ಯಾವುದೇ ದೇಹಧಾರಿಯನ್ನು ನೆನಪು ಮಾಡಬೇಡಿ. ಇಲ್ಲಂತೂ ದೊಡ್ಡ-ದೊಡ್ಡ
ಲಕ್ಷಾದೀಶ್ವರ, ಕೋಟ್ಯಾಧೀಶ್ವರರು ಹೋಗಿ ಅಲ್ಲಾ-ಅಲ್ಲಾ ಎಂದು ಹೇಳುತ್ತಾರೆ, ಎಷ್ಟೊಂದು
ಅಂಧಶ್ರದ್ಧೆಯಿದೆ. ತಂದೆಯು ನಿಮಗೆ ಹಮ್ ಸೋ, ಸೋ ಹಮ್ನ ಅರ್ಥವನ್ನು ತಿಳಿಸುತ್ತಾರೆ. ಇದಕ್ಕೆ ಅವರು
ಶಿವೋಹಂ (ನಾನೇ ಶಿವ), ಆತ್ಮವೇ ಪರಮಾತ್ಮನೆಂದು ಹೇಳಿ ಬಿಡುತ್ತಾರೆ. ಅದನ್ನು ತಂದೆಯು ಈಗ ತಿದ್ದಿ
ತಿಳಿಸುತ್ತಿದ್ದಾರೆ. ಈಗ ನಿರ್ಣಯ ಮಾಡಿ - ಭಕ್ತಿಮಾರ್ಗದಲ್ಲಿ ಸತ್ಯವನ್ನು ಕೇಳಿದ್ದೀರೋ ಅಥವಾ ನಾವು
ಸತ್ಯವನ್ನು ತಿಳಿಸುತ್ತೇವೆಯೋ? ಹಮ್ ಸೋ, ಸೋ ಹಮ್ನ ಅರ್ಥವು ಬಹಳ ಉದ್ದಗಲವಾಗಿದೆ. ನಾವೇ
ಬ್ರಾಹ್ಮಣರು, ದೇವತೆಗಳು, ಕ್ಷತ್ರಿಯರು... ಈಗ ಹಮ್ ಸೋ, ಸೋ ಹಮ್ನ ಅರ್ಥವು ಯಾವುದು ಸರಿಯಾಗಿದೆ?
ನಾವು ಆತ್ಮಗಳು ಹೀಗೆ ಚಕ್ರದಲ್ಲಿ ಬರುತ್ತೇವೆ. ವಿರಾಟ ರೂಪದ ಚಿತ್ರವೂ ಇದೆ, ಅದರಲ್ಲಿ ಶಿಖೆಯಾದ
ಬ್ರಾಹ್ಮಣರು ಮತ್ತು ತಂದೆಯನ್ನು ತೋರಿಸಿಲ್ಲ. ದೇವತೆಗಳು ಎಲ್ಲಿಂದ ಬಂದರು? ಎಲ್ಲಿಂದ ಜನ್ಮ ಪಡೆದರು?
ಏಕೆಂದರೆ ಕಲಿಯುಗದಲ್ಲಂತೂ ಶೂದ್ರ ವರ್ಣವಿದೆ, ಸತ್ಯಯುಗದಲ್ಲಿ ಕೂಡಲೇ ದೇವತಾ ವರ್ಣವು ಹೇಗಾಯಿತು,
ಏನನ್ನೂ ತಿಳಿದುಕೊಳ್ಳುವುದಿಲ್ಲ. ಭಕ್ತಿಮಾರ್ಗದಲ್ಲಿ ಮನುಷ್ಯರು ಎಷ್ಟೊಂದು ಸಿಕ್ಕಿ
ಹಾಕಿಕೊಂಡಿರುತ್ತಾರೆ. ಯಾರಾದರೂ ಗ್ರಂಥವನ್ನು ಓದಿದರು, ಸಂಕಲ್ಪ ಬಂದಿತೆಂದರೆ ಮಂದಿರವನ್ನು
ಕಟ್ಟಿಸಿ ಗ್ರಂಥವನ್ನು ಓದಿ ತಿಳಿಸುತ್ತಾ ಹೋಗುತ್ತಾರೆ. ಅಲ್ಲಿಗೆ ಅನೇಕರು ಬರುತ್ತಾ ಹೋಗುತ್ತಾರೆ.
ಬಹಳಷ್ಟು ಮಂದಿ ಅನುಯಾಯಿಗಳಾಗಿ ಬಿಡುತ್ತಾರೆ ಆದರೆ ಲಾಭವೇನೂ ಇಲ್ಲ, ಬಹಳಷ್ಟು ಅಂಗಡಿಗಳಾಗಿವೆ. ಈಗ
ಇವೆಲ್ಲಾ ಅಂಗಡಿಗಳು ಸಮಾಪ್ತಿಯಾಗುತ್ತವೆ. ಈ ವ್ಯಾಪಾರವೆಲ್ಲವೂ ಭಕ್ತಿಮಾರ್ಗದಲ್ಲಿದೆ. ಇವುಗಳಿಂದ
ಬಹಳ ಹಣ ಸಂಪಾದನೆ ಮಾಡುತ್ತಾರೆ. ನಾವು ಬ್ರಹ್ಮಯೋಗಿಗಳು, ತತ್ವಯೋಗಿಗಳೆಂದು ಸನ್ಯಾಸಿಗಳು
ಹೇಳುತ್ತಾರೆ. ಹೇಗೆ ಭಾರತವಾಸಿಗಳು ವಾಸ್ತವದಲ್ಲಿ ದೇವಿ-ದೇವತಾ ಧರ್ಮದವರಾಗಿದ್ದಾರೆ ಆದರೆ ಹಿಂದೂ
ಧರ್ಮದವರೆಂದು ಹೇಳಿಕೊಳ್ಳುತ್ತಾರೆ. ಹಾಗೆಯೇ ಬ್ರಹ್ಮ್ ಕೂಡ ತತ್ವವಾಗಿದೆ, ಅಲ್ಲಿ ಆತ್ಮಗಳು
ವಾಸಿಸುತ್ತಾರೆ, ಅದನ್ನು ಅವರು ಬ್ರಹ್ಮಜ್ಞಾನಿ, ತತ್ವಜ್ಞಾನಿಗಳೆಂದು ಹೆಸರನ್ನಿಟ್ಟಿದ್ದಾರೆ.
ಬ್ರಹ್ಮ್ತತ್ವವು ಇರುವ ಸ್ಥಾನವಾಗಿದೆ, ಆದ್ದರಿಂದ ತಂದೆಯು ತಿಳಿಸುತ್ತಾರೆ - ಎಷ್ಟು ದೊಡ್ಡ
ತಪ್ಪನ್ನು ಮಾಡಿ ಬಿಟ್ಟಿದ್ದಾರೆ, ಅದೆಲ್ಲವೂ ಅವರ ಭ್ರಮೆಯಾಗಿದೆ. ನಾನು ಬಂದು ಎಲ್ಲಾ ಭ್ರಮೆಯನ್ನು
ದೂರ ಮಾಡುತ್ತೇನೆ. ಭಕ್ತಿಮಾರ್ಗದಲ್ಲಿ ಹೇ ಪ್ರಭು, ನಿನ್ನ ಗತಿ-ಮತವು ಭಿನ್ನವೆಂದು ಹೇಳುತ್ತಾರೆ.
ಗತಿ (ಮುಕ್ತಿ) ಯನ್ನು ಯಾರೂ ಕೊಡಲು ಸಾಧ್ಯವಿಲ್ಲ. ಅನೇಕಾನೇಕ ಮತಗಳಿವೆ ಆದರೆ ಇಲ್ಲಿ ತಂದೆಯ
ಮತವಂತೂ ಎಷ್ಟು ಕಮಾಲ್ ಮಾಡಿ ಬಿಡುತ್ತದೆ. ಇಡೀ ವಿಶ್ವವನ್ನೇ ಪರಿವರ್ತನೆ ಮಾಡಿಬಿಡುತ್ತದೆ. ಈಗ
ನೀವು ಮಕ್ಕಳ ಬುದ್ಧಿಯಲ್ಲಿದೆ – ಇಷ್ಟೆಲ್ಲಾ ಧರ್ಮಗಳು ಹೇಗೆ ಬರುತ್ತವೆ ಮತ್ತು ಆತ್ಮಗಳೆಲ್ಲರೂ
ತಮ್ಮ-ತಮ್ಮ ವಿಭಾಗದಲ್ಲಿ ಹೋಗಿ ವಿರಾಜಮಾನರಾಗುತ್ತಾರೆ. ಇದೆಲ್ಲವೂ ಡ್ರಾಮಾದಲ್ಲಿ ನಿಗಧಿಯಾಗಿದೆ,
ಇದೂ ಸಹ ಮಕ್ಕಳಿಗೆ ತಿಳಿದಿದೆ, ದಿವ್ಯ ದೃಷ್ಟಿದಾತನು ತಂದೆಯೊಬ್ಬರೇ ಆಗಿದ್ದಾರೆ. ತಂದೆಗೆ ಹೇಳಿದರು
- ಈ ದಿವ್ಯ ದೃಷ್ಟಿಯ ಕೀಲಿಯನ್ನು ನಮಗೆ ಕೊಟ್ಟು ಬಿಡಿ, ನಾವು ಯಾರಿಗಾದರೂ ಸಾಕ್ಷಾತ್ಕಾರ
ಮಾಡಿಸುತ್ತೇವೆ ಎಂದು, ಅದಕ್ಕೆ ತಂದೆಯು ಹೇಳಿದರು - ಇಲ್ಲ, ಈ ಕೀಲಿಯು ಯಾರಿಗೂ ಸಿಗಲು
ಸಾಧ್ಯವಿಲ್ಲ. ಇದಕ್ಕೆ ಪ್ರತಿಯಾಗಿ ನಾನು ನಿಮಗೆ ವಿಶ್ವದ ರಾಜ್ಯಭಾಗ್ಯವನ್ನು ಕೊಡುತ್ತೇನೆ ಆದರೆ
ನಾನು ತೆಗೆದುಕೊಳ್ಳುವುದಿಲ್ಲ. ನನ್ನ ಪಾತ್ರವೇ ಸಾಕ್ಷಾತ್ಕಾರ ಮಾಡಿಸುವುದಾಗಿದೆ.
ಸಾಕ್ಷಾತ್ಕಾರವಾದರೆ ಎಷ್ಟು ಖುಷಿಯಾಗಿ ಬಿಡುತ್ತಾರೆ! ಆದರೆ ಸಿಗುವುದೇನೂ ಇಲ್ಲ.
ಸಾಕ್ಷಾತ್ಕಾರದಿಂದ ನಿರೋಗಿಯಾಗಿ ಬಿಡುತ್ತಾರೆ ಅಥವಾ ಧನ ಸಿಗುತ್ತದೆಯೆಂದಲ್ಲ. ಮೀರಾಳಿಗೆ
ಸಾಕ್ಷಾತ್ಕಾರವಾಯಿತು ಆದರೆ ಮುಕ್ತಿಯನ್ನು ಪಡೆದಳೆ! ಮೀರಾ ವೈಕುಂಠದಲ್ಲಿದ್ದಳೆಂದು ಮನುಷ್ಯರು
ತಿಳಿಯುತ್ತಾರೆ ಆದರೆ ವೈಕುಂಠ, ಕೃಷ್ಣ ಪುರಿಯಾದರೂ ಎಲ್ಲಿದೆ, ಇದೆಲ್ಲವೂ ಸಾಕ್ಷಾತ್ಕಾರವಾಗಿದೆ.
ತಂದೆಯು ಕುಳಿತು ಇದೆಲ್ಲಾ ಮಾತುಗಳನ್ನು ತಿಳಿಸುತ್ತಾರೆ. ಇವರಿಗೂ (ಬ್ರಹ್ಮಾ) ಸಹ ಮೊಟ್ಟ ಮೊದಲು
ವಿಷ್ಣುವಿನ ಸಾಕ್ಷಾತ್ಕಾರವಾಯಿತು, ಆಗ ಬಹಳ ಖುಷಿಯಾಗಿ ಬಿಟ್ಟರು. ನಾನು ಮಹಾರಾಜನಾಗುತ್ತೇನೆ ಎಂದು
ಯಾವಾಗ ನೋಡಿದರು ಮತ್ತು ವಿನಾಶವನ್ನೂ ನೋಡಿದರು, ರಾಜಧಾನಿಯನ್ನೂ ನೋಡಿದರು ಆಗ ನಿಶ್ಚಯವಾಯಿತು -
ಓಹೋ! ನಾನಂತೂ ವಿಶ್ವದ ಮಾಲೀಕನಾಗುತ್ತೇನೆಂದು. ತಂದೆಯ ಪ್ರವೇಶತೆಯಾಯಿತು ಅಷ್ಟೇ, ಬಾಬಾ
ಇದೆಲ್ಲವನ್ನೂ ತಾವು ತೆಗೆದುಕೊಳ್ಳಿ. ನನಗಂತೂ ವಿಶ್ವದ ರಾಜ್ಯಭಾಗ್ಯವು ಬೇಕು ಎಂದು ಹೇಳಿ ಬಿಟ್ಟರು.
ನೀವೂ ಸಹ ಈ ವ್ಯಾಪಾರ ಮಾಡಲು ಬಂದಿದ್ದೀರಲ್ಲವೆ. ಯಾರು ಜ್ಞಾನವನ್ನು ಪಡೆಯುವರೋ ಅವರಿಂದ ಭಕ್ತಿಯು
ಬಿಟ್ಟು ಹೋಗುತ್ತದೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ.
ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ದೈವೀ
ಗುಣಗಳನ್ನು ಧಾರಣೆ ಮಾಡಿ ಶ್ರೀಮತದಂತೆ ಭಾರತದ ಸತ್ಯ ಸೇವೆ ಮಾಡಬೇಕಾಗಿದೆ. ತನ್ನ, ಭಾರತದ ಮತ್ತು
ಇಡೀ ವಿಶ್ವದ ಕಲ್ಯಾಣವನ್ನು ಬಹಳ-ಬಹಳ ರುಚಿಯಿಂದ ಮಾಡಬೇಕಾಗಿದೆ.
2. ಡ್ರಾಮಾದ ಅನಾದಿ
ಅವಿನಾಶಿ ಪೂರ್ವ ನಿಶ್ಚಿತವನ್ನು ಯಥಾರ್ಥವಾಗಿ ತಿಳಿದುಕೊಂಡು ಯಾವುದೇ ಸಮಯವನ್ನು ವ್ಯರ್ಥ
ಮಾಡುವಂತಹ ಪುರುಷಾರ್ಥ ಮಾಡಬಾರದು. ವ್ಯರ್ಥ ಸಂಕಲ್ಪಗಳನ್ನು ನಡೆಸಬಾರದು.
ವರದಾನ:
ದೀಪ ರಾಜ ತಂದೆಯ
ಮೂಲಕ ಅಮರ ಜ್ಯೋತಿಯ ಶುಭಾಷಯಗಳನ್ನು ತೆಗೆದುಕೊಳ್ಳುವಂತಹ ಸದಾ ಅಮರ ಭವ.
ಭಕ್ತರು ತಾವು ಚೈತನ್ಯ
ದೀಪಗಳ ನೆನಪಾರ್ಥ ಜಡ ದೀಪಗಳ ದೀಪ ಮಾಲೆಯನ್ನಾಗಿ ಆಚರಿಸುತ್ತಾರೆ. ತಾವು ಬೆಳಗಿರುವ ಚೈತನ್ಯ ದೀಪಗಳು,
ಬಾಲಕರಾಗಿ ದೀಪಗಳ ಮಾಲೀಕನಿಂದ ಮಂಗಳ ಮಿಲನ ಆಚರಿಸುತ್ತಿದ್ದೀರಿ. ಬಾಪ್ದಾದಾರವರು ತಾವು ಮಕ್ಕಳ
ಮಸ್ತಕದಲ್ಲಿ ಬೆಳಗಿರುವ ದೀಪವನ್ನು ನೋಡುತ್ತಿದ್ದಾರೆ. ತಾವು ಅವಿನಾಶಿ, ಅಮರ ಜ್ಯೋತಿ ಸ್ವರೂಪ
ಮಕ್ಕಳು ದೀಪರಾಜ ತಂದೆಯ ಮೂಲಕ ಶುಭಾಷಯಗಳನ್ನು ತೆಗೆದುಕೊಳ್ಳುತ್ತಾ ಸದಾ ಅಮರಭವದ ವರದಾನ ಪ್ರಾಪ್ತಿ
ಮಾಡಿಕೊಳ್ಳುತ್ತಿದ್ದೀರಿ. ಇದು ದೀಪ ರಾಜ ತಂದೆ ಮತ್ತು ದೀಪ ರಾಣಿಯರ ಮಿಲನದ ನೆನಪಾರ್ಥವೇ
ದೀಪಾವಳಿಯಾಗಿದೆ.
ಸ್ಲೋಗನ್:
“ತಾವು ಮತ್ತು
ತಂದೆ” ಇಬ್ಬರೂ ಈ ರೀತಿಯ ಕಂಭೈಂಡ್ ಆಗಿರಿ ಯಾರನ್ನು ಯಾರೇ ಮೂರನೇ ವ್ಯಕ್ತಿ ಬೇರೆ ಮಾಡಲು
ಸಾಧ್ಯವಿಲ್ಲ.
ಅವ್ಯಕ್ತ ಸೂಚನೆ:-
ಸ್ವಯಂನ ಮತ್ತು ಸರ್ವರ ಪ್ರತಿ ಮನಸ್ಸಾ ಮೂಲಕ ಯೋಗದ ಶಕ್ತಿಗಳ ಪ್ರಯೋಗ ಮಾಡಿ.
ವರ್ತಮಾನ ಸಮಯದ ಪ್ರಮಾಣ
ಸರ್ವ ಆತ್ಮರು ಪ್ರತ್ಯಕ್ಷ ಫಲ ಅರ್ಥಾತ್ ಪ್ರಾಕ್ಟಿಕಲ್ ಪ್ರೂಫ್ ನೋಡಲು ಬಯಸುತ್ತಾರೆ. ಅದಕ್ಕೆ ತನು,
ಮನ, ಕರ್ಮ ಮತ್ತು ಸಂಪರ್ಕ-ಸಂಬಂಧದಲ್ಲಿ ಶಾಂತಿಯ ಶಕ್ತಿಯ ಪ್ರಯೋಗ ಮಾಡಿ ನೋಡಿರಿ. ಶಾಂತಿಯ
ಶಕ್ತಿಯಿಂದ ನಿಮ್ಮ ಸಂಕಲ್ಪ ವೈಯರ್ಲೆಸ್ ಗಿಂತಲೂ ತೀವ್ರ ಯಾವುದೇ ಆತ್ಮನ ಪ್ರತಿ ತಲುಪಲು ಸಾಧ್ಯ. ಈ
ಶಕ್ತಿಯ ವಿಶೇಷ ಯಂತ್ರವಾಗಿದೆ ‘ಶುಭ ಸಂಕಲ್ಪ’ ಈ ಸಂಕಲ್ಪದ ಯಂತ್ರದ ಮೂಲಕ ಏನೋ ಬೇಕೋ ಅದನ್ನು
ಸಿದ್ಧಿ ಸ್ವರೂಪದಲ್ಲಿ ನೋಡಬಹುದು.