21.01.25 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ -
ಬೆಳಗ್ಗೆ-ಬೆಳಗ್ಗೆ ಎದ್ದು ತಂದೆಯೊಂದಿಗೆ ಮಧುರ ವಾರ್ತಾಲಾಪ ಮಾಡಿ, ತಂದೆಯು ಯಾವ ಶಿಕ್ಷಣಗಳನ್ನು
ನೀಡಿದ್ದಾರೆಯೋ ಅವನ್ನು ಮೆಲುಕುಹಾಕುತ್ತಾ ಇರಿ”
ಪ್ರಶ್ನೆ:
ಇಡೀ ದಿನವು
ಖುಷಿ-ಖುಷಿಯಲ್ಲಿ ಕಳೆಯಬೇಕು - ಅದಕ್ಕಾಗಿ ಯಾವ ಯುಕ್ತಿಯನ್ನು ರಚಿಸಬೇಕು?
ಉತ್ತರ:
ಪ್ರತಿನಿತ್ಯ
ಅಮೃತವೇಳೆ ಎದ್ದು ಜ್ಞಾನದ ಮಾತುಗಳನ್ನು ಚಿಂತನೆ ಮಾಡಿ ತಮ್ಮೊಂದಿಗೆ ತಾವೇ ಮಾತನಾಡಿಕೊಳ್ಳಿ. ಇಡೀ
ನಾಟಕದ ಆದಿ-ಮಧ್ಯ-ಅಂತ್ಯದ ಸ್ಮರಣೆ ಮಾಡಿ, ತಂದೆಯನ್ನು ನೆನಪು ಮಾಡಿ. ಇದರಿಂದ ಇಡೀ ದಿನವು
ಖುಷಿಯಲ್ಲಿ ಕಳೆಯುವುದು. ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ರಿಹರ್ಸಲ್ ಮಾಡುತ್ತಾರೆ, ನೀವು
ಮಕ್ಕಳೂ ಸಹ ತಮ್ಮ ರಿಹರ್ಸಲ್ ಮಾಡಿ.
ಗೀತೆ:
ಇಂದು
ಅಂಧಕಾರದಲ್ಲಿರುವರು ಮಾನವರು......
ಓಂ ಶಾಂತಿ.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳು ಗೀತೆಯನ್ನು ಕೇಳಿದಿರಿ. ನೀವು ಭಗವಂತನ
ಮಕ್ಕಳಾಗಿದ್ದೀರಲ್ಲವೆ. ಭಗವಂತನು ನಮಗೆ ಮಾರ್ಗವನ್ನು ತೋರಿಸುತ್ತಿದ್ದಾರೆಂದು ನೀವು ಮಕ್ಕಳಿಗೆ
ತಿಳಿದಿದೆ. ನಾವು ಅಂಧಕಾರದಲ್ಲಿದ್ದೇವೆಂದು ಮನುಷ್ಯರು ಕೂಗುತ್ತಿರುತ್ತಾರೆ ಏಕೆಂದರೆ
ಭಕ್ತಿಮಾರ್ಗವೇ ಅಂಧಕಾರದ ಮಾರ್ಗವಾಗಿದೆ. ಭಕ್ತರು ಹೇಳುತ್ತಾರೆ - ನಾವು ನಿಮ್ಮೊಂದಿಗೆ ಮಿಲನ ಮಾಡಲು
ತಿರುಗಾಡುತ್ತಿದ್ದೇವೆ. ಕೆಲವೊಮ್ಮೆ ತೀರ್ಥಯಾತ್ರೆಗಳಲ್ಲಿ, ಕೆಲವೊಮ್ಮೆ ದಾನ-ಪುಣ್ಯಗಳನ್ನು
ಮಾಡುತ್ತಾ, ಮಂತ್ರಗಳನ್ನು ಜಪಿಸುತ್ತಾರೆ. ಅನೇಕ ಪ್ರಕಾರದ ಮಂತ್ರಗಳನ್ನು ಕೊಡುತ್ತಾರೆ ಆದರೂ ಸಹ
ನಾವು ಅಂಧಕಾರದಲ್ಲಿದ್ದೇವೆ, ಯಾವುದು ಬೆಳಕಾಗಿದೆ ಎಂಬುದೇನನ್ನೂ ತಿಳಿದುಕೊಂಡಿಲ್ಲ ಏಕೆಂದರೆ
ಅಂಧಕಾರದಲ್ಲಿದ್ದಾರೆ. ಈಗ ನೀವಂತೂ ಅಂಧಕಾರದಲ್ಲಿಲ್ಲ. ನೀವು ವೃಕ್ಷದಲ್ಲಿ ಮೊದಲಿಗೆ ಬರುತ್ತೀರಿ.
ಹೊಸ ಪ್ರಪಂಚದಲ್ಲಿ ಹೋಗಿ ರಾಜ್ಯ ಮಾಡುತ್ತೀರಿ ನಂತರ ಏಣಿಯನ್ನಿಳಿಯುತ್ತೀರಿ. ಇದರ ಮಧ್ಯದಲ್ಲಿ
ಇಸ್ಲಾಮಿ, ಬೌದ್ಧಿ, ಕ್ರಿಶ್ಚಿಯನ್ನರು ಬರುತ್ತಾರೆ. ಈಗ ತಂದೆಯು ಮತ್ತೆ ಸಸಿಯನ್ನು
ನೆಡುತ್ತಿದ್ದಾರೆ. ಮುಂಜಾನೆ ಎದ್ದು ಇಂತಿಂತಹ ಜ್ಞಾನದ ಮಾತುಗಳನ್ನು ಮನನ ಮಾಡಬೇಕು, ಇದು ಎಷ್ಟು
ವಿಚಿತ್ರವಾದ ನಾಟಕವಾಗಿದೆ! ಈ ನಾಟಕದ ಕಾಲಾವಧಿಯು 5000 ವರ್ಷಗಳದ್ದಾಗಿದೆ. ಸತ್ಯಯುಗದ ಆಯಸ್ಸು
ಇಷ್ಟಾಗಿದೆ, ತ್ರೇತಾಯುಗದ ಆಯಸ್ಸು ಇಷ್ಟಾಗಿದೆ...... ತಂದೆಯಲ್ಲಿಯೂ ಸಹ ಇದರ ಸಂಪೂರ್ಣ
ಜ್ಞಾನವಿದೆಯಲ್ಲವೆ. ಇದನ್ನು ಪ್ರಪಂಚದಲ್ಲಿ ಮತ್ತ್ಯಾರೂ ತಿಳಿದುಕೊಂಡಿಲ್ಲ ಅಂದಾಗ ಮಕ್ಕಳು ಮುಂಜಾನೆ
ಎದ್ದು ಮೊದಲನೆಯದಾಗಿ ತಂದೆಯನ್ನು ನೆನಪು ಮಾಡಬೇಕು, ಖುಷಿಯಲ್ಲಿ ಜ್ಞಾನದ ಸ್ಮರಣೆ ಮಾಡಬೇಕು. ಈಗ
ನಾವು ಇಡೀ ನಾಟಕದ ಆದಿ-ಮಧ್ಯ-ಅಂತ್ಯವನ್ನು ಅರಿತುಕೊಂಡಿದ್ದೇವೆ. ತಂದೆಯು ತಿಳಿಸುತ್ತಾರೆ - ಕಲ್ಪದ
ಆಯಸ್ಸು 5000 ವರ್ಷಗಳಾಗಿದೆ, ಇದಕ್ಕೆ ಲಕ್ಷಾಂತರ ವರ್ಷಗಳೆಂದು ಮನುಷ್ಯರು ಹೇಳುತ್ತಾರೆ. ಇದು
ಎಷ್ಟು ವಿಚಿತ್ರವಾದ ನಾಟಕವಾಗಿದೆ. ತಂದೆಯು ಬಂದು ಯಾವ ಶಿಕ್ಷಣವನ್ನು ನೀಡುತ್ತಾರೆಯೋ ಅದನ್ನು ಪುನಃ
ಮೆಲುಕು ಹಾಕಬೇಕು, ರಿಹರ್ಸಲ್ ಮಾಡಬೇಕು. ಹೇಗೆ ವಿದ್ಯಾರ್ಥಿಗಳು ವಿದ್ಯೆಯ ರಿಹರ್ಸಲ್
ಮಾಡುತ್ತಾರಲ್ಲವೆ!
ನೀವು ಮಧುರಾತಿ ಮಧುರ
ಮಕ್ಕಳು ಇಡೀ ನಾಟಕವನ್ನು ಅರಿತುಕೊಂಡಿದ್ದೀರಿ. ತಂದೆಯು ಎಷ್ಟು ಸಹಜ ರೀತಿಯಲ್ಲಿ ತಿಳಿಸಿದ್ದಾರೆ -
ಮಕ್ಕಳೇ, ಇದು ಅನಾದಿ-ಅವಿನಾಶಿ ನಾಟಕವಾಗಿದೆ, ಇದರಲ್ಲಿ ಗೆಲ್ಲುತ್ತಾರೆ ಮತ್ತೆ ಸೋಲುತ್ತಾರೆ. ಈಗ
ಚಕ್ರವು ಪೂರ್ಣವಾಯಿತು, ನಾವೀಗ ಮನೆಗೆ ಹೋಗಬೇಕಾಗಿದೆ. ತಂದೆಯ ಆದೇಶವು ಸಿಕ್ಕಿದೆ, ನನ್ನನ್ನು
ನೆನಪು ಮಾಡಿ ಎಂದು. ಈ ನಾಟಕದ ಜ್ಞಾನವನ್ನು ಒಬ್ಬ ತಂದೆಯೇ ಕೊಡುತ್ತಾರೆ. ಲಕ್ಷಾಂತರ ವರ್ಷಗಳ
ನಾಟಕವು ಎಂದೂ ಇರುವುದಿಲ್ಲ. ನಾಟಕವು ಲಕ್ಷಾಂತರ ವರ್ಷಗಳದಾಗಿದ್ದರೆ ಯಾರಿಗೂ ನೆನಪಿರುವುದಿಲ್ಲ,
ಇದು 5000 ವರ್ಷಗಳ ಚಕ್ರವಾಗಿದೆ. ಇದೆಲ್ಲವೂ ನಿಮ್ಮ ಬುದ್ಧಿಯಲ್ಲಿದೆ. ಇದು ಎಷ್ಟು ಒಳ್ಳೆಯ ಸೋಲು
ಮತ್ತು ಗೆಲುವಿನ ಆಟವಾಗಿದೆ. ಮುಂಜಾನೆ ಎದ್ದು ಇಂತಿಂತಹ ವಿಚಾರಗಳು ನಡೆಯಬೇಕು. ತಂದೆಯು ನಮಗೆ
ರಾವಣನ ಮೇಲೆ ವಿಜಯವನ್ನು ಪ್ರಾಪ್ತಿ ಮಾಡಿಸುತ್ತಾರೆ. ಬೆಳಗ್ಗೆ-ಬೆಳಗ್ಗೆ ಎದ್ದು ತಮ್ಮೊಂದಿಗೆ
ಮಾತನಾಡಿಕೊಳ್ಳಿ ಆಗ ಅದೇ ಹವ್ಯಾಸವಾಗಿಬಿಡುವುದು. ಈ ಬೇಹದ್ದಿನ ನಾಟಕವನ್ನು ಯಾರೂ ಅರಿತುಕೊಂಡಿಲ್ಲ.
ಪಾತ್ರಧಾರಿಗಳಾಗಿಯೂ ಸಹ ಆದಿ-ಮಧ್ಯ-ಅಂತ್ಯವನ್ನೇ ತಿಳಿದುಕೊಂಡಿಲ್ಲ. ಈಗ ನಾವು ತಂದೆಯ ಮೂಲಕ
ಯೋಗ್ಯರಾಗುತ್ತಿದ್ದೇವೆ.
ತಂದೆಯು ತಾವು ಮಕ್ಕಳನ್ನು
ತಮ್ಮ ಸಮಾನರನ್ನಾಗಿ ಮಾಡುತ್ತಾರೆ. ತಮ್ಮ ಸಮಾನರನ್ನಾಗಿ ಅಷ್ಟೇ ಅಲ್ಲ ತಂದೆಯಂತೂ ಮಕ್ಕಳನ್ನು ತನ್ನ
ಹೆಗಲಿನ ಮೇಲೆ ಕೂರಿಸಿಕೊಳ್ಳುತ್ತಾರೆ. ತಂದೆಗೆ ಮಕ್ಕಳಮೇಲೆ ಎಷ್ಟೊಂದು ಪ್ರೀತಿಯಿದೆ! ಎಷ್ಟು
ಚೆನ್ನಾಗಿ ತಿಳಿಸಿಕೊಡುತ್ತಾರೆ - ಮಧುರಾತಿ ಮಧುರ ಮಕ್ಕಳೇ, ನಾನು ನಿಮ್ಮನ್ನು ವಿಶ್ವದ
ಮಾಲೀಕರನ್ನಾಗಿ ಮಾಡುತ್ತೇನೆ. ನಾನು ಆಗುವುದಿಲ್ಲ, ನೀವು ಮಕ್ಕಳನ್ನೇ ಮಾಡುತ್ತೇನೆ. ನೀವು
ಮಕ್ಕಳನ್ನು ಪವಿತ್ರರನ್ನಾಗಿ ಮಾಡಿ ಮತ್ತೆ ಶಿಕ್ಷಕನಾಗಿ ಓದಿಸುತ್ತೇನೆ ನಂತರ ಸದ್ಗತಿಗಾಗಿ
ಜ್ಞಾನವನ್ನು ಕೊಟ್ಟು ನಿಮ್ಮನ್ನು ಶಾಂತಿಧಾಮ-ಸುಖಧಾಮದ ಮಾಲೀಕರನ್ನಾಗಿ ಮಾಡುತ್ತೇನೆ. ನಾನಂತೂ ಹೋಗಿ
ನಿರ್ವಾಣಧಾಮದಲ್ಲಿ ಕುಳಿತುಬಿಡುತ್ತೇನೆ. ಲೌಕಿಕದಲ್ಲಿಯೂ ಸಹ ಪರಿಶ್ರಮಪಟ್ಟು ಹಣ ಸಂಪಾದನೆ ಮಾಡಿ
ಎಲ್ಲವನ್ನೂ ಮಕ್ಕಳಿಗೆ ಕೊಟ್ಟು ತಾನು ವಾನಪ್ರಸ್ಥದಲ್ಲಿ ಹೋಗಿ ಭಜನೆ ಇತ್ಯಾದಿಗಳನ್ನು ಮಾಡುತ್ತಾರೆ
ಆದರೆ ಇಲ್ಲಂತೂ ತಂದೆಯು ತಿಳಿಸುತ್ತಾರೆ - ಒಂದುವೇಳೆ ನಿಮ್ಮದು ವಾನಪ್ರಸ್ಥ ಸ್ಥಿತಿ (ವೃದ್ಧಾಪ್ಯ)
ಯಾಗಿದ್ದರೆ ಮಕ್ಕಳಿಗೆ ತಿಳಿಸಿ - ನೀವು ಈ ಸೇವೆಯಲ್ಲಿ ತೊಡಗಬೇಕಾಗಿದೆ. ಮತ್ತೆ
ಗೃಹಸ್ಥವ್ಯವಹಾರದಲ್ಲಿ ಸಿಕ್ಕಿಹಾಕಿಕೊಳ್ಳಬಾರದು. ನೀವು ತಮ್ಮ ಮತ್ತು ಅನ್ಯರ ಕಲ್ಯಾಣ ಮಾಡುತ್ತಾ
ಇರಿ, ಈಗ ನಿಮ್ಮೆಲ್ಲರ ವಾನಪ್ರಸ್ಥ ಸ್ಥಿತಿಯಾಗಿದೆ. ತಂದೆಯು ತಿಳಿಸುತ್ತಾರೆ - ನಾನು ನಿಮ್ಮನ್ನು
ವಾಣಿಯಿಂದ ದೂರ ಕರೆದುಕೊಂಡು ಹೋಗಲು ಬಂದಿದ್ದೇನೆ. ಅಪವಿತ್ರ ಆತ್ಮಗಳು ಅಲ್ಲಿಗೆ ಹೋಗಲು
ಸಾಧ್ಯವಿಲ್ಲ - ಇದನ್ನು ತಂದೆಯು ಸನ್ಮುಖದಲ್ಲಿ ತಿಳಿಸುತ್ತಾರೆ, ಸನ್ಮುಖದಲ್ಲಿಯೇ ಮಜಾ ಬರುತ್ತದೆ.
ಸೇವಾಕೇಂದ್ರಗಳಲ್ಲಂತೂ ಮಕ್ಕಳು ಕುಳಿತು ತಿಳಿಸುತ್ತಾರೆ. ಇಲ್ಲಿ ತಂದೆಯು ಸನ್ಮುಖದಲ್ಲಿದ್ದಾರೆ
ಆದ್ದರಿಂದಲೇ ಮಧುಬನದ ಮಹಿಮೆಯಿದೆಯಲ್ಲವೆ ಆದ್ದರಿಂದ ತಂದೆಯು ತಿಳಿಸುತ್ತಾರೆ - ಮಕ್ಕಳೇ, ಮುಂಜಾನೆ
ಏಳುವ ಹವ್ಯಾಸವನ್ನಿಟ್ಟುಕೊಳ್ಳಿ. ಭಕ್ತಿಯನ್ನೂ ಸಹ ಮನುಷ್ಯರು ಮುಂಜಾನೆಯ ಸಮಯದಲ್ಲಿ ಎದ್ದು
ಮಾಡುತ್ತಾರೆ ಆದರೆ ಅದರಿಂದ ಆಸ್ತಿಯು ಸಿಗುವುದಿಲ್ಲ, ಆಸ್ತಿಯು ತಂದೆ ರಚಯಿತನಿಂದಲೇ ಸಿಗುತ್ತದೆ.
ರಚನೆಯಿಂದ ಎಂದೂ ಆಸ್ತಿಯು ಸಿಗುವುದಿಲ್ಲ ಆದ್ದರಿಂದಲೇ ಹೇಳುತ್ತಾರೆ - ನಾವು ರಚಯಿತ ಮತ್ತು ರಚನೆಯ
ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಂಡಿಲ್ಲ. ಒಂದುವೇಳೆ ತಿಳಿದುಕೊಂಡಿದ್ದೇ ಆದರೆ ಅದು ಪರಂಪರೆಯಿಂದ
ನಡೆದುಬರುತ್ತಿತ್ತು. ಮಕ್ಕಳು ಇದನ್ನೂ ಸಹ ತಿಳಿಸಬೇಕು - ನಾವು ಎಷ್ಟು ಶ್ರೇಷ್ಠಧರ್ಮದವರಾಗಿದ್ದೆವು
ಮತ್ತೆ ಹೇಗೆ ಧರ್ಮಭ್ರಷ್ಟರು-ಕರ್ಮಭ್ರಷ್ಟರಾಗಿದ್ದೇವೆ. ಮಾಯೆಯು ಬುದ್ಧಿಗೆ ಗಾಡ್ರೇಜ್ ಬೀಗವನ್ನು
ಹಾಕಿಬಿಡುತ್ತದೆ ಆದ್ದರಿಂದ ಭಗವಂತನಿಗೆ ಹೇಳುತ್ತಾರೆ - ತಾವು ಬುದ್ಧಿವಂತರಿಗೂ
ಬುದ್ಧಿವಂತರಾಗಿದ್ದೀರಿ, ಇವರ ಬುದ್ಧಿಯ ಬೀಗವನ್ನು ತೆರೆಯಿರಿ ಎಂದು ಈಗ ತಂದೆಯು ಸನ್ಮುಖದಲ್ಲಿ
ತಿಳಿಸುತ್ತಾರೆ. ನಾನು ಜ್ಞಾನಸಾಗರನಾಗಿದ್ದೇನೆ, ಇವರ ಮೂಲಕ ನಾನು ತಿಳಿಸಿಕೊಡುತ್ತೇನೆ. ಯಾವ
ಜ್ಞಾನ? ಈ ಸೃಷ್ಟಿಚಕ್ರದ ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ಮನುಷ್ಯರ್ಯಾರೂ ಕೊಡಲು ಸಾಧ್ಯವಿಲ್ಲ.
ತಂದೆಯು ಹೇಳುತ್ತಾರೆ -
ಸತ್ಸಂಗ ಮುಂತಾದುವುಗಳಲ್ಲಿ ಹೋಗುವುದಕ್ಕಿಂತ ಶಾಲೆಯಲ್ಲಿ ಓದುವುದಾದರೂ ಒಳ್ಳೆಯದು. ವಿದ್ಯೆಯು
ಆದಾಯದ ಮೂಲವಾಗಿದೆ. ಸತ್ಸಂಗಗಳಲ್ಲಿ ಏನೂ ಸಿಗುವುದಿಲ್ಲ. ದಾನ-ಪುಣ್ಯ ಮಾಡಿ. ಇದನ್ನು ಮಾಡಿ,
ಅದನ್ನು ಮಾಡಿ ಎಂದು ಹೇಳುತ್ತಾರೆ. ಅದರಲ್ಲಿ ಖರ್ಚೇ ಖರ್ಚು ಇದೆ. ಹಣವನ್ನು ಇಡಿ, ತಲೆಯನ್ನೂ
ಬಾಗಿಸಿ. ಹೀಗೆ ಹಣೆಯೇ ಸವೆದುಹೋಗುತ್ತದೆ. ಈಗ ನೀವು ಮಕ್ಕಳಿಗೆ ಯಾವ ಜ್ಞಾನವು ಸಿಗುತ್ತಿದೆಯೋ
ಇದನ್ನು ಸ್ಮರಣೆ ಮಾಡುವ ಹವ್ಯಾಸವನ್ನಿಡಿ ಮತ್ತು ಅನ್ಯರಿಗೂ ತಿಳಿಸಿಕೊಡಿ. ತಂದೆಯು ತಿಳಿಸುತ್ತಾರೆ
- ಈಗ ನೀವಾತ್ಮರಿಗೆ ಬೃಹಸ್ಪತಿಯ ದೆಶೆಯಿದೆ. ವೃಕ್ಷಪತಿ ಭಗವಂತನು ನಿಮಗೆ ಓದಿಸುತ್ತಿದ್ದಾರೆ
ಅಂದಮೇಲೆ ಎಷ್ಟೊಂದು ಖುಷಿಯಿರಬೇಕು! ಭಗವಂತನೇ ಓದಿಸಿ ನಮ್ಮನ್ನು ಭಗವಾನ್-ಭಗವತಿಯರನ್ನಾಗಿ
ಮಾಡುತ್ತಾರೆ. ಓಹೊ! ಇಂತಹ ತಂದೆಯನ್ನು ಎಷ್ಟು ನೆನಪು ಮಾಡುತ್ತೇವೆಯೋ ಅಷ್ಟು ವಿಕರ್ಮ
ವಿನಾಶವಾಗುತ್ತದೆ. ಹೀಗ್ಹೀಗೆ ವಿಚಾರಸಾಗರ ಮಂಥನ ಮಾಡುವ ಹವ್ಯಾಸವನ್ನಿಟ್ಟುಕೊಳ್ಳಬೇಕು. ತಾತನು
ನಮಗೆ ಈ ತಂದೆಯ ಮೂಲಕ ಆಸ್ತಿಯನ್ನು ಕೊಡುತ್ತಿದ್ದಾರೆ,ಸ್ವತಃ ತಿಳಿಸುತ್ತಾರೆ - ನಾನು ಈ ರಥವನ್ನು
ಆಧಾರವಾಗಿ ತೆಗೆದುಕೊಳ್ಳುತ್ತೇನೆ. ನಿಮಗೆ ಜ್ಞಾನವು ಸಿಗುತ್ತಿದೆಯಲ್ಲವೆ! ಜ್ಞಾನಗಂಗೆಯರು
ಜ್ಞಾನವನ್ನು ತಿಳಿಸಿ ಪವಿತ್ರರನ್ನಾಗಿ ಮಾಡುತ್ತಾರೋ ಅಥವಾ ನದಿಯ ನೀರೋ? ಈಗ ತಂದೆಯು ತಿಳಿಸುತ್ತಾರೆ
- ಮಕ್ಕಳೇ, ನೀವು ಭಾರತದ ಸತ್ಯ-ಸತ್ಯವಾದ ಸೇವೆ ಮಾಡುತ್ತೀರಿ, ಆ ಸಮಾಜ ಸೇವಕರಂತೂ ಮಿತವಾದ ಸೇವೆ
ಮಾಡುತ್ತಾರೆ ಆದರೆ ಇದು ಸತ್ಯ ಆತ್ಮೀಯ ಸೇವೆಯಾಗಿದೆ. ಭಗವಾನುವಾಚವನ್ನು ತಂದೆಯು ತಿಳಿಸುತ್ತಾರೆ,
ಭಗವಂತನೇ ಪುನರ್ಜನ್ಮರಹಿತನಾಗಿದ್ದಾರೆ. ಶ್ರೀಕೃಷ್ಣನಂತೂ ಪೂರ್ಣ 84 ಜನ್ಮಗಳನ್ನು
ತೆಗೆದುಕೊಳ್ಳುತ್ತಾನೆ. ಗೀತೆಯಲ್ಲಿ ಕೃಷ್ಣನ ಹೆಸರನ್ನು ಹಾಕಿದ್ದಾರೆ ಆದರೆ ನಾರಾಯಣನ ಹೆಸರನ್ನು
ಏಕೆ ಹಾಕುವುದಿಲ್ಲ? ಕೃಷ್ಣನೇ ನಾರಾಯಣನಾಗುತ್ತಾನೆಂಬುದು ಯಾರಿಗೂ ತಿಳಿದಿಲ್ಲ. ಶ್ರೀಕೃಷ್ಣನು
ರಾಜಕುಮಾರನಾಗಿದ್ದನು ನಂತರ ರಾಧೆಯೊಂದಿಗೆ ಸ್ವಯಂವರವಾಯಿತು, ಈಗ ನೀವು ಮಕ್ಕಳಿಗೆ ಜ್ಞಾನವು
ಸಿಕ್ಕಿದೆ, ಇದರಿಂದ ನೀವು ತಿಳಿದುಕೊಳ್ಳುತ್ತೀರಿ - ಶಿವತಂದೆಯು ನಮಗೆ ಓದಿಸುತ್ತಾರೆ, ಅವರು
ತಂದೆಯೂ ಆಗಿದ್ದಾರೆ, ಶಿಕ್ಷಕ-ಸದ್ಗುರುವೂ ಆಗಿದ್ದಾರೆ. ಸದ್ಗುರುವಾಗಿ ಸದ್ಗತಿಯನ್ನೂ ಕೊಡುತ್ತಾರೆ.
ಶ್ರೇಷ್ಠಾತಿಶ್ರೇಷ್ಠ ಭಗವಂತನು ಶಿವನೇ ಆಗಿದ್ದಾರೆ. ಅವರು ತಿಳಿಸುತ್ತಾರೆ - ನನ್ನ ನಿಂದನೆ
ಮಾಡುವವರಿಗೆ ಶ್ರೇಷ್ಠಪದವಿಯು ಸಿಗಲು ಸಾಧ್ಯವಿಲ್ಲ. ಒಂದುವೇಳೆ ಮಕ್ಕಳು ಓದಲಿಲ್ಲವೆಂದರೆ ಶಿಕ್ಷಕರ
ಗೌರವವನ್ನು ಕಳೆಯುತ್ತಾರೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ನೀವು ನನ್ನ ಗೌರವವನ್ನು ಕಳೆಯಬೇಡಿ,
ಓದುತ್ತಾ ಇರಿ. ಗುರಿ-ಧ್ಯೇಯವಂತೂ ಸನ್ಮುಖದಲ್ಲಿಯೇ ಇದೆ. ಸದ್ಗುರುವಿನ ನಿಂಧಕರಿಗೆ ಪದವಿಯು
ಸಿಗುವುದಿಲ್ಲ ಎನ್ನುವುದನ್ನು ಗುರುಗಳು ತಮಗಾಗಿ ಹೇಳಿಕೊಳ್ಳುತ್ತಾರೆ, ಇದರಿಂದ ಮನುಷ್ಯರು
ಹೆದರುತ್ತಾರೆ. ಶಾಪವು ಸಿಗಬಾರದೆಂದು ತಿಳಿದು ಗುರುವಿನಿಂದ ಸಿಕ್ಕಿರುವ ಮಂತ್ರವನ್ನೇ
ತಿಳಿಸುತ್ತಿರುತ್ತಾರೆ. ನೀವು ಗೃಹಸ್ಥವನ್ನು ಏಕೆ ಬಿಟ್ಟಿರಿ ಎಂದು ಸನ್ಯಾಸಿಗಳನ್ನು ಕೇಳಿದರೆ ಈ
ವ್ಯಕ್ತಮಾತುಗಳನ್ನು ಕೇಳಲೇಬೇಡಿ ಎಂದು ಹೇಳುತ್ತಾರೆ. ಅರೆ! ಏಕೆ ತಿಳಿಸುವುದಿಲ್ಲ? ನೀವು ಯಾರೆಂದು
ನಮಗೇನು ಗೊತ್ತಿದೆ? ಸೂಕ್ಷ್ಮಬುದ್ಧಿಯವರು ಹೀಗೆ ಮಾತನಾಡುತ್ತಾರೆ. ಅಜ್ಞಾನಕಾಲದಲ್ಲಿ ಕೆಲವರಿಗೆ
ನಶೆಯಿರುತ್ತದೆ, ಸ್ವಾಮಿ ತೀರ್ಥನಾಥರ ಅನನ್ಯ ಶಿಷ್ಯ ಸ್ವಾಮಿನಾರಾಯಣನಾಗಿದ್ದರು. ಅವರ ಗ್ರಂಥವನ್ನು
ಈ ಬ್ರಹ್ಮಾತಂದೆಯು ಓದಿದ್ದಾರೆ. ಇವರಿಗೆ ಎಲ್ಲವನ್ನೂ ಓದುವ ಆಸಕ್ತಿಯಿರುತ್ತಿತ್ತು. ಬಾಲ್ಯದಲ್ಲಿಯೇ
ವೈರಾಗ್ಯವು ಬರುತ್ತಿತ್ತು, ನಂತರ ಒಂದುಬಾರಿ ಸಿನೆಮಾವನ್ನು ನೋಡಿದರು ಮತ್ತೆ ವೃತ್ತಿಯೇ
ಚಂಚಲವಾಯಿತು, ಸಾಧುತನವೇ ಬದಲಾಯಿತು ಆದ್ದರಿಂದ ಈಗ ತಂದೆಯು ತಿಳಿಸುತ್ತಾರೆ - ಅವರೆಲ್ಲಾ ಗುರುಗಳು
ಭಕ್ತಿಮಾರ್ಗದವರಾಗಿದ್ದಾರೆ, ಸರ್ವರ ಸದ್ಗತಿದಾತನು ಒಬ್ಬರೇ ಆಗಿದ್ದಾರೆ. ಯಾರನ್ನು ಎಲ್ಲರೂ ನೆನಪು
ಮಾಡುತ್ತಾರೆ, ನನ್ನವರು ಒಬ್ಬ ಗಿರಿಧಾರಿ ಗೋಪಾಲ ಮತ್ತ್ಯಾರೂ ಇಲ್ಲವೆಂದು ಹಾಡುತ್ತಾರೆ, ಗಿರಿಧಾರಿ
ಕೃಷ್ಣನಿಗೆ ಹೇಳುತ್ತಾರೆ. ವಾಸ್ತವದಲ್ಲಿ ನಿಂದನೆ ಸಿಗುವುದು ಈ ಬ್ರಹ್ಮಾರವರಿಗೆ. ಕೃಷ್ಣನ ಆತ್ಮವು
ಅಂತಿಮದಲ್ಲಿ ಹಳ್ಳಿಯ ಬಾಲಕನ ಶರೀರವನ್ನು ತೆಗೆದುಕೊಂಡಿದೆ, ತಮೋಪ್ರಧಾನವಾಗಿದೆ ಆದ್ದರಿಂದ
ನಿಂದನೆಯನ್ನು ಸಹಿಸಬೇಕಾಯಿತು. ಮೂಲತಃ ಇವರೇ ಕೃಷ್ಣನ ಆತ್ಮನಲ್ಲವೆ! ಇವರು ಹಳ್ಳಿಯಲ್ಲಿ
ಬೆಳೆದಿದ್ದಾರೆ. ಮಾರ್ಗದಲ್ಲಿ ನಡೆಯುತ್ತಾ ಬ್ರಾಹ್ಮಣನು ಸಿಕ್ಕಿಹಾಕಿಕೊಂಡರು ಅರ್ಥಾತ್ ಯಾವಾಗ
ತಂದೆಯು ಇವರಲ್ಲಿ ಪ್ರವೇಶ ಮಾಡಿದರು ಅಂದಿನಿಂದ ಎಷ್ಟೊಂದು ನಿಂದನೆಯನ್ನು ಅನುಭವಿಸಿದರು!
ಅಮೇರಿಕಾದವರೆಗೆ ಗಾಳಿಸುದ್ಧಿಯು ಹೋಯಿತು. ಇದು ಎಷ್ಟು ವಿಚಿತ್ರವಾದ ಮಾತಾಗಿದೆ. ಈಗ ನೀವು
ತಿಳಿದುಕೊಂಡಿದ್ದೀರಿ ಆದ್ದರಿಂದ ಖುಷಿಯಾಗುತ್ತದೆ. ಈಗ ತಂದೆಯು ಈ ಚಕ್ರವು ಹೇಗೆ
ಸುತ್ತುತ್ತದೆಯೆಂಬುದನ್ನು ತಿಳಿಸುತ್ತಾರೆ. ನಾವು ಹೇಗೆ ಬ್ರಾಹ್ಮಣರಾಗಿದ್ದೆವು ನಂತರ ದೇವತಾ,
ಕ್ಷತ್ರಿಯ, ವೈಶ್ಯ, ಶೂದ್ರ....... ಇದು 84 ಜನ್ಮಗಳ ಚಕ್ರವಾಗಿದೆ. ಇದೆಲ್ಲವನ್ನೂ
ಸ್ಮೃತಿಯಲ್ಲಿಟ್ಟುಕೊಳ್ಳಬೇಕು. ರಚಯಿತ ಮತ್ತು ರಚನೆಯ ಆದಿ-ಮಧ್ಯ-ಅಂತ್ಯವನ್ನು
ತಿಳಿದುಕೊಳ್ಳಬೇಕಾಗಿದೆ, ಯಾವುದನ್ನು ಯಾರೂ ತಿಳಿದುಕೊಂಡಿಲ್ಲ. ನೀವು ಮಕ್ಕಳು
ತಿಳಿದುಕೊಳ್ಳುತ್ತೀರಿ - ನಾವು ವಿಶ್ವದ ಮಾಲೀಕರಾಗುತ್ತೇವೆ. ಇದರಲ್ಲಿ ಯಾವುದೇ ಕಷ್ಟವಿಲ್ಲ, ಆಸನ
ಇತ್ಯಾದಿಗಳನ್ನು ಹಾಕಿ ಎಂದು ಹೇಳುವುದಿಲ್ಲ. ಹಠಯೋಗವನ್ನು ಈ ರೀತಿ ಕಲಿಸುತ್ತಾರೆ ಅದರ ಮಾತೇ
ಕೇಳಬೇಡಿ. ಕೆಲಕೆಲವರ ಬುದ್ಧಿಯೇ ಹಾಳಾಗಿಬಿಡುತ್ತದೆ. ತಂದೆಯು ಎಷ್ಟು ಸಹಜವಾಗಿ ಸಂಪಾದನೆ
ಮಾಡಿಸುತ್ತಾರೆ. ಇದು 21 ಜನ್ಮಗಳಿಗಾಗಿ ಸತ್ಯಸಂಪಾದನೆಯಾಗಿದೆ. ನಿಮ್ಮ ಅಂಗೈಯಲ್ಲಿ ಸ್ವರ್ಗವಿದೆ,
ತಂದೆಯು ಮಕ್ಕಳಿಗಾಗಿ ಸ್ವರ್ಗದ ಉಡುಗೊರೆಯನ್ನು ಕೊಡುತ್ತಾರೆ. ಹೀಗೆ ಮತ್ತ್ಯಾವುದೇ ಮನುಷ್ಯರು
ಹೇಳಲು ಸಾಧ್ಯವಿಲ್ಲ. ತಂದೆಯೇ ಹೇಳುತ್ತಾರೆ, ಇವರ ಆತ್ಮವೂ ಸಹ ಕೇಳುತ್ತದೆ ಅಂದಾಗ ಮಕ್ಕಳು ಮುಂಜಾನೆ
ಎದ್ದು ಹೀಗೀಗೆ ವಿಚಾರ ಮಾಡಬೇಕು. ಭಕ್ತರೂ ಸಹ ಮುಂಜಾನೆಯಲ್ಲಿ ಎದ್ದು ಗುಪ್ತವಾಗಿ ಮಾಲೆಯನ್ನು
ಜಪಿಸುತ್ತಾರೆ, ಅದಕ್ಕೆ ಗೋಮುಖವೆಂದು ಹೇಳುತ್ತಾರೆ, ಅದರಲ್ಲಿ ಕೈಯನ್ನಿಟ್ಟು ಮಾಲೆಯನ್ನು
ಜಪಿಸುತ್ತಾರೆ. ರಾಮ-ರಾಮ.... ಎನ್ನುತ್ತಾ ಇದೇ ಮೊಳಗುತ್ತಿರುತ್ತದೆ. ವಾಸ್ತವದಲ್ಲಿ ತಂದೆಯನ್ನು
ನೆನಪು ಮಾಡುವುದು ಗುಪ್ತವಾಗಿದೆ, ಇದಕ್ಕೆ ಅಜಪಾಜಪವೆಂದು ಹೇಳಲಾಗುತ್ತದೆ. ಎಷ್ಟು ವಿಚಿತ್ರವಾದ
ನಾಟಕವಾಗಿದೆ, ಎಷ್ಟೊಂದು ಖುಷಿಯಿರುತ್ತದೆ. ಇದು ಬೇಹದ್ದಿನ ನಾಟಕವಾಗಿದೆ ಎಂಬುದು ನಿಮ್ಮ ವಿನಃ
ಮತ್ತ್ಯಾರ ಬುದ್ಧಿಯಲ್ಲಿಯೂ ಇಲ್ಲ. ನಿಮ್ಮಲ್ಲಿಯೂ ನಂಬರ್ವಾರ್ ಪುರುಷಾರ್ಥನುಸಾರವೇ ಇದೆ. ಇದು ಬಹಳ
ಸಹಜವಾಗಿದೆ. ಈಗ ನಮಗೆ ಭಗವಂತನು ಓದಿಸುತ್ತಾರೆ ಅಂದಮೇಲೆ ಕೇವಲ ಅವರನ್ನೇ ನೆನಪು ಮಾಡಬೇಕಾಗಿದೆ,
ಆಸ್ತಿಯೂ ಸಹ ಅವರಿಂದಲೇ ಸಿಗುತ್ತದೆ. ಆ ದಿನದಿಂದ ಇದನ್ನು ಬಿಟ್ಟುಬಿಟ್ಟೆವು ಏಕೆಂದರೆ ಮಧ್ಯದಲ್ಲಿ
ತಂದೆಯ ಪ್ರವೇಶತೆಯಾಯಿತಲ್ಲವೆ. ಎಲ್ಲವನ್ನು ಈ ಮಾತೆಯರಿಗೆ ಅರ್ಪಣೆ ಮಾಡಿಬಿಟ್ಟೆನು. ಇಷ್ಟು ದೊಡ್ಡ
ಸ್ಥಾಪನೆ ಮಾಡಬೇಕಾಗಿದೆ, ಎಲ್ಲವನ್ನೂ ಈ ಸೇವೆಯಲ್ಲಿ ತೊಡಗಿಸು, ಒಂದುಪೈಸೆಯನ್ನೂ ಯಾರಿಗೂ
ಕೊಡಬಾರದೆಂದು ತಂದೆಯು ಹೇಳಿದರು, ಇಷ್ಟು ನಷ್ಟಮೋಹಿಯಾಗಬೇಕು. ಇದು ಬಹಳ ಉನ್ನತವಾದ ಗುರಿಯಾಗಿದೆ.
ಭಕ್ತಮೀರಾ ಲೋಕಮರ್ಯಾದೆ, ವಿಕಾರಿಕುಲಮರ್ಯಾದೆಯನ್ನು ಬಿಟ್ಟಳು ಆದ್ದರಿಂದ ಆಕೆಯ ಎಷ್ಟೊಂದು
ಮಹಿಮೆಯಿದೆ. ನಾವು ವಿವಾಹವಾಗುವುದಿಲ್ಲ ಎಂದು ಈ ಕನ್ಯೆಯರೂ ಸಹ ಹೇಳುತ್ತಾರೆ -
ಲಕ್ಷಾಧಿಪತಿಯಾಗಿರಲಿ, ಯಾರೇ ಆಗಿರಲಿ ನಾವಂತೂ ಬೇಹದ್ದಿನ ತಂದೆಯಿಂದ ಆಸ್ತಿಯನ್ನು
ತೆಗೆದುಕೊಳ್ಳುತ್ತೇವೆ. ಇಂತಹ ನಶೆಯೇರಬೇಕು - ಮಕ್ಕಳಿಗೆ ಬೇಹದ್ದಿನ ತಂದೆಯೇ ಕುಳಿತು ಶೃಂಗಾರ
ಮಾಡುತ್ತಾರೆ, ಇದರಲ್ಲಿ ಒಂದುಪೈಸೆಯ ಅವಶ್ಯಕತೆಯೂ ಇಲ್ಲ, ವಿವಾಹದ ದಿನದಂದು ವನವಾಸದಲ್ಲಿ
ಕುಳ್ಳರಿಸುತ್ತಾರೆ. ಹಳೆಯ-ಣರಿದುಹೋಗಿರುವ ಉಡುಪುಗಳನ್ನು ಧರಿಸುತ್ತಾರೆ ಮತ್ತೆ ವಿವಾಹದ ನಂತರ ಹೊಸ
ವಸ್ತ್ರಗಳು, ಒಡವೆ ಇತ್ಯಾದಿಗಳನ್ನು ಧರಿಸುತ್ತಾರೆ. ಇದನ್ನು ತಂದೆಯೇ ತಿಳಿಸುತ್ತಾರೆ - ನಾನು
ನಿಮ್ಮನ್ನು ಜ್ಞಾನರತ್ನಗಳಿಂದ ಶೃಂಗಾರ ಮಾಡುತ್ತೇನೆ ಮತ್ತೆ ನೀವು ಇಂತಹ
ಲಕ್ಷ್ಮಿ-ನಾರಾಯಣರಾಗುತ್ತೀರಿ. ಇದನ್ನು ಮತ್ತ್ಯಾರೂ ಹೇಳಲು ಸಾಧ್ಯವಿಲ್ಲ.
ತಂದೆಯೇ ಬಂದು ಪವಿತ್ರ
ಪ್ರವೃತ್ತಿಮಾರ್ಗದ ಸ್ಥಾಪನೆ ಮಾಡುತ್ತಾರೆ ಆದ್ದರಿಂದ ವಿಷ್ಣುವಿಗೂ ನಾಲ್ಕುಭುಜಗಳನ್ನು
ತೋರಿಸುತ್ತಾರೆ. ಶಂಕರನ ಜೊತೆ ಪಾರ್ವತಿ, ಬ್ರಹ್ಮಾನ ಜೊತೆ ಸರಸ್ವತಿಯನ್ನು ತೋರಿಸುತ್ತಾರೆ.
ವಾಸ್ತವದಲ್ಲಿ ಬ್ರಹ್ಮನಿಗೆ ಯಾವುದೇ ಸ್ತ್ರೀ ಇಲ್ಲ. ಇವರಂತೂ ತಂದೆಯ ಮಗುವಾಗಿಬಿಟ್ಟರು. ಎಷ್ಟು
ವಿಚಿತ್ರವಾದ ಮಾತುಗಳಾಗಿವೆ! ಇವರು ಮಾತಾಪಿತರಲ್ಲವೆ, ಇವರು ಪ್ರಜಾಪಿತನೂ ಆಗಿದ್ದಾರೆ ಮತ್ತೆ ಇವರ
ಮೂಲಕ ತಂದೆಯು ರಚನೆಯನ್ನು ರಚಿಸುವುದರಿಂದ ತಾಯಿಯೂ ಆದರು. ಸರಸ್ವತಿಯು ಬ್ರಹ್ಮನ ಮಗಳೆಂದು
ಗಾಯನವಿದೆ, ಇವೆಲ್ಲಾ ಮಾತುಗಳನ್ನು ತಂದೆಯು ತಿಳಿಸುತ್ತಾರೆ - ಹೇಗೆ ತಂದೆಯು ಮುಂಜಾನೆ ಎದ್ದು
ವಿಚಾರಸಾಗರ ಮಂಥನ ಮಾಡುತ್ತಾರೆ ಹಾಗೆಯೇ ಮಕ್ಕಳೂ ಸಹ ಅನುಸರಿಸಬೇಕಾಗಿದೆ. ನೀವು ಮಕ್ಕಳು
ತಿಳಿದುಕೊಂಡಿದ್ದೀರಿ - ಈ ಸೋಲು-ಗೆಲುವಿನ ವಿಚಿತ್ರ ಆಟವು ಮಾಡಲ್ಪಟ್ಟಿದೆ. ಇದನ್ನು ನೋಡಿ
ತಿರಸ್ಕಾರವು ಬರುವುದಿಲ್ಲ, ಇದಕ್ಕೆ ಬದಲಾಗಿ ಖುಷಿಯಾಗುತ್ತದೆ. ನಾವಿದನ್ನು ತಿಳಿಯುತ್ತೇವೆ, ನಾವು
ಇಡೀ ನಾಟಕದ ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಂಡಿದ್ದೇವೆ ಆದ್ದರಿಂದ ತಿರಸ್ಕಾರದ ಮಾತೇ ಇಲ್ಲ.
ನೀವು ಮಕ್ಕಳು ಪರಿಶ್ರಮಪಡಬೇಕಾಗಿದೆ. ಗೃಹಸ್ಥವ್ಯವಹಾರದಲ್ಲಿಯೂ ಇರಬೇಕು, ಪಾವನರಾಗುವ
ಪ್ರತಿಜ್ಞೆಯನ್ನೂ ಮಾಡಬೇಕು - ನಾವು ದಂಪತಿಗಳು ಒಟ್ಟಿಗೆ ಇದ್ದು ಪವಿತ್ರಪ್ರಪಂಚದ
ಮಾಲೀಕರಾಗುತ್ತೇವೆ ಮತ್ತೆ ಇದರಲ್ಲಿ ಕೆಲವರು ಅನುತ್ತೀರ್ಣರಾಗಿಬಿಡುತ್ತಾರೆ. ತಂದೆಯ ಕೈಯಲ್ಲಿ
ಯಾವುದೇ ಶಾಸ್ತ್ರಗಳಿಲ್ಲ. ಇಲ್ಲಂತೂ ಶಿವತಂದೆಯು ತಿಳಿಸುತ್ತಾರೆ - ನಾನು ಬ್ರಹ್ಮಾರವರ ಮೂಲಕ ನಿಮಗೆ
ಎಲ್ಲಾ ವೇದಶಾಸ್ತ್ರಗಳ ಸಾರವನ್ನು ತಿಳಿಸುತ್ತೇನೆ, ಕೃಷ್ಣನಲ್ಲ, ಎಷ್ಟೊಂದು ಅಂತರವಿದೆ! ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ
ನಮಸ್ತೆ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ವಿದ್ಯೆಯ
ಮೇಲೆ ಪೂರ್ಣಗಮನವಿಡಬೇಕಾಗಿದೆ, ತಂದೆ-ಶಿಕ್ಷಕ-ಸದ್ಗುರುವಿಗೆ ನಿಂದನೆಯಾಗುವಂತಹ ಯಾವುದೇ ಕರ್ಮವು
ಆಗಬಾರದು. ಗೌರವವನ್ನು ಕಳೆಯುವಂತಹ ಯಾವುದೇ ಕರ್ಮವನ್ನು ಮಾಡಬಾರದು.
2. ವಿಚಾರಸಾಗರ ಮಂಥನ
ಮಾಡುವ ಹವ್ಯಾಸಗಳನ್ನಿಟ್ಟುಕೊಳ್ಳಬೇಕಾಗಿದೆ. ತಂದೆಯಿಂದ ಯಾವ ಜ್ಞಾನವು ಸಿಕ್ಕಿದೆಯೋ ಅದರ ಸ್ಮರಣೆ
ಮಾಡಿ ಅಪಾರ ಖುಷಿಯಲ್ಲಿರಬೇಕಾಗಿದೆ. ಯಾರೊಂದಿಗೂ ತಿರಸ್ಕಾರವನ್ನಿಡಬಾರದು.
ವರದಾನ:
ಸಂಪೂರ್ಣತೆಯ
ಹೊಳಪಿನ ಮೂಲಕ ಅಜ್ಞಾನದ ಪರದೆಯನ್ನು ಸರಿಸುವಂತಹ ಸರ್ಚ್ ಲೈಟ್ ಭವ
ಈಗ ಪ್ರತ್ಯಕ್ಷತೆಯ ಸಮಯ
ಸಮೀಪಬರುತ್ತಿದೆ ಆದ್ದರಿಂದ ಅಂತರ್ಮುಖಿಗಳಾಗಿ ಗುಹ್ಯ ಅನುಭವಗಳ ರತ್ನಗಳಿಂದ ಸ್ವಯಂ ಅನ್ನು ಸಂಪನ್ನ
ಮಾಡಿಕೊಳ್ಳಿ, ಇಂತಹ ಸರ್ಚ ಲೈಟ್ ಆಗಿ ಯಾವುದರಿಂದ ಸಂಪೂರ್ಣತೆಯ ಹೊಳಪಿನಿಂದ ಅಜ್ಞಾನದ ಪರದೆ
ದೂರವಾಗಿಬಿಡಬೇಕು. ಏಕೆಂದರೆ ತಾವು ಧರಣಿಯ ನಕ್ಷತ್ರಗಳು ಈ ವಿಶ್ವವನ್ನು ಹಲ್-ಚಲ್ನಿಂದ ರಕ್ಷಿಸಿ
ಸುಖೀ ಪ್ರಪಂಚ, ಸ್ವರ್ಣಿಮ ಪ್ರಪಂಚ ರೂಪಿಸುವಂತಹವರಾಗಿರುವಿರಿ. ತಾವು ಪುರುಷೋತ್ತಮ ಆತ್ಮರು
ವಿಶ್ವಕ್ಕೆ ಸುಖ-ಶಾಂತಿಯ ಶ್ವಾಸವನ್ನು ಕೊಡಲು ನಿಮಿತ್ತರಾಗಿರುವಿರಿ.
ಸ್ಲೋಗನ್:
ಮಾಯೆ ಮತ್ತು
ಪ್ರಕೃತಿಯ ಆಕರ್ಷಣೆಯಿಂದ ದೂರವಿರಿ ಆಗ ಸದಾ ಹರ್ಷಿತರಾಗಿರುವಿರಿ.
ತಮ್ಮ ಶಕ್ತಿಶಾಲಿ ಮನಸ್ಸಾ
ಮೂಲಕ ಸಕಾಶ ಕೊಡುವ ಸೇವೆಯನ್ನು ಮಾಡಿ
ಯಾವಾಗ ಮನಸ್ಸಾದಲ್ಲಿ ಸದಾ
ಶುಭ ಭಾವನೆ ಅಥವಾ ಶುಭ ಆಶೀರ್ವಾದಗಳನ್ನು ಕೊಡುವ ಸ್ವಾಭಾವಿಕ ಅಭ್ಯಾಸವಾಗುವುದು ಆಗ ನಿಮ್ಮ ಮನಸ್ಸು
ಬಿಜಿ (ವ್ಯಸ್ಥ)ವಾಗುವುದು. ಮನಸ್ಸಿನಲ್ಲಿ ಏನೆಲ್ಲಾ ಏರುಪೇರು ಆಗುವುದು, ಅದರಿಂದ ಸ್ವತಃವಾಗಿ
ದೂರವಾಗುವಿರಿ. ತಮ್ಮ ಪುರುಷಾರ್ಥದಲ್ಲಿ ಯಾವುದು ಎಂದೂ ಹೃದಯ ವಿಧೀರ್ಣವಾಗುತ್ತೀರಿ ಅದು
ಆಗುವುದಿಲ್ಲ. ಜಾದೂ ಮಂತ್ರವಾಗುವುದು.