21.02.25         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ಪಾಸ್ವಿತ್ ಆನರ್ ಆಗಬೇಕೆಂದರೆ ಬುದ್ಧಿಯೋಗವು ಸ್ವಲ್ಪವೂ ಸಹ ಎಲ್ಲಿಯೂ ಅಲೆದಾಡದಿರಲಿ, ಒಬ್ಬ ತಂದೆಯ ನೆನಪಿರಲಿ. ದೇಹವನ್ನು ನೆನಪು ಮಾಡುವವರು ಶ್ರೇಷ್ಠಪದವಿಯನ್ನು ಪಡೆಯಲು ಸಾಧ್ಯವಿಲ್ಲ”

ಪ್ರಶ್ನೆ:
ಎಲ್ಲದಕ್ಕಿಂತ ಉನ್ನತ ಗುರಿ ಯಾವುದಾಗಿದೆ?

ಉತ್ತರ:
ಆತ್ಮವು ಜೀವಿಸಿದ್ದಂತೆಯೇ ಸತ್ತು ಒಬ್ಬ ತಂದೆಗೆ ಬಲಿಹಾರಿಯಾಗುವುದು, ಮತ್ತೆಯಾರದೂ ನೆನಪು ಬರಬಾರದು. ದೇಹಾಭಿಮಾನವು ಸಂಪೂರ್ಣವಾಗಿ ಹೊರಟುಹೋಗಬೇಕು - ಇದೇ ಉನ್ನತ ಗುರಿಯಾಗಿದೆ. ನಿರಂತರ ಆತ್ಮಾಭಿಮಾನಿಸ್ಥಿತಿಯಿರಬೇಕು - ಇದೇ ಅತಿ ದೊಡ್ಡಗುರಿಯಾಗಿದೆ, ಇದರಿಂದಲೇ ಕರ್ಮಾತೀತ ಸ್ಥಿತಿಯನ್ನು ಪ್ರಾಪ್ತಿ ಮಾಡಿಕೊಳ್ಳುವಿರಿ.

ಗೀತೆ:
ನೀವು ಪ್ರೀತಿಯ ಸಾಗರನಾಗಿದ್ದೀರಿ........

ಓಂ ಶಾಂತಿ.
ಈಗ ಈ ಗೀತೆಯೂ ಸಹ ತಪ್ಪಾಗಿದೆ. ಪ್ರೀತಿಯ ಸಾಗರ ಎನ್ನುವ ಬದಲು ಜ್ಞಾನದ ಸಾಗರನೆಂದಿರಬೇಕು. ಪ್ರೀತಿಯ ಲೋಟ ಇರುವುದಿಲ್ಲ, ಲೋಟ,ಗಂಗಾಜಲ ಮುಂತಾದುವುಗಳಿಗೆ ಇರುತ್ತದೆ ಅಂದರೆ ಇದು ಭಕ್ತಿಮಾರ್ಗದ ಮಹಿಮೆಯಾಗಿದೆ. ಅದು ತಪ್ಪು ಮತ್ತು ಇದು ಸರಿಯಾಗಿದೆ. ತಂದೆಯು ಮೊಟ್ಟಮೊದಲಿಗೆ ಜ್ಞಾನಸಾಗರನಾಗಿದ್ದಾರೆ. ಮಕ್ಕಳಲ್ಲಿ ಸ್ವಲ್ಪಜ್ಞಾನವಿದ್ದರೂ ಸಹ ಬಹಳ ಶ್ರೇಷ್ಠಪದವಿಯನ್ನು ಪ್ರಾಪ್ತಿ ಮಾಡಿಕೊಳ್ಳುತ್ತಾರೆ. ಮಕ್ಕಳಿಗೆ ತಿಳಿದಿದೆ - ಈ ಸಮಯದಲ್ಲಿ ನಾವು ಅವಶ್ಯವಾಗಿ ಚೈತನ್ಯ ದಿಲ್ವಾಡಾ ಮಂದಿರದ ರೀತಿಯಾಗಿದೆ. ಅದು ಜಡ ದಿಲ್ವಾಡಾ ಮಂದಿರವಾಗಿದೆ ಮತ್ತು ಇದು ಚೈತನ್ಯವಾಗಿದೆ. ಇದೂ ಸಹ ಆಶ್ಚರ್ಯಕರವಾಗಿದೆಯಲ್ಲವೆ! ಎಲ್ಲಿ ಜಡ ನೆನಪಾರ್ಥವಿದೆಯೋ ಅಲ್ಲಿ ನೀವೀಗ ಬಂದು ಚೈತನ್ಯದಲ್ಲಿ ಕುಳಿತಿದ್ದೀರಿ ಆದರೆ ಮನುಷ್ಯರು ಇದನ್ನು ತಿಳಿದುಕೊಳ್ಳುತ್ತಾರೆಯೇ! ಮುಂದೆಹೋದಂತೆ ಅವಶ್ಯವಾಗಿ ಇದು ಈಶ್ವರೀಯ ವಿಶ್ವವಿದ್ಯಾಲಯವಾಗಿದೆ. ಇಲ್ಲಿ ಸ್ವಯಂ ಭಗವಂತನೇ ಓದಿಸುತ್ತಾರೆ. ಇದಕ್ಕಿಂತ ದೊಡ್ಡ ವಿಶ್ವವಿದ್ಯಾಲಯ ಮತ್ತ್ಯಾವುದೂ ಇಲ್ಲ ಎಂಬ ಮಾತನ್ನು ಅರಿತುಕೊಳ್ಳುತ್ತಾರೆ ಮತ್ತು ಇದು ಚೈತನ್ಯ ದಿಲ್ವಾಡಾ ಮಂದಿರವಾಗಿದೆ ಎಂಬುದನ್ನೂ ಸಹ ತಿಳಿದುಕೊಳ್ಳುತ್ತಾರೆ. ಈ ದಿಲ್ವಾಡಾ ಮಂದಿರವು ನಿಮ್ಮ ನಿಖರವಾದ ನೆನಪಾರ್ಥವಾಗಿದೆ. ಮೇಲ್ಭಾಗದಲ್ಲಿ ಸೂರ್ಯವಂಶಿ, ಚಂದ್ರವಂಶಿಯರಿದ್ದಾರೆ, ಕೆಳಗೆ ಆದಿದೇವ-ಆದಿದೇವಿ ಮತ್ತು ಮಕ್ಕಳು ಕುಳಿತಿದ್ದಾರೆ. ಇವರ ಹೆಸರಾಗಿದೆ - ಬ್ರಹ್ಮಾ ನಂತರ ಸರಸ್ವತಿಯು ಬ್ರಹ್ಮನ ಮಗಳಾಗುತ್ತಾರೆ. ಪ್ರಜಾಪಿತ ಬ್ರಹ್ಮನಿದ್ದಾರೆಂದರೆ ಅವಶ್ಯವಾಗಿ ಗೋಪ-ಗೋಪಿಕೆಯರೂ ಇದ್ದರಲ್ಲವೆ. ಅದು ಜಡಚಿತ್ರವಾಗಿದೆ, ಯಾರು ಇದ್ದುಹೋಗಿದ್ದಾರೆಯೋ ಅವರ ಚಿತ್ರಗಳನ್ನು ಮಾಡಲಾಗಿದೆ. ಯಾರಾದರೂ ಮರಣ ಹೊಂದಿದರೆ ತಕ್ಷಣ ಅವರ ಚಿತ್ರಗಳನ್ನು ಮಾಡಿಸುತ್ತಾರೆ, ಅವರ ಪದವಿ-ಚರಿತ್ರೆಯಂತೂ ಯಾರಿಗೂ ತಿಳಿದಿಲ್ಲ. ಅವರ ಕರ್ತವ್ಯದ ಬಗ್ಗೆ ತಿಳಿಯಲಿಲ್ಲವೆಂದರೆ ಆ ಚಿತ್ರವು ಯಾವುದೇ ಪ್ರಯೋಜನವಿಲ್ಲ. ಅವರ ಪರಿಚಯದಿಂದಲೇ ಇಂತಿಂತಹವರು ಇಂತಹ ಕರ್ತವ್ಯವನ್ನು ಮಾಡಿ ಹೋಗಿದ್ದಾರೆಂದು ತಿಳಿಯುತ್ತದೆ. ಈಗ ಯಾವ ದೇವತೆಗಳ ಮಂದಿರಗಳಿವೆಯೋ ಅವರ ಕರ್ತವ್ಯ ಮತ್ತು ಚರಿತ್ರೆಯ ಬಗ್ಗೆ ಯಾರಿಗೂ ತಿಳಿದಿಲ್ಲ. ಸರ್ವಶ್ರೇಷ್ಠ ಶಿವತಂದೆಯನ್ನೂ ಸಹ ಯಾರೂ ಅರಿತುಕೊಂಡಿಲ್ಲ. ಈ ಸಮಯದಲ್ಲಿ ನೀವು ಮಕ್ಕಳು ಎಲ್ಲರ ಚರಿತ್ರೆಯನ್ನು ಅರಿತುಕೊಂಡಿದ್ದೀರಿ. ಮುಖ್ಯವಾಗಿ ಯಾರ್ಯಾರು ಬಂದು ಹೋಗಿದ್ದಾರೆ, ಯಾರನ್ನು ಪೂಜಿಸುತ್ತೇವೆ ಎಂಬುದೆಲ್ಲವೂ ತಿಳಿದಿದೆ. ಸರ್ವಶ್ರೇಷ್ಠ ಭಗವಂತನಾಗಿದ್ದಾರೆ, ಶಿವರಾತ್ರಿಯನ್ನೂ ಆಚರಿಸುತ್ತಾರೆಂದರೆ ಅವಶ್ಯವಾಗಿ ಅವರ ಅವತರಣೆಯಾಗಿದೆ ಆದರೆ ಯಾವಾಗ ಆಯಿತು, ಅವರು ಬಂದು ಏನು ಮಾಡಿದರು, ಇದು ಯಾರಿಗೂ ತಿಳಿದಿಲ್ಲ. ಶಿವನ ಜೊತೆ ಬ್ರಹ್ಮನು ಇದ್ದೇ ಇರುವರು. ಆದಿದೇವ ಮತ್ತು ಆದಿದೇವಿ ಯಾರಾಗಿದ್ದಾರೆ, ಅವರಿಗೆ ಇಷ್ಟೊಂದು ಭುಜಗಳನ್ನು ಏಕೆ ತೋರಿಸಿದ್ದಾರೆ? ಏಕೆಂದರೆ ವೃದ್ಧಿಯಂತೂ ಆಗುತ್ತದೆಯಲ್ಲವೆ. ಪ್ರಜಾಪಿತ ಬ್ರಹ್ಮನಿಂದ ಎಷ್ಟೊಂದು ವೃದ್ಧಿಯಾಗುತ್ತದೆ. 100 ಭುಜಗಳು, ಸಾವಿರ ಭುಜಧಾರಿಯೆಂದು ಬ್ರಹ್ಮನಿಗೆ ಹೇಳುತ್ತಾರೆ. ವಿಷ್ಣು ಅಥವಾ ಶಂಕರನಿಗೆ ಇಷ್ಟು ಭುಜಗಳಿವೆಯೆಂದು ಹೇಳುವುದಿಲ್ಲ ಅಂದಮೇಲೆ ಬ್ರಹ್ಮನಿಗಾಗಿಯೇ ಏಕೆ ಹೇಳುತ್ತಾರೆ? ಇಡೀ ವಂಶಾವಳಿಯೆಲ್ಲವೂ ಈ ಪ್ರಜಾಪಿತ ಬ್ರಹ್ಮನದೇ ಆಗಿದೆಯಲ್ಲವೆ! ಇದು ಯಾವುದೇ ಸ್ಥೂಲ ಬಾಹುಗಳ ಮಾತಲ್ಲ. ಸಾವಿರ ಭುಜಧಾರಿ ಬ್ರಹ್ಮನೆಂದು ಭಲೆ ಹೇಳುತ್ತಾರೆ ಆದರೆ ಅರ್ಥವನ್ನು ತಿಳಿದುಕೊಂಡಿದ್ದಾರೆಯೇ! ಈಗ ನೀವು ಪ್ರತ್ಯಕ್ಷರೂಪದಲ್ಲಿ ನೋಡಿ, ಬ್ರಹ್ಮನಿಗೆ ಎಷ್ಟೊಂದು ಭುಜಗಳಿವೆ ಅರ್ಥಾತ್ ಸಂತಾನರಿದ್ದಾರೆ. ಇವು ಬೇಹದ್ದಿನ ಭುಜಗಳಾಗಿವೆ. ಪ್ರಜಾಪಿತ ಬ್ರಹ್ಮನನ್ನಂತೂ ಎಲ್ಲರೂ ಒಪ್ಪುತ್ತಾರೆ ಆದರೆ ಅವರ ಪರಿಚಯವು ತಿಳಿದಿಲ್ಲ. ಆತ್ಮಕ್ಕೆ ಬಾಹುಗಳಿರುವುದಿಲ್ಲ, ಬಾಹುಗಳು ಶರೀರಕ್ಕೆ ಇರುತ್ತವೆ. ಇಷ್ಟು ಕೋಟ್ಯಾಂತರ ಸಹೋದರ ಆತ್ಮಗಳಿದ್ದಾರೆಂದಮೇಲೆ ಅವರ ಭುಜಗಳು ಎಷ್ಟೊಂದಾಯಿತು? ಯಾವಾಗ ಪೂರ್ಣರೀತಿಯಲ್ಲಿ ಜ್ಞಾನವನ್ನು ಅರಿತುಕೊಳ್ಳುವರೋ ಆಗಲೇ ಈ ಮಾತುಗಳನ್ನು ತಿಳಿಸಿಕೊಡಲಾಗಿದೆ. ಮೊಟ್ಟಮೊದಲು ಮುಖ್ಯಮಾತು ಒಂದೇ ಆಗಿದೆ - ತಂದೆಯು ತಿಳಿಸುತ್ತಾರೆ, ನನ್ನನ್ನು ನೆನಪು ಮಾಡಿ ಮತ್ತು ಆಸ್ತಿಯನ್ನು ನೆನಪು ಮಾಡಿ. ತಂದೆಗೆ ಜ್ಞಾನಸಾಗರನೆಂದೂ ಗಾಯನವಿದೆ, ಎಷ್ಟೊಂದು ವಿಚಾರಗಳನ್ನು ತಿಳಿಸುತ್ತಾರೆ. ಇಷ್ಟೆಲ್ಲಾ ವಿಚಾರಗಳು ನೆನಪಿರುವುದಿಲ್ಲ ಕೇವಲ ಸಾರವಷ್ಟೇ ಬುದ್ಧಿಯಲ್ಲಿ ಉಳಿಯುತ್ತದೆ. ಕೊನೆಯಲ್ಲಿ ಇದೇ ಜ್ಞಾನದ ಸಾರವಾಗುತ್ತದೆ - ‘ಮನ್ಮನಾಭವ’.

ಕೃಷ್ಣನಿಗೆ ಜ್ಞಾನಸಾಗರನೆಂದು ಹೇಳುವುದಿಲ್ಲ. ಕೃಷ್ಣನು ರಚನೆಯಾಗಿದ್ದಾನೆ, ರಚಯಿತನು ಒಬ್ಬರೇ ತಂದೆಯಾಗಿದ್ದಾರೆ. ತಂದೆಯೇ ಎಲ್ಲರಿಗೆ ಆಸ್ತಿಯನ್ನು ಕೊಡುತ್ತಾರೆ, ಮನೆಗೆ ಕರೆದುಕೊಂಡು ಹೋಗುತ್ತಾರೆ. ತಂದೆಯ ಮತ್ತು ಆತ್ಮಗಳ ಮನೆಯಾಗಿದೆ - ಶಾಂತಿಧಾಮ. ವಿಷ್ಣುಪುರಿಗೆ ತಂದೆಯ ಮನೆಯೆಂದು ಹೇಳುವುದಿಲ್ಲ. ಮನೆಯು ಮೂಲವತನವಾಗಿದೆ, ಇಲ್ಲಿ ಆತ್ಮಗಳು ನಿವಾಸ ಮಾಡುತ್ತಾರೆ. ಇವೆಲ್ಲಾ ಮಾತುಗಳನ್ನು ಸೂಕ್ಷ್ಮಬುದ್ಧಿಯುಳ್ಳ ಮಕ್ಕಳೇ ಧಾರಣೆ ಮಾಡುತ್ತಾರೆ. ಇಷ್ಟೆಲ್ಲಾ ಜ್ಞಾನವು ಯಾರ ಬುದ್ಧಿಯಲ್ಲಿಯೂ ಇರಲು ಸಾಧ್ಯವಿಲ್ಲ. ಇಷ್ಟೆಲ್ಲಾ ಕಾಗದಗಳನ್ನು ಬರೆಯುವುದಕ್ಕೂ ಸಾಧ್ಯವಿಲ್ಲ. ಎಲ್ಲರ ಬಳಿಯಿರುವ ಎಲ್ಲಾ ಮುರುಳಿಗಳನ್ನು ಒಟ್ಟುಗೂಡಿಸುತ್ತಾ ಹೋದರೆ ಈ ಹಾಲ್ಗಿಂತಲೂ ಹೆಚ್ಚಾಗಿಬಿಡುತ್ತದೆ. ಆ ವಿದ್ಯೆಯಲ್ಲಿಯೂ ಸಹ ಎಷ್ಟೊಂದು ಪುಸ್ತಕಗಳಿರುತ್ತವೆ! ಪರೀಕ್ಷೆಯನ್ನು ತೇರ್ಗಡೆ ಮಾಡಿದರೆಂದರೆ ಅದರ ಸಾರವು ಬುದ್ಧಿಯಲ್ಲಿ ಕುಳಿತುಕೊಳ್ಳುತ್ತದೆ. ವಕೀಲ ವಿದ್ಯೆಯ ಪರೀಕ್ಷೆಯನ್ನು ತೇರ್ಗಡೆ ಮಾಡಿದರೆ ಅದರಿಂದ ಒಂದು ಜನ್ಮಕ್ಕಾಗಿ ಅಲ್ಪಕಾಲದ ಸುಖವು ಸಿಗುತ್ತದೆ. ಅದು ವಿನಾಶಿ ಸಂಪಾದನೆಯಾಗಿದೆ. ನಿಮಗಂತೂ ಈ ತಂದೆಯು ಭವಿಷ್ಯಕ್ಕಾಗಿ ಅವಿನಾಶಿ ಸಂಪಾದನೆಯನ್ನು ಮಾಡಿಸುತ್ತಾರೆ ಉಳಿದಂತೆ ಯಾರೆಲ್ಲಾ ಗುರು-ಗೋಸಾಯಿ ಮುಂತಾದವರಿರುತ್ತಾರೆಯೋ ಅವರೆಲ್ಲರೂ ವಿನಾಶಿ ಸಂಪಾದನೆ ಮಾಡಿಸುತ್ತಾರೆ. ವಿನಾಶವು ಸಮೀಪ ಬರುತ್ತಾ ಹೋದಂತೆ ಸಂಪಾದನೆಯೂ ಕಡಿಮೆಯಾಗುತ್ತಾ ಹೋಗುತ್ತದೆ. ಸಂಪಾದನೆಯೂ ಹೆಚ್ಚುವುದೆಂದು ನೀವು ಹೇಳುತ್ತೀರಿ ಆದರೆ ಇಲ್ಲ. ಇದೆಲ್ಲವೂ ಸಮಾಪ್ತಿಯಾಗಲಿದೆ. ಮೊದಲು ರಾಜರು ಮೊದಲಾದವರ ಸಂಪಾದನೆಯು ನಡೆಯುತ್ತಿತ್ತು ಆದರೆ ಈಗ ಅವರೂ ಇಲ್ಲ. ನಿಮ್ಮ ಸಂಪಾದನೆಯು ಎಷ್ಟೊಂದು ಸಮಯ ನಡೆಯುತ್ತದೆ! ನಿಮಗೆ ತಿಳಿದಿದೆ, ಇದು ಮಾಡಿ-ಮಾಡಲ್ಪಟ್ಟ ನಾಟಕವಾಗಿದೆ, ಇದನ್ನು ಪ್ರಪಂಚದಲ್ಲಿ ಯಾರೂ ಅರಿತುಕೊಂಡಿಲ್ಲ. ನಿಮ್ಮಲ್ಲಿಯೂ ಸಹ ನಂಬರ್ವಾರ್ ಕೆಲವರಿಗೆ ಮಾತ್ರವೇ ಧಾರಣೆಯಾಗುತ್ತದೆ. ಕೆಲವರಂತೂ ಏನನ್ನೂ ತಿಳಿಸಿಕೊಡುವುದಿಲ್ಲ. ನಾವು ನಮ್ಮ ಮಿತ್ರಸಂಬಂಧಿಗಳಿಗೆ ತಿಳಿಸಿಕೊಡುತ್ತೇವೆಂದು ಕೆಲವರು ಹೇಳುತ್ತಾರೆ. ಅದೂ ಸಹ ಅಲ್ಪಕಾಲವಾಯಿತಲ್ಲವೆ. ಪ್ರದರ್ಶನಿ ಇತ್ಯಾದಿಗಳಲ್ಲಿ ಅನ್ಯರಿಗೆ ಏಕೆ ತಿಳಿಸಿಕೊಡುವುದಿಲ್ಲ. ಇದಕ್ಕೆ ಕಾರಣವೇನೆಂದರೆ ಅವರಲ್ಲಿ ಪೂರ್ಣ ಧಾರಣೆಯಿಲ್ಲ. ನಾನೇ ಎಲ್ಲಾ ತಿಳಿದವನೆಂದು ತಿಳಿಯಬಾರದಲ್ಲವೆ. ಸರ್ವೀಸಿನ ಉಮ್ಮಂಗವಿದ್ದರೆ ಯಾರು ಬಹಳ ಚೆನ್ನಾಗಿ ತಿಳಿಸಿಕೊಡುವರೋ ಅವರಿಂದ ಕೇಳಬೇಕು. ತಂದೆಯು ಶ್ರೇಷ್ಠಪದವಿಯನ್ನು ಪ್ರಾಪ್ತಿ ಮಾಡಿಸಲು ಬಂದಿದ್ದಾರೆಂದರೆ ಪುರುಷಾರ್ಥ ಮಾಡಬೇಕಲ್ಲವೆ ಆದರೆ ಅದೃಷ್ಟದಲ್ಲಿಲ್ಲವೆಂದರೆ ಶ್ರೀಮತವನ್ನು ಪಾಲಿಸುವುದಿಲ್ಲ. ಮತ್ತೆ ಪದವಿ ಭ್ರಷ್ಟವಾಗಿಬಿಡುತ್ತದೆ. ನಾಟಕದ ಯೋಜನೆಯನುಸಾರ ರಾಜಧಾನಿಯು ಸ್ಥಾಪನೆಯಾಗುತ್ತಿದೆ, ಅದರಲ್ಲಿ ಎಲ್ಲಾ ಪ್ರಕಾರದವರು ಬೇಕಲ್ಲವೆ. ಮಕ್ಕಳು ತಿಳಿದುಕೊಳ್ಳಬಹುದಾಗಿದೆ, ಕೆಲವರು ಒಳ್ಳೆಯ ಪ್ರಜೆಗಳಾಗುವವರಿದ್ದಾರೆ, ಕೆಲವರು ಕಡಿಮೆ. ತಂದೆಯು ತಿಳಿಸುತ್ತಾರೆ - ನಾನು ನಿಮಗೆ ರಾಜಯೋಗವನ್ನು ಕಲಿಸಲು ಬಂದಿದ್ದೇನೆ. ದಿಲ್ವಾಡಾ ಮಂದಿರದಲ್ಲಿ ರಾಜರ ಚಿತ್ರವಿದೆಯಲ್ಲವೆ. ಯಾರು ಪೂಜ್ಯರಾಗುತ್ತಾರೆ, ಅವರೇ ನಂತರ ಪೂಜಾರಿಯಾಗುತ್ತಾರೆ. ರಾಜ-ರಾಣಿಯ ಪದವಿಯಂತೂ ಶ್ರೇಷ್ಠವಾಗಿರುತ್ತದೆಯಲ್ಲವೆ ನಂತರ ವಾಮಮಾರ್ಗದಲ್ಲಿ ಬಂದಾಗಲೂ ಸಹ ರಾಜರು ಅಥವಾ ದೊಡ್ಡ-ದೊಡ್ಡ ಸಾಹುಕಾರರಂತೂ ಆಗಿರುತ್ತಾರೆ, ಜಗನ್ನಾಥ ಮಂದಿರದಲ್ಲಿ ಎಲ್ಲರಿಗೆ ಕಿರೀಟವನ್ನು ತೋರಿಸಿದ್ದಾರೆ. ಪ್ರಜೆಗಳಿಗಂತೂ ಕಿರೀಟವಿಲ್ಲ, ಕಿರೀಟಧಾರಿ ರಾಜರನ್ನೂ ಸಹ ವಿಕಾರದಲ್ಲಿ ತೋರಿಸುತ್ತಾರೆ. ಸುಖ-ಸಂಪತ್ತು ಅವರಿಗೆ ಬಹಳ ಇರುವುದು. ಸಂಪತ್ತು ಹೆಚ್ಚುಕಡಿಮೆ ಇದ್ದೇ ಇರುತ್ತದೆ. ವಜ್ರದ ಮಹಲುಗಳು ಮತ್ತು ಬೆಳ್ಳಿಯ ಮಹಲುಗಳಲ್ಲಿ ಅಂತರವಂತೂ ಇರುತ್ತದೆಯಲ್ಲವೆ ಆದ್ದರಿಂದ ತಂದೆಯು ಮಕ್ಕಳಿಗೆ ತಿಳಿಸುತ್ತಾರೆ - ಮಕ್ಕಳೇ, ಒಳ್ಳೆಯ ಪುರುಷಾರ್ಥ ಮಾಡಿ ಶ್ರೇಷ್ಠಪದವಿಯನ್ನು ಪಡೆಯಿರಿ. ರಾಜರಿಗೆ ಹೆಚ್ಚು ಸುಖವಿರುತ್ತದೆ, ಅಲ್ಲಿ ಎಲ್ಲರೂ ಸುಖಿಯಾಗಿರುತ್ತಾರೆ. ಹೇಗೆ ಇಲ್ಲಿ ಎಲ್ಲರಿಗೂ ದುಃಖವಿದೆ, ರೋಗ ಮೊದಲಾದುವುಗಳು ಎಲ್ಲರಿಗೆ ಇದ್ದೇ ಇರುತ್ತದೆ ಆದರೆ ಸತ್ಯಯುಗದಲ್ಲಿ ಸುಖವೇ ಸುಖವಿರುತ್ತದೆ, ಆದರೂ ಸಹ ಪದವಿಗಳಲ್ಲಿ ಅಂತರವಿರುತ್ತದೆ. ತಂದೆಯು ಸದಾ ತಿಳಿಸುತ್ತಾರೆ - ಪುರುಷಾರ್ಥ ಮಾಡುತ್ತಾ ಇರಿ, ನಿರ್ಬಲರಾಗಬೇಡಿ. ಪುರುಷಾರ್ಥದಿಂದಲೇ ನಾಟಕದನುಸಾರ ಇವರ ಸದ್ಗತಿಯು ಇಷ್ಟೇ ಇದೆ ಎಂಬುದು ತಿಳಿದುಬರುತ್ತದೆ.

ತಮ್ಮ ಸದ್ಗತಿಗಾಗಿ ಶ್ರೀಮತದಂತೆ ನಡೆಯಬೇಕಾಗಿದೆ. ಶಿಕ್ಷಕರ ಮತದನುಸಾರ ವಿದ್ಯಾರ್ಥಿಯು ನಡೆಯದಿದ್ದರೆ ಏನೂ ಪ್ರಯೋಜನವಿಲ್ಲ. ಎಲ್ಲರೂ ನಂಬರ್ವಾರ್ ಪುರುಷಾರ್ಥದನುಸಾರವಿದ್ದಾರೆ. ಇದನ್ನು ಮಾಡಲು ನಮ್ಮಿಂದ ಸಾಧ್ಯವಿಲ್ಲವೆಂದು ಒಂದುವೇಳೆ ಯಾರಾದರೂ ಹೇಳಿದರೆ ಮತ್ತಿನ್ನೇನು ಕಲಿಯುತ್ತೀರಿ! ಕಲಿತು ಬುದ್ಧಿವಂತರಾಗಬೇಕು. ಅದರಿಂದ ಇವರು ಬಹಳ ಚೆನ್ನಾಗಿ ತಿಳಿಸುತ್ತಾರೆಂದು ಎಲ್ಲರೂ ಹೇಳಲಿ ಆದರೆ ಆತ್ಮವು ಜೀವಿಸಿದ್ದಂತೆಯೇ ಸತ್ತು ಒಬ್ಬ ತಂದೆಯ ಮಗುವಾಗುವುದು ಮತ್ತ್ಯಾವುದೇ ನೆನಪು ಬರದೇ ಇರುವುದು, ದೇಹಾಭಿಮಾನವು ಸಂಪೂರ್ಣ ಕಳೆಯುವುದು ಇದು ಉನ್ನತ ಗುರಿಯಾಗಿದೆ. ಇದೆಲ್ಲವನ್ನೂ ಮರೆಯಬೇಕಾಗಿದೆ, ಸಂಪೂರ್ಣ ಆತ್ಮಾಭಿಮಾನಿ ಸ್ಥಿತಿಯನ್ನು ಪ್ರಾಪ್ತಿ ಮಾಡಿಕೊಳ್ಳುವುದೇ ಅತಿದೊಡ್ಡ ಗುರಿಯಾಗಿದೆ. ಪರಮಧಾಮದಲ್ಲಿ ಆತ್ಮಗಳು ಅಶರೀರಿಯಾಗಿರುತ್ತಾರೆ, ಮತ್ತೆ ಇಲ್ಲಿಗೆ ಬಂದು ದೇಹವನ್ನು ಧಾರಣೆ ಮಾಡುತ್ತಾರೆ. ಈಗ ಇಲ್ಲಿ ಈ ದೇಹದಲ್ಲಿದ್ದು ತನ್ನನ್ನು ಅಶರೀರಿಯೆಂದು ತಿಳಿಯಬೇಕಾಗಿದೆ ಆದರೆ ಇದು ಬಹಳ ದೊಡ್ಡ ಪರಿಶ್ರಮವಾಗಿದೆ. ತನ್ನನ್ನು ಆತ್ಮವೆಂದು ತಿಳಿದು ಕರ್ಮಾತೀತ ಸ್ಥಿತಿಯಲ್ಲಿರಬೇಕಾಗಿದೆ. ಸರ್ಪಕ್ಕೂ ಸಹ ಬುದ್ಧಿಯಿದೆಯಲ್ಲವೆ, ತನ್ನ ಹಳೆಯ ಪೆÇರೆಯನ್ನು ಬಿಟ್ಟುಬಿಡುತ್ತದೆ ಅಂದಮೇಲೆ ನೀವು ದೇಹಾಭಿಮಾನದಿಂದ ಎಷ್ಟೊಂದು ಹೊರಬರಬೇಕಾಗಿದೆ. ಮೂಲವತನದಲ್ಲಂತೂ ನೀವು ದೇಹೀ ಅಭಿಮಾನಿಯಾಗಿರುತ್ತೀರಿ ಆದರೆ ಇಲ್ಲಿ ದೇಹದಲ್ಲಿರುತ್ತಾ ತನ್ನನ್ನು ಆತ್ಮವೆಂದು ತಿಳಿಯಬೇಕಾಗಿದೆ. ದೇಹಾಭಿಮಾನವು ಸಂಪೂರ್ಣವಾಗಿ ಕಳೆಯಬೇಕು. ಇದು ಎಷ್ಟು ದೊಡ್ಡ ಪರೀಕ್ಷೆಯಾಗಿದೆ. ಭಗವಂತನು ತಾನೇ ಬಂದು ಓದಿಸಬೇಕಾಗುತ್ತದೆ. ದೇಹದ ಎಲ್ಲಾ ಸಂಬಂಧಗಳನ್ನು ಬಿಟ್ಟು ನನ್ನವರಾಗಿ, ತನ್ನನ್ನು ನಿರಾಕಾರ ಆತ್ಮವೆಂದು ತಿಳಿಯಿರಿ. ಯಾವುದೇ ವಸ್ತುವಿನ ಪರಿವೆಯಿರಬಾರದು ಎಂಬ ಮಾತನ್ನು ತಂದೆಯ ವಿನಃ ಮತ್ತ್ಯಾರೂ ಹೇಳಲು ಸಾಧ್ಯವಿಲ್ಲ. ಮಾಯೆಯು ಪರಸ್ಪರ ಒಬ್ಬರು ಇನ್ನೊಬ್ಬರ ದೇಹದಲ್ಲಿ ಬಹಳ ಸಿಲುಕಿಸುತ್ತದೆ ಆದ್ದರಿಂದ ತಂದೆಯು ತಿಳಿಸುತ್ತಾರೆ - ಈ ಸಾಕಾರ ತಂದೆಯನ್ನೂ (ಬ್ರಹ್ಮಾ) ಸಹ ನೆನಪು ಮಾಡಬಾರದು. ತಂದೆಯು ತಿಳಿಸುತ್ತಾರೆ - ಮಕ್ಕಳೇ, ನೀವಂತೂ ತಮ್ಮ ದೇಹವನ್ನೂ ಸಹ ಮರೆಯಬೇಕು. ಒಬ್ಬ ತಂದೆಯನ್ನು ನೆನಪು ಮಾಡಬೇಕು, ಇದರಲ್ಲಿಯೇ ಬಹಳ ಪರಿಶ್ರಮವಿದೆ. ಮಾಯೆಯು ಒಳ್ಳೊಳ್ಳೆ ಮಕ್ಕಳನ್ನೂ ಸಹ ನಾಮ-ರೂಪದಲ್ಲಿ ಸಿಲುಕಿಸುತ್ತದೆ. ಈ ಹವ್ಯಾಸವು ಬಹಳ ಕೆಟ್ಟದ್ದಾಗಿದೆ. ಹೇಗೆ ಅಂತಹವರು ಬಹಳ ಕೀಳುಮಟ್ಟದವರಾಗಿಬಿಡುತ್ತಾರೆ. ಶರೀರವನ್ನು ನೆನಪು ಮಾಡುವುದು ಭೂತಗಳನ್ನು ನೆನಪು ಮಾಡುವುದಾಯಿತು. ಒಬ್ಬ ಶಿವತಂದೆಯನ್ನು ನೆನಪು ಮಾಡಿ ಎಂದು ನಾವು ಹೇಳುತ್ತೇವೆ. ನೀವು ಮತ್ತೆ 5 ಭೂತಗಳನ್ನು ನೆನಪು ಮಾಡುತ್ತಾ ಇರುತ್ತೀರಿ. ದೇಹದೊಂದಿಗೆ ಸ್ವಲ್ಪವೂ ಸೆಳೆತವಿರಬಾರದು. ಬ್ರಾಹ್ಮಿಣಿಯಿರಿಂದಲೂ ಸಹ ಕಲಿಯಬೇಕೇ ಹೊರತು ಅವರ ನಾಮ-ರೂಪದಲ್ಲಿ ಸಿಲುಕಬಾರದು. ದೇಹೀ ಅಭಿಮಾನಿಯಾಗುವುದರಲ್ಲಿಯೇ ಪರಿಶ್ರಮವಿದೆ. ತಂದೆಯ ಬಳಿ ಭಲೆ ಬಹಳ ಮಂದಿ ಮಕ್ಕಳು ತಮ್ಮ ದಿನಚರಿಯನ್ನು ಕಳುಹಿಸುತ್ತಾರೆ ಆದರೆ ತಂದೆಯು ಅವರ ಮೇಲೆ ವಿಶ್ವಾಸವನ್ನಿಡುವುದಿಲ್ಲ. ನಾವು ಶಿವತಂದೆಯ ವಿನಃ ಮತ್ತ್ಯಾರನ್ನೂ ನೆನಪು ಮಾಡುವುದಿಲ್ಲವೆಂದು ಕೆಲವರು ಹೇಳುತ್ತಾರೆ ಆದರೆ ತಂದೆಗೆ ಗೊತ್ತಿದೆ - ಅವರು ಬಿಡಿಗಾಸಿನಷ್ಟೂ ನೆನಪು ಮಾಡುವುದಿಲ್ಲ ನೆನಪಿನಲ್ಲಿಯೇ ಪರಿಶ್ರಮವಿದೆ. ಎಲ್ಲಿಯಾದರೂ ಒಂದುಕಡೆ ಸಿಕ್ಕಿಕೊಳ್ಳುತ್ತಾರೆ, ದೇಹಧಾರಿಯನ್ನು ನೆನಪು ಮಾಡುವುದು 5 ಭೂತಗಳ ನೆನಪಾಗಿದೆ. ಇದಕ್ಕೆ ಭೂತಪೂಜೆಯೆಂದು ಹೇಳಲಾಗುತ್ತದೆ. ಭೂತಗಳನ್ನು ನೆನಪು ಮಾಡುತ್ತಾರೆ, ಇಲ್ಲಂತೂ ನೀವು ಒಬ್ಬ ಶಿವತಂದೆಯನ್ನೇ ನೆನಪು ಮಾಡಬೇಕಾಗಿದೆ. ಪೂಜೆಯ ಮಾತಿಲ್ಲ. ಭಕ್ತಿಯ ಹೆಸರು, ಗುರುತೇ ಮರೆಯಾಗಿಬಿಡುತ್ತದೆಯೆಂದಾಗ ಚಿತ್ರಗಳನ್ನೇನು ನೆನಪು ಮಾಡುವುದು? ದೇಹವು ಮಣ್ಣಿನಿಂದ ಮಾಡಲ್ಪಟ್ಟಿದೆ. ತಂದೆಯು ತಿಳಿಸುತ್ತಾರೆ - ಇದೆಲ್ಲವೂ ಸಹ ನಾಟಕದಲ್ಲಿ ನಿಗಧಿಯಾಗಿದೆ. ಈಗ ಪುನಃ ನಿಮ್ಮನ್ನು ಪೂಜಾರಿಗಳಿಂದ ಪೂಜ್ಯರನ್ನಾಗಿ ಮಾಡುತ್ತೇನೆ. ಒಬ್ಬ ತಂದೆಯ ವಿನಃ ಯಾರದೇ ಶರೀರವನ್ನು ನೆನಪು ಮಾಡಬಾರದು. ಆತ್ಮವು ಯಾವಾಗ ಪಾವನವಾಗಿಬಿಡುವುದೋ ಆಗ ಪಾವನ ಶರೀರವೇ ಸಿಗುವುದು. ಈಗಂತೂ ಪಾವನ ಶರೀರವಿಲ್ಲ, ಮೊದಲು ಆತ್ಮವು ಯಾವಾಗ ಸತೋಪ್ರಧಾನದಿಂದ ಸತೋ, ರಜೋ, ತಮೋದಲ್ಲಿ ಬರುತ್ತದೆಯೋ ಅದರನುಸಾರವಾಗಿಯೇ ಶರೀರವು ಸಿಗುತ್ತದೆ. ಈಗ ನೀವಾತ್ಮಗಳು ಪಾವನರಾಗುತ್ತಾ ಹೋಗುವಿರಿ ಆದರೆ ಶರೀರವು ಈಗ ಪಾವನವಾಗುವುದಿಲ್ಲ. ಸತ್ಯಯುಗದಲ್ಲಿಯೇ ಪಾವನ ಶರೀರವು ಸಿಗುತ್ತದೆ. ಇವು ತಿಳಿದುಕೊಳ್ಳುವ ಮಾತುಗಳಾಗಿವೆ. ಯಾರು ಬಹಳ ಚೆನ್ನಾಗಿ ತಿಳಿದುಕೊಂಡು ತಿಳಿಸಿಕೊಡುತ್ತಾರೆಯೋ ಅವರ ಬುದ್ಧಿಯಲ್ಲಿಯೇ ಈ ವಿಚಾರಗಳು ಕುಳಿತುಕೊಳ್ಳುತ್ತದೆ. ಆತ್ಮವೇ ಸತೋಪ್ರಧಾನವಾಗಬೇಕಾಗಿದೆ. ತಂದೆಯನ್ನು ನೆನಪು ಮಾಡುವುದು ಅತಿದೊಡ್ಡ ಪರಿಶ್ರಮವಾಗಿದೆ. ಕೆಲವರಿಗಂತೂ ಸ್ವಲ್ಪವೂ ಪರಿಶ್ರಮವಾಗುವುದಿಲ್ಲ. ಪಾಸ್-ವಿತ್-ಆನರ್ ಆಗಬೇಕೆಂದರೆ ಎಲ್ಲಿಯೂ ಸ್ವಲ್ಪವೂ ಅಲೆದಾಡಬಾರದು. ಒಬ್ಬ ತಂದೆಯದೇ ನೆನಪಿರಲಿ ಆದರೆ ಮಕ್ಕಳ ಬುದ್ಧಿಯೋಗವು ಅಲೆದಾಡುತ್ತಿರುತ್ತದೆ. ಎಷ್ಟು ಅನೇಕರನ್ನು ತಮ್ಮ ಸಮಾನರನ್ನಾಗಿ ಮಾಡಿಕೊಳ್ಳುವಿರೋ ಅಷ್ಟೇ ದೊಡ್ಡ ಪದವಿಯು ಸಿಗುವುದು. ದೇಹವನ್ನು ನೆನಪು ಮಾಡುವವರು ಶ್ರೇಷ್ಠಪದವಿಯನ್ನು ಪಡೆಯಲು ಸಾಧ್ಯವಿಲ್ಲ. ಇಲ್ಲಂತೂ ಪಾಸ್-ವಿತ್-ಆನರ್ ಆಗಬೇಕಾಗಿದೆ. ಪರಿಶ್ರಮವಿಲ್ಲದೆ ಪದವಿಯು ಹೇಗೆ ಸಿಗುವುದು? ದೇಹವನ್ನು ನೆನಪು ಮಾಡುವವರು ಯಾವುದೇ ಪುರುಷಾರ್ಥ ಮಾಡಲು ಸಾಧ್ಯವಿಲ್ಲ. ತಂದೆಯು ತಿಳಿಸುತ್ತಾರೆ - ಚೆನ್ನಾಗಿ ಪುರುಷಾರ್ಥ ಮಾಡುವವರನ್ನು ಅನುಸರಿಸಿ. ಇವರನ್ನೂ ನೋಡಿ, ಇವರು ಪುರುಷಾರ್ಥಿಯಾಗಿದ್ದಾರಲ್ಲವೆ!

ಇದು ಬಹಳ ವಿಚಿತ್ರವಾದ ಜ್ಞಾನವಾಗಿದೆ, ಪ್ರಪಂಚದಲ್ಲಿ ಯಾರಿಗೂ ತಿಳಿದಿಲ್ಲ. ಆತ್ಮದ ಪರಿವರ್ತನೆ ಹೇಗಾಗುತ್ತದೆ ಎಂಬುದು ಯಾರ ಬುದ್ದಿಯಲ್ಲಿಯೂ ಕುಳಿತುಕೊಳ್ಳುವುದಿಲ್ಲ. ಇದೆಲ್ಲವೂ ಗುಪ್ತಪರಿಶ್ರಮವಾಗಿದೆ. ತಂದೆಯೂ ಗುಪ್ತವಾಗಿದ್ದಾರೆ. ನೀವು ರಾಜ್ಯಭಾಗ್ಯವನ್ನು ಹೇಗೆ ಪ್ರಾಪ್ತಿ ಮಾಡಿಕೊಳ್ಳುತ್ತೀರಿ! ಜಗಳ-ಹೊಡೆದಾಟ ಏನೂ ಇಲ್ಲ! ಜ್ಞಾನ ಮತ್ತು ಯೋಗದ ಮಾತೇ ಮುಖ್ಯವಾಗಿದೆ. ನಾವು ಯಾರೊಂದಿಗೂ ಯುದ್ಧ ಮಾಡುವುದಿಲ್ಲ. ಇಲ್ಲಿ ಆತ್ಮವನ್ನು ಪವಿತ್ರ ಮಾಡಿಕೊಳ್ಳಲು ಪರಿಶ್ರಮಪಡಬೇಕಾಗಿದೆ. ಆತ್ಮವು ಹೇಗೆ ಪತಿತವಾಗುತ್ತಾ ಹೋಗುವುದೋ ಹಾಗೆಯೇ ಪತಿತ ಶರೀರವನ್ನೇ ತೆಗೆದುಕೊಳ್ಳುತ್ತದೆ. ಈಗ ಪುನಃ ಆತ್ಮವು ಪಾವನವಾಗಿ ಹೋಗಬೇಕಾಗಿದೆ. ಇದರಲ್ಲಿಯೇ ಬಹಳ ಪರಿಶ್ರಮವಿದೆ. ಯಾರ್ಯಾರು ಪುರುಷಾರ್ಥ ಮಾಡುತ್ತಾರೆ ಎಂಬುದನ್ನು ತಂದೆಯು ತಿಳಿದುಕೊಳ್ಳುತ್ತಾರೆ. ಇದು ಶಿವತಂದೆಯ ಭಂಡಾರವಾಗಿದೆ. ಶಿವತಂದೆಯ ಭಂಡಾರದಲ್ಲಿ ನೀವು ಸೇವೆ ಮಾಡುತ್ತೀರಿ. ಸೇವೆ ಮಾಡಲಿಲ್ಲವೆಂದರೆ ಹೋಗಿ ಬಹಳ ಕನಿಷ್ಟಪದವಿಯನ್ನು ಪಡೆಯುತ್ತೀರಿ. ತಂದೆಯ ಬಳಿ ಸೇವೆ ಮಾಡಲು ಬಂದಿರಿ ಮತ್ತು ಸೇವೆ ಮಾಡಲಿಲ್ಲವೆಂದರೆ ಪದವಿಯೇನು ಸಿಗುವುದು! ಈಗ ರಾಜಧಾನಿಯು ಸ್ಥಾಪನೆಯಾಗುತ್ತಿದೆ, ಇದರಲ್ಲಿ ನೌಕರರು-ಚಾಕರರು ಎಲ್ಲರೂ ಆಗುತ್ತಾರಲ್ಲವೆ. ಈಗ ರಾವಣನ ಮೇಲೆ ಜಯಗಳಿಸುತ್ತೀರಿ ಮತ್ತೆ ಉಳಿದಂತೆ ಮತ್ತ್ಯಾವುದೇ ಯುದ್ಧದ ಮಾತಿಲ್ಲ. ಇದು ಎಷ್ಟು ಗುಪ್ತಮಾತಾಗಿದೆ. ಯೋಗಬಲದಿಂದ ನೀವು ವಿಶ್ವದ ರಾಜ್ಯವನ್ನು ಪಡೆಯುತ್ತೀರಿ. ನಾವು ನಮ್ಮ ಶಾಂತಿಧಾಮದ ನಿವಾಸಿಗಳಾಗಿದ್ದೇವೆಂದು ನಿಮಗೆ ತಿಳಿದಿದೆ. ನೀವು ಮಕ್ಕಳಿಗೆ ಬೇಹದ್ದಿನ ಮನೆಯೇ ನೆನಪಿದೆ. ಇಲ್ಲಿ ನಾವು ಪಾತ್ರವನ್ನಭಿನಯಿಸಲು ಬಂದಿದ್ದೇವೆ, ಪುನಃ ಅಲ್ಲಿಗೆ ಹೋಗುತ್ತೇವೆ. ಆತ್ಮವು ಹೇಗೆ ಹೋಗುತ್ತದೆ ಎಂಬುದನ್ನೂ ಸಹ ಯಾರೂ ಅರಿತುಕೊಂಡಿಲ್ಲ. ನಾಟಕದ ಯೋಜನೆಯನುಸಾರ ಆತ್ಮಗಳು ಬರಲೇಬೇಕಾಗಿದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ತಂದೆಯ ಆತ್ಮಿಕ ಮಕ್ಕಳಿಗೆ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಯಾವುದೇ ದೇಹಧಾರಿಯೊಂದಿಗೆ ಸೆಳೆತವಿರಬಾರದು. ಶರೀರವನ್ನು ನೆನಪು ಮಾಡುವುದೂ ಸಹ ಭೂತಗಳನ್ನು ನೆನಪು ಮಾಡುವುದಾಗಿದೆ ಆದ್ದರಿಂದ ಯಾರದೇ ನಾಮ-ರೂಪದಲ್ಲಿ ಸಿಲುಕಿಕೊಳ್ಳಬಾರದಾಗಿದೆ. ತಮ್ಮ ದೇಹದ ಪರಿವೆಯನ್ನೂ ಮರೆಯಬೇಕಾಗಿದೆ.

2. ಭವಿಷ್ಯಕ್ಕಾಗಿ ಅವಿನಾಶಿ ಸಂಪಾದನೆಯನ್ನು ಜಮಾ ಮಾಡಿಕೊಳ್ಳಬೇಕಾಗಿದೆ. ಸೂಕ್ಷ್ಮಬುದ್ಧಿಯವರಾಗಿ ಜ್ಞಾನದ ವಿಚಾರಗಳನ್ನು ಬುದ್ಧಿಯಲ್ಲಿ ಧಾರಣೆ ಮಾಡಿಕೊಳ್ಳಬೇಕಾಗಿದೆ. ತಂದೆಯು ಏನನ್ನು ತಿಳಿಸಿದ್ದಾರೆಯೋ ಅದನ್ನು ತಿಳಿದು ಅನ್ಯರಿಗೂ ತಿಳಿಸಬೇಕಾಗಿದೆ. ತಂದೆಯ ಸಮಾನ ವರದಾನಿಗಳಾಗಬೇಕಾಗಿದೆ.

ವರದಾನ:
ಕಲ್ಪ-ಕಲ್ಪದ ವಿಜಯದ ಸ್ಮೃತಿಯ ಆಧಾರದ ಮೆಲೆ ಮಾಯಾ ಶತ್ರುವಿಗೆ ಆಹ್ವಾನ ಮಾಡುವಂತಹ ಮಹವೀರ ವಿಜಯೀ ಭವ

ಮಹಾವೀರ ವಿಜಯೀ ಮಕ್ಕಳು ಪೇಪರ್ ನೋಡಿ ಗಾಬರಿಯಾಗುವುದಿಲ್ಲ ಏಕೆಂದರೆ ತ್ರಿಕಾಲದರ್ಶಿ ಯಾಗಿರುವಕಾರಣ ಕಲ್ಪ-ಕಲ್ಪದ ವಿಜಯಿ ನಾನೇ ಎಂದು ತಿಳಿದಿರುತ್ತಾರೆ. ಮಹಾವೀರರು ಎಂದೂ ಈ ರೀತಿ ಹೇಳುವುದಿಲ್ಲ ಬಾಬಾ ಮಾಯೆಯನ್ನು ನಮ್ಮ ಬಳಿ ಕಳುಹಿಸಿಕೊಡಬೇಡಿ- ಕೃಪೆಮಾಡಿ, ಆಶೀರ್ವಾದ ಮಾಡಿ ಶಕ್ತಿ ಕೊಡಿ ಏನು ಮಾಡುವುದು ಏನಾದರೂ ಮಾರ್ಗತೋರಿಸಿ..... ಎಂದು, ಇದೂ ಸಹ ಬಲಹೀನತೆಯಾಗಿದೆ. ಮಹಾವೀರರಂತೂ ಶತ್ರುವನ್ನು ಆಹ್ವಾನ ಮಾಡುತ್ತಾರೆ ನೀವು ಬನ್ನಿ ಆದರೆ ನಾವು ವಿಜಯಿಯಾಗುತ್ತೇವೆ ಎನ್ನುತ್ತಾರೆ.

ಸ್ಲೋಗನ್:
ಸಮಯದ ಸೂಚನೆಯಾಗಿದೆ- ಸಮಾನರಾಗಿ ಸಂಪನ್ನರಾಗಿ.

ಅವ್ಯಕ್ತ ಸೂಚನೆ: ಏಕಾಂತಪ್ರಿಯರಾಗಿ ಏಕತೆ ಮತ್ತು ಏಕಾಗ್ರತೆಯನ್ನು ತಮ್ಮದಾಗಿಸಿಕೊಳ್ಳಿ

ಯಾವುದೇ ಸಿದ್ಧಿಗಾಗಿ ಒಂದು ಏಕಾಂತ ಇನ್ನೊಂದು ಏಕಾಗ್ರತೆ ಎರಡರ ವಿಧಿಯ ಮೂಲಕ ಸಿದ್ಧಿಯನ್ನು ಪಡೆದುಕೊಳ್ಳುತ್ತದೆ. ಹೇಗೆ ನಿಮ್ಮ ನೆನಪಾರ್ಥ ಚಿತ್ರಗಳ ಮೂಲಕ ಸಿದ್ಧಿಯನ್ನು ಪ್ರಾಪ್ತಿ ಮಾಡಿಕೊಳ್ಳುವವರ ವಿಶೇಷ ಎರಡು ಮಾತಿನ ವಿಧಿಯನ್ನು ತಮ್ಮದಾಗಿಸಿಕೊಳ್ಳುತ್ತಾರೆ- ಏಕಾಂತವಾಸಿ ಮತ್ತು ಏಕಾಗ್ರತೆ. ಇದೇ ವಿಧಿ ನೀವು ಸಹ ಸಾಕಾರದಲ್ಲಿ ತಮ್ಮದಾಗಿಸಿಕೊಳ್ಳಿ. ಏಕಾಗ್ರತೆ ಕಡಿಮೆಯಾಗುವ ಕಾರಣವೇ ದೃಢ ನಿಶ್ಚಯದ ಕೊರತೆಯಾಗುತ್ತದೆ. ಏಕಾಂತವಾಸಿ ಕಡಿಮೆಯಿಇರುವ ಕಾರಣವೇ ಸಾಧಾರಣ ಸಂಕಲ್ಪ ಬೀಜವನ್ನು ಬಲಹೀನ ಮಾಡಿ ಬಿಡುತ್ತದೆ ಇದಕ್ಕಾಗಿ ಈ ವಿಧಿಯ ಮೂಲಕ ಸಿದ್ಧಿ ಸ್ವರೂಪರಾಗಿ.