21.03.25         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ನೀವು ತಮ್ಮ ಯೋಗಬಲದಿಂದ ಇಡೀ ಸೃಷ್ಟಿಯನ್ನು ಪಾವನ ಮಾಡಬೇಕಾಗಿದೆ, ನೀವು ಯೋಗಬಲದಿಂದಲೇ ಮಾಯೆಯ ಮೇಲೆ ಜಯಗಳಿಸಿ ಜಗಜ್ಜೀತರಾಗುತ್ತೀರಿ”

ಪ್ರಶ್ನೆ:
ತಂದೆಯ ಪಾತ್ರವೇನಾಗಿದೆ, ಆ ಪಾತ್ರವನ್ನು ನೀವು ಮಕ್ಕಳು ಯಾವ ಆಧಾರದ ಮೇಲೆ ಅರಿತುಕೊಂಡಿದ್ದೀರಿ?

ಉತ್ತರ:
ಎಲ್ಲರ ದುಃಖವನ್ನು ಕಳೆದು ಸುಖ ಕೊಡುವುದು, ರಾವಣನ ಬಂಧನದಿಂದ ಬಿಡಿಸುವುದೇ ತಂದೆಯ ಪಾತ್ರವಾಗಿದೆ. ಯಾವಾಗ ತಂದೆಯು ಬರುವರೋ ಆಗ ಭಕ್ತಿಯ ಯಾತ್ರೆಯು ಪೂರ್ಣವಾಗುತ್ತದೆ. ತಂದೆಯು ಬಂದು ನಿಮಗೆ ಸ್ವಯಂ ತನ್ನ ಮತ್ತು ತನ್ನ ಆಸ್ತಿಯ ಪರಿಚಯವನ್ನು ಕೊಡುತ್ತಾರೆ. ನೀವು ಒಬ್ಬ ತಂದೆಯನ್ನು ಅರಿತುಕೊಳ್ಳುವುದರಿಂದಲೇ ಉಳಿದೆಲ್ಲವನ್ನೂ ಅರಿತುಕೊಳ್ಳುತ್ತೀರಿ.

ಗೀತೆ:
ನೀವೇ ತಾಯಿಯಾಗಿದ್ದೀರಿ, ತಂದೆಯೂ ನೀವೇ ಆಗಿದ್ದೀರಿ.........

ಓಂ ಶಾಂತಿ.
ಮಕ್ಕಳು ಓಂ ಶಾಂತಿಯ ಅರ್ಥವನ್ನು ತಿಳಿದುಕೊಂಡಿದ್ದೀರಿ. ತಂದೆಯು ತಿಳಿಸಿದ್ದಾರೆ, ನಾವಾತ್ಮಗಳಾಗಿದ್ದೇವೆ. ಈ ಸೃಷ್ಟಿನಾಟಕದಲ್ಲಿ ನಮ್ಮದು ಮುಖ್ಯಪಾತ್ರವಿದೆ. ಯಾರ ಪಾತ್ರ? ಆತ್ಮವು ಶರೀರಧಾರಣೆ ಮಾಡಿ ಪಾತ್ರವನ್ನಭಿನಯಿಸುತ್ತದೆ. ಆದ್ದರಿಂದ ಈಗ ಮಕ್ಕಳನ್ನು ಆತ್ಮಾಭಿಮಾನಿಗಳನ್ನಾಗಿ ಮಾಡುತ್ತಿದ್ದೇನೆ. ಇಷ್ಟೂ ಸಮಯ ದೇಹಾಭಿಮಾನಿಯಾಗಿದ್ದಿರಿ, ಈಗ ತಮ್ಮನ್ನು ಆತ್ಮವೆಂದು ತಿಳಿದು ತಂದೆಯನ್ನು ನೆನಪು ಮಾಡಬೇಕಾಗಿದೆ. ನಾಟಕದ ಯೋಜನೆಯನುಸಾರ ನಮ್ಮ ತಂದೆಯು ಬಂದಿದ್ದಾರೆ ಅವರು ರಾತ್ರಿಯಲ್ಲಿಯೇ ಬರುತ್ತಾರೆ. ಯಾವಾಗ ಬರುತ್ತಾರೆಂದು ಅವರ ತಿಥಿ, ತಾರೀಖು ಯಾವುದೂ ಇಲ್ಲ. ಲೌಕಿಕ ಜನ್ಮ ತೆಗೆದುಕೊಳ್ಳುವವರಿಗೇ ತಿಥಿ, ತಾರೀಖು ಇರುತ್ತದೆ. ಇವರಂತೂ ಪಾರಲೌಕಿಕ ತಂದೆಯಾಗಿದ್ದಾರೆ, ಇವರದು ಲೌಕಿಕ ಜನ್ಮವಲ್ಲ. ಕೃಷ್ಣನ ತಿಥಿ, ತಾರೀಖು, ಸಮಯ ಇತ್ಯಾದಿಯೆಲ್ಲವನ್ನೂ ತಿಳಿಸುತ್ತಾರೆ ಆದರೆ ಇವರ ಜನ್ಮಕ್ಕೆ ದಿವ್ಯಜನ್ಮವೆಂದು ಹೇಳಲಾಗುತ್ತದೆ. ತಂದೆಯು ಇವರಲ್ಲಿ ಪ್ರವೇಶ ಮಾಡಿ ತಿಳಿಸುತ್ತಾರೆ - ಇದು ಬೇಹದ್ದಿನ ನಾಟಕವಾಗಿದೆ, ಅದರಲ್ಲಿ ಅರ್ಧಕಲ್ಪ ರಾತ್ರಿಯಾಗಿದೆ, ಯಾವಾಗ ರಾತ್ರಿ ಅರ್ಥಾತ್ ಘೋರ ಅಂಧಕಾರವಾಗುವುದೋ ಆಗ ನಾನು ಬರುತ್ತೇನೆ. ತಿಥಿ, ತಾರೀಖು ಯಾವುದೂ ಇಲ್ಲ. ಈ ಸಮಯದಲ್ಲಿ ಭಕ್ತಿಯೂ ಸಹ ತಮೋಪ್ರಧಾನವಾಗಿದೆ. ಅರ್ಧಕಲ್ಪವು ಬೇಹದ್ದಿನ ದಿನವಾಗಿದೆ, ನಾನು ಇವರಲ್ಲಿ (ಬ್ರಹ್ಮಾ) ಪ್ರವೇಶ ಮಾಡಿದ್ದೇನೆಂದು ಸ್ವಯಂ ತಂದೆಯೇ ತಿಳಿಸುತ್ತಾರೆ. ಗೀತೆಯಲ್ಲಿ ಭಗವಾನುವಾಚ ಆದರೆ ಭಗವಂತನು ಮನುಷ್ಯನಾಗಿರಲು ಸಾಧ್ಯವಿಲ್ಲ. ಕೃಷ್ಣನೂ ಸಹ ದೈವೀ ಗುಣವಂತನಾಗಿದ್ದಾನೆ. ಇದು ಮನುಷ್ಯಲೋಕವಾಗಿದೆ, ದೇವಲೋಕವಲ್ಲ. ಬ್ರಹ್ಮಾ ದೇವತಾಯ ನಮಃ....... ಎಂದು ಹಾಡುತ್ತಾರೆ. ಅವರು ಸೂಕ್ಷ್ಮವತನವಾಸಿಯಾಗಿದ್ದಾರೆ. ಮಕ್ಕಳಿಗೆ ತಿಳಿದಿದೆ - ಅಲ್ಲಿ ಮೂಳೆ, ಮಾಂಸದ ಶರೀರವಿರುವುದಿಲ್ಲ. ಅಲ್ಲಿ ಸೂಕ್ಷ್ಮ, ಶ್ವೇತ ಛಾಯೆಯಾಗಿದೆ. ಮೂಲವತನದಲ್ಲಿದ್ದಾಗ ಆತ್ಮಕ್ಕೆ ಛಾಯೆಯ ಸೂಕ್ಷ್ಮ ಶರೀರವಾಗಲಿ, ಸ್ಥೂಲ ಶರೀರವಾಗಲಿ ಇರುವುದಿಲ್ಲ. ಈ ಮಾತುಗಳನ್ನು ಯಾವುದೇ ಮನುಷ್ಯರು ತಿಳಿದುಕೊಂಡಿಲ್ಲ. ತಂದೆಯೇ ಬಂದು ತಿಳಿಸುತ್ತಾರೆ. ಬ್ರಾಹ್ಮಣರೇ ಕೇಳುತ್ತೀರಿ ಮತ್ತ್ಯಾರೂ ಕೇಳುವುದಿಲ್ಲ. ಬ್ರಾಹ್ಮಣವರ್ಣವಿರುವುದೇ ಭಾರತದಲ್ಲಿ, ಯಾವಾಗ ಪರಮಪಿತ ಪರಮಾತ್ಮನು ಪ್ರಜಾಪಿತ ಬ್ರಹ್ಮಾರವರ ಮೂಲಕ ಬ್ರಾಹ್ಮಣ ಧರ್ಮದ ಸ್ಥಾಪನೆ ಮಾಡುವರೋ ಆಗಲೇ ಬ್ರಾಹ್ಮಣವರ್ಣವಾಗುತ್ತದೆ. ಈಗ ಇವರಿಗೆ ರಚಯಿತನೆಂತಲೂ ಹೇಳುವುದಿಲ್ಲ, ಏಕೆಂದರೆ ಹೊಸದಾಗಿ ಏನೂ ರಚಿಸುವುದಿಲ್ಲ. ಹಳೆಯದನ್ನೇ ಕೇವಲ ಪರಿವರ್ತಿಸುತ್ತಾರೆ. ಹೇ ತಂದೆಯೇ, ಪತಿತ ಪ್ರಪಂಚದಲ್ಲಿ ಬಂದು ನಮ್ಮನ್ನು ಪಾವನ ಮಾಡಿ ಎಂದು ಕರೆಯುತ್ತಾರೆ. ಈಗ ನಿಮ್ಮನ್ನು ಪಾವನರನ್ನಾಗಿ ಮಾಡುತ್ತಿದ್ದೇನೆ. ನೀವು ಯೋಗಬಲದಿಂದ ಈ ಸೃಷ್ಟಿಯನ್ನು ಪಾವನ ಮಾಡುತ್ತಿದ್ದೀರಿ. ಮಾಯೆಯ ಮೇಲೆ ಜಯಗಳಿಸಿ ಜಗಜ್ಜೀತರಾಗುತ್ತೀರಿ. ಯೋಗಬಲಕ್ಕೆ ವೈಜ್ಞಾನಿಕ ಬಲವೆಂದೂ ಕರೆಯುತ್ತಾರೆ. ಋಷಿ-ಮುನಿ ಮೊದಲಾದವರು ಶಾಂತಿಯನ್ನು ಬಯಸುತ್ತಾರೆ ಆದರೆ ಶಾಂತಿಯ ಅರ್ಥವನ್ನು ತಿಳಿದುಕೊಂಡಿಲ್ಲ. ಇಲ್ಲಂತೂ ಅವಶ್ಯವಾಗಿ ಪಾತ್ರವನ್ನಭಿನಯಿಸಬೇಕಲ್ಲವೆ. ಶಾಂತಿಧಾಮವು ಮಧುರ ಶಾಂತಿಯ ಮನೆಯಾಗಿದೆ. ನೀವಾತ್ಮಗಳಿಗೆ ಈಗ ಅರ್ಥವಾಗಿದೆ - ನಮ್ಮ ಮನೆಯು ಶಾಂತಿಧಾಮವಾಗಿದೆ, ನಾವಿಲ್ಲಿ ಪಾತ್ರವನ್ನಭಿನಯಿಸಲು ಬಂದಿದ್ದೇವೆ. ಹೇ ಪತಿತ-ಪಾವನ, ದುಃಖಹರ್ತ-ಸುಖಕರ್ತ ಬನ್ನಿ, ಬಂದು ನಮ್ಮನ್ನು ರಾವಣನ ಬಂಧನಗಳಿಂದ ಬಿಡಿಸಿ ಎಂದು ತಂದೆಯನ್ನು ಕರೆಯುತ್ತಾರೆ. ಭಕ್ತಿಯು ರಾತ್ರಿ, ಜ್ಞಾನವು ದಿನವಾಗಿದೆ. ರಾತ್ರಿಯು ನಾಶವಾಗಿ ಜ್ಞಾನ ದಿನವು ಬಂದುಬಿಡುತ್ತದೆ. ಇದು ಸುಖ ಮತ್ತು ದುಃಖದ ಆಟವಾಗಿದೆ. ನೀವು ತಿಳಿದುಕೊಂಡಿದ್ದೀರಿ - ಮೊದಲು ನಾವು ಸ್ವರ್ಗದಲ್ಲಿರುತ್ತೇವೆ, ನಂತರ ಕೆಳಗಿಳಿಯುತ್ತಾ-ಇಳಿಯುತ್ತಾ ಬಂದು ನರಕದಲ್ಲಿ ಬಿದ್ದಿದ್ದೇವೆ. ಕಲಿಯುಗವು ಯಾವಾಗ ಸಮಾಪ್ತಿಯಾಗುವುದೋ ಮತ್ತೆ ಸತ್ಯಯುಗವು ಯಾವಾಗ ಬರುವುದೆಂದು ಯಾರೂ ತಿಳಿದುಕೊಂಡಿಲ್ಲ. ನೀವು ತಂದೆಯನ್ನು ಅರಿತುಕೊಂಡಿರುವುದರಿಂದ ತಂದೆಯ ಮೂಲಕ ಎಲ್ಲವನ್ನೂ ಅರಿತುಕೊಂಡಿದ್ದೀರಿ. ಮನುಷ್ಯರು ಭಗವಂತನನ್ನು ಹುಡುಕಲು ಎಷ್ಟೊಂದು ಅಲೆದಾಡುತ್ತಾರೆ. ತಂದೆಯನ್ನು ಅರಿತುಕೊಂಡೇ ಇಲ್ಲ. ಯಾವಾಗ ತಂದೆಯು ಬಂದು ತಮ್ಮ ಮತ್ತು ಆಸ್ತಿಯ ಪರಿಚಯ ಕೊಡುವರೋ ಆಗಲೇ ಅರಿತುಕೊಳ್ಳುವರು. ಆಸ್ತಿಯು ತಂದೆಯಿಂದಲೇ ಸಿಗುವುದು ತಾಯಿಯಿಂದಲ್ಲ. ಇವರಿಗೆ (ಬ್ರಹ್ಮಾ) ತಾಯಿಯೆಂತಲೂ ಹೇಳುತ್ತಾರೆ ಆದರೆ ಇವರಿಂದ ಆಸ್ತಿಯು ಸಿಗುವುದಿಲ್ಲ. ಇವರನ್ನು ನೆನಪೂ ಸಹ ಮಾಡಬಾರದು. ಬ್ರಹ್ಮಾ, ವಿಷ್ಣು, ಶಂಕರನೂ ಸಹ ಶಿವನ ಮಕ್ಕಳಾಗಿದ್ದಾರೆ ಎಂಬುದನ್ನು ಯಾರೂ ತಿಳಿದುಕೊಂಡಿಲ್ಲ. ಬೇಹದ್ದಿನ ಇಡೀ ಪ್ರಪಂಚದ ರಚಯಿತ ಒಬ್ಬರೇ ತಂದೆಯಾಗಿದ್ದಾರೆ. ಉಳಿದೆಲ್ಲರೂ ಅವರ ರಚನೆ ಅಥವಾ ಹದ್ದಿನ ರಚಯಿತನಾಗಿದ್ದಾರೆ. ಈಗ ನೀವು ಮಕ್ಕಳಿಗೆ ತಂದೆಯು ತಿಳಿಸುತ್ತಾರೆ - ನನ್ನನ್ನು ನೆನಪು ಮಾಡಿದರೆ ನಿಮ್ಮ ವಿಕರ್ಮಗಳು ವಿನಾಶವಾಗುತ್ತವೆ. ಮನುಷ್ಯರು ತಂದೆಯನ್ನೇ ಅರಿತುಕೊಂಡಿಲ್ಲ ಅಂದಮೇಲೆ ಯಾರನ್ನು ನೆನಪು ಮಾಡುವರು? ಆದ್ದರಿಂದ ತಂದೆಯು ತಿಳಿಸುತ್ತಾರೆ - ಎಷ್ಟೊಂದು ನಿರ್ಧನಿಕರಾಗಿಬಿಟ್ಟಿದ್ದಾರೆ. ಇದೂ ಸಹ ನಾಟಕದಲ್ಲಿ ನಿಗಧಿಯಾಗಿದೆ.

ಭಕ್ತಿ ಮತ್ತು ಜ್ಞಾನ – ಎರಡರಲ್ಲ್ಲೂ ಎಲ್ಲದಕ್ಕಿಂತ ಶ್ರೇಷ್ಠಕರ್ಮವಾಗಿದೆ ದಾನ ಮಾಡುವುದು. ಭಕ್ತಿಯಲ್ಲಿ ಈಶ್ವರಾರ್ಥವಾಗಿ ದಾನ ಮಾಡುತ್ತಾರೆ, ಏತಕ್ಕಾಗಿ? ಯಾವುದಾದರೊಂದು ಕಾಮನೆಯು ಅವಶ್ಯವಾಗಿ ಇರುತ್ತದೆ. ಎಂತಹ ಕರ್ಮವನ್ನು ಮಾಡುತ್ತೇವೆಯೋ ಅಂತಹ ಫಲವನ್ನು ಇನ್ನೊಂದು ಜನ್ಮದಲ್ಲಿ ಪಡೆಯುತ್ತೇವೆ. ಈ ಜನ್ಮದಲ್ಲಿ ಏನು ಮಾಡುತ್ತೇವೆಯೋ ಅದರ ಫಲವನ್ನು ಇನ್ನೊಂದು ಜನ್ಮದಲ್ಲಿ ಪಡೆಯುತ್ತೇವೆಂದು ತಿಳಿಯುತ್ತಾರೆ, ಜನ್ಮ-ಜನ್ಮಾಂತರ ಪಡೆಯುವುದಿಲ್ಲ. ಒಂದುಜನ್ಮಕ್ಕಾಗಿ ಫಲವು ಸಿಗುತ್ತದೆ. ಎಲ್ಲದಕ್ಕಿಂತ ಒಳ್ಳೆಯ ಕರ್ಮವು ದಾನವಾಗಿದೆ. ದಾನಿಗಳಿಗೆ ಪುಣ್ಯಾತ್ಮರೆಂದು ಕರೆಯಲಾಗುತ್ತದೆ. ಭಾರತಕ್ಕೆ ಮಹಾದಾನಿ ಎಂದು ಹೇಳಲಾಗುತ್ತದೆ. ಭಾರತದಲ್ಲಿ ಎಷ್ಟು ದಾನವಾಗುವುದೋ ಅಷ್ಟು ಮತ್ತ್ಯಾವುದೇ ಖಂಡದಲ್ಲಿಲ್ಲ. ತಂದೆಯೂ ಸಹ ಬಂದು ಮಕ್ಕಳಿಗೆ ದಾನ ಮಾಡುತ್ತಾರೆ ಮತ್ತೆ ಮಕ್ಕಳೇ ತಂದೆಗೆ ದಾನ ಮಾಡುತ್ತೀರಿ. ಮಕ್ಕಳು ಹೇಳುತ್ತಾರೆ - ಬಾಬಾ, ತಾವು ಬಂದರೆ ನಾವು ನಮ್ಮ ತನು-ಮನ-ಧನವೆಲ್ಲವನ್ನೂ ಅರ್ಪಣೆ ಮಾಡಿಬಿಡುತ್ತೇವೆ. ತಾವಲ್ಲದೆ ನಮಗೆ ಮತ್ತ್ಯಾರೂ ಇಲ್ಲ. ಅದಕ್ಕೆ ತಂದೆಯೂ ಹೇಳುತ್ತಾರೆ - ನನಗೆ ನೀವೆಲ್ಲರೂ ಮಕ್ಕಳಾಗಿದ್ದೀರಿ. ನನಗೆ ಸ್ವರ್ಗಸ್ಥಾಪನೆ ಮಾಡುವವರೆಂದು ಹೇಳುತ್ತಾರೆ, ನಾನು ಬಂದು ನಿಮಗೆ ಸ್ವರ್ಗದ ರಾಜ್ಯಭಾಗ್ಯವನ್ನು ಕೊಡುತ್ತೇನೆ. ಬಾಬಾ ಎಲ್ಲವೂ ತಮ್ಮದೆಂದು ಮಕ್ಕಳು ನನ್ನ ಅರ್ಥವಾಗಿ ಎಲ್ಲವನ್ನೂ ಕೊಡುತ್ತಾರೆ. ಭಕ್ತಿಮಾರ್ಗದಲ್ಲಿಯೂ ಸಹ ಬಾಬಾ ಇದೆಲ್ಲವೂ ತಾವು ಕೊಟ್ಟಿರುವುದೇ ಎಂದು ಹೇಳುತ್ತಿದ್ದರು ಮತ್ತೆ ಅದು ಹೊರಟುಹೋದಾಗ ದುಃಖಿಯಾಗಿಬಿಡುತ್ತಾರೆ. ಅದು ಭಕ್ತಿಯ ಅಲ್ಪಕಾಲದ ಸುಖವಾಗಿದೆ. ತಂದೆಯು ತಿಳಿಸುತ್ತಾರೆ - ಭಕ್ತಿಯಲ್ಲಿ ನೀವು ನನಗೆ ಪರೋಕ್ಷವಾಗಿ ದಾನ-ಪುಣ್ಯಗಳನ್ನು ಮಾಡುತ್ತೀರಿ ಅದರ ಫಲವಂತೂ ನಿಮಗೆ ಸಿಗುತ್ತಿರುತ್ತದೆ. ಈ ಸಮಯದಲ್ಲಿ ನಾನು ನಿಮಗೆ ಕರ್ಮ, ಅಕರ್ಮ, ವಿಕರ್ಮದ ರಹಸ್ಯವನ್ನು ತಿಳಿಸುತ್ತೇನೆ. ಭಕ್ತಿಮಾರ್ಗದಲ್ಲಿ ನೀವು ಎಂತಹ ಕರ್ಮ ಮಾಡುವಿರೋ ಅದಕ್ಕೆ ಪ್ರತಿಯಾಗಿ ಅಲ್ಪಕಾಲದ ಸುಖವೂ ಸಹ ನನ್ನಿಂದಲೇ ನಿಮಗೆ ಸಿಗುತ್ತದೆ. ಈ ಮಾತುಗಳು ಪ್ರಪಂಚದವರಿಗೆ ಯಾರಿಗೂ ತಿಳಿದಿಲ್ಲ. ತಂದೆಯೇ ಬಂದು ಕರ್ಮಗಳ ರಹಸ್ಯವನ್ನು ತಿಳಿಸುತ್ತಾರೆ. ಸತ್ಯಯುಗದಲ್ಲಿ ಎಂದೂ ಯಾರೂ ಕೆಟ್ಟಕರ್ಮವನ್ನು ಮಾಡುವುದಿಲ್ಲ, ಸದಾ ಸುಖವೇ ಸುಖವಿರುತ್ತದೆ. ನೆನಪೂ ಸಹ ಸುಖಧಾಮ, ಸ್ವರ್ಗವನ್ನೇ ಮಾಡುತ್ತಾರೆ. ಈಗ ನರಕದಲ್ಲಿ ಕುಳಿತಿದ್ದಾರೆ ಆದರೂ ಸಹ ಇಂತಹವರು ಸ್ವರ್ಗಸ್ಥರಾದರೆಂದು ಹೇಳುತ್ತಾರೆ. ಆತ್ಮಕ್ಕೆ ಸ್ವರ್ಗವು ಎಷ್ಟು ಪ್ರಿಯವೆನಿಸುತ್ತದೆ! ಇಂತಹವರು ಸ್ವರ್ಗಸ್ಥರಾದರೆಂದು ಆತ್ಮವೇ ಹೇಳುತ್ತದೆಯಲ್ಲವೆ ಆದರೆ ತಮೋಪ್ರಧಾನರಾಗಿರುವಕಾರಣ ಸ್ವರ್ಗವೇನು, ನರಕವೇನು ಎಂಬುದು ಅದಕ್ಕೆ ಅರ್ಥವಾಗುವುದಿಲ್ಲ. ಬೇಹದ್ದಿನ ತಂದೆಯು ತಿಳಿಸುತ್ತಾರೆ - ನೀವೆಲ್ಲರೂ ಎಷ್ಟೊಂದು ತಮೋಪ್ರಧಾನರಾಗಿಬಿಟ್ಟಿದ್ದೀರಿ, ನಾಟಕವನ್ನು ಅರಿತುಕೊಂಡೇ ಇಲ್ಲ. ಸೃಷ್ಟಿಚಕ್ರವು ಸುತ್ತುತ್ತದೆ ಎಂದು ತಿಳಿಯುತ್ತಾರೆ ಅಂದಮೇಲೆ ಅದು ಅವಶ್ಯವಾಗಿ ಚಾಚೂತಪ್ಪದೆ ಅದೇ ರೀತಿ ಸುತ್ತುತ್ತದೆಯಲ್ಲವೆ. ಅದನ್ನು ಕೇವಲ ನಾಮಮಾತ್ರಕ್ಕೆ ಹೇಳುತ್ತಾರೆ. ಈಗ ಇದು ಸಂಗಮಯುಗವಾಗಿದೆ. ಇದೊಂದೇ ಸಂಗಮಯುಗದ ಗಾಯನವಿದೆ. ಅರ್ಧಕಲ್ಪ ದೇವತೆಗಳ ರಾಜ್ಯವು ನಡೆಯುತ್ತದೆ ಮತ್ತೆ ಆ ರಾಜ್ಯವು ಎಲ್ಲಿ ಹೊರಟುಹೋಗುತ್ತದೆ? ಯಾರು ಜಯಗಳಿಸುತ್ತಾರೆ? ಇದನ್ನೂ ಸಹ ಯಾರೂ ತಿಳಿದುಕೊಂಡಿಲ್ಲ. ತಂದೆಯು ತಿಳಿಸುತ್ತಾರೆ - ರಾವಣನು ಕಸಿದುಕೊಳ್ಳುತ್ತಾನೆ, ಇದಕ್ಕೆ ಅವರು ದೇವತೆಗಳು ಮತ್ತು ಅಸುರರ ಯುದ್ಧವನ್ನು ತೋರಿಸಿದ್ದಾರೆ.

ಈಗ ತಂದೆಯು ತಿಳಿಸುತ್ತಾರೆ – ಪಂಚ ವಿಕಾರ ರೂಪಿ ರಾವಣನಿಂದ ಸೋಲುತ್ತೀರಿ, ಮತ್ತೆ ರಾವಣನ ಮೇಲೆ ಜಯವನ್ನೂ ಗಳಿಸುತ್ತೀರಿ. ನೀವು ಪೂಜ್ಯರಾಗಿದ್ದಿರಿ, ನಂತರ ಪೂಜಾರಿ ಪತಿತರಾಗಿಬಿಡುತ್ತೀರೆಂದರೆ ರಾವಣನಿಂದ ಸೋತಂತಾಯಿತಲ್ಲವೆ. ರಾವಣನು ನಿಮ್ಮ ಶತ್ರುವಾಗಿರುವ ಕಾರಣ ಸದಾ ಅವನನ್ನು ಸುಡುತ್ತಲೇ ಬಂದಿದ್ದೀರಿ ಆದರೆ ನಿಮಗೆ ತಿಳಿದಿಲ್ಲ. ಈಗ ತಂದೆಯು ತಿಳಿಸುತ್ತಾರೆ - ರಾವಣನ ಕಾರಣ ನೀವು ಪತಿತರಾಗಿದ್ದೀರಿ, ಈ ವಿಕಾರಗಳಿಗೇ ಮಾಯೆಯೆಂದು ಹೇಳಲಾಗುತ್ತದೆ. ಮಾಯಾಜೀತರೇ ಜಗಜ್ಜೀತರು. ಈ ರಾವಣನು ಎಲ್ಲರಿಗಿಂತ ಹಳೆಯ ಶತ್ರುವಾಗಿದ್ದಾನೆ, ಈಗ ಶ್ರೀಮತದಿಂದ ನೀವು ಈ ಪಂಚವಿಕಾರಗಳ ಮೇಲೆ ಜಯಗಳಿಸುತ್ತೀರಿ. ತಂದೆಯು ಜಯವನ್ನು ಪ್ರಾಪ್ತಿ ಮಾಡಿಸಲು ಬಂದಿದ್ದಾರೆ. ಇದು ಆಟವಾಗಿದೆಯಲ್ಲವೆ. ಮಾಯೆಯಿಂದ ಸೋಲುವುದೇ ಸೋಲು, ಮಾಯೆಯೊಂದಿಗೆ ಗೆಲ್ಲುವುದೇ ಗೆಲುವು. ತಂದೆಯೇ ಜಯವನ್ನು ಪ್ರಾಪ್ತಿ ಮಾಡಿಸುತ್ತಾರೆ ಆದ್ದರಿಂದ ಅವರನ್ನು ಸರ್ವಶಕ್ತಿವಂತನೆಂದು ಕರೆಯುತ್ತಾರೆ. ರಾವಣನೂ ಸಹ ಕಡಿಮೆ ಶಕ್ತಿವಂತನೇನಲ್ಲ. ಆದರೆ ರಾವಣನು ದುಃಖವನ್ನು ಕೊಡುವುದರಿಂದ ಅವನ ಗಾಯನವಿಲ್ಲ. ರಾವಣನು ಬಹಳ ಶಕ್ತಿಶಾಲಿಯಾಗಿದ್ದಾನೆ, ನಿಮ್ಮ ರಾಜ್ಯಭಾಗ್ಯವನ್ನೇ ಕಸಿದುಕೊಳ್ಳುತ್ತಾನೆ. ನಾವು ಹೇಗೆ ಸೋಲುತ್ತೇವೆ ಮತ್ತೆ ಹೇಗೆ ಗೆಲ್ಲುತ್ತೇವೆಂದು ಈಗ ತಿಳಿದುಕೊಂಡಿದ್ದೀರಿ. ಆತ್ಮವು ನನಗೆ ಶಾಂತಿ ಬೇಕು, ನಾವು ಮನೆಗೆ ಹೋಗಬೇಕು ಎಂದೇ ಬಯಸುತ್ತದೆ. ಭಕ್ತರು ಭಗವಂತನನ್ನು ನೆನಪು ಮಾಡುತ್ತಾರೆ ಆದರೆ ಕಲ್ಲುಬುದ್ಧಿಯವರಾಗಿರುವ ಕಾರಣ ತಿಳಿದುಕೊಂಡಿಲ್ಲ. ಭಗವಂತನು ತಂದೆಯಾಗಿದ್ದಾರೆ ಅಂದಮೇಲೆ ಅವರಿಂದ ಅವಶ್ಯವಾಗಿ ಆಸ್ತಿಯು ಸಿಗಬೇಕು. ಸಿಗುವುದೂ ಸಹ ಖಚಿತವಾಗಿದೆ ಆದರೆ ಯಾವಾಗ ಸಿಗುತ್ತದೆ ಮತ್ತೆ ಹೇಗೆ ಕಳೆದುಕೊಳ್ಳುತ್ತೇವೆಂದು ತಿಳಿದುಕೊಂಡಿಲ್ಲ. ನಾನು ಈ ಬ್ರಹ್ಮಾರವರ ತನುವಿನ ಮೂಲಕ ತಿಳಿಸಿಕೊಡುತ್ತೇನೆ. ನನಗೂ ಸಹ ಕರ್ಮೇಂದ್ರಿಯಗಳು ಬೇಕಲ್ಲವೆ. ನನಗೆ ನನ್ನದೇ ಆದ ಕರ್ಮೇಂದ್ರಿಯಗಳಂತೂ ಇಲ್ಲ. ಸೂಕ್ಷ್ಮವತನದಲ್ಲಿಯೂ ಕರ್ಮೇಂದ್ರಿಯಗಳಿವೆ, ನಡೆಯುತ್ತಾ-ತಿರುಗಾಡುತ್ತಾ ಹೇಗೆ ಮೂಖ ನಾಟಕವಾಗಿರುತ್ತದೆಯೋ ಅದೇ ರೀತಿ ಈ ಮೂವೀ ಮತ್ತು ಸಿನೆಮಾಗಳು ಬಂದಿವೆ ಆದ್ದರಿಂದ ತಂದೆಗೂ ಸಹ ತಿಳಿಸಿಕೊಡಲು ಸಹಜವಾಗುತ್ತದೆ. ಅವರದು ಬಾಹುಬಲ, ನಿಮ್ಮದು ಯೋಗಬಲವಾಗಿದೆ. ಅವರಿಬ್ಬರು ಸಹೋದರರು ಒಂದುವೇಳೆ ಪರಸ್ಪರ ಒಂದಾಗಿಬಿಟ್ಟರೆ ಇಡೀ ವಿಶ್ವದ ಮೇಲೆ ರಾಜ್ಯ ಮಾಡಬಲ್ಲರು ಆದರೆ ಅದು ನಿಯಮವಿಲ್ಲ. ಅವರಲ್ಲಿಯೇ ಒಡಕುಂಟಾಗಿದೆ. ನೀವು ಮಕ್ಕಳಿಗೆ ಈಗ ಶಾಂತಿಯ ಶುದ್ಧ ಅಭಿಮಾನವಿರಬೇಕು, ನೀವು ಮನ್ಮನಾಭವದ ಆಧಾರದಿಂದ ಶಾಂತಿಯ ಮೂಲಕ ಜಗಜ್ಜೀತರಾಗುತ್ತೀರಿ. ಅವರದು ವಿಜ್ಞಾನದ ಅಭಿಮಾನವಾಗಿದೆ. ನೀವು ಶಾಂತಿಯ ಅಭಿಮಾನಿಗಳು ತಮ್ಮನ್ನು ಆತ್ಮವೆಂದು ತಿಳಿದು ತಂದೆಯನ್ನು ನೆನಪು ಮಾಡುತ್ತೀರಿ. ನೆನಪಿನಿಂದ ನೀವು ಸತೋಪ್ರಧಾನರಾಗಿಬಿಡುತ್ತೀರಿ. ತಂದೆಯು ಬಹಳ ಸಹಜ ಉಪಾಯವನ್ನು ತಿಳಿಸುತ್ತಾರೆ. ಶಿವತಂದೆಯು ನಾವು ಮಕ್ಕಳಿಗೆ ಪುನಃ ಸ್ವರ್ಗದ ಆಸ್ತಿಯನ್ನು ಕೊಡಲು ಬಂದಿದ್ದಾರೆಂಬುದನ್ನು ನೀವು ತಿಳಿದುಕೊಂಡಿದ್ದೀರಿ. ನಿಮ್ಮ ಯಾವುದೆಲ್ಲಾ ಕಲಿಯುಗೀ ಕರ್ಮಬಂಧನಗಳಿವೆಯೋ ಅದೆಲ್ಲವನ್ನೂ ಮರೆತುಹೋಗಿ ಪಂಚವಿಕಾರಗಳನ್ನೂ ಸಹ ನನಗೆ ದಾನವಾಗಿ ಕೊಟ್ಟುಬಿಡಿ. ನೀವು ಏನೆಲ್ಲವನ್ನೂ ನನ್ನದು-ನನ್ನದು ಎನ್ನುತ್ತಾ ಬಂದಿದ್ದೀರೋ, ನನ್ನಪತಿ, ನನ್ನ ಕೆಲಸ ಇದೆಲ್ಲವನ್ನೂ ಮರೆತುಹೋಗಿ. ಎಲ್ಲವನ್ನೂ ನೋಡುತ್ತಿದ್ದರೂ ಅದರಿಂದ ಮಮತ್ವವನ್ನು ಕಳೆಯಿರಿ ಎಂದು ತಂದೆಯು ತಿಳಿಸುತ್ತಾರೆ. ಈ ಮಾತನ್ನು ತಂದೆಯು ಮಕ್ಕಳಿಗೇ ತಿಳಿಸಿಕೊಡುತ್ತಾರೆ. ಯಾರು ತಂದೆಯನ್ನು ಅರಿತುಕೊಂಡೇ ಇಲ್ಲವೋ ಅವರು ಈ ಭಾಷೆಯನ್ನೂ ಅರಿತುಕೊಳ್ಳಲು ಸಾಧ್ಯವಿಲ್ಲ. ತಂದೆಯು ಬಂದು ಮನುಷ್ಯರಿಂದ ದೇವತೆಗಳನ್ನಾಗಿ ಮಾಡುತ್ತಾರೆ. ದೇವತೆಗಳು ಸತ್ಯಯುಗದಲ್ಲಿಯೇ ಇರುತ್ತಾರೆ, ಕಲಿಯುಗದಲ್ಲಿ ಮನುಷ್ಯರಿದ್ದಾರೆ. ಇಲ್ಲಿಯವರೆಗೂ ಅವರ ಚಿಹ್ನೆಗಳಿವೆ ಅರ್ಥಾತ್ ಚಿತ್ರಗಳಿವೆ. ನನ್ನನ್ನು ಪತಿತ-ಪಾವನನೆಂದೇ ಕರೆಯುತ್ತಾರೆ. ನಾನಂತೂ ನಿಮ್ಮ ಹಾಗೆ ಇಳಿಯುವುದಿಲ್ಲ. ನಾವು ಪಾವನರಾಗಿದ್ದೆವು, ನಂತರ ಕೆಳಗಿಳಿದು ಪತಿತರಾಗಿದ್ದೇವೆ. ಈಗ ತಾವು ಬಂದು ಪಾವನರನ್ನಾಗಿ ಮಾಡಿದರೆ ಮತ್ತೆ ಮನೆಗೆ ಹೋಗುತ್ತೇವೆಂದು ನೀವು ಹೇಳುತ್ತೀರಿ. ಇದು ಆಧ್ಯಾತ್ಮಿಕ ಜ್ಞಾನವಾಗಿದೆ. ಅವಿನಾಶಿ ಜ್ಞಾನರತ್ನಗಳಿವೆಯಲ್ಲವೆ. ಇದು ಹೊಸಜ್ಞಾನವಾಗಿದೆ. ಈಗ ನಿಮಗೆ ಈ ಜ್ಞಾನವನ್ನು ತಿಳಿಸುತ್ತೇನೆ, ರಚಯಿತ ಮತ್ತು ರಚನೆಯ ಆದಿ-ಮಧ್ಯ-ಅಂತ್ಯದ ರಹಸ್ಯವನ್ನು ತಿಳಿಸುತ್ತೇನೆ. ಈಗ ಇದಂತೂ ಹಳೆಯ ಪ್ರಪಂಚವಾಗಿದೆ. ಇದರಲ್ಲಿ ನಿಮ್ಮ ಯಾರೆಲ್ಲಾ ಮಿತ್ರಸಂಬಂಧಿ ಮೊದಲಾದವರಿದ್ದಾರೆಯೋ ದೇಹಸಹಿತ ಎಲ್ಲದರಿಂದ ಮಮತ್ವವನ್ನು ತೆಗೆದುಹಾಕಿ.

ಈಗ ನೀವು ಮಕ್ಕಳು ಸರ್ವಸ್ವವನ್ನು ತಂದೆಗೆ ಅರ್ಪಣೆ ಮಾಡುತ್ತೀರಿ ಅದಕ್ಕೆ ಪ್ರತಿಯಾಗಿ ತಂದೆಯು 21 ಜನ್ಮಗಳ ಸ್ವರ್ಗದ ರಾಜ್ಯಭಾಗ್ಯವನ್ನು ನಿಮಗೆ ಅರ್ಪಣೆ ಮಾಡಿಬಿಡುತ್ತಾರೆ. ಲೇವಾದೇವಿಯಂತೂ ನಡೆಯುತ್ತದೆಯಲ್ಲವೆ. ತಂದೆಯು ನಿಮಗೆ 21 ಜನ್ಮಗಳಿಗಾಗಿ ರಾಜ್ಯಭಾಗ್ಯವನ್ನು ಕೊಡುತ್ತಾರೆ. 21 ಜನ್ಮ, 21 ಪೀಳಿಗೆಯೆಂದೇ ಗಾಯನವಿದೆಯಲ್ಲವೆ ಅರ್ಥಾತ್ 21 ಜನ್ಮಗಳು ಪೂರ್ಣ ಜೀವನವು ನಡೆಯುತ್ತದೆ. ಮಧ್ಯದಲ್ಲಿ ಎಂದೂ ಶರೀರವು ಬಿಟ್ಟುಹೋಗಲು ಸಾಧ್ಯವಿಲ್ಲ. ಅಕಾಲಮೃತ್ಯುವಾಗುವುದಿಲ್ಲ. ನೀವು ಅಮರರಾಗಿ, ಅಮರಪುರಿಯ ಮಾಲೀಕರಾಗುತ್ತೀರಿ. ನಿಮ್ಮನ್ನೆಂದೂ ಕಾಲವು ಕಬಳಿಸಲು ಸಾಧ್ಯವಿಲ್ಲ. ಈಗ ನೀವು ಸಾಯುವುದಕ್ಕಾಗಿ ಪುರುಷಾರ್ಥ ಮಾಡುತ್ತಿದ್ದೀರಿ. ತಂದೆಯು ತಿಳಿಸುತ್ತಾರೆ - ದೇಹಸಹಿತ ದೇಹದ ಎಲ್ಲಾ ಸಂಬಂಧಗಳನ್ನು ಬಿಟ್ಟು ಒಬ್ಬ ತಂದೆಯೊಂದಿಗೆ ಸಂಬಂಧವನ್ನಿಡಿ. ಈಗ ಸುಖದ ಸಂಬಂಧದಲ್ಲಿ ಹೋಗಬೇಕಾಗಿದೆ, ದುಃಖದ ಬಂಧನಗಳನ್ನು ಮರೆಯುತ್ತಾ ಹೋಗಿ. ಗೃಹಸ್ಥ ವ್ಯವಹಾರದಲ್ಲಿರುತ್ತಾ ಪವಿತ್ರರಾಗಬೇಕು. ತಂದೆಯು ತಿಳಿಸುತ್ತಾರೆ - ನನ್ನೊಬ್ಬನನ್ನೇ ನೆನಪು ಮಾಡಿ, ಜೊತೆಜೊತೆಗೆ ದೈವೀಗುಣಗಳನ್ನು ಧಾರಣೆ ಮಾಡಿ. ನೀವು ಈ Œದೇವತೆಗಳ ಹಾಗೆ ಆಗಬೇಕಾಗಿದೆ. ಇದು ನಿಮ್ಮ ಲಕ್ಷ್ಯವಾಗಿದೆ. ಈ ಲಕ್ಷ್ಮೀ-ನಾರಾಯಣರು ಸ್ವರ್ಗದ ಮಾಲೀಕರಾಗಿದ್ದರು, ಇವರು ಹೇಗೆ ರಾಜ್ಯವನ್ನು ಪಡೆದರು ಮತ್ತೆ ಎಲ್ಲಿ ಹೋದರೆಂದು ಯಾರೂ ತಿಳಿದುಕೊಂಡಿಲ್ಲ. ಈಗ ನೀವು ಮಕ್ಕಳು ದೈವೀಗುಣಗಳನ್ನು ಧಾರಣೆ ಮಾಡಬೇಕಾಗಿದೆ, ಯಾರಿಗೂ ದುಃಖವನ್ನು ಕೊಡಬಾರದು. ತಂದೆಯು ದುಃಖಹರ್ತ ಸುಖಕರ್ತನಾಗಿದ್ದಾರೆ ಅಂದಮೇಲೆ ನೀವೂ ಸಹ ಎಲ್ಲರಿಗೆ ಸುಖದ ಮಾರ್ಗವನ್ನು ತಿಳಿಸಬೇಕು ಅರ್ಥಾತ್ ಅಂಧರಿಗೆ ಊರುಗೋಲಾಗಬೇಕು. ಈಗ ತಂದೆಯು ನಿಮಗೆ ಜ್ಞಾನದ ಮೂರನೆಯ ನೇತ್ರವನ್ನು ಕೊಟ್ಟಿದ್ದಾರೆ. ತಂದೆಯು ಹೇಗೆ ಪಾತ್ರವನ್ನಭಿನಯಿಸುತ್ತಾರೆ ಎಂಬುದನ್ನು ನೀವು ತಿಳಿದುಕೊಂಡಿದ್ದೀರಿ. ಈಗ ತಂದೆಯು ನಿಮಗೆ ಏನನ್ನು ಓದಿಸುತ್ತಿದ್ದಾರೆಯೋ ಈ ವಿದ್ಯೆಯು ಪ್ರಾಯಃಲೋಪವಾಗಿಬಿಡುವುದು. ದೇವತೆಗಳಲ್ಲಿ ಈ ಜ್ಞಾನವಿರುವುದಿಲ್ಲ. ನೀವು ಬ್ರಹ್ಮಾಮುಖವಂಶಾವಳಿ ಬ್ರಾಹ್ಮಣರೇ ರಚಯಿತ ಮತ್ತು ರಚನೆಯ ಜ್ಞಾನವನ್ನು ಅರಿತುಕೊಂಡಿದ್ದೀರಿ ಮತ್ತ್ಯಾರೂ ಅರಿತುಕೊಂಡಿಲ್ಲ. ಈ ಲಕ್ಷ್ಮಿ-ನಾರಾಯಣ ಮೊದಲಾದವರಲ್ಲಿಯೂ ಸಹ ಒಂದುವೇಳೆ ಈ ಜ್ಞಾನವಿದ್ದಿದ್ದರೆ ಪರಂಪರೆಯಿಂದ ನಡೆದುಬರುತ್ತಿತ್ತು. ಅಲ್ಲಿ ಜ್ಞಾನದ ಅವಶ್ಯಕತೆಯೇ ಇರುವುದಿಲ್ಲ ಏಕೆಂದರೆ ಅಲ್ಲಿ ಸದ್ಗತಿಯಿರುತ್ತದೆ. ಈಗ ನೀವು ಎಲ್ಲವನ್ನೂ ತಂದೆಗೆ ದಾನವಾಗಿ ಕೊಡುತ್ತೀರಿ. ಇದಕ್ಕೆ ಪ್ರತಿಯಾಗಿ ತಂದೆಯು ನಿಮಗೆ 21 ಜನ್ಮಗಳಿಗಾಗಿ ಎಲ್ಲವನ್ನೂ ಕೊಟ್ಟುಬಿಡುತ್ತಾರೆ. ಇಂತಹ ದಾನವು ಮತ್ತ್ಯಾವುದೂ ಇರುವುದಿಲ್ಲ. ನೀವು ತಿಳಿದುಕೊಂಡಿದ್ದೀರಿ - ಬಾಬಾ, ಇದೆಲ್ಲವೂ ತಮ್ಮದಾಗಿದೆ, ತಾವೇ ನಮ್ಮ ಸರ್ವಸ್ವವಾಗಿದ್ದೀರಿ. ನೀವೇ ನಮ್ಮ ತಂದೆ-ತಾಯಿ ಎಲ್ಲವೂ ಆಗಿದ್ದೀರಿ........ ಪಾತ್ರವನ್ನಂತೂ ಅಭಿನಯಿಸುತ್ತಾರಲ್ಲವೆ. ಮಕ್ಕಳನ್ನು ದತ್ತುಮಾಡಿಕೊಂಡು ಮತ್ತೆ ತಾವೇ ಓದಿಸುತ್ತಾರೆ, ತಾವೇ ಗುರುವಾಗಿ ಎಲ್ಲರನ್ನೂ ಕರೆದುಕೊಂಡು ಹೋಗುತ್ತಾರೆ. ನೀವು ನನ್ನನ್ನು ನೆನಪು ಮಾಡಿದ್ದೇ ಆದರೆ ಪಾವನರಾಗಿಬಿಡುತ್ತೀರಿ. ನಾನು ನಿಮ್ಮನ್ನು ಜೊತೆ ಕರೆದುಕೊಂಡು ಹೋಗುತ್ತೇನೆಂದು ತಿಳಿಸುತ್ತಾರೆ. ಈ ಯಜ್ಞವು ರಚಿಸಲ್ಪಟ್ಟಿದೆ, ಇದು ಶಿವಜ್ಞಾನ ಯಜ್ಞವಾಗಿದೆ, ಇದರಲ್ಲಿ ತಮ್ಮ ತನು-ಮನ-ಧನವೆಲ್ಲವನ್ನೂ ಸ್ವಾಹಾ ಮಾಡುತ್ತೀರಿ. ಖುಷಿಯಿಂದ ಎಲ್ಲವೂ ಅರ್ಪಣೆಯಾಗಿಬಿಡುತ್ತದೆ. ಬಾಕಿ ಆತ್ಮವೇ ಉಳಿಯುತ್ತದೆ. ಬಾಬಾ, ಈಗ ನಾವು ಕೇವಲ ತಮ್ಮ ಶ್ರೀಮತದನುಸಾರವೇ ನಡೆಯುತ್ತೇವೆ, ಇದಕ್ಕೆ ತಂದೆಯು ತಿಳಿಸುತ್ತಾರೆ - ಮಕ್ಕಳೇ, ಗೃಹಸ್ಥ ವ್ಯವಹಾರದಲ್ಲಿರುತ್ತಾ ಪವಿತ್ರರಾಗಬೇಕಾಗಿದೆ. 60 ವರ್ಷಗಳ ನಂತರ ಮನುಷ್ಯರು ವಾನಪ್ರಸ್ಥದಲ್ಲಿ ಹೋಗುವ ತಯಾರಿ ಮಾಡಿಕೊಳ್ಳುತ್ತಾರೆ. ಆದರೆ ಅವರೇನು ಹಿಂತಿರುಗಿ ಹೋಗಲು ತಯಾರಿ ಮಾಡಿಕೊಳ್ಳುವುದಿಲ್ಲ. ಈಗ ನೀವು ಸದ್ಗುರುವಿನ ಮಂತ್ರವನ್ನು ತೆಗೆದುಕೊಳ್ಳುತ್ತೀರಿ - ಮನ್ಮನಾಭವ. ಭಗವಾನುವಾಚ - ನೀವು ನನ್ನನ್ನು ನೆನಪು ಮಾಡಿದರೆ ನಿಮ್ಮ ವಿಕರ್ಮಗಳು ವಿನಾಶವಾಗುತ್ತವೆ. ಎಲ್ಲರಿಗೆ ತಿಳಿಸಿ, ಈಗ ತಮ್ಮೆಲ್ಲರದು ವಾನಪ್ರಸ್ಥ ಸ್ಥಿತಿಯಾಗಿದೆ. ಶಿವತಂದೆಯನ್ನು ನೆನಪು ಮಾಡಿ, ಈಗ ತಮ್ಮ ಮನೆಗೆ ಹೋಗಬೇಕಾಗಿದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಕಲಿಯುಗೀ ಸರ್ವಬಂಧನಗಳನ್ನು ಬುದ್ಧಿಯಿಂದ ಮರೆತು ಪಂಚವಿಕಾರಗಳ ದಾನ ಮಾಡಿ ಆತ್ಮವನ್ನು ಸತೋಪ್ರಧಾನವನ್ನಾಗಿ ಮಾಡಿಕೊಳ್ಳಬೇಕಾಗಿದೆ. ಶಾಂತಿಯ ಶುದ್ಧ ಅಭಿಮಾನದಲ್ಲಿರಬೇಕಾಗಿದೆ.

2. ಈ ರುದ್ರಯಜ್ಞದಲ್ಲಿ ಖುಷಿಯಿಂದ ತಮ್ಮ ತನು-ಮನ-ಧನವೆಲ್ಲವನ್ನೂ ಅರ್ಪಣೆ ಮಾಡಿ ಸಫಲ ಮಾಡಬೇಕಾಗಿದೆ. ಈ ಸಮಯದಲ್ಲಿ ಎಲ್ಲವನ್ನೂ ತಂದೆಗೆ ಅರ್ಪಣೆ ಮಾಡಿ ತಂದೆಯಿಂದ 21 ಜನ್ಮಗಳಿಗಾಗಿ ರಾಜ್ಯಭಾಗ್ಯವನ್ನು ತೆಗೆದುಕೊಳ್ಳಬೇಕಾಗಿದೆ.

ವರದಾನ:
ಪ್ರಭಾವದ ಅಂಶವನ್ನೂ ಸಹ ತ್ಯಾಗ ಮಾಡುವಂತಹ ಸ್ವಮಾನಧಾರಿ ಪುಣ್ಯ ಆತ್ಮ ಭವ.

ಸ್ವಮಾನಧಾರಿ ಮಕ್ಕಳು ಎಲ್ಲರಿಗೂ ಮಾನ್ಯತೆಯನ್ನು ಕೊಡುವಂತಹ ದಾತರಾಗಿರುತ್ತಾರೆ. ದಾತ ಅರ್ಥಾತ್ ದಯಾಹೃದಯಿ. ಅವರಲ್ಲಿ ಎಂದೂ ಯಾವುದೇ ಆತ್ಮನ ಪ್ರತಿ ಸಂಕಲ್ಪ ಮಾತ್ರದಲ್ಲಿಯೂ ಸಹ ಪ್ರಭಾವವಿರುವುದಿಲ್ಲ. ಇವರು ಹೀಗೆ ಏಕೆ? ಹೀಗೆ ಮಾಡಬಾರದಿತ್ತು, ಹಾಗೆ ಮಾಡಬಾರದಿತ್ತು, ಜ್ಞಾನ ಇದನ್ನು ಹೇಳುವುದೇನು...... ಇದೂ ಸಹ ಪ್ರಭಾವದ ಒಂದು ಅಂಶವಾಗಿದೆ. ಆದರೆ ಸ್ವಮಾನಧಾರಿ ಪುಣ್ಯ ಆತ್ಮರು ಕೆಳಗೆ ಬಿದ್ದವರನ್ನು ಎತ್ತುತ್ತಾರೆ, ಸಹಯೋಗಿಗಳನ್ನಾಗಿ ಮಾಡುತ್ತಾರೆ ಅವರು ಎಂದೂ ಈ ಸಂಕಲ್ಪವನ್ನೂ ಸಹ ಮಾಡುವುದಿಲ್ಲ್ಲ ನಮ್ಮ ಕರ್ಮದ ಫಲವನ್ನು ಭೋಗಿಸುತ್ತಿದ್ದೇವೆ, ಮಾಡಿದರೆ ಖಂಡಿತ ಪಡೆಯುವೆವು..... ಇವರು ಬೀಳಲೇ ಬೇಕು....... ಇಂತಹ ಸಂಕಲ್ಪ ನೀವು ಮಕ್ಕಳದಾಗಿರಲು ಸಾಧ್ಯವಿಲ್ಲ.

ಸ್ಲೋಗನ್:
ಸಂತುಷ್ಠತೆ ಮತ್ತು ಪ್ರಸನ್ನತೆಯ ವಿಶೇಷತೆಯೇ ಹಾರುವ ಕಲೆಯ ಅನುಭವ ಮಾಡಿಸುತ್ತದೆ.

ಅವ್ಯಕ್ತ ಸೂಚನೆ - ಸತ್ಯ ಮತ್ತು ಸಭ್ಯತೆ ರೊಪಿ ಕಲ್ಚರ್(ಸಂಸ್ಕೃತಿಯನ್ನು) ತಮ್ಮದಾಗಿಸಿಕೊಳ್ಳಿರಿ

ಸತ್ಯತೆಯ ಶಕ್ತಿಯ ಚಿಹ್ನೆಯಾಗಿದೆ” ನಿರ್ಭಯತೆ”. ಹೇಳಲಾಗುತ್ತದೆ ‘ ಸತ್ಯವಾಗಿದ್ದರೆ ಕುಣಿಯುತ್ತೀರಿ’ ಎಂದರೆ ಸತ್ಯತೆಯ ಶಕ್ತಿಯವರು ಸದಾ ನಿಶ್ಚಿತವಾಗಿರುವ ಕಾರಣ, ನಿರ್ಭಯರಾಗಿರುವ ಕಾರಣ ಖುಷಿಯಲ್ಲಿ ನರ್ತಿಸುತ್ತಾ ಇರುವರು. ಒಂದು ವೇಳೆ ತಮ್ಮ ಸಂಸ್ಕಾರ ಅಥವಾ ಸಂಕಲ್ಪ ಬಲಹೀನವಾಗಿದ್ದರೆ ಆ ಬಲಹೀನತೆಯೇ ಮನಸ್ಸಿನ ಸ್ಥಿತಿಯನ್ನು ಏರುಪೇರಿನಲ್ಲಿ ತರುತ್ತದೆ ಆದ್ದರಿಂದ ಮೊದಲು ತಮ್ಮ ಸೂಕ್ಷ್ಮ ಬಲಹೀನತೆ ಯನ್ನು ಅವಿನಾಶ ರುದ್ರ ಯಜ್ಞದಲ್ಲಿ ಸ್ವಾಹ ಮಾಡಿ.