21.04.25         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ನಿಮಗೆ ಸಕಾಶವನ್ನು ಕೊಡಲು ತಂದೆಯು ಬಂದಿದ್ದಾರೆ, ನೀವು ದೇಹೀಅಭಿಮಾನಿಯಾಗುತ್ತೀರಿ ಮತ್ತು ಒಬ್ಬ ತಂದೆಯೊಂದಿಗೆ ಬುದ್ಧಿಯೋಗವಿದ್ದಾಗ ಸಕಾಶವು ಸಿಗುತ್ತಾ ಇರುವುದು”

ಪ್ರಶ್ನೆ:
ಎಲ್ಲದ್ದಕ್ಕಿಂತ ದೊಡ್ಡ ಆಸುರೀ ಸ್ವಭಾವ ಯಾವುದಾಗಿದೆ, ಅದು ನೀವು ಮಕ್ಕಳಲ್ಲಿರಬಾರದು?

ಉತ್ತರ:
ಅಶಾಂತಿಯನ್ನು ಹರಡುವುದು ಎಲ್ಲದ್ದಕ್ಕಿಂತ ದೊಡ್ಡ ಆಸುರೀ ಸ್ವಭಾವವಾಗಿದೆ. ಅಶಾಂತಿ ಹರಡುವುದರಿಂದ ಮನುಷ್ಯರು ಬೇಸರವಾಗಿಬಿಡುತ್ತಾರೆ, ಅವರು ಎಲ್ಲಿ ಹೋಗುವರೋ ಅಲ್ಲೆಲ್ಲಾ ಅಶಾಂತಿಯನ್ನು ಹರಡುತ್ತಾರೆ ಆದ್ದರಿಂದಲೇ ಭಗವಂತನಿಂದ ಶಾಂತಿಯ ವರವನ್ನು ಬೇಡುತ್ತಾರೆ.

ಗೀತೆ:
ಇದು ದೀಪ ಮತ್ತು ಬಿರುಗಾಳಿಯ ಕಥೆಯಾಗಿದೆ................

ಓಂ ಶಾಂತಿ.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳು ಗೀತೆಯ ಸಾಲನ್ನು ಕೇಳಿದಿರಿ. ಈ ಗೀತೆಯು ಭಕ್ತಿಮಾರ್ಗದ್ದಾಗಿದೆ ಆದರೆ ಅದನ್ನು ಜ್ಞಾನಕ್ಕೆ ಹೋಲಿಸಲಾಗುತ್ತದೆ, ಮತ್ತ್ಯಾರೂ ಇದನ್ನು ಮಾಡಲು ಸಾಧ್ಯವಿಲ್ಲ. ನಿಮ್ಮಲ್ಲಿಯೂ ನಂಬರ್ವಾರ್ ಪುರುಷಾರ್ಥದನುಸಾರ ದೀಪವೆಂದರೇನು? ಬಿರುಗಾಳಿಯು ಯಾವುದು? ಎಂಬುದನ್ನು ಅರಿತುಕೊಳ್ಳುತ್ತಾರೆ. ಮಕ್ಕಳಿಗೆ ಗೊತ್ತಿದೆ, ಆತ್ಮದ ಜ್ಯೋತಿಯು ನಂದಿಹೋಗಿದೆ. ಈಗ ಜ್ಯೋತಿಯನ್ನು ಬೆಳಗಿಸಲು ತಂದೆಯು ಬಂದಿದ್ದಾರೆ, ಯಾರಾದರೂ ಶರೀರವನ್ನು ಬಿಟ್ಟಾಗಲೂ ದೀಪವನ್ನಿಡುತ್ತಾರೆ ಮತ್ತೆ ಅದನ್ನು ನಂದಿಹೋಗದಂತೆ ನೋಡಿಕೊಳ್ಳುತ್ತಾರೆ. ಒಂದುವೇಳೆ ದೀಪವು ನಂದಿಹೋದರೆ ಆತ್ಮವು ಅಂಧಕಾರದಿಂದ ಹೋಗಬೇಕಾಗುತ್ತದೆ ಎಂದು ತಿಳಿದು ದೀಪವನ್ನು ಬೆಳಗಿಸುತ್ತಾರೆ. ಸತ್ಯಯುಗದಲ್ಲಂತೂ ಈ ಮಾತುಗಳಿರುವುದಿಲ್ಲ, ಅಲ್ಲಿ ಪ್ರಕಾಶದಲ್ಲಿರುತ್ತೀರಿ, ಹಸಿವು ಮೊದಲಾದುವುಗಳ ಮಾತೇ ಇರುವುದಿಲ್ಲ. ಅಲ್ಲಿ ಬಹಳಷ್ಟು ಸಂಪತ್ತು ಸಿಗುತ್ತದೆ, ಇಲ್ಲಿ ಘೋರ ಅಂಧಕಾರವಿದೆ, ಛೀ ಛೀ ಪ್ರಪಂಚವಲ್ಲವೆ! ಎಲ್ಲಾ ಆತ್ಮಗಳ ಜ್ಯೋತಿಯು ನಂದಿಹೋಗಿದೆ. ಎಲ್ಲರಿಗಿಂತ ಹೆಚ್ಚಿನದಾಗಿ ನಿಮ್ಮ ಜ್ಯೋತಿಯು ನಂದಿಹೋಗಿದೆ. ವಿಶೇಷವಾಗಿ ನಿಮಗಾಗಿಯೇ ತಂದೆಯು ಬರುತ್ತಾರೆ. ನಿಮ್ಮ ಜ್ಯೋತಿಯು ನಂದಿಹೋಗಿದೆ ಅಂದಮೇಲೆ ಈಗ ಸಕಾಶವು ಎಲ್ಲಿಂದ ಸಿಗುವುದು? ಮಕ್ಕಳಿಗೆ ತಿಳಿದಿದೆ - ಸಕಾಶವು ತಂದೆಯಿಂದಲೇ ಸಿಗುತ್ತದೆ. ಕರೆಂಟ್ ತೀಕ್ಷ್ಣವಾಗಿದ್ದರೆ ಅನೇಕರಲ್ಲಿ ಹೆಚ್ಚಿನ ಪ್ರಕಾಶತೆಯು ಬಂದುಬಿಡುತ್ತದೆ. ಈಗ ನೀವು ದೊಡ್ಡ ಯಂತ್ರದಿಂದ ಕರೆಂಟ್ನ್ನು (ಸಕಾಶ) ತೆಗೆದುಕೊಳ್ಳುತ್ತಿದ್ದೀರಿ. ನೋಡಿ, ಬಾಂಬೆಯಂತಹ ನಗರಗಳಲ್ಲಿ ಎಷ್ಟೊಂದು ಮಂದಿ ಮನುಷ್ಯರಿರುತ್ತಾರೆ, ಎಷ್ಟು ಹೆಚ್ಚಿನ ಕರೆಂಟ್ ಬೇಕಾಗುತ್ತದೆ ಅಂದಮೇಲೆ ಅವಶ್ಯವಾಗಿ ಅಷ್ಟು ದೊಡ್ಡದಾದ ಯಂತ್ರವಿರುವುದು! ಹಾಗೆಯೇ ಇದು ಬೇಹದ್ದಿನ ಮಾತಾಗಿದೆ. ಇಡೀ ಪ್ರಪಂಚದ ಆತ್ಮಗಳ ಜ್ಯೋತಿಯು ನಂದಿಹೋಗಿದೆ. ಅವರಿಗೆ ಸಕಾಶವನ್ನು ಕೊಡಬೇಕಾಗಿದೆ. ಮೂಲಮಾತನ್ನು ತಂದೆಯು ತಿಳಿಸುತ್ತಾರೆ - ತಂದೆಯೊಂದಿಗೆ ಬುದ್ಧಿಯೋಗವನ್ನು ಜೋಡಿಸಿ, ದೇಹೀಅಭಿಮಾನಿಗಳಾಗಿ. ಎಷ್ಟು ದೊಡ್ಡ ತಂದೆಯಾಗಿದ್ದಾರೆ! ಇಡೀ ಪ್ರಪಂಚದ ಪತಿತ ಮನುಷ್ಯರನ್ನು ಪಾವನ ಮಾಡುವ ಪಾರಲೌಕಿಕ ತಂದೆಯು ಎಲ್ಲರ ಜ್ಯೋತಿಯನ್ನು ಬೆಳಗಿಸಲು ಬಂದಿದ್ದಾರೆ. ಇಡೀ ಪ್ರಪಂಚದ ಮನುಷ್ಯಾತ್ಮರ ಜ್ಯೋತಿಯನ್ನು ಬೆಳಗಿಸುತ್ತಾರೆ. ತಂದೆಯು ಯಾರು, ಅವರು ಹೇಗೆ ಜ್ಯೋತಿಯನ್ನು ಬೆಳಗಿಸುತ್ತಾರೆ? ಇದನ್ನು ಯಾರೂ ತಿಳಿದುಕೊಂಡಿಲ್ಲ. ಅವರಿಗೆ ಜ್ಯೋತಿಸ್ವರೂಪನೆಂದು ಹೇಳುತ್ತಾರೆ ಮತ್ತೆ ಸರ್ವವ್ಯಾಪಿಯೆಂದು ಹೇಳಿಬಿಡುತ್ತಾರೆ. ಜ್ಯೋತಿಸ್ವರೂಪನನ್ನು ಕರೆಯುತ್ತಾರೆ ಏಕೆಂದರೆ ಜ್ಯೋತಿಯು ನಂದಿಹೋಗಿದೆ. ಅಖಂಡಜ್ಯೋತಿಯ ಸಾಕ್ಷಾತ್ಕಾರವೂ ಆಗುತ್ತದೆ. ನನ್ನಿಂದ ಇಷ್ಟೊಂದು ತೇಜಸ್ಸನ್ನು ಸಹನೆ ಮಾಡಲು ಸಾಧ್ಯವಿಲ್ಲ, ಎಂದು ಅರ್ಜುನನು ಹೇಳಿದನೆಂದು ತೋರಿಸುತ್ತಾರೆ. ಈಗ ನೀವು ಮಕ್ಕಳೇ ಈ ಮಾತುಗಳನ್ನು ತಿಳಿದುಕೊಂಡಿದ್ದೀರಿ. ಎಲ್ಲರಿಗೆ ಇದನ್ನು ತಿಳಿಸಬೇಕಾಗಿದೆ - ನೀವು ಆತ್ಮರಾಗಿದ್ದೀರಿ, ಆತ್ಮಗಳು ಮೇಲಿನಿಂದ ಇಲ್ಲಿಗೆ ಬರುತ್ತಾರೆ.ಮೊದಲು ಆತ್ಮವು ಪವಿತ್ರವಾಗಿರುತ್ತದೆ, ಅದರಲ್ಲಿ ಸಕಾಶವಿರುತ್ತದೆ, ಸತೋಪ್ರಧಾನವಾಗಿರುತ್ತದೆ. ಸತ್ಯಯುಗದಲ್ಲಿ ಪವಿತ್ರ ಆತ್ಮಗಳಿರುತ್ತಾರೆ, ನಂತರ ಅವರು ಅಪವಿತ್ರರು ಆಗಬೇಕಾಗಿದೆ. ಯಾವಾಗ ಅಪವಿತ್ರರಾಗುವರೋ, ಆಗ ಬಂದು ನಮ್ಮನ್ನು ಮುಕ್ತಗೊಳಿಸಿ ಅರ್ಥಾತ್ ದುಃಖದಿಂದ ಮುಕ್ತಮಾಡಿ ಎಂದು ಪರಮಪಿತ ಪರಮಾತ್ಮನನ್ನು ಕರೆಯುತ್ತಾರೆ. ಮುಕ್ತರನ್ನಾಗಿ ಮಾಡುವುದು ಮತ್ತು ಪಾವನರನ್ನಾಗಿ ಮಾಡುವುದು, ಇವೆರಡರ ಅರ್ಥವು ಬೇರೆ-ಬೇರೆಯಾಗಿದೆ. ಅವಶ್ಯವಾಗಿ ಯಾರಿಂದಲೋ ಪತಿತರಾಗಿದ್ದಾರೆ ಆದ್ದರಿಂದಲೇ ಬಾಬಾ ಬನ್ನಿ, ಬಂದು ಮುಕ್ತಗೊಳಿಸಿ, ಪಾವನರನ್ನಾಗಿ ಮಾಡಿ, ಇಲ್ಲಿಂದ ಶಾಂತಿಧಾಮಕ್ಕೆ ಕರೆದುಕೊಂಡು ಹೋಗಿ, ಶಾಂತಿಯ ವರವನ್ನು ಕೊಡಿ ಎಂದು ಹೇಳುತ್ತಾರೆ. ತಂದೆಯು ತಿಳಿಸಿದ್ದಾರೆ - ಇಲ್ಲಂತೂ ನೀವು ಶಾಂತಿಯಲ್ಲಿರಲು ಸಾಧ್ಯವಿಲ್ಲ, ಸಂಪೂರ್ಣ ಶಾಂತಿಯು ಶಾಂತಿಧಾಮದಲ್ಲಿಯೇ ಇರುವುದು. ಸತ್ಯಯುಗದಲ್ಲಿ ಒಂದುಧರ್ಮ, ಒಂದು ರಾಜ್ಯವಿದ್ದಾಗ ಶಾಂತಿಯು ನೆಲೆಸಿರುವುದು. ಯಾವುದೇ ಏರುಪೇರುಗಳಿರುವುದಿಲ್ಲ. ಇಲ್ಲಿ ಮನುಷ್ಯರು ಅಶಾಂತಿಯಿಂದ ಬೇಸರವಾಗಿಬಿಡುತ್ತಾರೆ. ಒಂದೇ ಮನೆಯಲ್ಲಿಯೇ ಎಷ್ಟೊಂದು ಕಲಹಗಳುಂಟಾಗುತ್ತಿರುತ್ತದೆ. ತಿಳಿದುಕೊಳ್ಳಿ, ಸ್ತ್ರೀ-ಪುರುಷರ ನಡುವೆ ಜಗಳವಾದರೆ ತಾಯಿ-ತಂದೆ, ಮಕ್ಕಳು, ಸಹೋದರ-ಸಹೋದರಿ ಮೊದಲಾದವರೆಲ್ಲರೂ ಬೇಸರವಾಗುತ್ತಾರೆ. ಅಶಾಂತಿಯುಳ್ಳ ಮನುಷ್ಯನು ಎಲ್ಲಿ ಹೋದರೂ ಅಶಾಂತಿಯನ್ನೇ ಹರಡುವನು ಏಕೆಂದರೆ ಇದು ಆಸುರೀ ಸ್ವಭಾವವಲ್ಲವೆ. ಈಗ ನಿಮಗೆ ತಿಳಿದಿದೆ - ಸತ್ಯಯುಗವು ಸುಖಧಾಮವಾಗಿದೆ, ಅಲ್ಲಿ ಸುಖ ಮತ್ತು ಶಾಂತಿ ಎರಡೂ ಇರುತ್ತದೆ ಮತ್ತು ಪರಮಧಾಮದಲ್ಲಿ ಕೇವಲ ಶಾಂತಿಯಿರುತ್ತದೆ. ಅದಕ್ಕೆ ಮಧುರ-ಶಾಂತಿಯ ಧಾಮವೆಂದು ಹೇಳಲಾಗುತ್ತದೆ. ಮುಕ್ತಿಯನ್ನು ಬಯಸುವವರಿಗೆ ಕೇವಲ ಇಷ್ಟನ್ನೇ ತಿಳಿಸಬೇಕು - ನಿಮಗೆ ಮುಕ್ತಿಯು ಬೇಕೆಂದರೆ ತಂದೆಯನ್ನು ನೆನಪು ಮಾಡಿರಿ.

ಮುಕ್ತಿಯ ನಂತರ ಜೀವನ್ಮುಕ್ತಿಯು ಅವಶ್ಯವಾಗಿ ಬೇಕು. ಮೊದಲು ಜೀವನ್ಮುಕ್ತರಾಗಿರುತ್ತಾರೆ ನಂತರ ಜೀವನ ಬಂಧನದಲ್ಲಿ ಬರುತ್ತಾರೆ. ಅರ್ಧ-ಅರ್ಧವಿದೆಯಲ್ಲವೆ. ಸತೋಪ್ರಧಾನರಿಂದ ನಂತರ ಸತೋ, ರಜೋ, ತಮೋದಲ್ಲಿ ಅವಶ್ಯವಾಗಿ ಬರಬೇಕಾಗಿದೆ. ಕೊನೆಯಲ್ಲಿ ಯಾರು ಒಂದು ಅಥವಾ ಅರ್ಧಜನ್ಮಕ್ಕಾಗಿ ಬರುವವರಿದ್ದಾರೆಯೋ ಅವರೇನು ಸುಖ-ದುಃಖದ ಅನುಭವ ಮಾಡುತ್ತಾರೆ! ನೀವಂತೂ ಎಲ್ಲದರ ಅನುಭವ ಮಾಡುತ್ತೀರಿ ಏಕೆಂದರೆ ನಿಮಗೆ ತಿಳಿದಿದೆ - ನಾವು ಇಷ್ಟು ಜನ್ಮಗಳು ಸುಖದಲ್ಲಿರುತ್ತೇವೆ, ಇಷ್ಟು ಜನ್ಮಗಳು ದುಃಖದಲ್ಲಿರುತ್ತೇವೆ. ಹೊಸ ಪ್ರಪಂಚದಲ್ಲಿ ಇಂತಿಂತಹ ಧರ್ಮದವರು ಬರಲು ಸಾಧ್ಯವಿಲ್ಲ. ಅವರ ಪಾತ್ರವೇ ನಂತರ ಬರುತ್ತದೆ. ಭಲೆ ಹೊಸಖಂಡವಾಗಿರುತ್ತದೆ, ಅವರಿಗೆ ಅದೇ ಹೊಸ ಪ್ರಪಂಚವೆನಿಸುತ್ತದೆ. ಹೇಗೆ ಬೌದ್ಧಖಂಡ, ಕ್ರಿಶ್ಚಿಯನ್ ಖಂಡ ಹೊಸದಾಯಿತಲ್ಲವೆ. ಅವರೂ ಸಹ ಸತೋ, ರಜೋ, ತಮೋದಿಂದ ಪಾರು ಮಾಡಬೇಕಾಗಿದೆ. ವೃಕ್ಷದಲ್ಲಿ ಇದೇ ರೀತಿಯಾಗುತ್ತದೆಯಲ್ಲವೆ. ನಿಧಾನ-ನಿಧಾನವಾಗಿ ವೃದ್ಧಿಯನ್ನು ಹೊಂದುತ್ತಾ ಹೋಗುತ್ತದೆ. ಯಾವ ಎಲೆಗಳು ಮೊದಲು ಬರುವವೋ ಅವು ಕೆಳಗೇ ಇರುತ್ತವೆ. ನೋಡಿದ್ದೀರಲ್ಲವೆ - ಹೊಸ-ಹೊಸ ಎಲೆಗಳು ಹೇಗೆ ಹೊರಡುತ್ತವೆ? ಚಿಕ್ಕ-ಚಿಕ್ಕ ಹಚ್ಚಹಸುರಾದ ಎಲೆಗಳು ಚಿಗುರುತ್ತಿರುತ್ತವೆ ಮತ್ತು ಹೂ ಬಿಡುತ್ತವೆ. ಹೊಸ ವೃಕ್ಷವು ಬಹಳ ಚಿಕ್ಕದಾಗಿರುತ್ತದೆ. ಹೊಸ ಬೀಜವನ್ನು ಬಿತ್ತಿದಾಗ ಅದನ್ನು ಸರಿಯಾಗಿ ಪಾಲನೆ ಮಾಡಲಿಲ್ಲವೆಂದರೆ ಒಣಗಿ ಹೋಗುತ್ತದೆ ಹಾಗೆಯೇ ನೀವೂ ಸಹ ಹೊಸಬರ ಪಾಲನೆ ಮಾಡಲಿಲ್ಲವೆಂದರೆ ಹೊರಟುಹೋಗುತ್ತಾರೆ. ತಂದೆಯು ಬಂದು ಮನುಷ್ಯರಿಂದ ದೇವತೆಗಳನ್ನಾಗಿ ಮಾಡುತ್ತಾರೆ ಮತ್ತೆ ಅದರಲ್ಲಿ ನಂಬರ್ವಾರ್ ಆಗುತ್ತಾರೆ. ರಾಜಧಾನಿಯು ಸ್ಥಾಪನೆಯಾಗುತ್ತದೆಯಲ್ಲವೆ. ಅನೇಕರು ಅನುತ್ತೀರ್ಣರಾಗಿಬಿಡುತ್ತಾರೆ.

ಮಕ್ಕಳ ಸ್ಥಿತಿಯು ಹೇಗಿದೆಯೋ ಅದರಂತೆಯೇ ತಂದೆಯಿಂದ ಪ್ರೀತಿಯು ಸಿಗುತ್ತದೆ. ಕೆಲವು ಮಕ್ಕಳಿಗೆ ಬಾಹ್ಯರೂಪದಲ್ಲಿ ಪ್ರೀತಿ ಮಾಡಲಾಗುತ್ತದೆ. ಕೆಲಕೆಲವರು ಬರೆಯುತ್ತಾರೆ - ಬಾಬಾ, ನಾವು ಅನುತ್ತೀರ್ಣರಾದೆವು, ಪತಿತರಾಗಿಬಿಟ್ಟೆವೆಂದು. ಈಗ ಅಂತಹವರ ಕೈಯನ್ನು ಯಾರು ಹಿಡಿಯುವರು! ಅಂತಹವರು ತಂದೆಯ ಹೃದಯವನ್ನೇರಲು ಸಾಧ್ಯವಿಲ್ಲ. ಪವಿತ್ರರಿಗೇ ತಂದೆಯು ಆಸ್ತಿಯನ್ನು ಕೊಡುತ್ತಾರೆ. ಮೊದಲು ಒಬ್ಬೊಬ್ಬರಿಂದ ಪೂರ್ಣ ಸಮಾಚಾರವನ್ನು ಕೇಳಿ ಲೆಕ್ಕವನ್ನು ತೆಗೆದುಕೊಳ್ಳುತ್ತಾರೆ. ಎಂತಹ ಸ್ಥಿತಿಯೋ ಅಂತಹ ಪ್ರೀತಿ. ಭಲೆ ಹೊರಗಿನಿಂದ ಪ್ರೀತಿ ಮಾಡುತ್ತಾರೆ ಆದರೆ ಒಳಗೆ ಗೊತ್ತಿರುತ್ತದೆ - ಇವರು ಸಂಪೂರ್ಣ ಬುದ್ಧು(ದಡ್ಡ) ಆಗಿದ್ದಾರೆ. ಸೇವೆ ಮಾಡುವುದಿಲ್ಲವೆಂದು ವಿಚಾರವಂತೂ ಇರುತ್ತದೆಯಲ್ಲವೆ. ಅಜ್ಞಾನಕಾಲದಲ್ಲಿಯೂ ಚೆನ್ನಾಗಿ ಸಂಪಾದನೆ ಮಾಡುವವರಿದ್ದರೆ ಅವರನ್ನು ತಂದೆಯೂ ಸಹ ಬಹಳ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಸಂಪಾದನೆ ಮಾಡದಿದ್ದರೆ ತಂದೆಗೂ ಸಹ ಅಷ್ಟೊಂದು ಪ್ರೀತಿಯಿರುವುದಿಲ್ಲ ಅಂದಾಗ ಇಲ್ಲಿಯೂ ಹಾಗೆಯೇ ಮಕ್ಕಳು ಹೊರಗೂ ಸೇವೆ ಮಾಡುತ್ತಾರಲ್ಲವೆ. ಭಲೆ ಯಾವುದೇ ಧರ್ಮದವರಿರಬಹುದು, ಅವರಿಗೂ ತಿಳಿಸಿಕೊಡಬೇಕು - ತಂದೆಯನ್ನು ಮುಕ್ತಿದಾತನೆಂದು ಕರೆಯಲಾಗುತ್ತದೆಯಲ್ಲವೆ. ಅಂದಾಗ ಮುಕ್ತಿದಾತ ಮತ್ತು ಮಾರ್ಗದರ್ಶಕನು ಯಾರು ಎಂಬ ಪರಿಚಯವನ್ನು ಅವರಿಗೆ ಕೊಡಬೇಕಾಗಿದೆ. ಪರಮಪಿತ ಪರಮಾತ್ಮನು ಬರುತ್ತಾರೆ, ಎಲ್ಲರನ್ನೂ ಮುಕ್ತರನ್ನಾಗಿ ಮಾಡುತ್ತಾರೆ. ತಂದೆಯು ತಿಳಿಸುತ್ತಾರೆ - ಇಷ್ಟೊಂದು ಪತಿತರಾಗಿಬಿಟ್ಟಿದ್ದೀರಿ, ಪವಿತ್ರತೆಯೇ ಇಲ್ಲ, ಈಗ ನನ್ನನ್ನು ನೆನಪು ಮಾಡಿ. ತಂದೆಯು ಪರಮಪವಿತ್ರನಾಗಿದ್ದಾರೆ. ಉಳಿದವರೆಲ್ಲರೂ ಅವಶ್ಯವಾಗಿ ಪವಿತ್ರರಿಂದ ಅಪವಿತ್ರರಾಗಿದ್ದಾರೆ. ಪುನರ್ಜನ್ಮವನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ಕೆಳಗಿಳಿಯುತ್ತಾ ಬರುತ್ತಾರೆ. ಈ ಸಮಯದಲ್ಲಿ ಎಲ್ಲರೂ ಪತಿತರಾಗಿದ್ದಾರೆ ಆದ್ದರಿಂದ ತಂದೆಯು ಸಲಹೆ ನೀಡುತ್ತಾರೆ - ನೀವು ನನ್ನನ್ನು ನೆನಪು ಮಾಡಿದರೆ ಪಾವನರಾಗಿಬಿಡುತ್ತೀರಿ. ಈಗ ಮೃತ್ಯುವು ಸನ್ಮುಖದಲ್ಲಿ ನಿಂತಿದೆ, ಹಳೆಯ ಪ್ರಪಂಚದ ಅಂತ್ಯವಾಗಿದೆ. ಮಾಯೆಯದು ಎಷ್ಟೊಂದು ಆಡಂಬರವಿದೆ! ಆದ್ದರಿಂದ ಮನುಷ್ಯರು ಇದೇ ಸ್ವರ್ಗವೆಂದು ತಿಳಿಯುತ್ತಾರೆ. ವಿದ್ಯುತ್, ವಿಮಾನ, ಮೊದಲಾದವೆಲ್ಲವೂ ಮಾಯೆಯ ಶೋ ಆಗಿದೆ. ಈಗ ಇದು ಸಮಾಪ್ತಿಯಾಗಲಿದೆ, ಮತ್ತೆ ಸ್ವರ್ಗದ ಸ್ಥಾಪನೆಯಾಗುವುದು. ಈ ವಿದ್ಯುತ್ ಇತ್ಯಾದಿಯೆಲ್ಲವೂ ಸ್ವರ್ಗದಲ್ಲಿಯೂ ಇರುತ್ತದೆ ಅಂದಾಗ ಇದೆಲ್ಲವೂ ಸ್ವರ್ಗಕ್ಕೆ ಹೇಗೆ ಬರುತ್ತದೆ? ಅವಶ್ಯವಾಗಿ ಇದನ್ನು ತಿಳಿದಿರುವವರು ಬೇಕಲ್ಲವೆ. ನಿಮ್ಮ ಬಳಿ ಬಹಳಷ್ಟು ಮಂದಿ ಒಳ್ಳೊಳ್ಳೆಯ ತಿಳುವಳಿಕೆಯುಳ್ಳವರು ಬರುತ್ತಾರೆ, ಅವರು ರಾಜಧಾನಿಯಲ್ಲಂತೂ ಬರುವುದಿಲ್ಲ ಆದರೂ ಸಹ ನಿಮ್ಮ ಪ್ರಜೆಗಳಲ್ಲಿ ಬರುತ್ತಾರೆ. ಇಂಜಿನಿಯರಿಂಗ್ ಮೊದಲಾದುದನ್ನು ಕಲಿತಿರುವ ಒಳ್ಳೊಳ್ಳೆಯ ಕೌಶಲ್ಯ ಉಳ್ಳವರು ಬರುತ್ತಾರೆ. ಈ ಫ್ಯಾಷನ್ ಎಲ್ಲವೂ ವಿದೇಶದಿಂದ ಬರುತ್ತದೆ, ಆದ್ದರಿಂದ ವಿದೇಶದವರಿಗೂ ಸಹ ನೀವು ಶಿವತಂದೆಯ ಪರಿಚಯವನ್ನು ಕೊಡಬೇಕಾಗಿದೆ - ತಂದೆಯನ್ನು ನೆನಪು ಮಾಡಿ ಎಂದು ತಿಳಿಸಬೇಕಾಗಿದೆ. ನೀವೂ ಸಹ ಯೋಗದಲ್ಲಿರುವ ಪುರುಷಾರ್ಥವನ್ನು ಬಹಳ ಮಾಡಬೇಕಾಗಿದೆ, ಇದರಲ್ಲಿಯೇ ಬಹಳಷ್ಟು ಮಾಯೆಯ ಬಿರುಗಾಳಿಗಳು ಬರುತ್ತವೆ. ಕೇವಲ ನನ್ನೊಬ್ಬನನ್ನೇ ನೆನಪು ಮಾಡಿ ಎಂದು ತಿಳಿಸುತ್ತಾರೆ. ಇದು ಸಹ ಒಳ್ಳೆಯ ಮಾತಾಗಿದೆಯಲ್ಲವೆ. ಕ್ರಿಸ್ತನೂ ಸಹ ಅವರ ರಚನೆಯಾಗಿದ್ದಾರೆ, ರಚಯಿತನಾದ ಪರಮಾತ್ಮ ಒಬ್ಬರೇ ಆಗಿದ್ದಾರೆ, ಉಳಿದೆಲ್ಲವೂ ಅವರ ರಚನೆಯಾಗಿದೆ. ಆಸ್ತಿಯೂ ರಚಯಿತನಿಂದಲೇ ಸಿಗುತ್ತದೆ, ಇಂತಿಂತಹ ಒಳ್ಳೊಳ್ಳೆಯ ವಿಚಾರಗಳನ್ನು ಬರೆದಿಟ್ಟುಕೊಳ್ಳಬೇಕು.

ಎಲ್ಲರನ್ನೂ ದುಃಖದಿಂದ ಮುಕ್ತರನ್ನಾಗಿ ಮಾಡುವುದು ತಂದೆಯ ಮುಖ್ಯ ಕರ್ತವ್ಯವಾಗಿದೆ. ಅವರು ಸುಖಧಾಮ ಮತ್ತು ಶಾಂತಿಧಾಮದ ಬಾಗಿಲನ್ನು ತೆರೆಯುತ್ತಾರೆ. ಹೇ ಮುಕ್ತಿದಾತ, ದುಃಖದಿಂದ ಮುಕ್ತಮಾಡು, ನಮ್ಮನ್ನು ಶಾಂತಿಧಾಮ-ಸುಖಧಾಮಕ್ಕೆ ಕರೆದುಕೊಂಡು ಹೋಗಿ ಎಂದು ಅವರಿಗೇ ಹೇಳುತ್ತಾರೆ. ಇಲ್ಲಿ ಸುಖಧಾಮವಾಗಿದ್ದಾಗ ಉಳಿದೆಲ್ಲಾ ಆತ್ಮಗಳು ಶಾಂತಿಧಾಮದಲ್ಲಿರುತ್ತಾರೆ, ಸ್ವರ್ಗದ ಬಾಗಿಲನ್ನು ತಂದೆಯೇ ತೆರೆಯುತ್ತಾರೆ. ಒಂದನೆಯದಾಗಿ ಹೊಸ ಪ್ರಪಂಚ ಮತ್ತು ಎರಡನೆಯದಾಗಿ ಶಾಂತಿಧಾಮದ ಬಾಗಿಲು ತೆರೆಯುತ್ತದೆ. ಈಗ ಯಾವ ಆತ್ಮಗಳು ಅಪವಿತ್ರರಾಗಿಬಿಟ್ಟಿದ್ದಾರೆಯೋ, ಅವರಿಗೆ ತಂದೆಯು ಶ್ರೀಮತ ಕೊಡುತ್ತಾರೆ - ತಮ್ಮನ್ನು ಆತ್ಮವೆಂದು ತಿಳಿದು ನನ್ನನ್ನು ನೆನಪು ಮಾಡಿ. ಆಗ ನಿಮ್ಮ ಪಾಪಗಳು ತುಂಡಾಗುವವು. ಈಗ ಯಾರ್ಯಾರು ಪುರುಷಾರ್ಥ ಮಾಡುವರೋ ಅವರು ತಮ್ಮ ಧರ್ಮದಲ್ಲಿ ಶ್ರೇಷ್ಠಪದವಿಯನ್ನು ಪಡೆಯುತ್ತಾರೆ. ಪುರುಷಾರ್ಥ ಮಾಡದಿದ್ದರೆ ಕಡಿಮೆ ಪದವಿಯನ್ನು ಪಡೆಯುತ್ತಾರೆ. ಇಂತಹ ಒಳ್ಳೊಳ್ಳೆಯ ವಿಚಾರಗಳನ್ನು ಬರೆದಿಟ್ಟುಕೊಳ್ಳಿ - ಇವು ಸಮಯದಲ್ಲಿ ಉಪಯೋಗಕ್ಕೆ ಬರುತ್ತವೆ. ತಿಳಿಸಿ - ನಾವು ಶಿವತಂದೆಯ ಪರಿಚಯವನ್ನು ತಿಳಿಸುತ್ತೇವೆ. ಅದಕ್ಕೆ ಮನುಷ್ಯರು ಇವರು ಯಾರು, ಪರಮಪಿತ ಪರಮಾತ್ಮ ಶಿವನ ಪರಿಚಯವನ್ನು ತಿಳಿಸುತ್ತಾರೆಂದು ಹೇಳುತ್ತಾರೆ. ಆಗ ತಿಳಿಸಿ, ನೀವು ಆತ್ಮದ ರೂಪದಲ್ಲಿ ಎಲ್ಲರೂ ಪರಸ್ಪರ ಸಹೋದರರಾಗಿದ್ದೀರಿ ಮತ್ತು ಪ್ರಜಾಪಿತ ಬ್ರಹ್ಮಾನ ಮೂಲಕ ರಚನೆಯನ್ನು ರಚಿಸುವುದರಿಂದ ಶರೀರದ ಲೆಕ್ಕದಲ್ಲಿ ಸಹೋದರ-ಸಹೋದರಿಯರಾಗುತ್ತೀರಿ. ಪರಮಪಿತ ಪರಮಾತ್ಮ ಯಾರಿಗೆ ಮುಕ್ತಿದಾತ, ಮಾರ್ಗದರ್ಶಕನೆಂದು ಹೇಳುವರೋ ಅವರ ಪರಿಚಯವನ್ನು ನಾವು ನಿಮಗೆ ತಿಳಿಸುತ್ತೇವೆ. ಅವಶ್ಯವಾಗಿ ಪರಮಾತ್ಮನು ನಮಗೆ ತಿಳಿಸಿದ್ದಾರೆ ಆದ್ದರಿಂದ ನಿಮಗೆ ತಿಳಿಸುತ್ತೇವೆ. ‘ಸನ್ ಶೋಜ್ ಫಾದರ್’. ಇದನ್ನೂ ಸಹ ತಿಳಿಸಬೇಕು - ಆತ್ಮವು ಸಂಪೂರ್ಣ ಸೂಕ್ಷ್ಮನಕ್ಷತ್ರವಾಗಿದೆ, ಈ ಸ್ಥೂಲಕಣ್ಣುಗಳಿಂದ ಅದನ್ನು ನೋಡಲಾಗುವುದಿಲ್ಲ, ದಿವ್ಯದೃಷ್ಟಿಯಿಂದ ಸಾಕ್ಷಾತ್ಕಾರವಾಗುತ್ತದೆ. ಆತ್ಮವು ಬಿಂದುವಾಗಿದೆ, ಅದರ ಸಾಕ್ಷಾತ್ಕಾರದಿಂದೇನೂ ಲಾಭವಿಲ್ಲ. ತಂದೆಯು ಸಹ ಬಿಂದುವಾಗಿದ್ದಾರೆ, ಅವರನ್ನು ಪರಮಾತ್ಮನೆಂದು ಕರೆಯಲಾಗುತ್ತದೆ. ಆತ್ಮ ಮತ್ತು ಪರಮಾತ್ಮನ ರೂಪವು ಒಂದೇ ಆಗಿದೆ, ಆದರೆ ಅವರು ಪರಮ ಆತ್ಮ, ಜ್ಞಾನಪೂರ್ಣನಾಗಿದ್ದಾರೆ. ಜ್ಞಾನಸಾಗರ, ಆನಂದಸಾಗರನಾಗಿದ್ದಾರೆ, ಮುಕ್ತಿದಾತ ಮತ್ತು ಮಾರ್ಗದರ್ಶಕನಾಗಿದ್ದಾರೆ. ಅವರನ್ನು ಬಹಳ ಮಹಿಮೆ ಮಾಡಬೇಕು. ಅವಶ್ಯವಾಗಿ ತಂದೆಯು ಬರುತ್ತಾರೆ. ಆಗಲೇ ಎಲ್ಲರನ್ನೂ ಜೊತೆಯಲ್ಲಿ ಕರೆದುಕೊಂಡು ಹೋಗುತ್ತಾರಲ್ಲವೆ. ತಂದೆಯು ಬಂದು ಜ್ಞಾನವನ್ನು ತಿಳಿಸುತ್ತಾರೆ - ಆತ್ಮವು ಅತೀ ಸೂಕ್ಷ್ಮ ಬಿಂದುವಾಗಿದೆ, ನಾನು ಅತೀ ಸೂಕ್ಷ್ಮವಾಗಿದ್ದೇನೆ. ಜ್ಞಾನವನ್ನು ಅವಶ್ಯವಾಗಿ ಯಾರ ಶರೀರದಲ್ಲಾದರೂ ಪ್ರವೇಶವಾಗಿ ಕೊಡುತ್ತಾರಲ್ಲವೆ. ತಂದೆಯು ತಿಳಿಸುತ್ತಾರೆ - ನಾನು ಈ ಬ್ರಹ್ಮಾರವರ ಆತ್ಮದ ಪಕ್ಕದಲ್ಲಿ ಬಂದು ಕುಳಿತುಕೊಳ್ಳುತ್ತೇನೆ. ನನ್ನಲ್ಲಿ ಶಕ್ತಿಯಿದೆ, ಕರ್ಮೇಂದ್ರಿಯಗಳು ಸಿಕ್ಕಿತೆಂದರೆ ನಾನು ಮಾಲೀಕನಾಗಿಬಿಟ್ಟೆನು, ಈ ಕರ್ಮೇಂದ್ರಿಯಗಳ ಮೂಲಕ ಕುಳಿತು ತಿಳಿಸಿಕೊಡುತ್ತೇನೆ, ಇವರಿಗೆ ಆಡಂ ಎಂತಲೂ ಕರೆಯಲಾಗುತ್ತದೆ. ಆಡಂ ಮೂಲಪುರುಷನಾಗಿದ್ದಾರೆ. ಮನುಷ್ಯರ ವಂಶಾವಳಿಯಿದೆಯಲ್ಲವೆ. ಇವರು ಮಾತಾಪಿತನೂ ಆಗುತ್ತಾರೆ, ಇವರಿಂದ ರಚನೆಯಾಗುತ್ತದೆ. ಹಳೆಯ ವ್ಯಕ್ತಿಯಾಗಿದ್ದಾರೆ ಆದರೆ ತಂದೆಯು ದತ್ತುಮಾಡಿಕೊಂಡಿದ್ದಾರೆ ಇಲ್ಲದಿದ್ದರೆ ಬ್ರಹ್ಮನೆಲ್ಲಿಂದ ಬರುವರು? ಬ್ರಹ್ಮಾತಂದೆಯ ಹೆಸರು ಯಾರಿಗೂ ತಿಳಿದಿಲ್ಲ! ಬ್ರಹ್ಮಾ-ವಿಷ್ಣು-ಶಂಕರ - ಇದು ಯಾರ ರಚನೆಯಾದರೂ ಇರಬೇಕಲ್ಲವೆ. ರಚಯಿತನು ಒಬ್ಬರೇ ಆಗಿದ್ದಾರೆ. ತಂದೆಯು ಈ ಬ್ರಹ್ಮಾರವರನ್ನು ದತ್ತು ಮಾಡಿಕೊಂಡಿದ್ದಾರೆ. ಇದನ್ನು ಚಿಕ್ಕಮಕ್ಕಳು ಕುಳಿತು ತಿಳಿಸಿದರೂ ಇದು ಬಹಳ ದೊಡ್ಡಜ್ಞಾನವೆಂದು ಹೇಳುತ್ತಾರೆ.

ಯಾವ ಮಕ್ಕಳಿಗೆ ಚೆನ್ನಾಗಿ ಧಾರಣೆಯಾಗುತ್ತದೆಯೋ ಅವರಿಗೆ ಬಹಳ ಖುಷಿಯಿರುವುದು, ಎಂದೂ ಆಕಳಿಕೆ ಬರುವುದಿಲ್ಲ. ತಿಳಿದುಕೊಳ್ಳುವವರು ಅಲ್ಲವೆಂದರೆ ಆಕಳಿಸುತ್ತಾ ಇರುವರು, ಇಲ್ಲಂತೂ ನಿಮಗೆ ಎಂದೂ ಆಕಳಿಕೆ ಬರಬಾರದು. ಸಂಪಾದನೆಯ ಸಮಯದಲ್ಲಿ ಎಂದೂ ಆಕಳಿಕೆ ಬರುವುದಿಲ್ಲ, ಗ್ರಾಹಕರು ಬರುವುದಿಲ್ಲ, ವ್ಯಾಪಾರವಾಗುತ್ತಿಲ್ಲವೆಂದರೆ ಆಕಳಿಕೆ ಬರುತ್ತಿರುತ್ತದೆ. ಹಾಗೆಯೇ ಇಲ್ಲಿಯೂ ಸಹ ಧಾರಣೆಯಾಗುವುದಿಲ್ಲ, ಕೆಲವರಂತೂ ಏನನ್ನೂ ಅರ್ಥ ಮಾಡಿಕೊಳ್ಳುವುದಿಲ್ಲ ಏಕೆಂದರೆ ದೇಹಾಭಿಮಾನವಿದೆ, ದೇಹೀ-ಅಭಿಮಾನಿಯಾಗಿ ಕುಳಿತುಕೊಳ್ಳುವುದಿಲ್ಲ. ಯಾವುದಾದರೊಂದು ಹೊರಗಿನ ಮಾತುಗಳು ನೆನಪಿಗೆ ಬಂದುಬಿಡುತ್ತವೆ. ಜ್ಞಾನಬಿಂದುಗಳನ್ನೂ ಸಹ ಬರೆದುಕೊಳ್ಳುವುದಿಲ್ಲ. ಈ ಅಂಶವು ಬಹಳ ಚೆನ್ನಾಗಿದೆ ಎಂದು ಕೇಳಿದ ತಕ್ಷಣವೇ ಬುದ್ಧಿವಂತ ಮಕ್ಕಳು ಬರೆದಿಟ್ಟುಕೊಳ್ಳುತ್ತಾರೆ. ವಿದ್ಯಾರ್ಥಿಗಳ ಚಲನೆಯು ಸಹ ಶಿಕ್ಷಕರಿಗೆ ಕಾಣಿಸುತ್ತದೆಯಲ್ಲವೆ. ಬುದ್ಧಿವಂತ ಶಿಕ್ಷಕರ ದೃಷ್ಟಿಯು ಎಲ್ಲಾ ವಿದ್ಯಾರ್ಥಿಗಳ ಕಡೆ ಇರುತ್ತದೆ. ಇದರ ಆಧಾರದಿಂದಲೇ ವಿದ್ಯಾಭ್ಯಾಸದ ಸರ್ಟಿಫಿಕೇಟನ್ನು ಕೊಡುತ್ತಾರೆ. ನಡವಳಿಕೆಯ ಸರ್ಟಿಫಿಕೇಟನ್ನು ಕೊಡುತ್ತಾರೆ. ಇವರು ಎಷ್ಟು ಗೈರುಹಾಜರಿಯಾಗಿದ್ದರು ಎಂಬ ಲೆಕ್ಕವನ್ನೂ ತೆಗೆಯುತ್ತಾರೆ ಆದರೆ ಇಲ್ಲಂತೂ ಹಾಜರಿರುತ್ತಾರೆ ಆದರೆ ಏನನ್ನೂ ತಿಳಿದುಕೊಳ್ಳುವುದಿಲ್ಲ, ಧಾರಣೆಯೂ ಆಗುವುದಿಲ್ಲ. ಬಾಬಾ, ಏನು ಮಾಡುವುದು, ಬುದ್ಧಿಯು ಮಂಧವಾಗಿದೆ, ಧಾರಣೆಯಾಗುವುದಿಲ್ಲವೆಂದು ಕೆಲವರು ಹೇಳುತ್ತಾರೆ. ಇದು ನಿಮ್ಮದೇ ಕರ್ಮಗಳ ಲೆಕ್ಕಾಚಾರವಾಗಿದೆ. ತಂದೆಯಂತೂ ಒಂದೇ ಸಮನಾದ ಪುರುಷಾರ್ಥ ಮಾಡಿಸುತ್ತಾರೆ. ನಿಮ್ಮ ಅದೃಷ್ಟದಲ್ಲಿಲ್ಲವೆಂದರೆ ಏನು ಮಾಡುವುದು! ಶಾಲೆಯಲ್ಲಿಯೂ ಸಹ ಕೆಲವರು ಉತ್ತೀರ್ಣರು ಮತ್ತು ಇನ್ನೂ ಕೆಲವರು ಅನುತ್ತೀರ್ಣರಾಗುತ್ತಾರೆ. ಇದು ಬೇಹದ್ದಿನ ವಿದ್ಯೆಯಾಗಿದೆ, ಇದನ್ನು ಬೇಹದ್ದಿನ ತಂದೆಯೇ ಓದಿಸುತ್ತಾರೆ. ಅನ್ಯಧರ್ಮದವರು ಗೀತೆಯ ಮಾತನ್ನೇ ತಿಳಿದುಕೊಳ್ಳುವುದಿಲ್ಲ ಆದ್ದರಿಂದ ದೇಶವನ್ನು ನೋಡಿ ತಿಳಿಸಬೇಕಾಗುತ್ತದೆ. ಮೊಟ್ಟಮೊದಲಿಗೆ ಶ್ರೇಷ್ಠಾತಿಶ್ರೇಷ್ಠ ತಂದೆಯ ಪರಿಚಯವನ್ನು ಕೊಡಬೇಕಾಗಿದೆ. ಅವರು ಹೇಗೆ ಮುಕ್ತಿದಾತ, ಮಾರ್ಗದರ್ಶಕನಾಗಿದ್ದಾರೆ ಎಂಬುದನ್ನು ತಿಳಿಸಬೇಕಾಗಿದೆ. ಸ್ವರ್ಗದಲ್ಲಿ ಈ ವಿಕಾರವಿರುವುದಿಲ್ಲ. ಈ ಸಮಯದಲ್ಲಿ ಇದಕ್ಕೆ ಪತಿತರಾಜ್ಯವೆಂದು ಹೇಳಲಾಗುತ್ತದೆ. ಹಳೆಯ ಪ್ರಪಂಚವಾಗಿದೆಯಲ್ಲವೆ! ಇದಕ್ಕೆ ಸತ್ಯಯುಗವೆಂದು ಹೇಳುವುದಿಲ್ಲ. ಹೊಸ ಪ್ರಪಂಚವಿತ್ತು, ಆದರೆ ಈಗ ಹಳೆಯದಾಗಿದೆ, ಮಕ್ಕಳಲ್ಲಿ ಯಾರಿಗೆ ಸರ್ವೀಸಿನ ಉಮ್ಮಂಗವಿದೆಯೋ ಅವರು ಇವೆಲ್ಲಾ ಅಂಶಗಳನ್ನೂ ಬರೆದಿಟ್ಟುಕೊಳ್ಳಬೇಕು. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿದ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ವಿದ್ಯೆಯಲ್ಲಿ ಬಹಳ-ಬಹಳ ಸಂಪಾದನೆಯಿದೆ ಆದ್ದರಿಂದ ಖುಷಿ-ಖುಷಿಯಿಂದ ಸಂಪಾದನೆ ಮಾಡಿಕೊಳ್ಳಬೇಕಾಗಿದೆ. ಓದುವ ಸಮಯದಲ್ಲಿ ಎಂದೂ ಆಕಳಿಕೆ ಇತ್ಯಾದಿ ಬರಬಾರದು, ಬುದ್ಧಿಯೋಗವು ಅಲ್ಲಿ-ಇಲ್ಲಿ ಅಲೆಯಬಾರದು. ಒಳ್ಳೊಳ್ಳೆಯ ಅಂಶಗಳನ್ನು ಬರೆದುಕೊಂಡು ಧಾರಣೆ ಮಾಡುತ್ತಾ ಇರಿ.

2. ಪವಿತ್ರರಾಗಿ ತಂದೆಯ ಹೃದಯವನ್ನು ಪಡೆಯುವಂತಹ ಅಧಿಕಾರಿಗಳಾಗಬೇಕಾಗಿದೆ. ಸೇವೆಯಲ್ಲಿ ಬುದ್ಧಿವಂತರಾಗಬೇಕಾಗಿದೆ. ಒಳ್ಳೆಯ ಸಂಪಾದನೆ ಮಾಡಿಕೊಳ್ಳಬೇಕು ಮತ್ತು ಅನ್ಯರಿಂದಲೂ ಮಾಡಿಸಬೇಕಾಗಿದೆ.

ವರದಾನ:
ಮರಜೀವಾ ಜನ್ಮದ ಸ್ಮೃತಿಯಿಂದ ಸರ್ವ ಕರ್ಮಬಂಧನಗಳನ್ನು ಸಮಾಪ್ತಿ ಮಾಡುವಂತಹ ಕರ್ಮಯೋಗಿ ಭವ

ಈ ಮರಜೀವಾ ದಿವ್ಯ ಜನ್ಮ ಕರ್ಮಬಂಧನದ ಜನ್ಮ ಅಲ್ಲ. ಇದು ಕರ್ಮಯೋಗಿ ಜನ್ಮವಾಗಿದೆ. ಈ ಅಲೌಕಿಕ ದಿವ್ಯ ಜನ್ಮದಲ್ಲಿ ಬ್ರಾಹ್ಮಣ ಆತ್ಮ ಸ್ವತಂತ್ರವಾಗಿದೆ ಹೊರತು ಪರತಂತ್ರವಲ್ಲ. ಈ ದೇಹ ಲೋನ್ನಲ್ಲಿ ಸಿಕ್ಕಿರುವುದಾಗಿದೆ, ಇಡೀ ವಿಶ್ವದ ಸೇವೆಗಾಗಿ ಹಳೆಯ ಶರೀರದಲ್ಲಿ ತಂದೆಯು ಶಕ್ತಿ ತುಂಬಿ ನಡೆಸುತ್ತಿದ್ದಾರೆ, ಜವಾಬ್ದಾರಿ ತಂದೆಯದಾಗಿದೆ ಹೊರತು ನಿಮ್ಮದಲ್ಲ. ತಂದಯು ಸೂಚನೆ ನೀಡಿದ್ದಾರೆ- ಕರ್ಮ ಮಾಡಿ ಎಂದು, ನೀವು ಸ್ವತಂತ್ರರಾಗಿರುವಿರಿ, ನಡೆಸುವಂತಹ ತಂದೆ ನಡೆಸುತ್ತಿದ್ದಾರೆ. ಇದೇ ವಿಷೇಶ ಧಾರಣೆಯಿಂದ ಕರ್ಮಬಂಧನಗಳನ್ನು ಸಮಾಪ್ತಿ ಮಾಡಿ ಕರ್ಮಯೋಗಿಗಳಾಗಿ.

ಸ್ಲೋಗನ್:
ಸಮಯದ ಸಮೀಪತೆಯ ಬುನಾಧಿಯಾಗಿದೆ- ಬೇಹದ್ದಿನ ವೈರಾಗ್ಯ ವೃತ್ತಿ.

ಅವ್ಯಕ್ತ ಸೂಚನೆ: ಕಂಬೈಂಡ್ ರೂಪದ ಸ್ಮೃತಿಯಿಂದ ಸದಾ ವಿಜಯಿಯಾಗಿರಿ

ಎಷ್ಟೆಷ್ಟು ನೆನಪಿನಲ್ಲಿರುತ್ತೀರಿ ಅಷ್ಟು ಅನುಭವ ಮಾಡುವಿರಿ ನಾನು ಒಂಟಿಯಲ್ಲ ಆದರೆ ಬಾಪ್-ದಾದಾ ಸದಾ ಜೊತೆಯಿದ್ದಾರೆ. ಯಾವುದೇ ಸಮಸ್ಯೆ ಮುಂದೆ ಬಂದರೆ ಇದೇ ಸ್ಮೃತಿಯಲ್ಲಿರಲಿ ನಾನು ಕಂಬೈಂಡ್ನಾಗಿದ್ದೇನೆ, ಆಗ ಗಾಬರಿಯಾಗುವುದಿಲ್ಲ. ಕಂಬೈಂಡ್ ರೂಪದ ಸ್ಮೃತಿಯಿಂದ ಯಾವುದೇ ಕಷ್ಟದ ಕಾರ್ಯವು ಸಹಜವಾಗಿ ಬಿಡುವುದು. ತಮ್ಮ ಎಲ್ಲಾ ಹೊರೆ ತಂದೆಯ ಮೇಲೆ ಇಟ್ಟು ಸ್ವಯಂ ಹಗುರವಾಗಿಬಿಡಿ ಆಗ ಸದಾ ತಮ್ಮ ಖುಷಿಯ ಅದೃಷ್ಟವಂತ ಅನುಭವ ಮಾಡುವಿರಿ ಮತ್ತು ಫರಿಶ್ತೆಯ ಸಮಾನ ನರ್ತಿಸುತ್ತಿರುವಿರಿ.