21.06.24         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ- ದೇವತೆಗಳಾಗುವ ಮೊದಲು ನೀವು ಅವಶ್ಯವಾಗಿ ಬ್ರಾಹ್ಮಣರಾಗಬೇಕು, ಬ್ರಹ್ಮಾ ಮುಖಸಂತಾನರೇ ಸತ್ಯ ಬ್ರಾಹ್ಮಣರಾಗಿದ್ದಾರೆ, ಅವರೇ ರಾಜಯೋಗದ ವಿದ್ಯೆಯಿಂದ ದೇವತೆಗಳಾಗುತ್ತಾರೆ”

ಪ್ರಶ್ನೆ:
ಅನ್ಯ ಎಲ್ಲಾ ಸತ್ಸಂಗಗಳಿಗಿಂತ ನಿಮ್ಮ ಈ ಸತ್ಸಂಗವು ಯಾವ ಮಾತಿನಲ್ಲಿ ಭಿನ್ನವಾಗಿದೆ?

ಉತ್ತರ:
ಅನ್ಯ ಸತ್ಸಂಗಗಳಲ್ಲಿ ಯಾವುದೇ ಗುರಿ-ಉದ್ದೇಶವಿರುವುದಿಲ್ಲ ಅಲ್ಲದೆ ಹಣ-ಅಧಿಕಾರ ಎಲ್ಲವನ್ನೂ ಕಳೆದುಕೊಂಡು ಅಲೆಯುತ್ತಿರುತ್ತಾರೆ. ಈ ಸತ್ಸಂಗದಲ್ಲಿ ನೀವು ಅಲೆದಾಡುವುದಿಲ್ಲ, ಇದು ಸತ್ಸಂಗದ ಜೊತೆಜೊತೆಗೆ ಶಾಲೆಯೂ ಆಗಿದೆ, ಶಾಲೆಯಲ್ಲಿ ಓದುತ್ತಾರೆಯೇ ಹೊರತು ಅಲೆದಾಡುವುದಿಲ್ಲ. ವಿದ್ಯೆಯೆಂದರೆ ಸಂಪಾದನೆ. ಎಷ್ಟು ನೀವು ಓದಿ ಧಾರಣೆ ಮಾಡುತ್ತೀರಿ ಮತ್ತು ಮಾಡಿಸುತ್ತೀರಿ ಅಷ್ಟೂ ಸಂಪಾದನೆಯಿದೆ. ಈ ಸತ್ಸಂಗದಲ್ಲಿ ಬರುವುದೆಂದರೆ ಲಾಭವೇ ಲಾಭ.

ಓಂ ಶಾಂತಿ.
ಆತ್ಮಿಕ ತಂದೆಯು ಕುಳಿತು ಆತ್ಮಿಕ ಮಕ್ಕಳಿಗೆ ತಿಳಿಸುತ್ತಾರೆ- ಆತ್ಮಿಕ ಮಕ್ಕಳೇ, ಈ ಕಿವಿಗಳ ಮೂಲಕ ಕೇಳುತ್ತೀರಿ. ಬೇಹದ್ದಿನ ತಂದೆಯು ಮಕ್ಕಳಿಗೆ ತಿಳಿಸುತ್ತಾರೆ- ತಮ್ಮನ್ನು ಆತ್ಮನೆಂದು ತಿಳಿಯಿರಿ, ಇದನ್ನು ಪದೇ-ಪದೇ ಕೇಳುವುದರಿಂದ ಬುದ್ಧಿಯ ಅಲೆದಾಟವು ನಿಂತು ಸ್ಥಿರವಾಗಿಬಿಡುತ್ತದೆ. ತಮ್ಮನ್ನು ಆತ್ಮನೆಂದು ತಿಳಿದು ಕುಳಿತುಬಿಡುತ್ತೀರಿ. ಮಕ್ಕಳು ತಿಳಿಯುತ್ತೀರಿ- ಇಲ್ಲಿ ನಾವು ದೇವತೆಗಳಾಗಲು ಬಂದಿದ್ದೇವೆ, ನಾವು ದತ್ತು ಮಕ್ಕಳಾಗಿದ್ದೇವೆ. ನಾವು ಬ್ರಾಹ್ಮಣರೇ ಓದುತ್ತೇವೆ, ಏನು ಓದುತ್ತೇವೆ? ಬ್ರಾಹ್ಮಣರಿಂದ ದೇವತೆಗಳಾಗಲು. ಯಾವ ಮಕ್ಕಳಾದರೂ ಕಾಲೇಜಿಗೆ ಹೋಗುವರೆಂದರೆ ಈಗ ನಾವು ಓದಿ ಡಾಕ್ಟರ್, ಇಂಜಿನಿಯರ್ ಆಗುತ್ತೇವೆಂದು ತಿಳಿಯುತ್ತಾರೆ. ಕುಳಿತುಕೊಳ್ಳುತ್ತಿದ್ದಂತೆಯೇ ತಕ್ಷಣ ನೆನಪಿಗೆ ಬರುತ್ತದೆ- ತಾವೂ ಸಹ ಬ್ರಹ್ಮಾರವರ ಮಕ್ಕಳು ಬ್ರಾಹ್ಮಣರಾಗುತ್ತೀರಿ ಅಂದಾಗ ನಾವೇ ಬ್ರಾಹ್ಮಣರಿಂದ ದೇವತೆಗಳಾಗುತ್ತೇವೆಂದು ತಿಳಿಯುತ್ತೀರಿ. ಮನುಷ್ಯರಿಂದ ದೇವತೆಗಳನ್ನಾಗಿ ಮಾಡಿದರೆಂದು ಗಾಯನವಿದೆ ಆದರೆ ಆಗುವವರು ಯಾರು? ಹಿಂದೂಗಳೆಲ್ಲರೂ ದೇವತೆಗಳಾಗುವುದಿಲ್ಲ ವಾಸ್ತವದಲ್ಲಿ ಹಿಂದೂ ಎಂಬುದು ಯಾವುದೇ ಧರ್ಮವಿಲ್ಲ. ಆದಿಸನಾತನ ಧರ್ಮವು ಹಿಂದೂಧರ್ಮವಲ್ಲ. ಹಿಂದೂಧರ್ಮವನ್ನು ಯಾರು ಸ್ಥಾಪನೆ ಮಾಡಿದರೆಂದು ಯಾರನ್ನಾದರೂ ಕೇಳಿದರೆ ಅವರು ತಬ್ಬಿಬ್ಬಾಗುತ್ತಾರೆ. ಅಜ್ಞಾನದಿಂದ ಈ ಹೆಸರನ್ನಿಟ್ಟುಬಿಟ್ಟಿದ್ದಾರೆ. ಹಿಂದೂಸ್ಥಾನದಲ್ಲಿರುವ ಕಾರಣ ತಮ್ಮನ್ನು ಹಿಂದೂಗಳೆಂದು ಹೇಳಿಕೊಳ್ಳುತ್ತಾರೆ. ವಾಸ್ತವದಲ್ಲಿ ಇದರ ಹೆಸರು ಭಾರತವಾಗಿದೆ, ಹಿಂದೂಸ್ಥಾನವಲ್ಲ. ಭಾರತ ಖಂಡವೆಂದು ಹೇಳಲಾಗುತ್ತದೆಯೇ ಹೊರತು ಹಿಂದೂಸ್ಥಾನಖಂಡ ವೆಂದಲ್ಲ. ಅಪವಿತ್ರರಾಗುವ ಕಾರಣ ತಮ್ಮನ್ನು ದೇವತೆಗಳೆಂದಂತೂ ತಿಳಿಯಲು ಸಾಧ್ಯವಿಲ್ಲ. ದೇವಿ-ದೇವತೆಗಳು ಪವಿತ್ರರಾಗಿದ್ದರು ಈಗ ಆ ಧರ್ಮವಿಲ್ಲ. ಮತ್ತೆಲ್ಲಾ ಧರ್ಮಗಳು ನಡೆದುಬರುತ್ತವೆ- ಬುದ್ಧನದು ಬೌದ್ಧಧರ್ಮ, ಇಬ್ರಾಹಿಂನದು ಇಸ್ಲಾಂ ಧರ್ಮ, ಕ್ರಿಸ್ತನದು ಕ್ರಿಶ್ಚಿಯನ್ ಧರ್ಮ ಬಾಕಿ ಹಿಂದೂ ಧರ್ಮದವರು ಯಾರೂ ಇಲ್ಲ. ಈ ಹಿಂದೂಸ್ಥಾನವೆಂಬ ಹೆಸರು ವಿದೇಶಿಯರು ಇಟ್ಟಿದ್ದಾರೆ. ಪತಿತರಾಗಿರುವ ಕಾರಣ ತಮ್ಮನ್ನು ದೇವತಾ ಧರ್ಮದವರೆಂದು ತಿಳಿದುಕೊಳ್ಳುವುದಿಲ್ಲ. ತಂದೆಯು ತಿಳುವಳಿಕೆ ನೀಡಿದ್ದಾರೆ. ಈ ಆದಿಸನಾತನ ದೇವಿ-ದೇವತಾ ಧರ್ಮವು ಬಹಳ ಹಳೆಯದಕ್ಕಿಂತ ಹಳೆಯದಾಗಿದೆ. ಪ್ರಾರಂಭದ ಧರ್ಮ ಯಾವುದು? ದೇವಿ-ದೇವತಾ ಧರ್ಮ. ಹಿಂದೂ ಧರ್ಮವೆಂದು ಹೇಳುವುದಿಲ್ಲ. ಈಗ ನೀವು ಬ್ರಹ್ಮಾರವರ ದತ್ತು ಮಕ್ಕಳು ಬ್ರಾಹ್ಮಣರಾದಿರಿ. ಬ್ರಾಹ್ಮಣರಿಂದ ದೇವತೆಗಳಾಗಲು ಓದುತ್ತೀರಿ. ಹಿಂದೂಗಳಿಂದ ದೇವತೆಗಳಾಗಲು ಓದುತ್ತೀರೆಂದಲ್ಲ. ಬ್ರಾಹ್ಮಣರಿಂದಲೇ ದೇವತೆಗಳಾಗುತ್ತೀರಿ. ಇದನ್ನು ಬಹಳ ಚೆನ್ನಾಗಿ ಧಾರಣೆ ಮಾಡಬೇಕಾಗಿದೆ. ಈಗಂತೂ ನೋಡಿ, ಅನೇಕ ಧರ್ಮಗಳಾಗಿವೆ, ಇನ್ನೂ ಸ್ಥಾಪನೆಯಾಗುತ್ತಲೇ ಹೋಗುತ್ತವೆ. ಎಲ್ಲಿಯೇ ಭಾಷಣ ಮಾಡುತ್ತೀರೆಂದರೆ ಇದನ್ನು ತಿಳಿಸುವುದು ಬಹಳ ಒಳ್ಳೆಯದು. ಈಗ ಕಲಿಯುಗವಾಗಿದೆ, ಎಲ್ಲಾ ಧರ್ಮಗಳು ತಮೋಪ್ರಧಾನವಾಗಿವೆ. ಈ ಚಿತ್ರದ ಬಗ್ಗೆ ನೀವು ತಿಳಿಸುತ್ತೀರೆಂದರೆ ನಾನು ಇಂಥಹವನು, ನಾನು ಇಂತಹವನಾಗಿದ್ದೇನೆ.... ಎಂಬ ಅಭಿಮಾನವು ದೂರವಾಗುತ್ತದೆ. ನಾವಂತೂ ಈಗ ತಮೋಪ್ರಧಾನರಾಗಿದ್ದೇವೆಂದು ತಿಳಿಯುತ್ತಾರೆ. ಮೊಟ್ಟಮೊದಲು ತಂದೆಯ ಪರಿಚಯವನ್ನು ಕೊಟ್ಟು ನಂತರ ಈ ಹಳೆಯ ಪ್ರಪಂಚವು ಬದಲಾಗುವುದಿದೆ ಎಂದು ತೋರಿಸಬೇಕು. ದಿನ-ಪ್ರತಿದಿನ ಚಿತ್ರಗಳೂ ಸಹ ಶೋಭಾಯಮಾನವಾಗುತ್ತಾ ಹೋಗುತ್ತದೆ. ಹೇಗೆ ಶಾಲೆಯಲ್ಲಿ ನಕ್ಷೆಯು ಮಕ್ಕಳ ಬುದ್ಧಿಯಲ್ಲಿರುತ್ತದೆ ಹಾಗೆಯೇ ನಿಮ್ಮ ಬುದ್ಧಿಯಲ್ಲಿ ಇದು ಇರಬೇಕು. ಇದು (ತ್ರಿಮೂರ್ತಿಚಿತ್ರ) ನಂಬರ್ವನ್ ನಕ್ಷೆಯಾಗಿದೆ, ಮೇಲೆ ತ್ರಿಮೂರ್ತಿಗಳಿದ್ದಾರೆ, ಸತ್ಯಯುಗ ಮತ್ತು ಕಲಿಯುಗದ ಎರಡೂ ಗೋಲಗಳಿವೆ. ಈಗ ನಾವು ಪುರುಷೋತ್ತಮ ಸಂಗಮಯುಗದಲ್ಲಿದ್ದೇವೆ. ಈ ಹಳೆಯ ಪ್ರಪಂಚವು ವಿನಾಶವಾಗುತ್ತದೆ. ಒಂದು ಆದಿಸನಾತನ ದೇವಿ-ದೇವತಾ ಧರ್ಮವು ಸ್ಥಾಪನೆಯಾಗುತ್ತಾ ಇದೆ. ನೀವು ಆದಿಸನಾತನ ದೇವಿ-ದೇವತಾ ಧರ್ಮದವರಾಗಿದ್ದೀರಿ, ಹಿಂದೂ ಎನ್ನುವ ಯಾವುದೇ ಧರ್ಮವಿಲ್ಲ. ಇರುವಂತಹ ಸ್ಥಾನವಾದ ಬ್ರಹ್ಮ್ತತ್ವವನ್ನೇ ಈಶ್ವರನೆಂದು ತಿಳಿದುಕೊಂಡಿದ್ದಾರೆಯೋ ಹಾಗೆಯೇ ಹಿಂದೂಸ್ಥಾನದಲ್ಲಿರುವವರು ಹಿಂದೂಧರ್ಮದವರಾಗಿದ್ದಾರೆಂದು ತಿಳಿದುಕೊಂಡಿದ್ದಾರೆ. ಅವರದೂ ವ್ಯತ್ಯಾಸವಿದೆ, ನಿಮ್ಮದೂ ವ್ಯತ್ಯಾಸವಿದೆ, ದೇವಿ-ದೇವತಾ ಎಂಬ ಹೆಸರಂತೂ ಬಹಳ ಶ್ರೇಷ್ಠವಾಗಿದೆ. ಇವರಂತೂ ದೇವತೆಯ ಹಾಗೆ ಎಂದು ಹೇಳುತ್ತಾರೆ. ಯಾರಲ್ಲಾದರೂ ಒಳ್ಳೆಯ ಗುಣಗಳಿದ್ದರೆ ಇವರಲ್ಲಿ ದೈವೀಗುಣಗಳಿವೆ ಎಂದು ಹೇಳುತ್ತಾರೆ.

ನೀವು ತಿಳಿದುಕೊಳ್ಳುತ್ತೀರಿ- ಈ ರಾಧಾ-ಕೃಷ್ಣರೇ ಸ್ವಯಂವರದ ನಂತರ ಲಕ್ಷ್ಮೀ-ನಾರಾಯಣ ಆಗುತ್ತಾರೆ, ಅವರಿಗೆ ವಿಷ್ಣು ಎಂದು ಹೇಳಲಾಗುತ್ತದೆ. ಚಿತ್ರವಂತೂ ಎಲ್ಲರದೂ ಇದೆ ಆದರೆ ಯಾರಿಗೂ ತಿಳಿದಿಲ್ಲ. ನೀವು ಮಕ್ಕಳಿಗೆ ಈಗ ತಂದೆಯು ಕುಳಿತು ತಿಳಿಸುತ್ತಿದ್ದಾರೆ, ತಂದೆಯನ್ನೇ ಎಲ್ಲರೂ ನೆನಪು ಮಾಡುತ್ತಾರೆ. ಬಾಯಲ್ಲಿ ಭಗವಂತನ ಹೆಸರು ಬರದೇ ಇರುವಂತಹ ಯಾವುದೇ ಮನುಷ್ಯರಿಲ್ಲ. ಭಗವಂತನಿಗೆ ನಿರಾಕಾರನೆಂದು ಹೇಳಲಾಗುತ್ತದೆ ಆದರೆ ನಿರಾಕಾರ ಎಂಬುದರ ಅರ್ಥವನ್ನು ತಿಳಿದುಕೊಂಡಿಲ್ಲ. ಈಗ ನೀವು ಎಲ್ಲವನ್ನೂ ಅರಿತುಕೊಳ್ಳುತ್ತೀರಿ. ಕಲ್ಲುಬುದ್ಧಿಯವರಿಂದ ಪಾರಸಬುದ್ಧಿಯವರಾಗುತ್ತೀರಿ. ಈ ಜ್ಞಾನವು ಭಾರತವಾಸಿಗಳಿಗಾಗಿಯೇ ಇದೆ, ಅನ್ಯಧರ್ಮದವರಿಗಲ್ಲ. ಈಗ ಆ ಮೊದಲ ಮೂಲಧರ್ಮವೇ ಇಲ್ಲ, ಉಳಿದೆಲ್ಲವೂ ಇದೆ. ಇದಕ್ಕಾಗಿ ಆಲದ ಮರದ ಉದಾಹರಣೆಯು ಸರಿಯಾಗಿದೆ. ಆದಿಸನಾತನ ದೇವಿ-ದೇವತಾ ಧರ್ಮದ ತಳಹದಿಯೆ ಇಲ್ಲ ಬಾಕಿ ಪೂರ್ಣವೃಕ್ಷವು ನಿಂತಿದೆ ಆದ್ದರಿಂದಲೇ ಆದಿಸನಾತನ ದೇವಿ-ದೇವತಾ ಧರ್ಮವಿತ್ತೆಂದು ಹೇಳುತ್ತಾರೆ ಹಿಂದೂಧರ್ಮವಲ್ಲ. ನೀವೀಗ ಬ್ರಾಹ್ಮಣರಾಗಿದ್ದೀರಿ. ದೇವತೆಗಳಾಗಲು ಮೊದಲು ಅವಶ್ಯವಾಗಿ ಬ್ರಾಹ್ಮಣರಾಗಬೇಕಾಗುತ್ತದೆ. ಶೂದ್ರವರ್ಣ ಮತ್ತು ಬ್ರಾಹ್ಮಣ ವರ್ಣವೆಂದು ಹೇಳಲಾಗುತ್ತದೆ. ಶೂದ್ರ ರಾಜವಂಶವೆಂದು ಹೇಳುವುದಿಲ್ಲ, ರಾಜರೂ-ರಾಣಿಯರೂ ಇದ್ದಾರೆ. ಮೊದಲು ದೇವಿ-ದೇವತಾ ಮಹಾರಾಜ-ಮಹಾರಾಣಿಯಿದ್ದರು, ಇಲ್ಲಿ ಹಿಂದೂ ಮಹಾರಾಜ-ಮಹಾರಾಣಿಯರಿದ್ದಾರೆ. ಭಾರತವಂತೂ ಒಂದೆ ಆಗಿದೆ ಅಂದಮೇಲೆ ಅದು ಹೇಗೆ ಬೇರೆ-ಬೇರೆ ಆಯಿತು? ಅವರ ಹೆಸರು-ಗುರುತನ್ನೇ ಮರೆಮಾಡಿಬಿಟ್ಟಿದ್ದಾರೆ. ಕೇವಲ ಚಿತ್ರಗಳಿವೆ, ನಂಬರ್ವನ್ ಸೂರ್ಯವಂಶಿಯಾಗಿದ್ದಾರೆ. ರಾಮನಿಗೆ ಸೂರ್ಯವಂಶಿ ಎಂದು ಹೇಳುವುದಿಲ್ಲ, ಈಗ ನೀವು ಸೂರ್ಯವಂಶಿಯರಾಗಲು ಬಂದಿದ್ದೀರೇ ಹೊರತು ಚಂದ್ರವಂಶಿಯರಾಗುವುದಕ್ಕಲ್ಲ. ಇದು ರಾಜಯೋಗವಲ್ಲವೆ! ನಾವು ಈ ಲಕ್ಷ್ಮೀ-ನಾರಾಯಣರಾಗುತ್ತೇವೆಂದು ನಿಮ್ಮ ಬುದ್ಧಿಯಲ್ಲಿದೆ. ಮನಸ್ಸಿನಲ್ಲಿಯೂ ಖುಷಿಯಿರುತ್ತದೆ- ತಂದೆಯು ನಮ್ಮನ್ನು ಮಹಾರಾಜ-ಮಹಾರಾಣಿಯರನ್ನಾಗಿ ಮಾಡಲು ಓದಿಸುತ್ತಾರೆ. ಇದೇ ಸತ್ಯ-ಸತ್ಯವಾದ ಸತ್ಯನಾರಾಯಣನ ಕಥೆಯಾಗಿದೆ. ಮೊದಲು ಜನ್ಮ-ಜನ್ಮಾಂತರದಿಂದ ಸತ್ಯನಾರಾಯಣನ ಕಥೆಯನ್ನು ಕೇಳುತ್ತಾಬಂದಿದ್ದೀರಿ ಆದರೆ ಅದ್ಯಾವುದೂ ಸತ್ಯಕಥೆಯಲ್ಲ. ಭಕ್ತಿಮಾರ್ಗದಲ್ಲಿ ಎಂದೂ ಮನುಷ್ಯರಿಂದ ದೇವತೆಗಳಾಗುವುದಿಲ್ಲ. ಮುಕ್ತಿ-ಜೀವನ್ಮುಕ್ತಿಯನ್ನು ಪಡೆಯಲು ಸಾಧ್ಯವಿಲ್ಲ. ಎಲ್ಲಾ ಮನುಷ್ಯರು ಮುಕ್ತಿ-ಜೀವನ್ಮುಕ್ತಿಯನ್ನು ಅವಶ್ಯವಾಗಿ ಪಡೆಯುತ್ತಾರೆ, ಈಗ ಎಲ್ಲರೂ ಬಂಧನದಲ್ಲಿದ್ದಾರೆ. ಮೇಲಿಂದ ಆತ್ಮವು ಇಂದು ಬಂದರೂ ಸಹ ಜೀವನ್ಮುಕ್ತಿಯಲ್ಲಿ ಬರುವುದು, ಜೀವನಬಂಧನದಲ್ಲಲ್ಲ. ಅರ್ಧ ಸಮಯ ಜೀವನ್ಮುಕ್ತಿ, ಇನ್ನೂ ಅರ್ಧ ಸಮಯ ಜೀವನಬಂಧನದಲ್ಲಿ ಹೋಗುತ್ತಾರೆ. ನಾಟಕವು ಹೀಗೆಯೇ ಮಾಡಲ್ಪಟ್ಟಿದೆ. ಈ ಬೇಹದ್ದಿನ ನಾಟಕದ ಆಟದಲ್ಲಿ ನಾವೆಲ್ಲರೂ ಪಾತ್ರಧಾರಿಗಳಾಗಿದ್ದೇವೆ, ಇಲ್ಲಿ ಪಾತ್ರವನ್ನಭಿನಯಿಸಲು ಬರುತ್ತೇವೆ. ನಾವಾತ್ಮಗಳು ಇಲ್ಲಿನ ನಿವಾಸಿಗಳಲ್ಲ. ಅಲ್ಲಿಂದ ಹೇಗೆ ಬರುತ್ತೇವೆ ಎಂಬ ಎಲ್ಲಾ ಮಾತುಗಳನ್ನು ತಂದೆಯು ತಿಳಿಸುತ್ತಾರೆ. ಕೆಲವು ಆತ್ಮರು ಇಲ್ಲಿಯೇ ಪುನರ್ಜನ್ಮವನ್ನು ತೆಗೆದುಕೊಳ್ಳುತ್ತಾ ಇರುತ್ತಾರೆ. ನೀವು ಮಕ್ಕಳಿಗೆ ಪ್ರಾರಂಭದಿಂದ ಹಿಡಿದು ಅಂತ್ಯದವರೆಗೆ ಇಡೀ ವಿಶ್ವದ ಇತಿಹಾಸ-ಭೂಗೋಳವು ಬುದ್ಧಿಯಲ್ಲಿದೆ. ಬೇಹದ್ದಿನ ತಂದೆಯು ಮೇಲೆ ಕುಳಿತು ಏನು ಮಾಡುತ್ತಾರೆಂಬುದನ್ನೂ ಸಹ ಯಾರೂ ತಿಳಿದುಕೊಂಡಿಲ್ಲ ಆದ್ದರಿಂದ ತುಚ್ಛಬುದ್ಧಿಯವರೆಂದು ಹೇಳಲಾಗುತ್ತದೆ. ನೀವೂ ಸಹ ಮೊದಲು ಹಾಗೆಯೇ ಇದ್ದಿರಿ, ಈಗ ತಂದೆಯು ನಿಮಗೆ ರಚಯಿತ ಮತ್ತು ರಚನೆಯ ಆದಿ-ಮಧ್ಯ-ಅಂತ್ಯದ ರಹಸ್ಯವನ್ನು ತಿಳಿಸಿದ್ದಾರೆ. ನೀವು ಬಡತನ, ಸಾಧಾರಣ, ಎಲ್ಲವನ್ನೂ ತಿಳಿದುಕೊಂಡಿದ್ದೀರಿ. ನೀವು ಸ್ವಚ್ಛಬುದ್ಧಿಯವರಾಗಿದ್ದೀರಿ. ಸ್ವಚ್ಛ ಎಂದು ಪವಿತ್ರರಿಗೆ ಹೇಳಲಾಗುತ್ತದೆ. ತುಚ್ಛಬುದ್ಧಿಯವರು ಅಪವಿತ್ರರಾದರು, ನೀವೀಗ ನೋಡಿ ಏನಾಗುತ್ತಿದ್ದೀರಿ! ಶಾಲೆಯಲ್ಲಿಯೂ ಸಹ ವಿದ್ಯೆಯಿಂದ ಶ್ರೇಷ್ಠಪದವಿಯನ್ನು ಪಡೆಯುತ್ತಾರೆ, ನಿಮ್ಮ ವಿದ್ಯೆಯು ಅತಿಶ್ರೇಷ್ಠವಾಗಿದೆ ಇದರಿಂದ ನೀವು ರಾಜ್ಯಪದವಿಯನ್ನು ಪಡೆಯುತ್ತೀರಿ. ಅವರಂತೂ ದಾನ-ಪುಣ್ಯ ಮಾಡುವುದರಿಂದ ರಾಜನ ಬಳಿ ಹೋಗಿ ಜನ್ಮ ತೆಗೆದುಕೊಳ್ಳುತ್ತಾರೆ ನಂತರ ರಾಜರಾಗುತ್ತಾರೆ ಆದರೆ ನೀವು ಈ ವಿದ್ಯೆಯಿಂದ ರಾಜರಾಗುತ್ತೀರಿ. ನಾನು ನೀವು ಮಕ್ಕಳಿಗೆ ರಾಜಯೋಗವನ್ನು ಕಲಿಸುತ್ತೇನೆಂದು ತಂದೆಯೇ ಹೇಳುತ್ತಾರೆ. ತಂದೆಯ ವಿನಃ ರಾಜಯೋಗವನ್ನು ಮತ್ತ್ಯಾರೂ ಕಲಿಸಲು ಸಾಧ್ಯವಿಲ್ಲ. ತಂದೆಯೇ ನಿಮಗೆ ರಾಜಯೋಗದ ವಿದ್ಯೆಯನ್ನು ಓದಿಸುತ್ತಾರೆ. ಮತ್ತೆ ನೀವು ಅನ್ಯರಿಗೆ ತಿಳಿಸುತ್ತೀರಿ, ತಂದೆಯು ರಾಜಯೋಗವನ್ನು ಕಲಿಸುತ್ತಾರೆ- ನೀವು ಪತಿತರಿಂದ ಪಾವನರಾಗುತ್ತೀರಿ ಮತ್ತು ಚಕ್ರವನ್ನು ತಿಳಿಯುವುದರಿಂದ ಸತ್ಯಯುಗದಲ್ಲಿ ಚಕ್ರವರ್ತಿ ರಾಜರಾಗಿಬಿಡುತ್ತೀರಿ. ಇದನ್ನು ತಿಳಿಸುವುದು ಬಹಳ ಸಹಜವಾಗಿದೆ. ಯಾರಿಗಾದರೂ ತಿಳಿಸುವಿರೆಂದರೆ ಮೊಟ್ಟಮೊದಲು ತಂದೆಯ ಪರಿಚಯವನ್ನು ಕೊಡಿ, ತಂದೆಯು ತಿಳಿಸುತ್ತಾರೆ- ಅನೇಕರು ಅನ್ಯಧರ್ಮಗಳಲ್ಲಿ ಹೊರಟುಹೋಗಿದ್ದಾರೆ. ಬೌದ್ಧಿ, ಮುಸಲ್ಮಾನ ಮೊದಲಾದವರು ಅನೇಕರಾಗಿಬಿಟ್ಟಿದ್ದಾರೆ. ಭಯದಿಂದಲೂ ಸಹ ಮುಸಲ್ಮಾನರಾಗಿದ್ದಾರೆ. ಅನೇಕರು ಬೌದ್ಧಿಯರಾಗಿದ್ದಾರೆ ಒಂದು ಬಾರಿ ಭಾಷಣದಿಂದಲೇ ಸಾವಿರಾರು ಮಂದಿ ಬೌದ್ಧಿಯರಾಗಿಬಿಟ್ಟರು. ಕ್ರಿಶ್ಚಿಯನ್ನರೂ ಸಹ ಹೀಗೆ ಒಂದು ಭಾಷಣ ಮಾಡುತ್ತಾರೆ. ಈ ಸಮಯದಲ್ಲಿ ಅವರದೇ ಎಲ್ಲದಕ್ಕಿಂತ ಹೆಚ್ಚಿನ ಜನಸಂಖ್ಯೆಯಾಗಿದೆ ಅಂದಾಗ ಈಗ ಮಕ್ಕಳ ಬುದ್ಧಿಯಲ್ಲಿ ಇಡೀ ಸೃಷ್ಟಿಚಕ್ರವು ಸುತ್ತುತ್ತಾ ಇರುತ್ತದೆ ಆದ್ದರಿಂದ ನೀವು ವಿಷ್ಣುವಿಗೆ ಏಕೆ ತೋರಿಸಿದ್ದಾರೆಂದು ಮನುಷ್ಯರಿಗೆ ಗೊತ್ತಿಲ್ಲ. ಸ್ವದರ್ಶನ ಚಕ್ರಧಾರಿಯೆಂದು ಕೃಷ್ಣ ಅಥವಾ ನಾರಾಯಣನಿಗೆ ಹೇಳುತ್ತಾರೆ ಅವರ ನಡುವಿನ ಸಂಬಂಧವೇನೆಂಬುದನ್ನು ತಿಳಿಸಬೇಕು. ಈ ಮೂವರು ಒಬ್ಬರೇ ಆಗಿದ್ದಾರೆ, ವಾಸ್ತವದಲ್ಲಿ ಈ ಸ್ವದರ್ಶನ ಚಕ್ರವಂತೂ ನೀವು ಬ್ರಾಹ್ಮಣರಿಗಾಗಿಯೇ ಇದೆ. ಜ್ಞಾನದಿಂದ ನೀವು ಸ್ವದರ್ಶನ ಚಕ್ರಧಾರಿಗಳಾಗುತ್ತೀರಿ. ಬಾಕಿ ಸ್ವದರ್ಶನ ಚಕ್ರವು ಕತ್ತರಿಸುವ, ಸಾಯಿಸುವ ಸಂಕೇತವಲ್ಲ, ಇವು ಜ್ಞಾನದ ಮಾತುಗಳಾಗಿವೆ. ನಿಮ್ಮಲ್ಲಿ ಈ ಜ್ಞಾನದ ಚಕ್ರವು ಎಷ್ಟು ತಿರುಗುವುದೋ ಅಷ್ಟು ನಿಮ್ಮ ಪಾಪಗಳು ಭಸ್ಮವಾಗುತ್ತವೆ. ಇದರಲ್ಲಿ ತಲೆಕತ್ತರಿಸುವ ಮಾತಿಲ್ಲ. ಚಕ್ರವು ಯಾವುದೇ ಹಿಂಸೆಯದಲ್ಲ. ಈ ಚಕ್ರವು ನಿಮ್ಮನ್ನು ಅಹಿಂಸಕರನ್ನಾಗಿ ಮಾಡುತ್ತದೆ. ಎಲ್ಲಿಯ ಮಾತನ್ನು ಎಲ್ಲಿ ತೆಗೆದುಕೊಂಡು ಹೋಗಿದ್ದಾರೆ! ಇದನ್ನು ತಂದೆಯ ವಿನಃ ಯಾರೂ ತಿಳಿಸಲು ಸಾಧ್ಯವಿಲ್ಲ.

ನೀವು ಮಧುರಾತಿ ಮಧುರ ಮಕ್ಕಳಿಗೆ ಅಪಾರ ಖುಷಿಯಾಗುತ್ತದೆ. ನಾವಾತ್ಮರಾಗಿದ್ದೇವೆ ಎಂದು ಈಗ ನೀವು ತಿಳಿಯುತ್ತೀರಿ. ಮೊದಲು ತಮ್ಮನ್ನು ಆತ್ಮನೆಂಬುದನ್ನೂ ಮರೆತಿರಿ. ಮನೆಯನ್ನೂ ಮರೆತುಹೋದಿರಿ. ಆತ್ಮವನ್ನಾದರೂ ಆತ್ಮವೆಂದು ಹೇಳುತ್ತಾರೆ ಆದರೆ ಪರಮಾತ್ಮನನ್ನಂತೂ ಕಲ್ಲು-ಮುಳ್ಳು ಎಲ್ಲದರಲ್ಲಿಯೂ ಇದ್ದಾರೆಂದು ಹೇಳಿಬಿಟ್ಟಿದ್ದಾರೆ. ಆತ್ಮರು ತಂದೆಗೆ ಎಷ್ಟೊಂದು ನಿಂದನೆ ಮಾಡಿಬಿಟ್ಟಿದ್ದಾರೆ ಆದರೆ ಮತ್ತೆ ತಂದೆಯು ಬಂದು ಮಕ್ಕಳಿಗೆ ಜ್ಞಾನವನ್ನು ಕೊಡುತ್ತಾರೆ. ಆತ್ಮಕ್ಕಾಗಿ ಕಲ್ಲು-ಮುಳ್ಳು, ಕಣ-ಕಣದಲ್ಲಿದೆಯೆಂದು ಎಂದೂ ಹೇಳುವುದಿಲ್ಲ. ಪ್ರಾಣಿಗಳ ಮಾತೇ ಬೇರೆಯಾಗಿದೆ, ಮನುಷ್ಯರಿಗೇ ವಿದ್ಯಾಭ್ಯಾಸವಾಗುತ್ತದೆ, ಈಗ ನೀವು ತಿಳಿಯುತ್ತೀರಿ- ನಾವು ಇಷ್ಟು ಜನ್ಮಗಳಲ್ಲಿ ಇಂತಿಂತಹವರಾಗಿದ್ದೇವೆ. 84 ಜನ್ಮಗಳನ್ನು ಪೂರ್ಣ ಮಾಡಿದೆವು, 84 ಲಕ್ಷ ಜನ್ಮಗಳಲ್ಲಿ, ಮನುಷ್ಯರು ಎಷ್ಟೊಂದು ಅಂಧಕಾರದಲ್ಲಿದ್ದಾರೆ ಆದ್ದರಿಂದ ಜ್ಞಾನಸೂರ್ಯ ಪ್ರಕಟ, ಅಜ್ಞಾನ ಅಂಧಕಾರ ವಿನಾಶ ಎಂದು ಹೇಳಲಾಗುತ್ತದೆ. ಅರ್ಧಕಲ್ಪ ದ್ವಾಪರ-ಕಲಿಯುಗದಲ್ಲಿ ಅಂಧಕಾರ, ಇನ್ನ ಅರ್ಧಕಲ್ಪ ಸತ್ಯ-ತ್ರೇತಾದಲ್ಲಿ ಪ್ರಕಾಶ, ದಿನ ಮತ್ತು ರಾತ್ರಿ, ಕತ್ತಲು ಮತ್ತು ಬೆಳಕಿನ ಜ್ಞಾನವಾಗಿದೆ. ಇದು ಬೇಹದ್ದಿನ ಮಾತಾಗಿದೆ. ಅರ್ಧಕಲ್ಪ ಅಂಧಕಾರದಲ್ಲಿ ಎಷ್ಟೊಂದು ಪೆಟ್ಟು ತಿಂದಿರಿ, ಬಹಳ ಅಲೆದಾಡಿದಿರಿ. ಶಾಲೆಯಲ್ಲಿ ಓದುತ್ತಾರೆ ಅದಕ್ಕೆ ಅಲೆದಾಡುವುದೆಂದು ಹೇಳುವುದಿಲ್ಲ, ಸತ್ಸಂಗಗಳಲ್ಲಿ ಮನುಷ್ಯರು ಎಷ್ಟೊಂದು ಅಲೆಯುತ್ತಾರೆ! ಲಾಭವೇನೂ ಆಗುವುದಿಲ್ಲ ಇನ್ನೂ ನಷ್ಟವೇ ಆಗುತ್ತದೆ ಆದ್ದರಿಂದ ಅದಕ್ಕೆ ಅಲೆದಾಡುವಿಕೆ ಎಂದು ಹೇಳಲಾಗುತ್ತದೆ. ಅಲೆಯುತ್ತಾ-ಅಲೆಯುತ್ತಾ ಹಣ-ಅಧಿಕಾರ ಮುಂತಾದವೆಲ್ಲವನ್ನೂ ಕಳೆದುಕೊಂಡು ಕಂಗಾಲರಾಗಿಬಿಟ್ಟಿದ್ದಾರೆ. ಈಗ ಈ ವಿದ್ಯೆಯಲ್ಲಿ ಯಾರೆಷ್ಟು ಚೆನ್ನಾಗಿ ಧಾರಣೆ ಮಾಡುವರೋ ಮತ್ತು ಮಾಡಿಸುವರೋ ಅಷ್ಟು ಲಾಭವೇ ಲಾಭವಿದೆ. ಬ್ರಾಹ್ಮಣರಾಗಿಬಿಟ್ಟರೆ ಲಾಭವೇ ಲಾಭ. ನಿಮಗೆ ಗೊತ್ತಿದೆ- ನೀವು ಬ್ರಾಹ್ಮಣರೇ ಸ್ವರ್ಗವಾಸಿಗಳಾಗುತ್ತೀರಿ. ಸ್ವರ್ಗವಾಸಿಗಳಂತೂ ಎಲ್ಲರೂ ಆಗುತ್ತೀರಿ ಆದರೆ ನೀವು ಶ್ರೇಷ್ಠ ಪದವಿಯನ್ನು ಪಡೆಯುವ ಪುರುಷಾರ್ಥ ಮಾಡಬೇಕು.

ಈಗ ನಿಮ್ಮೆಲ್ಲರದು ವಾನಪ್ರಸ್ಥ ಸ್ಥಿತಿಯಾಗಿದೆ. ತಾವೇ ಹೇಳುತ್ತೀರಿ- ಬಾಬಾ, ನಮ್ಮನ್ನು ವಾನಪ್ರಸ್ಥ ಅಥವಾ ಪವಿತ್ರಪ್ರಪಂಚದಲ್ಲಿ ಕರೆದುಕೊಂಡು ಹೋಗಿ. ಅದು ಆತ್ಮಗಳ ಪ್ರಪಂಚವಾಗಿದೆ, ಈ ನಿರಾಕಾರಿ ಪ್ರಪಂಚ ಎಷ್ಟು ಚಿಕ್ಕದಾಗಿದೆ. ಇಲ್ಲಂತೂ ಓಡಾಡಲು-ತಿರುಗಾಡಲು ಎಷ್ಟು ದೊಡ್ಡ ಭೂಮಿಯಿದೆ. ಅಲ್ಲಿ ಈ ಮಾತಿಲ್ಲ, ಶರೀರವೂ ಇಲ್ಲ, ಪಾತ್ರವೂ ಇಲ್ಲ. ಆತ್ಮರು ನಕ್ಷತ್ರ ರೂಪದಲ್ಲಿದ್ದಾರೆ, ಇದು ಸೃಷ್ಟಿಯಾಗಿದೆಯಲ್ಲವೆ. ಸೂರ್ಯ, ಚಂದ್ರ, ನಕ್ಷತ್ರಗಳು ಹೇಗೆ ನಿಂತಿವೆಯೋ ಹಾಗೆಯೇ ಆತ್ಮಗಳೂ ಸಹ ಬ್ರಹ್ಮ್ತತ್ವದಲ್ಲಿ ತಮ್ಮ ಆಧಾರದ ಮೇಲೆ ಸ್ವಾಭಾವಿಕವಾಗಿ ನಿಂತಿರುತ್ತವೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಜ್ಞಾನದ ಸ್ಮರಣೆ ಮಾಡಿ ಸ್ವದರ್ಶನ ಚಕ್ರಧಾರಿಗಳಾಗಬೇಕು, ಸ್ವದರ್ಶನಚಕ್ರವನ್ನು ತಿರುಗಿಸುತ್ತಾ ಪಾಪಗಳನ್ನು ಕತ್ತರಿಸಬೇಕು. ಡಬಲ್ ಅಹಿಂಸಕರಾಗಬೇಕು.

2. ತಮ್ಮ ಬುದ್ಧಿಯನ್ನು ಸ್ವಚ್ಛ-ಪವಿತ್ರವನ್ನಾಗಿ ಮಾಡಿಕೊಂಡು ರಾಜಯೋಗದ ವಿದ್ಯೆಯನ್ನು ಓದಬೇಕು ಮತ್ತು ಶ್ರೇಷ್ಠ ಪದವಿಯನ್ನು ಪಡೆಯಬೇಕಾಗಿದೆ. ಸದಾ ಹೃದಯದಲ್ಲಿ ಇದೇ ಖುಷಿಯಿರಲ್ಲಿ - ನಾವು ಸತ್ಯನಾರಾಯಣನ ಸತ್ಯ-ಸತ್ಯವಾದ ಕಥೆಯನ್ನು ಕೇಳಿ ಮನುಷ್ಯರಿಂದ ದೇವತೆಗಳಾಗುತ್ತೇವೆ.

ವರದಾನ:
ಮನಸ್ಸು ಬುದ್ಧಿಯನ್ನು ಆದೇಶದ ಪ್ರಮಾಣ ವಿಧಿಪೂರ್ವಕವಾಗಿ ಕಾರ್ಯದಲ್ಲಿ ತೊಡಗಿಸುವಂತಹ ನಿರಂತರ ಯೋಗಿ ಭವ

ನಿರಂತರ ಯೋಗಿ ಅರ್ಥಾತ್ ಸ್ವರಾಜ್ಯ ಅಧಿಕಾರಿ ಆಗುವ ವಿಶೇಷ ಸಾಧನ ಮನಸ್ಸು ಮತ್ತು ಬುದ್ಧಿಯಾಗಿದೆ. ಮಂತ್ರವೇ ಮನ್ಮನಾಭವದ್ದಾಗಿದೆ. ಯೋಗಕ್ಕೆ ಬುದ್ಧಿಯೋಗ ಎಂದೂ ಹೇಳಲಾಗುವುದು. ಒಂದುವೇಳೆ ಈ ವಿಶೇಷ ಆಧಾರ ಸ್ಥಂಭ ನಿಮ್ಮ ಅಧಿಕಾರದಲ್ಲಿದೆ ಅರ್ಥಾತ್ ನಿಮ್ಮ ಆದೇಶ ಪ್ರಮಾಣ ವಿಧಿ-ಪೂರ್ವಕ ಕಾರ್ಯ ಮಾಡುತ್ತೆ. ಯಾವ ಸಂಕಲ್ಪ ಯಾವಾಗ ಮಾಡಲು ಬಯಸುವಿ ರೋ, ಬುದ್ಧಿ ಎಲ್ಲಿ ಇಡಲು ಇಚ್ಛಿಸುವಿರೋ ಅಲ್ಲಿ ಇಡಲು ಸಾಧ್ಯ, ಬುದ್ಧಿ ತಾವು ರಾಜಾರನ್ನು ಅಲೆದಾಡಿಸುವುದಿಲ್ಲ. ವಿಧಿಪೂರ್ವಕವಾಗಿ ಕಾರ್ಯ ಮಾಡಬೇಕು ಆಗ ಹೇಳಲಾಗುವುದು ನಿರಂತರ ಯೋಗಿ.

ಸ್ಲೋಗನ್:
ಮಾಸ್ಟರ್ ವಿಶ್ವ ಶಿಕ್ಷಕರಾಗಿ, ಸಮಯವನ್ನು ಶಿಕ್ಷಕರನ್ನಾಗಿ ಮಾಡಿಕೊಳ್ಳ ಬೇಡಿ.