21.06.26    Avyakt Bapdada     Kannada Murli    15.11.2010     Om Shanti     Madhuban


“ಸ್ವ-ಪರಿವರ್ತನೆಯ ಗತಿಯನ್ನು ತೀವ್ರ ಮಾಡಿಕೊಂಡು ಸಂಸ್ಕಾರ-ಸ್ವಭಾವದ ಸಮಾಪ್ತಿಯ ಸಮಾರೋಹವನ್ನು ಆಚರಿಸಿ, ಪ್ರತೀ ಸಂಕಲ್ಪ, ಮಾತು ಮತ್ತು ಕರ್ಮದಲ್ಲಿ ಬ್ರಹ್ಮಾ ತಂದೆಯನ್ನು ಕಾಪಿ ಮಾಡಿರಿ”


ಇಂದು ಬಾಪ್ದಾದಾ ಎಲ್ಲರ ಮಸ್ತಕದಲ್ಲಿ ಹೊಳೆಯುತ್ತಿರುವ ಮೂರು ಭಾಗ್ಯದ ಚಿಹ್ನೆಗಳನ್ನು ನೋಡುತ್ತಿದ್ದಾರೆ. ಒಂದಾಗಿದೆ - ತಂದೆಯ ಮೂಲಕ ಪಾಲನೆಯ ಭಾಗ್ಯ, ಎರಡನೆಯದಾಗಿದೆ - ಶಿಕ್ಷಕನ ರೂಪದಲ್ಲಿ ಶಿಕ್ಷಣದ ಭಾಗ್ಯ, ಮೂರನೆಯದು - ಸದ್ಗುರುವಿನ ಮೂಲಕ ವರದಾನಗಳ ಭಾಗ್ಯ. ಮೂರು ಭಾಗ್ಯದ ಹೊಳೆಯುತ್ತಿರುವ ರೇಖೆಗಳನ್ನು ನೋಡುತ್ತಿದ್ದಾರೆ. ಪ್ರತಿಯೊಬ್ಬರ ಮಸ್ತಕವು ಮೂರು ಭಾಗ್ಯಗಳಿಂದ ಹೊಳೆಯುತ್ತಿದೆ. ಇಂತಹ ಭಾಗ್ಯ ಮತ್ತ್ಯಾರದೇ ಮಸ್ತಕದಲ್ಲಿ ಹೊಳೆಯುತ್ತಿರುವುದು ಕಾಣಿಸುವುದಿಲ್ಲ. ಆದರೆ ತಮ್ಮೆಲ್ಲರ ಮಸ್ತಕವು ಭಾಗ್ಯದಿಂದ ಹೊಳೆಯುತ್ತಿದೆ. ತಾವೆಲ್ಲರೂ ಸಹ ತಮ್ಮ ಭಾಗ್ಯವನ್ನು ನೋಡಿಕೊಳ್ಳುತ್ತಿದ್ದೀರಲ್ಲವೆ! ಬಾಪ್ದಾದಾ ನೋಡಿದರು - ಭಾಗ್ಯವಂತು ಎಲ್ಲರಿಗೂ ಸಿಕ್ಕಿದೆ ಆದರೆ ಭಾಗ್ಯದ ಹೊಳಪು ಎಲ್ಲರದು ಒಂದೇ ರೀತಿ ಇಲ್ಲ. ಕೆಲವರ ಹೊಳಪು ಬಹಳ ತೀಷ್ಣವಾಗಿದೆ, ಕೆಲವರ ಹೊಳಪು ಸ್ವಲ್ಪ ಕಡಿಮೆ ಕಾಣಿಸುತ್ತಿದೆ. ವಾಸ್ತವದಲ್ಲಿ ಬಾಪ್ದಾದಾರವರು ಎಲ್ಲರಿಗೂ ಒಂದೇ ಬಾರಿ ಒಂದೇ ರೀತಿಯ ಭಾಗ್ಯ ಕೊಟ್ಟಿದ್ದಾರೆ. ಒಂದೇ ವಿದ್ಯೆಯನ್ನೂ ಓದಿಸುತ್ತಾರೆ. ಪಾಲನೆಯನ್ನು ಒಂದೇ ರೀತಿ ಕೊಟ್ಟಿದ್ದಾರೆ ಮತ್ತು ವರದಾನವನ್ನೂ ಒಂದೇ ರೀತಿ ಕೊಟ್ಟಿದ್ದಾರೆ. ಆದಿ ರತ್ನಗಳಿರಲಿ ಅಥವಾ ಕೊನೆಯಲ್ಲಿ ಬಂದಿರುವವರಿರಲಿ ಎಲ್ಲರಿಗೂ ಒಂದೇ ಮುರುಳಿಯ ಮೂಲಕ ಪಾಲನೆ ಸಿಗುತ್ತಿದೆ, ವಿದ್ಯೆ ಸಿಗುತ್ತಿದೆ. ವರದಾನವೂ ಸಹ ಎಲ್ಲರಿಗೂ ಒಂದೇ ಸಿಗುತ್ತದೆ. ಆದಿ ರತ್ನಗಳಿಗಾಗಿ ಮುರುಳಿ ಬೇರೆ ಇಲ್ಲ, ಒಂದೇ ಆಗಿರುತ್ತದೆ. ಆದರೂ ಸಹ ಹೊಳೆಯುತ್ತಿರುವ ಭಾಗ್ಯ ನಂಬರ್ವಾರ್ ಆಗಿ ಕಾಣಿಸುತ್ತಿದೆ. ತಂದೆಯ ಪ್ರೀತಿಯ ಪಾಲನೆ ಎಲ್ಲರಿಗೂ ಒಂದೇ ರೀತಿ ಸಿಗುತ್ತಿದೆ. ಪ್ರತಿಯೊಬ್ಬರ ಬಾಯಿಂದ ಇದೇ ಬರುತ್ತದೆ- ‘ನನ್ನಬಾಬಾ’, ಮೊದಲು ಬಂದಿರುವವರಿರಲಿ, ಅಥವಾ ಈಗೀಗ ಬಂದಿರಬಹುದು ಆದರೆ ಪ್ರತಿಯೊಬ್ಬರೂ ತಮ್ಮ ಅಧಿಕಾರದಿಂದ ಹೇಳುತ್ತಾರೆ- ನನ್ನ ಬಾಬಾ ಎಂದು. ತಂದೆಯಿಂದ ಪ್ರೀತಿ ಸಿಕ್ಕಿದೆಯೇ? ಎಂದು ಯಾರಿಂದಿಗಾದರೂ ಕೇಳಿರಿ ಆಗ ನಶೆಯಿಂದ ಹೇಳುತ್ತಾರೆ - ತಂದೆಯ ಪ್ರೀತಿ ನನಗೇ ಹೆಚ್ಚು ಸಿಗುತ್ತಿದೆ ಎಂದು. ನನ್ನ ಬಾಬಾ ಎಂದು ಹೃದಯದಿಂದ ಹೇಳುವವರು ಇನ್ನ್ಯಾವ ಮಾತನ್ನು ಹೇಳುತ್ತಾರೆ ತಿಳಿದಿದೆಯೇ? ನನ್ನ ಪ್ರೀತಿಯೇ ಎಲ್ಲರಿಗಿಂತ ಹೆಚ್ಚು ಎಂದು ಹೇಳುತ್ತಾರೆ. ಬಾಬಾರವರ ಪ್ರೀತಿ ಮೊದಲು ನನ್ನೊಂದಿಗಿದೆ ಎಂತಲೂ ಹೇಳುತ್ತಾರೆ ಏಕೆಂದರೆ ಪ್ರೀತಿಯೇ ತಂದೆಯ ಪಾಲನೆಯಾಗಿದೆ. ಈ ನನ್ನಬಾಬಾ ಎಂದು ಒಪ್ಪಿಕೊಂಡಿದ್ದರಿಂದ ತಾವು ತಂದೆಯ ಮಕ್ಕಳಾದಿರಿ ಮತ್ತು ತಂದೆಯು ತಮ್ಮವರಾಗಿ ಬಿಟ್ಟರು.

ಇಂದು ತಾವೆಲ್ಲರೂ ಬಂದಿದ್ದೀರಿ ಅಂದಮೇಲೆ ಪ್ರೀತಿಯ ವಿಮಾನದಲ್ಲಿ ಬಂದಿದ್ದೀರಿ. ಪ್ರೀತಿಯೇ ತಮ್ಮೆಲ್ಲರನ್ನು ಇಲ್ಲಿಗೆ ಸೆಳೆದು ತಂದಿದೆ. ಎಲ್ಲರೂ ಪ್ರೀತಿಯಿಂದ ಆರಾಮದಿಂದ ಬಂದು ತಲುಪಿದ್ದೀರಿ. ಈ ಪರಮಾತ್ಮನ ಪ್ರೀತಿಯು ಕೇವಲ ಈ ಸಂಗಮಯುಗದಲ್ಲಿಯೇ ಪ್ರಾಪ್ತಿಯಾಗುತ್ತದೆ. ದೇವಾತ್ಮರ ಪ್ರೀತಿಯಂತು ಪ್ರಾಪ್ತಿಯಾಗುತ್ತದೆ ಆದರೆ ಪರಮಾತ್ಮನ ಪ್ರೀತಿ ಮಾತ್ರ ಇದೊಂದು ಜನ್ಮದಲ್ಲಿ ಪ್ರಾಪ್ತಿಯಾಗುತ್ತದೆ ಆದ್ದರಿಂದ ಬಾಪ್ದಾದಾರವರು ಇಂತಹ ಪಾತ್ರ ಆತ್ಮರನ್ನು ನೋಡಿ ಏನು ಹೇಳುತ್ತಾರೆ? ವಾಹ್ ನನ್ನ ಮಕ್ಕಳೇ! ತಾವೇ ಕೋಟಿಯಲ್ಲಿ ಕೆಲವರೇ ಪಾತ್ರರಾಗಿದ್ದೀರಿ. ಪ್ರತೀ ಕಲ್ಪದಲ್ಲಿ ತಾವೇ ಪಾತ್ರರಾಗಿದ್ದೀರಿ. ನಡೆದಾಡುತ್ತಾ-ತಿರುಗಾಡುತ್ತಾ ಈ ನಶೆಯಿರುತ್ತದೆಯಲ್ಲವೆ! ತಮ್ಮ ಹೃದಯವು ಇದೇ ಗೀತೆಯನ್ನು ಹಾಡುತ್ತದೆ - ವಾಹ್! ನನ್ನ ಭಾಗ್ಯವೇ ವಾಹ್! ತಂದೆಗೂ ಖುಷಿಯಾಗುತ್ತದೆ. ಇವರೆಲ್ಲರೂ ನನ್ನ ಅಧಿಕಾರಿ ಮಕ್ಕಳಾಗಿದ್ದಾರೆ ಎಂದು. ಪರಮಾತ್ಮನ ಪ್ರೀತಿಯಲ್ಲಿ ಮಾತ್ರ ಯಾರೂ ತಮ್ಮನ್ನು ಕಡಿಮೆಯೆಂದು ತಿಳಿದುಕೊಳ್ಳುವುದಿಲ್ಲ, ಪ್ರೀತಿಯಲ್ಲಿ ಎಲ್ಲರೂ ಪಾಸ್. ಬಾಪ್ದಾದಾ ಹೇಳುತ್ತಾರೆ- ಎಲ್ಲರಿಗಿಂತ ಹೆಚ್ಚು ಪ್ರೀತಿ ಯಾರದು? ಆಗ ಯಾರು ಹೇಳುವರು? ಎಲ್ಲರಿಗೂ ಗೊತ್ತಿದೆ- ನಮ್ಮ ಪ್ರೀತಿಯು ಕಡಿಮೆಯೇನಿಲ್ಲ ಆದ್ದರಿಂದ ತಂದೆಯೂ ಹೇಳುತ್ತಾರೆ- ಪ್ರೀತಿಯ ಸಬ್ಜೆಕ್ಟ್ನಲ್ಲಿ ಎಲ್ಲರೂ ಪಾಸ್ ಆಗಿದ್ದೀರಿ ಆದ್ದರಿಂದಲೇ ನನ್ನಬಾಬಾ ಎಂದು ಹೇಳುತ್ತೀರಿ. ಎಷ್ಟು ಪ್ರೀತಿಯಿದೆ ಎಂಬುದು ಪ್ರತಿಯೊಬ್ಬರಿಗೂ ಗೊತ್ತಿದೆ ಅಂದಾಗ ಬಾಪ್ದಾದಾ ನೋಡಿದೆವು - ಪ್ರೀತಿಯಲ್ಲಿ ಎಲ್ಲರೂ ಪಾಸ್ ಆಗಿದ್ದೀರಿ ಆದರೆ ಈಗ ಸಮಯ ಪ್ರಮಾಣ ಸ್ವ ಪರಿವರ್ತನೆಯ ಅವಶ್ಯಕತೆಯಿದೆ. ಕೇವಲ ಸ್ವ ಪರಿವರ್ತನೆ, ವಿಶೇಷವಾಗಿ ಇದನ್ನು ಮೊದಲೂ ತಿಳಿಸಿದೆವು - ಈ ಸಮಯದಲ್ಲಿ ಸ್ವ ಪರಿವರ್ತನೆಯಲ್ಲಿಯೂ ವಿಶೇಷವಾಗಿ ಸಂಸ್ಕಾರ ಪರಿವರ್ತನೆ, ಸ್ವಭಾವ ಪರಿವರ್ತನೆಯ ಅವಶ್ಯಕತೆಯಿದೆ.

ಅಂದಮೇಲೆ ಸ್ವಪರಿವರ್ತನೆಯ ಗತಿಯು ತೀವ್ರವಾಗಬೇಕಾಗಿದೆ. ಮಾಡುತ್ತಿದ್ದೀರಿ, ಗಮನವೂ ಇದೆ ಆದರೆ ಈಗ ಇನ್ನೂ ಸ್ವಲ್ಪ ತೀವ್ರತೆ ಬರಬೇಕಾಗಿದೆ. ಬಾಪ್ದಾದಾರವರಿಗೆ ನೆನಪಿದೆ, ಮೊದಲೂ ತಂದೆಯೊಂದಿಗೆ ಪ್ರತಿಜ್ಞೆ ಮಾಡಿದ್ದಿರಿ, ಹೊಸ ವರ್ಷದಲ್ಲಿ ಸ್ವಪರಿವರ್ತನೆ, ಸಂಸ್ಕಾರ ಪರಿವರ್ತನೆ ಮಾಡಲೇಬೇಕಾಗಿದೆ ಆದರೆ ಬಾಪ್ದಾದಾ ನೋಡಿದೆವು - ಸಂಸ್ಕಾರ ಪರಿವರ್ತನೆಯಲ್ಲಿ ಎಷ್ಟು ತೀವ್ರ ಪುರುಷಾರ್ಥ ಬೇಕೆಂದರೆ ಇನ್ನೂ ತೀವ್ರ ಗತಿ ಬರಬೇಕಾಗಿದೆ. ತಾವೆಲ್ಲರೂ ಏನೆಂದು ತಿಳಿದುಕೊಳ್ಳುತ್ತೀರಿ - ಸಮಯ ಪ್ರಮಾಣ ಎಷ್ಟು ತೀವ್ರ ಗತಿ ಬೇಕೋ ಅದರನುಸಾರ ಪ್ರತಿಯೊಬ್ಬರದೂ ತೀವ್ರ ಪುರುಷಾರ್ಥವಿದೆಯೇ ಅಥವಾ ಇನ್ನೂ ಆಗಬೇಕಾಗಿದೆಯೇ? ಏಕೆಂದರೆ ಸಮಯಾನುಸಾರ ಸಮಯದಲ್ಲಿ ಪರಿವರ್ತನೆಯು ತೀವ್ರವಾಗುತ್ತಿದೆ ಅಂದಮೇಲೆ ತಮ್ಮಲ್ಲಿಯೂ ತೀವ್ರ ಪರಿವರ್ತನೆಯಾಗಬೇಕು ಅಂದರೆ ಸಂಕಲ್ಪ ಮಾಡಿದ ಕೂಡಲೆ ಆಗಿ ಬಿಡಬೇಕು. ಆದರೆ ಇದಕ್ಕಾಗಿ ಅಯಥಾರ್ಥ ಸಂಕಲ್ಪಗಳು ಹೇಗೆ ಸಮಾಪ್ತಿ ಆಗಬೇಕೆಂದರೆ ಕಾಗದದ ಮೇಲೆ ಬಿಂದುವನ್ನಿಟ್ಟಂತೆ. ಬಿಂದುವನ್ನಿಡಲು ಎಷ್ಟು ಸಮಯ ಹಿಡಿಸುತ್ತದೆ? ಅಯತಾರ್ಥ ಅರ್ಥಾತ್ ವ್ಯರ್ಥ ಸಂಕಲ್ಪವು ಇಷ್ಟು ತೀವ್ರವಾಗಿ ಪರಿವರ್ತನೆಯಾಗಬೇಕು. ಇಷ್ಟು ತೀವ್ರ ಗತಿಯ ಪರಿವರ್ತನೆ ಮಾಡಿಕೊಳ್ಳಬಲ್ಲಿರಾ? ಸಾಹಸವಿದೆಯೇ? ಈಗಿನಿಂದಲೇ ಇಷ್ಟು ತೀವ್ರ ಗತಿಯಿಂದು ಬಿಂದುವನ್ನಿಡಬಲ್ಲೆವು ಎನ್ನುವವರು ಕೈಯನ್ನೆತ್ತಿರಿ. ಬಾಪ್ದಾದಾ ಮಕ್ಕಳ ಧೃಡ ಸಂಕಲ್ಪವನ್ನು ನೋಡಿ ಶುಭಾಷಯ ನೀಡುತ್ತೇವೆ. ಇದಕ್ಕೆ ಮೊದಲೂ ತಿಳಿಸಿದ್ದೆವು - ಧೃಡ ಸಂಕಲ್ಪ ಸಂಕಲ್ಪವಾಗಿದೆ - ಮಾಡಲೇಬೇಕು ಎಂಬುದು. ಇಂದಿನ ಸಭೆಯಲ್ಲಿ ಎಲ್ಲರೂ ಈ ಧೃಡ ಸಂಕಲ್ಪ ಮಾಡಿದ್ದೀರಲ್ಲವೆ! ತಾವು ನೋಡಿದಿರಿ, ದಾದಿಯರೂ ನೋಡಿದರು, ಮೆಜಾರಿಟಿ ಎಲ್ಲರೂ ಕೈಯನ್ನೆತ್ತಿದ್ದರು. ನೋಡಿದಿರಲ್ಲವೆ? ಅಂದಮೇಲೆ ನಾಳೆಯಿಂದ ಸ್ವಭಾವ-ಸಂಸ್ಕಾರ ಸಮಾಪ್ತಿಯ ಸಮಾರೋಹವನ್ನು ಆಚರಿಸಬೇಕು. ಆಚರಿಸುವಿರಾ? ಯಾರು ಕೈಯೆತ್ತಿದ್ದಿರೋ ಅವರು ಪುನಃ ಕೈಯೆತ್ತಿರಿ. ಆಚರಿಸುವಿರಾ? ಈ ಸಮಾರೋಹವನ್ನಂತು ಬಹಳ ವಿಜೃಂಭಣೆಯಿಂದ ಆಚರಿಸಿರಿ. ಹೇಗೆ ಸಾಹಸದ ಲಕ್ಷ್ಯವನ್ನಿಟ್ಟುಕೊಂಡಿದ್ದೀರೋ ಹಾಗೆಯೇ ಲಕ್ಷಣಗಳೂ ಸಾಹಸದಿಂದ ಇಟ್ಟುಕೊಂಡಾಗ ದೊಡ್ಡ ಮಾತೇನಲ್ಲ. ತಂದೆಯ ಸಮಾನರಾಗುವುದೇ ತಮ್ಮ ಲಕ್ಷ್ಯವಾಗಿದೆ ಅಂದಮೇಲೆ ಈಗ ಲಕ್ಷ್ಯ ಮತ್ತು ಲಕ್ಷಣಗಳನ್ನು ಒಂದು ಮಾಡಿಕೊಳ್ಳಿರಿ. ಬ್ರಹ್ಮಾ ತಂದೆಯನ್ನು ಫಾಲೋ ಮಾಡಿರಿ. ಯಾವುದೇ ಸಂಕಲ್ಪ, ಮಾತು, ಕರ್ಮ ಮಾಡುತ್ತೀರೆಂದರೆ ಬ್ರಹ್ಮಾ ತಂದೆಯೊಂದಿಗೆ ಟ್ಯಾಲಿ ಮಾಡಿರಿ, ಕಾಪಿ ಮಾಡಿರಿ. ಪ್ರಪಂಚದಲ್ಲಿ ಕಾಪಿ ಮಾಡುವುದು ನಿಷೇಧವಿದೆ. ಹಾಗೆಯೇ ಬಾಪ್ದಾದಾ ಹೇಳುತ್ತೇವೆ – ಬ್ರಹ್ಮಾ ತಂದೆಯನ್ನು ಕಾಪಿ ಮಾಡಿರಿ ಎಂದು. ನಿರಾಕಾರಿ ತಂದೆಗಂತು ದೇಹವೇ ಇಲ್ಲ ಅಂದಮೇಲೆ ದೇಹಭಾನವೇನು ಎಂದು ಗೊತ್ತಿಲ್ಲ ಎಂದು ಹೇಳುತ್ತೀರಿ. ಆದರೆ ಬ್ರಹ್ಮಾ ತಂದೆಯು ದೇಹಧಾರಿಯಾಗಿದ್ದರು. ವಾಸ್ತವದಲ್ಲಿ ನೋಡಿರಿ - ತಾವು ಯಾರು ಸಮರ್ಪಿತರಾಗಿದ್ದೀರಿ. ಅವರು ಕೈಯೆತ್ತಿರಿ. ಸಮರ್ಪಿತರಾದಾಗ ಯಾವ ಸಂಕಲ್ಪ ಮಾಡಿದಿರಿ? ಬಾಬಾ, ತನು-ಮನ-ಧನ ಎಲ್ಲವೂ ನಿಮ್ಮದೆ ಎಂದು ಸಂಕಲ್ಪ ಮಾಡಿದಿರಲ್ಲವೆ. ಇದರಲ್ಲಿ ಕೈಯೆತ್ತಿರಿ. ತನುವೂ ನನ್ನದಲ್ಲ, ಧನವೂ ನನ್ನದಲ್ಲ ಎಂದು ಸಮರ್ಪಣೆ ಮಾಡಿದಿರಿ. ಹೇಗೆ ಬ್ರಹ್ಮಾ ತಂದೆಯು ಶಿವ ತಂದೆಯ ಸೇವಾರ್ಥವಾಗಿ ಶರೀರವನ್ನು ಕೊಟ್ಟರು, ಬ್ರಹ್ಮಾ ತಂದೆಗೆ ಇದು ತಿಳಿದಿತ್ತು - ಈ ಶರೀರವು ನನ್ನದಲ್ಲ, ಸೇವಾರ್ಥವಾಗಿ ಇದೆ ಎಂದು. ಯಾವಾಗ ತಾವು ತನು-ಮನ-ಧನ ಮೂರನ್ನೂ ಅರ್ಪಣೆ ಮಾಡಿದಿರಿ ಆಗ ತಮ್ಮ ಶರೀರವೂ ತಂದೆಯ ಸೇವೆಗೆ ನಿಮಿತ್ತವಾಗಿದೆ. ಹೇಗೆ ಬ್ರಹ್ಮಾ ತಂದೆಯ ಶರೀರವೂ ಸೇವಾರ್ಥವಾಗಿತ್ತು, ಹಾಗೆಯೇ ತಮ್ಮ ಶರೀರವೂ ತಮ್ಮದಲ್ಲ, ಸೇವಾರ್ಥವಾಗಿ ಇದೆ. ಅಂದಮೇಲೆ ಈ ದೇಹಾಭಿಮಾನ ಅಥವಾ ದೇಹಭಾನದ ಸಂಸ್ಕಾರವು ಇರಬೇಕೆ? ಒಂದುವೇಳೆ ಈ ತನು ವಿಶ್ವ ಸೇವಾರ್ಥವಾಗಿ ಇದೆ, ನನ್ನದಲ್ಲ ಎಂದು ಸ್ಮೃತಿಯಲ್ಲಿ ಇರುವುದೇ ಆದರೆ ದೇಹಭಾನ ಬರುವುದಿಲ್ಲ. ದೇಹಭಾನ ಹಾಗೂ ದೇಹಾಭಿಮಾನ ಇವೆರಡರಲ್ಲಿ ದೇಹಾಭಿಮಾನವು ಹೆಚ್ಚು ನಷ್ಟ ಮಾಡುತ್ತದೆ. ದೇಹಭಾನವು ಅದಕ್ಕಿಂತಲೂ ಹಗುರವಾಗಿದೆ ಆದರೆ ಎರಡನ್ನೂ ಕೊಟ್ಟಿದ್ದೀರಿ. ಫಾರಂ ತುಂಬಿಸುವಾಗ ಏನನ್ನು ಬರೆಯುತ್ತೀರಿ? ಶಿಕ್ಷಕಿಯರೇ ಏನೆಂದು ಬರೆಸುತ್ತೀರಿ? ಈ ನನ್ನ ಜೀವನ ಈಗ ಸೇವೆಯ ಪ್ರತಿ ಎಂದು ಬರೆಯುತ್ತೀರಲ್ಲವೆ? ಯಾರೆಲ್ಲರೂ ಬ್ರಾಹ್ಮಣರಾಗಿದ್ದೀರೋ ಅವರೆಲ್ಲರದೂ ತಂದೆಯ ಪ್ರತಿ ಪ್ರತಿಜ್ಞೆಯಾಗಿದೆ- ತನು, ಮನ, ಧನ ಎಲ್ಲವೂ ತಂದೆಯದು, ನನ್ನದಲ್ಲ. ದೇಹಭಾನ ಹಾಗೂ ದೇಹಾಭಿಮಾನದ ಸಂಸ್ಕಾರವು ಉತ್ಪನ್ನವಾಗುವುದರಿಂದ ತಂದೆಯು ಈ ದಿನವೂ ಸಂಸ್ಕಾರ ಸಮಾಪ್ತಿಗಾಗಿ ಪ್ರತಿಜ್ಞೆ ಮಾಡಿಸಿದರು ಏಕೆಂದರೆ ತಂದೆಯನ್ನು ಪ್ರತ್ಯಕ್ಷ ಮಾಡುವುದರಲ್ಲಿ ಇದೇ ವಿಘ್ನ ಹಾಕುತ್ತದೆ. ಎಲ್ಲರಿಗೆ ಉಮ್ಮಂಗವೂ ಇದೆ - ತಂದೆಯನ್ನು ಪ್ರತ್ಯಕ್ಷ ಮಾಡಬೇಕೆಂದು ಹೇಳುತ್ತಲೂ ಇರುತ್ತೀರಿ. ಇಲ್ಲಿಯವರೆಗೆ ಬ್ರಹ್ಮಾಕುಮಾರ-ಕುಮಾರಿಯರು ಪ್ರತ್ಯಕ್ಷವಾಗಿದ್ದೀರಿ. ಭಗವಂತ ತಂದೆಯು ಬಂದು ಬಿಟ್ಟಿದ್ದಾರೆ ಎಂದು ತಂದೆಯ ಪ್ರತ್ಯಕ್ಷತೆಯು ಗುಪ್ತವಾಗಿದೆ. ಪುರುಷಾರ್ಥ ಮಾಡುತ್ತಿದ್ದೀರಿ ಆದರೆ ನಮ್ಮ ತಂದೆಯು ಬಂದು ಬಿಟ್ಟಿದ್ದಾರೆ ಎಂಬ ಪ್ರತ್ಯಕ್ಷತೆಯ ಕೂಗು ಮೊಳಗಲಿ. ಇದು ಭಗವಾನುವಾಚ ಆಗಿದೆ. ಬ್ರಹ್ಮಾಕುಮಾರಿಯರ ವಾಚವಲ್ಲ ಎಂಬುದು ಅರ್ಥವಾಗಲಿ. ಈಗ ಈ ಪ್ರತ್ಯಕ್ಷತೆ ಆಗಲೇಬೇಕು, ಸ್ವಭಾವ-ಸಂಸ್ಕಾರ ಪರಿವರ್ತನೆ ಆಗಲೇಬೇಕಾಗಿದೆ. ತಾವು ಒಬ್ಬೊಬ್ಬರ ಚಲನೆ ಹಾಗೂ ಚಹರೆಯಿಂದ ಪ್ರತ್ಯಕ್ಷವಾಗುವುದು. ತಂದೆಯನ್ನು ಪ್ರತ್ಯಕ್ಷ ಮಾಡಬೇಕಾಗಿದೆ, ಮಾಡುತ್ತಲೂ ಇದ್ದೀರಿ ಆದರೆ ಎಲ್ಲರ ಕಿವಿಗಳಲ್ಲಿ ಭಗವಂತ ಬಂದು ಬಿಟ್ಟರು, ನಮ್ಮ ತಂದೆ ಬಂದು ಬಿಟ್ಟರು ಎಂಬ ಶಬ್ಧ ಮೊಳಗಲಿ. ಕೈಯೆತ್ತಿರಿ - ಈ ಪ್ರತ್ಯಕ್ಷತೆ ಆಗಬೇಕಾಗಿದೆಯಲ್ಲವೆ. ಬಾಪ್ದಾದಾರವರಿಗೆ ಬಹಳ ಖುಷಿಯಿದೆ - ಎಲ್ಲರ ಮನಸ್ಸಿನಲ್ಲಿ ಲಗನ್ ಇದೆ ಮತ್ತು ಆಗಲೇಬೇಕಾಗಿದೆ, ಮತ್ತು ಆಗಿಯೇ ಆಗುತ್ತದೆ. ಇದಕ್ಕಾಗಿ ಹೇಗೆ ನಾಳೆಯಿಂದ ಸ್ವಭಾವ-ಸಂಸ್ಕಾರವನ್ನು ಪರಿವರ್ತನೆ ಮಾಡಿಕೊಳ್ಳುತ್ತೀರೋ ಹಾಗೆಯೇ ಅದಕ್ಕೆ ಸಾಧನವಾಗಿದೆ - ಪ್ರತಿಯೊಬ್ಬ ಬ್ರಾಹ್ಮಣರು ತಮ್ಮ ಚಾರ್ಟಿನಲ್ಲಿ ಶುಭ ಭಾವನೆ-ಶುಭ ಕಾಮನೆಯ ವಿಶೇಷ ಗಮನ ಕೊಡಬೇಕಾಗುವುದು. ಎಷ್ಟು ಸಮಯ ತಾವು ಶುಭ ಭಾವನೆ-ಶುಭ ಕಾಮನೆ ಇಡಬಲ್ಲಿರಿ, ತಮ್ಮಿಂದ ಸಾಧ್ಯತೆಯಿದೆ ಎಂದು ಪ್ರಪಂಚದವರಿಗೆ ಕೆಲಸವನ್ನು ಕೊಟ್ಟಿರಿ. ಅಂದಮೇಲೆ ತಾವಂತು ಅವಶ್ಯವಾಗಿ ಇಡಬಲ್ಲಿರಿ. ಶುಭ ಭಾವನೆ-ಶುಭ ಕಾಮನೆಯು ಇಲ್ಲದಿರುವ ಸಮಯದಲ್ಲಿಯೇ ಅನ್ಯರ ಪ್ರತಿ ಸ್ವಭಾವ-ಸಂಸ್ಕಾರಗಳ ಘರ್ಷಣೆಯಾಗುತ್ತದೆ ಆದ್ದರಿಂದ ಅಮೃತವೇಳೆಯಿಂದಲೇ ಈ ಸಂಕಲ್ಪ ಮಾಡಿ - ನಾನು ಪ್ರತಿಯೊಂದು ಆತ್ಮದ ಪ್ರತಿ ಶುಭ ಭಾವನೆ -ಶುಭ ಕಾಮನೆ ಇಡಲೇಬೇಕು ಎಂದು. ಆಗ ಪರಿವರ್ತನೆಯಾಗಲೇಬೇಕು ಎಂಬ ಸಂಕಲ್ಪವನ್ನು ಪೂರ್ಣ ಮಾಡಬಲ್ಲಿರಿ. ಮಾತುಗಳು ಬರುತ್ತವೆ. ಮಾತುಗಳ ಕೆಲಸವಾಗಿದೆ - ಬರುವುದು, ಇದು ಮಾಯೆಯಲ್ಲವೆ. ಆದರೆ ತಮ್ಮ ಕೆಲಸವಾಗಿದೆ - ವಿಜಯ ಪ್ರಾಪ್ತಿ ಮಾಡಿಕೊಳ್ಳುವುದು. ಆದ್ದರಿಂದ ನಾಳೆ ಪರಸ್ಪರ ಯಾರು ನಿಮಿತ್ತರಾಗಿದ್ದೀರೋ ಎಲ್ಲರೂ ಸೇರಿ ವಾರ್ತಾಲಾಪ ಮಾಡಿ, ಯಾವ ಸಂಕಲ್ಪ ಮಾಡಿದ್ದೀರೋ ಅದನ್ನು ಹೇಗೆ ಪ್ರತ್ಯಕ್ಷದಲ್ಲಿ ತರುವುದು ಎಂಬುದರ ಬಗ್ಗೆ ಚರ್ಚೆ ಮಾಡಿರಿ. ಫಿನಿಶ್ ಬಿಂದುವನ್ನಿಟ್ಟುಬಿಡಿ. ಕೈಯೆತ್ತಿದ್ದೀರಲ್ಲವೆ. ಮುಂದೆ ಇರುವವರೂ ಕೈಯೆತ್ತಿದಿರಿ ಆದರೆ ತಾವು ನಿಮಿತ್ತರಾಗಲೇಬೇಕಾಗಿದೆ. ಹೇಗೆ ಬ್ರಹ್ಮಾ ತಂದೆಯ ಮುಂದೆ ಮೊದಲು-ಮೊದಲು ಎಷ್ಟು ಪ್ರಕಾರದ ಸಂಸ್ಕಾರದವರು ಮುಂದೆ ಬಂದರು! ಬ್ರಹ್ಮಾ ತಂದೆಯು ಎಷ್ಟೊಂದು ಸಂಸ್ಕಾರಗಳ ಆಟವನ್ನು ನೋಡಿದರು ಆದರೆ ತಂದೆಯ ಸಹಯೋಗದಿಂದ ಮುಂದುವರೆಯುತ್ತಾ ಅನ್ಯರನ್ನೂ ಮುಂದುವರೆಸುತ್ತಿದ್ದರು. ಅದರ ಫಲಿತಾಂಶವಾಗಿ ಇಂದು ಇಷ್ಟೊಂದು ಸಂಖ್ಯೆಯು ವೃದ್ಧಿಯಾಗಿದೆ. ಅಲುಗಾಡಿಸುವಂತಹ ಮಾತುಗಳು ಬಂದರೂ ಸಹ ತಂದೆಯು ಅಚಲವಾಗಿದ್ದರು. ಅದರ ಪರಿಣಾಮವಾಗಿ ಎಷ್ಟೊಂದು ಸೇವಾಕೇಂದ್ರಗಳು ತೆರೆಯಿತು, ಎಷ್ಟೊಂದು ಕಾರ್ಯಕ್ರಮಗಳು ನಡೆಯುತ್ತಿವೆ.

ಇತ್ತೀಚೆಗೆ ಎಷ್ಟೊಂದು ಕಾರ್ಯಕ್ರಮಗಳು ಆಗುತ್ತಿವೆಯಲ್ಲವೆ. ಇವೆಲ್ಲಾ ಫಲಿತಾಂಶವು ಬ್ರಹ್ಮಾ ತಂದೆಯ ಸಾಹಸದ್ದಾಗಿದೆ. ಮೊದಲು ಬ್ರಹ್ಮಾ ತಂದೆಯೊಬ್ಬರೇ ಇದ್ದರು ನಂತರ ತಾವೆಲ್ಲರೂ ಬಂದಿದ್ದೀರಿ. ಅವರೊಬ್ಬರೇ ಒಂಟಿಯಾಗಿ ಸಾಹಸವನ್ನಿಟ್ಟು ಮುಂದುವರೆದರು. ಫಲಿತಾಂಶದಲ್ಲಿ ಈಗ ತಾವೆಲ್ಲರೂ ಜೊತೆಗಾರರಾಗಿದ್ದೀರಿ. ಬ್ರಹ್ಮಾ ತಂದೆಯು ಒಬ್ಬರೇ ಇಷ್ಟು ಸಾಹಸವನ್ನಿಟ್ಟರು, ತಾವಂತು ಬಹಳ ಮಂದಿ ಜೊತೆಗಾರರಿದ್ದೀರಿ ಅಂದಮೇಲೆ ತಂದೆಯನ್ನು ಫಾಲೋ ಮಾಡಿರಿ. ಎಲ್ಲರೂ ತಮ್ಮನ್ನು ಬ್ರಹ್ಮಾ ತಂದೆಯ ಮಕ್ಕಳು ಜೊತೆಗಾರ ಮಕ್ಕಳೆಂದು ತಿಳಿದುಕೊಳ್ಳುತ್ತೀರಲ್ಲವೆ. ಜೊತೆಯಲ್ಲಿದ್ದೀರಿ, ಜೊತೆಯಲ್ಲಿ ನಡೆಯುತ್ತೀರಿ, ಬ್ರಹ್ಮಾ ತಂದೆಯ ಜೊತೆ ರಾಜ್ಯದಲ್ಲಿ ಬರುತ್ತೀರಿ. ಈಗ ಸಮಯವಾಗಿದೆ, ಹೇಗೆ ಬ್ರಹ್ಮಾ ತಂದೆಯು ಸಾಹಸವನ್ನಿಟ್ಟರು ಅದರ ಫಲಿತಾಂಶವನ್ನು ನೋಡುತ್ತಿದ್ದೀರಿ ಹಾಗೆಯೇ ಇಷ್ಟು ದೊಡ್ಡ ಸಂಘಟನೆಯಲ್ಲಿ ಸಾಹಸದ ಹೆಜ್ಜೆಯನ್ನಿಡಿ. ಆಗ ಏನು ತಾನೆ ಸಾಧ್ಯವಿಲ್ಲ! ಕಲ್ಪ-ಕಲ್ಪವೂ ಆಗಿದೆ ಆಗಲೇಬೇಕಾಗಿದೆ.

ತಂದೆಯು ಏನನ್ನು ಬಯಸುತ್ತಾರೆ ಎಂಬುದನ್ನು ತಿಳಿಸಿದೆವು. ಕೇವಲ ತಾವೆಲ್ಲರೂ ಒಂದು ಮಾತನ್ನು ಮಾಡಿರಿ. ಆ ಒಂದು ಮಾತಾಗಿದೆ - ಸಾಧಾರಣ ಪುರುಷಾರ್ಥವನ್ನು ತೀವ್ರ ಪುರುಷಾರ್ಥದಲ್ಲಿ ಪರಿವರ್ತನೆ ಮಾಡಿಕೊಳ್ಳಿರಿ. ಬಾಪ್ದಾದಾ ನೋಡಿದೆವು - ಕೆಲವೊಂದೆಡೆ ಆಲಸ್ಯವಿದೆ. ಆಗಿ ಬಿಡುವುದು, ವಿಜಯ ನಮ್ಮ ಜನ್ಮ ಸಿದ್ಧ ಅಧಿಕಾರ... ಎಂಬ ಆಲಸ್ಯವಿದೆ. ಜ್ಞಾನದ ಲೆಕ್ಕದಿಂದಂತು ಇದು ನಿಶ್ಚಿತವಾಗಿದೆ ಆದರೆ ಆಲಸ್ಯದಲ್ಲಿ ಬಂದಾಗಲೂ ಇದೇ ಶಬ್ಧಗಳನ್ನು ಹೇಳುತ್ತಾರೆ - ವಿಜಯ ಇದ್ದೇ ಇದೆ. ಯಾವುದೇ ಕೆಲಸವು ನಿಂತಿಲ್ಲ. ಆಗಿಯೇ ಆಗುವುದು ಎಂದು ಹೇಳುತ್ತಾರೆ. ಒಂದಾಗಿದೆ ಪುರುಷಾರ್ಥದ ಶಬ್ಧಗಳು, ಇನ್ನೊಂದಾಗಿದೆ ಆಲಸ್ಯದ ಶಬ್ಧಗಳು. ಈ ಸಂಸ್ಕಾರವನ್ನು ಪರಿಶೀಲನೆ ಮಾಡಿಕೊಳ್ಳಿರಿ. ಆಲಸ್ಯದ ಚಿಹ್ನೆಯೇನೆಂದರೆ ಅವರ ಜೀವನದಲ್ಲಿ ಚಿಕ್ಕ-ಚಿಕ್ಕ ಮಾತುಗಳಲ್ಲಿಯೂ ಸುಸ್ತಾಗುವುದು. ಚಹರೆಯಲ್ಲಿ ಆ ಖುಷಿಯ ಹೊಳಪು ಕಂಡು ಬರುವುದಿಲ್ಲ. ಸೇವೆಯಿಂದ ಪುಣ್ಯವಾಗುತ್ತಿದೆ ಎಂದು ಚಹರೆಯಲ್ಲಿ ಖುಷಿಯಿರಬೇಕು. ಯಾವುದಾದರೊಂದು ಪ್ರಕಾರದ ಸುಸ್ತಿಗೆ ಕಾರಣ ಯಾವುದಾದರೊಂದು ಮಾತಿನ ಆಲಸ್ಯ. ಮಾಡಲೇಬೇಕಾಗಿದೆ ಅಂದಮೇಲೆ ಖುಷಿಯಿಂದ ಮಾಡಿರಿ, ತಮ್ಮ ಚಹರೆಯು ಸೇವೆ ಮಾಡಲಿ, ಚಲನೆಯು ಸೇವೆ ಮಾಡಲಿ. ಇಂದು ಮೆಜಾರಿಟಿ ಮಕ್ಕಳು ಸಂಸ್ಕಾರ ಸಮಾಪ್ತಿಗಾಗಿ ಕೈಯೆತ್ತಿದ್ದನ್ನು ನೋಡಿ ಬಾಪ್ದಾದಾ ಪುನಃ ಪುನಃ ಶುಭಾಷಯಗಳನ್ನು ಕೊಡುತ್ತಿದ್ದೇವೆ.

ಒಳ್ಳೆಯದು - ಈ ಗ್ರೂಪ್ನಲ್ಲಿ ಮೊದಲ ಬಾರಿ ಬಂದಿರುವವರು ಎದ್ದುನಿಲ್ಲಿರಿ. ನೋಡಿದಿರಾ - ಎಷ್ಟು ಮಂದಿಯಿದ್ದಾರೆ! ಕೈಯನ್ನು ಅಲುಗಾಡಿಸಿರಿ. ಯಾರು ಮೊದಲ ಬಾರಿ ಬಂದಿದ್ದೀರೋ ಅವರಿಗೆ ತಮ್ಮ ತಂದೆಯೊಂದಿಗೆ ಮಿಲನ ಮಾಡುವ ಶುಭಾಷಯಗಳು. ವಿಶೇಷವಾಗಿ ಸಮಯ ಪ್ರಮಾಣ ಈಗ ತಾವೆಲ್ಲರೂ ತೀವ್ರ ಪುರುಷಾರ್ಥ ಮಾಡಬೇಕಾಗುವುದು. ಬಾಪ್ದಾದಾ ಹೇಳುವುದೇನೆಂದರೆ ಯಾರು ತೀವ್ರ ಪುರುಷಾರ್ಥ ಮಾಡುವರೋ, ಡೀಲಾ-ಡಾಲಾ ಪುರುಷಾರ್ಥಿಗಳಲ್ಲವೋ ಅವರು ಲಾಸ್ಟ್ ಸೋ ಫಾಸ್ಟ್, ಫಾಸ್ಟ್ ಸೋ ಫಸ್ಟ್ ಬಂದು ಬಿಡುವರು. ಈ ಚಮತ್ಕಾರವನ್ನು ಮಾಡಿ ತೋರಿಸಿರಿ. ಅವಕಾಶವಿದೆ. ನಾವಂತು ಕೊನೆಯಲ್ಲಿ ಬಂದಿದ್ದೇವೆ ಎಂದು ತಿಳಿದುಕೊಳ್ಳಬೇಡಿ. ತಾವೂ ಮುಂದೆ ಹೋಗಬಹುದು ಆದರೆ ಪ್ರತೀ ಸಮಯ ತೀವ್ರ ಪುರುಷಾರ್ಥ ಮಾಡಲೇಬೇಕಾಗಿದೆ, ಬದಲಾಗಲೇಬೇಕಾಗಿದೆ. ಮಾಡೋಣ, ನೋಡೋಣ ಎನ್ನಬೇಡಿರಿ. ಒಳ್ಳೆಯದು - ತಮ್ಮ ಮನೆ, ದಾತನ ಮನೆಯು ಇಷ್ಟವಾಯಿತಲ್ಲವೆ. ಎಲ್ಲಾ ಸಹೋದರ-ಸಹೋದರಿಯರೂ ಸಹ ತಮ್ಮ ಸ್ವಾಗತ ಮಾಡುತ್ತಾರೆ. ಒಳ್ಳೆಯದು.

ನಾಲ್ಕಾರು ಕಡೆಯ ಬ್ರಾಹ್ಮಣ ಮಕ್ಕಳಿಗೆ ಬಾಪ್ದಾದಾರವರ ಸ್ನೇಹ ಸಂಪನ್ನ, ನೆನಪು-ಪ್ರೀತಿಯನ್ನು ಸ್ವೀಕಾರ ಮಾಡಿರಿ. ಬಾಪ್ದಾದಾರವರಿಗೆ ಗೊತ್ತಿದೆ - ದೂರದಲ್ಲಿ ಕುಳಿತಿದ್ದರೂ ಕೆಲವು ಮಕ್ಕಳು ನೋಡುತ್ತಿದ್ದಾರೆ, ಮಿಲನ ಮಾಡುತ್ತಿದ್ದಾರೆ, ಆ ನಾಲ್ಕಾರು ಕಡೆಯ ಮಕ್ಕಳಿಗೆ ಬಾಪ್ದಾದಾ ಇದನ್ನೇ ಹೇಳುತ್ತೇವೆ - ಹೇಗೆ ಈಗ ಎಲ್ಲರೂ ಸೇರಿ ಸಂಸ್ಕಾರ ಸಮಾಪ್ತಿಯ ಕೈಯನ್ನೆತ್ತಿದಿರಿ, ತಾವೆಲ್ಲರೂ ಸೇರಿ ಒಂದೇ ಸಂಸ್ಕಾರರೂಪಿ ಕೈಯನ್ನು ಎತ್ತುತ್ತಿದ್ದೀರಿ, ನಾವೆಲ್ಲರೂ ಒಂದಾಗಿ ಸಮಾಪ್ತಿಯ ಸಮಯವನ್ನು ಸಮೀಪ ತರುವುದಕ್ಕಾಗಿ ಈ ಸಂಕಲ್ಪ ಮಾಡುತ್ತಿದ್ದೇವೆ ಮತ್ತು ನಾಲ್ಕಾರು ಕಡೆ ಸಮಯದೊಳಗೆ ಬ್ರಹ್ಮಾ ತಂದೆ, ಶಿವ ತಂದೆ ಇಬ್ಬರನ್ನೂ ಪ್ರತ್ಯಕ್ಷ ಮಾಡುತ್ತೇವೆ. ನಮ್ಮ ತಂದೆ ಬಂದು ಬಿಟ್ಟರು ಎಂದು ಎಲ್ಲರ ಮುಖದಲ್ಲಿ ಪ್ರತ್ಯಕ್ಷವಾಗಲಿ. ಈ ವರ್ಷದಲ್ಲಿ ಇದೇ ಧೃಡ ಸಂಕಲ್ಪವನ್ನು ಇಟ್ಟುಕೊಳ್ಳಿರಿ, ತಂದೆಯನ್ನು ಪ್ರತ್ಯಕ್ಷ ಮಾಡಲೇಬೇಕಾಗಿದೆ. ಅರ್ಧ ಕೆಲಸವಂತು ಮಾಡಿದ್ದೀರಿ, ತಂದೆಯು ಮಕ್ಕಳನ್ನು ವಿಶ್ವದ ಮುಂದೆ ಪ್ರತ್ಯಕ್ಷ ಮಾಡಿದ್ದಾರೆ, ಈಗ ಮಕ್ಕಳ ಕಾರ್ಯವಾಗಿದೆ - ಭಗವಂತ ಬಂದು ಬಿಟ್ಟರು, ಈ ಶಬ್ಧವು ವಿಶ್ವದ ಒಂದೊಂದು ಮಗುವಿನವರೆಗೆ ತಲುಪಿಸಬೇಕು. ಬಾಪ್ದಾದಾ ಎಲ್ಲರನ್ನು ನೋಡಿ ಪ್ರತಿಯೊಬ್ಬರಿಗೆ ಹೃದಯದ ಸ್ನೇಹ, ಹೃದಯದ ಪ್ರೀತಿ, ಹೃದಯದ ಉಮ್ಮಂಗ-ಉತ್ಸಾಹ ಸಹಿತ ನೆನಪು-ಪ್ರೀತಿಯನ್ನು ನೀಡುತ್ತಿದ್ದೇವೆ. ಒಳ್ಳೆಯದು.

ಸೇವಾ ಟರ್ನ್ ಕರ್ನಾಟಕದ್ದಾಗಿದೆ - ಸೇವೆಯ ಅವಕಾಶ ತೆಗೆದುಕೊಳ್ಳುವುದು ಎಂದರೆ ತಂದೆಯ ಸಮೀಪ ಬರುವ ಅವಕಾಶ ಸಿಗುವುದು. ನೋಡಿ, ಸೇವೆಯ ಕಾರಣ ಎಷ್ಟು ಮಂದಿಗೆ ಬರಲು ಅವಕಾಶ ಸಿಗುತ್ತದೆ, ಎಲ್ಲರ ಆಶೀರ್ವಾದಗಳು ತಾವು ನಿಮಿತ್ತ ಶಿಕ್ಷಕಿಯರಿಗೆ ಸಿಗುತ್ತದೆ ಏಕೆಂದರೆ ಸೇವೆಯ ಸಾಹಸವನ್ನಿಟ್ಟಿರಿ ಮತ್ತು ಅವಕಾಶವು ಇಷ್ಟು ಮಂದಿಗೆ ಸಿಕ್ಕಿತು, ಬಾಪ್ದಾದಾ ನೋಡುತ್ತಿದ್ದೇವೆ – ಮೊದಲ ಬಾರಿ ಬಂದಿರುವ ಹೊಸ ಹೊಸ ಮಕ್ಕಳು ಬಹಳ ಮಂದಿ ಇದ್ದಾರೆ. ಕರ್ನಾಟಕದ ಮೊದಲ ಬಾರಿ ಬಂದಿರುವವರು ಕೈಯೆತ್ತಿರಿ. ಬಹಳ ಮಂದಿ ಇದ್ದಾರೆ. ಒಳ್ಳೆಯದು - ಕರ್ನಾಟಕದ ವೃದ್ಧಿಯು ಚೆನ್ನಾಗಿದೆ. ಹೇಗೆ ವೃದ್ಧಿಯಾಗಿದೆಯೋ ಹಾಗೆಯೇ ತೀವ್ರ ಪುರುಷಾರ್ಥದ ವಿಧಿಯನ್ನೂ ನಾಲ್ಕಾರು ಕಡೆ ಹರಡಿಸಿ, ನಂಬರ್ ತೆಗೆದುಕೊಳ್ಳಿರಿ. ಸಂಸ್ಕಾರ ಸಮಾಪ್ತಿಯ ನಂಬರ್ ತೆಗೆದುಕೊಳ್ಳಿರಿ. ಸಾಧ್ಯವಿದೆಯೇ? ನಾವು ಮೊದಲ ನಂಬರ್ ತೆಗೆದುಕೊಳ್ಳುತ್ತೇವೆ ಎಂದು ತಿಳಿಯುವವರು ಕೈಯೆತ್ತಿರಿ. ಪರಸ್ಪರ ಸಂಘಟನೆ ಮಾಡಿ ಕಾರ್ಯ ಕ್ರಮಗಳನ್ನು ಮಾಡಿ, ಎಲ್ಲರೂ ಒಂದೇ, ಭಿನ್ನ-ಭಿನ್ನ ಸ್ಥಾನಗಳಿರಬಹುದು ಆದರೆ ಎಲ್ಲರೂ ಒಂದೇ. ಈ ಚಮತ್ಕಾರ ಮಾಡಿ ತೋರಿಸಿ. ಸಾಹಸವಿದೆಯೇ? ಬಾಪ್ದಾದಾರವರ ಬಳಿ ಸಮಾಚಾರವಂತು ಬರುತ್ತಿರುತ್ತದೆ. ಆದ್ದರಿಂದ ಮಧುಬನಕ್ಕೆ ಪ್ರತೀ ತಿಂಗಳು ತಮ್ಮ ಪರಿವರ್ತನೆಯ ಸಮಾಚಾರವನ್ನು ಬರೆಯಿರಿ. ಬರೆಯುತ್ತೀರಲ್ಲವೆ. ಪ್ರತೀ ತಿಂಗಳದು ಬೇಕು. ಕಳೆದದ್ದು ಕಳೆದು ಹೋಯಿತು, ಈಗ ನಂಬರ್ವನ್ ಆಗಿ ತೋರಿಸಿ. ಒಳ್ಳೆಯದು - ಬಾಪ್ದಾದಾ ನೋಡಿದೆವು, ಸೇವೆ ಚೆನ್ನಾಗಿದೆ ಈಗ ಸಂಘಟನೆ ನೋಡಲು ಬಯಸುತ್ತೇವೆ. ಉದಾಹರಣೆ ಆಗಿರಿ. ಇದಕ್ಕೆ ರೆಡಿಯಾಗಿದ್ದೀರಾ? ಕೈಯೆತ್ತಿರಿ. ತಾವು ನೋಡುವಿರಿ, ಒಂದು ತಿಂಗಳಿನಲ್ಲಿ ಫಲಿತಾಂಶ ಬರುವುದು. ಒಳ್ಳೆಯದು - ಬಹಳ-ಬಹಳ ವಿಶೇಷ ನೆನಪು-ಪ್ರೀತಿ.

ವರದಾನ:
ಸಂಪೂರ್ಣ ಸಮರ್ಪಣೆಯ ವಿಧಿಯ ಮೂಲಕ ನನ್ನದೆಂಬ ಅಧಿಕಾರವನ್ನು ಸಮಾಪ್ತಿಗೊಳಿಸುವ ಸಮಾನ ಜೊತೆಗಾರ ಭವ.

ತಮ್ಮ ಪ್ರತಿಜ್ಞೆಯಿದೆ - ಜೊತೆಯಿರುತ್ತೇವೆ, ಜೊತೆಯಲ್ಲಿ ಹೊರಡುತ್ತೇವೆ ಹಾಗೂ ಜೊತೆಯಲ್ಲಿ ರಾಜ್ಯಾಡಳಿತ ಮಾಡುತ್ತೇವೆ - ಈ ಪ್ರತಿಜ್ಞೆಯನ್ನು ನಿಭಾಯಿಸಬೇಕೆಂದರೆ ಜೊತೆಗಾರ ಸಮಾನವಾಗಿ ಇದ್ದಾಗಲೇ ನಿಭಾಯಿಸಬಹುದು. ಸಮಾನತೆಯು ಸಂಪೂರ್ಣತೆಯಿಂದ ಬರುತ್ತದೆ. ಎಲ್ಲವನ್ನೂ ಸಮರ್ಪಣೆ ಮಾಡುತ್ತೀರೆಂದರೆ, ನನ್ನದು ಅಥವಾ ಅನ್ಯರದೆನ್ನುವ ಅಧಿಕಾರವು ಸಮಾಪ್ತಿ ಆಗಿ ಬಿಡುತ್ತದೆ. ಎಲ್ಲಿಯವರೆಗೆ ಯಾರದಾದರೂ ಅಧಿಕಾರ ಇರುತ್ತದೆಯೆಂದರೆ, ಸರ್ವ ಸಮರ್ಪಣೆಯಲ್ಲಿ ಕೊರತೆಯುಂಟಾಗುತ್ತದೆ. ಆದ್ದರಿಂದ ಸಮಾನರಾಗಲು ಸಾಧ್ಯವಿಲ್ಲ. ಹಾಗಾದರೆ ಜೊತೆಯಿರುವ, ಜೊತೆ ಹಾರುವುದಕ್ಕಾಗಿ ಬಹಳ ಬೇಗನೆ ಸಮಾನರಾಗಿರಿ.

ಸ್ಲೋಗನ್:
ತಮ್ಮ ಸಮಯ, ಶ್ವಾಸ ಹಾಗೂ ಸಂಕಲ್ಪವನ್ನು ಸಫಲ ಮಾಡುವುದೇ ಸಫಲತೆಯ ಆಧಾರವಾಗಿದೆ.

ಅವ್ಯಕ್ತ ಸೂಚನೆಗಳು:- ಸದಾ ಹರ್ಷಿತರಾಗಿರಲು ತಮ್ಮ ಸ್ವಭಾವವನ್ನು ಸರಳ ಮಾಡಿಕೊಳ್ಳಿರಿ, ಸಹನಶೀಲರಾಗಿರಿ.

ಯಾರು ಸರಳ ಸ್ವಭಾವದವರಿರುತ್ತಾರೆ ಅವರಲ್ಲಿ ಸಂಕುಚಿತಗೊಳಿಸುವ ಶಕ್ತಿ ಸ್ವತಃ ಬರುವುದು. ಸರಳ ಸ್ವಭಾವದವರು ಎಲ್ಲಾ ಸಹಯೋಗಿ ಮತ್ತು ಸ್ನೇಹಿಯೂ ಆಗಿರುತ್ತಾರೆ ಮತ್ತು ಎಷ್ಟು ಸರಳ ಸ್ವಭಾವದವರಿರುತ್ತಾರೆ ಅಷ್ಟು ಮಾಯೆ ಕಡಿಮೆ ಎದುರಿಸುತ್ತದೆ. ಸರಳ ಸ್ವಭಾವದವರಿಗೆ ವ್ಯರ್ಥ ಸಂಕಲ್ಪ ನಡೆಯುವುದಿಲ್ಲ. ಅವರ ಸಮಯವೂ ವ್ಯರ್ಥ ಹೋಗುವುದಿಲ್ಲ. ಅವರ ಬುದ್ಧಿ ವಿಶಾಲ ಮತ್ತು ದೂರಾಂದೇಶಿಯಾಗಿರುತ್ತದೆ, ಇದಕ್ಕಾಗಿ ಯಾವುದೇ ಸಮಸ್ಯೆ ಅವರ ಮುಂದೆ ಎದುರಿಸಲು ಸಾಧ್ಯವಿಲ್ಲ.

ಸೂಚನೆ:- ತಿಂಗಳಿನ ಮೂರನೇ ರವಿವಾರದ ಯೋಗ ಅಭ್ಯಾಸ.

ಇಂದು ತಿಂಗಳಿನ ಮೂರನೇ ರವಿವಾರ, ಎಲ್ಲಾ ಸಹೋದರ ಸಹೋದರಿಯರ ಸಂಘಟಿತ ರೂಪದಲ್ಲಿ ಏಕತ್ರಿತರಾಗಿ ಸಂಜೆ 6.30ರಿಂದ 7.30ರವರೆಗೆ ತಮ್ಮ ಫರಿಸ್ತಾ ಸ್ವರೂಪದ ಮೂಲಕ ಅಲೆದಾಡುತ್ತಿರುವ ದುಃಖಿ ಅಶಾಂತ ಆತ್ಮರಿಗೆ ಸುಖ ಶಾಂತಿಯ ಪವಿತ್ರ ಕಿರಣಗಳನ್ನು ಕೊಟ್ಟು ಅವರಿಗೆ ಆಶ್ರಯದಾತಾ ಪರಮಾತ್ಮ ತಂದೆಯ ಸ್ಮೃತಿ ಕೊಡಿಸುವ ಸೇವೆ ಮಾಡಿ.