21.07.24    Avyakt Bapdada     Kannada Murli    16.12.20     Om Shanti     Madhuban


ಸಾಕ್ಷಾತ ಬ್ರಹ್ಮಾ ತಂದೆಯ ಸಮಾನ ಕರ್ಮಯೋಗಿ ಫರಿಶ್ತೆಗಳಾಗಿ ಆಗ ಸಾಕ್ಷಾತ್ಕಾರ ಪ್ರಾರಂಭವಾಗುವುದು


ಇಂದು ಬ್ರಾಹ್ಮಣ ಸಂಸಾರದ ರಚೈತ ಬಾಪ್ದಾದಾರವರು ತಮ್ಮ ಬ್ರಾಹ್ಮಣ ಸಂಸಾರವನ್ನು ನೋಡಿ-ನೋಡಿ ಹರ್ಷಿತರಾಗುತ್ತಿದ್ದಾರೆ. ಎಷ್ಟು ಚಿಕ್ಕ ಪ್ರೀತಿಯ ಸಂಸಾರವಾಗಿದೆ. ಪ್ರತಿಯೊಬ್ಬ ಬ್ರಾಹ್ಮಣರ ಮಸ್ತಕದಲ್ಲಿ ಭಾಗ್ಯದ ನಕ್ಷತ್ರ ಹೊಳೆಯುತ್ತಿದೆ. ನಂಬರ್ವಾರ್ ಆಗಿದ್ದರೂ ಪ್ರತಿಯೊಬ್ಬರ ನಕ್ಷತ್ರಗಳಲ್ಲಿ ಭಗವಂತನನ್ನು ತಿಳಿದುಕೊಂಡಿರುವುದು ಮತ್ತು ಆಗುವುದರ ಶ್ರೇಷ್ಠ ಭಾಗ್ಯದ ಹೊಳಪಿದೆ. ಯಾವ ತಂದೆಯನ್ನು ಋಷಿ, ಮುನಿಗಳು, ತಪಸ್ವಿಗಳು ಗೊತ್ತಿಲ್ಲ-ಗೊತ್ತಿಲ್ಲ ಎಂದು ಹೇಳಿ ಹೋದರು, ಆ ತಂದೆಯನ್ನು ಬ್ರಾಹ್ಮಣ ಸಂಸಾರದ ಮುಗ್ದ-ಮುಗ್ದ ಆತ್ಮರು ತಿಳಿದುಕೊಂಡಿದ್ದಾರೆ, ಪಡೆದುಕೊಂಡಿದ್ದಾರೆ. ಈ ಭಾಗ್ಯ ಯಾವ ಆತ್ಮರಿಗೆ ಪ್ರಾಪ್ತಿಯಾಗುತ್ತದೆ? ಯಾರು ಸಾಧಾರಣ ಆತ್ಮರಿದ್ದಾರೆ. ತಂದೆಯು ಸಹ ಸಾಧರಣ ತನುವಿನಲ್ಲಿ ಬರುತ್ತಾರೆ, ಅಂದಾಗ ಮಕ್ಕಳು ಸಹ ಸಾಧರಣ ಆತ್ಮರೇ ತಿಳಿಯುವವರು. ಇಂದಿನ ಈ ಸಭೆಯಲ್ಲಿ ನೋಡಿ, ಯಾರು ಕುಳಿತ್ತಿದ್ದಾರೆ? ಯಾರು ಕೋಟ್ಯಾಧಿಪತಿ-ಲಕ್ಷಾಧಿಪತಿ ಕುಳಿತಿದ್ದಾರೆ? ಸಾಧರಣ ಆತ್ಮರದ್ದೇ ಗಾಯನವಿದೆ. ತಂದೆ ಬಡವರ-ಬಂಧು ಎಂದು ಗಾಯನವಿದೆ. ಕೋಟ್ಯಾಧಿಪತಿ-ಲಕ್ಷಾಧಿಪತಿಯ ಬಂಧು ಎಂದು ಗಾಯನವಿಲ್ಲ. ಬುದ್ಧಿವಂತರ ಬುದ್ಧಿಯು ಯಾವುದೇ ಕೋಟ್ಯಾಧಿಪತಿ-ಲಕ್ಷಾಧಿಪತಿಯ ಬುದ್ಧಿಯನ್ನು ಬದಲಾಯಿಸುವುದಕ್ಕೆ ಸಾಧ್ಯವೇ? ಏನು ದೊಡ್ಡ ಮಾತಿದೆ! ಆದರೆ ಡ್ರಾಮದ ಬಹಳ ಒಳ್ಳೆಯ ಕಲ್ಯಾಣಕಾರಿ ನಿಯಮ ಮಾಡಲ್ಪಟಿದೆ, ಪರಮಾತ್ಮನ ಕಾರ್ಯದಲ್ಲಿ ಹನಿ-ಹನಿ ಕೆರೆಯಾಗುತ್ತದೆ. ಅನೇಕ ಆತ್ಮರ ಭವಿಷ್ಯವನ್ನು ಮಾಡಬೇಕಾಗಿದೆ. 10-20ರದಲ್ಲ, ಅನೇಕ ಆತ್ಮರ ಸಫಲವಾಗಬೇಕಾಗಿದೆ ಸಫಲತೆಯ ನಕ್ಷತ್ರಗಳಾಗಿದ್ದೀರಿ. ಎಲ್ಲರೂ ಸಫಲತೆಯ ನಕ್ಷತ್ರಗಳಾಗಿದ್ದೀರಾ? ಆಗಿದ್ದೀರಾ ಅಥವಾ ಆಗಬೇಕು, ಯೋಚಿಸುತ್ತಿದ್ದೀರಿ? ಯೋಚಿಸಬೇಡಿ. ಮಾಡುವೆವು, ನೋಡುವೆವು, ಮಾಡುವುದಂತು ಇದ್ದೇ ಇದೆ.. ಇದು ಯೋಚಿಸುವುದು ಸಹ ಸಮಯ ಕಳೆಯುವುದಾಗಿದೆ. ಭವಿಷ್ಯ ಮತ್ತು ವರ್ತಮಾನದ ಪ್ರಾಪ್ತಿಯಾಗುವುದಾಗಿದೆ.

ಬಾಪ್ದಾದಾರವರ ಹತ್ತಿರ ಕೆಲ-ಕೆಲ ಮಕ್ಕಳ ಒಂದು ಸಂಕಲ್ಪ ತಲುಪುತ್ತದೆ. ಹೊರಗಡೆಯವರು ಬಡಪಾಯಿ ಆಗಿದ್ದಾರೆ ಆದರೆ ಬ್ರಾಹ್ಮಣ ಆತ್ಮರು ಬಡಪಾಯಿಯಲ್ಲ, ತಿಳಿವಳಿಕೆಯಿರುವವರಾಗಿದ್ದಾರೆ. ಆದರೆ ಕೆಲ-ಕೆಲವೊಮ್ಮೆ ಕೆಲ-ಕೆಲ ಮಕ್ಕಳಲ್ಲಿ ಒಂದು ಬಲಹೀನ ಸಂಕಲ್ಪ ಹುಟ್ಟುತ್ತದೆ, ತಿಳಿಸುವುದೇ. ತಿಳಿಸುವುದೇ? ಎಲ್ಲರೂ ಕೈ ಎತ್ತುತ್ತಿದ್ದಾರೆ, ಬಹಳ ಒಳ್ಳೆಯದು. ಕೆಲ-ಕೆಲವೊಮ್ಮೆ ಯೋಚಿಸುತ್ತಾರೆ ವಿನಾಶವಾಗುವುದಿದೆಯೇ ಅಥವಾ ಆಗುವುದಿಲ್ಲವೇ! 99ರ ಚಕ್ರವು ಪೂರ್ಣವಾಯಿತು, 2000ವೂ ಪೂರ್ಣವಾಗುತ್ತದೆ. ಈಗ ಎಲ್ಲಿಯವರೆಗೆ? ಬಾಪ್ದಾದಾರವರು ಯೋಚಿಸುತ್ತಾರೆ – ನಗುವ ಮಾತೇನೆಂದರೆ ವಿನಾಶದ ಬಗ್ಗೆ ಯೋಚಿಸುವುದು ಇದರ ಅರ್ಥ ತಂದೆಗೆ ಬಿಳ್ಕೊಡುಗೆಯನ್ನು ಕೊಡುವುದು ಏಕೆಂದರೆ ವಿನಾಶವಾದರೆ ತಂದೆಯಂತು ಪರಮಧಾಮದಲ್ಲಿ ಹೋಗಿಬಿಡುವರಲ್ಲವೇ! ಸಂಗಮದಿಂದ ಸುಸ್ತಾಗಿಬಿಟ್ಟಿದ್ದೀರೇನು? ವಜ್ರ ಸಮಾನವೆಂದು ಹೇಳುತ್ತೀರಿ ಮತ್ತು ಸ್ವರ್ಣಿಮವನ್ನು ಹೆಚ್ಚು ನೆನಪು ಮಾಡುತ್ತೀರಿ, ಆಗುವುದಿದೆ ಆದರೆ ಏಕೆ ಕಾಯಬೇಕು? ಕೆಲವು ಮಕ್ಕಳು ಯೋಚಿಸುತ್ತಾರೆ ಸಫಲ ಮಾಡಬೇಕು ಆದರೆ ನಾಳೆ - ನಾಡಿದ್ದು ವಿನಾಶವಾದರೆ, ನಮ್ಮದ್ದಂತು ಕೆಲಸಕ್ಕೆ ಬರಲೇ ಇಲ್ಲ. ನಮ್ಮದಂತು ಸೇವೆಯಲ್ಲಿ ತೊಡಗಲೇ ಇಲ್ಲ. ಹಾಗಾದರೆ ಮಾಡಿ, ಯೋಚಿಸಿ ಮಾಡಿ. ಲೆಕ್ಕದಿಂದ ಮಾಡಿ, ಸ್ವಲ್ಪ-ಸ್ವಲ್ಪ ಮಾಡಿ. ಈ ಸಂಕಲ್ಪ ತಂದೆಯ ಹತ್ತಿರ ತಲುಪುತ್ತದೆ. ಆದರೆ ತಿಳಿದುಕೊಳ್ಳಿ ಇಂದು ನೀವು ಮಕ್ಕಳು ತಮ್ಮ ತನುವನ್ನು ಸೇವೆಯಲ್ಲಿ ಸಮರ್ಪಣೆ ಮಾಡಿದಿರಿ, ಮನಸ್ಸನ್ನು ವಿಶ್ವ ಪರಿವರ್ತನೆಯ ವೈಬ್ರೆಷನ್ನಲ್ಲಿ ನಿರಂತರ ತೊಡಗಿಸಿದ್ದೀರಿ, ಧನವೇನಿದೆ, ಪ್ರಾಪ್ತಿಯ ಮುಂದೆ ಏನಿಲ್ಲ ಆದರೆ ಏನಿದೆ, ಇಂದು ನೀವು ಜಮಾ ಮಾಡಿದಿರಿ ಮತ್ತು ನಾಳೆ ವಿನಾಶವಾಗಿಬಿಡುತ್ತದೆ ಅಂದಾಗ ನಿಮ್ಮದು ಸಫಲವಾಯಿತೇ ಅಥವಾ ವ್ಯರ್ಥವಾಯಿತೇ? ಯೋಚಿಸಿ, ಸೇವೆಯಲ್ಲಿ ತೊಡಗಲಿಲ್ಲ, ಅಂದಾಗ ಸಫಲವಾಯಿತೇನು? ನೀವು ಯಾರ ಪ್ರತಿ ಸಫಲ ಮಾಡಿದ್ದೀರಿ? ಬಾಪ್ದಾದಾರವರ ಪ್ರತಿ ಸಫಲ ಮಾಡಿದ್ದೀರಲ್ಲವೇ? ಬಾಪ್ದಾದಾರವರಂತು ಅವಿನಾಶಿಯಾಗಿದ್ದಾರೆ, ಅವರು ವಿನಾಶವಾಗುವುದಿಲ್ಲ. ಅವಿನಾಶಿ ಖಾತೆಯಲ್ಲಿ, ಅವಿನಾಶಿ ಬಾಪ್ದಾದಾರವರ ಹತ್ತಿರ ತಮ್ಮದು ಇಂದು ಜಮಾ ಮಾಡಿದ್ದೀರಿ, ಒಂದು ಗಂಟೆ ಮೊದಲು ಜಮಾ ಮಾಡಿದ್ದೀರಿ, ಅಂದಾಗ ಅವಿನಾಶಿ ತಂದೆಯ ಹತ್ತಿರ ನಿಮ್ಮ ಖಾತೆ ಒಂದಕ್ಕೆ ಪದಮಗುಣ ಜಮಾವಾಗಿಬಿಟ್ಟಿತು. ತಂದೆಯು ಬಂಧಿತರಾಗಿದಾರೆ, ಒಂದಕ್ಕೆ ಪದಮ ಕೊಡಲು. ಅಂದಾಗ ತಂದೆಯು ಹೋಗಿ ಬಿಡುವುದಿಲ್ಲ ತಾನೇ! ಹಳೆಯ ಸೃಷ್ಟಿ ವಿನಾಶವಾಗುತ್ತದೆಯಲ್ಲವೇ! ಅದಕ್ಕಾಗಿ ನಿಮ್ಮ ಹೃದಯದಿಂದ ಮಾಡಿರುವುದು, ಅನಿವಾರ್ಯತೆಯಿಂದ ಮಾಡಿರುವುದು, ನೋಡಿ-ನೋಡಿ ಮಾಡುವುದು, ಅದಕ್ಕೆ ಪೂರ್ಣ ಸಿಗುವುದಿಲ್ಲ. ಅವಶ್ಯವಾಗಿ ಸಿಗುತ್ತದೆ ಏಕೆಂದರೆ ದಾತನಿಗೆ ಕೊಟ್ಟಿರುವುದು ಆದರೆ ಪೂರ್ಣ ಸಿಗುವುದಿಲ್ಲ ಅದಕ್ಕೆ ಈ ರೀತಿ ಯೋಚಿಸಬೇಡಿ ಈಗಂತು ವಿನಾಶವಂತು 2001ರವರೆಗೂ ಕಾಣಿಸುತ್ತಿಲ್ಲ, ಈಗಂತು ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ, ಮನೆಗಳನ್ನು ಕಟ್ಟಿಸಲಾಗುತ್ತಿದೆ. ದೊಡ್ಡ-ದೊಡ್ಡ ಯೋಜನೆಗಳನ್ನು ಮಾಡಲಾಗುತ್ತಿದೆ, ಅಂದಾಗ 2001ರವರೆಗೆ ಕಾಣಿಸುತ್ತಿಲ್ಲ, ಕಾಣಿಸುವುದಿಲ್ಲ. ಎಂದೂ ಈ ಮಾತುಗಳನ್ನು ತಮ್ಮ ಆಧಾರವನ್ನಾಗಿ ಮಾಡಿಕೊಂಡು ಹುಡುಗಾಟಿಕೆಯಲ್ಲಿ ಬರಬೇಡಿ. ಇದ್ದಕ್ಕಿದ್ದಂತೆ ಆಗುವುದಿದೆ. ಇಂದು ಇಲ್ಲಿ ಕುಳಿತಿದ್ದೀರಿ, ಗಂಟೆಯ ನಂತರವೂ ಸಹ ಆಗಬಹುದು. ಆಗುವುದಿಲ್ಲ, ಒಂದು ಗಂಟೆಯ ನಂತರ ಏನಾಗುತ್ತದೆಯೋ ಏನೋ ಎಂದು ಭಯ ಪಡಬೇಡಿ. ಸಂಭವವಿದೆ. ಇಷ್ಟು ಸದಾ ತಯಾರಾಗಿರಬೇಕಾಗಿದೆ. ಶಿವರಾತ್ರಿಯವರೆಗೂ ಮಾಡಬೇಕು, ಹೀಗೆ ಯೋಚಿಸಬೇಡಿ. ಸಮಯವನ್ನು ಕಾಯಬೇಡಿ. ಸಮಯವೂ ನಿಮ್ಮ ರಚನೆಯಾಗಿದೆ, ನೀವು ಮಾಸ್ಟರ್ ರಚೈತರಾಗಿದ್ದೀರಿ. ರಚೈತ ರಚನೆಗೆ ಅಧೀನರಾಗುವುದಿಲ್ಲ. ಸಮಯವು ರಚನೆ ನಿಮ್ಮ ಆದೇಶದಂತೆ ನಡೆಯುವಂತಹದಾಗಿದೆ. ನೀವು ಸಮಯವನ್ನು ಕಾಯಬೇಡಿ, ಆದರೆ ಈಗ ಸಮಯವು ನಿಮಗಾಗಿ ಕಾಯುತ್ತಿದೆ. ಕೆಲವು ಮಕ್ಕಳು ಯೋಚಿಸುತ್ತಾರೆ, 6 ತಿಂಗಳಿಗಾಗಿ ಬಾಪ್ದಾದಾರವರು ಹೇಳಿದ್ದಾರೆ ಅಂದಾಗ 6 ತಿಂಗಳು ಆಗುತ್ತದೆ. ಆಗುತ್ತದೆಯಲ್ಲವೇ. ಆದರೆ ಬಾಪ್ದಾದಾರವರು ಹೇಳುತ್ತಾರೆ – ಈ ಹದ್ದಿನ ಮಾತುಗಳ ಆಧಾರವನ್ನು ತೆಗೆದುಕೊಳ್ಳಬೇಡಿ, ಸದಾ ತಯಾರಾಗಿರಿ. ನಿರಾಧಾರ, ಒಂದು ಸೆಕೆಂಡಿನಲ್ಲಿ ಜೀವನಮುಕ್ತಿ. ಚಾಲೇಂಜ್ ಮಾಡುತ್ತೀರಿ – ಒಂದು ಸೆಕೆಂಡಿನಲ್ಲಿ ಜೀವನಮುಕ್ತಿಯ ಆಸ್ತಿ ತೆಗೆದುಕೊಳ್ಳಿ. ನೀವು ಒಂದು ಸೆಕೆಂಡಿನಲ್ಲಿ ಸ್ವಯಂನ್ನು ಜೀವನಮುಕ್ತರನ್ನಾಗಿ ಮಾಡಿಕೊಳ್ಳಲು ಸಾಧ್ಯವಿಲ್ಲವೇನು? ಅದಕ್ಕಾಗಿ ಕಾಯಬೇಡಿ, ಸಂಪನ್ನರಾಗುವ ತಯಾರಿ ಮಾಡಿಕೊಳ್ಳಿ.

ಬಾಪ್ದಾದಾರವರಿಗೆ ಮಕ್ಕಳ ಆಟವನ್ನು ನೋಡಿ ನಗು ಸಹ ಬರುತ್ತದೆ. ಯಾವ ಆಟದ ಮೇಲೆ ನಗು ಬರುತ್ತದೆ? ಹೇಳುವುದೇ? ಇಂದು ಮುರುಳಿ ನಡೆಸುತ್ತಿಲ್ಲ, ಸಮಾಚಾರವನ್ನು ತಿಳಿಸುತ್ತಿದ್ದಾರೆ. ಇಲ್ಲಿಯವರೆಗೆ ಕೆಲ ಮಕ್ಕಳಿಗೆ ಆಟಿಕೆ ಸಾಮಾನುಗಳಿಂದ ಆಟವಾಡುವುದು ಬಹಳ ಇಷ್ಟವಾಗುತ್ತದೆ. ಚಿಕ್ಕ-ಚಿಕ್ಕ ಮಾತುಗಳ ಆಟಿಕೆಗಳೊಂದಿಗೆ ಆಟವಾಡುವುದು, ಚಿಕ್ಕ ಮಾತುಗಳನ್ನು ತಮ್ಮದಾಗಿಸಿಕೊಳ್ಳುವುದು, ಈ ರೀತಿ ಸಮಯವನ್ನು ಕಳೆಯುತ್ತಾರೆ. ಇವು ಸೈಡ್ಸೀನ್ಗಳಾಗಿವೆ (ದಾರಿಯ ಪಕ್ಕದಲ್ಲಿರುವ ದೃಶ್ಯಗಳು). ಭಿನ್ನ ಭಿನ್ನ ಸಂಸ್ಕಾರಗಳ ಮಾತುಗಳು ಅಥವಾ ನಡತೆ – ಇವು ಸಂಪೂರ್ಣ ಗುರಿಯ ಮಧ್ಯದಲ್ಲಿ ಸೈಡ್ಸೀನ್ಗಳಾಗಿವೆ. ಇದರಲ್ಲಿ ನಿಲ್ಲವುದು ಅರ್ಥಾತ್ ಯೋಚಿಸುವುದು, ಪ್ರಭಾವದಲ್ಲಿ ಬರುವುದು, ಸಮಯವನ್ನು ಕಳೆಯುವುದು, ರುಚಿಯಿಂದ ಕೇಳುವುದು, ತಿಳಿಸುವುದು, ವಾಯುಮಂಡಲವನ್ನು ಮಾಡುವುದು.. ಇವು ನಿಲ್ಲುವುದಾಗಿದೆ. ಇದರಿಂದ ಸಂಪೂರ್ಣತೆಯ ಗುರಿಯಿಂದ ದೂರವಾಗಿಬಿಡುತ್ತೀರಿ. ಪರಿಶ್ರಮ ಬಹಳ, ಇಚ್ಛೆಗಳು ಬಹಳ “ತಂದೆಯ ಸಮಾನ ಆಗಲೇ ಬೇಕು”, ಶುಭ ಸಂಕಲ್ಪ, ಶುಭ ಇಚ್ಛೆಗಳಿವೆ ಆದರೆ ಪರಿಶ್ರಮ ಪಡುತ್ತಲು ಅಡೆತಡೆಗಳು ಬರುತ್ತವೆ. ಎರಡು ಕಿವಿಗಳಿವೆ, ಎರಡು ಕಣ್ಣುಗಳಿವೆ, ಮುಖವಿದೆ(ಬಾಯಿಯಿದೆ) ಅಂದಾಗ ನೋಡಲು ಬರುತ್ತದೆ, ಕೇಳಲು ಬರುತ್ತದೆ, ಮಾತನಾಡಲು ಬರುತ್ತದೆ, ಆದರೆ ತಂದೆಯದು ಬಹಳ ಹಳೆಯ ಸ್ಲೋಗನ್ ಸದಾ ನೆನಪಿಡಿ - ನೋಡುತ್ತಲು ನೋಡ ಬೇಡಿ, ಕೇಳುತ್ತಲೂ ಕೇಳಬೇಡಿ. ಕೇಳುತ್ತ್ತಾ ಯೋಚಿಸಬೇಡಿ, ಕೇಳುತ್ತಾ ಒಳಗಡೆ ಅಳವಡಿಸಿಕೊಳ್ಳಿ, ಹರಡಿಸಬೇಡಿ. ಇದು ಹಳೆಯ ಸ್ಲೋಗನ್ ನೆನಪಿಡುವುದು ಅವಶ್ಯಕವಾಗಿದೆ ಏಕೆಂದರೆ ದಿನ-ಪ್ರತಿದಿನ ಯಾರೆಲ್ಲಾ ಎಲ್ಲರ ಹಾಗೆ ಹಳೇಯ ಶರೀರದ ಲೆಕ್ಕಾಚಾರವನ್ನು ಸಮಾಪ್ತಿಯಾಗುತ್ತಿದೆ, ಅದೇ ರೀತಿ ಹಳೆಯ ಸಂಸ್ಕಾರವೂ, ಹಳೆಯ ಕಾಯಿಲೆಗಳೂ ಎಲ್ಲರದು ತೆಗೆದು ಸಮಾಪ್ತಿಯಾಗಲಿದೆ, ಅದಕ್ಕಾಗಿ ಭಯಬೀತರಾಗಬೇಡಿ ಈಗಂತೂ ಗೊತ್ತಿಲ್ಲ ಇನ್ನೂ ಮಾತುಗಳು ಹೆಚ್ಚಾಗುತ್ತಿವೆ, ಮೊದಲಂತು ಇರಲಿಲ್ಲ. ಯಾವುದೂ ಇರಲಿಲ್ಲ, ಅವು ಈಗ ಹೊರಬರುತ್ತಿವೆ, ಬರಲೇ ಬೇಕು. ನಿಮ್ಮ ಎದುರಿಸುವ ಶಕ್ತಿ, ಸಹನೆ ಶಕ್ತಿ, ಸಂಕೀರ್ಣ ಶಕ್ತಿ, ನಿರ್ಣಯ ಮಾಡುವ ಶಕ್ತಿಯ ಪೇಪರ್ ಇದೆ. ಏನು 10 ವರ್ಷದ ಮೊದಲು ಪೇಪರ್ ಬರುವುದೇನು? ಬಿ.ಎ. ಕ್ಲಾಸ್ನ ಪೇಪರ್, ಎಮ್.ಎ ಕ್ಲಾಸ್ನಲ್ಲಿ ಬರುವುದೇನು? ಅದಕ್ಕಾಗಿ ಭಯಬೀತರಾಗಿ ಬೇಡಿ, ಏನಾಗುತ್ತದೆ ಎಂದು. ಇದಾಗುತ್ತದೆ, ಇದಾಗುತ್ತದೆ.. ಆಟವನ್ನು ನೋಡಿ. ಪೇಪರ್ಂತು ಪಾಸ್ ಆಗಿ, ಪಾಸ್ ವಿತ್ ಆನರ್ (ಗೌರವಾನ್ವಿತ್ ತೇರ್ಗಡೆ) ಆಗಿ.

ಬಾಪ್ದಾದಾರವರೂ ಮೊದಲು ತಿಳಿಸಿದ್ದಾರೆ -ಪಾಸ್ ಆಗುವುದಕ್ಕೆ ಎಲ್ಲದಕ್ಕಿಂತ ಸಹಜ ಸಾಧನವಾಗಿದೆ, ಬಾಪ್ದಾದಾರವರ ಹತ್ತಿರ ಇರಿ, ಯಾವುದು ಕೆಲಸದ ದೃಷ್ಟಿಯಿಂದ ಇಲ್ಲ, ಅದನ್ನು ಪಾಸ್ ಆಗಲು ಬಿಡಿ, ಪಾಸ್ (ಹತ್ತಿರ) ಇರಿ, ಪಾಸ್ ಮಾಡಿ, ಪಾಸ್ ಆಗಿಬಿಡಿ. ಕಷ್ಟವಿದೆಯೇನು? ಟೀಚರ್ಸ್ ತಿಳಿಸಿ, ಮಧುಬನದವರು ತಿಳಿಸಿ. ಮಧುಬನದವರು ಕೈ ಎತ್ತಿ. ಮಧುಬನದವರು ಮುಂದೆ ಬಂದು ಬರುತ್ತೀರಿ ಬುದ್ಧಿವಂತರಾಗಿದ್ದೀರಿ, ಭಲೇ ಬನ್ನಿ. ಬಾಪ್ದಾದಾರವರು ಖುಷಿಯಿದೆ. ತಮ್ಮ ಅಧಿಕಾರವನ್ನು ತೆಗೆದುಕೊಳ್ಳುತ್ತಿರಲ್ಲವೇ? ಒಳ್ಳೆಯದು, ಬಾಪ್ದಾದಾರವರು ಬೇಜಾರಾಗಿಲ್ಲ, ಭಲೇ ಮುಂದೆ ಕುಳಿತುಕೊಳ್ಳಿರಿ. ಮಧುಬನದಲ್ಲಿರುತ್ತೀರೆಂದರೆ ಏನಾದರೂ ಹತ್ತಿರದ ಸತ್ಕಾರವಾಗಬೇಕಲ್ಲವೇ! ಆದರೆ ಪಾಸ್ ಶಬ್ದ ನೆನಪಿಟ್ಟುಕೊಳ್ಳಿ. ಮಧುಬನದಲ್ಲಿ ಹೊಸ-ಹೊಸ ಮಾತಗಳಾಗುತ್ತವೆಯಲ್ಲವೇ, ಡಕಾಯಿತರು ಬರುತ್ತಾರೆ. ಕೆಲವು ಹೊಸ-ಹೊಸ ಮಾತುಗಳು ಇರುತ್ತವೆ, ಈಗ ತಂದೆಯು ಸಾಮಾನ್ಯವಾಗಿ ಏನು ತಿಳಿಸಿದರು, ಸ್ವಲ್ಪ ಗುಪ್ತ ಇಡುತ್ತಾರೆ ಆದರೆ ಮಧುಬನದವರು ತಿಳಿದುಕೊಂಡಿದ್ದಾರೆ. ಮನೋರಂಜನೆ ಮಾಡಿ, ತಬ್ಬಿಬ್ಬರಾಗಬೇಡಿ. ತಬ್ಬಿಬ್ಬರಾಗುವುದು ಅಥವಾ ಮನೋರಂಜನೆ ಎಂದು ತಿಳಿದು ಮೋಜಿನಲ್ಲಿ ಪಾಸ್ ಆಗುವುದು. ತಬ್ಬಿಬ್ಬರಾಗುವುದು ಒಳ್ಳೆಯದಾ ಅಥವಾ ಪಾಸ್ ಮಾಡಿ ಮೋಜಿನಲ್ಲಿರುವುದು ಒಳ್ಳೆಯದಾ? ಪಾಸ್ ಮಾಡಬೇಕಲ್ಲವೇ! ಪಾಸ್ ಆಗಬೇಕಲ್ಲವೇ! ಪಾಸ ಮಾಡಿ. ದೊಡ್ಡ ಮಾತೇನಿದೆ? ಯಾವುದೇ ದೊಡ್ಡ ಮಾತಿಲ್ಲ. ಮಾತನ್ನು ದೊಡ್ಡದನ್ನಾಗಿ ಮಾಡುವುದು ಮತ್ತು ಚಿಕ್ಕದನ್ನಾಗಿ ಮಾಡುವುದು, ತಮ್ಮ ಬುದ್ಧಿಯ ಮೇಲಿದೆ. ಯಾರು ಮಾತನ್ನು ದೊಡ್ಡದನ್ನಾಗಿ ಮಾಡುತ್ತಾರೆ, ಅವರಿಗಾಗಿ ಅಜ್ಞಾನ ಕಾಲದಲ್ಲೂ ಹೇಳುತ್ತಾರೆ ಇವರು ಹಗ್ಗವನ್ನು ಹಾವು(ಸರ್ಪ)ವನ್ನಾಗಿ ಮಾಡುವವರಾಗಿದ್ದಾರೆ. ಸಿಂಧಿ ಬಾಷೆಯಲ್ಲಿ ಹೇಳುತ್ತಾರೆ “ನೋರಿ ಕೊ ನಾಗ” ಮಾಡುತ್ತಾರೆ. ಇಂತಹ ಆಟವನ್ನು ಆಡಬೇಡಿ. ಈಗ ಈ ಆಟ ಸಮಾಪ್ತಿ.

ಇಂದು ವಿಶೇಷ ಸಮಾಚಾರವನ್ನಂತು ತಿಳಿಸಿದರಲ್ಲವೇ, ಬಾಪ್ದಾದಾರವರು ಈಗ ಒಂದು ಸಹಜ ಪುರುಷಾರ್ಥ ತಿಳಿಸುತ್ತಾರೆ, ಕಷ್ಟವಲ್ಲ. ಎಲ್ಲರಿಗೆ ಈ ಸಂಕಲ್ಪವಿದೆ ತಂದೆಯ ಸಮಾನರಾಗಲೇ ಬೇಕೆಂದು. ಆಗಲೇ ಬೇಕು, ಪಕ್ಕಾವಿದೆಯಲ್ಲವೇ! ವಿದೇಶಿಯರು ಆಗಲೇ ಬೇಕಲ್ಲವೇ? ಟೀಚರ್ಸ್ ಆಗಲೇ ಬೇಕಲ್ಲವೇ? ಇಷ್ಟೊಂದು ಟೀಚರ್ಸ್ ಬಂದಿದ್ದಾರೆ! ವಾಹ್! ಟೀಚರ್ಸ್ನ ಕಮಾಲ ಆಗಿದೆ. ಬಾಪ್ದಾದಾರವರು ಇಂದು ಟೀಚರ್ಸ್ನ ಖುಷಿಯ ಸಮಾಚಾರವನ್ನು ತಿಳಿಸಿದರು. ಯಾವ ಖುಷಿಯ ಸಮಾಚಾರ, ತಿಳಿಸಿರಿ. ಟೀಚರ್ಸ್ಗೆ ಇಂದು ಸ್ವರ್ಣಿಮ ಬ್ಯಾಡ್ಜ ಸಿಕ್ಕಿತು. ಯಾರಿಗೆ ಗೋಲ್ಡನ್ (ಸ್ವರ್ಣಿಮ) ಬ್ಯಾಡ್ಜ್ ಸಿಕ್ಕಿದೆ, ಕೈ ಎತ್ತಿರಿ. ಪಾಂಡವರಿಗೂ ಸಿಕ್ಕಿದೆಯೇ? ತಂದೆಯ ಜೊತೆಗಾರರಂತು ಇರಬಾರದಲ್ಲವೇ. ಪಾಂಡವ ಬ್ರಹ್ಮಾ ತಂದೆಯ ಜೊತೆಗಾರರಾಗಿದ್ದಾರೆ. (ಅವರಿಗೆ ಬೇರೆ ಪ್ರಕಾರದ ಗೋಲ್ಡನ್ ಸಿಕ್ಕಿದೆ) ಪಾಂಡವರಿಗೆ ರಾಯಲ್ ಗೋಲ್ಡ ಮೆಡೆಲ್ ಇದೆ. ಗೋಲ್ಡನ್ ಮೆಡಲ್ನವರಿಗೆ ಬಾಪ್ದಾದಾರವರ ಲಕ್ಷ-ಕೋಟಿಯಷ್ಟು ಶುಭಾಷಯಗಳು, ಶುಭಾಷಯಗಳು, ಶುಭಾಷಯಗಳು.

ಬಾಪ್ದಾದಾರವರನ್ನು ಯಾವ ದೇಶ-ವಿದೇಶದಲ್ಲಿ ಕೇಳುತ್ತಿದ್ದಾರೆ, ಮತ್ತು ಗೋಲ್ಡನ್ ಮೆಡಲ್ ಸಿಕ್ಕಿ ಬಿಟ್ಟಿದೆ, ಅವರೆಲ್ಲರೂ ತಿಳಿಯುತ್ತಾರೆ ನಮ್ಮೆಲ್ಲರಿಗೂ ಬಾಪ್ದಾದಾರವರು ಶುಭಾಷಯಗಳನ್ನು ಕೊಟ್ಟಿದ್ದಾರೆ, ಭಲೇ ಪಾಂಡವರಾಗಿದ್ದಾರೆ, ಭಲೇ ಶಕ್ತಿಯರಾಗಿದ್ದಾರೆ, ಯಾವುದೇ ಕಾರ್ಯದ ನಿಮಿತ್ತರನ್ನಾಗಿ ಮಾಡುವಂತಹರಿಗೆ ವಿಶೇಷವಾಗಿ ಈ ದಾದಿಯರು, ಪಾರಿವಾರದಲ್ಲಿರುವವರಿಗೂ ಯಾವುದೇ ವಿಶೇಷತೆಯ ಆಧಾರದ ಮೇಲೆ ಗೋಲ್ಡನ್ ಮೆಡಲ್ ಕೊಡುತ್ತಾರೆ. ಯಾರಿಗೆಲ್ಲಾ ಯಾವ ವಿಶೇಷತೆ ಆಧಾರದ ಮೇಲೆ, ಸರ್ಮಪಣೆಯ ಆಧಾರದ ಮೇಲಿರಬಹುದು, ಯಾರೇ ಸೇವೆಯಲ್ಲಿ ವಿಶೇಷ ಮುಂದುವರೆಯುವಂತಹ ದಾದಿಯರ ಮೂಲಕ ಸಹ ಗೋಲ್ಡನ್ ಮೆಡಲ್ ಸಿಕ್ಕಿದೆ, ದೂರದಲ್ಲಿ ಕುಳಿತು ಕೇಳುವಂತಹವರಿಗೂ ಸಹ ಬಹಳ ಬಹಳ ಶುಭಾಷಯಗಳು. ನೀವೆಲ್ಲರೂ ದೂರ ಕುಳಿತು ಮುರುಳಿ ಕೇಳುವಂತಹವರಿಗೆ, ಗೋಲ್ಡನ್ ಮೆಡಲ್ನವರಿಗೆ ಒಂದು ಕೈಯಿನ ಚಪ್ಪಾಳೆ ತಟ್ಟಿರಿ, ಅವರು ನಿಮ್ಮ ಚಪ್ಪಾಳೆ ನೋಡುತ್ತಿದ್ದಾರೆ. ಅವರು ಸಹ ನಗುತ್ತಿದ್ದಾರೆ, ಖುಷಿಯಾಗಿದ್ದಾರೆ.

ಬಾಪ್ದಾದಾರವರು ಸಹಜ ಪುರುಷಾರ್ಥವನ್ನು ತಿಳಿಸುತ್ತಿದ್ದಾರೆ – ಈಗ ಸಮಯವಂತು ಇದ್ದಕ್ಕಿದ್ದಂತೆ ಆಗುವುದು, ಒಂದು ಗಂಟೆ ಮೊದಲು ಸಹ ಬಾಪ್ದಾದಾ ಘೋಷಣೆ ಮಾಡುವುದಿಲ್ಲ, ಮಾಡುವುದಿಲ್ಲ, ಮಾಡುವುದಿಲ್ಲ. ನಂಬರ್ ಹೇಗೆ ಆಗುವುದು? ಇದ್ದಕ್ಕಿದ್ದಂತೆ ಆಗಲಿಲ್ಲವೆಂದರೆ ಪೇಪರ್ ಹೇಗೆ ಆಗುವುದು? ಪಾಸ್ ವಿತ್ ಆನರ್ನ (ಗೌರವಾನ್ವಿತ್ ತೇರ್ಗಡೆಯ) ಸರ್ಟಿಫಿಕೇಟ್, ಫೈನೆಲ್ ಸರ್ಟಿಫಿಕೇಟ್ಂತು ಇದ್ದಕ್ಕಿದ್ದಂತೆ ಆಗಬೇಕಾಗಿದೆ ಅದಕ್ಕಾಗಿ ದಾದಿಯರ ಒಂದು ಸಂಕಲ್ಪ ಬಾಪ್ದಾದಾರವರ ಹತ್ತಿರ ತಲುಪಿದೆ. ದಾದಿಯರು ಬಯಸುತ್ತಾರೆ – ಈಗ ಬಾಪ್ದಾದಾರವರ ಸಾಕ್ಷಾತ್ಕಾರದ ಚಾವಿ ತೆರೆಯಲಿ, ಇಶು ಇವರ ಸಂಕಲ್ಪವಾಗಿದೆ. ನೀವೆಲ್ಲರೂ ಬಯಸುತ್ತೀರಾ? ಬಾಪ್ದಾದಾರವರು ಚಾವಿಯನ್ನು ತೆರೆಯುವವರೇ ಅಥವಾ ನೀವು ನಿಮಿತ್ತರಾಗುವಿರಾ? ಒಳ್ಳೆಯದು ಬಾಪ್ದಾದಾರವರು ಚಾವಿಯನ್ನು ತೆರೆಯುವರು, ಸರಿಯಿದೆ. ಬಾಪ್ದಾದಾರವರು ಹಾಂ ಜೀ ಮಾಡುತ್ತಾರೆ, (ಚಪ್ಪಾಳೆ ತಟ್ಟಿದ್ದರು) ಮೊದಲು ಪೂರ್ಣ ಕೇಳಿರಿ. ಬಾಪ್ದಾದಾರವರಿಗೆ ಚಾವಿ ತೆಗೆಯುವುದರಲ್ಲಿ ಏನು ತಡವಿದೆ, ಆದರೆ ಯಾರ ಮೂಲಕ ಮಾಡಿಸುವರು? ಪ್ರತ್ಯಕ್ಷವನ್ನು ಯಾರು ಮಾಡಬೇಕು? ಮಕ್ಕಳಿಗೆ ಅಥವಾ ತಂದೆಗೆ? ತಂದೆಗೂ ತಂದೆಯ ಮೂಲಕ ಮಾಡಬೇಕು ಏಕೆಂದರೆ ಒಂದುವೇಳೆ ಜ್ಯೋತಿರ್ಬಿಂದುವಿನ ಸಾಕ್ಷಾತ್ಕಾರವಾದರೂ ಸಹ ಕೆಲವರು ಬಡಪಾಯಿ..., ಬಡಪಾಯಿಗಳಲ್ಲವೇ! ಇದು ಏನೆಂದು ತಿಳಿದುಕೊಳ್ಳುವುದಿಲ್ಲ. ಅಂತಿಮದಲ್ಲಿ ಶಕ್ತಿಯರು ಮತ್ತು ಪಾಂಡವ ಮಕ್ಕಳ ಮೂಲಕ ತಂದೆಯ ಪ್ರತ್ಯಕ್ಷವಾಗುತ್ತದೆ. ಬಾಪ್ದಾದಾರವರು ಇದನ್ನೇ ಹೇಳುತ್ತಿದ್ದಾರೆ ಯಾವಾಗ ಎಲ್ಲಾ ಮಕ್ಕಳಿಗೆ ಒಂದೇ ಸಂಕಲ್ಪವಿದೆ ತಂದೆಯ ಸಮಾನವಾಗಲೇ ಬೇಕು, ಇದರಲ್ಲಿ ಎರಡು ವಿಚಾರಗಳಲಿಲ್ಲ ಅಲ್ಲವೇ! ಒಂದೇ ವಿಚಾರವಿದೆಯಲ್ಲವೇ. ಬ್ರಹ್ಮಾ ತಂದೆಯನ್ನು ಫಾಲೋ ಮಾಡಿ. ಅಶರೀರಿ, ಬಿಂದು ಸ್ವತಃವಾಗಿ ಆಗಿಬಿಡುವಿರಿ. ಬ್ರಹ್ಮಾತಂದೆಯೊಂದಿಗೆ ಎಲ್ಲರದು ಪ್ರೀತಿಯಿದೆ. ಎಲ್ಲದಕ್ಕಿಂತ ಹೆಚ್ಚು ನೋಡಲಾಗಿದೆ. ಎಲ್ಲರದೂ ಪ್ರೀತಿಯಿದೆ, ಆದರೆ ವಿದೇಶಿಯರದು ಬ್ರಹ್ಮಾ ತಂದೆಯದು ಬಹಳ ಪ್ರೀತಿಯಿದೆ. ಈ ನೇತ್ರದ ಮೂಲಕ ನೋಡಿಲ್ಲ ಆದರೆ ಅನುಭವದ ನೇತ್ರದ ಮೂಲಕ ವಿದೇಶಿಯರು ಹೆಚ್ಚಾಗಿ ಬ್ರಹ್ಮಾ ಬಾಬಾರವರನ್ನು ನೋಡಿದ್ದಾರೆ ಮತ್ತು ಬಹಳ ಪ್ರೀತಿಯಿದೆ. ಭಾರತದ ಗೋಪಿಕೆಯರು, ಗೋಪರು ಇದ್ದಾರೆ ಆದರೂ ಬಾಪ್ದಾದಾರವರು ವಿದೇಶಿಯರ ಕೆಲ-ಕೆಲವೊಮ್ಮೆ ಅನುಭವದ ಕಥೆಗಳನ್ನು ತಿಳಿಸುತ್ತಾರೆ, ಭಾರತವಾಸಿಯರು ಸ್ವಲ್ಪ ಗುಪ್ತವಾಗಿ ಇಡುತ್ತಾರೆ, ಇಷ್ಟೊಂದು ಪ್ರಸಿದ್ಧ ಮಾಡಲು ಸಾಧ್ಯವಿಲ್ಲ, ಗುಪ್ತವಾಗಿ ಇಡುತ್ತಾರೆ. ಈಗ ಪ್ರತ್ಯಕ್ಷ ಮಾಡಿ. ಬಾಕಿ ಭಾರತದಲ್ಲಿಯೂ ಬಹಳ ಒಳ್ಳೊಳ್ಳೆಯವರಿದ್ದಾರೆ. ಇಂತಹ ಗೋಪಿಕೆಯರಿದ್ದಾರೆ, ಒಂದುವೇಳೆ ಅವರ ಅನುಭವ ಇಂದಿನ ಪ್ರಧಾನಮಂತ್ರಿ, ರಾಷ್ಟ್ರಪತಿಯೂ ಕೇಳಿದರೆ ಅವರ ಕಣ್ಣಿನಿಂದಲೂ ಕಣ್ಣಿರು ಬಂದು ಬಿಡುತ್ತದೆ. ಇಂತಹ ಅನುಭವವಿದೆ ಆದರೆ ಗುಪ್ತವಾಗಿ ಇಡುತ್ತಾರೆ ತೆರೆಯುವುದಿಲ್ಲ, ಅವಕಾಶವು ಕಡಿಮೆ ಸಿಗುತ್ತದೆ. ಬಾಪ್ದಾದಾ ತಿಳಿಸುತ್ತಿದ್ದಾರೆ ಬ್ರಹ್ಮಾ ತಂದೆಯೊಂದಿಗೆ ಎಲ್ಲರ ಪ್ರೀತಿಯಿದೆ, ಅದಕ್ಕಾಗಿ ತಮ್ಮನ್ನು ಏನೆಂದು ಹೇಳಿಕೊಳ್ಳುತ್ತಿರಿ? ಬ್ರಹ್ಮಾಕುಮಾರಿ ಅಥವಾ ಶಿವಕುಮಾರಿ? ಬ್ರಹ್ಮಾಕುಮಾರಿ ಹೇಳಿಕೊಳ್ಳುತ್ತಿರಲ್ಲವೇ, ಬ್ರಹ್ಮಾ ತಂದೆಯೊಂದಿಗೆ ಪ್ರೀತಿಯಿದೆಯಲ್ಲವೇ. ಅಶರೀರಿಯಾಗುವುದರಲ್ಲಿ ಸ್ವಲ್ಪ ಪರಿಶ್ರಮ ಪಡಬೇಕಾಗುತ್ತದೆ ಆದರೆ ಬ್ರಹ್ಮಾ ತಂದೆ ಈಗ ಯಾವ ರೂಪದಲ್ಲಿದ್ದಾರೆ? ಯಾವ ರೂಪದಲ್ಲಿದ್ದಾರೆ? ಹೇಳಿರಿ? (ಫರಿಶ್ತಾ ರೂಪದಲ್ಲಿದ್ದಾರೆ) ಬ್ರಹ್ಮಾರವರೊಂದಿಗೆ ಪ್ರೀತಿ ಎಂದರೆ ಫರಿಶ್ತಾ ರೂಪದೊಂದಿಗೆ ಪ್ರೀತಿ. ಭಲೇ ಬಿಂದು ಆಗುವುದರಲ್ಲಿ ಕಷ್ಟವಾಗುತ್ತದೆ, ಫರಿಶ್ತಾ ಆಗುವುದು ಅದಕ್ಕಿಂತಲೂ ಸಹಜವಾಗಿದೆ. ತಿಳಿಸಿರಿ, ಬಿಂದು ರೂಪದಿಂದ ಫರಿಶ್ತಾ ರೂಪವಂತು ಸಹಜವಾಗಿದೆಯಲ್ಲವೇ! ನೀವು ಅಕೌಂಟ್ನ ಕಾರ್ಯ ಮಾಡುತ್ತಾ ಬಿಂದು ಆಗಲು ಸಾಧ್ಯವೇ? ಫರಿಶ್ತೆಯಂತು ಆಗಬಹುದಲ್ಲವೇ! ಬಿಂದು ರೂಪದಲ್ಲಿ ಕರ್ಮ ಮಾಡುತ್ತಾ ಕೆಲ-ಕೆಲವೊಮ್ಮೆ ವ್ಯಕ್ತ ಶರೀರದಲ್ಲಿ ಬಂದು-ಹೋಗಬೇಕಾಗುತ್ತದೆ ಆದರೆ ಬಾಪ್ದಾದಾರವರು ನೋಡಿದರು ವಿಜ್ಞಾನದವರು ಒಂದು ಪ್ರಕಾಶದ ಆಧಾರದಿಂದ ರೊಬೋಟ್ (ಯಂತ್ರಮಾನವ) ಮಾಡಿದರು, ಕೇಳಿದ್ದೀರಲ್ಲವೇ! ನೋಡಿಲ್ಲವೆಂದರೆ ಕೇಳಿದ್ದೀರಲ್ಲವೇ! ಮಾತೆಯರು ಕೇಳಿದ್ದೀರಲ್ಲವೇ? ನಿಮಗೆ ಚಿತ್ರ ತೋರಿಸುತ್ತೇವೆ. ಅವರು ಲೈಟ್ನ ಆಧಾರದಿಂದ ರೊಬೋಟ್ ಮಾಡಿದರು ಮತ್ತು ಅದು ಎಲ್ಲಾ ಕೆಲಸವನ್ನು ಮಾಡುತ್ತದೆ. ಮತ್ತು ತೀವ್ರ ಗತಿಯಿಂದ ಮಾಡುತ್ತದೆ, ಲೈಟ್ನ ಆಧಾರದಿಂದ. ಮತ್ತು ವಿಜ್ಞಾನದ ಪ್ರತ್ಯಕ್ಷ ಪ್ರಮಾಣವಾಗಿದೆ. ಬಾಪ್ದಾದಾ ಹೇಳುತ್ತಾರೆ - ಶಾಂತಿಯ ಶಕ್ತಿಯಿಂದ, ಶಾಂತಿಯ ಲೈಟ್ನಿಂದ ನೀವು ಕರ್ಮ ಮಾಡಲು ಸಾಧ್ಯವಿಲ್ಲವೇ? ಮಾಡಲು ಸಾಧ್ಯವಿಲ್ಲವೇ? ಇಂಜಿನಿಯರ್ ಮತ್ತು ವಿಜ್ಞಾನದವರು ಕುಳಿತ್ತಿದ್ದೀರಲ್ಲವೇ! ನೀವು ಸಹ ಒಂದು ಆತ್ಮಿಕ ರೊಬೋಟ್ನ ಸ್ಥಿತಿ ತಯಾರಿ ಮಾಡಿ. ಯಾವುದಕ್ಕೆ ಹೇಳಲಾಗುತ್ತದೆ ಆತ್ಮಿಕ ಕರ್ಮಯೋಗಿ, ಫರಿಶ್ತಾ ಕರ್ಮಯೋಗಿ. ಮೊದಲು ನೀವು ತಯಾರಿಯಾಗಿಬಿಡಿ. ಇಂಜಿನಿಯರ ಅವರು ಇದ್ದೀರಿ, ವಿಜ್ಞಾನದವರು ಇದ್ದೀರಿ ಅಂದಾಗ ಮೊದಲು ನೀವು ಅನುಭವ ಮಾಡಬೇಕು. ಮಾಡುತ್ತೀರಾ? ಮಾಡಬಹುದೇ? ಒಳ್ಳೆಯದು, ಇಂತಹ ಪ್ಲಾನ್ ಮಾಡಿ. ಬಾಪ್ದಾದಾರವರು ಇಂತಹ ಆತ್ಮಿಕ ನಡೆಯುತ್ತಾ ತಿರುಗಾಡುತ್ತಾ ಕರ್ಮಯೋಗಿ ಫರಿಶ್ತೆಗಳನ್ನು ನೋಡಲು ಬಯಸುತ್ತಾರೆ. ಅಮೃತವೇಳೆಯಲ್ಲಿ ಎದ್ದೇಳಿ, ಬಾಪ್ದಾದಾರವರೊಂದಿಗೆ ಮಿಲನ ಮಾಡಿ, ಆತ್ಮಿಕ ವಾರ್ತಾಲಾಪ ಮಾಡಿ, ವರದಾನವನ್ನು ತೆಗೆದುಕೊಳ್ಳಿ ಏನು ಮಾಡಬೇಕೋ ಅದನ್ನು ಮಾಡಿ. ಆದರೆ ಬಾಪ್ದಾದಾರವರಿಂದ ಪ್ರತಿದಿನ ಅಮೃತವೇಳೆ ಕರ್ಮಯೋಗಿ ಫರಿಶ್ತೆ ಭವದ ವರದಾನವನ್ನು ತೆಗೆದುಕೊಂಡು ನಂತರ ಕೆಲಸ-ಕಾರ್ಯಗಳಲ್ಲಿ ಬನ್ನಿ. ಇದು ಆಗಬಹುದೇ?

ಈ ಹೊಸ ವರ್ಷದಲ್ಲಿ ಲಕ್ಷ್ಯವನ್ನು ಇಟ್ಟುಕೊಳ್ಳಿ - ಸಂಸ್ಕಾರ ಪರಿವರ್ತನೆ, ಸ್ವಯಂನ ಹಾಗೂ ಸಹಯೋಗದ ಮೂಲಕ ಅನ್ಯರದ್ದು ಸಹ. ಯಾವುದೇ ಬಲಹೀನವಿದೆಯೇ ಸಹಯೋಗ ಕೊಡಿ, ವರ್ಣನೆ ಮಾಡಬೇಡಿ, ವಾತಾವರಣವನ್ನು ಮಾಡಬೇಡಿ. ಸಹಯೋಗ ಕೊಡಿ. ಈ ವರ್ಷದ ವಿಷಯ (ಟಾಪಿಕ್) ಆಗಿದೆ “ಸಂಸ್ಕಾರ ಪರಿವರ್ತನೆ”. ಫರಿಶ್ತಾ ಸಂಸ್ಕಾರ, ಬ್ರಹ್ಮಾ ತಂದೆಯ ಸಮಾನ ಸಂಸ್ಕಾರ. ಸಹಜ ಪುರುಷಾರ್ಥವಿದೆಯೇ ಅಥವಾ ಕಷ್ಟವಿದೆಯೇ? ಸ್ವಲ್ಪ-ಸ್ವಲ್ಪ ಕಷ್ಟವಿದೆಯೇ? ಎಂದೂ ಯಾವುದೇ ಮಾತು ಕಷ್ಟವಾಗುವುದಿಲ್ಲ, ತಮ್ಮ ಬಲಹೀನತೆ ಕಷ್ಟವನ್ನಾಗಿ ಮಾಡಿಬಿಡುತ್ತದೆ, ಅದಕ್ಕೆ ಬಾಪ್ದಾದಾರವರು ಹೇಳುತ್ತಾರೆ “ಹೇ ಮಾಸ್ಟರ್ ಸರ್ವಶಕ್ತಿವಾನ ಮಕ್ಕಳೇ, ಈಗ ಶಕ್ತಿಯರ ವಾಯುಮಂಡಲವನ್ನು ಹರಡಿಸಿ.” ಈಗ ವಾಯುಮಂಡಲಕ್ಕೆ ನಿಮ್ಮ ಬಹಳ-ಬಹಳ-ಬಹಳ ಅವಶ್ಯಕತೆಯಿದೆ. ಹೇಗೆ ಇತ್ತಿಚೆಗೆ ವಿಶ್ವದಲ್ಲಿ ಮಾಲಿನ್ಯದ ತೊಂದರೆಯಿದೆ, ಇಂತಹ ವಿಶ್ವದಲ್ಲಿ ಒಂದು ಕ್ಷಣ ಮನಸ್ಸಿನಲ್ಲಿ ಶಾಂತಿ ಸುಖದ ವಾಯುಮಂಡಲದ ಅವಶ್ಯಕತೆಯಿದೆ ಏಕೆಂದರೆ ಮನಸ್ಸಿನ ಮಾಲಿನ್ಯ ಬಹಳಷ್ಟಿದೆ, ವಾಯು ಮಾಲಿನ್ಯಕಿಂತಲೂ ಹೆಚ್ಚಾಗಿದೆ. ಒಳ್ಳೆಯದು.

ನಾಲ್ಕಾರು ಕಡೆಯ ಬಾಪ್ದಾದಾರವರ ಸಮಾನ ಆಗಲೇ ಬೇಕು, ಲಕ್ಷ್ಯವನ್ನು ಇಟ್ಟುಕೊಳ್ಳಬೇಕು, ನಿಶ್ಚಯ ಬುದ್ಧಿ ವಿಜಯಿ ಆತ್ಮಗಳಿಗೆ, ಸದಾ ಹಳೆಯ ಸಂಸಾರ ಮತ್ತು ಹಳೆಯ ಸಂಸ್ಕಾರಗಳನ್ನು ದೃಢ ಸಂಕಲ್ಪದ ಮೂಲಕ ಪರಿವರ್ತನೆ ಮಾಡುವಂತಹ ಮಾಸ್ಟರ್ ಸರ್ವಶಕ್ತಿವಾನ ಆತ್ಮರಿಗೆ, ಸದಾ ಯಾವುದೇ ಕಾರಣದಿಂದ ಸಂದರ್ಭಗಳಿಂದ ಸ್ವಭಾವ-ಸಂಸ್ಕಾರದಿಂದ, ಬಲಹೀನ ಜೊತೆಗಾರರಿಗೆ, ಆತ್ಮಗಳಿಗೆ ಸಹಯೋಗ ಕೊಡುವಂತಹ, ಕಾರಣ ನೋಡುವಂತಹವರಲ್ಲ, ನಿವಾರಣೆ ಮಾಡುವಂತಹವರು ಇಂತಹ ಸಾಹಸವುಳ್ಳ ಆತ್ಮರಿಗೆ, ಸದಾ ಬ್ರಹ್ಮಾ ತಂದೆಯ ಸ್ನೇಹದ ರಿಟರ್ನ್ ಕೊಡುವಂತಹ ಕರ್ಮಯೋಗಿ ಫರಿಶ್ತೆ ಆತ್ಮಗಳಿಗೆ ಬಾಪ್ದಾದಾರವರ ನೆನಪು ಪ್ರೀತಿ ಮತ್ತು ನಮಸ್ತೆ.

ವರದಾನ:
ಶುಭಚಿಂತಕ ಸ್ಥಿತಿಯ ಮುಖಾಂತರ ಸರ್ವರಿಂದ ಸಹಯೋಗ ಪ್ರಾಪ್ತಿ ಮಾಡಿಕೊಳ್ಳುವಂತಹ ಸರ್ವರ ಸ್ನೇಹಿ ಭವ.

ಶುಭಚಿಂತಕ ಆತ್ಮರ ಬಗ್ಗೆ ಪ್ರತಿಯೊಬ್ಬರಿಗೂ ಮನಃಪೂರ್ವಕವಾದ ಸ್ನೇಹ ಉತ್ಪನ್ನವಾಗುತ್ತದೆ ಮತ್ತು ಆ ಸ್ನೇಹವೇ ಸಹಯೋಗಿಯನ್ನಾಗಿ ಮಾಡಿಬಿಡುತ್ತದೆ. ಎಲ್ಲಿ ಸ್ನೇಹವಿರುತ್ತದೆ. ಅಲ್ಲಿ ಸಮಯ, ಸಂಪತ್ತು, ಸಹಯೋಗ ಸದಾ ಬಲಿಹಾರಿಯಾಗಲು ತಯಾರಾಗಿರುತ್ತದೆ. ಅಂದರೆ ಶುಭಚಿಂತಕರು ಸ್ನೇಹಿಗಳನ್ನಾಗಿ ಮಾಡಿಕೊಳ್ಳುತ್ತಾರೆ ಮತ್ತು ಸ್ನೇಹ ಎಲ್ಲಾ ಪ್ರಕಾರದ ಸಹಯೋಗದಲ್ಲಿ ಬಲಿಹಾರಿಗಳನ್ನಾಗಿ ಮಾಡುತ್ತದೆ ಆದ್ದರಿಂದ ಸದಾ ಶುಭಚಿಂತನೆಯಿಂದ ಸಂಪನ್ನರಾಗಿರಿ ಮತ್ತು ಶುಭಚಿಂತಕರಾಗಿ ಸರ್ವರನ್ನೂ ಸ್ನೇಹಿ, ಸಹಯೋಗಿಗಳನ್ನಾಗಿ ಮಾಡಿ.

ಸ್ಲೋಗನ್:
ಸ್ಲೋಗನ್: ಈ ಸಮಯದಲ್ಲಿ ದಾತರಾದಾಗ ತಮ್ಮ ರಾಜ್ಯದಲ್ಲಿ ಜನ್ಮ-ಜನ್ಮಾಂತರ ಎಲ್ಲಾ ಆತ್ಮರು ಸಂಪನ್ನರಾಗಿರುತ್ತಾರೆ.