21.09.24 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ- ತಂದೆಯು
ಕಲ್ಪ-ಕಲ್ಪವೂ ಬಂದು ನೀವು ಮಕ್ಕಳಿಗೆ ತನ್ನ ಪರಿಚಯವನ್ನು ಕೊಡುತ್ತಾರೆ, ನೀವೂ ಸಹ ಎಲ್ಲರಿಗೆ
ತಂದೆಯ ಯಥಾರ್ಥ ಪರಿಚಯವನ್ನು ಕೊಡಬೇಕು.”
ಪ್ರಶ್ನೆ:
ಮಕ್ಕಳ ಯಾವ
ಯನ್ನು ಕೇಳಿ ತಂದೆಯೂ ಸಹ ಆಶ್ಚರ್ಯಚಕಿತರಾಗುತ್ತಾರೆ?
ಉತ್ತರ:
ಮಕ್ಕಳು
ಹೇಳುತ್ತಾರೆ- ಬಾಬಾ, ನಾವು ನಿಮ್ಮ ಪರಿಚಯವನ್ನು ಕೊಡಲು ಬಹಳ ಕಷ್ಟವಾಗುತ್ತದೆ. ನಾವು ಹೇಗೆ ನಿಮ್ಮ
ಪರಿಚಯವನ್ನು ಕೊಡುವುದು? ಈ ಪ್ರಶ್ನೆಯನ್ನು ಕೇಳಿ ತಂದೆಗೂ ಸಹ ಆಶ್ಚರ್ಯವಾಗುತ್ತದೆ. ಯಾವಾಗ ನಿಮಗೆ
ತಂದೆಯು ತನ್ನ ಪರಿಚಯವನ್ನು ಕೊಟ್ಟಿದ್ದಾರೆಂದರೆ ನೀವು ಸಹ ಅನ್ಯರಿಗೆ ಕೊಡಬಹುದು. ಇದರಲ್ಲಿ ಕಷ್ಟದ
ಮಾತೇ ಇಲ್ಲ. ಇದು ಬಹಳ ಸಹಜವಾಗಿದೆ. ನಾವೆಲ್ಲಾ ಆತ್ಮಗಳು ನಿರಾಕಾರಿಯಾಗಿದ್ದೇವೆಂದರೆ ಅವಶ್ಯವಾಗಿ
ನಮ್ಮ ತಂದೆಯೂ ಸಹ ನಿರಾಕಾರನಾಗಿರುವರು.
ಓಂ ಶಾಂತಿ.
ಮಧುರಾತಿ ಮಧುರ ಆತ್ಮಿಕ ಮಕ್ಕಳು ನಾವು ಬೇಹದ್ದಿನ ತಂದೆಯ ಬಳಿ ಕುಳಿತಿದ್ದೇವೆಂದು ತಿಳಿಯುತ್ತೀರಿ
ಮತ್ತು ಇದೂ ಸಹ ನಿಮಗೆ ಗೊತ್ತಿದೆ. ಬೇಹದ್ದಿನ ತಂದೆಯು ಈ ರಥದಲ್ಲಿಯೇ ಬರುತ್ತಾರೆ. ಬಾಪ್ದಾದಾ ಎಂದು
ಹೇಳುತ್ತಾರೆಂದರೆ ಇದಂತೂ ಗೊತ್ತಿದೆ- ಶಿವತಂದೆಯು ಈ ರಥದಲ್ಲಿ ಬರುತ್ತಾರೆ. ತನ್ನ ಪರಿಚಯವನ್ನು
ಕೊಡುತ್ತಿದ್ದಾರೆ. ಮಕ್ಕಳೂ ಸಹ ತಿಳಿದುಕೊಂಡಿದ್ದೀರಿ- ಅವರು ನಮ್ಮ ತಂದೆಯಾಗಿದ್ದಾರೆ. ಆ ತಂದೆಯು
ಮತವನ್ನು ಕೊಡುತ್ತಾರೆ- ಆತ್ಮಿಕ ತಂದೆಯನ್ನು ನೆನಪು ಮಾಡಿ ಆಗ ಪಾಪಗಳು ಭಸ್ಮವಾಗುತ್ತದೆ. ಇದಕ್ಕೆ
ಯೋಗಾಗ್ನಿಯೆಂದು ಹೇಳಲಾಗುತ್ತದೆ. ಈಗ ನೀವು ತಂದೆಯನ್ನಂತೂ ಅರಿತುಕೊಂಡಿದ್ದೀರಿ. ಅಂದಮೇಲೆ ತಂದೆಯ
ಪರಿಚಯವನ್ನು ಅನ್ಯರಿಗೆ ಹೇಗೆ ಕೊಡುವುದೆಂದು ಹೇಳಲು ಸಾಧ್ಯವೇ? ನಿಮಗೂ ಸಹ ಬೇಹದ್ದಿನ ತಂದೆಯ
ಪರಿಚಯವಿದೆಯೆಂದ ಮೇಲೆ ಅನ್ಯರಿಗೂ ಸಹ ಕೊಡಬಹುದು. ಹೇಗೆ ಪರಿಚಯವನ್ನು ಕೊಡುವುದೆಂಬ ಪ್ರಶ್ನೆಯೇ
ಬರಲು ಸಾಧ್ಯವಿಲ್ಲ. ಹೇಗೆ ನೀವು ತಂದೆಯನ್ನರಿತುಕೊಂಡಿದ್ದೀರಿ. ಹಾಗೆಯೇ ನೀವಾತ್ಮಗಳ ತಂದೆಯು
ಒಬ್ಬರೇ ಆಗಿದ್ದಾರೆ ಅನ್ನುವುದನ್ನು ಸಹ ಅನ್ಯರಿಗೆ ತಿಳಿಸಬಹುದು. ಇದರಲ್ಲಿ ತಬ್ಬಿಬ್ಬಾಗುವ
ಅವಶ್ಯಕತೆಯೇ ಇರುವುದಿಲ್ಲ. ಬಾಬಾ ನಿಮ್ಮ ಪರಿಚಯವನ್ನು ಕೊಡಲು ಕಷ್ಟವಾಗುತ್ತದೆ ಎಂದು ಕೆಲವರು
ಹೇಳುತ್ತಾರೆ. ಅರೆ! ತಂದೆಯ ಪರಿಚಯವನ್ನು ಕೊಡುವುದರಲ್ಲಿ ಕಷ್ಟದ ಮಾತೇ ಇಲ್ಲ. ಪ್ರಾಣಿಗಳೂ ಸಹ ನಾನು
ಇಂತಹವರ ಮಗುವಾಗಿದ್ದೇನೆಂದು ಸನ್ನೆಯಿಂದಲೇ ಅರಿತುಕೊಳ್ಳುತ್ತದೆ. ನಿಮಗೂ ಸಹ ಗೊತ್ತಿದೆ- ಅವರು
ನಾವಾತ್ಮಗಳ ತಂದೆಯಾಗಿದ್ದಾರೆ. ನಾನಾತ್ಮನು ಈಗ ಶರೀರದಲ್ಲಿ ಪ್ರವೇಶವಾಗಿದ್ದೇನೆ. ಹೇಗೆ ಆತ್ಮವು
ಅಕಾಲಮೂರ್ತಿಯಾಗಿದೆ ಎಂದು ತಂದೆಯು ತಿಳಿಸಿದ್ದಾರೆ. ಅಂದರೆ ಅದಕ್ಕೆ ಯಾವುದೇ ರೂಪವಿಲ್ಲ ಎಂದಲ್ಲ.
ಮಕ್ಕಳೂ ಸಹ ಇದನ್ನರಿತುಕೊಂಡಿದ್ದೀರಿ. ಇದು ಸಂಪೂರ್ಣ ಸರಳವಾದ ಮಾತಾಗಿದೆ. ಆತ್ಮಗಳ ತಂದೆಯು ಒಬ್ಬರೇ
ನಿರಾಕಾರನಾಗಿದ್ದಾರೆ. ನಾವೆಲ್ಲಾ ಆತ್ಮಗಳು ಪರಸ್ಪರ ಸಹೋದರರಾಗಿದ್ದೇವೆ, ತಂದೆಯ ಸಂತಾನರಾಗಿದ್ದೇವೆ.
ತಂದೆಯಿಂದ ನಮಗೆ ಆಸ್ತಿಯು ಸಿಗುತ್ತದೆ. ಇದೂ ಸಹ ಗೊತ್ತಿದೆ. ಈ ಪ್ರಪಂಚದಲ್ಲಿ ತಂದೆ ಮತ್ತು ಅವರ
ರಚನೆಯನ್ನು ಅರಿತುಕೊಳ್ಳದೇ ಇರುವಂತಹ ಮಕ್ಕಳು ಯಾರಲೂ ಇರುವುದಿಲ್ಲ. ನಮ್ಮ ತಂದೆಯ ಬಳಿ ಎಷ್ಟು
ಸಂಪತ್ತಿದೆ ಎಂಬುದೆಲ್ಲವೂ ತಿಳಿದಿರುತ್ತದೆ. ಇದು ಮತ್ತೆ ಆತ್ಮಗಳೂ ಮತ್ತು ಪರಮಾತ್ಮನ ಮೇಳವಾಗಿದೆ.
ಇದು ಕಲ್ಯಾಣಕಾರಿ ಮೇಳವಾಗಿದೆ. ತಂದೆಯು ಕಲ್ಯಾಣಕಾರಿಯಾಗಿದ್ದಾರೆ. ಬಹಳ ಕಲ್ಯಾಣ ಮಾಡುತ್ತಾರೆ.
ತಂದೆಯನ್ನು ಅರಿತುಕೊಳ್ಳುವುದರಿಂದಲೇ ತಿಳಿಯುತ್ತೀರಿ- ಬೇಹದ್ದಿನ ತಂದೆಯಿಂದ ನಮಗೆ ಬೇಹದ್ದಿನ
ಆಸ್ತಿಯು ಸಿಗುತ್ತದೆ. ಆ ಸನ್ಯಾಸಿ, ಗುರುಗಳ ಶಿಷ್ಯರಿಗೆ ತಮ್ಮ ಗುರುವಿನ ಆಸ್ತಿಯ ಬಗ್ಗೆ
ತಿಳಿದಿರುವುದೇ ಇಲ್ಲ. ನಮ್ಮ ಗುರುವಿನ ಬಳಿ ಎಷ್ಟು ಸಂಪತ್ತಿರುವುದೆಂದು ಕೆಲವರು ವಿರಳವಾಗಿ
ಅರಿತುಕೊಂಡಿರುತ್ತಾರೆ. ನಿಮ್ಮ ಬುದ್ಧಿಯಲ್ಲಂತೂ ಇದೆ. ಅವರು ಶಿವತಂದೆಯಾಗಿದ್ದಾರೆ. ಸಂಪತ್ತೆಲ್ಲವೂ
ತಂದೆಯ ಬಳಿಯಿರುತ್ತದೆ. ವಿಶ್ವದ ರಾಜ್ಯಭಾಗ್ಯ ಸ್ವರ್ಗವು ಬೇಹದ್ದಿನ ತಂದೆಯ ಬಳಿಯಿದೆಯೆಂದು
ಮಕ್ಕಳಿಗೂ ಗೊತ್ತಿದೆ. ಈ ಮಾತುಗಳು ನೀವು ಮಕ್ಕಳ ವಿನಃ ಮತ್ತ್ಯಾರ ಬುದ್ದಿಯಲ್ಲಿಯೂ ಇಲ್ಲ. ಲೌಕಿಕ
ತಂದೆಯ ಬಳಿ ಯಾವ ಆಸ್ತಿಯಿದೆ ಎಂಬುದನ್ನು ಅವರ ಮಕ್ಕಳೇ ಅರಿತುಕೊಂಡಿರುತ್ತಾರೆ. ಈಗ ನೀವು
ಹೇಳುತ್ತೀರಿ- ನಾವು ಜೀವಿಸಿದ್ದಂತೆಯೇ ಪಾರಲೌಕಿಕ ತಂದೆಯ ಮಕ್ಕಳಾಗಿದ್ದೇವೆ, ಅವರಿಂದ ಏನೂ
ಸಿಗುತ್ತದೆ ಎಂಬುದೂ ಸಹ ಗೊತ್ತಿದೆ. ನಾವು ಮೊದಲು ಶೂದ್ರಕುಲದವರಿದ್ದೆವು. ಈಗ ಬ್ರಾಹ್ಮಣ ಕುಲದಲ್ಲಿ
ಬಂದುಬಿಟ್ಟಿದ್ದೇವೆ. ಈ ಜ್ಞಾನವಿದೆ- ತಂದೆಯು ಈ ಬ್ರಹ್ಮಾರವರ ತನುವಿನಲ್ಲಿ ಬರುತ್ತಾರೆ. ಇವರಿಗೆ
ಪ್ರಜಾಪಿತ ಬ್ರಹ್ಮನೆಂದು ಹೇಳಲಾಗುತ್ತದೆ. ಶಿವನು ಎಲ್ಲಾ ಆತ್ಮಗಳ ತಂದೆಯಾಗಿದ್ದಾರೆ. ಈ ಪ್ರಜಾಪಿತ
ಬ್ರಹ್ಮಾರವರು ಗ್ರೇಟ್ ಗ್ರೇಟ್ ಗ್ರಾಂಡ್ ಫಾದರ್ ಎಂದು ಹೇಳುತ್ತಾರೆ. ಈಗ ನಾವು ಇವರ
ಮಕ್ಕಳಾಗಿದ್ದೇವೆ ಎಲ್ಲಿ ನೋಡಿದರಲ್ಲಿ ಪ್ರತ್ಯಕ್ಷವಾಗುತ್ತಾರೆ. ಅವರು
ತಿಳಿದು-ತಿಳಿಸಿಕೊಡುವವರಾಗಿದ್ದಾರೆ ಎಂದು ಶಿವತಂದೆಗೆ ಹೇಳುತ್ತಾರೆ. ಇದನ್ನೂ ಸಹ ನೀವೀಗ
ತಿಳಿದುಕೊಂಡಿದ್ದೀರಿ. ಅವರು ಹೇಗೆ ರಚನೆಯ ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ಕೊಡುತ್ತಾರೆ. ಅವರು
ಎಲ್ಲಾ ಆತ್ಮಗಳ ತಂದೆಯಾಗಿದ್ದಾರೆ. ಅವರಿಗೆ ನಾಮ-ರೂಪದಿಂದ ಭಿನ್ನವೆಂದು ಹೇಳುವುದು ಅಸತ್ಯವಾಗಿದೆ.
ಅವರ ನಾಮ-ರೂಪವು ನೆನಪಿದೆ. ರಾತ್ರಿಯನ್ನು ಆಚರಿಸುತ್ತಾರೆ. ಜಯಂತಿಯೂ ಮನುಷ್ಯರದಾಗುತ್ತದೆ.
ಶಿವತಂದೆಯದು ರಾತ್ರಿಯೆಂದು ಹೇಳುತ್ತಾರೆ. ರಾತ್ರಿಯೆಂದು ಯಾವುದಕ್ಕೆ ಹೇಳಲಾಗುತ್ತದೆ ಎಂಬುದನ್ನು
ಮಕ್ಕಳು ತಿಳಿದುಕೊಂಡಿದ್ದೀರಿ. ರಾತ್ರಿಯಲ್ಲಿ ಘೋರ ಅಂಧಕಾರವಾಗಿಬಿಡುತ್ತದೆ. ಅಜ್ಞಾನವು
ಅಂಧಕಾರಾಗಿದೆಯಲ್ಲವೆ. ಜ್ಞಾನಸೂರ್ಯ ಪ್ರಕಟ, ಅಜ್ಞಾನ ಅಂಧಕಾರವು ವಿನಾಶವೆಂದು ಈಗಲೂ ಹಾಡುತ್ತಾರೆ.
ಆದರೆ ಅರ್ಥವನ್ನು ತಿಳಿದುಕೊಂಡಿಲ್ಲ. ಸೂರ್ಯನು ಯಾರು, ಯಾವಾಗ ಪ್ರಕಟವಾದರು ಏನನ್ನೂ
ತಿಳಿದುಕೊಳ್ಳುವುದಿಲ್ಲ. ತಂದೆಯು ತಿಳಿಸುತ್ತಾರೆ- ಜ್ಞಾನಸೂರ್ಯನಿಗೆ ಜ್ಞಾನಸಾಗರನೆಂದೂ
ಹೇಳಲಾಗುತ್ತದೆ. ಬೇಹದ್ದಿನ ಜ್ಞಾನಸಾಗರನಾಗಿದ್ದಾರೆ. ಸನ್ಯಾಸಿ, ಗುರು-ಗೋಸಾಯಿ ಮೊದಲಾದವರು
ತಮ್ಮನ್ನು ಶಾಸ್ತ್ರಗಳ ಅಥಾರಿಟಿಯಾಗಿದ್ದೇವೆಂದು ತಿಳಿಯುತ್ತಾರೆ. ಅದೆಲ್ಲವೂ ಭಕ್ತಿಯಾಗಿದೆ. ಬಹಳ
ವೇದಶಾಸ್ತ್ರಗಳನ್ನು ಓದಿ ವಿದ್ವಾಂಸರಾಗುತ್ತಾರೆ. ಅಂದಾಗ ತಂದೆಯು ಆತ್ಮಿಕ ಮಕ್ಕಳಿಗೆ ಕುಳಿತು
ತಿಳಿಸಿಕೊಡುತ್ತಾರೆ. ಇದಕ್ಕೆ ಆತ್ಮರು ಮತ್ತು ಪರಮಾತ್ಮನ ಮೇಳವೆಂದು ಹೇಳಲಾಗುತ್ತದೆ. ನಿಮಗೂ ಸಹ
ತಿಳಿದಿದೆ- ತಂದೆಯು ಈ ರಥದಲ್ಲಿ ಬಂದಿದ್ದಾರೆ. ಈ ಮೇಳವನ್ನು ಮಿಲನವೆಂದು ಹೇಳುತ್ತಾರೆ. ಯಾವಾಗ
ನಾವು ಮನೆಗೆ ಹೋಗುತ್ತೇವೋ ಅದೂ ಸಹ ಮೇಳವಾಗಿದೆ. ಇಲ್ಲಿ ಸ್ವಯಂ ತಂದೆಯು ಕುಳಿತು ಓದಿಸುತ್ತಾರೆ.
ಅವರು ತಂದೆಯೂ ಆಗಿದ್ದಾರೆ, ಶಿಕ್ಷಕನೂ ಆಗಿದ್ದಾರೆ, ಇದೊಂದೇ ಮಾತನ್ನು ಬಹಳ ಚೆನ್ನಾಗಿ ಧಾರಣೆ ಮಾಡಿ
ಮರೆಯಬೇಡಿ. ತಂದೆಯೂ ನಿರಾಕಾರನಾಗಿದ್ದಾರೆ. ಅವರಿಗೆ ತನ್ನದೇ ಆದ ಶರೀರವಿಲ್ಲ. ಅಂದಮೇಲೆ ಅವಶ್ಯವಾಗಿ
ತೆಗೆದುಕೊಳ್ಳಬೇಕಾಗುತ್ತದೆ. ಆದ್ದರಿಂದ ಸ್ವಯಂ ತಂದೆಯೇ ತಿಳಿಸುತ್ತಾರೆ- ನಾನು ಪ್ರಕೃತಿಯ
ಆಧಾರವನ್ನು ತೆಗೆದುಕೊಳ್ಳುತ್ತೇನೆ. ಇಲ್ಲದಿದ್ದರೆ ಹೇಗೆ ಮಾತನಾಡಲಿ? ಶರೀರವಿಲ್ಲದೆ ಹೇಳಲು
ಸಾಧ್ಯವಿಲ್ಲ. ಆದ್ದರಿಂದ ತಂದೆಯು ಈ ತನುವಿನಲ್ಲಿ ಬರುತ್ತಾರೆ. ಇವರ ಹೆಸರನ್ನು ಬ್ರಹ್ಮಾ ಎಂದು
ಇಟ್ಟಿದ್ದಾರೆ. ನಾವೂ ಸಹ ಶೂದ್ರರಿಂದ ಬ್ರಾಹ್ಮಣರಾದವೆಂದರೆ ಹೆಸರು ಬದಲಾಗಲೇಬೇಕು. ನಿಮಗೂ ಸಹ
ಆದಿಯಲ್ಲಿ ಹೆಸರುಗಳನ್ನಿಟ್ಟಿದ್ದರು. ಆದರೆ ಅವರಲ್ಲಿಯೂ ನೋಡಿ, ಈಗ ಕೆಲವರು ಇಲ್ಲವೆ ಇಲ್ಲ.
ಆದ್ದರಿಂದಲೇ ಬ್ರಾಹ್ಮಣರ ಮಾಲೆಯು ತಯಾರಾಗುವುದಿಲ್ಲ. ಮೊದಲ ನಂಬರಿನ ಮಾಲೆಯ ಮಣಿ ಯಾರು?
ದಂಪತಿಗಳೆಂದು ಹೇಳುತ್ತಾರೆ. ಆದ್ದರಿಂದಲೇ ಸೂಕ್ಷ್ಮವತನದಲ್ಲಿಯೂ ಇಬ್ಬರ ಕಂಬೈಂಡ್ ಸ್ವರೂಪವನ್ನು
ತೋರಿಸುತ್ತಾರೆ. ನಾಲ್ಕು ಭುಜಗಳ ವಿಷ್ಣುವನ್ನು ತೋರಿಸಿದ್ದಾರೆ. ಅದರಲ್ಲಿ ಎರಡು ಭುಜ ಲಕ್ಷ್ಮಿಯದು,
ಇನ್ನೆರಡು ಭುಜ ನಾರಾಯಣನದಾಗಿದೆ.
ತಂದೆಯು ತಿಳಿಸುತ್ತಾರೆ-
ನಾನು ಅಗಸನಾಗಿದ್ದೇನೆ. ನಾನು ಯೋಗಬಲದಿಂದ ನೀವಾತ್ಮರನ್ನು ಶುದ್ಧ ಮಾಡುತ್ತೇನೆ. ಆದರೂ ಸಹ ಮತ್ತೆ
ನೀವು ವಿಕಾರದಲ್ಲಿ ಹೋಗಿ ತಮ್ಮ ಶೃಂಗಾರವನ್ನೇ ಕೆಡಿಸಿಕೊಳ್ಳುತ್ತೀರಿ. ತಂದೆಯು ಎಲ್ಲರನ್ನೂ ಶುದ್ಧ
ಮಾಡಲು ಬರುತ್ತಾರೆ. ಬಂದು ಮಕ್ಕಳಿಗೆ ಕಲಿಸುತ್ತಾರೆಂದರೆ ಅವಶ್ಯವಾಗಿ ಕಲಿಸುವವರೂ ಇರಬೇಕಲ್ಲವೆ.
ಪತಿತ-ಪಾವನ ಬಂದು ನಮ್ಮನ್ನು ಪಾವನ ಮಾಡಿ ಎಂದು ಕರೆಯುತ್ತಾರೆ. ವಸ್ತ್ರಗಳೂ ಸಹ ಮೈಲಿಗೆಯಾದಾಗ
ಅದನ್ನು ಒಗೆದು ಶುದ್ಧ ಮಾಡಲಾಗುತ್ತದೆ. ನೀವೂ ಸಹ ಅವರನ್ನು ಪತಿತ-ಪಾವನ ತಂದೆಯೇ ಬಂದು ಪಾವನ ಮಾಡಿ
ಎಂದು ಕರೆಯುತ್ತೀರಿ. ಆತ್ಮವು ಪಾವನವಾದರೆ ಶರೀರವು ಪಾವನವಾದದ್ದೇ ಸಿಗುವುದು ಅಂದಾಗ ಮೂಲಮಾತಾಗಿದೆ-
ತಂದೆಯ ಪರಿಚಯ ಕೊಡುವುದು, ಇದರಲ್ಲಿ ಪ್ರಶ್ನೆಯನ್ನು ಕೇಳಲು ಸಾಧ್ಯವಿಲ್ಲ. ಏಕೆಂದರೆ ನಿಮಗೂ ಸಹ
ತಂದೆಯು ಪರಿಚಯವನ್ನು ಕೊಟ್ಟಿದ್ದಾರೆ. ಹಾಗಾಗಿ ನೀವುತಂದೆಯ ಬಳಿ ಬಂದಿದ್ದೀರಲ್ಲವೆ. ತಂದೆಯು
ಎಲ್ಲಿದ್ದಾರೆ? ಈ ರಥದಲ್ಲಿದ್ದಾರೆ. ಇದು ಅಕಾಲ ಸಿಂಹಾಸನವಾಗಿದೆ. ನೀವಾತ್ಮಗಳೂ ಸಹ
ಅಕಾಲಮೂರ್ತಿಯಾಗಿದ್ದೀರಿ. ಇವೆಲ್ಲವೂ (ಶರೀರಗಳು) ನಿಮ್ಮ ಸಿಂಹಾಸನಗಳಾಗಿವೆ. ಯಾವುದರಲ್ಲಿ
ನೀವೆಲ್ಲರೂ ವಿರಾಜಮಾನರಾಗಿದ್ದೀರಿ. ಅಲ್ಲಿ ತೋರಿಸಿರುವ ಅಕಾಲ ಸಿಂಹಾಸನವಂತೂ ಕಾಣಿಸುವಂತಹದ್ದು,
ಹಾಗೆಯೇ ನಿಮಗೆ ಗೊತ್ತಿದೆ. ನಾನು ಅಕಾಲಮೂರ್ತಿ ಅರ್ಥಾತ್ ನಿರಾಕಾರನಾಗಿದ್ದೇನೆ. ನನಗೆ
ಸಾಕಾರರೂಪವಿಲ್ಲ. ನಾನಾತ್ಮ ಅವಿನಾಶಿಯಾಗಿದ್ದೇನೆ ಎಂದೂ ವಿನಾಶವಾಗಲು ಸಾಧ್ಯವಿಲ್ಲ. ಒಂದು
ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳುತ್ತೇನೆ. ನಾನಾತ್ಮನ ಪಾತ್ರವು ಅವಿನಾಶಿಯಾಗಿ
ನೋಂದಾವಣೆಯಾಗಿದೆ. ಇಂದಿಗೆ 5000 ವರ್ಷಗಳ ಹಿಂದೆಯೂ ಸಹ ನಮ್ಮ ಪಾತ್ರವು ಹೀಗೆಯೇ
ನೋಂದಾವಣೆಯಾಗಿತ್ತು, 1-1-1 ಸಂವತ್ಸರದಿಂದ ನಾವಿಲ್ಲಿ ಪಾತ್ರವನ್ನಭಿನಯಿಸಲು ಮನೆಯಿಂದ ಬರುತ್ತೇವೆ.
ಇದು 5000 ವರ್ಷಗಳ ಚಕ್ರವಾಗಿದೆ. ಇದಕ್ಕೆ ಮನುಷ್ಯರು ಲಕ್ಷಾಂತರ ವರ್ಷಗಳೆಂದು ಹೇಳುತ್ತಾರೆ.
ಆದ್ದರಿಂದ ಕೆಲವು ವರ್ಷಗಳು ವಿಚಾರದಲ್ಲಿ ಬರುವುದಿಲ್ಲ. ಅಂದಾಗ ನಾವು ತಂದೆಯ ಪರಿಚಯವನ್ನು
ಅನ್ಯರಿಗೆ ಹೇಗೆ ಕೊಡುವುದೆಂದು ಪ್ರಶ್ನಿಸಲು ಸಾಧ್ಯವಿಲ್ಲ. ಮಕ್ಕಳು ಇಂತಿಂತಹ ಪ್ರಶ್ನೆಗಳನ್ನು
ಕೇಳಿದಾಗ ಆಶ್ಚರ್ಯವೆನಿಸುತ್ತದೆ. ಅರೆ! ನೀವು ತಂದೆಯ ಮಕ್ಕಳಾಗಿದ್ದೀರಿ ಅಂದಮೇಲೆ ತಂದೆಯ
ಪರಿಚಯವನ್ನು ಕೊಡಲು ಏಕೆ ಸಾಧ್ಯವಿಲ್ಲ! ನಾವೆಲ್ಲರೂ ಆತ್ಮರಾಗಿದ್ದೇವೆ. ಅವರು ನಮ್ಮ
ತಂದೆಯಾಗಿದ್ದಾರೆ. ಸರ್ವರ ಸದ್ಗತಿ ಮಾಡುತ್ತಾರೆ. ಯಾವಾಗ ಸದ್ಗತಿ ಮಾಡುತ್ತಾರೆಂಬುದೂ ಸಹ ಈಗ ನಿಮಗೆ
ತಿಳಿದಿದೆ. ಕಲ್ಪ-ಕಲ್ಪವೂ ಕಲ್ಪದ ಸಂಗಮಯುಗದಲ್ಲಿ ಬಂದು ಸರ್ವರಪ್ರತಿ ಸದ್ಗತಿ ಮಾಡುತ್ತಾರೆ. ಇನ್ನೂ
40 ಸಾವಿರ ವರ್ಷಗಳಿದೆಯೆಂದು ಮನುಷ್ಯರು ತಿಳಿಯುತ್ತಾರೆ ಮತ್ತು ಮೊದಲೇ ನಾಮ-ರೂಪದಿಂದ ಭಿನ್ನ ಎಂದು
ಹೇಳಿಬಿಡುತ್ತಾರೆ. ಈಗ ನಾಮ-ರೂಪದಿಂದ ಭಿನ್ನವಾದ ವಸ್ತು ಯಾವುದೂ ಇರುವುದಿಲ್ಲ. ಕಲ್ಲು-ಮುಳ್ಳಿಗೂ
ಸಹ ಹೆಸರಿದೆಯಲ್ಲವೆ. ಆದ್ದರಿಂದ ತಂದೆಯು ತಿಳಿಸುತ್ತಾರೆ- ಮಧುರಾತಿ ಮಧುರ ಮಕ್ಕಳೇ, ನೀವಿಲ್ಲಿ
ಬೇಹದ್ದಿನ ತಂದೆಯ ಬಳಿ ಬಂದಿದ್ದೀರಿ. ತಂದೆಗೂ ಗೊತ್ತಿದೆ, ಅನೇಕ ಮಕ್ಕಳಿದ್ದಾರೆ. ಮಕ್ಕಳಿಗ ಹದ್ದು
ಮತ್ತು ಬೇಹದ್ದಿನಿಂದಲೂ ಮೇಲೆ ಹೋಗಬೇಕಾಗಿದೆ. ಎಲ್ಲಾ ಮಕ್ಕಳನ್ನೂ ನೋಡುತ್ತೇನೆ ನಮಗೆ ಗೊತ್ತಿದೆ-
ಇವರೆಲ್ಲರನ್ನೂ ಕರೆದುಕೊಂಡು ಹೋಗುವುದಕ್ಕಾಗಿ ಬಂದಿದ್ದೇನೆ. ಸತ್ಯಯುಗದಲ್ಲಂತೂ ಕೆಲವರೇ ಇರುತ್ತಾರೆ.
ಎಷ್ಟು ಸ್ಪಷ್ಟವಾಗಿದೆ ಆದ್ದರಿಂದಲೇ ಚಿತ್ರಗಳ ಬಗ್ಗೆ ತಿಳಿಸಲಾಗುತ್ತದೆ. ಜ್ಞಾನವು ಬಹಳ ಸಹಜವಾಗಿದೆ.
ಆದರೆ ನೆನಪಿನ ಯಾತ್ರೆಯಲ್ಲಿಯೇ ಸಮಯ ಹಿಡಿಸುತ್ತದೆ. ಇಂತಹ ತಂದೆಯನ್ನಂತೂ ಎಂದಿಗೂ ಮರೆಯಬಾರದು.
ತಂದೆಯೂ ಸಹ ತಿಳಿಸುತ್ತಾರೆ- ನನ್ನೊಬ್ಬನನ್ನು ನೆನಪು ಮಾಡಿ ಆಗ ಪಾವನರಾಗಿಬಿಡುತ್ತೀರಿ. ನಾನು
ಪತಿತರಿಂದ ಪಾವನರನ್ನಾಗಿ ಮಾಡುವುದಕ್ಕಾಗಿಯೇ ಬರುತ್ತೇನೆ. ನೀವು ಅಕಾಲಮೂರ್ತಿ ಆತ್ಮಗಳೆಲ್ಲರೂ
ತಮ್ಮ-ತಮ್ಮ ಸಿಂಹಾಸನದಲ್ಲಿ ವಿರಾಜಮಾನರಾಗಿದ್ದೀರಿ. ತಂದೆಯೂ ಸಹ ಈ ಸಿಂಹಾಸನವನ್ನು ಲೋನ್ ಆಗಿ
ಪಡೆದಿದ್ದಾರೆ. ಈ ಭಾಗ್ಯಶಾಲಿ ರಥದಲ್ಲಿ ತಂದೆಯು ಪ್ರವೇಶ ಮಾಡುತ್ತಾರೆ. ಪರಮಾತ್ಮನಿಗೆ
ನಾಮ-ರೂಪವಿಲ್ಲವೆಂದು ಕೆಲವರು ಹೇಳುತ್ತಾರೆ. ಆದರೆ ಇದಂತೂ ಸಾಧ್ಯವೇ ಇಲ್ಲ. ಅವರನ್ನು ಎಷ್ಟೊಂದು
ಕರೆಯುತ್ತಾರೆ. ಮಹಿಮೆ ಮಾಡುತ್ತಾರೆಂದರೆ ಅವಶ್ಯವಾಗಿ ಅವರ ಯಾವುದೋ ರೂಪವಿದೆಯಲ್ಲವೆ.
ತಮೋಪ್ರಧಾನರಾಗಿರುವ ಕಾರಣ ಏನನ್ನೂ ತಿಳಿದುಕೊಳ್ಳುವುದಿಲ್ಲ. ತಂದೆಯು ತಿಳಿಸಿಕೊಡುತ್ತಾರೆ-
ಮಧುರಾತಿ ಮಧುರ ಮಕ್ಕಳೇ, ಇಷ್ಟು 84 ಲಕ್ಷ ಯೋನಿಗಳಂತೂ ಇರುವುದೇ ಇಲ್ಲ. ಇರುವುದೇ 84 ಜನ್ಮಗಳು,
ಪುನರ್ಜನ್ಮವಂತೂ ಎಲ್ಲರಿಗೂ ಇದೆ. ಬ್ರಹ್ಮತತ್ವದಲ್ಲಿ ಹೋಗಿ ಲೀನವಾಗುವುದಾಗಲಿ, ಮೋಕ್ಷವನ್ನು
ಪಡೆಯುವುದಾಗಲಿ ಇಲ್ಲ. ಇದಂತೂ ಮಾಡಿ-ಮಾಡಲ್ಪಟ್ಟಂತಹ ನಾಟಕವಾಗಿದೆ. ಅದರಲ್ಲಿ ಒಬ್ಬರೂ ಸಹ ಹೆಚ್ಚು
ಕಡಿಮೆಯಿರಲು ಸಾಧ್ಯವಿಲ್ಲ. ಈ ಅನಾದಿ-ಅವಿನಾಶಿ ನಾಟಕದಿಂದಲೇ ಮತ್ತೆ ಚಿಕ್ಕ-ಚಿಕ್ಕ ನಾಟಕಗಳನ್ನು
ಅವರು ರಚಿಸುತ್ತಾರೆ. ಅವು ವಿನಾಶಿಯಾಗಿದೆ. ಈಗ ನೀವು ಮಕ್ಕಳು ಬೇಹದ್ದಿನಲ್ಲಿ ನಿಂತಿದ್ದೀರಿ. ನಾವು
ಹೇಗೆ 84 ಜನ್ಮಗಳನ್ನು ತೆಗೆದುಕೊಂಡೆವೆಂಬ ಜ್ಞಾನವು ನೀವು ಮಕ್ಕಳಿಗೆ ಸಿಕ್ಕಿದೆ. ತಂದೆಯು
ತಿಳಿಸಿದ್ದಾರೆ, ಮೊದಲು ಯಾರಿಗೂ ತಿಳಿದಿರಲಿಲ್ಲ. ನಮಗೂ ಗೊತ್ತಿಲ್ಲವೆಂದು ಋಷಿ-ಮುನಿಗಳು
ಹೇಳುತ್ತಿದ್ದರು. ತಂದೆಯು ಈ ಹಳೆಯ ಪ್ರಪಂಚವನ್ನು ಪರಿವರ್ತನೆ ಮಾಡಲು ಸಂಗಮಯುಗದಲ್ಲಿಯೇ ಬರುತ್ತಾರೆ.
ಬ್ರಹ್ಮಾರವರ ಮೂಲಕ ಪುನಃ ಹೊಸ ಪ್ರಪಂಚದ ಸ್ಥಾಪನೆ ಮಾಡುತ್ತಾರೆ. ಮನುಷ್ಯರು ಲಕ್ಷಾಂತರ ವರ್ಷಗಳೆಂದು
ಹೇಳುತ್ತಾರೆ. ಆದರೆ ಲಕ್ಷಾಂತರ ವರ್ಷಗಳ ಹೆಸರು ನೆನಪಿಗೂ ಬರಲು ಸಾಧ್ಯವಿಲ್ಲ. ಮಹಾಪ್ರಳಯವೂ ಸಹ
ಆಗುವುದಿಲ್ಲ. ತಂದೆಯು ರಾಜಯೋಗವನ್ನು ಕಲಿಸುತ್ತಾರೆ. ಇದರಿಂದ ನೀವು ರಾಜ್ಯಭಾಗ್ಯವನ್ನು
ಪಡೆಯುತ್ತೀರಿ. ಇದರಲ್ಲಿ ಯಾವುದೇ ಸಂಶಯದ ಮಾತಿಲ್ಲ. ನೀವು ಮಕ್ಕಳಿಗೆ ಗೊತ್ತಿದೆ. ಮೊಟ್ಟಮೊದಲಿಗೆ
ಎಲ್ಲರಿಗಿಂತ ಪ್ರಿಯ ತಂದೆಯಾಗಿದ್ದಾರೆ. ಅವರ ನಂತರ ಶ್ರೀಕೃಷ್ಣನು ಪ್ರಿಯನಾಗಿದ್ದಾರೆ. ನೀವು
ತಿಳಿದುಕೊಂಡಿದ್ದೀರಿ. ಕೃಷ್ಣನು ಸ್ವರ್ಗದ ಮೊದಲ ರಾಜಕುಮಾರನಾಗಿದ್ದನು, ಕೃಷ್ಣನು ನಂತರ 84
ಜನ್ಮಗಳನ್ನು ತೆಗೆದುಕೊಳ್ಳುತ್ತಾನೆ. ನಂತರ ಅವರದೇ ಅಂತಿಮ ಜನ್ಮದಲ್ಲಿ ನಾನು ಪ್ರವೇಶ ಮಾಡುತ್ತೇನೆ.
ನೀವು ಈಗ ಪತಿತರಿಂದ ಪಾವನರಾಗಬೇಕಾಗಿದೆ. ಪತಿತ-ಪಾವನನು ತಂದೆಯೇ ಆಗಿದ್ದಾರೆ. ನೀರಿನ ನದಿಗಳು
ಶುದ್ಧವಾಗಿರುತ್ತದೆ. ಕೊಳಕೇನೂ ಇರುವುದಿಲ್ಲ. ಇಲ್ಲಂತೂ ಎಷ್ಟೊಂದು ಕೊಳಕು ಬೀಳುತ್ತಿರುತ್ತದೆ. ಈ
ಬಾಬಾರವರು ನೋಡಿದ್ದಾರೆ. ಆದರೆ ಆ ಸಮಯದಲ್ಲಂತೂ ಜ್ಞಾನವಿರುವುದಿಲ್ಲ. ನೀರು ಹೇಗೆ ಪಾವನ ಮಾಡಲು
ಸಾಧ್ಯವೆಂದು ಈಗ ಆಶ್ಚರ್ಯವೆನಿಸುತ್ತದೆ!!
ಅಂದಾಗ ತಂದೆಯು
ತಿಳಿಸುತ್ತಾರೆ- ಮಧುರ ಮಕ್ಕಳೇ, ತಂದೆಯನ್ನು ಹೇಗೆ ನೆನಪು ಮಾಡುವುದೆಂದು ಎಂದಿಗೂ ತಬ್ಬಿಬ್ಬಾಗಬೇಡಿ.
ಅರೆ! ನೀವು ತಂದೆಯನ್ನೇ ನೆನಪು ಮಾಡಲು ಸಾಧ್ಯವಿಲ್ಲವೆ! ಅವರು ಕುಖಸಂತಾರಾಗಿದ್ದಾರೆ. ನೀವು ದತ್ತು
ಮಕ್ಕಳಾಗಿದ್ದೀರಿ. ದತ್ತು ಮಕ್ಕಳಿಗೆ ಯಾವ ತಂದೆಯಿಂದ ಆಸ್ತಿಯು ಸಿಗುವುದೋ ಅವರನ್ನು
ಮರೆಯಲಾಗುತ್ತದೆಯೇ? ಬೇಹದ್ದಿನ ತಂದೆಯಿಂದ ಬೇಹದ್ದಿನ ಆಸ್ತಿಯು ಸಿಗುತ್ತದೆಯೆಂದರೆ ಅವರನ್ನು
ಮರೆಯಬೇಕೆ? ಲೌಕಿಕ ಮಕ್ಕಳು ತಂದೆಯನ್ನು ಮರೆಯುತ್ತಾರೆಯೇ! ಇಲ್ಲಿ ಮಾಯೆಯ ಯುದ್ಧವು ನಡೆಯುತ್ತದೆ.
ಇಡೀ ಪ್ರಪಂಚವೇ ಕರ್ಮಕ್ಷೇತ್ರವಾಗಿದೆ. ಆತ್ಮವು ಶರೀರದಲ್ಲಿ ಪ್ರವೇಶ ಮಾಡಿ ಇಲ್ಲಿ ಕರ್ಮ ಮಾಡುತ್ತದೆ.
ತಂದೆಯು ಕರ್ಮ-ಅಕರ್ಮ-ವಿಕರ್ಮದ ರಹಸ್ಯವನ್ನು ತಿಳಿಸುತ್ತಾರೆ. ಇಲ್ಲಿ ರಾವಣರಾಜ್ಯದಲ್ಲಿ ಕರ್ಮಗಳು
ವಿಕರ್ಮಗಳಾಗುತ್ತವೆ. ಅಲ್ಲಿ ರಾವಣರಾಜ್ಯವೇ ಇಲ್ಲವಾದ್ದರಿಂದ ಕರ್ಮವು ಅಕರ್ಮವಾಗುತ್ತದೆ. ಯಾವುದೇ
ವಿಕರ್ಮವಾಗುವುದಿಲ್ಲ. ಇದು ಬಹಳ ಸಹಜವಾದ ಮಾತಾಗಿದೆ. ಇಲ್ಲಿ ರಾವಣರಾಜ್ಯದಲ್ಲಿ ಕರ್ಮಗಳು
ವಿಕರ್ಮಗಳಾಗುತ್ತವೆ. ಆದ್ದರಿಂದ ವಿಕರ್ಮಗಳ ಶಿಕ್ಷೆಗಳನ್ನು ಅನುಭವಿಸಬೇಕಾಗುತ್ತದೆ. ರಾವಣ
ಅನಾದಿಯೆಂದು ಹೇಳಬಾರದು. ಅರ್ಧಕಲ್ಪ ರಾವಣರಾಜ್ಯ, ಅರ್ಧಕಲ್ಪ ರಾಮರಾಜ್ಯ. ನೀವು ದೇವತೆಗಳಾಗಿದ್ದಾರೆ
ನಿಮ್ಮ ಕರ್ಮವು ಅಕರ್ಮವಾಗುತ್ತಿತ್ತು. ಈಗ ಈ ಜ್ಞಾನವಿದೆ- ಮಕ್ಕಳಾಗಿದ್ದೀರಿ. ಅಂದಮೇಲೆ
ವಿದ್ಯೆಯನ್ನೂ ಓದಬೇಕಾಗಿದೆ. ಓದುವಾಗ ಮತ್ತ್ಯಾವುದೇ ಉದ್ಯೋಗ-ವ್ಯವಹಾರ ಮೊದಲಾದುದರ ವಿಚಾರವೂ
ಬರಬಾರದು. ಆದರೆ ಗೃಹಸ್ಥ ವ್ಯವಹಾರದಲ್ಲಿರುತ್ತಾ ಉದ್ಯೋಗ-ವ್ಯವಹಾರಗಳನ್ನೂ ಮಾಡುತ್ತಾ ಕಮಲಪುಷ್ಪ
ಸಮಾನರಾಗಿರಿ ಎಂದು ತಂದೆಯು ತಿಳಿಸುತ್ತಾರೆ. ನೀವು ಇಂತಹ ದೇವತೆಗಳಾಗುವವರಿದ್ದೀರಿ. ಈ
ಅಲಂಕಾರಗಳನ್ನು ವಿಷ್ಣುವಿಗೆ ತೋರಿಸಿದ್ದಾರೆ. ಏಕೆಂದರೆ ಈಗ ಇವು ನಿಮಗೆ ಶೋಭಿಸುವುದಿಲ್ಲ.
ವಿಷ್ಣುವಿಗೆ ಶೋಭಿಸುತ್ತದೆ. ಅದೇ ವಿಷ್ಣುವಿನ ಎರಡು ರೂಪ ಲಕ್ಷ್ಮೀ-ನಾರಾಯಣರಾಗುವವರಿದ್ದೀರಿ.
ಅವರದು ಅಹಿಂಸಾ ಪರಮೋದೇವಿ-ದೇವತಾಧರ್ಮವಾಗಿದೆ. ಯಾವುದೇ ವಿಕಾರದ ಕಾಮದ ಕತ್ತಿಯಿರುವುದಿಲ್ಲ. ಹಾಗೂ
ಜಗಳ-ಕಲಹವೂ ಆಗುವುದಿಲ್ಲ. ನೀವು ಡಬಲ್ ಅಹಿಂಸಕರಾಗುತ್ತೀರಿ. ಸತ್ಯಯುಗದ ಮಾಲೀಕರಾಗಿದ್ದೀರಿ. ಹೆಸರೇ
ಆಗಿದೆ- ಸ್ವರ್ಣೀಮಯುಗ, ಸ್ವರ್ಣೀಮ ಪ್ರಪಂಚ. ಆತ್ಮ ಮತ್ತು ಶರೀರ ಎರಡೂ ಕಂಚನವಾಗಿಬಿಡುತ್ತದೆ.
ಕಂಚನಕಾಯವನ್ನಾಗಿ ಯಾರು ಮಾಡುತ್ತಾರೆ? ತಂದೆ. ಈಗಂತೂ ಕಬ್ಬಿಣದ ಸಮಾನವಾಗಿದೆಯಲ್ಲವೆ. ಇಲ್ಲಿ
ಸತ್ಯಯುಗವಿತ್ತು. ಈಗ ಕಳೆದುಹೋಯಿತೆಂದು ನೀವು ಹೇಳುತ್ತೀರಿ. ನಿನ್ನೆಯ ದಿನ ಸತ್ಯಯುಗವಿತ್ತಲ್ಲವೆ.
ನೀವು ರಾಜ್ಯ ಮಾಡುತ್ತಿದ್ದೀರಿ. ನೀವು ಜ್ಞಾನಪೂರ್ಣರಾಗುತ್ತಾ ಇದ್ದೀರಿ ಆದರೆ ಎಲ್ಲರೂ ಒಂದೇರೀತಿ
ಆಗುವುದಿಲ್ಲ. ಒಳ್ಳೆಯದು-
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳ ಪ್ರತಿ ಮಾತಾಪಿತ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ
ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ನಾನಾತ್ಮ
ಅಕಾಲ ಸಿಂಹಾಸನಾಧೀಶನಾಗಿದ್ದೇನೆ- ಈ ಸ್ಮೃತಿಯಲ್ಲಿರಬೇಕಾಗಿದೆ ಹದ್ದು ಮತ್ತು ಬೇಹದ್ದಿನಿಂದ ದೂರ
ಹೋಗಬೇಕಾಗಿದೆ. ಆದ್ದರಿಂದ ಹದ್ದಿನಲ್ಲಿ ಬುದ್ಧಿಯು ಸಿಲುಕಿಹಾಕಿಕೊಳ್ಳಬಾರದು.
2. ಬೇಹದ್ದಿನ ತಂದೆಯಿಂದ
ಬೇಹದ್ದಿನ ಆಸ್ತಿಯು ಸಿಗುತ್ತಿದೆ ಎಂಬ ನಶೆಯಲ್ಲಿರಬೇಕಾಗಿದೆ. ಕರ್ಮ-ಅಕರ್ಮ-ವಿಕರ್ಮದ ಗತಿಯನ್ನು
ತಿಳಿದು ವಿಕರ್ಮಗಳಿಂದ ಮುಕ್ತರಾಗಬೇಕಾಗಿದೆ. ವಿದ್ಯೆಯ ಸಮಯದಲ್ಲಿ ವ್ಯಾಪಾರ ಮುಂತಾದವುಗಳಿಂದ
ಬುದ್ಧಿಯನ್ನು ತೆಗೆಯಬೇಕಾಗಿದೆ.
ವರದಾನ:
ಶ್ರೀಮತದ
ಲಗಾಮನ್ನು ಬಿಗಿ ಮಾಡಿ ಮನಸ್ಸನ್ನು ವಶ ಮಾಡಿಕೊಳ್ಳುವಂತಹ ಬಾಲಕರಿಂದ ಮಾಲೀಕ ಭವ.
ಪ್ರಪಂಚದವರು ಹೇಳುವರು -
ಮನಸ್ಸು ಕುದುರೆಯಾಗಿದೆ, ಅದು ಬಹಳ ವೇಗವಾಗಿ ಓಡುತ್ತದೆ ಆದರೆ ತಮ್ಮ ಮನಸ್ಸು ಆ ಕಡೆ-ಈ ಕಡೆ ಓಡಲು
ಸಾಧ್ಯವಿಲ್ಲ ಏಕೆಂದರೆ ಶ್ರೀಮತದ ಲಗಾಮು ಶಕ್ತಿಶಾಲಿಯಾಗಿ ಇದೆ. ಯಾವಾಗ ಮನಸ್ಸು-ಬುದ್ಧಿಯು ಸೈಡಸೀನ್
ಅನ್ನು ನೋಡುವುದರಲ್ಲಿ ಪ್ರಾರಂಭಿಸುತ್ತದೆ, ಆಗ ಲಗಾಮು ಸಡಿಲವಾಗುವುದರಿಂದ ಮನಸ್ಸು ಚಂಚಲವಾಗುತ್ತದೆ.
ಆದ್ದರಿಂದ ಯಾವ ಯಾವುದೇ ಮಾತಾಗಲಿ, ಮನಸ್ಸು ಚಂಚಲವೇ ಆಗಲಿ, ಆಗಲೂ ಶ್ರೀಮತದ ಲಗಾಮನ್ನು ಬಿಗಿ
ಪಡಿಸುತ್ತೀರೆಂದರೆ, ಗುರಿಯಲ್ಲಿ ತಲುಪಿ ಬಿಡುತ್ತೀರಿ. ಬಾಲಕನಿಂದ ಮಾಲೀಕನಾಗಿದ್ದೇನೆ ಎನ್ನುವ
ಸ್ಮೃತಿಯಿಂದ ಅಧಿಕಾರಿಯಾಗಿ ಮನಸ್ಸನ್ನು ತನ್ನ ವಶದಲ್ಲಿಟ್ಟುಕೊಳ್ಳಿರಿ.
ಸ್ಲೋಗನ್:
ಸದಾ
ನಿಶ್ಚಯವಿರಲಿ - ಏನಾಗುತ್ತಿದೆ ಅದೂ ಒಳ್ಳೆಯದಿದೆ ಮತ್ತು ಏನಾಗುವುದಿದೆ ಅದು ಇನ್ನೂ ಒಳ್ಳೆಯದಿದೆ
ಅಂದಮೇಲೆ ಅಚಲ-ಅಡೋಲರಾಗಿರುತ್ತೀರಿ.