21.09.25 Avyakt Bapdada
Kannada
Murli 02.02.2007 Om Shanti Madhuban
"ಪರಮಾತ್ಮ
ಪ್ರಾಪ್ತಿಗಳಿಂದ ಸಂಪನ್ನ ಆತ್ಮನ ಚಿಹ್ನೆ - ಹೋಲಿಯೆಸ್ಟ್, ಹೈಯೆಸ್ಟ್ ಮತ್ತು ರಿಚೆಸ್ಟ್"
ಇಂದು ವಿಶ್ವ ಪರಿವರ್ತಕ
ಬಾಪ್ದಾದಾ ತಮ್ಮ ಜೊತೆಗಾರ ಮಕ್ಕಳೊಂದಿಗೆ ಮಿಲನ ಮಾಡಲು ಬಂದಿದ್ದೇವೆ. ಪ್ರತಿಯೋಬ್ಬ ಮಗುವಿನ
ಮಸ್ತಕದಲ್ಲಿ ಮೂರು ಪರಮಾತ್ಮನ ವಿಶೇಷ ಪ್ರಾಪ್ತಿಗಳನ್ನು ನೋಡುತ್ತಿದ್ದೇವೆ. ಒಂದಾಗಿದೆ -
ಹೋಲಿಯೆಸ್ಟ್, 2. ಹೈಯೆಸ್ಟ್ ಮತ್ತು 3. ರಿಚೆಸ್ಟ್. ಈ ಜ್ಞಾನದ ತಳಹದಿಯೇ ಹೋಲಿ ಅರ್ಥಾತ್
ಪವಿತ್ರರಾಗುವುದಾಗಿದೆ ಅಂದಾಗ ಪ್ರತಿಯೋಬ್ಬ ಮಗುವೂ ಪವಿತ್ರವಾಗಿದೆ. ಪವಿತ್ರತೆಯು ಕೇವಲ
ಬ್ರಹ್ಮಚರ್ಯವಲ್ಲ ಆದರೆ ಮನಸ್ಸು-ವಾಣಿ-ಕರ್ಮ, ಸಂಬಂಧ-ಸಂಪರ್ಕದಲ್ಲಿ ಪವಿತ್ರತೆ. ತಾವು ನೋಡಿ, ತಾವು
ಪರಮಾತ್ಮ ಬ್ರಾಹ್ಮಣ ಆತ್ಮರು ಆದಿ-ಮಧ್ಯ-ಅಂತ್ಯ ಮೂರೂ ಕಾಲಗಳಲ್ಲಿ ಪವಿತ್ರರಾಗಿರುತ್ತೀರಿ. ಮೊಟ್ಟ
ಮೊದಲು ಆತ್ಮರು ಪರಮಧಾಮದಲ್ಲಿರುವಾಗ ಅಲ್ಲಿಯೂ ಪವಿತ್ರ (ಹೋಲಿಯೆಸ್ಟ್) ರಾಗಿರುತ್ತೀರಿ ನಂತರ
ಆದಿಯಲ್ಲಿ ಬಂದಾಗ ಆದಿ ಕಾಲದಲ್ಲಿಯೂ ದೇವತಾ ರೂಪದಲ್ಲಿ ಪವಿತ್ರ ಆತ್ಮರಾಗಿದ್ದಿರಿ. ಹೋಲಿಯೆಸ್ಟ್
ಅರ್ಥಾತ್ ಪವಿತ್ರ ಆತ್ಮನ ವಿಶೇಷತೆಯೇನೆಂದರೆ ಪ್ರವೃತ್ತಿಯಲ್ಲಿದ್ದರೂ ಸಂಪೂರ್ಣ ಪವಿತ್ರನಾಗುವುದು.
ಅನ್ಯರೂ ಪವಿತ್ರರಾಗುತ್ತಾರೆ ಆದರೆ ತಮ್ಮ ಪವಿತ್ರತೆಯ ವಿಶೇಷತೆಯಾಗಿದೆ – ಸ್ವಪ್ನ ಮಾತ್ರದಲ್ಲಿಯೂ
ಅಪವಿತ್ರತೆಯು ಮನಸ್ಸು-ಬುದ್ಧಿಯಲ್ಲಿ ಸ್ಪರ್ಷಿಸಬಾರದು. ಸತ್ಯಯುಗದಲ್ಲಿ ಆತ್ಮವೂ ಪವಿತ್ರವಾಗುತ್ತದೆ
ಮತ್ತು ತಮ್ಮ ಶರೀರವೂ ಪವಿತ್ರವಾಗುತ್ತದೆ. ಆತ್ಮ ಹಾಗೂ ಶರೀರ ಎರಡರ ಪವಿತ್ರತೆ, ಯಾವುದು ದೇವಾತ್ಮ
ರೂಪದಲ್ಲಿರುತ್ತದೆಯೋ ಅದು ಶ್ರೇಷ್ಠ ಪವಿತ್ರತೆಯಾಗಿದೆ. ಹೇಗೆ ಹೋಲಿಯೆಸ್ಟ್ ಆಗುತ್ತೀರೋ ಅಷ್ಟೇ
ಹೈಯೆಸ್ಟ್ (ಶ್ರೇಷ್ಠ) ಕೂಡ ಆಗುತ್ತೀರಿ. ಎಲ್ಲರಿಗಿಂತ ಶ್ರೇಷ್ಠಾತಿ ಶ್ರೇಷ್ಠ ಬ್ರಾಹ್ಮಣ ಆತ್ಮರು
ಮತ್ತು ಶ್ರೇಷ್ಠಾತಿ ಶ್ರೇಷ್ಠ ತಂದೆಯ ಮಕ್ಕಳಾಗಿದ್ದೀರಿ. ಆದಿಯಲ್ಲಿ ಪರಮಧಾಮದಲ್ಲಿಯೂ ಹೈಯೆಸ್ಟ್
ಅರ್ಥಾತ್ ತಂದೆಯ ಜೊತೆ-ಜೊತೆಯಿರುತ್ತೀರಿ. ಮಧ್ಯದಲ್ಲಿಯೂ ಪೂಜ್ಯಾತ್ಮರಾಗುತ್ತೀರಿ. ನಿಮ್ಮದು ಎಷ್ಟು
ಸುಂದರ ಮಂದಿರಗಳಾಗುತ್ತವೆ ಹಾಗೂ ಎಷ್ಟೊಂದು ವಿಧಿಪೂರ್ವಕ ಪೂಜೆ ನಡೆಯುತ್ತದೆ. ತಾವು ದೇವತೆಗಳ
ಮಂದಿರಗಳಲ್ಲಿ ಎಷ್ಟು ವಿಧಿಪೂರ್ವಕವಾಗಿ ಪೂಜೆಯು ನಡೆಯುತ್ತದೆಯೋ ಅಷ್ಟು ಅನ್ಯರ ಮಂದಿರಗಳಂತೂ
ಆಗುತ್ತವೆ, ಆದರೆ ವಿಧಿಪೂರ್ವಕ ಪೂಜೆಯು ತಮ್ಮ ದೇವತಾ ರೂಪದ್ದೇ ನಡೆಯುತ್ತದೆ ಅಂದಾಗ ಹೋಲಿಯೆಸ್ಟ್,
ಹೈಯೆಸ್ಟ್ ಆಗಿದ್ದೀರಿ. ಜೊತೆಯಲ್ಲಿ ರಿಚೆಸ್ಟ್ ಆಗಿದ್ದೀರಿ. ಪ್ರಪಂಚದಲ್ಲಿ ರಿಚೆಸ್ಟ್ ಇನ್ ದಿ
ವರ್ಲ್ಡ್ ಎಂದು ಹೇಳುತ್ತಾರೆ ಆದರೆ ತಾವು ಶ್ರೇಷ್ಠಾತ್ಮರು ರಿಚೆಸ್ಟ್ ಇನ್ ಕಲ್ಪ್ ಅರ್ಥಾತ್ ಇಡೀ
ಕಲ್ಪದಲ್ಲಿಯೇ ರಿಚೆಸ್ಟ್ ಆಗಿದ್ದೀರಿ. ತಮ್ಮ ಖಜಾನೆಗಳು ಸ್ಮೃತಿಗೆ ಬರುತ್ತವೆಯೇ? ಎಷ್ಟು
ಖಜಾನೆಗಳಿಗೆ ಮಾಲೀಕರಾಗಿದ್ದೀರಿ! ಅವಿನಾಶಿ ಖಜಾನೆಗಳು ಯಾವುದನ್ನು ಇದೊಂದು ಜನ್ಮದಲ್ಲಿ ಪ್ರಾಪ್ತಿ
ಮಾಡಿಕೊಳ್ಳುತ್ತೀರೋ ಅವು ಅನೇಕ ಜನ್ಮಗಳವರೆಗೆ ನಡೆಯುತ್ತದೆ, ಮತ್ತ್ಯಾರದೇ ಖಜಾನೆಯು ಅನೇಕ
ಜನ್ಮಗಳವರೆಗೆ ನಡೆಯುವುದಿಲ್ಲ ಆದರೆ ತಮ್ಮ ಖಜಾನೆಗಳು ಆಧ್ಯಾತ್ಮಿಕವಾಗಿವೆ. ಶಕ್ತಿಗಳ ಖಜಾನೆ,
ಜ್ಞಾನದ ಖಜಾನೆ, ಗುಣಗಳ ಖಜಾನೆ, ಶ್ರೇಷ್ಠ ಸಂಕಲ್ಪದ ಖಜಾನೆ ಹಾಗೂ ವರ್ತಮಾನ ಸಮಯದ ಖಜಾನೆ, ಈ ಸರ್ವ
ಖಜಾನೆಗಳು ಜನ್ಮ-ಜನ್ಮದವರೆಗೂ ನಡೆಯುತ್ತದೆ. ಒಂದು ಜನ್ಮದಲ್ಲಿ ಪ್ರಾಪ್ತಿಯಾಗಿರುವ ಖಜಾನೆಗಳು ಜೊತೆ
ನಡೆಯುತ್ತವೆ ಏಕೆಂದರೆ ಸರ್ವ ಖಜಾನೆಗಳ ದಾತ ಪರಮಾತ್ಮ ತಂದೆಯ ಮೂಲಕ ಪ್ರಾಪ್ತಿಯಾಗುತ್ತವೆ ಅಂದಮೇಲೆ
ನಮ್ಮ ಖಜಾನೆಗಳು ಅವಿನಾಶಿಯಾಗಿದೆ ಎಂಬ ನಶೆಯಿದೆಯೇ?
ಈ ಆಧ್ಯಾತ್ಮಿಕ
ಖಜಾನೆಗಳನ್ನು ಪ್ರಾಪ್ತಿ ಮಾಡಿಕೊಳ್ಳಲು ಸಹಜಯೋಗಿಗಳಾಗಿದ್ದೀರಿ. ನೆನಪಿನ ಶಕ್ತಿಯಿಂದ ಖಜಾನೆಯನ್ನು
ಜಮಾ ಮಾಡಿಕೊಳ್ಳುತ್ತೀರಿ. ಈ ಸಮಯದಲ್ಲಿಯೂ ಈ ಸರ್ವ ಖಜಾನೆಗಳಿಂದ ಸಂಪನ್ನ ನಿಶ್ಚಿಂತ
ಚಕ್ರವರ್ತಿಗಳಾಗಿದ್ದೀರಿ, ಯಾವುದಾದರೂ ಚಿಂತೆಯಿದೆಯೇ, ಚಿಂತೆಯಿದೆಯೇ? ಏಕೆಂದರೆ ಇವು ಇಂತಹ
ಖಜಾನೆಗಳಾಗಿವೆ ಯಾವುದನ್ನು ಕಳ್ಳರು ಕದಿಯಲೂ ಸಾಧ್ಯವಿಲ್ಲ, ರಾಜನು ತಿನ್ನಲು ಸಾಧ್ಯವಿಲ್ಲ, ನೀರು
ಮುಳುಗಿಸಲೂ ಸಾಧ್ಯವಿಲ್ಲ ಆದ್ದರಿಂದ ನಿಶ್ಚಿಂತ ಚಕ್ರವರ್ತಿಗಳಾಗಿದ್ದೀರಿ ಅಂದಮೇಲೆ ಈ ಖಜಾನೆಗಳು
ಸದಾ ಸ್ಮೃತಿಯಲ್ಲಿರುತ್ತವೆಯಲ್ಲವೆ! ಮತ್ತು ನೆನಪೂ ಏಕೆ ಸಹಜವಾಗಿದೆ? ಏಕೆಂದರೆ ಎಲ್ಲದಕ್ಕಿಂತ
ಹೆಚ್ಚು ನೆನಪಿನ ಆಧಾರವಾಗಿರುತ್ತದೆ - ಒಂದು ಸಂಬಂಧ ಮತ್ತು ಇನ್ನೊಂದು ಪ್ರಾಪ್ತಿ. ಎಷ್ಟು ಪ್ರಿಯ
ಸಂಬಂಧವಾಗಿರುತ್ತದೆಯೋ ಅಷ್ಟು ನೆನಪು ಸ್ವತಃ ಬರುತ್ತದೆ ಏಕೆಂದರೆ ಸಂಬಂಧದಲ್ಲಿ ಸ್ನೇಹವಿರುತ್ತದೆ
ಮತ್ತು ಎಲ್ಲಿ ಸ್ನೇಹವಿರುತ್ತದೆಯೋ ಆ ಸ್ನೇಹಿಯನ್ನು ನೆನಪು ಮಾಡುವುದು ಕಷ್ಟವಾಗುವುದಿಲ್ಲ ಆದರೆ
ಮರೆಯುವುದು ಕಷ್ಟವಾಗುತ್ತದೆ ಅಂದಾಗ ತಂದೆಯು ಸರ್ವ ಸಂಬಂಧದ ಆಧಾರ ಮಾಡಿ ಬಿಟ್ಟಿದ್ದಾರೆ. ಎಲ್ಲರೂ
ತಮ್ಮನ್ನು ಸಹಜಯೋಗಿಯ ಅನುಭವ ಮಾಡುತ್ತೀರಾ ಅಥವಾ ಪರಿಶ್ರಮ ಯೋಗಿಗಳಾಗಿದ್ದೀರಾ? ಸಹಜವಾಗಿದೆಯೇ?
ಅಥವಾ ಕೆಲವೊಮ್ಮೆ ಸಹಜ, ಕೆಲವೊಮ್ಮೆ ಕಷ್ಟವೇ? ಯಾವಾಗ ತಂದೆಯನ್ನು ಸಂಬಂಧ ಮತ್ತು ಸ್ನೇಹದಿಂದ ನೆನಪು
ಮಾಡುತ್ತೀರೋ ಆಗ ನೆನಪು ಕಷ್ಟವೆನಿಸುವುದಿಲ್ಲ ಮತ್ತು ಪ್ರಾಪ್ತಿಗಳನ್ನು ನೆನಪು ಮಾಡಿರಿ. ಸರ್ವ
ಪ್ರಾಪ್ತಿಗಳ ದಾತನು ತಮಗೆ ಸರ್ವ ಪ್ರಾಪ್ತಿಗಳನ್ನು ಮಾಡಿಸಿ ಬಿಟ್ಟರು. ಅಂದಮೇಲೆ ತಮ್ಮನ್ನು ಸರ್ವ
ಖಜಾನೆಗಳಿಂದ ಸಂಪನ್ನ ಅನುಭವ ಮಾಡುತ್ತೀರಾ? ಖಜಾನೆಗಳನ್ನು ಜಮಾ ಮಾಡಿಕೊಳ್ಳುವ ಸಹಜ ವಿಧಿಯನ್ನೂ ಸಹ
ಬಾಪ್ದಾದಾ ತಿಳಿಸಿದೆವು - ಏನೆಲ್ಲಾ ಅವಿನಾಶಿ ಖಜಾನೆಗಳಿವೆಯೋ ಅವೆಲ್ಲಾ ಖಜಾನೆಗಳ ಪ್ರಾಪ್ತಿ
ಮಾಡಿಕೊಳ್ಳುವ ವಿಧಿಯಾಗಿದೆ – ‘ಬಿಂದು’. ಹೇಗೆ ಸ್ಥೂಲ ಖಜಾನೆಗಳಲ್ಲಿಯೂ ಬಿಂದುವನ್ನಿಡುತ್ತಾ
ಹೋದಂತೆ ಅದು ಹೆಚ್ಚಾಗುತ್ತಾ ಹೋಗುತ್ತದೆಯಲ್ಲವೆ. ಹಾಗೆಯೇ ಅವಿನಾಶಿ ಖಜಾನೆಗಳನ್ನು ಜಮಾ
ಮಾಡಿಕೊಳ್ಳುವ ವಿಧಿಯಾಗಿದೆ - ಬಿಂದುವನ್ನಿಡುವುದು. ಮೂರು ಬಿಂದುಗಳಿವೆ - ಒಂದು ನಾನು ಆತ್ಮ ಬಿಂದು,
ತಂದೆಯೂ ಬಿಂದು ಮತ್ತು ಡ್ರಾಮಾದಲ್ಲಿ ಏನೆಲ್ಲವೂ ಕಳೆದು ಹೋಗುವುದೋ ಅದಕ್ಕೂ ಬಿಂದು. ಅಂದಾಗ
ಬಿಂದುವನ್ನಿಡಲು ಬರುತ್ತದೆಯೇ? ಎಲ್ಲದಕ್ಕಿಂತ ಹೆಚ್ಚು ಸಹಜ ಚಿಹ್ನೆ ಯಾವುದಾಗಿದೆ? ಬಿಂದುವನ್ನು
ಇಡುವುದೇ ಅಲ್ಲವೆ! ಅಂದಾಗ ಆತ್ಮ ಬಿಂದುವಾಗಿದ್ದೇನೆ, ತಂದೆಯೂ ಬಿಂದುವಾಗಿದ್ದಾರೆ - ಈ
ಸ್ಮೃತಿಯಿಂದ ಸ್ವತಹವಾಗಿ ಖಜಾನೆಗಳು ಜಮಾ ಆಗಿ ಬಿಡುತ್ತವೆ. ಬಿಂದುವನ್ನು ಸೆಕೆಂಡಿನಲ್ಲಿ ನೆನಪು
ಮಾಡಿಕೊಳ್ಳುವುದರಿಂದ ಎಷ್ಟೊಂದು ಖುಷಿಯಾಗುತ್ತದೆ! ಈ ಸರ್ವ ಖಜಾನೆಗಳು ತಮ್ಮ ಬ್ರಾಹ್ಮಣ ಜೀವನದ
ಅಧಿಕಾರವಾಗಿದೆ ಏಕೆಂದರೆ ಮಕ್ಕಳಾಗುವುದು ಅರ್ಥಾತ್ ಅಧಿಕಾರಿಯಾಗುವುದು ಮತ್ತು ವಿಶೇಷವಾಗಿ ಮೂರೂ
ಸಂಬಂಧದ ಅಧಿಕಾರವು ಪ್ರಾಪ್ತಿಯಾಗುತ್ತದೆ ಅರ್ಥಾತ್ ಪರಮಾತ್ಮನನ್ನು ತಂದೆಯನ್ನಾಗಿ
ಮಾಡಿಕೊಂಡಿದ್ದೀರಿ, ಶಿಕ್ಷಕನನ್ನಾಗಿಯೂ ಮಾಡಿಕೊಂಡಿದ್ದೀರಿ ಮತ್ತು ಸದ್ಗುರುವನ್ನಾಗಿಯೂ
ಮಾಡಿಕೊಂಡಿದ್ದೀರಿ. ಈ ಮೂರು ಸಂಬಂಧಗಳಿಂದ ಪಾಲನೆ, ವಿದ್ಯೆಯಿಂದ ಆದಾಯದ ಮೂಲ ಮತ್ತು ಸದ್ಗುರುವಿನ
ಮೂಲಕ ವರದಾನವು ಪ್ರಾಪ್ತಿಯಾಗುತ್ತದೆ. ಎಷ್ಟು ಸಹಜ ವರದಾನವು ಸಿಗುತ್ತದೆ! ಏಕೆಂದರೆ ತಂದೆಯ
ವರದಾನವನ್ನು ಪ್ರಾಪ್ತಿ ಮಾಡಿಕೊಳ್ಳುವುದು ಮಗುವಿನ ಜನ್ಮಸಿದ್ಧ ಅಧಿಕಾರವಾಗಿದೆ.
ಬಾಪ್ದಾದಾ ಪ್ರತಿಯೊಬ್ಬ
ಮಗುವಿನ ಜಮಾದ ಖಾತೆಯನ್ನು ಪರಿಶೀಲನೆ ಮಾಡುತ್ತೇವೆ. ತಾವೆಲ್ಲರೂ ತಮ್ಮ ಪ್ರತೀ ಸಮಯದ ಜಮಾದ
ಖಾತೆಯನ್ನು ಪರಿಶೀಲನೆ ಮಾಡಿಕೊಳ್ಳಿ. ಜಮಾ ಆಯಿತೇ, ಆಗಲಿಲ್ಲವೇ, ಅದರ ವಿಧಿಯೇನೆಂದರೆ ಏನೆಲ್ಲಾ
ಕರ್ಮ ಮಾಡಿದಿರೋ ಆ ಕರ್ಮದಲ್ಲಿ ಸ್ವಯಂ ಸಂತುಷ್ಟ ಹಾಗೂ ಯಾರ ಜೊತೆ ಕರ್ಮ ಮಾಡಿದಿರೋ ಅವರೂ
ಸಂತುಷ್ಟರಾಗಬೇಕು. ಒಂದುವೇಳೆ ಇಬ್ಬರಲ್ಲಿಯೂ ಸಂತುಷ್ಟತೆಯಿದೆಯೆಂದರೆ ಕರ್ಮದ ಖಾತೆಯು ಜಮಾ
ಆಯಿತೆಂದು ತಿಳಿದುಕೊಳ್ಳಿರಿ. ಒಂದುವೇಳೆ ಸ್ವಯಂನಲ್ಲಿ ಹಾಗೂ ಯಾರೊಂದಿಗೆ ಸಂಬಂಧವಿದೆಯೋ ಅವರಲ್ಲಿ
ಸಂತುಷ್ಟತೆ ಬರಲಿಲ್ಲವೆಂದರೆ ಅದು ಜಮಾ ಆಗಲಿಲ್ಲವೆಂದರ್ಥ.
ಬಾಪ್ದಾದಾ ಎಲ್ಲಾ
ಮಕ್ಕಳಿಗೆ ಸಮಯದ ಸೂಚನೆಯನ್ನೂ ನೀಡುತ್ತಿರುತ್ತೇವೆ. ಈ ವರ್ತಮಾನ ಸಂಗಮದ ಸಮಯವು ಇಡೀ ಕಲ್ಪದಲ್ಲಿಯೇ
ಸರ್ವ ಶ್ರೇಷ್ಠ ಸಮಯವಾಗಿದೆ ಏಕೆಂದರೆ ಈ ಸಂಗಮವೇ ಶ್ರೇಷ್ಠ ಕರ್ಮಗಳ ಬೀಜವನ್ನು ಬಿತ್ತುವ ಸಮಯವಾಗಿದೆ.
ಪ್ರತ್ಯಕ್ಷ ಫಲವನ್ನು ಪ್ರಾಪ್ತಿ ಮಾಡಿಕೊಳ್ಳುವ ಸಮಯವಾಗಿದೆ, ಈ ಸಂಗಮದ ಸಮಯದಲ್ಲಿ ಒಂದೊಂದು ಕ್ಷಣವೂ
ಸರ್ವ ಶ್ರೇಷ್ಠವಾಗಿದೆ. ಎಲ್ಲರೂ ಒಂದು ಸೆಕೆಂಡಿನಲ್ಲಿ ಅಶರೀರಿ ಸ್ಥಿತಿಯಲ್ಲಿ ಸ್ಥಿತರಾಗಬಲ್ಲಿರಾ?
ಬಾಪ್ದಾದಾ ಸಹಜ ವಿಧಿಯನ್ನು ತಿಳಿಸಿದ್ದೇವೆ - ನಿರಂತರ ನೆನಪಿಗಾಗಿ ಒಂದು ವಿಧಿ ಮಾಡಿಕೊಳ್ಳಿ - ಇಡೀ
ದಿನದಲ್ಲಿ ಎರಡು ಶಬ್ಧಗಳನ್ನಂತೂ ಎಲ್ಲರೂ ಕೇಳುತ್ತೀರಿ ಮತ್ತು ಅನೇಕ ಬಾರಿ ಹೇಳುತ್ತೀರಿ, ಆ ಎರಡು
ಶಬ್ಧಗಳಾಗಿವೆ - `ನಾನು' ಮತ್ತು `ನನ್ನದು' ಆದ್ದರಿಂದ ಯಾವಾಗ ನಾನು ಶಬ್ಧವನ್ನು ಹೇಳುತ್ತೀರೋ ಆಗ
ತಂದೆಯು ಪರಿಚಯ ಕೊಟ್ಟಿದ್ದಾರೆ - ನಾನು ಆತ್ಮನಾಗಿದ್ದೇನೆ. ನಾನು ಶಬ್ಧವನ್ನು ಹೇಳುವಾಗ ಇದನ್ನು
ನೆನಪು ಮಾಡಿಕೊಳ್ಳಿರಿ - ನಾನು ಆತ್ಮನಾಗಿದ್ದೇನೆ. ಕೇವಲ ನಾನು ಎನ್ನಬೇಡಿ, ನಾನು ಆತ್ಮನಾಗಿದ್ದೇನೆ
ಎಂದುಕೊಳ್ಳಿ ಏಕೆಂದರೆ ತಾವು ತಿಳಿದುಕೊಂಡಿದ್ದೀರಲ್ಲವೆ - ನಾನು ಶ್ರೇಷ್ಠ ಆತ್ಮನಾಗಿದ್ದೇನೆ.
ಪರಮಾತ್ಮನ ಪಾಲನೆಯಲ್ಲಿರುವ ಆತ್ಮನಾಗಿದ್ದೇನೆ. ಯಾವಾಗ ನನ್ನದು ಎಂಬ ಶಬ್ಧವನ್ನು ಹೇಳುತ್ತೀರೋ ಆಗ
ನನ್ನವರು ಯಾರು? ನನ್ನ ಬಾಬಾ ಅರ್ಥಾತ್ ತಂದೆ ಪರಮಾತ್ಮ. ಆದ್ದರಿಂದ ಯಾವಾಗಲೆಲ್ಲಾ ನಾನು ಮತ್ತು
ನನ್ನದು ಶಬ್ಧವನ್ನು ಹೇಳುತ್ತೀರೋ ಆ ಸಮಯದಲ್ಲಿ ಇದನ್ನು ಅಡಿಷನ್ ಮಾಡಿಕೊಳ್ಳಿರಿ - ನಾನು ಆತ್ಮ
ಮತ್ತು ನನ್ನ ಬಾಬಾ. ತಂದೆಯಲ್ಲಿ ಎಷ್ಟು ನನ್ನತನವನ್ನು ತರುತ್ತೀರೋ ಅಷ್ಟು ನೆನಪು ಸಹಜವಾಗುತ್ತಾ
ಹೋಗುವುದು ಏಕೆಂದರೆ ನನ್ನದು ಎಂದಿಗೂ ಮರೆಯುವುದಿಲ್ಲ. ಇಡೀ ದಿನದಲ್ಲಿ ನೋಡಿರಿ, ನನ್ನದೇ ನೆನಪು
ಬರುತ್ತದೆ ಆದ್ದರಿಂದ ಈ ವಿಧಿಯಿಂದ ಸಹಜ ನಿರಂತರ ಯೋಗಿಗಳಾಗುತ್ತೀರಿ. ಬಾಪ್ದಾದಾ ಪ್ರತಿಯೋಬ್ಬ
ಮಗುವನ್ನೂ ಸ್ವಮಾನದ ಆಸನದಲ್ಲಿ ಕೂರಿಸಿದ್ದೇವೆ. ಒಂದುವೇಳೆ ಸ್ವಮಾನದ ಪಟ್ಟಿಯನ್ನು ಸ್ಮೃತಿಯಲ್ಲಿ
ತಂದುಕೊಂಡರೆ ಎಷ್ಟು ದೊಡ್ಡದಾಗಿದೆ! ಏಕೆಂದರೆ ಸ್ವಮಾನದಲ್ಲಿ ಸ್ಥಿತರಾಗಿದ್ದರೆ ದೇಹಾಭಿಮಾನವು ಬರಲು
ಸಾಧ್ಯವಿಲ್ಲ. ಇಲ್ಲವೆ ದೇಹಾಭಿಮಾನದಲ್ಲಿರುವುದು, ಇಲ್ಲವೆ ಸ್ವಮಾನವಿರುವುದು. ಸ್ವ-ಮಾನದ ಅರ್ಥವೇ
ಆಗಿದೆ- ಸ್ವ ಅರ್ಥಾತ್ ಆತ್ಮನ ಶ್ರೇಷ್ಠ ಸ್ಮೃತಿಯ ಸ್ಥಾನ. ಅಂದಾಗ ಎಲ್ಲರೂ ತಮ್ಮ ಸ್ವಮಾನದಲ್ಲಿ
ಸ್ಥಿತರಾಗಿದ್ದೀರಾ? ಎಷ್ಟು ಸ್ವಮಾನದಲ್ಲಿ ಸ್ಥಿತರಾಗಿರುತ್ತೀರೋ ಅಷ್ಟು ಅನ್ಯರಿಗೂ ಸನ್ಮಾನ
ಕೊಡುವುದು ಸ್ವತಃ ಆಗಿ ಬಿಡುತ್ತದೆ ಅಂದಮೇಲೆ ಸ್ವಮಾನದಲ್ಲಿ ಸ್ಥಿತರಾಗಿರುವುದು ಎಷ್ಟೊಂದು
ಸಹಜವಾಗಿದೆ!
ಅಂದಾಗ ಎಲ್ಲರೂ
ಖುಷಿಯಾಗಿರುತ್ತೀರಾ? ಏಕೆಂದರೆ ಖುಷಿಯಾಗಿರುವವರು ಅನ್ಯರನ್ನು ಖುಷಿ ಪಡಿಸುತ್ತಾರೆ. ಬಾಪ್ದಾದಾ ಸದಾ
ಹೇಳುವುದೇನೆಂದರೆ - ಇಡೀ ದಿನದಲ್ಲಿ ಖುಷಿಯನ್ನೆಂದೂ ಕಳೆದುಕೊಳ್ಳಬೇಡಿ- ಏಕೆ? ಖುಷಿಯು ಇಂತಹ
ವಸ್ತುವಾಗಿದೆ, ಕೇವಲ ಒಂದೇ ಖುಷಿಯಲ್ಲಿ ಆರೋಗ್ಯವೂ ಇದೆ, ಐಶ್ವರ್ಯವೂ ಇದೆ ಮತ್ತು ಸಂತೋಷವೂ ಇದೆ.
ಖುಷಿಯಿಲ್ಲದ ಜೀವನವು ನೀರಸವಾಗಿರುತ್ತದೆ. “ಖುಷಿಯಂತಹ ಯಾವುದೇ ಖಜಾನೆಯಿಲ್ಲ” ಎಂದು ಖುಷಿಗೆ
ಹೇಳಲಾಗುತ್ತದೆ. ಎಷ್ಟಾದರೂ ಖಜಾನೆಗಳಿರಲಿ ಆದರೆ ಖುಷಿಯಿಲ್ಲವೆಂದರೆ ಖಜಾನೆಗಳಿಂದಲೂ ಪ್ರಾಪ್ತಿ
ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಖುಷಿಯಂತಹ ಔಷಧಿಯಿಲ್ಲ ಎಂದು ಖುಷಿಗಾಗಿಯೇ ಹೇಳುತ್ತಾರೆ.
ಅಂದಾಗ ಐಶ್ವರ್ಯವೂ ಖುಷಿಯಾಗಿದೆ, ಆರೋಗ್ಯವೂ ಖುಷಿಯಾಗಿದೆ ಮತ್ತು ಹೆಸರೇ ಖುಷಿ ಎಂದಾಗ ಸಂತೋಷವಾಗಿ
ಇದ್ದೇ ಇರುತ್ತೀರಿ ಆದ್ದರಿಂದ ಖುಷಿಯಲ್ಲಿ ಮೂರು ವಸ್ತುಗಳೂ ಇವೆ ಮತ್ತು ತಂದೆಯು ಅವಿನಾಶಿ ಖುಷಿಯ
ಖಜಾನೆಯನ್ನು ನೀಡಿದ್ದೇವೆ. ತಂದೆಯ ಖಜಾನೆಯನ್ನು ಕಳೆದುಕೊಳ್ಳಬೇಡಿ ಅಂದಾಗ ಸದಾ ಖುಷಿಯಾಗಿರುತ್ತೀರಾ?
ಬಾಪ್ದಾದಾ ಹೋಮ್ವರ್ಕ್
ಕೊಟ್ಟೆವು, ಖುಷಿಯಾಗಿರಿ ಮತ್ತು ಖುಷಿಯನ್ನು ಹಂಚಿರಿ ಏಕೆಂದರೆ ಖುಷಿಯು ಇಂತಹ ವಸ್ತುವಾಗಿದೆ
ಅದನ್ನು ಎಷ್ಟು ಹಂಚುತ್ತೀರೋ ಅಷ್ಟು ವೃದ್ಧಿಯಾಗುತ್ತದೆ. ಅನುಭವ ಮಾಡಿ ನೋಡಿದ್ದೀರಾ! ಅನುಭವ
ಮಾಡಿದ್ದೀರಲ್ಲವೆ? ಒಂದುವೇಳೆ ಖುಷಿಯನ್ನು ಹಂಚುತ್ತೀರೆಂದರೆ ಮೊದಲು ತಮ್ಮ ಬಳಿ ಹೆಚ್ಚುತ್ತದೆ,
ಖುಷಿ ಪಡುವವರಿಗಿಂತ ಮೊದಲು ಸ್ವಯಂ ಖುಷಿಯಾಗುತ್ತೀರಿ. ಅಂದಾಗ ಎಲ್ಲರೂ ಹೋಮ್ವರ್ಕ್ ಮಾಡಿದ್ದೀರಾ?
ಮಾಡಿದ್ದೀರಾ? ಯಾರು ಮಾಡಿದ್ದೀರೋ ಅವರು ಕೈಯೆತ್ತಿರಿ. ಖುಷಿಯಾಗಿರಬೇಕು, ಯಾರು ಮಾಡಿದ್ದೀರಿ-
ಖುಷಿಯಾಗಿರಬೇಕು, ಕಾರಣವಲ್ಲ ನಿವಾರಣೆ ಮಾಡಬೇಕು, ಯಾರು ಸಮಾಧಾನ ಸ್ವರೂಪರಾಗಬೇಕು ಎನ್ನುವಿರೋ ಅವರು
ಕೈಯೆತ್ತಿರಿ. ಏನು ಮಾಡುವುದು, ಇದು ಆಗಿ ಹೋಯಿತು ಎಂದು ಈಗಂತೂ ಈ ರೀತಿ ಹೇಳುವುದಿಲ್ಲ ತಾನೆ.
ಬಾಪ್ದಾದಾರವರ ಬಳಿ ಕೆಲವು ಮಕ್ಕಳು ತಮ್ಮ ಫಲಿತಾಂಶವನ್ನೂ ಬರೆದಿದ್ದಾರೆ - ನಾನು ಎಷ್ಟು ಪರ್ಸೆಂಟ್
ಓ.ಕೆ. ಆಗಿದ್ದೆವು ಎಂದು. ಮತ್ತು ಲಕ್ಷ್ಯವನ್ನಿಟ್ಟುಕೊಂಡರೆ ಲಕ್ಷ್ಯದಿಂದ ಲಕ್ಷಣಗಳು ಸ್ವತಹವಾಗಿಯೇ
ಬರುತ್ತವೆ. ಒಳ್ಳೆಯದು.
ಡಬಲ್ ವಿದೇಶಿ ಸಹೋದರ
ಸಹೋದರಿಯರೊಂದಿಗೆ:-
ವಿದೇಶಿಯರಿಗೆ ತಮ್ಮ
ನಿಜವಾದ ವಿದೇಶವಂತೂ ಮರೆತು ಹೋಗುವುದಿಲ್ಲ ಅಲ್ಲವೆ! ವಾಸ್ತವದಲ್ಲಿ ತಾವು ಯಾವ ದೇಶದವರಾಗಿರುವಿರೋ
ಅದಂತೂ ನೆನಪಿರುತ್ತದೆಯಲ್ಲವೆ? ಆದ್ದರಿಂದ ಎಲ್ಲರೂ ತಮ್ಮನ್ನು ಡಬಲ್ ವಿದೇಶಿಯರೆಂದು ಹೇಳುತ್ತಾರೆ.
ಕೇವಲ ವಿದೇಶಿಯರಲ್ಲ, ಡಬಲ್ ವಿದೇಶಿಯರು. ಅಂದಾಗ ತಮಗೆ ತಮ್ಮ ಮಧುರ ಮನೆಯು ಎಂದಿಗೂ ಮರೆತು
ಹೋಗುವುದಿಲ್ಲ. ಅಂದಾಗ ಎಲ್ಲಿರುತ್ತೀರಿ? ಬಾಪ್ದಾದಾರವರ ಹೃದಯ ಸಿಂಹಾಸನಾಧಿಕಾರಿಗಳಾಗಿದ್ದೀರಲ್ಲವೆ.
ಬಾಪ್ದಾದಾ ಹೇಳುತ್ತೇವೆ- ಯಾವಾಗ ಯಾವುದೇ ಚಿಕ್ಕ-ಪುಟ್ಟ ಸಮಸ್ಯೆ ಬರಲಿ, ಸಮಸ್ಯೆಯಲ್ಲ ಆದರೆ ಅದು
ಪರೀಕ್ಷೆಯು ನಿಮ್ಮನ್ನು ಮುಂದುವರೆಸುವುದಕ್ಕಾಗಿ ಬರುತ್ತದೆ. ಅಂದಾಗ ಬಾಪ್ದಾದಾರವರ ಹೃದಯ
ಸಿಂಹಾಸನವಂತೂ ತಮ್ಮ ಅಧಿಕಾರವಾಗಿದೆ. ಹೃದಯ ಸಿಂಹಾಸನಕ್ಕೆ ಅಧಿಕಾರಿಗಳಾಗಿ ಬಿಡಿ ಆಗ ಸಮಸ್ಯೆಯು
ಆಟಿಕೆಯಾಗಿ ಬಿಡುವುದು. ಆಗ ಸಮಸ್ಯೆಗೆ ಗಾಬರಿಯಾಗುವುದಿಲ್ಲ, ಅದರೊಂದಿಗೆ ಆಟವಾಡುತ್ತೀರಿ. ಅದು
ಆಟಿಕೆಯಲ್ಲವೆ. ಎಲ್ಲರೂ ಹಾರುವ ಕಲೆಯವರಾಗಿದ್ದೀರಲ್ಲವೆ. ಹಾರುವ ಕಲೆಯಿದೆಯೇ? ಹಾರುವವರಾಗಿದ್ದೀರೋ
ಅಥವಾ ನಡೆಯುವವರಾಗಿದ್ದೀರೋ? ಯಾರು ಹಾರುವವರಾಗಿದ್ದೀರಿ, ಅವರು ಕೈಯೆತ್ತಿರಿ. ಅರ್ಧ-ಅರ್ಧ
ಕೈಯೆತ್ತುತ್ತಿದ್ದಾರೆ. ಹಾರುವವರಾಗಿದ್ದೀರಾ? ಒಳ್ಳೆಯದು - ಕೆಲಕೆಲವೊಮ್ಮೆ ಹಾರುವುದನ್ನು ಬಿಟ್ಟು
ಬಿಡುತ್ತೀರಾ? ನೀವು ನಡೆಯುತ್ತಿಲ್ಲ, ಹಾರುತ್ತಿದ್ದೀರಿ. ಕೆಲವರು ಬಾಪ್ದಾದಾರವರಿಗೆ ಹೇಳುತ್ತಾರೆ
- ಬಾಬಾ, ನಾವು ಬಹಳ ಚೆನ್ನಾಗಿ ನಡೆಯುತ್ತಿದ್ದೇವೆ ಎಂದು. ಅದಕ್ಕಾಗಿ ಬಾಪ್ದಾದಾ ಹೇಳುತ್ತೇವೆ-
ನಡೆಯುತ್ತಿದ್ದೀರೋ ಅಥವಾ ಹಾರುತ್ತಿದ್ದೀರೋ? ಈಗ ನಡೆಯುವ ಸಮಯವಲ್ಲ, ಹಾರುವ ಸಮಯವಾಗಿದೆ.
ಪ್ರತಿಯೊಬ್ಬರಿಗೂ ಉಮ್ಮಂಗ-ಉತ್ಸಾಹದ, ಸಾಹಸದ ರೆಕ್ಕೆಗಳಿವೆ ಅಂದಮೇಲೆ ರೆಕ್ಕೆಗಳಿಂದ ಹಾರಲಾಗುತ್ತದೆ,
ಆದ್ದರಿಂದ ಪ್ರತಿನಿತ್ಯ ಪರಿಶೀಲನೆ ಮಾಡಿಕೊಳ್ಳಿ- ಹಾರುವ ಕಲೆಯಲ್ಲಿ ಹಾರುತ್ತಿದ್ದೇವೆಯೇ?
ಒಳ್ಳೆಯದು - ಬಾಪ್ದಾದಾ ಫಲಿತಾಂಶದಲ್ಲಿ ನೋಡಿದ್ದೇವೆ - ವಿದೇಶದಲ್ಲಿಯೂ ಸೇವಾಕೇಂದ್ರಗಳು
ವೃದ್ಧಿಯಾಗುತ್ತಿದೆ ಮತ್ತು ವೃದ್ಧಿಯಾಗಲೇಬೇಕಾಗಿದೆ. ಹೇಗೆ ಡಬಲ್ ವಿದೇಶಿಯರಾಗಿದ್ದೀರಿ ಹಾಗೆಯೇ
ಡಬಲ್ಸೇವೆ ಅಂದರೆ ಮನಸ್ಸಾ ಹಾಗೂ ವಾಚಾ ಜೊತೆ ಜೊತೆ ಮಾಡುತ್ತಾ ನಡೆಯಿರಿ. ಮನಸ್ಸಾ ಶಕ್ತಿಯ ಮೂಲಕ
ಆತ್ಮಗಳ ಆತ್ಮಿಕ ವೃತ್ತಿಯನ್ನಾಗಿ ಮಾಡಿರಿ. ವಾಯುಮಂಡಲವನ್ನು ತಯಾರು ಮಾಡಿರಿ. ಈಗ ದುಃಖವು
ಹೆಚ್ಚುತ್ತಿರುವುದನ್ನು ನೋಡಿ ದಯೆ ಬರುತ್ತಿಲ್ಲವೇ? ತಮ್ಮ ಜಡ ಚಿತ್ರಗಳ ಮುಂದೆ ದಯೆ ತೋರಿಸಿ, ದಯೆ
ತೋರಿಸಿ ಎಂದು ಚೀರುತ್ತಾ ಇರುತ್ತಾರೆ. ಈಗ ದಯಾಳು, ಕೃಪಾಳು, ದಯಾ ಹೃದಯಿಗಳಾಗಿರಿ. ತಮ್ಮ ಮೇಲೂ ದಯೆ
ಮತ್ತು ಆತ್ಮರ ಮೇಲೂ ದಯೆ ತೋರಿಸಿ. ಒಳ್ಳೆಯದು - ಪ್ರತೀ ಸೀಜನ್ನಿನಲ್ಲಿ, ಪ್ರತೀ ಸರದಿಯಲ್ಲಿಯೂ
ಬಂದು ಬಿಡುತ್ತೀರಿ, ಇದು ಎಲ್ಲರಿಗೂ ಖುಷಿಯಾಗುತ್ತದೆ ಅಂದಮೇಲೆ ಹಾರುತ್ತಾ ಹೋಗಿ ಮತ್ತು
ಹಾರಿಸುತ್ತಾ ಹೋಗಿರಿ. ಒಳ್ಳೆಯದು - ಫಲಿತಾಂಶದಲ್ಲಿ ನೋಡಿದೆವು, ಈಗ ನಮ್ಮನ್ನು ಪರಿವರ್ತನೆ
ಮಾಡಿಕೊಳ್ಳುವುದರಲ್ಲಿಯೂ ತೀವ್ರವಾಗಿ ಹೋಗುತ್ತಿದ್ದೀರಿ ಆದ್ದರಿಂದ ಸ್ವಯಂನ ಪರಿವರ್ತನೆಯ ಗತಿಯು
ವಿಶ್ವ ಪರಿವರ್ತನೆಯ ಗತಿಯನ್ನೂ ಹೆಚ್ಚಿಸುತ್ತದೆ. ಒಳ್ಳೆಯದು.
ಯಾರು ಮೊದಲ ಬಾರಿ
ಬಂದಿದ್ದೀರೋ ಅವರು ಎದ್ದೇಳಿ:- ತಾವು ತಮ್ಮೆಲ್ಲರಿಗೆ ಬ್ರಾಹ್ಮಣ ಜನ್ಮದ ಶುಭಾಷಯಗಳು. ಒಳ್ಳೆಯದು -
ಮಿಠಾಯಿಯಂತೂ ಸಿಗುವುದು ಆದರೆ ಬಾಪ್ದಾದಾ ತಮಗೆ ದಿಲ್ಖುಷ್ ಮಿಠಾಯಿಯನ್ನು ತಿನ್ನಿಸುತ್ತೇವೆ. ಮೊದಲ
ಬಾರಿ ಮಧುಬನಕ್ಕೆ ಬಂದಿರುವ ಈ ದಿಲ್ಖುಷ್ ಮಿಠಾಯಿಯನ್ನು ಸದಾ ನೆನಪಿಟ್ಟುಕೊಳ್ಳಿರಿ. ಆ ಮಿಠಾಯಿಯಂತೂ
ಬಾಯಲ್ಲಿ ಇಟ್ಟುಕೊಳ್ಳುತ್ತಿದ್ದಂತೆಯೇ ಅದು ಮುಗಿದು ಹೋಗುವುದು ಆದರೆ ಈ ದಿಲ್ಖುಷ್ ಮಿಠಾಯಿಯು ಸದಾ
ಜೊತೆಯಿರುವುದು. ಭಲೆ ಬನ್ನಿರಿ, ಬಾಪ್ದಾದಾ ಮತ್ತು ಇಡೀ ಪರಿವಾರ ದೇಶ-ವಿದೇಶಗಳಲ್ಲಿ ತಮ್ಮ
ಸಹೋದರ-ಸಹೋದರಿಯರು ನಿಮ್ಮನ್ನು ನೋಡಿ ಎಲ್ಲರೂ ಖುಷಿ ಪಡುತ್ತಿದ್ದಾರೆ. ಎಲ್ಲರೂ ನೋಡುತ್ತಿದ್ದಾರೆ.
ಅಮೇರಿಕಾದವರೂ ನೋಡುತ್ತಿದ್ದಾರೆ, ಆಫ್ರಿಕಾದವರೂ ನೋಡುತ್ತಿದ್ದಾರೆ, ರಷ್ಯಾದವರೂ ನೋಡುತ್ತಿದ್ದಾರೆ,
ಲಂಡನ್ನಿನವರೂ ನೋಡುತ್ತಿದ್ದಾರೆ. ಐದು ಖಂಡಗಳಲ್ಲಿಯೂ ನೋಡುತ್ತಿದ್ದಾರೆ ಅಂದಾಗ ತಮ್ಮೆಲ್ಲರಿಗೆ
ಅಲ್ಲಿ ಕುಳಿತೇ ಜನ್ಮದಿನದ ಶುಭಾಷಯಗಳನ್ನು ನೀಡುತ್ತಿದ್ದಾರೆ. ಒಳ್ಳೆಯದು.
ಬಾಪ್ದಾದಾರವರ ಆತ್ಮಿಕ
ಡ್ರಿಲ್ ನೆನಪಿದೆಯಲ್ಲವೆ! ಈಗ ಬಾಪ್ದಾದಾ ಪ್ರತಿಯೊಬ್ಬ ಮಗುವಿನೊಂದಿಗೆ ಹೊಸಬರಿರಲಿ, ಹಳಬರಿರಲಿ,
ಹಿರಿಯರಿರಲಿ-ಕಿರಿಯರಿರಲಿ, ಕಿರಿಯರು ಇನ್ನೂ ಬೇಗನೆ ತಂದೆಯ ಸಮಾನರಾಗಬಹುದು ಆದ್ದರಿಂದ ಈಗ
ಸೆಕೆಂಡಿನಲ್ಲಿ ಎಲ್ಲಿ ಮನಸ್ಸನ್ನು ತೊಡಗಿಸಬೇಕೋ ಅಲ್ಲಿ ಮನಸ್ಸು ಏಕಾಗ್ರವಾಗಿ ಬಿಡಲಿ. ಈ
ಏಕಾಗ್ರತೆಯ ಡ್ರಿಲ್ ಸದಾ ಮಾಡುತ್ತಾ ಇರಿ. ಈಗ ಒಂದು ಸೆಕೆಂಡಿನಲ್ಲಿ ಮನಸ್ಸಿನ ಮಾಲೀಕರಾಗಿ. ನಾನು
ಮತ್ತು ನನ್ನಬಾಬಾ ಸಂಸಾರವಾಗಿದ್ದಾರೆ, ಮತ್ತ್ಯಾರೂ ಇಲ್ಲ - ಈ ಏಕಾಗ್ರ ಸ್ಮೃತಿಯಲ್ಲಿ ಸ್ಥಿತರಾಗಿ
ಬಿಡಿ. ಒಳ್ಳೆಯದು.
ನಾಲ್ಕಾರು ಕಡೆಯ ಸರ್ವ
ತೀವ್ರ ಪುರುಷಾರ್ಥಿ ಮಕ್ಕಳಿಗೆ, ಸದಾ ಉಮ್ಮಂಗ-ಉತ್ಸಾಹದ ರೆಕ್ಕೆಗಳಿಂದ ಹಾರುವಕಲೆಯ ಅನುಭವೀಮೂರ್ತಿ
ಮಕ್ಕಳಿಗೆ, ಸದಾ ತಮ್ಮ ಸ್ವಮಾನದ ಆಸನದಲ್ಲಿ ಸ್ಥಿತರಾಗಿರುವ ಮಕ್ಕಳಿಗೆ, ಸದಾ ದಯಾಹೃದಯಿಗಳಾಗಿ
ವಿಶ್ವದ ಆತ್ಮರಿಗೆ ಮನಸ್ಸಾ ಶಕ್ತಿಯ ಮೂಲಕ ಒಂದಲ್ಲ ಒಂದು ಸುಖ-ಶಾಂತಿಯ ಅಂಚಲಿಯನ್ನು ನೀಡುವಂತಹ
ದಯಾಳು, ಕೃಪಾಳು ಮಕ್ಕಳಿಗೆ, ಸದಾ ತಂದೆಯ ಸ್ನೇಹದಲ್ಲಿ ಸಮಾವೇಶವಾಗಿರುವ ಹೃದಯ ಸಿಂಹಾಸನಾಧಿಕಾರಿ
ಮಕ್ಕಳಿಗೆ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ನಮಸ್ತೆ.
ಎಲ್ಲರೂ ಬಹಳ-ಬಹಳ-ಬಹಳ
ಖುಷಿಯಾಗಿದ್ದಾರೆ. ಬಹಳ ಖುಷಿಯಿದೆಯೇ? ಬಹಳ ಎಂದರೆ ಎಷ್ಟು? ಸದಾ ಇದೇರೀತಿ ಇರಿ. ಏನೇ ಆದರೂ ಆಗಲಿ
ಬಿಡಿ, ಈಗ ಖುಷಿಯಾಗಿರಬೇಕಾಗಿದೆ ನಾವು ಹಾರಬೇಕಾಗಿದೆ, ಯಾರೂ ಕೆಳಗೆ ತರಲು ಸಾಧ್ಯವಿಲ್ಲ. ಇದು
ಪಕ್ಕಾ ಪ್ರತಿಜ್ಞೆಯಿದೆಯೇ? ಎಷ್ಟು ಪಕ್ಕಾ ಇದೆ? ಕೇವಲ ಖುಷಿಯಾಗಿರಿ, ಎಲ್ಲರಿಗೆ ಖುಷಿಯನ್ನು
ನೀಡಿರಿ. ಯಾವುದೇ ಮಾತು ಇಷ್ಟವಾಗದಿದ್ದರೂ ಸಹ ಖುಷಿಯನ್ನು ಕಳೆದುಕೊಳ್ಳಬೇಡಿ. ಮಾತನ್ನು ಬಿಟ್ಟು
ಬಿಡಿ ಆದರೆ ಖುಷಿಯು ಹೋಗದಿರಲಿ. ಮಾತಂತೂ ಸಮಾಪ್ತಿಯಾಗಿ ಬಿಡುವುದು ಆದರೆ ಖುಷಿಯು ಜೊತೆಯಲ್ಲಿ
ನಡೆಯಬೇಕಲ್ಲವೆ. ಏನು ಜೊತೆಯಲ್ಲಿ ನಡೆಯುವುದಿದೆಯೋ ಅದನ್ನು ಬಿಟ್ಟು ಬಿಡುತ್ತೀರಿ ಮತ್ತು ಯಾವುದು
ಬಿಟ್ಟು ಹೋಗುವುದಿದೆಯೋ ಅದನ್ನೂ ತಮ್ಮ ಬಳಿ ಇಟ್ಟುಕೊಳ್ಳುತ್ತೀರಿ, ಈಗ ಈ ರೀತಿ ಮಾಡಬೇಡಿ.
ಅಮೃತವೇಳೆ ನಿತ್ಯವೂ ಮೊದಲು ತಮಗೆ ತಾವು ಖುಷಿಯ ಔಷಧಿಯನ್ನು ತಿನ್ನಿಸಿ. ಒಳ್ಳೆಯದು.
ವರದಾನ:
ಮಧುರ ಮೌನದ
ಲವಲೀನ ಸ್ಥಿತಿಯ ಮೂಲಕ ನಷ್ಠಮೋಹ ಸಮರ್ಥ ಸ್ವರೂಪ ಭವ.
ದೇಹ, ದೇಹದ ಸಂಬಂಧ,
ದೇಹದ ಸಂಸ್ಕಾರ, ವ್ಯಕ್ತಿ ಹಾಗೂ ವೈಭವ, ವಾಯುಮಂಡಲ, ವೈಬ್ರೇಷನ್ ಎಲ್ಲಾ ಇದ್ದರೂ ಸಹಾ ತಮ್ಮ ಮತ್ತು
ಆಕರ್ಷಣೆ ಮಾಡಬಾರದು. ಜನರು ಕಿರುಚಾಡುತ್ತಿರಲಿ ಆದರೆ ತಾವು ಅಚಲರಾಗಿರಿ. ಪ್ರಕೃತಿ, ಮಾಯೆ ಎಲ್ಲಾ
ಕೊನೆಯ ಹಕ್ಕು ಚಲಾಯಿಸಲು ತಮ್ಮ ಕಡೆ ಎಷ್ಟೇ ಸೆಳೆಯಲಿ ಆದರೆ ತಾವು ನ್ಯಾರಾ ಮತ್ತು ತಂದೆಗೆ ಪ್ಯಾರಾ
ಆಗುವ ಸ್ಥಿತಿಯಲ್ಲಿ ಲವಲೀನರಾಗಿರಿ-ಇದಕ್ಕೆ ಹೇಳಲಾಗುವುದು ನೋಡುತ್ತಿದ್ದರೂ ನೋಡದ ಹಾಗಿರಿ,
ಕೇಳುತ್ತಿದ್ದರೂ ಕೇಳದ ಹಾಗಿರಿ. ಇದೇ ಮಧುರ ಮೌನ ಸ್ವರೂಪದ ಲವಲೀನ ಸ್ಥಿತಿಯಾಗಿದೆ, ಯಾವಾಗ ಇಂತಹ
ಸ್ಥಿತಿಯಾಗುವುದು ಆಗ ಹೇಳಲಾಗುವುದು ನಷ್ಠಮೋಹ ಸಮರ್ಥ ಸ್ವರೂಪದ ವರದಾನಿ ಆತ್ಮ.
ಸ್ಲೋಗನ್:
ಹೋಲಿ ಹಂಸ ಆಗಿ
ಅವಗುಣರೂಪಿ ಕಲ್ಲುಗಳನ್ನು ಬಿಟ್ಟು ಒಳ್ಳೆಗುಣ ರೂಪಿ ಮುತ್ತುಗಳನ್ನು ಅರಿಸುತ್ತಾ ಹೋಗಿ.
ಅವ್ಯಕ್ತ ಸೂಚನೆ:- ಈಗ
ಲಗನ್ನಿನ (ಪ್ರೀತಿಯ) ಅಗ್ನಿಯನ್ನು ಪ್ರಜ್ವಲಿತಗೋಳಿಸಿ ಯೋಗವನ್ನು ಜ್ವಾಲಾರೂಪವನ್ನಾಗಿ ಮಾಡಿ.
ಜ್ವಾಲಾರೂಪರಾಗಲು ಇದೇ
ಗುಂಗು ಸದಾ ಇರಲಿ, ಈಗ ವಾಪಸ್ಸು ಮನೆಗೆ ಹೋಗಬೇಕಾಗಿದೆ. ಹೋಗುವುದು ಅರ್ಥಾತ್ ನಿರ್ಲಿಪ್ತರಾಗುವುದು.
ಯಾವಾಗ ತಮ್ಮ ನಿರಾಕಾರ ಮನೆಗೆ ಹೋಗಬೇಕೆಂದರೆ ಅದರಂತೆ ತಮ್ಮ ವೇಷವನ್ನು ಮಾಡಿಕೊಳ್ಳಬೇಕಾಗಿದೆ.
ಹೋಗಬೇಕಾಗಿದೆ ಮತ್ತು ಎಲ್ಲರನ್ನು ವಾಪಸ್ಸು ಕರೆದುಕೊಂಡು ಹೋಗಬೇಕು - ಈ ಸ್ಮೃತಿಯಿಂದ ಸ್ವತಃ ಸರ್ವ
ಸಂಬಂಧ, ಸರ್ವ ಪ್ರಕೃತಿಯ ಆಕರ್ಷಣೆಯಿಂದ ನಿರ್ಲಿಪ್ತ ಅರ್ಥಾತ್ ಸಾಕ್ಷಿಯಾಗಿ ಬಿಡಬೇಕು.
ಸಾಕ್ಷಿಯಾಗುವುದರಿಂದ ಸಹಜವಾಗಿಯೇ ತಂದೆಯ ಜೊತೆಗಾರ ಅಥವಾ ತಂದೆಯ ಸಮಾನರಾಗಿ ಬಿಡುತ್ತಾರೆ.
ಸೂಚನೆ:- ಇಂದು ತಿಂಗಳಿನ
ಮೂರನೇ ರವಿವಾರವಾಗಿದೆ, ಎಲ್ಲಾ ರಾಜಯೋಗಿ ತಪಸ್ವಿ ಸಹೋದರ-ಸಹೋದರಿಯರು ಸಂಜೆ 6.30ರಿಂದ
7.30ರವರೆಗೆ, ವಿಶೇಶವಾಗಿ ಯೋಗಾಭ್ಯಾಸದ ಸಮಯದಲ್ಲಿ ತಮ್ಮ ಆಕಾರಿ ಫರಿಶ್ತಾ ಸ್ವರೂಪದಲ್ಲಿ
ಸ್ಥಿತರಾಗಿದ್ದು, ಭಕ್ತರ ಕರೆಯನ್ನು ಆಲಿಸಿರಿ ಮತ್ತು ಉಪಕಾರ ಮಾಡಿರಿ. ಮಾಸ್ಟರ್ ದಯಾಳು, ಕೃಪಾಳು
ಆಗಿದ್ದು, ಎಲ್ಲರ ಬಗ್ಗೆ ದಯಾ ದೃಷ್ಟಿಯನ್ನಿಡಿ. ಮುಕ್ತಿ-ಜೀವನ್ಮುಕ್ತಿಯ ವರದಾನ ಕೊಡಿ.