21.10.24         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ- ಸತ್ಯ ತಂದೆಯ ಜೊತೆ ಸತ್ಯವಂತರಾಗಿ, ಸತ್ಯತೆಯ ಚಾರ್ಟನ್ನು ಇಡಿ, ಜ್ಞಾನದ ಅಹಂಕಾರವನ್ನು ಬಿಟ್ಟು ನೆನಪಿನಲ್ಲಿರುವ ಪೂರ್ಣ ಪುರುಷಾರ್ಥ ಮಾಡಿ”

ಪ್ರಶ್ನೆ:
ಮಹಾವೀರ ಮಕ್ಕಳ ಮುಖ್ಯಲಕ್ಷಣಗಳೇನು?

ಉತ್ತರ:
ಯಾರ ಬುದ್ಧಿಯಲ್ಲಿ ನಿರಂತರ ತಂದೆಯ ನೆನಪಿರುವುದೋ ಅವರೇ ಮಹಾವೀರ ಮಕ್ಕಳು. ಮಹಾವೀರರೆಂದರೆ ಶಕ್ತಿವಂತರು. ಯಾರಿಗೆ ನಿರಂತರ ಖುಷಿಯಿರುವುದೋ, ಆತ್ಮಾಭಿಮಾನಿಯಾಗಿರುವರೋ, ಅಂಶಮಾತ್ರವೂ ದೇಹದ ಅಹಂಕಾರವಿರುವುದಿಲ್ಲವೋ ಅವರೇ ಮಹಾವೀರರಾಗಿದ್ದಾರೆ. ಇಂತಹ ಮಹಾವೀರ ಮಕ್ಕಳ ಬುದ್ಧಿಯಲ್ಲಿರುತ್ತದೆ- ನಾವಾತ್ಮಗಳಾಗಿದ್ದೇವೆ, ತಂದೆಯೇ ನಮಗೆ ಓದಿಸುತ್ತಿದ್ದಾರೆ.

ಓಂ ಶಾಂತಿ.
ಆತ್ಮಿಕ ತಂದೆಗೆ ಆತ್ಮಿಕ ಮಕ್ಕಳು ಪ್ರಶ್ನಿಸುತ್ತಾರೆ- ತಮ್ಮನ್ನು ಆತ್ಮವೆಂದು ತಿಳಿದುಕೊಂಡು ಕುಳಿತುಕೊಳ್ಳುತ್ತೀರಾ? ಏಕೆಂದರೆ ತಂದೆಗೆ ಗೊತ್ತಿದೆ- ಇದು ಸ್ವಲ್ಪ ಕಷ್ಟವಾಗಿದೆ, ಇದರಲ್ಲಿಯೇ ಪರಿಶ್ರಮವಿದೆ. ಯಾರು ಆತ್ಮಾಭಿಮಾನಿಯಾಗಿ ಕುಳಿತುಕೊಂಡಿದ್ದಾರೆಯೋ ಅವರಿಗೇ ಮಹಾವೀರರೆಂದು ಹೇಳಲಾಗುತ್ತದೆ. ತನ್ನನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡುವುದಕ್ಕೆ ಮಹಾವೀರರೆಂದು ಹೇಳಲಾಗುತ್ತದೆ. ಯಾವಾಗಲೂ ತನ್ನೊಂದಿಗೆ ಕೇಳಿಕೊಳ್ಳುತ್ತಾ ಇರಿ- ನಾನು ಆತ್ಮಾಭಿಮಾನಿಯಾಗಿದ್ದೇನೆಯೇ? ನೆನಪಿನಿಂದಲೇ ಮಹಾವೀರರಾಗುತ್ತೀರಿ ಅಂದರೆ ಶ್ರೇಷ್ಠರಾಗುತ್ತೀರಿ ಮತ್ತ್ಯಾವುದೇ ಧರ್ಮದವರು ಬರುತ್ತಾರೆಂದರೆ ಅವರು ಇಷ್ಟು ಶ್ರೇಷ್ಠರಾಗುವುದಿಲ್ಲ. ಅವರು ತಡವಾಗಿಯೇ ಬರುತ್ತಾರೆ. ನೀವು ನಂಬರ್ವಾರ್ ಶ್ರೇಷ್ಠರಾಗುತ್ತೀರಿ. ಶ್ರೇಷ್ಠರೆಂದರೆ ಶಕ್ತಿವಂತರು ಅಂದರೆ ಮಹಾವೀರರು ಅಂದಮೇಲೆ ನಾವು ಆತ್ಮಗಳಾಗಿದ್ದೇವೆ, ನಾವೆಲ್ಲಾ ಆತ್ಮಗಳ ತಂದೆಯು ನಮಗೆ ಓದಿಸುತ್ತಾರೆಂದು ಅಂತರಿಕವಾಗಿ ಈ ಖುಷಿಯಿರುತ್ತದೆಯ್ಯೇ! ಇದೂ ಸಹ ತಂದೆಗೆ ತಿಳಿದಿದೆ- ಕೆಲವರು ತಮ್ಮ ಚಾರ್ಟ್ನಲ್ಲಿ 25% ತೋರಿಸುತ್ತಾರೆ, ಕೆಲವರು 100% ತೋರಿಸುತ್ತಾರೆ. ಕೆಲವರು 24 ಗಂಟೆಗಳಲ್ಲಿ ಅರ್ಧಗಂಟೇ ನೆನಪಿರುತ್ತದೆ ಎಂದು ಹೇಳುತ್ತಾರೆಂದರೆ ಎಷ್ಟು ಪರ್ಸೆಂಟ್ ಆಯಿತು? ತಮ್ಮ ಮೇಲೆ ಬಹಳ ಎಚ್ಚರಿಕೆ ವಹಿಸಬೇಕು. ನಿಧಾನ-ನಿಧಾನವಾಗಿ ಮಹಾವೀರರಾಗಬೇಕು. ಅತಿಬೇಗನೆ ಆಗಲು ಸಾಧ್ಯವಿಲ್ಲ, ಇದರಲ್ಲಿ ಪರಿಶ್ರಮವಿದೆ. ಬ್ರಹ್ಮಜ್ಞಾನಿಗಳು ಅಥವಾ ತತ್ವಜ್ಞಾನಿಗಳು ತಮ್ಮನ್ನು ಆತ್ಮನೆಂದು ತಿಳಿಯುತ್ತಾರೆಂದು ತಿಳಿಯಬೇಡಿ. ಅವರು ಬ್ರಹ್ಮತತ್ವವನ್ನೇ ಪರಮಾತ್ಮನೆಂದು ತಿಳಿಯುತ್ತಾರೆ, ತನ್ನನ್ನು ಅಹಂ ಬ್ರಹ್ಮಾಸ್ಮಿ (ನಾನೇ ಬ್ರಹ್ಮಾ) ಎಂದು ಹೇಳಿಬಿಡುತ್ತಾರೆ. ಮನೆಯೊಂದಿಗೆ ಬುದ್ಧಿಯೋಗವನ್ನು ಜೋಡಿಸುವುದುಂಟೇ? ಈಗ ನೀವು ಮಕ್ಕಳು ತಮ್ಮನ್ನು ಆತ್ಮನೆಂದು ತಿಳಿಯುತ್ತೀರಿ. ತಮ್ಮ ಚಾರ್ಟನ್ನೂ ನೋಡಿಕೊಳ್ಳಬೇಕು- 24 ಗಂಟೆಗಳಲ್ಲಿ ನಾವು ಎಷ್ಟು ಸಮಯ ಆತ್ಮವೆಂದು ತಿಳಿಯುತ್ತೇವೆ? ಈಗ ನೀವು ಮಕ್ಕಳು ತಿಳಿದಿದ್ದೀರಿ- ನಾವು ಈಶ್ವರೀಯ ಸೇವೆಯಲ್ಲಿದ್ದೇವೆ ಇದನ್ನೇ ಎಲ್ಲರಿಗೂ ತಿಳಿಸಬೇಕಾಗಿದೆ- ತಂದೆಯು ಇಷ್ಟನ್ನೇ ಹೇಳುತ್ತಾರೆ- ಮನ್ಮನಾಭವ. ತಮ್ಮನ್ನು ಆತ್ಮವೆಂದು ತಿಳಿದು ತಂದೆಯನ್ನು ನೆನಪು ಮಾಡಿ, ಇದು ಸೇವೆಯಾಗಿದೆ. ಎಷ್ಟು ಸೇವೆ ಮಾಡುವಿರೋ ಅಷ್ಟು ಫಲ ಸಿಗುವುದು. ಇವು ಬಹಳ ಚೆನ್ನಾಗಿ ತಿಳಿದುಕೊಳ್ಳುವ ಮಾತುಗಳಾಗಿವೆ. ಒಳ್ಳೊಳ್ಳೆಯ ಮಕ್ಕಳೂ ಸಹ ಈ ಮಾತುಗಳನ್ನು ಪೂರ್ಣ ಅರಿತುಕೊಳ್ಳುವುದಿಲ್ಲ. ಇದರಲ್ಲಿ ಬಹಳ ಶ್ರಮವಿದೆ. ಪರಿಶ್ರಮವಿಲ್ಲದೆ ಫಲವು ಸಿಗುವುದಿಲ್ಲ.

ತಂದೆಯು ನೋಡುತ್ತಾರೆ- ಕೆಲವರು ಚಾರ್ಟನ್ನು ಬರೆದು ಕಳುಹಿಸುತ್ತಾರೆ. ಇನ್ನೂ ಕೆಲವರ ಚಾರ್ಟಂತೂ ತಂದೆಯ ಬಳಿ ಬರುವುದೇ ಇಲ್ಲ, ಜ್ಞಾನದ ಅಹಂಕಾರವಿರುತ್ತದೆ. ನೆನಪಿನಲ್ಲಿ ಕುಳಿತುಕೊಳ್ಳುವಂತಹ ಪರಿಶ್ರಪಡುವುದೇ ಇಲ್ಲ ಅಂದಾಗ ತಂದೆಯು ತಿಳಿಸುತ್ತಾರೆ- ಮೂಲಮಾತೇ ನೆನಪಿನದಾಗಿದೆ. ತಮ್ಮ ಮೇಲೆ ತಾವು ಗಮನವನ್ನು ಇಟ್ಟುಕೊಳ್ಳಬೇಕು- ನಮ್ಮ ಚಾರ್ಟ್ ಹೇಗಿರುತ್ತದೆ? ಎಂಬುದನ್ನು ಬರೆದುಕೊಳ್ಳಬೇಕು. ಚಾರ್ಟ್ ಬರೆಯುವುದಕ್ಕೆ ಬಿಡುವೇ ಇಲ್ಲವೆಂದು ಕೆಲವರು ಹೇಳುತ್ತಾರೆ. ಮೂಲಮಾತನ್ನು ತಂದೆಯು ತಿಳಿಸುತ್ತಾರೆ- ತನ್ನನ್ನು ಆತ್ಮವೆಂದು ತಿಳಿದು ತಂದೆಯನ್ನು ನೆನಪು ಮಾಡಿ. ಇಲ್ಲಿ ಎಷ್ಟು ಸಮಯ ಕುಳಿತುಕೊಳ್ಳುತ್ತೀರೋ ಅಷ್ಟು ಸಮಯ ಮಧ್ಯ-ಮಧ್ಯದಲ್ಲಿ ತಮ್ಮನ್ನು ಕೇಳಿಕೊಳ್ಳಿ- ನಾವು ಎಷ್ಟು ಸಮಯ ನೆನಪಿನಲ್ಲಿ ಕುಳಿತಿದ್ದೆವು? ನೀವೀಲ್ಲಿ ಕುಳಿತುಕೊಳ್ಳುವ ಸಮಯದಲ್ಲಿ ತಂದೆಯ ನೆನಪಿನಲ್ಲಿಯೇ ಇರಬೇಕು ಮತ್ತು ಸ್ವದರ್ಶನ ಚಕ್ರವನ್ನು ತಿರುಗಿಸಿದರೂ ಪರವಾಗಿಲ್ಲ. ನಾವು ತಂದೆಯಬಳಿ ಅವಶ್ಯವಾಗಿ ಹೋಗಬೇಕಾಗಿದೆ, ನಾವು ಪವಿತ್ರ-ಸತೋಪ್ರಧಾನರಾಗಿಯೇ ಹೋಗಬೇಕಾಗಿದೆ. ಈ ಮಾತುಗಳನ್ನು ಚೆನ್ನಾಗಿ ತಿಳಿದುಕೊಳ್ಳಬೇಕು. ಕೆಲವರಂತೂ ಬಹುಬೇಗನೆ ಮರೆತುಹೋಗುತ್ತಾರೆ, ತಮ್ಮ ಸತ್ಯ-ಸತ್ಯವಾದ ಚಾರ್ಟನ್ನು ತಿಳಿಸುವುದೇ ಇಲ್ಲ. ದೊಡ್ಡ-ದೊಡ್ಡವರೇ ಈ ರೀತಿಯಿದ್ದಾರೆ, ಸತ್ಯವನ್ನೆಂದೂ ತಿಳಿಸುವುದೇ ಇಲ್ಲ. ಅರ್ಧಕಲ್ಪ ಅಸತ್ಯಖಂಡವು ನಡೆದಿರುವುದರಿಂದ ಅಸತ್ಯವು ಹೇಗೆ ಕುಳಿತುಬಿಟ್ಟಿದೆ. ಯಾರು ಸಾಧಾರಣವಾಗಿದ್ದಾರೆಯೋ ಅವರೇ ಚಾರ್ಟನ್ನು ಬರೆಯುತ್ತಾರೆ. ತಂದೆಯು ತಿಳಿಸುತ್ತಾರೆ- ನೀವು ನೆನಪಿನ ಯಾತ್ರೆಯಿಂದ ಪಾಪಗಳನ್ನು ಭಸ್ಮ ಮಾಡಿಕೊಂಡು ಪಾವನರಾಗುತ್ತೀರಿ. ಕೇವಲ ಜ್ಞಾನದಿಂದ ಪಾವನರಾಗುವುದಿಲ್ಲ. ನೀವು ಪಾವನರಾಗುವುದಕ್ಕಾಗಿ ಕರೆಯುತ್ತೀರಿ ಅದಕ್ಕಾಗಿ ನೆನಪು ಅವಶ್ಯವಾಗಿ ಬೇಕು. ಪ್ರತಿಯೊಬ್ಬರೂ ಸತ್ಯತೆಯಿಂದ ತನ್ನ ಚಾರ್ಟನ್ನು ತಿಳಿಸಬೇಕು. ಇಲ್ಲಿ ನೀವು ಮುಕ್ಕಾಲು ಗಂಟೆಯ ಸಮಯ ಕುಳಿತುಕೊಳ್ಳುತ್ತೀರೆಂದರೂ ಸಹ ಮುಕ್ಕಾಲುಗಂಟೆಯಲ್ಲಿ ನಾವು ನಮ್ಮನ್ನು ಆತ್ಮವೆಂದು ತಿಳಿದು ತಂದೆಯ ನೆನಪಿನಲ್ಲಿ ಎಷ್ಟು ಸಮಯ ಇದ್ದೆವು? ಕೆಲವರಿಗಂತೂ ಸತ್ಯವನ್ನು ಹೇಳಲು ಸಂಕೋಚವಾಗುತ್ತದೆ. ತಂದೆಗೆ ಸತ್ಯವನ್ನು ತಿಳಿಸುವುದಿಲ್ಲ, ನಾವು ಇಂತಹ ಸರ್ವೀಸ್ ಮಾಡಿದೆವು, ಇಷ್ಟು ಜನರಿಗೆ ತಿಳಿಸಿದೆವೆಂದು ಸಮಾಚಾರವನ್ನು ತಿಳಿಸುತ್ತಾರೆ ಹೊರತು ನೆನಪಿನಯಾತ್ರೆಯ ಚಾರ್ಟನ್ನು ಬರೆಯುವುದಿಲ್ಲ. ತಂದೆಯು ತಿಳಿಸುತ್ತಾರೆ- ನೆನಪಿನಲ್ಲಿರುವ ಕಾರಣವೇ ನಿಮಗೆ ಬಾಣವು ನಾಟುವುದಿಲ್ಲ. ಜ್ಞಾನದ ಖಡ್ಗದಲ್ಲಿ ಹರಿತವು ಬರುವುದಿಲ್ಲ. ಜ್ಞಾನವಂತು ತಿಳಿಸುತ್ತಾರೆ ಬಾಕಿ ಯೋಗದ ಯಾವ ಬಾಣವು ನಾಟಬೇಕು ಅದು ಬಹಳ ಪರಿಶ್ರಮವಿದೆ. ತಂದೆಯಂತೂ ತಿಳಿಸುತ್ತಾರೆ- ಈ ಸ್ಥಿತಿಯು ಈಗಲೇ ಬರಲು ಸಾಧ್ಯವಿಲ್ಲ. ಒಂದುವೇಳೆ ನಿರಂತರ ನೆನಪು ಮಾಡಿದರೆ ಕರ್ಮಾತೀತ ಸ್ಥಿತಿಯು ಬಂದುಬಿಡುತ್ತದೆ. ಜ್ಞಾನದ ತುತ್ತ ತುದಿಯನ್ನೇರುತ್ತಾರೆ. ಯಾರಿಗಾದರೂ ಸ್ವಲ್ಪ ತಿಳಿಸಿದರೂ ಚೆನ್ನಾಗಿ ಬಾಣವು ನಾಟುತ್ತದೆ. ಇದರಲ್ಲಿಯೇ ಪರಿಶ್ರಮವಿದೆಯಲ್ಲವೆ. ವಿಶ್ವದ ಮಾಲೀಕರಾಗುವುದು ಅಷ್ಟು ಸಹಜವೆ! ಮಾಯೆಯು ಬುದ್ಧಿಯೋಗವನ್ನು ಎಲ್ಲಿಂದ ಎಲ್ಲೆಲ್ಲಿಗೋ ತೆಗೆದುಕೊಂಡು ಹೋಗುತ್ತದೆ. ಮಿತ್ರಸಂಬಂಧಿಗಳು ಎಲ್ಲರೂ ನೆನಪಿಗೆ ಬರುತ್ತಿರುತ್ತಾರೆ. ಯಾರಾದರೂ ವಿದೇಶಕ್ಕೆ ಹೋಗಬೇಕಾಗಿದ್ದರೆ ತನ್ನ ಮಿತ್ರಸಂಬಂಧಿಗಳು, ಹಡಗು, ವಿಮಾನ ಮೊದಲಾದವುಗಳೇ ನೆನಪಿಗೆ ಬರುತ್ತಿರುತ್ತದೆ. ವಿದೇಶಕ್ಕೆ ಹೋಗುವ ಯಾವ ಇಚ್ಛೆಯಿದೆಯೋ ಅದು ಸೆಳೆಯುತ್ತಿರುತ್ತದೆ. ಬುದ್ಧಿಯೋಗವು ಅಲೆದಾಡುತ್ತದೆ. ಬುದ್ಧಿಯು ಮತ್ತ್ಯಾವಕಡೆಯೂ ಹೋಗಬಾರದು. ಇದೇ ಬಹಳ ಪರಿಶ್ರಮದ ಮಾತಾಗಿದೆ. ಕೇವಲ ಒಬ್ಬ ತಂದೆಯದೇ ನೆನಪಿರಲಿ, ಈ ದೇಹವೂ ಸಹ ನೆನಪಿಗೆ ಬರಬಾರದು. ನಿಮ್ಮ ಈ ಸ್ಥಿತಿಯು ಅಂತಿಮದಲ್ಲಾಗುತ್ತದೆ.

ದಿನ-ಪ್ರತಿದಿನ ನೆನಪಿನ ಯಾತ್ರೆಯನ್ನು ಹೆಚ್ಚಿಸಿಕೊಳ್ಳುತ್ತಾ ಇರಬೇಕಾಗಿದೆ. ಇದರಲ್ಲಿಯೇ ನಿಮ್ಮ ಕಲ್ಯಾಣವಿದೆ. ಎಷ್ಟು ನೆನಪಿನಲ್ಲಿರುತ್ತೀರೋ ಅಷ್ಟು ನಿಮ್ಮ ಸಂಪಾದನೆಯಾಗುತ್ತದೆ. ಒಂದುವೇಳೆ ಶರೀರವು ಬಿಟ್ಟುಹೋದರೆ ಈ ಸಂಪಾದನೆಯನ್ನು ಮಾಡಿಕೊಳ್ಳಲು ಆಗುವುದಿಲ್ಲ. ಹೋಗಿ ಚಿಕ್ಕಮಗುವಾಗುತ್ತಾರೆ ಅಂದಮೇಲೆ ಏನು ಸಂಪಾದಿಸಲು ಸಾಧ್ಯ! ಭಲೆ ಆತ್ಮವು ಈ ಸಂಸ್ಕಾರವನ್ನು ತೆಗೆದುಕೊಂಡು ಹೋಗುತ್ತದೆ ಆದರೆ ಮತ್ತೆ ಸ್ಮೃತಿಯನ್ನು ತರಿಸಲು ಶಿಕ್ಷಕರಂತು ಬೇಕಲ್ಲವೆ. ತಂದೆಯೂ ಸಹ ಸ್ಮೃತಿ ತರಿಸುತ್ತಾರೆ- ತಂದೆಯನ್ನು ನೆನಪು ಮಾಡಿ, ತಂದೆಯ ನೆನಪಿನಿಂದಲೇ ಪಾವನರಾಗುತ್ತೇವೆಂಬುದು ನಿಮ್ಮ ವಿನಃ ಮತ್ತ್ಯಾರಿಗೂ ಗೊತ್ತಿಲ್ಲ. ಅವರಂತೂ ಗಂಗಾಸ್ನಾನವನ್ನೇ ಶ್ರೇಷ್ಟವೆಂದು ತಿಳಿಯುತ್ತಾರೆ. ಆದ್ದರಿಂದ ಗಂಗಾಸ್ನಾನವನ್ನೇ ಮಾಡುತ್ತಿರುತ್ತಾರೆ. ತಂದೆಯಂತೂ ಇವೆಲ್ಲಾ ಮಾತುಗಳ ಅನುಭವಿಯಾಗಿದ್ದಾರೆ. ಬಹಳಷ್ಟು ಗುರುಗಳನ್ನು ಮಾಡಿಕೊಂಡಿದ್ದಾರೆ. ಮನುಷ್ಯರು ನೀರಿನ ಸ್ನಾನ ಮಾಡಲು ಹೋಗುತ್ತಾರೆ, ಇಲ್ಲಿ ನಿಮ್ಮದು ನೆನಪಿನ ಯಾತ್ರೆಯಿಂದ ಸ್ನಾನವಾಗುತ್ತದೆ. ತಂದೆಯ ನೆನಪಿನ ವಿನಃ ಆತ್ಮವು ಪಾವನವಾಗಲು ಸಾಧ್ಯವೇ ಇಲ್ಲ. ಇದರ ಹೆಸರೇ ಆಗಿದೆ- ಯೋಗ ಅರ್ಥಾತ್ ತಂದೆಯ ನೆನಪಿನ ಯಾತ್ರೆ. ಜ್ಞಾನವನ್ನು ಸ್ನಾನವೆಂದು ತಿಳಿಯಬಾರದು, ಯೋಗವು ಸ್ನಾನವಾಗಿದೆ. ಜ್ಞಾನವು ವಿದ್ಯೆ, ಯೋಗವು ಸ್ನಾನವಾಗಿದೆ. ಇದರಿಂದ ಪಾಪಗಳು ಭಸ್ಮವಾಗುತ್ತವೆ. ಜ್ಞಾನ ಮತ್ತು ಯೋಗ ಎರಡು ವಸ್ತುಗಳಿವೆ. ನೆನಪಿನಿಂದಲೇ ಜನ್ಮ-ಜನ್ಮಾಂತರದ ಪಾಪಗಳು ಭಸ್ಮವಾಗುತ್ತವೆ. ತಂದೆಯು ತಿಳಿಸುತ್ತಾರೆ- ಈ ನೆನಪಿನ ಯಾತ್ರೆಯಿಂದಲೇ ಜನ್ಮ-ಜನ್ಮಾಂತರದ ಪಾಪಗಳು ತುಂಡಾಗುತ್ತವೆ. ಬಾಕಿ ಜ್ಞಾನವು ಸಂಪಾದನೆಯಾಗಿದೆ. ನೆನಪು ಮತ್ತು ವಿದ್ಯೆ- ಎರಡು ಬೇರೆ-ಬೇರೆಯಾಗಿದೆ. ಜ್ಞಾನ ಮತ್ತು ವಿಜ್ಞಾನ ಜ್ಞಾನವೆಂದರೆ ವಿದ್ಯೆ, ವಿಜ್ಞಾನವೆಂದರೆ ಯೋಗ ಅಥವಾ ನೆನಪು. ಯಾವುದನ್ನು ಮೇಲಿಡುತ್ತೀರಿ- ಜ್ಞಾನವೋ ಅಥವಾ ಯೋಗವೋ? ನೆನಪಿನ ಯಾತ್ರೆಯು ಬಹಳ ದೊಡ್ಡದಾಗಿದೆ. ಇದರಲ್ಲಿಯೇ ಪರಿಶ್ರಮವಿದೆ. ಸ್ವರ್ಗದಲ್ಲಂತೂ ಎಲ್ಲರೂ ಹೋಗುತ್ತಾರೆ. ಸತ್ಯಯುಗವು ಸ್ವರ್ಗ, ತ್ರೇತಾಯುಗವು ಸೆಮಿ-ಸ್ವರ್ಗವಾಗಿದೆ. ಅಲ್ಲಂತೂ ಈ ವಿದ್ಯೆಯನುಸಾರ ಹೋಗಿ ವಿರಾಜಮಾನರಾಗುತ್ತಾರೆ ಆದರೆ ಮುಖ್ಯವಾದುದು ಯೋಗವಾಗಿದೆ. ಪ್ರದರ್ಶನಿ ಅಥವಾ ಮ್ಯೂಜಿûಯಂ ಮೊದಲದವುಗಳಲ್ಲಿ ನೀವು ಜ್ಞಾನವನ್ನು ತಿಳಿಸುತ್ತೀರಿ. ಯೋಗವನ್ನು ತಿಳಿಸುವುದಿಲ್ಲ. ಕೇವಲ ಇಷ್ಟನ್ನು ಹೇಳುತ್ತೀರಿ- ತನ್ನನ್ನು ಆತ್ಮವೆಂದು ತಿಳೀದು ತಂದೆಯನ್ನು ನೆನಪು ಮಾಡಿ ಬಾಕಿ ಜ್ಞಾನವನ್ನಂತೂ ಬಹಳ ಕೊಡುತ್ತೀರಿ. ತಂದೆಯು ತಿಳಿಸುತ್ತಾರೆ- ಮೊಟ್ಟಮೊದಲು ಇದೇ ಮಾತನ್ನು ತಿಳಿಸಿ, ತನ್ನನ್ನು ಆತ್ಮವೆಂದು ತಿಳಿದು ತಂದೆಯನ್ನು ನೆನಪು ಮಾಡಿ. ಈ ಜ್ಞಾನವನ್ನು ತಿಳಿಸುವುದಕ್ಕಾಗಿಯೇ ನೀವು ಎಷ್ಟೊಂದು ಚಿತ್ರಗಳನ್ನು ಮಾಡಿಸುತ್ತೀರಿ. ಯೋಗಕ್ಕಾಗಿ ಯಾವುದೇ ಚಿತ್ರದ ಅವಶ್ಯಕತೆಯಿಲ್ಲ. ಚಿತ್ರಗಳೆಲ್ಲವನ್ನೂ ಜ್ಞಾನವನ್ನು ತಿಳಿಸುವುದಕ್ಕಾಗಿಯೇ ಮಾಡಿಸುತ್ತಾರೆ. ತನ್ನನ್ನು ಆತ್ಮವೆಂದು ತಿಳಿಯುವುದರಿಂದ ದೇಹದ ಅಭಿಮಾನವು ಸಂಪೂರ್ಣವಾಗಿ ಬಿಟ್ಟುಹೋಗುತ್ತದೆ. ಜ್ಞಾನದಲ್ಲಂತೂ ವರ್ಣನೆ ಮಾಡಲು ಅವಶ್ಯವಾಗಿ ಮುಖ (ಬಾಯಿ) ವು ಬೇಕು. ಯೋಗದ ಒಂದೇ ಮಾತಾಗಿದೆ- ತನ್ನನ್ನು ಆತ್ಮವೆಂದು ತಿಳಿದು ತಂದೆಯನ್ನು ನೆನಪು ಮಾಡಬೇಕಾಗಿದೆ. Œಇದ್ಯೆಯಲ್ಲಿ ದೇಹದ ಅವಶ್ಯಕತೆಯಿದೆ. ಶರೀರವಿಲ್ಲದೆ ಹೇಗೆ ಓದುತ್ತೀರಿ ಮತ್ತು ಓದಿಸುತ್ತೀರಿ!

ಪತಿತ-ಪಾವನ ತಂದೆಯಾಗಿದ್ದಾರೆ ಅಂದಮೇಲೆ ಅವರ ಜೊತೆ ಯೋಗವನ್ನು ಜೊಡಿಸಬೇಕಾಗಿದೆ. ಆದರೆ ಯಾರೂ ತಿಳಿದುಕೊಳ್ಳುವುದಿಲ್ಲ. ಸ್ವಯಂ ತಂದೆಯೇ ಬಂದು ಕಲಿಸುತ್ತಾರೆ. ಮನುಷ್ಯರು ಮನುಷ್ಯರಿಗೆಂದೂ ಕಲಿಸಲು ಸಾಧ್ಯವಿಲ್ಲ. ನನ್ನನ್ನು ನೆನಪು ಮಾಡಿ ಎಂದು ತಂದೆಯೇ ಹೇಳುತ್ತಾರೆ, ಇದಕ್ಕೆ ಪರಮಾತ್ಮನ ಜ್ಞಾನವೆಂದು ಹೇಳಲಾಗುತ್ತದೆ. ಪರಮಾತ್ಮನೇ ಜ್ಞಾನಸಾಗರನಾಗಿದ್ದಾರೆ, ಇವು ಬಹಳ ಅರಿತುಕೊಳ್ಳುವ ಮಾತುಗಳಾಗಿವೆ. ಬೇಹದ್ದಿನ ತಂದೆಯನ್ನು ನೆನಪು ಮಾಡಿ, ಆ ತಂದೆಯು ಹೊಸಪ್ರಪಂಚದ ಸ್ಥಾಪನೆ ಮಾಡುತ್ತಾರೆಂದು ಎಲ್ಲರಿಗೂ ತಿಳಿಸಿ. ಹೊಸಪ್ರಪಂಚವು ಸ್ಥಾಪನೆಯಾಗಬೇಕಾಗಿದೆ. ಭಗವಂತನನ್ನು ನೆನಪು ಮಾಡಬೇಕೆಂದು ಅವರು ತಿಳಿದುಕೊಂಡೇ ಇಲ್ಲ. ಅವರ ಗಮನದಲ್ಲಿಯೇ ಇಲ್ಲವೆಂದಮೇಲೆ ವಿಚಾರವೇನು ಮಾಡುತ್ತಾರೆ! ಇದನ್ನೂ ಸಹ ನೀವೇ ತಿಳಿದುಕೊಂಡಿದ್ದೀರಿ. ಪರಮಪಿತ ಪರಮಾತ್ಮನು ಶಿವಭಗವಂತನೊಬ್ಬರೇ ಆಗಿದ್ದಾರೆ. ಬ್ರಹ್ಮದೇವತಾಯನಮಃ, ವಿಷ್ಣು ದೇವತಾಯ ನಮಃ ಎಂದು ಹೇಳಿದಮೇಲೆ ಶಿವಪರಮಾತ್ಮಾಯ ನಮಃ ಎಂದು ಹೇಳುತ್ತಾರೆ. ಆ ತಂದೆಯು ಸರ್ವಶ್ರೇಷ್ಠನಾಗಿದ್ದಾರೆ ಅಂದಮೇಲೆ ಅವರು ಯಾರೆಂಬುದನ್ನು ತಿಳಿದುಕೊಂಡೇ ಇಲ್ಲ. ಒಂದುವೇಳೆ ಕಲ್ಲುಮುಳ್ಳಿನಲ್ಲಿದ್ದರೆ ಮತ್ತೆ ನಮಸ್ಕಾರವು ಯಾರಿಗೆ! ಅರ್ಥವಿಲ್ಲದೆ ಹೇಳುತ್ತಿರುತ್ತಾರೆ. ಇಲ್ಲಂತೂ ನೀವು ಶಬ್ಧದಿಂದ ದೂರ ಹೋಗಬೇಕಾಗಿದೆ ಅರ್ಥಾತ್ ನಿರ್ವಾಣಧಾಮ, ಶಾಂತಿಧಾಮದಲ್ಲಿ ಹೋಗಬೇಕಾಗಿದೆ. ಶಾಂತಿಧಾಮ-ಸುಖಧಾಮ ಎಂದು ಹೇಳಲಾಗುತ್ತದೆ, ಅದು ಸ್ವರ್ಗಧಾಮವಾಗಿದೆ, ನರಕಕ್ಕೆ ಧಾಮವೆಂದು ಹೇಳುವುದಿಲ್ಲ. ಅಕ್ಷರವು ಬಹಳ ಸಹಜವಾಗಿದೆ. ಕ್ರಿಸ್ತನ ಧರ್ಮವು ಎಲ್ಲಿಯವರೆಗೆ ನಡೆಯುತ್ತದೆ? ಇದೂ ಸಹ ಅವರಿಗೆ ತಿಳಿದಿಲ್ಲ. ಕ್ರಿಸ್ತನಿಗೆ 3000 ವರ್ಷಗಳ ಮೊದಲು ಸ್ವರ್ಗವಿತ್ತು ಅರ್ಥಾತ್ ದೇವಿ-ದೇವತೆಗಳ ರಾಜ್ಯವಿತ್ತು ಅಂದಮೇಲೆ ಈಗ ಕ್ರಿಸ್ತಶಕ 2000 ವರ್ಷಗಳಾಯಿತು ಅಂದಾಗ ಈಗ ಮತ್ತೆ ದೇವತಾಧರ್ಮವು ಆಗಬೇಕಲ್ಲವೆ. ಮನುಷ್ಯರ ಬುದ್ಧಿಯು ಸ್ವಲ್ಪವೂ ಕೆಲಸ ಮಾಡುವುದಿಲ್ಲ. ನಾಟಕದ ರಹಸ್ಯವನ್ನು ಅರಿತುಕೊಳ್ಳದಿರುವ ಕಾರಣ ಎಷ್ಟೊಂದು ಉಪಾಯಗಳನ್ನು ಮಾಡುತ್ತಿರುತ್ತಾರೆ. ಈ ಮಾತುಗಳನ್ನು ಬಹಳ ವಯಸ್ಸಾಗಿರುವ ವೃದ್ಧ ಮಾತೆಯರಂತೂ ಅರಿತುಕೊಳ್ಳಲು ಸಾಧ್ಯವಿಲ್ಲ. ತಂದೆಯು ತಿಳಿಸುತ್ತಾರೆ- ಈಗ ನಿಮ್ಮೆಲ್ಲರದು ವಾನಪ್ರಸ್ಥ ಸ್ಥಿತಿಯಾಗಿದೆ. ವಾಣಿಯಿಂದ ದೂರ ಹೋಗಬೇಕಾಗಿದೆ. ನಿರ್ವಾಣಧಾಮಕ್ಕೆ ಹೋದರೆಂದು ಅವರು ಭಲೆ ಹೇಳುತ್ತಾರೆ ಆದರೆ ಯಾರೂ ಹೋಗುವುದಿಲ್ಲ. ಪುನರ್ಜನ್ಮವನ್ನು ಅವಶ್ಯವಾಗಿ ತೆಗೆದುಕೊಳ್ಳಬೇಕಾಗಿದೆ. ಹಿಂತಿರುಗಿ ಯಾರೂ ಹೋಗುವುದಿಲ್ಲ. ವಾನಪ್ರಸ್ಥದಲ್ಲಿ ಹೋಗಲು ಗುರುಗಳ ಸಂಗ ಮಾಡುತ್ತಾರೆ, ಬಹಳ ವಾನಪ್ರಸ್ಥ ಆಶ್ರಮಗಳಿವೆ, ಮಾತೆಯರು ಅನೇಕರಿದ್ದಾರೆ. ಅಲ್ಲಿಯೂ ಸಹ ನೀವು ಹೋಗಿ ಸರ್ವೀಸ್ ಮಾಡಬಹುದು. ವಾನಪ್ರಸ್ಥ ಎಂಬುದರ ಅರ್ಥವೇನೆಂಬುದು ತಂದೆಯು ನಿಮಗೆ ತಿಳಿಸುತ್ತಾರೆ. ಈಗ ನೀವೆಲ್ಲರೂ ವಾನಪ್ರಸ್ಥಿಗಳಾಗಿದ್ದೀರಿ. ಇಡೀ ಪ್ರಪಂಚವೇ ವಾನಪ್ರಸ್ಥಿಯಾಗಿದೆ. ಯಾರೆಲ್ಲಾ ಮನುಷ್ಯಾತ್ಮರನ್ನು ನೋಡುತ್ತೀರೋ ಎಲ್ಲರೂ ವಾನಪ್ರಸ್ಥಿಗಳಾಗಿದ್ದಾರೆ. ಸರ್ವರ ಸದ್ಗತಿದಾತ ಒಬ್ಬರೇ ಸದ್ಗುರುವಾಗಿದ್ದಾರೆ. ಎಲ್ಲರೂ ಹೋಗಲೇಬೇಕಾಗಿದೆ. ಯಾರು ಚೆನ್ನಾಗಿ ಪುರುಷಾರ್ಥ ಮಾಡುತ್ತಾರೆಯೋ ಅವರು ಶ್ರೇಷ್ಠಪದವಿಯನ್ನು ಪಡೆಯುತ್ತಾರೆ. ಇದಕ್ಕೆ ಅಂತಿಮ ಸಮಯವೆಂದು ಹೇಳಲಾಗುತ್ತದೆ. ಅಂತಿಮ ಎಂಬುದರ ಅರ್ಥವನ್ನೂ ಸಹ ಅವರು ತಿಳಿದುಕೊಂಡಿಲ್ಲ. ನೀವು ಮಕ್ಕಳಲ್ಲಿಯೂ ನಂಬರ್ವಾರ್ ತಿಳಿದುಕೊಳ್ಳುತ್ತೀರಿ. ಇದು ಬಹಳ ಉನ್ನತ ಗುರಿಯಾಗಿದೆ ಅಂದಮೇಲೆ ಎಲ್ಲರೂ ತಿಳಿಯಬೇಕು. ನಾವೀಗ ಮನೆಗೆ ಖಂಡಿತ ಹಿಂತಿರುಗಿ ಹೋಗಬೇಕಾಗಿದೆ. ಆತ್ಮಗಳು ವಾಣಿಯಿಂದ ದೂರ ಹೋಗಬೇಕಾಗಿದೆ ನಂತರ ಬಂದು ಪಾತ್ರವನ್ನು ಪುನರಾವರ್ತನೆ ಮಾಡುತ್ತೀರಿ ಆದರೆ ತಂದೆಯನ್ನು ನೆನಪು ಮಾಡುತ್ತಾ-ಮಾಡುತ್ತಾ ಹೋಗುತ್ತೀರೆಂದರೆ ಶ್ರೇಷ್ಠಪದವಿಯನ್ನು ಪಡೆಯುತ್ತೀರಿ. ದೈವೀಗುಣಗಳನ್ನು ಧಾರಣೆ ಮಾಡಬೇಕಾಗಿದೆ. ಯಾವುದೇ ಕೊಳಕು ಕೆಲಸಗಳಾದ ಕಳ್ಳತನ ಇತ್ಯಾದಿಗಳನ್ನು ಮಾಡಬಾರದು. ಯೋಗದಿಂದಲೇ ನೀವು ಪುಣ್ಯಾತ್ಮರಾಗುತ್ತೀರಿ, ಜ್ಞಾನದಿಂದಲ್ಲ. ಆತ್ಮವು ಪವಿತ್ರವಾಗಬೇಕು, ಶಾಂತಿಧಾಮದಲ್ಲಿ ಪವಿತ್ರ ಆತ್ಮಗಳೇ ಹೋಗಲು ಸಾಧ್ಯ. ಎಲ್ಲಾ ಆತ್ಮರು ಅಲ್ಲಿರುತ್ತಾರೆ, ಈಗ ಬರುತ್ತಾ ಇರುತ್ತಾರೆ. ಈಗ ಇನ್ನೂ ಯಾರೆಲ್ಲಾ ಉಳಿದಿರುವರೋ ಅವರು ಬರುತ್ತಾ ಇರುತ್ತಾರೆ.

ನೀವು ಮಕ್ಕಳು ಬಹಳಷ್ಟು ನೆನಪಿನ ಯಾತ್ರೆಯಲ್ಲಿರಬೇಕಾಗಿದೆ. ಇಲ್ಲಿ ನಿಮಗೆ ಒಳ್ಳೆಯ ಸಹಯೋಗ ಸಿಗುತ್ತದೆ, ಒಬ್ಬರಿಗೆ ಇನ್ನೊಬ್ಬರ ಬಲವು ಸಿಗುತ್ತದೆಯಲ್ಲವೆ. ನಿಮ್ಮಲ್ಲಿ ಕೆಲವು ಮಕ್ಕಳ ಶಕ್ತಿಯೇ ಕೆಲಸ ಮಾಡುತ್ತದೆ. ಎಲ್ಲರ ಬೆರಳಿನ ಸಹಯೋಗದಿಂದ ಗೋವರ್ಧನ ಪರ್ವತವನ್ನು ಎತ್ತಿದರೆಂದು ತೋರಿಸುತ್ತಾರೆ. ನೀವು ಗೋಪ-ಗೋಪಿಕೆಯರಾಗಿದ್ದೀರಲ್ಲವೆ! ಸತ್ಯಯುಗೀ ದೇವಿ-ದೇವತೆಗಳಿಗೆ ಗೋಪ-ಗೋಪಿಕೆಯರೆಂದು ಹೇಳುವುದಿಲ್ಲ. ವಿಶ್ವಪರಿವರ್ತನೆಯಲ್ಲಿ ನೀವು ತಮ್ಮ ಬೆರಳಿನ ಸಹಯೋಗವನ್ನು ಕೊಡುತ್ತೀರಿ. ಕಲಿಯುಗವನ್ನು ಸ್ವರ್ಣೀಮಯುಗ ಅಥವಾ ನರಕವನ್ನು ಸ್ವರ್ಗವನ್ನಾಗಿ ಮಾಡಲು ನೀವು ಒಬ್ಬ ತಂದೆಯ ಜೊತೆ ಬುದ್ಧಿಯೋಗವನ್ನು ಜೋಡಿಸುತ್ತೀರಿ. ಯೋಗದಿಂದಲೇ ಪವಿತ್ರರಾಗಬೇಕಾಗಿದೆ. ಅಂದಮೇಲೆ ಈ ಮಾತುಗಳನ್ನು ಮರೆಯಬಾರದು. ಈ ಶಕ್ತಿಯು ನಿಮಗೆ ಇಲ್ಲಿಯೇ ಸಿಗುತ್ತದೆ. ಹೊರಗಡೆ ಆಸುರೀ ಮನುಷ್ಯರ ಸಂಗವಿರುತ್ತದೆ. ಅಲ್ಲಿ ನೆನಪಿನಲ್ಲಿರುವುದು ಕಷ್ಟವಾಗಿರುತ್ತದೆ. ಇಲ್ಲಿರುವಷ್ಟು ಅಡೋಲವಾಗಿ ನೀವು ಅಲ್ಲಿರಲು ಸಾಧ್ಯವಿಲ್ಲ. ಸಂಘಟನೆಯು ಬೇಕಲ್ಲವೆ. ಇಲ್ಲಿ ಎಲ್ಲರೂ ಏಕರಸವಾಗಿ ಒಟ್ಟಿಗೆ ಕುಳಿತುಕೊಳ್ಳುತ್ತೀರಿ. ಆದ್ದರಿಂದ ಸಹಯೋಗವು ಸಿಗುತ್ತದೆ. ಇಲ್ಲಿ ಉದ್ಯೋಗ-ವ್ಯವಹಾರವೇನೂ ಇರುವುದಿಲ್ಲ ಅಂದಮೇಲೆ ಬುದ್ಧಿಯು ಮತ್ತೆಲ್ಲಿ ಹೋಗುತ್ತದೆ! ಹೊರಗಡೆಯಿದ್ದಾಗ ವ್ಯಾಪಾರ-ವ್ಯವಹಾರ, ಮನೆ ಎಲ್ಲವೂ ಅವಶ್ಯವಾಗಿ ಸೆಳೆಯುತ್ತದೆ. ಇಲ್ಲಿ ಏನೂ ಇಲ್ಲ. ಇಲ್ಲಿಯ ವಾಯುಮಂಡಲವು ಬಹಳ ಶುದ್ಧವಾಗಿರುತ್ತದೆ. ನಾಟಕದನುಸಾರ ನೀವು ಎಷ್ಟು ದೊಡ್ಡ ಬೆಟ್ಟದ ಮೇಲೆ ಕುಳಿತಿದ್ದೀರಿ. ನಿಮ್ಮ ನೆನಪಾರ್ಥವು ನಿಖರವಾಗಿ ನಿಂತಿದೆ. ಮೇಲೆ ಸ್ವರ್ಗವನ್ನು ತೋರಿಸಿದ್ದಾರೆ, ಇಲ್ಲವೆಂದು ಇನ್ನೆಲ್ಲಿ ಮಾಡುವುದು! ಆದ್ದರಿಂದ ತಂದೆಯು ತಿಳಿಸುತ್ತಾರೆ- ಇಲ್ಲಿ ಕುಳಿತುಕೊಂಡು ತಮ್ಮ ಪರಿಶೀಲನೆ ಮಾಡಿಕೊಳ್ಳಿ- ನಾನು ತಂದೆಯ ನೆನಪಿನಲ್ಲಿ ಕುಳಿತುಕೊಳ್ಳುತ್ತೇನೆಯೇ? ಸ್ವದರ್ಶನಚಕ್ರವೂ ತಿರುಗುತ್ತಿರಲಿ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ತಮ್ಮ ನೆನಪಿನ ಚಾರ್ಟಿನ ಮೇಲೆ ಪೂರ್ಣ ಗಮನವನ್ನಿಡಬೇಕು, ನಾವು ತಂದೆಯನ್ನು ಎಷ್ಟು ಸಮಯ ನೆನಪು ಮಾಡುತ್ತೇವೆ. ನೆನಪಿನ ಸಮಯದಲ್ಲಿ ಬುದ್ಧಿಯು ಎಲ್ಲೆಲ್ಲಿಯೋ ಅಲೆಯುತ್ತಿಲ್ಲವೇ? ಎಂದು ನೋಡಿಕೊಳ್ಳಬೇಕಾಗಿದೆ.

2. ಅಂತಿಮ ಸಮಯದಲ್ಲಿ ವಾಣಿಯಿಂದ ದೂರಹೋಗುವ ಪುರುಷಾರ್ಥ ಮಾಡಬೇಕಾಗಿದೆ. ತಂದೆಯ ನೆನಪಿನ ಜೊತೆಜೊತೆಗೆ ದೈವೀಗುಣಗಳನ್ನೂ ಧಾರಣೆ ಮಾಡಬೇಕಾಗಿದೆ. ಯಾವುದೇ ಕೆಟ್ಟಕೆಲಸ, ಕಳ್ಳತನ ಇತ್ಯಾದಿಗಳನ್ನು ಮಾಡಬಾರದು.

ವರದಾನ:
ವ್ಯರ್ಥ ಹಾಗೂ ತೊಂದರೆ ಮಾಡುವಂತಹ ಮಾತುಗಳಿಂದ ಮುಕ್ತ ಡಬಲ್ಲೈಟ್ ಅವ್ಯಕ್ತ ಫರಿಶ್ತಾ ಭವ

ಅವ್ಯಕ್ತ ಫರಿಶ್ತಾ ಆಗಬೇಕೆಂದರೆ ವ್ಯರ್ಥಮಾತು- ಯಾವುದು ಯಾರಿಗೂ ಇಷ್ಟವೆನಿಸುವುದಿಲ್ಲವೋ ಅದನ್ನು ಸದಾಕಾಲಕ್ಕಾಗಿ ಸಮಾಪ್ತಿಗೊಳಿಸಿರಿ. ಎರಡುಶಬ್ಧಗಳಲ್ಲಿಯೇ ಮಾತಾಗುತ್ತದೆ ಆದರೆ ಅದನ್ನು ಉದ್ದಮಾಡಿ ಮಾತನಾಡುತ್ತಿರುವುದು- ಇದೂ ಸಹ ವ್ಯರ್ಥವಾಗಿದೆ. ಯಾವ ಕಾರ್ಯವು ನಾಲ್ಕು ಶಬ್ಧಗಳಲ್ಲಿಯೇ ಆಗಲು ಸಾಧ್ಯವಿದೆ, ಅದನ್ನು 12-15 ಶಬ್ಧಗಳಲ್ಲಿ ಮಾತನಾಡದಿರಿ. ಕಡಿಮೆ ಮಾತನಾಡಿರಿ-ನಿಧಾನವಾಗಿ ಮಾತನಾಡಿರಿ...... ಈ ಸ್ಲೋಗನ್ನ್ನು ಕೊರಳಿನಲ್ಲಿ ಧರಿಸಿರಿ. ವ್ಯರ್ಥ ಅಥವ ತೊಂದರೆ ಮಾಡುವ ಮಾತುಗಳಿಂದ ಮುಕ್ತರಾಗುತ್ತೀರೆಂದರೆ, ಅವ್ಯಕ್ತ ಫರಿಶ್ತಾ ಆಗುವುದರಲ್ಲಿ ಬಹಳ ಸಹಯೋಗವು ಸಿಗುತ್ತದೆ.

ಸ್ಲೋಗನ್:
ಯಾರು ಸ್ವಯಂನ್ನು ಪರಮಾತ್ಮ ಪ್ರೀತಿಯಲ್ಲಿ ಅರ್ಪಣೆ ಮಾಡುತ್ತಾರೆ, ಸಫಲತೆಯು ಅವರ ಕೊರಳಿನ ಮಾಲೆಯಾಗಿಬಿಡುತ್ತದೆ.