21.11.24 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ತಾವೀಗ
ಶಿಕ್ಷಕರಾಗಿ ಎಲ್ಲರಿಗೆ ಮನ-ವಶೀಕರಣ ಮಂತ್ರವನ್ನು ತಿಳಿಸಬೇಕಾಗಿದೆ, ಇದು ತಾವೆಲ್ಲಾ ಮಕ್ಕಳ
ಕರ್ತವ್ಯವಾಗಿದೆ”
ಪ್ರಶ್ನೆ:
ತಂದೆಯು ಎಂತಹ
ಮಕ್ಕಳಿಂದ ಏನನ್ನೂ ಸ್ವೀಕಾರ ಮಾಡುವುದಿಲ್ಲ?
ಉತ್ತರ:
ನಾನು ಇಷ್ಟೊಂದು
ಕೊಡುತ್ತೇನೆ, ನಾನು ಇಷ್ಟೊಂದು ಸಹಯೋಗ ನೀಡಬಲ್ಲೆನು ಎಂದು ಯಾರಿಗೆ ಅಹಂಕಾರವಿರುವುದೋ ಅಂತಹವರಿಂದ
ತಂದೆಯು ಏನನ್ನೂ ಸ್ವೀಕರಿಸುವುದಿಲ್ಲ. ತಂದೆಯು ಹೇಳುತ್ತಾರೆ - ಬೀಗದಕೈ ನನ್ನ ಕೈಯಲ್ಲಿದೆ,
ಬೇಕೆಂದರೆ ನಾನು ಯಾರನ್ನೇ ಆದರೂ ಬಡವರನ್ನಾಗಿಯೂ ಮಾಡಬಲ್ಲೆನು ಅಥವಾ ಸಾಹುಕಾರರನ್ನಾಗಿಯೂ
ಮಾಡಬಲ್ಲೆನು, ಇದೂ ಸಹ ನಾಟಕದಲ್ಲಿ ರಹಸ್ಯವಿದೆ. ಯಾರಿಗೆ ಇಂದು ತಮ್ಮ ಶ್ರೀಮಂತಿಕೆಯ ಅಭಿಮಾನವಿದೆಯೋ
ಅವರು ನಾಳೆ ಬಡವರಾಗಿಬಿಡುತ್ತಾರೆ ಮತ್ತು ಬಡ ಮಕ್ಕಳು ತಂದೆಯ ಕಾರ್ಯದಲ್ಲಿ ತಮ್ಮ ಪೈಸೆ-ಪೈಸೆಯನ್ನೂ
ಸಫಲ ಮಾಡಿ ಸಾಹುಕಾರರಾಗಿಬಿಡುತ್ತಾರೆ.
ಓಂ ಶಾಂತಿ.
ಇದನ್ನಂತೂ ಮಕ್ಕಳು ತಿಳಿದುಕೊಂಡಿದ್ದೀರಿ - ತಂದೆಯು ನಮಗೆ ಹೊಸ ಪ್ರಪಂಚದ ಆಸ್ತಿಯನ್ನು ಕೊಡಲು
ಬಂದಿದ್ದಾರೆ. ಇದು ಮಕ್ಕಳಿಗೆ ಪಕ್ಕಾ ಇದೆಯಲ್ಲವೆ - ನಾವು ತಂದೆಯನ್ನು ಎಷ್ಟು ನೆನಪು
ಮಾಡುತ್ತೇವೆಯೋ ಅಷ್ಟು ಪವಿತ್ರರಾಗುತ್ತೇವೆ. ನಾವು ಎಷ್ಟು ಒಳ್ಳೆಯ ಶಿಕ್ಷಕರಾಗುತ್ತೇವೆಯೋ ಅಷ್ಟು
ಶ್ರೇಷ್ಠ ಪದವಿಯನ್ನು ಪಡೆಯುತ್ತೇವೆ. ತಂದೆಯು ನೀವು ಮಕ್ಕಳಿಗೆ ಶಿಕ್ಷಕನ ರೂಪದಲ್ಲಿ ಓದಿಸುವುದನ್ನು
ಕಲಿಸುತ್ತಾರೆ ಮತ್ತೆ ನೀವು ಅನ್ಯರಿಗೆ ಕಲಿಸಬೇಕಾಗಿದೆ. ನೀವು ಓದಿಸುವಂತಹ ಶಿಕ್ಷಕರಂತೂ ಆಗುತ್ತೀರಿ
ಆದರೆ ನೀವು ಯಾರಿಗೂ ಗುರುವಾಗಲು ಸಾಧ್ಯವಿಲ್ಲ ಕೇವಲ ಶಿಕ್ಷಕರಾಗಬಲ್ಲಿರಿ. ಗುರುವಂತೂ ಒಬ್ಬ
ಸದ್ಗುರುವೇ ಆಗಿದ್ದಾರೆ, ಅವರು ಕಲಿಸಿಕೊಡುತ್ತಾರೆ. ಸರ್ವರ ಸದ್ಗುರು ತಂದೆಯೊಬ್ಬರೇ ಆಗಿದ್ದಾರೆ,
ಅವರು ಶಿಕ್ಷಕರನ್ನಾಗಿ ಮಾಡುತ್ತಾರೆ. ನೀವು ಎಲ್ಲರಿಗೆ ವಿದ್ಯೆಯನ್ನು ಓದಿಸಿ ಮನ್ಮನಾಭವದ
ಮಾರ್ಗವನ್ನು ತಿಳಿಸುತ್ತಾ ಇರುತ್ತೀರಿ. ನನ್ನನ್ನು ನೆನಪು ಮಾಡಿ ಮತ್ತು ನೀವು ಶಿಕ್ಷಕರೂ ಆಗಿ ಎಂದು
ನಿಮಗೆ ಕರ್ತವ್ಯವನ್ನು ಕೊಟ್ಟಿದ್ದಾರೆ. ನೀವು ಯಾರಿಗಾದರೂ ತಂದೆಯ ಪರಿಚಯವನ್ನು ಕೊಡುತ್ತೀರೆಂದರೂ
ಸಹ ಅವರ ಕರ್ತವ್ಯವೂ ಸಹ ತಂದೆಯನ್ನು ನೆನಪು ಮಾಡುವುದಾಗಿದೆ. ಶಿಕ್ಷಕರ ರೂಪದಲ್ಲಿ ಸೃಷ್ಟಿಚಕ್ರದ
ಜ್ಞಾನವನ್ನು ಕೊಡಬೇಕಾಗುತ್ತದೆ. ತಂದೆಯನ್ನು ಅವಶ್ಯವಾಗಿ ನೆನಪು ಮಾಡಬೇಕಾಗುತ್ತದೆ. ತಂದೆಯ
ನೆನಪಿನಿಂದಲೇ ಪಾಪಗಳು ಭಸ್ಮವಾಗಲಿದೆ. ನಾವು ಪಾಪಾತ್ಮರಾಗಿದ್ದೇವೆ ಎಂದು ಮಕ್ಕಳಿಗೆ ತಿಳಿದಿದೆ
ಆದ್ದರಿಂದ ತಂದೆಯು ಎಲ್ಲರಿಗೆ ತಿಳಿಸುತ್ತಾರೆ - ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು
ಮಾಡಿ ಆಗ ನಿಮ್ಮ ಪಾಪಗಳು ಭಸ್ಮವಾಗುತ್ತವೆ. ತಂದೆಯೇ ಪತಿತ-ಪಾವನನಾಗಿದ್ದಾರೆ, ಯುಕ್ತಿಯನ್ನು
ತಿಳಿಸುತ್ತಾರೆ - ಮಧುರ ಮಕ್ಕಳೇ, ನೀವಾತ್ಮಗಳು ಪತಿತರಾಗಿದ್ದೀರಿ ಆದಕಾರಣವೇ ಶರೀರವೂ ಸಹ
ಪತಿತವಾಗಿದೆ. ಮೊದಲು ನೀವು ಪವಿತ್ರರಾಗಿದ್ದಿರಿ, ಈಗ ಅಪವಿತ್ರರಾಗಿದ್ದೀರಿ. ಪತಿತರಿಂದ
ಪಾವನರಾಗುವ ಯುಕ್ತಿಯನ್ನು ತಂದೆಯು ಬಹಳ ಸಹಜವಾಗಿ ತಿಳಿಸುತ್ತಾರೆ. ತಂದೆಯನ್ನು ನೆನಪು ಮಾಡಿದರೆ
ನೀವು ಪವಿತ್ರರಾಗಿಬಿಡುತ್ತೀರಿ. ಏಳುತ್ತಾ-ಕುಳಿತುಕೊಳ್ಳುತ್ತಾ, ನಡೆದಾಡುತ್ತಾ ತಂದೆಯನ್ನು ನೆನಪು
ಮಾಡಿ. ಅವರು ಗಂಗಾಸ್ನಾನ ಮಾಡುತ್ತಾರೆ ಮತ್ತು ಗಂಗೆಯನ್ನು ನೆನಪು ಮಾಡುತ್ತಾರೆ. ಗಂಗೆಯು
ಪತಿತ-ಪಾವನಿಯಾಗಿದೆ. ಗಂಗೆಯನ್ನು ನೆನಪು ಮಾಡುವುದರಿಂದ ಪಾವನರಾಗುತ್ತೇವೆಂದು ತಿಳಿಯುತ್ತಾರೆ ಆದರೆ
ತಂದೆಯು ತಿಳಿಸುತ್ತಾರೆ - ಯಾರೂ ಸಹ ಸ್ನಾನ ಮಾಡುವುದರಿಂದ ಪಾವನರಾಗಲು ಸಾಧ್ಯವಿಲ್ಲ. ನೀರಿನಿಂದ
ಹೇಗೆ ಪಾವನರಾಗುತ್ತೀರಿ! ನಾನು ಪತಿತ-ಪಾವನನಾಗಿದ್ದೇನೆ. ಹೇ ಮಕ್ಕಳೇ, ದೇಹ ಸಹಿತ ದೇಹದ ಎಲ್ಲಾ
ಧರ್ಮಗಳನ್ನು ಬಿಟ್ಟು ನನ್ನನ್ನು ನೆನಪು ಮಾಡುವುದರಿಂದ ನೀವು ಪಾವನರಾಗಿ ಮತ್ತೆ ತಮ್ಮ ಮನೆಯಾದ
ಮುಕ್ತಿಧಾಮವನ್ನು ತಲುಪುತ್ತೀರಿ. ಇಡೀ ಕಲ್ಪ ನೀವು ಮನೆಯನ್ನು ಮರೆತಿದ್ದೀರಿ. ಇಡೀ ಕಲ್ಪದಲ್ಲಿ
ಯಾರೂ ತಂದೆಯನ್ನು ಅರಿತುಕೊಂಡೇ ಇಲ್ಲ. ಒಂದೇಬಾರಿ ಬಂದು ತಂದೆಯು ಈ ಮುಖದ ಮೂಲಕ ತಮ್ಮ ಪರಿಚಯವನ್ನು
ಕೊಡುತ್ತಾರೆ. ಈ (ಬ್ರಹ್ಮಾ) ಮುಖಕ್ಕೆ ಎಷ್ಟೊಂದು ಮಹಿಮೆಯಿದೆ! ಗೋಮುಖವೆಂದು ಹೇಳುತ್ತಾರಲ್ಲವೆ. ಆ
ಗೋವು ಪ್ರಾಣಿಯಾಗಿದೆ, ಇಲ್ಲಿ ಇದು ಮನುಷ್ಯರ ಮಾತಾಗಿದೆ. ನಿಮಗೆ ತಿಳಿದಿದೆ - ಇವರು (ಬ್ರಹ್ಮಾ)
ದೊಡ್ಡತಾಯಿಯಾಗಿದ್ದಾರೆ, ಈ ತಾಯಿಯ ಮೂಲಕ ಶಿವತಂದೆಯು ನಿಮ್ಮೆಲ್ಲರನ್ನೂ ದತ್ತು ಮಾಡಿಕೊಳ್ಳುತ್ತಾರೆ.
ನೀವೀಗ ಬಾಬಾ, ಬಾಬಾ ಎಂದು ಹೇಳುತ್ತೀರಿ. ತಂದೆಯೂ ಸಹ ಹೇಳುತ್ತಾರೆ - ಮಕ್ಕಳೇ, ಈ ನೆನಪಿನ
ಯಾತ್ರೆಯಿಂದಲೇ ನಿಮ್ಮ ಪಾಪಗಳು ಭಸ್ಮವಾಗುತ್ತವೆ. ಮಕ್ಕಳಿಗೆ ತಂದೆಯ ನೆನಪು ಬರುತ್ತದೆಯಲ್ಲವೆ.
ತಂದೆಯ ಚಲನೆ-ಚಹರೆ ಎಲ್ಲವೂ ಮನಸ್ಸಿನಲ್ಲಿ ಕುಳಿತುಬಿಡುತ್ತದೆ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ,
ನಾವಾತ್ಮಗಳು ಹೇಗೋ ಹಾಗೆಯೇ ಪರಮಾತ್ಮನಿದ್ದಾರೆ. ರೂಪದಲ್ಲಿ ಯಾವುದೇ ಅಂತರವಿಲ್ಲ, ಶರೀರದ
ಸಂಬಂಧದಲ್ಲಂತೂ ಮುಖಲಕ್ಷಣಗಳು ಬೇರೆಯಾಗಿವೆ ಆದರೆ ಆತ್ಮದ ರೂಪವಂತೂ ಒಂದೇ ರೀತಿಯಿದೆ. ನಾವಾತ್ಮಗಳು
ಹೇಗೋ ಹಾಗೆಯೇ ತಂದೆಯೂ ಸಹ ಪರಮ ಆತ್ಮನಾಗಿದ್ದಾರೆ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ತಂದೆಯು
ಪರಮಧಾಮದಲ್ಲಿರುತ್ತಾರೆ, ನಾವೂ ಸಹ ಪರಮಧಾಮದ ನಿವಾಸಿಗಳಾಗಿದ್ದೇವೆ. ಪರಮ ಆತ್ಮ ಮತ್ತು
ನಾವಾತ್ಮಗಳಲ್ಲಿ ಯಾವುದೇ ಅಂತರವಿಲ್ಲ. ಅವರೂ ಬಿಂದುವಾಗಿದ್ದಾರೆ, ನಾವೂ ಬಿಂದುಗಳಾಗಿದ್ದೇವೆ. ಈ
ಜ್ಞಾನವು ಮತ್ತ್ಯಾರಿಗೂ ಇಲ್ಲ. ನಿಮಗೆ ತಂದೆಯು ತಿಳಿಸಿದ್ದಾರೆ ಆದರೆ ತಂದೆಯ ಬಗ್ಗೆ ಏನೇನನ್ನೋ
ಹೇಳಿಬಿಡುತ್ತಾರೆ - ಪರಮಾತ್ಮನು ಸರ್ವವ್ಯಾಪಿಯಾಗಿದ್ದಾರೆ, ಕಲ್ಲು-ಮುಳ್ಳಿನಲ್ಲಿದ್ದಾರೆ ಎಂದು
ಯಾರಿಗೆ ಏನು ಬರುತ್ತದೆಯೋ ಅದನ್ನು ಹೇಳಿಬಿಡುತ್ತಾರೆ. ನಾಟಕದನುಸಾರ ಭಕ್ತಿಮಾರ್ಗದಲ್ಲಿ ತಂದೆಯ
ನಾಮ, ರೂಪ, ದೇಶ, ಕಾಲವನ್ನು ಮರೆತುಹೋಗುತ್ತಾರೆ. ನೀವೂ ಸಹ ಮರೆತುಹೋಗುತ್ತೀರಿ. ಆತ್ಮವು ತನ್ನ
ತಂದೆಯನ್ನು ಮರೆತುಹೋಗುತ್ತದೆ. ಮಗುವು ತಂದೆಯನ್ನೇ ಮರೆತುಬಿಡುತ್ತಾರೆಂದರೆ ಉಳಿದಿನ್ನೇನು
ಅರಿತುಕೊಳ್ಳುತ್ತೀರಿ? ಆದ್ದರಿಂದಲೇ ನಿರ್ಧನಿಕರಾಗಿಬಿಟ್ಟಿರಿ, ಧಣಿ ಅರ್ಥಾತ್ ಮಾಲೀಕನನ್ನು ನೆನಪೇ
ಮಾಡುವುದಿಲ್ಲ. ಮಾಲೀಕನ ಪಾತ್ರವನ್ನೇ ಅರಿತುಕೊಂಡಿಲ್ಲ, ತಮ್ಮನ್ನೂ ಮರೆತುಹೋಗುತ್ತಾರೆ. ನೀವೀಗ
ಬಹಳ ಚೆನ್ನಾಗಿ ಅರಿತುಕೊಂಡಿದ್ದೀರಿ - ಅವಶ್ಯವಾಗಿ ನಾವು ಮರೆತುಹೋಗಿದ್ದೆವು, ನಾವು ಮೊದಲು ಇಂತಹ
ದೇವಿ-ದೇವತೆಗಳಾಗಿದ್ದೆವು, ಈಗ ಪ್ರಾಣಿಗಳಿಗಿಂತಲೂ ಕೀಳಾಗಿಬಿಟ್ಟಿದ್ದೇವೆ. ಮುಖ್ಯವಾಗಿ ನಾವು
ನಮ್ಮ ಆತ್ಮವನ್ನೇ ಮರೆತುಹೋಗಿದ್ದೇವೆ. ಈಗ ಅದನ್ನು ಅರ್ಥ ಮಾಡಿಸುವವರು ಯಾರು! ನಾವಾತ್ಮಗಳು
ಹೇಗಿದ್ದೇವೆ, ಹೇಗೆ ಪಾತ್ರವನ್ನಭಿನಯಿಸಿದ್ದೇವೆ ಎಂಬುದು ಯಾವುದೇ ಜೀವಾತ್ಮರಿಗೆ
ತಿಳಿದಿರುವುದಿಲ್ಲ. ನಾವೆಲ್ಲರೂ ಸಹೋದರ-ಸಹೋದರರಾಗಿದ್ದೇವೆ. ಈ ಜ್ಞಾನವು ಮತ್ತ್ಯಾರಲ್ಲಿಯೂ ಇಲ್ಲ.
ಈ ಸಮಯದಲ್ಲಿ ಸೃಷ್ಟಿಯೇ ತಮೋಪ್ರಧಾನವಾಗಿಬಿಟ್ಟಿದೆ, ಜ್ಞಾನವಿಲ್ಲ. ನಿಮ್ಮಲ್ಲಿ ಈಗ ಜ್ಞಾನವಿದೆ.
ನಾವಾತ್ಮಗಳು ಇಷ್ಟು ಸಮಯ ನಮ್ಮ ತಂದೆಯನ್ನು ನಿಂದನೆ ಮಾಡಿದ್ದೇವೆ ಎಂದು ಬುದ್ಧಿಯಲ್ಲಿ ಬಂದಿದೆ.
ಗ್ಲಾನಿ ಮಾಡುವುದರಿಂದ ತಂದೆಯಿಂದ ದೂರವಾಗುತ್ತಾ ಹೋಗುತ್ತೀರಿ, ನಾಟಕದನುಸಾರ ಏಣಿಯನ್ನು
ಕೆಳಗಿಳಿಯುತ್ತಾ ಬಂದಿರಿ. ಮೂಲಮಾತು ತಂದೆಯನ್ನು ನೆನಪು ಮಾಡುವುದಾಗಿದೆ. ತಂದೆಯು ಮತ್ತ್ಯಾವುದೇ
ಕಷ್ಟವನ್ನು ಕೊಡುವುದಿಲ್ಲ. ಮಕ್ಕಳಿಗೆ ಕೇವಲ ತಂದೆಯನ್ನು ನೆನಪು ಮಾಡುವ ಕಷ್ಟವಿದೆ. ತಂದೆಯು
ಎಂದಾದರೂ ಕಷ್ಟವನ್ನು ಕೊಡಲು ಸಾಧ್ಯವೆ! ಇದು ನಿಯಮವೇ ಇಲ್ಲ. ತಂದೆಯು ತಿಳಿಸುತ್ತಾರೆ - ನಾನು
ನಿಮಗೆ ಕಷ್ಟವೇನೂ ಕೊಡುವುದಿಲ್ಲ. ಯಾವುದೇ ಪ್ರಶ್ನೆಗಳನ್ನು ಕೇಳುತ್ತಾರೆಂದರೆ ಹೇಳುತ್ತೇನೆ, ಈ
ಮಾತುಗಳಲ್ಲಿ ಸಮಯವನ್ನೇಕೆ ಕಳೆಯುತ್ತೀರಿ? ತಂದೆಯನ್ನು ನೆನಪು ಮಾಡಿ, ನಾನು ನಿಮ್ಮನ್ನು
ಕರೆದುಕೊಂಡು ಹೋಗಲು ಬಂದಿದ್ದೇನೆ ಆದ್ದರಿಂದ ನೀವು ಮಕ್ಕಳು ನೆನಪಿನ ಯಾತ್ರೆಯಿಂದ ಪಾವನರಾಗಿ ಸಾಕು.
ನಾನೊಬ್ಬನೇ ಪತಿತ-ಪಾವನನಾಗಿದ್ದೇನೆ. ಎಲ್ಲಿಯೇ ಹೋಗಿ ಆದರೆ ನನ್ನನ್ನು ನೆನಪು ಮಾಡಿ ಎಂದು ತಂದೆಯು
ಯುಕ್ತಿಯನ್ನು ತಿಳಿಸುತ್ತಾರೆ. 84 ಜನ್ಮಗಳ ಚಕ್ರದ ರಹಸ್ಯವನ್ನೂ ಸಹ ತಂದೆಯು ತಿಳಿಸಿಬಿಟ್ಟಿದ್ದಾರೆ.
ಈಗ ತಮ್ಮ ಪರಿಶೀಲನೆ ಮಾಡಿಕೊಳ್ಳಿ - ನಾವು ತಂದೆಯನ್ನು ಎಷ್ಟು ನೆನಪು ಮಾಡುತ್ತೇವೆ? ಮತ್ತ್ಯಾವುದೇ
ಕಡೆಗಿನ ವಿಚಾರ ಮಾಡಬಾರದು. ಇದಂತೂ ಬಹಳ ಸಹಜವಾಗಿದೆ. ತಂದೆಯನ್ನು ನೆನಪು ಮಾಡಬೇಕು, ಮಗುವು
ಸ್ವಲ್ಪ ಬೆಳೆದು ದೊಡ್ಡದಾಗುತ್ತದೆಯೆಂದರೆ ತಾನಾಗಿಯೇ ತಂದೆ-ತಾಯಿಯನ್ನು ನೆನಪು ಮಾಡತೊಡಗುತ್ತದೆ.
ನೀವೂ ಸಹ ತಿಳಿದುಕೊಳ್ಳಿ - ನಾವಾತ್ಮಗಳು ತಂದೆಯ ಮಕ್ಕಳಾಗಿದ್ದೇವೆ ಅಂದಮೇಲೆ ಪರಿಶ್ರಮದಿಂದ ಏಕೆ
ನೆನಪು ಮಾಡಬೇಕು! ಏಕೆಂದರೆ ನಮ್ಮ ತಲೆಯ ಮೇಲೆ ಯಾವ ಪಾಪದ ಹೊರೆಯು ನಮ್ಮ ತಲೆಯ ಮೇಲಿದೆಯೋ ಅದು ಈ
ನೆನಪಿನಿಂದಲೇ ಸಮಾಪ್ತಿಯಾಗುತ್ತದೆ ಆದ್ದರಿಂದಲೇ ಸೆಕೆಂಡಿನಲ್ಲಿ ಜೀವನ್ಮುಕ್ತಿಯೆಂದು ಗಾಯನವಿದೆ.
ಜೀವನ್ಮುಕ್ತಿಯ ಆಧಾರವು ವಿದ್ಯೆಯ ಮೇಲಿದೆ ಮತ್ತು ಮುಕ್ತಿಯ ಆಧಾರವು ನೆನಪಿನಲ್ಲಿದೆ. ನೀವು
ತಂದೆಯನ್ನು ಎಷ್ಟು ನೆನಪು ಮಾಡುವಿರೋ ಮತ್ತು ವಿದ್ಯೆಯ ಮೇಲೆ ಗಮನಕೊಡುವಿರೋ ಅಷ್ಟು
ಶ್ರೇಷ್ಠಪದವಿಯನ್ನು ಪಡೆಯುತ್ತೀರಿ. ಉದ್ಯೋಗ-ವ್ಯವಹಾರಗಳನ್ನು ಭಲೆ ಮಾಡುತ್ತಾ ಇರಿ ಅದನ್ನು ತಂದೆಯು
ನಿರಾಕರಿಸುವುದಿಲ್ಲ. ನೀವು ಯಾವ ಉದ್ಯೋಗ-ವ್ಯವಹಾರಗಳನ್ನು ಮಾಡುತ್ತೀರಿ ಅದೂ ಸಹ ಹಗಲು-ರಾತ್ರಿ
ನೆನಪಿರುತ್ತದೆಯಲ್ಲವೆ ಅಂದಮೇಲೆ ಈಗ ಈ ಆತ್ಮಿಕ ವ್ಯಾಪಾರವನ್ನು ಕೊಡುತ್ತಾರೆ - ತಮ್ಮನ್ನು
ಆತ್ಮನೆಂದು ತಿಳಿದು ನನ್ನನ್ನು ನೆನಪು ಮಾಡಿ ಮತ್ತು 84 ಜನ್ಮಗಳನ್ನು ನೆನಪು ಮಾಡಿ. ನನ್ನನ್ನು
ನೆನಪು ಮಾಡುವುದರಿಂದಲೇ ನೀವು ಸತೋಪ್ರಧಾನರಾಗುವಿರಿ. ಇದೂ ಸಹ ನಿಮಗೆ ತಿಳಿದಿದೆ - ಈಗ ಹಳೆಯ
ವಸ್ತ್ರವಾಗಿದೆ ನಂತರ ಸತೋಪ್ರಧಾನ ಹೊಸವಸ್ತ್ರವು ಸಿಗುತ್ತದೆ. ತಮ್ಮ ಬುದ್ಧಿಯಲ್ಲಿ
ಸಾರರೂಪದಲ್ಲಿಟ್ಟುಕೊಂಡು ಬಹಳ ಲಾಭವನ್ನು ಪಡೆಯಬೇಕಾಗಿದೆ. ಹೇಗೆ ಶಾಲೆಯಲ್ಲಿ ಬಹಳಷ್ಟು
ಸಬ್ಜೆಕ್ಟ್ಗಳಿರುತ್ತವೆ ಆದರೂ ಸಹ ಆಂಗ್ಲ ಭಾಷೆಯ ಮೇಲೆ ಅಂಕಗಳು ಚೆನ್ನಾಗಿರುತ್ತವೆ ಏಕೆಂದರೆ
ಆಂಗ್ಲ ಭಾಷೆಯು ಮುಖ್ಯ ಭಾಷೆಯಾಗಿದೆ. ಅವರದು ಮೊದಲು ರಾಜ್ಯವಿತ್ತು ಆದ್ದರಿಂದ ಅದು ಹೆಚ್ಚಿನದಾಗಿ
ನಡೆಯುತ್ತದೆ. ಈಗಲೂ ಸಹ ಭಾರತವಾಸಿಗಳು ಸಾಲಗಾರರಾಗಿದ್ದಾರೆ. ಭಲೆ ಯಾರೆಷ್ಟೇ ಧನವಂತರಿರಬಹುದು ಆದರೆ
ನಮ್ಮ ರಾಜ್ಯದ ಯಾರು ಮುಖ್ಯಸ್ಥರಿದ್ದಾರೆಯೋ ಅವರು ಸಾಲಗಾರರಾಗಿದ್ದಾರೆಂಬುದು ಬುದ್ಧಿಯಲ್ಲಂತೂ
ಇರುತ್ತದೆಯಲ್ಲವೆ ಅಂದರೆ ನಮ್ಮ ಭಾರತವಾಸಿಗಳು ಸಾಲಗಾರರಾಗಿದ್ದಾರೆ. ನಾವು ಸಾಲಗಾರರೆಂದು
ಅವಶ್ಯವಾಗಿ ಪ್ರಜೆಗಳು ಹೇಳುತ್ತಾರಲ್ಲವೆ. ಇದೂ ಸಹ ತಿಳುವಳಿಕೆ ಬೇಕಲ್ಲವೆ. ನೀವಂತೂ ರಾಜಧಾನಿಯನ್ನು
ಸ್ಥಾಪನೆ ಮಾಡುತ್ತಿದ್ದೀರಿ. ನಿಮಗೆ ತಿಳಿದಿದೆ - ನಾವೀಗ ಇದೆಲ್ಲಾ ಸಾಲಗಳಿಂದ ಮುಕ್ತರಾಗಿ
ಸಾಹುಕಾರರಾಗುತ್ತೇವೆ ನಂತರ ಅರ್ಧಕಲ್ಪದವರೆಗೆ ನಾವು ಯಾರಿಂದಲೂ ಸಾಲವನ್ನು ತೆಗೆದುಕೊಳ್ಳುವವರಲ್ಲ.
ಸಾಲಗಾರರು ಪತಿತಪ್ರಪಂಚದ ಮಾಲೀಕರಾಗಿದ್ದಾರೆ. ಈಗ ನಾವು ಸಾಲಗಾರರೂ ಆಗಿದ್ದೇವೆ, ಪತಿತ ಪ್ರಪಂಚದ
ಮಾಲೀಕರೂ ಆಗಿದ್ದೇವೆ ಎಂದು ಹಾಡುತ್ತಾರಲ್ಲವೆ.
ನೀವು ಮಕ್ಕಳು
ತಿಳಿದುಕೊಂಡಿದ್ದೀರಿ - ನಾವು ಬಹಳ ಸಾಹುಕಾರರಾಗಿದ್ದೆವು, ರಾಜಕುಮಾರ-ಕುಮಾರಿಯರಾಗಿದ್ದೆವು, ಇದು
ನೆನಪಿರುತ್ತದೆ. ನಾವು ಇಂತಹ ವಿಶ್ವದ ಮಾಲೀಕರಾಗಿದ್ದೆವು, ಈಗ ಸಂಪೂರ್ಣ ಸಾಲಗಾರರು ಮತ್ತು
ಪತಿತರಾಗಿಬಿಟ್ಟಿದ್ದೇವೆ. ಈ ಆಟದ ಫಲಿತಾಂಶವನ್ನು ತಂದೆಯು ತಿಳಿಸುತ್ತಿದ್ದಾರೆ. ಫಲಿತಾಂಶವು
ಏನಾಗಿದೆ ಎಂಬುದು ನೀವು ಮಕ್ಕಳಿಗೆ ಸ್ಮೃತಿಯಲ್ಲಿ ಬಂದಿದೆ. ಸತ್ಯಯುಗದಲ್ಲಿ ನಾವು ಎಷ್ಟೊಂದು
ಸಾಹುಕಾರರಾಗಿದ್ದೆವು, ನಿಮ್ಮನ್ನು ಸಾಹುಕಾರರನ್ನಾಗಿ ಯಾರು ಮಾಡಿದರು? ಬಾಬಾ, ತಾವು ನಮ್ಮನ್ನು
ಎಷ್ಟೊಂದು ಸಾಹುಕಾರರನ್ನಾಗಿ ಮಾಡಿದ್ದಿರಿ ಎಂದು ಮಕ್ಕಳು ಹೇಳುತ್ತೀರಿ, ಒಬ್ಬ ತಂದೆಯೇ
ಸಾಹುಕಾರರನ್ನಾಗಿ ಮಾಡುವವರಾಗಿದ್ದಾರೆ, ಪ್ರಪಂಚದವರು ಈ ಮಾತುಗಳನ್ನು ತಿಳಿದುಕೊಂಡಿಲ್ಲ.
ಲಕ್ಷಾಂತರ ವರ್ಷಗಳೆಂದು ಹೇಳುವಕಾರಣ ಎಲ್ಲವನ್ನೂ ಮರೆತುಹೋಗಿದ್ದಾರೆ ಏನನ್ನೂ ಅರಿತುಕೊಂಡಿಲ್ಲ.
ನೀವೀಗ ಎಲ್ಲವನ್ನೂ ಅರಿತಿದ್ದೀರಿ, - ನಾವು ಪದಮಾಪದಮ ಸಾಹುಕಾರರಾಗಿದ್ದೆವು, ಬಹಳ
ಪವಿತ್ರರಾಗಿದ್ದೆವು, ಬಹಳ ಸುಖಿಯಾಗಿದ್ದೆವು, ಅಲ್ಲಿ ಸುಲಿಗೆ-ಪಾಪ ಇತ್ಯಾದಿ ಏನೂ ಇರಲಿಲ್ಲ. ಇಡೀ
ವಿಶ್ವದ ಮೇಲೆ ನಿಮ್ಮ ವಿಜಯವಿತ್ತು, ಗಾಯನವೂ ಇದೆ - ಶಿವತಂದೆಯು ತಾವು ಯಾವುದನ್ನು ಕೊಡುತ್ತೀರೋ
ಅದನ್ನು ಮತ್ತ್ಯಾರೂ ಕೊಡಲು ಸಾಧ್ಯವಿಲ್ಲ. ಅರ್ಧಕಲ್ಪದ ಸುಖವನ್ನು ಕೊಡಲು ಮತ್ತ್ಯಾರಿಗೂ
ಶಕ್ತಿಯಿಲ್ಲ. ತಂದೆಯು ತಿಳಿಸುತ್ತಾರೆ – ಭಕ್ತಿ ಮಾರ್ಗದಲ್ಲಿಯೂ ಸಹ ನಿಮಗೆ ಬಹಳಷ್ಟು ಸುಖ, ಅಪಾರ
ಧನವಿರುತ್ತದೆ. ಎಷ್ಟೊಂದು ವಜ್ರರತ್ನಗಳಿದ್ದವು, ಅವು ನಂತರ ಕೊನೆಯಲ್ಲಿ ಬಂದವರ ಕೈಯಲ್ಲಿ ಬರುತ್ತದೆ,
ಈಗಂತೂ ಅವು ಕಾಣಿಸುವುದೇ ಇಲ್ಲ. ನೀವು ಅಂತರವನ್ನಂತೂ ನೋಡುತ್ತೀರಲ್ಲವೆ. ನೀವೇ ಪೂಜ್ಯ
ದೇವಿ-ದೇವತೆಗಳಾಗಿದ್ದಿರಿ, ಈಗ ನೀವೇ ಪೂಜಾರಿಗಳಾಗಿದ್ದೀರಿ, ತಾವೇ ಪೂಜ್ಯ, ತಾವೇ ಪೂಜಾರಿ.
ತಂದೆಯೇನೂ ಪೂಜಾರಿಯಾಗುವುದಿಲ್ಲ ಆದರೆ ಪೂಜಾರಿ ಪ್ರಪಂಚದಲ್ಲಂತೂ ಬರುತ್ತಾರಲ್ಲವೆ. ತಂದೆಯಂತು ಸದಾ
ಪೂಜ್ಯರಾಗಿದ್ದಾರೆ, ಅವರೆಂದಿಗೂ ಪೂಜಾರಿಯಾಗುವುದಿಲ್ಲ. ನಿಮ್ಮನ್ನು ಪೂಜಾರಿಗಳಿಂದ ಪೂಜ್ಯರನ್ನಾಗಿ
ಮಾಡುವುದು ಅವರ ಕರ್ತವ್ಯವಾಗಿದೆ. ನಿಮ್ಮನ್ನು ಪೂಜಾರಿಗಳನ್ನಾಗಿ ಮಾಡುವುದು ರಾವಣನ ಕೆಲಸವಾಗಿದೆ.
ಇದು ಪ್ರಪಂಚದಲ್ಲಿ ಯಾರೂ ತಿಳಿದಿಲ್ಲ, ನೀವೂ ಸಹ ಮರೆತುಹೋಗುತ್ತೀರಿ. ಪ್ರತಿನಿತ್ಯವೂ ತಂದೆಯು
ತಿಳಿಸಿಕೊಡುತ್ತಿರುತ್ತಾರೆ. ತಂದೆಯು ಯಾರನ್ನಾದರೂ ಸಾಹುಕಾರರನ್ನಾಗಿ ಮಾಡಬಲ್ಲರು, ಬೇಕೆಂದರೆ
ಬಡವರನ್ನಾಗಿಯೂ ಮಾಡಬಲ್ಲರು, ಇದು ತಂದೆಯ ಕೈಯಲ್ಲಿದೆ. ತಂದೆಯು ತಿಳಿಸುತ್ತಾರೆ - ಯಾರು
ಸಾಹುಕಾರರಿದ್ದಾರೆಯೋ ಅವರು ಖಂಡಿತ ಬಡವರಾಗಬೇಕಾಗಿದೆ, ಆಗಿಯೇ ಆಗುತ್ತಾರೆ. ಅವರ ಪಾತ್ರವೇ ಹೀಗಿದೆ,
ಅವರೆಂದೂ ನಿಲ್ಲಲು ಸಾಧ್ಯವಿಲ್ಲ. ನಾನು ಇಂತಹವನಾಗಿದ್ದೇನೆ, ನನ್ನ ಬಳಿ ಇಂತಿಂತಹದ್ದಿದೆ ಎಂದು
ಧನವಂತರಿಗೆ ಬಹಳ ಅಹಂಕಾರವಿರುತ್ತದೆಯಲ್ಲವೆ. ಅಹಂಕಾರವನ್ನು ಮುರಿಯಲು ತಂದೆಯು ತಿಳಿಸುತ್ತಾರೆ -
ಇವರು ಯಾವಾಗ ಕೊಡುವುದಕ್ಕಾಗಿ ಬರುತ್ತಾರೆಯೋ ಆಗ ತಂದೆಯು ಹೇಳುತ್ತಾರೆ - ನಮಗೆ ಇದರ
ಅವಶ್ಯಕತೆಯಿಲ್ಲ, ತಮ್ಮ ಬಳಿಯೇ ಇಟ್ಟುಕೊಳ್ಳಿ, ಅವಶ್ಯಕತೆಯಿದ್ದಾಗ ತೆಗೆದುಕೊಳ್ಳುತ್ತೇನೆ ಏಕೆಂದರೆ
ಇದು ಏನೂ ಕೆಲಸಕ್ಕೆ ಬರುವುದಿಲ್ಲ ಏಕೆಂದರೆ ಸಾಹುಕಾರರಿಗೆ ತಮ್ಮ ಅಭಿಮಾನವಿರುತ್ತದೆ ಎಂಬುದನ್ನು
ತಂದೆಯು ನೋಡುತ್ತಾರೆ ಅಂದಮೇಲೆ ತೆಗೆದುಕೊಳ್ಳುವುದು, ಬಿಡುವುದೆಲ್ಲವೂ ತಂದೆಯ ಕೈಯಲ್ಲಿದೆ. ತಂದೆಯು
ಹಣವನ್ನೇನು ಮಾಡುತ್ತಾರೆ? ಸಾಹುಕಾರರ ಹಣದ ಅವಶ್ಯಕತೆಯಿಲ್ಲ. ನೀವು ಮಕ್ಕಳಿಗಾಗಿಯೇ ಈ ಕಟ್ಟಡಗಳು
ನಿರ್ಮಾಣವಾಗುತ್ತಿವೆ. ನೀವು ಬಂದು ತಂದೆಯೊಂದಿಗೆಮಿಲನ ಮಾಡಿ ಹೋಗಬೇಕಾಗಿದೆ, ಸದಾ
ಇಲ್ಲಿರುವಂತಿಲ್ಲ. ಹಣದ ಅವಶ್ಯಕತೆಯೇನಿರುತ್ತದೆ? ಇಲ್ಲಿ ಯಾವುದೇ ಸೈನ್ಯ ಹಾಗೂ ತೋಪು(ಫಿರಂಗಿ)
ಇತ್ಯಾದಿಗಳ ಅವಶ್ಯಕತೆಯಿಲ್ಲ. ನೀವು ವಿಶ್ವದ ಮಾಲೀಕರಾಗುತ್ತೀರಿ. ಈಗ ಯುದ್ಧದ ಮೈದಾನದಲ್ಲಿದ್ದೀರಿ.
ತಂದೆಯನ್ನು ನೆನಪು ಮಾಡುವ ವಿನಃ ನೀವು ಮತ್ತೇನೂ ಮಾಡುವುದಿಲ್ಲ. ತಂದೆಯು ಆದೇಶ ನೀಡಿದ್ದಾರೆ -
ನನ್ನನ್ನು ನೆನಪು ಮಾಡಿದರೆ ಇಷ್ಟೊಂದು ಶಕ್ತಿಯು ಸಿಗುತ್ತದೆ. ನಿಮ್ಮ ಧರ್ಮವು ಬಹಳ ಸುಖ
ಕೊಡುವುದಾಗಿದೆ. ತಂದೆಯು ಸರ್ವಶಕ್ತಿವಂತನಾಗಿದ್ದಾರೆ. ನೀವು ಅವರ ಮಕ್ಕಳಾಗುತ್ತೀರಿ, ಎಲ್ಲವೂ
ನೆನಪಿನ ಮೇಲೆ ಆಧಾರಿತವಾಗಿದೆ. ಇಲ್ಲಿ ನೀವು ಕೇಳುತ್ತೀರಿ ಮತ್ತು ಅದರ ಬಗ್ಗೆ ವಿಚಾರಸಾಗರ ಮಂಥನವು
ನಡೆಯುತ್ತದೆ. ಹೇಗೆ ಹಸು ಹುಲ್ಲು ತಿಂದ ಮೇಲೆ ಅದನ್ನು ಮೆಲುಕು ಹಾಕುತ್ತದೆ, ಬಾಯನ್ನಾಡಿಸುತ್ತಲೇ
ಇರುತ್ತದೆಯೊ ಹಾಗೆಯೇ ನೀವು ಮಕ್ಕಳೂ ಸಹ ಜ್ಞಾನದ ಮಾತುಗಳ ಬಗ್ಗೆ ಹೆಚ್ಚಿನದಾಗಿ ವಿಚಾರ ಮಾಡಿ.
ತಂದೆಯೊಂದಿಗೆ ನಾವು ಏನು ಕೇಳುವುದು! ತಂದೆಯಂತೂ ತಿಳಿಸುತ್ತಾರೆ - ಮಕ್ಕಳೇ, ಮನ್ಮನಾಭವ. ಇದರಿಂದಲೇ
ನೀವು ಸತೋಪ್ರಧಾನರಾಗುತ್ತೀರಿ. ಈ ಗುರಿ-ಉದ್ದೇಶವು ನಿಮ್ಮ ಸನ್ಮುಖದಲ್ಲಿಯೇ ಇದೆ.
ಸರ್ವಗುಣ ಸಂಪನ್ನರು, 16
ಕಲಾಸಂಪನ್ನರಾಗಬೇಕೆಂದು ನೀವು ತಿಳಿದುಕೊಂಡಿದ್ದೀರಿ. ಇದು ತಾನಾಗಿಯೇ ನಿಮ್ಮಲ್ಲಿ ಬಂದುಬಿಡಬೇಕು.
ಯಾರ ನಿಂದನೆ ಅಥವಾ ಪಾಪಕರ್ಮ ಇತ್ಯಾದಿಗಳೇನೂ ನಿಮ್ಮಿಂದ ಆಗಬಾರದು. ನೀವು ಯಾವುದೇ ಉಲ್ಟಾಕರ್ಮವನ್ನು
ಮಾಡಬಾರದು. ಈ ದೇವಿ-ದೇವತೆಗಳು ನಂಬರ್ವನ್ ಆಗಿದ್ದಾರೆ. ಪುರುಷಾರ್ಥದಿಂದಲೇ ಶ್ರೇಷ್ಠಪದವಿಯನ್ನು
ಪಡೆದಿದ್ದಾರಲ್ಲವೆ! ಅಹಿಂಸಾ ಪರಮೋ ದೇವಿ-ದೇವತಧರ್ಮವೆಂದು ಗಾಯನವಿದೆಯಲ್ಲವೆ. ಯಾರನ್ನಾದರೂ
ಕೊಲ್ಲುವುದು ಹಿಂಸೆಯಾಯಿತಲ್ಲವೆ. ತಂದೆಯು ತಿಳಿಸುತ್ತಾರೆ ಮತ್ತೆ ಮಕ್ಕಳು ಅಂತರ್ಮುಖಿಯಾಗಿ
ತಮ್ಮನ್ನು ನೋಡಿಕೊಳ್ಳಬೇಕು - ನಾವು ಏನಾಗಿದ್ದೇವೆ? ತಂದೆಯನ್ನು ನಾವು ನೆನಪು ಮಾಡುತ್ತೇವೆಯೇ?
ಎಷ್ಟು ಸಮಯ ನೆನಪು ಮಾಡುತ್ತೇವೆ? ನೆನಪನ್ನು ಎಂದೂ ಮರೆಯಲೇಬಾರದಷ್ಟು ಹೃದಯದ ಪ್ರೀತಿಯಿರಬೇಕು. ಈಗ
ಬೇಹದ್ದಿನ ತಂದೆಯು ತಿಳಿಸುತ್ತಾರೆ - ನೀವಾತ್ಮಗಳು ನನ್ನ ಸಂತಾನರಾಗಿದ್ದೀರಿ, ಅದರಲ್ಲಿಯೂ ನೀವು
ಅನಾದಿ ಸಂತಾನರಾಗಿದ್ದೀರಿ. ಆ ಲೌಕಿಕ ಪ್ರಿಯತಮ-ಪ್ರಿಯತಮೆಯರದು ದೈಹಿಕ ನೆನಪಿರುತ್ತದೆ. ಒಬ್ಬರಿಗೆ
ಇನ್ನೊಬ್ಬರ ಸಾಕ್ಷಾತ್ಕಾರವಾಗುತ್ತದೆ ನಂತರ ಮಾಯವಾಗಿಬಿಡುತ್ತದೆ, ಆ ಖುಷಿಯಲ್ಲಿಯೇ
ತಿನ್ನುತ್ತಾ-ಕುಡಿಯುತ್ತಾ ನೆನಪು ಮಾಡುತ್ತಿರುತ್ತಾರೆ. ಇಲ್ಲಿ ನಿಮ್ಮ ನೆನಪಿನಲ್ಲಂತೂ ಬಹಳ ಬಲವಿದೆ.
ಒಬ್ಬ ತಂದೆಯನ್ನೇ ನೆನಪು ಮಾಡುತ್ತೀರಿ ಮತ್ತು ನಿಮಗೆ ತಮ್ಮ ಭವಿಷ್ಯದ ನೆನಪೂ ಬರುತ್ತದೆ, ನೆನಪಿನ
ಸಾಕ್ಷಾತ್ಕಾರವೂ ಆಗುತ್ತದೆ. ಮುಂದೆ ಹೋದಂತೆ ಬೇಗ-ಬೇಗನೆ ವಿನಾಶದ ಸಾಕ್ಷಾತ್ಕಾರವಾಗುವುದು. ಮತ್ತೆ
ನೀವಿದನ್ನು ಹೇಳುತ್ತೀರಿ - ಈಗ ವಿನಾಶವಾಗಲಿದೆ, ತಂದೆಯನ್ನು ನೆನಪು ಮಾಡಿ. ಬ್ರಹ್ಮಾತಂದೆಯು
ಅಂತಿಮದಲ್ಲಿ ಏನೂ ನೆನಪಿಗೆ ಬರಬಾರದೆಂದು ಎಲ್ಲವನ್ನೂ ತ್ಯಾಗ ಮಾಡಿದರಲ್ಲವೆ! ಈಗಂತೂ ನಾವು ನಮ್ಮ
ರಾಜಧಾನಿಯಲ್ಲಿ ಹೋಗಬೇಕು. ಹೊಸಪ್ರಪಂಚದಲ್ಲಿ ಅವಶ್ಯವಾಗಿ ಹೋಗಬೇಕಾಗಿದೆ. ಯೋಗಬಲದಿಂದ ಎಲ್ಲಾ
ಪಾಪಗಳನ್ನು ಭಸ್ಮ ಮಾಡಿಕೊಳ್ಳಬೇಕಾಗಿದೆ. ಇದರಲ್ಲಿಯೇ ಎಲ್ಲರೂ ಪರಿಶ್ರಮಪಡಬೇಕಾಗಿದೆ. ಪದೇ-ಪದೇ
ತಂದೆಯನ್ನು ಮರೆತುಹೋಗುತ್ತೀರಿ ಏಕೆಂದರೆ ಇದು ಬಹಳ ಸೂಕ್ಷ್ಮವಸ್ತುವಿನ ಮಾತಾಗಿದೆ. ಸರ್ಪದ
ಭ್ರಮರಿಯ ಯಾವ ಉದಾಹರಣೆಯನ್ನು ಕೊಡುತ್ತಾರೆಯೋ ಅದು ಈ ಸಮಯದ್ದಾಗಿದೆ. ಭ್ರಮರಿಯು ಚಮತ್ಕಾರ
ಮಾಡುತ್ತದೆಯಲ್ಲವೆ. ಅದಕ್ಕಿಂತಲೂ ನಿಮ್ಮ ಚಮತ್ಕಾರವು ಹೆಚ್ಚಿನದಾಗಿದೆ. ತಂದೆಯು ಬರೆಯುತ್ತಾರಲ್ಲವೆ
- ಮಕ್ಕಳೇ, ಜ್ಞಾನದ ಭೂ ಭೂ ಮಾಡುತ್ತಾ ಇರಿ. ಕೊನೆಗೆ ಜಾಗೃತರಾಗುತ್ತಾರೆ. ಹೋಗುವುದಾದರೂ ಎಲ್ಲಿಗೆ?
ನಿಮ್ಮ ಬಳಿಯೇ ಬರುತ್ತಾರೆ, ಸೇರ್ಪಡೆಯಾಗುತ್ತಾ ಹೋಗುತ್ತಾರೆ. ನಿಮ್ಮದು ಹೆಸರುವಾಸಿಯಾಗುತ್ತಾ
ಹೋಗುತ್ತದೆ. ಈಗಂತೂ ನೀವು ಕೆಲವರೇ ಇದ್ದೀರಲ್ಲವೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ
ನಮಸ್ತೆ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಜ್ಞಾನದ
ಹೆಚ್ಚಿನ ವಿಚಾರಸಾಗರ ಮಥನ ಮಾಡಬೇಕಾಗಿದೆ. ಕೇಳಿದುದನ್ನು ಮೆಲುಕು ಹಾಕಬೇಕಾಗಿದೆ. ಅಂತರ್ಮುಖಿಯಾಗಿ
ನೋಡಿಕೊಳ್ಳಬೇಕು - ತಂದೆಯ ನೆನಪು ಮರೆಯಲಾರದಷ್ಟು ತಂದೆಯೊಂದಿಗೆ ನಮ್ಮ ಮನಸ್ಸನ್ನಿಟ್ಟಿದ್ದೇನೆಯೆ.
2. ಯಾವುದೇ
ಪ್ರಶ್ನೆಗಳನ್ನು ಮಾಡುವುದರಲ್ಲಿ ತಮ್ಮ ಸಮಯವನ್ನು ವ್ಯರ್ಥ ಮಾಡದೆ ನೆನಪಿನ ಯಾತ್ರೆಯಿಂದ ಸ್ವಯಂ
ತಮ್ಮನ್ನು ಪಾವನ ಮಾಡಿಕೊಳ್ಳಬೇಕಾಗಿದೆ. ಅಂತಿಮ ಸಮಯದಲ್ಲಿ ಒಬ್ಬ ತಂದೆಯ ವಿನಃ ಮತ್ತ್ಯಾವುದೇ
ವಿಚಾರ ಮಾಡಬಾರದು - ಈ ಅಭ್ಯಾಸವನ್ನು ಈಗಿನಿಂದಲೇ ಮಾಡಬೇಕಾಗಿದೆ.
ವರದಾನ:
ದೃಢ ಸಂಕಲ್ಪರೂಪಿ
ವ್ರತದಿಂದ ವೃತ್ತಿಗಳ ಪರಿವರ್ತನೆ ಮಾಡುವಂತಹ ಮಹಾನ್ ಆತ್ಮ ಭವ.
ಮಹಾನ್ ಆಗಲು ಮುಖ್ಯ
ಆಧಾರವಾಗಿದೆ “ಪವಿತ್ರತೆ”. ಈ ಪವಿತ್ರತೆಯ ವ್ರತವನ್ನು ಪ್ರತಿಜ್ಞೆಯ ರೂಪದಲ್ಲಿ ಧಾರಣೆ ಮಾಡುವುದು
ಅರ್ಥಾತ್ ಮಹಾನ್ ಆತ್ಮ ಆಗುವುದಾಗಿದೆ. ಯಾವುದೇ ಸಂಕಲ್ಪರೂಪಿ ವ್ರತ ವೃತ್ತಿಯನ್ನು ಬದಲಾಯಿಸಿ
ಬಿಡುವುದು. ಪವಿತ್ರತೆಯ ವ್ರತ ತೆಗೆದುಕೊಳ್ಳುವುದು ಅರ್ಥಾತ್ ತಮ್ಮ ವೃತ್ತಿಯನ್ನು ಶ್ರೇಷ್ಠ
ಮಾಡಿಕೊಳ್ಳುವುದು. ವ್ರತ ಇಡುವುದು ಅರ್ಥಾತ್ ಸ್ಥೂಲ ರೀತಿಯಿಂದ ಪಥ್ಯೆ ಮಾಡುವುದು, ಮನಸ್ಸಿನಲ್ಲಿ
ಪಕ್ಕಾ ಸಂಕಲ್ಪ ತೆಗೆದುಕೊಳ್ಳುವುದು. ಆದ್ದರಿಂದ ಪಾವನರಾಗುವಂತಹ ವ್ರತವನ್ನು ತೆಗೆದುಕೊಂಡಿರುವೆ
ಮತ್ತು ನಾವು ಆತ್ಮ ಸಹೋದರ-ಸಹೋದರ ಆಗಿದೆ - ಈ ಬ್ರದರ್ ಹುಡ್ ನ ವೃತ್ತಿ ಮಾಡಿಕೊಂಡಿರುವಿರಿ. ಇದೇ
ವೃತ್ತಿಯಿಂದ ಬ್ರಾಹ್ಮಣ ಮಹಾನ್ ಆತ್ಮ ಆದರು.
ಸ್ಲೋಗನ್:
ವ್ಯರ್ಥದಿಂದ
ಸುರಕ್ಷಿತರಾಗಬೇಕಾದರೆ ಬಾಯಿಯಲ್ಲಿ ದೃಡ ಸಂಕಲ್ಪದ ಬಟನ್ ಹಾಕಿ ಕೊಳ್ಳಿ.