22.02.25         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ತಂದೆಯು ನಿಮಗೆ ಏನನ್ನು ತಿಳಿಸುತ್ತಾರೆಯೋ ಅದನ್ನೇ ಕೇಳಿ, ಅಸುರೀ ಮಾತುಗಳನ್ನು ಕೇಳಬೇಡಿ, ಮಾತನಾಡಲೂಬೇಡಿ, ಹಿಯರ್ ನೋ ಈವಿಲ್, ಸೀ ನೋ ಈವಿಲ್......”

ಪ್ರಶ್ನೆ:
ನೀವು ಮಕ್ಕಳಿಗೆ ಯಾವ ನಿಶ್ಚಯವು ತಂದೆಯ ಮೂಲಕವೇ ಆಗಿದೆ?

ಉತ್ತರ:
ತಂದೆಯು ನಿಮಗೆ ನಿಶ್ಚಯ ಮಾಡಿಸುತ್ತಾರೆ - ನಾನು ನಿಮ್ಮ ತಂದೆಯೂ ಆಗಿದ್ದೇನೆ, ಶಿಕ್ಷಕನೂ ಆಗಿದ್ದೇನೆ, ಸದ್ಗುರುವೂ ಆಗಿದ್ದೇನೆ, ನೀವು ಈ ಸ್ಮೃತಿಯಲ್ಲಿರುವ ಪುರುಷಾರ್ಥ ಮಾಡಿ ಆದರೆ ಮಾಯೆಯು ನಿಮಗೆ ಇದನ್ನೇ ಮರೆಸುತ್ತದೆ. ಅಜ್ಞಾನಕಾಲದಲ್ಲಂತೂ ಮಾಯೆಯ ಮಾತೇ ಇರುವುದಿಲ್ಲ.

ಪ್ರಶ್ನೆ:
ಯಾವ ಚಾರ್ಟ್ನ್ನು ಇಡುವುದರಲ್ಲಿ ವಿಶಾಲಬುದ್ಧಿಯು ಬೇಕು?

ಉತ್ತರ:
ತನ್ನನ್ನು ಆತ್ಮವೆಂದು ತಿಳಿದು ತಂದೆಯನ್ನು ಎಷ್ಟು ಸಮಯ ನೆನಪು ಮಾಡಿದೆನು - ಈ ಚಾರ್ಟ್ ಇಡುವುದರಲ್ಲಿ ಬಹಳ ವಿಶಾಲಬುದ್ಧಿಯಿರಬೇಕು. ದೇಹೀ-ಅಭಿಮಾನಿಯಾಗಿ ತಂದೆಯನ್ನು ನೆನಪು ಮಾಡಿ ಆಗ ವಿಕರ್ಮಗಳು ವಿನಾಶವಾಗುವುದು.

ಓಂ ಶಾಂತಿ.
ಓಂ ಶಾಂತಿ. ವಿದ್ಯಾರ್ಥಿಗಳು ಇದನ್ನು ತಿಳಿದುಕೊಂಡಿರಿ - ಶಿಕ್ಷಕನು ಬಂದಿದ್ದಾರೆ, ಅವರು ತಂದೆಯೂ ಆಗಿದ್ದಾರೆ, ಶಿಕ್ಷಕನೂ ಆಗಿದ್ದಾರೆ, ಪರಮ ಸದ್ಗುರುವೂ ಆಗಿದ್ದಾರೆ. ಮಕ್ಕಳಿಗೆ ಸ್ಮೃತಿಯಲ್ಲಿದೆ ಆದರೆ ನಂಬರ್ವಾರ್ ಪುರುಷಾರ್ಥದನುಸಾರ. ಕಾಯಿದೆಯು ಏನು ಹೇಳುತ್ತದೆಯೆಂದರೆ ಇವರು ಶಿಕ್ಷಕರಾಗಿದ್ದಾರೆ ಅಥವಾ ಇವರು ತಂದೆಯಾಗಿದ್ದಾರೆ ಇಲ್ಲವೆ ಗುರುವಾಗಿದ್ದಾರೆ ಎಂಬುದನ್ನು ಒಂದುಬಾರಿ ಅರಿತುಕೊಂಡಮೇಲೆ ಮತ್ತೆ ಮರೆಯಲು ಸಾಧ್ಯವಿಲ್ಲ ಆದರೆ ಇಲ್ಲಿ ಮಾಯೆಯು ಮರೆಸಿಬಿಡುತ್ತದೆ. ಅಜ್ಞಾನಕಾಲದಲ್ಲಿ ಮಾಯೆಯು ಎಂದೂ ಮರೆಸುವುದಿಲ್ಲ, ಇವರು ನಮ್ಮ ತಂದೆಯಾಗಿದ್ದಾರೆ, ಅವರ ವೃತ್ತಿಯು ಇದಾಗಿದೆ ಎಂಬುದನ್ನು ಮಗುವು ಎಂದೂ ಮರೆಯಲು ಸಾಧ್ಯವಿಲ್ಲ. ಮಕ್ಕಳಿಗೆ ನಾನು ಇಂತಹ ತಂದೆಯ ಹಣಕ್ಕೆ ಮಾಲೀಕನಾಗಿದ್ದೇನೆ ಎಂಬ ಖುಷಿಯಿರುತ್ತದೆ. ಭಲೆ ತಾನು ಓದುತ್ತಾರೆ ಆದರೆ ತಂದೆಯ ಆಸ್ತಿಯೂ ಸಹ ಸಿಗುತ್ತದೆಯಲ್ಲವೆ. ಇಲ್ಲಿ ನೀವು ಮಕ್ಕಳೂ ಓದುತ್ತೀರಿ ಮತ್ತು ನಿಮಗೆ ತಂದೆಯ ಆಸ್ತಿಯೂ ಸಿಗುತ್ತದೆ. ನೀವು ರಾಜಯೋಗವನ್ನು ಕಲಿಯುತ್ತಿದ್ದೀರಿ. ತಂದೆಯ ಮೂಲಕ ನಾನು ತಂದೆಯ ಮಗುವಾಗಿದ್ದೇನೆ ಎಂದು ನಿಚ್ಚಯ ಆಗುತ್ತೆ, ತಂದೆಯೇ ಸದ್ಗತಿಯ ಮಾರ್ಗವನ್ನು ತಿಳಿಸುತ್ತಿದ್ದಾರೆ ಆದ್ದರಿಂದ ಅವರು ಸದ್ಗುರುವೂ ಆಗಿದ್ದಾರೆಂಬ ನಿಶ್ಚಯವಾಗಿಬಿಡುತ್ತದೆ. ಈ ಮಾತುಗಳನ್ನು ಮರೆಯಬಾರದಾಗಿದೆ. ತಂದೆಯು ಏನನ್ನು ತಿಳಿಸುವರೋ ಅದನ್ನೇ ಕೇಳಬೇಕಾಗಿದೆ. ಹಿಯರ್ ನೋ ಈವಿಲ್, ಸೀ ನೋ ಈವಿಲ್ ಯಾವ ಕೋತಿಗಳ ಗೊಂಬೆಗಳನ್ನು ತೋರಿಸುತ್ತಾರೆಯೋ ಇದು ಮನುಷ್ಯರ ಮಾತಾಗಿದೆ. ತಂದೆಯು ತಿಳಿಸುತ್ತಾರೆ - ಆಸುರೀ ಮಾತುಗಳನ್ನು ಹೇಳಬೇಡಿ, ಕೇಳಲೂಬೇಡಿ ಮತ್ತು ನೋಡಬೇಡಿ. ಕೆಟ್ಟದ್ದನ್ನು ಕೇಳಬೇಡಿ..... ಹೀಗೆ ಮೊದಲು ಕೋತಿಗಳ ಚಿತ್ರವನ್ನು ಮಾಡುತ್ತಿದ್ದರು, ಈಗ ಮನುಷ್ಯರದನ್ನು ಮಾಡುತ್ತಾರೆ. ನಿಮ್ಮ ಬಳಿಯೂ ನಳಿನಿ ಸಹೋದರಿಯ ಚಿತ್ರವನ್ನು ಮಾಡಲಾಗಿದೆ ಅಂದಾಗ ನೀವು ತಂದೆಯ ನಿಂದನೆಯ ಮಾತುಗಳನ್ನು ಕೇಳಬೇಡಿ. ತಂದೆಯು ತಿಳಿಸುತ್ತಾರೆ - ಎಷ್ಟೊಂದು ನನಗೆ ನಿಂದನೆ ಮಾಡುತ್ತಾರೆ. ನಿಮಗೂ ತಿಳಿದಿದೆ - ಕೃಷ್ಣನ ಭಕ್ತರ ಮುಂದೆ ಧೂಪವನ್ನಿಡುತ್ತಾರೆಂದರೆ ರಾಮನ ಭಕ್ತರು ಮೂಗನ್ನು ಮುಚ್ಚಿಕೊಂಡುಬಿಡುತ್ತಾರೆ. ಒಬ್ಬರಿಗೆ ಇನ್ನೊಬ್ಬರ ಸುಗಂಧವೂ ಸಹ ಇಷ್ಟವಾಗುವುದಿಲ್ಲ. ಪರಸ್ಪರ ಹೇಗೆ ಶತ್ರುಗಳಾಗಿಬಿಡುತ್ತಾರೆ! ಈಗ ನೀವು ರಾಮವಂಶಿಯರಾಗಿದ್ದೀರಿ. ಪ್ರಪಂಚದವರೆಲ್ಲರೂ ರಾವಣ ವಂಶಿಯರಾಗಿದ್ದಾರೆ. ಇಲ್ಲಿ ಧೂಪದ ಮಾತಂತೂ ಇಲ್ಲ. ನೀವು ತಿಳಿದುಕೊಂಡಿದ್ದೀರಿ, ತಂದೆಯನ್ನು ಸರ್ವವ್ಯಾಪಿ ಎಂದು ಹೇಳಿರುವುದರಿಂದ ಯಾವ ಗತಿಯಾಗಿದೆ! ಕಲ್ಲುಮುಳ್ಳಿನಲ್ಲಿ ಪರಮಾತ್ಮನಿದ್ದಾರೆಂದು ಹೇಳಿರುವುದರಿಂದ ಕಲ್ಲುಬುದ್ಧಿಯಾಗಿಬಿಟ್ಟಿದೆ ಅಂದಾಗ ಬೇಹದ್ದಿನ ತಂದೆಯು ನಿಮಗೆ ಯಾವ ಆಸ್ತಿಯನ್ನು ಕೊಡುತ್ತಾರೆಯೋ ಅವರಿಗೆ ಎಷ್ಟು ನಿಂದನೆ ಮಾಡುತ್ತೀರಿ! ಯಾರಲ್ಲಿಯೂ ಜ್ಞಾನವಿಲ್ಲ. ಅವು ಜ್ಞಾನರತ್ನಗಳಲ್ಲ ಕಲ್ಲುಗಳಾಗಿವೆ. ಈಗ ನೀವು ತಂದೆಯನ್ನು ನೆನಪು ಮಾಡಬೇಕಾಗಿದೆ. ತಂದೆಯು ತಿಳಿಸುತ್ತಾರೆ - ನಾನು ಹೇಗಿದ್ದೇನೆ, ಯಾರಾಗಿದ್ದೇನೆಂದು ನನ್ನನ್ನು ಯಥಾರ್ಥರೀತಿಯಲ್ಲಿ ಯಾರೂ ಅರಿತುಕೊಂಡಿಲ್ಲ. ಮಕ್ಕಳಲ್ಲಿಯೂ ನಂಬರ್ವಾರ್ ಇದ್ದೀರಿ. ತಂದೆಯನ್ನು ಯಥಾರ್ಥ ರೀತಿಯಿಂದ ನೆನಪು ಮಾಡಬೇಕಾಗಿದೆ. ಅವರು ಅತಿಸೂಕ್ಷ್ಮ ಬಿಂದುವಾಗಿದ್ದಾರೆ. ಅವರಲ್ಲಿ ಇದೆಲ್ಲಾ ಪಾತ್ರವು ತುಂಬಲ್ಪಟ್ಟಿದೆ. ತನ್ನನ್ನು ಆತ್ಮನೆಂದು ತಿಳಿಯಬೇಕು ಮತ್ತು ತಂದೆಯನ್ನು ಯಥಾರ್ಥರೀತಿಯಲ್ಲಿ ತಿಳಿದುಕೊಂಡು ನೆನಪು ಮಾಡಬೇಕಾಗಿದೆ. ನಾವು ಮಕ್ಕಳಾಗಿದ್ದೇವೆ ಎಂದು ಭಲೆ ಹೇಳುತ್ತಾರೆ ಆದರೆ ತಂದೆಯ ಆತ್ಮವು ದೊಡ್ಡದು, ನಮ್ಮ ಆತ್ಮವು ಚಿಕ್ಕದೆಂದಲ್ಲ. ಭಲೆ ತಂದೆಯು ಜ್ಞಾನಪೂರ್ಣನಾಗಿದ್ದಾರೆ ಆದರೆ ಆತ್ಮದ ಗಾತ್ರವು ಚಿಕ್ಕದು-ದೊಡ್ಡದಾಗಿರುವುದಿಲ್ಲ. ನೀವಾತ್ಮಗಳಲ್ಲಿಯೂ ಸಹ ಜ್ಞಾನವಿರುತ್ತದೆ ಆದರೆ ಶಾಲೆಯಲ್ಲಿಯೂ ನಂಬರ್ವಾರ್ ತೇರ್ಗಡೆಯಾಗುತ್ತಾರಲ್ಲವೆ. ಸೊನ್ನೆ (0) ಅಂತೂ ಯಾರಿಗೂ ಬರುವುದಿಲ್ಲ. ಕೆಲವು ಅಂಕಗಳನ್ನಾದರೂ ಪಡೆಯುತ್ತಾರೆ. ತಂದೆಯು ತಿಳಿಸುತ್ತಾರೆ - ನಾನು ಯಾವ ಜ್ಞಾನವನ್ನು ತಿಳಿಸುತ್ತೇನೆಯೋ ಅದು ಪ್ರಾಯಃಲೋಪವಾಗಿಬಿಡುತ್ತದೆ ಆದರೂ ಚಿತ್ರಗಳಿವೆ, ಶಾಸ್ತ್ರಗಳೂ ರಚಿಸಲ್ಪಟ್ಟಿವೆ. ತಂದೆಯು ನೀವಾತ್ಮಗಳಿಗೆ ತಿಳಿಸುತ್ತಾರೆ - ಮಕ್ಕಳೇ, ಕೆಟ್ಟದ್ದನ್ನು ಕೇಳಬೇಡಿ, ಈ ಆಸುರೀಪ್ರಪಂಚವನ್ನು ನೋಡುವುದೇನು! ಈ ಛೀ ಛೀ ಪ್ರಪಂಚದಿಂದ ಕಣ್ಣುಗಳನ್ನು ಮುಚ್ಚಿಕೊಳ್ಳಬೇಕಾಗಿದೆ. ಇದು ಹಳೆಯ ಪ್ರಪಂಚವಾಗಿದೆ, ಇದರೊಂದಿಗೇನು ಸಂಬಂಧವಿಡುವುದೆಂದು ಈಗ ಆತ್ಮಕ್ಕೆ ಸ್ಮೃತಿಯು ಬಂದಿದೆ. ಈ ಪ್ರಪಂಚವನ್ನು ನೋಡಿಯೂ ನೋಡದಂತಿರಬೇಕಾಗಿದೆ. ತಮ್ಮ ಶಾಂತಿಧಾಮ ಮತ್ತು ಸುಖಧಾಮವನ್ನು ನೆನಪು ಮಾಡಬೇಕೆಂಬುದೂ ಸಹ ಸ್ಮೃತಿಯುಂಟಾಗಿದೆ. ಆತ್ಮಕ್ಕೆ ಜ್ಞಾನದ ಮೂರನೆಯ ನೇತ್ರವು ಸಿಕ್ಕಿದೆಯೆಂದಮೇಲೆ ಇದನ್ನು ಸ್ಮರಿಸಬೇಕಾಗಿದೆ. ಭಕ್ತಿಮಾರ್ಗದಲ್ಲಿಯೂ ಸಹ ಮುಂಜಾನೆಯೆದ್ದು ಮಾಲೆಯನ್ನು ಜಪಿಸುತ್ತಾರೆ. ಮುಂಜಾನೆಯ ಮಹೂರ್ತವು ಒಳ್ಳೆಯದೆಂದು ತಿಳಿಯುತ್ತಾರೆ. ಬ್ರಾಹ್ಮಣರ ಮಹೂರ್ತವಾಗಿದೆ, ಬ್ರಹ್ಮಾಭೋಜನದ ಮಹಿಮೆಯೂ ಇದೆ. ಬ್ರಹ್ಮ ಭೋಜನವಲ್ಲ, ಬ್ರಹ್ಮಾಭೋಜನವಾಗಿದೆ. ನಿಮಗೂ ಸಹ ಬ್ರಹ್ಮಾಕುಮಾರಿಯರ ಬದಲು ಬ್ರಹ್ಮ್ಕುಮಾರಿ ಎಂದು ಹೇಳಿಬಿಡುತ್ತಾರೆ. ತಿಳಿದುಕೊಳ್ಳುವುದಿಲ್ಲ, ಬ್ರಹ್ಮನ ಮಕ್ಕಳೆಂದರೆ ಬ್ರಹ್ಮಾಕುಮಾರ-ಕುಮಾರಿಯರೇ ಅಲ್ಲವೆ. ಬ್ರಹ್ಮ್ವಂತೂ ತತ್ವವಾಗಿದೆ, ಇರುವಂತಹ ಸ್ಥಾನವಾಗಿದೆ. ಅದಕ್ಕೇನು ಮಹಿಮೆಯಿರುವುದು? ತಂದೆಯು ಮಕ್ಕಳಿಗೆ ದೂರುಕೊಡುತ್ತಾರೆ - ಮಕ್ಕಳೇ, ನೀವು ಒಂದುಕಡೆ ಪೂಜೆ ಮಾಡುತ್ತೀರಿ, ಇನ್ನೊಂದುಕಡೆ ನಿಂದನೆ ಮಾಡುತ್ತೀರಿ. ನಿಂದನೆ ಮಾಡುತ್ತಾ-ಮಾಡುತ್ತಾ ತಮೋಪ್ರಧಾನರಾಗಿಬಿಟ್ಟಿದ್ದೀರಿ. ತಮೋಪ್ರಧಾನರೂ ಸಹ ಆಗಲೇಬೇಕಾಗಿದೆ, ಚಕ್ರವು ಪುನರಾವರ್ತನೆಯಾಗುವುದಿದೆ. ಯಾರಾದರೂ ಹಿರಿಯ ವ್ಯಕ್ತಿಗಳು ಬರುತ್ತಾರೆಂದರೆ ಅವರಿಗೆ ಸೃಷ್ಟಿಚಕ್ರವನ್ನು ಕುರಿತು ಅವಶ್ಯವಾಗಿ ತಿಳಿಸಬೇಕಾಗಿದೆ. ಈ ಚಕ್ರವು 5000 ವರ್ಷಗಳದ್ದಾಗಿದೆ. ಇದರ ಮೇಲೆ ಬಹಳ ಗಮನ ಕೊಡಬೇಕಾಗಿದೆ. ರಾತ್ರಿಯ ನಂತರ ಅವಶ್ಯವಾಗಿ ದಿನವಾಗಲೇಬೇಕಾಗಿದೆ. ರಾತ್ರಿಯ ನಂತರ ದಿನವು ಬರದೇ ಇರಲು ಸಾಧ್ಯವಿಲ್ಲ. ಕಲಿಯುಗದ ನಂತರ ಸತ್ಯಯುಗವು ಅವಶ್ಯವಾಗಿ ಬರಬೇಕಾಗಿದೆ. ವಿಶ್ವದ ಇತಿಹಾಸ-ಭೂಗೋಳವು ಅವಶ್ಯವಾಗಿ ಪುನರಾವರ್ತನೆಯಾಗುತ್ತದೆ.

ಅಂದಾಗ ತಂದೆಯು ತಿಳಿಸುತ್ತಾರೆ - ಮಧುರಾತಿ ಮಧುರ ಮಕ್ಕಳೇ, ತನ್ನನ್ನು ಆತ್ಮವೆಂದು ತಿಳಿಯಿರಿ, ಆತ್ಮವೇ ಎಲ್ಲವನ್ನೂ ತಿಳಿಯುತ್ತದೆ, ಆತ್ಮವೇ ಪಾತ್ರವನ್ನಭಿನಯಿಸುತ್ತದೆ. ಒಂದುವೇಳೆ ನಾವು ಪಾತ್ರಧಾರಿಗಳಾಗಿದ್ದೇವೆಂದರೆ ನಾಟಕದ ಆದಿ-ಮಧ್ಯ-ಅಂತ್ಯವನ್ನು ಅವಶ್ಯವಾಗಿ ಅರಿತುಕೊಳ್ಳಬೇಕೆಂಬುದೂ ಸಹ ಯಾರಿಗೂ ತಿಳಿದಿಲ್ಲ. ವಿಶ್ವದ ಇತಿಹಾಸ-ಭೂಗೋಳವು ಪುನರಾವರ್ತನೆಯಾಗುತ್ತದೆ ಅಂದಮೇಲೆ ಇದು ನಾಟಕವೇ ಆಯಿತಲ್ಲವೆ. ಕ್ಷಣ-ಪ್ರತಿಕ್ಷಣ ಯಾವುದು ಕಳೆದುಹೋಗಿದೆಯೋ ಅದೇ ಪುನರಾವರ್ತನೆಯಾಗುತ್ತದೆ, ಈ ಮಾತುಗಳನ್ನು ಮತ್ತ್ಯಾರೂ ತಿಳಿಯಲು ಸಾಧ್ಯವಿಲ್ಲ. ಕಡಿಮೆ ಬುದ್ಧಿಯುಳ್ಳವರು ಯಾವಾಗಲೂ ಅನುತ್ತೀರ್ಣರೇ ಆಗುತ್ತಾರೆ ಮತ್ತೆ ಶಿಕ್ಷಕರೂ ಏನು ತಾನೇ ಮಾಡಲು ಸಾಧ್ಯ! ಕೃಪೆ ಮಾಡಿ ಅಥವಾ ಆಶೀರ್ವಾದ ಮಾಡಿ ಎಂದು ಶಿಕ್ಷಕರಿಗೆ ಹೇಳಲು ಸಾಧ್ಯವೆ? ಅದೇ ರೀತಿ ಇದೂ ಸಹ ವಿದ್ಯೆಯಾಗಿದೆ. ಈ ಗೀತಾಪಾಠಶಾಲೆಯಲ್ಲಿ ಸ್ವಯಂ ಭಗವಂತನೇ ರಾಜಯೋಗವನ್ನು ಕಲಿಸುತ್ತಾರೆ. ಕಲಿಯುಗವು ಪರಿವರ್ತನೆಯಾಗಿ ಅವಶ್ಯವಾಗಿ ಸತ್ಯಯುಗವಾಗಬೇಕಾಗಿದೆ. ನಾಟಕದನುಸಾರ ತಂದೆಯೇ ಬರಬೇಕಾಗಿದೆ. ತಂದೆಯು ತಿಳಿಸುತ್ತಾರೆ - ನಾನು ಕಲ್ಪ-ಕಲ್ಪವೂ ಸಂಗಮಯುಗದಲ್ಲಿಯೇ ಬರುತ್ತೇನೆ. ನಾನು ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ತಿಳಿಸಲು ಬಂದಿದ್ದೇನೆಂದು ಮತ್ತ್ಯಾರೂ ಹೇಳಲು ಸಾಧ್ಯವಿಲ್ಲ. ತಮ್ಮನ್ನು ಶಿವೋಹಂ ಎಂದು ಹೇಳುತ್ತಾರೆ ಅದರಿಂದೇನಾಯಿತು? ಶಿವತಂದೆಯಂತೂ ಬರುವುದೇ ಓದಿಸುವುದಕ್ಕಾಗಿ, ಸಹಜ ರಾಜಯೋಗವನ್ನು ಕಲಿಸುವುದಕ್ಕಾಗಿ. ಯಾವ ಸಾಧು-ಸಂತ ಮೊದಲಾದವರಿಗೂ ಶಿವಭಗವಂತನೆಂದು ಕರೆಯಲು ಸಾಧ್ಯವಿಲ್ಲ. ನಾನು ಕೃಷ್ಣನಾಗಿದ್ದೇನೆ, ನಾನು ಲಕ್ಷ್ಮೀ-ನಾರಾಯಣನಾಗಿದ್ದೇನೆ ಎಂದು ಅನೇಕರು ಹೇಳಿಕೊಳ್ಳುತ್ತಾರೆ ಆದರೆ ಆ ಸತ್ಯಯುಗದ ರಾಜಕುಮಾರ ಶ್ರೀಕೃಷ್ಣನೆಲ್ಲಿ, ಈ ಕಲಿಯುಗೀ ಪತಿತರೆಲ್ಲಿ! ಇವರಲ್ಲಿ ಭಗವಂತನಿದ್ದಾರೆಂದು ಹೇಳಲು ಸಾಧ್ಯವೇ? ನೀವು ಮಂದಿರಗಳಲ್ಲಿ ಹೋಗಿ ಪ್ರಶ್ನೆ ಮಾಡಬಹುದು - ಇವರು ಸತ್ಯಯುಗದಲ್ಲಿ ರಾಜ್ಯ ಮಾಡುತ್ತಿದ್ದರು, ಮತ್ತೆ ಎಲ್ಲಿ ಹೋದರು? ಸತ್ಯಯುಗದ ನಂತರ ಅವಶ್ಯವಾಗಿ ತ್ರೇತಾ, ದ್ವಾಪರ, ಕಲಿಯುಗವಾಯಿತು. ಸತ್ಯಯುಗದಲ್ಲಿ ಸೂರ್ಯವಂಶಿ ರಾಜ್ಯವಿತ್ತು, ತ್ರೇತಾಯುಗದಲ್ಲಿ ಚಂದ್ರವಂಶಿ...... ಇದೆಲ್ಲಾ ಜ್ಞಾನವು ನೀವು ಮಕ್ಕಳ ಬುದ್ಧಿಯಲ್ಲಿದೆ. ಇಷ್ಟು ಮಂದಿ ಬ್ರಹ್ಮಾಕುಮಾರ-ಕುಮಾರಿಯರಿದ್ದಾರೆಂದಮೇಲೆ ಅವಶ್ಯವಾಗಿ ಪ್ರಜಾಪಿತನೂ ಇರುವರು. ಬ್ರಹ್ಮಾರವರ ಮೂಲಕ ತಂದೆಯು ಮನುಷ್ಯಸೃಷ್ಟಿಯನ್ನು ರಚಿಸುತ್ತಾರೆ. ಬ್ರಹ್ಮನಿಗೆ ರಚಯಿತನೆಂದು ಕರೆಯಲಾಗುವುದಿಲ್ಲ. ರಚಯಿತನು ಪರಮಪಿತ ಪರಮಾತ್ಮನಾಗಿದ್ದಾರೆ. ಹೇಗೆ ರಚಿಸುತ್ತೇನೆ ಎಂಬುದನ್ನು ತಂದೆಯು ಸನ್ಮುಖದಲ್ಲಿಯೇ ಕುಳಿತು ತಿಳಿಸಿಕೊಡುತ್ತಾರೆ. ಈ ಶಾಸ್ತ್ರಗಳೆಲ್ಲವೂ ನಂತರದಲ್ಲಿ ರಚಿಸಲ್ಪಟ್ಟಿದೆ. ಹೇಗೆ ಕ್ರಿಸ್ತನು ಹೇಳಿದ್ದು ಬೈಬಲ್ ಆಗಿಬಿಟ್ಟಿತು ನಂತರದಲ್ಲಿ ಕುಳಿತು ಗಾಯನ ಮಾಡುತ್ತಾರೆ. ಕ್ರಿಸ್ತನಿಗೆ ಗಾಯನವನ್ನೇನು ಮಾಡುವುದಿದೆ? ಏಕೆಂದರೆ ಕ್ರಿಸ್ತನು ಯಾವುದೇ ಗುರು ಅಥವಾ ಸಂದೇಶಪುತ್ರನಲ್ಲ. ಗತಿ ಹಾಗೂ ಸದ್ಗತಿ ಕೇವಲ 5-7 ಮಂದಿಯದಾಗಿರುವುದಿಲ್ಲ. ಸರ್ವರ ಸದ್ಗತಿದಾತ, ಸರ್ವರ ಮುಕ್ತಿದಾತ ತಂದೆಯೊಬ್ಬರೇ ಎಂದು ಗಾಯನವಿದೆ. ಹೇ ಪರಮಪಿತ ಪರಮಾತ್ಮ ದಯೆತೋರಿಸು ಎಂದು ಅವರನ್ನು ನೆನಪು ಮಾಡುತ್ತಾರೆ. ಹೇ ಕ್ರೈಸ್ಟ್ ದಯೆತೋರಿಸಿ ಎಂದು ಹೇಳುವುದಿಲ್ಲ. ತಂದೆಯು ಒಬ್ಬರೇ ಇರುತ್ತಾರೆ, ಇವರು ಇಡೀ ವಿಶ್ವದ ಪಿತನಾಗಿದ್ದಾರೆ. ಸರ್ವದುಃಖಗಳಿಂದ ಮುಕ್ತಗೊಳಿಸುವವರು ಯಾರೆಂದು ಮನುಷ್ಯರಿಗೆ ತಿಳಿದೇ ಇಲ್ಲ. ಈಗ ಸೃಷ್ಟಿಯು ಹಳೆಯದು, ಮನುಷ್ಯರೂ ಹಳೆಯ ತಮೋಪ್ರಧಾನರಾಗಿದ್ದಾರೆ. ಇದು ಕಬ್ಬಿಣದ ಸಮಾನ ಪ್ರಪಂಚವಾಗಿದೆ. ಮೊದಲು ಸ್ವರ್ಣೀಮಯುಗವಿತ್ತು, ಅದು ಪುನಃ ಬರುವುದು. ಈಗ ವಿನಾಶವಾಗುವುದು. ವಿಶ್ವ ಮಹಾಯುದ್ಧಗಳು ನಡೆಯುವುದು. ಅನೇಕ ಸೃಷ್ಟಿಯ ಆಪತ್ತುಗಳು ಬರುತ್ತವೆ. ಸಮಯವು ಅದೇ ಆಗಿದೆ, ಮನುಷ್ಯಸೃಷ್ಟಿಯು ಎಷ್ಟೊಂದು ವೃದ್ಧಿಯನ್ನು ಹೊಂದಿದೆ.

ಭಗವಂತನು ಬಂದಿದ್ದಾರೆಂದು ನೀವು ಹೇಳುತ್ತಿರುತ್ತೀರಿ. ಬ್ರಹ್ಮಾರವರ ಮೂಲಕ ಒಂದು ಆದಿಸನಾತನ ದೇವಿ-ದೇವತಾಧರ್ಮದ ಸ್ಥಾಪನೆಯಾಗುತ್ತಿದೆ ಎಂದು ನೀವು ಮಕ್ಕಳು ಎಲ್ಲರಿಗೆ ಛಾಲೆಂಜ್ ಮಾಡುತ್ತೀರಿ. ನಾಟಕದನುಸಾರ ಎಲ್ಲರೂ ಕೇಳುತ್ತಿರುತ್ತಾರೆ, ದೈವೀಗುಣಗಳನ್ನೂ ಧಾರಣೆ ಮಾಡುತ್ತಿರುತ್ತಾರೆ. ನಿಮಗೆ ತಿಳಿದಿದೆ - ನಮ್ಮಲ್ಲಿ ಯಾವುದೇ ಗುಣಗಳಿರಲಿಲ್ಲ. ಮೊಟ್ಟಮೊದಲನೇ ಅವಗುಣವು ಕಾಮವಿಕಾರವಾಗಿದೆ. ಇದು ಬಹಳ ತೊಂದರೆ ಕೊಡುತ್ತದೆ. ಮಾಯೆಯ ಕುಸ್ತಿಯು ನಡೆಯುತ್ತದೆ, ಬಯಸದೆಯೇ ಮಾಯೆಯ ಬಿರುಗಾಳಿಗಳು ಬೀಳಿಸಿಬಿಡುತ್ತವೆ. ಕಬ್ಬಿಣದ ಯುಗವಾಗಿದೆಯಲ್ಲವೆ ಅಂದಾಗ ಮುಖಕಪ್ಪು ಮಾಡಿಕೊಳ್ಳುತ್ತಾರೆ. ಶ್ಯಾಮಮುಖ ಎನ್ನುವುದಿಲ್ಲ, ಕೃಷ್ಣನಿಗೆ ತೋರಿಸುತ್ತಾರೆ, ಸರ್ಪಕಚ್ಚಿದ್ದರಿಂದ ಶ್ಯಾಮವರ್ಣನಾದನು. ಗೌರವ ಕಾಪಾಡಲು ಶ್ಯಾಮ ಎಂದುಬಿಟ್ಟರು, ಕಪ್ಪುಮುಖ ತೋರಿಸಿದರೆ ಮರ್ಯಾದೆ ಹೋಗುತ್ತದೆ ಅಂದಾಗ ದೂರದೇಶ, ನಿರಾಕಾರ ದೇಶದಿಂದ ಯಾತ್ರಿಕನು ಬರುತ್ತಾರೆ. ಹಳೆಯ ಪ್ರಪಂಚ, ಕಪ್ಪುಶರೀರದಲ್ಲಿ ಬಂದು ಇವರನ್ನು ಸುಂದರರನ್ನಾಗಿ ಮಾಡುತ್ತಾರೆ. ತಂದೆಯು ತಿಳಿಸುತ್ತಾರೆ -ನೀವು ಪುನಃ ಸತೋಪ್ರಧಾನರಾಗಬೇಕಾಗಿದೆ. ನನ್ನನ್ನು ನೆನಪು ಮಾಡಿದರೆ ವಿಕರ್ಮಗಳು ವಿನಾಶವಾಗುವುದು ಮತ್ತು ನೀವು ವಿಷ್ಣುಪುರಿಯ ಮಾಲೀಕರಾಗಿಬಿಡುತ್ತೀರಿ. ಇವು ತಿಳಿದುಕೊಳ್ಳುವಂತಹ ಜ್ಞಾನದ ಮಾತುಗಳಾಗಿವೆ. ತಂದೆಯು ರೂಪನೂ ಆಗಿದ್ದಾರೆ, ಭಸಂತನೂ ಆಗಿದ್ದಾರೆ. ತೇಜೋಮಯ ಬಿಂದುರೂಪವಾಗಿದ್ದಾರೆ. ಅವರಲ್ಲಿ ಜ್ಞಾನವು ಇದೆ. ನಾಮ-ರೂಪದಿಂದ ಭಿನ್ನರಂತೂ ಅಲ್ಲ. ಅವರ ರೂಪವು ಯಾವುದಾಗಿದೆ ಎಂಬುದನ್ನು ಪ್ರಪಂಚದವರು ತಿಳಿದುಕೊಂಡಿಲ್ಲ. ತಂದೆಯು ನಿಮಗೆ ತಿಳಿಸಿಕೊಡುತ್ತಾರೆ, ನನ್ನನ್ನು ಆತ್ಮವೆಂದೇ ಹೇಳುತ್ತಾರೆ, ಕೇವಲ ಪರಮ ಆತ್ಮನಷ್ಟೆ. ಪರಮ, ಆತ್ಮ ಎರಡೂ ಸೇರಿ ಪರಮಾತ್ಮನಾಗುತ್ತದೆ. ಅವರು ತಂದೆಯೂ ಆಗಿದ್ದಾರೆ, ಶಿಕ್ಷಕನೂ ಆಗಿದ್ದಾರೆ, ಜ್ಞಾನಪೂರ್ಣನೆಂದೂ ಹೇಳುತ್ತಾರೆ. ಜ್ಞಾನಪೂರ್ಣನೆಂದರೆ ಎಲ್ಲರ ಹೃದಯವನ್ನು ಹೊಕ್ಕು ಅವರನ್ನು ನೋಡುವವರೆಂದು ಮನುಷ್ಯರು ತಿಳಿಯುತ್ತಾರೆ. ಒಂದುವೇಳೆ ಪರಮಾತ್ಮನು ಸರ್ವವ್ಯಾಪಿಯಾಗಿದ್ದರೆ ಎಲ್ಲರೂ ಜ್ಞಾನಪೂರ್ಣರಾಗಿಬಿಡುತ್ತಿದ್ದರು ಆದರೆ ಅವರೊಬ್ಬರಿಗೆ ಜ್ಞಾನಪೂರ್ಣನೆಂದು ಏಕೆ ಹೇಳುತ್ತಾರೆ? ಮನುಷ್ಯರದು ಎಷ್ಟು ತುಚ್ಛಬುದ್ಧಿಯಾಗಿದೆ, ಜ್ಞಾನದ ಮಾತುಗಳನ್ನು ಸ್ವಲ್ಪವೂ ತಿಳಿದುಕೊಳ್ಳುವುದಿಲ್ಲ. ತಂದೆಯು ಜ್ಞಾನ ಮತ್ತು ಭಕ್ತಿಯ ಅಂತರವನ್ನು ತಿಳಿಸುತ್ತಾರೆ. ಮೊದಲು ಜ್ಞಾನವು ದಿನ, ಸತ್ಯಯುಗ-ತ್ರೇತಾಯುಗವಾಗಿದೆ, ನಂತರ ದ್ವಾಪರ-ಕಲಿಯುಗವು ರಾತ್ರಿಯಾಗಿದೆ. ಜ್ಞಾನದಿಂದ ಸದ್ಗತಿಯಾಗುತ್ತದೆ. ಈ ರಾಜಯೋಗದ ಜ್ಞಾನವನ್ನು ಹಠಯೋಗಿಗಳು ತಿಳಿಸಿಕೊಡಲು ಸಾಧ್ಯವಿಲ್ಲ. ಗೃಹಸ್ಥಿಗಳೂ ಸಹ ತಿಳಿಸಲು ಸಾಧ್ಯವಿಲ್ಲ ಏಕೆಂದರೆ ಅಪವಿತ್ರರಾಗಿದ್ದಾರೆ. ಈಗ ರಾಜಯೋಗವನ್ನು ಯಾರು ಕಲಿಸುವರು? ನನ್ನೊಬ್ಬನನ್ನು ನೆನಪು ಮಾಡಿದರೆ ವಿಕರ್ಮವಿನಾಶವಾಗುವುದೆಂದು ಅವರೇ ಹೇಳುತ್ತಾರೆ, ನಿವೃತ್ತಿಮಾರ್ಗದ ಧರ್ಮವೇ ಬೇರೆಯಾಗಿದೆ. ಅವರು ಪ್ರವೃತ್ತಿಮಾರ್ಗದ ಜ್ಞಾನವನ್ನು ಹೇಗೆ ತಿಳಿಸುತ್ತಾರೆ! ಗಾಡ್ ಈಸ್ ಟ್ರೂಥ್ ಎಂದು ಇಲ್ಲಿ ಎಲ್ಲರೂ ಹೇಳುತ್ತಾರೆ. ತಂದೆಯೇ ಸತ್ಯವನ್ನು ಹೇಳುವವರಾಗಿದ್ದಾರೆ. ಆತ್ಮಕ್ಕೆ ತಂದೆಯ ಸ್ಮೃತಿಯು ಬಂದಿದೆ ಆದ್ದರಿಂದ ಬಂದು ನರನಿಂದ ನಾರಾಯಣನಾಗುವ ಸತ್ಯ-ಸತ್ಯವಾದ ಕಥೆಯನ್ನು ತಿಳಿಸಿ ಎಂದು ನಾವು ತಂದೆಯನ್ನು ನೆನಪು ಮಾಡುತ್ತೇವೆ. ಈಗ ನಿಮಗೆ ಸತ್ಯನಾರಾಯಣನ ಕಥೆಯನ್ನು ತಿಳಿಸುತ್ತೇವೆ ಅಲ್ಲವೆ. ಮೊದಲು ನೀವು ಸುಳ್ಳುಕಥೆಗಳನ್ನು ಕೇಳುತ್ತಿದ್ದಿರಿ, ಈಗ ಸತ್ಯವಾದುದನ್ನು ಕೇಳುತ್ತೀರಿ. ಸುಳ್ಳುಕಥೆಗಳನ್ನು ಕೇಳುತ್ತಾ-ಕೇಳುತ್ತಾ ಯಾರೂ ನಾರಾಯಣರಂತೂ ಆಗಲಿಲ್ಲ ಮತ್ತೆ ಅದು ಸತ್ಯನಾರಾಯಣನ ಕಥೆಯಾಗಲು ಹೇಗೆ ಸಾಧ್ಯ? ಮನುಷ್ಯರು ಯಾರನ್ನೂ ನರನಿಂದ ನಾರಾಯಣನನ್ನಾಗಿ ಮಾಡಲು ಸಾಧ್ಯವಿಲ್ಲ. ತಂದೆಯೇ ಬಂದು ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತಾರೆ. ತಂದೆಯು ಭಾರತದಲ್ಲಿಯೇ ಬರುತ್ತಾರೆ ಆದರೆ ಯಾವಾಗ ಬರುತ್ತಾರೆಂಬುದನ್ನು ತಿಳಿದುಕೊಂಡಿಲ್ಲ. ಶಿವ-ಶಂಕರನನ್ನು ಸೇರಿಸಿ ಕಥೆಗಳನ್ನು ರಚಿಸಿಬಿಟ್ಟಿದ್ದಾರೆ. ಶಿವಪುರಾಣವೂ ಇದೆ. ಕೃಷ್ಣನ ಗೀತೆಯೆಂದು ಹೇಳುತ್ತಾರೆ ಅಂದಮೇಲೆ ಶಿವಪುರಾಣವು ದೊಡ್ಡದಾಯಿತು. ವಾಸ್ತವದಲ್ಲಿ ಜ್ಞಾನವು ಗೀತೆಯಲ್ಲಿಯೇ ಇದೆ. ಭಗವಾನುವಾಚ - ಮನ್ಮನಾಭವ. ಈ ಶಬ್ಧವು ಗೀತೆಯ ವಿನಃ ಅನ್ಯ ಯಾವುದೇ ಶಾಸ್ತ್ರಗಳಲ್ಲಿರಲು ಸಾಧ್ಯವಿಲ್ಲ. ಸರ್ವಶಾಸ್ತ್ರಮಯಿ ಶಿರೋಮಣಿ ಎಂದು ಗೀತೆಯಲ್ಲಿದೆ. ಭಗವಂತನದೇ ಶ್ರೇಷ್ಠಮತವಾಗಿದೆ. ಮೊಟ್ಟಮೊದಲಿಗೆ ಇದನ್ನು ತಿಳಿಸಬೇಕು - ಕೆಲವೇ ವರ್ಷಗಳಲ್ಲಿ ಹೊಸಶ್ರೇಷ್ಠಾಚಾರಿ ಪ್ರಪಂಚವು ಸ್ಥಾಪನೆಯಾಗುವುದೆಂದು ನಾವು ಹೇಳುತ್ತೇವೆ. ಈಗ ಭ್ರಷ್ಟಾಚಾರಿ ಪ್ರಪಂಚವಾಗಿದೆ, ಶ್ರೇಷ್ಠಾಚಾರಿ ಪ್ರಪಂಚದಲ್ಲಿ ಎಷ್ಟು ಕಡಿಮೆ ಜನಸಂಖ್ಯೆಯಿರುತ್ತದೆ! ಈಗಂತೂ ಜನಸಂಖ್ಯೆಯು ಬಹಳಷ್ಟಾಗಿಬಿಟ್ಟಿದೆ. ಅದಕ್ಕಾಗಿ ವಿನಾಶವು ಸನ್ಮುಖದಲ್ಲಿ ನಿಂತಿದೆ. ತಂದೆಯು ರಾಜಯೋಗವನ್ನು ಕಲಿಸುತ್ತಿದ್ದಾರೆ. ಆಸ್ತಿಯು ತಂದೆಯಿಂದ ಸಿಗುತ್ತದೆ. ತಂದೆಯಿಂದಲೇ ಆಸ್ತಿಯನ್ನು ಬೇಡುತ್ತಾರೆ, ಯಾರಿಗಾದರೂ ಹೆಚ್ಚಿನ ಹಣವಿದ್ದರೆ, ಮಕ್ಕಳಿದ್ದರೆ ಭಗವಂತನು ಕೊಟ್ಟರೆಂದು ಹೇಳುತ್ತಾರೆ ಅಂದಮೇಲೆ ಭಗವಂತನು ಒಬ್ಬರೇ ಆದರಲ್ಲವೆ, ಎಲ್ಲರಲ್ಲಿ ಭಗವಂತನಿರಲು ಹೇಗೆ ಸಾಧ್ಯ? ಈಗ ನನ್ನನ್ನು ನೆನಪು ಮಾಡಿ ಎಂದು ಆತ್ಮಗಳಿಗೆ ತಂದೆಯು ತಿಳಿಸುತ್ತಾರೆ. ನಮಗೆ ಪರಮಾತ್ಮನು ಜ್ಞಾನವನ್ನು ಕೊಟ್ಟಿದ್ದಾರೆ ಅದನ್ನು ಮತ್ತೆ ನಾವು ಸಹೋದರರಿಗೆ ತಿಳಿಸುತ್ತೇವೆಂದು ಆತ್ಮವು ಹೇಳುತ್ತದೆ. ತನ್ನನ್ನು ಆತ್ಮವೆಂದು ತಿಳಿದು ತಂದೆಯನ್ನು ಎಷ್ಟು ಸಮಯ ನೆನಪು ಮಾಡಿದೆವು - ಈ ಚಾರ್ಟ್ ಇಡುವುದರಲ್ಲಿ ಬಹಳ ವಿಶಾಲಬುದ್ಧಿಯು ಬೇಕು. ದೇಹೀ-ಅಭಿಮಾನಿಯಾಗಿ ತಂದೆಯನ್ನು ನೆನಪು ಮಾಡಿದಾಗ ವಿಕರ್ಮಗಳು ವಿನಾಶವಾಗುವುದು. ಜ್ಞಾನವು ಬಹಳ ಸಹಜವಾಗಿದೆ ಆದರೆ ತನ್ನನ್ನು ಆತ್ಮವೆಂದು ತಿಳಿದು ತಂದೆಯನ್ನು ನೆನಪು ಮಾಡುತ್ತಾ ತಮ್ಮ ಉನ್ನತಿ ಮಾಡಿಕೊಳ್ಳಬೇಕಾಗಿದೆ. ಈ ಚಾರ್ಟನ್ನು ಕೆಲವರೇ ವಿರಳ ಇಡುತ್ತಾರೆ. ದೇಹೀ-ಅಭಿಮಾನಿಯಾಗಿ ತಂದೆಯ ನೆನಪಿನಲ್ಲಿರುವುದರಿಂದ ಎಂದೂ ಯಾರಿಗೂ ದುಃಖವನ್ನು ಕೊಡುವುದಿಲ್ಲ. ತಂದೆಯು ಬರುವುದೇ ಸುಖ ಕೊಡುವುದಕ್ಕಾಗಿ ಅಂದಮೇಲೆ ಮಕ್ಕಳೂ ಸಹ ಎಲ್ಲರಿಗೂ ಸುಖ ಕೊಡಬೇಕಾಗಿದೆ, ಎಂದೂ ಯಾರಿಗೂ ದುಃಖ ಕೊಡಬಾರದು. ತಂದೆಯ ನೆನಪಿನಿಂದ ಎಲ್ಲಾ ಭೂತಗಳು ಓಡಿಹೋಗುತ್ತವೆ, ಬಹಳ ಗುಪ್ತ ಪರಿಶ್ರಮವಿದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ತಂದೆಯ ಆತ್ಮಿಕ ಮಕ್ಕಳಿಗೆ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಈ ಆಸುರೀ, ಛೀ ಛೀ ಪ್ರಪಂಚದಿಂದ ತಮ್ಮ ಕಣ್ಣುಗಳನ್ನು ಮುಚ್ಚಿಕೊಳ್ಳಬೇಕಾಗಿದೆ. ಇದು ಹಳೆಯ ಪ್ರಪಂಚವಾಗಿದೆ, ಇದರೊಂದಿಗೆ ಯಾವುದೇ ಸಂಬಂಧವನ್ನಿಡಬಾರದು. ಇದನ್ನು ನೋಡಿಯೂ ನೋಡದಂತಿರಬೇಕಾಗಿದೆ.

2. ಈ ಬೇಹದ್ದಿನ ನಾಟಕದಲ್ಲಿ ನಾವು ಪಾತ್ರಧಾರಿಗಳಾಗಿದ್ದೇವೆ, ಇದು ಕ್ಷಣ-ಪ್ರತಿಕ್ಷಣ ಪುನರಾವರ್ತನೆಯಾಗುತ್ತಿರುತ್ತದೆ, ಯಾವುದು ಕಳೆದುಹೋಯಿತೋ ಅದು ಪುನಃ ಪುನರಾವರ್ತನೆಯಾಗುವುದು... ಇದನ್ನು ಸ್ಮೃತಿಯಲ್ಲಿಟ್ಟುಕೊಂಡು ಪ್ರತಿಯೊಂದು ಮಾತಿನಲ್ಲಿ ತೇರ್ಗಡೆಯಾಗಬೇಕಾಗಿದೆ. ವಿಶಾಲಬುದ್ಧಿಯವರಾಗಬೇಕಾಗಿದೆ.

ವರದಾನ:
ರಿಯಾಲಿಟಿಯ ಮೂಲಕ ರಾಯಲ್ಟಿಯ ಪ್ರತ್ಯಕ್ಷ ರೂಪ ತೋರಿಸುವಂತಹ ಸಾಕ್ಷಾತ್ಕಾರ ಮೂರ್ತಿ ಭವ

ಈಗ ಇಂತಹ ಸಮಯ ಬರುತ್ತದೆ ಯಾವಾಗ ಪ್ರತಿಯೊಂದು ಆತ್ಮ ಪ್ರತ್ಯಕ್ಷ ರೂಪದಲ್ಲಿ ತಮ್ಮ ರಿಯಾಲಿಟಿ ಮೂಲಕ ರಾಯಲ್ಟಿಯ ಸಾಕ್ಷಾತ್ಕಾರ ಮಾಡಿಸುತ್ತಾರೆ. ಪ್ರತ್ಯಕ್ಷತೆಯ ಸಮಯದಲ್ಲಿ ಮಾಲೆಯ ಮಣಿಯ ನಂಬರ್ ಮತ್ತು ಭವಿಷ್ಯ ರಾಜ್ಯದ ಸ್ವರೂಪ ಎರಡನ್ನೂ ಪ್ರತ್ಯಕ್ಷತೆ ಮಾಡುತ್ತದೆ. ಈಗ ಏನು ರೇಸ್ ಮಾಡುತ್ತಾ ಮಾಡುತ್ತಾ ಸ್ವಲ್ಪ ರೀಸ್ (ಹೊಟ್ಟೆ ಕಿಚ್ಚಿನ)ನ ಧೂಳಿನ ಪರದೆ ಹೊಳೆಯುತ್ತಿರುವ ವಜ್ರವನ್ನು ಮುಚ್ಚಿಬಿಡುತ್ತದೆ, ಅಂತ್ಯದಲ್ಲಿ ಈ ಪರದೆ ಸರಿದುಹೋಗುತ್ತದೆ ನಂತರ ಮುಚ್ಚಿರುವ ವಜ್ರ ತನ್ನ ಪ್ರತ್ಯಕ್ಷ ಸಂಪನ್ನ ಸ್ವರೂಪದಲ್ಲಿ ಬರುತ್ತದೆ, ರಾಯಲ್ ಫ್ಯಾಮಿಲಿ ಈಗಿನಿಂದ ತಮ್ಮ ರಾಯಲ್ಟಿ ತೋರಿಸುತ್ತಾರೆ ಅರ್ಥಾತ್ ತಮ್ಮ ಭವಿಷ್ಯ ಪದವಿಯನ್ನು ಸ್ಪಷ್ಟ ಮಾಡುತ್ತಾರೆ ಆದ್ದರಿಂದ ರಿಯಾಲ್ಟಿಯ ಮೂಲಕ ರಾಯಲ್ಟಿಯ ಸಾಕ್ಷಾತ್ಕಾರ ಮಾಡಿಸಿ.

ಸ್ಲೋಗನ್:
ಯಾವುದೇ ವಿಧಿಯಿಂದ ವ್ಯರ್ಥವನ್ನು ಸಮಾಪ್ತಿಮಾಡಿ ಸಮರ್ಥತೆಯನ್ನು ಮೇಲೆತನ್ನಿ.

ಅವ್ಯಕ್ತ ಸೂಚನೆ: ಏಕಾಂತಪ್ರಿಯರಾಗಿ ಏಕತೆ ಮತ್ತು ಏಕಾಗ್ರತೆಯನ್ನು ತಮ್ಮದಾಗಿಸಿಕೊಳ್ಳಿ

ಸ್ವಯಂನ ಕಲ್ಯಾಣ ಮಾಡುವುದಕ್ಕಾಗಿ ಅಥವಾ ಸ್ವಯಂ ಪರಿವರ್ತನೆ ಮಾಡುವುದಕ್ಕಾಗಿ ವಿಶೇಷ ಏಕಾಂತವಾಸಿ, ಅಂತರ್ಮುಖಿಯಾಗಿರಿ. ಜ್ಞಾನಪೂರ್ಣರಾಗಿರಿ ಆದರೆ ಪಾವರ್ಫುಲ್ ಆಗಿರಿ. ಪ್ರತಿ ಮಾತಿನ ಅನುಭವದಲ್ಲಿ ಸ್ವಯಂನ್ನು ಸಂಪನ್ನ ಮಾಡಿಕೊಳ್ಳಿರಿ. ಯಾರ ಮಗುವಾಗಿದ್ದೇನೆ? ಏನು ಪ್ರಾಪ್ತಿಯಿದೆ? ಈ ಮೊದಲಿನ ಪಾಠದ ಅನುಭವಿಮೂರ್ತರಾಗಿ, ಏಕತೆ ಮತ್ತು ಏಕಾಗ್ರತೆಯನ್ನು ತಮ್ಮದಾಗಿಸಿಕೊಳ್ಳಿರಿ ಆಗ ಸಹಜವೇ ಮಾಯಾಜೀತ್ರಾಗಿಬಿಡುವಿರಿ.