22.06.26         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ನೀವು ಮಕ್ಕಳ ಸೇವೆಯನ್ನು ಮಾಡಲು ತಂದೆಯು ಬಂದಿದ್ದಾರೆ, ನೀವು ತಂದೆಯ ಸಮಾನರಾಗಿಎಲ್ಲರ ಸೇವೆ ಮಾಡಿ”

ಪ್ರಶ್ನೆ:
ಬ್ರಹ್ಮಾ ತಂದೆಗೆ ಯಾವ ಒಂದು ವಿಚಾರ ಬಂದಿತು ಅದಕ್ಕೆ ಶಿವ ತಂದೆಯು ಕಾದು ನೋಡಿ, ಯೋಚಿಸಬೇಡಿ ಎಂದು ಹೇಳುತ್ತಾರೆ?

ಉತ್ತರ:
ಬಾಬಾರವರ ವಿಚಾರ ನಡೆಯುತ್ತದೆ, ಸಮಯವು ಬಹಳ ನಾಜೂಕಾಗಿ ನಡೆಯುತ್ತದೆ, ಮಕ್ಕಳು ಅವಿನಾಶಿ ಜ್ಞಾನ ರತ್ನಗಳನ್ನು ಪಡೆಯಲು ಬರಲೇಬೇಕು – ಇಷ್ಟು ಮಂದಿ ಮಕ್ಕಳು ಬಂದು ಎಲ್ಲಿ ಇರುವರು? ಎಷ್ಟೊಂದು ಮನೆಗಳನ್ನು ಮಾಡಬೇಕಾಗುತ್ತದೆ? ಇದಕ್ಕೆ ಶಿವ ತಂದೆಯು ಹೇಳುತ್ತಾರೆ - ಕಾದು ನೋಡಿ, ಕಲ್ಪದ ಹಿಂದೆ ಹೇಗೆ ಬಂದು ಇದ್ದರೋ ಹಾಗೆಯೇ ಇರುತ್ತಾರೆ, ನೀವು ಯೋಚಿಸಬೇಡಿ. ನೀವು ಕೇವಲ ಓದುತ್ತಾ ಇರಿ ಮತ್ತು ಮನ್ಮನಾಭವದಲ್ಲಿರಿ. ನೀವು ಕರ್ಮಾತೀತ ಆಗುವ ಪುರುಷಾರ್ಥವನ್ನು ಮಾಡಬೇಕಾಗಿದೆ.

ಗೀತೆ:
ನಿಮ್ಮನ್ನು ಪಡೆದ ನಾವು............

ಓಂ ಶಾಂತಿ.
ಮಕ್ಕಳೇ ಓಂ ಶಾಂತಿ ಎಂದು ಶಿವ ತಂದೆಯೂ ಹೇಳುತ್ತಾರೆ ಮತ್ತೇನು ಏಕೆ ಹೇಳುತ್ತಾರೆ? ಮಕ್ಕಳಿಗೆ ಹೇಳುತ್ತಾರೆ, ಮಕ್ಕಳೇ ಓಂ ಶಾಂತಿ, ತತ್ತ್ವಂ. ಹೇ ಮಕ್ಕಳೇ ನೀವು ಶಾಂತ ಸ್ವರೂಪರಾಗಿದ್ದೀರಿ. ನೀವು ಮಾಸ್ಟರ್ ಪತಿತ-ಪಾವನರಾಗಿದ್ದೀರಿ. ನಿಮ್ಮ ಹಾಗೆ ಯಾರೂ ಇರಲು ಸಾಧ್ಯವಿಲ್ಲ. ಎಂತಹ ಕಾಗೆಯೋ ಅಂತಹ ಮಕ್ಕಳೆಂದು ಹೇಳುತ್ತಾರೆ. ನೀವೂ ತಿಳಿದುಕೊಂಡಿದ್ದೀರಿ - ಹೇಗೆ ತಂದೆಯೋ ಹಾಗೆಯೇ ನಾವಾಗಿದ್ದೇವೆ. ನಾನು ಜ್ಞಾನ ಸಾಗರನಾಗಿದ್ದೇನೆ ಅಂದಾಗ ನೀವು ಮಾ|| ಜ್ಞಾನ ಸಾಗರರಾಗಿದ್ದೀರೆಂದು ನೀವು ತಿಳಿದುಕೊಂಡಿದ್ದೀರಿ ಅಂದಮೇಲೆ ನೀವೆಲ್ಲರೂ ನದಿಗಳಾಗಿದ್ದೀರಿ. ಸಾಗರನ ಮಕ್ಕಳು-ಮರಿಗಳು ಇರಬೇಕಲ್ಲವೆ. ದೊಡ್ಡ-ದೊಡ್ಡ ನದಿಗಳಿವೆ, ಕೊಳಗಳಿವೆ, ಸರೋವರಗಳೂ ಇವೆ. ಅವುಗಳೆಲ್ಲಾ ಜಡವಾಗಿವೆ, ನೀವು ಚೈತನ್ಯವಾಗಿದ್ದೀರಿ. ಸಾಗರದಿಂದಲೇ ಎಲ್ಲವೂ ಹುಟ್ಟಿಕೊಂಡಿದೆ. ಕೆಲವು ಮಕ್ಕಳಿಗೆ ಈ ಮಾತುಗಳು ತಿಳಿಯುವುದಿಲ್ಲ ಏಕೆಂದರೆ ಮಕ್ಕಳು ವಿದ್ಯಾವಂತರಾಗಿರುವುದಿಲ್ಲ. ತಂದೆಯ ಒಮ್ಮೆ ಒಂದು ಪ್ರಶ್ನೆಯನ್ನು ಕೇಳಿದರು - ಸಕ್ಕರೆಯನ್ನು ಯಾವುದರಿಂದ ಮಾಡುತ್ತಾರೆ? ಬೆಲ್ಲವನ್ನು ಯಾವುದರಿಂದ ಮಾಡುತ್ತಾರೆ? ಕೆಂಪು ಕಬ್ಬಿನಿಂದ ಬೆಲ್ಲವನ್ನು, ಬಿಳಿ ಕಬ್ಬಿನಿಂದ ಸಕ್ಕರೆಯನ್ನು ತಯಾರಿಸುತ್ತಾರೆ ಎಂದು ಹೇಳಿದರು ಏಕೆಂದರೆ ಅವರು ಓದಿರಲಿಲ್ಲ ಅಲ್ಲವೆ. ಈಗ ನಿಮಗೆ ಎಷ್ಟು ದೊಡ್ಡ ಮಾತುಗಳನ್ನು ತಿಳಿಸುತ್ತಾರೆ! ನೀರಿನ ಸಾಗರದಿಂದ ನದಿಗಳು ಹುಟ್ಟುತ್ತವೆ. ಮನುಷ್ಯರು ವೃದ್ಧಿಯಾದರೆ ನೀರು ಸಹ ಹೆಚ್ಚು ಬೇಕಾಗುತ್ತದೆ, ಎಷ್ಟೊಂದು ಕಣಿವೆಗಳನ್ನು ಮಾಡುತ್ತಿರುತ್ತಾರೆ. ನೀವು ಮಕ್ಕಳು ಏಳುತ್ತಾ-ಕುಳಿತುಕೊಳ್ಳುತ್ತಾ, ನಡೆಯುತ್ತಾ-ತಿರುಗಾಡುತ್ತಾ ಇದೇ ವಿಚಾರ ಮಾಡಬೇಕು - ನಾವು ಈ ಪತಿತ ಪ್ರಪಂಚವನ್ನು ಪಾವನ ಮಾಡುತ್ತೇವೆ. ಗೀತೆಯಲ್ಲಿಯೂ ಸಹ ಹೇಳುತ್ತಾರೆ - ಬಾಬಾ, ನಾವು ನಿಮ್ಮಿಂದ ವಿಶ್ವದ ರಾಜ್ಯಭಾಗ್ಯವನ್ನು ಆಸ್ತಿಯಾಗಿ ಪಡೆಯುತ್ತೇವೆ. ಇದನ್ನು ನಮ್ಮಿಂದ ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ. 21 ಜನ್ಮಗಳು ಅದು ಖಾಯಂ ಆಗಿ ಇರುವುದು. ಬೇಹದ್ದಿನ ತಂದೆಯು ಬೇಹದ್ದಿನ ರಾಜ್ಯಭಾಗ್ಯವನ್ನು ಕೊಡುತ್ತಾರೆ. ಯೋಗ್ಯರನ್ನಾಗಿ, ಪವಿತ್ರರನ್ನಾಗಿ ಮಾಡುತ್ತಾರೆ. ಹೇ ಪತಿತ-ಪಾವನ ಎಂದೂ ಸಹ ಕರೆಯುತ್ತಾರೆ, ಕೃಷ್ಣನನ್ನು ಕರೆಯುವುದಿಲ್ಲ ಆದರೆ ನಿರಾಕಾರ ಭಗವಂತನನ್ನೇ ಕರೆಯುತ್ತಾರೆ. ಹೇ ಪತಿತ-ಪಾವನ ಎಂದಾಗ ಕೃಷ್ಣನು ಬುದ್ಧಿಯಲ್ಲಿ ಬರುವುದಿಲ್ಲ, ಪರಮಾತ್ಮನೇ ಬರುತ್ತಾರೆ. ತಂದೆಯು ಪ್ರತಿಯೊಂದು ಮಾತನ್ನೂ ತಿಳಿಸುತ್ತಾರೆ. ನೀವು ತಂದೆಯ ಸಮ್ಮುಖದಲ್ಲಿ ಕುಳಿತಿದ್ದೀರಿ. ಇವರು ಯಾವುದೇ ಸಾಧು-ಸಂತರಲ್ಲ. ನಿರಾಕಾರ ಶಿವ ತಂದೆಯು ಈ ಬಹ್ಮಾನ ಶರೀರದಲ್ಲಿ ಪ್ರವೇಶ ಮಾಡಿ ನಮಗೆ ಓದಿಸುತ್ತಾರೆಂದು ನೀವು ತಿಳಿದಿದ್ದೀರಿ. ಪರಮಪಿತ ಪರಮಾತ್ಮನು ಬಹ್ಮಾನ ತನುವಿನ ಮುಖಾಂತರ ಆದಿ ಸನಾತನ ದೇವಿ-ದೇವತಾ ಧರ್ಮದ ಸ್ಥಾಪನೆ ಮಾಡುತ್ತಾರೆಂದು ಗಾಯನವಿದೆ. ವಿನಾಶವು ಸ್ಥಾಪನೆಯ ನಂತರ ಆಗುವುದು. ಪರಮಾತ್ಮನು ಹಳೆಯ ಪ್ರಪಂಚದಲ್ಲಿಯೇ ಬರುತ್ತಾರೆಂದು ಇದರಿಂದ ಸಿದ್ಧವಾಗುತ್ತದೆ. ಬ್ರಹ್ಮಾನ ಮುಖಾಂತರ ಹೊಸ ಪ್ರಪಂಚದ ಸ್ಥಾಪನೆ, ಶಂಕರನ ಮುಖಾಂತರ ಅನೇಕ ಧರ್ಮಗಳ ವಿನಾಶವನ್ನು ಮಾಡಿಸುತ್ತಾರೆ. ಸತ್ಯಯುಗದಲ್ಲಿ ಒಂದು ಧರ್ಮವಿತ್ತು, ಈಗಂತೂ ಅನೇಕ ಧರ್ಮಗಳಿವೆ. ಒಂದು ಧರ್ಮದವರ ದೇವಿ-ದೇವತಾ ಧರ್ಮದ ಚಿನ್ಹೆಯಾಗಿ ಚಕ್ರ ಇತ್ಯಾದಿಗಳಿವೆ. ಈ ಲಕ್ಷ್ಮೀ-ನಾರಾಯಣರನ್ನು ವಿಶ್ವದ ಮಾಲೀಕರೆಂದು ಹೇಳಲಾಗುತ್ತದೆ. ಸ್ವರ್ಗದ ಮಾಲೀಕರು ಸೋ ವಿಶ್ವದ ಮಾಲೀಕರಾದರಲ್ಲವೆ. ಈ ಮಾತುಗಳು ನೀವು ಮಕ್ಕಳ ಬುದ್ಧಿಯಲ್ಲಿದೆ. ಮಕ್ಕಳೇ, ಮನ್ಮನಾಭವ ಎಂದು ತಂದೆಯು ಹೇಳುತ್ತಾರೆ. ಮಕ್ಕಳಿಗೆ ಇದು ಘಳಿಗೆ-ಘಳಿಗೆಗೂ ಸಾವಧಾನ ಸಿಗುತ್ತದೆ, ತಂದೆ ಮತ್ತು ಆಸ್ತಿಯನ್ನು ನೆನಪು ಮಾಡಿ. ಇದನ್ನು ಮರೆಯಬಾರದು, ನಂತರ ಅಂಶಗಳೆಲ್ಲವನ್ನೂ ಮರೆತು ಹೋಗುತ್ತಾರೆ. ಇದಂತೂ ಮುಖ್ಯವಾಗಿದೆ. ತಂದೆಯೇ ಪತಿತ-ಪಾವನನಾಗಿದ್ದಾರೆ. ಇವರು ಪಾವನರಾಗುವ ಯುಕ್ತಿಯನ್ನು ತಿಳಿಸುತ್ತಾರೆ. ನೀವು ಸತೋಪ್ರಧಾನರಾಗಿದ್ದಿರಿ, ಈಗ ತಮೋಪ್ರಧಾನ ಪತಿತರಾಗಿದ್ದೀರಿ, ಪೂರ್ಣ 84 ಜನ್ಮಗಳನ್ನು ತೆಗೆದುಕೊಂಡಿದ್ದೀರಿ. ಈಗ ಪುನಃ ಸತೋಪ್ರಧಾನರಾಗಬೇಕಾಗಿದೆ. ನೀವು ಸತೋಪ್ರಧಾನರಾದರೆ ಪವಿತ್ರ ಪ್ರಪಂಚದಲ್ಲಿ ಹೋಗಲು ಸಾಧ್ಯ. ನಿರಾಕಾರಿ ಪ್ರಪಂಚವು ಪವಿತ್ರವಾಗಿದೆ ಹಾಗೂ ಸಾಕಾರಿ ಪ್ರಪಂಚವೂ ಅಲ್ಲಿ ಪವಿತ್ರವಾಗಿರುತ್ತದೆ. ನಂತರ ಈಗ ಅಪವಿತ್ರ ಪತಿತ ಪ್ರಪಂಚವಾಗಿದೆ. ಆತ್ಮವು ತಮೋಪ್ರಧಾನ ಆಗಿದೆಯೆಂದಮೇಲೆ ಶರೀರವೂ ತಮೋಪ್ರಧಾನವಾಗಿರುತ್ತದೆ. ಇದಂತೂ ಸೃಷ್ಟಿ ನಾಟಕವಾಗಿದೆ, ಇದರಲ್ಲಿ ಬ್ರಹ್ಮಾಂಡ ಮತ್ತು ಸೂಕ್ಷ್ಮವತನವೂ ಬಂದು ಬಿಡುತ್ತದೆ. ಸೃಷ್ಟಿಯ ಚಕ್ರವು ಇಲ್ಲಿಯೇ ತಿರುಗುತ್ತದೆ, ಸತ್ಯ-ತ್ರೇತಾ ಯುಗ ಇಲ್ಲಿಯೇ ಇದೆ. ಇದ್ಯಾವುದೂ ಸೂಕ್ಷ್ಮವತನ, ಮೂಲವತನದಲ್ಲಿ ನಡೆಯುವುದಿಲ್ಲ, ಇದು ಇಲ್ಲಿಯದೇ ಆಗಿದೆ. ಇದಕ್ಕೇ ಮನುಷ್ಯ ಸೃಷ್ಟಿಯೆಂದು ಹೇಳಲಾಗುತ್ತದೆ. ಅದು ಆತ್ಮಗಳ ನಿರಾಕಾರಿ ಪ್ರಪಂಚವಾಗಿದೆ, ಅದು ಬ್ರಹ್ಮಾ-ವಿಷ್ಣು-ಶಂಕರರ ಆಕಾರಿ ಪ್ರಪಂಚವಾಗಿದೆ. ಇದು ಸಾಕಾರಿ ಸೃಷ್ಟಿಯು ಎಷ್ಟು ದೊಡ್ಡದಾಗಿದೆ! ಸತ್ಯಯುಗದಲ್ಲಿ ಎಷ್ಟು ಚಿಕ್ಕ ಸೃಷ್ಟಿಯಿರುತ್ತದೆ, ಅಲ್ಲಿ ಇರುವುದೇ ಒಂದು ಧರ್ಮವಾಗಿದೆ. ಆದರೆ ಮನುಷ್ಯರು ಅಲ್ಲಿಯೂ ಸಹ ದೈತ್ಯರು ಎಲ್ಲರೂ ಇದ್ದರು ಎಂದು ಹೇಳುತ್ತಾರೆ. ಇದೆಲ್ಲವೂ ಅಸತ್ಯವಾಗಿದೆ.

ಹೊಸ ಪ್ರಪಂಚದ ಸ್ಥಾಪನೆ, ಹಳೆಯ ಪ್ರಪಂಚದ ವಿನಾಶವೆಂದು ನೀವು ತಿಳಿದಿದ್ದೀರಿ. ಎಲ್ಲರ ವಿನಾಶವಾಗುತ್ತದೆ ಮತ್ತು ಸತ್ಯಯುಗ, ಸ್ವರ್ಗದ ಸ್ಥಾಪನೆಯಾಗುತ್ತದೆ. ನೀವು ತಂದೆಯ ಜೊತೆ ಸಹಯೋಗ ಕೊಡುತ್ತಿದ್ದೀರಿ. ತಂದೆಯು ಬರುವುದೇ ಮಕ್ಕಳ ಸೇವೆ ಮಾಡುವುದಕ್ಕಾಗಿ. ಇವರು ಬೇಹದ್ದಿನ ತಂದೆಯಾಗಿದ್ದಾರೆ. ತಂದೆಯು ನೋಡುತ್ತಾರೆ - ಮಕ್ಕಳು ಎಷ್ಟೊಂದು ದುಃಖಿಗಳಾಗಿದ್ದಾರೆ ಅಂದಮೇಲೆ ಅವಶ್ಯವಾಗಿ ದಯೆ ಬರುತ್ತದೆಯಲ್ಲವೆ. ಅವರೇ ದಯಾಹೃದಯಿ ತಂದೆಯಾಗಿದ್ದಾರೆ. ಈಗಂತೂ ಇಡೀ ಪ್ರಪಂಚವು ಅಶಾಂತವಾಗಿದೆ. ಒಬ್ಬ ತಂದೆಯ ವಿನಃ ಯಾರೂ ಸಹ ಶಾಂತಿಯನ್ನು ಕೊಡಲು ಸಾಧ್ಯವಿಲ್ಲ, ಹಠಯೋಗಿಗಳಂತೂ ಅನೇಕರಿದ್ದಾರೆ. ಆತ್ಮವು ನಿರ್ಲೇಪವೆಂದು ಹೇಳಿ ಬಿಡುತ್ತಾರೆ, ಮನುಷ್ಯರಿಗೆ ಉಲ್ಟಾ ಮಾತುಗಳನ್ನು ಹೇಳುತ್ತಿರುತ್ತಾರೆ. ವಾಸ್ತವದಲ್ಲಿ ಆತ್ಮದ ಸ್ವಚ್ಛತೆ ಬೇಕಾಗಿದೆ. ಆತ್ಮದಲ್ಲಿಯೇ ತುಕ್ಕು ಬೀಳುತ್ತದೆ ಆದರೆಇದು ಯಾರಿಗೂ ತಿಳಿದಿಲ್ಲ. ಇವರು ಪಾಪಾತ್ಮನೆಂದು ಹೇಳುತ್ತಾರೆ, ಬಹಳ ಪಾಪಗಳನ್ನು ಮಾಡುತ್ತಾರೆ. ಇವರು ಮಹಾತ್ಮ, ಪುಣ್ಯಾತ್ಮ ಎಂದೂ ಹೇಳುತ್ತಾರೆ. ಮಹಾನ್ ಪರಮಾತ್ಮನೆಂದು ಹೇಳುವುದಿಲ್ಲ. ಸನ್ಯಾಸಿಗಳಿಗೆ ಪವಿತ್ರ ಆತ್ಮರೆಂದು ಹೇಳುತ್ತಾರೆ ಏಕೆಂದರೆ ಅವರು ಸನ್ಯಾಸವನ್ನು ಮಾಡಿರುತ್ತಾರೆ. ಆತ್ಮವನ್ನು ಪವಿತ್ರವನ್ನಾಗಿ ಮಾಡುವವರು ತಂದೆಯ ವಿನಃ ಬೇರೆ ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳುತ್ತಾರೆ. ಪತಿತ ಪ್ರಪಂಚದಲ್ಲಿ ಪಾವನ ಆತ್ಮರಿರಲು ಸಾಧ್ಯವಿಲ್ಲ. ಈಗ ಸಸಿ ಮಾಡಲಾಗುತ್ತಿದೆ. ನಿಧಾನ-ನಿಧಾನವಾಗಿ ವೃದ್ಧಿಯಾಗುತ್ತಾ ಹೋಗುತ್ತದೆ. ಈಗಂತೂ ಚಿಕ್ಕ-ಚಿಕ್ಕ ಮಠ ಪಂಥಗಳು, ಇತ್ಯಾದಿಗಳ ರೆಂಬೆ-ಕೊಂಬೆಗಳಿವೆ. ಅದರಲ್ಲಿ ಯಾವುದೇ ಫಲವಿದೆಯೇ! ಅನೇಕ ಪ್ರಕಾರದ ಮಂತ್ರವನ್ನು ಕೊಡುತ್ತಾರೆ, ವಿಧ-ವಿಧವಾದ ಮಂತ್ರಗಳನ್ನೂ ಕೊಡುತ್ತಾರೆ. ತಂದೆಯು ಕೊಡುವುದೂ ಸಹ ವಶೀಕರಣ ಮಂತ್ರವಾಗಿದೆ ಯಾವುದರಿಂದ ನೀವು ಪಂಚ ವಿಕಾರಗಳ ಮೇಲೆ ಜಯ ಗಳಿಸುತ್ತೀರಿ. ರಾಮ-ರಾಮ ಎಂಬ ಮಂತ್ರವನ್ನು ಜಪಿಸುತ್ತಾರೆ, ಇದರಿಂದ ಯಾವುದೇ ಪ್ರಯೋಜನವಿಲ್ಲ. ನನ್ನನ್ನು ನೆನಪು ಮಾಡಿದರೆ ನಿಮ್ಮ ಪಾಪ ನಾಶವಾಗುವುದು, ನೀವು ಪವಿತ್ರರಾಗಿ ಬಿಡುತ್ತೀರಿ. ನೆನಪು ಮಾಡುವುದನ್ನೇ ಯೋಗವೆಂದು ಹೇಳಲಾಗುತ್ತದೆ. ಭಾರತದ ಪ್ರಾಚೀನ ಯೋಗವು ಬಹಳ ಪ್ರಸಿದ್ಧವಾಗಿದೆ, ಈ ಯೋಗದಿಂದಲೇ ನೀವು ವಿಶ್ವದ ಮೇಲೆ ಜಯ ಗಳಿಸುತ್ತೀರಿ. ಭಾರತದ ರಾಜ ಯೋಗವು ಬಹಳ ಹೆಸರುವಾಸಿಯಾಗಿದೆ. ತಂದೆಯ ಹೊರತು ಇದನ್ನು ಯಾರೂ ಕಲಿಸಲು ಸಾಧ್ಯವಿಲ್ಲ. ನೀವು ಬ್ರಹ್ಮಾಕುಮಾರ-ಕುಮಾರಿಯರಾಗಿದ್ದೀರಿ. ಬಿ.ಕೆ. ಅಂದಮೇಲೆ ಇಲ್ಲಿಯೇ ಇರಬೇಕಲ್ಲವೆ. ಪ್ರಜಾಪಿತ ಬಹ್ಮಾನ ಮಕ್ಕಳೆಂದರೆ ಬ್ರಹ್ಮಾನ ಜೊತೆಯಲ್ಲಿಯೇ ಇರಬೇಕಾಗಿದೆ, ಬ್ರಾಹ್ಮಣ ಕುಲವು ಅವಶ್ಯವಾಗಿ ಬೇಕು. ಇದಕ್ಕೇ ಸರ್ವೋತ್ತಮ ಶ್ರೇಷ್ಠಾತಿ ಶ್ರೇಷ್ಠ ಬ್ರಾಹ್ಮಣ ಕುಲವೆಂದು ಹೇಳುತ್ತಾರೆ. ನೀವು ಬ್ರಾಹ್ಮಣ ಕುಲದವರಾಗಿದ್ದೀರಿ, ನಂತರ ಅಲ್ಲೋಲ-ಕಲ್ಲೋಲವಾಗಿ ಬಿಡುವುದು, ಇದು ಬಾಜೋಲಿ ಆಟವಾಗಿದೆ. ಶೂದ್ರರಿಂದ ಬ್ರಾಹ್ಮಣರಾಗಿ ನಂತರ ದೇವತೆ, ಕ್ಷತ್ರಿಯ.... ಆಗುತ್ತೀರಿ ಅಂದಮೇಲೆ ಮಧುರಾತಿ ಮಧುರ ಮಕ್ಕಳಿಗೆ ತಂದೆಯನ್ನು ನೆನಪು ಮಾಡಿ ಎಂದು ಸ್ವಲ್ಪವೇ ತಿಳಿಸುತ್ತಾರೆ. ತಂದೆಯು ನಮಗೆ 84 ಜನ್ಮಗಳ ರಹಸ್ಯವನ್ನು ತಿಳಿಸುತ್ತಾರೆ ಎಂದು ನಮ್ಮ ಬುದ್ಧಿಯಲ್ಲಿದೆ. 84 ಲಕ್ಷ ಅಥವಾ 84 ಜನ್ಮಗಳ ಲೆಕ್ಕವಂತೂ ಬೇಕಲ್ಲವೆ, ಇದು ಯಾರಿಗೂ ತಿಳಿದಿಲ್ಲ. 84 ಲಕ್ಷದ ಲೆಕ್ಕವನ್ನು ಯಾರೂ ತಿಳಿಸಲು ಸಾಧ್ಯವಿಲ್ಲ. ಮನುಷ್ಯರು 84 ಜನ್ಮಗಳ ಚಕ್ರವನ್ನು ಸುತ್ತುತ್ತಾರೆ. ಆತ್ಮಗಳು ಮೇಲಿನಿಂದ ಪಾತ್ರವನ್ನಭಿನಯಿಸಲು ಬರುತ್ತಾರೆ. ಸತ್ಯಯುಗದಿಂದ ಹಿಡಿದು ಕಲಿಯುಗದ ಅಂತ್ಯದವರೆಗೂ ಬರುತ್ತಲೇ ಇರುತ್ತಾರೆ. ಪ್ರತಿಯೊಬ್ಬರೂ ತಮ್ಮ-ತಮ್ಮ ಪಾತ್ರವನ್ನು ಅಭಿನಯಿಸುತ್ತಲೇ ಇರುತ್ತಾರೆ. ಈ ಮಾತುಗಳು ಯಾವುದೇ ಮನುಷ್ಯರಿಗೆ ಗೊತ್ತಿಲ್ಲ ಆದರೆ ಒಬ್ಬ ತಂದೆಗೇ ತಿಳಿದಿರುತ್ತದೆ. ಮನುಷ್ಯರಿಗೆಂದೂ ಪರಮಪಿತ, ಗಾಡ್ಫಾದರ್ ಎಂದು ಕರೆಯಲು ಸಾಧ್ಯವಿಲ್ಲ. ಗಾಡ್ಫಾದರ್ ಎಂದು ಕರೆಯುವುದರಿಂದ ಶಿವ ತಂದೆಯ ಕಡೆ ಬುದ್ಧಿಯು ಹೋಗುತ್ತದೆ. ಜೀವಾತ್ಮರ ತಂದೆಯೂ ಇರಬೇಕಲ್ಲವೆ. ಆತ್ಮವು ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳುತ್ತದೆ, ನಿರಾಕಾರ ತಂದೆಯ ಹೆಸರಾಗಿದೆ - ಶಿವ. ನಿಮ್ಮದು ಒಂದೇ ಹೆಸರೂ ಆತ್ಮ ಎಂದಾಗಿದೆ ನಂತರ ಶರೀರದಿಂದ ಭಿನ್ನ-ಭಿನ್ನ ನಾಮಗಳಲ್ಲಿ ಬರುತ್ತೀರಿ. ಪರಮಪಿತ ಪರಮಾತ್ಮನು ಶರೀರದಲ್ಲಿ ಬಂದು ಜ್ಞಾನವನ್ನು ತಿಳಿಸುತ್ತಾರೆ. ಶರೀರವಿಲ್ಲದೆ ತಿಳಿಸಲು ಆಗುತ್ತದೆಯೇ? ಅಂದಮೇಲೆ ಇವರಿಗಂತೂ ತಮ್ಮದೇ ಆದ ಹೆಸರಿದೆ. ನನಗೆ ಶರೀರದ ಯಾವುದೇ ಹೆಸರಿಲ್ಲ, ನಾನು ಪುನರ್ಜನ್ಮದಲ್ಲಿ ಬರುವುದಿಲ್ಲವೆಂದು ತಂದೆಯು ತಿಳಿಸುತ್ತಾರೆ. ನಾನು ಇವರಲ್ಲಿ (ಬ್ರಹ್ಮಾ) ಪ್ರವೇಶ ಮಾಡುತ್ತೇನೆಂದು ಇವರಿಗೂ ತಿಳಿದಿರುವುದಿಲ್ಲ, ಯಾವುದೇ ತಿಥಿ-ತಾರೀಖು ಇರುವುದಿಲ್ಲ. ಕಲ್ಪದ ಅಂತ್ಯ ಅರ್ಥಾತ್ ಅಂಧಕಾರದಲ್ಲಿ ಬರುತ್ತೇನೆ ಅಂದರೆ ಈಗ ಅಂಧಕಾರವಾಗಿದೆ. ಇದಂತೂ ಪತಿತ ಪ್ರಪಂಚವಾಗಿದೆ, ನಾನು ಪಾವನ ಪ್ರಪಂಚವನ್ನು ಅರ್ಥಾತ್ ದಿನವನ್ನಾಗಿ ಮಾಡಲು ಬರುತ್ತೇನೆ. ತಂದೆಯು ಯಾವಾಗ ಪ್ರವೇಶ ಮಾಡುತ್ತಾರೆಂದು ಯಾರಿಗೂ ತಿಳಿದಿಲ್ಲ. ವಿನಾಶದ ಸಾಕ್ಷಾತ್ಕಾರವಾಯಿತು, ಬಹಳ ಮಂದಿ ಧ್ಯಾನದಲ್ಲಿ ಹೋಗುತ್ತಿದ್ದರು ಆದರೂ ಸಹ ಯಾರಿಗೂ ತಿಥಿ-ತಾರೀಖು, ವೇಳೆಯನ್ನು ಹೇಳಲು ಸಾಧ್ಯವಿಲ್ಲ. ಕೃಷ್ಣನನ್ನು ಪೂಜೆ ಮಾಡುತ್ತಾರೆ, ಅವನ ಜನ್ಮವನ್ನೂ ರಾತ್ರಿಯಲ್ಲಿಯೇ ತೋರಿಸುತ್ತಾರೆ. ಯಾವ ಸಮಯ, ತಿಥಿ-ತಾರೀಖು ಎಲ್ಲವನ್ನೂ ತೋರಿಸುತ್ತಾರೆ. ನಾನಂತೂ ನಿರಾಕಾರನಾಗಿದ್ದೇನೆ. ಮನುಷ್ಯರು ಹೇಗೆ ಜನ್ಮ ಪಡೆಯುವರೋ ಹಾಗೆಯೇ ನನ್ನ ಜನ್ಮವಾಗಲು ಸಾಧ್ಯವೇ! ನನ್ನ ಜನ್ಮವಂತೂ ದಿವ್ಯ-ಅಲೌಕಿಕ ಜನ್ಮವಾಗಿದೆ. ನಾನು ಇವರಲ್ಲಿ ಪ್ರವೇಶ ಮಾಡಿ ನಂತರ ಹೊರಟು ಹೋಗುತ್ತೇನೆ. ಎತ್ತಿನ ಮೇಲೆ ಇಡೀ ದಿನ ಸವಾರಿ ಮಾಡುತ್ತಾರೆಯೇ! ನನ್ನನ್ನು ಯಾವ ಸಮಯದಲ್ಲಿ ಯಾವುದೇ ಮಗು ನೆನಪು ಮಾಡಿದರೆ ನಾನು ಹಾಜರಾಗುತ್ತೇನೆ. ತಂದೆಯು ಬಂದು ಮಕ್ಕಳ ಮಿಲನ ಮಾಡುತ್ತಾರೆ ಮತ್ತುಗುಡ್ ಮಾರ್ನಿಂಗ್ ಹೇಳುತ್ತಾರೆ. ಹೇಗೆ ಮನುಷ್ಯರು ಒಬ್ಬರನ್ನೊಬ್ಬರು ಮಿಲನ ಮಾಡುವಾಗ ರಾಂ-ರಾಂ ಅಥವಾ ನಮಸ್ತೆ ಹೇಳುತ್ತಾರೆ. ಇವರು ಆತ್ಮೀಯ ಬೇಹದ್ದಿನ ತಂದೆಯಾಗಿದ್ದಾರೆ. ನಾನು ನೀವೆಲ್ಲಾ ಮಕ್ಕಳ ತಂದೆಯಾಗಿದ್ದೇನೆ ಅಂದಮೇಲೆ ಶಿವ ತಂದೆಯ ಸಂತಾನರೆಲ್ಲರೂ ಸಹೋದರ-ಸಹೋದರರಾಗಿದ್ದೀರಿ ಎಂಬ ಖುಷಿಯ ನಶೆಯೇರಿರಬೇಕು. ಬೇಹದ್ದಿನ ತಂದೆಯು ಬೇಹದ್ದಿನ ಆಸ್ತಿಯನ್ನು ಕೊಡಲು ಬಂದಿದ್ದಾರೆ. ಮಕ್ಕಳನ್ನು ನೋಡಿ, ತಂದೆಗೆ ಎಷ್ಟೊಂದು ಮಕ್ಕಳಿದ್ದಾರೆಂದು ಖುಷಿಯಾಗುತ್ತದೆ. ಬಾಬಾ, ನಾವು ಮಕ್ಕಳನ್ನು ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತಿದ್ದಾರೆ, ರಾಜ್ಯಭಾಗ್ಯವನ್ನು ಕೊಡುತ್ತಿದ್ದಾರೆಂದು ಮಕ್ಕಳು ತಿಳಿದುಕೊಂಡಿದ್ದೀರಿ. ನಮ್ಮ ಭಾರತ ದೇಶವೆಂದು ಹೇಗೆ ಭಾರತವಾಸಿಗಳು ಹೇಳುತ್ತಾರೆಯೋ ಹಾಗೆಯೇ ಪ್ರಜೆಗಳೂ ಸಹ ನಮ್ಮ ರಾಜ್ಯವೆಂದು ಹೇಳುತ್ತಾರೆ. ರಾಜ-ಪ್ರಜೆ ಇಬ್ಬರೂ ಸಹ ನಮ್ಮ ದೇಶವೆಂದು ಹೇಳುತ್ತಾರೆ. ನೀವು ಮಕ್ಕಳು ನರಕವಾಸಿಗಳಾಗಿದ್ದೀರಿ ನಂತರ ಸ್ವರ್ಗವಾಸಿಗಳಾಗುತ್ತೀರಿ. ತಂದೆ ಮತ್ತು ಆಸ್ತಿಯನ್ನು ನೆನಪು ಮಾಡಿ, ಮತ್ತ್ಯಾವುದೇ ತೊಂದರೆ ಕೊಡುವುದಿಲ್ಲ. ಗೃಹಸ್ಥ ವ್ಯವಹಾರದಲ್ಲಿಯೇ ಇರಬೇಕಾಗಿದೆ, ಇಲ್ಲಿ ಬಂದು ಇರಬೇಕಾಗಿಲ್ಲ. ಇಲ್ಲಿಗೆ ಎಲ್ಲರೂ ಓಡಿ ಬಂದರೆ ಎಲ್ಲರನ್ನೂ ತಂದೆಯು ಎಲ್ಲಿಡಲು ಸಾಧ್ಯ! ಇಷ್ಟೊಂದು ಮಂದಿ ಮಕ್ಕಳನ್ನು ಒಟ್ಟಿಗೆ ಹೇಗೆ ಇಡಲು ಸಾಧ್ಯ! ಎಲ್ಲಾ ಸೇವಾಕೇಂದ್ರದ ಮಕ್ಕಳು ಒಮ್ಮೆ ಒಟ್ಟಾಗಿ ಸೇರಲು ಹೇಗೆ ಸಾಧ್ಯ, ಉಳಿದುಕೊಳ್ಳಲು ಎಲ್ಲಿ ಸಾಧ್ಯ, ಕಷ್ಟವಿದೆಯಲ್ಲವೆ. ದಿನ-ಪ್ರತಿದಿನ ವೃದ್ಧಿಯಾಗುತ್ತಿರುತ್ತದೆ, ಇದಕ್ಕೂ ಸಹ ಯುಕ್ತಿಯನ್ನು ರಚಿಸಬೇಕಾಗಿದೆ. ಅಕ್ಕ ಪಕ್ಕದ ಮನೆಗಳನ್ನೂ ತೆಗೆದುಕೊಳ್ಳಬೇಕಾಗುತ್ತದೆ. ಆದ್ದರಿಂದ ಎಷ್ಟಾಗುತ್ತದೆಯೆಂದು ಮನೆಯವರನ್ನು ಕೇಳಿರಿ. ಸಮಯದಲ್ಲಂತೂ ತೆಗೆದುಕೊಳ್ಳಲೇಬೇಕಾಗುತ್ತದೆ, ಹಣದ ಮಾತಂತೂ ಏನೂ ಇಲ್ಲ. ಸಮಯವು ಬಹಳ ನಾಜೂಕಾಗುತ್ತಾ ಇದೆ. ತಂದೆ ಮತ್ತು ಮಕ್ಕಳು ಇಬ್ಬರೂ ಅವಿನಾಶಿಯಾಗಿದ್ದಾರೆ, ಅವಿನಾಶಿ ಖಜಾನೆಯನ್ನು ಕೊಡುತ್ತಿದ್ದಾರೆ ಅಂದಾಗ ಬಹಳಷ್ಟು ಮಂದಿ ಮಕ್ಕಳು ಬರಬೇಕಾಗಿದೆ. ತಂದೆಯು ವಿಚಾರ ಮಾಡುತ್ತಾರೆ - ಇಷ್ಟೊಂದು ಮಂದಿ ಮಕ್ಕಳು ಬಂದರೆ ಎಲ್ಲಿ ಇರುವರು? ತಂದೆಯು ಹೇಳುತ್ತಾರೆ - “ಕಾದು ನೋಡು” ನೀನು ಮನ್ಮನಾಭವ ಆಗಿ ಓದುತ್ತಲೇ ಇರಬೇಕಾಗಿದೆ.

ನೀವು ಮಕ್ಕಳ ಬುದ್ಧಿಯಲ್ಲಿ ಈ ವಿಚಾರ ಬರಬೇಕು - ನಾವು ಕರ್ಮಾತೀತ ಸ್ಥಿತಿಯಲ್ಲಿ ಹೋಗಿ ಸತೋಪ್ರಧಾನರಾಗಬೇಕಾಗಿದೆ. ನೆನಪಿನಿಂದಲೇ ಪಾವನರಾಗುತ್ತೀರಿ. ತಂದೆಯಂತೂ ಸಹಜವಾದ ಮಾತುಗಳನ್ನು ತಿಳಿಸುತ್ತಾರೆ. ಅತಿ ಸಹಜವಾದ ಮಾತು, ಕೇವಲ ತಂದೆಯನ್ನು ನೆನಪು ಮಾಡುವುದಾಗಿದೆ. ನೋಡಿ, ಕರುವಿಗೆ ತನ್ನ ತಾಯಿಯ ನೆನಪು ಬಂದರೆ ಹೇಗೆ ಕೂಗುತ್ತದೆ! ಅದಂತೂ ಪ್ರಾಣಿಯಾಗಿದೆ, ನೀವು ಮಕ್ಕಳೂ ಸಹ ಚೀರಾಡಿದೀರಲ್ಲವೇ? ಮುಂದೆ ಬಹಳ ಕಿರುಚಾಡುತ್ತಾರೆ ಮತ್ತು ನೆನಪೂ ಮಾಡುತ್ತಾರೆ. ಈಗ ತಂದೆಯು ಬಂದಿದ್ದಾರೆ, ವಿನಾಶವಾಗಲೇಬೇಕೆಂದು ನೀವು ಮಕ್ಕಳು ತಿಳಿದುಕೊಂಡಿದ್ದೀರಿ. ಪ್ರಾಕೃತಿಕ ವಿಕೋಪಗಳಾಗುತ್ತವೆ, ತಮ್ಮ-ತಮ್ಮಲ್ಲಿಯೇ ಜಗಳವಾಡುತ್ತಾರೆ, ಎಷ್ಟೊಂದು ಹಣವನ್ನು ಖರ್ಚು ಮಾಡಿ ಬಾಂಬುಗಳನ್ನು ತಯಾರಿಸುತ್ತಾರೆ ಅಂದಾಗ ಎಷ್ಟೊಂದು ಹಣ ವ್ಯರ್ಥವಾಗುತ್ತದೆ! ಖರ್ಚಂತೂ ಆಗುತ್ತದೆಯಲ್ಲವೆ. ಇಷ್ಟೊಂದು ಖರ್ಚನ್ನು ಎಲ್ಲಿಂದ ತರುತ್ತಾರೆ? ಮೃತ್ಯುವಿಗೆ ಭಯ ಪಡುತ್ತಾರೆ ಆದರೆ ಬಾಂಬುಗಳು ತಯಾರಿಸುವುದನ್ನು ಬಿಡುವುದಿಲ್ಲ. ಬಾಂಬುಗಳಿಂದಲೇ ಯುದ್ಧಗಳು ನಡೆಯುತ್ತವೆ. ಈಗಂತೂ ಬಾಂಬುಗಳನ್ನು ಹೀಗೆ ಮಾಡುತ್ತಾರೆ, ಒಂದು ಬಾರಿ ಎಸೆದರೆ ಮನುಷ್ಯರೆಲ್ಲರೂ ಸಮಾಪ್ತಿಯಾಗುತ್ತಾರೆ. ಮೊದಲು ವಸ್ತು ತಯಾರು ಮಾಡುವುದರಲ್ಲಿ ಸಮಯ ಹಿಡಿಸುತ್ತದೆ ನಂತರ ನಿಮಿಷದಲ್ಲಿ ಮಾಡಿ ಬಿಡುತ್ತಾರೆ, ಬೇಗ-ಬೇಗನೆ ಮಾಡಿ ಬಿಡುತ್ತಾರೆ. ಕೆಲವು ಬಾಂಬುಗಳನ್ನಷ್ಟೇ ಮಾಡುತ್ತಾರೆಯೇ! ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ಈ ಹಳೆಯ ಪ್ರಪಂಚದ ವಿನಾಶವಾಗಲೇಬೇಕು. ಈಗ ಬೇಹದ್ದಿನ ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳಬೇಕಾಗಿದೆ.

ಗೀತೆಯು ನೀವು ಭಾರತವಾಸಿಗಳ ದೇವಿ-ದೇವತಾ ಧರ್ಮದ ಶಾಸ್ತ್ರವಾಗಿದೆ. ಬಾಕಿ ಎಲ್ಲವೂ ಚಿಕ್ಕ-ಚಿಕ್ಕದಾಗಿದೆ, ಅವುಗಳ ಗಾಯನವಿಲ್ಲ. ಬ್ರಾಹ್ಮಣ ಧರ್ಮವು ಎಲ್ಲಾ ಧರ್ಮಕ್ಕಿಂತ ಶ್ರೇಷ್ಠವಾಗಿದೆ. ಕಥೆಗಳನ್ನು ಹೇಳುವುದೇ ಬ್ರಾಹ್ಮಣರ ಕೆಲಸವಾಗಿದೆ. ನಾವು ಬ್ರಹ್ಮಾಕುಮಾರ-ಕುಮಾರಿಯರು ಬ್ರಹ್ಮಾನ ಮಕ್ಕಳಾಗಿದ್ದೇವೆ, ನಮಗೆ ತಾತನಿಂದ ಆಸ್ತಿಯು ಸಿಗುತ್ತಿದೆ ಎಂದು ಹೇಳಬಹುದು. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಡ್ರಾಮಾದ ಪ್ರತಿಯೊಂದು ರಹಸ್ಯವನ್ನು ತಿಳಿದು ಯಾವುದೇ ಮಾತಿನ ಚಿಂತೆ ಮಾಡಬಾರದು. ವಿದ್ಯೆಯನ್ನು ಓದುತ್ತಲೇ ಇರಬೇಕು. ಮನ್ಮನಾಭವ ಆಗಿ ಕರ್ಮಾತೀತರಾಗುವ ವಿಚಾರ ಮಾಡಬೇಕಾಗಿದೆ. ಸ್ವಯಂನ್ನು ಸತೋಪ್ರಧಾನ ಮಾಡಿಕೊಳ್ಳಬೇಕಾಗಿದೆ.

2. ನಾವು ಆತ್ಮರು ಶಿವ ತಂದೆಯ ಸಂತಾನರಾಗಿದ್ದೇವೆ, ಪರಸ್ಪರ ಸಹೋದರ-ಸಹೋದರರಾಗಿದ್ದೇವೆ, ಶಿವ ತಂದೆಯಿಂದ ಆಸ್ತಿಯನ್ನು ಪಡೆಯುತ್ತಿದ್ದೇವೆ ಎಂಬ ಖುಷಿಯಲ್ಲಿಯೇ ಇರಬೇಕಾಗಿದೆ.

ವರದಾನ:
ಅಂತರ್ಮುಖಿ ಸ್ಥಿತಿಯಲ್ಲಿದ್ದು ತಮ್ಮ ಹಾಗೂ ತಂದೆಯ ಗುಪ್ತ ರೂಪವನ್ನು ಪ್ರತ್ಯಕ್ಷಗೊಳಿಸುವ ಸತ್ಯ ಸ್ನೇಹಿ ಭವ.

ಯಾವ ಮಕ್ಕಳು ಸದಾ ಆಂತರ್ಯದ ಸ್ಥಿತಿಯಲ್ಲಿ ಅಥವಾ ಆಂತರ್ಯದ ಸ್ವರೂಪದಲ್ಲಿ ಸ್ಥಿತರಾಗಿದ್ದು ಅಂತರ್ಮುಖಿ ಆಗಿರುತ್ತಾರೆಯೋ ಅವರೆಂದಿಗೂ ಯಾವುದೇ ಮಾತಿನಲ್ಲಿ ಗುಪ್ತವಾಗಲು ಸಾಧ್ಯವಿಲ್ಲ. ಹಳೆಯ ಪ್ರಪಂಚ, ಸಂಬಂಧ, ಸಂಪತ್ತು, ಪದಾರ್ಥ, ಯಾವುದು ಅಲ್ಪಕಾಲದ ಹಾಗೂ ತೋರ್ಪಡಿಕೆಗೆ ಇದೆಯೋ ಅದರಿಂದ ಮೋಸ ಹೋಗಲು ಸಾಧ್ಯವಿಲ್ಲ. ಆಂತರ್ಯದ ಸ್ವರೂಪದ ಸ್ಥಿತಿಯಲ್ಲಿ ಇರುವುದರಿಂದ ತಮ್ಮ ಶಕ್ತಿ ಸ್ವರೂಪವೇನು ಗುಪ್ತವಾಗಿದೆ, ಅದು ಪ್ರತ್ಯಕ್ಷವಾಗಿ ಬಿಡುತ್ತದೆ. ಹಾಗೂ ಈ ಸ್ವರೂಪದಿಂದಲೇ ತಂದೆಯ ಪ್ರತ್ಯಕ್ಷತೆ ಆಗುವುದು. ಹಾಗಾದರೆ ಇಂತಹ ಶ್ರೇಷ್ಠ ಕರ್ತವ್ಯವನ್ನು ಮಾಡುವವರೇ ಸತ್ಯ ಸ್ನೇಹಿಯಾಗಿದ್ದಾರೆ.

ಸ್ಲೋಗನ್:
ನಿಶ್ಚಯ ಹಾಗೂ ಜನ್ಮ ಸಿದ್ಧ ಅಧಿಕಾರದ ಗೌರವದಲ್ಲಿ ಇರುತ್ತೀರೆಂದರೆ ಬೇಸರವಾಗುವುದಿಲ್ಲ.

ಅವ್ಯಕ್ತ ಸೂಚನೆಗಳು:- ಸದಾ ಹರ್ಷಿತರಾಗಿರಲು ತಮ್ಮ ಸ್ವಭಾವವನ್ನು ಸರಳ ಮಾಡಿಕೊಳ್ಳಿರಿ, ಸಹನಶೀಲರಾಗಿರಿ.

ಸ್ವಚ್ಛತೆಯು ಸರಳತೆಯ ಲಕ್ಷಣವಾಗಿದೆ. ಎಷ್ಟು ಸರಳತೆ ಅಷ್ಟು ಸ್ವಚ್ಛತೆಯಿರುತ್ತದೆ ಅದಕ್ಕೆ ಎಲ್ಲರನ್ನು ತಮ್ಮ ಕಡೆ ಆಕರ್ಷಿತರನ್ನಾಗಿ ಮಾಡುತ್ತಾರೆ. ತಮ್ಮ ಸ್ವಭಾವವನ್ನು ಸರಳ ಮಾಡಿಕೊಂಡಾಗ, ಸತ್ಯತೆ ಮತ್ತು ಸ್ವಚ್ಛತೆಯು ಇರುತ್ತದೆ. ಸರಳ ಸ್ವಭಾವದವರು ಬಹುರೂಪಿಯು ಆಗಬಹುದು. ಇಂತಹ ಸರಳ ಸ್ವಭಾವದವರು ಸದಾ ಹರ್ಷಿತರಾಗಿರುತ್ತಾರೆ ಮತ್ತು ಸರ್ವರನ್ನು ಆಕರ್ಷಿತರನ್ನಾಗಿ ಮಾಡುತ್ತಾರೆ.