22.07.24         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ- ದೇಹೀ-ಅಭಿಮಾನಿಯಾಗಿ ಆಗ ಶೀತಲವಾಗಿಬಿಡುತ್ತೀರಿ, ವಿಕಾರಗಳ ದುರ್ವಾಸನೆಯು ಹೊರಟುಹೋಗುತ್ತದೆ, ಅಂತರ್ಮುಖಿಯಾಗಿಬಿಡುತ್ತೀರಿ, ಹೂಗಳಾಗಿಬಿಡುತ್ತೀರಿ”

ಪ್ರಶ್ನೆ:
ಬಾಪ್ದಾದಾರವರು ಎಲ್ಲಾ ಮಕ್ಕಳಿಗೆ ಯಾವ ಎರಡು ವರದಾನಗಳನ್ನು ಕೊಡುತ್ತಾರೆ? ಅವುಗಳನ್ನು ಸ್ವರೂಪದಲ್ಲಿ ತರುವ ವಿಧಿಯೇನಾಗಿದೆ?

ಉತ್ತರ:
ತಂದೆಯು ಎಲ್ಲಾ ಮಕ್ಕಳಿಗೆ ಶಾಂತಿ ಮತ್ತು ಸುಖದ ವರದಾನಗಳನ್ನು ಕೊಡುತ್ತಾರೆ. ತಂದೆಯು ತಿಳಿಸುತ್ತಾರೆ- ಮಕ್ಕಳೇ, ನೀವು ಶಾಂತಿಯಲ್ಲಿರುವ ಅಭ್ಯಾಸ ಮಾಡಿ, ಯಾರಾದರೂ ಉಲ್ಟಾಸುಲ್ಟಾ ಮಾತನಾಡುತ್ತಾರೆಂದರೆ ನೀವು ಪ್ರತ್ಯುತ್ತರ ಕೊಡಬೇಡಿ. ನೀವು ಶಾಂತಿಯಲ್ಲಿರಬೇಕಾಗಿದೆ, ವ್ಯರ್ಥವಾದ ಅಲ್ಲಸಲ್ಲದ ಮಾತುಗಳನ್ನಾಡಬಾರದು, ಯಾರಿಗೂ ದುಃಖವನ್ನು ಕೊಡಬಾರದು. ಬಾಯಲ್ಲಿ ಶಾಂತಿಯ ತಾಯಿತವನ್ನು ಹಾಕಿಕೊಳ್ಳಿ ಆಗ ಇವೆರಡೂ ವರದಾನಗಳು ಸ್ವರೂಪದಲ್ಲಿ ಬಂದುಬಿಡುತ್ತವೆ.

ಓಂ ಶಾಂತಿ.
ಮಧುರಾತಿ ಮಧುರ ಮಕ್ಕಳು ಕೆಲವೊಮ್ಮೆ ಸಮ್ಮುಖದಲ್ಲಿರುತ್ತೀರಿ, ಕೆಲವೊಮ್ಮೆ ದೂರ ಹೋಗಿಬಿಡುತ್ತೀರಿ ಆದರೂ ಸಹ ಯಾರು ನೆನಪು ಮಾಡುತ್ತಾರೆಯೋ ಅವರೇ ಸನ್ಮುಖದಲ್ಲಿರುತ್ತಾರೆ ಏಕೆಂದರೆ ನೆನಪಿನ ಯಾತ್ರೆಯಲ್ಲಿಯೇ ಎಲ್ಲವೂ ಸಮಾವೇಶವಾಗಿದೆ. ದೃಷ್ಟಿಯಿಂದ ಸಂತೃಪ್ತಿಯೆಂದು ಗಾಯನ ಮಾಡಲಾಗುತ್ತದೆಯಲ್ಲವೆ! ಆತ್ಮದ ದೃಷ್ಟಿಯು ಪರಮಪಿತನ ಕಡೆ ಹೋಗುತ್ತದೆಯೆಂದರೆ ಅದಕ್ಕೆ ಮತ್ತೇನೂ ಇಷ್ಟವಾಗುವುದಿಲ್ಲ. ಅವರನ್ನು ನೆನಪು ಮಾಡುವುದರಿಂದ ವಿಕರ್ಮಗಳು ವಿನಾಶವಾಗುತ್ತವೆ ಅಂದಾಗ ತಮ್ಮ ಮೇಲೆ ಎಷ್ಟೊಂದು ಎಚ್ಚರಿಕೆಯನ್ನಿಡಬೇಕು. ನೆನಪು ಮಾಡದೇ ಇದ್ದರೆ ಮಾಯೆಗೆ ಅರ್ಥವಾಗಿಬಿಡುತ್ತದೆ- ಇವರ ಯೋಗವು ತುಂಡಾಗಿದೆ ಎಂದು ಹೇಳಿ ತನ್ನಕಡೆ ಸೆಳೆಯುತ್ತದೆ. ಒಂದಲ್ಲಒಂದು ಉಲ್ಟಾಕರ್ಮವನ್ನು ಮಾಡಿಸಿಬಿಡುತ್ತದೆ. ಇಂತಹವರು ತಂದೆಯ ನಿಂದನೆ ಮಾಡಿಸುತ್ತಾರೆ. ಭಕ್ತಿಮಾರ್ಗದಲ್ಲಿ ಹಾಡುತ್ತಾರೆ- ಬಾಬಾ, ನನ್ನವರಂತು ತಾವೊಬ್ಬರೆ ವಿನಃ ಮತ್ತ್ಯಾರೂ ಇಲ್ಲ ಆದ್ದರಿಂದಲೇ ತಂದೆಯು ತಿಳಿಸುತ್ತಾರೆ- ಮಕ್ಕಳೇ, ಗುರಿಯು ಬಹಳ ಉನ್ನತವಾಗಿದೆ, ಕೆಲಸ ಮಾಡುತ್ತಲೂ ತಂದೆಯನ್ನು ನೆನಪು ಮಾಡುವುದು ಅತ್ಯುನ್ನತ ಗುರಿಯಾಗಿದೆ. ಇದರಲ್ಲಿ ಬಹಳ ಒಳ್ಳೆಯ ಅಭ್ಯಾಸವು ಬೇಕು ಇಲ್ಲವೆಂದರೆ ಉಲ್ಟಾಕೆಲಸವನ್ನು ಮಾಡುವವರು ತಂದೆಗೆ ನಿಂದಕರಾಗಿಬಿಡುತ್ತಾರೆ. ತಿಳಿದುಕೊಳ್ಳಿ, ಯಾರಲ್ಲಾದರೂ ಕ್ರೋಧವು ಬಂದಿತು, ಪರಸ್ಪರ ಹೊಡೆದಾಡುತ್ತಾರೆ, ಜಗಳವಾಡುತ್ತಾರೆಂದರೂ ಸಹ ನಿಂದನೆ ಮಾಡಿಸಿದಂತಾಯಿತಲ್ಲವೆ. ಇದರಲ್ಲಿ ಬಹಳ ಎಚ್ಚರಿಕೆಯನ್ನಿಡಬೇಕಾಗಿದೆ. ತಮ್ಮ ಗೃಹಸ್ಥ ವ್ಯವಹಾರದಲ್ಲಿರುತ್ತಾ ಬುದ್ಧಿಯು ತಂದೆಯೊಂದಿಗಿರಬೇಕು. ಹೀಗಲ್ಲ ಯಾರೋ ಸಂಪೂರ್ಣರಾಗಿದ್ದಾರೆಂದು. ನಾವು ದೇಹಿ-ಅಭಿಮಾನಿಯಾಗಬೇಕೆಂದು ಪ್ರಯತ್ನಪಡಬೇಕು. ದೇಹಾಭಿಮಾನದಲ್ಲಿ ಬರುವುದರಿಂದ ಒಂದಲ್ಲ ಒಂದು ಉಲ್ಟಾಕೆಲಸಗಳನ್ನು ಮಾಡುತ್ತಾರೆ ಅಂದರೆ ತಂದೆಯ ನಿಂದನೆ ಮಾಡಿಸುತ್ತಾರೆ. ತಂದೆಯು ಹೇಳುತ್ತಾರೆ- ಇಂತಹ ಸದ್ಗುರುವಿನ ನಿಂದನೆ ಮಾಡಿಸಿದರು. ಲಕ್ಷ್ಮಿ-ನಾರಾಯಣರಾಗುವ ಪದವಿಯನ್ನು ಪಡೆಯಲು ಸಾಧ್ಯವಿಲ್ಲ ಆದ್ದರಿಂದ ಪೂರ್ಣ ಪುರುಷಾರ್ಥ ಮಾಡುತ್ತಾ ಇರಿ. ಇದರಿಂದ ನೀವು ಬಹಳಷ್ಟು ಶೀತಲರಾಗಿಬಿಡುತ್ತೀರಿ. ಪಂಚವಿಕಾರಗಳ ಮಾತುಗಳೆಲ್ಲವೂ ಹೊರಟುಹೋಗುತ್ತವೆ, ತಂದೆಯಿಂದ ಬಹಳ ಶಕ್ತಿಯು ಸಿಕ್ಕಿಬಿಡುತ್ತದೆ. ಕೆಲಸ-ಕಾರ್ಯಗಳನ್ನೂ ಮಾಡಬೇಕು. ಕರ್ಮ ಮಾಡಬೇಡಿ ಎಂದು ತಂದೆಯು ಹೇಳುವುದಿಲ್ಲ. ಸತ್ಯಯುಗದಲ್ಲಂತೂ ನಿಮ್ಮ ಕರ್ಮವು ಅಕರ್ಮವಾಗಿಬಿಡುತ್ತದೆ. ಕಲಿಯುಗದಲ್ಲಿ ಮಾಡುವ ಕರ್ಮವು ವಿಕರ್ಮವಾಗಿಬಿಡುತ್ತದೆ. ಈಗ ಸಂಗಮಯುಗದಲ್ಲಿಯೇ ನೀವು ಕಲಿಯಬೇಕಾಗುತ್ತದೆ. ಸತ್ಯಯುಗದಲ್ಲಿ ಕಲಿಯುವ ಮಾತಿಲ್ಲ, ಇಲ್ಲಿನ ಶಿಕ್ಷಣವೇ ಅಲ್ಲಿಗೆ ಜೊತೆ ಬರುತ್ತದೆ. ತಂದೆಯು ಮಕ್ಕಳಿಗೆ ತಿಳಿಸುತ್ತಾರೆ- ಬಾಹರ್ಮುಖತೆಯು ಒಳ್ಳೆಯದಲ್ಲ ಆದ್ದರಿಂದ ಅಂತರ್ಮುಖಿಭವ. ಅಂತಹ ಸಮಯವೂ ಬರುತ್ತದೆ ಯಾವಾಗ ನೀವು ಮಕ್ಕಳು ಅಂತರ್ಮುಖಿಯಾಗಿಬಿಡುತ್ತೀರಿ, ತಂದೆಯ ವಿನಃ ಮತ್ತೇನೂ ನೆನಪಿಗೆ ಬರುವುದಿಲ್ಲ. ನೀವು ಇದೇ ರೀತಿಯಲ್ಲಿಯೇ ಬಂದಿದ್ದೀರಿ. ಯಾರ ನೆನಪೂ ಇರಲಿಲ್ಲ. ಗರ್ಭದಿಂದ ಯಾವಾಗ ಹೊರಬಂದಿರೋ ಆಗ ಇವರು ನಮ್ಮ ತಂದೆ-ತಾಯಿ, ಇವರು ಇಂತಹವರೆಂದು ತಿಳಿಯಿತು ಅಂದಮೇಲೆ ಮತ್ತೆ ಹೋಗಬೇಕಾಗಿದೆ ಇದೇ ರೀತಿಯಾಗಿಯೇ ಹೋಗಬೇಕಾಗಿದೆ. ನಾವು ಒಬ್ಬ ತಂದೆಯ ಮಕ್ಕಳಾಗಿದ್ದೇವೆ ಅಂದಮೇಲೆ ಅವರ ವಿನಃ ಬುದ್ಧಿಯಲ್ಲಿ ಮತ್ತ್ಯಾರ ನೆನಪೂ ಇರಬಾರದು. ಭಲೆ ಸಮಯವಿದೆ ಆದರೆ ಪುರುಷಾರ್ಥವನ್ನಂತೂ ಪೂರ್ಣ ರೀತಿಯಿಂದ ಮಾಡಬೇಕಾಗಿದೆ. ಶರೀರದ ಮೇಲೆ ಯಾವುದೇ ಭರವಸೆಯಿಲ್ಲ. ಮನೆಯಲ್ಲಿಯೂ ಬಹಳ ಶಾಂತಿಯಿರಬೇಕು, ಕಲಹವಿರಬಾರದು. ಇಂತಹ ವಾಯುಮಂಡಲವನ್ನು ಸೃಷ್ಟಿಸಲು ಪ್ರಯತ್ನಪಡುತ್ತಿರಬೇಕು. ಇಲ್ಲವೆಂದರೆ ಇವರಲ್ಲಿ ಎಷ್ಟು ಅಶಾಂತಿಯಿದೆ ಎಂದು ಎಲ್ಲರೂ ಹೇಳುತ್ತಾರೆ. ನೀವು ಮಕ್ಕಳು ಸಂಪೂರ್ಣ ಶಾಂತಿಯಿಂದಿರಬೇಕು. ನೀವು ಶಾಂತಿಯ ಆಸ್ತಿಯನ್ನು ಪಡೆಯುತ್ತಿದ್ದೀರಲ್ಲವೆ. ನೀವು ಈಗ ಮುಳ್ಳುಗಳ ಮಧ್ಯದಲ್ಲಿರುತ್ತೀರಿ, ಹೂದೋಟದಲ್ಲಲ್ಲ. ಮುಳ್ಳುಗಳ ಮಧ್ಯದಲ್ಲಿದ್ದು ಹೂಗಳಾಗಬೇಕಾಗಿದೆ. ಮುಳ್ಳುಗಳಿಗೆ ಮುಳ್ಳುಗಳಾಗಿಯೇ ಇರಬಾರದು. ನೀವು ಎಷ್ಟು ತಂದೆಯನ್ನು ನೆನಪು ಮಾಡುತ್ತೀರಿ ಅಷ್ಟು ಶಾಂತವಾಗಿರುತ್ತೀರಿ. ಯಾರಾದರೂ ಉಲ್ಟಾ-ಸುಲ್ಟಾ ಮಾತನಾಡಿದರೆ ನೀವು ಶಾಂತವಾಗಿರಿ ಆತ್ಮವೇ ಶಾಂತ ಸ್ವರೂಪವಾಗಿದೆ. ಆತ್ಮವೇ ಶಾಂತವಾಗಿದೆ. ನಿಮಗೂ ಗೊತ್ತಿದೆ, ಈಗ ನಾವು ಆ ಮನೆಗೆ ಹೋಗಬೇಕಾಗಿದೆ. ತಂದೆಯೂ ಸಹ ಶಾಂತಿಯ ಸಾಗರನಾಗಿದ್ದಾರೆ. ತಿಳಿಸುತ್ತಾರೆ- ನೀವೂ ಸಹ ಶಾಂತಿಯ ಸಾಗರರಾಗಬೇಕು, ವ್ಯರ್ಥವಾದ ಪರಚಿಂತನೆಯು ಬಹಳ ನಷ್ಟಗೊಳಿಸುತ್ತದೆ ಆದ್ದರಿಂದ ತಂದೆಯು ಸಲಹೆ ನೀಡುತ್ತಾರೆ, ಇಂತಹ ಮಾತುಗಳನ್ನಾಡಬಾರದು. ಇದರಿಂದ ನೀವು ತಂದೆಯ ನಿಂದನೆ ಮಾಡಿಸುತ್ತೀರಿ. ಶಾಂತಿಯಲ್ಲಿ ಯಾವುದೇ ನಿಂದನೆ ಅಥವಾ ವಿಕರ್ಮವಾಗುವುದಿಲ್ಲ. ತಂದೆಯನ್ನು ನೆನಪು ಮಾಡುತ್ತಾ ಇರುವುದರಿಂದ ಇನ್ನೂ ವಿಕರ್ಮ ವಿನಾಶವಾಗುತ್ತದೆ. ತಾವೂ ಅಶಾಂತರಾಗಬೇಡಿ, ಅನ್ಯರನ್ನೂ ಮಾಡಬೇಡಿ. ಯಾರಿಗಾದರೂ ದುಃಖ ಕೊಡುವುದರಿಂದ ಆತ್ಮವು ಬೇಸರವಾಗುತ್ತದೆ. ಅನೇಕರು ತಂದೆಗೆ ದೂರು ಕೊಡುತ್ತಾರೆ, ಬಾಬಾ ಇವರು ಮನೆಗೆ ಬರುತ್ತಾರೆಂದರೆ ಬೆದರಿಕೆ ಹಾಕುತ್ತಾರೆ. ಅದಕ್ಕೆ ತಂದೆಯು ಬರೆಯುತ್ತಾರೆ- ಮಕ್ಕಳೇ, ನೀವು ತಮ್ಮ ಸ್ವಧರ್ಮ ಶಾಂತಿಯಲ್ಲಿರಿ. ಹಾತಿಂತಾಯಿ ಕಥೆಯೂ ಇದೆಯಲ್ಲವೆ. ಅವರಿಗೆ ಹೇಳಿದರು- ನೀವು ಬಾಯಲ್ಲಿ ತಾಯಿತವನ್ನು ಹಾಕಿಕೊಂಡರೆ ಶಬ್ಧವು ಬರುವುದೇ ಇಲ್ಲ. ಮಾತನಾಡುವುದಿಲ್ಲ.

ನೀವು ಮಕ್ಕಳು ಶಾಂತಿಯಲ್ಲಿರಬೇಕಾಗಿದೆ. ಮನುಷ್ಯರು ಶಾಂತಿಗಾಗಿ ಬಹಳಷ್ಟು ಶ್ರಮಪಡುತ್ತಾರೆ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ- ನಮ್ಮ ಮಧುರ ತಂದೆಯು ಶಾಂತಿಯ ಸಾಗರನಾಗಿದ್ದಾರೆ. ಶಾಂತಿ ಮಾಡಿಸುತ್ತಾ-ಮಾಡಿಸುತ್ತಾ ವಿಶ್ವದಲ್ಲಿ ಶಾಂತಿಸ್ಥಾಪನೆ ಮಾಡುತ್ತಾರೆ. ತಮ್ಮ ಭವಿಷ್ಯದ ಪದವಿಯನ್ನು ನೆನಪು ಮಾಡಿ. ಅಲ್ಲಿರುವುದೇ ಒಂದುಧರ್ಮ ಅನ್ಯ ಯಾವುದೇ ಧರ್ಮವಿರುವುದಿಲ್ಲ ಅದಕ್ಕೆ ವಿಶ್ವದಲ್ಲಿ ಶಾಂತಿ ಎಂದು ಹೇಳಲಾಗುತ್ತದೆ. ನಂತರ ಯಾವಾಗ ಅನ್ಯಧರ್ಮದವರು ಬರುತ್ತಾರೆಯೋ ಆಗ ಏರುಪೇರುಗಳಾಗುತ್ತವೆ. ಈಗ ಎಷ್ಟೊಂದು ಶಾಂತಿಯಿರುತ್ತದೆ. ನಮ್ಮ ಮನೆಯು ಅದೇ ಆಗಿದೆ, ನಮ್ಮ ಸ್ವಧರ್ಮವು ಶಾಂತಿಯಾಗಿದೆ ಎಂದು ತಿಳಿದುಕೊಳ್ಳುತ್ತೀರಿ. ಶರೀರದ ಸ್ವಧರ್ಮವು ಶಾಂತಿಯೆಂದು ಹೇಳುವುದಿಲ್ಲ. ಶರೀರವು ವಿನಾಶ ವಸ್ತುವಾಗಿದೆ, ಆತ್ಮವು ಅವಿನಾಶಿ ವಸ್ತುವಾಗಿದೆ. ಎಷ್ಟು ಸಮಯ ಆತ್ಮಗಳು ಅಲ್ಲಿರುತ್ತಾರೆಯೋ ಅಲ್ಲಿ ಎಷ್ಟೊಂದು ಶಾಂತವಾಗಿರುತ್ತದೆ. ಇಲ್ಲಂತೂ ಇಡೀ ಪ್ರಪಂಚದಲ್ಲಿ ಅಶಾಂತಿಯಿದೆ ಆದ್ದರಿಂದ ಶಾಂತಿಯನ್ನು ಬಯಸುತ್ತಿರುತ್ತಾರೆ. ಆದರೆ ಯಾರಾದರೂ ನಾನು ಸದಾ ಶಾಂತಿಯಲ್ಲಿರಬೇಕೆಂದು ಬಯಸಿದರೆ ಆ ರೀತಿಯಿರಲು ಸಾಧ್ಯವಿಲ್ಲ. ಭಲೆ 63 ಜನ್ಮಗಳು ಅಲ್ಲಿರುತ್ತೀರಿ ಆದರೂ ಸಹ ಅವಶ್ಯವಾಗಿ ಬರಬೇಕಾಗಿದೆ. ತಮ್ಮ ಸುಖ-ದುಃಖದ ಪಾತ್ರವನ್ನಭಿನಯಿಸಿ ನಂತರ ಹೊರಟುಹೋಗುತ್ತಾರೆ. ನಾಟಕವನ್ನು ಚೆನ್ನಾಗಿ ಗಮನದಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ.

ನೀವು ಮಕ್ಕಳಿಗೂ ಸಹ ಗಮನದಲ್ಲಿರಲಿ- ತಂದೆಯು ನಮಗೆ ಸುಖ ಮತ್ತು ಶಾಂತಿಯ ವರದಾನಗಳನ್ನು ಕೊಡುತ್ತಾರೆ. ಬ್ರಹ್ಮಾರವರ ಆತ್ಮವು ಎಲ್ಲವನ್ನೂ ಕೇಳುತ್ತದೆ. ಎಲ್ಲರಿಗಿಂತ ಸಮೀಪವಂತೂ ಇವರ ಕಿವಿಗಳು ಕೇಳುತ್ತದೆ. ಇವರ ಮುಖವು ಕಿವಿಗಳ ಸಮೀಪವಿದೆ. ನೀವಾದರೂ ಸ್ವಲ್ಪ ದೂರವಿರುತ್ತೀರಿ, ಈ ಬ್ರಹ್ಮಾರವರು ನಾನು ತಿಳಿಸಿದ್ದನ್ನು ತಕ್ಷಣ ಕೇಳಿಸಿಕೊಳ್ಳುತ್ತಾರೆ ಎಲ್ಲಾ ಮಾತುಗಳನ್ನು ಅರಿತುಕೊಳ್ಳುತ್ತಾರೆ. ಮಧುರಾತಿ ಮಧುರ ಮಕ್ಕಳೇ ಎಂದು ತಿಳಿಸುತ್ತಾರೆ. ಎಲ್ಲರಿಗೂ ಮಧುರಾತಿ ಮಧುರರೆಂದು ಹೇಳುತ್ತಾರೆ ಏಕೆಂದರೆ ಎಲ್ಲರೂ ಮಕ್ಕಳಲ್ಲವೆ! ಯಾರೆಲ್ಲಾ ಜೀವಾತ್ಮರಿದ್ದಾರೆಯೋ ಅವರೆಲ್ಲರೂ ತಂದೆಯ ಅವಿನಾಶಿ ಮಕ್ಕಳಾಗಿದ್ದಾರೆ. ಶರೀರವಂತು ವಿನಾಶಿಯಾಗಿದೆ, ತಂದೆಯು ಅವಿನಾಶಿಯಾಗಿದ್ದಾರೆ. ಮಕ್ಕಳಾದ ಆತ್ಮಗಳೂ ಅವಿನಾಶಿಯಾಗಿದ್ದಾರೆ, ತಂದೆಯು ಮಕ್ಕಳೊಂದಿಗೆ ವಾರ್ತಾಲಾಪ ಮಾಡುತ್ತಾರೆ, ಇದಕ್ಕೆ ಆತ್ಮಿಕಜ್ಞಾನವೆಂದು ಹೇಳಲಾಗುತ್ತದೆ. ಪರಮ ಆತ್ಮನು ಕುಳಿತು ಆತ್ಮಗಳಿಗೆ ತಿಳಿಸುತ್ತಾರೆ. ತಂದೆಯ ಪ್ರೀತಿಯಂತೂ ಇದ್ದೇ ಇರುತ್ತದೆ. ಯಾರೆಲ್ಲಾ ಆತ್ಮಗಳಿದ್ದಾರೆ ಭಲೆ ತಮೋಪ್ರಧಾನರಾಗಿದ್ದಾರೆ ಆದರೆ ತಂದೆಗೆ ಗೊತ್ತಿದೆ, ಇವರೆಲ್ಲರೂ ಮನೆಯಲ್ಲಿದ್ದಾಗ ಸತೋಪ್ರಧಾನರಾಗಿದ್ದರು. ಕಲ್ಪ-ಕಲ್ಪವೂ ನಾನು ಬಂದು ಎಲ್ಲರಿಗೆ ಶಾಂತಿಯ ಮಾರ್ಗವನ್ನು ತಿಳಿಸುತ್ತೇವೆ, ವರಕೊಡುವ ಮಾತಿಲ್ಲ. ಧನವಾನ್ಭವ, ಆಯುಷ್ಯವಾನ್ಭವ ಎಂದು ಹೇಳುವುದಿಲ್ಲ. ಸತ್ಯಯುಗದಲ್ಲಿ ನೀವು ಈ ರೀತಿಯಿದ್ದಿರಿ ಆದರೆ ಈಗ ಆಶೀರ್ವಾದ ಕೊಡುವುದಿಲ್ಲ. ಕೃಪೆ ಅಥವಾ ಆಶೀರ್ವಾದವನ್ನು ಬೇಡಬಾರದು, ಶಿವತಂದೆ ತಂದೆಯೂ ಆಗಿದ್ದಾರೆ, ಶಿಕ್ಷಕನೂ ಆಗಿದ್ದಾರೆ, ಜ್ಞಾನಸಾಗರನೂ ಆಗಿದ್ದಾರೆ. ತಂದೆಯೇ ಕುಳಿತು ತನ್ನ ಮತ್ತು ರಚನೆಯ ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ತಿಳಿಸುತ್ತಾರೆ, ಇದರಿಂದ ನೀವು ಚಕ್ರವರ್ತಿ ಮಹಾರಾಜರಾಗಿಬಿಡುತ್ತೀರಿ. ಇದು ಸರ್ವತೋಮುಖ ಚಕ್ರವಾಗಿದೆಯಲ್ಲವೆ. ತಂದೆಯು ತಿಳಿಸಿಕೊಡುತ್ತಾರೆ- ಈ ಸಮಯ ಇಡೀ ಪ್ರಪಂಚವು ರಾವಣರಾಜ್ಯದಲ್ಲಿದೆ. ರಾವಣರಾಜ್ಯವು ಕೇವಲ ಲಂಕೆಯಲ್ಲಿಲ್ಲ, ಇದು ಬೇಹದ್ದಿನ ಮಾತಾಗಿದೆ, ನಾಲ್ಕೂಕಡೆ ನೀರಿದೆ. ಇಡೀ ಲಂಕೆಯು ರಾವಣನದ್ದಾಗಿತ್ತು ಈಗ ಮತ್ತೆ ರಾಮನದ್ದಾಗುತ್ತದೆ. ಲಂಕೆಯಂತೂ ಚಿನ್ನದ್ದಾಗಿತ್ತು, ಅಲ್ಲಿ ಬಹಳ ಚಿನ್ನವಿರುತ್ತದೆ. ಒಂದು ಉದಾಹರಣೆಯನ್ನೂ ತಿಳಿಸುತ್ತಾರೆ- ಧ್ಯಾನದಲ್ಲಿ ಹೋದಾಗ ಅಲ್ಲಿ ಒಂದು ಚಿನ್ನದ ಇಟ್ಟಿಗೆಯನ್ನು ನೋಡಿದರು, ಇಲ್ಲಿ ಮಣ್ಣಿನ ಇಟ್ಟಿಗೆಗಳು ಹೇಗೋ ಹಾಗೆಯೇ ಅಲ್ಲಿ ಚಿನ್ನದ ಇಟ್ಟಿಗೆಗಳಿರುತ್ತವೆ. ಚಿನ್ನದ ಇಟ್ಟಿಗೆಗಳನ್ನು ತೆಗೆದುಕೊಂಡು ಹೋಗೋಣವೆಂದು ವಿಚಾರವು ಬಂದಿತು. ನಾಟಕಗಳನ್ನು ಹೇಗೇಗೆ ರಚಿಸಿದ್ದಾರೆ, ಭಾರತವು ಹೆಸರುವಾಸಿಯಾಗಿದೆ. ಅನ್ಯಖಂಡಗಳಲ್ಲಿ ಅಷ್ಟೊಂದು ವಜ್ರರತ್ನಗಳಿರುವುದಿಲ್ಲ. ತಂದೆಯು ತಿಳಿಸುತ್ತಾರೆ- ನಾನು ಮಾರ್ಗದರ್ಶಕನಾಗಿ ಎಲ್ಲರನ್ನೂ ಹಿಂತಿರುಗಿ ಮನೆಗೆ ಕರೆದುಕೊಂಡು ಹೋಗುತ್ತೇನೆ. ಮಕ್ಕಳೇ, ನಡೆಯಿರಿ ಈಗ ಮನೆಗೆ ಹೋಗಬೇಕಾಗಿದೆ. ಆತ್ಮಗಳು ಪತಿತರಾಗಿದ್ದೀರಿ, ಪಾವನರಾಗದ ವಿನಃ ಮನೆಗೆ ಹೋಗಲು ಸಾಧ್ಯವಿಲ್ಲ. ಪತಿತರನ್ನು ಪಾವನರನ್ನಾಗಿ ಮಾಡುವವರು ಒಬ್ಬ ತಂದೆಯೇ ಆಗಿದ್ದಾರೆ ಆದ್ದರಿಂದ ಎಲ್ಲರೂ ಇಲ್ಲಿಯೇ ಇದ್ದಾರೆ, ಯಾರೂ ಹಿಂತಿರುಗಿ ಹೋಗಲು ಸಾಧ್ಯವಿಲ್ಲ. ನಿಯಮವು ಹೇಳುವುದಿಲ್ಲ, ತಂದೆಯು ತಿಳಿಸುತ್ತಾರೆ- ಮಕ್ಕಳೇ, ಮಾಯೆಯು ನಿಮ್ಮನ್ನು ಇನ್ನೂ ಜೋರಾಗಿ ದೇಹಾಭಿಮಾನದಲ್ಲಿ ಬರುತ್ತದೆ. ನೆನಪು ಮಾಡಲು ಬಿಡುವುದಿಲ್ಲ. ನೀವು ಎಚ್ಚರಿಕೆಯಿಂದ ಇರಬೇಕಾಗಿದೆ. ಇದರಲ್ಲಿಯೇ ಯುದ್ಧವಿದೆ. ಕಣ್ಣುಗಳು ಬಹಳ ಮೋಸ ಮಾಡುತ್ತವೆ ಆದ್ದರಿಂದ ಈ ಕಣ್ಣುಗಳನ್ನು ಅಧಿಕಾರದಲ್ಲಿ ಇಟ್ಟುಕೊಳ್ಳಬೇಕಾಗಿದೆ. ಸಹೋದರ-ಸಹೋದರಿಯ ಸಂಬಂಧದಲ್ಲಿಯೂ ದೃಷ್ಟಿಯು ಸರಿಯಿಲ್ಲದ್ದನ್ನು ನೋಡಿ ಈಗ ಸಹೋದರ-ಸಹೋದರರೆಂದು ತಿಳಿಯಿರಿ ಎಂದು ತಿಳಿಸಲಾಗುತ್ತದೆ. ಇದನ್ನಂತೂ ಎಲ್ಲರೂ ತಿಳಿಸುತ್ತಾರೆ- ನಾವೆಲ್ಲರೂ ಸಹೋದರ-ಸಹೋದರರಾಗಿದ್ದೇವೆ ಆದರೆ ಆ ರೀತಿ ತಿಳಿದುಕೊಳ್ಳುವುದಿಲ್ಲ. ಹೇಗೆ ಕಪ್ಪೆಯು ಟ್ರಾ ಟ್ರಾ..... ಎನ್ನುತ್ತಿರುತ್ತದೆ ಏನನ್ನೂ ತಿಳಿದುಕೊಳ್ಳುವುದಿಲ್ಲ. ಈಗ ನೀವು ಪ್ರತಿಯೊಂದು ಮಾತಿನ ಯಥಾರ್ಥ ಅರ್ಥವನ್ನು ಅರಿತುಕೊಂಡಿದ್ದೀರಿ.

ತಂದೆಯು ಮಧುರಾತಿ ಮಧುರ ಮಕ್ಕಳಿಗೆ ಕುಳಿತು ತಿಳಿಸಿಕೊಡುತ್ತಾರೆ- ನೀವು ಭಕ್ತಿಮಾರ್ಗದಲ್ಲಿಯೂ ಪ್ರಿಯತಮೆಯರಾಗಿದ್ದಿರಿ, ಪ್ರಿಯತಮನನ್ನು ನೆನಪು ಮಾಡುತ್ತಿದ್ದಿರಿ, ದುಃಖದಲ್ಲಿ ತಕ್ಷಣ ಹಾಯ್ ರಾಮ್, ಹೇ ಭಗವಾನ್ ದಯೆತೋರಿಸು! ಎಂದು ಅವರನ್ನೇ ನೆನಪು ಮಾಡುತ್ತಾರೆ. ಸ್ವರ್ಗದಲ್ಲಿ ಈ ರೀತಿ ಎಂದೂ ಹೇಳುವುದಿಲ್ಲ. ಅಲ್ಲಿ ರಾವಣರಾಜ್ಯವೇ ಇರುವುದಿಲ್ಲ. ನಿಮ್ಮನ್ನು ರಾಮರಾಜ್ಯದಲ್ಲಿ ಕರೆದುಕೊಂಡು ಹೋಗುತ್ತಾರೆಂದರೆ ಅವರ ಮತದಂತೆ ನಡೆಯಬೇಕಲ್ಲವೆ. ಈಗ ನಿಮಗೆ ಈಶ್ವರೀಯ ಮತವು ಸಿಗುತ್ತದೆ, ನಂತರ ದೈವೀಮತವು ಸಿಗುವುದು. ಈ ಕಲ್ಯಾಣಕಾರಿ ಸಂಗಮಯುಗವು ಯಾರಿಗೂ ಗೊತ್ತಿಲ್ಲ ಏಕೆಂದರೆ ಮನುಷ್ಯರು ಕಲಿಯುಗವು ಇನ್ನೂ ಚಿಕ್ಕಮಗುವಾಗಿದೆ, ಲಕ್ಷಾಂತರ ವರ್ಷಗಳಿದೆ ಎಂದು ಎಲ್ಲರಿಗೆ ತಿಳಿಸಿದ್ದಾರೆ. ಇದು ಭಕ್ತಿಯ ಘೋರ ಅಂಧಕಾರವಾಗಿದೆ, ಜ್ಞಾನವು ಬೆಳಕಾಗಿದೆ ಎಂದು ತಂದೆಯು ತಿಳಿಸುತ್ತಾರೆ. ನಾಟಕದನುಸಾರ ಭಕ್ತಿಯೂ ನೊಂದಾವಣೆಯಾಗಿದೆ. ಇದು ಪುನಃ ಆಗುವುದು, ಈಗ ನೀವು ತಿಳಿದುಕೊಳ್ಳುತ್ತೀರಿ. ಭಗವಂತನು ಸಿಕ್ಕಿದರೆಂದರೆ ಅಲೆದಾಡುವ ಅವಶ್ಯಕತೆಯಿಲ್ಲ. ನಾವು ತಂದೆಯ ಬಳಿ ಅಥವಾ ಬಾಪ್ದಾದಾರವರ ಬಳಿ ಹೋಗುತ್ತೇವೆಂದು ಹೇಳುತ್ತೀರಿ. ಈ ಮಾತುಗಳನ್ನು ಮನುಷ್ಯರು ಅರಿತುಕೊಳ್ಳುವುದಿಲ್ಲ. ನಿಮ್ಮಲ್ಲಿಯೂ ಯಾರಿಗೆ ಪೂರ್ಣ ನಿಶ್ಚಯವಿಲ್ಲವೋ ಅವರನ್ನು ಮಾಯೆಯು ಒಮ್ಮೆಲೆ ನುಂಗಿಬಿಡುತ್ತದೆ. ಗಜವನ್ನು ಗ್ರಾಹವು ನುಂಗಿಬಿಡುತ್ತದೆ. ಆಶ್ಚರ್ಯವಾಗಿ ಕೇಳುತ್ತಾರೆ, ಆ ರೀತಿ ನಡೆಯುತ್ತಾರೆ ನಂತರ.... ಹಳಬರಂತೂ ಹೊರಟುಹೋದರು. ಅವರದೂ ಗಾಯನವಿದೆ. ಒಳ್ಳೆಯ ಮಹಾರಥಿಗಳನ್ನು ಮಾಯೆಯು ಸೋಲಿಸಿಬಿಡುತ್ತದೆ. ಬಾಬಾ, ತಾವು ತಮ್ಮ ಮಾಯೆಯನ್ನು ಕಳುಹಿಸಬೇಡಿ ಎಂದು ತಂದೆಗೆ ಬರೆಯುತ್ತಾರೆ. ತಂದೆಯು ತಿಳಿಸುತ್ತಾರೆ- ಅರೆ! ಈ ಮಾಯೆಯು ನನ್ನದೇನು! ರಾವಣನು ತನ್ನ ರಾಜ್ಯ ಮಾಡುತ್ತಾನೆ, ನಾನು ನನ್ನ ರಾಜ್ಯವನ್ನು ಸ್ಥಾಪನೆ ಮಾಡುತ್ತಿದ್ದೇನೆ, ಇದು ಪರಂಪರೆಯಿಂದ ನಡೆಯುತ್ತಾ ಬಂದಿದೆ. ರಾವಣನೇ ನಿಮ್ಮ ಎಲ್ಲರಿಗಿಂತ ದೊಡ್ಡ ಶತ್ರುವಾಗಿದ್ದಾನೆ. ರಾವಣನು ಶತ್ರುವಾಗಿದ್ದಾನೆಂದು ಗೊತ್ತಿದೆ ಆದ್ದರಿಂದಲೇ ಪ್ರತೀ ವರ್ಷ ರಾವಣನನ್ನು ಸುಡುತ್ತಾರೆ, ಮೈಸೂರಿನಲ್ಲಂತೂ ಈ ದಸರಾ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸುತ್ತಾರೆ. ಏನನ್ನೂ ತಿಳಿದುಕೊಳ್ಳುವುದಿಲ್ಲ. ನಿಮ್ಮ ಹೆಸರಾಗಿದೆ- ಶಿವಶಕ್ತಿ ಸೇನೆ, ಇದನ್ನು ಅವರು ವಾನರಸೇನೆಯೆಂದು ಹೆಸರಿಟ್ಟುಬಿಟ್ಟಿದ್ದಾರೆ. ನಿಮಗೆ ಗೊತ್ತಿದೆ, ನಾವು ಅವಶ್ಯವಾಗಿ ವಾನರರಂತೆ ಇದ್ದೆವು, ಈಗ ರಾವಣನ ಮೇಲೆ ಜಯಗಳಿಸಲು ಶಕ್ತಿಯನ್ನು ತೆಗೆದುಕೊಳ್ಳುತ್ತಿದ್ದೇವೆ. ತಂದೆಯೇ ಬಂದು ರಾಜಯೋಗವನ್ನು ಕಲಿಸುತ್ತಾರೆ. ಇದರ ಮೇಲೆ ಕಥೆಗಳನ್ನು ಬರೆದುಬಿಟ್ಟಿದ್ದಾರೆ, ಅಮರಕಥೆಯೆಂದು ಹೇಳುತ್ತಾರೆ. ಮಕ್ಕಳಿಗೆ ತಿಳಿದಿದೆ- ತಂದೆಯು ನಮಗೆ ಅಮರಕಥೆಯನ್ನು ತಿಳಿಸುತ್ತಾರೆ ಆದರೆ ಯಾವುದೇ ಪರ್ವತಗಳ ಮೇಲೆ ತಿಳಿಸುವುದಿಲ್ಲ. ಶಂಕರನು ಪಾರ್ವತಿಗೆ ಅಮರಕಥೆಯನ್ನು ತಿಳಿಸಿದರೆಂದು ಹೇಳುತ್ತಾರೆ. ಶಿವಶಂಕರನ ಚಿತ್ರವನ್ನೂ ಇಟ್ಟುಕೊಳ್ಳುತ್ತಾರೆ. ಇಬ್ಬರನ್ನೂ ಸೇರಿಸಿಬಿಟ್ಟಿದ್ದಾರೆ. ಇವೆಲ್ಲವೂ ಭಕ್ತಿಮಾರ್ಗವಾಗಿದೆ. ದಿನ-ಪ್ರತಿದಿನ ಎಲ್ಲರೂ ತಮೋಪ್ರಧಾನರಾಗುತ್ತಾ ಹೋಗುತ್ತಾರೆ. ಸತೋಪ್ರಧಾನದಿಂದ ಸತೋ ಆದಾಗ ಎರಡು ಕಲೆಗಳು ಕಡಿಮೆಯಾಗುತ್ತದೆ. ವಾಸ್ತವದಲ್ಲಿ ತ್ರೇತಾಯುಗಕ್ಕೂ ಸ್ವರ್ಗವೆಂದು ಹೇಳುವುದಿಲ್ಲ, ತಂದೆಯು ನೀವು ಮಕ್ಕಳನ್ನು ಸ್ವರ್ಗವಾಸಿಗಳನ್ನಾಗಿ ಮಾಡಲು ಬರುತ್ತಾರೆ. ತಂದೆಗೆ ಗೊತ್ತಿದೆ- ಬ್ರಾಹ್ಮಣ ಕುಲ ಮತ್ತು ಸೂರ್ಯವಂಶಿ, ಚಂದ್ರವಂಶಿ ಕುಲ ಸ್ಥಾಪನೆಯಾಗುತ್ತಿದೆ, ರಾಮಚಂದ್ರನಿಗೆ ಕ್ಷತ್ರಿಯರ ಗುರುತನ್ನು ನೀಡಿದ್ದಾರೆ. ನೀವೆಲ್ಲರೂ ಕ್ಷತ್ರಿಯರಾಗಿದ್ದೀರಲ್ಲವೆ, ಮಾಯೆಯ ಮೇಲೂ ಜಯಗಳಿಸುತ್ತೀರಿ. ಕಡಿಮೆ ಅಂಕಗಳಿಂದ ತೇರ್ಗಡೆಯಾಗುವವರಿಗೆ ಚಂದ್ರವಂಶಿಯರೆಂದು ಹೇಳಲಾಗುತ್ತದೆ ಆದ್ದರಿಂದ ರಾಮನಿಗೆ ಬಾಣ ಇತ್ಯಾದಿಗಳನ್ನು ಕೊಟ್ಟುಬಿಟ್ಟಿದ್ದಾರೆ. ಹಿಂಸೆಯಂತೂ ತ್ರೇತಾಯುಗದಲ್ಲಿಯೂ ಆಗುವುದಿಲ್ಲ. ಗಾಯನವೂ ಇದೆ- ರಾಮರಾಜ, ರಾಮಪ್ರಜಾ..... ಆದರೆ ಇವರು ಕ್ಷತ್ರಿಯತನದ ಚಿಹ್ನೆಗಳನ್ನು ಕೊಟ್ಟಿರುವುದರಿಂದ ಮನುಷ್ಯರು ತಬ್ಬಿಬ್ಬಾಗುತ್ತಾರೆ. ಈ ಆಯುಧಗಳೇನೂ ಇರುವುದಿಲ್ಲ. ಶಕ್ತಿಯರಿಗೆ ಕತ್ತಿ ಇತ್ಯಾದಿಯನ್ನು ತೋರಿಸುತ್ತಾರೆ, ಏನನ್ನೂ ತಿಳಿದುಕೊಂಡಿಲ್ಲ. ನೀವು ಮಕ್ಕಳು ಅರಿತುಕೊಂಡಿದ್ದೀರಿ. ತಂದೆಯು ಜ್ಞಾನಸಾಗರನಾಗಿದ್ದಾರೆ ಆದ್ದರಿಂದ ತಂದೆಯೇ ಆದಿ-ಮಧ್ಯ-ಅಂತ್ಯದ ರಹಸ್ಯವನ್ನು ತಿಳಿಸುತ್ತಾರೆ. ಬೇಹದ್ದಿನ ತಂದೆಗೆ ಮಕ್ಕಳ ಮೇಲೆ ಎಷ್ಟು ಪ್ರೀತಿಯಿದೆಯೋ ಅಷ್ಟು ಲೌಕಿಕತಂದೆಗೆ ಇರುವುದಿಲ್ಲ. 21 ಜನ್ಮಗಳಿಗಾಗಿ ಮಕ್ಕಳನ್ನು ಸುಖದಾಯಿ ಮಾಡಿಬಿಡುತ್ತಾರೆ ಅಂದಮೇಲೆ ಅತಿಪ್ರಿಯ ತಂದೆಯಾದರಲ್ಲವೆ! ಇಷ್ಟು ಪ್ರಿಯತಂದೆಯಾಗಿದ್ದಾರೆ, ಅವರು ನಿಮ್ಮ ಎಲ್ಲಾ ದುಃಖಗಳನ್ನು ದೂರ ಮಾಡಿಬಿಡುತ್ತಾರೆ. ಸುಖದ ಆಸ್ತಿಯು ಸಿಕ್ಕಿಬಿಡುತ್ತದೆ, ಅಲ್ಲಿ ದುಃಖದ ಹೆಸರು, ಗುರುತೂ ಇರುವುದಿಲ್ಲ. ಈಗ ಇದು ಬುದ್ಧಿಯಲ್ಲಿರಬೇಕಲ್ಲವೆ. ಇದನ್ನು ಮರೆಯಬಾರದು. ಎಷ್ಟೊಂದು ಸಹಜವಾಗಿದೆ. ಕೇವಲ ಮುರುಳಿಯನ್ನು ಓದಿ ತಿಳಿಸಬೇಕಾಗಿದೆ ಆದರೂ ಸಹ ನಮಗೆ ಬ್ರಾಹ್ಮಿಣಿ (ಶಿಕ್ಷಕಿ ಸಹೋದರಿ) ಬೇಕು, ಬ್ರಾಹ್ಮಿಣಿಯಿಲ್ಲದೆ ಧಾರಣೆಯಾಗುವುದಿಲ್ಲವೆಂದು ಹೇಳುತ್ತಾರೆ ಅರೆ ಸತ್ಯನಾರಾಯಣನ ಕಥೆಯನ್ನಂತೂ ಸಣ್ಣ ಮಕ್ಕಳೂ ನೆನಪಿಟ್ಟುಕೊಂಡು ತಿಳಿಸುತ್ತಾರೆ. ನಾನು ನಿಮಗೆ ಕೇವಲ ತಂದೆಯನ್ನು ನೆನಪು ಮಾಡಿ ಎಂದು ಪ್ರತಿನಿತ್ಯವೂ ತಿಳಿಸುತ್ತೇನೆ. ಈ ಜ್ಞಾನವು 7 ದಿನಗಳಲ್ಲಿ ಬುದ್ಧಿಯಲ್ಲಿ ಕುಳಿತುಕೊಳ್ಳಬೇಕು ಆದರೆ ಮಕ್ಕಳು ಮರೆತುಹೋಗುತ್ತಾರೆ, ತಂದೆಗಂತೂ ಆಶ್ಚರ್ಯವಾಗುತ್ತದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳ ಪ್ರತಿ ಮಾತಾ-ಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ, ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ತಂದೆಯಿಂದ ಆಶೀರ್ವಾದ ಅಥವಾ ಕೃಪೆಯನ್ನು ಬೇಡಬಾರದು. ತಂದೆ-ಶಿಕ್ಷಕ-ಗುರುವನ್ನು ನೆನಪು ಮಾಡಿ ತಮ್ಮ ಮೇಲೆ ತಾವೇ ಕೃಪೆ ತೋರಿಸಿಕೊಳ್ಳಬೇಕಾಗಿದೆ. ಮಾಯೆಯಿಂದ ಎಚ್ಚರವಾಗಿರಬೇಕು. ಕಣ್ಣುಗಳು ಮೋಸಮಾಡುತ್ತವೆ ಇವನ್ನು ತಮ್ಮ ಅಧಿಕಾರದಲ್ಲಿಟ್ಟುಕೊಳ್ಳಬೇಕಾಗಿದೆ.

2. ವ್ಯರ್ಥವಾದ ಅಲ್ಲಸಲ್ಲದ ಮಾತುಗಳು ಬಹಳ ನಷ್ಟಮಾಡುತ್ತವೆ ಆದ್ದರಿಂದ ಎಷ್ಟು ಸಾಧ್ಯವೋ ಅಷ್ಟು ಶಾಂತವಾಗಿರಬೇಕು, ಬಾಯಲ್ಲಿ ಶಾಂತಿಯ ಉಂಗುರವನ್ನು ಹಾಕಿಕೊಳ್ಳಬೇಕಾಗಿದೆ. ಎಂದೂ ಉಲ್ಟಾಸುಲ್ಟಾ ಮಾತನಾಡಬಾರದು. ತಾವೂ ಅಶಾಂತರಾಗಬಾರದು, ಅನ್ಯರನ್ನೂ ಅಶಾಂತರನ್ನಾಗಿ ಮಾಡಬಾರದು.

ವರದಾನ:
ತಂದೆಯ ಸಹಾಯದಿಂದ ಶೂಲವನ್ನು ಮುಳ್ಳಿನಲ್ಲಿ ಪರಿವರ್ತನೆ ಮಾಡಿಕೊಳ್ಳುವಂತಹ ಸದಾ ನಿಶ್ಚಿಂತ ಮತ್ತು ಟ್ರಸ್ಟಿ ಭವ.

ಹಳೆಯ ಲೆಕ್ಕಾಚಾರದನುಸಾರ ಶೂಲದ ಶಿಕ್ಷೆ ಇರುತ್ತದೆ ಆದರೆ ತಂದೆಯ ಸಹಾಯದಿಂದ ಅದು ಮುಳ್ಳಾಗಿಬಿಡುತ್ತದೆ. ಪರಿಸ್ಥಿತಿಗಳು ಖಂಡಿತ ಬರುತ್ತದೆ ಏಕೆಂದರೆ ಎಲ್ಲವೂ ಇಲ್ಲೇ ಸಮಾಪ್ತಿ ಆಗಬೇಕು ಆದರೆ ತಂದೆಯ ಸಹಾಯ ಅದನ್ನು ಮುಳ್ಳಾಗಿ ಪರಿವರ್ತನೆಯಾಗಿಬಿಡುತ್ತದೆ. ದೊಡ್ಡ ಮಾತನ್ನು ಚಿಕ್ಕದಾಗಿ ಮಾಡಿಬಿಡುತ್ತದೆ ಏಕೆಂದರೆ ದೊಡ್ಡ ತಂದೆ ಜೊತೆಯಲ್ಲಿದ್ದಾರೆ. ಇದೇ ನಿಶ್ಚಯದ ಆಧಾರದ ಮೇಲೆ ಸದಾ ನಿಶ್ಚಿಂತರಾಗಿರಿ ಮತ್ತು ಟ್ರಸ್ಟಿಯಾಗಿ ನನ್ನದು ಎನ್ನುವುದನ್ನು ನಿನ್ನದು ಎನ್ನುವುದರಲ್ಲಿ ಬದಲಿಮಾಡಿ ಹಗುರರಾಗಿ ಬಿಡಿ ಆಗ ಎಲ್ಲಾ ಹೊರೆ ಒಂದು ಸೆಕೆಂಡ್ನಲ್ಲಿ ಸಮಾಪ್ತಿಯಾಗಿಬಡುತ್ತದೆ.

ಸ್ಲೋಗನ್:
ಶುಭಭಾವನೆಯ ಸ್ಟಾಕ್ ಮುಖಾಂತರ ನಕಾರಾತ್ಮಕತೆಯನ್ನು ಸಕಾರಾತ್ಮಕತೆಯಲ್ಲಿ ಪರಿವರ್ತನೆ ಮಾಡಿ.