22.09.24    Avyakt Bapdada     Kannada Murli    18.01.2002     Om Shanti     Madhuban


ಸ್ನೇಹ್ನದ ಶಕ್ತಿಯ ಮೂಲಕ ಸಮರ್ಥರಾಗಿ, ಸರ್ವ ಆತ್ಮಗಳಿಗೆ ಸುಖ ಶಾಂತಿಯ ಹನಿಯನ್ನು ನೀಡಿ


ಇಂದು ಸಮರ್ಥ ತಂದೆ ತನ್ನ ಸ್ಮೃತಿ ಸ್ವರೂಪ, ಸಮರ್ಥ ಸ್ವರೂಪ ಮಕ್ಕಳೊಂದಿಗೆ ಮಿಲನ ಮಾಡಲು ಬಂದಿದ್ದೇವೆ. ಇಂದು ವಿಶೇಷ ನಾಲ್ಕೂ ಕಡೆಯ ಮಕ್ಕಳು ಸ್ನೇಹದ ಅಲೆಯಲ್ಲಿ ತೇಲಾಡುತ್ತಿದ್ದಾರೆ. ವಿಶೇಷ ಬ್ರಹ್ಮಾ ತಂದೆಯ ನೆನಪಿನಲ್ಲಿ ಮುಳುಗಿದ್ದಾರೆ. ಈ ಸ್ನೇಹ ಪ್ರತಿ ಒಬ್ಬ ಮಗುವಿಗೆ ಈ ಜೀವನದಲ್ಲಿ ವರದಾನವಾಗಿದೆ. ಪರಮಾತ್ಮ ಸ್ನೇಹವು ತಮ್ಮೆಲ್ಲರಿಗೂ ಹೊಸ ಜೀವನವನ್ನು ನೀಡಿದೆ. ಪ್ರತಿಯೊಬ್ಬ ಮಗುವಿಗೂ ಸ್ನೇಹದ ಶಕ್ತಿಯೇ ಬಾಬಾರವರ ಮಕ್ಕಳನ್ನಾಗಿ ಮಾಡಿದೆ. ಈ ಸ್ನೇಹದ ಶಕ್ತಿ ಎಲ್ಲವನ್ನು ಸಹಜವನ್ನಾಗಿ ಮಾಡುತ್ತದೆ. ಸ್ನೇಹದಲ್ಲಿ ಮುಳುಗಿಹೋಗುತ್ತೀರೆಂದರೆ ಪರಿಸ್ಥಿತಿಯನ್ನು ಸಹಜವಾಗಿ ಅನುಭವ ಮಾಡುತ್ತೀರಿ. ಬಾಪ್ದಾದಾರವರೂ ಸಹ ಸದಾ ಸ್ನೇಹದ ಸಾಗರದಲ್ಲಿ ಮುಳುಗಿಹೋಗಿರೆಂದು ಹೇಳುತ್ತೇವೆ. ತಂದೆಯ ಸ್ನೇಹವು ಛತ್ರಛಾಯೆಯಾಗಿದೆ. ಈ ಛತ್ರಛಾಯೆಯ ಒಳಗಡೆ ಯಾವುದೇ ಮಾಯೆಯ ನೆರಳು ಬೀಳಲು ಸಾಧ್ಯವಿಲ್ಲ. ಸಹಜವಾಗಿ ಮಾಯಾಜೀತರಾಗಿಬಿಡುತ್ತೀರಿ. ಯಾರು ನಿರಂತರ ಸ್ನೇಹದಲ್ಲಿ ಇರುತ್ತಾರೆ ಅವರಿಗೆ ಯಾವುದೇ ಮಾತಿನಲ್ಲಿ ಪರಿಶ್ರಮ ಪಡುವ ಅಗತ್ಯವಿರುವುದಿಲ್ಲ. ಸ್ನೇಹ ಸಹಜವಾಗಿ ತಂದೆಯ ಸಮಾನ ಮಾಡಿಬಿಡುತ್ತದೆ. ಸ್ನೇಹದ ಹಿಂದೆ ಏನೇ ಸಮರ್ಪಣೆ ಮಾಡುವುದು ಸಹಜವಾಗಿ ಬಿಡುತ್ತದೆ.

ಈ ದಿನ ಅಮೃತವೇಳೆಯಿಂದ ಪ್ರತಿಯೊಬ್ಬ ಮಗುವು ಸ್ನೇಹದ ಮಾಲೆಯನ್ನು ತಂದೆಗೆ ಹಾಕಿದರು. ಮತ್ತು ತಂದೆಯು ಸಹ ಮಕ್ಕಳಿಗೆ ಸ್ನೇಹದ ಮಾಲೆಯನ್ನು ಹಾಕಿದೆವು. ಹೇಗೆ ಈ ವಿಶೇಷ ಸ್ಮೃತಿ ದಿವಸದಲ್ಲಿ ಅರ್ಥಾತ್ ಸ್ನೇಹದ ದಿನದಂದು ಸ್ನೇಹದಲ್ಲಿ ಮುಳುಗಿದ್ದೀರಿ ಹಾಗೆಯೇ ಸದಾ ಮುಳುಗಿರಬೇಕು. ಆಗ ಪರಿಶ್ರಮದ ಪುರುಷಾರ್ಥ ಮಾಡುವ ಆವಶ್ಯಕತೆ ಇರುವುದಿಲ್ಲ. ಒಂದಾಗಿದೆ ಸ್ನೇಹದ ಸಾಗರದಲ್ಲಿ ಮುಳುಗುವುದು, ಮತ್ತು ಎರಡನೆಯದಾಗಿ ಸ್ನೇಹದ ಸಾಗರದಲ್ಲಿ ಸ್ವಲ್ಪ ಸಮಯ ಮುಳುಗಿಹಾಕುವುದು. ಕೆಲವು ಮಕ್ಕಳು ಮುಳುಗಿರುವುದಿಲ್ಲ, ಬಹಳ ಬೇಗ ಹೊರ ಬಂದುಬಿಡುತ್ತಾರೆ. ಆದ್ದರಿಂದ ಸಹಜವು ಕಷ್ಟವಾಗಿಬಿಡುತ್ತದೆ. ಅಂದಾಗ ಮುಳುಗಲು ಬರುತ್ತದೆಯೆ? ಮುಳುಗುವುದರಲ್ಲೇ ಆನಂದವಿರುತ್ತದೆ. ಬ್ರಹ್ಮಾ ತಂದೆ ಸದಾ ತಂದೆಯ ಸ್ನೇಹದಲ್ಲಿ ಮುಳುಗಿದರು. ಇದರ ನೆನಪಾರ್ಥವಾಗಿ ಕಲ್ಕತ್ತಾದಲ್ಲಿ ತೋರಿಸಲಾಗಿದೆ (ಬ್ರಹ್ಮಪುತ್ರ ನದಿ ಸಾಗರವನ್ನು ಸೇರುವುದು).

ಈಗ ಬಾಪ್ದಾದಾ ಎಲ್ಲಾ ಮಕ್ಕಳಿಂದ ಇದನ್ನು ಬಯಸುತ್ತಾರೆ. ಏನೆಂದರೆ ತಂದೆಯ ಪ್ರೀತಿಯ ಗುರುತು ಸಮಾನರಾಗಿ ತೋರಿಸಿ. ಸದಾ ಸಂಕಲ್ಪದಲ್ಲಿ ಸಮರ್ಥರಾಗಿರಿ, ಈಗ ವ್ಯರ್ಥದ ಸಮಾಪ್ತಿ ಸಮಾರೋಹ ಮಾಡಿಬಿಡಿ, ಏಕೆಂದರೆ ವ್ಯರ್ಥ ಸಮರ್ಥರಾಗಲು ಬಿಡುವುದಿಲ್ಲ ಮತ್ತು ಎಲ್ಲಿಯವರಿಗೆ ನಿಮಿತ್ತರಾದ ನೀವು ಮಕ್ಕಳು ಸದಾ ಸಮರ್ಥರಾಗುವುದಿಲ್ಲವೆಂದರೆ ವಿಶ್ವದ ಆತ್ಮರನ್ನು ಹೇಗೆ ಮಾಡುವಿರಿ! ಎಲ್ಲಾ ಆತ್ಮರು ಶಕ್ತಿಯಿಂದ ಸಂಪೂರ್ಣ ಬರಿದಾಗಿದ್ದಾರೆ, ಶಕ್ತಿಗಳ ಭಿಕಾರಿಗಳಾಗಿಬಿಟ್ಟಿದ್ದಾರೆ. ಇಂತಹ ಭಿಕಾರಿ ಆತ್ಮಗಳಿಗೆ ಹೇ ಸಮರ್ಥ ಆತ್ಮರೇ ಈ ಭಿಕಾರಿತನದಿಂದ ಮುಕ್ತರನ್ನಾಗಿ ಮಾಡಿ, ಆತ್ಮರೆಲ್ಲರು ನೀವು ಸಮರ್ಥ ಆತ್ಮರನ್ನು ಕರೆಯುತ್ತಿದ್ದಾರೆ-ಹೇ ಮುಕ್ತಿದಾತನ ಮಕ್ಕಳಾದ ಮಾಸ್ಟರ್ ಮುಕ್ತಿದಾತರೇ ನಮಗೆ ಮುಕ್ತಿಯನ್ನು ಕೊಡಿ. ಈ ಕೂಗು ನಿಮ್ಮ ಕಿವಿಗೆ ಪ್ರತಿಧ್ವನಿಸುವುದಿಲ್ಲವೇ? ಕೇಳುತ್ತಿಲ್ಲವೆ? ಇದುವರೆಗೂ ತನ್ನನ್ನೇ ಮುಕ್ತ ಮಾಡುವುದರಲ್ಲಿ ಬಿಜಿ ಆಗಿದ್ದೀರೇನು? ವಿಶ್ವದ ಆತ್ಮರಿಗೆ ಬೇಹದ್ದಿನ ಸ್ವರೂಪದಿಂದ ಮಾಸ್ಟರ್ ಮುಕ್ತಿದಾತರಾಗುವುದರಿಂದ ಚಿಕ್ಕ ಚಿಕ್ಕ ಮಾತಿನಿಂದ ತನ್ನಲ್ಲಿನ ಬಲಹೀನತೆ ತಾನಾಗಿಯೇ ದೂರವಾಗಿಬಿಡುತ್ತದೆ. ಈಗ ಕೂಗನ್ನು ಕೇಳುವ ಸಮಯವಾಗಿದೆ. ಆತ್ಮಗಳ ಕೂಗನ್ನು ಕೇಳಲು ಬರುತ್ತದೆಯೋ ಅಥವಾ ಇಲ್ಲವೋ? ವಿವಶ (ತಬ್ಬಿಬ್ಬಾದ) ಆತ್ಮರಿಗೆ ಸುಖ- ಶಾಂತಿಯ ಹನಿಯನ್ನು ನೀಡಿ, ಇದೇ ಬ್ರಹ್ಮಾ ತಂದೆಯನ್ನು ಅನುಸರಿಸುವುದಾಗಿದೆ.

ಈ ದಿನ ವಿಶೇಷವಾಗಿ ಬ್ರಹ್ಮಾ ತಂದೆಯ ನೆನಪನ್ನು ಹೆಚ್ಚು ಮಾಡಿದಿರಲ್ಲವೇ! ಬ್ರಹ್ಮಾ ತಂದೆಯೂ ಸಹ ಎಲ್ಲಾ ಮಕ್ಕಳನ್ನು ಸ್ಮೃತಿ ಮತ್ತು ಸಮರ್ಥ ಸ್ವರೂಪದಿಂದ ನೆನಪು ಮಾಡಿದರು. ಕೆಲವು ಮಕ್ಕಳು ಬ್ರಹ್ಮಾ ತಂದೆಯೊಂದಿಗೆ ಆತ್ಮೀಯ ವಾರ್ತಾಲಾಪ ಮಾಡುತ್ತಾ ಮಧುರಾತಿ ಮಧುರವಾಗಿ ದೂರುಗಳನ್ನು ನೀಡಿದರು. ಏನೆಂದರೆ ನೀವು ಇಷ್ಟು ಬೇಗ ಏಕೆ ಹೋಗಿಬಿಟ್ಟಿರಿ? ಮತ್ತು ಎರಡನೆಯ ದೂರು ಏನೆಂದರೆ ನಾವು ಎಲ್ಲಾ ಮಕ್ಕಳ ಒಪ್ಪಿಗೆಯನ್ನು ಏಕೆ ಪಡೆಯದೆ ಹೋದಿರಿ? ಬ್ರಹ್ಮಾ ತಂದೆ ತಿಳಿಸಿದರು, ನಾನು ಸಹ ಶಿವ ತಂದೆಯನ್ನ ಕೇಳಿದೆ ನನ್ನನ್ನು ಇದ್ದಕ್ಕಿದ್ದಾಗೆ ಏಕೆ ಕರೆದಿರಿ? ಶಿವ ತಂದೆ ಹೇಳಿದರು-ಒಂದುವೇಳೆ ನಾನು ನಿಮಗೆ ಒಪ್ಪಿಗೆಯನ್ನ ತೆಗೆದುಕೊಂಡು ಬನ್ನಿ ಎಂದು ಹೇಳಿದ್ದರೆ ನೀವು ಮಕ್ಕಳನ್ನು ಬಿಟ್ಟು ಬರುತ್ತಿದ್ದೀರೇನು, ಅಥವಾ ಮಕ್ಕಳು ನಿಮ್ಮನ್ನು ಬಿಟ್ಟುಬಿಡುತ್ತಿದ್ದರೇನು? ನೀವು ಅರ್ಜುನರ ನೆನಪಾರ್ಥವಾಗಿ ಅಂತ್ಯದಲ್ಲಿ ನಷ್ಟೋ ಮೋಹಸ್ಮೃತಿ ಸ್ವರೂಪರಾಗುವುದಾಗಿದೆ. ಬ್ರಹ್ಮಾ ತಂದೆ ಮುಗುಳ್ನಕ್ಕರು. ಮತ್ತೆ ಹೇಳಿದರು ಇದಂತೂ ಅದ್ಭುತವಾಗಿತ್ತು. ಮಕ್ಕಳಿಗೂ ಸಹ ತಿಳಿಯಲಿಲ್ಲ ಮತ್ತು ಬ್ರಹ್ಮಾರವರಿಗೂ ಸಹ ನಾನು ಹೋಗುತ್ತಿದ್ದೇನೆಂದು ತಿಳಿಯಲಿಲ್ಲ. ಮುಂದೆಯಿದ್ದರೂ ಸಹ ಎರಡೂ ಕಡೆ ಶಾಂತಿಯಾಗಿದ್ದರು ಏಕೆಂದರೆ ಸಮಯ ಪ್ರಮಾಣ ತಂದೆಯನ್ನ ಪ್ರತ್ಯಕ್ಷತೆ ಮಾಡುವ ಪಾತ್ರ ಡ್ರಾಮಾದಲ್ಲಿ ನೊಂದಣಿಯಾಗಿತ್ತು. ಇದಕ್ಕೆ ಹೇಳಲಾಗುತ್ತದೆ ಭಲೆ ಡ್ರಾಮಾ ಭಲೆ! ಸೇವೆಯ ಪರಿವರ್ತನೆ ನೊಂದಾಯಿಸಲ್ಪಟ್ಟಿತ್ತು. ಬ್ರಹ್ಮಾ ತಂದೆ ಮಕ್ಕಳ ಬೆನ್ನೆಲುಬಾಗಬೇಕಿತ್ತು. (ಬ್ಯಾಕ್ ಬೋನ್) ಅವ್ಯಕ್ತರೂಪದಲ್ಲಿ ತೀವ್ರ ಸೇವೆಯ ಪಾತ್ರವನ್ನು ಅಭಿನಯಿಸಬೇಕಿತ್ತು.

ವಿಶೇಷವಾಗಿ ಈ ದಿನ ಡಬ್ಬಲ್ ವಿದೇಶದ ಮಕ್ಕಳು ಬಹಳ ಮಧುರಾತಿ ಮಧುರ ದೂರನ್ನು ಕೊಟ್ಟಿದ್ದಾರೆ. ಡಬ್ಬಲ್ ವಿದೇಶದವರು ದೂರನ್ನು ಕೊಟ್ಟಿದ್ದೀರಾ? ಡಬ್ಬಲ್ ವಿದೇಶದವರು ಬ್ರಹ್ಮಾ ತಂದೆಗೆ ಹೇಳಿದರು..... ಕೇವಲ ಎರಡು ಮೂರು ವರ್ಷಗಳು ನೀವು ಇದ್ದಿದ್ದರೆ ನಾವೂ ಸಹ ನೋಡುತ್ತಿದ್ದೆವು. ಬ್ರಹ್ಮಾ ತಂದೆ ನಗುತ್ತಾ ಹೇಳಿದರು-ಡ್ರಾಮಾ ಜೊತೆ ಮಾತನಾಡಿ. ಡ್ರಾಮಾ ಹೀಗೆ ಏಕೆ ಮಾಡಿತು! ಆದರೆ ಕೊನೆಯಲ್ಲಿ ಬಂದಿದ್ದರೂ ತೀವ್ರವಾಗಿ ಮುಂದೆ ಹೋಗುವ ಉದಾಹರಣೆ ಆಗಬೇಕಿತ್ತು. ಭಾರತದಲ್ಲಿ ಆಗಿರಲಿ ಅಥವಾ ವಿದೇಶದಲ್ಲಿಯಾಗಿರಲಿ. ಈಗ ಕೊನೆಯಲ್ಲಿ ಬಂದಿದ್ದರೂ ಮುಂದೆ ಹೋಗುವ ಪ್ರತ್ಯಕ್ಷ ಪ್ರಮಾಣ ತೋರಿಸಿ ಹೇಗೆ ಈ ದಿನ ಸಮರ್ಥ ದಿವಸವಾಗಿ ಆಚರಿಸಿದಿರಿ ಹಾಗೆಯೇ ಪ್ರತಿ ದಿನ ಸಮರ್ಥ ದಿನವಾಗಿರಲಿ'. ಯಾವುದೇ ಪ್ರಕಾರದ ಏರು ಪೇರು ಇರಬಾರದು. ಬ್ರಹ್ಮಾ ತಂದೆ ಈ ದಿನ ಮೂರು ಶಬ್ದದ ಶಿಕ್ಷಣವನ್ನು ಕೊಟ್ಟಿದ್ದರು. (ನಿರಾಕಾರಿ, ನಿರ್ವಿಕಾರಿ ಮತ್ತು ನಿರಹಂಕಾರಿ) ಈ ಮೂರು ಶಬ್ದದ ಶಿಕ್ಷಣ ಸ್ವರೂಪರಾಗಿ, ಮನಸ್ಸಿನಲ್ಲಿ ನಿರಾಕಾರಿ ಮಾತಿನಲ್ಲಿ ನಿರಹಂಕಾರಿ, ಕರ್ಮದಲ್ಲಿ ನಿರ್ವಿಕಾರಿ ಸೆಕೆಂಡಿನಲ್ಲಿ ಸಾಕಾರ ಸ್ವರೂಪದಲ್ಲಿ ಬನ್ನಿ, ಸೆಕೆಂಡಿನಲ್ಲಿ ನಿರಾಕಾರ ಸ್ವರೂಪದಲ್ಲಿ ಸ್ಥಿತರಾಗಿ. ಈ ಅಭ್ಯಾಸ ಇಡೀ ದಿನದಲ್ಲಿ ಮತ್ತೆ ಮತ್ತೆ ಮಾಡಿ. ಕೇವಲ ನೆನಪಿನಲ್ಲಿ ಕುಳಿತ ಸಮಯದಲ್ಲಿ ನಿರಾಕಾರಿ ಸ್ಥಿತಿಯಲ್ಲಿ ಕುಳಿತುಕೊಳ್ಳುವುದಲ್ಲ ಆದರೆ, ಮಧ್ಯ ಮಧ್ಯದಲ್ಲಿ ಸಮಯ ತೆಗೆದು ಈ ದೇಹದ ಪರಿವೆಯಿಂದ ದೂರ ನಿರಾಕಾರಿ ಆತ್ಮ ಸ್ವರೂಪದಲ್ಲಿ ಸ್ಥಿತರಾಗುವ ಅಭ್ಯಾಸ ಮಾಡಿ. ಯಾವುದೇ ಕೆಲಸ ಮಾಡುತ್ತಿದ್ದರೂ ಸಹ ನಾನು ನಿರಾಕಾರ ಆತ್ಮ ಈ ಸಾಕಾರ ಕಮೇರ್ಂದ್ರಿಯಗಳ ಆಧಾರದಿಂದ ಕರ್ಮ ಮಾಡುತ್ತಿದ್ದೇನೆ. ನಿರಾಕಾರ ಸ್ಥಿತಿ ಕಾರ್ಯ ಮಾಡಿಸುವಂತಹ ಸ್ಥಿತಿಯಾಗಿದೆ. ಕಮೇರ್ಂದ್ರಿಯ ಮಾಡುವಂತಹವು, ಆತ್ಮ ಮಾಡಿಸುವಂತಹದಾಗಿದೆ. ನಿರಾಕಾರಿ ಆತ್ಮ ಸ್ಥಿತಿಯಿಂದ ತಂದೆಯ ನೆನಪು ಸ್ವತಃ ಹಾಗೆಯೇ ಬರುತ್ತದೆ. ಹೇಗೆ ತಂದೆ ಕರ್ತವ್ಯವನ್ನು ಮಾಡಿಸುತ್ತಾರೆ 'ಹಾಗೆಯೇ ನಾನು ಆತ್ಮನು ಸಹ ಕರ್ತವ್ಯವನ್ನು ಮಾಡಿಸುವವನಾಗಿದ್ದೇನೆ. ಆದ್ದರಿಂದ ಕರ್ಮದ ಬಂಧನದಲ್ಲಿ ಸಿಕ್ಕಿಕೊಳ್ಳುವುದಿಲ್ಲ. ಅಲಿಪ್ತರಾಗಿರುತ್ತೀರಿ. ಏಕೆಂದರೆ ಕರ್ಮದ ಬಂಧನದಲ್ಲಿ ಮುಳುಗುವುದರಿಂದಲೇ ಸಮಸ್ಯೆಗಳು ಬರುತ್ತದೆ. ಇಡಿ ದಿನದಲ್ಲಿ ಚೆಕ್ ಮಾಡಿಕೊಳ್ಳಿ-ಮಾಡಿಸುವಂತಹ ಆತ್ಮನಾಗಿ ಕರ್ಮ ಮಾಡಿಸುತ್ತಿದ್ದೇನೆಯೇ? ಒಳ್ಳೆಯದು. ಈಗ ಮುಕ್ತಿ ಕೊಡಿಸುವ ಮೆಷಿನರಿ(ಯಂತ್ರವನ್ನ) ತೀವ್ರ ಮಾಡಿ.

ಒಳ್ಳೆಯದು. ಈ ಸಾರಿ ಈ ಕಲ್ಪದಲ್ಲಿ ಬಂದಿರುವವರು ಕೈ ಎತ್ತಿರಿ. ಹೊಸ ಹೊಸ ಮಕ್ಕಳು ಬಾಪ್ದಾದಾ ವಿಶೇಷ ನೆನಪು ಪ್ರೀತಿಯನ್ನು ಕೊಡುತ್ತಿದ್ದಾರೆ. ಸಮಯದಲ್ಲಿ ತಂದೆಯನ್ನು ತಿಳಿದು ತಂದೆಯಿಂದ ಆಸ್ತಿಗೆ ಅಧಿಕಾರಿ ಆಗಿದ್ದೀರಿ. ಸದಾ ತನ್ನ ಈ ಭಾಗ್ಯವನ್ನು ನೆನಪಿಟ್ಟುಕೊಳ್ಳಿ ನಾನು ತಂದೆಯನ್ನು ಅರ್ಥಮಾಡಿಕೊಂಡೆ. ಒಳ್ಳೆಯದು ಡಬ್ಬಲ್ ವಿದೇಶದವರು ಕೈ ಎತ್ತಿ ಬಹಳ ಒಳ್ಳೆಯದು. ಡಬ್ಬಲ್ ವಿದೇಶದವರು ಬ್ರಹ್ಮಾರವರ ಸಂಕಲ್ಪದ ರಚನೆ ಆಗಿದ್ದಾರೆ ಎಂದು ಬಾಪ್ದಾದಾ ಹೇಳುತ್ತಾರೆ. ಒಂದಾಗಿದೆ ಸೀದಾ ಮುಖ ವಂಶಾವಳಿ ಮತ್ತು ಎರಡೆನೆಯದು ಸಂಕಲ್ಪದ ಮೂಲಕ ವಂಶಾವಳಿ. ಸಂಕಲ್ಪ ಶಕ್ತಿ ಅತಿ ದೊಡ್ಡ ಮಹಾನ್ ಆಗಿದೆ, ಆದ್ದರಿಂದ ಹೇಗೆ ನಿಮ್ಮ ರಚನೆ - ಸಂಕಲ್ಪ ಶಕ್ತಿ ತೀವ್ರವಾಗಿದೆ ಹಾಗೆಯೇ ಡಬ್ಬಲ್ ವಿದೇಶದವರು ತೀವ್ರ ಪುರುಷಾರ್ಥ ಮತ್ತು ತೀವ್ರ ಪ್ರಾಲಬ್ಧದ ಅನುಭವ ಮಾಡುವವರಾಗಿದ್ದೀರಿ. ಆದ್ದರಿಂದ ಇಡೀ ಬ್ರಾಹ್ಮಣ ಪರಿವಾರದಲ್ಲಿ ಡಬ್ಬಲ್ ವಿದೇಶದವರು ಡಬ್ಬಲ್ ಸಿಕಿಲದೆ (ಬಹಳ ಕಾಲ ಅಗಲಿ ಹೋಗಿ ಮತ್ತೆ ಸಿಕ್ಕಿರುವವರು)ಆಗಿದ್ದೀರಿ. ಭಾರತದ ಸಹೋದರ ಸಹೋದರಿಯರು ತಮ್ಮನ್ನು ನೋಡಿ ಬಹಳ ಖುಷಿ ಪಡುತ್ತಾರೆ. ಭಲೇ ಭಲೇ ಡಬ್ಬಲ್ ವಿದೇಶದವರೇ ಭಲೇ! ಡಬ್ಬಲ್ ವಿದೇಶದವರಿಗೆ ಖುಷಿಯಲ್ಲವೇ? ಬಹಳ ಖುಷಿ ಇದೆಯಾ? ಎಷ್ಟು ಖುಷಿ? ಬಹಳ ಇದೆಯಾ? ಅಳತೆ ಮಾಡಲು ಯಾವುದೇ ಮಾಪನವಿಲ್ಲ. ವಿದೇಶದಲ್ಲಿ ಸಹ ಕೇಳುತ್ತಿದ್ದಾರೆ. ನೋಡುತ್ತಿದ್ದಾರೆ. ಈ ವಿಜ್ಞಾನದ ಸಾಧನಗಳು ತಮಗೆ ಬೇಹದ್ದಿನ ಸೇವೆ ಮಾಡುವುದರಲ್ಲಿ ಬಹಳ ಜೊತೆ ನೀಡುತ್ತವೆ, ಮತ್ತು ಸಹಜವಾಗಿ ಸೇವೆ ಮಾಡಿಸುತ್ತವೆ. ಈ ವಿಜ್ಞಾನದ ತೀವ್ರಗತಿಯೂ ಸಹ ನಿಮ್ಮ ಸ್ಥಾಪನೆಯೊಂದಿಗೆ ಸಂಬಂಧವಿದೆ.

ಒಳ್ಳೆಯದು. ಎಲ್ಲಾ ಪಾಂಡವರು ಸಮರ್ಥರಾಗಿದ್ದೀರಲ್ಲವೆ? ನಿರ್ಬಲರಲ್ಲ, ಎಲ್ಲರೂ ಸಮರ್ಥರೇ? ಮತ್ತು ಶಕ್ತಿಯರು ತಂದೆ ಸಮಾನವಿದ್ದೀರಿ. ಶಕ್ತಿ ಸೇನೆ ಆಗಿದ್ದೀರಿ. ಶಕ್ತಿಯರ ಶಕ್ತಿ ಮಾಯಾಜೀತ್ ಮಾಡುವುದಾಗಿದೆ.

ಒಳ್ಳೆಯದು, ಇಂದು ವಿಶೇಷವಾಗಿ ಶೃಂಗಾರ ಮಾಡುವವರು ಬಂದಿದ್ದಾರೆ (ಕಲ್ಕತ್ತಾದಿಂದ ಹೂವನ್ನು ತಂದಿದ್ದಾರೆ ಎಲ್ಲಾ ಜಾಗದಲ್ಲಿ ಹೂವುಗಳಿಂದ ಬಹಳ ಸುಂದರವಾಗಿ ಶೃಂಗಾರ ಮಾಡಿದ್ದಾರೆ). ಇದೂ ಸಹ ಸ್ನೇಹದ ಗುರುತಾಗಿದೆ. ಒಳ್ಳೆಯದು ನಿಮ್ಮ ಸ್ನೇಹದ ಪ್ರತಿಯಾಗಿ ನೀಡಿದ್ದಿರಿ. ಒಳ್ಳೆಯದು, ಶಿಕ್ಷಕಿಯರು ಕೈ ಎತ್ತಿ. ಪ್ರತಿಯೊಂದು ಗುಂಪಿನಲ್ಲಿ ಶಿಕ್ಷಿಕಿಯರು ಬಹಳಷ್ಟು ಬರುತ್ತೀರಿ. ಶಿಕ್ಷಿಕಿಯರಿಗೆ ಒಳ್ಳೆಯ ಅವಕಾಶ ಸಿಗುತ್ತದೆ. ಸೇವೆಯ ಪ್ರತ್ಯಕ್ಷ ಫಲ ಸಿಗುತ್ತದೆ. ಒಳ್ಳೆಯದು ಈಗ ತಮ್ಮ ಚೆಹರೆಯ ಮೂಲಕ ಎಲ್ಲರಿಗೂ ಭವಿಷ್ಯದ ಸಾಕ್ಷಾತ್ಕಾರವನ್ನು ಮಾಡಿಸಿ. ಕೇಳಿದಿರಾ? ಏನು ಮಾಡಬೇಕು? ಒಳ್ಳೆಯದು.

ಮಧುಬನದವರು ಕೈ ಎತ್ತಿ. ಬಹಳ ಒಳ್ಳೆಯದು. ಮಧುಬನದವರಿಗೆ ಬಹಳ ಅವಕಾಶ ಸಿಗುತ್ತದೆ. ಆದ್ದರಿಂದ ಬಾಪ್ದಾದಾ ಮಧುಬನದವರು ಆತ್ಮೀಯ ಚಾನ್ಸಲರ್ ಎಂದು ಹೇಳುತ್ತಾರೆ. ಅಲ್ಲವೆ? ಚಾನ್ಸಲರ್ ಆಗಿದ್ದೀರಾ? ಸೇವೆ ಮಾಡ ಬೇಕಾಗುತ್ತದೆ. ಮತ್ತೆ ಎಲ್ಲರನ್ನು ಮಧುಬನನಿವಾಸಿಗಳು ಸಂತುಷ್ಟ ಪಡಿಸುತ್ತೀರಿ. ಆದ್ದರಿಂದ ಬಾಪ್ದಾದಾರವರು ಸಹ ಮಧುಬನದವರನ್ನು ಎಂದೂ ಮರೆಯುವುದಿಲ್ಲ. ಮುಖ್ಯವಾಗಿ ನೆನಪು ಮಾಡುತ್ತೇವೆ. ಏಕೆ? ಮಧುಬನದವರನ್ನು ನೆನಪು ಮಾಡುತ್ತೇವೆ? ಏಕೆಂದರೆ ಮಧುಬನದವರು ತಂದೆಯ ಪ್ರೀತಿಯಲ್ಲಿ ಮೆಜಾರಿಟಿ ಪಾಸ್ ಆಗಿದ್ದಾರೆ. ಮೆಜಾರಿಟಿ ತಂದೆಯ ಜೊತೆ ಪ್ರೀತಿ ಬಹಳ ಇದೆ ಕಡಿಮೆ ಇಲ್ಲ. ಮಧುಬನದವರು ಬಹಳ ಒಳ್ಳೆಯವರು ಆಗಿದ್ದೀರಿ.

ಇಂಡೋರ್ ಜೋನಿನ ಸೇವಾಧಾರಿಗಳು ಬಂದಿದ್ದಾರೆ-ಇಂಡೋರ್ ಜೋನಿನವರು ಕೈ ಎತ್ತಿ. ಬಹಳ ಇದ್ದೀರಿ ಒಳ್ಳೆಯದು. ಸೇವೆ ಮಾಡುವುದು ಅಂದರೆ ಅರ್ಥಾತ್ ಸಮೀಪ ಬರುವ ಪ್ರತ್ಯಕ್ಷ ಫಲವನ್ನು ತಿನ್ನುವುದಾಗಿದೆ. ಸೇವೆಯ ಅವಕಾಶ ತೆಗೆದುಕೊಳ್ಳುವುದು ಆರ್ಥಾತ್ ಪುಣ್ಯವನ್ನು ಜಮಾ ಮಾಡಿಕೊಳುವುದಾಗಿದೆ. ಆಶೀರ್ವಾದ ಜಮಾ ಮಾಡಿಕೊಳ್ಳುವುದು ಎಂದಾಗ ಎಲ್ಲಾ ಸೇವಾಧಾರಿಗಳು ತನ್ನ ಪುಣ್ಯದ ಖಾತೆಯನ್ನು ಜಮಾ ಮಾಡಿಕೊಳ್ಳುವುದು. ಈ ಆಶೀರ್ವಾದ ಅಥವಾ ಪುಣ್ಯ ಅಧಿಕ ಲಿಫ್ಟಿನ ಕೆಲಸ ಮಾಡುತ್ತದೆ.

ಒಳ್ಳೆಯದು. ದೇಶ ವಿದೇಶದಲ್ಲಿ ದೂರ ಕುಳಿತಿದ್ದರೂ ಸಹ ಸಮೀಪ ಇದ್ದೀರಿ, ಎಲ್ಲಾ ಮಕ್ಕಳನ್ನು ಬಾಪ್ದಾದಾ ಸ್ನೇಹದ ದಿವಸದಲ್ಲಿ ರಿಟರ್ನ್ ಆಗಿ ಪದಮಗುಣ - ಸ್ನೇಹದ ನೆನಪನ್ನು ನೀಡುತ್ತಿದ್ದಾರೆ. ಬಾಪ್ದಾದಾ ನೋಡುತ್ತಿರುತ್ತಾರೆ ಎಲ್ಲಿ ಏನು ಬಾರಿಸುತ್ತದೆ. ಯಾವ ಸಮಯ ಇರುತ್ತದೆ. ಎಲ್ಲಿ ಏನು ಸಮಯ ಇರುತ್ತದೆ, ಆದರೆ ಜಾಗೃತ ಜ್ಯೋತಿಗಳು ಧಣಿವಿಲ್ಲದೆ ಕೇಳುತ್ತಿದ್ದಾರೆ ಮತ್ತು ಖುಷಿ ಪಡುತ್ತಿದ್ದಾರೆ. ಬಾಪ್ದಾದಾ ಮಕ್ಕಳ ಖುಷಿಯನ್ನು ನೋಡುತ್ತಿದ್ದಾರೆ. ಹೇಳಿ ಎಲ್ಲರು ಖುಷಿಯಲ್ಲಿ ನೃತ್ಯ ಮಾಡುತ್ತಿದ್ದೀರಲ್ಲವೇ? ಹೌದು ಬಾಬಾ ಎಂದು ಎಲ್ಲರು ತಲೆ ಅಲುಗಾಡಿಸುತ್ತಿದ್ದಾರೆ. ಜನಕ್ ಮಗು ಕೂಡ ತುಂಬಾ ಮಧುರ ಮಧುರವಾಗಿ ಮುಗುಳ್ಳಗುತ್ತಿದ್ದಾರೆ. ಎಲ್ಲರೂ ತಂದೆಗೆ ನೆನಪಿನಲ್ಲಿದ್ದಾರೆ. ಆದರೆ ಎಷ್ಟು ಜನರ ಹೆಸರನ್ನು ಹೇಳುವುದು? ಅನೇಕ ಮಕ್ಕಳಿದ್ದಾರೆ ಆದ್ದರಿಂದ ಬಾಪ್ದಾದಾ ತಿಳಿಸುತ್ತಾರೆ ಪ್ರತಿಯೊಬ್ಬ ಮಗು ತಮ್ಮ ಹೆಸರಿನಲ್ಲಿ ಪರ್ಸನಲ್ ನೆನಪು ಪ್ರೀತಿ ಸ್ವೀಕಾರ ಮಾಡುತ್ತಿದ್ದಾರೆ ಮತ್ತು ಮಾಡುತ್ತಾ ಇರಿ. ಒಳ್ಳೆಯದು ಈಗ ಒಂದು ಸೆಕೆಂಡಿನಲ್ಲಿ ನಿರಾಕಾರಿ ಸ್ಥಿತಿಯಲ್ಲಿ ಸ್ಥಿತರಾಗಿ. ಒಳ್ಳೆಯದು. (ಡ್ರಿಲ್ ಮಾಡಿಸಿದರು)

ಲಿವಿಂಗ್ ವ್ಯಾಲ್ಯುಸ್ನಲ್ಲಿ ಟ್ರೈನಿಂಗ್ ನಡೆಯುತ್ತಿದೆ. ಒಳ್ಳೆಯ ಸೇವೆಯ ಸಾಧನವಾಗಿದೆ ಲಿವಿಂಗ್ ವ್ಯಾಲ್ಯುಸ್ ಮಾಡುತ್ತಾ ಮಾಡುತ್ತಾ ತಮ್ಮ ಲವ್ಲೀ ಲಿವಿಂಗ್ (ಪ್ರೀತಿ ತುಂಬಿದ ಜೀವನ) ವನ್ನು ಹೆಚ್ಚು ಮಾಡಿಕೊಳ್ಳಿ.

ಒಳ್ಳೆಯದು. ಬಾಪ್ದಾದಾ ಇಂದು ಒಂದು ಮಾತನ್ನು ಗುಲ್ಜಾರ್ ಮಗುವಿಗೆ ಹೇಳುತ್ತಿದ್ದಾರೆ ಹಾಗೂ ವಿಶೇಷ ಅಭಿನಂದನೆಗಳನ್ನು ತಿಳಿಸುತ್ತಿದ್ದಾರೆ-ಏನೆಂದರೆ ಬ್ರಹ್ಮಾ ತನುವಿನಲ್ಲಿ ಮಾಡಿದ ಸೇವೆಯಂತೆ ಈ ರಥವೂ ಸಹ 33 ವರ್ಷಗಳನ್ನು ಪೂರ್ತಿ ಮಾಡಿತು. ಇದೂ ಸಹ ಡ್ರಾಮಾದಲ್ಲಿ ಪಾತ್ರ ಇದೆ. ತಂದೆಯ ಸಹಾಯ ಮತ್ತು ಮಗುವಿನ ಸಾಹಸ ಎರಡು ಸೇರಿ ಪಾತ್ರವನ್ನು ಅಭಿನಯಿಸುತ್ತಿದ್ದಾರೆ.

ಒಳ್ಳೆಯದು, ಎಲ್ಲರು ಸದಾ ಸ್ನೇಹದ ಸಾಗರದಲ್ಲಿ ಸಮಾವೇಶ ಆಗಿರುವ, ಸದಾ ಪ್ರೀತಿಯಲ್ಲಿ ಲೀನವಾಗಿರುವ, ಸದಾ ಮಾಡಿಸುವಂತಹ ಆತ್ಮ ಸ್ವರೂಪದಲ್ಲಿ ಸ್ಥಿತರಾಗಿರುವ, ಸದಾ ಮೂರು ಶಬ್ದಗಳ ಶಿವ ಮಂತ್ರವನ್ನು ಪ್ರತ್ಯಕ್ಷ ಜೀವನದಲ್ಲಿ ತರುವಂತಹ ಸದಾ ತಂದೆಯ ಸಮಾನ ಮಾಸ್ಟರ್ ಮುಕ್ತಿದಾತನಾಗಿ ವಿಶ್ವದ ಆತ್ಮಗಳಿಗೆ ಮುಕ್ತಿಯನ್ನು ಕೊಡಿಸುವಂತಹ ಸರ್ವ ಶ್ರೇಷ್ಠ ಆತ್ಮಗಳಿಗೆ ಬಾಪ್ದಾದಾರವರ ನೆನಪು ಪ್ರೀತಿ ಮತ್ತು ನಮಸ್ತೆ.

ದಾದೀಜಿ ಅವರ ಜೊತೆ: ಇಂದಿನ ದಿನ ಮಕ್ಕಳನ್ನು, ತಂದೆಯು ವಿಶೇಷ ವಿಶ್ವದ ಮುಂದೆ ಪ್ರತ್ಯಕ್ಷ ಮಾಡಿದ್ದಾರೆ. ತಂದೆ ಮಾಡಿಸುವಂತಹವರಾದರು ಮತ್ತು ಮಕ್ಕಳನ್ನು ಮಾಡುವವರನ್ನಾಗಿ ಮಾಡಿದರು. ಚೆನ್ನಾಗಿದೆ ಈ ಸ್ನೇಹದ ಅಲೆ ಎಲ್ಲರನ್ನು ಸಮಾವೇಶ ಮಾಡಿಕೊಳ್ಳುತ್ತದೆ. ಒಳ್ಳೆಯದು ಶರೀರವನ್ನು ನಡೆಸುವಂತಹ ವಿಧಿ ಗೊತ್ತಾಯಿತ್ತಲ್ಲವೆ! ನಡೆಸುತ್ತಾ ನಡೆಸುತ್ತಾ ತಂದೆಯ ಸಮಾನ ಅವ್ಯಕ್ತರಾಗಿಬಿಡುತ್ತೀರಿ, ಆಶೀರ್ವಾದಗಳು, ಸಹಜ ಪುರುಷಾರ್ಥವಾಗಿದೆ. ಇಡೀ ದಿನದಲ್ಲಿ ಯಾರು ಬೇಜಾರು ಮಾಡಿಕೊಳ್ಳಬಾರದು, ಅಶೀರ್ವಾದಗಳನ್ನು ತೆಗೆದುಕೊಳ್ಳುವುದು ಇದು ಫಸ್ಟ್ ಕ್ಲಾಸ್ ಪುರುಷಾರ್ಥವಾಗಿದೆ ಸಹಜ ಮತ್ತು ಫಸ್ಟ್ ಕೂಡಾ ಆಗಿದೆ. ಚೆನ್ನಾಗಿವೆ ಅಲ್ಲವೇ? ಶರೀರ ಹೇಗಿದ್ದರು ಸರಿ ಆದರೆ ಆತ್ಮ ಶಕ್ತಿಶಾಲಿ ಆಗಿದೆ ಅಲ್ಲವೇ? ನೀವು ಎಲ್ಲಾ ಮಕ್ಕಳು 14 ವರ್ಷ ತಪಸ್ಸನ್ನು ಮಾಡಿದ್ದೀರಿ. ಆ ತಪಸ್ಸಿನ ಬಲ ಸೇವೆಯನ್ನು ಮಾಡಿಸುತ್ತಿದೆ. ಈಗಂತೂ ನಿಮಗೆ ತುಂಬಾ ಜೊತೆಗಾರರಾಗಿಬಿಟ್ಟಿದ್ದಾರೆ. ಸೇವೆಗೆ ಬಳ್ಳೆಯ ಜೊತಗಾರರಿದ್ದಾರೆ. ನಿಮ್ಮನ್ನು ನೋಡಿ ಖುಷಿ ಆಗುತ್ತಾರೆ. ಒಳ್ಳೆಯದು.

ವರಿಷ್ಟ ಅಣ್ಣಂದಿರ ಜೊತೆ: ಡ್ರಾಮಾ ಅನುಸಾರ ಸೇವೆಗಾಗಿ ಏನು ಪ್ಲಾನ್ಗಳು (ಯೋಜನೆಗಳು) ಆಗುತ್ತಿವೆ, ಅದು ಚೆನ್ನಾಗಿ ಆಗುತ್ತಿದೆ ಮತ್ತು ಪ್ರತಿಯೊಬ್ಬರು ಸದಾ ಸಂಘಟನೆಯಲ್ಲಿ ಸ್ನೇಹ ಮತ್ತು ಆಶೀರ್ವಾದಗಳನ್ನು ತೆಗೆದುಕೊಳ್ಳುವುದಕ್ಕಾಗಿ ಬಾಲಕರೇ ಮಾಲೀಕರು ಎಂಬ ಪಾಠವನ್ನು ಪಕ್ಕಾ ಮಾಡಿಕೊಂಡು ಒಬ್ಬರು ಇನ್ನೊಬ್ಬರನ್ನು ಮುಂದುವರೆಸುತ್ತಾ, ಒಬ್ಬರು ಇನ್ನೊಬ್ಬರ ವಿಚಾರಗಳಿಗೆ ಗೌರವ ಕೊಡುತ್ತಾ ಮುಂದುವರಿಯುತ್ತೀರೆಂದರೆ ಸಫಲತಯೇ ಸಫಲತೆ ಇದೆ. ಸಫಲತೆಯಂತೂ ಆಗಲೇ ಬೇಕಾಗಿದೆ. ಆದರೆ ಈಗ ಯಾರು ನಿಮಿತ್ತ ಆತ್ಮಗಳಿದ್ದಾರೆ, ಅವರನ್ನು ವಿಶೇಷ ಸ್ನೇಹದ ಸಂಬಂಧದಲ್ಲಿ ತರುವುದು, ಇದು ಎಲ್ಲರ ಪುರುಷಾರ್ಥವನ್ನು ತೀವ್ರ ಮಾಡುವುದಾಗಿದೆ. ಸ್ನೇಹ, ನಿಸ್ವಾರ್ಥ ಸ್ನೇಹ, ಎಲ್ಲಿ ನಿಸ್ವಾರ್ಥ ಸ್ನೇಹ ಇದೆ ಅಲ್ಲಿ ಗೌರವವನ್ನು ಸಹ ಕೊಡುತ್ತಾರೆ ಮತ್ತೆ ತೆಗೆದುಕೊಳ್ಳುತ್ತಾರೆ. ವರ್ತಮಾನ ಸಮಯದಲ್ಲಿ ಮಾಲೆಯಲ್ಲಿ ತಿರುಗಿಸುವುದು ಇದು ವಿಶೇಷ ಆತ್ಮಗಳ ಕಾರ್ಯವಾಗಿದೆ ಮತ್ತು ಇದರಿಂದಲೇ, ಸ್ನೇಹ ಸಂಸ್ಕಾರಗಳನ್ನು ಪರಿವರ್ತನೆ ಮಾಡಿಸಬಹುದು. ಜ್ಞಾನ ಪ್ರತಿಯೊಬ್ಬರ ಹತ್ತಿರ ಇದೆ ಆದರೆ ಸ್ನೇಹ ಯಾವುದೇ ರೀತಿಯ ಸಂಸ್ಕಾರವುಳ್ಳವರನ್ನು ಸಮೀಪ ತರಿಸಬಹುದು. ಸ್ನೇಹ ಕೇವಲ ಸ್ನೇಹದ ಎರಡು ಶಬ್ದ ಸದಾ ಕಾಲಕ್ಕಾಗಿ ಅವರ ಜೀವನದ ಆಶ್ರಯವಾಗಬಹುದು. ನಿಸ್ವಾರ್ಥ ಸ್ನೇಹ ಬಹಳಷ್ಟು ಬೇಗ ಮಾಲೆಯನ್ನು ತಯಾರು ಮಾಡುತ್ತದೆ. ಬ್ರಹ್ಮಾ ತಂದೆಯವರು ಏನು ಮಾಡಿದರು? ಸ್ನೇಹದಿಂದ ತನ್ನವರನ್ನಾಗಿ ಮಾಡಿಕೊಂಡರು. ಈಗ ಇದರ ಅವಶ್ಯಕತೆ ಇದೆ. ಈ ರೀತಿ ಇದೆಯಲ್ಲವೆ!

(ಸೋನಿಪತ್ ಬಗ್ಗೆ ಮೀಟಿಂಗ್ ನಡೆಯುತ್ತಿದೆ. ಅಲ್ಲಿ ಅನುಭೂತಿ ಮಾಡಿಸುವುದಕ್ಕಾಗಿ ಸಾಧನೆಗಳ ಉಪಯೋಗ ಹೇಗೆ ಮಾಡುವುದು)

ಅವರಂತೂ ಪ್ಲಾನನ್ನು ಮಾಡುತ್ತಿದ್ದಾರೆ, ಪ್ರತಿಯೊಬ್ಬರ ಸಂಕಲ್ಪ ವಿಚಾರಗಳನ್ನು ಯಾರು ವಿಶೇಷ ಹೆಚ್ಚು ಸ್ವೀಕಾರ ಮಾಡುತ್ತಾರೆ ಅದನ್ನು ಮಾಡಿ. ಯಾವಾಗ ನಾವು ಅನುಭೂತಿ ಸ್ವರೂಪರಾಗುತ್ತೇವೆ ಆಗ ಅನುಭೂತಿಯನ್ನು ಮಾಡಿಸಬಹದು ಒಳ್ಳೆಯದು.

ವರದಾನ:
ಧೃಡತೆಯ ಶಕ್ತಿಯ ಮೂಲಕ ಸಫಲತೆಯನ್ನು ಪ್ರಾಪ್ತಿ ಮಾಡಿಕೊಳ್ಳುವ ತ್ರಿಕಾಲದರ್ಶಿ ಆಸನಧಾರಿ ಭವ.

ಧೃಡತೆಯ ಶಕ್ತಿಯು ಶ್ರೇಷ್ಠ ಶಕ್ತಿಯಾಗಿದೆ, ಅದು ಹುಡುಗಾಟಿಕೆಯ ಶಕ್ತಿಯನ್ನು ಸಹಜವಾಗಿ ಪರಿವರ್ತನೆ ಮಾಡಿ ಬಿಡುತ್ತದೆ. ಬಾಪ್ದಾದಾರವರ ವರದಾನವಿದೆ - ಎಲ್ಲಿ ಧೃಡತೆಯಿದೆ ಅಲ್ಲಿ ಸಫಲತೆಯಿದ್ದೇ ಇರುತ್ತದೆ. ಕೇವಲ ಎಂತಹ ಸಮಯ, ಅಂತಹ ವಿಧಿಯಿಂದ ಸಿದ್ಧಿ ಸ್ವರೂಪರಾಗಿರಿ. ಯಾವುದೇ ಕರ್ಮವನ್ನು ಮಾಡುವುದಕ್ಕೆ ಮೊದಲು ಅದರ ಆದಿ-ಮಧ್ಯ-ಅಂತ್ಯವನ್ನು ಯೋಚಿಸಿ - ತಿಳಿದುಕೊಂಡು ಕಾರ್ಯವನ್ನು ಮಾಡಿರಿ ಮತ್ತು ಮಾಡಿಸಿರಿ ಅರ್ಥಾತ್ ತ್ರಿಕಾಲದರ್ಶಿ ಆಸನಧಾರಿ ಆಗಿರುತ್ತಿರೆಂದರೆ, ಹುಡುಗಾಟಿಕೆಯು ಸಮಾಪ್ತಿಯಾಗಿ ಬಿಡುತ್ತದೆ. ಸಂಕಲ್ಪವೆಂಬ ಬೀಜವು ಶಕ್ತಿಶಾಲಿ ಧೃಡತೆಯಿಂದ ಕೂಡಿರುತ್ತದೆಯೆಂದರೆ, ವಾಣಿ ಮತ್ತು ಕರ್ಮದಲ್ಲಿ ಸಹಜವಾಗಿ ಸಫಲತೆಯಿದ್ದೇ ಇರುತ್ತದೆ.

ಸ್ಲೋಗನ್:
ಸದಾ ಸಂತುಷ್ಟರಾಗಿದ್ದು ಸರ್ವರನ್ನು ಸಂತುಷ್ಟ ಪಡಿಸುವವರೇ ಸಂತುಷ್ಟ ಮಣಿಯಾಗಿದ್ದಾರೆ.