22.11.24 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ತಂದೆಯ
ಶ್ರೀಮತದಂತೆ ನಡೆಯುವುದೇ ತಂದೆಗೆ ಗೌರವ ಕೊಡುವುದಾಗಿದೆ, ಮನಮತದಂತೆ ನಡೆಯುವವರು ಅಗೌರವ
ಮಾಡುತ್ತಾರೆ”
ಪ್ರಶ್ನೆ:
ಗೃಹಸ್ಥ
ವ್ಯವಹಾರದಲ್ಲಿರುವವರಿಗೆ ಯಾವ ಒಂದು ಮಾತಿಗಾಗಿ ತಂದೆಯು ನಿರಾಕರಿಸುವುದಿಲ್ಲ ಆದರೆ ಒಂದು ಮಾತಿನ
ಸೂಚನೆ ನೀಡುತ್ತಾರೆ - ಅದು ಯಾವುದು?
ಉತ್ತರ:
ತಂದೆಯು
ತಿಳಿಸುತ್ತಾರೆ - ಮಕ್ಕಳೇ, ನೀವು ಭಲೆ ಎಲ್ಲರ ಸಂಬಂಧದಲ್ಲಿ ಬನ್ನಿ, ಯಾವುದೇ ನೌಕರಿ
ಇತ್ಯಾದಿಗಳನ್ನು ಮಾಡಿ, ಸಂಪರ್ಕದಲ್ಲಿ ಬರಬೇಕಾಗುತ್ತದೆ ಮತ್ತು ರಂಗಿನ ವಸ್ತ್ರಗಳನ್ನು
ಧರಿಸಬೇಕೆಂದರೆ ಭಲೆ ಧರಿಸಿ. ಅದನ್ನು ತಂದೆಯು ನಿರಾಕರಿಸುವುದಿಲ್ಲ. ತಂದೆಯಂತೂ ಕೇವಲ ಸೂಚನೆ
ನೀಡುತ್ತಾರೆ - ಮಕ್ಕಳೇ, ದೇಹಸಹಿತ ದೇಹದ ಎಲ್ಲಾ ಸಂಬಂಧಗಳಿಂದ ಮಮತ್ವವನ್ನು ತೆಗೆದು ನನ್ನನ್ನು
ನೆನಪು ಮಾಡಿ.
ಓಂ ಶಾಂತಿ.
ಶಿವತಂದೆಯು ಕುಳಿತು ಮಕ್ಕಳಿಗೆ ತಿಳಿಸುತ್ತಾರೆ ಅರ್ಥಾತ್ ತಮ್ಮ ಸಮಾನರನ್ನಾಗಿ ಮಾಡಿಕೊಳ್ಳುವ
ಪುರುಷಾರ್ಥ ಮಾಡಿಸುತ್ತಾರೆ. ಹೇಗೆ ನಾನು ಜ್ಞಾನದ ಸಾಗರನಾಗಿದ್ದೇನೆಯೋ ಅದೇ ರೀತಿ ಮಕ್ಕಳೂ ಆಗಲಿ.
ಇದನ್ನಂತೂ ಮಧುರ ಮಕ್ಕಳು ತಿಳಿದುಕೊಂಡಿದ್ದೀರಿ - ಎಲ್ಲರೂ ಒಂದೇ ಸಮಾನರಾಗುವುದಿಲ್ಲ.
ಪ್ರತಿಯೊಬ್ಬರೂ ತಮ್ಮ-ತಮ್ಮ ಪುರುಷಾರ್ಥ ಮಾಡುತ್ತಾರೆ. ಶಾಲೆಯಲ್ಲಿ ವಿದ್ಯಾರ್ಥಿಗಳು ಅನೇಕರು
ಓದುತ್ತಾರೆ ಆದರೆ ಎಲ್ಲರೂ ಒಂದೇ ಸಮಾನ ಪಾಸ್-ವಿತ್-ಆನರ್ ಆಗುವುದಿಲ್ಲ. ಆದರೂ ಸಹ ಶಿಕ್ಷಕರು
ಪುರುಷಾರ್ಥ ಮಾಡಿಸುತ್ತಾರೆ. ನೀವು ಮಕ್ಕಳೂ ಸಹ ಪುರುಷಾರ್ಥ ಮಾಡುತ್ತೀರಿ. ನೀವು ಏನಾಗುವಿರಿ ಎಂದು
ತಂದೆಯು ಪ್ರಶ್ನಿಸಿದರೆ ನಾವು ನರನಿಂದ ನಾರಾಯಣ, ನಾರಿಯಿಂದ ಲಕ್ಷ್ಮಿಯಾಗಲು ಬಂದಿದ್ದೇವೆಂದು
ಎಲ್ಲರೂ ಹೇಳುತ್ತಾರೆ. ಇದಂತೂ ಸರಿ ಆದರೆ ತಮ್ಮ ನಡವಳಿಕೆಯನ್ನು ನೋಡಿಕೊಳ್ಳಬೇಕಲ್ಲವೆ. ತಂದೆಯು
ಸರ್ವಶ್ರೇಷ್ಠನಾಗಿದ್ದಾರೆ, ಶಿಕ್ಷಕನೂ ಆಗಿದ್ದಾರೆ, ಗುರುವೂ ಆಗಿದ್ದಾರೆ. ಈ ತಂದೆಯನ್ನು ಯಾರೂ
ಅರಿತುಕೊಂಡಿಲ್ಲ. ನೀವು ಮಕ್ಕಳಿಗೆ ತಿಳಿದಿದೆ - ಶಿವತಂದೆಯು ನಮ್ಮ ತಂದೆಯೂ ಆಗಿದ್ದಾರೆ, ಶಿಕ್ಷಕ
ಮತ್ತು ಸದ್ಗುರುವೂ ಆಗಿದ್ದಾರೆ ಆದರೆ ಅವರು ಹೇಗಿದ್ದಾರೆಯೋ ಅದೇ ರೀತಿ ಅವರನ್ನು
ಅರ್ಥಮಾಡಿಕೊಳ್ಳುವುದು ಕಷ್ಟವಾಗಿದೆ. ತಂದೆಯನ್ನರಿತುಕೊಂಡರೆ ಶಿಕ್ಷಕನ ಸಂಬಂಧವು ಮರೆತುಹೋಗುತ್ತದೆ
ಮತ್ತೆ ಗುರುವಿನ ಸಂಬಂಧವು ಮರೆತುಹೋಗುತ್ತದೆ. ಮಕ್ಕಳು ತಂದೆಗೆ ಗೌರವವನ್ನಿಡಬೇಕಾಗುತ್ತದೆ. ಗೌರವ
ಎಂದು ಯಾವುದಕ್ಕೆ ಹೇಳಲಾಗುತ್ತದೆ? ತಂದೆಯು ಏನನ್ನು ಓದಿಸುವರೋ ಅದನ್ನು ಒಳ್ಳೆಯ ರೀತಿಯಲ್ಲಿ
ಓದುತ್ತೀರೆಂದರೆ ಅರ್ಥ - ಗೌರವ ಕೊಡುತ್ತೀರಿ. ತಂದೆಯು ಬಹಳ ಮಧುರರಾಗಿದ್ದಾರೆ, ಅಂದಮೇಲೆ ಮಕ್ಕಳಿಗೆ
ಆಂತರಿಕವಾಗಿ ಬಹಳ ಖುಷಿಯ ನಶೆಯೇರಿರಬೇಕು. ಅಪಾರವಾದ ಖುಷಿಯಿರುತ್ತದೆ. ಪ್ರತಿಯೊಬ್ಬರೂ ನಮಗೆ ಇಂತಹ
ಖುಷಿ ಇರುತ್ತದೆಯೇ ಎಂದು ತಮ್ಮೊಂದಿಗೆ ಕೇಳಿಕೊಳ್ಳಿ. ಎಲ್ಲರೂ ಒಂದೇ ಸಮನಾಗಿರಲು ಸಾಧ್ಯವಿಲ್ಲ.
ವಿದ್ಯೆಯಲ್ಲಿಯೂ ಬಹಳ ಅಂತರವಿದೆ, ಆ ಶಾಲೆಗಳಲ್ಲಿಯೂ ಎಷ್ಟೊಂದು ಅಂತರವಿರುತ್ತದೆ. ಅಲ್ಲಿ ಸಾಮಾನ್ಯ
ಶಿಕ್ಷಕರು ಓದಿಸುತ್ತಾರೆ ಆದರೆ ಇಲ್ಲಿ ಬೇಹದ್ದಿನ ತಂದೆಯು ಓದಿಸುತ್ತಾರೆ. ಇಂತಹ ಶಿಕ್ಷಕರು ಯಾರೂ
ಸಹ ಇರುವುದಿಲ್ಲ. ನಿರಾಕಾರ ತಂದೆಯು ಶಿಕ್ಷಕನಾಗಿ ಓದಿಸುತ್ತಾರೆಂಬುದು ಯಾರಿಗೂ ತಿಳಿದಿಲ್ಲ. ಭಲೆ
ಶ್ರೀಕೃಷ್ಣನ ಹೆಸರನ್ನಿಟ್ಟಿದ್ದಾರೆ ಆದರೆ ಕೃಷ್ಣನು ತಂದೆಯಾಗಲು ಹೇಗೆ ಸಾಧ್ಯವೆಂದು ಅವರಿಗೆ
ತಿಳಿದೇ ಇಲ್ಲ. ಕೃಷ್ಣನಂತೂ ದೇವತೆಯಾಗಿದ್ದರಲ್ಲವೆ. ಹಾಗೆ ನೋಡಿದರೆ ಅನೇಕರಿಗೆ ಕೃಷ್ಣನೆಂದು
ಹೆಸರಿರುತ್ತದೆ ಆದರೆ ಕೃಷ್ಣನೆಂದು ಹೇಳಿದತಕ್ಷಣವೇ ಶ್ರೀಕೃಷ್ಣನು ಸನ್ಮುಖದಲ್ಲಿ ಬಂದುಬಿಡುತ್ತಾನೆ.
ಶ್ರೀಕೃಷ್ಣನು ದೇಹಧಾರಿಯಾಗಿದ್ದಾನಲ್ಲವೆ! ನಿಮಗೆ ತಿಳಿದಿದೆ, ತಂದೆಗೆ ತನ್ನದೇ ಆದ ಶರೀರವಿಲ್ಲ.
ನಾನು ಶರೀರವನ್ನು ಲೋನ್ ಆಗಿ ಪಡೆದಿದ್ದೇನೆಂದು ತಾವೇ ಹೇಳುತ್ತಾರೆ. ಈ ಬ್ರಹ್ಮಾರವರು ಮೊದಲೂ
ಮನುಷ್ಯನಾಗಿದ್ದರು, ಈಗಲೂ ಮನುಷ್ಯನಾಗಿದ್ದಾರೆ. ಇವರು ಭಗವಂತನಲ್ಲ. ಶಿವತಂದೆಯೊಬ್ಬರೇ
ನಿರಾಕಾರನಾಗಿದ್ದಾರೆ, ಅವರು ನೀವು ಮಕ್ಕಳಿಗೆ ಎಷ್ಟೊಂದು ರಹಸ್ಯಗಳನ್ನು ತಿಳಿಸುತ್ತಾರೆ ಆದರೂ ಸಹ
ಅಷ್ಟು ನಿಶ್ಚಯದಿಂದ ತಂದೆಯೆಂದು ತಿಳಿಯುವುದು, ಶಿಕ್ಷಕರೆಂದು ತಿಳಿಯುವುದು ಇನ್ನೂ
ಸಾಧ್ಯವಾಗುವುದಿಲ್ಲ, ಪದೇ-ಪದೇ ಮರೆತುಹೋಗುತ್ತೀರಿ. ದೇಹಧಾರಿಗಳ ಕಡೆಗೆ ಬುದ್ಧಿಯು
ಹೊರಟುಹೋಗುತ್ತದೆ. ತಂದೆಯೇ ತಂದೆ-ಶಿಕ್ಷಕ-ಸದ್ಗುರುವಾಗಿದ್ದಾರೆ ಎಂಬ ಪಕ್ಕಾನಿಶ್ಚಯವು ಇನ್ನೂ
ಬಂದಿಲ್ಲ. ಈಗಂತೂ ಮರೆತುಹೋಗುತ್ತೀರಿ. ವಿದ್ಯಾರ್ಥಿಗಳೆಂದಾದರೂ ಶಿಕ್ಷಕರನ್ನು ಮರೆಯುತ್ತಾರೆಯೇ!
ಹಾಸ್ಟೆಲ್ನಲ್ಲಿರುವವರಂತೂ ಎಂದೂ ಮರೆಯುವುದಿಲ್ಲ. ಹಾಸ್ಟೆಲ್ ವಿದ್ಯಾರ್ಥಿಗಳಿಗಂತೂ ಪಕ್ಕಾ
ಇರುತ್ತದೆಯಲ್ಲವೆ. ಇಲ್ಲಂತೂ ಆ ಪಕ್ಕಾನಿಶ್ಚಯವೂ ಇಲ್ಲ - ನಂಬರ್ವಾರ್ ಪುರುಷಾರ್ಥದನುಸಾರ
ಹಾಸ್ಟೆಲ್ನಲ್ಲಿ ಕುಳಿತಿದ್ದೀರೆಂದರೆ ಅವಶ್ಯವಾಗಿ ವಿದ್ಯಾರ್ಥಿಗಳಾಗಿದ್ದೀರಿ ಆದರೆ ಇದು
ಪಕ್ಕಾನಿಶ್ಚಯವಿಲ್ಲ. ತಂದೆಗೆ ಗೊತ್ತಿದೆ - ಎಲ್ಲರೂ ತಮ್ಮ-ತಮ್ಮ ಪುರುಷಾರ್ಥದನುಸಾರ ಪದವಿಯನ್ನು
ತೆಗೆದುಕೊಳ್ಳುತ್ತಿದ್ದಾರೆ. ಆ ಲೌಕಿಕ ವಿದ್ಯೆಯಲ್ಲಾದರೂ ಕೆಲವರು ವಕೀಲರಾಗುತ್ತಾರೆ, ಕೆಲವರು
ಇಂಜಿನಿಯರ್, ವೈದ್ಯರಾಗುತ್ತಾರೆ. ಇಲ್ಲಿ ನೀವು ವಿಶ್ವದ ಮಾಲೀಕರಾಗುತ್ತೀರಿ. ಅಂದಮೇಲೆ ಇಂತಹ
ವಿದ್ಯಾರ್ಥಿಯ ಬುದ್ಧಿಯು ಹೇಗಿರಬೇಕು. ಚಲನೆ, ವಾರ್ತಾಲಾಪ ಎಷ್ಟು ಚೆನ್ನಾಗಿರಬೇಕು. ತಂದೆಯು
ತಿಳಿಸುತ್ತಾರೆ - ಮಕ್ಕಳೇ, ನೀವು ಎಂದೂ ಅಳಬಾರದು. ನೀವು ವಿಶ್ವದ ಮಾಲೀಕರಾಗುತ್ತೀರಿ. ಅಯ್ಯೊ
ದೇವರೇ! ಎನ್ನಬಾರದು. ಅಯ್ಯಯ್ಯೊ ಎನ್ನುವುದು ಹೆಚ್ಚಿನದಾಗಿ ಅಳುವುದಾಗಿದೆ. ತಂದೆಯಂತೂ
ತಿಳಿಸುತ್ತಾರೆ - ಯಾರು ಅಳುವರೋ ಅವರು ಕಳೆದುಕೊಳ್ಳುವರು. ವಿಶ್ವದ ಸರ್ವಶ್ರೇಷ್ಠ
ರಾಜ್ಯಭಾಗ್ಯವನ್ನೂ ಕಳೆದು ಕುಳಿತುಕೊಳ್ಳುತ್ತಾರೆ. ನಾವು ನರನಿಂದ ನಾರಾಯಣನಾಗಲು ಬಂದಿದ್ದೇವೆಂದು
ಹೇಳುತ್ತಾರೆ, ಆದರೆ ಆ ಚಲನೆಯೆಲ್ಲಿ! ನಂಬರ್ವಾರ್ ಪುರುಷಾರ್ಥದನುಸಾರ ಎಲ್ಲರೂ ಪುರುಷಾರ್ಥ
ಮಾಡುತ್ತಿದ್ದಾರೆ. ಕೆಲವರು ಒಳ್ಳೆಯ ರೀತಿಯಲ್ಲಿ ತೇರ್ಗಡೆಯಾಗಿ ವಿದ್ಯಾರ್ಥಿವೇತನವನ್ನು
ತೆಗೆದುಕೊಳ್ಳುತ್ತಾರೆ. ಇನ್ನೂ ಕೆಲವರು ಅನುತ್ತೀರ್ಣರಾಗಿಬಿಡುತ್ತಾರೆ. ನಂಬರ್ವಾರ್ ಅಂತೂ ಇದ್ದೇ
ಇರುತ್ತಾರೆ. ನಿಮ್ಮಲ್ಲಿಯೂ ಸಹ ಕೆಲವರು ಓದುತ್ತಾರೆ. ಕೆಲವರು ಓದುವುದೇ ಇಲ್ಲ. ಹೇಗೆ ಗ್ರಾಮೀಣ
ಪ್ರದೇಶದವರಿಗೆ ಓದುವುದು ಇಷ್ಟವಾಗುವುದಿಲ್ಲ. ಹುಲ್ಲು ಕೊಯ್ಯಲು ಹೇಳಿದರೆ ಬಹಳ ಖುಷಿಯಿಂದ
ಹೋಗುತ್ತಾರೆ. ಅದರಲ್ಲಿ ಅದೇ ಸ್ವತಂತ್ರ ಜೀವನವೆಂದು ತಿಳಿಯುತ್ತಾರೆ, ಓದುವುದು ಬಂಧನವೆಂದು
ತಿಳಿಯುತ್ತಾರೆ. ಹೀಗೂ ಅನೇಕರಿರುತ್ತಾರೆ, ಸಾಹುಕಾರರಲ್ಲಿ ಜಮೀನ್ದಾರರು ಕಡಿಮೆಯೇನಿಲ್ಲ. ತಮ್ಮನ್ನು
ಸ್ವತಂತ್ರರೆಂದು ಬಹಳ ಖುಷಿಯಿಂದ ತಿಳಿದುಕೊಳ್ಳುತ್ತಾರೆ, ನೌಕರಿ ಹೆಸರಂತೂ ಇರುವುದಿಲ್ಲವಲ್ಲವೆ.
ಕಛೇರಿಗಳಲ್ಲಿ ಮನುಷ್ಯರು ನೌಕರಿ ಮಾಡುತ್ತಾರಲ್ಲವೆ. ಈಗ ನೀವು ಮಕ್ಕಳನ್ನು ವಿಶ್ವದ ಮಾಲೀಕರನ್ನಾಗಿ
ಮಾಡಲು ತಂದೆಯು ಓದಿಸುತ್ತಾರೆ, ನೌಕರಿಗಾಗಿ ಓದಿಸುವುದಿಲ್ಲ. ನೀವಂತೂ ಈ ವಿದ್ಯೆಯಿಂದ ವಿಶ್ವದ
ಮಾಲೀಕರಾಗುವವರಿದ್ದೀರಿ ಅಂದಮೇಲೆ ಬಹಳ ಶ್ರೇಷ್ಠವಿದ್ಯೆಯಾಯಿತು. ನೀವಂತೂ ವಿಶ್ವದ ಮಾಲೀಕರು,
ಸಂಪೂರ್ಣ ಸ್ವತಂತ್ರರಾಗಿಬಿಡುತ್ತೀರಿ. ಎಷ್ಟು ಸಹಜ ಮಾತಾಗಿದೆ! ಒಂದೇ ವಿದ್ಯೆಯಾಗಿದೆ, ಇದರಿಂದ
ನೀವು ಇಷ್ಟು ಶ್ರೇಷ್ಠ, ಪವಿತ್ರ ಮಹಾರಾಜ-ಮಹಾರಾಣಿಯಾಗುತ್ತೀರಿ. ನೀವಂತೂ ಹೇಳುತ್ತೀರಿ - ಯಾವುದೇ
ಧರ್ಮದವರು ಇಲ್ಲಿ ಬಂದು ಓದಬಹುದೆಂದು. ಈ ವಿದ್ಯೆಯಂತೂ ಬಹಳ ಶ್ರೇಷ್ಠವಾಗಿದೆ ಎಂದು ತಿಳಿಯುತ್ತಾರೆ.
ವಿಶ್ವದ ಮಾಲೀಕರಾಗುತ್ತೀರಿ. ಇದನ್ನು ತಂದೆಯೇ ಓದಿಸುತ್ತಾರೆ, ನಿಮ್ಮದು ಈಗ ಎಷ್ಟೊಂದು
ವಿಶಾಲಬುದ್ಧಿಯಾಗಿದೆ, ಹದ್ದಿನ ಬುದ್ಧಿಯಿಂದ ಬೇಹದ್ದಿನ ಬುದ್ಧಿಯಲ್ಲಿ ನಂಬರ್ವಾರ್
ಪುರುಷಾರ್ಥದನುಸಾರ ಬಂದಿದ್ದೀರಿ. ನಾವೆಲ್ಲರೂ ಅನ್ಯರನ್ನು ವಿಶ್ವದ ಮಾಲೀಕರನ್ನಾಗಿ ಮಾಡಬೇಕೆಂದು
ಎಷ್ಟೊಂದು ಖುಷಿಯಿರುತ್ತದೆ. ವಾಸ್ತವದಲ್ಲಿ ಅಲ್ಲಿಯೂ ನೌಕರಿಯಿರುತ್ತದೆ, ದಾಸ-ದಾಸಿಯರು, ನೌಕರರು
ಮೊದಲಾದವರಂತೂ ಬೇಕಲ್ಲವೆ. ವಿದ್ಯಾವಂತರ ಮುಂದೆ ಅವಿದ್ಯಾವಂತರು ತಲೆಬಾಗುತ್ತಾರೆ ಆದ್ದರಿಂದಲೇ
ತಂದೆಯು ತಿಳಿಸುತ್ತಾರೆ - ನೀವು ಚೆನ್ನಾಗಿ ಓದಿದರೆ ಈ ರೀತಿಯಾಗಬಲ್ಲಿರಿ. ನಾವು ಇಂತಹ
ದೇವತೆಗಳಾಗುತ್ತೇವೆ ಎಂದು ಹೇಳುತ್ತಾರೆ ಆದರೆ ಓದದೇ ಇದ್ದರೆ ಏನಾಗುವಿರಿ! ಓದದಿದ್ದರೆ ತಂದೆಯನ್ನೂ
ಸಹ ಅಷ್ಟೊಂದು ಗೌರವದಿಂದ ನೆನಪು ಮಾಡುವುದಿಲ್ಲ. ಎಷ್ಟು ನೀವು ನೆನಪು ಮಾಡುತ್ತೀರಿ ಅಷ್ಟು ನಿಮ್ಮ
ವಿಕರ್ಮಗಳು ವಿನಾಶವಾಗುತ್ತವೆ ಎಂದು ತಂದೆಯು ತಿಳಿಸುತ್ತಾರೆ. ಬಾಬಾ, ತಾವು ಹೇಗಾದರೂ ನಡೆಸಿ ಎಂದು
ಮಕ್ಕಳು ಹೇಳುತ್ತೀರಿ. ತಂದೆಯೂ ಸಹ ಇವರ ಮೂಲಕವೇ ಮತವನ್ನು ಕೊಡುತ್ತಾರಲ್ಲವೆ. ಆದರೆ ಕೆಲವರು ಇವರ
ಮತವನ್ನೂ ಸಹ ತೆಗೆದುಕೊಳ್ಳದೇ ಇನ್ನು ಹಳೆಯ ಹಾಳಾಗಿರುವ ಮನುಷ್ಯರ ಮತದಂತೆಯೇ ನಡೆಯುತ್ತಾರೆ.
ಶಿವತಂದೆಯು ಈ ರಥದ ಮೂಲಕ ಮತವನ್ನು ಕೊಡುತ್ತಾರೆಂದು ನೋಡುತ್ತಾರೆ ಆದರೂ ತಮ್ಮ ಮತದಂತೆಯೇ
ನಡೆಯತೊಡಗುತ್ತಾರೆ. ಯಾವುದಕ್ಕೆ ಬಿಡಿಗಾಸಿನ ಕವಡೆಯ ಸಮಾನ ಮತವೆಂದು ಹೇಳುವರೋ ಅದರಂತೆಯೇ
ನಡೆಯುತ್ತಾರೆ. ರಾವಣನ ಮತದಂತೆ ನಡೆಯುತ್ತಾ-ನಡೆಯುತ್ತಾ ಈ ಸಮಯದಲ್ಲಿ ಕವಡೆಯ ಸಮಾನ
ಆಗಿಬಿಟ್ಟಿದ್ದಾರೆ. ಈಗ ರಾಮನಾದ ಶಿವತಂದೆಯು ಮತವನ್ನು ಕೊಡುತ್ತಾರೆ, ನಿಶ್ಚಯದಲ್ಲಿಯೇ ವಿಜಯವಿದೆ.
ಇದರಲ್ಲಿ ಎಂದೂ ನಷ್ಟವಾಗುವುದಿಲ್ಲ. ತಂದೆಯು ನಷ್ಟವನ್ನೂ ಸಹ ಆದಾಯದಲ್ಲಿ ಬದಲಾಯಿಸುತ್ತಾರೆ ಆದರೆ
ನಿಶ್ಚಯಬುದ್ಧಿಯವರಿಗೆ ಮಾತ್ರ. ಸಂಶಯಬುದ್ಧಿಯವರು ಒಳಗೆ ನುಂಗಲಾಗದೆ ಮೋಸವನ್ನು
ಅನುಭವಿಸುತ್ತಿರುತ್ತಾರೆ. ನಿಶ್ಚಯಬುದ್ಧಿಯವರೆಗೆ ಎಂದೂ ಮೋಸ ಅಥವಾ ನಷ್ಟವುಂಟಾಗಲು ಸಾಧ್ಯವಿಲ್ಲ.
ಶ್ರೀಮತದಂತೆ ನಡೆಯುವುದರಿಂದ ಎಂದಿಗೂ ಅಕಲ್ಯಾಣವಾಗಲು ಸಾಧ್ಯವಿಲ್ಲವೆಂದು ಸ್ವಯಂ ತಂದೆಯೇ ಆಶ್ವಾಸನೆ
ನೀಡುತ್ತಾರೆ. ಮನುಷ್ಯಮತಕ್ಕೆ ದೇಹಧಾರಿಗಳ ಮತವೆಂದು ಕರೆಯಲಾಗುತ್ತದೆ, ಇಲ್ಲಂತೂ ಇರುವುದೇ
ಮನುಷ್ಯಮತ. ಮನುಷ್ಯಮತ, ಈಶ್ವರೀಯ ಮತ ಮತ್ತು ದೈವೀಮತವೆಂದು ಗಾಯನವಿದೆ. ಈಗ ನಿಮಗೆ ಈಶ್ವರೀಯ ಮತವು
ಸಿಕ್ಕಿದೆ, ಇದರಿಂದ ನೀವು ಮನುಷ್ಯರಿಂದ ದೇವತೆಗಳಾಗುತ್ತೀರಿ ಮತ್ತು ಸ್ವರ್ಗದಲ್ಲಂತೂ ನೀವು
ಸುಖವನ್ನೇ ಪಡೆಯುತ್ತೀರಿ. ಯಾವುದೇ ದುಃಖದ ಮಾತಿಲ್ಲ, ಅದೂ ಸಹ ಸ್ಥಿರವಾದಂತಹ ಸುಖವಾಗಿಬಿಡುತ್ತದೆ.
ಈ ಸಮಯದಲ್ಲಿ ನೀವದನ್ನು ಅನುಭವದಲ್ಲಿ ತರಬೇಕಾಗಿದೆ ಆಗ ಭವಿಷ್ಯದಲ್ಲಿನ ಅನುಭವವಾಗುತ್ತದೆ.
ಈಗ ಇದು ಪುರುಷೋತ್ತಮ
ಸಂಗಮಯುಗವಾಗಿದೆ, ಈಗ ಶ್ರೀಮತವು ಸಿಗುತ್ತದೆ. ತಂದೆಯು ತಿಳಿಸುತ್ತಾರೆ - ನಾನು ಕಲ್ಪ-ಕಲ್ಪವೂ
ಕಲ್ಪದ ಸಂಗಮಯುಗದಲ್ಲಿ ಬರುತ್ತೇನೆ ಅದನ್ನು ನೀವು ತಿಳಿದುಕೊಂಡಿದ್ದೀರಿ. ಆ ತಂದೆಯ ಮತದಂತೆ ನೀವು
ನಡೆಯುತ್ತೀರಿ, ತಂದೆಯು ತಿಳಿಸುತ್ತಾರೆ - ಮಕ್ಕಳೇ, ಭಲೆ ಗೃಹಸ್ಥ ವ್ಯವಹಾರದಲ್ಲಿರಿ. ನೀವು
ವಸ್ತ್ರ ಇತ್ಯಾದಿಗಳನ್ನು ಬದಲಾಯಿಸಿ ಎಂದು ಯಾರು ಹೇಳುತ್ತಾರೆ? ಭಲೆ ಯಾವುದನ್ನಾದರೂ ಧರಿಸಿ,
ಅನೇಕರ ಸಂಬಂಧದಲ್ಲಿ ಬರಬೇಕಾಗುತ್ತದೆ. ರಂಗಿನ ವಸ್ತ್ರಗಳನ್ನು ತೊಡಬೇಡಿ ಎಂದು ಯಾರೂ
ನಿರಾಕರಿಸುವುದಿಲ್ಲ. ಯಾವ ವಸ್ತ್ರಗಳನ್ನಾದರೂ ಧರಿಸಿ, ಇದರೊಂದಿಗೇನೂ ಸಂಬಂಧವಿಲ್ಲ. ತಂದೆಯು
ತಿಳಿಸುತ್ತಾರೆ - ಕೇವಲ ದೇಹಸಹಿತ ದೇಹದ ಎಲ್ಲಾ ಸಂಬಂಧಗಳನ್ನು ಬಿಡಿ ಬಾಕಿ ಎಲ್ಲವನ್ನೂ ಧರಿಸಿ ಆದರೆ
ಕೇವಲ ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿ, ಇದನ್ನು ಪಕ್ಕಾನಿಶ್ಚಯ
ಮಾಡಿಕೊಳ್ಳಿ. ಇದೂ ಸಹ ನಿಮಗೆ ತಿಳಿದಿದೆ, ಆತ್ಮವೇ ಪತಿತ ಮತ್ತು ಪಾವನವಾಗುತ್ತದೆ. ಮಹಾತ್ಮರಿಗೂ
ಸಹ ಮಹಾನ್ ಆತ್ಮವೆಂದೇ ಹೇಳುತ್ತಾರೆ, ಮಹಾನ್ ಪರಮಾತ್ಮನೆಂದು ಹೇಳುವುದಿಲ್ಲ. ಹೀಗೆ ಹೇಳುವುದೂ ಸಹ
ಶೋಭಿಸುವುದಿಲ್ಲ. ತಿಳಿದುಕೊಳ್ಳುವಂತಹ ಎಷ್ಟು ಒಳ್ಳೆಯ ವಿಚಾರಗಳಾಗಿವೆ. ಸತ್ಗುರು ಸರ್ವರಿಗೆ
ಸದ್ಗತಿ ನೀಡುವವರು ಒಬ್ಬರೇ ತಂದೆಯಾಗಿದ್ದಾರೆ. ಸತ್ಯಯುಗದಲ್ಲಿ ಎಂದೂ ಅಕಾಲಮೃತ್ಯುವಾಗುವುದಿಲ್ಲ.
ತಂದೆಯು ನಮ್ಮನ್ನು ಪುನಃ ಇಂತಹ ದೇವತೆಗಳನ್ನಾಗಿ ಮಾಡುತ್ತಾರೆಂದು ಈಗ ನೀವು ಮಕ್ಕಳು
ತಿಳಿದುಕೊಳ್ಳುತ್ತೀರಿ. ಇದು ಮೊದಲು ಬುದ್ಧಿಯಲ್ಲಿರಲಿಲ್ಲ. ಕಲ್ಪದ ಆಯಸ್ಸು ಎಷ್ಟು ಎಂಬುದೂ ಸಹ
ತಿಳಿದಿರಲಿಲ್ಲ. ಈಗಂತೂ ಎಲ್ಲವೂ ಸ್ಮೃತಿಗೆ ಬಂದಿದೆ. ಇದನ್ನೂ ಸಹ ಮಕ್ಕಳು ತಿಳಿದುಕೊಂಡಿದ್ದೀರಿ.
ಆತ್ಮವನ್ನೇ ಪಾಪಾತ್ಮ, ಪುಣ್ಯಾತ್ಮ ಎಂದು ಕರೆಯಲಾಗುತ್ತದೆ. ಎಂದೂ ಕೂಡ ಪಾಪ ಪರಮಾತ್ಮನೆಂದು
ಹೇಳಲಾಗುವುದಿಲ್ಲ ಅಂದಮೇಲೆ ಪರಮಾತ್ಮ ಸರ್ವವ್ಯಾಪಿ ಎಂದು ಹೇಳುವುದಾದರೆ ಇದು ಎಷ್ಟೊಂದು ತಿಳುವಳಿಕೆ
ಹೀನವಾಗಿದೆ. ಇದನ್ನು ತಂದೆಯೇ ತಿಳಿಸುತ್ತಾರೆ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ಪ್ರತೀ
5000 ವರ್ಷಗಳ ನಂತರ ತಂದೆಯೇ ಬಂದು ಪಾಪಾತ್ಮರನ್ನು ಪುಣ್ಯಾತ್ಮರನ್ನಾಗಿ ಮಾಡುತ್ತಾರೆ, ಕೇವಲ
ಒಬ್ಬರನ್ನಲ್ಲ ಎಲ್ಲಾ ಮಕ್ಕಳನ್ನೂ ಮಾಡುತ್ತಾರೆ. ತಂದೆಯು ತಿಳಿಸುತ್ತಾರೆ - ನೀವು ಮಕ್ಕಳನ್ನು
ಪುಣ್ಯಾತ್ಮರನ್ನಾಗಿ ಮಾಡುವವನು ನಾನೊಬ್ಬನೇ ಬೇಹದ್ದಿನ ತಂದೆಯಾಗಿದ್ದೇನೆ. ಅವಶ್ಯವಾಗಿ ಮಕ್ಕಳಿಗೆ
ಅಪಾರವಾದ ಸುಖವನ್ನು ಕೊಡುತ್ತೇನೆ. ಸತ್ಯಯುಗದಲ್ಲಿ ಪವಿತ್ರಆತ್ಮಗಳಿರುತ್ತಾರೆ, ರಾವಣನ ಮೇಲೆ
ಜಯಗಳಿಸುವುದರಿಂದಲೇ ಪುಣ್ಯಾತ್ಮರಾಗಿಬಿಡುತ್ತೀರಿ. ನೀವಿದನ್ನು ಅನುಭವ ಮಾಡುತ್ತೀರಿ - ಮಾಯೆಯು
ಎಷ್ಟೊಂದು ವಿಘ್ನಗಳನ್ನು ಹಾಕುತ್ತದೆ. ಒಮ್ಮೆಲೆ ಮೂಗನ್ನು ಹಿಡಿದು ಉಸಿರನ್ನು ಕಟ್ಟುವಂತೆ
ಮಾಡುತ್ತದೆ. ಮಾಯೆಯೊಂದಿಗೆ ಯುದ್ಧವು ಹೇಗೆ ನಡೆಯುತ್ತದೆ ಎಂಬುದನ್ನು ನೀವು ತಿಳಿದುಕೊಂಡಿದ್ದೀರಿ
ಆದರೆ ಇದನ್ನೇ ಅವರು ಮತ್ತೆ ಕೌರವರು-ಪಾಂಡವರ ಯುದ್ಧ, ಸೈನ್ಯ ಇತ್ಯಾದಿ ಏನೇನನ್ನೋ ಕುಳಿತು
ಬರೆದಿದ್ದಾರೆ. ಈ ಯುದ್ಧದ ಬಗ್ಗೆ ಯಾರಿಗೂ ತಿಳಿದಿಲ್ಲ. ಇದು ಗುಪ್ತವಾಗಿದೆ, ನೀವೇ ಇದನ್ನು
ತಿಳಿದಿದ್ದೀರಿ. ಮಾಯೆಯೊಂದಿಗೆ ನಾವಾತ್ಮಗಳು ಯುದ್ಧ ಮಾಡಬೇಕಾಗಿದೆ. ತಂದೆಯು ತಿಳಿಸುತ್ತಾರೆ -
ಎಲ್ಲರಿಗಿಂತ ನಿಮಗೆ ದೊಡ್ಡ ಶತ್ರು ಕಾಮವಿಕಾರವಾಗಿದೆ. ಯೋಗಬಲದಿಂದ ನೀವು ಇದರ ಮೇಲೆ ವಿಜಯ
ಗಳಿಸುತ್ತೀರಿ. ಯೋಗಬಲದ ಅರ್ಥವನ್ನೂ ಸಹ ಯಾರೂ ತಿಳಿದುಕೊಂಡಿಲ್ಲ. ಯಾರು ಸತೋಪ್ರಧಾನರಾಗಿದ್ದರೋ
ಅವರೇ ತಮೋಪ್ರಧಾನರಾಗಿದ್ದಾರೆ. ಸ್ವಯಂ ತಂದೆಯೇ ತಿಳಿಸುತ್ತಾರೆ - ಬಹಳ ಜನ್ಮಗಳ ಅಂತಿಮದಲ್ಲಿ ನಾನು
ಇವರಲ್ಲಿ (ಬ್ರಹ್ಮಾ) ಪ್ರವೇಶ ಮಾಡುತ್ತೇನೆ. ಅವರೇ ತಮೋಪ್ರಧಾನರಾಗಿದ್ದಾರೆ, “ತತ್ತ್ವಂ”. ತಂದೆಯು
ಕೇವಲ ಒಬ್ಬರಿಗೇ ಹೇಳುವುದಿಲ್ಲ, ನಂಬರ್ವಾರ್ ಎಲ್ಲರಿಗೂ ಹೇಳುತ್ತಾರೆ. ಯಾರ್ಯಾರು ನಂಬರ್ವಾರ್
ಆಗಿದ್ದಾರೆಂದು ನಿಮಗೆ ತಿಳಿದಿದೆ. ಮುಂದೆಹೋದಂತೆ ನಿಮಗೆ ಬಹಳಷ್ಟು ತಿಳಿಯುತ್ತಾ ಹೋಗುತ್ತದೆ.
ನಿಮಗೆ ಮಾಯೆಯ ಸಾಕ್ಷಾತ್ಕಾರವನ್ನು ಮಾಡಿಸುತ್ತೇನೆ. ಶಾಲೆಯಲ್ಲಿ ವಿದ್ಯಾರ್ಥಿಗಳು ವರ್ಗಾಯಿತರಾದಾಗ
ಎಲ್ಲವೂ ತಿಳಿಯುತ್ತದೆಯಲ್ಲವೆ, ಫಲಿತಾಂಶವು ಹೊರಬರುತ್ತದೆ.
ತಂದೆಯು ಮಗುವಿನೊಂದಿಗೆ
ಕೇಳಿದರು - ನಿಮ್ಮ ಪ್ರಶ್ನೆಪತ್ರಿಕೆಯು ಎಲ್ಲಿಂದ ಬರುತ್ತದೆ? ಲಂಡನ್ನಿಂದ ಎಂದು ಹೇಳಿದರು. ಈಗ
ನಿಮ್ಮ ಪ್ರಶ್ನೆಪತ್ರಿಕೆಗಳು ಎಲ್ಲಿಂದ ಬರುತ್ತವೆ? ಮೇಲಿನಿಂದ. ನಿಮ್ಮ ಪತ್ರಿಕೆಗಳು ಮೇಲಿನಿಂದ
ಬರುತ್ತವೆ. ಎಲ್ಲವನ್ನೂ ಸಾಕ್ಷಾತ್ಕಾರ ಮಾಡುತ್ತೀರಿ. ಇದು ಎಂತಹ ವಿಚಿತ್ರವಾದ ವಿದ್ಯೆಯಾಗಿದೆ.
ಯಾರು ಓದಿಸುತ್ತಾರೆಂಬುದು ಯಾರಿಗೂ ತಿಳಿದಿಲ್ಲ. ಕೃಷ್ಣಭಗವಾನುವಾಚ ಎಂದು ಹೇಳಿಬಿಡುತ್ತಾರೆ.
ವಿದ್ಯೆಯಲ್ಲಿ ಎಲ್ಲರೂ ನಂಬರ್ವಾರ್ ಇದ್ದಾರೆ ಅಂದಮೇಲೆ ಖುಷಿಯೂ ಸಹ ನಂಬರ್ವಾರ್ ಆಗುತ್ತದೆ.
ಅತೀಂದ್ರಿಯ ಸುಖವನ್ನು ಗೋಪ-ಗೋಪಿಯರೊಂದಿಗೆ ಕೇಳಿ ಎಂದು ಯಾವ ಗಾಯನವಿದೆಯೋ ಇದು ಅಂತಿಮದ ಮಾತಾಗಿದೆ.
ತಂದೆಯು ತಿಳಿಸಿದ್ದಾರೆ - ಈ ಮಕ್ಕಳು ಎಂದೂ ಕೆಳಗೆ ಬೀಳುವವರಲ್ಲ ಎಂದು ಭಲೆ ತಂದೆಗೆ ಗೊತ್ತಿದೆ
ಆದರೂ ಸಹ ಏನಾಗುವುದೋ ಗೊತ್ತಿಲ್ಲ, ವಿದ್ಯೆಯನ್ನೇ ಓದುವುದಿಲ್ಲ, ಅದೃಷ್ಟದಲ್ಲಿಲ್ಲ. ಹೋಗಿ ಆ
ಪ್ರಪಂಚದಲ್ಲಿ ತಮ್ಮ ಮನೆ ಸೇರಿಕೊಳ್ಳಿ ಎಂದು ಅವರಿಗೆ ಹೇಳಲಾಗುತ್ತದೆಯೇ? ಎಲ್ಲಿಂದ ಹೊರಟು ಎಲ್ಲಿಗೆ
ಹೊರಟುಹೋಗುತ್ತಾರೆ. ಅವರ ಚಲನ-ವಲನ ಮಾತನಾಡುವುದು, ಮಾಡುವುದೂ ಈ ರೀತಿಯಿರುತ್ತದೆ. ನಮಗೆ ಒಂದುವೇಳೆ
ಇಷ್ಟೊಂದು ಸಿಕ್ಕಿದರೆ ನಾವು ಹೋಗಿ ಬೇರೆ ಇರುವೆವೆಂದು ತಿಳಿದುಕೊಳ್ಳುತ್ತಾರೆ. ಚಲನೆಯಿಂದಲೇ
ತಿಳಿದುಕೊಳ್ಳಬಹುದು ಅಂದರೆ ಇದರ ಅರ್ಥ ನಿಶ್ಚಯವಿಲ್ಲ, ಸುಮ್ಮನೆ ಕುಳಿತುಕೊಂಡಿದ್ದಾರೆ. ಅನೇಕರು
ಜ್ಞಾನ ಏನು”ಎಂಬುದನ್ನೂ ತಿಳಿದುಕೊಂಡಿಲ್ಲ. ಎಂದೂ ಕುಳಿತುಕೊಳ್ಳುವುದೇ ಇಲ್ಲ. ಮಾಯೆಯು ಓದಲು
ಬಿಡುವುದಿಲ್ಲ. ಹೀಗೆ ಎಲ್ಲಾ ಸೇವಾಕೇಂದ್ರಗಳಲ್ಲಿಯೂ ಇದ್ದಾರೆ. ಎಂದೂ ಸಹ ಓದಲು ಬರುವುದಿಲ್ಲ, ಇದು
ಆಶ್ಚರ್ಯವಲ್ಲವೆ. ಎಷ್ಟೊಂದು ಶ್ರೇಷ್ಠಕಾರ್ಯವಾಗಿದೆ. ಇದನ್ನು ಭಗವಂತನೇ ಓದಿಸುತ್ತಾರೆ. ಈ
ಕೆಲಸವನ್ನು ಮಾಡಬೇಡಿ ಎಂದು ತಂದೆಯು ಹೇಳಿದರೆ ಅವರು ಒಪ್ಪುವುದೇ ಇಲ್ಲ. ಅವರು ಖಂಡಿತ
ಉಲ್ಟಾಕೆಲಸವನ್ನೇ ಮಾಡಿ ತೋರಿಸುತ್ತಾರೆ. ರಾಜಧಾನಿಯು ಸ್ಥಾಪನೆಯಾಗುತ್ತಿದೆ, ಅದರಲ್ಲಿ ಎಲ್ಲಾ
ಪ್ರಕಾರದವರೂ ಬೇಕಲ್ಲವೆ. ಮೇಲಿನಿಂದ ಹಿಡಿದು ಕೆಳಗಿನವರೆಗೆ ಎಲ್ಲರೂ ಇಲ್ಲಿಯೇ ಪದವಿಯನ್ನು
ನಿಗಧಿಪಡಿಸಿಕೊಳ್ಳುತ್ತಾರೆ. ಪದವಿಯಲ್ಲಿ ಅಂತರವಿರುತ್ತದೆಯಲ್ಲವೆ. ಇಲ್ಲಿಯೂ ನಂಬರ್ವಾರ್
ಪದವಿಗಳಿವೆ. ಕೇವಲ ಇದರಲ್ಲಿ ಅಂತರವೇನಿದೆ? ಅಲ್ಲಿ ಧೀರ್ಘಾಯಸ್ಸು ಮತ್ತು ಸುಖವಿರುತ್ತದೆ ಮತ್ತು
ಇಲ್ಲಿ ಆಯಸ್ಸೂ ಕಡಿಮೆ ಮತ್ತು ಬಹಳಷ್ಟು ದುಃಖವಿದೆ. ಮಕ್ಕಳ ಬುದ್ಧಿಯಲ್ಲಿ ಈ ಅದ್ಭುತವಾದ
ಮಾತುಗಳಿವೆ. ನಾಟಕವು ಹೇಗೆ ಮಾಡಲ್ಪಟ್ಟಿದೆ ಮತ್ತೆ ಕಲ್ಪ-ಕಲ್ಪವೂ ಸಹ ನಾವು ಅದೇ
ಪಾತ್ರವನ್ನಭಿಯಿಸುತ್ತೇವೆ. ಕಲ್ಪ-ಕಲ್ಪವೂ ಅಭಿನಯಿಸುತ್ತಲೇ ಇರುತ್ತೇವೆ. ಇಷ್ಟೊಂದು ಚಿಕ್ಕದಾದ
ಆತ್ಮನಲ್ಲಿ ಎಷ್ಟೊಂದು ಪಾತ್ರವು ತುಂಬಲ್ಪಟ್ಟಿದೆ. ಅದೇ ಚಟುವಟಿಕೆ, ಅದೇ ಮುಖಲಕ್ಷಣಗಳು....... ಈ
ಸೃಷ್ಟಿಚಕ್ರವು ಸುತ್ತುತ್ತಲೇ ಇರುತ್ತದೆ. ಮಾಡಿ-ಮಾಡಲ್ಪಟ್ಟಿರುವುದೇ ನಡೆಯುತ್ತಿದೆ....... ಈ
ಚಕ್ರವು ಮತ್ತೆ ಪುನರಾವರ್ತನೆಯಾಗುವುದು. ಸತೋಪ್ರಧಾನ, ಸತೋ, ರಜೋ, ತಮೋದಲ್ಲಿ ಬರುತ್ತೀರಿ,
ಇದರಲ್ಲಿ ತಬ್ಬಿಬ್ಬಾಗುವ ಮಾತಿಲ್ಲ. ಒಳ್ಳೆಯದು- ತಮ್ಮನ್ನು ಆತ್ಮವೆಂದು ತಿಳಿಯುತ್ತೀರಾ? ಆತ್ಮದ
ತಂದೆಯು ಶಿವತಂದೆಯಾಗಿದ್ದಾರೆ ಎಂಬುದನ್ನಂತೂ ತಿಳಿದುಕೊಂಡಿದ್ದೀರಲ್ಲವೆ. ಯಾರು ಸತೋಪ್ರಧಾನರಾಗುವರೋ
ಅವರೇ ಮತ್ತೆ ತಮೋಪ್ರಧಾನದರು ಆಗುತ್ತಾರೆ ಮತ್ತೆ ತಂದೆಯನ್ನು ನೆನಪು ಮಾಡಿದರೆ
ಸತೋಪ್ರಧಾನರಾಗಿಬಿಡುತ್ತೀರಿ. ಇದು ಒಳ್ಳೆಯದಲ್ಲವೆ! ಇಲ್ಲಿಯವರೆಗೆ ತಂದು ನಿಲ್ಲಿಸಬೇಕು. ತಿಳಿಸಿ,
ಬೇಹದ್ದಿನ ತಂದೆಯು ಸ್ವರ್ಗದ ಆಸ್ತಿಯನ್ನು ಕೊಡುತ್ತಾರೆ. ಅವರೇ ಪತಿತ-ಪಾವನನಾಗಿದ್ದಾರೆ. ತಂದೆಯು
ಜ್ಞಾನವನ್ನು ತಿಳಿಸುತ್ತಾರೆ ಇದರಲ್ಲಿ ಶಾಸ್ತ್ರಗಳ ಮಾತಿಲ್ಲ. ಶಾಸ್ತ್ರಗಳು ಎಲ್ಲಿಂದ ಬರುತ್ತವೆ,
ಯಾವಾಗ ಜನಸಂಖ್ಯೆಯು ಹೆಚ್ಚಾಗುವುದೋ ಆಗ ನಂತರದಲ್ಲಿ ಈ ಶಾಸ್ತ್ರಗಳನ್ನು ರಚಿಸುತ್ತಾರೆ.
ಸತ್ಯಯುಗದಲ್ಲಿ ಶಾಸ್ತ್ರಗಳಿರುವುದಿಲ್ಲ. ಪರಂಪರೆಯಂತೂ ಯಾವುದೇ ವಸ್ತುವಿರುವುದಿಲ್ಲ. ನಾಮ-ರೂಪವಂತೂ
ಬದಲಾಗಿಬಿಡುತ್ತದೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ
ನಮಸ್ತೆ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಎಂದೂ ಅಯ್ಯೊ!
ಅಯ್ಯೊ! ಎನ್ನಬಾರದು. ಬುದ್ಧಿಯಲ್ಲಿರಲಿ - ನಾವು ವಿಶ್ವದ ಮಾಲೀಕರಾಗುವವರಿದ್ದೇವೆ ಆದ್ದರಿಂದ ನಮ್ಮ
ಚಲನೆ, ವಾರ್ತಾಲಾಪ ಬಹಳ ಚೆನ್ನಾಗಿರಬೇಕು, ಎಂದೂ ಅಳಬಾರದು.
2. ನಿಶ್ಚಯಬುದ್ಧಿಯವರಾಗಿ
ಒಬ್ಬ ತಂದೆಯ ಮತದಂತೆ ನಡೆಯುತ್ತಾ ಇರಬೇಕಾಗಿದೆ, ಎಂದೂ ತಬ್ಬಿಬ್ಬಾಗುವುದು ಅಥವಾ ಗುಟುಕರಿಸಬಾರದು.
ನಿಶ್ಚಯದಲ್ಲಿಯೇ ವಿಜಯವಿದೆ ಆದ್ದರಿಂದ ತಮ್ಮ ಬಿಡಿಗಾಸಿನ ಮತವನ್ನು ನಡೆಸಬಾರದು.
ವರದಾನ:
ಯಾವುದೇ
ಪರಿಸ್ಥಿತಿಯಲ್ಲಿ ಪೂರ್ಣ ವಿರಾಮವನ್ನಿಟ್ಟು ಸ್ವಯಂನ್ನು ಪರಿವರ್ತನೆ ಮಾಡುವಂತಹ ಸರ್ವರ
ಆಶೀರ್ವಾದಗಳಿಗೆ ಪಾತ್ರ ಭವ.
ಯಾವುದೇ ಪರಿಸ್ಥಿತಿಯಲ್ಲಿ
ಪೂರ್ಣ ವಿರಾಮವನ್ನು ಆಗ ಇಡುವುದಕ್ಕೆ ಸಾಧ್ಯ, ಯಾವಾಗ ಬಿಂದೂ ಸ್ವರೂಪ ತಂದೆ ಮತ್ತು ಬಿಂದೂ ಸ್ವರೂಪ
ಆತ್ಮವೆರಡರ ಸ್ಮೃತಿಯಿರುತ್ತದೆ. ನಿಯಂತ್ರಣಾ ಶಕ್ತಿಯಿರುತ್ತದೆ. ಯಾವ ಮಕ್ಕಳು ಯಾವುದೇ
ಪರಿಸ್ಥಿತಿಯಲ್ಲಿ ಸ್ವಯಂನ್ನು ಪರಿವರ್ತನೆ ಮಾಡಿಕೊಂಡು ಪೂರ್ಣ ವಿರಾಮವನ್ನಿಡುವುದರಲ್ಲಿ ಸ್ವಯಂನ್ನು
ಮೊದಲು ಆಫರ್ ಮಾಡುತ್ತಾರೆ, ಅವರು ಆಶೀರ್ವಾದಗಳಿಗೆ ಪಾತ್ರರಾಗಿ ಬಿಡುತ್ತಾರೆ. ಅವರು ಸ್ವಯಂಗೆ
ಸ್ವಯಂ ಸಹ ಆಶೀರ್ವಾದಗಳು ಅರ್ಥಾತ್ ಖುಷಿ ಸಿಗುತ್ತದೆ, ತಂದೆಯ ಮೂಲಕ ಮತ್ತು ಬ್ರಾಹ್ಮಣ ಪರಿವಾರದ
ಮೂಲಕವೂ ಆಶೀರ್ವಾದಗಳು ಸಿಗುತ್ತವೆ.
ಸ್ಲೋಗನ್:
ಯಾವ
ಸಂಕಲ್ಪವನ್ನು ಮಾಡುತ್ತೀರಿ, ಅದಕ್ಕೆ ಮಧ್ಯ ಮಧ್ಯದಲ್ಲಿ ಧೃಡತೆಯ ಸ್ಟಾಂಪ್ ಅನ್ನು ಹಾಕಿರಿ, ಆಗ
ವಿಜಯಿಯಾಗಿ ಬಿಡುತ್ತೀರಿ.