23.01.25 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ -
ಮುಖ್ಯವಾಗಿ ಎರಡು ಮಾತುಗಳನ್ನು ಎಲ್ಲರಿಗೂ ತಿಳಿಸಬೇಕಾಗಿದೆ - ಮೊದಲನೆಯದಾಗಿ ತಂದೆಯನ್ನು ನೆನಪು
ಮಾಡಿ, ಎರಡನೆಯದು 84 ಜನ್ಮಗಳ ಚಕ್ರವನ್ನು ಅರಿತುಕೊಳ್ಳಿ ಆಗ ಎಲ್ಲಾ ಪ್ರಶ್ನೆಗಳು
ಸಮಾಪ್ತಿಯಾಗುತ್ತವೆ”
ಪ್ರಶ್ನೆ:
ತಂದೆಯ
ಮಹಿಮೆಯಲ್ಲಿ ಯಾವ ಶಬ್ಧಗಳು ಬರುತ್ತವೆ, ಅವು ಶ್ರೀಕೃಷ್ಣನ ಮಹಿಮೆಯಲ್ಲಿಲ್ಲ?
ಉತ್ತರ:
ವೃಕ್ಷಪತಿ ಒಬ್ಬ
ತಂದೆಯೇ ಆಗಿದ್ದಾರೆ. ಶ್ರೀಕೃಷ್ಣನಿಗೆ ವೃಕ್ಷಪತಿಯೆಂದು ಹೇಳುವುದಿಲ್ಲ. ತಂದೆಯರ ತಂದೆ, ಪತಿಯರ ಪತಿ
ಎಂದು ಒಬ್ಬ ತಂದೆಗೇ ಹೇಳಲಾಗುತ್ತದೆ, ಶ್ರೀಕೃಷ್ಣನಿಗಲ್ಲ. ಇಬ್ಬರ ಮಹಿಮೆಯನ್ನೂ ಬೇರೆ-ಬೇರೆಯಾಗಿ
ಸ್ಪಷ್ಟಮಾಡಿ.
ಪ್ರಶ್ನೆ:
ನೀವು ಮಕ್ಕಳು
ಹಳ್ಳಿ-ಹಳ್ಳಿಯಲ್ಲಿ ಯಾವ ಡಂಗುರವನ್ನು ಸಾರಬೇಕು?
ಉತ್ತರ:
ಹಳ್ಳಿ-ಹಳ್ಳಿಯಲ್ಲಿ ಡಂಗುರವನ್ನು ಸಾರಬೇಕು - ಮನುಷ್ಯರಿಂದ ದೇವತೆ, ನರಕವಾಸಿಯಿಂದ ಸ್ವರ್ಗವಾಸಿ
ಹೇಗಾಗಬಹುದೆಂಬುದನ್ನು ಬಂದು ತಿಳಿದುಕೊಳ್ಳಿ. ಸ್ಥಾಪನೆ, ವಿನಾಶವು ಹೇಗಾಗುತ್ತದೆ ಎಂಬುದನ್ನು ಬಂದು
ತಿಳಿಯಿರಿ.
ಗೀತೆ:
ನೀವೇ ತಂದೆ,
ನೀವೇ ತಾಯಿಯಾಗಿದ್ದೀರಿ..................
ಓಂ ಶಾಂತಿ.
ಈ ಗೀತೆಯ ಕೊನೆಯ ಯಾವ ಸಾಲು ಬರುತ್ತದೆ - ನೀವೇ ಅಂಬಿಗ, ನೀವೇ ದೋಣಿಯೂ ಆಗಿದ್ದೀರಿ..... ಇದು
ತಪ್ಪಾಗಿದೆ. ಹೇಗೆ ತಾವೇ ಪೂಜ್ಯ, ತಾವೇ ಪೂಜಾರಿಯೆಂದು ಹೇಳುತ್ತಾರೆಯೋ ಇದೂ ಸಹ ಅದೇ
ರೀತಿಯಾಗಿಬಿಡುತ್ತದೆ. ಜ್ಞಾನವನ್ನು ಯಥಾರ್ಥವಾಗಿ ಅರ್ಥ ಮಾಡಿಕೊಂಡಿರುವವರು ತಕ್ಷಣ ಗೀತೆಯನ್ನು
ನಿಲ್ಲಿಸಿಬಿಡುತ್ತಾರೆ ಏಕೆಂದರೆ ತಂದೆಯ ನಿಂದನೆಯಾಗಿಬಿಡುತ್ತದೆ. ಈಗ ನೀವು ಮಕ್ಕಳಿಗೆ ಜ್ಞಾನವು
ಸಿಕ್ಕಿದೆ, ಅನ್ಯ ಮನುಷ್ಯರಿಗೆ ಈ ಜ್ಞಾನವಿಲ್ಲ. ನಿಮಗೂ ಸಹ ಈ ಸಮಯದಲ್ಲಿಯೇ ಸಿಗುತ್ತದೆ, ಮತ್ತೆಂದೂ
ಈ ಜ್ಞಾನವಿರುವುದಿಲ್ಲ. ಗೀತೆಯ ಭಗವಂತನಿಂದ ಪುರುಷೋತ್ತಮರಾಗುವ ಜ್ಞಾನವು ಸಿಗುತ್ತದೆ
ಎಂಬುದನ್ನಷ್ಟೆ ತಿಳಿಯುತ್ತಾರೆ ಆದರೆ ಯಾವಾಗ ಸಿಗುತ್ತದೆ, ಹೇಗೆ ಸಿಗುತ್ತದೆ - ಇದನ್ನು
ಮರೆತುಹೋಗಿದ್ದಾರೆ. ಗೀತೆಯೇ ಧರ್ಮಸ್ಥಾಪನೆಯ ಶಾಸ್ತ್ರವಾಗಿದೆ, ಮತ್ತ್ಯಾವುದೇ ಶಾಸ್ತ್ರಗಳು
ಧರ್ಮಸ್ಥಾಪನಾರ್ಥವಾಗಿ ಇರುವುದಿಲ್ಲ. ಶಾಸ್ತ್ರ ಎಂಬ ಶಬ್ಧವನ್ನೂ ಸಹ ಭಾರತದಲ್ಲಿಯೇ ಬಳಸಲಾಗುತ್ತದೆ.
ಸರ್ವಶಾಸ್ತ್ರಮಯಿ ಶಿರೋಮಣಿ ಗೀತೆಯಾಗಿದೆ. ಉಳಿದೆಲ್ಲಾ ಶಾಸ್ತ್ರಗಳು ಕೊನೆಯಲ್ಲಿ ಬರುತ್ತವೆ,
ಅವುಗಳಿಗೆ ಶಿರೋಮಣಿ ಎಂದು ಕರೆಯುವುದಿಲ್ಲ. ಮಕ್ಕಳಿಗೆ ತಿಳಿದಿದೆ - ವೃಕ್ಷಪತಿ ತಂದೆಯು ಒಬ್ಬರೇ
ಆಗಿದ್ದಾರೆ, ಅವರು ನಮ್ಮ ತಂದೆಯಾಗಿದ್ದಾರೆ, ಪತಿಯೂ ಆಗಿದ್ದಾರೆ ಮತ್ತು ಎಲ್ಲರ ಪಿತನೂ ಆಗಿದ್ದಾರೆ.
ಅವರಿಗೆ ಪತಿಯರ ಪತಿ, ತಂದೆಯರ ತಂದೆಯೆಂದು ಹೇಳಲಾಗುತ್ತದೆ. ಈ ಮಹಿಮೆಯು ಒಬ್ಬ ನಿರಾಕಾರನಿಗೇ
ಮಾಡಲಾಗುತ್ತದೆ. ಕೃಷ್ಣ ಮತ್ತು ನಿರಾಕಾರ ತಂದೆಯ ಮಹಿಮೆಯನ್ನು ಹೋಲಿಕೆ ಮಾಡಲಾಗುತ್ತದೆ.
ಶ್ರೀಕೃಷ್ಣನು ಹೊಸ ಪ್ರಪಂಚದ ರಾಜಕುಮಾರನಾಗಿದ್ದಾನೆ ಅಂದಮೇಲೆ ಮತ್ತೆ ಹಳೆಯ ಪ್ರಪಂಚದಲ್ಲಿ
ಸಂಗಮಯುಗದಲ್ಲಿ ರಾಜಯೋಗವನ್ನು ಹೇಗೆ ಕಲಿಸುವನು! ಈಗ ನಮಗೆ ಭಗವಂತನೇ ಓದಿಸುತ್ತಿದ್ದಾರೆಂದು ನೀವು
ಮಕ್ಕಳು ತಿಳಿದುಕೊಂಡಿದ್ದೀರಿ. ನೀವೇ ಓದಿ ಈ ದೇವಿ-ದೇವತೆಗಳಾಗುತ್ತೀರಿ. ದೇವತೆಗಳಾದಮೇಲೆ ಈ
ಜ್ಞಾನವು ನಡೆಯುವುದಿಲ್ಲ ಪ್ರಾಯಃಲೋಪವಾಗಿಬಿಡುತ್ತದೆ ಬಾಕಿ ಹಿಟ್ಟಿನಲ್ಲಿ ಉಪ್ಪಿನಷ್ಟು ಅಂದರೆ
ಕೆಲವೊಂದು ಚಿತ್ರಗಳು ಮಾತ್ರ ಉಳಿಯುತ್ತದೆ. ವಾಸ್ತವದಲ್ಲಿ ಯಾರ ಚಿತ್ರವೂ ಯಥಾರ್ಥವಾಗಿಲ್ಲ.
ಮೊಟ್ಟಮೊದಲು ತಂದೆಯ ಪರಿಚಯವು ಸಿಗುವುದು ಅದರ ಆಧಾರದಿಂದ ಭಗವಂತನು ತಿಳಿಸುತ್ತಾರೆಂದು ಹೇಳುತ್ತೀರಿ.
ಸ್ವಯಂ ಅವರೇ ತಿಳಿಸುತ್ತಾರೆ, ನೀವು ಪ್ರಶ್ನೆಗಳನ್ನೇನು ಕೇಳುತ್ತೀರಿ! ಮೊದಲು ತಂದೆಯನ್ನು
ಅರಿತುಕೊಳ್ಳಿ.
ತಂದೆಯು ಆತ್ಮಗಳಿಗೆ
ಹೇಳುತ್ತಾರೆ - ಮಕ್ಕಳೇ, ನನ್ನನ್ನು ನೆನಪು ಮಾಡಿ. ಕೇವಲ ಎರಡು ಮಾತುಗಳನ್ನು ನೆನಪಿಟ್ಟುಕೊಳ್ಳಿ.
ತಂದೆಯು ತಿಳಿಸುತ್ತಾರೆ - ನನ್ನನ್ನು ನೆನಪು ಮಾಡಿ ಮತ್ತು 84 ಜನ್ಮಗಳ ಚಕ್ರವನ್ನು ನೆನಪು ಮಾಡಿ
ಸಾಕು. ಇವೆರಡು ಮುಖ್ಯಮಾತುಗಳನ್ನೇ ತಿಳಿಸಲಾಗುತ್ತದೆ. ತಂದೆಯು ತಿಳಿಸುತ್ತಾರೆ - ನೀವು ತಮ್ಮ
ಜನ್ಮಗಳನ್ನು ತಿಳಿದುಕೊಂಡಿಲ್ಲ. ಬ್ರಾಹ್ಮಣರಿಗೇ ತಿಳಿಸುತ್ತಾರೆ ಮತ್ತ್ಯಾರೂ ಈ ಮಾತುಗಳನ್ನು
ತಿಳಿಸಲು ಸಾಧ್ಯವಿಲ್ಲ. ಪ್ರದರ್ಶನಿಗಳಲ್ಲಿ ನೋಡಿ ಎಷ್ಟೊಂದು ಸಾಲು ನಿಲ್ಲುತ್ತದೆ! ಇಷ್ಟು ಮಂದಿ
ಹೋಗುತ್ತಾರೆಂದರೆ ಅವಶ್ಯವಾಗಿ ಏನೋ ನೋಡುವಂತಹದ್ದಿದೆ ಎಂದು ತಿಳಿದು ಒಳಗೆ ಪ್ರವೇಶಿಸುತ್ತಾರೆ.
ಒಬ್ಬೊಬ್ಬರಿಗೂ ಕುಳಿತು ತಿಳಿಸಿದರೆ ಸುಸ್ತಾಗಿಬಿಡುತ್ತದೆ ಆಗ ಏನು ಮಾಡಬೇಕು? ಪ್ರದರ್ಶನಿಯು ಇಡೀ
ತಿಂಗಳು ನಡೆಯುತ್ತಿದ್ದರೂ ಇಂದು ಬಹಳ ಮಂದಿ ಇದ್ದಾರೆ. ನಾಳೆ ಅಥವಾ ನಾಡದ್ದು ಬನ್ನಿ ಎಂದು
ಹೇಳಬಹುದು, ಅದರಲ್ಲಿಯೂ ಯಾರಿಗೆ ವಿದ್ಯೆಯ ಆಸಕ್ತಿಯಿದೆಯೋ ಅಥವಾ ಮನುಷ್ಯರಿಂದ ದೇವತೆಗಳಾಗಲು
ಬಯಸುವರೋ ಅವರಿಗೆ ತಿಳಿಸಬೇಕು. ಈ ಲಕ್ಷ್ಮಿ-ನಾರಾಯಣ ಚಿತ್ರ ಅಥವಾ ಬ್ಯಾಡ್ಜ್ ತೋರಿಸಬೇಕು. ತಂದೆಯ
ಮೂಲಕ ವಿಷ್ಣುಪುರಿಯ ಮಾಲೀಕರಾಗಬಲ್ಲಿರಿ. ಈಗ ಬಹಳಷ್ಟು ಜನಸಂದಣಿಯಿದೆ ಆದ್ದರಿಂದ ಸೇವಾಕೇಂದ್ರಕ್ಕೆ
ಬನ್ನಿ, ವಿಳಾಸವಂತೂ ಇದರಲ್ಲಿ ಬರೆದಿದ್ದೇವೆ ಎಂದು ಹೇಳಬಹುದು. ಇದನ್ನು ಬಿಟ್ಟು ಇದು
ಸ್ವರ್ಗವಾಗಿದೆ, ಇದು ನರಕವಾಗಿದೆ ಎಂದು ಹೇಳಿಬಿಟ್ಟರೆ ಮನುಷ್ಯರೇನು ತಿಳಿಯುತ್ತಾರೆ? ಇದರಲ್ಲಿ
ಸಮಯವು ವ್ಯರ್ಥವಾಗಿಬಿಡುತ್ತದೆ. ಹಾಗೆ ನೋಡಿದರೆ ಇವರು ದೊಡ್ಡವ್ಯಕ್ತಿಯಾಗಿದ್ದಾರೆ, ಸಾಹುಕಾರರೇ
ಅಥವಾ ಬಡವರೆಂದು ತಿಳಿಯುವುದಕ್ಕೇ ಆಗುವುದಿಲ್ಲ. ಈಗಂತೂ ಉಡುಪುಗಳನ್ನು ಈ ರೀತಿ ಧರಿಸುತ್ತಾರೆ
ಅದರಿಂದ ಇವರು ಸಾಹುಕಾರರೇ ಅಥವಾ ಬಡವರೇ ಎಂದು ಅಂತರವೇ ತಿಳಿಯುವುದಿಲ್ಲ. ಮೊಟ್ಟಮೊದಲು ತಂದೆಯ
ಪರಿಚಯ ಕೊಡಬೇಕು. ತಂದೆಯು ಸ್ವರ್ಗವನ್ನು ರಚಿಸುವವರಾಗಿದ್ದಾರೆ. ಈಗ ಈ ಲಕ್ಷ್ಮಿ-ನಾರಾಯಣರಂತೆ
ಆಗಬೇಕಾಗಿದೆ. ಗುರಿ-ಧ್ಯೇಯವು ಸನ್ಮುಖದಲ್ಲಿದೆ. ತಂದೆಯು ತಿಳಿಸುತ್ತಾರೆ - ನಾನು
ಸರ್ವಶ್ರೇಷ್ಠನಾಗಿದ್ದೇನೆ, ನನ್ನನ್ನು ನೆನಪು ಮಾಡಿ - ಇದು ವಶೀಕರಣ ಮಂತ್ರವಾಗಿದೆ.
ನನ್ನೊಬ್ಬನನ್ನೇ ನೆನಪು ಮಾಡಿದರೆ ನಿಮ್ಮ ವಿಕರ್ಮಗಳು ವಿನಾಶವಾಗುತ್ತವೆ ಮತ್ತು ವಿಷ್ಣುಪುರಿಯಲ್ಲಿ
ಬರುತ್ತೀರಿ - ಇಷ್ಟನ್ನು ಅವಶ್ಯವಾಗಿ ತಿಳಿಸಿಕೊಡಬೇಕು. 8-10 ದಿನಗಳವರೆಗೆ ಪ್ರದರ್ಶನಿಯನ್ನಿಡಬೇಕು.
ನೀವು ಹಳ್ಳಿ-ಹಳ್ಳಿಯಲ್ಲಿ ಡಂಗುರ ಸಾರಬೇಕು. ಮನುಷ್ಯರಿಂದ ದೇವತೆ, ನರಕವಾಸಿಗಳಿಂದ ಸ್ವರ್ಗವಾಸಿಗಳು
ಹೇಗಾಗುವಿರೆಂದು ಬಂದು ತಿಳಿದುಕೊಳ್ಳಿರಿ, ಸ್ಥಾಪನೆ ಮತ್ತು ವಿನಾಶ ಹೇಗಾಗುವುದೆಂದು ತಿಳಿದುಕೊಳ್ಳಿ.
ಬಹಳಷ್ಟು ಯುಕ್ತಿಗಳಿವೆ.
ನೀವು ಮಕ್ಕಳು
ತಿಳಿದುಕೊಂಡಿದ್ದೀರಿ - ಸತ್ಯಯುಗ ಮತ್ತು ಕಲಿಯುಗದಲ್ಲಿ ರಾತ್ರಿ-ಹಗಲಿನ ಅಂತರವಿದೆ. ಬ್ರಹ್ಮಾನ
ದಿನ ಮತ್ತು ಬ್ರಹ್ಮನ ರಾತ್ರಿಯೆಂದು ಕರೆಯಲಾಗುತ್ತದೆ. ಬ್ರಹ್ಮನ ದಿನವೇ ವಿಷ್ಣುವಿನ ದಿನ,
ವಿಷ್ಣುವಿನ ದಿನವೇ ಬ್ರಹ್ಮನ ದಿನ, ಎರಡೂ ಒಂದೇ ಆಗಿದೆ. ಬ್ರಹ್ಮನ 84 ಜನ್ಮಗಳು ಎಂದಾದರೂ ಹೇಳಬಹುದು
ಅಥವಾ ವಿಷ್ಣುವಿನ 84 ಜನ್ಮಗಳು ಎಂತಲೂ ಹೇಳಬಹುದು. ಕೇವಲ ಈ ಅತಿಚಿಕ್ಕದಾದ ಜನ್ಮದಲ್ಲಿ
ಅಂತರವಾಗುತ್ತದೆ. ಈ ಮಾತುಗಳನ್ನು ಬುದ್ಧಿಯಲ್ಲಿ ಕುಳ್ಳರಿಸಲಾಗುತ್ತದೆ. ಧಾರಣೆಯಿಲ್ಲವೆಂದರೆ
ಅನ್ಯರಿಗೆ ಹೇಗೆ ತಿಳಿಸುತ್ತೀರಿ? ಇದನ್ನು ತಿಳಿಸುವುದು ಬಹಳ ಸಹಜವಾಗಿದೆ. ಕೇವಲ
ಲಕ್ಷ್ಮಿ-ನಾರಾಯಣರ ಚಿತ್ರದ ಮುಂದೆ ಈ ವಿಚಾರಗಳನ್ನು ತಿಳಿಸಿ. ತಂದೆಯ ಮೂಲಕ ಇಂತಹ ಪದವಿಯನ್ನು
ಪಡೆಯಬೇಕಾಗಿದೆ ಮತ್ತು ನರಕದ ವಿನಾಶವೂ ಸನ್ಮುಖದಲ್ಲಿ ನಿಂತಿದೆ. ಮನುಷ್ಯರಂತೂ ತಮ್ಮ ಮಾನವಮತವನ್ನೇ
ತಿಳಿಸುತ್ತಾರೆ. ಇದು ಈಶ್ವರೀಯ ಮತವಾಗಿದೆ, ನಾವು ಆತ್ಮಗಳಿಗೆ ಈ ಈಶ್ವರನಿಂದ ಸಿಕ್ಕಿದೆ. ನಿರಾಕಾರ
ಆತ್ಮಗಳಿಗೆ ನಿರಾಕಾರ ಪರಮಾತ್ಮನ ಮತವು ಸಿಗುತ್ತದೆ, ಉಳಿದೆಲ್ಲವೂ ಮಾನವ ಮತಗಳಾಗಿವೆ, ಇದರಲ್ಲಿ
ರಾತ್ರಿ-ಹಗಲಿನ ಅಂತರವಿದೆಯಲ್ಲವೆ. ಸಾಧು-ಸನ್ಯಾಸಿಗಳು ಯಾರೂ ಸಹ ಈ ಮತವನ್ನು ಕೊಡಲು ಸಾಧ್ಯವಿಲ್ಲ.
ಈಶ್ವರೀಯ ಮತವು ಒಮ್ಮೆ ಮಾತ್ರವೇ ಸಿಗುತ್ತದೆ. ಯಾವಾಗ ಈಶ್ವರನು ಬರುವರೋ ಆಗ ಅವರ ಮತದಿಂದ ನಾವು
ಶ್ರೇಷ್ಠರಾಗುತ್ತೇವೆ. ಅವರು ದೇವಿ-ದೇವತಾಧರ್ಮದ ಸ್ಥಾಪನೆ ಮಾಡುವುದಕ್ಕಾಗಿಯೇ ಬರುತ್ತಾರೆ. ಈ
ಅಂಶಗಳನ್ನು ಧಾರಣೆ ಮಾಡಿಕೊಳ್ಳಬೇಕು, ಇದರಿಂದ ಅವು ಸಮಯದಲ್ಲಿ ಸ್ಮೃತಿಗೆ ಬರುತ್ತದೆ. ಮುಖ್ಯಮಾತು
ಸ್ವಲ್ಪವೇ ತಿಳಿಸಿದರೂ ಸಹ ಸಾಕಾಗಿದೆ. ಒಂದು ಲಕ್ಷ್ಮಿ-ನಾರಾಯಣರ ಚಿತ್ರವನ್ನು ತಿಳಿಸಿದರೂ ಸಾಕು.
ಇದು ಗುರಿ-ಉದ್ದೇಶದ ಚಿತ್ರವಾಗಿದೆ, ಭಗವಂತನು ಈ ಹೊಸಪ್ರಪಂಚವನ್ನು ರಚಿಸಿದ್ದಾನೆ. ಭಗವಂತನೇ
ಪುರುಷೋತ್ತಮ ಸಂಗಮಯುಗದಲ್ಲಿ ಇವರಿಗೆ ಓದಿಸಿದ್ದರು. ಈ ಪುರುಷೋತ್ತಮ ಯುಗದ ಬಗ್ಗೆ ಯಾರಿಗೂ
ತಿಳಿದಿರಲಿಲ್ಲ. ಆದ್ದರಿಂದ ನೀವು ಮಕ್ಕಳಿಗೆ ಇವೆಲ್ಲಾ ಮಾತುಗಳನ್ನು ಕೇಳಿ ಎಷ್ಟೊಂದು ಖುಷಿಯಾಗಬೇಕು!
ಕೇಳಿದನಂತರ ತಿಳಿಸುವುದರಲ್ಲಿ ಇನ್ನೂ ಖುಷಿಯಾಗುತ್ತದೆ. ಸರ್ವೀಸ್ ಮಾಡುವವರಿಗೇ ಬ್ರಾಹ್ಮಣರೆಂದು
ಹೇಳುತ್ತಾರೆ. ನಿಮ್ಮ ಬಗಲಿನಲ್ಲಿ ಸತ್ಯಗೀತೆಯಿದೆ, ಬ್ರಾಹ್ಮಣರಲ್ಲಿಯೂ ನಂಬರ್ವಾರ್ ಇರುತ್ತಾರಲ್ಲವೆ.
ಕೆಲವು ಬ್ರಾಹ್ಮಣರು ಬಹಳ ಪ್ರಸಿದ್ಧರಾಗಿರುತ್ತಾರೆ, ಬಹಳ ಸಂಪಾದನೆ ಮಾಡುತ್ತಾರೆ. ಇನ್ನೂ ಕೆಲವರಿಗೆ
ತಿನ್ನುವುದಕ್ಕೂ ಸಿಗುವುದಿಲ್ಲ. ಕೆಲವು ಬ್ರಾಹ್ಮಣರು ಲಕ್ಷಾಧೀಶ್ವರರಾಗುತ್ತಾರೆ, ಬಹಳ
ಖುಷಿಯಿಂದ-ನಶೆಯಿಂದ ನಾವು ಬ್ರಾಹ್ಮಣಕುಲದವರೆಂದು ಹೇಳಿಕೊಳ್ಳುತ್ತಾರೆ. ಸತ್ಯ-ಸತ್ಯ
ಬ್ರಾಹ್ಮಣಕುಲದ ಬಗ್ಗೆ ಯಾರಿಗೂ ತಿಳಿದಿಲ್ಲ. ಬ್ರಾಹ್ಮಣರನ್ನು ಉತ್ತಮರೆಂದು ತಿಳಿಯಲಾಗುತ್ತದೆ
ಆದ್ದರಿಂದಲೇ ಬ್ರಾಹ್ಮಣರಿಗೆ ತಿನ್ನಿಸುತ್ತಾರೆ. ದೇವತಾ, ಕ್ಷತ್ರಿಯ, ವೈಶ್ಯ, ಶೂದ್ರವರ್ಣದವರಿಗೆ
ಎಂದೂ ಈ ದಾನವನ್ನು ಮಾಡುವ ಪದ್ಧತಿಯಿಲ್ಲ, ಬ್ರಾಹ್ಮಣರಿಗೇ ಮಾಡುತ್ತಾರೆ ಆದ್ದರಿಂದ ತಂದೆಯು
ತಿಳಿಸುತ್ತಾರೆ - ಬ್ರಾಹ್ಮಣರಿಗೆ ನೀವು ಬಹಳ ಚೆನ್ನಾಗಿ ತಿಳಿಸಿ. ಬ್ರಾಹ್ಮಣರದು
ಸಂಘಟನೆಯಿರುತ್ತದೆಯಲ್ಲವೆ. ಬ್ರಹ್ಮನು ಯಾರ ಮಗನಾಗಿದ್ದಾರೆ ಎಂಬುದನ್ನೂ ಸಹ ತಿಳಿಸಿಕೊಡಬೇಕು.
ಎಲ್ಲೆಲ್ಲಿ ಅವರ ಸಂಘಟನೆ ಸೇರುತ್ತದೆ ಎಂಬುದನ್ನು ತಿಳಿದು ಹೋಗಬೇಕು. ನೀವು ಅನೇಕರ ಕಲ್ಯಾಣ
ಮಾಡಬಹುದಾಗಿದೆ. ವಾನಪ್ರಸ್ಥ ಮಹಿಳೆಯರ ಸಭೆಗಳೂ ಇರುತ್ತವೆ. ನಾವು ಎಲ್ಲೆಲ್ಲಿ
ಹೋಗಿದ್ದೆವೆಂಬುದನ್ನು ತಂದೆಗೆ ಸಮಾಚಾರವನ್ನು ತಿಳಿಸುವುದೇ ಇಲ್ಲ. ಎಲ್ಲವೂ ಕಾಡಾಗಿಬಿಟ್ಟಿದೆ.
ನೀವು ಎಲ್ಲಿಗೆ ಹೋದರೂ ಸಹ ಬೇಟೆಯಾಡಿಕೊಂಡು ಬರಬಹುದು. ಪ್ರಜೆಗಳನ್ನು ಮಾಡಿಕೊಂಡು ಬರುತ್ತೀರಿ,
ರಾಜರನ್ನೂ ಸಹ ನೀವು ತಯಾರು ಮಾಡಿಕೊಳ್ಳಬಹುದು. ಬಹಳಷ್ಟು ಸೇವೆಯಿದೆ, ಸಂಜೆ 5 ಗಂಟೆಗೆ ಬಿಡುವು
ಸಿಗುತ್ತದೆ ಆದ್ದರಿಂದ ಇಂದು ಇಂತಿಂತಹ ಕಡೆ ಹೋಗಬೇಕೆಂದು ಪಟ್ಟಿಯಲ್ಲಿ ಬರೆದುಕೊಳ್ಳಬೇಕು. ತಂದೆಯು
ಬಹಳ ಯುಕ್ತಿಗಳನ್ನು ತಿಳಿಸುತ್ತಾರೆ. ತಂದೆಯು ಮಕ್ಕಳೊಂದಿಗೇ ಮಾತನಾಡುತ್ತಾರೆ. ಇದು
ಪಕ್ಕಾನಿಶ್ಚಯವಿರಬೇಕು - ನಾನು ಆತ್ಮನಾಗಿದ್ದೇನೆ, ಪರಮಾತ್ಮನೇ ನಮಗೆ ತಿಳಿಸುತ್ತಾರೆ, ನಾವು ಧಾರಣೆ
ಮಾಡಿಕೊಳ್ಳಬೇಕಾಗಿದೆ. ಹೇಗೆ ಶಾಸ್ತ್ರಗಳನ್ನು ಅಧ್ಯಯನ ಮಾಡುತ್ತಾರೆಂದರೆ ಅದರ ಸಂಸ್ಕಾರವನ್ನು
ತೆಗೆದುಕೊಂಡು ಹೋಗುತ್ತಾರೆ, ಅದರಿಂದ ಇನ್ನೊಂದು ಜನ್ಮದಲ್ಲಿಯೂ ಆ ಸಂಸ್ಕಾರವು ಸ್ಮೃತಿಯಲ್ಲಿ
ಬಂದುಬಿಡುತ್ತದೆ. ಇವರು ಹಿಂದಿನ ಜನ್ಮದ ಸಂಸ್ಕಾರವನ್ನು ತೆಗೆದುಕೊಂಡು ಬಂದಿದ್ದಾರೆಂದು
ಹೇಳಲಾಗುತ್ತದೆ. ಯಾರು ಬಹಳ ಶಾಸ್ತ್ರಗಳನ್ನು ಓದುವರೋ ಅವರಿಗೆ ಅಥಾರಿಟಿಯೆಂದು ಹೇಳಲಾಗುತ್ತದೆ.
ಅವರು ತಮ್ಮನ್ನು ಆಲ್ಮೈಟಿ ಎಂದು ಕರೆಯುವುದಿಲ್ಲ. ಇದು ಆಟವಾಗಿದೆ. ಇದನ್ನು ತಂದೆಯೇ ತಿಳಿಸುತ್ತಾರೆ,
ಇದರಲ್ಲಿ ಹೊಸ ಮಾತಿಲ್ಲ. ನಾಟಕವು ಮಾಡಲ್ಪಟ್ಟಿದೆ, ಇದು ಬಹಳ ತಿಳಿದುಕೊಳ್ಳುವಂತಹದ್ದಾಗಿದೆ. ಇದು
ಹಳೆಯ ಪ್ರಪಂಚವೆಂದು ಮಕ್ಕಳು ತಿಳಿದುಕೊಂಡಿಲ್ಲ. ತಂದೆಯು ತಿಳಿಸುತ್ತಾರೆ - ನಾನು
ಬಂದುಬಿಟ್ಟಿದ್ದೇನೆ. ಮಹಾಭಾರತ ಯುದ್ಧವು ಸನ್ಮುಖದಲ್ಲಿ ನಿಂತಿದೆ. ಮನುಷ್ಯರು ಅಜ್ಞಾನ
ಅಂಧಕಾರದಲ್ಲಿ ಮಲಗಿದ್ದಾರೆ. ಭಕ್ತಿಗೆ ಅಜ್ಞಾನವೆಂದು ಹೇಳಲಾಗುತ್ತದೆ. ಜ್ಞಾನಸಾಗರನು ಒಬ್ಬ ತಂದೆಯೇ
ಆಗಿದ್ದಾರೆ. ಯಾರು ಬಹಳ ಭಕ್ತಿ ಮಾಡುವರೋ ಅವರು ಭಕ್ತಿಯ ಸಾಗರರಾಗಿದ್ದಾರೆ. ಭಕ್ತರ ಮಾಲೆಯೂ
ಇದೆಯಲ್ಲವೆ. ಭಕ್ತರ ಮಾಲೆಯ ಹೆಸರನ್ನು ಸಂಗ್ರಹಿಸಬೇಕು. ಭಕ್ತಮಾಲೆಯು ದ್ವಾಪರದಿಂದ ಕಲಿಯುಗದವರೆಗೆ
ಇರುವುದು. ಮಕ್ಕಳಿಗೆ ಬಹಳ ಖುಷಿಯಿರಬೇಕು - ದಿನವಿಡೀ ಸೇವೆ ಮಾಡುತ್ತಿರುವರೋ ಅವರಿಗೆ ಬಹಳ
ಖುಷಿಯಿರುವುದು.
ತಂದೆಯು ತಿಳಿಸಿದ್ದಾರೆ
- ಮಾಲೆಯಂತೂ ಬಹಳ ದೊಡ್ಡದಾಗುತ್ತದೆ. ಸಾವಿರಗಳ ಅಂದಾಜಿನಲ್ಲಾಗುತ್ತದೆ. ಕೆಲಕೆಲವರು
ಕೆಲವೊಂದೆಡೆಯಿಂದ ಆಕರ್ಷಿತರಾಗುತ್ತಾರೆ. ಇಷ್ಟು ದೊಡ್ಡಮಾಲೆಯನ್ನು ಮಾಡಿದ್ದಾರೆಂದರೆ ಅವಶ್ಯವಾಗಿ
ಏನಾದರೂ ಆಗುವುದಲ್ಲವೆ. ಮನುಷ್ಯರು ಬಾಯಿಂದ ರಾಮ-ರಾಮ ಎಂದು ಜಪಿಸುತ್ತಿರುತ್ತಾರೆ ಆಗ ಅವರನ್ನು
ಪ್ರಶ್ನಿಸಬೇಕು - ರಾಮ-ರಾಮ ಎಂದು ಹೇಳಿ ಯಾರನ್ನು ನೆನಪು ಮಾಡುತ್ತೀರಿ? ನೀವು ಯಾವುದೇ
ಸತ್ಸಂಗದಲ್ಲಿಯಾದರೂ ಹೋಗಿ, ಕುಳಿತುಕೊಂಡು ಕೇಳಬಹುದು. ಹನುಮಂತನ ಉದಾಹರಣೆಯಿದೆಯಲ್ಲವೆ - ಎಲ್ಲಿ
ಸತ್ಸಂಗವಿರುತ್ತಿತ್ತೋ ಅಲ್ಲಿ ಚಪ್ಪಲಿ ಬಿಡುವಸ್ಥಳದಲ್ಲಿ ಕುಳಿತುಕೊಳ್ಳುತ್ತಿದ್ದರು. ನೀವೂ ಸಹ
ಅವಕಾಶವನ್ನು ಪಡೆದುಕೊಳ್ಳಬೇಕು. ನೀವು ಬಹಳಷ್ಟು ಸರ್ವೀಸ್ ಮಾಡಬಲ್ಲಿರಿ. ಯಾವಾಗ ಜ್ಞಾನದ ವಿಚಾರಗಳು
ಬುದ್ಧಿಯಲ್ಲಿರುವುದೋ ಜ್ಞಾನದಲ್ಲಿ ಮಸ್ತರಾಗಿರುವಿರೋ ಆಗಲೇ ಸರ್ವೀಸಿನಲ್ಲಿ ಸಫಲತೆಯಾಗುವುದು.
ಸರ್ವೀಸಿನ ಅನೇಕ ಯುಕ್ತಿಗಳಿವೆ ರಾಮಾಯಣ, ಭಾಗವತ ಇತ್ಯಾದಿಗಳ ಬಹಳ ಮಾತುಗಳಿವೆ. ಇವುಗಳ ಮೇಲೆ ನೀವು
ಗಮನ ಹರಿಸಬಹುದು. ಕೇವಲ ಅಂಧಶ್ರದ್ಧೆಯಿಂದ ಕುಳಿತು ಸತ್ಸಂಗ ಮಾಡುವುದಲ್ಲ. ತಿಳಿಸಿ, ನಾವಂತೂ ತಮ್ಮ
ಕಲ್ಯಾಣ ಮಾಡಲು ಬಯಸುತ್ತೇವೆ. ಆ ಭಕ್ತಿಯು ಬೇರೆಯಾಗಿದೆ, ಈ ಜ್ಞಾನವೇ ಬೇರೆಯಾಗಿದೆ. ಜ್ಞಾನವನ್ನು
ಒಬ್ಬ ಜ್ಞಾನೇಶ್ವರ ತಂದೆಯೇ ತಿಳಿಸುತ್ತಾರೆ. ಸೇವೆಯಂತೂ ಬಹಳಷ್ಟಿದೆ, ಕೇವಲ ಇದನ್ನು ತಿಳಿಸಿ -
ಸರ್ವಶ್ರೇಷ್ಠನು ಯಾರು? ಒಬ್ಬ ಭಗವಂತನೇ ಸರ್ವಶ್ರೇಷ್ಠರಾಗುತ್ತಾರೆ. ಅವರಿಂದಲೇ ಆಸ್ತಿಯು
ಸಿಗುತ್ತದೆ. ಉಳಿದೆಲ್ಲವೂ ಅವರ ರಚನೆಯಾಗಿದೆ. ಮಕ್ಕಳಿಗೆ ಸರ್ವೀಸಿನ ಬಹಳ ಅಭಿರುಚಿಯಿರಬೇಕು. ನೀವು
ರಾಜ್ಯ ಮಾಡಬೇಕೆಂದರೆ ಪ್ರಜೆಗಳನ್ನೂ ತಯಾರು ಮಾಡಬೇಕಾಗಿದೆ. ತಂದೆಯನ್ನು ನೆನಪು ಮಾಡಿದರೆ ಅಂತಿಮ
ಗತಿ ಸೋ ಗತಿಯಾಗುವುದೆಂಬ ಮಹಾಮಂತ್ರವಿದೆ. ಇದು ಕಡಿಮೆಯೇ! ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ
ನಮಸ್ತೆ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ತಂದೆಯು ಯಾವ
ವಶೀಕರಣ ಮಂತ್ರವನ್ನು ಕೊಟ್ಟಿದ್ದಾರೆಯೋ ಅದನ್ನು ಎಲ್ಲರಿಗೆ ತಿಳಿಸಬೇಕಾಗಿದೆ. ಸರ್ವೀಸಿನ
ಭಿನ್ನ-ಭಿನ್ನ ಯುಕ್ತಿಗಳನ್ನು ರಚಿಸಬೇಕಾಗಿದೆ. ಜನಸಂದಣಿಯಲ್ಲಿ ತಮ್ಮ ಸಮಯವನ್ನು ವ್ಯರ್ಥಮಾಡಬಾರದು.
2. ಜ್ಞಾನದ ಅಂಶಗಳನ್ನು
ಬುದ್ಧಿಯಲ್ಲಿಟ್ಟುಕೊಂಡು ಜ್ಞಾನದಲ್ಲಿ ಮಸ್ತರಾಗಿರಬೇಕಾಗಿದೆ. ಹನುಮಂತನ ತರಹ ಹೋಗಿ ಸತ್ಸಂಗಗಳಲ್ಲಿ
ಕುಳಿತುಕೊಳ್ಳಬೇಕು ನಂತರ ಅವರ ಸೇವೆ ಮಾಡಬೇಕು. ಖುಷಿಯಲ್ಲಿರಲು ಇಡೀ ದಿನ ಸೇವೆ ಮಾಡಬೇಕು.
ವರದಾನ:
“ನಾನು ಮತ್ತು
ನನ್ನದು” ಎನ್ನುವುದನ್ನು ಬಲಿ ಕೊಡುವಂತಹ ಸಂಪೂರ್ಣ ಮಹಾಬಲಿ ಭವ
ಹದ್ದಿನ ಯಾವುದೇ ವ್ಯಕ್ತಿ
ಅಥವಾ ವೈಭವದ ಸೆಳೆತ-ಇದೇ ನನ್ನತನವಾಗಿದೆ. ಈ ನನ್ನತನವನ್ನು ಮತ್ತು ನಾನು ಮಾಡುತ್ತೇನೆ, ನಾನೇ
ಮಾಡಿದೆ..... ಈ ನನ್ನತನವನ್ನು ಸಂಪೂರ್ಣ ಸಮರ್ಪಣೆ ಮಾಡುವಂತಹ ಅರ್ಥಾತ್ ಬಲಿ ಕೊಡುವಂತಹವರೇ
ಮಹಾಬಲಿಯಾಗಿದ್ದಾರೆ. ಯಾವಾಗ ಹದ್ದಿನ ನಾನು ನನ್ನತನ ಸಮರ್ಪಣೆಯಾದಾಗ ಸಂಪೂರ್ಣ ಅಥವಾ ತಂದೆಯ ಸಮಾನ
ಆಗುವಿರಿ. ನಾನು ಮಾಡಿಸುತ್ತಿದ್ದೇನೆ, ಅಲ್ಲ ಬಾಬಾ ಮಾಡಿಸುತ್ತಿದ್ದಾರೆ, ಬಾಬಾ ನಡೆಸುತ್ತಿದ್ದಾರೆ.
ಯಾವುದೇ ಮಾತಿನಲ್ಲಿ ನಾನು ಎನ್ನುವುದಕ್ಕೆ ಬದಲಾಗಿ ಸದಾ ಸ್ವಭಾವಿಕ ಭಾಷೆಯಲ್ಲಿಯೂ ತಂದೆ ಎನ್ನುವ
ಶಬ್ದವೇ ಬರಲಿ, ನಾನು ಎನ್ನುವ ಶಬ್ದ ಅಲ್ಲ.
ಸ್ಲೋಗನ್:
ಸಂಕಲ್ಪದಲ್ಲಿ
ಇಂತಹ ದೃಢತೆ ಧಾರಣೆಮಾಡಿ ಯಾವುದರಿಂದ ಯೋಚಿಸುವುದು ಮತ್ತು ಮಾಡುವುದು ಸಮಾನವಾಗಿಬಿಡಬೆಕು.
ತಮ್ಮ ಶಕ್ತಿಶಾಲಿ ಮನಸ್ಸಾ
ಮೂಲಕ ಸಕಾಶ ಕೊಡುವ ಸೇವೆಯನ್ನು ಮಾಡಿರಿ
ಸಮಯ ಪ್ರಮಾಣ ಈಗ ಮನಸ್ಸಾ
ಮತ್ತು ವಾಚಾನ ಒಟ್ಟಿಗೆ ಸೇವೆ ಮಾಡಿ. ಆದರೆ ವಾಚಾ ಸೇವೆ ಸಹಜವಾಗಿದೆ, ಮನಸ್ಸಾದಲ್ಲಿ ಗಮನ ಕೊಡುವ
ಮಾತಾಗಿದೆ ಇದಕ್ಕಾಗಿ ಸರ್ವ ಆತ್ಮರಿಗೆ ಪ್ರತಿ ಮನಸ್ಸಾದಲ್ಲಿ ಶುಭ ಭಾವನೆ, ಶುಭ ಕಾಮನೆಯ
ಸಂಕಲ್ಪವಿರಲಿ. ಮಾತಿನಲ್ಲಿ ಮಧುರತೆ, ಸಂತುಷ್ಟತೆ, ಸಫಲತೆಯ ನವೀನತೆಯಾಗಿದೆ ಅಂದಾಗ ಸಹಜ ಸಫಲತೆ
ಸಿಗುತ್ತಿರುತ್ತದೆ.