23.02.25    Avyakt Bapdada     Kannada Murli    17.02.2004     Om Shanti     Madhuban


ಶಿವರಾತ್ರಿ ಜನ್ಮೋತ್ಸವದ ವಿಶೇಷ ಸ್ಲೋಗನ್ ಆಗಿದೆ - ಸರ್ವರಿಗೂ ಸಹಯೋಗ ಕೊಡಿ ಹಾಗು ಸಹಯೋಗಿಗಳನ್ನಾಗಿ ಮಾಡಿ, ಸದಾ ಅಖಂಡ ಭಂಡಾರವು ನಡೆಯುತ್ತಿರಲಿ


ಇಂದು ಬಾಪ್ದಾದಾರವರು ಸ್ವಯಂ ತಮ್ಮ ಜೊತೆ ಮಕ್ಕಳ ವಜ್ರಸಮಾನ ಜನ್ಮದಿನ ಶಿವಜಯಂತಿಯನ್ನು ಆಚರಿಸಲು ಬಂದಿದ್ದಾರೆ. ಇಂದು ಎಲ್ಲಾ ಮಕ್ಕಳು ತಮ್ಮ ಪಾರಲೌಕಿಕ ಅಲೌಕಿಕ ತಂದೆಯ ಜನ್ಮದಿನವನ್ನು ಆಚರಿಸಲು ಬಂದಿದ್ದಾರೆ. ಅಂದಾಗ ತಂದೆ ನಿಮ್ಮದನ್ನು ಆಚರಿಸಲು ಬಂದಿದ್ದಾರೆ. ತಂದೆ ಮಕ್ಕಳ ಭಾಗ್ಯವನ್ನು ನೋಡಿ ಹರ್ಷಿತರಾಗುತ್ತಿದ್ದಾರೆ - ವಾಹ್! ನನ್ನ ಶ್ರೇಷ್ಠ ಭಾಗ್ಯವಂತ ಮಕ್ಕಳೇ ವಾಹ್! ತಂದೆಯ ಜೊತೆ-ಜೊತೆಗೆ ವಿಶ್ವದ ಅಂಧಕಾರವನ್ನು ಅಳಿಸಲು ಅವತರಿತರಾಗಿದ್ದೀರಿ. ಇಡೀ ಕಲ್ಪದಲ್ಲಿ ಇಂತಹ ಜನ್ಮದಿನವು ಯಾರದೂ ಆಗಲು ಸಾಧ್ಯವಿಲ್ಲ. ಯಾವುದನ್ನು ತಾವು ಮಕ್ಕಳು ಪರಮಾತ್ಮ ತಂದೆಯ ಜೊತೆ ಆಚರಿಸುತ್ತೀರಿ. ಈ ಅಲೌಕಿಕ ಅತಿಭಿನ್ನ, ಅತಿಪ್ರಿಯ ಜನ್ಮದಿನವನ್ನು ಭಕ್ತಾತ್ಮಗಳೂ ಸಹ ಆಚರಿಸುತ್ತಾರೆ ಆದರೆ ತಾವು ಮಕ್ಕಳು ಮಿಲನ ಮಾಡುತ್ತೀರಿ ಹಾಗೂ ಭಕ್ತಾತ್ಮರೂ ಕೇವಲ ಮಹಿಮೆಯನ್ನು ಹಾಡುತ್ತಿರುತ್ತಾರೆ ಮಹಿಮೆಯನ್ನೂ ಹಾಡುತ್ತಾರೆ, ಕೂಗುತ್ತಾರೆ, ಬಾಪ್ದಾದಾ ಭಕ್ತರ ಮಹಿಮೆ ಹಾಗೂ ಕೂಗನ್ನು ಕೇಳಿ ಅವರಿಗೂ ನಂಬರ್ವಾರ್ ಭಾವನೆಯ ಫಲವನ್ನು ಕೊಡುತ್ತಾರೆ. ಆದರೆ ಭಕ್ತರು ಹಾಗೂ ಮಕ್ಕಳು ಇವರಿಬ್ಬರಲ್ಲಿ ಮಹಾನ್ ಅಂತರವಿದೆ. ತಾವು ಮಾಡಿರುವ ಶ್ರೇಷ್ಠಕರ್ಮ, ಶ್ರೇಷ್ಠಭಾಗ್ಯದ ನೆನಪಾರ್ಥವನ್ನು ಬಹಳ ಚೆನ್ನಾಗಿ ಆಚರಿಸುತ್ತಾರೆ. ಆದ್ದರಿಂದ ಬಾಪ್ದಾದಾ ಭಕ್ತರ ಭಕ್ತಿಯ ಲೀಲೆಯನ್ನು ನೋಡಿ ಅವರಿಗೂ ಸಹ ಶುಭಾಶಯಗಳನ್ನು ಕೊಡುತ್ತಾರೆ ಏಕೆಂದರೆ ನೆನಪಿನಾರ್ಥವನ್ನು ಬಹಳ ಚೆನ್ನಾಗಿ ಕಾಪಿ ಮಾಡಿದ್ದಾರೆ. ಅವರೂ ಸಹ ಈ ದಿನದಂದು ಅವರು ಸ್ವಲ್ಪ ಸಮಯಕ್ಕೆ, ಅಲ್ಪಕಾಲದ ಆಹಾರ-ಪಾನೀಯ ಹಾಗೂ ಶುದ್ಧತೆಗಾಗಿ ವ್ರತ ಕೈಗೊಳ್ಳುತ್ತಾರೆ. ತಾವೂ ವ್ರತವನ್ನು ಕೈಗೊಳ್ಳುತ್ತೀರಿ - ಸಂಪೂರ್ಣ ಪವಿತ್ರತೆ, ಅದರಲ್ಲಿ ಆಹಾರ-ವ್ಯವಹಾರ, ವಚನ-ಕರ್ಮ ಪೂರ್ಣಜನ್ಮಕ್ಕಾಗಿ ವ್ರತ ಕೈಗೊಳ್ಳುತ್ತೀರಿ. ಎಲ್ಲಿಯತನಕ ಸಂಗಮದ ಜೀವನವನ್ನು ನಡೆಸಬೇಕೋ ಅಲ್ಲಿಯತನಕ ಮನ-ವಚನ-ಕರ್ಮದಲ್ಲಿ ಪವಿತ್ರರಾಗಲೇ ಬೇಕು. ಕೇವಲ ಆಗಬಾರದು ಆದರೆ ಅನ್ಯರನ್ನು ಮಾಡಬೇಕು. ಅಂದಮೇಲೆ ನೋಡಿ ಭಕ್ತರ ಬುದ್ಧಿಯೂ ಕಡಿಮೆ ಏನಿಲ್ಲ, ನೆನಪಾರ್ಥವನ್ನು ಬಹಳ ಚೆನ್ನಾಗಿ ಕಾಪಿ ಮಾಡಿದ್ದಾರೆ. ತಾವೆಲ್ಲರೂ ಎಲ್ಲಾ ವ್ಯರ್ಥವನ್ನು ಸಮರ್ಪಣೆ ಮಾಡಿ ಸಮರ್ಥರಾಗಿದ್ದೀರಿ ಅಂದರೆ ತಮ್ಮ ಅಪವಿತ್ರ ಜೀವನವನ್ನು ಸಮರ್ಪಣೆ ಮಾಡಿದ್ದೀರಿ, ತಮ್ಮ ಸಮರ್ಪಣತೆಯ ನೆನಪಾಗಿ ಅವರು ಬಲಿ ಕೊಡುತ್ತಾರೆ ಆದರೆ ಸ್ವಯಂನ್ನು ಬಲಿ ಕೊಡುವುದಿಲ್ಲ, ಕುರಿಯನ್ನು ಬಲಿ ಕೊಡುತ್ತಾರೆ. ನೋಡಿ ಎಷ್ಟು ಚೆನ್ನಾಗಿ ಕಾಪಿ ಮಾಡಿದ್ದಾರೆ! ಕುರಿಯನ್ನು ಏಕೆ ಬಲಿ ಕೊಡುತ್ತಾರೆ? ಇದರ ಕಾಪಿ ಬಹಳ ಚೆನ್ನಾಗಿ ಮಾಡಿದ್ದಾರೆ. ಕುರಿ ಏನು ಮಾಡುತ್ತದೆ? ಮ್ಯಾ-ಮ್ಯಾ-ಮ್ಯಾ (ನಾನು) ಎನ್ನುತ್ತದೆ ಅಲ್ಲವೇ! ಹಾಗೂ ನೀವು ಏನು ಸಮರ್ಪಣೆ ಮಾಡಿದ್ದೀರಿ! ಮೈ-ಮೈ-ಮೈ (ನಾನು- ನಾನು-ನಾನು) ದೇಹಬಾನದ ನನ್ನತನ, ಏಕೆಂದರೆ ಈ ನನ್ನತನದಲ್ಲಿಯೇ ದೇಹಾಭಿಮಾನ ಬರುತ್ತದೆ. ಈ ದೇಹಾಭಿಮಾನವು ಎಲ್ಲಾ ವಿಕಾರಗಳ ಬೀಜವಾಗಿದೆ.

ಬಾಪ್ದಾದಾರವರು ಮೊದಲು ಹೇಳಿದ್ದರು -ಸರ್ವ ಸಮರ್ಪಿತರಾಗುವುದರಲ್ಲಿ ಈ ದೇಹಬಾನದ ನನ್ನತನವೇ ಅಡ್ಡ ಬರುತ್ತದೆ. ಸಾಧಾರಣ ನನ್ನತನ, ನಾನು ದೇಹವಾಗಿದ್ದೇನೆ ಅಥವಾ ದೇಹದ ಸಂಬಂಧದ ನನ್ನತನ, ದೇಹದ ಪದಾರ್ಥಗಳ ಸಮರ್ಪಣೆ. ಇದಂತೂ ಸಹಜವಾಗಿದೆ. ಇದನ್ನು ಸಮರ್ಪಣೆ ಮಾಡಿದ್ದೀರಲ್ಲವೇ? ಅಥವಾ ಇನ್ನೂ ಆಗಿಲ್ಲವೇ! ಎಷ್ಟು ಮುಂದುವರೆಯುತ್ತೀರೋ ಅಷ್ಟು ನನ್ನತನವೂ ಸಹ ಸೂಕ್ಷ್ಮವಾಗುತ್ತಾ ಹೋಗುತ್ತದೆ. ದೊಡ್ಡ ಗಾತ್ರದ ನನ್ನತನವೂ ಸಮಾಪ್ತಿಯಾಗುವುದು ಸಹಜವಾಗಿದೆ ಆದರೆ ಸೂಕ್ಷ್ಮದ ನನ್ನತನ, ಯಾವುದು ಪರಮಾತ್ಮ ಜನ್ಮಸಿದ್ಧ ಅಧಿಕಾರದ ಮೂಲಕ ವಿಶೇಷತೆಗಳು ಪ್ರಾಪ್ತಿಯಾಗುತ್ತದೆ, ಬುದ್ಧಿಯ ವರದಾನ, ಜ್ಞಾನಸ್ವರೂಪರಾಗುವ ವರದಾನ, ಸೇವೆಯ ವರದಾನ ಹಾಗೂ ವಿಶೇಷತೆಗಳು ಅಥವಾ ಪ್ರಭುವಿನ ಕೊಡುಗೆ ಎಂದಾದರೂ ಹೇಳಿ, ಒಂದುವೇಳೆ ಅದರ ನನ್ನತನವು ಬಂದರೆ ಇದಕ್ಕೆ ಸೂಕ್ಷ್ಮವಾದ ನನ್ನತನ ಎನ್ನಲಾಗುತ್ತದೆ. ನಾನು ಏನು ಮಾಡುತ್ತೇನೆಯೋ, ಏನು ಹೇಳುತ್ತೇನೆಯೋ ಅದೇ ಸರಿ, ಅದೇ ಆಗಬೇಕು, ಈ ರಾಯಲ್ ನನ್ನತನವು ಹಾರುವಕಲೆಯಲ್ಲಿ ಹೋಗಲು ಹೊರೆಯಾಗುತ್ತದೆ. ತಂದೆ ತಿಳಿಸುತ್ತಾರೆ- ಈ ನನ್ನತನವೂ ಸಹ ಸಮರ್ಪಣೆ, ಪ್ರಭುವಿನ ಕೊಡುಗೆಯಲ್ಲಿ ನನ್ನತನವು ಇರುವುದಿಲ್ಲ. ನಾನು-ನನ್ನದು ಏನೂ ಇರುವುದಿಲ್ಲ. ಪ್ರಭುವಿನ ಕೊಡುಗೆ, ಪ್ರಭುವಿನ ವರದಾನ, ಪ್ರಭುವಿನ ವಿಶೇಷತೆ ಆಗಿದೆ ಅಂದಮೇಲೆ ತಮ್ಮೆಲ್ಲರ ಸಮರ್ಪಣತೆ ಎಷ್ಟು ಸೂಕ್ಷ್ಮವಾಗಿದೆ ಅದನ್ನು ಪರಿಶೀಲಿಸಿಕೊಂಡಿದ್ದೀರಾ - ಸಾಧಾರಣ ನನ್ನತನ ಹಾಗೂ ರಾಯಲ್ ನನ್ನತನ ಇವರೆಡರ ಸಮರ್ಪಣೆ ಮಾಡಿದ್ದೀರಾ? ಮಾಡಿದ್ದೀರಾ? ಅಥವಾ ಮಾಡುತ್ತಿದ್ದೀರಾ? ಮಾಡಲೇ ಬೇಕಾಗುತ್ತದೆ. ತಾವೆಲ್ಲರೂ ಪರಸ್ಪರದಲ್ಲಿ ನಗುತ್ತಾ ಹೇಳುತ್ತೀರಲ್ಲವೇ, ಸಾಯಲೇಬೇಕಾಗುತ್ತದೆ ಎಂದು. ಆದರೆ ಈ ಸಾಯುವುದು ಅಂದರೆ ಭಗವಂತನ ಮಡಿಲಿನಲ್ಲಿ ಜೀವಿಸುವುದು. ಈ ರೀತಿ ಸಾಯುವುದು, ಸಾಯುವುದಲ್ಲ, 21 ಜನ್ಮ ದೇವಾತ್ಮಗಳ ಮಡಿಲಿನಲ್ಲಿ ಜನಿಸುವುದಾಗಿದೆ. ಆದ್ದರಿಂದ ಖುಷಿ- ಖುಷಿಯಿಂದ ಸಮರ್ಪಿತ ರಾಗುತ್ತೀರಲ್ಲವೇ? ಚೀರಾಡುತ್ತಾ ಆಗುವುದಿಲ್ಲ ತಾನೇ? ಇಲ್ಲ. ಭಕ್ತಿಯಲ್ಲಿಯೂ ಸಹ ಚೀರಾಡಿಕೊಂಡು ಬಲಿಯಾದರೆ ಅದು ಬಲಿ ಎಂದು ಸ್ವೀಕಾರವಾಗುವುದಿಲ್ಲ. ಯಾರು ಕ್ಷಣಿಕದ ನಾನು ಹಾಗೂ ನನ್ನದರಲ್ಲಿ ಖುಷಿಯಿಂದ ಸಮರ್ಪಿತರಾಗುತ್ತಾರೆ ಅವರು ಜನ್ಮ-ಜನ್ಮದ ಆಸ್ತಿಗೆ ಅಧಿಕಾರಿ ಆಗುತ್ತಾರೆ. ಅಂದಮೇಲೆ ಪರಿಶೀಲನೆ ಮಾಡಿಕೊಳ್ಳಬೇಕು ವ್ಯರ್ಥಸಂಕಲ್ಪ, ವ್ಯರ್ಥವಚನ, ವ್ಯರ್ಥನಡವಳಿಕೆಯ ಪರಿವರ್ತನೆ ಮಾಡಿಕೊಳ್ಳುವುದರಲ್ಲಿ ಖುಷಿಯಿಂದ ಪರಿವರ್ತನೆ ಮಾಡಿಕೊಳ್ಳುತ್ತೀರೋ ಅಥವಾ ಬೇಸರದಿಂದಲೋ? ಪ್ರೀತಿಯಲ್ಲಿ ಪರಿವರ್ತನೆ ಆಗುತ್ತೀರೋ ಅಥವಾ ಶ್ರಮದಿಂದ ಪರಿವರ್ತನೆ ಆಗುತ್ತೀರೋ? ಯಾವಾಗ ತಾವು ಎಲ್ಲಾ ಮಕ್ಕಳು ಜನ್ಮ ಪಡೆಯುತ್ತಿದ್ದಂತೆಯೇ ತಮ್ಮ ಜೀವನದ ಕರ್ತವ್ಯ ಇದನ್ನೇ ಮಾಡಿಕೊಂಡಿದ್ದೀರಿ- ವಿಶ್ವಪರಿವರ್ತನೆ ಮಾಡುವಂತಹ ವಿಶ್ವಪರಿವರ್ತಕರು. ಇದು ತಾವೆಲ್ಲಾ ಬ್ರಾಹ್ಮಣರ ಜನ್ಮದ ಕರ್ತವ್ಯವಲ್ಲವೇ! ಅದು ಪಕ್ಕಾ ಆಗಿದ್ದರೆ ಕೈ ಅಲುಗಾಡಿಸಿ. ಬಾವುಟ ಆಡಿಸುತ್ತಿದ್ದಾರೆ, ಬಹಳ ಒಳ್ಳೆಯದು. ಇಂದು ಧ್ವಜಗಳ ದಿನವಾಗಿದೆಯಲ್ಲವೇ, ಬಹಳ ಒಳ್ಳೆಯದು. ಆದರೆ ಹಾಗೆಯೇ ಧ್ವಜವನ್ನು ಆಡಿಸಬಾರದು. ಈ ರೀತಿ ಧ್ವಜವನ್ನು ಆಡಿಸುವುದು ಬಹಳ ಸಹಜವಾಗಿದೆ, ಮನಸ್ಸನ್ನು ಆಡಿಸಬೇಕು. ಮನಸ್ಸನ್ನು ಪರಿವರ್ತನೆ ಮಾಡಬೇಕು. ಧೈರ್ಯಶಾಲಿಗಳು ತಾನೇ. ಧೈರ್ಯವಿದೆಯೇ? ಬಹಳ ಧೈರ್ಯವಿದೆ, ಒಳ್ಳೆಯದು.

ಬಾಪ್ದಾದಾ ಒಂದು ಖುಷಿಯ ಸಮಾಚಾರದ ಮಾತನ್ನು ನೋಡಿದರು. ಅದು ಯಾವುದು? ತಿಳಿದುಕೊಂಡಿದ್ದೀರಿ! ಬಾಪ್ದಾದಾರವರು ಈ ವರ್ಷಕ್ಕಾಗಿ ವಿಶೇಷ ಉಡುಗೊರೆಯನ್ನು ಕೊಟ್ಟಿದ್ದರು ಈ ವರ್ಷ ಒಂದುವೇಳೆ ಸ್ವಲ್ಪ ಧೈರ್ಯವಿಟ್ಟುಕೊಂಡರೂ, ಯಾವುದೇ ಕಾರ್ಯದಲ್ಲಿ, ಅದು ಭಲೆ ಸ್ವಪರಿವರ್ತನೆಯ ಕಾರ್ಯದಲ್ಲಿ ಅಥವಾ ವಿಶ್ವದ ಸೇವೆಯಲ್ಲಿ ಒಂದುವೇಳೆ ಧೈರ್ಯದಿಂದ ಮಾಡಿದ್ದೇ ಆದರೆ ಹೆಚ್ಚು ಸಹಯೋಗ ಸಿಗುವ ವರದಾನ ಸಿಕ್ಕಿದೆ. ಅಂದಮೇಲೆ ಬಾಪ್ದಾದಾರವರು ಖುಷಿಯ ಯಾವ ಸಮಾಚಾರ ಅಥವಾ ದೃಶ್ಯ ಏನು ನೋಡಿದರು! ಈ ಬಾರಿ ಶಿವಜಯಂತಿಯ ಸೇವೆಯಲ್ಲಿ ನಾಲ್ಕೂ ಕಡೆ ಬಹಳ ಚೆನ್ನಾಗಿ ಧೈರ್ಯ ಹಾಗೂ ಉಮ್ಮಂಗ-ಉತ್ಸಾಹದಿಂದ ಮುಂದುವರೆಯುತ್ತಿದ್ದಾರೆ. ಹಾ! ಭಲೆ ಚಪ್ಪಾಳೆ ಹೊಡೆಯಿರಿ. ಸದಾ ಈ ರೀತಿ ಚಪ್ಪಾಳೆ ಹೊಡೆಯುತ್ತೀರೋ ಅಥವಾ ಶಿವರಾತ್ರಿಯಲ್ಲಿಯೋ! ಸದಾ ಹೊಡೆಯುತ್ತಿರಬೇಕು. ಒಳ್ಳೆಯದು. ನಾಲ್ಕೂಕಡೆಯಿಂದ ಮಧುಬನಕ್ಕೆ ಸಮಾಚಾರ ಬರೆಯುತ್ತಾರೆ ಹಾಗೂ ಬಾಪ್ದಾದಾರವರು ವತನದಲ್ಲಿಯೇ ನೋಡುತ್ತಾರೆ. ಉಮ್ಮಂಗ ಬಹಳ ಚೆನ್ನಾಗಿ ಹಾಗೂ ಯೋಜನೆಯೂ ಸಹ ಬಹಳ ಚೆನ್ನಾಗಿ ಮಾಡಿದ್ದೀರಿ. ಅದೇ ರೀತಿ ಸೇವೆಯಲ್ಲಿ ಉಮ್ಮಂಗ ಹಾಗೂ ಉತ್ಸಾಹವು ವಿಶ್ವದ ಆತ್ಮಗಳಲ್ಲಿ ಉಮ್ಮಂಗ- ಉತ್ಸಾಹವನ್ನು ಹೆಚ್ಚಿಸುತ್ತದೆ. ನೋಡಿ ನಿಮಿತ್ತ ದಾದಿಯವರು ಚಮತ್ಕಾರ ಮಾಡಿದ್ದಾರಲ್ಲವೇ! ಫಲಿತಾಂಶ ಚೆನ್ನಾಗಿದೆ ಆದ್ದರಿಂದ ಬಾಪ್ ದಾದಾ ಈಗ ಒಂದೊಂದು ಸೇವಾಕೇಂದ್ರದ ಹೆಸರನ್ನು ಹೇಳುವುದಿಲ್ಲ ಆದರೆ ವಿಶೇಷವಾಗಿ ಎಲ್ಲಾ ಕಡೆಯ ಸೇವೆಯ ಫಲಿತಾಂಶದ ಪ್ರತಿಯೊಬ್ಬ ಸೇವಾಧಾರಿ ಮಗುವಿನ ವಿಶೇಷತೆ ಹಾಗೂ ಹೆಸರನ್ನು ತೆಗೆದುಕೊಂಡು ಬಾಪ್ ದಾದಾ ಪದಮಾಪದಮ ಶುಭಾಶಯಗಳನ್ನು ಕೊಡುತ್ತಿದ್ದಾರೆ. ಮಕ್ಕಳು ತಮ್ಮ-ತಮ್ಮ ಸ್ಥಾನವನ್ನು ನೋಡುತ್ತಾ ಖುಷಿಯಾಗುತ್ತಿದ್ದೀರಿ. ವಿದೇಶದಲ್ಲಿಯೂ ಸಹ ಖುಷಿ ಆಗುತ್ತಿದ್ದಾರೆ ಏಕೆಂದರೆ ತಾವೆಲ್ಲರೂ ವಿಶ್ವದ ಆತ್ಮಗಳಿಗೆ ಇಷ್ಟದೇವಿ ಹಾಗೂ ಇಷ್ಟದೇವತೆಗಳಲ್ಲವೇ, ಬಾಪ್ದಾದಾ ಯಾವಾಗ ಮಕ್ಕಳ ಸಭೆಯನ್ನು ನೋಡುತ್ತಾರೆಯೋ ಆಗ 3 ರೂಪದಿಂದ ನೋಡುತ್ತಾರೆ ವರ್ತಮಾನ ಸ್ವರಾಜ್ಯಾಧಿಕಾರಿ, ಈಗಲೂ ರಾಜರಾಗಿದ್ದೀರಿ.

ಲೌಕಿಕದಲ್ಲಿಯೂ ಸಹ ತಂದೆ ಮಕ್ಕಳಿಗೆ ನನ್ನ ರಾಜಾಮಗು ಎಂದು ಹೇಳುತ್ತಾರೆ. ಭಲೆ ಬಡವರೇ ಆಗಿರಲಿ ಆದರೂ ಸಹ ರಾಜಾಮಗು ಎಂದು ಹೇಳುತ್ತಾರೆ. ಆದರೆ ತಂದೆಯು ವರ್ತಮಾನ ಸಂಗಮದಲ್ಲಿ ಪ್ರತಿಯೊಂದು ಮಗುವನ್ನು ಸ್ವರಾಜ್ಯಾಧಿಕಾರಿ ರಾಜಾ ಮಗು ಎಂದು ನೋಡುತ್ತಾರೆ. ರಾಜರಲ್ಲವೇ! ಸ್ವರಾಜ್ಯಾಧಿಕಾರಿ, ವರ್ತಮಾನ ಸಮಯದಲ್ಲಿ ಸ್ವರಾಜ್ಯಾಧಿಕಾರಿ, ಭವಿಷ್ಯದಲ್ಲಿ ವಿಶ್ವ ರಾಜ್ಯಾಧಿಕಾರಿ ಹಾಗೂ ದ್ವಾಪರದಿಂದ ಕಲಿಯುಗದತನಕ ಪೂಜ್ಯ, ಪೂಜೆಗೆ ಅಧಿಕಾರಿ – ಈ ಮೂರೂ ರೂಪಗಳಲ್ಲಿ ಪ್ರತಿಯೊಂದು ಮಗುವನ್ನು ಬಾಪ್ದಾದಾರವರು ನೋಡುತ್ತಿದ್ದಾರೆ. ಸಾಧರಣವಾಗಿ ನೋಡುವುದಿಲ್ಲ. ತಾವು ಹೇಗೇ ಇರಬಹುದು ಆದರೆ ಬಾಪ್ದಾದಾ ಪ್ರತಿಯೊಂದು ಮಗುವನ್ನು ಸ್ವರಾಜ್ಯಾಧಿಕಾರಿ ಮಗು ಎಂದು ನೋಡುತ್ತೇವೆ. ರಾಜಯೋಗಿಗಳಲ್ಲವೇ! ಯಾರಾದರೂ ಇದರಲ್ಲಿ ಪ್ರಜಾಯೋಗಿಗಳು ಇದ್ದೀರೇನು? ಪ್ರಜಾಯೋಗಿಗಳು ಇದ್ದಾರೆಯೇ? ಇಲ್ಲ. ಎಲ್ಲರೂ ರಾಜಯೋಗಿಗಳು. ರಾಜಯೋಗಿಗಳೆಂದರೆ ರಾಜ, ಅಂತಹ ಸ್ವರಾಜ್ಯಾಧಿಕಾರಿ ಮಕ್ಕಳ ಜನ್ಮದಿನವನ್ನು ಆಚರಿಸಲು ಸ್ವಯಂ ತಂದೆ ಬಂದಿದ್ದಾರೆ. ನೋಡಿ, ತಾವು ಡಬಲ್ ವಿದೇಶಿಗಳು ವಿದೇಶದಿಂದ ಜನ್ಮದಿನವನ್ನು ಆಚರಿಸಲು ಬಂದಿದ್ದೀರಿ. ಡಬಲ್ವಿದೇಶಿಗಳು ಕೈ ಎತ್ತಿ. ಎಲ್ಲದಕ್ಕಿಂತ ದೂರ ದೇಶ ಯಾವುದು? ಅಮೆರಿಕಾ ಅಥವಾ ಅದಕ್ಕಿಂತಲೂ ದೂರವಿದೆಯೋ? ಹಾಗೂ ಬಾಪ್ ದಾದಾ ಎಲ್ಲಿಂದ ಬಂದಿದ್ದಾರೆ? ಬಾಪ್ದಾದಾ ಪರಮಧಾಮದಿಂದ ಬಂದಿದ್ದಾರೆ ಅಂದಮೇಲೆ ಮಕ್ಕಳ ಜೊತೆ ಪ್ರೀತಿ ಇದೆಯಲ್ಲವೇ. ಜನ್ಮದಿನ ಎಷ್ಟು ಶ್ರೇಷ್ಠವಾಗಿದೆ, ಇದಕ್ಕೆ ಭಗವಂತನೂ ಸಹ ಬರಬೇಕಾಗುತ್ತದೆ. ಇದನ್ನು (ಜನ್ಮದಿನದ ಒಂದು ಬ್ಯಾನರ್ ಎಲ್ಲಾ ಭಾಷೆಗಳಲ್ಲಿ ಮಾಡಿರುವುದನ್ನು ತೋರಿಸುತ್ತಿದ್ದಾರೆ) ಚೆನ್ನಾಗಿ ಮಾಡಿದ್ದಾರೆ, ಎಲ್ಲಾ ಭಾಷೆಗಳಲ್ಲಿ ಬರೆದಿದ್ದಾರೆ. ಬಾಪ್ದಾದಾ ಎಲ್ಲಾ ದೇಶದ, ಎಲ್ಲಾ ಭಾಷೆಯವರ ಮಕ್ಕಳಿಗೆ ಜನ್ಮದಿನದ ಶುಭಾಶಯಗಳನ್ನು ಕೊಡುತಿದ್ದಾರೆ. ನೋಡಿ, ತಂದೆಯ ಶಿವಜಯಂತಿಯನ್ನು ಆಚರಿಸುತ್ತಾರೆ ಆದರೆ ತಂದೆ ಏನಾಗಿದ್ದಾರೆ? ಬಿಂದು. ಬಿಂದುವಿನ ಜಯಂತಿ, ಅವತರಣೆಯನ್ನು ಆಚರಿಸುತ್ತಿದ್ದಾರೆ. ಎಲ್ಲರಿಗಿಂತ ವಜ್ರಸಮಾನವಾಗಿರುವ ಜಯಂತಿ ಯಾರದು? ಬಿಂದುವಿನ ಜಯಂತಿ. ಅಂದಮೇಲೆ ಬಿಂದುವಿಗೆ ಎಷ್ಟು ಮಹಿಮೆಯಿದೆ! ಆದ್ದರಿಂದಲೇ ಬಾಪ್ದಾದಾರವರು ಮೂರು ಬಿಂದುವನ್ನು ಸದಾ ನೆನಪಿಟ್ಟುಕೊಳ್ಳಿ ಎಂದು ಹೇಳುತ್ತಿರುತ್ತಾರೆ. 8ರ ಸಂಖ್ಯೆ, 7ರ ಸಂಖ್ಯೆಯನ್ನು ಬರೆಯುವುದು ಕಷ್ಟವಾಗುತ್ತದೆ ಆದರೆ ಬಿಂದುವನ್ನಿಡುವುದು ಎಷ್ಟು ಸಹಜವಾಗಿದೆ. ಮೂರು ಬಿಂದುಗಳನ್ನು ಸದಾ ನೆನಪಿಟ್ಟುಕೊಳ್ಳಿ. ಮೂರನ್ನು ಚೆನ್ನಾಗಿ ತಿಳಿದುಕೊಂಡಿದ್ದೀರಲ್ಲವೇ! ತಾವು ಬಿಂದು, ತಂದೆಯೂ ಸಹ ಬಿಂದು, ಬಿಂದುವಿನ ಮಕ್ಕಳು ಬಿಂದುವಾಗಿದ್ದೀರಿ. ಕರ್ಮದಲ್ಲಿ ಬಂದಾಗ ಈ ಸೃಷ್ಟಿಯ ಮೇಲೆ ಕರ್ಮವನ್ನು ಮಾಡಲು ಬಂದಿದ್ದೀರಿ, ಇದು ಸೃಷ್ಟಿನಾಟಕವಾಗಿದೆ. ಈ ನಾಟಕದಲ್ಲಿ ಯಾವುದೆಲ್ಲಾ ಕರ್ಮವನ್ನು ಮಾಡಿದಿರೋ ಅದು ಕಳೆದುಹೋಯಿತು, ಅದಕ್ಕೆ ಪೂರ್ಣವಿರಾಮವನ್ನು ಹಾಕಿ, ಅಂದಮೇಲೆ ಈ ಪೂರ್ಣವಿರಾಮವೂ ಏನಾಗಿದೆ! ಬಿಂದು. ಆದ್ದರಿಂದ ಮೂರುಬಿಂದುವನ್ನು ಸದಾ ನೆನಪಿಟ್ಟುಕೊಳ್ಳಿ. ಪೂರ್ಣ ಚಮತ್ಕಾರವನ್ನು ನೋಡಿ, ವರ್ತಮಾನದ ಜಗತ್ತಿನಲ್ಲಿ ಎಲ್ಲದಕ್ಕಿಂತ ಹೆಚ್ಚು ಮಹತ್ವವೂ ಯಾವುದಕ್ಕೆ? ಹಣ. ಹಣಕ್ಕೆ ಮಹತ್ವವಿದೆಯಲ್ಲವೇ! ತಂದೆ- ತಾಯಿಯೂ ಏನೂ ಇಲ್ಲ, ಹಣವೇ ಸರ್ವಸ್ವವಾಗಿದೆ, ಅದರಲ್ಲಿಯೂ ನೋಡಿ ಒಂದುವೇಳೆ ಒಂದರ ಮುಂದೆ ಒಂದು ಬಿಂದು ಹಾಕಿದರೆ ಏನಾಗುತ್ತದೆ? ಹತ್ತು (10) ಆಗುತ್ತದೆಯಲ್ಲವೇ. ಇನ್ನೊಂದು ಬಿಂದು ಹಾಕಿದರೆ ನೂರು (100) ಆಗುತ್ತದೆ. ಮೂರುಬಿಂದು ಹಾಕಿದರೆ ಸಾವಿರ (1000) ಆಗುತ್ತದೆ. ಅಂದಮೇಲೆ ಬಿಂದುವಿನ ಚಮತ್ಕಾರವಲ್ಲವೇ. ಹಣದಲ್ಲಿಯೂ ಸಹ ಬಿಂದುವಿನ ಚಮತ್ಕಾರ ಹಾಗೂ ಶ್ರೇಷ್ಠ ಆತ್ಮ ಆಗುವುದರಲ್ಲಿಯೂ ಬಿಂದುವಿನ ಚಮತ್ಕಾರವಿದೆ ಮತ್ತು ಮಾಡಿ-ಮಾಡಿಸುವಂತಹವರೂ ಬಿಂದುವಾಗಿದ್ದಾರೆ. ಎಲ್ಲಾ ಕಡೆಯೂ ಯಾವುದರ ಮಹತ್ವವಾಯಿತು, ಬಿಂದುವಿನದು. ಅಷ್ಟೇ. ಬಿಂದುವನ್ನು ನೆನಪಿಟ್ಟುಕೊಳ್ಳಿ. ವಿಸ್ತಾರದಲ್ಲಿ ಹೋಗಬೇಡಿ, ಬಿಂದುವನ್ನು ನೆನಪು ಮಾಡಿಕೊಳ್ಳಬಹುದು. ಬಿಂದುವಾಗಿ, ಬಿಂದುವನ್ನು ನೆನಪು ಮಾಡಿ ಹಾಗೂ ಬಿಂದು ಹಾಕಿ, ಅಷ್ಟೇ ಇದೇ ಪುರುಷಾರ್ಥ. ಕಷ್ಟವೇನು? ಅಥವಾ ಸುಲಭವೇ? ಯಾರು ಸುಲಭ. ಎಂದು ತಿಳಿಯುತ್ತೀರೋ ಅವರು ಕೈ ಎತ್ತಿ. ಸಹಜವೇ, ಬಿಂದು ಹಾಕಬೇಕಾಗುತ್ತದೆ. ಯಾವುದಾದರೂ ಸಮಸ್ಯೆ ಬಂದಾಗ ಬಿಂದು ಹಾಕುತ್ತೀರೋ ಅಥವಾ ಪ್ರಶ್ನಾರ್ಥಕ ಚಿಹ್ನೆಯೋ? ಪ್ರಶ್ನಾರ್ಥಕ ಚಿಹ್ನೆಯನ್ನು ಹಾಕಬಾರದು, ಬಿಂದು ಹಾಕಬೇಕು. ಬಿಂದು ಹಾಕಲು ಬರುತ್ತದೆಯೇ? ಎಲ್ಲರೂ ಬುದ್ಧಿವಂತರು.

ಬಾಪ್ದಾದಾರವರು ವಿಶೇಷವಾಗಿ ಸೇವೆಗಳ ಉಮ್ಮಂಗ-ಉತ್ಸಾಹದ ಶುಭಾಶಯಗಳನ್ನಂತೂ ಕೊಟ್ಟಿದ್ದಾರೆ ಬಹಳ ಚೆನ್ನಾಗಿ ಮಾಡುತ್ತಿದ್ದೀರಿ, ಮುಂದೆಯೂ ಮಾಡುತ್ತೀರಿ ಆದರೆ ಮುಂದಕ್ಕೆ ಪ್ರತಿಸಮಯ, ಪ್ರತಿನಿತ್ಯ, ಪ್ರತಿದಿನ ತಾವು ವಿಶ್ವಸೇವಾಧಾರಿ ಆಗಿದ್ದೇನೆ, ತಮಗೆ ನೆನಪಿದೆಯೇ ಬ್ರಹ್ಮಾ ತಂದೆ ಏನೆಂದು ಸಹಿ ಮಾಡುತ್ತಿದ್ದರು? ವಿಶ್ವಸೇವಾಧಾರಿ. ವಿಶ್ವಸೇವಾಧಾರಿ ಆಗಿದ್ದೀರಿ ಅಂದಮೇಲೆ ಕೇವಲ ಶಿವರಾತ್ರಿಯ ಸೇವೆಯಿಂದ ವಿಶ್ವದ ಸೇವೆಯು ಸಮಾಪ್ತಿಯಾಗುವುದಿಲ್ಲ. ಗುರಿಯಿಟ್ಟುಕೊಳ್ಳಿ - ನಾನು ವಿಶ್ವಸೇವಾಧಾರಿ ಆಗಿದ್ದೇನೆ, ವಿಶ್ವದ ಸೇವೆಯು ಪ್ರತೀ ಶ್ವಾಸದಲ್ಲಿ ಪ್ರತೀ ಸೆಕಂಡಿನಲ್ಲಿ ಮಾಡಬೇಕು. ಯಾರೇ ಬರಲಿ, ಯಾರ ಜೊತೆಯೇ ಸಂಪರ್ಕವಿರಲಿ, ಅವರಿಗೆ ದಾತರಾಗಿ ಏನಾದರೂ ಕೊಡಲೇಬೇಕು. ಖಾಲಿ ಕೈಯಿಂದ ಯಾರೂ ಹೋಗಬಾರದು. ಅಖಂಡ ಭಂಡಾರವು ತೆರೆದಿರಲಿ. ಕಡಿಮೆಪಕ್ಷ ಪ್ರತಿಯೊಬ್ಬರ ಬಗ್ಗೆ ಶುಭಭಾವ ಹಾಗೂ ಶುಭಭಾವನೆಯನ್ನು ಅವಶ್ಯವಾಗಿ ಕೊಡಿ. ಶುಭಭಾವದಿಂದ ನೋಡಿ, ಕೇಳಿ, ಸಂಬಂಧದಲ್ಲಿ ಬನ್ನಿ ಮತ್ತು ಶುಭಭಾವನೆಯಿಂದ ಆ ಆತ್ಮಕ್ಕೆ ಸಹಯೋಗವನ್ನು ಕೊಡಿ. ಈಗ ಸರ್ವಆತ್ಮಗಳಿಗೆ ತಮ್ಮ ಸಹಯೋಗದ ಅವಶ್ಯಕತೆ ಬಹಳ ಇದೆ. ಸಹಯೋಗವನ್ನು ನೀಡಿ ಹಾಗೂ ಸಹಯೋಗಿಗಳನ್ನಾಗಿ ಮಾಡಿ. ಯಾವುದಾದರೂ ಒಂದು ಸಹಯೋಗ, ಭಲೆ ಮನಸ್ಸಿನ ಅಥವಾ ವಚನದಿಂದ ಯಾವುದಾದರೂ ಸಹಯೋಗ ಕೊಡಿ. ಭಲೆ ಸಂಬಂಧ-ಸಂಪರ್ಕದಿಂದ ಸಹಯೋಗ ಕೊಡಿ, ಈ ಶಿವರಾತ್ರಿಯ ಜನ್ಮದಿನೋತ್ಸವದ ವಿಶೇಷ ಸ್ಲೋಗನ್ ನೆನಪಿಟ್ಟುಕೊಳ್ಳಿ “ಸಹಯೋಗ ಕೊಡಿ ಹಾಗೂ ಸಹಯೋಗಿಗಳನ್ನಾಗಿ ಮಾಡಿ”. ಕಡಿಮೆಪಕ್ಷ ಯಾರೇ ಬಂದರೂ ಅವರು ಸಂಪರ್ಕದಲ್ಲಿ ಇರಬಹುದು, ಸಂಬಂಧದಲ್ಲಿ ಇರಬಹುದು, ಯಾರಾದರೂ ಸಂಬಂಧದಲ್ಲಿ ಬಂದೇ ಬರುತ್ತಾರೆ, ಅವರಿಗೆ ಬೇರೆ ಏನೂ ಖಾತರಿ ಮಾಡಬೇಡಿ ಆದರೆ ಪ್ರತಿಯೊಬ್ಬರಿಗೂ ದಿಲ್ಖುಷ್ ಮಿಠಾಯಿಯನ್ನು ಖಂಡಿತ ತಿನ್ನಿಸಿ. ಇಲ್ಲಿ ಭಂಡಾರದಲ್ಲಿ ಏನಾಗುತ್ತದೆಯೋ ಅದಲ್ಲ, ಮನಸ್ಸನ್ನು ಖುಷಿಪಡಿಸಿ. ಮನಸ್ಸನ್ನು ಖುಷಿಪಡಿಸುವುದು ಎಂದರೆ ದಿಲ್ ಖುಷ್ ಮಿಠಾಯಿಯನ್ನು ತಿನ್ನಿಸುವುದು. ತಿನ್ನಿಸುವಿರಾ! ಅದರಲ್ಲಿ ಯಾವುದೇ ಕಷ್ಟವಿಲ್ಲ. ಸಮಯ ಕೊಡಬೇಕಾಗಿಲ್ಲ, ಶ್ರಮವೂ ಇಲ್ಲ. ಶುಭಭಾವನೆಯಿಂದ ದಿಲ್ ಖುಷ್ ಮಿಠಾಯಿಯನ್ನು ತಿನ್ನಿಸಿ. ತಮಗೂ ಖುಷಿ, ಅವರಿಗೂ ಖುಷಿ. ಇನ್ನೇನು ಬೇಕು? ಖುಷಿಯಾಗಿರುತ್ತೀರಿ ಮತ್ತೆ ಖುಷಿಯನ್ನು ಕೊಡುತ್ತೀರಿ, ಎಂದೂ ಸಹ ತಮ್ಮ ಚೆಹರೆಯು ಹೆಚ್ಚಾಗಿ ಗಂಭೀರವಾಗಿರಬಾರದು, ಹೆಚ್ಚು ಗಂಭೀರವೂ ಸಹ ಚೆನ್ನಾಗಿ ಇರುವುದಿಲ್ಲ. ಮುಗುಳ್ಳಗೆಯಂತೂ ಇರಬೇಕಲ್ಲವೇ. ಗಂಭೀರವಾಗಿರುವುದು ಒಳ್ಳೆಯದೇ ಆದರೆ ಹೆಚ್ಚು ಗಂಭೀರವಾಗಿರುತ್ತಾರಲ್ಲವೆ ಅವರು ಇಲ್ಲಿ ಇಲ್ಲವೇನೋ ಎನ್ನುವ ರೀತಿಯಲ್ಲಿ ಇರುತ್ತಾರೆ. ನೋಡುತ್ತಲೂ ಇರುತ್ತಾರೆ ಆದರೆ ಎಲ್ಲಿಯೋ ಇದ್ದಂತೆ ಇರುತ್ತಾರೆ. ಮಾತನಾಡುತ್ತಲೂ ಇರುತ್ತಾರೆ ಆದರೆ ಎಲ್ಲೋ ಇದ್ದಂತೆ ಮಾತನಾಡುತ್ತಾರೆ. ಅಂತಹ ಚೆಹರೆಯು ಚೆನ್ನಾಗಿಲ್ಲ. ಚೆಹರೆ ಸದಾ ಮುಗುಳ್ನಗುತ್ತಿರಬೇಕು. ಚೆಹರೆ ಗಂಭೀರವಾಗಬಾರದು. ಏನು ಮಾಡುವುದು, ಹೇಗೆ ಮಾಡುವುದು ಎಂದಾಗ ಗಂಭೀರವಾಗಿಬಿಡುತ್ತೀರಿ. ಬಹಳ ಕಷ್ಟವಿದ್ದರೆ, ಬಹಳ ಕೆಲಸವಿದ್ದರೆ ಗಂಭೀರವಾಗಿಬಿಡುತ್ತೀರಿ ಆದರೆ ಎಷ್ಟು ಹೆಚ್ಚು ಕೆಲಸವೋ ಅಷ್ಟೇ ಮುಗುಳ್ನಗೆ ಇರಬೇಕು. ಮುಗುಳ್ನಗುತ್ತಿರಲು ಬರುತ್ತದೆಯಲ್ಲವೇ? ಬರುತ್ತದೆ. ತಮ್ಮ ಜಡಚಿತ್ರವನ್ನು ನೋಡಿ ಎಂದಾದರೂ ಆ ರೀತಿ ಗಂಭೀರವಾಗಿ ತೋರಿಸುತ್ತಾರೇನು. ಒಂದುವೇಳೆ ಗಂಭೀರವಾಗಿ ತೋರಿಸಿದರೆ ಕಲಾವಿದನು ಸರಿಯಿಲ್ಲವೆಂದು ಹೇಳುತ್ತಾರೆ. ಒಂದುವೇಳೆ ತಾವೂ ಸಹ ಗಂಭೀರವಾಗಿದ್ದರೆ ಇವರಿಗೆ ಬದುಕುವ ಕಲೆಯು ಬರುವುದಿಲ್ಲ ಎಂದು ಹೇಳುತ್ತಾರೆ, ಆದ್ದರಿಂದ ಏನು ಮಾಡುತ್ತೀರಿ? ಶಿಕ್ಷಕಿಯರು ಏನು ಮಾಡುತ್ತೀರಿ? ಒಳ್ಳೆಯದು. ಬಹಳ ಶಿಕ್ಷಕಿಯರು ಇದ್ದಾರೆ. ಶುಭಾಶಯಗಳು. ಸೇವೆಯ ಶುಭಾಶಯಗಳು.

ಒಂದು ಸೆಕಂಡಿನಲ್ಲಿ ತಮ್ಮ ಪೂರ್ವಜ ಹಾಗೂ ಪೂಜ್ಯ ಸ್ವರೂಪವನ್ನು ಇಮರ್ಜ್ ಮಾಡಿಕೊಳ್ಳಬಹುದೇ? ಅದೇ ದೇವಿ ಹಾಗೂ ದೇವತೆಗಳ ಸ್ವರೂಪದ ಸ್ಮೃತಿಯಲ್ಲಿ ತಮ್ಮನ್ನು ನೋಡಿಕೊಳ್ಳಲು ಆಗುತ್ತದೆಯೇ? ಯಾವುದೇ ದೇವಿ, ಅಥವಾ ದೇವತೆ ನಾನು ಪೂರ್ವಜನಾಗಿದ್ದೇನೆ, ಸಂಗಮಯುಗದಲ್ಲಿ ಪೂರ್ವಜ ಹಾಗೂ ದ್ವಾಪರದಿಂದ ಪೂಜ್ಯನಾಗಿದ್ದೇನೆ. ಸತ್ಯಯುಗ, ತ್ರೇತಾಯುಗದಲ್ಲಿ ರಾಜ್ಯಾಧಿಕಾರಿ ಅಂದಮೇಲೆ ಒಂದು ಸೆಕಂಡಿನಲ್ಲಿ ಬೇರೆಲ್ಲಾ ಸಂಕಲ್ಪಗಳನ್ನು ಸಮಾಪ್ತಿ ಮಾಡಿ ತಮ್ಮ ಪೂರ್ವಜ ಹಾಗೂ ಪೂಜ್ಯ ಸ್ವರೂಪದಲ್ಲಿ ಸ್ಥಿತರಾಗಿ. ಒಳ್ಳೆಯದು.

ನಾಲ್ಕಾರು ಕಡೆಯ ಅಲೌಕಿಕ ದಿವ್ಯ ಅವತರಣೆಯ ಮಕ್ಕಳಿಗೆ ತಂದೆಯ ಜನ್ಮದಿನ ಹಾಗೂ ಮಕ್ಕಳ ಜನ್ಮ ದಿನದ ಆಶೀರ್ವಾದಗಳು ಹಾಗೂ ನೆನಪು-ಪ್ರೀತಿ, ಮನದೇವ ತಂದೆಯ ಮನಸ್ಸಿನಲ್ಲಿ ಬಲಭುಜ ಸೇವಾಧಾರಿ ಮಕ್ಕಳು ಸದಾ ಸಮಾವೇಶವಾಗಿದ್ದಾರೆ ಅಂದಮೇಲೆ ಅಂತಹ ಹೃದಯ ಸಿಂಹಾಸನಾಧಿಕಾರಿ ಶ್ರೇಷ್ಠ ಆತ್ಮಗಳಿಗೆ, ಸದಾ ಬಿಂದುವಿನ ಮಹತ್ವವನ್ನು ತಿಳಿದುಕೊಳ್ಳುವಂತಹ ಶ್ರೇಷ್ಠ ಬಿಂದು ಸ್ವರೂಪ ಮಕ್ಕಳಿಗೆ ಸದಾ ತಮ್ಮ ಸ್ವಮಾನದಲ್ಲಿ ಸ್ಥಿತರಾಗಿ ಸರ್ವರಿಗೂ ಆತ್ಮೀಯ ಸಮ್ಮಾನವನ್ನು ಕೊಡುವಂತಹ ಸ್ವಮಾನಧಾರಿ ಆತ್ಮಗಳಿಗೆ, ಸದಾ ದಾತನ ಮಕ್ಕಳು ಮಾಸ್ಟರ್ ದಾತರಾಗಿ ಪ್ರತಿಯೊಬ್ಬರಿಗೂ ತಮ್ಮ ಅಖಂಡ ಭಂಡಾರದಿಂದ ಏನಾದರೂ ಕೊಡುವಂತಹ ಮಾಸ್ಟರ್ ದಾತಾ ಮಕ್ಕಳಿಗೆ ಬಾಪ್ದಾದಾರವರು ಬಹಳ- ಬಹಳ ಪದಮಾಗುಣ, ಕೋಹಿನೂರ್ ವಜ್ರಕ್ಕಿಂತಲೂ ಹೆಚ್ಚು ಪ್ರಭುವಿನ ಕಣ್ಮಣಿ ಮಕ್ಕಳಿಗೆ ನೆನಪು-ಪ್ರೀತಿ ಹಾಗು ನಮಸ್ತೆ.

ವರದಾನ:
ಎಲ್ಲಾ ಶಕ್ತಿರೂಪಿ ಭುಜಗಳನ್ನು ಆದೇಶದನುಸಾರ ನಡೆಸುವಂತಹ ಮಾಸ್ಟರ್ ರಚಯಿತ ಭವ

ಕರ್ಮ ಪ್ರಾರಂಭ ಮಾಡುವ ಮೊದಲು ಎಂತಹ ಕರ್ಮ ಅಂತಹ ಶಕ್ತಿಯನ್ನು ಆಹ್ವಾನಮಾಡಿ. ಮಾಲೀಕರಾಗಿ ಆದೇಶಮಾಡಿ. ಏಕೆಂದರೆ ಈ ಸರ್ವಶಕ್ತಿಗಳು ತಮ್ಮ ಭುಜಗಳ ಸಮಾನವಿದೆ, ತಮ್ಮ ಭುಜಗಳು ತಮ್ಮ ಆದೇಶದ ವಿನಃ ಏನೂ ಮಾಡುವುದಿಲ್ಲ. ಸಹನ ಶಕ್ತಿಗೆ ಆದೇಶ ಮಾಡಿ ಸಹನ ಶಕ್ತಿ ಈ ಕಾರ್ಯ ಸಫಲಮಾಡು ಎಂದು ಆಮೇಲೆ ನೋಡಿ ಸಫಲತೆ ಆಗೇ ತೀರುತ್ತದೆ ಆದರೆ ನೀವು ಆದೇಶ ನೀಡುವ ಬದಲು ಭಯ ಬೀಳುವಿರಿ- ಮಾಡಲು ಸಾಧ್ಯವೋ ಇಲ್ಲವೋ ಎಂದು ಈ ಪ್ರಕಾರದ ಭಯ ಇದ್ದಲ್ಲಿ ಆದೇಶ ನಡೆಯುವುದಿಲ್ಲ ಆದ್ದರಿಂದ ಮಾಸ್ಟರ್ ರಚೈತ ಆಗಿ ಎಲ್ಲಾ ಶಕ್ತಿಗಳನ್ನು ಆದೇಶದ ಪ್ರಮಾಣ ನಡೆಸಲು ನಿರ್ಭಯರಾಗಿ.

ಸ್ಲೋಗನ್:
ಆಶ್ರಯದಾತಾ ತಂದೆಯನ್ನು ಪ್ರತ್ಯಕ್ಷಮಾಡಿ ಎಲ್ಲರಿಗೂ ಸುಖ-ಶಾಂತಿಯ ಅನುಭೂತಿ ಮಾಡಿಸಿ.

ಅವ್ಯಕ್ತ ಸೂಚನೆ: ಏಕಾಂತಪ್ರಿಯರಾಗಿ ಏಕತೆ ಮತ್ತು ಏಕಾಗ್ರತೆಯನ್ನು ತಮ್ಮದಾಗಿಸಿಕೊಳ್ಳಿ

ಹೇಗೆ ಯಾವುದೇ ಸಂಶೋಧಕ ಯಾವುದೇ ಸಂಶೋಧನೆ ಮಾಡುವುದಕ್ಕೆ ಏಕಾಂತದಲ್ಲಿರುತ್ತಾರೆ. ಅಂದಾಗ ಇಲ್ಲಿಯ ಏಕಾಂತ ಅರ್ಥಾತ್ ಒಬ್ಬನ ಅಂತ್ಯದಲ್ಲಿ ಮುಳುಗುವುದು, ಹೊರಗಡೆಯ ಆಕರ್ಷಣೆಗಳಿಂದ ಏಕಾಂತ ಬೇಕಾಗಿದೆ. ಈ ರೀತಿಯಲ್ಲಿ ಕೇವಲ ರೂಮಿನಲ್ಲಿ ಕುಳಿತುಕೊಳ್ಳುವ ಏಕಾಂತ ಬೇಕು, ಆದರೆ ಮನಸ್ಸು ಏಕಾಂತದಲ್ಲಿರುತ್ತದೆ. ಮನಸ್ಸಿನ ಏಕಾಗ್ರತೆ ಅರ್ಥಾತ್ ಒಬ್ಬರ ನೆನಪಿನಲ್ಲಿರುವುದು, ಏಕಾಗ್ರರಾಗುವುದು ಇದೇ ಏಕಾಂತವಾಗಿದೆ.