23.03.25    Avyakt Bapdada     Kannada Murli    02.11.2004     Om Shanti     Madhuban


ಸ್ವ-ಉಪಕಾರಿಯಾಗಿ ಅಪಕಾರಿಗಳ ಮೇಲೆ ಉಪಕಾರ ಮಾಡಿ, ಸರ್ವಶಕ್ತಿ, ಸರ್ವಗುಣ ಸಂಪನ್ನ ಸನ್ಮಾನದ ದಾತರಾಗಿ”


ಇಂದು ಸ್ನೇಹ ಸಾಗರ ತನ್ನ ನಾಲ್ಕೂಕಡೆಯಲ್ಲಿರುವಂತಹ ಸ್ನೇಹಿ ಮಕ್ಕಳನ್ನು ನೋಡಿ ಹರ್ಷಿತರಾಗುತ್ತಿದ್ದಾರೆ. ಭಲೆ ಸಾಕಾರ ರೂಪದಲ್ಲಿ ಸಮ್ಮುಖದಲ್ಲಿರುವವರಾಗಿರಬಹುದು, ಭಲೆ ಸ್ಥೂಲರೂಪದಲ್ಲಿ ದೂರ ಕುಳಿತಿರಬಹುದು ಆದರೆ ಸ್ನೇಹವು ಎಲ್ಲರನ್ನೂ ಸಮೀಪದಲ್ಲಿ ಅನುಭವ ಮಾಡಿಸುತ್ತಿದೆ. ಈ ಅನುಭವವು ಮಾಡುತ್ತಿದ್ದೀರಾ! ಸ್ನೇಹವು ಪ್ರತಿಯೊಬ್ಬ ಮಗುವಿನ ತಂದೆಯ ಸಮೀಪದ ಅನುಭವ ಮಾಡಿಸುತ್ತಿದೆ. ತಾವೆಲ್ಲಾ ಮಕ್ಕಳೂ ಸಹ ತಂದೆಯ ಸ್ನೇಹದಲ್ಲಿ ಸಮ್ಮುಖದಲ್ಲಿ ಬಂದು ತಲುಪಿದ್ದೀರಿ. ಬಾಪ್ದಾದಾರವರು ನೋಡಿದರು - ಪ್ರತಿಯೊಬ್ಬ ಮಗುವಿನ ಹೃದಯದಲ್ಲಿ ಬಾಪ್ದಾದಾರವರ ಸ್ನೇಹವು ಸಮಾವೇಶವಾಗಿದೆ. ಪ್ರತಿಯೊಬ್ಬರ ಹೃದಯದಲ್ಲಿ “ನನ್ನ ಬಾಬಾ” - ಇದೇ ಸ್ನೇಹದ ಗೀತೆಯು ಮೊಳಗುತ್ತಿತ್ತು. ಸ್ನೇಹವು, ಈ ದೇಹ, ದೇಹದ ಸಂಬಂಧದಿಂದ ಭಿನ್ನರನ್ನಾಗಿ ಮಾಡುತ್ತಿತ್ತು. ಸ್ನೇಹವೇ ಮಾಯಾಜೀತರನ್ನಾಗಿ ಮಾಡುತ್ತಾ ಇದೆ. ಎಲ್ಲಿ ಮನಸ್ಸಿನ ಸ್ನೇಹವಿದೆಯೋ ಅಲ್ಲಿ ಮಾಯೆಯು ದೂರದಿಂದಲೇ ಓಡಿಹೋಗುತ್ತದೆ. ಸ್ನೇಹದ ವಿಷಯದಲ್ಲಿ ಎಲ್ಲಾ ಮಕ್ಕಳು ಉತ್ತೀರ್ಣರಾಗಿದ್ದೀರಿ. ಒಂದು ಸ್ನೇಹವಿದೆ, ಮತ್ತೊಂದಾಗಿದೆ - ಸರ್ವಶಕ್ತಿವಂತ ತಂದೆಯ ಮೂಲಕ ಸರ್ವಶಕ್ತಿಗಳ ಖಜಾನೆ

ಆದುದರಿಂದ ಇಂದು ಬಾಪ್ದಾದಾ ಒಂದುಕಡೆ ಸ್ನೇಹವನ್ನು ನೋಡುತ್ತಿದ್ದರು, ಮತ್ತೊಂದುಕಡೆ ಶಕ್ತಿಸೇನೆಯ ಶಕ್ತಿಯರನ್ನು ನೋಡುತ್ತಿದ್ದರು. ಎಷ್ಟು ಸ್ನೇಹದಲ್ಲಿ ಸಮಾವೇಶವಾಗಿದ್ದೀರಿ ಅಷ್ಟೇ ಸರ್ವಶಕ್ತಿಗಳೂ ಸಹ ಸಮಾವೇಶವಾಗಿದೆಯೇ? ಬಾಪ್ದಾದಾರವರು ಎಲ್ಲಾ ಮಕ್ಕಳಿಗೆ ಒಂದೇ ರೀತಿಯಾಗಿ ಸರ್ವಶಕ್ತಿಗಳನ್ನು ಕೊಟಿದ್ದಾರೆ, ಮಾಸ್ಟರ್ ಸರ್ವಶಕ್ತಿವಂತರನ್ನಾಗಿ ಮಾಡಿದ್ದಾರೆ. ಕೆಲವರಿಗೆ ಸರ್ವಶಕ್ತಿವಂತರನ್ನಾಗಿ, ಕೆಲವರಿಗೆ ಕೇವಲ ಶಕ್ತಿವಂತರನ್ನಾಗಿ ಮಾಡಿಲ್ಲ. ತಾವೆಲ್ಲರೂ ಸಹ ತಮ್ಮ ಸ್ವಮಾನವನ್ನು ಮಾಸ್ಟರ್ ಸರ್ವಶಕ್ತಿವಂತವರೆಂದು ಹೇಳುತ್ತೀರಿ. ಆದುದರಿಂದ ಬಾಪ್ದಾದಾ ನಾಲ್ಕೂಕಡೆಯ ಮಕ್ಕಳನ್ನು ಕೇಳುತ್ತಿದ್ದಾರೆ - ಪ್ರತಿಯೊಬ್ಬರೂ ಸ್ವಯಂನಲ್ಲಿ ಸರ್ವಶಕ್ತಿಗಳನ್ನು ಅನುಭವ ಮಾಡುತ್ತೀರಾ? ಸದಾ ಸರ್ವಶಕ್ತಿಗಳ ಮೇಲೆ ಅಧಿಕಾರವಿದೆಯೇ? ಸರ್ವಶಕ್ತಿಗಳು ಬಾಪ್ದಾದಾರವರ ಆಸ್ತಿಯಾಗಿದೆ ಅಂದಾಗ ತಮ್ಮ ಆಸ್ತಿಯ ಮೇಲೆ ಅಧಿಕಾರವಿದೆಯೇ? ಅಧಿಕಾರವಿದೆಯೇ? ನಿಮಿತ್ತ ಸಹೋದರಿಯರು ಹೇಳಿ - ಅಧಿಕಾರವಿದೆಯೇ? ಯೋಚನೆ ಮಾಡಿ ಹೇಳಬೇಕು, ಪಾಂಡವರಿಗೆ ಅಧಿಕಾರವಿದೆಯೇ? ಸದಾ ಇದೆಯೋ ಅಥವಾ ಒಮ್ಮೊಮ್ಮೆ ಇದೆಯೋ? ಯಾವ ಸಮಯದಲ್ಲಿ ಯಾವ ಶಕ್ತಿಯ ಅವಶ್ಯಕತೆಯಿದೆಯೋ ಆಗ ನಿಮ್ಮ ಶಕ್ತಿಸೇನೆಯು ಆದೇಶದಿಂದ ಹಾಜರಾಗುತ್ತದೆಯೇ? ಸಮಯದಲ್ಲಿ ಆಗಲಿ ಪ್ರಭು ಎಂದು ಮಾಡುತ್ತದೆಯೇ? ಯೋಚಿಸಿ, ನೋಡಿ. ಅಧಿಕಾರಿ ಆದೇಶ ಕೊಟ್ಟಾಗ ಶಕ್ತಿಯು ಆಗಲಿ ಪ್ರಭು ಎಂದು ಹೇಳಬೇಕು. ನೀವು ಯಾವ ಶಕ್ತಿಯನ್ನು ಆಹ್ವಾನ ಮಾಡುತ್ತೀರೆಂದರೆ ಎಂತಹ ಸಮಯ, ಎಂತಹ ಪರಿಸ್ಥಿತಿಗನುಗುಣವಾಗಿ ಶಕ್ತಿಗಳನ್ನು ಕಾರ್ಯದಲ್ಲಿ ತೊಡಗಿಸಬೇಕು. ಇಂತಹ ಅಧಿಕಾರಿ ಆತ್ಮಗಳಾಗಿದ್ದೀರಾ? ತಮ್ಮದರ ಮೇಲೆ ಅಧಿಕಾರವಿರುತ್ತದೆ. ಯಾವ ಸಮಯದಲ್ಲಿ ಯಾವ ವಿಧಿಯಿಂದ ಅವಶ್ಯಕತೆಯಿದೆಯೋ ಆ ಸಮಯದಲ್ಲಿ ಕಾರ್ಯದಲ್ಲಿ ತೊಡಗಿಬಿಡಬೇಕು. ಅಳವಡಿಸಿಕೊಳ್ಳುವಂತಹ ಶಕ್ತಿಯು ತಮಗೆ ಅವಶ್ಯಕತೆಯಿದೆ ಎಂದು ತಿಳಿದುಕೊಳ್ಳಿ. ಆಗ ನೀವು ಅಳವಡಿಸಿಕೊಳ್ಳುವ ಶಕ್ತಿಗೆ ಆದೇಶ ಕೊಡುತ್ತೀರಿ, ಆಗ ಆ ಶಕ್ತಿಯು ಆದೇಶವನ್ನು ಒಪ್ಪಿಕೊಂಡು ಪ್ರತ್ಯಕ್ಷವಾಗಿಬಿಡುತ್ತದೆಯೇ? ಆಗಿಬಿಡುತ್ತದೆಯೇ! ತಲೆಯನ್ನು ಅಲುಗಾಡಿಸಿ. ಆಗಿಬಿಡುತ್ತದೆಯೇ? ಕೈಯನ್ನು ಅಲುಗಾಡಿಸಿ. ಆಗಿಬಿಡುತ್ತದೆಯೇ? ಒಮ್ಮೊಮ್ಮೆ ಆಗುತ್ತದೆಯೋ ಅಥವಾ ಸದಾ ಆಗುತ್ತದೆಯೋ? ಅಳವಡಿಸಿಕೊಳ್ಳುವಂತಹ ಶಕ್ತಿಯೇನೋ ಪ್ರತ್ಯಕ್ಷವಾಗುತ್ತದೆ ಆದರೆ 10 ಬಾರಿ ಅಳವಡಿಸಿಕೊಂಡು ನಂತರ 11ನೇ ಬಾರಿ ಮೇಲೆ ಏರುಪೇರು ಆಗುತ್ತದೆಯೇ? ಸದಾಕಾಲ ಮತ್ತು ಸಹಜವಾಗಿ ಪ್ರತ್ಯಕ್ಷವಾಗಿಬಿಡಬೇಕು. ಸಮಯ ಕಳೆದನಂತರ ನಿಮ್ಮ ಬಳಿ ಬರುವುದಲ್ಲ. ಮಾಡಬೇಕೆಂದು ಇಷ್ಟಪಡುತ್ತಿದ್ದೆವು ಆದರೆ ಆಗಿಹೋಯಿತು - ಈ ರೀತಿಯೂ ಸಹ ಆಗಬಾರದು. ಇದನ್ನೇ ಸರ್ವಶಕ್ತಿಗಳಿಗೆ ಅಧಿಕಾರಿಗಳೆಂದು ಹೇಳಲಾಗುತ್ತದೆ. ಈ ಅಧಿಕಾರವನ್ನು ಬಾಪ್ದಾದಾರವರಂತೂ ಎಲ್ಲಾ ಮಕ್ಕಳಿಗೆ ಕೊಟ್ಟಿದ್ದಾರೆ ಆದರೆ ಸದಾ ಅಧಿಕಾರಿಯಾಗುವುದರಲ್ಲಿ ನಂಬರ್ವಾರ್ ಆಗಿಬಿಡುವುದು ಕಂಡುಬರುತ್ತದೆ. ಸದಾ ಹಾಗೂ ಸಹಜವಾಗಿರಲಿ, ಸ್ವಾಭಾವಿಕವಾಗಿರಲಿ, ಸ್ವಭಾವವಾಗಿರಲಿ. ಅದಕ್ಕಾಗಿ ವಿಧಿಯಾಗಿದೆ - ಹೇಗೆ ತಂದೆಗೆ ಪ್ರಭು ಪ್ರತ್ಯಕ್ಷವಾಗಿದ್ದಾರೆಂದು ಹೇಳುತ್ತೇವೆ. ಮಾಲೀಕ ನಮ್ಮ ಸನ್ಮುಖದಲ್ಲಿದ್ದಾರೆಂದು ಹೇಳುತ್ತೇವೆ ಆದುದರಿಂದ ಯಾವ ಮಗು ಪ್ರಭುವಿನ ಪ್ರತಿಯೊಂದು ಶ್ರೀಮತವನ್ನು ಆಗಲಿ ಪ್ರಭು ಎಂದು ಒಪ್ಪಿ ಅದರಂತೆಯೇ ನಡೆಯುತ್ತಾರೆಂದಾಗ ಅವರ ಮುಂದೆ ಸರ್ವಶಕ್ತಿಗಳೂ ಸಹ ಆಗಲಿ ಪ್ರಭು ಎಂದು ಪ್ರತ್ಯಕ್ಷವಾಗುತ್ತದೆ. ಪ್ರತಿಯೊಂದು ಆಜ್ಞೆಯಲ್ಲಿ ಆಗಲಿ ಪ್ರಭು, ಪ್ರತಿಯೊಂದು ಹೆಜ್ಜೆಯಲ್ಲಿ ಆಗಲಿ ಪ್ರಭು ಎಂದು ನಡೆಯುತ್ತದೆ. ಅವರ ಮುಂದೆ ಸರ್ವಶಕ್ತಿಗಳೂ ಆಜ್ಞೆಯಂತೆ ನಡೆಯುತ್ತವೆ. ಪ್ರತಿಯೊಂದು ಆಜ್ಞೆಯಲ್ಲಿ ಜೀ ಹಾಜೀರ್, ಪ್ರತಿಯೊಂದು ಹೆಜ್ಜೆಯಲ್ಲಿ ಜೀ ಹಾಜೀರ್. ಒಂದುವೇಳೆ ನೀವು ತಂದೆಯ ಪ್ರತಿಯೊಂದು ಶ್ರೀಮತದಂತೆ ನಡೆಯಲಿಲ್ಲವೆಂದರೆ ಪ್ರತಿಯೊಂದು ಶಕ್ತಿಯೂ ಸಹ ಪ್ರತಿಯೊಂದು ಸಮಯದಲ್ಲಿ ಆಗಲಿ ಪ್ರಭು ಎಂದು ಆಜ್ಞೆಯನ್ನು ಪಾಲನೆ ಮಾಡುವುದಿಲ್ಲ. ಒಂದುವೇಳೆ ಒಮ್ಮೊಮ್ಮೆ ತಂದೆಯ ಶ್ರೀಮತ ಅಥವಾ ಆಜ್ಞೆಯನ್ನು ಪಾಲನೆ ಮಾಡುತ್ತೀರೆಂದರೆ ಸರ್ವಶಕ್ತಿಗಳೂ ನಿಮ್ಮ ಆದೇಶಗಳನ್ನೂ ಒಮ್ಮೊಮ್ಮೆಯೇ ಪಾಲನೆ ಮಾಡುತ್ತವೆ. ಆ ಸಮಯದಲ್ಲಿ ಅಧಿಕಾರಿಗೆ ಬದಲಾಗಿ ಅಧೀನರಾಗಿಬಿಡುತ್ತೀರಿ. ಆದುದರಿಂದ ಬಾಪ್ದಾದಾರವರು ಫಲಿತಾಂಶವನ್ನು ಪರಿಶೀಲನೆ ಮಾಡಿದಾಗ ಏನು ನೋಡಿದರು? ನಂಬರ್ವಾರ್ ಇದ್ದಾರೆ, ಎಲ್ಲರೂ ನಂಬರ್ವನ್ ಇಲ್ಲ, ನಂಬರ್ವಾರ್ ಇದ್ದಾರೆ, ಸದಾ ಸಹಜವಿಲ್ಲ, ಒಮ್ಮೊಮ್ಮೆ ಸ್ವಲ್ಪ ಕಷ್ಟದಿಂದ ಶಕ್ತಿಯು ಇಮರ್ಜ್ ಆಗಿಬಿಡುತ್ತದೆ.

ಬಾಪ್ದಾದಾರವರು ಪ್ರತಿಯೊಬ್ಬ ಮಗುವನ್ನು ತಂದೆಯ ಸಮಾನರನ್ನಾಗಿ ನೋಡಲು ಬಯಸುತ್ತಾರೆ, ನಂಬರ್ವಾರ್ ಆಗಿ ನೋಡಲು ಬಯಸುವುದಿಲ್ಲ ಹಾಗೂ ತಮ್ಮೆಲ್ಲರ ಲಕ್ಷ್ಯವೂ ಸಹ ತಂದೆಯ ಸಮಾನರಾಗುವುದಾಗಿದೆ. ಸಮಾನರಾಗುವಂತಹ ಲಕ್ಷ್ಯವಿದೆಯೇ ಅಥವಾ ನಂಬರ್ವಾರ್ ಆಗುವಂತಹ ಲಕ್ಷ್ಯವಿದೆಯೇ? ಒಂದುವೇಳೆ ಕೇಳಿದಾಗ ಎಲ್ಲರೂ ಸಮಾನರಾಗುವುದು ಎಂದು ಹೇಳುತ್ತಾರೆ. ಆದುದರಿಂದ ಪರಿಶೀಲನೆ ಮಾಡಿಕೊಳ್ಳಿ - ಒಂದನೆಯದಾಗಿ ಸರ್ವಶಕ್ತಿಗಳು ಇದೆಯೇ? ಸರ್ವಶಕ್ತಿಗಳ ಕೆಳಗಡೆ ‘’ಸರ್ವ’ ಎಂಬ ಅಕ್ಷರದ ಕೆಳಗಡೆ ಅಂಡರ್ಲೈನ್ ಮಾಡಿ. ಸರ್ವಗುಣಗಳಿವೆಯೇ? ತಂದೆಯ ಸಮಾನ ಸ್ಥಿತಿಯಿದೆಯೇ? ಕೆಲವೊಮ್ಮೆ ಸ್ವಯಂನ ಸ್ಥಿತಿ, ಒಮ್ಮೊಮ್ಮೆ ಯಾವುದೇ ಪರಿಸ್ಥಿತಿಯು ನಿಮ್ಮ ಮೇಲೆ ವಿಜಯವನ್ನಂತೂ ಪ್ರಾಪ್ತಿ ಮಾಡಿಕೊಳ್ಳುವುದಿಲ್ಲವೆ? ಒಂದುವೇಳೆ ಪರಿಸ್ಥಿತಿಗಳು ವಿಜಯವನ್ನು ಪಡೆಯುತ್ತದೆಯೆಂದಾಗ ಅದರ ಕಾರಣವನ್ನು ತಿಳಿದಿದ್ದೀರಾ? ಸ್ಥಿತಿಯು ಬಲಹೀನವಾಗಿರುವ ಕಾರಣ ಪರಿಸ್ಥಿತಿಯು ಯುದ್ಧ ಮಾಡಬಹುದು, ಸದಾ ಸ್ವಸ್ಥಿತಿಯು ವಿಜಯವಾಗಿರಲಿ ಅದಕ್ಕೆ ಸಾಧನವಾಗಿದೆ - ಸದಾ ಸ್ವಮಾನ ಮತ್ತು ಸನ್ಮಾನದ ಸಮತೋಲನೆ. ಸ್ವಮಾನಧಾರಿ ಆತ್ಮವು ಸ್ವತಃವಾಗಿ ಸನ್ಮಾನವನ್ನು ಕೊಡುವ ದಾತ ಆಗಿರುತ್ತಾರೆ. ವಾಸ್ತವದಲ್ಲಿ ಯಾರಿಗಾದರೂ ಸನ್ಮಾನವನ್ನು ಕೊಡುವುದು. ಅದು ಕೊಡುವುದಲ್ಲ, ಕೊಡುವುದೆಂದರೆ ತೆಗೆದುಕೊಳ್ಳುವುದಾಗಿದೆ. ಸನ್ಮಾನವನ್ನು ಕೊಡುವಂತಹವರು ಎಲ್ಲರ ಹೃದಯದಲ್ಲಿ ಮಾನನೀಯರಾಗಿಬಿಡುತ್ತಾರೆ. ಬ್ರಹ್ಮಾತಂದೆಯನ್ನು ನೋಡಿ, ಆದಿದೇವನಾಗಿದ್ದರೂ, ನಾಟಕದ ಮೊದಲನೆಯ ಆತ್ಮವಾಗಿದ್ದರೂ ಸದಾ ಮಕ್ಕಳಿಗೆ ಸನ್ಮಾನ ಕೊಟ್ಟರು. ತನಗಿಂತಲೂ ಹೆಚ್ಚು ಮಕ್ಕಳಿಗೆ ಆತ್ಮಗಳ ಮೂಲಕಾ ಗೌರವವನ್ನು ತರಿಸಿಕೊಟ್ಟರು. ಆದ್ದರಿಂದ ಪ್ರತಿಯೊಬ್ಬ ಮಗುವಿನ ಹೃದಯದಲ್ಲಿ ಬ್ರಹ್ಮಾಬಾಬಾ ಮಾನನೀಯರಾದರು ಅಂದಾಗ ಬ್ರಹ್ಮಾತಂದೆಯು ಅನ್ಯರಿಗೆ ಮಾನ್ಯತೆಯನ್ನು ಕೊಟ್ಟರೋ ಅಥವಾ ತೆಗೆದುಕೊಂಡರೋ? ಸನ್ಮಾನವನ್ನು ಕೊಡುವುದೆಂದರೆ ಅನ್ಯರ ಹೃದಯದಲ್ಲಿ ಹೃದಯಪೂರ್ವಕವಾದ ಸ್ನೇಹದ ಬೀಜವನ್ನು ಬಿತ್ತುವುದಾಗಿದೆ. ವಿಶ್ವದ ಮುಂದೆ ಇವರು ವಿಶ್ವಕಲ್ಯಾಣಕಾರಿ ಆತ್ಮಗಳಾಗಿದ್ದಾರೆ ಎಂಬ ಅನುಭವವನ್ನು ಮಾಡಬೇಕು ನೀವು ಯಾವಾಗ ಸರ್ವಆತ್ಮಗಳಿಗೂ ಸನ್ಮಾನವನ್ನು ಕೊಡುತ್ತೀರಾ ಆಗ ಈ ಅನುಭವವನ್ನು ಮಾಡುತ್ತಾರೆ.

ಆದುದರಿಂದ ಬಾಪ್ದಾದಾ ವರ್ತಮಾನ ಸಮಯಕ್ಕನುಗುಣವಾಗಿ ಸನ್ಮಾನ ಕೊಡಬೇಕಾಗಿರುವುದನ್ನು ನೋಡಿದರು. ಸನ್ಮಾನವನ್ನು ಕೊಡುವಂತಹವರೇ ವಿದಾತ ಆತ್ಮನಾಗಿ ಕಾಣುತ್ತಾರೆ. ಸನ್ಮಾನ ಕೊಡುವಂತಹವರೇ ಬಾಪ್ದಾದಾರವರ ಶ್ರೀಮತ (ಶುಭಭಾವನೆ-ಶುಭಕಾಮನೆ) ವನ್ನು ಒಪ್ಪಿಕೊಳ್ಳುವಂತಹ ಆಜ್ಞಾಕಾರಿ ಮಕ್ಕಳಾಗಿದ್ದಾರೆ. ಸನ್ಮಾನವನ್ನು ಕೊಡುವುದೇ ಈಶ್ವರೀಯ ಪರಿವಾರದೊಂದಿಗಿನ ಹೃದಯಪೂರ್ವಕವಾದ ಪ್ರೀತಿಯಾಗಿದೆ. ಸನ್ಮಾನ ಕೊಡುವಂತಹವರು ಸ್ವಮಾನದಲ್ಲಿ ಸಹಜವಾಗಿ ಸ್ಥಿತರಾಗುತ್ತಾರೆ - ಏಕೆ? ಯಾವ ಆತ್ಮಗಳಿಗೆ ಸನ್ಮಾನವನ್ನು ಕೊಡುತ್ತಾರೆಯೋ ಆ ಆತ್ಮಗಳ ಮೂಲಕ ಯಾವ ಆಶೀರ್ವಾದಗಳು ಹೃದಯದಿಂದ ಸಿಗುತ್ತದೆ, ಆ ಆಶೀರ್ವಾದಗಳ ಭಂಡಾರ ಸ್ವಮಾನವನ್ನು ಸಹಜ ಹಾಗೂ ಸ್ವತಃವಾಗಿ ನೆನಪಿಗೆ ತರಿಸುತ್ತದೆ. ಆದ್ದರಿಂದ ಬಾಪ್ದಾದಾ ನಾಲ್ಕೂ ಕಡೆಯಲ್ಲಿರುವಂತಹ ಮಕ್ಕಳಿಗೆ ವಿಶೇಷರೂಪದಲ್ಲಿ ಅಂಡರ್ಲೈನ್ ಮಾಡಿಸುತ್ತಿದ್ದಾರೆ- ಸನ್ಮಾನದ ದಾತರಾಗಿ.

ಬಾಪ್ದಾದಾರವರೂ ಸಹ ಯಾವ ಮಗು ಹೇಗಾದರೂ ಬಂದಿರಲಿ, ಬಲಹೀನರಾಗಿ ಬಂದಿರಲಿ, ಸಂಸ್ಕಾರದ ವಶೀಭೂತರಾಗಿ ಬಂದಿರಲಿ, ಪಾಪದ ಹೊರೆಯನ್ನು ತಂದಿರಲಿ, ಕಠಿಣಸಂಸ್ಕಾರವನ್ನು ತೆಗೆದುಕೊಂಡು ಬಂದಿರಲಿ, ಆದರೂ ಬಾಪ್ದಾದಾರವರು ಪ್ರತಿಯೊಂದು ಮಗುವನ್ನು ಯಾವ ದೃಷ್ಟಿಯಿಂದ ನೋಡಿದರು! ನನ್ನ ಅಗಲಿಹೋಗಿ ಮರಳಿ ಸಿಕ್ಕಿರುವ ಮಗು, ಮುದ್ದಾದ ಮಗು, ಈಶ್ವರೀಯ ಪರಿವಾರದ ಮಗುವಾಗಿದ್ದಾರೆ. ಹೀಗೆ ಸನ್ಮಾನವನ್ನು ಕೊಟ್ಟರು ತಾವು ಸ್ವಮಾನಧಾರಿಗಳಾಗಿಬಿಟ್ಟಿರಿ. ಹೀಗೆ ಫಾಲೋ ಫಾದರ್ ಮಾಡಿ. ಒಂದುವೇಳೆ ಸಹಜವಾಗಿ ಸರ್ವಗುಣ ಸಂಪನ್ನರಾಗಬೇಕೆಂದು ಬಯಸುತ್ತೀರೆಂದರೆ ಸನ್ಮಾನದ ದಾತರಾಗಿ. ತಿಳಿಯಿತೆ! ಸಹಜವಾಗಿದೆಯೇ. ಸಹಜವಿದೆಯೋ ಅಥವಾ ಕಷ್ಟವಿದೆಯೋ! ನಿಮಿತ್ತ ಸಹೋದರಿಯರು ಏನು ತಿಳಿಯುತ್ತೀರಿ - ಸಹಜವಾಗಿದೆಯೇ? ಯಾರಿಗಾದರೂ ಕೊಡುವುದು ಸಹಜವಾಗಿದೆಯೇ. ಕೆಲವರಿಗೆ ಕೊಡುವುದು ಕಷ್ಟವಾಗಿದೆಯೋ ಅಥವಾ ಎಲ್ಲರಿಗೂ ಕೊಡುವುದು ಸಹಜವಾಗಿದೆಯೋ? ನಿಮ್ಮ ಬಿರುದೇನಾಗಿದೆ - ಸರ್ವಉಪಕಾರಿ. ಅಪಕಾರ ಮಾಡುವಂತಹವರಿಗೂ ಸಹ ಉಪಕಾರ ಮಾಡುವುದು ಅಂದಾಗ ಪರಿಶೀಲನೆ ಮಾಡಿಕೊಳ್ಳಿ - ಸರ್ವ ಉಪಕಾರಿ ದೃಷ್ಟಿ, ವೃತ್ತಿ, ಸ್ಮೃತಿಯಿರುತ್ತದೆಯೇ? ಅನ್ಯರ ಮೇಲೆ ಉಪಕಾರ ಮಾಡುವುದೆಂದರೆ ಸ್ವಯಂಗೆ ಉಪಕಾರ ಮಾಡಿಕೊಳ್ಳುವುದಾಗಿದೆ. ಈಗ ಏನು ಮಾಡಬೇಕು? ಎಲ್ಲರಿಗೆ ಸನ್ಮಾನ ಕೊಡಬೇಕಲ್ಲವೆ! ಇದರಿಂದ ಬೇರೆ-ಬೇರೆ ಮಾತುಗಳನ್ನು ಧಾರಣೆ ಮಾಡಲು ಕಷ್ಟಪಡಬೇಕಾಗುತ್ತದೆ ಆದರೆ ಸನ್ಮಾನ ಕೊಡುವುದರಿಂದ ಶ್ರಮದಿಂದ ಬಿಡುಗಡೆಯಾಗುತ್ತೀರಿ ಏಕೆಂದರೆ ಬಾಪ್ದಾದಾರವರು ನೋಡುತ್ತಿದ್ದರು - ಸಮಯದ ಗತಿಯು ವೇಗವಾಗಿ ಹೋಗುತ್ತಿದೆ. ಸಮಯವು ನಿರೀಕ್ಷಣೆ ಮಾಡುತ್ತಾ ಇದೆ ಅಂದಾಗ ತಾವೆಲ್ಲರೂ ಅದಕ್ಕೆ ಸಂಪನ್ನರಾಗಬೇಕಾಗಿದೆ. ಸಮಯದ ನಿರೀಕ್ಷಣೆಯನ್ನು ಸಮಾಪ್ತಿ ಮಾಡಬೇಕಾಗಿದೆ. ಯಾವುದರಿಂದ ಸಂಪನ್ನರಾಗಬೇಕಾಗಿದೆ? ತಮ್ಮ ಸಂಪೂರ್ಣತೆಯ ಮತ್ತು ಸಮಾನತೆಯ ವೇಗವನ್ನು ತೀವ್ರ ಮಾಡಿಕೊಳ್ಳಬೇಕಾಗಿದೆ. ಮಾಡುತ್ತಿದ್ದೇವೆ ಎಂದಲ್ಲ, ತೀವ್ರಗತಿಯಿಂದ ಪರಿಶೀಲನೆ ಮಾಡಿಕೊಳ್ಳಿ - ತೀವ್ರಗತಿಯಿದೆಯೇ?

ಉಳಿದಂತೆ ಹೊಸ-ಹೊಸಮಕ್ಕಳೂ ಸಹ ಸ್ನೇಹದಿಂದ ಬಂದು ತಲುಪಿದ್ದೀರಿ. ಬಾಪ್ದಾದಾರವರು ಹೊಸ-ಹೊಸ ಮಕ್ಕಳನ್ನು ನೋಡಿ ಖುಷಿಪಡುತ್ತಿದ್ದಾರೆ. ಯಾರು ಮೊದಲನೇ ಬಾರಿ ಬಂದಿದ್ದೀರಿ ಅವರು ಕೈಯೆತ್ತಿ. ಬಹಳ ಬಂದಿದ್ದೀರಿ. ಇದು ತಂದೆಯ ಮನೆಯಾಗಿದೆ, ಭಲೆ ಬನ್ನಿ. ನಿಮ್ಮ ಮನೆಗೆ ನಿಮಗೆ ಸುಸ್ವಾಗತ. ಒಳ್ಳೆಯದು.

ಕರ್ನಾಟಕ ಸೇವಾಧಾರಿಗಳೊಂದಿಗೆ: ಕರ್ನಾಟಕದವರೆಲ್ಲಾ ಎದ್ದೇಳಿ. ಸೇವೆಯ ಸುವರ್ಣಾವಕಾಶಕ್ಕೆ ಅಭಿನಂದನೆಗಳು. ಮೊದಲನೆ ಅವಕಾಶವನ್ನು ತೆಗೆದುಕೊಂಡಂತೆ ಮೊದಲನೆ ಸ್ಥಾನದಲ್ಲಿರಬೇಕಲ್ಲವೆ! ಪುರುಷಾರ್ಥದಲ್ಲಿ ವಿಜಯ ಆಗುವುದರಲ್ಲಿ ಹಾಗೂ ಎಲ್ಲದರಲ್ಲಿಯೂ ಮೊದಲನೆ ಸ್ಥಾನವನ್ನು ತೆಗೆದುಕೊಳ್ಳುವಂತಹವರು. ಎರಡನೆ ಸ್ಥಾನವನ್ನು ತೆಗೆದುಕೊಳ್ಳುವವರಲ್ಲ. ಮೊದಲನೆ ಸ್ಥಾನವನ್ನೇ ತೆಗೆದುಕೊಳ್ಳುವವರು. ಇಷ್ಟು ಸಾಹಸವಿದೆಯೇ? ನೀವು ಸಾಹಸದ ಹೆಜ್ಜೆಯನ್ನಿಟ್ಟಿದ್ದೇ ಆದರೆ ತಂದೆಯಿಂದ ಸಾವಿರಪಟ್ಟು ಸಹಯೋಗವಿದೆ. ಒಳ್ಳೆಯ ಅವಕಾಶವನ್ನು ತೆಗೆದುಕೊಂಡಿದ್ದೀರಿ. ಬಹಳ ಪುಣ್ಯದ ಖಾತೆಯನ್ನು ಜಮಾಮಾಡಿಕೊಂಡಿಬಿಟ್ಟಿದ್ದೀರಿ. ಒಳ್ಳೆಯದು. ಕರ್ನಾಟಕದವರು ಮೆಗಾ ಕಾರ್ಯಕ್ರಮವನ್ನು ಮಾಡಿದ್ದೀರಾ? ಮಾಡಿದ್ದಿರಾ? ಮಾಡಿಲ್ಲ, ಏಕೆ ಮಾಡಲಿಲ್ಲ? ಕರ್ನಾಟಕದವರು ಎಲ್ಲದರಲ್ಲಿಯೂ ಮೊದಲನೆ ಸ್ಥಾನವನ್ನು ತೆಗೆದುಕೊಳ್ಳಬೇಕಲ್ಲವೆ (ಬೆಂಗಳೂರಿನಲ್ಲಿ ಮಾಡುತ್ತೇವೆ) ಒಳ್ಳೆಯದು. ಯಾರೆಲ್ಲಾ ಮೆಗಾ ಕಾರ್ಯಕ್ರಮವನ್ನು ಮಾಡಿದ್ದೀರಿ ಅವರೆಲ್ಲಾ ಎದ್ದೇಳಿ. ಒಳ್ಳೆಯದು. ಎಷ್ಟು ಕಾರ್ಯಕ್ರಮಗಳಾಗಿದೆ? (8-10 ಕಾರ್ಯಕ್ರಮಗಳಾಗಿದೆ) ಬಾಪ್ದಾದಾರವರು ದೊಡ್ಡ ಕಾರ್ಯಕ್ರಮ ಮಾಡಿದಂತಹವರಿಗೆ ದೊಡ್ಡ ಅಭಿನಂದನೆಗಳನ್ನು ತಿಳಿಸುತ್ತಾರೆ. ಎಷ್ಟು ಜೋನ್ಗಳು ಎಷ್ಟಿವೆ! ಪ್ರತಿಯೊಂದು ಜೋನಿನವರು ಮೆಗಾ ಕಾರ್ಯಕ್ರಮವನ್ನು ಮಾಡಬೇಕಲ್ಲವೆ ಏಕೆಂದರೆ ನಿಮ್ಮ ನಗರದಲ್ಲಿ ದೂರನ್ನು ಕೊಡುವಂತಹವರು ಆಗ ಕೊಡುವುದಿಲ್ಲ. ದೊಡ್ಡ ಕಾರ್ಯಕ್ರಮದಲ್ಲಿ ನೀವು ಜಾಹೀರಾತು (ಉತ್ತಮ ಪ್ರಚಾರ) ಮಾಡುತ್ತೀರಲ್ಲವೆ. ಒಂದುವೇಳೆ ಮಾಧ್ಯಮಗಳ ಮೂಲಕ, ಪೋಸ್ಟರ್ನ ಮೂಲಕ, ಹೋರ್ಡಿಂಗ್ನ ಮೂಲಕ, ಭಿನ್ನ-ಭಿನ್ನ ಸಾಧನಗಳನ್ನು ತಮ್ಮದನ್ನಾಗಿ ಮಾಡಿಕೊಂಡಾಗ ದೂರುಗಳು ಕಡಿಮೆಯಾಗುತ್ತವೆ. ಬಾಪ್ದಾದಾರವರಿಗಂತೂ ಈ ಸೇವೆಯು ಇಷ್ಟವಿದೆ ಆದರೆ, ಆದರೆ.....ಅಂತ ಹೇಳುವುದು ಇದೆಯಲ್ಲವೆ. ಕಾರ್ಯಕ್ರಮಗಳನ್ನೇನೋ ದೊಡ್ಡದಾಗಿ ಮಾಡಿದ್ದೀರಿ ಅದಕ್ಕಾಗಿ ಅಭಿನಂದನೆಗಳಿವೆ. ಅದಕ್ಕೆ ಅಭಿನಂದನೆಗಳು ಸ್ವೀಕಾರವಾಗಲಿ. ಆದರೆ ಪ್ರತಿಯೊಂದು ಕಾರ್ಯಕ್ರಮದಲ್ಲಿ ಕೊನೆಪಕ್ಷ 108ರ ಮಾಲೆಯು ತಯಾರಾಗಲಿ. ಅದು ಎಲ್ಲಿ ಆಗಿದೆ? ಕೊನೆಪಕ್ಷ 108, ಹೆಚ್ಚೆಂದರೆ 16000 ಆಗಿದೆ ಆದರೆ ಕೊನೆಪಕ್ಷ ಬಾಪ್ದಾದಾರವರು ಇಷ್ಟೊಂದು ಶಕ್ತಿಯನ್ನು, ಸಂಪತ್ತನ್ನು ತೊಡಗಿಸಿದ ನಂತರ ಕೊನೆಪಕ್ಷ 108ರ ಮಾಲೆಯು ತಯಾರಾಗಬೇಕು. ಎಲ್ಲರದೂ ವಿಳಾಸವು ನಿಮ್ಮ ಬಳಿ ಇರಬೇಕಾಗಿದೆ. ದೊಡ್ಡ ಕಾರ್ಯಕ್ರಮದಲ್ಲಿ ಬರುವಂತಹವರ ಹೆಸರಂತೂ ಇರುತ್ತದೆ, ಪುನಃ ಅವರನ್ನು ಸಮೀಪದಲ್ಲಿ ತರಬೇಕಾಗಿದೆ. ಆದುದರಿಂದ ಪ್ರತಿಯೊಂದು ದೊಡ್ಡ ಕಾರ್ಯಕ್ರಮವನ್ನು ಮಾಡುವಂತಹವರು ಬಾಪ್ದಾದಾರವರಿಗೆ ಈ ಫಲಿತಾಂಶವನ್ನು ನೀಡಬೇಕು. ಒಂದುವೇಳೆ ಬೇರೆ-ಬೇರೆ ಸೇವಾಕೇಂದ್ರಗಳಿಗೆ ಹೋಗಲಿ, ಯಾವ ನಗರದ್ದಾದರೂ ಆಗಿರಲಿ, ಆದರೆ ಫಲಿತಾಂಶವನ್ನು ತೆಗೆಯಬೇಕಾಗಿದೆ. ಸರಿಯಿದೆಯಲ್ಲವೆ, ಆಗುತ್ತದೆಯಲ್ಲವೆ! ಸ್ವಲ್ಪ ಗಮನಕೊಟ್ಟರೆ ಆಗುತ್ತಾರೆ. 108 ಅಂತೂ ಏನೇನೂ ಇಲ್ಲ ಆದರೆ ಈ ಫಲಿತಾಂಶವನ್ನು ನೋಡಲು ಬಾಪ್ದಾದಾ ಬಯಸುತ್ತಾರೆ. ಕೊನೆಪಕ್ಷ ಅವರು ವಿದ್ಯಾರ್ಥಿಗಳಾದರೂ ಆಗಲಿ. ಸಹಯೋಗದಲ್ಲಿ ಮುಂದೆ ಬರಲಿ, ಯಾರ್ಯಾರು ಎಷ್ಟೆಷ್ಟು ಜನರನ್ನು ತಯಾರು ಮಾಡುತ್ತೀರೆಂದು ಬಾಪ್ದಾದಾರವರು ಈ ವರ್ಷದ ಸೀಜನ್ನಿನಲ್ಲಿ ಫಲಿತಾಂಶವನ್ನು ನೋಡಲು ಬಯಸುತ್ತಾರೆ. ಸರಿಯಿದೆಯಲ್ಲವೆ? ಪಾಂಡವರು ಸರಿಯಿದೆಯಲ್ಲವೇ? ಅಂದಾಗ ಯಾರು ನಂಬರ್ವನ್ ಬರುತ್ತೀರೆಂದು ನೋಡುತ್ತೇವೆ. ಎಷ್ಟು ಮಂದಿಯನ್ನಾದರೂ ತಯಾರು ಮಾಡಿ. ಅಂತೂ ಅಗತ್ಯವಾಗಿ ತಯಾರಾಗಿಬಿಡುತ್ತದೆ. ಇಲ್ಲಿ ಏನಾಗುತ್ತದೆಯೆಂದರೆ ಕಾರ್ಯಕ್ರಮದ ನಂತರ ಮುಂದೆ ಸಂಪರ್ಕದಲ್ಲಿ ತರುವಂತಹ ಗಮನವು ಕಡಿಮೆಯಾಗಿಬಿಡುತ್ತದೆ. ಹಾಗೇನು ತಯಾರು ಮಾಡುವುದಂತೂ ಕಷ್ಟವೇನಿಲ್ಲ ಆದರೆ ಬಾಪ್ದಾದಾ ಮಕ್ಕಳ ಧೈರ್ಯವನ್ನು ನೋಡಿ ಬಾಪ್ದಾದಾರವರು ಸಂತೋಷ ಪಡುತ್ತಾರೆ. ತಿಳಿಯಿತಲ್ಲವೆ. ಒಳ್ಳೆಯದು.

ಈಗ ಎಲ್ಲರೂ ಒಂದು ಸೆಕೆಂಡಿನಲ್ಲಿ, ಒಂದು ಸೆಕೆಂಡ್ ಒಂದು ನಿಮಿಷದಲ್ಲಲ್ಲ. ಒಂದು ಸೆಕೆಂಡ್ ‘ನಾನು ಫರಿಶ್ತಾ ಸೋ ದೇವತೆಯಾಗಿದ್ದೇನೆ’ – ಒಂದು ಸೆಕೆಂಡ್ ಮನಸ್ಸಿನ ವ್ಯಾಯಾಮವನ್ನು ಮಾಡಿ. ಇಂತಹ ಮನಸ್ಸಿನ ಡ್ರಿಲ್ನ್ನು ಇಡೀ ದಿನದಲ್ಲಿ ಒಂದು ಸೆಕೆಂಡಿನನುಗುಣವಾಗಿ ಬಹಳಷ್ಟು ಬಾರಿ ಮಾಡಿ. ಹೇಗೆ ಶಾರೀರಿಕ ವ್ಯಾಯಾಮವು ಶರೀರವನ್ನು ಶಕ್ತಿಶಾಲಿಯನ್ನಾಗಿ ಮಾಡುತ್ತದೆ ಹಾಗೆಯೇ ಈ ವ್ಯಾಯಾಮವು ಮನಸ್ಸನ್ನು ಶಕ್ತಿಶಾಲಿಯನ್ನಾಗಿ ಮಾಡುವಂತಹದ್ದಾಗಿದೆ. ನಾನು ಸೂಕ್ಷ್ಮದೇವತೆಯಾಗಿದ್ದೇನೆ, ಈ ಹಳೆಯ ಶರೀರ, ಹಳೆಯ ಪ್ರಪಂಚ, ಹಳೆಯ ದೇಹದ ಸಂಸ್ಕಾರದಿಂದ ಭಿನ್ನ ಫರಿಶ್ತಾ ಆತ್ಮನಾಗಿದ್ದೇನೆ.

ನಾಲ್ಕೂಕಡೆಯ ಅತಿಸ್ನೇಹಿ, ಸದಾ ಸ್ನೇಹಸಾಗರನಲ್ಲಿ ಸಮಾವೇಶವಾಗಿರುವ ಆತ್ಮಗಳಿಗೆ, ಸದಾ ಸರ್ವಶಕ್ತಿಗಳ ಅಧಿಕಾರಿ ಆತ್ಮಗಳಿಗೆ, ಸದಾ ತಂದೆಯ ಸಮಾನರಾಗುವಂತಹ ತಂದೆಗೆ ಪ್ರಿಯ ಆತ್ಮಗಳಿಗೆ, ಸದಾ ಸ್ವಮಾನದಲ್ಲಿರುವಂತಹವರು, ಪ್ರತಿಯೊಂದು ಆತ್ಮನಿಗೆ ಸನ್ಮಾನ ಕೊಡುವಂತಹವರು, ಸರ್ವರಿಗೂ ಮಾನನೀಯರಾಗುವಂತಹ ಆತ್ಮಗಳಿಗೆ, ಸರ್ವಉಪಕಾರಿ ಆತ್ಮಗಳಿಗೆ ಬಾಪ್ದಾದಾರವರ ಹೃದಯದ ಪ್ರೀತಿ ಹಾಗೂ ಹೃದಯದ ಆಶೀರ್ವಾದಗಳು ಸ್ವೀಕಾರವಾಗಲಿ ಹಾಗೂ ಜೊತೆಜೊತೆಗೆ ವಿಶ್ವದ ಮಾಲೀಕ ಆತ್ಮಗಳಿಗೆ ನಮಸ್ತೆ.

ದಾದೀಜಿಯವರೊಂದಿಗೆ:
ಸನ್ಮಾನ ಕೊಡುವುದರಲ್ಲಿ ನಂಬರ್ವನ್ ಪಾಸಾಗಿದ್ದಾರೆ. ಚೆನ್ನಾಗಿದೆ, ಎಲ್ಲಾ ದಾದಿಯರಿಂದ ಮಧುಬನವು ಶೃಂಗರಿಸಲ್ಪಟ್ಟಿದೆ. (ಸಭೆಯೊಂದಿಗೆ) ಇವರೆಲ್ಲರಿಗೂ ದಾದಿಯರ ಶೃಂಗಾರವು ಇಷ್ಟವಾಗುತ್ತದೆಯಲ್ಲವೆ! ಹೇಗೆ ದಾದಿಯವರ ಶೃಂಗಾರದಿಂದ ಮಧುಬನವು ಶೃಂಗರಿಸಲ್ಪಡುತ್ತದೆಯೋ ಹಾಗೆಯೇ ನೀವೆಲ್ಲಾ ದಾದಿಯರಲ್ಲ, ಆದರೆ ಹಿರಿಯ ಸಹೋದರ- ಹಿರಿಯ ಸಹೋದರರಾಗಿದ್ದೀರಿ. ಆದುದರಿಂದ ಎಲ್ಲಾ ಹಿರಿಯ ಸಹೋದರ-ಸಹೋದರಿಯರು ಇದನ್ನು ಯೋಚಿಸಬೇಕು, ಮಾಡಬೇಕು, ಎಲ್ಲಿಯೇ ಇರಿ ಆ ಸ್ಥಾನವು ಶೃಂಗರಿಸಲ್ಪಟ್ಟಿರಲಿ. ದಾದಿಯರಿಂದ ಹೇಗೆ ಶೃಂಗರಿಸಲ್ಪಟ್ಟಿದೆ ಅದರಂತೆಯೇ ಪ್ರತಿಯೊಂದು ಸ್ಥಾನದಲ್ಲಿಯೂ ಶೃಂಗಾರವಾಗಿರಲಿ ಏಕೆಂದರೆ ದಾದಿಯರ ಜೊತೆ ಹಿರಿಯ ಸಹೋದರಿಯರೂ ಇದ್ದೀರಲ್ಲವೆ. ನೀವೇನು ಕಡಿಮೆಯಿಲ್ಲ. ಹಿರಿಯ ಸಹೋದರರೂ ಇದ್ದಾರೆ, ಹಿರಿಯ ಸಹೋದರಿಯರೂ ಇದ್ದಾರೆ. ಯಾವುದೇ ಸೇವಾಕೇಂದ್ರದಲ್ಲಿ ಖಾಲಿಯೆನಿಸಬಾರದಾಗಿದೆ, ಶೃಂಗರಿಸಲ್ಪಟ್ಟಿರಲಿ. ನೀವು ಒಬ್ಬೊಬ್ಬರೂ ವಿಶ್ವವನ್ನು ಶೃಂಗಾರ ಮಾಡುವಂತಹ ಆತ್ಮಗಳಾಗಿದ್ದೀರಿ. ನೀವು ಭಲೆ ಯಾವ ಸ್ಥಾನದಲ್ಲಿಯೇ ಇರಿ, ಅ ಸ್ಥಾನವು ಶೃಂಗರಿತವಾದಂತೆ ಕಾಣಲಿ. ಸರಿಯಿದೆಯಲ್ಲವೆ? ಏಕೆಂದರೆ ಪ್ರಪಂಚದಲ್ಲಿ ಮಿತಿಯುಳ್ಳ ಶೃಂಗಾರವಿದೆ ಹಾಗೂ ನಿಮ್ಮ ಒಬ್ಬೊಬ್ಬರಲ್ಲಿಯೂ ಬೇಹದ್ದಿನ ಶೃಂಗಾರವಿದೆ. ಸ್ವಯಂ ಖುಷಿ, ಶಾಂತಿ, ಅತೀಂದ್ರಿಯ ಸುಖದ ಶೃಂಗಾರದಲ್ಲಿದ್ದಾಗ ಆ ಸ್ಥಾನವೂ ಹಾಗೆಯೇ ಶೃಂಗರಿಸಲ್ಪಡುತ್ತದೆ ಏಕೆಂದರೆ ಸ್ಥಿತಿಯಿಂದ ಆ ಸ್ಥಾನದ ವಾಯುಮಂಡಲದಲ್ಲಿಯೂ ಹರಡುತ್ತದೆ. ಎಲ್ಲರೂ ಪರಿಶೀಲನೆ ಮಾಡಿಕೊಳ್ಳಬೇಕು - ನಾವೆಲ್ಲಿರುತ್ತೇವೆಯೋ ಅಲ್ಲಿ ಶೃಂಗಾರವಿದೆಯೇ? ಉದಾಸೀನರಂತೂ ಅಲ್ಲ ತಾನೆ? ಎಲ್ಲರೂ ಖುಷಿಯಲ್ಲಿ ನರ್ತನ ಮಾಡುತ್ತಿದ್ದೀರಲ್ಲವೆ? ಈ ರೀತಿ ಇದೆಯಲ್ಲವೆ. ನೀವು ದಾದಿಯರ ಕರ್ತವ್ಯವೇ ಇದಾಗಿದೆಯಲ್ಲವೆ. ಹಿರಿಯ ಸಹೋದರ ಹಾಗೂ ಸಹೋದರಿಯರನ್ನು ಅನುಸರಣೆ ಮಾಡಿ. ಒಳ್ಳೆಯದು.

ಎಲ್ಲಾ ಕಡೆಯಿಂದ ಯಾರೆಲ್ಲಾ ಸ್ನೇಹಿ ಮಕ್ಕಳು ಬಾಪ್ದಾದಾರವರನ್ನು ಹೃದಯದಲ್ಲಿ ನೆನಪು ಮಾಡುತ್ತಿದ್ದಾರೆ ಅಥವಾ ಪತ್ರ, ಇಮೇಲ್ ಮೂಲಕ ನೆನಪು ಕಳಿಸಿದ್ದಾರೆ, ಆ ನಾಲ್ಕಾರು ಕಡೆಯ ಮಕ್ಕಳನ್ನು ಬಾಪ್ದಾದಾರವರು ದೂರ ನೋಡುತ್ತಿಲ್ಲ ಆದರೆ ಹೃದಯ ಸಿಂಹಾಸನದಲ್ಲಿ ನೋಡುತ್ತಿದ್ದಾರೆ. ಎಲ್ಲದಕ್ಕಿಂತ ಸಮೀಪ ಹೃದಯವಿದೆ. ಬಾಪ್ದಾದಾರವರು ಹೃದಯದಿಂದ ನೆನಪು ಕಳುಹಿಸಿದವರಿಗೆ ಮತ್ತು ನೆನಪು ಕಳುಹಿಸಿಲ್ಲ ಆದರೆ ನೆನಪಿನಲ್ಲಿದ್ದಾರೆ, ಅವರೆಲ್ಲರನ್ನೂ ಹೃದಯ ಸಿಂಹಾಸನಾಧಿಕಾರಿ ಎಂದು ನೋಡುತ್ತಿದ್ದಾರೆ. ಪ್ರತ್ಯುತ್ತರ ಕೊಡುತ್ತಿದ್ದಾರೆ. ದೂರ ಕುಳಿತ್ತಿದ್ದರೂ ನಂಬರ್ಒನ್ ತೀವ್ರ ಪುರುಷಾರ್ಥಿ ಭವ

ವರದಾನ:
ಬೇಜವಾಬ್ದಾರಿತನದ ನಿದ್ರೆಗೆ ವಿಚ್ಛೇದನ ಕೊಡುವಂತಹ ನಿದ್ರಾಜೀತ್, ಚಕ್ರವರ್ತಿ ಭವ

ಸಾಕ್ಷಾತ್ಕಾರ ಮೂರ್ತಿಯಾಗಿ ಭಕ್ತರಿಗೆ ಸಾಕ್ಷಾತ್ಕಾರ ಮಾಡಿಸುವುದಕ್ಕಾಗಿ ಅಥವಾ ಚಕ್ರವರ್ತಿ ಮಾಡುವುದಕ್ಕಾಗಿ ನಿದ್ರಾಜೀತ್ ಆಗಿರಿ. ಯಾವಾಗ ವಿನಾಶಕಾಲ ಮರೆತುಹೋಗುವುದು ಆಗ ಬೇಜವಾಬ್ದಾರಿತನದ ನಿದ್ರೆ ಬರುತ್ತದೆ. ಭಕ್ತರ ಕೂಗನ್ನು ಕೇಳಿ, ದುಃಖಿ ಆತ್ಮರ ದುಃಖದ ಕೂಗನ್ನು ಕೇಳಿ, ಬಾಯಾರಿರುವ ಆತ್ಮಗಳ ಪ್ರಾರ್ಥನೆಯ ಕೂಗನ್ನು ಕೇಳಿ ಆಗ ಎಂದೂ ಬೇಜವಾಬ್ದಾರಿತನದ ನಿದ್ರೆ ಬರುವುದಿಲ್ಲ. ಅಂದರೆ ಈಗ ಸದಾ ಜಾಗೃತ ಜ್ಯೋತಿಗಳಾಗಿ ಬೆಜವಾಬ್ದಾರಿತನದ ನಿದ್ರೆಗೆ ವಿಚ್ಛೇದನ ಕೊಡಿ ಮತ್ತು ಸಾಕ್ಷಾತ್ಕಾರ ಮೂರ್ತಿಗಳಾಗಿ.

ಸ್ಲೋಗನ್:
ತನು-ಮನ-ಧನ, ಮನಸಾ-ವಾಚಾ-ಕರ್ಮಣ ಯಾವುದೇ ಪ್ರಕಾರದಿಂದ ತಂದೆಯ ಕರ್ತವ್ಯದಲ್ಲಿ ಸಹಯೋಗಿಗಳಾದಾಗ ಸಹಜಯೋಗಿಗಳಾಗುವಿರಿ.

ಅವ್ಯಕ್ತ ಸೂಚನೆ: ಸತ್ಯ ಮತ್ತು ಸಭ್ಯತೆ ರೊಪಿ ಕಲ್ಚರ್(ಸಂಸ್ಕೃತಿಯನ್ನು) ತಮ್ಮದಾಗಿಸಿಕೊಳ್ಳಿರಿ

ಹೇಗೆ ತಂದೆಗೆ ”ಗಾಡ್ ಇಸ್ ಟ್ರೂಥ್” ಎಂದು ಹೇಳುತ್ತಾರೆ, ಸತ್ಯತೆ ತಂದೆಗೆ ಪ್ರಿಯವಾಗಿದೆ. ಸತ್ಯ ಹೃದಯದವರ ಮೇಲೆ ತಂದೆ ರಾಜಿಯಾಗುತ್ತಾರೆ. ಅಂದ ಮೇಲೆ ಹೃದಯ ಸಿಂಹಾಸನ ಅಧಿಕಾರಿ ಸರ್ವಿಸಬೆಲ್ ಮಕ್ಕಳ ಸಂಬಂಧ ಸಂಪರ್ಕದಲ್ಲಿ, ಪ್ರತಿ ಸಂಕಲ್ಪ ಹಾಗೂ ಮಾತಿನಲ್ಲಿ ಸತ್ಯತೆ ಹಾಗೂ ಸ್ವಚ್ಛತೆ ಕಾಣಿಸುವುದು. ಅವರ ಪ್ರತಿ ಸಂಕಲ್ಪ, ಪ್ರತಿ ವಚನ ಸತ್ಯವಾಗಿರುವುದು.