23.04.25         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ಈಗ ನಾಟಕವು ಪೂರ್ಣವಾಗುತ್ತಿದೆ, ಹಿಂತಿರುಗಿ ಮನೆಗೆ ಹೋಗಬೇಕಾಗಿದೆ, ಕಲಿಯುಗದ ಅಂತ್ಯದ ನಂತರ ಸತ್ಯಯುಗವು ಪುನರಾವರ್ತನೆಯಾಗುವುದು, ಈ ರಹಸ್ಯವನ್ನು ಎಲ್ಲರಿಗೂ ತಿಳಿಸಿ”

ಪ್ರಶ್ನೆ:
ಆತ್ಮರು ಪಾತ್ರವನ್ನು ಅಭಿನಯಿಸುತ್ತಾ-ಅಭಿನಯಿಸುತ್ತಾ ಸುಸ್ತಾಗಿಬಿಟ್ಟಿದೆ, ಸುಸ್ತಾಗಲು ಮುಖ್ಯ ಕಾರಣವೇನಾಗಿದೆ?

ಉತ್ತರ:
ಬಹಳ ಭಕ್ತಿಮಾಡಿದ್ದೀರಿ, ಅನೇಕ ಮಂದಿರಗಳನ್ನು ಕಟ್ಟಿಸಿದ್ದೀರಿ, ಹಣ ಖರ್ಚು ಮಾಡಿದ್ದೀರಿ, ಅಲೆದಾಡುತ್ತಾ-ಅಲೆದಾಡುತ್ತಾ ಸತೋಪ್ರಧಾನ ಆತ್ಮವು ತಮೋಪ್ರಧಾನವಾಗಿಬಿಟ್ಟಿತು. ತಮೋಪ್ರಧಾನವಾಗಿರುವ ಕಾರಣವೇ ದುಃಖಿಯಾಗಿದೆ. ಯಾವಾಗಲಾದರೂ ಯಾವುದೇ ಮಾತಿನಿಂದ ಬೇಸರವಾಗುತ್ತದೆಯೆಂದರೆ ಆಗ ಸುಸ್ತಾಗುತ್ತದೆ. ಈಗ ಎಲ್ಲಾ ಸುಸ್ತನ್ನು ಕಳೆಯಲು ತಂದೆಯು ಬಂದಿದ್ದಾರೆ.

ಓಂ ಶಾಂತಿ.
ಆತ್ಮಿಕ ತಂದೆಯು ಕುಳಿತು ಆತ್ಮಿಕ ಮಕ್ಕಳಿಗೆ ತಿಳಿಸುತ್ತಾರೆ. ಅವರ ಹೆಸರೇನಾಗಿದೆ? ಶಿವ. ಇಲ್ಲಿ ಕುಳಿತಿದ್ದೀರೆಂದರೆ ಮಕ್ಕಳಿಗೆ ಬಹಳ ಚೆನ್ನಾಗಿ ನೆನಪಿರಬೇಕು - ಈ ನಾಟಕದಲ್ಲಿ ಎಲ್ಲರ ಯಾವ ಪಾತ್ರವಿದೆಯೋ ಅದು ಈಗ ಮುಕ್ತಾಯವಾಗುತ್ತದೆ. ನಾಟಕವು ಮುಕ್ತಾಯವಾಗುವ ಸಮಯದಲ್ಲಿ ಈಗ ನಮ್ಮ ಪಾತ್ರವು ಮುಕ್ತಾಯವಾಗುತ್ತದೆ, ನಾವು ಮನೆಗೆ ಹೋಗಬೇಕಾಗಿದೆ ಎಂದು ಎಲ್ಲಾ ಪಾತ್ರಧಾರಿಗಳೂ ತಿಳಿಯುತ್ತಾರೆ. ನೀವು ಮಕ್ಕಳಿಗೂ ಸಹ ತಂದೆಯು ತಿಳುವಳಿಕೆ ನೀಡಿದ್ದಾರೆ. ಈ ತಿಳುವಳಿಕೆಯು ಮತ್ತ್ಯಾರಲ್ಲಿಯೂ ಇಲ್ಲ. ಈಗ ನಿಮ್ಮನ್ನು ತಂದೆಯು ಬುದ್ಧಿವಂತರನ್ನಾಗಿ ಮಾಡಿದ್ದಾರೆ. ಮಕ್ಕಳೇ, ನಾಟಕವು ಮುಕ್ತಾಯವಾಗುತ್ತದೆ, ಈಗ ಪುನಃ ಹೊಸದಾಗಿ ಚಕ್ರವು ಆರಂಭವಾಗಬೇಕಾಗಿದೆ. ಹೊಸ ಪ್ರಪಂಚದಲ್ಲಿ ಸತ್ಯಯುಗವಿತ್ತು, ಈಗ ಹಳೆಯ ಪ್ರಪಂಚದಲ್ಲಿ ಈ ಕಲಿಯುಗದ ಅಂತ್ಯವಾಗಿದೆ. ಈ ಮಾತುಗಳನ್ನು ನೀವು ಮಕ್ಕಳೇ ತಿಳಿದುಕೊಂಡಿದ್ದೀರಿ, ನೀವು ಮಕ್ಕಳಿಗೆ ತಂದೆಯು ಸಿಕ್ಕಿದ್ದಾರೆ. ಯಾರು ಹೊಸದಾಗಿ ಬರುವರೋ ಅವರಿಗೆ ತಿಳಿಸಬೇಕಾಗಿದೆ - ಈಗ ನಾಟಕವು ಪೂರ್ಣವಾಗಲಿದೆ, ಈ ಕಲಿಯುಗದ ನಂತರ ಸತ್ಯಯುಗವು ಪುನರಾವರ್ತನೆಯಾಗಲಿದೆ. ಇಷ್ಟೆಲ್ಲಾ ಮನುಷ್ಯಾತ್ಮರು ತಮ್ಮ ಮನೆಗೆ ಹಿಂತಿರುಗಿ ಹೋಗಬೇಕಾಗಿದೆ. ಈಗ ನಾಟಕವು ಪೂರ್ಣವಾಗುತ್ತದೆ ಎಂದು ಹೇಳಿದಾಗ ಪ್ರಳಯವಾಗುತ್ತದೆ ಎಂದು ಮನುಷ್ಯರು ತಿಳಿಯುತ್ತಾರೆ. ಹಳೆಯ ಪ್ರಪಂಚದ ವಿನಾಶವು ಹೇಗಾಗುತ್ತದೆ ಎಂಬುದನ್ನು ಈಗ ನೀವು ತಿಳಿದುಕೊಂಡಿದ್ದೀರಿ. ಭಾರತವಂತೂ ಅವಿನಾಶಿ ಖಂಡವಾಗಿದೆ, ತಂದೆಯೂ ಸಹ ಇಲ್ಲಿಯೇ ಬರುತ್ತಾರೆ. ಉಳಿದೆಲ್ಲಾ ಖಂಡಗಳು ಸಮಾಪ್ತಿಯಾಗುತ್ತವೆ. ಈ ವಿಚಾರಗಳು ಮತ್ತ್ಯಾರ ಬುದ್ಧಿಯಲ್ಲಿಯೂ ಬರಲು ಸಾಧ್ಯವಿಲ್ಲ. ತಂದೆಯು ನೀವು ಮಕ್ಕಳಿಗೇ ತಿಳಿಸುತ್ತಾರೆ, ಈಗ ನಾಟಕವು ಮುಕ್ತಾಯವಾಗುತ್ತದೆ ಮತ್ತೆ ಪುನರಾವರ್ತನೆ ಆಗಬೇಕಾಗಿದೆ. ಮೊದಲು ನಾಟಕದ ಹೆಸರು ನಿಮ್ಮ ಬುದ್ಧಿಯಲ್ಲಿರಲಿಲ್ಲ. ಇದು ಸೃಷ್ಟಿಯ ನಾಟಕವಾಗಿದೆ, ಇದರಲ್ಲಿ ನಾವು ಪಾತ್ರಧಾರಿಗಳಾಗಿದ್ದೇವೆಂದು ನಾಮಮಾತ್ರಕ್ಕೆ ಹೇಳುತ್ತಿದ್ದಿರಿ. ಮೊದಲು ನಾವು ಆ ರೀತಿ ಹೇಳುತ್ತಿದ್ದಾಗ ತಮ್ಮನ್ನು ಶರೀರವೆಂದು ತಿಳಿದಿದ್ದೆವು. ಈಗ ತಂದೆಯು ತಿಳಿಸುತ್ತಾರೆ - ತಮ್ಮನ್ನು ಆತ್ಮವೆಂದು ತಿಳಿಯಿರಿ ಮತ್ತು ತಂದೆಯನ್ನು ನೆನಪು ಮಾಡಿ, ಈಗ ನಾವು ಹಿಂತಿರುಗಿ ಮನೆಗೆ ಹೋಗಬೇಕಾಗಿದೆ, ಅದು ಮಧುರ ಮನೆಯಾಗಿದೆ. ಆ ನಿರಾಕಾರಿ ಪ್ರಪಂಚದಲ್ಲಿ ನಾವಾತ್ಮಗಳಿರುತ್ತೇವೆ. ಈ ಜ್ಞಾನವು ಮತ್ತ್ಯಾವುದೇ ಮನುಷ್ಯ ಮಾತ್ರರಿಗಿಲ್ಲ. ನೀವೀಗ ಸಂಗಮದಲ್ಲಿದ್ದೀರಿ. ನಾವು ಹಿಂತಿರುಗಿ ಹೋಗಬೇಕಾಗಿದೆ ಎಂಬುದನ್ನು ತಿಳಿದಿದ್ದೀರಿ. ಹಳೆಯ ಪ್ರಪಂಚವು ಸಮಾಪ್ತಿಯಾದರೆ ಭಕ್ತಿಯು ಸಮಾಪ್ತಿಯಾಗುವುದು. ಮೊಟ್ಟಮೊದಲಿಗೆ ಯಾರು ಬರುತ್ತಾರೆ, ಹೇಗೆ ಈ ಧರ್ಮಗಳು ನಂಬರ್ವಾರ್ ಆಗಿ ಬರುತ್ತವೆ, ಈ ಮಾತುಗಳು ಯಾವುದೇ ಶಾಸ್ತ್ರಗಳಲಿಲ್ಲ. ಈ ಹೊಸ ಮಾತುಗಳನ್ನು ತಂದೆಯು ತಿಳಿಸುತ್ತಾರೆ, ಇದನ್ನು ಮತ್ತ್ಯಾರೂ ತಿಳಿಸಲು ಸಾಧ್ಯವಿಲ್ಲ. ತಂದೆಯೂ ಸಹ ಒಂದೇ ಬಾರಿ ಬಂದು ತಿಳಿಸಿಕೊಡುತ್ತಾರೆ. ಜ್ಞಾನಸಾಗರ ತಂದೆಯು ಒಂದೇ ಬಾರಿ ಬರುತ್ತಾರೆ, ಯಾವಾಗ ಹೊಸ ಪ್ರಪಂಚದ ಸ್ಥಾಪನೆ, ಹಳೆಯ ಪ್ರಪಂಚದ ವಿನಾಶ ಮಾಡಬೇಕಾಗಿದೆ. ತಂದೆಯ ನೆನಪಿನ ಜೊತೆಗೆ ಚಕ್ರವೂ ಬುದ್ಧಿಯಲ್ಲಿರಬೇಕು - ಈಗ ನಾಟಕವು ಮುಕ್ತಾಯವಾಗಲಿದೆ, ನಾವು ಮನೆಗೆ ಹೋಗುತ್ತೇವೆ. ಪಾತ್ರವನ್ನಭಿನಯಿಸುತ್ತಾ-ಅಭಿನಯಿಸುತ್ತಾ ನಾವು ಸುಸ್ತಾಗಿಬಿಟ್ಟಿದ್ದೇವೆ, ಹಣವನ್ನು ಖರ್ಚು ಮಾಡಿದೆವು, ಭಕ್ತಿ ಮಾಡುತ್ತಾ-ಮಾಡುತ್ತಾ ನಾವು ಸತೋಪ್ರಧಾನರಿಂದ ತಮೋಪ್ರಧಾನರಾಗಿಬಿಟ್ಟಿದ್ದೇವೆ. ಪ್ರಪಂಚವೇ ಹಳೆಯದಾಗಿಬಿಟ್ಟಿದೆ. ನಾಟಕವು ಹಳೆಯದೆಂದು ಹೇಳುತ್ತಾರೆಯೇ? ಇಲ್ಲ. ನಾಟಕವೆಂದೂ ಹಳೆಯದಾಗುವುದಿಲ್ಲ, ನಾಟಕವಂತೂ ನಿತ್ಯವೂ ಹೊಸದಾಗಿದೆ, ಇದು ನಿತ್ಯವೂ ನಡೆಯುತ್ತಲೇ ಇರುತ್ತದೆ ಆದರೆ ಪ್ರಪಂಚವು ಹಳೆಯದಾಗುತ್ತದೆ, ನಾವು ಪಾತ್ರಧಾರಿಗಳು ದುಃಖಿಯಾಗಿದ್ದೇವೆ, ಸುಸ್ತಾಗಿಬಿಡುತ್ತೇವೆ. ಸತ್ಯಯುಗದಲ್ಲಿ ಎಂದೂ ಸುಸ್ತಾಗುವುದಿಲ್ಲ, ಯಾವುದೇ ಮಾತಿನಲ್ಲಿ ಸುಸ್ತಾಗುವ ಅಥವಾ ಬೇಸರವಾಗುವ ಮಾತೇ ಇಲ್ಲ. ಇಲ್ಲಂತೂ ಅನೇಕ ಪ್ರಕಾರದ ಬೇಸರವನ್ನು ನೋಡಬೇಕಾಗುತ್ತದೆ. ನಿಮಗೆ ತಿಳಿದಿದೆ - ಈ ಹಳೆಯ ಪ್ರಪಂಚವು ಸಮಾಪ್ತಿಯಾಗಲಿದೆ, ಯಾವುದೇ ಸಂಬಂಧಿಗಳು ನೆನಪಿಗೆ ಬರಬಾರದು, ಒಬ್ಬ ತಂದೆಯನ್ನೇ ನೆನಪು ಮಾಡಬೇಕು, ಇದರಿಂದಲೇ ವಿಕರ್ಮಗಳು ವಿನಾಶವಾಗುತ್ತವೆ. ವಿಕರ್ಮಗಳು ವಿನಾಶವಾಗಲು ಮತ್ತ್ಯಾವುದೇ ಉಪಾಯವಿಲ್ಲ, ಗೀತೆಯಲ್ಲಿಯೂ ಮನ್ಮನಾಭವ ಅಕ್ಷರವಿದೆ. ಆದರೆ ಅರ್ಥವನ್ನಂತೂ ಯಾರೂ ತಿಳಿದುಕೊಂಡಿಲ್ಲ. ತಂದೆಯು ತಿಳಿಸುತ್ತಾರೆ - ನನ್ನನ್ನು ನೆನಪು ಮಾಡಿ ಮತ್ತು ಆಸ್ತಿಯನ್ನು ನೆನಪು ಮಾಡಿ. ವಿಶ್ವದ ವಾರಸುಧಾರರು ಅರ್ಥಾತ್ ಮಾಲೀಕರಾಗಿದ್ದಿರಿ ಈಗ ನೀವು ಮತ್ತೆ ವಿಶ್ವದ ವಾರಸುಧಾರರಾಗುತ್ತಿದ್ದೀರಿ. ಅಂದಮೇಲೆ ಎಷ್ಟೊಂದು ಖುಷಿಯಿರಬೇಕು! ಈಗ ನೀವು ಕವಡೆಯಿಂದ ವಜ್ರಸಮಾನರಾಗುತ್ತಿದ್ದೀರಿ, ನೀವಿಲ್ಲಿ ತಂದೆಯಿಂದ ಆಸ್ತಿಯನ್ನು ಪಡೆಯುವುದಕ್ಕಾಗಿಯೇ ಬಂದಿದ್ದೀರಿ.

ಯಾವಾಗ ಕಲೆಗಳು ಕಡಿಮೆಯಾಗುತ್ತವೆಯೋ ಆಗ ಹೂದೋಟವು ಬಾಡುತ್ತದೆ, ಈಗ ನೀವು ಹೂದೋಟದ ಹೂಗಳಾಗುತ್ತೀರಿ. ಸತ್ಯಯುಗವು ಉದ್ಯಾನವನವಾಗಿದ್ದಾಗ ಎಷ್ಟು ಸುಂದರವಾಗಿರುತ್ತದೆ! ನಂತರ ನಿಧಾನ-ನಿಧಾನವಾಗಿ ಕಲೆಗಳು ಕಡಿಮೆಯಾಗುತ್ತಾ ಹೋಗುತ್ತವೆ. ಎರಡು ಕಲೆಗಳು ಕಡಿಮೆಯಾಯಿತೆಂದರೆ ಉದ್ಯಾನವನವು ಬಾಡಿಹೋಯಿತು, ಈಗಂತೂ ಮುಳ್ಳುಗಳ ಕಾಡಾಗಿದೆ, ಈಗ ನೀವು ತಿಳಿದುಕೊಂಡಿದ್ದೀರಿ - ಪ್ರಪಂಚದವರಿಗೆ ಏನೂ ತಿಳಿದಿಲ್ಲ, ಈ ಜ್ಞಾನವು ನಿಮಗೆ ಸಿಗುತ್ತಿದೆ. ಇದು ಹೊಸಪ್ರಪಂಚಕ್ಕಾಗಿ ಹೊಸಜ್ಞಾನವಾಗಿದೆ. ಹೊಸಪ್ರಪಂಚದ ಸ್ಥಾಪನೆಯಾಗುತ್ತದೆ. ಮಾಡುವವರು ತಂದೆಯಾಗಿದ್ದಾರೆ. ಸೃಷ್ಟಿಯ ರಚಯಿತ ತಂದೆಯಾಗಿದ್ದಾರೆ, ಬಂದು ಸ್ವರ್ಗವನ್ನು ರಚನೆ ಮಾಡಿ ಎಂದು ಅವರನ್ನೇ ನೆನಪು ಮಾಡುತ್ತಾರೆ. ಸುಖಧಾಮವನ್ನು ರಚಿಸಿದರೆ ಅವಶ್ಯವಾಗಿ ದುಃಖಧಾಮದ ವಿನಾಶವು ಆಗಲೇಬೇಕಲ್ಲವೆ. ತಂದೆಯು ಪ್ರತಿನಿತ್ಯವೂ ತಿಳಿಸುತ್ತಿರುತ್ತಾರೆ, ಅದನ್ನು ಧಾರಣೆ ಮಾಡಿ ನಂತರ ಅನ್ಯರಿಗೆ ತಿಳಿಸುತ್ತಿರಬೇಕಾಗಿದೆ. ಮೊಟ್ಟಮೊದಲಿಗೆ ಇದೇ ಮುಖ್ಯಮಾತನ್ನು ತಿಳಿಸಬೇಕಾಗಿದೆ, ನಮ್ಮ ತಂದೆಯು ಯಾರಾಗಿದ್ದಾರೆ, ಅವರಿಂದ ಆಸ್ತಿಯನ್ನು ಪಡೆಯಬೇಕಾಗಿದೆ. ಭಕ್ತಿಮಾರ್ಗದಲ್ಲಿಯೂ ಸಹ ನಮ್ಮ ದುಃಖವನ್ನು ಕಳೆದು ಸುಖ ಕೊಡಿ ಎಂದು ಪರಮಾತ್ಮನನ್ನು ನೆನಪು ಮಾಡುತ್ತಾರೆ ಅಂದಾಗ ನೀವು ಮಕ್ಕಳ ಬುದ್ಧಿಯಲ್ಲಿಯೂ ಸ್ಮೃತಿಯಿರಬೇಕು. ಶಾಲೆಯಲ್ಲಿ ವಿದ್ಯಾರ್ಥಿಗಳ ಬುದ್ಧಿಯಲ್ಲಿ ಜ್ಞಾನವಿರುತ್ತದೆಯೇ ಹೊರತು ಮನೆಯಲ್ಲ. ವಿದ್ಯಾರ್ಥಿಜೀವನದಲ್ಲಿ ಉದ್ಯೋಗ-ವ್ಯವಹಾರದ ಮಾತಿಲ್ಲ, ವಿದ್ಯೆಯೇ ನೆನಪಿರುತ್ತದೆ. ಇಲ್ಲಂತೂ ಕರ್ಮಮಾಡುತ್ತಲೂ ಗೃಹಸ್ಥ ವ್ಯವಹಾರದಲ್ಲಿರುತ್ತಾ ವಿದ್ಯಾಭ್ಯಾಸ ಮಾಡಿ ಎಂದು ತಂದೆಯು ತಿಳಿಸುತ್ತಾರೆ. ಸನ್ಯಾಸಿಗಳ ತರಹ ಮನೆ-ಮಠವನ್ನು ಬಿಡಿ ಎಂದು ಹೇಳುವುದಿಲ್ಲ. ಇದು ರಾಜಯೋಗವಾಗಿದೆ, ಪ್ರವೃತ್ತಿಮಾರ್ಗವಾಗಿದೆ. ನಿಮ್ಮದು ಹಠಯೋಗವಾಗಿದೆ, ನೀವು ಗೃಹಸ್ಥವನ್ನು ಬಿಡುತ್ತೀರಿ, ಇಲ್ಲಿ ಆ ಮಾತಿಲ್ಲ ಎಂದು ಆ ಸನ್ಯಾಸಿಗಳಿಗೂ ಸಹ ತಿಳಿಸಬಹುದು. ಈ ಪ್ರಪಂಚವು ಎಷ್ಟು ಕೊಳಕಾಗಿದೆ, ಏನಾಗಿಬಿಟ್ಟಿದೆ! ಬಡವರು ಮೊದಲಾದವರು ಹೇಗಿದ್ದಾರೆ, ನೋಡುವುದರಿಂದಲೇ ತಿರಸ್ಕಾರವು ಬಂದುಬಿಡುತ್ತದೆ. ವಿದೇಶದಿಂದ ಯಾರೇ ಪ್ರವಾಸಿಗರು ಬರುತ್ತಾರೆಂದರೆ ಅವರಿಗಂತೂ ಒಳ್ಳೊಳ್ಳೆಯ ಸ್ಥಾನಗಳನ್ನು ತೋರಿಸುತ್ತಾರೆ ಆದರೆ ಬಡವರು ಎಷ್ಟೊಂದು ಕೊಳಕಿನಲ್ಲಿ ನಿವಾಸಿಸುತ್ತಿದ್ದಾರೆ! ಅವರನ್ನು ತೋರಿಸುತ್ತಾರೆಯೇ? ಇದಂತೂ ನರಕವಾಗಿದೆ, ಅದರಲ್ಲಿಯೂ ಅಂತರವಿದೆಯಲ್ಲವೆ. ಸಾಹುಕಾರರು ಎಲ್ಲಿರುತ್ತಾರೆ, ಬಡವರು ಎಲ್ಲಿರುತ್ತಾರೆ, ಇದು ಕರ್ಮದ ಲೆಕ್ಕಾಚಾರವಾಗಿದೆ. ಸತ್ಯಯುಗದಲ್ಲಿ ಇಂತಹ ಕೊಳಕಿರಲು ಸಾಧ್ಯವಿಲ್ಲ, ಅಲ್ಲಿಯೂ ಅಂತರವಿರುತ್ತದೆ. ಕೆಲವರು ಚಿನ್ನದ ಮಹಲುಗಳನ್ನು ಕಟ್ಟಿಸುತ್ತಾರೆ, ಕೆಲವರು ಬೆಳ್ಳಿಯದು ಇನ್ನೂ ಕೆಲವರು ಇಟ್ಟಿಗೆಗಳಿಂದ ಕಟ್ಟಿಸುತ್ತಾರೆ. ಇಲ್ಲಂತೂ ಎಷ್ಟೊಂದು ಖಂಡಗಳಿವೆ! ಒಂದು ಯುರೋಪ್ ಖಂಡವೇ ಎಷ್ಟೊಂದು ದೊಡ್ಡದಾಗಿದೆ! ಸತ್ಯಯುಗದಲ್ಲಿ ಕೇವಲ ನಾವೇ ಇರುತ್ತೇವೆ, ಇದು ಬುದ್ಧಿಯಲ್ಲಿದ್ದರೂ ಸಹ ಹರ್ಷಿತಮುಖಿ ಸ್ಥಿತಿಯಿರುವುದು. ವಿದ್ಯಾರ್ಥಿಯ ಬುದ್ಧಿಯಲ್ಲಿ ವಿದ್ಯೆಯೇ ನೆನಪಿರುತ್ತದೆ - ತಂದೆ ಮತ್ತು ಆಸ್ತಿ. ಇದನ್ನಂತೂ ತಂದೆಯು ತಿಳಿಸುತ್ತಾರೆ - ಇನ್ನು ಸ್ವಲ್ಪವೇ ಸಮಯವೇ ಇದೆ, ಇನ್ನೂ ಲಕ್ಷಾಂತರ ವರ್ಷಗಳಿದೆ ಎಂದು ಮನುಷ್ಯರು ಹೇಳುತ್ತಾರೆ. ಆದರೆ ಇದು 5000 ವರ್ಷಗಳ ಮಾತಾಗಿದೆ. ಈಗ ನಮ್ಮ ರಾಜಧಾನಿಯ ಸ್ಥಾಪನೆಯಾಗುತ್ತಿದೆ, ಉಳಿದಂತೆ ಇಡೀ ಪ್ರಪಂಚವೇ ಸಮಾಪ್ತಿಯಾಗಲಿದೆ ಎಂದು ನೀವು ಮಕ್ಕಳು ಅರಿತುಕೊಳ್ಳಬಹುದು. ಇದು ವಿದ್ಯೆಯಲ್ಲವೆ. ನಾವು ವಿದ್ಯಾರ್ಥಿಗಳಾಗಿದ್ದೇವೆ, ನಮಗೆ ಭಗವಂತನೇ ಓದಿಸುತ್ತಾರೆ ಎಂಬುದು ಬುದ್ಧಿಯಲ್ಲಿ ನೆನಪಿದ್ದರೂ ಸಾಕು ಎಷ್ಟೊಂದು ಖುಷಿಯಿರುವುದು! ಇದು ಏಕೆ ಮರೆತುಹೋಗುತ್ತದೆ? ಮಾಯೆಯು ಬಹಳ ಪ್ರಭಲವಾಗಿದೆ, ಅದು ಮರೆಸಿಬಿಡುತ್ತದೆ. ಶಾಲೆಯಲ್ಲಿ ಎಲ್ಲಾ ವಿದ್ಯಾರ್ಥಿಗಳು ಓದುತ್ತಿದ್ದಾರೆ, ನಮಗೆ ಭಗವಂತನೇ ಓದಿಸುತ್ತಾರೆಂದು ಎಲ್ಲರಿಗೂ ಅರ್ಥವಾಗಿದೆ. ಅಲ್ಲಂತೂ ಅನೇಕಪ್ರಕಾರದ ವಿದ್ಯೆಯನ್ನು ಓದಲಾಗುತ್ತದೆ, ಅನೇಕರು ಶಿಕ್ಷಕರಿರುತ್ತಾರೆ. ಇಲ್ಲಿ ಒಬ್ಬರೇ ಶಿಕ್ಷಕರು, ಒಂದೇ ವಿದ್ಯೆಯಾಗಿದೆ. ಉಪಾಧ್ಯಾಯರಂತೂ ಅವಶ್ಯವಾಗಿ ಬೇಕು. ಶಾಲೆಯು ಒಂದೇ ಆಗಿದೆ, ಉಳಿದೆಲ್ಲವೂ ಇದರ ಶಾಖೆಗಳಾಗಿವೆ. ಓದಿಸುವವರು ಒಬ್ಬರೇ ತಂದೆಯಾಗಿದ್ದಾರೆ. ತಂದೆಯು ಬಂದು ಎಲ್ಲರಿಗೆ ಸುಖ ಕೊಡುತ್ತಾರೆ. ನೀವು ತಿಳಿದುಕೊಂಡಿದ್ದೀರಿ - ಅರ್ಧಕಲ್ಪ ನಾವು ಸುಖಿಯಾಗಿರುತ್ತೇವೆ ಅಂದಮೇಲೆ ನಮಗೆ ಶಿವತಂದೆಯು ಓದಿಸುತ್ತಾರೆ ಎಂಬ ಖುಷಿಯಿರಬೇಕಾಗಿದೆ. ಶಿವತಂದೆಯು ಸ್ವರ್ಗದ ರಚನೆಯನ್ನೇ ರಚಿಸುತ್ತಾರೆ. ನಾವು ಸ್ವರ್ಗದ ಮಾಲೀಕರಾಗಲು ಓದುತ್ತೇವೆಂದು ಎಷ್ಟೊಂದು ಆಂತರಿಕ ಖುಷಿಯಿರಬೇಕು. ಆ ವಿದ್ಯಾರ್ಥಿಗಳೂ ಸಹ ತಿನ್ನುತ್ತಾ-ಕುಡಿಯುತ್ತಾ ಮನೆಯ ಎಲ್ಲಾ ಕೆಲಸಗಳನ್ನು ಮಾಡುತ್ತಾರೆ. ಹಾ! ಯಾರಾದರೂ ಹಾಸ್ಟೆಲ್ನಲ್ಲಿರುತ್ತಾರೆಂದರೆ ಅವರಿಗೆ ಹೆಚ್ಚಾಗಿ ವಿದ್ಯಾಭ್ಯಾಸದ ಕಡೆ ಗಮನವಿರುತ್ತದೆ. ಸರ್ವೀಸ್ ಮಾಡುವುದಕ್ಕಾಗಿ ಕನ್ಯೆಯರು ಹೊರಗೆ ಸೇವಾಕೇಂದ್ರಗಳಲ್ಲಿರುತ್ತಾರೆ, ಅಲ್ಲಿ ಎಂತೆಂತಹ ಮನುಷ್ಯರು ಬರುತ್ತಾರೆ. ಇಲ್ಲಂತೂ ನೀವು ಸುರಕ್ಷಿತರಾಗಿ ಕುಳಿತಿದ್ದೀರಿ. ಯಾರೂ ಒಳಗೆ ಪ್ರವೇಶಿಸಲು ಸಾಧ್ಯವಿಲ್ಲ, ಇಲ್ಲಿ ಯಾರ ಸಂಗವೂ ಇಲ್ಲ, ಪತಿತರೊಂದಿಗೆ ಮಾತನಾಡುವ ಅವಶ್ಯಕತೆಯೂ ಇಲ್ಲ. ನೀವು ಯಾರ ಮುಖವನ್ನೂ ನೋಡುವ ಅವಶ್ಯಕತೆಯೂ ಇಲ್ಲ. ಆದರೂ ಸಹ ಹೊರಗೆ ಸೇವಾಕೇಂದ್ರಗಳಲ್ಲಿರುವವರೇ ಮುಂದೆ ಹೋಗುತ್ತಾರೆ. ಇದು ಎಷ್ಟು ವಿಚಿತ್ರವಾಗಿದೆ! ಅಲ್ಲಿರುವವರು ಅನೇಕರಿಗೆ ಓದಿಸಿ ತಮ್ಮ ಸಮಾನರನ್ನಾಗಿ ಮಾಡಿ ಇಲ್ಲಿ ಕರೆದುಕೊಂಡು ಬರುತ್ತಾರೆ. ತಂದೆಯು ಸಮಾಚಾರವನ್ನು ಕೇಳುತ್ತಾರೆ - ಎಂತಹ ರೋಗಿಯನ್ನು ಕರೆತಂದಿದ್ದೀರಿ, ಕೆಲವರಂತೂ ಬಹಳ ಮಹಾರೋಗಿಯಾಗಿದ್ದರೆ ಅವರನ್ನು 7 ದಿನಗಳಕಾಲ ಭಟ್ಟಿಯಲ್ಲಿ ಕುಳ್ಳರಿಸಲಾಗುತ್ತದೆ. ಇಲ್ಲಿ ಯಾವುದೇ ಶೂದ್ರರನ್ನು ಕರೆದುಕೊಂಡು ಬರಬಾರದು. ಇದು ಮಧುಬನವಾಗಿದೆ, ಹೇಗೆ ನೀವು ಬ್ರಾಹ್ಮಣರ ಒಂದು ಗ್ರಾಮವಾಗಿದೆ. ಇಲ್ಲಿ ತಂದೆಯು ನೀವು ಮಕ್ಕಳಿಗೆ ತಿಳಿಸಿಕೊಡುತ್ತಾರೆ, ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆ. ಯಾರಾದರೂ ಶೂದ್ರರನ್ನು ಕರೆತರುತ್ತೀರೆಂದರೆ ಅವರು ವೈಬ್ರೇಷನ್ ಹಾಳುಮಾಡುವರು ನೀವು ಮಕ್ಕಳ ನಡವಳಿಕೆಯೂ ಸಹ ಬಹಳ ಘನತೆಯಿಂದಿರಬೇಕು.

ಮುಂದೆ ಹೋದಂತೆ ಸತ್ಯಯುಗದಲ್ಲಿ ಏನೇನಿರುವುದು ಎಂದು ನಿಮಗೆ ಬಹಳ ಸಾಕ್ಷಾತ್ಕಾರವಾಗುತ್ತಾ ಇರುತ್ತದೆ. ಪ್ರಾಣಿಗಳು ಸಹ ಅಲ್ಲಿ ಬಹಳ ಸುಂದರವಾಗಿರುತ್ತದೆ, ಎಲ್ಲಾ ವಸ್ತುಗಳು ಸುಂದರವಾಗಿರುತ್ತದೆ. ಸತ್ಯಯುಗದ ಯಾವುದೇ ವಸ್ತುಗಳು ಇಲ್ಲಿಲ್ಲ. ಮತ್ತು ಇಲ್ಲಿಯ ವಸ್ತುವು ಅಲ್ಲಿರಲು ಸಾಧ್ಯವಿಲ್ಲ. ನಿಮ್ಮ ಬುದ್ಧಿಯಲ್ಲಿದೆ - ನಾವು ಸ್ವರ್ಗಕ್ಕಾಗಿ ಪರೀಕ್ಷೆಯನ್ನು ತೇರ್ಗಡೆ ಮಾಡುತ್ತಿದ್ದೇವೆ. ಎಷ್ಟು ಓದುತ್ತೀರೋ ಅಷ್ಟು ಓದಿಸುತ್ತೀರಿ. ಶಿಕ್ಷಕರಾಗಿ ಅನ್ಯರಿಗೆ ಮಾರ್ಗವನ್ನು ತಿಳಿಸುತ್ತೀರಿ. ಎಲ್ಲರೂ ಶಿಕ್ಷಕರಾಗಿದ್ದೀರಿ, ಎಲ್ಲರೂ ಓದಿಸಬೇಕಾಗಿದೆ. ಮೊಟ್ಟಮೊದಲಿಗೆ ತಂದೆಯ ಪರಿಚಯವನ್ನು ಕೊಟ್ಟು ತಿಳಿಸಬೇಕು - ತಂದೆಯಿಂದ ಆಸ್ತಿಯು ಸಿಗುತ್ತದೆ, ಗೀತೆಯನ್ನು ತಂದೆಯು ತಿಳಿಸಿದ್ದಾರೆ. ತಂದೆಯಿಂದ ಕೇಳಿ, ಕೃಷ್ಣನು ಈ ಪದವಿಯನ್ನು ಪಡೆದಿದ್ದಾರೆ. ಪ್ರಜಾಪಿತ ಬ್ರಹ್ಮಾ ಇದ್ದಾರೆಂದರೆ ಬ್ರಾಹ್ಮಣರೂ ಇಲ್ಲಿರಬೇಕು. ಬ್ರಹ್ಮಾರವರೂ ಸಹ ಶಿವತಂದೆಯಿಂದ ಓದುತ್ತಿರುತ್ತಾರೆ. ನೀವೀಗ ವಿಷ್ಣುಪುರಿಯಲ್ಲಿ ಹೋಗುವುದಕ್ಕಾಗಿ ಓದುತ್ತೀರಿ. ಇದು ನಿಮ್ಮ ಅಲೌಕಿಕ ಮನೆಯಾಗಿದೆ. ಲೌಕಿಕ, ಪಾರಲೌಕಿಕ ಮತ್ತು ಅಲೌಕಿಕ ಹೊಸಮಾತಾಗಿದೆಯಲ್ಲವೆ. ಭಕ್ತಿಮಾರ್ಗದಲ್ಲೆಂದೂ ಬ್ರಹ್ಮನನ್ನು ನೆನಪು ಮಾಡುವುದಿಲ್ಲ. ಬ್ರಹ್ಮಾಬಾಬಾ ಎಂದು ಹೇಳಲು ಯಾರಿಗೂ ಬರುವುದಿಲ್ಲ, ದುಃಖದಿಂದ ಬಿಡಿಸಿ ಎಂದು ಶಿವತಂದೆಯನ್ನು ನೆನಪು ಮಾಡುತ್ತಾರೆ, ಅವರು ಪಾರಲೌಕಿಕ ಮತ್ತು ಇವರು ಅಲೌಕಿಕ ತಂದೆಯಾಗಿದ್ದಾರೆ. ಇವರನ್ನು ನೀವು ಸೂಕ್ಷ್ಮವತನದಲ್ಲಿಯೂ ನೋಡುತ್ತೀರಿ ಮತ್ತು ಇಲ್ಲಿಯೂ ನೋಡುತ್ತೀರಿ. ಲೌಕಿಕ ತಂದೆಯಂತೂ ಇಲ್ಲಿ ನಿಮಗೆ ಕಣ್ಣಿಗೆ ಕಾಣುತ್ತಾರೆ, ಪಾರಲೌಕಿಕ ತಂದೆಯನ್ನು ಪರಲೋಕದಲ್ಲಿ0iÉುೀ ನೋಡಲು ಸಾಧ್ಯ. ಮತ್ತೆ ಇವರು ಅಲೌಕಿಕ ವಿಚಿತ್ರ ತಂದೆಯಾಗಿದ್ದಾರೆ. ಈ ಅಲೌಕಿಕ ತಂದೆಯನ್ನು ಅರಿತುಕೊಳ್ಳುವುದರಲ್ಲಿಯೇ ಮನುಷ್ಯರು ತಬ್ಬಿಬ್ಬಾಗುತ್ತಾರೆ. ಶಿವತಂದೆಯು ನಿರಾಕಾರನೆಂದು ಹೇಳುತ್ತಾರೆ, ಅವರು ಬಿಂದುವಾಗಿದ್ದಾರೆಂದು ನೀವು ಹೇಳುತ್ತೀರಿ. ಅವರು ಅಖಂಡ ಜ್ಯೋತಿ ಅಥವಾ ಬ್ರಹ್ಮ್ ನೆಂದು ಹೇಳಿಬಿಡುತ್ತಾರೆ. ಅನೇಕ ಮತಗಳಿವೆ, ನಿಮ್ಮದು ಒಂದೇ ಮತವಾಗಿದೆ. ಒಬ್ಬರ ಮೂಲಕ ತಂದೆಯು ಮತ ಕೊಡುವುದನ್ನು ಆರಂಭಿಸಿದರು ಮತ್ತೆ ಎಷ್ಟೊಂದು ವೃದ್ಧಿಯಾಗುತ್ತದೆ. ಅಂದಮೇಲೆ ನೀವು ಮಕ್ಕಳ ಬುದ್ಧಿಯಲ್ಲಿರಬೇಕಿದೆ ನಮಗೆ ಶಿವತಂದೆಯು ಓದಿಸುತ್ತಿದ್ದಾರೆ, ಪತಿತರಿಂದ ಪಾವನರನ್ನಾಗಿ ಮಾಡುತ್ತಿದ್ದಾರೆ. ರಾವಣರಾಜ್ಯದಲ್ಲಿ ಅವಶ್ಯವಾಗಿ ಪತಿತರು, ತಮೋಪ್ರಧಾನರಾಗಲೇಬೇಕಾಗಿದೆ. ಹೆಸರೇ ಪತಿತಪ್ರಪಂಚವಾಗಿದೆ, ಎಲ್ಲರೂ ದುಃಖಿಯಾಗಿದ್ದಾರೆ ಆದ್ದರಿಂದಲೇ ಬಾಬಾ ನಮ್ಮ ದುಃಖವನ್ನು ದೂರ ಮಾಡಿ ಸುಖ ಕೊಡಿ ಎಂದು ತಂದೆಯನ್ನು ನೆನಪು ಮಾಡುತ್ತಾರೆ. ಎಲ್ಲಾ ಮಕ್ಕಳ ತಂದೆಯು ಒಬ್ಬರೇ ಆಗಿದ್ದಾರೆ, ಅವರು ಎಲ್ಲರಿಗೆ ಸುಖಕೊಡುತ್ತಾರಲ್ಲವೆ. ಹೊಸ ಪ್ರಪಂಚದಲ್ಲಿ ಸುಖವೇ ಸುಖವಿರುತ್ತದೆ ಉಳಿದೆಲ್ಲರೂ ಶಾಂತಿಧಾಮದಲ್ಲಿರುತ್ತಾರೆ. ಈಗ ನಾವು ಶಾಂತಿಧಾಮಕ್ಕೆ ಹೋಗುತ್ತೇವೆಂದು ಬುದ್ಧಿಯಲ್ಲಿರಬೇಕು. ಎಷ್ಟು ಸಮೀಪಕ್ಕೆ ಬರುತ್ತಾ ಹೋಗುತ್ತೀರೋ ಅಷ್ಟು ಈಗಿನ ಪ್ರಪಂಚವು ಏನಾಗಿದೆ, ನಾಳೆಯ ಪ್ರಪಂಚವು ಹೇಗಿರುವುದು ಎಂಬುದೆಲ್ಲವನ್ನೂ ನೋಡುತ್ತಿರುತ್ತೀರಿ. ಸ್ವರ್ಗದ ರಾಜ್ಯಭಾಗ್ಯವನ್ನು ಸಮೀಪದಲ್ಲಿ ನೋಡುತ್ತೀರಿ. ಮಕ್ಕಳಿಗೆ ತಂದೆಯು ಮುಖ್ಯಮಾತನ್ನು ತಿಳಿಸುತ್ತಾರೆ - ಮಕ್ಕಳೇ, ನಾವು ಶಾಲೆಯಲ್ಲಿ ಕುಳಿತಿದ್ದೇವೆಂದು ನಿಮ್ಮ ಬುದ್ಧಿಯಲ್ಲಿರಬೇಕು. ಶಿವತಂದೆಯು ಈ ರಥದ ಮೇಲೆ ಸವಾರರಾಗಿ ನಮಗೆ ಓದಿಸಲು ಬಂದಿದ್ದಾರೆ, ಇವರು (ಬ್ರಹ್ಮಾ) ಭಗೀರಥನಾಗಿದ್ದಾರೆ. ತಂದೆಯು ಅವಶ್ಯವಾಗಿ ಒಂದೇಬಾರಿ ಬರುತ್ತಾರೆ, ಭಗೀರಥನ ಹೆಸರೇನೆಂಬುದನ್ನು ಯಾರೂ ತಿಳಿದುಕೊಂಡಿಲ್ಲ.

ಇಲ್ಲಿ ನೀವು ಮಕ್ಕಳು ಸನ್ಮುಖದಲ್ಲಿ ಕುಳಿತುಕೊಂಡಾಗ ನಿಮ್ಮ ಬುದ್ಧಿಯಲ್ಲಿ ನೆನಪಿರಲಿ - ತಂದೆಯು ಬಂದಿದ್ದಾರೆ, ತಂದೆಯು ನಮಗೆ ಸೃಷ್ಟಿಚಕ್ರದ ರಹಸ್ಯವನ್ನು ತಿಳಿಸುತ್ತಿದ್ದಾರೆ, ಬುದ್ಧಿಯಲ್ಲಿರಲಿ - ಈಗ ನಾಟಕವು ಮುಕ್ತಾಯವಾಗುತ್ತದೆ. ನಾವು ಮನೆಗೆ ಹೋಗಬೇಕಾಗಿದೆ. ಇದನ್ನು ಬುದ್ಧಿಯಲ್ಲಿಟ್ಟುಕೊಳ್ಳುವುದೇನು ಬಹಳ ಸಹಜ ಆದರೆ ಇದನ್ನೂ ಸಹ ನೆನಪು ಮಾಡುವುದಿಲ್ಲ. ಈಗ ಚಕ್ರವು ಮುಕ್ತಾಯವಾಗುತ್ತದೆ, ನಾವು ಹೋಗಬೇಕಾಗಿದೆ ಮತ್ತೆ ಹೊಸ ಪ್ರಪಂಚದಲ್ಲಿ ಬಂದು ಪಾತ್ರವನ್ನಭಿನಯಿಸಬೇಕಾಗಿದೆ. ನಮ್ಮ ನಂತರ ಇಂತಿಂತಹವರು ಬರುತ್ತಾರೆ. ಈಗ ನಿಮಗೆ ತಿಳಿದಿದೆ - ಈ ಚಕ್ರವು ಹೇಗೆ ಸುತ್ತುತ್ತದೆ, ಪ್ರಪಂಚವು ಹೇಗೆ ವೃದ್ಧಿಯನ್ನು ಹೊಂದುತ್ತದೆ, ಹೊಸದರಿಂದ ಹಳೆಯದು, ಹಳೆಯದರಿಂದ ಹೊಸದು ಹೇಗಾಗುತ್ತದೆ. ವಿನಾಶಕ್ಕಾಗಿ ತಯಾರಿಗಳನ್ನು ನೋಡುತ್ತಿದ್ದೀರಿ. ಪ್ರಾಕೃತಿಕ ವಿಕೋಪಗಳಾಗಲಿವೆ, ಇಷ್ಟೊಂದು ಅಣುಬಾಂಬುಗಳನ್ನು ತಯಾರಿಸಿಟ್ಟುಕೊಂಡಿದ್ದಾರೆಂದರೆ ಅವೆಲ್ಲವೂ ಒಂದು ದಿನ ಕೆಲಸಕ್ಕೆ ಬರುತ್ತದೆಯಲ್ಲವೆ. ಈ ಅಣುಬಾಂಬುಗಳಿಂದಲೇ ಇಷ್ಟೊಂದು ಕೆಲಸವಾಗುತ್ತದೆ ಅದರಿಂದ ಮನುಷ್ಯರು ಮತ್ತೆ ಯುದ್ಧ ಮಾಡುವ ಅವಶ್ಯಕತೆಯೇ ಇರುವುದಿಲ್ಲ. ಸೈನಿಕರನ್ನು ಬಿಡುತ್ತಾ ಹೋಗುತ್ತಾರೆ. ಅಣುಬಾಂಬುಗಳನ್ನು ಎಸೆಯುತ್ತಾರೆ, ಮತ್ತೆ ಇಷ್ಟೆಲ್ಲಾ ಮನುಷ್ಯರು ನೌಕರಿಯನ್ನು ಬಿಡುತ್ತಾರೆಂದರೆ ಹಸಿವಿನಿಂದ ಸಾಯಬೇಕಾಗುತ್ತದೆಯಲ್ಲವೆ. ಇದೆಲ್ಲವೂ ಆಗುವುದಿದೆ ಮತ್ತೆ ಸಿಪಾಯಿಗಳಾದರೂ ಏನು ಮಾಡುವರು? ಭೂಕಂಪವಾಗುತ್ತಾ ಇರುವುದು, ಅಣುಬಾಂಬುಗಳು ಬೀಳುತ್ತಾ ಇರುತ್ತದೆ, ಪರಸ್ಪರ ಒಬ್ಬರು ಇನ್ನೊಬ್ಬರನ್ನು ಸಾಯಿಸುತ್ತಾರೆ. ನಿರಪರಾಧಿಗಳ ಕೊಲೆಯಾಗುತ್ತದೆ ಅಂದಾಗ ನೀವು ಇಲ್ಲಿ ಬಂದು ಕುಳಿತುಕೊಂಡಾಗ ಇವೆಲ್ಲಾ ಮಾತುಗಳನ್ನು ಚಿಂತನೆ ಮಾಡಬೇಕು. ಶಾಂತಿಧಾಮ, ಸುಖಧಾಮವನ್ನು ನೆನಪು ಮಾಡುತ್ತಾ ಇರಬೇಕಾಗಿದೆ. ನಮಗೆ ಏನು ನೆನಪಿರುತ್ತದೆಯೆಂದು ತಮ್ಮನ್ನು ತಾವು ಪರಿಶೀಲನೆ ಮಾಡಿಕೊಳ್ಳಿ. ಒಂದುವೇಳೆ ತಂದೆಯ ನೆನಪಿಲ್ಲವೆಂದರೆ ಅವಶ್ಯವಾಗಿ ಬುದ್ಧಿಯು ಎಲ್ಲಿಯೋ ಅಲೆಯುತ್ತಿದೆ ಎಂದರ್ಥ. ಇದರಿಂದ ವಿಕರ್ಮಗಳು ವಿನಾಶವಾಗುವುದೂ ಇಲ್ಲ, ಪದವಿಯೂ ಸಹ ಕಡಿಮೆಯಾಗುವುದು. ಒಂದುವೇಳೆ ತಂದೆಯ ನೆನಪು ಉಳಿಯಲಿಲ್ಲವೆಂದರೆ ಚಕ್ರದ ಸ್ಮರಣೆಯನ್ನಾದರೂ ಮಾಡಿ ಆಗಲೂ ಖುಷಿಯಿರುವುದು ಆದರೆ ಶ್ರೀಮತದಂತೆ ನಡೆಯುವುದಿಲ್ಲ, ಸೇವೆ ಮಾಡುವುದಿಲ್ಲವೆಂದರೆ ಬಾಪ್ದಾದಾರವರ ಹೃದಯವನ್ನೇರಲು ಸಾಧ್ಯವಿಲ್ಲ. ಸೇವೆ ಮಾಡದಿದ್ದರೆ ಅನೇಕರಿಗೆ ತೊಂದರೆ ಕೊಡುತ್ತಿರುತ್ತಾರೆ. ಕೆಲವರಂತೂ ಅನೇಕರನ್ನು ತಮ್ಮ ಸಮಾನರನ್ನಾಗಿ ಮಾಡಿ ತಂದೆಯ ಬಳಿ ಕರೆತರುತ್ತಾರೆ ಆಗ ತಂದೆಯೂ ನೋಡಿ ಖುಷಿಪಡುತ್ತಾರೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿದ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಸದಾ ಹರ್ಷಿತರಾಗಿರಲು ಬುದ್ಧಿಯಲ್ಲಿ ವಿದ್ಯೆ ಮತ್ತು ಓದಿಸುವಂತಹ ತಂದೆಯ ನೆನಪಿರಲಿ. ತಿನ್ನುತ್ತಾ-ಕುಡಿಯುತ್ತಾ ಎಲ್ಲಾ ಕೆಲಸಗಳನ್ನು ಮಾಡುತ್ತಲೂ ವಿದ್ಯೆಯ ಮೇಲೆ ಪೂರ್ಣಗಮನ ಕೊಡಬೇಕು.

2. ಬಾಪ್ದಾದಾರವರ ಹೃದಯವನ್ನೇರಲು ಶ್ರೀಮತದನುಸಾರ ಅನೇಕರನ್ನು ತಮ್ಮ ಸಮಾನ ಮಾಡುವ ಸೇವೆ ಮಾಡಬೇಕಾಗಿದೆ. ಯಾರಿಗೂ ತೊಂದರೆ ಕೊಡಬಾರದು.

ವರದಾನ:
ಅಶರೀರಿತನದ ಇಂಜೆಕ್ಷನ್ ಮೂಲಕ ಮನಸ್ಸನ್ನು ನಿಯಂತ್ರಣ ಮಾಡುವಂತಹ ಏಕಾಗ್ರಚಿತ್ ಭವ

ಹೇಗೆ ಇತ್ತೀಚೆಗೆ ಒಂದುವೇಳೆ ಯಾರಾದರೂ ನಿಯಂತ್ರಣದಲ್ಲಿ ಬರದೇ ಹೋದರೆ, ಬಹಳ ಬೇಸರ ಮಾಡುತ್ತಾರೆ, ಮೇಲೆ-ಕೆಳಗೆ ಆಗುತ್ತಾರೆ, ಹುಚ್ಚರಾಗಿ ಬಿಡುತ್ತಾರೆ. ಅಂತಹವರಿಗೆ ಇಂತಹ ಇಂಜೆಕ್ಷನ್ ಕೊಡುತ್ತಾರೆ ಯಾವುದರಿಂದ ಅವರು ಶಾಂತವಾಗಿಬಿಡುತ್ತಾರೆ. ಅದೇ ರೀತಿ ಒಂದುವೇಳೆ ಸಂಕಲ್ಪ ಶಕ್ತಿ ನಿಮ್ಮ ನಿಯಂತ್ರಣದಲ್ಲಿ ಬರದೇ ಹೋದರೆ ಅಶರೀರಿ ತನದ ಇಂಜೆಕ್ಷನ್ ಕೊಡಿ. ನಂತರ ಸಂಕಲ್ಪ ಶಕ್ತಿ ವ್ಯರ್ಥವಾಗಿ ಹರಿಯುವುದಿಲ್ಲ. ಸಹಜವಾಗಿ ಏಕಾಗ್ರಚಿತ್ತರಾಗಿಬಿಡುವಿರಿ. ಆದರೆ ಒಂದುವೇಳೆ ಬುದ್ಧಿಯ ಲಗಾಮನ್ನು ತಂದೆಗೆ ಕೊಟ್ಟು ನಂತರ ನೀವೇ ತೆಗೆದುಕೊಂಡುಬಿಟರೆ, ಮನಸ್ಸು ವ್ಯರ್ಥದ ಪರಿಶ್ರಮದಲ್ಲಿ ಹಾಕಿಬಿಡುತ್ತದೆ. ಈಗ ವ್ಯರ್ಥದ ಪರಿಶ್ರಮದಿಂದ ಬಿಡುಗಡೆ ಹೊಂದಿ.

ಸ್ಲೋಗನ್:
ತಮ್ಮ ಪೂರ್ವಜ ಸ್ವರೂಪದ ಸ್ಮೃತಿಯಲ್ಲಿರುತ್ತಾ ಸರ್ವ ಆತ್ಮಗಳ ಮೇಲೆ ದಯೆ ತೋರಿ.

ಅವ್ಯಕ್ತ ಸೂಚನೆ: ಕಂಬೈಂಡ್ ರೂಪದ ಸ್ಮೃತಿಯಿಂದ ಸದಾ ವಿಜಯಿಯಾಗಿರಿ

ಹೇಗೆ ಶರೀರ ಮತ್ತು ಆತ್ಮ ಎರಡು ಕಂಬೈಂಡಾಗಿ ಕರ್ಮ ಮಾಡುತ್ತಿದ್ದಾರೆ, ಇಂತಹ ಕರ್ಮ ಮತ್ತು ಯೋಗ ಎರಡು ಕಂಬೈಂಡ್ ಆಗಿರಲಿ. ಕರ್ಮ ಮಾಡುತ್ತಾ ನೆನಪು ಮರೆಯಬಾರದು ಮತ್ತು ನೆನಪಿನಲ್ಲಿರುತ್ತ ಕರ್ಮವನ್ನು ಮರೆಯಬಾರದು ಏಕೆಂದರೆ ನಿಮ್ಮ ಟೈಟಲ್ ಆಗಿದೆ ಕರ್ಮಯೋಗಿ. ಕರ್ಮ ಮಾಡುತ್ತಾ ನೆನಪಿನಲ್ಲಿರುವವರು ಸದಾ ಭಿನ್ನ ಮತ್ತು ಪ್ರಿಯರಾಗಿರುತ್ತಾರೆ, ಹಗುರವಾಗಿರುತ್ತಾರೆ. ಜ್ಞಾನಪೂರ್ಣ ಜೊತೆ-ಜೊತೆಯಲ್ಲಿ ಶಕ್ತಿಶಾಲಿಯ ಸ್ಟೇಜ್ನಲ್ಲಿರಿ. ಜ್ಞಾನಪೂರ್ಣ ಮತ್ತು ಶಕ್ತಿಶಾಲಿ ಇವೆರಡು ಸ್ಟೇಜ್ ಕಂಬೈಂಡ್ ಆಗಿರಲಿ ಆಗ ಸ್ಥಾಪನೆಯ ಕಾರ್ಯ ತೀವ್ರಗತಿಯಿಂದ ಆಗುತ್ತದೆ.