23.06.24    Avyakt Bapdada     Kannada Murli    19.03.20     Om Shanti     Madhuban


ನಿರ್ಮಾಣ ಮತ್ತು ನಿರಹಂಕಾರದ ಸಮತೋಲನದಿಂದ ಆಶೀರ್ವಾದದ ಖಾತೆಯನ್ನು ಜಮಾ ಮಾಡಿ.


ಇಂದು ಬಾಪ್ದಾದಾ ಅವರು ತಮ್ಮ ಹೋಲಿ ಹ್ಯಾಪಿ ಹಂಸಗಳ ಸಭೆಯಲ್ಲಿ ಬಂದಿದ್ದಾರೆ. ನಾಲ್ಕಾರು ಕಡೆ ಹೋಲಿ ಹಂಸಗಳು ಕಾಣಿಸುತ್ತಿವೆ. ಹೋಲಿ ಹಂಸಗಳ ವಿಶೇಷತೆ ಎಲ್ಲರೂ ಚೆನ್ನಾಗಿ ತಿಳಿದುಕೊಂಡಿದ್ದೀರಿ. ಸದಾ ಹೋಲಿ, ಹ್ಯಾಪಿ, ಹನ್ಸ್ ಎಂದರೆ ಶುದ್ಧ ಮತ್ತು ಸ್ಪಷ್ಟ ಹೃದಯದವರು ಎಂದರ್ಥ. ಇಂತಹ ಪವಿತ್ರ ಹಂಸಗಳ ಶುದ್ಧ ಮತ್ತು ಶುಭ್ರ ಹೃದಯದಿಂದಾಗಿ, ಎಲ್ಲಾ ಶುಭ ಹಾರೈಕೆಗಳು ಸಹಜವಾಗಿ ಪೂರ್ಣವಾಗುತ್ತವೆ. ಯಾವಾಗಲೂ ಸಂತೃಪ್ತ ಆತ್ಮರಾಗಿರುತ್ತಾರೆ. ಶ್ರೇಷ್ಠ ಸಂಕಲ್ಪವನ್ನು ಮಾಡಿದಿರಿ ಹಾಗೂ ಪೂರ್ಣಗೊಂಡಿತು. ಅದಕ್ಕಾಗಿ ಪರಿಶ್ರಮ ಪಡಬೇಕಾಗಿಲ್ಲ. ಯಾಕೆ? ಬಾಪ್ದಾದಾ ಅವರಿಗೆ ಶುದ್ಧ ಹೃದಯದವರು ಎಲ್ಲರಿಗಿಂತ ಪ್ರಿಯರಾಗಿದ್ದಾರೆ ಮತ್ತು ಹತ್ತಿರದವರಾಗಿದ್ದಾರೆ. ಸ್ವಚ್ಛ ಹೃದಯದವರು ಸದಾ ಬಾಪ್ದಾದಾ ಅವರ ಹೃದಯ ಸಿಂಹಾಸನಾಧಿಕಾರಿಗಳಾಗಿದ್ದಾರೆ ಹಾಗೂ ಸರ್ವಶ್ರೇಷ್ಠ ಸಂಕಲ್ಪಗಳು ಪೂರ್ಣವಾಗುವ ಕಾರಣ ವೃತ್ತಿಯಲ್ಲಿ, ದೃಷ್ಟಿಯಲ್ಲಿ, ಮಾತಿನಲ್ಲಿ, ಸಂಭಂಧ ಸಂಪರ್ಕದಲ್ಲಿ ಸರಳ ಮತ್ತು ಸ್ಪಷ್ಟ ಒಂದೇ ಸಮಾನ ಕಾಣುತ್ತಾರೆ. ಸರಳತೆಯ ಲಕ್ಷಣವಾಗಿದೆ- ಮನಸ್ಸು, ಬುದ್ಧಿ, ಮಾತು ಒಂದೇ ಸಮಾನವಾಗಿರುತ್ತವೆ. ಮನಸ್ಸಿನಲ್ಲಿ ಒಂದು, ಮಾತಿನಲ್ಲಿ ಇನ್ನೊಂದು- ಇದು ಸರಳತೆಯ ಲಕ್ಷಣವಲ್ಲ. ಸರಳ ಸ್ವಭಾವದವರು ಸದಾ ನಿರ್ಮಾಣಚಿತ್ತರು (ರಚನಾತ್ಮಕರು), ನಿರಹಂಕಾರಿಗಳು ನಿಸ್ವಾರ್ಥಿಗಳು ಆಗಿರುತ್ತಾರೆ. ಹೋಲಿ ಹಂಸಗಳ ವಿಶೇಷತೆಯಾಗಿದೆ- ಸರಳ ಚಿತ್ತ, ಸರಳ ಮಾತು, ಸರಳ ವರ್ತನೆ, ಸರಳ ದೃಷ್ಟಿ.

ಈ ವರ್ಷ ಬಾಪ್ದಾದಾ ಅವರು ಎಲ್ಲಾ ಮಕ್ಕಳಲ್ಲಿ ಎರಡು ವಿಶೇಷತೆಗಳನ್ನು ನೋಡಲು ಬಯಸುತ್ತಾರೆ -- ನಡವಳಿಕೆಯಲ್ಲಿ ಮತ್ತು ಮುಖದಲ್ಲಿ. ಎಲ್ಲರೂ ಕೇಳುತ್ತಾರೆ- ಮುಂದೆ ಏನು ಮಾಡಬೇಕು? ಈ ಸೀಸನ್ನ ವಿಶೇಷ ಸಮಾಪ್ತಿಯ ನಂತರ ಏನು ಮಾಡಬೇಕು ಎಂದು ಎಲ್ಲರೂ ಯೋಚಿಸುತ್ತೀರಲ್ಲವೇ- ಮುಂದೆ ಏನಾಗುತ್ತದೆ! ನಂತರ ಏನು ಮಾಡಬೇಕು? ಸೇವೆಯ ಕ್ಷೇತ್ರದಲ್ಲಿ ಬಹುತೇಕರು ಉತ್ತಮ ಪ್ರಗತಿ ಸಾಧಿಸಿ ತಮ್ಮ ಸಾಮಥ್ರ್ಯಕ್ಕೆ ತಕ್ಕಂತೆ ಮುನ್ನಡೆದಿದ್ದಾರೆ ಈ ಪ್ರಗತಿಗಾಗಿ ಬಾಪ್ದಾದಾ ಕೂಡ ತಮ್ಮನ್ನು ಅಭಿನಂದಿಸುತ್ತಾರೆ- ತುಂಬಾ ಒಳ್ಳೆಯದು, ತುಂಬಾ ಒಳ್ಳೆಯದು, ತುಂಬಾ ಒಳ್ಳೆಯದು. ಇದರೊಂದಿಗೆ ಫಲಿತಾಂಶದಲ್ಲಿ ಒಂದು ವಿಷಯ ಕಾಣಿಸಿಕೊಂಡಿತು ನಾನು ಅದನ್ನು ಹೇಳಬೇಕೇ? ಟೀಚರ್ಸ್ ಹೇಳುತ್ತಾರೆಯೇ? ಡಬಲ್ ವಿದೇಶಿಯರು ಹೇಳುತ್ತಾರೆಯೇ? ಪಾಂಡವರು ಹೇಳುತ್ತಾರೆಯೇ? ಕೈಯೆತ್ತಿರಿ ಆಗ ಮಾತ್ರ ಹೇಳುತ್ತೇವೆ ಇಲ್ಲದಿದ್ದರೆ ಇಲ್ಲ. (ಎಲ್ಲರೂ ಕೈ ಎತ್ತಿದರು) ಬಹಳ ಒಳ್ಳೆಯದು. ಯಾವ ಒಂದು ವಿಷಯವನ್ನು ನೋಡಿದೆವು? ಏಕೆಂದರೆ ಇವತ್ತು ಸೂಕ್ಷ್ಮವತನದಲ್ಲಿ ಬಾಪ್ದಾದಾ ಪರಸ್ಪರ ಸಂಭಾಷಣೆಯನ್ನು ನಡೆಸಿದರು ಹೇಗೆ ಸಂಭಾಷಣೆಯನ್ನು ಮಾಡುತ್ತಾರೆ? ಬಾಪ್ ಹಾಗೂ ದಾದಾ ಇಬ್ಬರು ಹೇಗೆ ಪರಸ್ಪರ ಸಂಭಾಷಣೆಯನ್ನು ಮಾಡುತ್ತಾರೆ? ಈ ಜಗತ್ತಿನಲ್ಲಿ ತಾವು ಮೋನೋ ಆಕ್ಟಿಂಗ್ ಮಾಡುತ್ತಿರಲ್ಲವೇ! ಬಹಳ ಚೆನ್ನಾಗಿರುವುದನ್ನು ಮಾಡುತ್ತಿರಿ. ತಮ್ಮ ಭೌತಿಕ ಜಗತ್ತಿನಲ್ಲಿ ಒಂದು ಆತ್ಮ ಎರಡು ಪಾತ್ರವನ್ನು ಮಾಡುತ್ತದೆ ಹಾಗೂ ಬಾಪ್ದಾದಾ ಎರಡು ಆತ್ಮಗಳು ಒಂದು ಶರೀರವಾಗಿದ್ದಾರೆ ವ್ಯತ್ಯಾಸವಿದೆಯಲ್ಲವೇ! ಹಾಗಾಗಿ ಇದು ಬಹಳ ಮೋಜಿನ ವಿಷಯವಾಗಿದೆ.

ಹಾಗಾಗಿ ಇಂದು ಇಬ್ಬರ ಆತ್ಮಿಕ ಸಂಭಾಷಣೆಯು ಸೂಕ್ಷ್ಮವತನದಲ್ಲಿ ನಡೆಯಿತು ಯಾವ ವಿಷಯದ ಮೇಲೆ? ಬ್ರಹ್ಮಾ ಬಾಬಾ ಅವರಿಗೆ ಯಾವ ಉತ್ಸಾಹವಿದೆ ಎಂದು ತಮಗೆಲ್ಲರಿಗೂ ತಿಳಿದಿದೆಯಲ್ಲವೇ ?ಚೆನ್ನಾಗಿ ತಿಳಿದಿದೆಯಲ್ಲವೇ? ಬ್ರಹ್ಮಾ ಬಾಬಾ ಅವರ ಉತ್ಸಾಹವು- 'ಬಹಳ ಬೇಗ ಆಗಬೇಕು' ಎನ್ನುವುದಾಗಿತ್ತು ಹಾಗಾಗಿ ಬ್ರಹ್ಮಾ ಬಾಬಾ ಅವರಿಗೆ ಶಿವ ಬಾಬಾ ಹೇಳಿದರು-- ವಿನಾಶ ಅಥವಾ ಪರಿವರ್ತನೆಯನ್ನು ಮಾಡುವುದು ಒಂದು ಚಪ್ಪಾಳೆಯೂ ಅಲ್ಲ, ಚಿಟಿಕೆ ಹೊಡೆಯುವ ಮಾತಾಗಿದೆ, ಆದರೆ ತಾವು ಮೊದಲು 108 ಅಲ್ಲ, ಅರ್ಧ ಮಾಲೆಯನ್ನಾದರೂ ಮಾಡಿ ತೋರಿಸಿ. ಆಗ ಬ್ರಹ್ಮಾ ಬಾಬಾ ಏನು ಉತ್ತರ ಕೊಟ್ಟಿರಬಹುದು? ಹೇಳಿ (ತಯಾರಾಗುತ್ತಿದ್ದಾರೆ) ಒಳ್ಳೆಯದು. ಅರ್ಧ ಮಾಲೆಯಾದರೂ ತಯಾರು ಆಗಿದೆಯೇ? ಪೂರ್ತಿ ಮಾಲೆಯ ಮಾತನ್ನು ಬಿಟ್ಟುಬಿಡಿ. ಅರ್ಧ ಮಾಲೆಯಾದರೂ ತಯಾರಾಗಿದೆಯೇ? (ಎಲ್ಲರೂ ನಗುತ್ತಿದ್ದಾರೆ) ನಗುತ್ತಿದ್ದಾರೆಂದರೆ ಏನೋ ಇದೆ! ಅರ್ಧ ಮಾಲೆ ತಯಾರಿದೆ ಎನ್ನುವವರು ಒಂದು ಕೈಯತ್ತಿ. ತಯಾರಾಗಿದೆಯೇ? ಬಹಳ ಕಡಿಮೆ ಇದ್ದಾರೆ. ತಯಾರು ಆಗುತ್ತಾ ಇದೆ ಎನ್ನುವವರು ಕೈ ಎತ್ತಿ. ಬಹಳಷ್ಟು ಮಕ್ಕಳು ಆಗುತ್ತಾ ಇದೆ ಎಂದು ಹೇಳುತ್ತಾರೆ ಮತ್ತು ಅಲ್ಪಸಂಖ್ಯಾತರು ಆಗಿದೆ ಎಂದು ಹೇಳುತ್ತಾರೆ. ತಾವು ತಯಾರಾಗಿದ್ದೇವೆ ಎಂದು ಕೈಯೆತ್ತಿದವರಿಗೆ ಬಾಪ್ದಾದಾ ಹೇಳುತ್ತಾರೆ. ದಯವಿಟ್ಟು ತಮ್ಮ ಹೆಸರನ್ನು ಬರೆದು ಕೊಡಿ. ಇದು ಒಳ್ಳೆಯದು ಅಲ್ಲವೇ? ಬಾಪ್ದಾದಾ ಮಾತ್ರ ನೋಡುತ್ತಾರೆ, ಮತ್ತು ಯಾರೂ ನೋಡುವುದಿಲ್ಲ. ಅಂತಹ ಉತ್ತಮ ಅಭ್ಯರ್ಥಿ ರತ್ನಗಳು ಯಾರೆಂದು ಬಾಪ್ದಾದಾ ನೋಡುತ್ತಾರೆ. ಹಾಗಾಗಬೇಕೆಂದು ಬಾಪ್ದಾದಾ ಕೂಡ ಅರ್ಥ ಮಾಡಿಕೊಂಡಿದ್ದಾರೆ ಹಾಗಾಗಿ ಇವರ ಹೆಸರುಗಳನ್ನು ತೆಗೆದುಕೊಳ್ಳಿ ಇವರ ಫೋಟೋ ತೆಗೆಯಿರಿ,

ಹಾಗಾದರೆ ಬ್ರಹ್ಮಾಬಾಬಾ ಏನೆಂದು ಉತ್ತರ ಕೊಟ್ಟರು? ನೀವೆಲ್ಲರೂ ಒಳ್ಳೆಯ ಉತ್ತರ ಕೊಟ್ಟಿದ್ದೀರಿ ತಾವು ಚಿಟಿಕೆ ಹೊಡೆದರೆ ಅವರು ತಯಾರಾಗುತ್ತಾರೆ, ಅಷ್ಟೇ ಸಮಯ ಸಾಕು ಎಂದು ಬ್ರಹ್ಮಾ ಬಾಬಾ ಹೇಳಿದರು ಹಾಗಾಗಿ ಇದು ಒಳ್ಳೆಯ ಮಾತಲ್ಲವೇ! ಹಾಗೆಯೇ ಶಿವ ತಂದೆ ಕೇಳಿದರು- ಒಳ್ಳೆಯದು ಪೂರ್ತಿ ಮಾಲೆ ತಯಾರಾಗಿದೆಯೇ? ಅರ್ಧ ಮಾಲೆಯ ಉತ್ತರವಂತು ಸಿಕ್ಕಿತು, ಪೂರ್ತಿ ಮಾಲೆಯ ಬಗ್ಗೆ ಕೇಳಿದೆವು. ಅದಕ್ಕೆ ಸ್ವಲ್ಪ ಸಮಯ ಬೇಕು ಎಂದು ಹೇಳಿದರು. ಈ ವಾರ್ತಾಲಾಪ ನಡೆಯುತ್ತಿತ್ತು. ಸ್ವಲ್ಪ ಸಮಯ ಯಾಕೆ ಬೇಕು? ಸಂಭಾಷಣೆಯಲ್ಲಂತೂ ಪ್ರಶ್ನೆ ಉತ್ತರ ನಡೆಯುತ್ತಿರುತ್ತದೆ ಅಲ್ಲವೇ. ಯಾಕೆ ಸ್ವಲ್ಪ ಸಮಯ ಬೇಕು? ವಿಶೇಷವಾಗಿ ಯಾವುದರ ಕೊರತೆ ಇರುವ ಕಾರಣ ಅರ್ಧ ಮಾಲೆಗೆ ನಿಂತು ಹೋಗಿದೆ? ಎಲ್ಲಾ ಕಡೆಯ ಅನೇಕ ಮಕ್ಕಳು, ಪ್ರತಿಯೊಂದು ಭಾಗದವರನ್ನು ಇಮರ್ಜ್ ಮಾಡುತ್ತಾ ಹೋದರು, ಹೇಗೆ ತಮ್ಮ ಜೋನ್ ಇದೆಯೋ, ಹಾಗೆಯೇ ಒಂದೊಂದು ಜೋನ್ ಅಲ್ಲ, ಜೋನ್ ಅಂತೂ ಬಹಳ ದೊಡ್ಡದಾಗಿರುತ್ತದೆ ಅಲ್ಲವೇ, ಹಾಗಾಗಿ ಒಂದೊಂದು ವಿಶೇಷ ಪಟ್ಟಣವನ್ನು ಮಾಡುತ್ತಾ ಹೋದರು ಹಾಗೂ ಮತ್ತು ಪ್ರತಿಯೊಬ್ಬರ ಮುಖವನ್ನು ನೋಡುತ್ತಾ ಹೋದರು, ನೋಡುತ್ತಾ ನೋಡುತ್ತಾ ಬ್ರಹ್ಮಾ ಬಾಬಾ ಹೇಳಿದರು ಒಂದು ವಿಶೇಷತೆಯನ್ನು ಈಗಲೂ ಬಹಳ ಬೇಗ ಎಲ್ಲಾ ಮಕ್ಕಳು ಧಾರಣೆ ಮಾಡಿದರೆ ಮಾಲೆಯು ತಯಾರಾಗುತ್ತದೆ. ಯಾವ ವಿಶೇಷತೆ? ತಾವು ಸೇವೆಯಲ್ಲಿ ಎಷ್ಟು ಪ್ರಗತಿ ಸಾಧಿಸಿದ್ದೀರೋ, ಅಷ್ಟೇ ಸೇವೆಯನ್ನು ಮಾಡುತ್ತಾ ಸ್ವಯಂ ಮುಂದುವರೆಯುತ್ತಿದ್ದೀರಿ. ಒಳ್ಳೆಯವರು ಮುಂದುವರೆದಿದ್ದಾರೆ, ಆದರೆ ಒಂದು ಮಾತಿನ ಬ್ಯಾಲೆನ್ಸ್ ಕಡಿಮೆ ಇದೆ. ಅದೇನೆಂದರೆ ನಿರ್ಮಾಣ ಮಾಡುವುದರಲ್ಲಿ ಪ್ರಗತಿ ಸಾಧಿಸಿದ್ದಾರೆ ಆದರೆ ನಿರ್ಮಾಣದ ಜೊತೆಗೆ 'ನಿರ್ಮಾನ'- ಅದಾಗಿದೆ ನಿರ್ಮಾಣ ಮತ್ತು ಇದಾಗಿದೆ 'ನಿರ್ಮಾನ'. ಒಂದು ವ್ಯಂಜನದ ಅಂತರವಿದೆ. ಆದರೆ ನಿರ್ಮಾಣ ಮತ್ತು 'ನಿರ್ಮಾನ' ಇವೆರಡರ ಸಮತೋಲನದಲ್ಲಿ ಅಂತರವಿದೆ. ಸೇವೆಯ ಪ್ರಗತಿಯಲ್ಲಿ ನಿರ್ಮಾನತೆಯ ಬದಲಿಗೆ ಕೆಲವೊಮ್ಮೆ ಸ್ವ- ಅಭಿಮಾನವು ಸೇರಿಕೊಳ್ಳುತ್ತದೆ. ನಾವು ಸೇವೆಯಲ್ಲಿ ಎಷ್ಟು ಮುನ್ನಡೆಯುತ್ತೇವೆಯೋ ಅಷ್ಟೇ ವಿನಯವು ನಮ್ಮ ವರ್ತನೆ, ದೃಷ್ಟಿ, ಮಾತು ಮತ್ತು ನಡವಳಿಕೆಗಳಲ್ಲಿ ಕಾಣಿಸಬೇಕು. ಈ ಸಮಾನತೆಯ ಅವಶ್ಯಕತೆ ಈಗ ಬಹಳ ಇದೆ. ಇಲ್ಲಿಯವರೆಗೂ ಎಲ್ಲಾ ಸಂಬಂಧ ಸಂಪರ್ಕದವರಿಂದ ಸಿಗಬೇಕಾದ ಆಶೀರ್ವಾದ ಸಿಕ್ಕಿಲ್ಲ. ಪುರುಷಾರ್ಥವನ್ನು ಯಾರು ಎಷ್ಟೇ ಮಾಡಲಿ, ಒಳ್ಳೆಯದು ಆದರೆ ಪುರುಷಾರ್ಥದ ಜೊತೆಗೆ ಆಶೀರ್ವಾದದ ಖಾತೆ ಜಮಾ ಆಗದಿದ್ದರೆ ಮಹಾದಾನಿಯ ಸ್ಟೇಜ್, ಕರುಣಾಮಯ ಸ್ಟೇಜಿನ ಅನುಭವ ಆಗುವುದಿಲ್ಲ. ಸ್ವಪುರುಷಾರ್ಥದ ಜೊತೆಗೆ ಬಾಪ್ದಾದಾ ಹಾಗೂ ಪರಿವಾರದಲ್ಲಿರುವ ಸಣ್ಣವರ ಹಾಗೂ ದೊಡ್ಡವರ ಆಶೀರ್ವಾದ ಅಗತ್ಯವಾಗಿದೆ. ಆಶೀರ್ವಾದಗಳು, ಪುಣ್ಯದ ಖಾತೆಯನ್ನು ಸಂಗ್ರಹಿಸುವುದು. ಇವು ತಮ್ಮ ಅಂಕಗಳಿಗೆ ಸೇರ್ಪಡೆಯಾಗಲಿದೆ. ತಾವು ಎಷ್ಟೇ ಸೇವೆಯನ್ನು ಮಾಡಿರಿ, ತಮ್ಮ ಸೇವೆಯ ಉತ್ಸಾಹದೊಂದಿಗೆ ಮುಂದುವರೆಯಿರಿ ಆದರೆ ಸೇವೆಯ ಜೊತೆಗೆ ನಿರ್ಮಾನತೆ ಹಾಗೂ ಪರಸ್ಪರ ಹೊಂದಾಣಿಕೆ ಈ ವಿಶೇಷತೆಯನ್ನು ಬಾಪ್ದಾದ ಎಲ್ಲಾ ಮಕ್ಕಳಲ್ಲಿ ನೋಡಲು ಇಷ್ಟಪಡುತ್ತಾರೆ. ಹಾಗೂ ಪುಣ್ಯದ ಖಾತೆ ಜಮಾ ಮಾಡುವುದು ಬಹಳ ಬಹಳ ಅವಶ್ಯಕವಾಗಿದೆ. ಆದರೆ ನಂತರ ನಾನು ಬಹಳ ಸೇವೆ ಮಾಡಿದನು ನಾನು ಇದನ್ನು ಮಾಡಿದೆ ನಾನಂತೂ ಆ ಸೇವೆಯನ್ನು ಮಾಡಿದೆ ಆದರೆ ಅಂಕಗಳು ಯಾಕೆ ಕಡಿಮೆ ಬಂದಿವೆ ಎಂದು ಹೇಳಬೇಡಿ. ಆದ್ದರಿಂದ ವರ್ತಮಾನ ಸಮಯದಲ್ಲಿ ಈ ಪುಣ್ಯದ ಖಾತೆಯನ್ನು ಬಹಳಷ್ಟು ಜಮಾ ಮಾಡಿಕೊಳ್ಳಿ ಎಂದು ಬಾಪ್ದಾದಾ ಮೊದಲೇ ಸಂಕೇತ ಕೊಟ್ಟಿದ್ದಾರೆ. ಹೀಗೆ ಯೋಚಿಸಬೇಡಿ- ಇವರು ಹೀಗೆ ಇದ್ದಾರೆ, ಇವರು ಬದಲಾಗುವುದಿಲ್ಲ. ಪ್ರಕೃತಿಯನ್ನು ಬದಲಾಯಿಸಲು ಸಾಧ್ಯವಿರುವವರು, ಅಡ್ಜಸ್ಟ್ ಮಾಡಿಕೊಳ್ಳುವವರು ಬ್ರಾಹ್ಮಣ ಆತ್ಮದ ಜೊತೆಗೆ ಅಡ್ಜಸ್ಟ್ ಮಾಡಿಕೊಳ್ಳಲು ಸಾಧ್ಯವಿಲ್ಲವೇ? ಅಗೈನ್ಸ್ಟ್ (ವಿರುದ್ಧ) ಆಗಿರುವವರನ್ನು ಅಡ್ಜಸ್ಟ್ (ಹೊಂದಾಣಿಕೆ) ಮಾಡಿಕೊಳ್ಳಿ ಇದಾಗಿದೆ-- ನಿರ್ಮಾಣ ಮತ್ತು ನಮ್ರತೆಯ ಸಮತೋಲನ ಕೇಳಿದಿರಾ!

ಕೊನೆಯಲ್ಲಿ ಹೋಂವರ್ಕ್ ಅಂತೂ ಕೊಡುತ್ತೇವಲ್ಲವೇ! ಏನಾದರೂ ಹೋಂವರ್ಕ್ ಪಡೆಯುತ್ತಿರಲ್ಲವೇ! ಬಾಪ್ದಾದಾ ಮುಂಬರುವ ಸೀಸನ್ನಲ್ಲಿ ಬರುತ್ತಾರೆ ಆದರೆ ಒಂದು ಕಂಡೀಶನ್ ಇದೆ. ನೋಡಿ, ಸಾಕಾರ ಪಾತ್ರ ನಡೆಯಿತು, ಅವ್ಯಕ್ತ ಪಾತ್ರವೂ ನಡೆಯಿತು, ಇಷ್ಟು ಸಮಯ ಅವ್ಯಕ್ತ ಪಾತ್ರ ನಡೆಯುತ್ತದೆ ಎಂದು ಸ್ವಪ್ನದಲ್ಲಿಯೂ ಇರಲಿಲ್ಲ. ಹಾಗಾಗಿ ಎರಡು ಪಾತ್ರಗಳು ನಾಟಕದ ಅನುಸಾರವಾಗಿ ನಡೆದವು. ಈಗ ಕೆಲವು ಶರತ್ತು ವಿಧಿಸಬೇಕೇ ಅಥವಾ ಬೇಡವೇ? ನಿಮ್ಮ ಅಭಿಪ್ರಾಯ ಏನು? ಇದು ಹೀಗೆ ಮುಂದುವರೆಯುತ್ತದೆಯೇ? ಯಾಕೆ? ಅಲ್ಲದೆ ಇಂದು ಸೂಕ್ಷ್ಮವತನದ ಕಾರ್ಯಕ್ರಮದ ಬಗ್ಗೆ ಕೇಳಿದರು ಬಾಪ್ದಾದಾ ಅವರ ಸಂಭಾಷಣೆಯಲ್ಲಿ ನಾಟಕದ ಪಾತ್ರವು ಎಲ್ಲಿಯವರೆಗೆ? ಯಾವ ದಿನಾಂಕದವರೆಗೆ ಎಂಬ ವಿಷಯವು ಬಂದಿತು. (ದೆಹರಾಡೋನಿನ ಅಕ್ಕನವರೊಂದಿಗೆ) ನನಗೆ ಜಾತಕವನ್ನು ಹೇಳಿ, ಎಲ್ಲಿಯವರೆಗೆ? ಈಗ ಈ ಪ್ರಶ್ನೆ ಉದ್ಭವಿಸಿದೆ ಎಷ್ಟು ದಿನ? ಆದ್ದರಿಂದ, ಆದರೆ... ಇವುಗಳಿಗೆ 6 ತಿಂಗಳುಗಳಂತೂ ಇದ್ದೆ ಇದೆಯಲ್ಲವೇ! ಎರಡನೇ ಸೀಸನ್ ಆರು ತಿಂಗಳ ನಂತರ ಮಾತ್ರ ಪ್ರಾರಂಭವಾಗುತ್ತದೆ. ಆದ್ದರಿಂದ ಬಾಪ್ದಾದಾ ಫಲಿತಾಂಶವನ್ನು ನೋಡಲು ಬಯಸುತ್ತಾರೆ. ಹೃದಯವು ಶುದ್ದವಾಗಿರಬೇಕು, ಹೃದಯದಲ್ಲಿ ಯಾವುದೇ ಹಳೆಯ ಸಂಸ್ಕಾರದ ಅಥವಾ ಅಭಿಮಾನದ-ಅವಮಾನದ ಅನುಭವದ ಕಲೆಗಳು ಇರಬಾರದು.

ಹೃದಯದ ಚಿತ್ರವನ್ನು ಬಿಡಿಸುವ ಯಂತ್ರೋಪಕರಣಗಳು ಬಾಪ್ದಾದಾ ಅವರ ಬಳಿ ಇವೆ. ಈ ಸ್ಥೂಲ ಹೃದಯ ಇಲ್ಲಿ ಎಕ್ಸ್ ರೆಯಲ್ಲಿ ಕಾಣಿಸುತ್ತದೆ ಅಲ್ಲವೇ ಆದ್ದರಿಂದ ಹೃದಯದ ಚಿತ್ರವು ಸೂಕ್ಷ್ಮವತನದಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ ಅನೇಕ ರೀತಿಯ ಸಣ್ಣ ಮತ್ತು ದೊಡ್ಡ ಕಲೆಗಳು ಸ್ಪಷ್ಟವಾಗಿ ಕಾಣಿಸುತ್ತವೆ. ತಾವು ಇಂದು ಹೋಳಿ ಆಚರಿಸಲು ಬಂದಿದ್ದೀರಿ ಅಲ್ಲವೇ! ಇದು ಕೊನೆಯ ಟರ್ನ್ ಆಗಿದ್ದರಿಂದ ಮೊದಲು ಹೋಂವರ್ಕ್ ಬಗ್ಗೆ ಹೇಳಿದರು ಆದರೆ ಹೋಳಿಯನ್ನು ಆಚರಿಸುವುದು ಎಂದರೆ ನಡೆದು ಹೋಗಿದ್ದನ್ನು ಬಿಡುವುದು ಎಂದು ಇತರರಿಗೆ ಹೋಳಿಯ ಅರ್ಥವನ್ನು ಹೇಳುತ್ತೀರಿ. ಹೋಳಿಯನ್ನು ಆಚರಿಸುವುದು ಎಂದರೆ ಹೃದಯದಲ್ಲಿ ಯಾವುದೇ ಸಣ್ಣ ಅಥವಾ ದೊಡ್ಡ ಕಲೆಗಳಿಲ್ಲದಿರುವುದು ಸಂಪೂರ್ಣ ಶುದ್ಧ ಹೃದಯ, ಸರ್ವಪ್ರಾಪ್ತಿ ಸಂಪನ್ನ. ಬಾಪ್ದಾದಾ ಮೊದಲೇ ಹೇಳಿದ್ದಾರೆ ಏನೆಂದರೆ ಬಾಪ್ ದಾದಾ ಅವರಿಗೆ ಮಕ್ಕಳ ಮೇಲೆ ಪ್ರೀತಿ ಇರುವ ಕಾರಣ ಒಂದು ಮಾತು ಇಷ್ಟವಾಗುವುದಿಲ್ಲ ಅದೇನೆಂದರೆ-- ಬಹಳ ಪರಿಶ್ರಮ ಪಡುತ್ತಾರೆ. ಹೃದಯ ಸ್ವಚ್ಛವಾಗಿದ್ದರೆ ಪರಿಶ್ರಮ ಪಡಬೇಕಾಗಿಲ್ಲ, ಹೃದಯ ರಾಮ ಹೃದಯದಲ್ಲಿ ತುಂಬಿಕೊಂಡಿದ್ದಾರೆ ಮತ್ತು ತಾವು ಹೃದಯ ರಾಮನ ಹೃದಯದಲ್ಲಿ ತುಂಬಿಕೊಂಡಿದ್ದೀರಿ. ಹೃದಯದಲ್ಲಿ ತಂದೆಯೇ ತುಂಬಿಕೊಂಡಿದ್ದಾರೆ. ಯಾವುದೇ ರೂಪದ ಮಾಯೆ, ಸೂಕ್ಷ್ಮ ರೂಪದಲ್ಲಾಗಲಿ, ರಾಯಲ್ ರೂಪದಲ್ಲಾಗಲಿ, ದೊಡ್ಡ ರೂಪದಲ್ಲಾಗಲಿ, ಯಾವುದೇ ರೂಪದಿಂದಲೂ ಮಾಯೆ ಬರಲು ಸಾಧ್ಯವಿಲ್ಲ. ಸ್ವಪ್ನ ಹಾಗೂ ಸಂಕಲ್ಪದಲ್ಲಿಯೂ ಕೂಡ ಮಾಯೆ ಬರಲು ಸಾಧ್ಯವಿಲ್ಲ. ಹಾಗಾಗಿ ಪರಿಶ್ರಮದಿಂದ ಮುಕ್ತರಾಗುತ್ತಿರಲ್ಲವೇ. ಬಾಪ್ದಾದಾ ತಮ್ಮನ್ನು ಮನಸ್ಸಿನಿಂದಲೂ ಪರಿಶ್ರಮದಿಂದ ಮುಕ್ತರನ್ನಾಗಿ ನೋಡಲು ಬಯಸುತ್ತಾರೆ. ಪರಿಶ್ರಮದಿಂದ ಮುಕ್ತರಾದವರೇ ಜೀವನ್ ಮುಕ್ತಿಯ ಅನುಭವ ಮಾಡಲು ಸಾಧ್ಯವಾಗುತ್ತದೆ. ಹೋಲಿ ಆಚರಿಸುವುದು ಎಂದರೆ ಪರಿಶ್ರಮದಿಂದ ಮುಕ್ತ, ಜೀವನ ಮುಕ್ತ ಅನುಭವದಲ್ಲಿ ಇರುವುದು. ಈಗ ಬಾಪ್ದಾದಾ ಮನಸ್ಸಿನ ಶಕ್ತಿಯ ಮೂಲಕ ಸೇವೆಯನ್ನು ಶಕ್ತಿಶಾಲಿಯನ್ನಾಗಿ ಮಾಡಲು ಬಯಸುತ್ತಾರೆ. ವಾಣಿಯ ಮುಖಾಂತರ ಸೇವೆ ನಡೆಯುತ್ತಲೇ ಇದೆ ಹಾಗೂ ನಡೆಯುತ್ತಲೇ ಇರುತ್ತದೆ ಆದರೆ ಇದರಲ್ಲಿ ಸಮಯವಾಗುತ್ತದೆ. ಸಮಯ ಕಡಿಮೆ ಇದೆ. ಸೇವೆ ಇನ್ನೂ ತುಂಬಾ ಇದೆ. ರಿಸಲ್ಟ್ ತಾವೆಲ್ಲರೂ ಹೇಳಿದ್ದೀರಿ. ಇದುವರೆಗೆ 108 ಮಾಲೆಯನ್ನು ಪೂರ್ಣ ಮಾಡಲು ಸಾಧ್ಯವಾಗಿಲ್ಲ. 16,000, 9 ಲಕ್ಷ ಇದಂತೂ ಬಹಳ ದೂರದ ವಿಷಯವಾಯಿತು. ಇದಕ್ಕಾಗಿ ವೇಗದ ವಿಧಿ ಬೇಕಾಗಿದೆ. ಮೊದಲು ತಮ್ಮ ಮನಸ್ಸನ್ನು ಶ್ರೇಷ್ಠ ಸ್ವಚ್ಛ ಮಾಡಿಕೊಳ್ಳಿ, ಒಂದು ಸೆಕೆಂಡ್ ಕೂಡ ವ್ಯರ್ಥವಾಗಿ ಹೋಗಬಾರದು. ಇದುವರೆಗೆ ಬಹುತೇಕರಲ್ಲಿ ವ್ಯರ್ಥ ಸಂಕಲ್ಪಗಳ ಪಸೆರ್ಂಟೇಜ್ ಇದ್ದೇ ಇದೆ. ಅಶುದ್ಧ ಅಲ್ಲ ಆದರೆ ವೇಸ್ಟ್ ಇದೆ ಆದ್ದರಿಂದ ಮನಸ್ಸಿನ ಸೇವೆ ವೇಗದ ಗತಿಯಲ್ಲಿ ಆಗಲು ಸಾಧ್ಯವಿಲ್ಲ. ಈಗ ಹೋಲಿ ಆಚರಿಸುವುದು ಅಂದರೆ ಮನಸ್ಸನ್ನು ವ್ಯರ್ಥದಿಂದಲೂ ಕೂಡ ಹೋಲಿ ಮಾಡುವುದು.

ಹೋಳಿ ಆಚರಿಸಿದ್ದೀರಾ? ಆಚರಿಸುವುದು ಎಂದರೆ ಆಗುವುದು. ಪ್ರಪಂಚದ ಜನರು ಹೋಳಿಯನ್ನು ವಿವಿಧ ಬಣ್ಣಗಳಿಂದ ಆಚರಿಸುತ್ತಾರೆ ಆದರೆ ಬಾಪ್ದಾದಾ ಎಲ್ಲಾ ಮಕ್ಕಳ ಮೇಲೆ ದೈವೀ ಸದ್ಗುಣಗಳು, ದೈವಿ ಶಕ್ತಿಗಳು ಮತ್ತು ಜ್ಞಾನದ ಗುಲಾಬಿ ಬಣ್ಣಗಳನ್ನು ಸಿಂಪಡಿಸುತ್ತಾರೆ.

ಇಂದು ಸೂಕ್ಷ್ಮವತನದಲ್ಲಿ ಇನ್ನೂ ಸಮಾಚಾರಗಳಿದ್ದವು. ಒಂದನ್ನಂತೂ ಹೇಳಿದೆವು- ಆತ್ಮಿಕ ವರ್ತಲಾಪದ ಬಗ್ಗೆ. ಎರಡನೆಯದು-- ಯಾರೆಲ್ಲ ತಮ್ಮ ಒಳ್ಳೆಯ ಸೇವೆಯ ಜೊತೆಗಾರರು ಅಡ್ವಾನ್ಸ್ ಪಾರ್ಟಿಯಲ್ಲಿ ಹೋಗಿದ್ದಾರೋ ಅವರು ಇಂದು ಸೂಕ್ಷ್ಮವತನದಲ್ಲಿ ಹೋಲಿಯನ್ನು ಆಚರಿಸುವ ದಿನವಾಗಿತ್ತು. ತಮ್ಮೆಲ್ಲರಿಗೂ ಕೆಲವೊಂದು ಸಂದರ್ಭಗಳಲ್ಲಿ ತಮ್ಮ ದಾದಿಯರ, ಸಖಿಯರ, ಪಾಂಡವರ ನೆನಪಾಗುತ್ತದೆ ಅಲ್ಲವೇ. ಅಡ್ವಾನ್ಸ್ ಪಾರ್ಟಿಯ ಬಹಳ ದೊಡ್ಡ ಗುಂಪು ಆಗಿದೆ. ಹೆಸರಿನಿಂದ ಹೇಳುತ್ತಾ ಹೋದರೆ ಬಹಳ ದೊಡ್ಡದಾಗಿದೆ. ಹಾಗಾಗಿ ಇಂದು ವತನದಲ್ಲಿ ಎಲ್ಲ್ಲಾ ಪ್ರಕಾರದ ಆತ್ಮಗಳು ಹೋಲಿಯನ್ನು ಆಚರಿಸಲು ಬಂದಿದ್ದರು. ಅವರೆಲ್ಲರೂ ತಮ್ಮ ತಮ್ಮ ಪುರುಷಾರ್ಥದ ಪ್ರಾಲಬ್ಧದ ಪ್ರಮಾಣ ಭಿನ್ನ-ಭಿನ್ನ ಪಾತ್ರವನ್ನು ಅಭಿನಯಿಸುತ್ತಿದ್ದಾರೆ. ಅಡ್ವಾನ್ಸ್ ಪಾರ್ಟಿ ಅವರ ಪಾತ್ರ ಇಂದಿನವರೆಗೆ ಗುಪ್ತವಾಗಿದೆ. ತಾವು ಯೋಚಿಸುತ್ತೀರಲ್ಲವೇ- ಏನು ಮಾಡುತ್ತಿದ್ದಾರೆ? ತಾವೆಲ್ಲರೂ ಸಂಪೂರ್ಣವಾಗಿ ದಿವ್ಯಜನ್ಮದ ಮುಖಾಂತರ ಹೊಸ ಸೃಷ್ಟಿ ಕಾರಣಕರ್ತರಾಗಿ ಎಂದು ಅವರು ತಮ್ಮೆಲ್ಲರನ್ನು ಆಹ್ವಾನ ಮಾಡುತ್ತಿದ್ದಾರೆ. ಎಲ್ಲರೂ ತಮ್ಮ ಪಾತ್ರಗಳಲ್ಲಿ ಸಂತುಷ್ಟರಾಗಿದ್ದಾರೆ. ತಾವು ಸಂಗಮ ಯುಗದಿಂದ ಬಂದಿದ್ದೇವೆ ಎಂಬ ಸ್ಮೃತಿ ಇಲ್ಲ. ದಿವ್ಯತೆ ಇದೆ, ಪವಿತ್ರತೆ ಇದೆ, ಪರಮಾತ್ಮನ ಮೇಲೆ ಪ್ರೀತಿ ಇದೆ. ಆದರೆ ಜ್ಞಾನ ಸ್ಪಷ್ಟವಾಗಿ ಇಮರ್ಜ್ ಆಗಿಲ್ಲ. ಭಿನ್ನತೆ ಇದೆ, ಆದರೆ ಜ್ಞಾನವು ಇಮರ್ಜ್ ಆದರೆ ಎಲ್ಲರೂ ಓಡಿ ಬಂದು ಮಧುಬನಕ್ಕೆ ತಲುಪುತ್ತಾರಲ್ಲವೇ! ಆದರೆ ಇವರ ಪಾತ್ರ ಭಿನ್ನವಾಗಿದೆ, ಜ್ಞಾನದ ಶಕ್ತಿ ಇದೆ. ಶಕ್ತಿ ಕಡಿಮೆಯಾಗಿಲ್ಲ. ನಿರಂತರವಾಗಿ ಮರ್ಯಾದೆ ಯುಕ್ತರಾಗಿ, ಮನೆಯ ವಾತಾವರಣ, ತಂದೆ ತಾಯಿಯರ ಸಂತುಷ್ಟತೆ ಮತ್ತು ಭೌತಿಕ ಸಾಧನಗಳು ಕೂಡ ಪ್ರಾಪ್ತಿಯಾಗಿವೆ. ಮರ್ಯಾದೆಗಳಲ್ಲಿ ಬಹಳ ದೃಢವಾಗಿದ್ದಾರೆ. ನಂಬರ್ವಾರ್ ಆಗಿದ್ದಾರೆ, ಆದರೆ ವಿಶೇಷ ಆತ್ಮಗಳು ದೃಢವಾಗಿದ್ದಾರೆ. ನಮ್ಮ ಪೂರ್ವಜನ್ಮ ಮತ್ತು ಪುನರ್ಜನ್ಮ ಮಹಾನ್ ಆಗಿದೆ ಹಾಗೂ ಮಹಾನ್ ಆಗಿರುತ್ತದೆ ಎಂದು ಅನುಭವ ಮಾಡುತ್ತಾರೆ. ಪ್ರತಿಯೊಬ್ಬರ ಬಹುಪಾಲು ವೈಶಿಷ್ಟ್ಯಗಳು ರಾಜ ಮನೆತನದ ತೃಪ್ತ ಆತ್ಮಗಳು, ಸಂತಸಭರಿತ ಆತ್ಮಗಳು, ಹರ್ಷಿತ ಆತ್ಮರು ಮತ್ತು ದೈವಿ ಸದ್ಗುಣಗಳಿಂದ ತುಂಬಿದ ಆತ್ಮಗಳಾಗಿಯೂ ಕಂಡುಬರುತ್ತವೆ. ಇದು ಅವರ ಇತಿಹಾಸ, ಆದರೆ ಸೂಕ್ಷ್ಮವತನದಲ್ಲಿ ಏನಾಯಿತು? ಹೋಲಿಯನ್ನು ಹೇಗೆ ಆಚರಿಸಿದಿರಿ? ತಾವು ನೋಡಿರಬಹುದು ಹೋಲಿಯಲ್ಲಿ ವಿಭಿನ್ನ ಬಣ್ಣಗಳು, ಒಣ ಬಣ್ಣಗಳನ್ನು ತಟ್ಟೆಗಳಲ್ಲಿ ತುಂಬಿ ಇಟ್ಟಿರುತ್ತಾರೆ. ಹಾಗೆಯೇ ವತನದಲ್ಲಿಯೂ ಕೂಡ ಒಣಗಿದ ಬಣ್ಣಗಳು ಇದ್ದಂತೆ ಬಹಳ ಸೂಕ್ಷ್ಮವಾದ ಹೊಳೆಯುತ್ತಿರುವ ವಜ್ರಗಳಿದ್ದವು ಆದರೆ ಅವು ಭಾರವಾಗಿರಲಿಲ್ಲ, ಕೈಯಿಂದ ಬಣ್ಣಗಳನ್ನು ಎತ್ತಿಕೊಂಡರೆ ಅದು ಹಗುರವಾಗಿರುತ್ತದೆ ಅಲ್ಲವೇ! ಹಾಗೆಯೇ ವಿವಿಧ ಬಣ್ಣಗಳ ವಜ್ರಗಳಿಂದ ತುಂಬಿದ ತಟ್ಟೆಗಳು ಇದ್ದವು. ಎಲ್ಲರೂ ಬಂದ ಮೇಲೆ, ವತನದಲ್ಲಿ ಯಾವ ಸ್ವರೂಪ ಇರುತ್ತದೆ, ಗೊತ್ತಿದೆಯಲ್ಲವೇ? ಪ್ರಕಾಶಮಾನವಾದ ಸ್ವರೂಪವಿರುತ್ತದೆ ಅಲ್ಲವೇ! ನೋಡಿದ್ದೀರಲ್ಲವೇ! ಹಾಗಾಗಿ ಪ್ರಕಾಶಮಯ ಶರೀರವಂತು ಮೊದಲೇ ಹೊಳೆಯುತ್ತಿರುತ್ತದೆ. ಆದ್ದರಿಂದ ಬಾಪ್ದಾದಾ ಅವರು ಎಲ್ಲರನ್ನೂ ತಮ್ಮ ಸಂಗಮ ಯುಗದ ಶರೀರದಲ್ಲಿ ಇಮರ್ಜ್ ಮಾಡಿದರು. ಅವರೆಲ್ಲ ಸಂಗಮ ಯುಗದ ಶರೀರದಲ್ಲಿ ಇಮರ್ಜ್ ಆದ ನಂತರ ಪರಸ್ಪರ ಮಿಲನ ಮಾಡುತ್ತಿದ್ದರು ಅಡ್ವಾನ್ಸ್ ಪಾರ್ಟಿಯ ಜನ್ಮದ ರಹಸ್ಯಗಳನ್ನು ಮರೆತುಬಿಟ್ಟರು ಮತ್ತು ಸಂಗಮ ಯುಗದ ಮಾತುಗಳು ಇಮರ್ಜ್ ಆದವು. ಸಂಗಮ ಯುಗದ ಮಾತುಗಳನ್ನು ಪರಸ್ಪರ ಮಾತನಾಡಿದಾಗ ಎಷ್ಟು ಸಂತೋಷವಾಗುತ್ತದೆ ಎಂದು ತಮಗೆ ಅನುಭವವಿದೆ. ಬಹಳ ಸಂತೋಷದಿಂದ ಪರಸ್ಪರ ವಿನಿಮಯ ಮಾಡಿಕೊಳ್ಳುತ್ತಿದ್ದರು. ಬಾಪ್ದಾದಾ ಅವರು ಕೂಡ ನೋಡಿದರು-- ಇವರು ತುಂಬ ಸಂತೋಷದಿಂದ ಮಿಲನ ಮಾಡುತ್ತಿದ್ದಾರೆ, ಮಾಡಿಕೊಳ್ಳಲಿ. ಪರಸ್ಪರ ತಮ್ಮ ಜೀವನದ ಅನೇಕ ಘಟನೆಗಳನ್ನು ಒಬ್ಬರು ಇನ್ನೊಬ್ಬರಿಗೆ ಹೇಳುತ್ತಿದ್ದರು, ಬಾಬಾ ಹೀಗೆ ಹೇಳಿದರು, ಬಾಬಾ ಹೀಗೆ ನನ್ನನ್ನು ಪ್ರೀತಿ ಮಾಡಿದರು, ಹೀಗೆ ಶಿಕ್ಷಣ ಕೊಟ್ಟರು. ಬಾಬಾ ಹೀಗೆ ಹೇಳುತ್ತಾರೆ. ಬಾಬಾ - ಬಾಬಾ , ಬಾಬಾ -ಬಾಬಾ ಎಂದೇ ಹೇಳುತ್ತಿದ್ದರು. ಸ್ವಲ್ಪ ಸಮಯದ ನಂತರ ಏನಾಯ್ತು? ಎಲ್ಲರ ಸಂಸ್ಕಾರಗಳ ಬಗ್ಗೆ ಅಂತೂ ತಮಗೆ ಗೊತ್ತಿದೆ. ಆದ್ದರಿಂದ ಈ ಗ್ರೂಪಿನಲ್ಲಿ ಎಲ್ಲರಿಗಿಂತ ಹಾಸ್ಯ ಭರಿತವಾಗಿ ಯಾರು ಇದ್ದರು? (ದೀದಿ ಮತ್ತು ಚಂದ್ರಮಣಿ ದಾದಿ). ದೀದಿ ಮೊದಲು ಎದ್ದರು. ಚಂದ್ರಮಣಿ ದಾದಿ ಅವರ ಕೈಯನ್ನು ಹಿಡಿದುಕೊಂಡು ರಾಸ್ ಮಾಡಲು ಪ್ರಾರಂಭಿಸಿದರು. ಮತ್ತು ದೀದಿ ಹೇಗೆ ಇಲ್ಲಿ ನಶೆಯಲ್ಲಿ ನಡೆಯುತ್ತಿದ್ದರೋ, ಹಾಗೆಯೇ ನಶೆಯಲ್ಲಿ ಬಹಳ ರಾಸ್ ಮಾಡಿದರು. ಮಮ್ಮಾ ಅವರನ್ನು ಮಧ್ಯದಲ್ಲಿ ನಿಲ್ಲಿಸಿದರು ಮತ್ತು ವೃತ್ತಾಕಾರದಲ್ಲಿ ಪರಸ್ಪರ ಕಣ್ಣು ಮುಚ್ಚಾಲೆ ಆಡಿದರು, ವಿಭಿನ್ನ ಆಟಗಳನ್ನು ಆಡಿದರು ಬಾಪ್ದಾದಾ ಕೂಡ ಅದನ್ನು ನೋಡುತ್ತಾ ಬಹಳ ಮುಗುಳ್ನಗುತ್ತಿದ್ದರು. ಹೋಲಿ ಆಚರಿಸಲು ಬಂದಿದ್ದಾರೆಂದರೆ ಆಟವನ್ನು ಮಾಡಬೇಕು. ಸ್ವಲ್ಪ ಸಮಯದ ನಂತರ ಎಲ್ಲರೂ ಬಾಪ್ದಾದಾ ಅವರ ಬಾಹುಗಳಲ್ಲಿ ಬಂದಿತರಾದರು ಮತ್ತು ಎಲ್ಲರೂ ಒಮ್ಮೆಲೇ ಪ್ರೀತಿಯಲ್ಲಿ ಮುಳುಗಿ ಹೋದರು ಅದರ ನಂತರ ಮತ್ತೆ ಅವರು ಎಲ್ಲರ ಮೇಲೆ ವಿಭಿನ್ನ ಬಣ್ಣದ ಸೂಕ್ಷ್ಮ ವಜ್ರಗಳನ್ನು, ಅವು ಹೊಳೆಯುತ್ತಿದ್ದವು ಅಂತಹ ವಜ್ರಗಳನ್ನು ಎಲ್ಲರ ಮೇಲೆ ಎರಚಿದರು. ಮೊದಲೇ ಪ್ರಕಾಶಮಾನವಾದ ಶರೀರ ಇತ್ತು, ಅದರ ಮೇಲೆ ವಿವಿಧ ಬಣ್ಣದ ವಜ್ರಗಳು ಬಿದ್ದ ಮೇಲೆ ಅವರೆಲ್ಲರೂ ಶೃಂಗಾರ ಮಾಡಿಕೊಂಡವರಂತೆ ಆದರು. ಕೆಂಪು, ಹಳದಿ, ಹಸಿರು.... ಏಳು ಬಣ್ಣಗಳಿದ್ದವು. ಎಲ್ಲರೂ ಹೀಗೆ ಹೊಳೆಯುತ್ತಿದ್ದರು. ಸತ್ಯಯುಗದಲ್ಲಿಯೂ ಇಂತಹ ಉಡುಪು ಇರುವುದಿಲ್ಲ. ಎಲ್ಲರೂ ಮೋಜಿನಲ್ಲಿ ಇದ್ದರು. ನಂತರ ಒಬ್ಬರ ಮೇಲೊಬ್ಬರು ಎರಚಿದರು. ಹಾಸ್ಯವೃತ್ತಿಯ ಸಹೋದರಿಯರು ಅನೇಕರಿದ್ದರು. ಬಹಳ ಬಹಳ ಮೋಜು ಮಾಡಿದರು. ಮೋಜಿನ ನಂತರ ಏನಾಗುತ್ತದೆ? ಬಾಪ್ದಾದಾ ಅಡ್ವಾನ್ಸ್ ಆಗಿ ಎಲ್ಲರಿಗೂ ಭೋಗವನ್ನು ತಿನ್ನಿಸಿದರು, ತಾವು ನಾಳೆ ಭೋಗವನ್ನು ಅರ್ಪಿಸುತ್ತೀರಲ್ಲವೇ ಆದರೆ ಬಾಪ್ದಾದಾ ಅವರು ಮಧುಬನದ, ಸಂಗಮ ಯುಗದ, ವಿಭಿನ್ನ ಪ್ರಕಾರದ ಭೋಗಗಳನ್ನು ಎಲ್ಲರಿಗೂ ತಿನ್ನಿಸಿದರು ಮತ್ತು ಅವುಗಳಲ್ಲಿ ವಿಶೇಷವಾಗಿ ಯಾವುದು ಹೋಲಿಯ ಭೋಗವಾಗಿದೆ? (ಗಾರಿಗೆ, ಜಿಲೇಬಿ). ಹಾಗಾಗಿ ವೆರೈಟಿ ಸಂಗಮ ಯುಗದ ಭೋಗಗಳನ್ನು ತಿನ್ನಿಸಿದರು. ತಮಗಿಂತ ಮೊದಲು ಅವರು ಭೋಗವನ್ನು ಸ್ವೀಕರಿಸಿದ್ದಾರೆ. ತಮಗೆ ನಾಳೆ ಸಿಗುತ್ತದೆ. ಒಳ್ಳೆಯದು. ಬಹಳ ಚೆನ್ನಾಗಿ ಆಚರಿಸಿದರು, ನರ್ತಿಸಿದರು, ಹಾಡಿದರು. ಎಲ್ಲರೂ ಸೇರಿ ವಾಹ ಬಾಬಾ, ನನ್ನ ಬಾಬಾ, ಮಧುರ ಬಾಬಾ ಎಂಬ ಗೀತೆಯನ್ನು ಹಾಡಿದರು. ಆದ್ದರಿಂದ ನರ್ತಿಸಿದರು, ಹಾಡಿದರು, ತಿಂದರು ಮತ್ತು ಕೊನೆಗೆ ಏನಾಗುತ್ತದೆ? ಶುಭಾಷಯಗಳು ಮತ್ತು ವಿದಾಯ. ತಾವು ಕೂಡ ಆಚರಿಸಿದರೋ ಅಥವಾ ಮಾತ್ರ ಕೇಳಿದಿರೋ? ಆದರೆ ಎಲ್ಲಕ್ಕಿಂತ ಮೊದಲು ಫರೀಶ್ತೆಗಳಾಗಿ ಪ್ರಕಾಶಮಯ ಶರೀರವನ್ನು ಹೊಂದಿರಿ, ಇದು ಸಾಧ್ಯವಾಗುತ್ತದೆಯೋ ಇಲ್ಲವೋ? ದಪ್ಪ ಶರೀರವಿದೆಯೇ? ಇಲ್ಲ ಸೆಕೆಂಡ್ನಲ್ಲಿ ಹೊಳೆಯುವ ಡಬಲ್ ಲೈಟ್ನ ಸ್ವರೂಪದವರಾಗಿರಿ. ಆಗಬಹುದೇ? ಸಂಪೂರ್ಣ ಫರೀಶ್ತೆ! (ಬಾಪ್ದಾದಾ ಎಲ್ಲರಿಗೂ ಡ್ರಿಲ್ ಮಾಡಿಸಿದರು)

ಈಗ ತಮ್ಮ ಮೇಲೆ ವಿವಿಧ ಬಣ್ಣದ ಹೊಳೆಯುವ ವಜ್ರಗಳನ್ನು ತಮ್ಮ ಸೂಕ್ಷ್ಮ ಶರೀರದ ಮೇಲೆ ಹಾಕಿಕೊಳ್ಳಿರಿ ಮತ್ತು ಸದಾ ಹೀಗೆಯೇ ದಿವ್ಯ ಗುಣಗಳ ಬಣ್ಣಗಳು, ಶಕ್ತಿಯ ಬಣ್ಣಗಳು, ಜ್ಞಾನದ ಬಣ್ಣಗಳಿಂದ ಸ್ವಯಂ ಅನ್ನು ರಂಗಾಗಿಸಿಕೊಳ್ಳುತ್ತಿರಿ. ಬಾಪ್ದಾದ ಅವರ ಸಂಘದ ರಂಗಿನಲ್ಲಿ ಇರುವುದು ಎಲ್ಲಕ್ಕಿಂತ ದೊಡ್ಡ ಬಣ್ಣವಾಗಿದೆ. ಹೀಗೆ ಅಮರರಾಗಿರಿ. ಒಳ್ಳೆಯದು.

ಇಂತಹ ದೇಶ ವಿದೇಶದ ಫರಿಶ್ತೆ ಸ್ವರೂಪ ಮಕ್ಕಳಿಗೆ, ಸದಾ ಸ್ವಚ್ಚ ಹೃದಯದ ಪ್ರಾಪ್ತಿ ಸಂಪನ್ನ ಮಕ್ಕಳಿಗೆ, ಸತ್ಯ ಹೋಳಿಯನ್ನು ಆಚರಿಸುವುದು ಎಂದರೆ ಅರ್ಥ ಸಹಿತವಾಗಿ ಚಿತ್ರವನ್ನು ಪ್ರತ್ಯಕ್ಷ ರೂಪದಲ್ಲಿ ತರುವಂತಹ ಮಕ್ಕಳಿಗೆ, ಸದಾ ನಿರ್ಮಾಣ ಹಾಗೂ ನಮ್ರತೆಯ ಸಮತೋಲನದಲ್ಲಿರುವಂತಹ ಮಕ್ಕಳಿಗೆ, ಸದಾ ಆಶೀರ್ವಾದಗಳ ಪುಣ್ಯದ ಖಾತೆಯನ್ನು ಜಮಾ ಮಾಡುವಂತಹ ಮಕ್ಕಳಿಗೆ ಬಹಳ ಬಹಳ ಪದಮದಷ್ಟು ನೆನಪು ಪ್ರೀತಿ ಮತ್ತು ನಮಸ್ತೆ.

ವರದಾನ:
”ಬಾಬಾ” ಎಂಬ ಒಂದು ಶಬ್ಧದ ಕೀಲಿ ಕೈ ನಿಂದ ಸರ್ವ ಖಜಾನೆಗಳನ್ನು ಪ್ರಾಪ್ತಿ ಮಾಡಿಕೊಳ್ಳುವಂತಹ ಭಾಗ್ಯವಾನ್ ಆತ್ಮ ಭವ.

ಜ್ಞಾನದ ವಿಸ್ತಾರವನ್ನು ಅರ್ಥ ಮಾಡಿಕೊಳ್ಳಲು ಅಥವಾ ತಿಳಿಸಲು ಸಾಧ್ಯವಿಲ್ಲವಾದರೂ “ಬಾಬಾ” ಎಂಬ ಒಂದು ಶಬ್ದ ಹೃದಯದಿಂದ ಒಪ್ಪಿಕೊಂಡು ಹೃದಯಪೂರ್ವಕವಾಗಿ ಬೇರೆಯವರಿಗೆ ಹೇಳಿದರೆ ವಿಶೇಷ ಆತ್ಮಗಳಾಗಿಬಿಡುವಿರಿ, ಪ್ರಪಂಚದ ಮುಂದೆ ಮಹಾನ್ ಅತ್ಮನ ಸ್ವರೂಪದಲ್ಲಿ ಗಾಯನಯೋಗ್ಯರಾಗುವಿರಿ ಏಕೆಂದರೆ “ಬಾಬಾ” ಎಂಬ ಒಂದು ಶಬ್ದ ಸರ್ವ ಖಜಾನೆಗಳ ಭಾಗ್ಯದ ಕೀಲಿಕೈ ಆಗಿದೆ. ಕೀಲಿಕೈ ಉಪಯೋಗಿಸುವ ವಿಧಿ ಆಗಿದೆ ಹೃದಯದಿಂದ ಒಪ್ಪಿಕೊಳ್ಳುವುದು ಮತ್ತು ತಿಳಿದುಕೊಳ್ಳುವುದು. ಹೃದಯದಿಂದ ಹೇಳಿ ಬಾಬಾ ಎಂದು ಹೇಳಿದಾಗ ಖಜಾನೆ ಸದಾ ಹಾಜಿರಾಗುತ್ತದೆ.

ಸ್ಲೋಗನ್:
ಬಾಪ್ದಾದಾರವರ ಜೊತೆ ಸ್ನೇಹದಲ್ಲಿ ಹಳೆಯ ಪ್ರಪಂಚವನ್ನು ಬಲಿಹಾರಿ ಮಾಡಿಬಿಡಿ.