23.06.26 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ನೀವು
ಮಹಾನ್ ಸೌಭಾಗ್ಯಶಾಲಿಗಳಾಗಿದ್ದೀರಿ ಏಕೆಂದರೆ ಭಗವಂತನು ನಿಮಗೆ ಇಂತಹ ವಿದ್ಯೆಯನ್ನು ಓದಿಸುತ್ತಾರೆ
ಯಾವುದನ್ನು ಇಲ್ಲಿಯವರೆಗೂ ಯಾವುದೇ ಋಷಿಮುನಿಗಳೂ ಓದಲಿಲ್ಲ”
ಪ್ರಶ್ನೆ:
ಡ್ರಾಮಾದ ಯಾವ
ಪೂರ್ವ ನಿಶ್ಚಿತವನ್ನು ನೀವು ತಿಳಿದಿದ್ದೀರಿ ಆದರೆ ಪ್ರಪಂಚದ ಮನುಷ್ಯರಿಗೆ ಗೊತ್ತಿಲ್ಲ?
ಉತ್ತರ:
ಈ ರುದ್ರ ಜ್ಞಾನ
ಯಜ್ಞದಿಂದ ವಿನಾಶದ ಜ್ವಾಲೆಯು ಪ್ರಜ್ವಲಿತವಾಯಿತು ಎಂಬುದು ನಿಮಗೆ ತಿಳಿದಿದೆ. ಈಗ ಈ ಇಡೀ ಪ್ರಪಂಚವು
ಇದರಲ್ಲಿ ಸ್ವಾಹಾ ಆಗಿ ಬಿಡುವುದು. ಈ ಡ್ರಾಮಾದ ಪೂರ್ವ ನಿಶ್ಚಿತವನ್ನು ಯಾರೂ ತಡೆಯಲು ಸಾಧ್ಯವಿಲ್ಲ.
ಇದು ಇಂತಹ ಅಶ್ವಮೇಧ ಅವಿನಾಶಿ ರುದ್ರ ಯಜ್ಞವಾಗಿದೆ, ಯಾವುದರಲ್ಲಿ ಎಲ್ಲಾ ಸಾಮಗ್ರಿಗಳು ಸ್ವಾಹಾ
ಆಗುತ್ತದೆ ಮತ್ತೆ ನಾವು ಈ ಪತಿತ ಪ್ರಪಂಚದಲ್ಲಿ ಬರುವುದಿಲ್ಲ. ಇದಕ್ಕೆ ಈಶ್ವರನ ಲೀಲೆ ಎಂದು
ಹೇಳುವುದಿಲ್ಲ, ಡ್ರಾಮಾದ ಲೀಲೆಯೆಂದು ಹೇಳಲಾಗುತ್ತದೆ.
ಗೀತೆ:
ಮುಖವನ್ನು
ನೋಡಿಕೋ ಪ್ರಾಣಿ............
ಓಂ ಶಾಂತಿ.
ನೀವು ಮಕ್ಕಳೂ ಸಹ ಮನುಷ್ಯರಾಗಿದ್ದೀರಿ, ಇದು ಮನುಷ್ಯರ ಸೃಷ್ಟಿಯಾಗಿದೆ. ಈ ಸಮಯದಲ್ಲಿ ನೀವು
ಬ್ರಾಹ್ಮಣ ಧರ್ಮದ ಮನುಷ್ಯರಾಗಿದ್ದೀರಿ. ತಂದೆಯು ಆತ್ಮಗಳಿಗೆ ಶಿಕ್ಷಣ ಕೊಡುತ್ತಾರೆ. ಆತ್ಮಕ್ಕೆ ಈಗ
ತನ್ನ ಸ್ವಧರ್ಮದ ತಿಳುವಳಿಕೆಯಿದೆ, ನಾನಾತ್ಮ ಈ ಶರೀರವನ್ನು ನಡೆಸುವವನಾಗಿದ್ದೇನೆ. ಇದು ಆತ್ಮದ
ರಥವಾಗಿದೆ. ಹೇಗೆ ತಂದೆಯು ಬಂದು ಈ ರಥದಲ್ಲಿ ಸವಾರಿ ಮಾಡುತ್ತಾರೆ, ನೀವಾತ್ಮರೂ ಸಹ ಈ ರಥದಲ್ಲಿ
ಸವಾರಿ ಮಾಡುತ್ತೀರಿ. ಕೇವಲ ಆತ್ಮವು ನಾನಾತ್ಮನು ಶಾಂತ ಸ್ವರೂಪನಾಗಿದ್ದೇನೆ ಎಂಬುದನ್ನು ಮರೆತು
ಹೋಗಿದೆ. ನಾವಿರುವ ಸ್ಥಾನವು ಮೂಲವತನವಾಗಿದೆ, ಈ ಶರೀರವು ನಮಗೆ ಇಲ್ಲಿಯೇ ಸಿಗುತ್ತದೆ. ಈ ರೀತಿಯಾಗಿ
ತಮ್ಮೊಂದಿಗೆ ತಾವು ಮಾತನಾಡಿಕೊಳ್ಳಬೇಕು. ತಂದೆಯು ತಿಳಿಸುತ್ತಾರೆ - ನೀವು ಶಾಂತ ಸ್ವರೂಪ
ಆತ್ಮರಾಗಿದ್ದೀರಿ. ಒಂದುವೇಳೆ ನೀವು ಶಾಂತಿಯಲ್ಲಿ ಕುಳಿತುಕೊಳ್ಳಬೇಕೆಂದರೆ ನಿಮ್ಮನ್ನು ನೀವು ಆತ್ಮ,
ಶಾಂತಿಧಾಮದ ನಿವಾಸಿ ಎಂದು ತಿಳಿದುಕೊಳ್ಳಿ, ಇದರಿಂದ ಸ್ವಲ್ಪ ಸಮಯ ಶಾಂತಿಯಲ್ಲಿ ಕುಳಿತುಕೊಳ್ಳಬಹುದು.
ಮನುಷ್ಯರು ಶಾಂತಿಯನ್ನೇ ಬಯಸುತ್ತಾರೆ, ಮನಸ್ಸಿಗೆ ಶಾಂತಿ ಬೇಕು, ಇದನ್ನು ಆತ್ಮವು ಹೇಳಿತು ಆದರೆ
ಮನುಷ್ಯರಿಗೆ ನಾನಾತ್ಮನಾಗಿದ್ದೇನೆ ಎಂದು ಗೊತ್ತಿಲ್ಲ, ಇದನ್ನು ಮರೆತು ಹೋಗಿದ್ದಾರೆ. ಒಂದು ಕಥೆಯೂ
ಸಹ ಇದೆಯಲ್ಲವೆ - ರಾಣಿಯ ಕೊರಳಿನಲ್ಲಿ ಹಾರವಿತ್ತು, ಆದರೆ ಹಾರಕ್ಕಾಗಿ ಹೊರಗೆ ಹುಡುಕುತ್ತಿದ್ದಳು
ಅಂದಮೇಲೆ ಶಾಂತಿ ನಿಮ್ಮ ಸ್ವಧರ್ಮವಾಗಿದೆ ಎಂದು ತಂದೆಯು ತಿಳಿಸುತ್ತಾರೆ. ನಾವು ಶಾಂತ ಸ್ವರೂಪರೆಂದು
ಈಗ ಮಕ್ಕಳು ತಿಳಿದುಕೊಂಡಿದ್ದೀರಿ, ಇಲ್ಲಿ ಪಾತ್ರವನ್ನಭಿನಯಿಸಲು ಬಂದಿದ್ದೀರಿ. ಈ
ಕರ್ಮೇಂದ್ರಿಯಗಳಿಂದ ಭಿನ್ನವಾಯಿತೆಂದರೆ ಆತ್ಮವು ಶಾಂತವಾಗಿರುತ್ತದೆ, ಆತ್ಮವು ತನ್ನ ಸ್ವಧರ್ಮದಲ್ಲಿ
ಎಷ್ಟು ಸಮಯ ಬೇಕಾದರೂ ಇರಬಹುದು. ಒಂದುವೇಳೆ ಈ ಶರೀರದ ಮೂಲಕ ಕೆಲಸ ಮಾಡಲು ಇಷ್ಟವಿಲ್ಲದಿದ್ದರೆ
ಶಾಂತಿಯಲ್ಲಿ ಕುಳಿತುಕೊಳ್ಳಿ. ಇದು ಸತ್ಯವಾದ ಶಾಂತಿಯಾಗಿದೆ, ಇದನ್ನು ನೀವು ಹುಡುಕುವುದಿಲ್ಲ,
ನಿಮ್ಮ ಸ್ವಧರ್ಮವೇ ಶಾಂತಿಯಾಗಿದೆ. ಈಗ ನೀವು ಪಾತ್ರವನ್ನಭಿನಯಿಸುತ್ತಿದ್ದೀರಿ. ತಂದೆಯ ಮೂಲಕ, 84
ಜನ್ಮಗಳ ಪಾತ್ರವನ್ನಭಿನಯಿಸಿದೆವು ಎಂಬುದು ತಿಳಿಯಿತು. ಈ 84 ಜನ್ಮಗಳ ಚಕ್ರದ ಬಗ್ಗೆ ಯಾರಿಗೂ
ಗೊತ್ತಿಲ್ಲ, ನೀವು ಮಕ್ಕಳು ಮಾತ್ರವೇ ತಿಳಿದಿದ್ದೀರಿ. ಮೊದಲು ಸೂರ್ಯವಂಶಿ ರಾಜ, ಅಥವಾ
ಪ್ರಜೆಗಳಾಗಿದ್ದೆವು ನಂತರ ಚಂದ್ರವಂಶಿ, ವೈಶ್ಯ ವಂಶಿಗಳಿಂದ ಶೂದ್ರವಂಶಿಗಳಾಗಿದೆವು ಈಗ
ಸೂರ್ಯವಂಶಿಗಳಾಗಬೇಕಾಗಿದೆ. ನೀವು ಸೃಷ್ಟಿಯ ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಂಡಿದ್ದೀರಿ, ನೀವು
ಎಷ್ಟೊಂದು ಭಾಗ್ಯಶಾಲಿಗಳಾಗಿದ್ದೀರಿ. ತಂದೆಯಂತೂ ಯಥಾರ್ಥವಾಗಿರುವ ಮಾತನ್ನು ತಿಳಿಸುತ್ತಾರೆ, ಇದು
ಸದ್ಗತಿಯ ಮಾರ್ಗವಾಗಿದೆ. ಸರ್ವರ ಸದ್ಗತಿದಾತನು ಒಬ್ಬರೇ ಆಗಿದ್ದಾರೆ ಎಂದು ತಿಳಿಸಬೇಕು. ಈಗ
ತಿಳಿದಿದ್ದೇವೆ - ತಂದೆಯು ಬಂದು ನಮಗೆ 21 ಜನ್ಮಗಳ ಸದ್ಗತಿಯನ್ನು ಪ್ರಾಪ್ತಿ ಮಾಡಿಸುತ್ತಿದ್ದಾರೆ.
ಹೊರಗಿನ ಮನುಷ್ಯರಿಗೆ ಈ ಮಾತುಗಳು ತಿಳಿದಿಲ್ಲ, ನೀವು ಬ್ರಹ್ಮಾಕುಮಾರ-ಕುಮಾರಿಯರೇ ತಿಳಿದಿದ್ದೀರಿ.
ನೀವು ಬಿ.ಕೆ.ಗಳು ಏನು ತಿಳಿದಿದ್ದೀರಿ ಎಂದು ಕೆಲವರು ಕೇಳುತ್ತಾರೆ, ಇವರು ಬ್ರಾಹ್ಮಣ
ಬ್ರಾಹ್ಮಣಿಯರೋ ಅಥವಾ ಅಲ್ಲವೋ ಎಂದು ಪರೀಕ್ಷೆಯಂತೂ ಆಗಲೇಬೇಕಲ್ಲವೆ. ಒಂದುವೇಳೆ ಬಹ್ಮಾನ
ಮಕ್ಕಳಾಗಿದ್ದೀರಿ ಅಂದಮೇಲೆ ಸೃಷ್ಟಿಚಕ್ರವನ್ನು ಅವಶ್ಯವಾಗಿ ತಿಳಿದುಕೊಂಡಿರುತ್ತೀರಿ. ತಂದೆ
ರಚಯಿತನನ್ನು ತಿಳಿದುಕೊಂಡಿದ್ದೀರ? ಋಷಿ ಮುನಿಗಳು ಮುಂತಾದವರು ರಚನೆ ಮತ್ತು ರಚಯಿತನನ್ನು
ತಿಳಿದುಕೊಂಡಿರಲಿಲ್ಲ ಅಂದಮೇಲೆ ನಾಸ್ತಿಕರು. ನೀವೂ ನಾಸ್ತಿಕರಾಗಿದ್ದಿರಿ, ರಚಯಿತ ತಂದೆ ಮತ್ತು
ರಚನೆಯ ಆದಿ-ಮಧ್ಯ-ಅಂತ್ಯವನ್ನು ತಿಳಿದಿರಲಿಲ್ಲ. ಶಾಲೆಯಲ್ಲಿ ಮೊದಲು ಏನೂ ತಿಳಿದಿಲ್ಲದವರೇ
ಬರುತ್ತಾರೆ ನಂತರ ಶಾಲೆಯಲ್ಲಿ ಇದೆಲ್ಲವನ್ನೂ ಓದಿದೆವು ಎಂದು ಹೇಳುತ್ತಾರೆ. ಈಗ ನೀವು ಈಶ್ವರೀಯ
ವಿದ್ಯೆಯನ್ನು ಓದುತ್ತಿದ್ದೀರಿ. ಪರಮಪಿತ ಪರಮಾತ್ಮನು ನಿಮಗೆ ಓದಿಸುತ್ತಿದ್ದಾರೆ, ಇದು ಸದಾ
ಬುದ್ಧಿಯಲ್ಲಿರಬೇಕು. ರಚಯಿತನಂತೂ ಒಬ್ಬ ಶಿವ ತಂದೆಯಾಗಿದ್ದಾರೆ, ರುದ್ರನೇ ಜ್ಞಾನ ಯಜ್ಞವನ್ನು
ರಚಿಸಿದನೆಂದು ಶಾಸ್ತ್ರಗಳಲ್ಲಿದೆ. ಈಗ ರುದ್ರ ಮತ್ತು ಶಿವ ಪರಮಾತ್ಮನಲ್ಲಿ ಯಾವ ಅಂತರವೂ ಇಲ್ಲ.
ರುದ್ರ ಜ್ಞಾನ ಯಜ್ಞದಿಂದ ವಿನಾಶದ ಜ್ವಾಲೆಯು ಪ್ರಕಟವಾಯಿತು ಎಂದೂ ಸಹ ಇದೆ. ಕೇವಲ ರುದ್ರ ಶಿವನ
ಸ್ಥಾನದಲ್ಲಿ ಕೃಷ್ಣನ ಹೆಸರನ್ನು ಹಾಕಿದ್ದಾರೆ, ಇರುವುದು ಅದೇ ಗೀತೆಯೇ. ಈ ಜ್ಞಾನ ಯಜ್ಞದಿಂದ
ವಿನಾಶದ ಜ್ವಾಲೆ ಪ್ರಜ್ವಲಿತವಾಯಿತು ಎಂದು ಹೇಳುತ್ತಾರೆ ಅಂದಮೇಲೆ ಸ್ವರಾಜ್ಯಕ್ಕಾಗಿ ಈ ಜ್ಞಾನ
ಯಜ್ಞವಾಗಿದೆ. ಇದರಲ್ಲಿ ಹಳೆಯ ಪ್ರಪಂಚವು ಸ್ವಾಹಾ ಆಗಲಿದೆ. ಯಜ್ಞದಲ್ಲಿ ಎಲ್ಲವನ್ನೂ ಆಹುತಿ
ಮಾಡುತ್ತಾರೆ ಅರ್ಥಾತ್ ಸ್ವಾಹಾ ಆಗುತ್ತದೆ, ಎಲ್ಲವನ್ನೂ ಸ್ವಾಹಾ ಮಾಡುತ್ತಾರೆ ಅಂದಮೇಲೆ ಈ ರುದ್ರ
ಜ್ಞಾನ ಯಜ್ಞದಲ್ಲಿ ಹಳೆಯ ಪ್ರಪಂಚ ಸ್ವಾಹಾ ಆಗುತ್ತದೆ. ನೀವೀಗ ರಾಜಯೋಗವನ್ನು ಕಲಿಯುತ್ತಿದ್ದೀರಿ.
ಈ ಪತಿತ ಪ್ರಪಂಚದಲ್ಲಿ ಮತ್ತೆ ಬರುವುದಿಲ್ಲ. ಈ ಪ್ರಪಂಚವು ಮತ್ತೆ ವಿನಾಶವಾಗುವುದು. ಪ್ರಾಕೃತಿಕ
ವಿಕೋಪಗಳೂ ಆಗುತ್ತದೆ ಎಂಬುದನ್ನು ನೀವು ತಿಳಿದುಕೊಂಡಿದ್ದೀರಿ. ಇದೆಲ್ಲಾ ಜ್ಞಾನವು ನಿಮ್ಮ
ಬುದ್ಧಿಯಲ್ಲಿ ಕುಳಿತುಕೊಳ್ಳಬೇಕು. ನನ್ನಲ್ಲಿ ಎಲ್ಲದರ ಜ್ಞಾನವಿದೆ ಎಂದು ತಂದೆಯು ತಿಳಿಸುತ್ತಾರೆ.
ತಂದೆಯು ಸತ್ಯ, ಚೈತನ್ಯ ಹಾಗೂ ಜ್ಞಾನ ಸಾಗರನಾಗಿದ್ದಾರೆ, ಸೃಷ್ಟಿಯ ಆದಿ-ಮಧ್ಯ-ಅಂತ್ಯವನ್ನು
ತಿಳಿದಿದ್ದಾರೆ. ನಾವು ರಚಯಿತ ಮತ್ತು ರಚನೆಯನ್ನು ತಿಳಿದುಕೊಂಡಿಲ್ಲ ಎಂದು ಋಷಿ-ಮುನಿಗಳೂ
ಹೇಳುತ್ತಾರೆ. ನಿಮಗೆ ಏನು ಸಿಕ್ಕಿದೆ ಎಂದು ಯಾರಾದರೂ ನಿಮ್ಮನ್ನು ಕೇಳಿದರೆ - ಯಾವ ದೊಡ್ಡ-ದೊಡ್ಡ
ಋಷಿ ಮುನಿಗಳು ರಚನೆಯ ಆದಿ-ಮಧ್ಯ-ಅಂತ್ಯವನ್ನು ತಿಳಿದಿಲ್ಲವೋ ಅದನ್ನು ನಾವು ತಿಳಿದಿದ್ದೇವೆ ಎಂದು
ಹೇಳಿರಿ. ರಚಯಿತ ತಂದೆಯ ಹೊರತು ರಚನೆಯ ಆದಿ-ಮಧ್ಯ-ಅಂತ್ಯದ ರಹಸ್ಯವನ್ನು ತಿಳಿಸಲು ಸಾಧ್ಯವಿಲ್ಲ,
ರಚಯಿತನೇ ತಿಳಿಸಬೇಕು. ಜೇನು ನೊಣಗಳಲ್ಲಿ ಒಂದು ರಾಣಿ ನೊಣ ಇರುತ್ತದೆ, ರಾಣಿ ನೊಣದ ಜೊತೆ ಎಲ್ಲಾ
ಜೇನು ನೊಣಗಳು ಹಿಂದೆ ಹೋಗುತ್ತವೆ. ರಾಣಿ ಅರ್ಥಾತ್ ತಾಯಿಯ ಜೊತೆ ಅವಕ್ಕೆ ಎಷ್ಟೊಂದು
ಸಂಬಂಧವಿರುತ್ತದೆ! ಬೇಹದ್ದಿನ ತಂದೆಯೂ ಬರುತ್ತಾರೆ ಅಂದಮೇಲೆ ಮಕ್ಕಳನ್ನು ಜೊತೆಯಲ್ಲಿಯೇ
ಕರೆದುಕೊಂಡು ಹೋಗುತ್ತಾರೆ. ನಾವಾತ್ಮಗಳನ್ನು ಶಾಂತಿಧಾಮಕ್ಕೆ ಕರೆದುಕೊಂಡು ಹೋಗಲು ತಂದೆಯು
ಬಂದಿದ್ದಾರೆ ಎಂದು ತಿಳಿದಿದ್ದೀರಿ. ನಂತರ ಸತ್ಯಯುಗದಲ್ಲಿ ನಮ್ಮ ಪಾತ್ರವು ಪ್ರಾರಂಭವಾಗುವುದು,
ಯಾವ ಪಾತ್ರವನ್ನು ಮಾಡಲು ನೀವು ದೇವಿ-ದೇವತಾ ಪದವಿಯನ್ನು ಪಡೆಯುತ್ತಿದ್ದೀರಿ. ಇಲ್ಲಿ ನೀವು
ದೇವಿ-ದೇವತಾ ಪದವಿಯನ್ನು ಪಡೆಯಲು ಬರುತ್ತೀರಿ, ಇಲ್ಲಿ ನೀವು ಬರುವುದೇ ಮನುಷ್ಯರಿಂದ ದೇವತಾ
ಪದವಿಯನ್ನು ಪಡೆಯಲು. ಎಲ್ಲಾ ಗುಣಗಳನ್ನು ಇಲ್ಲಿಯೇ ನೀವು ಧಾರಣೆ ಮಾಡಬೇಕಾಗಿದೆ,
ಲಕ್ಷ್ಮೀ-ನಾರಾಯಣರ ಸಮಾನ ಆಗಬೇಕಾಗಿದೆ. ಇವರನ್ನು ದಿವ್ಯ ದೃಷ್ಟಿಯ ಹೊರತು ಯಾರೂ ನೋಡಲು
ಸಾಧ್ಯವಿಲ್ಲ. ನಾವು ಸೂರ್ಯವಂಶಿ ದೇವತೆಗಳಾಗುತ್ತೇವೆ, ಸ್ವರ್ಗದ ರಾಜಧಾನಿಯು ಹೇಗೆ
ಸ್ಥಾಪನೆಯಾಗುತ್ತಿದೆ ಎಂದು ನಿಮ್ಮ ಬುದ್ಧಿಯಲ್ಲಿದೆ. ಸತ್ಯಯುಗದಲ್ಲಿ ದೇವತೆಗಳ ರಾಜ್ಯವಿತ್ತು ಆದರೆ
ದೇವತೆಗಳ ರಾಜ್ಯದಲ್ಲಿ ರಾಕ್ಷಸ ಇತ್ಯಾದಿಗಳನ್ನು ತೋರಿಸುತ್ತಾರೆ. ಇದು ಯಾರಿಗೂ ಗೊತ್ತಿಲ್ಲ.
ಭಾರತವು ಎಷ್ಟೊಂದು ಪವಿತ್ರವಾಗಿತ್ತು, ಮಹಿಮೆಯನ್ನೂ ಹಾಡುತ್ತಾರೆ – ಸರ್ವ ಗುಣ ಸಂಪನ್ನ......
ಅವರ ಮುಂದೆ ತಲೆಯನ್ನೂ ಭಾಗಿಸುತ್ತಾರೆ, ಮಂದಿರಗಳೂ ಅನೇಕ ಮಾಡಲ್ಪಟ್ಟಿವೆ ಆದರೆ ಆದಿ ಸನಾತನ
ದೇವಿ-ದೇವತಾ ಧರ್ಮವು ಯಾವಾಗ ಮತ್ತು ಹೇಗೆ ಸ್ಥಾಪನೆಯಾಯಿತೆಂದು ಯಾರಿಗೂ ತಿಳಿದಿಲ್ಲ. ಭಾರತವು
ಎಷ್ಟೊಂದು ಉನ್ನತವಾಗಿತ್ತು, ಹೇಗೆ ಕನಿಷ್ಟ ಮಟ್ಟಕ್ಕೆ ಬಂದಿತು ಎಂಬುದೂ ಸಹ ಯಾರಿಗೂ ತಿಳಿದಿಲ್ಲ.
ಇದು ಪೂರ್ವ ನಿಶ್ಚಿತವಾಗಿ ಮಾಡಲ್ಪಟ್ಟಿದೆ ಎಂದು ಹೇಳುತ್ತಾರೆ. ಯಾರ ಲೀಲೆಯಾಗಿದೆ ಎಂಬುದೂ ಸಹ
ತಿಳಿದಿಲ್ಲ, ಡ್ರಾಮಾದ ಲೀಲೆ ಎಂದು ತಿಳಿದರೆ ತಿಳಿದುಬರುತ್ತದೆ. ಡ್ರಾಮಾದ ರಚಯಿತ, ಕ್ರಿಯೇಟರ್,
ಡೈರೆಕ್ಟರ್ ಯಾರಾಗಿದ್ದಾರೆ? ಕೇವಲ ಈಶ್ವರನದೇ ಲೀಲೆಯೆಂದು ಹೇಳಿ ಬಿಡುತ್ತಾರೆ. ಡ್ರಾಮಾ ಎಂದು
ಹೇಳುವುದರಿಂದ ಡ್ರಾಮಾದ ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಳ್ಳಬಹುದು. ಕೇವಲ ಪುಸ್ತಕವನ್ನು
ಓದುವುದರಿಂದ ಡ್ರಾಮಾವನ್ನು ತಿಳಿಯಲು ಸಾಧ್ಯವಿಲ್ಲ, ಎಲ್ಲಿಯವರೆಗೂ ಡ್ರಾಮವನ್ನು ನೋಡುವುದಿಲ್ಲವೋ
ಅಲ್ಲಿಯವರೆಗೆ ಅರ್ಥವಾಗುವುದಿಲ್ಲ. ಪತ್ರಿಕೆಗಳಲ್ಲಿ ಕೃಷ್ಣನ ಚರಿತ್ರೆಯ ಬಗ್ಗೆ ಒಂದು ಡ್ರಾಮಾ
ಮಾಡಲ್ಪಟ್ಟಿತ್ತು, ಅದನ್ನು ಓದಿದ್ದೆನು ಆದರೆ ನೋಡದೇ ಇದ್ದರೆ ಅರ್ಥವಾಗಲು ಸಾಧ್ಯವೇ! ನೋಡಿದಾಗಲೇ
ಡ್ರಾಮಾ ಎಲ್ಲವೂ ಅರ್ಥವಾಗುತ್ತದೆ. ನೀವು ಮಕ್ಕಳೂ ಸಹ ಡ್ರಾಮಾವನ್ನು ಈಗ ತಿಳಿದುಕೊಂಡಿದ್ದೀರಿ.
ಮನುಷ್ಯರು ಪ್ರಪಂಚದ ಇತಿಹಾಸ-ಭೂಗೋಳವು ಪುನರಾವರ್ತನೆಯಾಗುವುದು ಎಂದು ಹೇಳುತ್ತಾರೆ, ಆದರೆ ಹೇಗೆ
ಸುತ್ತುತ್ತದೆ ಎಂಬುದು ಯಾರಿಗೂ ಗೊತ್ತಿಲ್ಲ. ಹೆಸರನ್ನೂ ಸಹ ಸತ್ಯಯುಗ, ತ್ರೇತಾ, ದ್ವಾಪರ, ಕಲಿಯುಗ
ನಂತರ ಸಂಗಮ ಯುಗ ಎಂದು ಬರೆಯುತ್ತಾರೆ ಆದರೆ ಭಗವಂತನು ಯುಗ-ಯುಗದಲ್ಲಿ ಬರುತ್ತಾರೆಂದು ಮನುಷ್ಯರು
ತಿಳಿದಿದ್ದಾರೆ. ಸತ್ಯಯುಗ, ತ್ರೇತಾದಲ್ಲಿಯೂ ಸಹ ಸಂಗಮ ಇರುತ್ತದೆ ಆದರೆ ಆ ಸಂಗಮದ ಮಹತ್ವವೇನೂಇಲ್ಲ,
ಅಲ್ಲಿ ಏನೂ ಆಗುವುದೂ ಇಲ್ಲ. ಈ ಮಾತುಗಳನ್ನು ನೀವು ತಿಳಿದುಕೊಂಡಿದ್ದೀರಿ. ಸತ್ಯಯುಗೀ
ಸೂರ್ಯವಂಶಿಗಳು ನಂತರ ಚಂದ್ರವಂಶಿಯರಿಗೆ ರಾಜ್ಯವನ್ನು ಹೇಗೆ ಕೊಟ್ಟರು? ಚಂದ್ರವಂಶಿಗಳು
ಸೂರ್ಯವಂಶಿಗಳ ಮೇಲೆ ಗೆದ್ದರು ಎಂದಲ್ಲ, ಇಲ್ಲಿ ಸೂರ್ಯವಂಶಿ ರಾಜ-ರಾಣಿಯರು ಚಂದ್ರವಂಶಿ ರಾಜನಿಗೆ
ತಿಲಕವನ್ನಿಟ್ಟು ಸಿಂಹಾಸನದ ಮೇಲೆ ಕೂರಿಸುತ್ತಾರೆ. ರಾಜಾ ರಾಮ, ರಾಣಿ ಸೀತೆ ಎಂಬ ಬಿರುದು
ಸಿಗುತ್ತದೆ. ಇದನ್ನು ಯಾರು ಕೊಟ್ಟರು? ಸೂರ್ಯವಂಶಿಗಳು ನೀವು ರಾಜ್ಯಭಾರ ಮಾಡಿ ಎಂದು ವರ್ಗಾವಣೆ
ಮಾಡಿದರು ಎಂದು ಹೇಳುತ್ತಾರೆ. ಈ ದೃಶ್ಯವನ್ನು ನೀವು ಸಾಕ್ಷಾತ್ಕಾರದಲ್ಲಿ ನೋಡಿದ್ದೀರಿ. ಉಳಿದಂತೆ
ಯಾವುದೇ ಯುದ್ಧ ಇತ್ಯಾದಿಗಳು ಆಗುವುದಿಲ್ಲ. ಹೇಗೆ ಯಾರಿಗೇ ರಾಜ್ಯಭಾಗ್ಯವನ್ನು ಕೊಡುತ್ತಾರೆಯೋ
ಹಾಗೆಯೇ ಕೊಡುತ್ತಾರೆ. ಅವರ ಕಾಲುಗಳನ್ನು ತೊಳೆದು ಅವರಿಗೆ ರಾಜ್ಯ ತಿಲಕವನ್ನು ಕೊಡುತ್ತಾರೆ. ಅಲ್ಲಿ
ಯಾವುದೇ ಗುರು-ಗೋಸಾಯಿಗಳು ಇರುವುದಿಲ್ಲ. ಈಗ ನಾವು ದೈವೀ ಸ್ವಭಾವದವರಾಗುತ್ತಿದ್ದೇವೆಂದು ನೀವು
ಮಕ್ಕಳ ಬುದ್ಧಿಯಲ್ಲಿದೆ. ಸೂರ್ಯವಂಶಿ, ಚಂದ್ರವಂಶಿ ರಾಜಧಾನಿಯಲ್ಲಿ ಎಷ್ಟು ಸುಖಿಗಳಾಗಿರುತ್ತೇವೆ!
ಬಾಬಾ, ನಮ್ಮನ್ನು ದುಃಖದಿಂದ ಹೊರ ತೆಗೆದು ಸುಖದಲ್ಲಿ ಕರೆದುಕೊಂಡು ಹೋಗುತ್ತಾರೆ. ಬೇರೆ ಯಾರೂ
ಸುಖಿಗಳನ್ನಾಗಿ ಮಾಡಲು ಸಾಧ್ಯವಿಲ್ಲ. ಸಾಧುಗಳೂ ಸಹ ಶಾಂತಿಧಾಮಕ್ಕೆ ಹೋಗಲು ಇಚ್ಛಿಸುತ್ತಾರೆ, ನಾನು
ಈ ಸಾಧುಗಳನ್ನೂ ಸಹ ಉದ್ಧಾರ ಮಾಡಿ ಶಾಂತಿಧಾಮಕ್ಕೆ ಕರೆದುಕೊಂಡು ಹೋಗುತ್ತೇನೆ ಎಂದು ತಂದೆಯು
ತಿಳಿಸುತ್ತಾರೆ. ಸನ್ಯಾಸಿಗಳು ದ್ವಾಪರ ಯುಗದಲ್ಲಿಯೇ ಬರುತ್ತಾರೆ, ಸ್ವರ್ಗದಲ್ಲಿ ದೇವತೆಗಳೇ
ಇರುತ್ತಾರೆ. ನಿರಾಕಾರ ಪ್ರಪಂಚದಲ್ಲಿ ಭಿನ್ನ-ಭಿನ್ನ ವಿಭಾಗಗಳಿರುತ್ತವೆ. ಸೂರ್ಯವಂಶಿಯರದೇ ಬೇರೆ,
ಚಂದ್ರವಂಶಿಯರದೇ ಬೇರೆ ನಂತರ ಇಸ್ಲಾಮಿ, ಬೌದ್ಧಿ, ಸನ್ಯಾಸಿ ಇತ್ಯಾದಿ ಯಾರೆಲ್ಲರೂ ಬರುತ್ತಾರೆಯೋ
ಅವರೆಲ್ಲರ ಭಿನ್ನ-ಭಿನ್ನವಾದ ವಿಭಾಗಗಳು ಮಾಡಲ್ಪಟ್ಟಿವೆ. ನಾವು ರಾಜ್ಯ ಮಾಡುತ್ತಿದ್ದಾಗ ಬೇರೆ ಯಾರೂ
ಇರಲಿಲ್ಲ, ಮೂಲವತನದಲ್ಲಿ ಈ ರೀತಿ ಮಾಲೆ ನಂಬರ್ವಾರ್ ಮಾಡಲ್ಪಟ್ಟಿದೆ. ಆದಿ ಸನಾತನ ದೇವಿ-ದೇವತಾ
ಧರ್ಮದವರದು ಮೊದಲನೇ ವಂಶವಾಗಿದೆ ನಂತರ ಅನ್ಯ ವಂಶಗಳು ಬರುತ್ತವೆ. ಇದು ಎಲ್ಲಾ ವಂಶಗಳಿಗಿಂತ ಅತಿ
ದೊಡ್ಡ ವಂಶವಾಗಿದೆ ಮತ್ತು ಅನ್ಯ ಧರ್ಮದ ಸ್ಥಾಪಕರು ಬರುತ್ತಾರೆ, ಅವರೆಲ್ಲರೂ ಇದರಿಂದಲೇ ಬರುತ್ತಾರೆ.
ನೀವು ಹೇಳುತ್ತೀರಿ - ಇಸ್ಲಾಮಿಗಳು ಎರಡನೇ ವಂಶ ನಂತರ ಮೂರನೆಯವರು ಬೌದ್ಧಿಯರ ವಂಶವಾಗಿದೆ. ನಾವು
ಮೊದಲಿನವರಾಗಿದ್ದೇವೆ ಬಾಕಿ ಇನ್ನೆಲ್ಲರೂ ಚಿಕ್ಕ-ಚಿಕ್ಕ ವಂಶದವರು ಲಕ್ಷಗಟ್ಟಲೇ ಇರುತ್ತಾರೆ,
ಇಲ್ಲಂತೂ ಮುಖ್ಯವಾಗಿ ನಾಲ್ಕು ವಂಶಗಳಿವೆ. ಮೊಟ್ಟ ಮೊದಲು ನಾವು ಬರುತ್ತೇವೆ ನಂತರ ಇಸ್ಲಾಮಿ,
ಬೌದ್ಧಿ, ಕ್ರಿಶ್ಚಿಯನ್ನರು ಬರುತ್ತಾರೆ. ಈಗ ನಾವು ಕೆಳಗೆ ಬಂದು ಬಿಟ್ಟಿದ್ದೇವೆ, ನಾವೇ 84
ಜನ್ಮಗಳ ಪಾತ್ರವನ್ನಭಿನಯಿಸಬೇಕಾಗಿದೆ. ಈಗ ಯಾರು ಅಂತ್ಯದಲ್ಲಿದ್ದಾರೆಯೋ ಅವರೇ ಪ್ರಾರಂಭದಲ್ಲಿ
ಬರುತ್ತಾರೆ. ದೇವತೆಗಳು ಪತಿತರಾಗಿರುವ ಕಾರಣ ತಮ್ಮನ್ನು ದೇವಿ-ದೇವತೆಗಳೆಂದು ಹೇಳಿಕೊಳ್ಳುವುದಿಲ್ಲ.
ದೇವತೆಗಳನ್ನು ಪೂಜಿಸುತ್ತಾರೆ ಅಂದಮೇಲೆ ಅವರ ವಂಶದವರೇ ಆಗಿದ್ದಾರೆಂದು ಇದರಿಂದ ಸಿದ್ಧವಾಗುತ್ತದೆ.
ಸಿಖ್ಖ್ ಧರ್ಮದವರು ಗುರುನಾನಕನನ್ನು ಒಪ್ಪುತ್ತಾರೆ, ಅವರ ವಂಶದವರೇ ಆಗಿದ್ದಾರೆ. ಸತ್ಯಯುಗದಲ್ಲಿ
ಮೊದಲನೇ ನಂಬರ್ ನಮ್ಮ ವಂಶವಾಗಿರುತ್ತದೆ, ಅದಕ್ಕಿಂತಲೂ ಶ್ರೇಷ್ಠವಾದ ವಂಶ ಮತ್ತ್ಯಾವುದೂ
ಇರುವುದಿಲ್ಲ. ನಾವು ಶ್ರೇಷ್ಠಾತಿ ಶ್ರೇಷ್ಠ ವಂಶದವರಾಗಿದ್ದೇವೆ. ನಾವು ಎಲ್ಲರಿಗಿಂತ ಹೆಚ್ಚು
ಸುಖವನ್ನು ಭೋಗಿಸುತ್ತೇವೆ, ನಂತರ ನಾವೇ ಕಂಗಾಲರಾಗುತ್ತೇವೆ. ಎಲ್ಲರಿಗಿಂತ ಹೆಚ್ಚು ದುಃಖವು
ಇಲ್ಲಿಯೇ ಇದೆ, ಸಾಲವನ್ನು ಹೆಚ್ಚು ಇಲ್ಲಿಯೇ ಪಡೆಯುತ್ತಾರೆ. ಎಷ್ಟು ಸಾಹುಕಾರರಾಗಿದ್ದೆವು, ಈಗ
ಎಷ್ಟೊಂದು ಬಡವರಾಗಿದ್ದೇವೆ, ಎಲ್ಲವನ್ನೂ ಕಳೆದುಕೊಂಡು ಕುಳಿತಿದ್ದೇವೆ, ಇದಂತೂ ದುಃಖಧಾಮವಾಗಿದೆ.
ಈಗ ತಂದೆಯು ಪುನಃ ನಮ್ಮನ್ನು ಸುಖಧಾಮದ ಮಾಲೀಕರನ್ನಾಗಿ ಮಾಡುತ್ತಾರೆ. ಬಾಕಿ ಎಲ್ಲರೂ ಶಾಂತಿಧಾಮಕ್ಕೆ
ಹೊರಟು ಹೋಗುತ್ತಾರೆ. ಅರ್ಧಕಲ್ಪ ನೀವು ಸುಖವನ್ನು ಅನುಭವಿಸುತ್ತೀರಿ ಬಾಕಿ ಎಲ್ಲರೂ
ಶಾಂತಿಯಲ್ಲಿರುತ್ತಾರೆ. ನಾವು ಮುಕ್ತಿಗೆ ಹೋಗಬೇಕೆಂದು ಎಲ್ಲರೂ ಇಚ್ಛಿಸುತ್ತಾರೆ, ಸುಖ ಕಾಗವಿಷ್ಟ
ಸಮಾನವೆಂದು ತಿಳಿಯುತ್ತಾರೆ. ಅವರಿಗೆ ಸುಖಧಾಮದ ಅನುಭವವೇ ಇಲ್ಲ, ನಿಮಗೆ ಅನುಭವವಿದೆ. ಮಹಿಮೆಯನ್ನೂ
ಮಾಡುತ್ತಾರೆಆದರೆ ಪತಿತರಾಗಿರುವ ಕಾರಣ ಮರೆತು ಹೋಗಿದ್ದಾರೆ. ತಂದೆಯು ನೆನಪು ತರಿಸುತ್ತಾರೆ - ಹೇ
ಭಾರತವಾಸಿಗಳೇ, ನೀವು ದೇವಿ-ದೇವತಾ ಧರ್ಮದವರಾಗಿದ್ದಿರಿ, ದ್ವಾಪರದಿಂದ ಹೆಸರು ಬದಲಾಯಿತು. ದೇವತಾ
ಧರ್ಮದವರೇ ಪತಿತರಾಗಿದ್ದಾರೆ. ಪತಿತ-ಪಾವನ ಬನ್ನಿ ಎಂದು ಗಾಯನವನ್ನೂ ಮಾಡುತ್ತಾರೆ. ನೀವು ಎಷ್ಟು
ಜನ್ಮಗಳು ಪಾವನ ಪ್ರಪಂಚದಲ್ಲಿ, ಎಷ್ಟು ಜನ್ಮಗಳು ಪತಿತ ಪ್ರಪಂಚದಲ್ಲಿದ್ದಿರಿ ಎಂದು ತಂದೆಯು
ತಿಳಿಸಿದ್ದಾರೆ. ಈಗ ಪುನಃ ಪಾವನ ಪ್ರಪಂಚಕ್ಕೆ ಹೋಗಬೇಕಾಗಿದೆ. ಇದು ಪಾಠಶಾಲೆಯೂ ಆಗಿದೆ, ಯಜ್ಞಕ್ಕೆ
ಯಜ್ಞವೂ ಆಗಿದೆ. ಇಡೀ ಹಳೆಯ ಪ್ರಪಂಚವು ಇದರಲ್ಲಿ ಸಮಾಪ್ತಿಯಾಗಲಿದೆ. ಹೋಲಿಕಾವನ್ನು ಸುಡುತ್ತಾರೆ,
ಈ ಎಲ್ಲಾ ಹಬ್ಬಗಳು ಈಗಿನದ್ದಾಗಿವೆ. ಆತ್ಮವು ಹೊರಟು ಹೋಗುತ್ತದೆ, ಶರೀರವು ಸಮಾಪ್ತಿಯಾಗುವುದು. ಈ
ಜ್ಞಾನವನ್ನು ಯಾವುದೇ ಸನ್ಯಾಸಿಗಳು ಕೊಡಲು ಸಾಧ್ಯವಿಲ್ಲ. ಗೀತೆಯಲ್ಲಿ ಸ್ವಲ್ಪಇದೆ, ಆದರೆ
ಹಿಟ್ಟಿನಲ್ಲಿ ಉಪ್ಪು ಸೇರಿಕೊಂಡಂತೆ, ಜ್ಞಾನವು ಪ್ರಾಯಃಲೋಪವಾಗಿ ಬಿಡುತ್ತದೆ. ನಾನು ಈ ಯಜ್ಞವನ್ನು
ರಚಿಸಿದ್ದೇನೆ, ಇದರಲ್ಲಿ ತನು-ಮನ-ಧನವೆಲ್ಲವನ್ನೂ ಸ್ವಾಹಾ ಮಾಡುತ್ತೀರಿ, ನೀವು ಬದುಕಿದ್ದರೂ
ಸತ್ತಂತೆ ಇರುತ್ತೀರೆಂದು ಶಿವ ತಂದೆಯು ತಿಳಿಸುತ್ತಾರೆ. ಈ ಜ್ಞಾನವು ನಿಮಗೆ ಈಗ ದೊರೆಯುತ್ತಿದೆ.
ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ.
ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಸುಖಧಾಮಕ್ಕೆ
ಹೋಗಲು ನಿಮ್ಮ ಸ್ವಭಾವವನ್ನು ದೈವೀ ಸ್ವಭಾವವನ್ನಾಗಿ ಮಾಡಿಕೊಳ್ಳಬೇಕಾಗಿದೆ. ಡ್ರಾಮಾದ
ಆದಿ-ಮಧ್ಯ-ಅಂತ್ಯದ ರಹಸ್ಯವನ್ನು ಬುದ್ಧಿಯಲ್ಲಿಟ್ಟುಕೊಂಡು ಹರ್ಷಿತವಾಗಿರಬೇಕು, ಎಲ್ಲರಿಗೂ ಇದೇ
ರಹಸ್ಯವನ್ನು ತಿಳಿಸಬೇಕು.
2. ಸ್ವ ರಾಜ್ಯದಲ್ಲಿ
ಹೋಗಲು ಬೇಹದ್ದಿನ ಯಜ್ಞದಲ್ಲಿ ಬದುಕ್ಕಿದ್ದಂತೆಯೇ ಸತ್ತು ತಮ್ಮ ತನು-ಮನ-ಧನವನ್ನು ಸ್ವಾಹಾ
ಮಾಡಬೇಕಾಗಿದೆ. ಎಲ್ಲವನ್ನೂ ಹೊಸ ಪ್ರಪಂಚಕ್ಕಾಗಿ ವರ್ಗಾವಣೆ ಮಾಡಬೇಕು.
ವರದಾನ:
ತಮ್ಮ ಮಸ್ತಕದ
ಮೂಲಕ ಮೂರನೇ ನೇತ್ರದ ಸಾಕ್ಷಾತ್ಕಾರ ಮಾಡಿಸುವಂತಹ ಸತ್ಯ ಯೋಗಿ ಭವ.
ನೆನಪಾರ್ಥದಲ್ಲಿ ಯೋಗಿಯ
ಮಸ್ತಕದಲ್ಲಿ ಮೂರನೇ ನೇತ್ರವನ್ನು ತೋರಿಸುತ್ತಾರೆ. ತಾವು ಸತ್ಯ ಯೋಗಿ ಮಕ್ಕಳೂ ಸಹ ತಮ್ಮ ಮಸ್ತಕದ
ಮೂಲಕ ಮೂರನೇ ನೇತ್ರದ ಸಾಕ್ಷಾತ್ಕಾರ ಮಾಡಿಸುವುದಕ್ಕಾಗಿ - ಸದಾ ಒಬ್ಬ ತಂದೆಯ ಸಂಗದಲ್ಲಿರಿ. ಒಬ್ಬ
ತಂದೆ, ಇನ್ನೊಂದು ನಾನು, ಮೂರನೆಯವರು ಯಾರೂ ಇಲ್ಲ - ಇಂತಹ ಸ್ಥಿತಿಯು ಯಾವಾಗ ಆಗಿ ಬಿಡುತ್ತದೆಯೋ
ಆಗ ಮೂರನೇ ನೇತ್ರದ ಸಾಕ್ಷಾತ್ಕಾರ ಆಗುವುದು. ಒಂದುವೇಳೆ ಬುದ್ಧಿಯಲ್ಲಿ ಮೂರನೆಯದು ಬಂದಿತೆಂದರೆ,
ಮೂರನೇ ನೇತ್ರವು ಬಂಧ್ ಆಗಿ ಬಿಡುತ್ತದೆ, ಆದ್ದರಿಂದ ಸದಾ ಮೂರನೇ ನೇತ್ರವು ತೆರೆದಿರಲಿ. ಇದಕ್ಕಾಗಿ
ನೆನಪಿಟ್ಟುಕೊಳ್ಳಿರಿ - ಮೂರನೆಯವರು ಯಾರೂ/ಯಾವುದೂ ಇಲ್ಲ.
ಸ್ಲೋಗನ್:
ಪ್ರಶ್ನಚಿತ್ತರು
ಆಗುವುದು ಅರ್ಥಾತ್ ಬೇಸರವಾಗುವುದು ಮತ್ತು ಬೇಸರ ಪಡಿಸುವುದು.
ಅವ್ಯಕ್ತ ಸೂಚನೆಗಳು:-
ಸದಾ ಹರ್ಷಿತರಾಗಿರಲು ತಮ್ಮ ಸ್ವಭಾವವನ್ನು ಸರಳ ಮಾಡಿಕೊಳ್ಳಿರಿ, ಸಹನಶೀಲರಾಗಿರಿ.
ಯಾರು ಎಂತಹ ಕರ್ಮ
ಮಾಡುತ್ತಾರೆ ಹಾಗೆಯೇ ಅವರ ಹೆಸರು ಸಹ ಬೀಳುತ್ತದೆ. ಕರ್ಮ ಒಂದುವೇಳೆ ಶ್ರೇಷ್ಠವಾಗಿದ್ದರೆ ಶ್ರೇಷ್ಠ
ಮಣಿ ಎಂದು ಹೆಸರು ಬೀಳುತ್ತದೆ. ಶ್ರೇಷ್ಠ ಮಣಿಯಾಗಲು ಮನಸ್ಸು, ವಾಣಿ, ಕರ್ಮದಲ್ಲಿ ಸರಳತೆ ಮತ್ತು
ಸಹನಶೀಲತೆ ಈ ಎರಡು ಗುಣಗಳು ಅವಶ್ಯಕವಾಗಿವೆ. ಒಂದುವೇಳೆ ಸರಳತೆಯಿದೆ ಸಹನಶೀಲತೆಯಿಲ್ಲವೆಂದರೂ
ಶ್ರೇಷ್ಠವಲ್ಲ ಇದಕ್ಕಾಗಿ ಸರಳತೆ ಮತ್ತು ಸಹನಶೀಲತೆ ಎರಡು ಜೊತೆ-ಜೊತೆ ಬೇಕು.