23.07.24 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ- ನೀವು
ಸಮಯದಲ್ಲಿ ತಮ್ಮ ಮನೆಗೆ ಹಿಂತಿರುಗಿ ಹೋಗಬೇಕಾಗಿದೆ ಆದ್ದರಿಂದ ನೆನಪಿನ ತೀವ್ರತೆಯನ್ನು
ಹೆಚ್ಚಿಸಿಕೊಳ್ಳಿ, ಈ ದುಃಖಧಾಮವನ್ನು ಮರೆತು ಶಾಂತಿಧಾಮ ಮತ್ತು ಸುಖಧಾಮವನ್ನು ನೆನಪು ಮಾಡಿ”
ಪ್ರಶ್ನೆ:
ಯಾವ ಒಂದು
ಗುಹ್ಯರಹಸ್ಯವನ್ನು ನೀವು ಮನುಷ್ಯರಿಗೆ ತಿಳಿಸಿದಾಗ ಅವರ ಬುದ್ಧಿಯಲ್ಲಿ ಏರುಪೇರುಂಟಾಗುತ್ತದೆ?
ಉತ್ತರ:
ಅವರಿಗೆ ಈ
ಗುಹ್ಯರಹಸ್ಯವನ್ನು ತಿಳಿಸಿ- ಆತ್ಮವು ಇಷ್ಟು ಸೂಕ್ಷ್ಮಬಿಂದುವಾಗಿದೆ, ಅದರಲ್ಲಿ ಸದಾ ಕಾಲಕ್ಕೆ
ಪಾತ್ರವು ತುಂಬಲ್ಪಟ್ಟಿದೆ, ಅದು ಪಾತ್ರವನ್ನಭಿನಯಿಸುತ್ತಲೇ ಇರುತ್ತದೆ ಎಂದೂ ಸುಸ್ತಾಗುವುದಿಲ್ಲ.
ಯಾರಿಗೆ ಮೋಕ್ಷವೂ ಸಿಗಲು ಸಾಧ್ಯವಿಲ್ಲ. ಬಹಳ ಮನುಷ್ಯರು ದುಃಖವನ್ನು ನೋಡಿ ಮೋಕ್ಷವು ಸಿಕ್ಕಿದರೆ
ಒಳ್ಳೆಯದೆಂದು ತಿಳಿಯುತ್ತಾರೆ ಆದರೆ ಅವಿನಾಶಿ ಆತ್ಮವು ಪಾತ್ರವನ್ನಭಿನಯಿಸದೇ ಇರಲು ಸಾಧ್ಯವಿಲ್ಲ.
ಈ ಮಾತುಗಳನ್ನು ಕೇಳಿ ಅವರಿಗೆ ಏರುಪೇರು ಉಂಟಾಗತೊಡಗುತ್ತದೆ.
ಓಂ ಶಾಂತಿ.
ಮಧುರಾತಿ ಮಧುರ ಆತ್ಮಿಕ ಮಕ್ಕಳಿಗೆ ತಂದೆಯು ತಿಳಿಸುತ್ತಾರೆ, ಇಲ್ಲಿರುವುದೇ ಆತ್ಮಿಕ ಮಕ್ಕಳು.
ತಂದೆಯು ಪ್ರತಿನಿತ್ಯವೂ ತಿಳಿಸುತ್ತಾರೆ- ಮಕ್ಕಳೇ, ಈ ಪ್ರಪಂಚದಲ್ಲಿ ಬಡವರಿಗೆ ಎಷ್ಟೊಂದು ದುಃಖವಿದೆ.
ಈ ಪ್ರವಾಹ ಇತ್ಯಾದಿ ಆದಾಗ ಬಡವರಿಗೆ ದುಃಖವಾಗುತ್ತದೆ. ಅವರ ಸಾಮಗ್ರಿ ಮುಂತಾದವುಗಳಿಗೆ ಯಾವ
ಸ್ಥಿತಿಯುಂಟಾಗಿಬಿಡುತ್ತದೆ. ದುಃಖವಂತೂ ಆಗುತ್ತದೆಯಲ್ಲವೆ ಅಪಾರ ದುಃಖವಿದೆ. ಸಾಹುಕಾರರಿಗೆ
ಸುಖವಿದೆ ಆದರೆ ಅದು ಅಲ್ಪಕಾಲಕ್ಕಾಗಿ. ಸಾಹುಕಾರರೂ ರೋಗಿಗಳಾಗುತ್ತಾರೆ, ಬಹಳಷ್ಟು ಮೃತ್ಯುವು
ಬರುತ್ತದೆ, ಇಂತಹವರು ಶರೀರಬಿಟ್ಟರು- ಇಂದು ಇಂತಹದ್ದಾಯಿತು, ಇಂದು ರಾಷ್ಟ್ರಪತಿಯಾಗಿದ್ದವರು ನಾಳೆ
ಅವರ ಸಿಂಹಾಸನವನ್ನು ಬಿಡಬೇಕಾಗುತ್ತದೆ, ಮುತ್ತಿಗೆ ಹಾಕಿ ಅವರನ್ನು ಇಳಿಸಿಬಿಡುತ್ತಾರೆ. ಇದರಿಂದಲೂ
ದುಃಖವಾಗುತ್ತದೆ, ತಂದೆಯು ಹೇಳಿದ್ದಾರೆ. ದುಃಖಗಳ ಪಟ್ಟಿಯನ್ನು ಬರೆಯಿರಿ, ಈ ದುಃಖಧಾಮದಲ್ಲಿ
ಯಾವ-ಯಾವ ಪ್ರಕಾರದ ದುಃಖವಿದೆಯೆಂದು. ನೀವು ಮಕ್ಕಳು ಸುಖಧಾಮವನ್ನೂ ತಿಳಿದುಕೊಂಡಿದ್ದೀರಿ,
ಪ್ರಪಂಚದವರೇನೂ ತಿಳಿದುಕೊಂಡಿಲ್ಲ. ದುಃಖಧಾಮ ಮತ್ತು ಸುಖಧಾಮದ ಹೋಲಿಕೆಯನ್ನು ಅವರು ಮಾಡಲು
ಸಾಧ್ಯವಿಲ್ಲ. ತಂದೆಯು ತಿಳಿಸುತ್ತಾರೆ- ಮಕ್ಕಳೇ, ನೀವು ಎಲ್ಲವನ್ನೂ ತಿಳಿದುಕೊಂಡಿದ್ದೀರಿ,
ಅವಶ್ಯವಾಗಿ ಹೇಳುತ್ತಿರುವುದು ಸತ್ಯವೆಂದು ನಂಬುತ್ತೀರಿ, ಇಲ್ಲಿ ಯಾರಿಗೆ ದೊಡ್ಡ-ದೊಡ್ಡಮನೆ,
ವಿಮಾನ ಇತ್ಯಾದಿಗಳಿವೆಯೋ ಅವರೇ ಈ ಕಲಿಯುಗವು ಇನ್ನೂ 40000 ವರ್ಷಗಳವರೆಗೆ ನಡೆಯುವುದಿದೆ.
ನಂತರದಲ್ಲಿ ಸತ್ಯಯುಗವು ಬರುತ್ತದೆಯೆಂದು ತಿಳಿಯುತ್ತಾರೆ. ಘೋರ ಅಂಧಕಾರದಲ್ಲಿ ಇದ್ದಾರಲ್ಲವೆ. ಈಗ
ಅಂತಹವರನ್ನು ಸಮೀಪಕ್ಕೆ ಕರೆದುಕೊಂಡು ಬರಬೇಕಾಗಿದೆ. ಇನ್ನು ಸ್ವಲ್ಪ ಸಮಯವಿದೆ ಅಂದಾಗ ಎಲ್ಲಿ
ಲಕ್ಷಾಂತರ ವರ್ಷಗಳೆಂದು ಹೇಳುತ್ತಾರೆ, ಎಲ್ಲಿ ನೀವು 5000 ವರ್ಷಗಳೆಂದು ಸಿದ್ಧಮಾಡಿ ತಿಳಿಸುತ್ತೀರಿ,
ಇದು 5000 ವರ್ಷಗಳ ನಂತರ ಚಕ್ರವು ಪುನರಾವರ್ತನೆಯಾಗುತ್ತದೆ. ನಾಟಕಗಳು ಯಾವುದೇ ಲಕ್ಷಾಂತರ
ವರ್ಷಗಳಿರುವುದಿಲ್ಲ. ನೀವು ತಿಳಿದಿದ್ದೀರಿ- ಏನೆಲ್ಲವೂ ಆಗುವುದೋ ಅದು 5000 ವರ್ಷಗಳಲ್ಲಾಗುತ್ತದೆ
ಅಂದಮೇಲೆ ಇಲ್ಲಿ ದುಃಖಧಾಮದಲ್ಲಿ ರೋಗ ಮೊದಲಾದವೆಲ್ಲವೂ ಆಗುತ್ತದೆ. ನೀವಂತೂ ಮುಖ್ಯವಾದ ಕೆಲವೊಂದು
ಮಾತುಗಳನ್ನು ಬರೆಯಿರಿ, ಸ್ವರ್ಗದಲ್ಲಿ ದುಃಖದ ಹೆಸರೂ ಇಲ್ಲ. ತಂದೆಯು ತಿಳಿಸುತ್ತಾರೆ- ಮೃತ್ಯುವು
ಸನ್ಮುಖದಲ್ಲಿ ನಿಂತಿದೆ. ಇದು ಅದೇ ಗೀತಾಭಾಗವು ನಡೆಯುತ್ತಾ ಇದೆ. ಅವಶ್ಯವಾಗಿ ಸಂಗಮಯುಗದಲ್ಲಿ
ಸತ್ಯಯುಗದ ಸ್ಥಾಪನೆಯಾಗುವುದು. ತಂದೆಯು ತಿಳಿಸುತ್ತಾರೆ- ನಾನು ರಾಜರಿಗೂ ರಾಜರನ್ನಾಗಿ ಮಾಡುತ್ತೇನೆ
ಅಂದಮೇಲೆ ಅವಶ್ಯವಾಗಿ ಸತ್ಯಯುಗದ ರಾಜರನ್ನಾಗಿಯೇ ಮಾಡುತ್ತಾರಲ್ಲವೆ. ತಂದೆಯು ಎಷ್ಟು ಚೆನ್ನಾಗಿ
ತಿಳಿಸುತ್ತಾರಲ್ಲವೆ.
ಈಗ ನಾವು ಸುಖಧಾಮಕ್ಕೆ ಹೋಗುತ್ತೇವೆ. ತಂದೆಯು ನಮ್ಮನ್ನು ಕರೆದುಕೊಂಡು ಹೋಗಬೇಕಾಗುತ್ತದೆ. ಯಾರು
ನಿರಂತರ ನೆನಪು ಮಾಡುವರೋ ಅವರೇ ಉತ್ತಮ ಪದವಿಯನ್ನು ಪಡೆಯುತ್ತಾರೆ ಅದಕ್ಕಾಗಿ ತಂದೆಯು
ಯುಕ್ತಿಗಳನ್ನು ತಿಳಿಸುತ್ತಿರುತ್ತಾರೆ- ಮಕ್ಕಳೇ, ನೆನಪಿನ ವೇಗವನ್ನು ಹೆಚ್ಚಿಸಿಕೊಳ್ಳಿ.
ಕುಂಭಮೇಳದಲ್ಲಿಯೂ ಸಮಯದಲ್ಲಿ ಹೋಗಬೇಕಾಗುತ್ತದೆ, ನೀವೂ ಸಹ ಸಮಯದಲ್ಲಿ ಹೋಗಬೇಕಾಗಿದೆ ಬೇಗನೆ ಹೋಗಿ
ತಲುಪಿಬಿಡುತ್ತೀರೆಂದಲ್ಲ. ಈ ರೀತಿ ಬೇಗ-ಬೇಗನೆ ಮಾಡುವುದು ನಮ್ಮ ಕೈಯಲ್ಲಿಲ್ಲ ಇದಂತೂ ನಾಟಕದ
ನಿಗಧಿಯಾಗಿದೆ. ಮಹಿಮೆಯೆಲ್ಲವೂ ನಾಟಕದ್ದಾಗಿದೆ. ಇಲ್ಲಿ ಎಷ್ಟೊಂದು ಜೀವಜಂತು ಇತ್ಯಾದಿಗಳು ದುಃಖ
ಕೊಡುವಂತದ್ದಾಗಿದೆ, ಸತ್ಯಯುಗದಲ್ಲಿ ಈ ರೀತಿಯಿಲ್ಲ ಅಂದಮೇಲೆ ಅಲ್ಲಿ ಇಂತಿಂತಹದ್ದಿರುತ್ತವೆ ಎಂದು
ಒಳಗೆ ವಿಚಾರ ಮಾಡಬೇಕು. ಸತ್ಯಯುಗವಂತೂ ನೆನಪಿಗೆ ಬರುತ್ತದೆಯಲ್ಲವೆ. ಸತ್ಯಯುಗದ ಸ್ಥಾಪನೆಯನ್ನು
ತಂದೆಯೇ ಮಾಡುತ್ತಾರೆ. ಅಂತಿಮದಲ್ಲಿ ಎಲ್ಲವೂ ಸಾರರೂಪದಲ್ಲಿ ಜ್ಞಾನವು ಬುದ್ಧಿಯಲ್ಲಿ
ಬಂದುಬಿಡುತ್ತದೆ. ಹೇಗೆ ಬೀಜವು ಎಷ್ಟು ಚಿಕ್ಕದೋ ಅಷ್ಟು ದೊಡ್ಡದಾಗಿರುತ್ತದೆ. ಅದಂತೂ ಜಡಬೀಜವಾಗಿದೆ,
ಇವರಂತೂ ಚೈತನ್ಯ ಬೀಜವಾಗಿದ್ದಾರೆ. ಇವರ ಬಗ್ಗೆ ಯಾರಿಗೂ ಗೊತ್ತಿಲ್ಲ, ಕಲ್ಪದ ಆಯಸ್ಸನ್ನು ಧೀರ್ಘ
ಮಾಡಿಬಿಟ್ಟಿದ್ದಾರೆ. ಭಾರತವೇ ಬಹಳ ಸುಖವನ್ನು ಪಡೆಯುತ್ತದೆ ಮತ್ತೆ ದುಃಖವನ್ನೂ ಭಾರತವೇ
ಪಡೆಯುತ್ತದೆ. ಖಾಯಿಲೆ ಮೊದಾಲದುವುಗಳೂ ಸಹ ಭಾರತದಲ್ಲಿಯೇ ಅಧಿಕವಾಗಿದೆ. ಇಲ್ಲಿ ಸೊಳ್ಳೆಗಳ ಸಮಾನ
ಮನುಷ್ಯರು ಸಾಯುತ್ತಾರೆ ಏಕೆಂದರೆ ಆಯಸ್ಸು ಚಿಕ್ಕದಾಗಿದೆ. ಇಲ್ಲಿ ಸ್ವಚ್ಛಮಾಡುವವರು ಮತ್ತು
ವಿದೇಶದಲ್ಲಿ ಸ್ವಚ್ಛ ಮಾಡುವವರಲ್ಲಿ ಎಷ್ಟೊಂದು ಅಂತರವಿದೆ. ವಿದೇಶದಿಂದ ಎಲ್ಲಾ ಅನ್ವೇಷಣೆ ಇಲ್ಲಿ
ಬರುತ್ತದೆ, ಸತ್ಯಯುಗದ ಹೆಸರೇ ಆಗಿದೆ- ಸ್ವರ್ಗ. ಅಲ್ಲಿ ಎಲ್ಲರೂ ಸತೋಪ್ರಧಾನವಾಗಿರುತ್ತಾರೆ, ನಿಮಗೆ
ಎಲ್ಲವೂ ಸಾಕ್ಷಾತ್ಕಾರವಾಗುತ್ತದೆ. ಈಗ ಇದು ಸಂಗಮಯುಗವಾಗಿದೆ. ಈಗ ತಂದೆಯು ಬಂದು ತಿಳಿಸುತ್ತಾರೆ,
ತಿಳಿಸುತ್ತಲೇ ಇರುತ್ತಾರೆ, ಹೊಸ-ಹೊಸಮಾತುಗಳನ್ನು ಹೇಳುತ್ತಿರುತ್ತಾರೆ. ತಂದೆಯು ತಿಳಿಸುತ್ತಾರೆ-
ದಿನ-ಪ್ರತಿದಿನ ನಾನು ಗುಹ್ಯ-ಗುಹ್ಯ ಮಾತುಗಳನ್ನು ಹೇಳುತ್ತೇನೆ. ತಂದೆಯು ಎಷ್ಟು
ಸೂಕ್ಷ್ಮಬಿಂದುವಾಗಿದ್ದಾರೆ, ಅವರಲ್ಲಿ ಸದಾಕಾಲದ ಪಾತ್ರವು ತುಂಬಲ್ಪಟ್ಟಿದೆ ಎಂದು ಮೊದಲು
ಗೊತ್ತಿರಲಿಲ್ಲ. ನೀವು ಪಾತ್ರವನ್ನಭಿನಯಿಸುತ್ತಾ ಬಂದಿದ್ದೀರಿ, ನೀವು ಯಾರಿಗಾದರೂ ತಿಳಿಸಿದರೆ
ಬುದ್ಧಿಯಲ್ಲಿ ಇವರೇನು ಹೇಳುತ್ತಾರೆ, ಇಷ್ಟು ಚಿಕ್ಕಬಿಂದುವಿನಲ್ಲಿ ಪೂರ್ಣಪಾತ್ರವು ತುಂಬಿದೆ, ಅದು
ಪಾತ್ರವನ್ನಭಿನಯಿಸುತ್ತಲೇ ಇರುತ್ತದೆ, ಎಂದೂ ಸುಸ್ತಾಗುವುದಿಲ್ಲ ಎಂದು ಹೇಳಿ ಅವರ ಬುದ್ಧಿಯಲ್ಲಿ
ಎಷ್ಟೊಂದು ಏರುಪೇರುಂಟಾಗುತ್ತದೆ. ಇದಂತೂ ಯಾರಿಗೂ ಗೊತ್ತಿಲ್ಲ. ಈಗ ನೀವು ಮಕ್ಕಳಿಗೆ ತಿಳುವಳಿಕೆ
ಬರುತ್ತಾ ಹೋಗುತ್ತದೆ- ಅರ್ಧಕಲ್ಪ ಸುಖ, ಅರ್ಧಕಲ್ಪ ದುಃಖ, ಬಹಳ ದುಃಖವನ್ನು ನೋಡಿಯೇ ಹೇಳುತ್ತಾರೆ-
ಇದಕ್ಕಿಂತಲೂ ಮೋಕ್ಷವನ್ನು ಪಡೆಯಬೇಕು. ಯಾವಾಗ ನೀವು ಸುಖದಲ್ಲಿ ಶಾಂತಿಯಲ್ಲಿರುತ್ತೀರೋ ಆಗ ನೀವು
ಹೇಳುವುದಿಲ್ಲ. ಈ ಪೂರ್ಣಜ್ಞಾನವು ನಿಮ್ಮ ಬುದ್ಧಿಯಲ್ಲಿದೆ. ಹೇಗೆ ತಂದೆಯು ಬೀಜವಾಗಿರುವಕಾರಣ ಅವರ
ಬಳಿ ಇಡೀ ವೃಕ್ಷದ ಜ್ಞಾನವಿದೆ. ವೃಕ್ಷದ ಮಾದರಿರೂಪವನ್ನು ತೋರಿಸಿದ್ದಾರೆ, ದೊಡ್ದದನ್ನು ತೋರಿಸಲು
ಸಾಧ್ಯವೆ! ಬುದ್ಧಿಯಲ್ಲಿ ಪೂರ್ಣಜ್ಞಾನವು ಬಂದುಬಿಡುತ್ತದೆ. ಅಂದಮೇಲೆ ನೀವು ಮಕ್ಕಳ ಬುದ್ಧಿಯು
ಎಷ್ಟು ವಿಶಾಲವಾಗಿರಬೇಕು. ಇದು ನಾಟಕವಾಗಿದೆ- ಇದರಲ್ಲಿ ಇಷ್ಟು ಸಮಯದ ನಂತರ ಇಂತಿಂತಹವರು
ಪಾತ್ರವನ್ನಭಿನಯಿಸಲು ಬರುತ್ತಾರೆ. ಇದು ಎಷ್ಟು ದೊಡ್ಡ ಅವಿನಾಶಿ ನಾಟಕವಾಗಿದೆ ಎಂದು ಅವರಿಗೆ
ಎಷ್ಟೊಂದು ತಿಳಿಸಬೇಕಾಗುತ್ತದೆ. ಈ ಪೂರ್ಣನಾಟಕವನ್ನಂತೂ ಎಂದೂ ಯಾರೂ ನೋಡಲೂ ಸಾಧ್ಯವಿಲ್ಲ
ಅಸಂಭವವಾಗಿದೆ. ದಿವ್ಯದೃಷ್ಟಿಯಿಂದ ಒಳ್ಳೆಯ ವಸ್ತುವನ್ನು ನೋಡಲಾಗುತ್ತದೆ. ಗಣೇಶ ಹನುಮಂತ
ಇವರೆಲ್ಲರೂ ಭಕ್ತಿಮಾರ್ಗದವರಾಗಿದ್ದಾರೆ ಆದರೆ ಮನುಷ್ಯರ ಭಾವನೆಯು ಕುಳಿತುಬಿಟ್ಟಿರುವುದರಿಂದ
ಅವರಿಗೆ ಬಿಡಲು ಆಗುವುದಿಲ್ಲ. ಈಗ ನೀವು ಮಕ್ಕಳು ಕಲ್ಪದ ಹಿಂದಿನಂತೆ ಪದವಿಯನ್ನು ಪಡೆಯಲು ಓದಬೇಕು,
ಪುರುಷಾರ್ಥ ಮಾಡಬೇಕಾಗಿದೆ. ನಿಮಗೆ ಗೊತ್ತಿದೆ, ಪ್ರತಿಯೊಬ್ಬರೂ ಪುನರ್ಜನ್ಮವನ್ನು ತೆಗೆದುಕೊಳ್ಳಲೇ
ಬೇಕಾಗಿದೆ. ಏಣಿಯನ್ನು ಹೇಗೆ ಕೆಳಗಿಳಿದಿದ್ದೇವೆಂದು ಮಕ್ಕಳು ತಿಳಿದುಕೊಂಡಿದ್ದೀರಿ. ಯಾರು ಸ್ವಯಂ
ತಿಳಿದುಕೊಂಡಿದ್ದೀರೋ ಅವರು ಅನ್ಯರಿಗೆ ತಿಳಿಸತೊಡಗುತ್ತಾರೆ. ಕಲ್ಪದ ಹಿಂದೆಯೂ ಹೀಗೆಯೇ ಮಾಡಿರಬೇಕು.
ಹೀಗೆಯೇ ಮ್ಯೂಸಿಯಂ ಮಾಡಿ ಕಲ್ಪದ ಹಿಂದೆಯೂ ಮಕ್ಕಳಿಗೆ ಕಲಿಸಿರಬೇಕು. ಪುರುಷಾರ್ಥ ಮಾಡುತ್ತಾ
ಇರುತ್ತಾರೆ, ಮಾಡುತ್ತಲೇ ಇರುತ್ತಾರೆ. ನಾಟಕದಲ್ಲಿ ನಿಗಧಿಯಾಗಿದೆ, ಹೀಗೆ ಅನೇಕರಿರುತ್ತಾರೆ.
ಗಲ್ಲಿ-ಗಲ್ಲಿಗಳಲ್ಲಿ ಮನೆ-ಮನೆಯಲ್ಲಿ ಈ ಶಾಲೆಯಿರುತ್ತದೆ, ಕೇವಲ ಧಾರಣೆ ಮಾಡುವ ಮಾತಾಗಿದೆ. ಹೇಳಿ
ನಿಮಗೆ ಇಬ್ಬರು ತಂದೆಯರಿದ್ದಾರೆ, ಯಾರು ದೊಡ್ಡವರಾದರು? ದಯೆತೋರಿಸಿ, ಕೃಪೆ ಮಾಡಿ ಎಂದು ಅವರನ್ನು
ಕರೆಯುತ್ತಾರೆ. ತಂದೆಯು ತಿಳಿಸುತ್ತಾರೆ- ಬೇಡುವುದರಿಂದ ಏನೂ ಸಿಗುವುದಿಲ್ಲ. ನಾನಂತೂ ಮಾರ್ಗವನ್ನು
ತಿಳಿಸಿಬಿಟ್ಟಿದ್ದೇನೆ. ನಾನು ಬರುವುದೇ ಮಾರ್ಗವನ್ನು ತಿಳಿಸಲು. ಇಡೀ ವೃಕ್ಷವು ನಿಮ್ಮ
ಬುದ್ಧಿಯಲ್ಲಿದೆ.
ತಂದೆಯು ಎಷ್ಟೊಂದು ಶ್ರಮಪಡುತ್ತಿರುತ್ತಾರೆ, ಇನ್ನೂ ಅತ್ಯಲ್ಪಸಮಯವೇ ಉಳಿದಿದೆ. ನನಗೆ ಸೇವಾಧಾರಿ
ಮಕ್ಕಳು ಬೇಕು, ಮನೆ-ಮನೆಯಲ್ಲಿ ಗೀತಾಪಾಠಶಾಲೆ ಇರಬೇಕು. ಅನ್ಯಚಿತ್ರ ಇತ್ಯಾದಿಗಳನ್ನು ಇಡಬೇಡಿ.
ಕೇವಲ ಹೊರಗೆ ಬರೆಯಿರಿ. ಚಿತ್ರವಂತೂ ಈ ಬ್ಯಾಡ್ಜ್ ಸಾಕು ಅಂತಿಮದಲ್ಲಿ ನಿಮಗೆ ಈ ಬ್ಯಾಡ್ಜೇ
ಕೆಲಸಕ್ಕೆ ಬರುವುದು. ಸನ್ಹೆಯ ಮಾತಾಗಿದೆ, ಬೇಹದ್ದಿನ ತಂದೆಯು ಅವಶ್ಯವಾಗಿ ಸ್ವರ್ಗವನ್ನೇ
ರಚಿಸುತ್ತಾರೆಂದು ಗೊತ್ತಾಗಿಬಿಡುತ್ತದೆ ಆಗ ತಂದೆಯನ್ನು ನೆನಪು ಮಾಡುತ್ತಾರೆ ಆದ್ದರಿಂದಲೇ
ಸ್ವರ್ಗದಲ್ಲಿ ಬರುತ್ತಾರಲ್ಲವೆ. ಇದನ್ನಂತೂ ತಿಳಿಯುತ್ತೀರಿ- ನಾವು ಪತಿತರಾಗಿದ್ದೇವೆ,
ನೆನಪಿನಿಂದಲೇ ಪಾವನರಾಗುತ್ತೇವೆ ಮತ್ತ್ಯಾವುದೇ ಉಪಾಯವಿಲ್ಲ. ಸ್ವರ್ಗವು ಪಾವನಪ್ರಪಂಚವಾಗಿದೆ,
ಸ್ವರ್ಗದ ಮಾಲೀಕರಾಗಬೇಕೆಂದರೆ ಅವಶ್ಯವಾಗಿ ಪಾವನರಾಗಬೇಕಾಗಿದೆ. ಸ್ವರ್ಗದಲ್ಲಿ ಹೋಗುವವರು ನರಕದಲ್ಲಿ
ಹೇಗೆ ಸಿಕ್ಕಿಹಾಕಿಕೊಳ್ಳುತ್ತಾರೆ? ಆದ್ದರಿಂದ ಹೇಳಲಾಗುತ್ತದೆ- ಮನ್ಮನಾಭವ, ತಮ್ಮ ಬೇಹದ್ದಿನ
ತಂದೆಯನ್ನು ನೆನಪು ಮಾಡಿ, ಅಂತ್ಯಮತಿ ಸೋ ಗತಿಯಾಗುವುದು. ಸ್ವರ್ಗದಲ್ಲಿ ಹೋಗುವವರು ವಿಕಾರದಲ್ಲಿ
ಹೋಗುತ್ತಾರೆಯೇ! ಅವಶ್ಯವಾಗಿ ಭಕ್ತರು ಇಷ್ಟೊಂದು ವಿಕಾರದಲ್ಲಿ ಹೋಗುವುದಿಲ್ಲ, ಪವಿತ್ರರಾಗಿ ಎಂಬ
ಮಾತನ್ನು ಸನ್ಯಾಸಿಗಳೂ ಸಹ ಹೇಳುವುದಿಲ್ಲ ಏಕೆಂದರೆ ತಾವೇ ವಿವಾಹವನ್ನು ಮಾಡಿಸುತ್ತಾರೆ. ಪ್ರತೀ
ತಿಂಗಳು ವಿಕಾರದಲ್ಲಿ ಹೋಗಿ ಎಂದು ಅವರು ಗೃಹಸ್ಥಿಗಳಿಗೆ ಹೇಳುತ್ತಾರೆ. ನೀವು ವಿವಾಹ
ಮಾಡಿಕೊಳ್ಳಬಾರದು ಎಂದು ಬ್ರಹ್ಮಾಚಾರಿಗಳಿಗೆ ಅವರು ಹೇಳುವುದಿಲ್ಲ. ನಿಮ್ಮ ಬಳಿ ಗಂಧರ್ವವಿವಾಹ
ಮಾಡಿಕೊಳ್ಳುತ್ತಾರೆ ಆದರೂ ಸಹ ಎರಡನೆಯ ದಿನ ಆಟವನ್ನು ಸಮಾಪ್ತಿ ಮಾಡಿಬಿಡುತ್ತಾರೆ. ಮಾಯೆಯು ಬಹಳ
ಆಕರ್ಷಣೆ ಮಾಡುತ್ತದೆ ಆದರೂ ಸಹ ಪವಿತ್ರರಾಗುವ ಪುರುಷಾರ್ಥವು ಈ ಸಮಯದಲ್ಲಿಯೇ ನಡೆಯುತ್ತದೆ, ನಂತರ
ಇದರ ಪ್ರಾಲಬ್ಧವಿರುತ್ತದೆ. ಸತ್ಯಯುಗದಲ್ಲಂತೂ ರಾವಣರಾಜ್ಯವೇ ಇರುವುದೇ ಇಲ್ಲ. ವಿಕಾರಿ ವಿಚಾರಗಳೇ
ಇರುವುದಿಲ್ಲ. ವಿಕಾರಿಯನ್ನಾಗಿ(ಕ್ರಿಮಿನಲ್ ಆಗಿ) ರಾವಣ ಮಾಡುತ್ತಾನೆ, ಶಿವತಂದೆಯು
ನಿರ್ವಿಕಾರಿಗಳನ್ನಾಗಿ (ಸಿವಿಲ್ ಆಗಿ) ಮಾಡುತ್ತಾರೆ, ಇದನ್ನೂ ಸಹ ನೆನಪು ಮಾಡಬೇಕಾಗಿದೆ.
ಮನೆ-ಮನೆಯಲ್ಲಿ ತರಗತಿಯು ನಡೆದಾಗ ಎಲ್ಲರೂ ತಿಳಿಸುವವರಾಗಿಬಿಡುತ್ತಾರೆ. ಮನೆ-ಮನೆಯಲ್ಲಿ
ಗೀತಾಪಾಠಶಾಲೆಯನ್ನು ತೆರೆದು ಮನೆಯವರನ್ನು ಸುಧಾರಣೆ ಮಾಡಬೇಕಾಗಿದೆ. ಹೀಗೆ ವೃದ್ಧಿಯಾಗುತ್ತಾ
ಇರುವುದು. ಸಾಧಾರಣ ಮತ್ತು ಬಡವರು ಹೇಗೆ ಜೊತೆಗಾರರಾದರು, ದೊಡ್ಡ-ದೊಡ್ಡ ವ್ಯಕ್ತಿಗಳಿಗೆ
ಸಣ್ಣವ್ಯಕ್ತಿಗಳ ಸತ್ಸಂಗದಲ್ಲಿ ಬರುವುದೇ ಸಂಕೋಚವಾಗುತ್ತದೆ ಏಕೆಂದರೆ ಇವರದು ಜಾದು ಆಗಿದೆ,
ಸಹೋದರ-ಸಹೋದರಿಯನ್ನಾಗಿ ಮಾಡಿಬಿಡುತ್ತಾರೆ ಅರೆ! ಇದಂತೂ ಒಳ್ಳೆಯದಲ್ಲವೆ. ಗೃಹಸ್ಥದಲ್ಲಿ ಎಷ್ಟೊಂದು
ಜಂಜಾಟವಿರುತ್ತದೆ, ಎಷ್ಟೊಂದು ದುಃಖಿಯಾಗುತ್ತಾರೆ, ಇದಂತೂ ದುಃಖದ ಪ್ರಪಂಚವಾಗಿದೆ, ಅಪಾರ ದುಃಖವಿದೆ
ಮತ್ತೆ ಅಲ್ಲಿ ಸುಖವು ಅಪಾರವಾಗಿರುವುದು. ಈ ದುಃಖದ ಪಟ್ಟಿಯನ್ನು ತೆಗೆಯುವ ಪ್ರಯತ್ನಪಡಿ. 25-30
ಮುಖ್ಯ-ಮುಖ್ಯ ದುಃಖದ ಮಾತುಗಳನ್ನಾದರೂ ಬರೆಯಿರಿ. ಬೇಹದ್ದಿನ ತಂದೆಯಿಂದ ಆಸ್ತಿಯನ್ನು ಪಡೆಯಲು
ಎಷ್ಟೊಂದು ಪುರುಷಾರ್ಥ ಮಾಡಬೇಕು. ತಂದೆಯು ಈ ರಥದ ಮೂಲಕ ತಿಳಿಸುತ್ತಾರೆ- ಈ ದಾದಾರವರು
ವಿದ್ಯಾರ್ಥಿಯಾಗಿದ್ದಾರೆ, ದೇಹಧಾರಿಗಳೆಲ್ಲರೂ ವಿದ್ಯಾರ್ಥಿಗಳಾಗಿದ್ದಾರೆ. ಓದಿಸುವ ಶಿಕ್ಷಕರು
ವಿದೇಹಿಯಾಗಿದ್ದಾರೆ, ನಿಮ್ಮನ್ನು ವಿದೇಹಿಯನ್ನಾಗಿ ಮಾಡುತ್ತಾರೆ ಆದ್ದರಿಂದ ತಂದೆಯು ತಿಳಿಸುತ್ತಾರೆ-
ಮಕ್ಕಳೇ, ಶರೀರದ ಪರಿವೆಯನ್ನು ಬಿಡುತ್ತಾ ಹೋಗಿ. ಈ ಮನೆ ಇತ್ಯಾದಿ ಏನೂ ಉಳಿಯುವುದಿಲ್ಲ.
ಸತ್ಯಯುಗದಲ್ಲಿ ಎಲ್ಲವೂ ಹೊಸದೇ ಸಿಗಲಿದೆ, ಅಂತಿಮದಲ್ಲಿ ನಿಮಗೆ ಬಹಳ ಸಾಕ್ಷಾತ್ಕಾರಗಳಾಗುತ್ತಾ
ಹೋಗುತ್ತದೆ. ಇದಂತೂ ನಿಮಗೆ ಗೊತ್ತಿದೆ- ಆ ಕಡೆ ಅಣುಬಾಂಬುಗಳಿಂದ ಬಹಳ ವಿನಾಶವಾಗಿಬಿಡುವುದು. ಇಲ್ಲಿ
(ಭಾರತ) ರಕ್ತದ ನದಿಗಳು ಹರಿಯುತ್ತವೆ, ಇದರಲ್ಲಿ ಸಮಯ ಹಿಡಿಸುತ್ತದೆ. ಇಲ್ಲಿಯ ಮೃತ್ಯುವು ಬಹಳ
ಕೆಟ್ಟದ್ದಾಗಿದೆ, ಇದು ಅವಿನಾಶಿ ಖಂಡವಾಗಿದೆ. ನಕ್ಷೆಯಲ್ಲಿ ನೋಡುತ್ತೀರಿ- ಹಿಂದೂಸ್ತಾನವಂತೂ ಒಂದು
ಮೂಲೆಯಾಗಿದೆ. ನಾಟಕದನುಸಾರ ಇಲ್ಲಿ ಅವರ ಪ್ರಭಾವವು ಬೀರುವುದೇ ಇಲ್ಲ. ಇಲ್ಲಿ ರಕ್ತದ ನದಿಗಳು
ಹರಿಯುತ್ತವೆ. ಈಗ ತಯಾರಿ ಮಾಡಿಕೊಳ್ಳುತ್ತಿದ್ದಾರೆ, ಕೊನೆಯಲ್ಲಿ ಇವರು ಬಾಂಬುಗಳನ್ನೂ ಸಹ ಸಾಲದಲ್ಲಿ
ಕೊಡಬಹುದು ಬಾಕಿ ಯಾವ ಬಾಂಬುಗಳನ್ನು ಎಸೆಯುವುದರಿಂದಲೇ ಪ್ರಪಂಚವು ಸಮಾಪ್ತಿಯಾಗಿಬಿಡುವುದೋ
ಅಂತದ್ದನ್ನು ಸಾಲದಲ್ಲಿ ಕೊಡುವುದಿಲ್ಲ. ಕಡಿಮೆ ಗುಣಮಟ್ಟದ ಬಾಂಬುಗಳನ್ನು ಕೊಡುತ್ತಾರೆ. ಕೆಲಸಕ್ಕೆ
ಬರುವಂತಹ ವಸ್ತುಗಳನ್ನು ಕೊಡುತ್ತಾರೆಯೇ? ವಿನಾಶವಂತೂ ಕಲ್ಪದ ಹಿಂದಿನಂತೆ ಆಗಲೇಬೇಕಾಗಿದೆ
ಹೊಸಮಾತೇನಲ್ಲ. ಅನೇಕ ಧರ್ಮಗಳ ವಿನಾಶ ಒಂದು ಧರ್ಮದ ಸ್ಥಾಪನೆ. ಭಾರತಖಂಡವು ಎಂದೂ ವಿನಾಶ
ಹೊಂದುವುದಿಲ್ಲ. ಸ್ವಲ್ಪವಂತೂ ಉಳಿಯಬೇಕಾಗಿದೆ. ಎಲ್ಲರೂ ಸತ್ತುಹೋದರೆ ಇದಕ್ಕೆ ಪ್ರಳಯವೆಂದು
ಹೇಳಬೇಕಾಗುತ್ತದೆ. ದಿನಪ್ರತಿದಿನ ನಿಮ್ಮ ಬುದ್ಧಿಯು ವಿಶಾಲವಾಗುತ್ತಾ ಹೋಗುತ್ತದೆ. ನಿಮಗೆ ಬಹಳ
ಗೌರವವಿರುತ್ತದೆ, ಈಗ ಇಷ್ಟೊಂದು ಗೌರವವಿಲ್ಲ ಆದ್ದರಿಂದಲೇ ಕೆಲವರೇ ತೇರ್ಗಡೆಯಾಗುತ್ತಾರೆ.
ಬುದ್ಧಿಯಲ್ಲಿ ಬರುವುದೇ ಇಲ್ಲ, ಎಷ್ಟೊಂದು ಶಿಕ್ಷೆಗಳನ್ನು ಅನುಭವಿಸಬೇಕಾಗುತ್ತದೆ, ಮತ್ತೆ ಬರುವುದೂ
ತಡವಾಗಿಯೇ. ವಿಕಾರದಲ್ಲಿ ಬೀಳುತ್ತಾರೆಂದರೆ ಮಾಡಿಕೊಂಡಿರುವ ಸಂಪಾದನೆಯು ಸಮಾಪ್ತಿಯಾಗುತ್ತದೆ.
ಕಪ್ಪಾಗಿದ್ದವರು ಕಪ್ಪಾಗಿಯೇ ಉಳಿದುಬಿಡುತ್ತಾರೆ ಮತ್ತೆ ಅವರು ಎದ್ದು ನಿಲ್ಲಲು ಸಾಧ್ಯವಿಲ್ಲ.
ಎಷ್ಟೊಂದು ಜನರು ಹೋಗುತ್ತಾರೆ, ಹೋಗುವವರೂ ಇದ್ದಾರೆ, ಈ ಸ್ಥಿತಿಯಲ್ಲಿ ನಾವು ಶರೀರ ಬಿಟ್ಟರೆ ನಮ್ಮ
ಸ್ಥಿತಿಗತಿ ಏನಾಗಬಹುದೆಂದು ತಾವೇ ತಿಳಿದುಕೊಳ್ಳಬಹುದು, ತಿಳುವಳಿಕೆಯ ಮಾತಾಗಿದೆಯಲ್ಲವೆ. ತಂದೆಯು
ತಿಳಿಸುತ್ತಾರೆ- ನೀವು ಮಕ್ಕಳು ಶಾಂತಿಸ್ಥಾಪನೆ ಮಾಡುವವರಾಗಿದ್ದೀರಿ. ನಿಮ್ಮಲ್ಲಿಯೇ ಅಶಾಂತಿ
ಇದ್ದರೆ ಪದವಿಭ್ರಷ್ಟರಾಗಿಬಿಡುತ್ತೀರಿ. ಯಾರಿಗೂ ದುಃಖಕೊಡುವ ಅವಶ್ಯಕತೆಯಿಲ್ಲ. ತಂದೆಯು ಎಷ್ಟೊಂದು
ಪ್ರೀತಿಯಿಂದ ಮಕ್ಕಳೇ, ಮಕ್ಕಳೇ ಎಂದು ಮಾತನಾಡಿಸುತ್ತಾರೆ. ಬೇಹದ್ದಿನ ತಂದೆಯಲ್ಲವೆ. ಅವರಲ್ಲಿ ಇಡೀ
ಪ್ರಪಂಚದ ಜ್ಞಾನವಿದೆ ಆದ್ದರಿಂದಲೇ ತಿಳಿಸುತ್ತಾರೆ- ಈ ಪ್ರಪಂಚದಲ್ಲಿ ಎಷ್ಟೊಂದು ದುಃಖವಿದೆ, ಅನೇಕ
ಪ್ರಕಾರದ ದುಃಖದ ಮಾತುಗಳನ್ನು ನೀವು ಬರೆಯಬಹುದು. ಯಾವಾಗ ನೀವು ಇದನ್ನು ಸಿದ್ಧ ಮಾಡಿ
ತಿಳಿಸುತ್ತೀರೋ ಆಗ ಈ ಮಾತುಗಳನ್ನು ಸರಿಯೆಂದು ತಿಳಿದುಕೊಳ್ಳುತ್ತಾರೆ. ಈ ಅಪಾರ ದುಃಖವನ್ನು ಒಬ್ಬ
ತಂದೆಯ ವಿನಃ ಮತ್ತ್ಯಾರೂ ದೂರ ಮಾಡಲು ಸಾಧ್ಯವಿಲ್ಲ. ದುಃಖದ ಪಟ್ಟಿಯಿದ್ದಾಗ ಒಂದಲ್ಲ ಒಂದು
ಬುದ್ಧಿಯಲ್ಲಿ ಕುಳಿತುಕೊಳ್ಳುತ್ತದೆ. ಉಳಿದವರಂತೂ ಕೇಳಿಯೂ ಕೇಳದಂತಿರುತ್ತಾರೆ. ಅವರಿಗಾಗಿಯೇ
ಗಾಯನವಿದೆ- ಕತ್ತೆಗೇನು ಗೊತ್ತು ಸಂಗೀತದ ಇಂಪು...... ತಂದೆಯು ತಿಳಿಸುತ್ತಾರೆ- ನೀವು ಇಂತಹ
ಹೂಗಳಾಗಬೇಕು, ಯಾವುದೇ ಅಶಾಂತಿ, ಕೊಳಕು ಇರಬಾರದು. ಅಶಾಂತಿಯನ್ನು ಹರಡುವವರು ದೇಹಾಭಿಮಾನಿಗಳಾದರು,
ಅವರಿಂದ ದೂರವಿರಬೇಕು. ಸ್ಪರ್ಷಿಸಲೂ ಬಾರದು. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳ ಪ್ರತಿ ಮಾತಾ-ಪಿತಾ ಬಾಪ್ದಾದಾರವರ ನೆನಪು,
ಪ್ರೀತಿ ಹಾಗೂ ಸುಪ್ರಭಾತ, ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಹೇಗೆ
ಓದಿಸುವಂತಹ ಶಿಕ್ಷಕರು ವಿದೇಹಿಯಾಗಿದ್ದಾರೆ, ಅವರಿಗೆ ದೇಹದ ಪರಿವೆಯೇ ಇಲ್ಲ ಹಾಗೆಯೇ
ವಿದೇಹಿಗಳಾಗಬೇಕಾಗಿದೆ. ಶರೀರದ ಭಾನವನ್ನು ಬಿಡುತ್ತಾ ಹೋಗಬೇಕು, ವಿಕಾರಿದೃಷ್ಟಿಯನ್ನು
ಪರಿವರ್ತಿಸಿಕೊಂಡು ನಿರ್ವಿಕಾರಿ ದೃಷ್ಟಿಯನ್ನಾಗಿ ಮಾಡಿಕೊಳ್ಳಬೇಕು.
2. ತಮ್ಮ ಬುದ್ಧಿಯನ್ನು
ವಿಶಾಲ ಮಾಡಿಕೊಳ್ಳಬೇಕಾಗಿದೆ. ಶಿಕ್ಷೆಗಳಿಂದ ಮುಕ್ತರಾಗಲು ತಂದೆ ಮತ್ತು ವಿದ್ಯೆಯ ಮೇಲೆ
ಗೌರವವನ್ನಿಡಬೇಕು. ಎಂದೂ ದುಃಖವನ್ನು ಕೊಡಬಾರದು, ಅಶಾಂತಿಯನ್ನು ಹರಡಬಾರದು.
ವರದಾನ:
ಬ್ರಾಹ್ಮಣ
ಜೀವನದ ಸ್ವಾಭಾವಿಕ ಸ್ವಭಾವದ ಮುಖಾಂತರ ಕಲ್ಲನ್ನೂ ಸಹ ನೀರಾಗಿ ಮಾಡುವಂತಹ ಮಾಸ್ಟರ್ ಪ್ರೇಮಸಾಗರ ಭವ.
ಹೇಗೆ ಪ್ರಪಂಚದ ಜನ
ಹೇಳುತ್ತಾರೆ ಪ್ರೀತಿ ಕಲ್ಲನ್ನೂ ಸಹ ನೀರಾಗಿ ಮಾಡಿಬಿಡುತ್ತದೆ ಎಂದು. ಹಾಗೆ ತಾವು ಬ್ರಾಹ್ಮಣರ
ಸ್ವಭಾವಿಕ ಸ್ವಭಾವ ಮಾಸ್ಟರ್ಪ್ರೇಮಸಾಗರ ಆಗಿದೆ. ತಮ್ಮ ಬಳಿ ಆತ್ಮೀಕ ಪ್ರೀತಿ, ಪರಮಾತ್ಮ ಪ್ರೀತಿಯ
ಇಂತಹ ಶಕ್ತಿ ಇದೆ, ಯಾವುದರಿಂದ ಭಿನ್ನ-ಭಿನ್ನ ಸ್ವಭಾವಗಳನ್ನು ಪರಿವರ್ತನೆ ಮಾಡಬಲ್ಲಿರಿ. ಹೇಗೆ
ಪ್ರೀತಿಯ ಸಾಗರನು ತನ್ನ ಪ್ರೀತಿಯ ಸ್ವರೂಪದ ಅನಾದಿ ಸ್ವಭಾವದಿಂದ ತಾವು ಮಕ್ಕಳನ್ನು ತನ್ನವರನ್ನಾಗಿ
ಮಾಡಿಕೊಂಡುಬಿಟ್ಟರು. ಹಾಗೇ ತಾವೂ ಮಾಸ್ಟರ್ ಪ್ರೀತಿಯ ಸಾಗರರಾಗಿ ವಿಶ್ವದ ಆತ್ಮಗಳಿಗೆ ಸತ್ಯ,
ನಿಸ್ವಾರ್ಥ ಆತ್ಮಕ ಪ್ರೀತಿಕೊಡಿ ಆಗ ಅವರ ಸ್ವಭಾವ ಪರಿವರ್ತನೆಯಾಗಿಬಿಡುತ್ತದೆ.
ಸ್ಲೋಗನ್:
ತಮ್ಮ
ವಿಶೇಷತೆಗಳನ್ನು ಸ್ಮೃತಿಯಲ್ಲಿಟ್ಟುಕೊಂಡು ಅದನ್ನು ಸೇವೆಯಲ್ಲಿ ತೊಡಗಿಸಿ ಆಗ ಹಾರುವಕಲೆಯಲ್ಲಿ
ಹಾರುತ್ತಿರುವಿರಿ.