23.09.24         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ- ಆಂತರ್ಯದಲ್ಲಿ ದಿನ-ರಾತ್ರಿ ಬಾಬಾ-ಬಾಬಾ ಎಂಬ ಸ್ಮøತಿಯೇ ನಡೆಯುತ್ತಿರಲಿ, ಆಗ ಅಪಾರ ಖುಷಿಯಿರುವುದು. ತಂದೆಯು ನಮಗೆ ಕುಬೇರನ ಖಜಾನೆಯನ್ನು ಕೊಡಲು ಬಂದಿದ್ದಾರೆಂದು ಬುದ್ಧಿಯಲ್ಲಿರುವುದು”

ಪ್ರಶ್ನೆ:
ತಂದೆಯು ಎಂತಹ ಮಕ್ಕಳಿಗೆ ಪ್ರಾಮಾಣಿಕ ಹೂಗಳೆಂದು ಹೇಳುತ್ತಾರೆ? ಅವರ ಲಕ್ಷಣಗಳೇನು ?

ಉತ್ತರ:
ಯಾರು ಎಂದೂ ಮಾಯೆಗೆ ವಶೀಭೂತರಾಗುವುದಿಲ್ಲವೋ, ಮಾಯೆಯ ಏರುಪೇರಿನಲ್ಲಿ ಬರುವುದಿಲ್ಲವೋ ಅವರೇ ಪ್ರಾಮಾಣಿಕ ಹೂಗಳಾಗಿದ್ದಾರೆ. ಇಂತಹ ಪ್ರಾಮಾಣಿಕ ಹೂಗಳು ಕೊನೆಯಲ್ಲಿ ಬಂದರೂ ಮೊದಲು ಹೋಗುವ ಪುರುಷಾರ್ಥ ಮಾಡುತ್ತಾರೆ, ಅವರು ಹಳಬರಿಗಿಂತಲೂ ಮುಂದೆಹೋಗುವ ಲಕ್ಷ್ಯವನ್ನಿಟ್ಟುಕೊಳ್ಳುತ್ತಾರೆ. ತನ್ನ ಅವಗುಣಗಳನ್ನು ತೆಗೆಯುವ ಪುರುಷಾರ್ಥದಲ್ಲಿರುತ್ತಾರೆ. ಅನ್ಯರ ಅವಗುಣಗಳನ್ನು ನೋಡುವುದಿಲ್ಲ.

ಓಂ ಶಾಂತಿ.
ಶಿವಭಗವಾನುವಾಚ. ಇವರು ಆತ್ಮಿಕ ತಂದೆಯಾಗಿದ್ದಾರೆ. ಏಕೆಂದರೆ ಶಿವನು ಪರಮ ಆತ್ಮನಾಗಿದ್ದಾರಲ್ಲವೆ. ತಂದೆಯು ಪ್ರತಿನಿತ್ಯವೂ ಹೊಸ-ಹೊಸ ಮಾತುಗಳನ್ನು ತಿಳಿಸುತ್ತಿರುತ್ತಾರೆ. ಗೀತೆಯನ್ನು ತಿಳಿಸುವಂತಹ ಸನ್ಯಾಸಿಗಳು ಅನೇಕರಿದ್ದಾರೆ. ಅವರು ತಂದೆಯನ್ನು ನೆನಪು ಮಾಡಲು ಸಾಧ್ಯವಿಲ್ಲ. ಅವರ ಮುಖದಿಂದ ಎಂದೂ ಬಾಬಾ ಎನ್ನುವ ಶಬ್ದವು ಹೊರಬರಲು ಸಾಧ್ಯವಿಲ್ಲ. ಈ ಶಬ್ದವು ಗೃಹಸ್ಥ ಮಾರ್ಗದವರಿಗೂ ಇದೆ. ಆ ಸನ್ಯಾಸಿಗಳು ನಿವೃತ್ತಿಮಾರ್ಗದವರಾಗಿದ್ದಾರೆ. ಅವರು ಬ್ರಹ್ಮತತ್ವವನ್ನೇ ನೆನಪು ಮಾಡುತ್ತಾರೆ ಎಂದೂ ಬಾಯಿಂದ ಶಿವತಂದೆ ಎಂದು ಹೇಳುವುದಿಲ್ಲ. ಭಲೆ ನೀವಿದನ್ನು ಪರಿಶೀಲನೆ ಮಾಡಿ. ತಿಳಿದುಕೊಳ್ಳಿ. ದೊಡ್ಡ-ದೊಡ್ಡ ವಿದ್ವಾಂಸರು, ಸನ್ಯಾಸಿಗಳು ಚಿನ್ಮಯಾನಂದ ಮೊದಲಾದವರು ಗೀತೆಯನ್ನು ತಿಳಿಸುತ್ತಾರೆ. ಅವರು ಗೀತೆಯ ಭಗವಂತನು ಕೃಷ್ಣನೆಂದು ತಿಳಿದು ಕೃಷ್ಣನೊಂದಿಗೆ ಬುದ್ಧಿಯೋಗವನ್ನಿಡುತ್ತಾರೆ ಎಂದಲ್ಲ. ಅವರು ಬ್ರಹ್ಮತತ್ವದೊಂದಿಗೆ ಯೋಗವನ್ನು ಜೋಡಿಸುವಂತಹ ಬ್ರಹ್ಮಜ್ಞಾನಿ ಅಥವಾ ತತ್ವಜ್ಞಾನಿಗಳಾಗಿದ್ದಾರೆ. ಕೃಷ್ಣನಿಗೆ ಎಂದೂ ಯಾರೂ ಭಗವಂತನೆಂದು ಹೇಳಲು ಸಾಧ್ಯವಿಲ್ಲ ಅಂದಾಗ ಕೃಷ್ಣನು ಗೀತೆಯನ್ನು ತಿಳಿಸುವಂತಹ ತಂದೆಯಂತೂ ಆಗಲಿಲ್ಲ. ಶಿವನಿಗೆ ಎಲ್ಲರೂ ತಂದೆಯೆಂದು ಹೇಳುತ್ತಾರೆ. ಏಕೆಂದರೆ ಅವರು ಎಲ್ಲಾ ಆತ್ಮರ ತಂದೆಯಾಗಿದ್ದಾರೆ. ಎಲ್ಲಾ ಆತ್ಮಗಳು ಅವರನ್ನು ಪರಮಪಿತ ಪರಮಾತ್ಮನೆಂದು ಕರೆಯುತ್ತಾರೆ. ಅವರು ಪರಮ, ಸುಪ್ರೀಂ ಆಗಿದ್ದಾರೆ. ಏಕೆಂದರೆ ಪರಮಧಾಮದ ನಿವಾಸಿಯಾಗಿದ್ದಾರೆ. ನೀವೆಲ್ಲರೂ ಪರಮಧಾಮದಲ್ಲಿರುತ್ತೀರಿ. ಆದರೆ ಅವರಿಗೆ ಪರಮಾತ್ಮನೆಂದು ಹೇಳುತ್ತಾರೆ. ಅವರೆಂದೂ ಪುನರ್ಜನ್ಮದಲ್ಲಿ ಬರುವುದಿಲ್ಲ. ಆ ಪರಮಾತ್ಮನೇ ಹೇಳುತ್ತಾರೆ - ನನ್ನ ಜನ್ಮವು ದಿವ್ಯ ಮತ್ತು ಅಲೌಕಿಕವಾಗಿದೆ. ಈ ರೀತಿ ಯಾರ ರಥದಲ್ಲಾದರೂ ಪ್ರವೇಶ ಮಾಡಿ ನಿಮಗೆ ತಿಳಿಸುತ್ತಾರೆ - ನಾನು ಹೇಗಿದ್ದೇನೆ. ಯಾರಾಗಿದ್ದೇನೆ ಎಂದು ಯಾರೂ ತಿಳಿದುಕೊಂಡಿಲ್ಲ. ನಾನು ಯಾವಾಗ ನನ್ನ ಪರಿಚಯವನ್ನು ಕೊಡುವೆನೋ ಆಗ ನನ್ನನ್ನು ಅರಿತುಕೊಳ್ಳುವರು. ಈ ಬ್ರಹ್ಮನನ್ನು ಅಥವಾ ತತ್ವವನ್ನು ನಂಬುವವರು ಕೃಷ್ಣನನ್ನು ತಮ್ಮ ತಂದೆಯೆಂದು ಹೇಗೆ ಒಪ್ಪುತ್ತಾರೆ. ಆತ್ಮಗಳೆಲ್ಲರೂ ಮಕ್ಕಳಾದರಲ್ಲವೆ? ಕೃಷ್ಣನಿಗೆ ಎಲ್ಲರೂ ತಂದೆಯೆಂದು ಹೇಗೆ ಹೇಳುತ್ತಾರೆ? ಕೃಷ್ಣನು ಎಲ್ಲರ ತಂದೆಯಾಗಿದ್ದಾನೆಂದು ಹೇಳಲು ಸಾಧ್ಯವಿಲ್ಲ. ನಾವೆಲ್ಲರೂ ಸಹೋದರರಾಗಿದ್ದೇವೆ. ಕೃಷ್ಣನು ಸರ್ವವ್ಯಾಪಿಯಲ್ಲ. ಎಲ್ಲರೂ ಕೃಷ್ಣನಾಗಲು ಸಾಧ್ಯವಿಲ್ಲ. ಒಂದುವೇಳೆ ಎಲ್ಲರೂ ಕೃಷ್ಣನಾಗಿದ್ದರೆ ಅವರ ತಂದೆಯೂ ಬೇಕು. ಮನುಷ್ಯರು ಬಹಳ ವಿಸ್ಮøತಿಯಲ್ಲಿ ಬಂದಿದ್ದಾರೆ. ಅವರಿಗೆ ತಿಳಿದಿಲ್ಲ. ಆದ್ದರಿಂದಲೇ ತಂದೆಯು ಹೇಳುತ್ತಾರೆ - ನನ್ನನ್ನು ಕೋಟಿಯಲ್ಲಿ ಕೆಲವರೇ ಅರಿತುಕೊಳ್ಳುತ್ತಾರೆ. ಕೃಷ್ಣನನ್ನಂತೂ ಯಾರು ಬೇಕಾದರು ಅರಿತುಕೊಳ್ಳುತ್ತಾರೆ. ಎಲ್ಲಾ ವಿದೇಶಿಯರೂ ಸಹ ಅವರ ಬಗ್ಗೆ ತಿಳಿದುಕೊಂಡಿದ್ದಾರೆ. ಲಾರ್ಡ್ ಕೃಷ್ಣ ಎಂದು ಹೇಳುತ್ತಾರಲ್ಲವೆ! ಚಿತ್ರಗಳೂ ಇವೆ, ಮೂಲಚಿತ್ರಗಳಂತೂ ಇಲ್ಲ. ಭಾರತವಾಸಿಗಳಿಂದ ಕೇಳುತ್ತಾರೆ. ಇವರ ಬಹಳ ಪೂಜೆಯಾಗುವುದರಿಂದ ಗೀತೆಯಲ್ಲಿ ಕೃಷ್ಣ ಭಗವಂತನೆಂದು ಬರೆದುಬಿಟ್ಟಿದ್ದಾರೆ. ಭಗವಂತನಿಗೆ ಲಾರ್ಡ್ ಎಂದು ಹೇಳಲಾಗುತ್ತದೆಯೇ? ಲಾರ್ಡ್ ಕೃಷ್ಣನೆಂದು ಹೇಳುತ್ತಾರಲ್ಲವೆ. ಲಾರ್ಡ್ ಎಂಬ ಬಿರುದು ವಾಸ್ತವದಲ್ಲಿ ಹಿರಿಯ ವ್ಯಕ್ತಿಗಳಿಗೆ ಸಿಗುತ್ತದೆ. ಮನುಷ್ಯರಂತೂ ಈ ಬಿರುದನ್ನು ಎಲ್ಲರಿಗೂ ಕೊಡುತ್ತಿರುತ್ತಾರೆ. ಇದಕ್ಕೆ ಕತ್ತಲ ನಗರಿಯೆಂದು ಹೇಳಲಾಗುತ್ತದೆ. ಯಾವುದೇ ಪತಿತ ಮನುಷ್ಯರಿಗೆ ಲಾರ್ಡ್ ಎಂದು ಹೇಳಿಬಿಡುತ್ತಾರೆ. ಇಂದಿನ ಪತಿತ ಮನುಷ್ಯರೆಲ್ಲಿ, ಶಿವ ಅಥವಾ ಶ್ರೀಕೃಷ್ಣನೆಲ್ಲಿ! ತಂದೆಯು ತಿಳಿಸುತ್ತಾರೆ - ನಾನು ನಿಮಗೆ ಯಾವ ಜ್ಞಾನವನ್ನು ಕೊಡುತ್ತೇನೆಯೋ ಅದು ಪ್ರಾಯಃಲೋಪವಾಗಿಬಿಡುತ್ತದೆ. ನಾನೇ ಬಂದು ಹೊಸಪ್ರಪಂಚದ ಸ್ಥಾಪನೆ ಮಾಡುತ್ತೇನೆ. ಜ್ಞಾನವನ್ನೂ ಸಹ ನಾನು ಈಗಲೇ ಕೊಡುತ್ತೇನೆ. ಯಾವಾಗ ನಾನು ಜ್ಞಾನವನ್ನು ಕೊಡುವೆನೋ ಆಗಲೇ ಮಕ್ಕಳು ಕೇಳುತ್ತೀರಿ - ನಾನಲ್ಲದೆ ಮತ್ತ್ಯಾರು ಜ್ಞಾನವನ್ನು ತಿಳಿಸಲು ಸಾಧ್ಯ! ಅವರಿಗೆ ತಿಳಿದೇ ಇಲ್ಲ.

ಸನ್ಯಾಸಿಗಳು ಶಿವತಂದೆಯನ್ನು ನೆನಪು ಮಾಡುವರೇ? ನಿರಾಕಾರ ಪರಮಾತ್ಮನನ್ನು ನೆನಪು ಮಾಡಿ ಎಂಬ ಮಾತನ್ನು ಅವರು ಎಂದಿಗೂ ಹೇಳಲು ಸಾಧ್ಯವಿಲ್ಲ. ಎಂದಾದರೂ ಕೇಳಿದ್ದೀರಾ? ಬಹಳ ವಿದ್ಯಾವಂತ ಮನುಷ್ಯರೂ ಸಹ ಅರಿತುಕೊಂಡಿಲ್ಲ. ಈಗ ತಂದೆಯು ತಿಳಿಸುತ್ತಾರೆ - ಕೃಷ್ಣನು ಭಗವಂತನಲ್ಲ. ಮನುಷ್ಯರಂತೂ ಕೃಷ್ಣನನ್ನೇ ಭಗವಂತನೆಂದು ಹೇಳುತ್ತಿರುತ್ತಾರೆ. ಎಷ್ಟೊಂದು ಅಂತರವಾಗಿಬಿಟ್ಟಿದೆ! ತಂದೆಯಂತೂ ಕುಳಿತು ಮಕ್ಕಳಿಗೆ ಓದಿಸುತ್ತಾರೆ. ಅವರು ತಂದೆ-ಶಿಕ್ಷಕ-ಗುರುವೂ ಆಗಿದ್ದಾರೆ. ಶಿವತಂದೆಯು ಎಲ್ಲರಿಗೆ ತಿಳಿಸುತ್ತಾರೆ. ಅವರನ್ನು ತಿಳಿಯದ ಕಾರಣ ತ್ರಿಮೂರ್ತಿ ಚಿತ್ರದಲ್ಲಿ ಶಿವನ ಚಿತ್ರವನ್ನು ಹಾಕುವುದೇ ಇಲ್ಲ. ಬ್ರಹ್ಮನನ್ನಿಡುತ್ತಾರೆ. ಅವರಿಗೆ ಪ್ರಜಾಪಿತ ಬ್ರಹ್ಮನೆಂದು ಹೇಳುತ್ತಾರೆ. ಪ್ರಜಾಪಿತನೆಂದರೆ ಪ್ರಜೆಗಳನ್ನು ರಚಿಸುವವರು ಆದರೆ ಅವರಿಗೆ ಭಗವಂತನೆಂದು ಹೇಳುವುದಿಲ್ಲ. ಭಗವಂತನು ಪ್ರಜೆಗಳನ್ನು ರಚಿಸುವುದಿಲ್ಲ. ಭಗವಂತನಿಗೆ ಎಲ್ಲಾ ಆತ್ಮಗಳು ಮಕ್ಕಳಾಗಿದ್ದಾರೆ. ನಂತರ ಅವರಲ್ಲಿ ಕೆಲವೊಬ್ಬರ ಮೂಲಕ ಪ್ರಜೆಗಳನ್ನು ರಚಿಸುತ್ತಾರೆ. ನಿಮ್ಮನ್ನು ಯಾರು ದತ್ತು ಮಾಡಿಕೊಂಡರು? ಬ್ರಹ್ಮಾರವರ ಮೂಲಕ ತಂದೆಯು ದತ್ತು ಮಾಡಿಕೊಂಡರು. ಯಾವಾಗ ಬ್ರಾಹ್ಮಣರಾಗುವಿರೋ ಆಗಲೇ ದೇವತೆಗಳಾಗುತ್ತೀರಿ. ನೀವು ಈ ಮಾತನ್ನೆಂದೂ ಕೇಳಿಲ್ಲ ಪ್ರಜಾಪಿತನ ಪಾತ್ರವು ಬೇಕಲ್ಲವೆ. ಇಷ್ಟು ಮಂದಿ ಪ್ರಜೆಗಳು ಎಲ್ಲಿಂದ ಬರುವರು? ಕುಖವಂಶಾವಳಿಯಂತೂ ಆಗಿರಲು ಸಾಧ್ಯವಿಲ್ಲ. ಆ ಕುಖವಂಶಾವಳಿ ಬ್ರಾಹ್ಮಣರು ನಮ್ಮ ಕುಲದ ಹೆಸರು ಬ್ರಾಹ್ಮಣರೆಂದು ಹೇಳುತ್ತಾರೆ. ಹೆಸರಂತೂ ಎಲ್ಲರದೂ ಬೇರೆ-ಬೇರೆಯಾಗಿದೆ. ಯಾವಾಗ ಶಿವತಂದೆಯು ಪ್ರವೇಶ ಮಾಡುವರೋ ಆಗಲೇ ಇವರಿಗೆ ಪ್ರಜಾಪಿತ ಬ್ರಹ್ಮನೆಂದು ಹೇಳುತ್ತಾರೆ. ಇವು ಹೊಸಮಾತುಗಳಾಗಿವೆ. ಸ್ವಯಂ ತಂದೆಯೇ ಹೇಳುತ್ತಾರೆ- ನನ್ನನ್ನು ಯಾರೂ ಅರಿತುಕೊಂಡಿಲ್ಲ. ಸೃಷ್ಟಿಚಕ್ರವನ್ನೂ ಅರಿತುಕೊಂಡಿಲ್ಲ. ಆದ್ದರಿಂದಲೇ ಋಷಿ-ಮುನಿಗಳೆಲ್ಲರೂ ನಮಗೆ ಗೊತ್ತಿಲ್ಲ-ಗೊತ್ತಿಲ್ಲ ಎಂದು ಹೇಳಿಹೋಗಿದ್ದಾರೆ. ಪರಮಾತ್ಮನನ್ನಾಗಲೀ, ಪರಮಾತ್ಮನ ರಚನೆಯನ್ನಾಗಲಿ ಅರಿತುಕೊಂಡಿಲ್ಲ. ನಾನೇ ಬಂದು ನನ್ನ ಪರಿಚಯವನ್ನು ಕೊಟ್ಟಾಗ ಅರಿತುಕೊಳ್ಳುತ್ತೀರೆಂದು ತಂದೆಯು ತಿಳಿಸುತ್ತಾರೆ. ನಾವು ಈ ರಾಜ್ಯವನ್ನು ಹೇಗೆ ಪಡೆದೆವೆಂದು ದೇವತೆಗಳಿಗೆ ಅಲ್ಲಿ ತಿಳಿದಿರುವುದಿಲ್ಲ. ಅವರಲ್ಲಿ ಜ್ಞಾನವಿರುವುದೇ ಇಲ್ಲ, ಪದವಿಯನ್ನು ಪಡೆದ ನಂತರ ಜ್ಞಾನದ ಅವಶ್ಯಕತೆಯಿರುವುದಿಲ್ಲ. ಜ್ಞಾನವು ಸದ್ಗತಿಗಾಗಿಯೇ ಬೇಕು. ಈ ದೇವತೆಗಳಂತೂ ಸದ್ಗತಿಯನ್ನು ಪಡೆದಿರುವವರು. ಇವು ತಿಳಿದುಕೊಳ್ಳುವ ಬಹಳ ಗುಹ್ಯಮಾತುಗಳಾಗಿವೆ. ಇವನ್ನು ಬುದ್ಧಿವಂತರೇ ಅರಿತುಕೊಳ್ಳುವರು. ಉಳಿದಂತೆ ಯಾವ ವೃದ್ಧ ಮಾತೆಯರಿದ್ದಾರೆಯೋ ಅವರಲ್ಲಿ ಇಷ್ಟು ಬುದ್ಧಿಯಂತೂ ಇಲ್ಲ. ಇದೂ ಸಹ ನಾಟಕದ ಯೋಜನೆಯನುಸಾರ ಪ್ರತಿಯೊಬ್ಬರದೂ ತಮ್ಮ ಪಾತ್ರವಾಗಿದೆ. ಹೇ ಈಶ್ವರ, ಬುದ್ಧಿಯನ್ನು ಕೊಡು ಎನ್ನುತ್ತಾರೆ. ನಾನು ಎಲ್ಲರಿಗೆ ಒಂದೇ ರೀತಿಯ ಬುದ್ಧಿಯನ್ನು ಕೊಟ್ಟುಬಿಟ್ಟರೆ ಎಲ್ಲರೂ ನಾರಾಯಣನಾಗಿ ಬಿಡುತ್ತಾರೆ. ಅಂದಮೇಲೆ ಒಬ್ಬರು ಇನ್ನೊಬ್ಬರ ಮೇಲೆ ಸಿಂಹಾಸನದಲ್ಲಿ ಕುಳಿತುಕೊಳ್ಳುವವರೇ? ಹಾ! ಆ ರೀತಿಯಾಗಬೇಕೆಂಬ ಗುರಿ-ಉದ್ದೇಶವಿರಬೇಕು. ಎಲ್ಲರೂ ನರನಿಂದ ನಾರಾಯಣರಾಗುವ ಪುರುಷಾರ್ಥವನ್ನು ಮಾಡುತ್ತಿದ್ದಾರೆ. ಅಂದಮೇಲೆ ಪುರುಷಾರ್ಥದನುಸಾರವೇ ಆಗುವುದು ಒಂದುವೇಳೆ ಎಲ್ಲರೂ ನಾವು ನಾರಾಯಣರಾಗುತ್ತೇವೆಂದು ಕೈಯೆತ್ತಿದರೆ ತಂದೆಗೆ ಒಳಗೆ ನಗು ಬರುತ್ತದೆಯಲ್ಲವೆ! ಎಲ್ಲರೂ ಒಂದೇ ರೀತಿಯಾಗಲು ಹೇಗೆ ಸಾಧ್ಯ! ನಂಬರ್ವಾರಂತೂ ಇರುತ್ತಾರಲ್ಲವೆ. ನಾರಾಯಣ ದಿ ಫಸ್ಟ್, ದಿ ಸೆಕೆಂಡ್, ದಿ ಥರ್ಡ್...... ಹೇಗೆ ಎಡ್ವರ್ಡ್ ದಿ ಫಸ್ಟ್, ಸೆಕೆಂಡ್, ಥರ್ಡ್..... ಇರುತ್ತಾರಲ್ಲವೆ. ಭಲೆ ಈಗ ನಿಮ್ಮದು ಗುರಿ-ಉದ್ದೇಶವು ಇದಾಗಿದೆ. ಆದರೆ ತಮ್ಮ ನಡುವಳಿಕೆಯಿಂದ ನಾವೇನು ಪದವಿಯನ್ನು ಪಡೆಯುತ್ತೇವೆಂದು ತಾವೇ ಅರಿತುಕೊಳ್ಳಬಹುದಲ್ಲವೇ! ಪುರುಷಾರ್ಥವನ್ನಂತೂ ಅವಶ್ಯವಾಗಿ ಮಾಡಬೇಕಲ್ಲವೆ! ತಂದೆಯು ನಂಬರ್ವಾರ್ ಹೂಗಳನ್ನು ತೆಗೆದುಕೊಂಡು ಬರುತ್ತಾರೆ. ಪುರುಷಾರ್ಥದನುಸಾರ ಅವರಿಗೆ ಹೂಗಳನ್ನು ಕೊಡಲೂಬಹುದು. ಆದರೆ ತಂದೆಯು ಆ ರೀತಿ ಮಾಡುವುದಿಲ್ಲ. ಏಕೆಂದರೆ ಇದರಿಂದ ಬೇಸರವಾಗುತ್ತದೆ. ತಂದೆಗೆ ಗೊತ್ತಿದೆ, ಯಾರು ಹೆಚ್ಚಿನ ಸರ್ವೀಸ್ ಮಾಡುತ್ತಿದ್ದಾರೆ. ಒಳ್ಳೆಯ ಹೂಗಳಾಗಿದ್ದಾರೆ ಎಂಬುದನ್ನು ನೋಡುತ್ತಾರೆ. ನಂಬರ್ವಾರಂತೂ ಇದ್ದೇ ಇರುತ್ತಾರೆ. ಅನೇಕರು ಹಳಬರೂ ಕುಳಿತಿದ್ದಾರೆ. ಆದರೆ ಅವರಲ್ಲಿ ಹೊಸಬರು, ಬಹಳ ಒಳ್ಳೆಯ ಹೂಗಳಾಗಿದ್ದಾರೆ. ಇವರು ನಂಬರ್ವನ್ ಪ್ರಾಮಾಣಿಕ ಹೂವಾಗಿದ್ದಾರೆ. ಯಾವುದೇ ಕಿರಿಕಿರಿಯಿಲ್ಲ. ಇವರಲ್ಲಿ ಯಾವುದೇ ಈಷ್ರ್ಯೆ ಇತ್ಯಾದಿಯಿಲ್ಲ ಎಂದು ಹೇಳುತ್ತಾರೆ. ಅನೇಕರಲ್ಲಿ ಯಾವುದಾದರೊಂದು ನಿರ್ಬಲತೆ ಅವಶ್ಯವಾಗಿ ಇದೆ. ಯಾರಿಗೂ ಸಂಪೂರ್ಣರೆಂದು ಹೇಳಲು ಸಾಧ್ಯವಿಲ್ಲ. 16 ಕಲಾಸಂಪನ್ನರಾಗಲು ಬಹಳ ಪರಿಶ್ರಮಪಡಬೇಕು. ಈಗಲೇ ಯಾರೂ ಸಂಪೂರ್ಣರಾಗಲು ಸಾಧ್ಯವಿಲ್ಲ. ಈಗಂತೂ ಒಳ್ಳೊಳ್ಳೆಯ ಮಕ್ಕಳಲ್ಲಿ ಬಹಳ ಈಷ್ರ್ಯೆಯಿದೆ. ನಿರ್ಬಲತೆಗಳಂತೂ ಇದೆಯಲ್ಲವೆ. ಎಲ್ಲರೂ ಯಾವ-ಯಾವ ಪ್ರಕಾರ ಪುರುಷಾರ್ಥ ಮಾಡುತ್ತಿದ್ದಾರೆಂದು ತಂದೆಗೆ ತಿಳಿದಿದೆ. ಇದು ಪ್ರಪಂಚದವರಿಗೇನು ಗೊತ್ತು? ಅವರಂತೂ ಏನನ್ನೂ ತಿಳಿದುಕೊಂಡಿಲ್ಲ. ಬಹಳ ಕೆಲವರೇ ಅರಿತುಕೊಂಡಿದ್ದಾರೆ. ಬಡವರು ಬಹುಬೇಗನೆ ಅರಿತುಕೊಳ್ಳುತ್ತಾರೆ. ಬೇಹದ್ದಿನ ತಂದೆಯು ಓದಿಸಲು ಬಂದಿದ್ದಾರೆ, ಆ ತಂದೆಯನ್ನು ನೆನಪು ಮಾಡಿದಾಗಲೇ ನಮ್ಮ ಪಾಪಗಳು ತುಂಡಾಗುತ್ತವೆ. ನಾವು ತಂದೆಯ ಬಳಿ ಬಂದಿದ್ದೇವೆ. ತಂದೆಯಿಂದ ಹೊಸಪ್ರಪಂಚದ ಆಸ್ತಿಯು ಅವಶ್ಯವಾಗಿ ಸಿಗುತ್ತದೆ. 100 ರಿಂದ ಹಿಡಿದು ಒಂದು ಸಂಖ್ಯೆಯವರೆಗೆ ನಂಬರ್ವಾರಂತೂ ಇದ್ದೆ ಇರುತ್ತಾರೆ. ಆದರೆ ತಂದೆಯನ್ನರಿತುಕೊಂಡು ಸ್ವಲ್ಪ ಜ್ಞಾನವನ್ನು ಕೇಳಿದರೂ ಸಹ ಸ್ವರ್ಗದಲ್ಲಿ ಅವಶ್ಯವಾಗಿ ಬರುತ್ತಾರೆ. 21 ಜನ್ಮಗಳಿಗಾಗಿ ಸ್ವರ್ಗದಲ್ಲಿ ಬರುವುದು ಕಡಿಮೆ ಮಾತೇನು! ಯಾರಾದರೂ ಶರೀರಬಿಟ್ಟರೆ 21 ಜನ್ಮಗಳಿಗಾಗಿ ಸ್ವರ್ಗದಲ್ಲಿ ಹೋದರೆಂದು ಹೇಳುವುದಿಲ್ಲ. ಸ್ವರ್ಗವಂತೂ ಎಲ್ಲಿದೆ! ಎಷ್ಟೊಂದು ತಪ್ಪು ತಿಳುವಳಿಕೆ ಮಾಡಿಬಿಟ್ಟಿದ್ದಾರೆ. ಇಂತಹವರು ಸ್ವರ್ಗಸ್ಥರಾದರೆಂದು ಬಹಳ ಒಳ್ಳೊಳ್ಳೆಯವರೂ ಸಹ ಹೇಳುತ್ತಾರೆ. ಯಾವುದಕ್ಕೆ ಸ್ವರ್ಗವೆಂದು ಹೇಳುತ್ತಾರೆ? ಅರ್ಥವೇನನ್ನೂ ತಿಳಿದುಕೊಂಡಿಲ್ಲ. ಇದು ಕೇವಲ ನಿಮಗೆ ಗೊತ್ತಿದೆ. ನೀವು ಮನುಷ್ಯರೇ ಆಗಿದ್ದೀರಿ. ಆದರೆ ಬ್ರಾಹ್ಮಣರಾಗಿದ್ದೀರಿ. ತನ್ನನ್ನು ಬ್ರಾಹ್ಮಣನೆಂದೇ ಕರೆಸಿಕೊಳ್ಳುತ್ತೀರಿ. ನೀವು ಬ್ರಾಹ್ಮಣರಿಗಾಗಿ ಒಬ್ಬರು ಬಾಪ್ದಾದಾ ಇದ್ದಾರೆ. ಅಂದಾಗ ನೀವು ಸನ್ಯಾಸಿಗಳನ್ನೂ ಕೇಳಬಹುದು- ದೇಹಸಹಿತವಾಗಿ ದೇಹದ ಎಲ್ಲಾ ಧರ್ಮಗಳನ್ನು ಬಿಟ್ಟು ನನ್ನೊಬ್ಬನನ್ನು ನೆನಪು ಮಾಡಿ ಎಂಬ ಯಾವ ಮಹಾವಾಕ್ಯ ಅಥವಾ ಭಗವಾನುವಾಚ ಇದೆಯೋ ಅದನ್ನು ಕೃಷ್ಣನು ಹೇಳುತ್ತಾನೆಯೇ ಅಥವಾ ಪರಮಾತ್ಮನು ಹೇಳುತ್ತಾರೆಯೇ? ನೀವು ಕೃಷ್ಣನನ್ನು ನೆನಪು ಮಾಡುತ್ತೀರಾ? ನೀವು ಎಂದೂ ಹೌದು ಎಂದು ಹೇಳುವುದಿಲ್ಲ. ಅಲ್ಲಿಯೇ ಪ್ರಸಿದ್ಧವಾಗಿಬಿಡುತ್ತದೆ. ಆದರೆ ಪಾಪ! ಅಬಲೆಯರು ಹೋಗುತ್ತಾರೆ. ಅವರಿಗೇನು ಗೊತ್ತು! ಅವರು ತಮ್ಮ ಅನುಯಾಯಿಗಳ ಮುಂದೆ ಕ್ರೋಧಿತರಾಗಿಬಿಡುತ್ತಾರೆ. ದುರ್ವಾಸಮುನಿಯ ಹೆಸರೂ ಇದೆಯಲ್ಲವೆ, ಅವರಲ್ಲಿ ಬಹಳ ಅಹಂಕಾರಿವಿರುತ್ತದೆ. ಅನುಯಾಯಿಗಳೂ ಅನೇಕರಿದ್ದಾರೆ, ಭಕ್ತಿಯ ರಾಜ್ಯವಾಗಿದೆಯಲ್ಲವೆ! ಅವರನ್ನು ಕೇಳಲು ಯಾರಲ್ಲಿಯೂ ಧೈರ್ಯವಿರುವುದಿಲ್ಲ, ಇಲ್ಲವೆಂದರೆ ಅವರನ್ನು ಕೇಳಬಹುದು - ನೀವು ಶಿವತಂದೆಯ ಪೂಜೆ ಮಾಡುತ್ತೀರಿ ಅಂದಾಗ ಭಗವಂತನೆಂದು ಯಾರಿಗೆ ಹೇಳುವುದು? ಕಲ್ಲು-ಮುಳ್ಳಿನಲ್ಲಿ ಭಗವಂತನಿದ್ದಾರೆಯೇ? ಮುಂದೆ ಹೋದಂತೆ ಇವೆಲ್ಲಾ ಮಾತುಗಳನ್ನು ಅರಿತುಕೊಳ್ಳುತ್ತೀರಿ, ಈಗ ಎಷ್ಟೊಂದು ನಶೆಯಿದೆ, ಎಲ್ಲರೂ ಪೂಜಾರಿಗಳೇ, ಪೂಜ್ಯರು ಯಾರೂ ಇಲ್ಲ.

ತಂದೆಯು ತಿಳಿಸುತ್ತಾರೆ- ನನ್ನನ್ನು ಕೆಲವರೇ ಅರಿತುಕೊಂಡಿದ್ದಾರೆ. ನಾನು ಯಾರಾಗಿದ್ದೇನೆಯೋ, ಹೇಗಿದ್ದೇನೆ ಎಂದು ನೀವು ಮಕ್ಕಳಲ್ಲಿ ನಿಖರವಾಗಿ ಕೆಲವರೇ ಅರಿತುಕೊಂಡಿದ್ದಾರೆ. ಅವರಿಗೆ ಒಳಗೆ ಬಹಳ ಖುಷಿಯಿರುತ್ತದೆ. ತಂದೆಯೇ ನಮಗೆ ಸ್ವರ್ಗದ ರಾಜ್ಯಭಾಗ್ಯವನ್ನು ಕೊಡುತ್ತಾರೆಂಬುದನ್ನು ತಿಳಿಯುತ್ತಾರಲ್ಲವೆ. ಕುಬೇರನ ಖಜಾನೆಯು ಸಿಗುತ್ತದೆ. ಅಲ್ಲಾ ಅವಲುದ್ದೀನನ ಆಟವನ್ನು ತೋರಿಸುತ್ತಾರೆ. ಮುಟ್ಟಿದ ತಕ್ಷಣ ಖಜಾನೆಯು ಬಂದುಬಿಡುತ್ತಿತ್ತು. ಬಹಳ ಆಟಗಳನ್ನು ತೋರಿಸುತ್ತಾರೆ. ಖುದಾದೋಸ್ತ್ ರಾಜನು ಏನೂ ಮಾಡುತ್ತಿದ್ದರು ಎಂಬುದರ ಕಥೆಯೂ ಗೊತ್ತಿದೆ. ಸೇತುವೆಯ ಮೇಲೆ ಯಾರೇ ಬರಲಿ ಅವರಿಗೆ ಒಂದು ದಿನಕ್ಕಾಗಿ ರಾಜ್ಯವನ್ನು ಕೊಟ್ಟು ಕಳುಹಿಸುತ್ತಿದ್ದನು. ಇವೆಲ್ಲವೂ ಕಥೆಗಳಾಗಿವೆ. ತಂದೆಯು ತಿಳಿಸುತ್ತಾರೆ - ಭಗವಂತನು ನೀವು ಮಕ್ಕಳ ಜೊತೆಗಾರನಾಗಿದ್ದಾರೆ, ಬ್ರಹ್ಮಾರವರಲ್ಲಿ ಪ್ರವೇಶವಾಗಿ ನಿಮ್ಮ ಜೊತೆ ತಿನ್ನುತ್ತಾರೆ, ಕುಡಿಯುತ್ತಾರೆ, ಆಟವಾಡುತ್ತಾರೆ, ಶಿವತಂದೆ ಮತ್ತು ಬ್ರಹ್ಮ ತಂದೆ ಇಬ್ಬರಿಗೂ ಒಂದೇ ರಥವಾಗಿದೆ ಅಂದಮೇಲೆ ಶಿವತಂದೆಯೂ ಸಹ ಆಟವಾಡಬಹುದಲ್ಲವೆ. ತಂದೆಯನ್ನು ನೆನಪು ಮಾಡಿ ಆಟವಾಡುತ್ತೀರೆಂದರೆತಂದೆ ಮತ್ತು ಅಣ್ಣ ಇಬ್ಬರೂ ಇದೇ ಶರೀರದಲ್ಲಿದ್ದಾರೆ ಆದರೆ ಯಾರೂ ತಿಳಿದುಕೊಂಡಿಲ್ಲ. ರಥದ ಮೇಲೆ ಬಂದರೆಂದು ಹೇಳುತ್ತಾರೆ. ಅದಕ್ಕೆ ಅವರು ಕುದುರೆಗಾಡಿಯ ರಥವನ್ನು ತೋರಿಸಿಬಿಟ್ಟಿದ್ದಾರೆ. ಶಿವತಂದೆಯು ಕೃಷ್ಣನಲ್ಲಿ ಕುಳಿತು ಜ್ಞಾನವನ್ನು ಕೊಡುತ್ತಾರೆಂದು ಹೇಳುವುದಿಲ್ಲ. ಕೃಷ್ಣಭಗವಾನುವಾಚ ಎಂದು ಹೇಳುತ್ತಾರೆ. ಬ್ರಹ್ಮಾ ಭಗವಾನುವಾಚ ಎಂದು ಹೇಳುವುದಿಲ್ಲ. ಈ ಬ್ರಹ್ಮಾರವರು ರಥವಾಗಿದ್ದಾರೆ. ಶಿವಭಗವಾನುವಾಚ, ತಂದೆಯು ಕುಳಿತು ಮಕ್ಕಳಿಗೆ ತನ್ನ ಮತ್ತು ರಚನೆಯ ಆದಿ-ಮಧ್ಯ-ಅಂತ್ಯದ ಪರಿಚಯ ಹಾಗೂ ಕಾಲಾವಧಿಯನ್ನು ತಿಳಿಸುತ್ತಾರೆ. ಯಾವ ಮಾತನ್ನು ಮತ್ತ್ಯಾರೂ ಅರಿತುಕೊಳ್ಳುವುದಿಲ್ಲ. ಯಾರು ಸೂಕ್ಷ್ಮಬುದ್ಧಿಯವರಿರುವರೋ ಅವರು ಬುದ್ಧಿಯಿಂದ ಕೆಲಸ ತೆಗೆದುಕೊಳ್ಳುವರು. ಸನ್ಯಾಸಿಗಳಂತೂ ಸನ್ಯಾಸ ಮಾಡಬೇಕಾಗಿದೆ. ನೀವೂ ಸಹ ಶರೀರ ಸಹಿತವಾಗಿ ಎಲ್ಲವನ್ನೂ ಸನ್ಯಾಸ ಮಾಡುತ್ತೀರಿ ಏಕೆಂದರೆ ನಿಮಗೆ ಗೊತ್ತಿದೆ - ಇದು ಹಳೆಯ ಪೊರೆಯಾಗಿದೆ, ಈಗ ನಾವು ಹೊಸ ಪ್ರಪಂಚದಲ್ಲಿ ಹೋಗಬೇಕಾಗಿದೆ. ನಾವಾತ್ಮಗಳು ಇಲ್ಲಿಯ ನಿವಾಸಿಗಳಲ್ಲ, ಇಲ್ಲಿ ಪಾತ್ರವನ್ನಭಿಯಿಸಲು ಬಂದಿದ್ದೇವೆ. ನಾವು ಪರಮಧಾಮದ ನಿವಾಸಿಗಳಾಗಿದ್ದೇವೆ. ಇದನ್ನೂ ಸಹ ನೀವು ಮಕ್ಕಳೇ ಅರಿತುಕೊಂಡಿದ್ದೀರಿ - ಅಲ್ಲಿ ನಿರಾಕಾರಿ ವೃಕ್ಷವು ಹೇಗಿದೆ, ಎಲ್ಲಾ ಆತ್ಮಗಳು ಅಲ್ಲಿರುತ್ತಾರೆ. ಈ ಅನಾದಿ ನಾಟಕವು ಮಾಡಲ್ಪಟ್ಟಿದೆ. ಎಷ್ಟು ಕೋಟ್ಯಾಂತರ ಜೀವಾತ್ಮರಿದ್ದಾರೆ. ಅಂದಮೇಲೆ ಇವರೆಲ್ಲರೂ ಎಲ್ಲಿರುತ್ತಾರೆ? ನಿರಾಕಾರಿ ಪ್ರಪಂಚದಲ್ಲಿ, ಬಾಕಿ ಈ ಸ್ಥೂಲನಕ್ಷತ್ರಗಳಂತೂ ಆತ್ಮಗಳಲ್ಲ. ಮನುಷ್ಯರು ಈ ನಕ್ಷತ್ರಗಳಿಗೂ ದೇವತೆಗಳೆಂದು ಹೇಳಿಬಿಟ್ಟಿದ್ದಾರೆ. ಆದರೆ ನಕ್ಷತ್ರಗಳು ದೇವತೆಗಳಲ್ಲ. ಜ್ಞಾನಸೂರ್ಯನೆಂದು ನಾವು ಶಿವತಂದೆಗೆ ಹೇಳುತ್ತೇವೆ. ಅಂದಮೇಲೆ ಅವರಿಗೆ ದೇವತೆಯೆಂದು ಹೇಳಲಾಗುತ್ತದೆಯೇ! ಶಾಸ್ತ್ರಗಳಲ್ಲಂತೂ ಏನೇನು ಮಾತುಗಳನ್ನು ಬರೆದುಬಿಟ್ಟಿದ್ದಾರೆ. ಇದೆಲ್ಲವೂ ಭಕ್ತಿಮಾರ್ಗದ ಸಾಮಗ್ರಿಯಾಗಿದೆ. ಇದರಿಂದ ನೀವು ಕೆಳಗಿಳಿಯುತ್ತಲೇ ಬಂದಿದ್ದೀರಿ. 84 ಜನ್ಮಗಳನ್ನು ತೆಗೆದುಕೊಳ್ಳುತ್ತೀರೆಂದರೆ ಅವಶ್ಯವಾಗಿ ಕೆಳಗಿಳಿಯುತ್ತೀರಲ್ಲವೆ. ಈಗ ಹೇಗೆ ಕಬ್ಬಿಣದ ಪ್ರಪಂಚವಾಗಿದೆ. ಸತ್ಯಯುಗಕ್ಕೆ ಸ್ವರ್ಣಿಮ ಪ್ರಪಂಚವೆಂದು ಹೇಳಲಾಗುತ್ತದೆ. ಅಲ್ಲಿ ಯಾರಿದ್ದರು? ದೇವತೆಗಳು, ಅವರು ಎಲ್ಲಿ ಹೋದರೆಂಬುದನ್ನು ಯಾರಿಗೂ ತಿಳಿದಿಲ್ಲ. ಪುನರ್ಜನ್ಮವನ್ನು ತೆಗೆದುಕೊಳ್ಳುತ್ತೇವೆಂದು ತಿಳಿದಿದೆ. ತಂದೆಯು ತಿಳಿಸಿಕೊಟ್ಟಿದ್ದಾರೆ- ಪುನರ್ಜನ್ಮವನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ದೇವತೆಗಳಿಂದ ಹಿಂದೂಗಳಾಗಿಬಿಟ್ಟಿದ್ದಾರೆ. ಪತಿತರಾಗಿಬಿಟ್ಟಿದ್ದಾರೆ ಅಲ್ಲವೆ. ಮತ್ತ್ಯಾವ ಧರ್ಮವೂ ಬದಲಾಗುವುದಿಲ್ಲ. ಆದರೆ ಈ ಧರ್ಮವು ಏಕೆ ಬದಲಾಗುತ್ತದೆಯೆಂದು ಯಾರಿಗೂ ತಿಳಿದಲ್ಲ. ಧರ್ಮಭ್ರಷ್ಟರು, ಕರ್ಮಭ್ರಷ್ಟರಾಗಿಬಿಟ್ಟಿದ್ದಾರೆ. ದೇವಿ-ದೇವತೆಗಳಿದ್ದಾಗ ಪವಿತ್ರ ಜೋಡಿಯಾಗಿದ್ದೀರಿ ನಂತರ ರಾವಣರಾಜ್ಯದಲ್ಲಿ ನೀವು ಅಪವಿತ್ರರಾಗಿದ್ದಾರೆ. ಆದ್ದರಿಂದ ದೇವಿ-ದೇವತೆಗಳೆಂದು ಹೇಳಲು ಸಾಧ್ಯವಿಲ್ಲ. ಆದ್ದರಿಂದಲೇ ಹಿಂದೂಗಳೆಂಬ ಹೆಸರು ಬಂದಿದೆ ಎಂದು ತಂದೆಯು ತಿಳಿಸುತ್ತಾರೆ. ದೇವಿ-ದೇವತಾಧರ್ಮವನ್ನು ಕೃಷ್ಣನನು ಸ್ಥಾಪನೆ ಮಾಡಿಲ್ಲ ಅಂದಾಗ ಅವಶ್ಯವಾಗಿ ಶಿವತಂದೆಯೇ ಬಂದು ಸ್ಥಾಪನೆ ಮಾಡಿರುವರು. ಶಿವಜಯಂತಿ, ಶಿವರಾತ್ರಿಯೆಂದು ಆಚರಣೆ ಮಾಡುತ್ತಾರೆ ಆದರೆ ಅವರು ಬಂದು ಏನು ಮಾಡಿದರೆಂದು ಯಾರಿಗೂ ತಿಳಿದಿಲ್ಲ. ಒಂದು ಶಿವಪುರಾಣವೂ ಇದೆ. ವಾಸ್ತವದಲ್ಲಿ ಶಿವತಂದೆಯು ತಿಳಿಸಿರುವ ಗೀತೆಯೂ ಒಂದೇ ಇದೆ, ಮತ್ತ್ಯಾವ ಶಾಸ್ತ್ರವಿಲ್ಲ. ನೀವು ಯಾವ ಹಿಂಸೆಯನ್ನೂ ಮಾಡುವುದಿಲ್ಲ. ನಿಮ್ಮದು ಯಾವುದೇ ಶಾಸ್ತ್ರಗಳಾಗುವುದಿಲ್ಲ. ನೀವು ಹೊಸ ಪ್ರಪಂಚಕ್ಕೆ ಹೊರಟುಹೋಗುತ್ತೀರಿ. ಸತ್ಯಯುಗದಲ್ಲಿ ಯಾವುದೇ ಶಾಸ್ತ್ರ-ಗೀತೆ ಮುಂತಾದವುಗಳು ಇರುವುದಿಲ್ಲ. ಅಲ್ಲಿ ಯಾರು ಓದಿಸುತ್ತಾರೆ? ಈ ವೇದಶಾಸ್ತ್ರಗಳು ಪರಂಪರೆಯಿಂದಲೂ ಬಂದಿವೆಯೆಂದು ಅವರು ಹೇಳುತ್ತಾರೆ. ಅವರಿಗೆ ಏನೂ ತಿಳಿದಿಲ್ಲ. ಸ್ವರ್ಗದಲ್ಲಿ ಶಾಸ್ತ್ರ ಇತ್ಯಾದಿಗಳಿರುವುದಿಲ್ಲ. ತಂದೆಯಂತೂ ದೇವತೆಗಳನ್ನಾಗಿ ಮಾಡಿದರು. ಎಲ್ಲರ ಸದ್ಗತಿಯಾಯಿತೆಂದರೆ ಮತ್ತೆ ಶಾಸ್ತ್ರಗಳ ಅವಶ್ಯಕತೆಯೇನಿದೆ ಆದ್ದರಿಂದ ಅಲ್ಲಿ ಶಾಸ್ತ್ರಗಳಿರುವುದಿಲ್ಲ. ಈಗ ತಂದೆಯು ನಿಮಗೆ ಜ್ಞಾನದ ಬೀಗದ ಕೈಯನ್ನು ಕೊಟ್ಟಿದ್ದಾರೆ. ಇದರಿಂದ ಬುದ್ಧಿಯ ಬೀಗವು ತೆರೆದಿದೆ. ಮೊದಲು ಬೀಗವು ಹಾಕಲ್ಪಟ್ಟಿತ್ತು ಏನನ್ನೂ ತಿಳಿದುಕೊಂಡಿರಲಿಲ್ಲ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳ ಪ್ರತಿ ಮಾತಾಪಿತ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ಸುಪ್ರಭಾತ, ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಯಾರೊಂದಿಗೂ ಈಷ್ರ್ಯೆಯನ್ನು ಇಟ್ಟುಕೊಳ್ಳಬಾರದು. ನಿರ್ಬಲತೆಗಳನ್ನು ತೆಗೆದು ಸಂಪೂರ್ಣರಾಗುವ ವಿದ್ಯೆಯಿಂದ ಶ್ರೇಷ್ಠಪದವಿಯನ್ನು ಪ್ರಾಪ್ತಿ ಮಾಡಿಕೊಳ್ಳಬೇಕಾಗಿದೆ.

2. ಶರೀರ ಸಹಿತವಾಗಿ ಎಲ್ಲದರ ಸನ್ಯಾಸ ಮಾಡಬೇಕಾಗಿದೆ. ಯಾವುದೇ ಪ್ರಕಾರದ ಹಿಂಸೆ ಮಾಡಬಾರದು, ಅಹಂಕಾರವಿರಬಾರದು.

ವರದಾನ:
ಅವಿನಾಶಿ ಮತ್ತು ಬೇಹದ್ಧಿನ ಅಧಿಕಾರದ ಖುಷಿ ಹಗೂ ನಶೆಯ ಮೂಲಕ ಸದಾ ನಿಶ್ಚಿಂತ ಭವ.

ಜಗತ್ತಿನಲ್ಲಿ ಬಹಳ ಪರಿಶ್ರಮ ಪಟ್ಟು ಅಧಿಕಾರವನ್ನು ಪಡೆಯುತ್ತಾರೆ, ನಿಮಗೆ ಪರಿಶ್ರಮವಿಲ್ಲದೆಯೆ ಅಧಿಕಾರ ಸಿಕ್ಕಿ ಬಿಟ್ಟಿದೆ. ಮಗುವಾಗುವುದು ಎಂದರೇನೆ ಅಧಿಕಾರ ಪಡೆಯುವುದು. “ವಾಹ್ ನಾನು ಶ್ರೇಷ್ಠ ಅಧಿಕಾರಿ ಆತ್ಮ”, ಈ ಬೆಹದ್ದಿನ ಅಧಿಕಾರದ ನಶೆ ಮತ್ತು ಖುಷಿಯಲ್ಲಿದ್ದಾಗ ಸದಾ ನಿಶ್ಚಿಂತರಾಗಿರುವಿರಿ. ಈ ಅವಿನಾಶಿ ಅಧಿಕಾರ ನಿಶ್ಚಿತವಾಗಿದೆ. ಎಲ್ಲಿ ನಿಶ್ಚತವಾಗಿರುತ್ತದೆ ಅಲ್ಲಿ ನಿಶ್ಚಿಂತರಾಗಿರುತ್ತಾರೆ. ನಿಮ್ಮ ಎಲ್ಲಾ ಜವಾಬ್ಧಾರಿಗಳನ್ನು ತಂದೆಗೆ ಒಪ್ಪಿಸಿದಾಗ ಎಲ್ಲಾ ಚಿಂತೆಗಳಿಂದ ಮುಕ್ತರಾಗಿ ಬಿಡುವಿರಿ.

ಸ್ಲೋಗನ್:
ಯಾರು ಉದಾರಚಿತ್ತ, ವಿಶಾಲ ಹೃದಯಿಗಳಾಗಿದ್ದಾರೆ ಅವರೇ ಏಕತೆಗೆ ಆಧಾರವಾಗಿದ್ದಾರೆ.