23.11.24 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ -
ದೇಹೀ-ಅಭಿಮಾನಿಯಾಗಿ ಸರ್ವೀಸ್ ಮಾಡಿ ಆಗ ಪ್ರತೀ ಹೆಜ್ಜೆಯಲ್ಲಿ ಸಫಲತೆಯು ಸಿಗುತ್ತಾ ಇರುವುದು”
ಪ್ರಶ್ನೆ:
ಯಾವ
ಸ್ಮೃತಿಯಲ್ಲಿದ್ದಾಗ ದೇಹಾಭಿಮಾನವು ಬರುವುದಿಲ್ಲ?
ಉತ್ತರ:
ಸದಾ
ಸ್ಮೃತಿಯಿರಲಿ - ನಾವು ಈಶ್ವರೀಯ ವಿದ್ಯಾರ್ಥಿಗಳಾಗಿದ್ದೇವೆ. ಸೇವಕರಿಗೆಂದೂ ದೇಹಾಭಿಮಾನವು ಬರಲು
ಸಾಧ್ಯವಿಲ್ಲ. ಎಷ್ಟೆಷ್ಟು ಯೋಗದಲ್ಲಿರುತ್ತೀರೋ ಅಷ್ಟು ದೇಹಾಭಿಮಾನವು ಬಿಟ್ಟುಹೋಗುವುದು.
ಪ್ರಶ್ನೆ:
ದೇಹಾಭಿಮಾನಿಗಳಿಗೆ ಡ್ರಾಮಾನುಸಾರ ಯಾವ ಶಿಕ್ಷೆಯು ಸಿಗುತ್ತದೆ?
ಉತ್ತರ:
ಅವರ ಬುದ್ಧಿಯಲ್ಲಿ ಈ ಜ್ಞಾನವು ಕುಳಿತುಕೊಳ್ಳುವುದೇ ಇಲ್ಲ. ಸಾಹುಕಾರರಲ್ಲಿ ಹಣದ ಕಾರಣ
ದೇಹಾಭಿಮಾನವಿರುತ್ತದೆ ಆದ್ದರಿಂದ ಅವರು ಈ ಜ್ಞಾನವನ್ನು ಅರಿತುಕೊಳ್ಳುವುದಿಲ್ಲ, ಈ ಶಿಕ್ಷೆಯು
ಸಿಗುತ್ತದೆ. ಬಡವರು ಸಹಜವಾಗಿ ಅರಿತುಕೊಳ್ಳುತ್ತಾರೆ.
ಓಂ ಶಾಂತಿ.
ಆತ್ಮಿಕ ತಂದೆಯು ಬ್ರಹ್ಮಾರವರ ಮೂಲಕ ಸಲಹೆ ನೀಡುತ್ತಾರೆ - ಮಕ್ಕಳೇ, ನೆನಪು ಮಾಡಿದರೆ ಈ
ರೀತಿಯಾಗುವಿರಿ. ಸತೋಪ್ರಧಾನರಾಗಿ ತಮ್ಮ ರಾಜ್ಯ ಸ್ವರ್ಗದಲ್ಲಿ ಪ್ರವೇಶ ಮಾಡುತ್ತೀರಿ. ಇದನ್ನು
ಕೇವಲ ನಿಮಗಷ್ಟೇ ಹೇಳುವುದಿಲ್ಲ, ಆದರೆ ಈ ಸದ್ದು ಇಡೀ ಭಾರತ ಹಾಗೂ ವಿದೇಶದಲ್ಲಿಯೂ ಸಹ ಎಲ್ಲರ ಬಳಿ
ಹೋಗುತ್ತದೆ. ಅನೇಕರಿಗೆ ಸಾಕ್ಷಾತ್ಕಾರವೂ ಆಗುವುದು, ಯಾರ ಸಾಕ್ಷಾತ್ಕಾರವಾಗಬೇಕು? ಇದಕ್ಕೆ
ಬುದ್ಧಿಯಿಂದ ಕೆಲಸ ತೆಗೆದುಕೊಳ್ಳಬೇಕು. ತಂದೆಯು ಬ್ರಹ್ಮಾತಂದೆಯ ಮೂಲಕವೇ ಸಾಕ್ಷಾತ್ಕಾರ ಮಾಡಿಸಿ
ಹೇಳುತ್ತಾರೆ - ರಾಜಕುಮಾರರಾಗಬೇಕೆಂದರೆ ಬ್ರಹ್ಮಾ ಅಥವಾ ಬ್ರಾಹ್ಮಣರ ಬಳಿ ಹೋಗಿ. ಯುರೋಪಿಯನ್ನರು
ಇದನ್ನು ಅರಿತುಕೊಳ್ಳಬಯಸುತ್ತಾರೆ. ಭಾರತವು ಸ್ವರ್ಗವಾಗಿದ್ದಾಗ ಯಾರ ರಾಜ್ಯವಿತ್ತು? ಇದನ್ನು ಯಾರೂ
ಪೂರ್ಣ ತಿಳಿದುಕೊಂಡಿಲ್ಲ. ಭಾರತವೇ ಹೆವೆನ್ ಸ್ವರ್ಗವಾಗಿತ್ತು, ಈಗ ನೀವು ಎಲ್ಲರಿಗೆ
ತಿಳಿಸುತ್ತಿದ್ದೀರಿ. ಇದು ಸಹಜರಾಜಯೋಗವಾಗಿದೆ, ಇದರಿಂದ ಭಾರತವು ಸ್ವರ್ಗ ಅಥವಾ ಹೆವೆನ್ ಆಗುತ್ತದೆ.
ವಿದೇಶಿಯರ ಬುದ್ಧಿಯಾದರೂ ಸ್ವಲ್ಪ ಚೆನ್ನಾಗಿದೆ ಅವರು ಬೇಗನೆ ಅರ್ಥಮಾಡಿಕೊಳ್ಳುತ್ತಾರೆ ಅಂದಮೇಲೆ
ಈಗ ಸೇವಾಧಾರಿ ಮಕ್ಕಳು ಏನು ಮಾಡಬೇಕು? ಅವರಿಗೂ ಸಹ ಸಲಹೆ ನೀಡಬೇಕಾಗುತ್ತದೆ. ಮಕ್ಕಳು ಪ್ರಾಚೀನ
ರಾಜಯೋಗವನ್ನು ಕಲಿಸಿಕೊಡಬೇಕಾಗಿದೆ. ನಿಮ್ಮ ಬಳಿ ಮ್ಯೂಸಿಯಂ, ಪ್ರದರ್ಶನಿ ಇತ್ಯಾದಿಗಳಲ್ಲಿ ಅನೇಕರು
ಬರುತ್ತಾರೆ. ಇವರು ಬಹಳ ಒಳ್ಳೆಯ ಕಾರ್ಯವನ್ನು ಮಾಡುತ್ತಿದ್ದಾರೆಂದು ತಮ್ಮ ಅನಿಸಿಕೆಯನ್ನು
ಬರೆಯುತ್ತಾರೆ ಆದರೆ ತಾವು ಮಾತ್ರ ಇದನ್ನು ತಿಳಿದುಕೊಳ್ಳುವುದಿಲ್ಲ. ಸ್ವಲ್ಪ ಟಚ್ ಆದರೂ
ಬಂದುಬಿಡುತ್ತಾರೆ. ಅದರಲ್ಲಿಯೂ ಬಡವರು ತಮ್ಮ ಭಾಗ್ಯವನ್ನು ಚೆನ್ನಾಗಿ ರೂಪಿಸಿಕೊಳ್ಳುತ್ತಾರೆ ಮತ್ತು
ಹೆಚ್ಚು-ಹೆಚ್ಚು ತಿಳಿಯುವ ಪುರುಷಾರ್ಥ ಮಾಡುತ್ತಾರೆ. ಸಾಹುಕಾರರಿಗಂತೂ ಬಹಳ ದೇಹಾಭಿಮಾನವಿರುವ
ಕಾರಣ ಪುರುಷಾರ್ಥವನ್ನು ಮಾಡುವುದಿಲ್ಲ. ಆದ್ದರಿಂದಲೇ ನಾಟಕದನುಸಾರ ತಂದೆಯು ಅವರಿಗೆ ಶಿಕ್ಷೆಯನ್ನು
ಕೊಟ್ಟಿದ್ದಾರೆ. ಆದರೂ ಸಹ ಅವರ ಮೂಲಕವೇ ಸಂದೇಶವು ಹರಡುತ್ತದೆ. ವಿದೇಶಿಯರೂ ಸಹ ಜ್ಞಾನವನ್ನು
ತಿಳಿಯಬಯಸುತ್ತಾರೆ. ಇದನ್ನು ಕೇಳಿ ಬಹಳ ಖುಷಿಯಾಗುತ್ತಾರೆ. ಸರ್ಕಾರದ ಅಧಿಕಾರಿಗಳ ಹಿಂದೆ ಎಷ್ಟೊಂದು
ಪರಿಶ್ರಮಪಡುತ್ತಾರೆ ಆದರೆ ಅವರಿಗೆ ಬಿಡುವೇ ಇಲ್ಲ. ಅವರಿಗೆ ಭಲೆ ಮನೆಯಲ್ಲಿ ಕುಳಿತಿದ್ದಂತೆಯೇ
ಸಾಕ್ಷಾತ್ಕಾರವಾಗಲೂಬಹುದು ಆದರೂ ಸಹ ಇದು ಬುದ್ಧಿಯಲ್ಲಿ ಬರುವುದಿಲ್ಲ ಆದ್ದರಿಂದ ಮಕ್ಕಳಿಗೆ ತಂದೆಯು
ಸಲಹೆ ನೀಡುತ್ತಾರೆ - ಎಲ್ಲರಿಂದ ಒಳ್ಳೊಳ್ಳೆಯ ಅಭಿಪ್ರಾಯವನ್ನು ಬರೆಸಿಕೊಂಡು ಅದರ ಒಂದು ಒಳ್ಳೆಯ
ಪುಸ್ತಕವನ್ನು ಮಾಡಿಸಿ, ಸಲಹೆ ಕೊಡಬಹುದು. ನೋಡಿ, ಎಲ್ಲರಿಗೆ ಇದು ಇಷ್ಟವಾಗುತ್ತದೆ. ವಿದೇಶಿಯರು
ಹಾಗೂ ಭಾರತವಾಸಿಗಳೂ ಸಹ ಸಹಜರಾಜಯೋಗವನ್ನು ತಿಳಿಯಲು ಬಯಸುತ್ತಾರೆ. ಸ್ವರ್ಗದ ದೇವಿ-ದೇವತೆಗಳ
ರಾಜಧಾನಿಯು ಈ ಸಹಜರಾಜಯೋಗದಿಂದ ಭಾರತಕ್ಕೆ ಪ್ರಾಪ್ತವಾಗುತ್ತದೆಯೆಂದರೆ ಎಲ್ಲಿ ಸಮ್ಮೇಳನಗಳಾಗುವುದೋ
ಅಂತಹ ಸರ್ಕಾರದ ಕಟ್ಟಡದಲ್ಲಿ ಈ ಮ್ಯೂಸಿಯಂನ್ನು ಏಕೆ ಇಡಬಾರದು! ಮಕ್ಕಳಲ್ಲಿ ಈ ವಿಚಾರಗಳು ನಡೆಯಬೇಕು
- ಇನ್ನು ಸಮಯ ಹಿಡಿಸುತ್ತದೆ. ಅಷ್ಟು ಬೇಗನೆ ಬುದ್ಧಿಯು ಸಡಿಲವಾಗುವುದಿಲ್ಲ. ಬುದ್ಧಿಗೆ
ಗಾಡ್ರೇಜ್(ಗೊದ್ರೆಜ್) ಬೀಗವು ಹಾಕಲ್ಪಟ್ಟಿದೆ. ಈಗ ಸದ್ದು ಹೊರಟಾಗ ಕ್ರಾಂತಿಯಾಗಿಬಿಡುತ್ತದೆ. ಹಾ!
ಖಂಡಿತ ಆಗುತ್ತದೆ. ಹೇಳಿ, ಸರ್ಕಾರಿ ಕಟ್ಟಡದಲ್ಲಿಯೂ ಮ್ಯೂಸಿಯಂ ಇದ್ದರೆ ಅನೇಕ ಮಂದಿ ವಿದೇಶಿಯರೂ
ಬಂದು ಹೋಗುತ್ತಾರೆ. ನೀವು ಮಕ್ಕಳ ವಿಜಯವಂತೂ ಆಗುತ್ತದೆ ಅಂದಮೇಲೆ ವಿಚಾರ ನಡೆಯಬೇಕು - ಏನು
ಮಾಡಬೇಕು, ಅವರಿಗೆ ಅರ್ಥವಾಗಿ ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳಲು ಯಾವ ಯುಕ್ತಿಯನ್ನು
ರಚಿಸಬೇಕೆಂದು ಆತ್ಮಾಭಿಮಾನಿಗಳಿಗೇ ವಿಚಾರವು ಬರುತ್ತದೆ. ಕವಡೆಯೂ ಖರ್ಚಿಲ್ಲದೆ ಬಂದು ಇದನ್ನು
ಪ್ರಾಪ್ತಿ ಮಾಡಿಕೊಳ್ಳಬಹುದು ಎಂಬುದನ್ನು ನಾವು ಬರೆಯುತ್ತೇವೆ ಅಂದಾಗ ಒಳ್ಳೊಳ್ಳೆಯ ಮಕ್ಕಳು ಯಾರು
ಬರುತ್ತಾರೆಯೋ ಅವರು ಸಲಹೆ ಕೊಡುತ್ತಾರೆ. ಡೆಪ್ಯೂಟಿ ಪ್ರಧಾನಮಂತ್ರಿಯು ಉದ್ಘಾಟನೆ ಮಾಡಲು
ಬರುತ್ತಾರೆ ಮತ್ತು ಪ್ರಧಾನಮಂತ್ರಿ, ರಾಷ್ಟ್ರಪತಿಯೂ ಸಹ ಬರುತ್ತಾರೆ ಏಕೆಂದರೆ ಅವರಿಗೂ ಸಹ ಹೋಗಿ
ತಿಳಿಸುತ್ತೀರಿ - ಇದು ಅದ್ಭುತವಾದ ಜ್ಞಾನವಾಗಿದೆ. ಸತ್ಯಶಾಂತಿಯಂತೂ ಈಗ ಸ್ಥಾಪನೆಯಾಗಲಿದೆ.
ಸರಿಯೆನಿಸುತ್ತದೆ, ಇಂದಿಲ್ಲದಿದ್ದರೆ ನಾಳೆ ಅವರಿಗೆ ಅರ್ಥವಾಗುತ್ತದೆ. ತಂದೆಯು
ತಿಳಿಸುತ್ತಿರುತ್ತಾರೆ - ದೊಡ್ಡ-ದೊಡ್ಡ ವ್ಯಕ್ತಿಗಳ ಬಳಿ ಹೋಗಿ. ಮುಂದೆಹೋದಂತೆ ಅವರೂ ಸಹ
ತಿಳಿದುಕೊಳ್ಳುತ್ತಾರೆ. ಮನುಷ್ಯರ ಬುದ್ಧಿಯು ತಮೋಪ್ರಧಾನವಾಗಿದೆ ಆದ್ದರಿಂದ ಉಲ್ಟಾಕೆಲಸಗಳನ್ನು
ಮಾಡುತ್ತಿರುತ್ತಾರೆ. ದಿನ-ಪ್ರತಿದಿನ ಇನ್ನೂ ತಮೋಪ್ರಧಾನವಾಗುತ್ತಾ ಹೋಗುತ್ತಾರೆ.
ನೀವಿದನ್ನು ತಿಳಿಸುವ
ಪ್ರಯತ್ನಪಡುತ್ತೀರಿ, ಈ ವಿಕಾರದ ವ್ಯವಹಾರವನ್ನು ನಿಲ್ಲಿಸಿ, ತಮ್ಮ ಉನ್ನತಿ ಮಾಡಿಕೊಳ್ಳಿ. ಪವಿತ್ರ
ದೇವತೆಗಳನ್ನಾಗಿ ಮಾಡಲು ತಂದೆಯು ಬಂದಿದ್ದಾರೆ. ಕೊನೆಗೆ ಆ ದಿನವೂ ಬರುವುದು ಸರ್ಕಾರಿ ಕಟ್ಟಡದಲ್ಲಿ
ಮ್ಯೂಸಿಯಂ ಹಾಕುವುದು. ತಿಳಿಸಿ, ನಮ್ಮ ಖರ್ಚನ್ನು ನಾವು ಮಾಡುತ್ತೇವೆ, ಸರ್ಕಾರವಂತೂ ಎಂದೂ ಹಣವನ್ನು
ಕೊಡುವುದಿಲ್ಲ. ನಾವು ನಮ್ಮ ಖರ್ಚಿನಿಂದ ಪ್ರತಿಯೊಂದು ಸರ್ಕಾರದ ಕಟ್ಟಡದಲ್ಲಿ ಮ್ಯೂಸಿಯಂನ್ನು
ಇಡುತ್ತೇವೆಂದು ನೀವು ಮಕ್ಕಳು ಹೇಳುತ್ತೀರಿ. ಒಂದು ದೊಡ್ಡ ಸರ್ಕಾರಿ ಮನೆಯಲ್ಲಿ ಈ ಮ್ಯೂಸಿಯಂ
ಆಗಿಬಿಟ್ಟರೆ ಮತ್ತೆಲ್ಲಾ ಕಡೆಯೂ ಆಗುವುದು. ತಿಳಿಸುವವರೂ ಸಹ ಅವಶ್ಯವಾಗಿ ಬೇಕು. ಕವಡೆಯೂ
ಖರ್ಚಿಲ್ಲದೆ ಜೀವನವನ್ನು ರೂಪಿಸುವ ಮಾರ್ಗವನ್ನು ತಿಳಿಸುತ್ತೇವೆಂದು ಹೇಳುತ್ತೀರಿ, ಇದು ಮುಂದೆ
ಆಗುವುದಿದೆ. ಆದರೆ ತಂದೆಯು ಮಕ್ಕಳ ಮೂಲಕವೇ ತಿಳಿಸುತ್ತಾರೆ. ಒಳ್ಳೊಳ್ಳೆಯ ಮಕ್ಕಳು ಯಾರು ತಮ್ಮನ್ನು
ಮಹಾವೀರರೆಂದು ತಿಳಿಯುತ್ತಾರೆಯೋ ಅವರನ್ನೂ ಸಹ ಮಾಯೆಯು ಹಿಡಿದುಕೊಳ್ಳುತ್ತದೆ. ಬಹಳ ಉನ್ನತ
ಗುರಿಯಾಗಿದೆ ಆದ್ದರಿಂದ ಬಹಳ ಎಚ್ಚರ ವಹಿಸಬೇಕಾಗಿದೆ. ಈ ಯುದ್ಧವೇನೂ ಕಡಿಮೆಯಿಲ್ಲ, ಅತಿದೊಡ್ಡ
ಮಲ್ಲಯುದ್ಧವಾಗಿದೆ. ರಾವಣನನ್ನು ಗೆಲ್ಲುವ ಯುದ್ಧದ ಮೈದಾನವಾಗಿದೆ. ನಾನು ಇಂತಹ ಸೇವೆ ಮಾಡುತ್ತೇನೆ,
ಇದನ್ನು ಮಾಡುತ್ತೇನೆಂದು ಸ್ವಲ್ಪವೂ ದೇಹದ ಅಭಿಮಾನವು ಬರಬಾರದು. ನಾವಂತೂ ಈಶ್ವರೀಯ
ಸೇವಾಧಾರಿಗಳಾಗಿದ್ದೇವೆ. ನಾವು ಸಂದೇಶವನ್ನು ಕೊಡಲೇಬೇಕಾಗಿದೆ. ಇದರಲ್ಲಿ ಬಹಳ ಗುಪ್ತಪರಿಶ್ರಮವಿದೆ.
ನೀವು ಜ್ಞಾನ ಮತ್ತು ಯೋಗಬಲದಿಂದ ತಮಗೆ ತಿಳಿಸಿಕೊಡುತ್ತೀರಿ. ಇದರಲ್ಲಿ ಗುಪ್ತವಾಗಿದ್ದು ವಿಚಾರ
ಸಾಗರ ಮಂಥನ ಮಾಡಿದಾಗಲೇ ನಶೆಯೇರುತ್ತದೆ. ಹೀಗೆ ಪ್ರೀತಿಯಿಂದ ತಿಳಿಸಿಕೊಡಬೇಕು - ಬೇಹದ್ದಿನ ತಂದೆಯ
ಆಸ್ತಿಯು ಪ್ರತೀಕಲ್ಪವು ಭಾರತವಾಸಿಗಳಿಗೇ ಸಿಗುತ್ತದೆ. 5000 ವರ್ಷದ ಹಿಂದೆ ಈ ಲಕ್ಷ್ಮಿ-ನಾರಾಯಣರ
ರಾಜ್ಯವಿತ್ತು, ಈಗಂತೂ ಇದಕ್ಕೆ ವೇಶ್ಯಾಲಯವೆಂದು ಹೇಳಲಾಗುತ್ತದೆ. ಸತ್ಯಯುಗವಂತೂ ಶಿವಾಲಯವಾಗಿದೆ.
ಅದು ಶಿವತಂದೆಯ ಸ್ಥಾಪನೆಯಾಗಿದೆ. ಇದು ರಾವಣನ ಸ್ಥಾಪನೆಯಾಗಿದೆ. ರಾತ್ರಿ-ಹಗಲಿನ ಅಂತರವಿದೆ.
ಮಕ್ಕಳೂ ಸಹ ಇದನ್ನು ಅನುಭವ ಮಾಡುತ್ತೀರಿ, ಅವಶ್ಯವಾಗಿ ನಾವು ಮೊದಲು ಏನಾಗಿಬಿಟ್ಟಿದ್ದೆವು, ತಂದೆಯು
ತಮ್ಮ ಸಮಾನರನ್ನಾಗಿ ಮಾಡಿಕೊಳ್ಳುತ್ತಾರೆ. ಮೂಲಮಾತು ದೇಹೀ-ಅಭಿಮಾನಿಗಳಾಗುವುದಾಗಿದೆ.
ದೇಹೀ-ಅಭಿಮಾನಿಯಾಗಿ ವಿಚಾರ ಮಾಡಬೇಕು - ಇಂದು ನಾವು ಇಂತಹ ಪ್ರಧಾನಮಂತ್ರಿಗೆ ತಿಳಿಸಬೇಕು. ಅವರಿಗೆ
ದೃಷ್ಟಿಕೊಟ್ಟಿದ್ದೇ ಆದರೆ ಸಾಕ್ಷಾತ್ಕಾರವೂ ಆಗಬಹುದು. ನೀವು ದೃಷ್ಟಿಯನ್ನು ಕೊಡಬಹುದು. ಒಂದುವೇಳೆ
ದೇಹೀ-ಅಭಿಮಾನಿಯಾಗಿ ಇರುತ್ತೀರೆಂದರೆ ನಿಮ್ಮ ಬ್ಯಾಟರಿಯು ತುಂಬುತ್ತಾ ಹೋಗುತ್ತದೆ.
ದೇಹೀ-ಅಭಿಮಾನಿಯಾಗಿ ಕುಳಿತುಕೊಂಡು ತಮ್ಮನ್ನು ಆತ್ಮವೆಂದು ತಿಳಿದು ತಂದೆಯೊಂದಿಗೆ
ಬುದ್ಧಿಯೋಗವನ್ನಿಟ್ಟಾಗ ಬ್ಯಾಟರಿಯು ತುಂಬುತ್ತದೆ. ಬಡವರು ಬಹಳ ಬೇಗನೆ ತಮ್ಮ ಬ್ಯಾಟರಿಯನ್ನು
ತುಂಬಿಕೊಳ್ಳುತ್ತಾರೆ ಏಕೆಂದರೆ ತಂದೆಯನ್ನು ಬಹಳ ನೆನಪು ಮಾಡುತ್ತಾರೆ. ಜ್ಞಾನಬಲವು ಚೆನ್ನಾಗಿದ್ದು
ಯೋಗವು ಕಡಿಮೆಯಿದ್ದರೆ ಬ್ಯಾಟರಿಯು ತುಂಬಲು ಸಾಧ್ಯವಿಲ್ಲ ಏಕೆಂದರೆ ದೇಹದ ಅಹಂಕಾರವು ಬಹಳ ಇರುತ್ತದೆ,
ಯೋಗವು ಏನೂ ಇರುವುದಿಲ್ಲ ಆದ್ದರಿಂದ ಜ್ಞಾನದ ಬಾಣದಲ್ಲಿ ಹೊಳಪು ತುಂಬುವುದಿಲ್ಲ. ಕತ್ತಿಯಲ್ಲಿಯೂ
ಸಹ ಹರಿತವಿರುತ್ತದೆ, ಅದೇ ಕತ್ತಿಯು 10 ರೂಪಾಯಿಗಳದೂ ಇರುತ್ತದೆ, 50 ರೂಪಾಯಿಗಳದೂ ಇರುತ್ತದೆ.
ಗುರು-ಗೋವಿಂದನ ಕತ್ತಿಯ ಗಾಯನವಿದೆ, ಆದರೆ ಇಲ್ಲಿ ಹಿಂಸೆಯ ಮಾತಿಲ್ಲ. ದೇವತೆಗಳು ಡಬಲ್
ಅಹಿಂಸಕರಾಗಿದ್ದಾರೆ. ಇಂದು ಭಾರತವು ಹೀಗಿದೆ, ನಾಳೆ ಭಾರತವು ಈ ರೀತಿಯಾಗುವುದು ಅಂದಾಗ ಮಕ್ಕಳಿಗೆ
ಎಷ್ಟೊಂದು ಖುಷಿಯಿರುತ್ತದೆ. ನಿನ್ನೆಯ ದಿನ ನಾವು ರಾವಣರಾಜ್ಯದಲ್ಲಿದ್ದೆವು, ಆಗ ಉಸಿರುಕಟ್ಟಿತ್ತು,
ಇಂದು ನಾವು ಪರಮಪಿತ ಪರಮಾತ್ಮನ ಜೊತೆಯಲ್ಲಿದ್ದೇವೆ.
ಈಗ ನೀವು ಈಶ್ವರೀಯ
ಪರಿವಾರದವರಾಗಿದ್ದೀರಿ. ಸತ್ಯಯುಗದಲ್ಲಿ ನೀವು ದೈವೀ ಪರಿವಾರದವರಾಗುತ್ತೀರಿ. ಈಗ ಸ್ವಯಂ ಭಗವಂತನೇ
ನಮಗೆ ಓದಿಸುತ್ತಿದ್ದಾರೆ. ನಮಗೆ ಭಗವಂತನ ಎಷ್ಟೊಂದು ಪ್ರೀತಿಯು ಸಿಗುತ್ತದೆ. ಅರ್ಧಕಲ್ಪ ರಾವಣನ
ಪ್ರೀತಿಯು ಸಿಗುವುದರಿಂದ ಕೋತಿಯ ಸಮಾನ ಆಗಿಬಿಟ್ಟಿದ್ದಾರೆ. ಈಗ ಬೇಹದ್ದಿನ ತಂದೆಯ ಪ್ರೀತಿಯು
ಸಿಗುವುದರಿಂದ ನೀವು ದೇವತೆಗಳಾಗಿಬಿಡುತ್ತೀರಿ. ಇದು 5000 ವರ್ಷಗಳಾಗಿವೆ. ಇದಕ್ಕೆ ಅವರು
ಲಕ್ಷಾಂತರ ವರ್ಷಗಳನ್ನು ಹಾಕಿಬಿಟ್ಟಿದ್ದಾರೆ. ಈ ಬ್ರಹ್ಮಾರವರೂ ಸಹ ನಿಮ್ಮ ಹಾಗೆ ಪೂಜಾರಿಯಾಗಿದ್ದರು.
ಎಲ್ಲದಕ್ಕಿಂತ ಕೊನೆಯ ನಂಬರಿನಲ್ಲಿ ವೃಕ್ಷದಲ್ಲಿ ನಿಂತಿದ್ದಾರೆ, ಸತ್ಯಯುಗದಲ್ಲಿ ನಿಮಗೆ ಎಷ್ಟೊಂದು
ಅಪಾರವಾದ ಧನವಿತ್ತು, ಮತ್ತೆ ಯಾರು ಮಂದಿರವನ್ನು ಮಾಡಿಸಿದರೋ ಅವರಲ್ಲಿಯೂ ಸಹ ಇಷ್ಟೊಂದು ಅಪಾರವಾದ
ಹಣವಿತ್ತು, ಅದನ್ನು ಅನ್ಯರು ಬಂದು ಲೂಟಿ ಮಾಡಿದರು. ಕೇವಲ ಒಂದು ಮಂದಿರವಿರುವುದಿಲ್ಲ, ಅನ್ಯ
ಮಂದಿರಗಳೂ ಇರುತ್ತವೆ. ಅಕ್ಕಪಕ್ಕದಲ್ಲಿ ಪ್ರಜೆಗಳ ಮಂದಿರಗಳೂ ಇರುತ್ತವೆ. ಪ್ರಜೆಗಳಂತೂ ಇನ್ನೂ
ಸಾಹುಕಾರರಾಗಿರುತ್ತಾರೆ, ಪ್ರಜೆಗಳಿಂದ ರಾಜರೂ ಸಹ ಸಾಲವನ್ನು ತೆಗೆದುಕೊಳ್ಳುತ್ತಾರೆ. ಇದು ಬಹಳ
ಕೊಳಕು ಪ್ರಪಂಚವಾಗಿದೆ. ಎಲ್ಲದಕ್ಕಿಂತ ಕೊಳಕಾದುದು ಕಲ್ಕತ್ತಾ ಆಗಿದೆ. ನೀವು ಮಕ್ಕಳು ಇದನ್ನು
ಪರಿವರ್ತನೆ ಮಾಡುವ ಪರಿಶ್ರಮಪಡಬೇಕು. ಯಾರು ಮಾಡುವರೋ ಅವರು ಪಡೆಯುವರು. ದೇಹಾಭಿಮಾನವು ಬಂದಿತೆಂದರೆ
ಬೀಳುವರು. ಮನ್ಮನಾಭವದ ಅರ್ಥವನ್ನು ತಿಳಿದುಕೊಳ್ಳುವುದಿಲ್ಲ ಕೇವಲ ಶ್ಲೋಕಗಳನ್ನು ಕಂಠಪಾಠ
ಮಾಡುತ್ತಾರೆ. ನೀವು ಬ್ರಾಹ್ಮಣರ ವಿನಃ ಮತ್ತ್ಯಾರಲ್ಲಿಯೂ ಜ್ಞಾನವಿರಲು ಸಾಧ್ಯವಿಲ್ಲ. ಯಾವುದೇ
ಮಠಪಂಥದವರು ದೇವತೆಗಳಾಗಲು ಸಾಧ್ಯವಿಲ್ಲ. ಪ್ರಜಾಪಿತ ಬ್ರಹ್ಮಾಕುಮಾರ-ಕುಮಾರಿಯರು ಬ್ರಾಹ್ಮಣರಾಗದ
ಹೊರತು ದೇವತೆಗಳಾಗಲು ಹೇಗೆ ಸಾಧ್ಯ. ಕಲ್ಪದ ಹಿಂದೆ ಯಾರು ಆಗಿದ್ದರೋ ಅವರೇ ಆಗುತ್ತಾರೆ. ಸಮಯ
ಹಿಡಿಸುತ್ತದೆ, ವೃಕ್ಷವು ದೊಡ್ಡದಾಗಿಬಿಟ್ಟರೆ ಮತ್ತೆ ವೃದ್ಧಿಯನ್ನು ಹೊಂದುತ್ತಾ ಹೋಗುವುದು.
ಇರುವೆಯ ಮಾರ್ಗದಿಂದ (ನಿಧಾನಗತಿಯಿಂದ) ವಿಹಂಗಮಾರ್ಗದಲ್ಲಿ ಸೇವೆಯಾಗುತ್ತದೆ. ಮಧುರ ಮಕ್ಕಳೇ -
ತಂದೆಯನ್ನು ನೆನಪು ಮಾಡಿ, ಸ್ವದರ್ಶನ ಚಕ್ರವನ್ನು ಸುತ್ತಿಸಿ ಎಂದು ತಂದೆಯು ಹೇಳುತ್ತಾರೆ. ನಿಮ್ಮ
ಬುದ್ಧಿಯಲ್ಲಿ ಪೂರ್ಣ 84 ಜನ್ಮದ ಚಕ್ರವಿದೆ. ನೀವು ಬ್ರಾಹ್ಮಣರೇ ನಂತರ ದೇವತಾ, ಕ್ಷತ್ರಿಯ
ಮನೆತನದವರಾಗುತ್ತೀರಿ. ಸೂರ್ಯವಂಶಿ, ಚಂದ್ರವಂಶಿಯ ಅರ್ಥವನ್ನು ಯಾರೂ ಸಹ ತಿಳಿದುಕೊಂಡಿಲ್ಲ,
ಪರಿಶ್ರಮಪಟ್ಟು ತಿಳಿಸಿಕೊಡಬೇಕಾಗುತ್ತದೆ. ಒಂದುವೇಳೆ ತಿಳಿದುಕೊಳ್ಳಲಿಲ್ಲವೆಂದರೆ
ತಿಳಿಸಿಕೊಡಲಾಗುತ್ತದೆ. ಮತ್ತೆ ತಿಳಿಸಿದರೂ ಸಹ ಈಗ ಸಮಯವಿಲ್ಲವೆಂದು ಹೇಳುತ್ತಾರೆ, ನಂತರವೂ ಸಹ
ಬರುತ್ತಾರೆ. ಬ್ರಹ್ಮಾಕುಮಾರಿಯವರ ಹೊರಗಿನ ಹೆಸರು ಈ ರೀತಿಯಿದೆ, ಒಳಗಡೆ ಹೋಗಿ ನೋಡಿದ್ದೇ ಆದರೆ
ಇವರು ಬಹಳ ಒಳ್ಳೆಯ ಕೆಲಸವನ್ನು ಮಾಡುತ್ತಿದ್ದಾರೆ ಎಂದು ತಿಳಿಯುತ್ತಾರೆ. ಇದು ಮನುಷ್ಯಮಾತ್ರರ
ನಡುವಳಿಕೆಯನ್ನು ಸುಧಾರಣೆ ಮಾಡುತ್ತಾರೆ, ದೇವತೆಗಳ ನಡವಳಿಕೆಯು ಹೇಗಿದೆ ನೋಡಿ! ಸಂಪೂರ್ಣ
ನಿರ್ವಿಕಾರಿಗಳು...... ತಂದೆಯು ಕಾಮ ಮಹಾಶತ್ರುವೆಂದು ಹೇಳುತ್ತಾರೆ. ಈ ಐದುಭೂತಗಳಕಾರಣ ನಿಮ್ಮ
ನಡವಳಿಕೆ ಹಾಳಾಗಿಬಿಟ್ಟಿದೆ. ಯಾವ ಸಮಯದಲ್ಲಿ ತಿಳಿಸಿಕೊಡುತ್ತಾರೋ ಆ ಸಮಯ ಒಳ್ಳೆಯದಾಗಿರುತ್ತದೆ.
ಇಲ್ಲಿಂದ ಹೊರಗಡೆ ಹೋದಾಗ ಎಲ್ಲವನ್ನೂ ಮರೆತುಬಿಡುತ್ತಾರೆ.
ಈ ತಂದೆಯು ನಿಂದನೆ
ಮಾಡುವುದಿಲ್ಲ ತಿಳುವಳಿಕೆಯನ್ನು ನೀಡುತ್ತಾರೆ. ದೈವಿ ನಡುವಳಿಕೆಯನ್ನು ಇಟ್ಟುಕೊಳ್ಳಿ,
ಕ್ರೋಧದಲ್ಲಿಬಂದು ಏಕೆಬೊಗಳುತ್ತೀರಿ? ಸ್ವರ್ಗದಲ್ಲಿ ಕ್ರೋಧವಿರುವುದಿಲ್ಲ. ತಂದೆಯು
ಏನೇಸಮ್ಮುಖದಲ್ಲಿಹೇಳಿದರೂ ಎಂದೂಸಹ ಕೋಪ ಬರುತ್ತಿರಲಿಲ್ಲ, ತಂದೆಯು ಎಲ್ಲವನ್ನೂ ರಿಫೈನ್ ಮಾಡಿ
ತಿಳಿಸಿಕೊಡುತ್ತಾರೆ. ಡ್ರಾಮಾ ಖಾಯಿದೆಯನುಸಾರ ನಡೆಯುತ್ತಾ ಇರುತ್ತದೆ. ಡ್ರಾಮಾದಲ್ಲಿ ಯಾವುದೇ
ತಪ್ಪಿಲ್ಲ, ಇದು ಅನಾದಿ-ಅವಿನಾಶಿಯಾಗಿ ಮಾಡಲ್ಪಟ್ಟಿದೆ. ಯಾವ ಪಾತ್ರವು ಚೆನ್ನಾಗಿರುತ್ತದೆಯೋ ಅದು
5000 ವರ್ಷದ ನಂತರವೂ ಆಗುತ್ತದೆ. ಈ ಪರ್ವತಗಳು ಹಾಳಾದರೆ ಮತ್ತೆ ಹೇಗೆ ಆಗುತ್ತವೆ ಎಂದು ಕೆಲವರು
ಕೇಳುತ್ತಾರೆ. ನಾಟಕವನ್ನು ನೋಡಿ, ಮಹಲುಗಳು ಬಿದ್ದುಹೋಗುತ್ತದೆಯೆಂದರೆ ನಾಟಕವು
ಪುನರಾವರ್ತನೆಯಾದಾಗ ಮತ್ತೆ ಅದೇ ಮಹಲನ್ನು ನೋಡುತ್ತೀರಿ. ಇದು ಮತ್ತೆ ಪುನರಾವರ್ತನೆಯಾಗುತ್ತದೆ.
ತಿಳಿದುಕೊಳ್ಳಲು ಮೆದುಳು (ಬುದ್ಧಿ) ಬೇಕು. ಯಾರದೇ ಬುದ್ಧಿಯಲ್ಲಿ ಕುಳಿತುಕೊಳ್ಳಬೇಕೆಂದರೆ ಬಹಳ
ಕಷ್ಟವಾಗುತ್ತದೆ. ವಿಶ್ವದ ಇತಿಹಾಸ-ಭೂಗೋಳ ಅಲ್ಲವೆ. ರಾಮರಾಜ್ಯದಲ್ಲಿ ಈ ದೇವಿ-ದೇವತೆಗಳ
ರಾಜ್ಯವಿತ್ತು, ಅವರ ಪೂಜೆಯಾಗುತ್ತಿತ್ತು. ನೀವೇ ಪೂಜ್ಯರು ಮತ್ತು ನೀವೇ ಪೂಜಾರಿಗಳಾಗುತ್ತೀರೆಂದು
ತಂದೆಯು ತಿಳಿಸುತ್ತಾರೆ. ಹಮ್ ಸೊ ಸೊ ಹಮ್(ನಾವೇ ಅವರು) ಎಂಬುದರ ಅರ್ಥವನ್ನು ತಿಳಿಸಲಾಗಿದೆ. ನಾವೇ
ದೇವತೆಗಳು, ನಾವೇ ಕ್ಷತ್ರಿಯರು....... ಇದು ಬಾಜೋಲಿ (ಜಂಟಿ ಚಕ್ರದ ಆಟ) ಆಗಿದೆ. ಇದನ್ನು
ಚೆನ್ನಾಗಿ ತಿಳಿದುಕೊಳ್ಳಬೇಕು ಮತ್ತು ತಿಳಿಸಿಕೊಡುವ ಪ್ರಯತ್ನಪಡಬೇಕು. ತಂದೆಯು ವ್ಯಾಪಾರವನ್ನು
ಬಿಟ್ಟುಬಿಡಿ ಎಂದು ಹೇಳುವುದಿಲ್ಲ ಕೇವಲ ಸತೋಪ್ರಧಾನರಾಗಬೇಕು, ಚರಿತ್ರೆ-ಭೂಗೋಳದ ರಹಸ್ಯವನ್ನು
ತಿಳಿದು ತಿಳಿಸಿಕೊಡಬೇಕು. ಮೂಲಮಾತು ಮನ್ಮನಾಭವ ಆಗಿದೆ. ತನ್ನನ್ನು ಆತ್ಮನೆಂದು ತಿಳಿದು ತಂದೆಯನ್ನು
ನೆನಪು ಮಾಡಿದ್ದೇ ಆದರೆ ಸತೋಪ್ರಧಾನರಾಗುತ್ತೀರಿ. ನಂಬರ್ವನ್ ‘ನೆನಪಿನ ಯಾತ್ರೆ’ ಯಾಗಿದೆ. ನಾನು
ಎಲ್ಲಾ ಮಕ್ಕಳನ್ನು ಜೊತೆಯಲ್ಲಿ ಕರೆದುಕೊಂಡು ಹೋಗುತ್ತೇನೆಂದು ತಂದೆಯು ಹೇಳುತ್ತಾರೆ.
ಸತ್ಯಯುಗದಲ್ಲಿ ಎಷ್ಟು ಕಡಿಮೆ ಜನಸಂಖ್ಯೆಯಿರುತ್ತದೆ, ಕಲಿಯುಗದಲ್ಲಿ ಇಷ್ಟೆಲ್ಲಾ ಜನಸಂಖ್ಯೆಯಿದೆ!
ಯಾರು ಎಲ್ಲರನ್ನೂ ಹಿಂತಿರುಗಿ ಕರೆದುಕೊಂಡು ಹೋಗುತ್ತಾರೆ, ಇಷ್ಟೆಲ್ಲಾ ಕಾಡಿನ (ಹಳೆಯ ಜಗತ್ತಿನ)
ಸ್ವಚ್ಛತೆಯನ್ನು ಯಾರು ಮಾಡಿದರು! ಹೂದೋಟದ ಮಾಲಿ, ಅಂಬಿಗ ಎಂದು ತಂದೆಗೆ ಕರೆಯಲಾಗುತ್ತದೆ. ಅವರೇ
ದುಃಖದಿಂದ ಮುಕ್ತರನ್ನಾಗಿ ಮಾಡಿ ಆ ದಡದಲ್ಲಿ ಕರೆದುಕೊಂಡು ಹೋಗುತ್ತಾರೆ. ವಿದ್ಯೆಯು ಎಷ್ಟೊಂದು
ಮಧುರವೆನಿಸುತ್ತದೆ ಏಕೆಂದರೆ ಜ್ಞಾನವೇ ಸಂಪಾದನೆಯ ಮೂಲಾಧಾರವಾಗಿದೆ. ನಿಮಗೆ ಅಪಾರವಾದಂತಹ ಖಜಾನೆಯು
ಸಿಗುತ್ತದೆ, ಭಕ್ತಿಮಾರ್ಗದಲ್ಲಂತೂ ಏನೂ ಸಿಗುವುದಿಲ್ಲ. ಇಲ್ಲಿ ಕಾಲಿಗೆ ಬೀಳುವ ಮಾತಿಲ್ಲ. ಅವರು
ಗುರುಗಳ ಮುಂದೆ ಸಾಷ್ಟಾಂಗ ನಮಸ್ಕಾರ ಮಾಡುತ್ತಾರೆ, ತಂದೆಯು ಇದೆಲ್ಲದರಿಂದ ಬಿಡಿಸಿಬಿಡುತ್ತಾರೆ.
ಇಂತಹ ತಂದೆಯನ್ನು ನೆನಪು ಮಾಡಬೇಕು, ಅವರು ನಮ್ಮ ತಂದೆಯಾಗಿದ್ದಾರೆ, ಇದನ್ನು
ತಿಳಿದುಕೊಂಡಿದ್ದೀರಲ್ಲವೆ. ತಂದೆಯಿಂದ ಅವಶ್ಯವಾಗಿ ಆಸ್ತಿಯು ಸಿಗುತ್ತದೆ. ಆ ಖುಷಿಯು ಇರುತ್ತದೆ.
ನಾವು ಸಾಹುಕಾರರ ಬಳಿ ಹೋದಾಗ ನಾವು ಬಡವರೆಂದು ನಾಚಿಕೆಯಾಗುತ್ತಿತ್ತು ಎಂದು ಮಕ್ಕಳು ಬರೆಯುತ್ತಾರೆ.
ನೀವು ಬಡವರಾಗಿರುವುದು ಬಹಳ ಒಳ್ಳೆಯದೆಂದು ತಂದೆಯು ತಿಳಿಸುತ್ತಾರೆ. ಸಾಹುಕಾರರಾಗಿದ್ದರೆ ಇಲ್ಲಿಗೆ
ಬರುತ್ತಿರಲೇ ಇಲ್ಲ. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ
ನಮಸ್ತೆ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ನಾವು
ಈಶ್ವರೀಯ ಪರಿವಾರದವರಾಗಿದ್ದೇವೆ - ಸದಾ ಇದೇ ಖುಷಿ ಅಥವಾ ನಶೆಯಲ್ಲಿರಬೇಕು. ಸ್ವಯಂ ಭಗವಂತ ನಮಗೆ
ಓದಿಸುತ್ತಿದ್ದಾರೆ, ಯಾವ ಪ್ರೀತಿಯಿಂದ ನಾವು ದೇವತೆಗಳಾಗುತ್ತೇವೆ ಅವರ ಪ್ರೀತಿಯು ನಮಗೆ ಸಿಗುತ್ತಾ
ಇದೆ.
2. ಇದು
ಮಾಡಿ-ಮಾಡಲ್ಪಟ್ಟಂತಹ ಡ್ರಾಮಾವನ್ನು ಕೂಲಂಕುಷವಾಗಿ ತಿಳಿದುಕೊಳ್ಳಬೇಕು. ಇದರಲ್ಲಿ ಯಾವುದೇ
ತಪ್ಪಾಗಲು ಸಾಧ್ಯವಿಲ್ಲ. ಯಾವ ದೃಶ್ಯವು ಬಂದಿತೋ ಅದು ಮತ್ತೆ ಪುನರಾವರ್ತನೆಯಾಗುತ್ತದೆ. ಈ ಮಾತನ್ನು
ಒಳ್ಳೆಯ ಬುದ್ಧಿಯಿಂದ ತಿಳಿದುಕೊಂಡು ನಡೆದಿದ್ದೇ ಆದರೆ ಎಂದಿಗೂ ಕೋಪ ಬರಲು ಸಾಧ್ಯವಿಲ್ಲ.
ವರದಾನ:
ಬಿರುಗಾಳಿಯನ್ನು
ಬಳುವಳಿ (ಉಡುಗೊರೆ) ಎಂದು ತಿಳಿದು ಸಹಜವಾಗಿ ಕ್ರಾಸ್ ಮಾಡುವಂತಹ ಸಂಪೂರ್ಣ ಮತ್ತು ಸಂಪನ್ನ ಭವ.
ಯಾವಾಗ ಎಲ್ಲರ ಲಕ್ಷ್ಯ
ಸಂಪೂರ್ಣ ಮತ್ತು ಸಂಪನ್ನರಾಗುವುದಾಗಿದೆ ಆಗ ಸಣ್ಣ-ಪುಟ್ಟ ಮಾತುಗಳಲ್ಲಿ ಗಾಬರಿಯಾಗಬೇಡಿ. ಮೂರ್ತಿ
ತಯಾರಾಗುತ್ತಿದೆ ಅಂದಮೇಲೆ ಸ್ವಲ್ಪವಾದರೂ ಸುತ್ತಿಗೆಯ ಏಟು ಖಂಡಿತ ತಗಲುವುದು. ಯಾರು ಎಷ್ಟೇ ಮುಂದೆ
ಹೋಗುತ್ತಾರೆ ಅವರು ಬಿರುಗಾಳಿಯನ್ನು ಹೆಚ್ಚು ಕ್ರಾಸ್ ಮಾಡಬೇಕಾಗುವುದು ಆದರೆ ಆ ಬಿರುಗಾಳಿ ಅವರಿಗೆ
ಬಿರುಗಾಳಿ ಎಂದೆನಿಸುವುದಿಲ್ಲ, ಬಳುವಳಿ(ಉಡುಗೊರೆ) ಎನ್ನಿಸುತ್ತದೆ. ಈ ಬಿರುಗಾಳಿಯೂ ಸಹ
ಅನುಭವಿಯಾಗಲು ಉಡುಗೊರೆಯಾಗಿ ಬಿಡುವುದು, ಆದ್ದರಿಂದ ವಿಘ್ನಗಳನ್ನು ಸ್ವಾಗತಿಸಿ ಮತ್ತು
ಅನುಭವಿಗಳಾಗುತ್ತಾ ಮುಂದುವರೆಯುತ್ತಾ ಹೋಗಿ.
ಸ್ಲೋಗನ್:
ಹುಡುಗಾಟಿಕೆಯನ್ನು ಸಮಾಪ್ತಿ ಮಾಡಬೇಕಾದರೆ ಸ್ವ ಚಿಂತನೆಯಲ್ಲಿರುತ್ತಾ ಸ್ವಯಂನ ಚೆಕ್ಕಿಂಗ್
ಮಾಡಿಕೊಳ್ಳಿ.