24.03.25         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ಈ ಜ್ಞಾನವು ನಿಮ್ಮನ್ನು ಶೀತಲರನ್ನಾಗಿ ಮಾಡುತ್ತದೆ, ಈ ಜ್ಞಾನದಿಂದ ಕಾಮ-ಕ್ರೋಧದ ಅಗ್ನಿಯು ಸಮಾಪ್ತಿಯಾಗುತ್ತದೆ, ಆ ಅಗ್ನಿಯು ಭಕ್ತಿಯಿಂದ ಸಮಾಪ್ತಿಯಾಗುವುದಿಲ್ಲ”

ಪ್ರಶ್ನೆ:
ನೆನಪಿನಲ್ಲಿ ಮುಖ್ಯವಾದ ಪರಿಶ್ರಮವು ಯಾವುದಾಗಿದೆ?

ಉತ್ತರ:
ತಂದೆಯ ನೆನಪಿನಲ್ಲಿ ಕುಳಿತುಕೊಂಡಾಗ ದೇಹವೂ ಸಹ ನೆನಪಿಗೆ ಬರಬಾರದು. ಆತ್ಮಾಭಿಮಾನಿಯಾಗಿ ತಂದೆಯನ್ನು ನೆನಪು ಮಾಡಿ, ಇದೇ ಪರಿಶ್ರಮವಾಗಿದೆ. ಇದರಲ್ಲಿಯೇ ವಿಘ್ನಗಳು ಬರುತ್ತವೆ ಏಕೆಂದರೆ ಅರ್ಧಕಲ್ಪ ದೇಹಾಭಿಮಾನಿಯಾಗಿದ್ದೀರಿ. ಭಕ್ತಿಯೆಂದರೇನೆ ದೇಹದ ನೆನಪು.

ಓಂ ಶಾಂತಿ.
ನೀವು ಮಕ್ಕಳಿಗೆ ತಿಳಿದಿದೆ - ನೆನಪು ಮಾಡಲು ಏಕಾಂತದ ಬಹಳ ಅವಶ್ಯಕತೆಯಿದೆ, ನೀವು ಎಷ್ಟು ಏಕಾಂತ ಅಥವಾ ಶಾಂತಿಯಲ್ಲಿ ಅಥವಾ ತಂದೆಯ ನೆನಪಿನಲ್ಲಿರುತ್ತೀರೋ ಅಷ್ಟು ಗುಂಪಿನಲ್ಲಿರಲು ಸಾಧ್ಯವಿಲ್ಲ. ಶಾಲೆಯಲ್ಲಿಯೂ ಸಹ ಮಕ್ಕಳು ಓದುತ್ತಾರೆಂದರೆ ಏಕಾಂತದಲ್ಲಿ ಹೋಗಿ ಅಭ್ಯಾಸ ಮಾಡುತ್ತಾರೆ. ಇದರಲ್ಲಿಯೂ ಸಹ ಏಕಾಂತವಿರಬೇಕು. ತಿರುಗಾಡಲು ಹೋಗುತ್ತೀರೆಂದರೂ ಸಹ ಅದರಲ್ಲಿಯೂ ನೆನಪಿನ ಯಾತ್ರೆಯು ಮುಖ್ಯವಾಗಿದೆ. ವಿದ್ಯೆಯು ಬಹಳ ಸಹಜವಾಗಿದೆ ಏಕೆಂದರೆ ಅರ್ಧಕಲ್ಪ ಮಾಯೆಯ ರಾಜ್ಯವು ಬರುವುದರಿಂದಲೇ ನೀವು ದೇಹಾಭಿಮಾನಿಗಳಾಗುತ್ತೀರಿ. ಮೊಟ್ಟಮೊದಲನೇ ಶತ್ರು ದೇಹಾಭಿಮಾನವಾಗಿದೆ, ತಂದೆಯನ್ನು ನೆನಪು ಮಾಡುವ ಬದಲು ದೇಹವನ್ನು ನೆನಪು ಮಾಡುತ್ತಾರೆ. ಇದಕ್ಕೆ ದೇಹದ ಅಹಂಕಾರವೆಂದು ಹೇಳಲಾಗುತ್ತದೆ. ಇಲ್ಲಿ ನೀವು ಮಕ್ಕಳಿಗೆ ಆತ್ಮಾಭಿಮಾನಿಗಳಾಗಿ ಎಂದು ಹೇಳಲಾಗುತ್ತದೆ. ಇದರಲ್ಲಿಯೇ ಪರಿಶ್ರಮವಾಗುತ್ತದೆ. ಈಗಂತೂ ಭಕ್ತಿಯು ಬಿಟ್ಟುಹೋಯಿತು, ಭಕ್ತಿಯನ್ನು ಶರೀರದ ಜೊತೆಯೇ ಮಾಡಲಾಗುತ್ತದೆ. ತೀರ್ಥಯಾತ್ರೆಗಳಿಗೆ ಶರೀರದಿಂದಲೇ ಕರೆದುಕೊಂಡು ಹೋಗಬೇಕಾಗುತ್ತದೆ. ದರ್ಶನ ಮಾಡಬೇಕು, ಇದನ್ನು ಮಾಡಬೇಕು ಅಂದರೆ ಶರೀರದಿಂದಲೇ ಹೋಗಬೇಕಾಗುತ್ತದೆ ಆದರೆ ಇಲ್ಲಿ ನಿಮಗೆ ಇದೇ ಚಿಂತನೆ ಮಾಡಬೇಕಾಗಿದೆ - ನಾವಾತ್ಮಗಳಾಗಿದ್ದೇವೆ, ನಾವು ಪರಮಪಿತ ಪರಮಾತ್ಮ ತಂದೆಯನ್ನು ನೆನಪು ಮಾಡಬೇಕಾಗಿದೆ. ಎಷ್ಟು ನೆನಪು ಮಾಡುವಿರೋ ಅಷ್ಟು ಪಾಪಗಳು ತುಂಡಾಗುತ್ತವೆ. ಭಕ್ತಿಮಾರ್ಗದಲ್ಲಿ ಎಂದೂ ಪಾಪಗಳು ಕಳೆಯುವುದಿಲ್ಲ. ಯಾರಾದರೂ ವೃದ್ಧರಿರುತ್ತಾರೆಂದರೆ ಅವರಿಗೆ ಒಳಗೆ ಭಕ್ತಿಮಾಡದಿದ್ದರೆ ನಷ್ಟವಾಗುವುದೇನೋ, ನಾಸ್ತಿಕರಾಗಿಬಿಡುತ್ತೇವೇನೋ ಎಂಬ ಸಂಶಯವಿರುತ್ತದೆ. ಹೇಗೆ ಭಕ್ತಿಯ ಬೆಂಕಿಯು ಬಿದ್ದಿತು ಎಂದರ್ಥ ಮತ್ತು ಜ್ಞಾನದಲ್ಲಿ ಶೀತಲತೆಯಿದೆ, ಇದರಲ್ಲಿ ಕಾಮ-ಕ್ರೋಧದ ಅಗ್ನಿಯು ಸಮಾಪ್ತಿಯಾಗಿಬಿಡುತ್ತದೆ. ಭಕ್ತಿಮಾರ್ಗದಲ್ಲಿ ಮನುಷ್ಯರು ಎಷ್ಟೊಂದು ಭಾವನೆಯನ್ನಿಡುತ್ತಾರೆ, ಪರಿಶ್ರಮಪಡುತ್ತಾರೆ. ತಿಳಿದುಕೊಳ್ಳಿ - ಬದರೀನಾಥಕ್ಕೆ ಹೋದರೆ ಮೂರ್ತಿಯ ಸಾಕ್ಷಾತ್ಕಾರವಾಯಿತೆಂದರೆ ಮತ್ತೇನು! ತಕ್ಷಣ ಆ ಭಾವನೆಯು ಕುಳಿತುಬಿಡುತ್ತದೆ ನಂತರ ಬದರೀನಾಥನ ವಿನಃ ಮತ್ತ್ಯಾರ ನೆನಪು ಬುದ್ಧಿಯಲ್ಲಿರುವುದಿಲ್ಲ. ಮೊದಲಂತೂ ಕಾಲ್ನಡಿಗೆಯಲ್ಲಿಯೇ ಹೋಗುತ್ತಿದ್ದರು. ತಂದೆಯು ತಿಳಿಸುತ್ತಾರೆ - ನಾನು ಅಲ್ಪಕಾಲಕ್ಕಾಗಿ ಮನೋಕಾಮನೆಗಳನ್ನು ಪೂರ್ಣ ಮಾಡುತ್ತೇನೆ, ಸಾಕ್ಷಾತ್ಕಾರ ಮಾಡಿಸುತ್ತೇನೆ ಆದರೆ ಇದರಿಂದ ನಿಮಗೆ ಏನೂ ಸಿಗುವುದಿಲ್ಲ. ನನ್ನ ವಿನಃ ಆಸ್ತಿಯು ಸಿಗುತ್ತದೆಯೇ! ನಿಮಗೆ ಆಸ್ತಿಯು ನನ್ನಿಂದಲೇ ಸಿಗಬೇಕಲ್ಲವೆ. ಇವರಂತೂ ಎಲ್ಲರೂ ದೇಹಧಾರಿಗಳಾಗಿದ್ದಾರೆ. ಆಸ್ತಿಯು ಒಬ್ಬ ರಚಯಿತ ತಂದೆಯಿಂದಲೇ ಸಿಗುತ್ತದೆ. ಉಳಿದಂತೆ ಜಡ ಅಥವಾ ಚೈತನ್ಯ ಏನೆಲ್ಲವೂ ಇದೆಯೋ ಅದೆಲ್ಲವೂ ರಚನೆಯಾಗಿದೆ. ರಚನೆಯಿಂದ ಎಂದೂ ಆಸ್ತಿಯು ಸಿಗಲು ಸಾಧ್ಯವಿಲ್ಲ. ಪತಿತ-ಪಾವನನು ಒಬ್ಬರೇ ತಂದೆಯಾಗಿದ್ದಾರೆ. ಕುಮಾರಿಯರಂತೂ ಸಂಗದೋಷದಿಂದ ತಮ್ಮನ್ನು ಬಹಳ ರಕ್ಷಿಸಿಕೊಳ್ಳಬೇಕಾಗಿದೆ. ತಂದೆಯು ತಿಳಿಸುತ್ತಾರೆ - ಈ ಪತಿತತನದಿಂದ ನೀವು ಆದಿ-ಮಧ್ಯ-ಅಂತ್ಯ ದುಃಖವನ್ನು ಪಡೆಯುತ್ತೀರಿ. ಈಗ ಎಲ್ಲರೂ ಪತಿತರಾಗಿದ್ದಾರೆ, ನೀವೀಗ ಪಾವನರಾಗಬೇಕಾಗಿದೆ. ನಿರಾಕಾರ ತಂದೆಯೇ ಬಂದು ನಿಮಗೆ ಓದಿಸುತ್ತಾರೆ. ನಮಗೆ ಬ್ರಹ್ಮಾರವರು ಓದಿಸುತ್ತಾರೆಂದು ಎಂದಿಗೂ ತಿಳಿಯಬೇಡಿ, ಎಲ್ಲರ ಬುದ್ಧಿಯು ಶಿವತಂದೆಯ ಕಡೆಯೇ ಇರಬೇಕು. ಶಿವತಂದೆಯೇ ಇವರ ಮೂಲಕ ಓದಿಸುತ್ತಾರೆ. ನೀವು ದಾದಿಯರಿಗೂ ಸಹ ಓದಿಸುವವರು ಶಿವತಂದೆಯಾಗಿದ್ದಾರೆ. ಅವರ ಖಾತರಿಯನ್ನೇನು ಮಾಡುತ್ತೀರಿ! ನೀವು ಶಿವತಂದೆಗಾಗಿ ಮಾವು, ದ್ರಾಕ್ಷಿಯನ್ನು ತೆಗೆದುಕೊಂಡು ಬರುತ್ತೀರಿ, ಶಿವತಂದೆಯು ಹೇಳುತ್ತಾರೆ - ನಾನಂತೂ ಅಭೋಕ್ತನಾಗಿದ್ದೇನೆ, ಇದೆಲ್ಲವೂ ನೀವು ಮಕ್ಕಳಿಗಾಗಿಯೇ. ಭಕ್ತರು ನೈವೇದ್ಯವನ್ನಿಟ್ಟು ನಂತರ ಅವರೇ ಹಂಚಿ ತಿನ್ನುತ್ತಾರೆ. ನಾನು ತಿನ್ನುತ್ತೇನೆಯೇ! ನಾನು ನೀವು ಮಕ್ಕಳಿಗೆ ಓದಿಸಿ ಪಾವನರನ್ನಾಗಿ ಮಾಡಲು ಬರುತ್ತೇನೆ. ಪಾವನರಾಗಿ ನೀವು ಇಷ್ಟು ಶ್ರೇಷ್ಠಪದವಿಯನ್ನು ಪಡೆಯುತ್ತೀರಿ. ನನ್ನ ಕರ್ತವ್ಯವೇ ಇದಾಗಿದೆ. ಶಿವಭಗವಾನುವಾಚ ವೆಂದು ಹೇಳುತ್ತಾರೆ, ಬ್ರಹ್ಮಾ ಭಗವಾನುವಾಚ ಎಂದು ಹೇಳುವುದಿಲ್ಲ. ಬ್ರಹ್ಮಾವಾಚವೆಂದು ಹೇಳುವುದಿಲ್ಲ. ಈ ಬ್ರಹ್ಮಾರವರೂ ಸಹ ಮುರುಳಿಯನ್ನು ನುಡಿಸುತ್ತಾರೆ ಆದರೆ ಯಾವಾಗಲೂ ನಮಗೆ ಶಿವತಂದೆಯು ತಿಳಿಸುತ್ತಾರೆಂದೇ ತಿಳಿಯಿರಿ. ಯಾವ ಮಕ್ಕಳಿಗಾದರೂ ಒಳ್ಳೆಯ ಬಾಣ ಹಾಕುವುದಿದ್ದರೆ ನಾನೇ ಅವರಲ್ಲಿ ಪ್ರವೇಶ ಮಾಡುತ್ತೇನೆ. ಜ್ಞಾನದ ಬಾಣವು ತೀಕ್ಷ್ಣವಾಗಿದೆ. ಗಾಯನವಿದೆಯಲ್ಲವೆ - ವಿಜ್ಞಾನದಲ್ಲಿಯೂ ಎಷ್ಟೊಂದು ಶಕ್ತಿಯಿದೆ, ಬಾಂಬು ಇತ್ಯಾದಿಗಳ ಎಷ್ಟೊಂದು ಸ್ಫೋಟವಾಗುತ್ತದೆ. ಆದರೆ ನೀವು ಎಷ್ಟೊಂದು ಶಾಂತಿಯಲ್ಲಿರುತ್ತೀರಿ. ಸೈನ್ಸ್ ನ ಮೇಲೆ ಸೈಲೆನ್ಸ್ ವಿಜಯ ಪಡೆಯುತ್ತದೆ.

ನೀವು ಈ ಸೃಷ್ಟಿಯನ್ನು ಪಾವನ ಮಾಡುತ್ತೀರಿ, ಅಂದಮೇಲೆ ಮೊದಲು ತಮ್ಮನ್ನು ಪಾವನ ಮಾಡಿಕೊಳ್ಳಬೇಕಾಗಿದೆ. ನಾಟಕದನುಸಾರ ಪಾವನರಾಗಲೇಬೇಕಾಗಿದೆ ಆದ್ದರಿಂದ ವಿನಾಶವು ನಿಗಧಿಯಾಗಿದೆ. ನಾಟಕವನ್ನು ಅರಿತುಕೊಂಡು ಬಹಳ ಹರ್ಷಿತರಾಗಿರಬೇಕು. ಈಗ ನೀವು ಶಾಂತಿಧಾಮಕ್ಕೆ ಹೋಗಬೇಕಾಗಿದೆ. ತಂದೆಯು ತಿಳಿಸುತ್ತಾರೆ - ಅದು ನಿಮ್ಮ ಮನೆಯಾಗಿದೆ ಅಂದಮೇಲೆ ಮನೆಗೆ ಖುಷಿಯಿಂದ ಹೋಗಬೇಕಲ್ಲವೆ. ಇದರಲ್ಲಿ ದೇಹೀ-ಅಭಿಮಾನಿಯಾಗುವ ಬಹಳ ಪರಿಶ್ರಮಪಡಬೇಕಾಗಿದೆ. ಈ ನೆನಪಿನ ಯಾತ್ರೆಗಾಗಿಯೇ ತಂದೆಯು ಬಹಳ ಒತ್ತುಕೊಟ್ಟು ಹೇಳುತ್ತಾರೆ, ಇದರಲ್ಲಿಯೇ ಪರಿಶ್ರಮವಿದೆ. ತಂದೆಯು ಪ್ರಶ್ನಿಸುತ್ತಾರೆ - ನಡೆಯುತ್ತಾ-ತಿರುಗಾಡುತ್ತಾ ನೆನಪು ಮಾಡುವುದು ಸಹಜವೋ ಅಥವಾ ಒಂದು ಸ್ಥಾನದಲ್ಲಿ ಕುಳಿತು ನೆನಪು ಮಾಡುವುದು ಸಹಜವೋ? ಭಕ್ತಿಮಾರ್ಗದಲ್ಲಿ ಎಷ್ಟೊಂದು ಮಾಲೆಯನ್ನು ಜಪಿಸುತ್ತಾರೆ, ರಾಮ-ರಾಮ ಎಂದು ಜಪಿಸುತ್ತಿರುತ್ತಾರೆ. ಲಾಭವೇನೂ ಇಲ್ಲ. ತಂದೆಯು ನೀವು ಮಕ್ಕಳಿಗೆ ಬಹಳ ಸಹಜ ಯುಕ್ತಿಯನ್ನು ತಿಳಿಸುತ್ತಾರೆ - ಭೋಜನ ಮಾಡಿ, ಏನಾದರೂ ಮಾಡಿ ಎಲ್ಲವನ್ನೂ ಮಾಡುತ್ತಾ ತಂದೆಯನ್ನು ನೆನಪು ಮಾಡಿ. ಭಕ್ತಿಮಾರ್ಗದಲ್ಲಿ ಶ್ರೀನಾಥದ್ವಾರದಲ್ಲಿ ನೈವೇದ್ಯ ಮಾಡುತ್ತಾರೆ, ಬಾಯಿಗೆ ಪಟ್ಟಿಯನ್ನು ಕಟ್ಟಿಕೊಳ್ಳುತ್ತಾರೆ. ಒಂದುಸ್ವಲ್ಪವೂ ಶಬ್ಧ (ಮಾತು) ಮಾಡುವುದಿಲ್ಲ. ಅದು ಭಕ್ತಿಮಾರ್ಗವಾಗಿದೆ, ನೀವಂತೂ ಇಲ್ಲಿ ತಂದೆಯನ್ನು ನೆನಪು ಮಾಡಬೇಕಾಗಿದೆ. ಅವರಂತೂ ಇಷ್ಟೊಂದು ನೈವೇದ್ಯವನ್ನು ತಯಾರು ಮಾಡುತ್ತಾರೆ ಆದರೂ ಸಹ ಆ ಮೂರ್ತಿಯೇನು ತಿನ್ನುವುದಿಲ್ಲ. ಅಲ್ಲಿರುವ ಮಾರ್ಗದರ್ಶಕರ ಕುಟುಂಬದವರು ಅದನ್ನು ತಿನ್ನುತ್ತಾರೆ. ನಿಮಗಿಲ್ಲಿ ಅರ್ಥವಾಗಿದೆ - ನಮಗೆ ಶಿವತಂದೆಯೇ ಓದಿಸುತ್ತಾರೆ. ಭಕ್ತಿಯಲ್ಲಿ ನಮಗೆ ಶಿವತಂದೆಯು ಓದಿಸುತ್ತಾರೆಂದು ತಿಳಿಯುವುದಿಲ್ಲ ಭಲೆ ಶಿವಪುರಾಣವನ್ನು ರಚಿಸಿದ್ದಾರೆ ಆದರೆ ಅದರಲ್ಲಿ ಶಿವ-ಪಾರ್ವತಿ, ಶಿವ-ಶಂಕರ ಎಲ್ಲರನ್ನೂ ಸೇರಿಸಿಬಿಟ್ಟಿದ್ದಾರೆ. ಅದನ್ನು ಓದುವುದರಿಂದ ಏನೂ ಲಾಭವಾಗುವುದಿಲ್ಲ. ಪ್ರತಿಯೊಬ್ಬರೂ ತಮ್ಮ ಶಾಸ್ತ್ರವನ್ನು ಓದಬೇಕು. ಭಾರತವಾಸಿಗಳದು ಒಂದು ಗೀತೆಯಾಗಿದೆ. ಕ್ರಿಶ್ಚಿಯನ್ನರದು ಒಂದೇ ಬೈಬಲ್ ಆಗಿರುತ್ತದೆ. ಹಾಗೆಯೇ ದೇವಿ-ದೇವತಾ ಧರ್ಮದ ಶಾಸ್ತ್ರವು ಗೀತೆ ಆಗಿದೆ, ಅದರಲ್ಲಿಯೇ ಜ್ಞಾನವಿದೆ ಜ್ಞಾನವನ್ನು ಓದಲಾಗುತ್ತದೆ. ನೀವು ಜ್ಞಾನವನ್ನು ಓದಬೇಕಾಗಿದೆ, ಯಾವ ಗ್ರಂಥಗಳಲ್ಲಿ ಯುದ್ಧ ಮೊದಲಾದ ಮಾತುಗಳಿವೆಯೋ ಅದರೊಂದಿಗೆ ನಿಮಗೆ ಯಾವುದೇ ಕೆಲಸವಿಲ್ಲ. ನಾವು ಯೋಗಬಲದವರು, ಬಾಹುಬಲದವರ ಕಥೆಗಳನ್ನು ಕೇಳುವುದಾದರೂ ಏಕೆ! ವಾಸ್ತವದಲ್ಲಿ ನಿಮ್ಮದು ಯಾವುದೇ ಯುದ್ಧವಿಲ್ಲ, ಯೋಗಬಲದಿಂದ ಪಂಚವಿಕಾರಗಳ ಮೇಲೆ ವಿಜಯಗಳಿಸುತ್ತೀರಿ. ನಿಮ್ಮ ಯುದ್ಧವು ಪಂಚವಿಕಾರಗಳೊಂದಿಗೆ ಇದೆ, ಅಲ್ಲಂತೂ ಮನುಷ್ಯರು ಮನುಷ್ಯರೊಂದಿಗೆ ಹೊಡೆದಾಡುತ್ತಾರೆ. ನೀವು ನಿಮ್ಮ ವಿಕಾರಗಳೊಂದಿಗೆ ಯುದ್ಧ ಮಾಡುತ್ತೀರಿ. ಈ ಮಾತುಗಳನ್ನು ಸನ್ಯಾಸಿ ಮೊದಲಾದವರು ತಿಳಿಸಲು ಸಾಧ್ಯವಿಲ್ಲ. ನಿಮಗೆ ಯಾವುದೇ ಡ್ರಿಲ್ ಮುಂತಾದವು ಯಾವುದನ್ನೂ ಕಲಿಸಲಾಗುವುದಿಲ್ಲ. ನಿಮ್ಮ ಡ್ರಿಲ್ ಒಬ್ಬರೊಂದಿಗಿದೆ. ನಿಮ್ಮದು ಯೋಗಬಲವೇ ಆಗಿದೆ. ನೆನಪಿನ ಬಲದಿಂದ ಪಂಚವಿಕಾರಗಳ ಮೇಲೆ ವಿಜಯ ಪಡೆಯುತ್ತೀರಿ. ಈ ಪಂಚವಿಕಾರಗಳು ಶತ್ರುವಾಗಿದೆ, ಅದರಲ್ಲಿ ಮೊಟ್ಟಮೊದಲನೆಯದು ದೇಹಾಭಿಮಾನವಾಗಿದೆ. ತಂದೆಯು ತಿಳಿಸುತ್ತಾರೆ - ನೀವಂತೂ ಆತ್ಮರಾಗಿದ್ದೀರಲ್ಲವೆ. ನೀವಾತ್ಮಗಳು ಬಂದು ಗರ್ಭದಲ್ಲಿ ಪ್ರವೇಶ ಮಾಡುತ್ತೀರಿ, ನಾನು ಈ ಶರೀರದಲ್ಲಿ ವಿರಾಜಮಾನನಾಗಿದ್ದೇನೆ. ನಾನು ಗರ್ಭದಲ್ಲಿ ಬರುವುದಿಲ್ಲ. ಸತ್ಯಯುಗದಲ್ಲಿ ನೀವು ಗರ್ಭಮಹಲಿನಲ್ಲಿರುತ್ತೀರಿ ನಂತರ ರಾವಣರಾಜ್ಯದಲ್ಲಿ ಗರ್ಭಜೈಲಿನಲ್ಲಿ ಹೋಗುತ್ತೀರಿ. ನಾನಂತೂ ಕೇವಲ ಪ್ರವೇಶ ಮಾಡುತ್ತೇನೆ. ಇದಕ್ಕೆ ದಿವ್ಯಜನ್ಮವೆಂದು ಹೇಳಲಾಗುತ್ತದೆ. ನಾಟಕದನುಸಾರ ನಾನು ಇವರಲ್ಲಿ ಬರಬೇಕಾಗುತ್ತದೆ. ನಾನು ಬಂದಮೇಲೆ ಇವರಿಗೆ ಬ್ರಹ್ಮನೆಂದು ಹೆಸರನ್ನಿಡುತ್ತೇನೆ ಏಕೆಂದರೆ ನನ್ನವರಾದರಲ್ಲವೆ. ಹೇಗೆ ದತ್ತುಮಾಡಿಕೊಳ್ಳುತ್ತಾರೆಂದರೆ ಎಷ್ಟು ಒಳ್ಳೊಳ್ಳೆಯ ಹೆಸರುಗಳನ್ನಿಡುತ್ತಾರೆ. ಆರಂಭದಲ್ಲಿ ನಿಮಗೂ ಸಹ ಬಹಳ ಒಳ್ಳೊಳ್ಳೆಯ ಹೆಸರುಗಳನ್ನಿಟ್ಟಿದ್ದೆವು. ಸಂದೇಶಿಯ ಮೂಲಕ ಬಹಳ ವಿಚಿತ್ರವಾದ ಹೆಸರುಗಳು ಉದ್ದವಾದ ಪಟ್ಟಿಯೇ ಬಂದಿತ್ತು. ತಂದೆಗೆ ಎಲ್ಲಾ ಹೆಸರುಗಳು ನೆನಪಿಲ್ಲ. ಹೆಸರಿನೊಂದಿಗೆ ಯಾವುದೇ ಕೆಲಸವಿಲ್ಲ. ಶರೀರದ ಮೇಲೆ ಹೆಸರನ್ನಿಡಲಾಗುತ್ತದೆಯಲ್ಲವೆ. ಈಗ ತಂದೆಯು ತಿಳಿಸುತ್ತಾರೆ - ತಮ್ಮನ್ನು ಆತ್ಮನೆಂದು ತಿಳಿಯಿರಿ, ತಂದೆಯನ್ನು ನೆನಪು ಮಾಡಿ. ಸಾಕು. ನಿಮಗೆ ತಿಳಿದಿದೆ - ನಾವು ಪೂಜ್ಯ ದೇವತೆಗಳಾಗುತ್ತೇವೆ ಮತ್ತು ರಾಜ್ಯಮಾಡುತ್ತೇವೆ. ನಂತರ ಭಕ್ತಿಮಾರ್ಗದಲ್ಲಿ ನಮ್ಮದೇ ಚಿತ್ರಗಳನ್ನು ಮಾಡುತ್ತೇವೆ. ದೇವಿಯರ ಚಿತ್ರಗಳನ್ನು ಬಹಳಷ್ಟು ಮಾಡಿಸುತ್ತಾರೆ. ಆತ್ಮಗಳಿಗೂ ಪೂಜೆಯು ನಡೆಯುತ್ತದೆ. ಮಣ್ಣಿನ ಸಾಲಿಗ್ರಾಮಗಳನ್ನು ಮಾಡಿ ಮತ್ತೆ ರಾತ್ರಿಯಲ್ಲಿ ಅದನ್ನು ಹೊಡೆದುಹಾಕುತ್ತಾರೆ. ದೇವಿಯರಿಗೂ ಸಹ ಶೃಂಗಾರ ಮಾಡಿ, ಪೂಜೆಮಾಡಿ ಮತ್ತೆ ಸಮುದ್ರದಲ್ಲಿ ಹಾಕಿಬಿಡುತ್ತಾರೆ. ಇದಕ್ಕೆ ತಂದೆಯು ತಿಳಿಸುತ್ತಾರೆ - ನನ್ನ ರೂಪವನ್ನೂ ಮಾಡಿ ಅದಕ್ಕೆ ತಿನ್ನಿಸಿ-ಕುಡಿಸಿ ಮತ್ತೆ ನನ್ನನ್ನು ಕಲ್ಲು, ಮುಳ್ಳಿನಲ್ಲಿದ್ದಾರೆಂದು ಹೇಳಿಬಿಡುತ್ತಾರೆ. ಎಲ್ಲರಿಗಿಂತ ಹೆಚ್ಚಿನ ದುರ್ದೆಶೆ ನನಗೆ ಮಾಡುತ್ತಾರೆ. ನೀವು ಎಷ್ಟೊಂದು ಬಡವರಾಗಿಬಿಟ್ಟಿದ್ದೀರಿ! ಬಡವರೇ ನಂತರ ಶ್ರೇಷ್ಠ ಪದವಿಯನ್ನು ಪಡೆಯುತ್ತಾರೆ. ಸಾಹುಕಾರರು ಈ ಪದವಿಯನ್ನು ಪಡೆಯುವುದು ಪರಿಶ್ರಮ ಇದೆ. ತಂದೆಯೂ ಸಹ ಸಾಹುಕಾರರಿಂದ ತೆಗೆದುಕೊಂಡು ಏನು ಮಾಡುತ್ತಾರೆ! ಇಲ್ಲಂತೂ ಬಡ ಮಕ್ಕಳ ಒಂದೊಂದು ಪೈಸೆಯ ಸಹಯೋಗದಿಂದ ಈ ಕಟ್ಟಡಗಳಾಗುತ್ತವೆ. ಬಾಬಾ, ನಮ್ಮ ಒಂದು ಇಟ್ಟಿಗೆಯನ್ನು ಸೇವೆಯಲ್ಲಿ ಉಪಯೋಗಿಸಿ ಎಂದು ಹೇಳುತ್ತಾರೆ. ಇದಕ್ಕೆ ಪ್ರತಿಫಲವಾಗಿ ನಮಗೆ ಚಿನ್ನ, ಬೆಳ್ಳಿಯ ಮಹಲುಗಳೇ ಸಿಗುತ್ತವೆ ಎಂದು ತಿಳಿಯುತ್ತಾರೆ. ಸತ್ಯಯುಗದಲ್ಲಂತೂ ಚಿನ್ನವು ಯಥೇಚ್ಛವಾಗಿರುತ್ತದೆ. ಚಿನ್ನದ ಇಟ್ಟಿಗೆಗಳೇ ಇರುತ್ತವೆ. ಅದರಿಂದಲೇ ಮನೆಗಳನ್ನು ಕಟ್ಟುತ್ತಾರೆ. ಆದ್ದರಿಂದ ತಂದೆಯು ಬಹಳ ಪ್ರೀತಿಯಿಂದ ತಿಳಿಸುತ್ತಾರೆ - ಮಧುರಾತಿ ಮಧುರ ಮಕ್ಕಳೇ, ನನ್ನನ್ನು ನೆನಪು ಮಾಡಿ. ಈಗ ನಾಟಕವು ಮುಕ್ತಾಯವಾಗುತ್ತದೆ.

ತಂದೆಯು ಬಡಮಕ್ಕಳಿಗೆ ಸಾಹುಕಾರರಾಗುವ ಯುಕ್ತಿಯನ್ನು ತಿಳಿಸುತ್ತಾರೆ - ಮಧುರ ಮಕ್ಕಳೇ, ನಿಮ್ಮ ಬಳಿ ಏನೆಲ್ಲವೂ ಇದೆಯೋ ಅದನ್ನು ವರ್ಗಾವಣೆ ಮಾಡಿಬಿಡಿ. ಇಲ್ಲಂತೂ ಏನೂ ಉಳಿಯುವುದಿಲ್ಲ. ಯಾರಿಲ್ಲಿ ವರ್ಗಾವಣೆ (ಸಫಲ) ಮಾಡುವರೋ ಅವರಿಗೆ ಹೊಸಪ್ರಪಂಚದಲ್ಲಿ ಒಂದಕ್ಕೆ ನೂರರಷ್ಟು ಸಿಗುವುದು. ಇಲ್ಲಿ ತಂದೆಯೇನೂ ಬೇಡುವುದಿಲ್ಲ. ಅವರಂತೂ ದಾತನಾಗಿದ್ದಾರೆ. ನೀವು ಪುಣ್ಯಾತ್ಮರಾಗುವ ಯುಕ್ತಿಯನ್ನು ಇಲ್ಲಿ ತಿಳಿಸಲಾಗುತ್ತದೆ ಏಕೆಂದರೆ ಇಲ್ಲಿರುವುದೆಲ್ಲವೂ ಮಣ್ಣುಪಾಲಾಗಲಿದೆ ಆದ್ದರಿಂದ ಇಲ್ಲಿ ಸಫಲ ಮಾಡುತ್ತೀರೆಂದರೆ ನಿಮಗೆ ಹೊಸಪ್ರಪಂಚದಲ್ಲಿ ಸಿಗುವುದು. ಈಗ ಹಳೆಯ ಪ್ರಪಂಚದ ವಿನಾಶದ ಸಮಯವಾಗಿದೆ, ಇದ್ಯಾವುದೂ ಕೆಲಸಕ್ಕೆ ಬರುವುದಿಲ್ಲ ಆದ್ದರಿಂದ ತಂದೆಯು ತಿಳಿಸುತ್ತಾರೆ - ಮನೆ-ಮನೆಯಲ್ಲಿಯೂ ಆಸ್ಪತ್ರೆ ಕಮ್ ಯುನಿವರ್ಸಿಟಿಯನ್ನು ತೆರೆಯಿರಿ. ಇದರಿಂದ ಆರೋಗ್ಯ ಮತ್ತು ಐಶ್ವರ್ಯ ಸಿಗುವುದು, ಇದೇ ಮುಖ್ಯವಾಗಿದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ನಮಸ್ತೆ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ರಾತ್ರಿ ಕ್ಲಾಸ್-12-3-68

ಈ ಸಮಯ ನೀವು ಬಡವರು, ಸಾಧಾರಣ ಮಾತೆಯರು ಪುರುಷಾರ್ಥ ಮಾಡಿ ಶ್ರೇಷ್ಠ ಪದವಿಯನ್ನು ಪಡೆದುಬಿಡುವಿರಿ. ಯಜ್ಞದಲ್ಲಿ ಸಹಾಯವನ್ನು ಮಾತೆಯರೆ ಬಹಳ ಮಾಡುತ್ತಾರೆ, ಪುರುಷರು ಸಹಾಯ ಮಾಡುವವರು ಬಹಳ ಕಡಿಮೆ ಇದ್ದಾರೆ. ಮಾತೆಯರಿಗೆ ವಾರಿಸ್ತನದ ನಶೆ ಇರುವುದಿಲ್ಲ. ಅವರು ಬೀಜವನ್ನು ಬಿತ್ತುತ್ತಿರುತ್ತಾರೆ, ತಮ್ಮ ಜೀವನವನ್ನು ಮಾಡಿಕೊಳ್ಳುತ್ತಿರುತ್ತಾರೆ. ನಿಮ್ಮ ಜ್ಞಾನವಾಗಿದೆ ಯಥಾರ್ಥ, ಬಾಕಿ ಎಲ್ಲ್ಲಾ ಭಕ್ತಿ. ಆತ್ಮೀಯ ತಂದೆಯೇ ಬಂದು ಜ್ಞಾನವನ್ನು ಕೊಡುತ್ತಾರೆ. ತಂದೆಯನ್ನು ತಿಳಿದುಕೊಂಡಿರೆಂದರೆ ತಂದೆಯಿಂದ ಆಸ್ತಿಯನ್ನು ಖಂಡಿತ ಪಡೆಯುವಿರಿ. ನಿಮಗೆ ತಂದೆ ಪುರುಷಾರ್ಥ ಮಾಡಿಸುತ್ತಿರುತ್ತಾರೆ, ತಿಳುವಳಿಕೆ ಕೊಡುತ್ತಿರುತ್ತಾರೆ. ಸಮಯ ವ್ಯರ್ಥ ಮಾಡಬೇಡಿ. ತಂದೆಗೆ ಗೊತ್ತಿದೆ ಕೆಲವರು ಒಳ್ಳೆಯ ಪುರುಷಾರ್ಥಿಗಳು ಕೆಲವರು ಮೀಡಿಯಂ, ಕೆಲವರು ಮೂರನೇ ಗ್ರೇಡ್. ಬಾಬಾರವರನ್ನು ಕೇಳಿದರೆ ಬಾಬಾ ತಕ್ಷಣ ಹೇಳುತ್ತಾರಲ್ಲವೆ. ಭಗವಂತ ಬಂದು ಯಾವ ಜ್ಞಾನ ಕಲಿಸುತ್ತಾರೆ ಅದು ಮತ್ತೆ ಪ್ರಾಯಃಲೋಪವಾಗಿಬಿಡುತ್ತದೆ. ಇದು ಯಾರಿಗೂ ಗೊತ್ತಿಲ್ಲ. ಡ್ರಾಮದ ಪ್ಲಾನ್ ಅನುಸಾರ ಇದು ಭಕ್ತಿಮಾರ್ಗವಾಗಿದೆ, ಇದರಿಂದ ಯಾರೂ ಮುಕ್ತಿಯನ್ನು ಪ್ರಾಪ್ತಿಮಾಡಿಕೊಲ್ಳಲು ಸಾಧ್ಯವಿಲ್ಲ. ಸತ್ಯಯುಗಕ್ಕೆ ಯಾರೂ ಹೋಗಲು ಸಾಧ್ಯವಿಲ್ಲ. ಈಗ ನೀವು ಮಕ್ಕಳು ಪುರುಷಾರ್ಥ ಮಾಡುತ್ತಿರುವಿರಿ. ಕಲ್ಪದ ಹಿಂದಿನ ತರಹ ಎಷ್ಟು ಯಾರು ಪುರುಷಾರ್ಥ ಮಾಡಿದ್ದಾರೆ, ಅಷ್ಟೇ ಮಾಡುತ್ತಿರುತ್ತಾರೆ. ತಂದೆ ತಿಳಿಯುತ್ತಾರೆ ತಮ್ಮ ಕಲ್ಯಾಣವನ್ನು ಯಾರು ಮಾಡುತ್ತಿದ್ದಾರೆ ಎಂದು. ತಂದೆಯಂತೂ ಹೇಳುತ್ತಾರೆ ಪ್ರತಿದಿನ ಈ ಲಕ್ಷ್ಮೀನಾರಾಯಣ ಚಿತ್ರದ ಎದುರು ಬಂದು ಕುಳಿತುಕೊಳ್ಳಿ. ಬಾಬಾ ನಿಮ್ಮ ಶ್ರೀಮತದ ಮೇಲೆ ಈ ಆಸ್ತಿಯನ್ನು ಖಂಡಿತ ಪಡೆಯುತ್ತೇವೆ. ನಿಮ್ಮ ಸಮಾನ ಮಾಡುವಂತಹ ಸೇವೆಯ ಆಸಕ್ತಿ ಖಂಡಿತ ಬೇಕು. ಸೇವಾಕೇಂದ್ರದಲ್ಲಿರುವವರಿಗೂ ಸಹ ಬರೆಯುತ್ತೇನೆ, ಇಷ್ಟು ವರ್ಷ ಓದಿರುವಿರಿ ಯಾರಿಗೂ ಓದಿಸಲು ಆಗಲಿಲ್ಲವೆಂದರೆ ಬಾಕಿ ನೀವು ಏನು ಓದಿರುವಿರಿ! ಮಕ್ಕಳ ಉನ್ನತಿಯಂತೂ ಮಾಡಬೇಕಲ್ಲವೇ. ಬುದ್ಧಿಯಲ್ಲಿ ಇಡೀ ದಿನ ಸೇವೆಯ ಚಿಂತೆ ನಡೆಯುತ್ತಿರಬೇಕು.

ನೀವು ವಾನಪ್ರಸ್ತಿಗಳಲ್ಲವೆ. ವಾನಪ್ರಸ್ತಿಗಳಿಗೂ ಸಹಾ ಆಶ್ರಮವಿರುತ್ತದೆ. ವಾನಪ್ರಸ್ತಿಗಳ ಹತ್ತಿರ ಹೋಗಬೇಕಿದೆ, ಸಾಯುವ ಮೊದಲು ಲಕ್ಷ್ಯವನ್ನಂತೂ ತಿಳಿಸಿ. ವಾಣಿಯಿಂದ ದೂರ ನಿಮ್ಮ ಆತ್ಮ ಹೇಗೆ ಹೋಗುವುದು! ಪತಿತ ಆತ್ಮವಂತು ಹೋಗಲು ಸಾಧ್ಯವಿಲ್ಲ. ಭಗವಾನ್ ಉವಾಚ ನನ್ನೊಬ್ಬನನ್ನೇ ನೆನಪು ಮಾಡಿ (ಮಾಮೇಕಮ್ ಯಾದ್ ಕರೋ) ಆಗ ನೀವು ವಾನಪ್ರಸ್ತದಲ್ಲಿ ಹೋಗಿಬಿಡುವಿರಿ. ಬನಾರಸ್ನಲ್ಲಿಯೂ ಸಹ ಸೇವೆ ಬಹಳಷ್ಟಿದೆ. ಬಹಳಷ್ಟು ಸಾಧು ಜನರು ಕಾಶಿವಾಸಕ್ಕಾಗಿ ಅಲ್ಲಿ ಹೋಗಿ ನೆಲೆಸುತ್ತಾರೆ, ಇಡೀ ದಿನ ಹೇಳುತ್ತಿರುತ್ತಾರೆ ಶಿವಕಾಶಿ ವಿಶ್ವನಾಥ ಗಂಗಾ. ನಿಮ್ಮ ಒಳಗೆ ಸದಾ ಖುಷಿಯ ಚಪ್ಪಾಳೆ ಹೊಡೆಯುತ್ತಿರಬೇಕು. ವಿಧ್ಯಾರ್ಥಿಗಳಾಗಿರುವಿರಲ್ಲವೆ! ಸೇವೆಯನ್ನೂ ಮಾಡುವಿರಿ, ಓದುವಿರಿ ಸಹ. ತಂದೆಯನ್ನು ನೆನಪು ಮಾಡಬೇಕು, ಆಸ್ತಿಯನ್ನು ಪಡೆಯಬೇಕು. ನಾವು ಈಗ ಶಿವಬಾಬಾನ ಬಳಿ ಹೋಗುವೆವು. ಇದು ಮನ್ಮನಾಭವವಾಗಿದೆ. ಆದರೆ ಬಹಳ ಜನರಿಗೆ ನೆನಪೇ ಇರುವುದಿಲ್ಲ. ಇಲ್ಲಸಲ್ಲದ ಮಾತುಗಳನ್ನಾಡುತ್ತಿರುತ್ತಾರೆ. ಮೂಲ ಮಾತಾಗಿದೆ ನೆನಪಿನದು. ನೆನಪು ಖುಷಿಯನ್ನು ತರುವುದು. ಎಲ್ಲರೂ ಬಯಸುತ್ತಾರೆ ವಿಶ್ವದಲ್ಲಿ ಶಾಂತಿ ನೆಲಸಲಿ ಎಂದು. ಬಾಬಾ ಸಹಾ ಹೇಳುತ್ತಾರೆ ಅವರಿಗೆ ತಿಳಿಸಿ ವಿಶ್ವದಲ್ಲಿ ಶಾಂತಿ ಈಗ ಸ್ಥಾಪನೆಯಾಗುತ್ತಿದೆ, ಅದಕ್ಕಾಗಿ ಬಾಬಾ ಲಕ್ಷ್ಮೀ-ನಾರಾಯಣರ ಚಿತ್ರಕ್ಕೆ ಹೆಚ್ಚಿನ ಮಹತ್ವ ಕೊಡುತ್ತಾರೆ. ಹೇಳಿ, ಈ ಪ್ರಪಂಚ ಸ್ಥಾಪನೆಯಾಗುತ್ತಿದೆ, ಎಲ್ಲಿ ಸುಖ-ಶಾಂತಿ, ಪವಿತ್ರತೆ ಎಲ್ಲವೂ ಇತ್ತು. ಎಲ್ಲರೂ ಹೇಳುತ್ತಾರೆ ವಿಶ್ವದಲ್ಲಿ ಶಾಂತಿ ನೆಲಸಲಿ ಎಂದು. ಪಾರಿತೋಷಕಗಳೂ ಅನೇಕರಿಗೆ ಸಿಗುತ್ತಿರುತ್ತೆ. ಪ್ರಪಂಚದಲ್ಲಿ ಶಾಂತಿ ಸ್ಥಾಪನೆ ಮಾಡುವವರು ಮಾಲೀಕರಾಗುತ್ತಾರಲ್ಲವೆ. ಇವರ ರಾಜ್ಯದಲ್ಲಿ ವಿಶ್ವದಲ್ಲಿ ಶಾಂತಿ ಇತ್ತು. ಒಂದು ಬಾಷೆ, ಒಂದು ರಾಜ್ಯ, ಒಂದು ಧರ್ಮವಿತ್ತು. ಬಾಕಿ ಎಲ್ಲ ಆತ್ಮರು ನಿರಾಕಾರಿ ಪ್ರಪಂಚದಲ್ಲಿದ್ದರು. ಇಂತಹ ಪ್ರಪಂಚವನ್ನು ಯಾರು ಸ್ಥಾಪನೆ ಮಾಡಿದರು! ಶಾಂತಿ ಯಾರು ಸ್ಥಾಪನೆ ಮಾಡಿದರು! ವಿದೇಶಿಯರೂ ಸಹಾ ತಿಳಿಯುತ್ತಾರೆ ಇಲ್ಲಿ ಸ್ವರ್ಗ(ಪ್ಯಾರಡೈಸ್) ಇತ್ತು, ಇವರೆ ರಾಜ್ಯ ಇತ್ತು. ಪ್ರಪಂಚದಲ್ಲಿ ಶಾಂತಿಯಂತೂ ಈಗ ಸ್ಥಾಪನೆಯಾಗುತ್ತಿದೆ. ಬಾಬಾ ತಿಳಿಸಿದ್ದರು ಫ್ರಭಾತ ಫೇರಿಯಲ್ಲೂ ಸಹಾ ಲಕ್ಷ್ಮೀ-ನಾರಾಯಣರ ಚಿತ್ರವನ್ನು ತೆಗೆಯಿರಿ. ಯಾವುದರಿಂದ ಎಲ್ಲರ ಕಿವಿಯಲ್ಲಿಯೂ ಶಬ್ಧ ಬೀಳಲಿ ಈ ರಾಜ್ಯ ಸ್ಥಾಪನೆಯಾಗುತ್ತಿದೆ. ನರಕದ ವಿನಾಶ ಎದುರಿಗೆ ನಿಂತಿದೆ. ಇದನ್ನಂತೂ ತಿಳಿದಿರುವಿರಿ ಡ್ರಾಮಾನುಸಾರ ಇನ್ನು ಸ್ವಲ್ಪ ತಡವಾಗಿದೆ. ದೊಡ್ಡ-ದೊಡ್ಡವರ ಅಧೃಷ್ಟದಲ್ಲಿ ಇನ್ನೂ ಇಲ್ಲ. ಆದರೂ ಸಹಾ ಬಾಬಾ ಪುರುಷಾರ್ತ ಮಾಡಿಸುತ್ತಿರುತ್ತಾರೆ. ಡ್ರಾಮಾನುಸಾರ ಸೇವೆ ನಡೆಯುತ್ತಿದೆ. ಒಳ್ಳಯದು. ಗುಡ್ ನೈಟ್.

ಧಾರಣೆಗಾಗಿ ಮುಖ್ಯಸಾರ-
1. ಸಂಗದೋಷದಿಂದ ತಮ್ಮನ್ನು ಬಹಳ-ಬಹಳ ರಕ್ಷಿಸಿಕೊಳ್ಳಬೇಕಾಗಿದೆ. ಪತಿತರ ಸಂಗದಲ್ಲಿ ಎಂದೂ ಬರಬಾರದು. ಶಾಂತಿಯ ಬಲದಿಂದ ಈ ಸೃಷ್ಟಿಯನ್ನು ಪಾವನ ಮಾಡುವ ಸೇವೆ ಮಾಡಬೇಕಾಗಿದೆ.

2.ನಾಟಕವನ್ನು ಚೆನ್ನಾಗಿ ಅರ್ಥಮಾಡಿಕೊಂಡು ಹರ್ಷಿತರಾಗಿರಬೇಕಾಗಿದೆ. ತಮ್ಮದೆಲ್ಲವನ್ನೂ ಹೊಸ ಪ್ರಪಂಚಕ್ಕಾಗಿ ವರ್ಗಾವಣೆ ಮಾಡಬೇಕಾಗಿದೆ.

ವರದಾನ:
ತಂದೆಯ ಮುಖಾಂತರ ಸಫಲತೆಯ ತಿಲಕ ಪ್ರಾಪ್ತಿಮಾಡಿಕೊಳ್ಳುವಂತಹ ಸದಾ ಆಜ್ಞಾಕಾರಿ, ಹೃದಯಸಿಂಹಾಸನಾಧಿಕಾರಿ ಭವ

ಭಾಗ್ಯವಿಧಾತ ತಂದೆ ಪ್ರತಿದಿನ ಅಮೃತವೇಳೆ ತನ್ನ ಆಜ್ಞಾಕಾರಿ ಮಕ್ಕಳಿಗೆ ಸಫಲತೆಯ ತಿಲಕ ವಿಡುತ್ತಾರೆ. ಆಜ್ಞಾಕಾರಿ ಬ್ರಾಹ್ಮಣ ಮಕ್ಕಳು ಎಂದೂ ಪರಿಶ್ರಮ ಅಥವಾ ಕಷ್ಟವೆಂಬ ಶಬ್ದವನ್ನು ಬಾಯಿಂದಮಾತ್ರವಲ್ಲ ಸಂಕಲ್ಪದಿಂದಲೂ ತರುವಮತಿಲ್ಲ. ಅವರು ಸಹಜಯೋಗಿಗಳಾಗಿಬಿಡುತ್ತಾರೆ ಆದ್ದರಿಂದ ಎಂದೂ ಸಹ ನಿರುತ್ಸಾಹಿಗಳಾಗಬೇಡಿ ಆದರೆ ಸದಾ ಹೃದಯಸಿಂಹಾಸನಾಧಿಕಾರಿಗಳಾಗಿ ದಯಾಹೃದಯಿಗಳಾಗಿ ಅಹಂ-ಭಾವ ಮತ್ತು ವೆಹಮ್-ಭಾವವನ್ನು ಸಮಾಪ್ತಿ ಮಾಡಿ.

ಸ್ಲೋಗನ್:
ವಿಶ್ವ ಪರಿವರ್ತನೆಯ ತಾರೀಖನ್ನು ಯೋಚಿಸಬೇಡಿ, ಸ್ವಯಂನ ಪರಿವರ್ತನೆಯ ಘಳಿಗೆಯನ್ನು ನಿಶ್ಚಯ ಮಾಡಿ.

ಅವ್ಯಕ್ತ ಸೂಚನೆ - ಸತ್ಯ ಮತ್ತು ಸಭ್ಯತೆ ರೊಪಿ ಕಲ್ಚರ್(ಸಂಸ್ಕೃತಿಯನ್ನು) ತಮ್ಮದಾಗಿಸಿಕೊಳ್ಳಿರಿ

ಯಾರು ಪವಿತ್ರತೆಯ ಪರ್ಸನಾಲಿಟಿಯಿಂದ ಸಂಪನ್ನ ರಾಯಲ್ ಆತ್ಮಗಳಾಗಿದ್ದಾರೆ ಅವರಿಗೆ ಸಭ್ಯತೆಯ ದೇವಿ ಎಂದು ಹೇಳಲಾಗುತ್ತದೆ. ಅವರಲ್ಲಿ ಕ್ರೋಧ ವಿಕಾರದ ಇಂಪ್ಯುರಿಟಿ ಸಹ ಇರಲು ಸಾಧ್ಯವಿಲ್ಲ. ಕ್ರೋಧದ ಸೂಕ್ಷ್ಮ ರೂಪ ಅಸೂಯೆ, ದ್ವೇಷ, ತಿರಸ್ಕಾರ ಒಂದು ವೇಳೆ ಒಳಗೆ ಇದ್ದರೆ ಇದು ಸಹ ಅಗ್ನಿಯಾಗಿದೆ ಯಾವುದು ಒಳಗಿಂದೊಳಗೆ ಸುಡುತ್ತಿರುತ್ತದೆ. ಹೊರಗಿನಿಂದ ಕೆಂಪು ಕಾಣಿಸುವುದಿಲ್ಲ, ಆದರೆ ಕಪ್ಪಾಗಿ ಹೋಗುತ್ತಾರೆ. ಈಗ ಈ ಕಪ್ಪುತನವನ್ನು ಸಮಾಪ್ತಿ ಮಾಡಿ ಸತ್ಯ ಹಾಗೂ ಸ್ವಚ್ಛರಾಗಿ.