24.04.25         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ವೈಜಯಂತಿಯ ಮಾಲೆಯಲ್ಲಿ ಬರಲು ನಿರಂತರ ತಂದೆಯನ್ನು ನೆನಪು ಮಾಡಿ, ತಮ್ಮ ಸಮಯವನ್ನು ವ್ಯರ್ಥ ಮಾಡಬೇಡಿ, ವಿದ್ಯೆಯ ಮೇಲೆ ಸಂಪೂರ್ಣ ಗಮನ ಕೊಡಿ”

ಪ್ರಶ್ನೆ:
ತಂದೆಯು ತಮ್ಮ ಮಕ್ಕಳೊಂದಿಗೆ ಯಾವ ಒಂದು ನಿವೇದನೆ ಮಾಡಿಕೊಳ್ಳುತ್ತಾರೆ?

ಉತ್ತರ:
ತಂದೆಯು ನಿವೇದನೆ ಮಾಡಿಕೊಳ್ಳುತ್ತಾರೆ - ಮಧುರ ಮಕ್ಕಳೇ, ಒಳ್ಳೆಯ ರೀತಿಯಲ್ಲಿ ಓದುತ್ತಾ ಇರಿ, ತಂದೆಯ ದಾಡಿಗಾದರೂ ಗೌರವ ಕೊಡಿ. ತಂದೆಯ ಹೆಸರನ್ನು ಕೆಡಿಸುವಂತಹ ಯಾವುದೇ ಕೊಳಕು ಕೆಲಸವನ್ನು ಮಾಡಬೇಡಿ, ಸತ್ಯತಂದೆ, ಸತ್ಯಶಿಕ್ಷಕ, ಸದ್ಗುರುವಿನ ನಿಂದನೆ ಮಾಡಿಸಬೇಡಿ. ಎಲ್ಲಿಯವರೆಗೆ ವಿದ್ಯಾಭ್ಯಾಸ ನಡೆಯುವುದೋ ಅಲ್ಲಿಯವರೆಗೆ ಅವಶ್ಯವಾಗಿ ಪವಿತ್ರರಾಗಿರುತ್ತೇವೆಂದು ಪ್ರತಿಜ್ಞೆ ಮಾಡಿ.

ಗೀತೆ:
ನಿಮ್ಮನ್ನು ಪಡೆದ ನಾನು ಜಗತ್ತನ್ನೇ ಪಡೆದೆನು............

ಓಂ ಶಾಂತಿ.
ನಿಮ್ಮನ್ನು ಪಡೆದು ಇಡೀ ಜಗತ್ತಿನ ರಾಜ್ಯವನ್ನೇ ಪಡೆಯುತ್ತೇವೆಂದು ಯಾರು ಹೇಳಿದರು? ಈಗ ನೀವು ವಿದ್ಯಾರ್ಥಿಗಳೂ ಆಗಿದ್ದೀರಿ, ಮಕ್ಕಳೂ ಆಗಿದ್ದೀರಿ. ನಿಮಗೆ ತಿಳಿದಿದೆ - ಬೇಹದ್ದಿನ ತಂದೆಯು ನಾವು ಮಕ್ಕಳನ್ನು ವಿಶ್ವದ ಮಾಲೀಕರನ್ನಾಗಿ ಮಾಡಲು ಬಂದಿದ್ದಾರೆ, ಅವರ ಸನ್ಮುಖದಲ್ಲಿ ನಾವು ಕುಳಿತಿದ್ದೇವೆ ಮತ್ತು ರಾಜಯೋಗವನ್ನು ಕಲಿಯುತ್ತಿದ್ದೇವೆ ಅರ್ಥಾತ್ ವಿಶ್ವದ ರಾಜಕುಮಾರ-ಕುಮಾರಿಯರಾಗುವ ವಿದ್ಯೆಯನ್ನು ಓದಬೇಕು. ನೀವು ಇಲ್ಲಿಗೆ ಓದಲು ಬಂದಿದ್ದೀರಿ. ಈ ಗೀತೆಯು ಭಕ್ತಿಮಾರ್ಗದಲ್ಲಿ ಮಾಡಲಾಗಿದೆ. ಈಗ ಮಕ್ಕಳಿಗೆ ಬುದ್ಧಿಯಿಂದ ತಿಳಿದಿದೆ - ನಾವು ವಿಶ್ವದ ಮಹಾರಾಜ-ಮಹಾರಾಣಿಯರಾಗುತ್ತೇವೆ. ತಂದೆಯು ಜ್ಞಾನಸಾಗರನಾಗಿದ್ದಾರೆ. ಪಾರಲೌಕಿಕ ಶಿಕ್ಷಕನು ಕುಳಿತು ಆತ್ಮಗಳಿಗೆ ಓದಿಸುತ್ತಾರೆ. ಆತ್ಮವು ಈ ಶರೀರರೂಪಿ ಕರ್ಮೇಂದ್ರಿಯಗಳ ಮೂಲಕ ತಿಳಿದುಕೊಂಡಿದೆ - ನಾವು ತಂದೆಯಿಂದ ವಿಶ್ವದ ಕಿರೀಟಧಾರಿ ರಾಜಕುಮಾರ-ಕುಮಾರಿಯರಾಗಲು ಪಾಠಶಾಲೆಯಲ್ಲಿ ಕುಳಿತುಕೊಂಡಿದ್ದೇವೆ ಅಂದಾಗ ಎಷ್ಟೊಂದು ನಶೆಯಿರಬೇಕು. ತಮ್ಮನ್ನು ಕೇಳಿಕೊಳ್ಳಿ - ನಾವು ವಿದ್ಯಾರ್ಥಿಗಳಲ್ಲಿ ಇಷ್ಟೊಂದು ನಶೆಯಿದೆಯೇ? ಇದೇನೂ ಹೊಸ ಮಾತಲ್ಲ. ನಾವು ಕಲ್ಪ-ಕಲ್ಪವೂ ವಿಶ್ವದ ಕಿರೀಟಧಾರಿ ರಾಜಕುಮಾರ-ಕುಮಾರಿಯರಾಗಲು ತಂದೆಯ ಬಳಿ ಬಂದಿದ್ದೇವೆ ಯಾವ ತಂದೆಯು ತಂದೆಯೂ ಆಗಿದ್ದಾರೆ, ಶಿಕ್ಷಕನೂ ಆಗಿದ್ದಾರೆ. ತಂದೆಯು ಕೇಳಿದಾಗ ನಾವಂತೂ ಸೂರ್ಯವಂಶಿ ಕಿರೀಟಧಾರಿ ರಾಜಕುಮಾರ-ಕುಮಾರಿಯರಾಗುತ್ತೇವೆ, ಲಕ್ಷ್ಮೀ-ನಾರಾಯಣರಾಗುತ್ತೇವೆ ಎಂದು ಹೇಳುತ್ತೀರಿ ಅಂದಮೇಲೆ ತಮ್ಮನ್ನು ಹೃದಯಪೂರ್ವಕವಾಗಿ ಕೇಳಿಕೊಳ್ಳಿ - ನಾವು ಈ ರೀತಿಯ ಪುರುಷಾರ್ಥ ಮಾಡುತ್ತೇವೆಯೇ ? ಯಾವ ಬೇಹದ್ದಿನ ತಂದೆಯು ಸ್ವರ್ಗದ ಆಸ್ತಿಯನ್ನು ಕೊಡಲು ಬಂದಿದ್ದಾರೆ ಅವರು ನಮ್ಮ ತಂದೆ, ಶಿಕ್ಷಕ, ಸದ್ಗುರುವೂ ಆಗಿದ್ದಾರೆ ಅಂದಮೇಲೆ ಅವರು ಅಷ್ಟು ಶ್ರೇಷ್ಠಾತಿಶ್ರೇಷ್ಠ ಆಸ್ತಿಯನ್ನೇ ಕೊಡುತ್ತಾರೆ. ಅಂದಾಗ ತಮ್ಮನ್ನು ನೋಡಿಕೊಳ್ಳಬೇಕು - ನಾವು ಇಂದು ಓದುತ್ತೇವೆ, ನಾಳೆ ಕಿರೀಟಧಾರಿ ರಾಜಕುಮಾರರಾಗುತ್ತೇವೆಂದು ನಮಗೆ ಖುಷಿಯಿದೆಯೇ? ಏಕೆಂದರೆ ಇದು ಸಂಗಮವಾಗಿದೆಯಲ್ಲವೆ. ಈಗ ನೀವು ಈ ತೀರದಲ್ಲಿದ್ದೀರಿ, ಆ ತೀರವಾದ ಸ್ವರ್ಗದಲ್ಲಿ ಹೋಗುವುದಕ್ಕಾಗಿ ಓದುತ್ತೀರಿ. ಅಲ್ಲಂತೂ ಸರ್ವಗುಣ ಸಂಪನ್ನ, 16 ಕಲಾ ಸಂಪನ್ನರಾಗಿಯೇ ಹೋಗುತ್ತೀರಿ. ನಾವು ಇಷ್ಟು ಯೋಗ್ಯರಾಗುತ್ತೇವೆಯೇ ಎಂದು ತಮ್ಮೊಂದಿಗೆ ಕೇಳಿಕೊಳ್ಳಬೇಕಾಗುತ್ತದೆ. ಇಲ್ಲಿ ಒಬ್ಬ ಭಕ್ತ ನಾರದನ ಮಾತಲ್ಲ. ನೀವೆಲ್ಲರೂ ಭಕ್ತರಾಗಿದ್ದೀರಿ, ಈಗ ತಂದೆಯು ಭಕ್ತಿಯಿಂದ ಬಿಡಿಸುತ್ತಾರೆ. ನಿಮಗೆ ತಿಳಿದಿದೆ - ನಾವು ತಂದೆಯಿಂದ ಆಸ್ತಿಯನ್ನು ಪಡೆಯಲು ಅವರ ಮಕ್ಕಳಾಗಿದ್ದೇವೆ. ವಿಶ್ವದ ರಾಜಕುಮಾರರಾಗಲು ನೀವು ಬಂದಿದ್ದೀರಿ. ಇದಕ್ಕೆ ತಂದೆಯು ತಿಳಿಸುತ್ತಾರೆ - ಭಲೆ ಗೃಹಸ್ಥ ವ್ಯವಹಾರದಲ್ಲಿಯೇ ಇರಿ, ವಾನಪ್ರಸ್ಥಸ್ಥಿತಿಯವರು ಗೃಹಸ್ಥ ವ್ಯವಹಾರದಲ್ಲಿ ಇರುವುದಿಲ್ಲ ಮತ್ತು ಕುಮಾರ-ಕುಮಾರಿಯರೂ ಸಹ ಗೃಹಸ್ಥ ವ್ಯವಹಾರದಲ್ಲಿಲ್ಲ. ಅವರದು ವಿದ್ಯಾರ್ಥಿ ಜೀವನವಾಗಿದೆ, ಬ್ರಹ್ಮಚರ್ಯದಲ್ಲಿಯೇ ವಿದ್ಯೆಯನ್ನು ಓದುತ್ತಾರೆ. ಈಗ ಈ ವಿದ್ಯೆಯು ಬಹಳ ಶ್ರೇಷ್ಠವಾದುದಾಗಿದೆ, ಇದರಲ್ಲಿ ಸದಾಕಾಲಕ್ಕಾಗಿ ಪವಿತ್ರರಾಗಬೇಕಾಗಿದೆ. ಅಲ್ಲಂತೂ ಬ್ರಹ್ಮಚರ್ಯದಲ್ಲಿ ವಿದ್ಯೆಯನ್ನು ಓದಿ ಮತ್ತೆ ವಿಕಾರದಲ್ಲಿ ಹೋಗುತ್ತಾರೆ. ಇಲ್ಲಿ ನೀವು ಬ್ರಹ್ಮಚರ್ಯದಲ್ಲಿದ್ದು ಪೂರ್ಣವಿದ್ಯೆಯನ್ನು ಓದುತ್ತೀರಿ. ತಂದೆಯು ತಿಳಿಸುತ್ತಾರೆ - ನಾನು ಪವಿತ್ರತೆಯ ಸಾಗರನಾಗಿದ್ದೇನೆ. ನಿಮ್ಮನ್ನೂ ಮಾಡುತ್ತೇನೆ. ನೀವು ತಿಳಿದುಕೊಂಡಿದ್ದೀರಿ - ಅರ್ಧಕಲ್ಪ ನಾವು ಪವಿತ್ರರಾಗಿದ್ದೆವು, ಬಾಬಾ ನಾವೇಕೆ ಪವಿತ್ರರಾಗಿ ಪವಿತ್ರ ಪ್ರಪಂಚದ ಮಾಲೀಕರಾಗಬಾರದು ಎಂದು ಅವಶ್ಯವಾಗಿ ತಂದೆಯೊಂದಿಗೆ ಪ್ರತಿಜ್ಞೆ ಮಾಡಿದ್ದೆವು. ಎಷ್ಟು ದೊಡ್ಡ ತಂದೆಯಾಗಿದ್ದಾರೆ! ಭಲೆ ಈ ಶರೀರವು ಸಾಧಾರಣವಾಗಿದೆ ಆದರೆ ಆತ್ಮಕ್ಕೆ ನಶೆಯೇರುತ್ತದೆಯಲ್ಲವೆ. ಪವಿತ್ರರನ್ನಾಗಿ ಮಾಡಲು ತಂದೆಯು ಬಂದಿದ್ದಾರೆ ಮತ್ತು ತಿಳಿಸುತ್ತಾರೆ - ನೀವು ವಿಕಾರದಲ್ಲಿ ಹೋಗುತ್ತಾ-ಹೋಗುತ್ತಾ ವೇಶ್ಯಾಲಯದಲ್ಲಿ ಬಂದುಬಿದ್ದಿದ್ದೀರಿ. ನೀವು ಸತ್ಯಯುಗದಲ್ಲಿ ಪವಿತ್ರರಾಗಿದ್ದಿರಿ, ಈ ರಾಧೆ-ಕೃಷ್ಣರು ಪವಿತ್ರ ರಾಜಕುಮಾರ-ಕುಮಾರಿಯರಲ್ಲವೆ. ರುದ್ರಮಾಲೆಯನ್ನೂ ನೋಡಿ, ವಿಷ್ಣುವಿನ ಮಾಲೆಯನ್ನೂ ನೋಡಿ, ರುದ್ರಮಾಲೆಯೇ ನಂತರ ವಿಷ್ಣುವಿನ ಮಾಲೆಯಾಗುವುದು. ವೈಜಯಂತಿ ಮಾಲೆಯಲ್ಲಿ ಬರುವುದಕ್ಕಾಗಿ ತಂದೆಯು ತಿಳಿಸುತ್ತಾರೆ - ಮೊದಲು ನಿರಂತರ ತಂದೆಯನ್ನು ನೆನಪು ಮಾಡಿ, ತಮ್ಮ ಸಮಯವನ್ನು ವ್ಯರ್ಥ ಮಾಡಬೇಡಿ. ಈ ಕವಡೆಗಳ ಹಿಂದೆ ಕೋತಿಯಾಗಬೇಡಿ. ಕೋತಿಗಳು ಕಡಲೆಯನ್ನು ತಿನ್ನುತ್ತವೆ, ಈಗ ತಂದೆಯು ನಿಮಗೆ ರತ್ನಗಳನ್ನು ಕೊಡುತ್ತಿದ್ದಾರೆ ಅಂದಮೇಲೆ ನೀವು ಕವಡೆಗಳು ಅಥವಾ ಕಡಲೆಯ ಹಿಂದೆ ಹೋಗುತ್ತೀರೆಂದರೆ ಸ್ಥಿತಿಯೇನಾಗುವುದು! ರಾವಣನ ಬಂಧನದಲ್ಲಿ ಹೊರಟುಹೋಗುತ್ತೀರಿ. ತಂದೆಯು ಬಂದು ರಾವಣನ ಜೈಲಿನಿಂದ ಬಿಡಿಸುತ್ತಾರೆ. ತಿಳಿಸುತ್ತಾರೆ, ಮಕ್ಕಳೇ, ದೇಹಸಹಿತ ದೇಹದ ಎಲ್ಲಾ ಸಂಬಂಧಗಳನ್ನು ಬುದ್ಧಿಯಿಂದ ತ್ಯಾಗ ಮಾಡಿ, ತಮ್ಮನ್ನು ಆತ್ಮನಿಶ್ಚಯ ಮಾಡಿಕೊಳ್ಳಿ. ನಾನು ಕಲ್ಪ-ಕಲ್ಪವೂ ಭಾರತದಲ್ಲಿಯೇ ಬರುತ್ತೇನೆ, ಭಾರತವಾಸಿ ಮಕ್ಕಳನ್ನು ವಿಶ್ವದ ಕಿರೀಟಧಾರಿ ರಾಜಕುಮಾರ-ರಾಜಕುಮಾರಿಯನ್ನಾಗಿ ಮಾಡುತ್ತೇನೆ. ತಂದೆಯು ಎಷ್ಟು ಸಹಜವಾಗಿ ಓದಿಸುತ್ತಾರೆ! 4 ಅಥವಾ 8 ಗಂಟೆಗಳ ಕಾಲ ಬಂದು ಕುಳಿತುಕೊಳ್ಳಿ ಎಂದು ಹೇಳುವುದಿಲ್ಲ. ಗೃಹಸ್ಥ ವ್ಯವಹಾರದಲ್ಲಿರುತ್ತಾ ತಮ್ಮನ್ನು ಆತ್ಮವೆಂದು ತಿಳಿದು ನನ್ನನ್ನು ನೆನಪು ಮಾಡಿ ಅದರಿಂದ ನೀವು ಪತಿತರಿಂದ ಪಾವನರಾಗಿಬಿಡುತ್ತೀರಿ. ವಿಕಾರದಲ್ಲಿ ಹೋಗುವವರಿಗೆ ಪತಿತರೆಂದು ಕರೆಯಲಾಗುತ್ತದೆ. ದೇವತೆಗಳು ಪಾವನರಾಗಿದ್ದಾರೆ ಆದ್ದರಿಂದಲೇ ಅವರ ಮಹಿಮೆ ಮಾಡಲಾಗುತ್ತದೆ. ತಂದೆಯು ತಿಳಿಸುತ್ತಾರೆ - ಅದು ಅಲ್ಪಕಾಲದ ಕ್ಷಣಭಂಗುರ ಸುಖವಾಗಿದೆ, ಸುಖವು ಕಾಗವಿಷ್ಟ ಸಮಾನವೆಂದು ಸನ್ಯಾಸಿಗಳು ಸರಿಯಾಗಿಯೇ ಹೇಳುತ್ತಾರೆ ಆದರೆ ದೇವತೆಗಳಿಗೆ ಎಷ್ಟೊಂದು ಸುಖವಿರುತ್ತದೆ! ಎಂಬುದನ್ನು ತಿಳಿದುಕೊಂಡಿಲ್ಲ. ಹೆಸರೇ ಸುಖಧಾಮವಾಗಿದೆ, ಇದು ದುಃಖಧಾಮವಾಗಿದೆ. ಈ ಮಾತುಗಳು ಪ್ರಪಂಚದಲ್ಲಿ ಯಾರಿಗೂ ತಿಳಿದಿಲ್ಲ. ತಂದೆಯೇ ಬಂದು ಕಲ್ಪ-ಕಲ್ಪವೂ ತಿಳಿಸುತ್ತಾರೆ, ದೇಹೀಅಭಿಮಾನಿಗಳನ್ನಾಗಿ ಮಾಡುತ್ತಾರೆ - ತಮ್ಮನ್ನು ಆತ್ಮನೆಂದು ತಿಳಿಯಿರಿ, ನೀವು ಆತ್ಮಗಳಾಗಿದ್ದೀರಿ ದೇಹವಲ್ಲ. ದೇಹಕ್ಕೆ ನೀವು ಮಾಲೀಕರಾಗಿದ್ದೀರೇ ಹೊರತು ದೇಹವು ನಿಮ್ಮ ಮಾಲೀಕನಲ್ಲ. 84 ಜನ್ಮಗಳನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ಈಗ ನೀವು ತಮೋಪ್ರಧಾನರಾಗಿಬಿಟ್ಟಿದ್ದೀರಿ, ನಿಮ್ಮ ಆತ್ಮ ಮತ್ತು ಶರೀರವೆರಡೂ ಪತಿತವಾಗಿದೆ. ದೇಹಾಭಿಮಾನಿಗಳು ಆಗುವುದರಿಂದಲೇ ನಿಮ್ಮಿಂದ ಪಾಪಗಳಾಗಿದೆ. ಈಗ ನೀವು ದೇಹೀಅಭಿಮಾನಿಗಳಾಗಬೇಕಾಗಿದೆ. ನನ್ನ ಜೊತೆ ಹಿಂತಿರುಗಿ ಮನೆಗೆ ನಡೆಯಬೇಕಾಗಿದೆ. ಆತ್ಮ ಮತ್ತು ಶರೀರವೆರಡನ್ನೂ ಶುದ್ಧ ಮಾಡಿಕೊಳ್ಳಲು ತಂದೆಯು ತಿಳಿಸುತ್ತಾರೆ - ಮನ್ಮನಾಭವ. ತಂದೆಯು ನಿಮಗೆ ಅರ್ಧಕಲ್ಪ ರಾವಣನಿಂದ ಸ್ವತಂತ್ರವನ್ನು ಕೊಡಿಸಿದ್ದಾರೆ. ಈಗ ಪುನಃ ಸ್ವಾತಂತ್ರ್ಯವನ್ನು ಕೊಡಿಸುತ್ತಿದ್ದಾರೆ - ಅರ್ಧಕಲ್ಪ ನೀವು ಸ್ವತಂತ್ರವಾದ ರಾಜ್ಯಮಾಡಿ. ಅಲ್ಲಿ ಪಂಚವಿಕಾರಗಳ ಹೆಸರೇ ಇರುವುದಿಲ್ಲ. ಈಗ ಶ್ರೀಮತದಂತೆ ನಡೆದು ಶ್ರೇಷ್ಠರಾಗಬೇಕಾಗಿದೆ. ತಮ್ಮನ್ನು ಕೇಳಿಕೊಳ್ಳಿ - ನಮ್ಮಲ್ಲಿ ಎಲ್ಲಿಯವರೆಗೆ ವಿಕಾರಗಳಿವೆ? ತಂದೆಯು ತಿಳಿಸುತ್ತಾರೆ - ಮೊದಲನೆಯದಾಗಿ ನನ್ನೊಬ್ಬನನ್ನೇ ನೆನಪು ಮಾಡಿ ಮತ್ತ್ಯಾವುದೇ ಜಗಳ-ಕಲಹ ಮಾಡಬಾರದು. ಇಲ್ಲವಾದರೆ ನೀವು ಹೇಗೆ ಪವಿತ್ರರಾಗುತ್ತೀರಿ! ನೀವಿಲ್ಲಿ ಪುರುಷಾರ್ಥ ಮಾಡಿ ಮಾಲೆಯಲ್ಲಿ ಪೋಣಿಸಲ್ಪಡಲು ಬಂದಿದ್ದೀರಿ. ಅನುತ್ತೀರ್ಣರಾಗುತ್ತೀರೆಂದ ಮೇಲೆ ಮತ್ತೆ ಮಾಲೆಯಲ್ಲಿ ಬರಲು ಸಾಧ್ಯವಿಲ್ಲ. ಕಲ್ಪ-ಕಲ್ಪದ ರಾಜ್ಯಪದವಿಯನ್ನು ಕಳೆದುಕೊಳ್ಳುತ್ತೀರಿ, ಪಡೆಯುತ್ತೀರೇನು! ಮತ್ತೆ ಅಂತ್ಯದಲ್ಲಿ ಪಶ್ಚಾತ್ತಾಪ ಪಡಬೇಕಾಗುತ್ತದೆ. ಹೇಗೆ ಆ ಲೌಕಿಕ ವಿದ್ಯೆಯಲ್ಲಿ ರಿಜಿಸ್ಟರ್ ಇರುತ್ತದೆ, ಲಕ್ಷಣಗಳನ್ನು ನೋಡುತ್ತಾರೆ, ಅದು ಸಹ ವಿದ್ಯೆಯಾಗಿದೆ. ಮುಂಜಾನೆ ಎದ್ದು ನೀವು ಸ್ವಯಂ ಇದನ್ನು ಓದಿ. ದಿನದ ಸಮಯದಲ್ಲಂತೂ ಕರ್ಮ ಮಾಡಲೇಬೇಕಾಗಿದೆ, ಬಿಡುವು ಸಿಗುವುದಿಲ್ಲ. ಭಕ್ತಿಯನ್ನೂ ಸಹ ಮನುಷ್ಯರು ಮುಂಜಾನೆಯ ಸಮಯದಲ್ಲಿಯೇ ಮಾಡುತ್ತಾರೆ. ಇದಂತೂ ಜ್ಞಾನಮಾರ್ಗವಾಗಿದೆ. ಭಕ್ತಿಯಲ್ಲಿಯೂ ಸಹ ಪೂಜೆ ಮಾಡುತ್ತಾ-ಮಾಡುತ್ತಾ ಬುದ್ಧಿಯಲ್ಲಿ ಯಾವುದಾದರೊಂದು ದೇಹಧಾರಿಯ ನೆನಪು ಬಂದುಬಿಡುತ್ತದೆ. ಇಲ್ಲಿಯೂ ನೀವು ತಂದೆಯನ್ನು ನೆನಪು ಮಾಡುತ್ತೀರಿ ಮತ್ತೆ ಉದ್ಯೋಗ-ವ್ಯವಹಾರಗಳ ನೆನಪು ಬಂದುಬಿಡುತ್ತದೆ. ಎಷ್ಟು ತಂದೆಯ ನೆನಪಿನಲ್ಲಿರುತ್ತೀರೋ ಅಷ್ಟು ಪಾಪಗಳು ತುಂಡಾಗುತ್ತಾ ಹೋಗುತ್ತವೆ. ನೀವು ಮಕ್ಕಳು ಪುರುಷಾರ್ಥ ಮಾಡುತ್ತಾ-ಮಾಡುತ್ತಾ ಯಾವಾಗ ಸಂಪೂರ್ಣ ಪವಿತ್ರರಾಗಿಬಿಡುತ್ತೀರೋ ಆಗ ಸಂಪೂರ್ಣ ಮಾಲೆಯಾಗಿಬಿಡುವುದು. ಪೂರ್ಣ ಪುರುಷಾರ್ಥ ಮಾಡಲಿಲ್ಲವೆಂದರೆ ಪ್ರಜೆಗಳಲ್ಲಿ ಹೋಗಿಬಿಡುತ್ತೀರಿ. ಬಹಳ ಚೆನ್ನಾಗಿ ಯೋಗ ಮಾಡುತ್ತೀರಿ, ಓದುತ್ತೀರಿ, ತಮ್ಮದೆಲ್ಲವನ್ನೂ ಭವಿಷ್ಯಕ್ಕಾಗಿ ವರ್ಗಾವಣೆ ಮಾಡುತ್ತೀರೆಂದರೆ ಇದಕ್ಕೆ ಪ್ರತಿಫಲವು ಭವಿಷ್ಯದಲ್ಲಿ ಸಿಗುವುದು. ಈಶ್ವರಾರ್ಥವಾಗಿ ಕೊಡುತ್ತಾರೆಂದರೆ ಇನ್ನೊಂದು ಜನ್ಮದಲ್ಲಿ ಅದಕ್ಕೆ ಪ್ರತಿಫಲವಂತೂ ಸಿಗುತ್ತದೆಯಲ್ಲವೆ. ಈಗ ತಂದೆಯು ತಿಳಿಸುತ್ತಾರೆ - ನಾನು ನೇರವಾಗಿ ಬರುತ್ತೇನೆ, ಈಗ ನೀವು ಏನೆಲ್ಲವನ್ನು ಮಾಡುತ್ತೀರೋ, ತಮಗಾಗಿಯೇ ಮಾಡುತ್ತೀರಿ. ಮನುಷ್ಯರು ಸಹ ಪರೋಕ್ಷವಾಗಿ ದಾನ-ಪುಣ್ಯಗಳನ್ನು ಮಾಡುತ್ತಾರೆ. ಆದ್ದರಿಂದ ತಂದೆಗೆ ಸಹಯೋಗ ನೀಡಿದ್ದಾರೆ. ಈ ಸಮಯದಲ್ಲಿ ನೀವು ತಂದೆಗೆ ಬಹಳ ಸಹಯೋಗ ನೀಡುತ್ತೀರಿ ಏಕೆಂದರೆ ನಿಮಗೆ ತಿಳಿದಿದೆ - ಈ ಹಣವೆಲ್ಲವೂ ಸಮಾಪ್ತಿಯಾಗಲಿದೆ. ಅಂದಮೇಲೆ ಇದರಿಂದ ತಂದೆಗೆ ಸಹಯೋಗವನ್ನೇಕೆ ಕೊಡಬಾರದು! ತಂದೆಯು ಹೇಗೆ ರಾಜಧಾನಿಯನ್ನು ಸ್ಥಾಪನೆ ಮಾಡುತ್ತಾರೆ, ಯಾವುದೇ ಸೈನ್ಯವಿಲ್ಲ, ಅಸ್ತ್ರಶಸ್ತ್ರಗಳಿಲ್ಲ, ಎಲ್ಲವೂ ಗುಪ್ತವಾಗಿದೆ. ಕೆಲವರು ವರದಕ್ಷಿಣೆಯನ್ನು ಗುಪ್ತವಾಗಿ ಕೊಡುತ್ತಾರೆ. ಪೆಟ್ಟಿಗೆಯಲ್ಲಿಟ್ಟು ಅದಕ್ಕೆ ಬೀಗವನ್ನು ಹಾಕಿ ಬೀಗದ ಕೈಯನ್ನು ಅವರ ಕೈಗೆ ಕೊಡುತ್ತಾರೆ. ಕೆಲವರಂತೂ ಬಹಳ ಶೋ ಮಾಡುತ್ತಾರೆ, ಇನ್ನೂ ಕೆಲವರು ಗುಪ್ತವಾಗಿ ಕೊಡುತ್ತಾರೆ. ತಂದೆಯು ತಿಳಿಸುತ್ತಾರೆ - ನೀವು ಪ್ರಿಯತಮೆಯರಾಗಿದ್ದೀರಿ, ನಿಮ್ಮನ್ನು ನಾನು ವಿಶ್ವದ ಮಾಲೀಕರನ್ನಾಗಿ ಮಾಡಲು ಬಂದಿದ್ದೇನೆ. ನೀವು ಗುಪ್ತವಾಗಿ ಸಹಯೋಗ ನೀಡುತ್ತೀರಿ, ಇದು ಆತ್ಮಕ್ಕೆ ತಿಳಿದಿದೆ, ಹೊರಗಿನ ಆಡಂಬರವೇನೂ ಇಲ್ಲ. ಇದಂತೂ ವಿಕಾರಿ, ಪತಿತ ಪ್ರಪಂಚವಾಗಿದೆ, ಸೃಷ್ಟಿಯು ವೃದ್ಧಿಹೊಂದಲೇಬೇಕಾಗಿದೆ. ಆತ್ಮಗಳು ಅವಶ್ಯವಾಗಿ ಬರಬೇಕಾಗಿದೆ. ಜನ್ಮಗಳು ಇನ್ನೂ ಹೆಚ್ಚಾಗಬೇಕಾಗಿದೆ. ಈ ಲೆಕ್ಕದಿಂದ ದವಸ-ಧಾನ್ಯಗಳು ಸಾಕಾಗುವುದಿಲ್ಲವೆಂದು ಹೇಳುತ್ತಾರೆ. ಇದು ಆಸುರೀ ಬುದ್ಧಿಯಾಗಿದೆ. ನೀವು ಮಕ್ಕಳಿಗೆ ಈಗ ಈಶ್ವರೀಯ ಬುದ್ಧಿಯು ಸಿಕ್ಕಿದೆ. ಭಗವಂತನು ಓದಿಸುತ್ತಾರೆಂದರೆ ಅವರಿಗೆ ಎಷ್ಟೊಂದು ಗೌರವ ಕೊಡಬೇಕು! ಎಷ್ಟೊಂದು ಓದಬೇಕು! ಏಕೆಂದರೆ ಕೆಲವರು ಇಂತಹ ಮಕ್ಕಳಿದ್ದಾರೆ ಅವರಿಗೆ ಅಂಶಮಾತ್ರವೂ ವಿದ್ಯೆಯಲ್ಲಿ ಆಸಕ್ತಿಯಿಲ್ಲ. ನೀವು ಮಕ್ಕಳಿಗೆ ಈಗ ಬುದ್ಧಿಯಲ್ಲಿರಬೇಕು - ನಾವು ತಂದೆಯ ಮೂಲಕ ಕಿರೀಟಧಾರಿ ರಾಜಕುಮಾರ-ರಾಜಕುಮಾರಿಯರಾಗುತ್ತೇವೆ. ಈಗ ತಂದೆಯು ತಿಳಿಸುತ್ತಾರೆ - ಈಗ ನನ್ನ ಮತದಂತೆ ನಡೆಯಿರಿ, ತಂದೆಯನ್ನು ನೆನಪು ಮಾಡಿ. ನಾವು ಮರೆತುಬಿಡುತ್ತೇವೆಂದು ಪದೇ-ಪದೇ ಹೇಳುತ್ತಾರೆ. ನಾವು ಪಾಠವನ್ನು ಮರೆತುಹೋಗುತ್ತೇವೆ ಎಂದು ವಿದ್ಯಾರ್ಥಿಯು ಹೇಳಿದ್ದೇ ಆದರೆ ಶಿಕ್ಷಕರೇನು ಮಾಡುವುದು! ನೆನಪು ಮಾಡದಿದ್ದರೆ ವಿಕರ್ಮಗಳು ವಿನಾಶವಾಗುವುದಿಲ್ಲ. ಇವರು ತೇರ್ಗಡೆಯಾಗಿಬಿಡಲಿ ಎಂದು ಶಿಕ್ಷಕರು ಎಲ್ಲರಿಗೆ ಆಶೀರ್ವಾದ ಮಾಡುತ್ತಾರೆಯೇ! ಇಲ್ಲಿ ಆಶೀರ್ವಾದ ಅಥವಾ ಕೃಪೆಯ ಮಾತಿಲ್ಲ. ಇಲ್ಲಿ ತಂದೆಯು ತಿಳಿಸಿದ್ದಾರೆ - ಮಕ್ಕಳೇ, ಚೆನ್ನಾಗಿ ಓದಿರಿ, ಭಲೆ ಉದ್ಯೋಗ-ವ್ಯವಹಾರವನ್ನು ಮಾಡಿಕೊಳ್ಳಿ ಆದರೆ ಅವಶ್ಯವಾಗಿ ಓದಬೇಕಾಗಿದೆ. ತಮೋಪ್ರಧಾನರಿಂದ ಸತೋಪ್ರಧಾನರಾಗಿ, ಅನ್ಯರಿಗೂ ಮಾರ್ಗವನ್ನು ತಿಳಿಸಿಕೊಡಿ. ತಮ್ಮನ್ನು ತಾವು ಕೇಳಿಕೊಳ್ಳಿ - ನಾವು ತಂದೆಯ ಸೇವೆಯನ್ನು ಎಷ್ಟು ಮಾಡುತ್ತಿದ್ದೇವೆ? ಎಷ್ಟು ಜನರನ್ನು ತಮ್ಮ ಸಮಾನರನ್ನಾಗಿ ಮಾಡಿಕೊಳ್ಳುತ್ತೇವೆ? ತ್ರಿಮೂರ್ತಿ ಚಿತ್ರವಂತೂ ಸನ್ಮುಖದಲ್ಲಿದೆ. ಇವರು ಶಿವತಂದೆ, ಇವರು ಬ್ರಹ್ಮನಾಗಿದ್ದಾರೆ. ಈ ವಿದ್ಯೆಯಿಂದ ಈ ರೀತಿಯಾಗುತ್ತಾರೆ ಮತ್ತೆ 84 ಜನ್ಮಗಳ ನಂತರ ಈ ರೀತಿಯಾಗುತ್ತಾರೆ. ಶಿವತಂದೆಯು ಬ್ರಹ್ಮಾರವರ ತನುವಿನಲ್ಲಿ ಪ್ರವೇಶ ಮಾಡಿ ಬ್ರಾಹ್ಮಣರನ್ನು ದೇವತೆಗಳನ್ನಾಗಿ ಮಾಡುತ್ತಿದ್ದಾರೆ. ನೀವು ಬ್ರಾಹ್ಮಣರಾಗಿದ್ದೀರಿ, ಈಗ ತಮ್ಮೊಂದಿಗೆ ಕೇಳಿಕೊಳ್ಳಿ - ನಾವು ಪವಿತ್ರರಾಗಿದ್ದೇವೆಯೇ? ದೈವೀಗುಣಗಳನ್ನು ಧಾರಣೆ ಮಾಡುತ್ತೇವೆಯೇ? ಹಳೆಯ ದೇಹವನ್ನು ಮರೆತಿದ್ದೇವೆಯೇ? ಈ ದೇಹವಂತೂ ಹಳೆಯ ಪಾದರಕ್ಷೆಯಾಗಿದೆಯಲ್ಲವೆ. ಆತ್ಮವು ಪವಿತ್ರವಾದಾಗ ಅದಕ್ಕೆ ಒಳ್ಳೆಯ ಪಾದರಕ್ಷೆಯೇ ಸಿಗುವುದು. ಈ ಹಳೆಯ ವಸ್ತ್ರವನ್ನು ಬಿಟ್ಟು ಹೊಸವಸ್ತ್ರವನ್ನು ಧರಿಸುತ್ತೀರಿ. ಈ ಚಕ್ರವು ಸುತ್ತುತ್ತಿರುತ್ತದೆ. ಇಂದು ಹಳೆಯ ಪಾದರಕ್ಷೆಯಲ್ಲಿದ್ದೀರಿ ನಾಳೆ ಈ ದೇವತೆಗಳಾಗಲು ಬಯಸುತ್ತೀರಿ. ತಂದೆಯ ಮೂಲಕ ಭವಿಷ್ಯದ ಅರ್ಧಕಲ್ಪಕ್ಕಾಗಿ ವಿಶ್ವದ ರಾಜಕುಮಾರರಾಗುತ್ತೀರಿ. ನಮ್ಮ ಆ ರಾಜ್ಯವನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಅಂದಮೇಲೆ ತಂದೆಯ ಶ್ರೀಮತದಂತೆ ನಡೆಯಬೇಕಲ್ಲವೆ. ನಾವು ಎಷ್ಟು ನೆನಪು ಮಾಡುತ್ತೇವೆ, ಎಷ್ಟು ಸ್ವದರ್ಶನಚಕ್ರಧಾರಿಯಾಗುತ್ತೇವೆ ಮತ್ತು ಅನ್ಯರನ್ನು ಮಾಡುತ್ತೇವೆಂದು ನೋಡಿಕೊಳ್ಳಿ. ಯಾರು ಮಾಡುವರೋ ಅವರು ಪಡೆಯುವರು. ತಂದೆಯು ಪ್ರತಿನಿತ್ಯವೂ ಓದಿಸುತ್ತಾರೆ. ಮುರುಳಿಯು ಎಲ್ಲರ ಬಳಿ ಹೋಗುತ್ತದೆ. ಒಂದುವೇಳೆ ಸಿಗದೇ ಇರಬಹುದು, 7 ದಿನಗಳ ಕೋರ್ಸಂತೂ ಸಿಕ್ಕಿದೆಯಲ್ಲವೆ ಅಂದಾಗ ಬುದ್ಧಿಯಲ್ಲಿ ಜ್ಞಾನವು ಬಂದುಬಿಟ್ಟಿತು. ಆರಂಭದಲ್ಲಂತೂ ಭಟ್ಟಿಯಾಯಿತು, ಅದರಿಂದ ಕೆಲವರು ಪಕ್ಕಾ, ಕೆಲವರು ಕಚ್ಚಾ ಆಗಿ ಹೊರಬಂದರು ಏಕೆಂದರೆ ಮಾಯೆಯ ಬಿರುಗಾಳಿಗಳು ಬರುತ್ತದೆಯಲ್ಲವೆ. 6-8 ತಿಂಗಳವರೆಗೆ ಪವಿತ್ರರಾಗಿದ್ದು ಮತ್ತೆ ದೇಹಾಭಿಮಾನದಲ್ಲಿ ಬಂದು ತಮ್ಮ ಘಾತ ಮಾಡಿಕೊಳ್ಳುತ್ತಾರೆ. ಮಾಯೆಯು ಬಹಳ ಬಲಶಾಲಿಯಾಗಿದೆ, ಅರ್ಧಕಲ್ಪ ಮಾಯೆಯಿಂದ ಸೋಲುಂಟಾಗಿದೆ. ಒಂದುವೇಳೆ ಈಗಲೂ ಸೋಲುತ್ತಿರೆಂದರೆ ಪದವಿಯನ್ನು ಕಳೆದುಕೊಳ್ಳುತ್ತೀರಿ. ನಂಬರ್ವಾರ್ ಪದವಿಗಳಂತೂ ಬಹಳಷ್ಟಿವೆ. ಕೆಲವರು ರಾಜ-ರಾಣಿ, ಕೆಲವರು ಮಂತ್ರಿಗಳು, ಕೆಲವರು ಪ್ರಜೆಗಳು, ಕೆಲವರಿಗೆ ವಜ್ರ-ವೈಡೂರ್ಯಗಳ ಮಹಲುಗಳು. ಪ್ರಜೆಗಳಲ್ಲಿಯೂ ಸಹ ಕೆಲವರು ಸಾಹುಕಾರರಾಗಿರುತ್ತಾರೆ. ವಜ್ರ-ವೈಡೂರ್ಯಗಳ ಮಹಲುಗಳಿರುತ್ತವೆ. ಇಲ್ಲಿಯೂ ಸಹ ನೋಡಿ, ಪ್ರಜೆಗಳಿಂದ ಸಾಲ ತೆಗೆದುಕೊಳ್ಳುತ್ತಾರಲ್ಲವೆ. ಅಂದಾಗ ಪ್ರಜೆಗಳು ಸಾಹುಕಾರರಾದರೋ ಅಥವಾ ರಾಜರೋ? ಅಂಧಕಾರ ನಗರದಲ್ಲಿ........ಇವು ಈಗಿನ ಮಾತುಗಳಾಗಿವೆ. ಈಗ ನೀವು ಮಕ್ಕಳಿಗೆ ನಿಶ್ಚಯವಿರಬೇಕು - ನಾವು ವಿಶ್ವದ ಕಿರೀಟಧಾರಿ ರಾಜಕುಮಾರರಾಗಲು ಓದುತ್ತೇವೆ, ನಾವು ವಕೀಲರು ಅಥವಾ ಇಂಜಿನಿಯರ್ ಆಗುತ್ತೇವೆ, ಶಾಲೆಯಲ್ಲಿ ಇದನ್ನೆಲ್ಲಾದರೂ ಮರೆಯುತ್ತಾರೆಯೇ? ಇಲ್ಲಂತೂ ಕೆಲವರು ನಡೆಯುತ್ತಾ-ನಡೆಯುತ್ತಾ ಬಿರುಗಾಳಿಯು ಬಂದರೆ ವಿದ್ಯಾಭ್ಯಾಸವನ್ನೇ ಬಿಟ್ಟುಬಿಡುತ್ತಾರೆ.

ತಂದೆಯು ತಾವು ಮಕ್ಕಳೊಂದಿಗೆ ಒಂದು ನಿವೇದನೆ ಮಾಡುತ್ತಾರೆ - ಮಕ್ಕಳೇ, ಚೆನ್ನಾಗಿ ಓದುತ್ತೀರೆಂದರೆ ಒಳ್ಳೆಯ ಪದವಿಯನ್ನು ಪಡೆಯುತ್ತೀರಿ. ತಂದೆಯ ದಾಡಿಗಾದರೂ ಬೆಲೆಕೊಡಿ. ನೀವು ಇಂತಹ ಕೆಟ್ಟಕೆಲಸವನ್ನು ಮಾಡುತ್ತೀರೆಂದರೆ ನನ್ನ ಹೆಸರನ್ನು ಹಾಳುಮಾಡುವಿರಿ. ಸತ್ಯತಂದೆ, ಸತ್ಯಶಿಕ್ಷಕ, ಸದ್ಗುರುವಿನ ನಿಂದನೆ ಮಾಡಿಸುವವರು ಶ್ರೇಷ್ಠಪದವಿಯನ್ನು ಪಡೆಯಲು ಸಾಧ್ಯವಿಲ್ಲ. ಈ ಸಮಯದಲ್ಲಿ ನೀವು ವಜ್ರಸಮಾನರಾಗುತ್ತೀರಿ ಅಂದಮೇಲೆ ಕವಡೆಗಳ ಹಿಂದೇಕೆ ಬೀಳುತ್ತೀರಿ? ಬ್ರಹ್ಮಾತಂದೆಗೆ ಸಾಕ್ಷಾತ್ಕಾರವಾಯಿತು, ತಕ್ಷಣ ಕವಡೆಗಳನ್ನು ಬಿಟ್ಟುಬಿಟ್ಟರು. ಅರೆ! 21 ಜನ್ಮಗಳಿಗಾಗಿ ರಾಜ್ಯಭಾಗ್ಯವು ಸಿಗುತ್ತದೆಯೆಂದರೆ ಈ ಕವಡೆಗಳನ್ನೇನು ಮಾಡುವುದು ಎಂದು ಹೇಳಿ ಎಲ್ಲವನ್ನೂ ಕೊಟ್ಟುಬಿಟ್ಟರು. ನಾವಂತೂ ವಿಶ್ವದ ರಾಜ್ಯಭಾಗ್ಯವನ್ನು ತೆಗೆದುಕೊಳ್ಳುತ್ತೇವೆ. ಇದೂ ಸಹ ತಿಳಿದಿದೆ - ವಿನಾಶವಾಗಲಿದೆ, ಈಗ ಓದಲಿಲ್ಲವೆಂದರೆ ಟೂಲೇಟ್ ಆಗಿಬಿಡುತ್ತದೆ, ಪಶ್ಚಾತ್ತಾಪ ಪಡಬೇಕಾಗುತ್ತದೆ. ಮಕ್ಕಳಿಗೆ ಎಲ್ಲವೂ ಸಾಕ್ಷಾತ್ಕಾರವಾಗಿಬಿಡುವುದು. ತಂದೆಯು ತಿಳಿಸುತ್ತಾರೆ - ಹೇ ಪತಿತ-ಪಾವನ ಎಂದು ನೀವು ನನ್ನನ್ನು ಕರೆಯುತ್ತೀರಿ, ಈಗ ನಾನು ಪತಿತಪ್ರಪಂಚದಲ್ಲಿ ನಿಮಗಾಗಿ ಬಂದಿದ್ದೇನೆ ಮತ್ತು ಪಾವನರಾಗಿ ಎಂದು ತಿಳಿಸುತ್ತೇನೆ ಮತ್ತೆ ನೀವು ಪದೇ-ಪದೇ ಕೆಸರಿನಲ್ಲಿ ಹೋಗಿ ಬೀಳುತ್ತೀರಿ. ನಾನಂತೂ ಕಾಲರಕಾಲನಾಗಿದ್ದೇನೆ, ಎಲ್ಲರನ್ನೂ ಕರೆದುಕೊಂಡು ಹೋಗುತ್ತೇನೆ. ಸ್ವರ್ಗದಲ್ಲಿ ಹೋಗುವುದಕ್ಕಾಗಿ ತಂದೆಯು ಮಾರ್ಗವನ್ನು ತಿಳಿಸುತ್ತಾರೆ. ಸೃಷ್ಟಿಚಕ್ರವು ಹೇಗೆ ಸುತ್ತುತ್ತದೆ ಎಂಬ ಜ್ಞಾನವನ್ನು ಕೊಡುತ್ತಾರೆ, ಇದು ಬೇಹದ್ದಿನ ಜ್ಞಾನವಾಗಿದೆ. ಯಾರು ಕಲ್ಪದ ಹಿಂದೆ ಓದಿದ್ದಾರೆಯೋ ಅವರೇ ಓದುತ್ತಾರೆ, ಅದೂ ಸಹ ಸಾಕ್ಷಾತ್ಕಾರವಾಗುತ್ತಾ ಇರುತ್ತದೆ. ಈ ನಿಶ್ಚಯವಾಗಲಿ- ಬೇಹದ್ದಿನ ತಂದೆಯು ಬಂದಿದ್ದಾರೆ, ಯಾವ ಭಗವಂತನೊಂದಿಗೆ ಮಿಲನ ಮಾಡುವುದಕ್ಕಾಗಿ ಇಷ್ಟೊಂದು ಭಕ್ತಿ ಮಾಡಿದ್ದೇವೆಯೋ ಅವರು ಇಲ್ಲಿಗೆ ಬಂದು ಓದಿಸುತ್ತಿದ್ದಾರೆ. ಇಂತಹ ತಂದೆಯೊಂದಿಗೆ ನಾವು ವಾರ್ತಾಲಾಪವಾದರೂ ಮಾಡೋಣ. ಎಷ್ಟೊಂದು ಉಲ್ಲಾಸ-ಖುಷಿಯಿಂದ ಓಡಿಕೊಂಡು ಬಂದು ಮಿಲನ ಮಾಡಬೇಕು! ಒಂದುವೇಳೆ ಪಕ್ಕಾ ನಿಶ್ಚಯವಿದ್ದರೆ. ಇಲ್ಲಿ ಮೋಸದ ಮಾತಿಲ್ಲ. ಇಂತಹವರೂ ಅನೇಕರಿದ್ದಾರೆ, ಪವಿತ್ರರಾಗುವುದಿಲ್ಲ, ಓದುವುದಿಲ್ಲ. ತಂದೆಯ ಬಳಿ ನಡೆಯಿರಿ ಎಂದು ಬರುತ್ತಾರೆ. ಹಾಗೆಯೇ ಕೇವಲ ತಿರುಗಾಡುವುದಕ್ಕೂ ಬಂದುಬಿಡುತ್ತಾರೆ. ತಂದೆಯು ಮಕ್ಕಳಿಗೆ ತಿಳಿಸುತ್ತಾರೆ - ನೀವು ಮಕ್ಕಳು ತಮ್ಮ ರಾಜಧಾನಿಯನ್ನು ಗುಪ್ತವಾಗಿ ಸ್ಥಾಪನೆ ಮಾಡಬೇಕಾಗಿದೆ. ಪವಿತ್ರರಾಗುತ್ತೀರೆಂದರೆ ತಮೋಪ್ರಧಾನರಿಂದ ಸತೋಪ್ರಧಾನರಾಗುತ್ತೀರಿ. ಈ ರಾಜಯೋಗವನ್ನು ತಂದೆಯೇ ಕಲಿಸಿಕೊಡುತ್ತಾರೆ. ಬಾಕಿ ಅವರಂತೂ ಹಠಯೋಗಿಗಳಾಗಿದ್ದಾರೆ. ತಂದೆಯು ತಿಳಿಸುತ್ತಾರೆ - ತಮ್ಮನ್ನು ಆತ್ಮವೆಂದು ತಿಳಿದು ತಂದೆಯಾದ ನನ್ನನ್ನು ನೆನಪು ಮಾಡಿ. ಈ ನಶೆಯನ್ನಿಟ್ಟುಕೊಳ್ಳಿ - ನಾವು ಬೇಹದ್ದಿನ ತಂದೆಯಿಂದ ವಿಶ್ವದ ರಾಜಕುಮಾರರಾಗಲು ಬಂದಿದ್ದೇವೆ ಅಂದಮೇಲೆ ಶ್ರೀಮತದಂತೆ ನಡೆಯಬೇಕು. ಮಾಯೆಯು ಈ ರೀತಿಯಿದೆ, ಅದು ಬುದ್ಧಿಯೋಗವನ್ನೇ ಕತ್ತರಿಸಿ ಬಿಡುತ್ತದೆ. ತಂದೆಯು ಸಮರ್ಥನಾಗಿದ್ದಾರೆ ಅಂದಮೇಲೆ ಮಾಯೆಯೂ ಸಮರ್ಥವಾಗಿದೆ. ಅರ್ಧಕಲ್ಪ ರಾಮರಾಜ್ಯ, ಇನ್ನ ಅರ್ಧಕಲ್ಪ ರಾವಣರಾಜ್ಯ - ಇದನ್ನೂ ಸಹ ಯಾರೂ ತಿಳಿದುಕೊಂಡಿಲ್ಲ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿದ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಸದಾ ನಶೆಯಿರಲಿ - ನಾವು ಇಂದು ಓದುತ್ತೇವೆ, ನಾಳೆ ರಾಜಕುಮಾರ-ಕುಮಾರಿಯರಾಗುತ್ತೇವೆ. ತಮ್ಮ ಹೃದಯದೊಂದಿಗೆ ಕೇಳಿಕೊಳ್ಳಬೇಕು- ನಾವು ಇಂತಹ ಪುರುಷಾರ್ಥ ಮಾಡುತ್ತೇವೆಯೇ? ತಂದೆಯ ಪ್ರತಿ ಅಷ್ಟೊಂದು ಗೌರವವಿದೆಯೇ? ವಿದ್ಯೆಯಲ್ಲಿ ಆಸಕ್ತಿ ಇದೆಯೇ?

2. ತಂದೆಯ ಕರ್ತವ್ಯದಲ್ಲಿ ಗುಪ್ತ ಸಹಯೋಗಿಗಳಾಗಬೇಕಾಗಿದೆ. ಭವಿಷ್ಯಕ್ಕಾಗಿ ತಮ್ಮದೆಲ್ಲವನ್ನು ವರ್ಗಾವಣೆ ಮಾಡಬೇಕಾಗಿದೆ. ಕವಡೆಗಳ ಹಿಂದೆ ಸಮಯವನ್ನು ಕಳೆಯದೇ ವಜ್ರಸಮಾನರಾಗುವ ಪುರುಷಾರ್ಥ ಮಾಡಬೇಕು.

ವರದಾನ:
ಮನಸ್ಸು-ಬುಧ್ಧಿಯನ್ನು ಮನಮತದಿಂದ ಮುಕ್ತಮಾಡಿಕೊಂಡು ಸೂಕ್ಷ್ಮ ವತನದ ಅನುಭವ ಮಾಡುವಂತಹ ಡಬಲ್ಲೈಟ್ ಭವ

ಕೇವಲ ಸಂಕಲ್ಪಶಕ್ತಿ ಅರ್ಥಾತ್ ಮನಸ್ಸು ಮತ್ತು ಬುದ್ದಿಯನ್ನು ಸದಾ ಮನಮತದಿಂದ ಖಾಲಿಯಾಗಿ ಇಡುತ್ತೀರೆಂದರೆ, ಇಲ್ಲಿರುತ್ತಿದ್ದರೂ ವತನದ ಎಲ್ಲಾ ದೃಶ್ಯಗಳು ಈ ರೀತಿ ಸ್ಪಷ್ಟವಾಗಿ ಅನುಭವ ಮಾಡುತ್ತೀರಿ ಹೇಗೆಂದರೆ, ಪ್ರಪಂಚದ ಯಾವುದೇ ದೃಶ್ಯವೂ ಸ್ಪಷ್ಟವಾಗಿ ಕಾಣಿಸುತ್ತದೆ. ಈ ಅನುಭೂತಿಗಾಗಿ ತಮ್ಮ ಮೇಲೆ ಯಾವುದೇ ಹೊರೆಯನ್ನಿಟ್ಟುಕೊಳ್ಳಬಾರದು, ಎಲ್ಲಾ ಹೊರೆಗಳನ್ನು ತಂದೆಗೆ ಕೊಟ್ಟು ಡಬಲ್ಲೈಟ್ ಆಗಿರಬೇಕು. ಮನಸ್ಸು-ಬುದ್ದಿಯಿಂದ ಸದಾ ಶುದ್ಧಸಂಕಲ್ಪಗಳ ಭೋಜನವನ್ನು ಮಾಡಿರಿ. ಎಂದೂ ವ್ಯರ್ಥಸಂಕಲ್ಪಗಳು ಅಥವಾ ವಿಕಲ್ಪಗಳ ಅಶುದ್ಧ ಭೋಜನವನ್ನು ಮಾಡುವುದಿಲ್ಲವೆಂದರೆ- ಹೊರೆಯಿಂದ ಹಗುರರಾಗಿರುತ್ತಾ, ಶ್ರೇಷ್ಟಸ್ಥಿತಿಯ ಅನುಭವ ಮಾಡಲು ಸಾಧ್ಯವಾಗುತ್ತದೆ.

ಸ್ಲೋಗನ್:
ವ್ಯರ್ಥಕ್ಕೆ ಫುಲ್ ಸ್ಟಾಪ್(ಪೂರ್ಣವಿರಾಮ) ಇಡಿ ಮತ್ತು ಶುಭಭಾವನೆಯ ಸ್ಟಾಕ್ನ್ನು ಫುಲ್ ಮಾಡಿರಿ.

ಅವ್ಯಕ್ತ ಸೂಚನೆ: ಕಂಬೈಂಡ್ ರೂಪದ ಸ್ಮೃತಿಯಿಂದ ಸದಾ ವಿಜಯಿಯಾಗಿರಿ

ಒಂದುವೇಳೆ ನಡೆಯುತ್ತಾ-ನಡೆಯುತ್ತಾ ಯಾವಾಗಾದರೂ ಅಸಫಲತೆ ಅಥವಾ ಕಷ್ಟದ ಅನುಭವವಾಗುತ್ತದೆ ಆಗ ಅದರ ಕಾರಣ ಕೇವಲ ಸೇವಕ (ಸಹಯೋಗಿ) ಆಗಿಬಿಡುತ್ತೀರಿ. ಭಗವಂತನ ಸೇವಕ (ಸಹಯೋಗಿ) ಆಗುವುದಿಲ್ಲ. ಭಗವಂತನನ್ನು ಸೇವೆಯಿಂದ ದೂರ ಮಾಡಬೇಡಿ. ಯಾವಾಗ ಹೆಸರೇ ಆಗಿದೆ ಭಗವಂತನ ಸೇವಕರು, ಅಂದಾಗ ಕಂಬೈಂಡ್ ಆಗಿರುವವರನ್ನು ಬೇರೆ ಏಕೆ ಮಾಡುತ್ತೀರಿ. ಸದಾ ತಮ್ಮ ಈ ಹೆಸರನ್ನು ನೆನಪಿಟ್ಟುಕೊಳ್ಳಿ ಆಗ ಸೇವೆಯಲ್ಲಿ ಸ್ವತಃವಾಗಿ ಭಗವಂತನ ಜಾದೂ ತುಂಬಿ ಬಿಡುತ್ತದೆ.