24.06.24         Morning Kannada Murli       Om Shanti           BapDada Madhuban


“ಪವಿತ್ರತೆಯ ಗುಣವನ್ನು ಧಾರಣೆ ಮಾಡಿ ನಿರ್ದೇಶಕರ ನಿರ್ದೇಶನದ ಮೇಲೆ ನಡೆಯುತ್ತಾ ಇರಿ ಆಗ ದೇವತೆಗಳ ಸಾಮ್ರಾಜ್ಯದಲ್ಲಿ ಬಂದುಬಿಡುವಿರಿ”

(ಪ್ರಾತಃ ಕ್ಲಾಸ್ನಲ್ಲಿ ತಿಳಿಸುವುದಕ್ಕಾಗಿ ಜಗದಂಬಾ ತಾಯಿಯ ಮಧುರ ಮಹಾವಾಕ್ಯ)

ಓಂ ಶಾಂತಿ.
ಈ ಪ್ರಪಂಚವನ್ನು ನಾಟಕ ಎಂದು ಸಹ ಹೇಳುತ್ತಾರೆ, ಡ್ರಾಮಾ ಎಂದು ಹೇಳಿ, ನಾಟಕ ಎಂದು ಹೇಳಿ, ಆಟ ಎಂದು ಹೇಳಿ ಎಲ್ಲವೂ ಒಂದೇ ಮಾತಾಗಿದೆ. ನಾಟಕದಲ್ಲಿ ಒಂದೇ ಕಥೆ ಇರುತ್ತದೆ. ಅದರಲ್ಲಿ ಬಹಳಷ್ಟು ಭಾಗಗಳನ್ನು ತೋರಿಸುತ್ತಾರೆ ಆದರೆ ಕಥೆ ಒಂದೇ ಆಗಿರುತ್ತದೆ. ಇದೇ ರೀತಿ ಈ ಬೇಹದ್ದಿನ ವಲ್ರ್ಡ್ ಡ್ರಾಮಾ ಆಗಿದೆ, ಇದಕ್ಕೆ ನಾಟಕ ಎಂದು ಸಹ ಹೇಳಲಾಗುತ್ತದೆ, ಯಾವುದರಲ್ಲಿ ನಾವೆಲ್ಲರೂ ಪಾತ್ರಧಾರಿಗಳಾಗಿದ್ದೇವೆ. ಈಗ ನಾವು ಪಾತ್ರಧಾರಿಗಳಾಗಿದ್ದೇವೆ ಎಂದ ಮೇಲೆ ಪಾತ್ರಧಾರಿಗಳಿಗೆ ನಾಟಕದ ಸಂಪೂರ್ಣ ಅರಿವು ಇರಬೇಕಾಗುತ್ತದೆ- ಯಾವ ಕತೆಯಲ್ಲಿ ಏನು ಶುರುವಾಗುತ್ತದೆ, ನಮ್ಮ ಪಾತ್ರ ಎಲ್ಲಿಂದ ಶುರುವಾಗುತ್ತದೆ ಹಾಗೂ ಎಲ್ಲಿ ಪೂರ್ತಿಯಾಗುತ್ತದೆ, ನಂತರ ಅದರಲ್ಲಿ ಸಮಯ ಪ್ರತಿ ಸಮಯ ಯಾವ ಪಾತ್ರಧಾರಿಗಳ ಯಾವ ಯಾವ ಪಾತ್ರ ಇದೆ ಹಾಗೂ ಅದರ ನಿರ್ದೇಶಕ, ಸೃಷ್ಟಿಕರ್ತ ಯಾರಾಗಿದ್ದಾರೆ ಹಾಗೂ ಈ ನಾಟಕದಲ್ಲಿ ನಾಯಕ ನಾಯಕಿಯ ಪಾತ್ರ ಯಾರದ್ದಾಗಿದೆ, ಈ ಎಲ್ಲಾ ಮಾತುಗಳ ಜ್ಞಾನ ಇರಬೇಕಾಗಿದೆ. ಕೇವಲ ನಾಟಕ ಎಂದು ಹೇಳುವುದರಿಂದ ಕೆಲಸ ನಡೆಯುವುದಿಲ್ಲ. ನಾಟಕ ಎಂದ ಮೇಲೆ ನಾಟಕದಲ್ಲಿ ನಾವು ಪಾತ್ರಧಾರಿಗಳು ಆಗಿದ್ದೇವೆ. ಒಂದುವೇಳೆ ಯಾರಾದರೂ ಡ್ರಾಮಾದ ಪಾತ್ರಧಾರಿಯಾಗಿದ್ದಾರೆ ಹಾಗೂ ನಾವು ಅವರ ಬಳಿ ಕೇಳಿದರೆ- ಇದರ ಕಥೆ ಏನಾಗಿದೆ, ಇದು ಎಲ್ಲಿಂದ ಶುರುವಾಗುತ್ತದೆ, ಎಲ್ಲಿ ಅಂತ್ಯವಾಗುತ್ತದೆ! ಒಂದುವೇಳೆ ಅವರು ನನಗೆ ಗೊತ್ತಿಲ್ಲ ಎಂದು ಹೇಳಿದರೆ ಇದಕ್ಕೆ ಏನೆಂದು ಹೇಳುವುದು? ಇವರಿಗೆ ಇಷ್ಟು ಗೊತ್ತಿಲ್ಲವೇ ಎಂದು ಹೇಳುತ್ತಾರೆ, ನಾನು ಪಾತ್ರಧಾರಿ ಎಂದು ಹೇಳುತ್ತಾರೆ! ಪಾತ್ರಧಾರಿ ಬಂತು ಎಲ್ಲಾ ಮಾತುಗಳ ಅರಿವು ಇರಬೇಕಾಗಿದೆ ಅಲ್ಲವೇ. ನಾಟಕ ಶುರುವಾಗಿದೆ ಎಂದರೆ ಅವಶ್ಯವಾಗಿ ಅಂತ್ಯವೂ ಆಗುತ್ತದೆ! ಹೀಗಲ್ಲ ಶುರುವಾಗಿದೆ ಎಂದರೆ ನಡೆಯುತ್ತಲೇ ಇರುತ್ತದೆ. ಇದೆಲ್ಲವನ್ನು ತಿಳಿದುಕೊಳ್ಳಬೇಕಾಗಿದೆ ಈ ದೇಹದ್ದಿನ ನಾಟಕದ ರಚೈತ ಯಾರಾಗಿದ್ದಾರೆ ಅವರು ತಿಳಿದುಕೊಂಡಿದ್ದಾರೆ- ಈ ನಾಟಕ ಹೇಗೆ ಶುರುವಾಗುತ್ತದೆ, ಈ ನಾಟಕದಲ್ಲಿ ಮುಖ್ಯ ಮುಖ್ಯ ಪಾತ್ರಧಾರಿಗಳು ಯಾರಾಗಿದ್ದಾರೆ ಹಾಗೂ ಎಲ್ಲಾ ಪಾತ್ರಧಾರಿಗಳಲ್ಲಿ ನಾಯಕ ಹಾಗೂ ನಾಯಕಿಯ ಪಾತ್ರ ಯಾರದ್ದಾಗಿದೆ, ಈ ಎಲ್ಲಾ ಮಾತುಗಳನ್ನು ತಂದೆ ತಿಳಿಸುತ್ತಿದ್ದಾರೆ.

ಈ ಎಲ್ಲಾ ಜ್ಞಾನವನ್ನು ಯಾರು ಪ್ರತಿನಿತ್ಯ ಕ್ಲಾಸ್ಗೆ ಬರುತ್ತಾರೆ ಹಾಗೂ ಕೇಳಿಸಿಕೊಳ್ಳುತ್ತಾರೆ ಅವರು ತಿಳಿದಿದ್ದಾರೆ. ಅವರಿಗೆ ತಿಳಿದಿದೆ ಇದರ ಮೊದಲನೆಯ ನಿರ್ದೇಶಕ ಹಾಗೂ ರಚೈತ ಯಾರಾಗಿದ್ದಾರೆ? ರಚೈತ ಸುಪ್ರೀಂ ಸೋಲ್ (ಪರಮ ಪಿತಾ ಪರಮಾತ್ಮ) ಆಗಿದ್ದರೆ, ಆದರೆ ಅವರು ಸಹ ಪಾತ್ರಧಾರಿ ಆಗಿದ್ದಾರೆ, ಅವರ ಪಾತ್ರ ಏನಾಗಿದೆ? ನಿರ್ದೇಶನ ಕೊಡುವುದು. ಅವರು ಒಂದೇ ಬಾರಿ ಬಂದು ಪಾತ್ರಧಾರಿ ಆಗುತ್ತಾರೆ. ಈಗ ನಿರ್ದೇಶಕರಾಗಿ ಪಾತ್ರ ಅಭಿನಯಿಸುತ್ತಿದ್ದಾರೆ. ಅವರು ಹೇಳುತ್ತಾರೆ ಈ ನಾಟಕದ ಆರಂಭ ನಾನು ಮಾಡುತ್ತೇನೆ, ಹೇಗೆ? ಪವಿತ್ರವಾದ ಸತ್ಯಯುಗಿ ಪ್ರಪಂಚವಿದೆ, ಯಾವುದಕ್ಕೆ ಹೊಸ ಪ್ರಪಂಚ ಎಂದು ಹೇಳುತ್ತಾರೆ, ಆ ಹೊಸ ಪ್ರಪಂಚವನ್ನು ನಾನು ರಚಿಸುತ್ತೇನೆ. ಈಗ ನೀವೆಲ್ಲರೂ ಯಾವ ಪವಿತ್ರತೆಯನ್ನು ಧಾರಣೆ ಮಾಡಿ ನಿರ್ದೇಶಕರ ನಿರ್ದೇಶನದಂತೆ ನಡೆಯುತ್ತಿರುವಿರಿ, ಅವರೆಲ್ಲರೂ ಪಾತ್ರಧಾರಿಗಳು ಈಗ ಪವಿತ್ರರಾಗುತ್ತಿದ್ದಾರೆ, ನಂತರ ಇದೇ ಪಾತ್ರಧಾರಿಗಳ ಮೂಲಕ ಅನೇಕ ಜನ್ಮಗಳ ಚಕ್ರ ನಡೆಯುತ್ತದೆ. ಇದನ್ನು ತಂದೆಯೇ ತಿಳಿಸುತ್ತಾರೆ- ಈಗ ಪವಿತ್ರರಾದ ಮನುಷ್ಯರು, ಮುಂದಿನ ಜನ್ಮದಲ್ಲಿ ದೇವತೆಯರ ಸಾಮ್ರಾಜ್ಯದಲ್ಲಿ ಹೋಗುತ್ತಾರೆ. ಆ ಸಾಮ್ರಾಜ್ಯ ಎರಡು ಯುಗ ಸೂರ್ಯವಂಶಿ ಚಂದ್ರವಂಶಿ ರೂಪದಲ್ಲಿ ನಡೆಯುತ್ತದೆ ನಂತರ ಆ ಸೂರ್ಯವಂಶಿ ಚಂದ್ರವಂಶಿ ಪಾತ್ರಧಾರಿಗಳ ಪಾತ್ರ ಯಾವಾಗ ಪೂರ್ತಿಯಾಗುತ್ತದೆ ಆಗ ಮತ್ತೆ ಸ್ವಲ್ಪ ಕೆಳಗೆ ಇಳಿಯುತ್ತಾರೆ ಅಥವಾ ವಾಮ ಮಾರ್ಗದಲ್ಲಿ ಬರುತ್ತಾರೆ. ನಂತರ ಅನ್ಯ ಧರ್ಮಗಳ ಸಮಯ ಬರುತ್ತದೆ ಇಬ್ರಾಹಿಂ, ಬೌದ್ಧ, ನಂತರ ಕ್ರಿಶ್ಚಿಯನ್ ಈ ಎಲ್ಲಾ ಧರ್ಮಸ್ಥಳು ಬಂದು ತಮ್ಮ ತಮ್ಮ ಧರ್ಮ ಸ್ಥಾಪನೆ ಮಾಡುತ್ತಾರೆ.

ಹಾಗಾದರೆ ನೋಡಿ, ನಾಟಕದ ಕಥೆ ಎಲ್ಲಿಂದ ಶುರುವಾಯಿತು, ಎಲ್ಲಿ ಅಂತ್ಯವಾಯಿತು. ಅದರ ಮಧ್ಯದಲ್ಲಿ ಬೇರೆ ಬೇರೆ ಬೈಪ್ಲಾಟ್ಗಳು ಹೇಗೆ ನಡೆಯುತ್ತದೆ, ಈ ಎಲ್ಲಾ ವೃತ್ತಾಂತವನ್ನು ಕುಳಿತುಕೊಂಡು ತಿಳಿಸುತ್ತಾರೆ. ಈಗ ಈ ನಾಟಕ ಅಂತ್ಯವಾಗುವುದರಲ್ಲಿದೆ, ಆ ನಾಟಕವನ್ನು 3 ಗಂಟೆಯಲ್ಲಿ ಪೂರ್ತಿಯಾಗುತ್ತದೆ, ಇದಕ್ಕೆ 5,000 ವರ್ಷಗಳು ಹಿಡಿಸುತ್ತದೆ. ಬಾಕಿ ಅದರಲ್ಲಿ ಸ್ವಲ್ಪ ವರ್ಷವಿದೆ, ಈಗ ಅದರ ತಯಾರಿ ನಡೆಯುತ್ತಿದೆ. ಈಗ ಈ ನಾಟಕ ಪೂರ್ತಿಯಾಗಿ ಮತ್ತೆ ಪುನರಾವರ್ತನೆಯಾಗುವುದು. ಎಂದ ಮೇಲೆ ಈ ಎಲ್ಲಾ ವೃತ್ತಾಂತ ಬುದ್ಧಿಯಲ್ಲಿರಬೇಕು, ಇದಕ್ಕೆ ಜ್ಞಾನ ಎಂದು ಹೇಳಲಾಗುತ್ತದೆ. ಈಗ ನೋಡಿ ತಂದೆ ಬಂದು ಹೊಸ ಭಾರತ, ಹೊಸ ಪ್ರಪಂಚವನ್ನು ಮಾಡುತ್ತಿದ್ದಾರೆ. ಭಾರತ ಯಾವಾಗ ಹೊಸದಾಗಿತ್ತು ಆಗ ಇಷ್ಟು ದೊಡ್ಡ ಪ್ರಪಂಚ ಇರಲಿಲ್ಲ. ಇಂದು ಹಳೆಯ ಭಾರತವಾಗಿದೆ ಎಂದ ಮೇಲೆ ಪ್ರಪಂಚವು ಸಹ ಹಳೆಯದಾಗಿದೆ. ತಂದೆ ಬಂದು ಭಾರತ ಯಾವುದು ಅವಿನಾಶಿ ಖಂಡವಾಗಿದೆ, ಪ್ರಾಚೀನ ಭಾರತ ನಮ್ಮ ದೇಶವಾಗಿದೆ. ಈಗ ದೇಶ ಎಂದು ಹೇಳುತ್ತಾರೆ ಏಕೆಂದರೆ ಬೇರೆ ದೇಶಗಳಾಗಿ ಇದು ಸಹ ತುಂಡಾಗಿ ಹೋಯಿತು. ಆದರೆ ವಾಸ್ತವಿಕದಲ್ಲಿ ಇಡೀ ಪ್ರಪಂಚ ಇಡೀ ಪೃಥ್ವಿಯ ಮೇಲೆ ಒಂದು ಭಾರತದ ರಾಜ್ಯವೇತ್ತು, ಯಾವುದಕ್ಕೆ ಪ್ರಾಚೀನ ಭಾರತ ಎಂದು ಹೇಳಲಾಗುತ್ತಿತ್ತು. ಆ ಸಮಯದ ಭಾರತದ ಗಾಯನವಿದೆ, ಚಿನ್ನದ ಪಕ್ಷಿ. ಇಡೀ ಪೃಥ್ವಿಯ ಮೇಲೆ ಕೇವಲ ಭಾರತದ ನಿಯಂತ್ರಣವಿತ್ತು, ಒಂದು ರಾಜ್ಯವಿತ್ತು, ಒಂದು ಧರ್ಮವಿತ್ತು. ಆ ಸಮಯ ಸಂಪೂರ್ಣ ಸುಖವಿತ್ತು, ಈಗ ಎಲ್ಲಿದೆ ಆದ್ದರಿಂದ ಬಾಬಾರವರು ಹೇಳುತ್ತಾರೆ ಇದನ್ನು ಡಿಸ್ಟ್ರಕ್ಷನ್(ವಿನಾಶ) ಮಾಡಿ ಮತ್ತೆ ಒಂದು ರಾಜ್ಯ, ಒಂದು ಧರ್ಮ ಹಾಗೂ ಪ್ರಾಚೀನ ಅದೇ ಹೊಸ ಭಾರತ ಹೊಸ ಪ್ರಪಂಚವನ್ನು ತಯಾರಿಸುತ್ತೇನೆ. ತಿಳಿಯಿತೇ. ಆ ಪ್ರಪಂಚದಲ್ಲಿ ಯಾವ ದುಃಖವೂ ಇಲ್ಲ, ಯಾವ ರೋಗವು ಇಲ್ಲ, ಎಂದೂ ಯಾವುದೇ ಅಕಾಲೇ ಮೃತ್ಯು ಇಲ್ಲ. ಹಾಗಾದರೆ ಇಂತಹ ಬದುಕನ್ನು ಪಡೆಯುವುದಕ್ಕಾಗಿ ಪುರುಷಾರ್ಥ ಮಾಡಿ. ಉಚಿತವಾಗಿ ಏನು ಸಿಗುವುದಿಲ್ಲ. ಏನಾದರೂ ಪರಿಶ್ರಮ ಪಡಬೇಕಾಗುತ್ತದೆ. ಬೀಜವನ್ನು ಬಿತ್ತಿದರೆ ಫಲ ಸಿಗುತ್ತದೆ. ಬಿತ್ತುವುದೇ ಇಲ್ಲ ಎಂದರೆ ಎಲ್ಲಿಂದ ಪಡೆಯುವಿರಿ? ಇದು ಕರ್ಮ ಕ್ಷೇತ್ರವಾಗಿದೆ, ಈ ಕ್ಷೇತ್ರದಲ್ಲಿ ಕರ್ಮದಿಂದ ಬಿತ್ತಬೇಕು. ಯಾವ ಕರ್ಮವನ್ನು ನಾವು ಬಿತ್ತುತ್ತೇವೆ ಆ ಫಲವನ್ನು ಪಡೆದುಕೊಳ್ಳುತ್ತೇವೆ. ತಂದೆ ಕರ್ಮಗಳ ಬೀಜವನ್ನು ಬಿತ್ತುವುದನ್ನು ಕಲಿಸಿಕೊಡುತ್ತಿದ್ದಾರೆ. ಹೇಗೆ ವ್ಯವಸಾಯ ಮಾಡುವುದನ್ನು ಕಲಿಸಿಕೊಡುತ್ತಾರೆ ಅಲ್ಲವೇ, ಹೇಗೆ ಬೀಜವನ್ನು ಹಾಕಬೇಕು, ಹೇಗೆ ಅದರ ಸಂಭಾಲನೆ ಮಾಡಬೇಕು, ಅದರ ತರಬೇತಿಯನ್ನು ಸಹ ಕೊಡಲಾಗುತ್ತದೆ. ತಂದೆ ಬಂದು ನಮಗೆ ಕರ್ಮಗಳ ವ್ಯವಸಾಯಕ್ಕಾಗಿ, ಕರ್ಮಗಳನ್ನು ಹೇಗೆ ಬಿತ್ತುವುದು, ಇದರ ತರಬೇತಿಯನ್ನು ಕೊಡುತ್ತಿದ್ದಾರೆ- ತಮ್ಮ ಕರ್ಮವನ್ನು ಶ್ರೇಷ್ಠವನ್ನಾಗಿ ಮಾಡಿ, ಒಳ್ಳೆಯ ಬೀಜವನ್ನು ಹಾಕಿ ಆಗ ಒಳ್ಳೆಯ ಫಲ ಸಿಗುತ್ತದೆ. ಯಾವಾಗ ಕರ್ಮ ಚೆನ್ನಾಗಿರುತ್ತೆ ನಂತರ ಏನನ್ನು ಬಿತ್ತುತ್ತೀರಿ ಅದರ ಫಲವೂ ಸಹ ಒಳ್ಳೆಯದೇ ಸಿಗುತ್ತದೆ. ಒಂದುವೇಳೆ ಕರ್ಮರೂಪಿ ಬೀಜದಲ್ಲಿ ಶಕ್ತಿ ಇಲ್ಲ ಎಂದರೆ, ಕೆಟ್ಟ ಕರ್ಮವನ್ನು ಬಿತ್ತಿದರೆ ಯಾವ ಫಲ ಸಿಗುವುದು? ಏನನ್ನು ತಿನ್ನುತ್ತಿರುವಿರಿ ಮತ್ತೆ ಅಳುತ್ತಿರುವಿರಿ. ಏನನ್ನು ತಿನ್ನುತ್ತಿರುವಿರಿ ಅದರಲ್ಲಿಯೇ ಅಳುತ್ತಿರುವಿರಿ, ದುಃಖ ಹಾಗೂ ಅಶಾಂತಿ ಇದೆ. ಯಾವುದಾದರೂ ಒಂದು ರೋಗ, ತೊಂದರೆ ಬರುತ್ತಾ ಇರುತ್ತದೆ, ಎಲ್ಲಾ ಮಾತುಗಳು ಮನುಷ್ಯನನ್ನು ದುಕ್ಕಿಯನ್ನಾಗಿ ಮಾಡುತ್ತದೆ ಅಲ್ಲವೇ ಆದ್ದರಿಂದ ಬಾಬಾರವರು ಹೇಳುತ್ತಾರೆ ಈಗ ನಿಮ್ಮ ಕರ್ಮಗಳನ್ನು ನಾನು ಶ್ರೇಷ್ಠ ಗುಣಮಟ್ಟದನ್ನಾಗಿ ಮಾಡುತ್ತೇನೆ, ಹೇಗೆ ಬೀಜ ಯಾವ ಗುಣಮಟ್ಟದಾಗಿರುತ್ತದೆ ಅದೇ ಕ್ವಾಲಿಟಿಯ ಬೀಜವನ್ನು ಬಿತ್ತಿದ್ದರೆ ಅದರ ಫಲ ಒಳ್ಳೆಯದು ಸಿಗುತ್ತದೆ. ಒಂದುವೇಳೆ ಬೀಜ ಒಳ್ಳೆಯ ಗುಣಮಟ್ಟದ್ದು ಇಲ್ಲದಿದ್ದರೆ, ಒಳ್ಳೆಯ ಗುಣಮಟ್ಟದ ಫಲವು ಸಿಗುವುದಿಲ್ಲ. ಎಂದ ಮೇಲೆ ನಮ್ಮ ಕರ್ಮವೂ ಸಹ ಒಳ್ಳೆಯ ಗುಣಮಟ್ಟದಾಗಿರಬೇಕು. ಈಗ ಬಾ ಬಾ ಅವರು ನಮ್ಮ ಕರ್ಮರೂಪಿ ಬೀಜವನ್ನು ಒಳ್ಳೆಯ ಗುಣಮಟ್ಟದ್ದನ್ನಾಗಿ ಮಾಡುತ್ತಾರೆ. ಇಂತಹ ಶ್ರೇಷ್ಠ ಗುಣಮಟ್ಟದ ಬೀಜವನ್ನು ಒಂದು ವೇಳೆ ಬಿತ್ತಿದರೆ ಶ್ರೇಷ್ಠ ಫಲವೇ ಸಿಗುತ್ತದೆ. ತಮ್ಮ ಕರ್ಮದ ಯಾವ ಬೀಜವಿದೆ ಅದನ್ನು ಒಳ್ಳೆಯದನ್ನಾಗಿ ಮಾಡಿಕೊಳ್ಳಿ ಹಾಗೂ ನಂತರ ಚೆನ್ನಾಗಿ ಬಿತ್ತುವುದನ್ನು ಕಲಿಯಿರಿ. ಈ ಎಲ್ಲಾ ಮಾತುಗಳನ್ನು ತಿಳಿದುಕೊಂಡು ಈಗ ತಮ್ಮ ಪುರುಷಾರ್ಥ ಮಾಡಿ.

ಒಳ್ಳೆಯದು. ಈಗ ಎರಡು ನಿಮಿಷ ಸೈಲೆನ್ಸ್. ಸೈಲೆನ್ಸ್ ನ ಅರ್ಥ ನಾನು ಆತ್ಮನಾಗಿದ್ದೇನೆ, ಮೊದಲು ಸೈಲೆನ್ಸ್ ನಂತರ ಮಾತಿನಲ್ಲಿ ಬರುತ್ತೇವೆ. ಈಗ ತಂದೆ ಹೇಳುತ್ತಾರೆ ಮತ್ತೆ ನಡೆಯಿರಿ ಶಾಂತಿಯ ಪ್ರಪಂಚಕ್ಕೆ ಎಂದರೆ ಸೈಲೆನ್ಸ್, ಶಾಂತಿ ನಮ್ಮ ಸ್ವಧರ್ಮವಾಗಿದೆ. ಆ ಶಾಂತಿಯಲ್ಲಿ ಹೋಗುವುದಕ್ಕಾಗಿ ಹೇಳುತ್ತಾರೆ- ಈ ದೇಹವನ್ನು ಹಾಗೂ ದೇಹ ಸಹಿತ ದೇಹದ ಸಂಬಂಧಿಗಳ ಮೋಹವನ್ನು ಬಿಡಿ, ಅದರಿಂದ ಭಿನ್ನರಾಗಿ. ಸನ್ ಆಫ್ ಸುಪ್ರೀಂ ಸೋಲ್, ಈಗ ನನ್ನನ್ನು ನೆನಪು ಮಾಡಿ ಹಾಗೂ ನನ್ನ ಧಾಮದಲ್ಲಿ ಬಂದುಬಿಡಿ. ಈಗ ಹಿಂತಿರುಗಿ ನಡೆಯುವ ಗಮನವಿಡಿ, ಈಗ ಮತ್ತೆ ಬರುವ ಚಿಂತೆಯನ್ನು ಮಾಡಬೇಡಿ. ಅಂತ್ಯಮತಿ ಸೋ ಗತಿ. ಈಗ ಯಾರ ಮೇಲು ಮೋಹವಿಲ್ಲ. ಈಗಂತೂ ಶರೀರದ ಮೋಹವನ್ನು ಸಹ ಬಿಟ್ಟುಬಿಡಿ. ತಿಳಿಯಿತೆ. ತಮ್ಮ ಧಾರಣೆಯನ್ನು ಈ ರೀತಿ ಮಾಡಿಕೊಳ್ಳಬೇಕು, ಒಳ್ಳೆಯದು, ಈಗ ಶಾಂತಿಯಲ್ಲಿ ಕುಳಿತುಕೊಳ್ಳಿ. ನಡೆಯುತ್ತಾ ಓಡಾಡುತ್ತಾ ಸಹ ಸೈಲೆನ್ಸ್, ಮಾತನಾಡುತ್ತಾ ಸಹ ಸೈಲೆನ್ಸ್. ಮಾತನಾಡುತ್ತಾ ಹೇಗೆ ಶಾಂತವಾಗಿರುವುದು? ತಿಳಿದಿದೆಯೇ? ಮಾತನಾಡುವ ಸಮಯ ನಮ್ಮ ಬುದ್ಧಿಯೋಗ ತಮ್ಮ ಅದೇ ನಾನೊಂದು ಆತ್ಮನಾಗಿದ್ದೇನೆ, ಮೊದಲು ಪವಿತ್ರ ಆತ್ಮ ಅಥವಾ ಶಾಂತ ಆತ್ಮ, ಇದು ನೆನಪಿರಬೇಕು. ಮಾತನಾಡುತ್ತಾ ನಮ್ಮಲ್ಲಿ ಈ ಜ್ಞಾನವಿರಬೇಕು- ನಾನೊಂದು ಆತ್ಮನಾಗಿದ್ದೇನೆ, ಈ ಅಂಗಾಂಗಗಳಿಂದ ಮಾತನಾಡುತ್ತಿದ್ದೇನೆ. ಈ ರೀತಿ ತಮ್ಮ ಪ್ರಾಕ್ಟೀಸ್ ಇರಬೇಕು, ನಾವು ಇದರ ಆಧಾರವನ್ನು ತೆಗೆದುಕೊಂಡು ಮಾತನಾಡುತ್ತಿದ್ದೇವೆ ಎನ್ನುವಂತೆ. ನಡೆಯಿರಿ ಈಗ ಕಣ್ಣುಗಳ ಆಧಾರವನ್ನು ತೆಗೆದುಕೊಳ್ಳೋಣ, ನೋಡುತ್ತಿದ್ದೇವೆ. ಯಾವುದರ ಅವಶ್ಯಕತೆ ಇದೆ ಅದರ ಆಧಾರವನ್ನು ತೆಗೆದುಕೊಂಡು ಕೆಲಸ ಮಾಡಿ. ಈ ರೀತಿ ಆಧಾರವನ್ನು ತೆಗೆದುಕೊಂಡು ಕೆಲಸ ಮಾಡಿದರೆ ಬಹಳ ಖುಷಿ ಇರುವುದು, ಮತ್ತು ಯಾವುದೇ ಕೆಟ್ಟ ಕೆಲಸವು ನಡೆಯುವುದಿಲ್ಲ. ಒಳ್ಳೆಯದು.

ಇಂತಹ ಬಾಪ್ದಾದಾ ಹಾಗೂ ತಾಯಿಯ ಮಧುರ ಮಧುರ ಬಹಳ ಒಳ್ಳೆಯ, ಸದಾ ಶಾಂತಿ ಮಾಡುವಂತಹ ಮಕ್ಕಳ ಪ್ರತಿ ನೆನಪು ಹಾಗೂ ಶುಭೋದಯ. ಒಳ್ಳೆಯದು.

ಸಂದೇಶಿಯ ತನುವಿನ ಮೂಲಕ ಆಲ್ಮಟ್ಟಿ ತಂದೆಯ ಉಚ್ಚರಿತ ಮಹಾವಾಕ್ಯಗಳು (ಮಾತೇಶ್ವರಿ ಅವರ ಪ್ರತಿ)

1) ಹೇ ಶಿರೋಮಣಿ ರಾಧೆ ಮಗಳೇ, ನೀವು ಪ್ರತಿದಿನ ನನ್ನ ಸಮ ದಿವ್ಯ ಕಾರ್ಯದಲ್ಲಿ ತತ್ಪರ ರಾಗಿದ್ದೀರಿ ಅರ್ಥಾತ್ ವೈಷ್ಣವ ಶುದ್ಧ ಸ್ವರೂಪರಾಗಿದ್ದೀರಿ, ಶುದ್ಧ ಸೇವೆಯನ್ನು ಮಾಡುತ್ತೀರಿ, ಆದ್ದರಿಂದ ಸಾಕ್ಷಾತ್ ನನ್ನ ಸ್ವರೂಪರಾಗಿದ್ದೀರಿ. ಯಾವ ಮಕ್ಕಳು ತನ್ನ ತಂದೆಯ ಹೆಜ್ಜೆಯಂತೆ ನಡೆಯುವುದಿಲ್ಲ ಅವರಿಂದ ನಾನು ದೂರವಾಗಿದ್ದೇನೆ ಏಕೆಂದರೆ ಮಕ್ಕಳಂತೂ ತಂದೆಯ ಸಮಾನವಾಗಿ ಅವಶ್ಯವಾಗಿ ಇರಬೇಕು. ಈ ನಿಯಮ ಈಗ ಸ್ಥಾಪನೆಯಾಗುತ್ತದೆ ಇದು ಸತ್ಯಯುಗ ತ್ರೇತಾಯುಗದವರೆಗೂ ನಡೆಯುತ್ತದೆ, ಅಲ್ಲಿ ತಂದೆಯಂತೆ ಮಗ ಇರುತ್ತಾನೆ ಆದರೆ ದ್ವಾಪರ ಕಲಿಯುಗದಲ್ಲಿ ತಂದೆಯಂತೆ ಮಗ ಇರುವುದಿಲ್ಲ. ಈಗ ಮಕ್ಕಳಿಗೆ ತಂದೆಯ ಸಮಾನ ಆಗುವ ಪರಿಶ್ರಮ ಮಾಡಬೇಕಾಗುತ್ತದೆ, ಆದರೆ ಅಲ್ಲಂತೂ ಪ್ರಾಕೃತಿಕವಾಗಿ ಇಂತಹ ನಿಯಮ ಮಾಡಲ್ಪಟ್ಟಿದೆ, ಎಂತಹ ತಂದೆ ಅಂತಹ ಮಗ. ಅನಾದಿ ನಿಯಮ ಈ ಸಂಗಮದ ಸಮಯದಲ್ಲಿ ಈಶ್ವರ ತಂದೆ ಪ್ರತ್ಯಕ್ಷರಾಗಿ ಸ್ಥಾಪನೆ ಮಾಡುತ್ತಾರೆ.

2) ಮಧುರ ಮಾಲಿಯ ಮಧುರ ಮಧುರ ದಿವ್ಯ ಪುರುಷಾರ್ತಿ ಮಗಳೇ, ಈಗ ನಿಮಗೆ ಬಹಳ ರಮಣಿಕ ಮಧುರ ಆಗಬೇಕು ಹಾಗೂ ಅನ್ಯರನ್ನು ಮಾಡಬೇಕು. ಈಗ ವಿಶ್ವ ಸಾವರ್ನಿಟಿಯ ಚಾವಿ ಕ್ಷಣದಲ್ಲಿ ಪ್ರಾಪ್ತಿ ಮಾಡಿಕೊಳ್ಳುವುದು ಹಾಗೂ ಮಾಡಿಸುವುದು ನಿನ್ನ ಕೈಯಲ್ಲಿದೆ. ನೋಡು, ಸರ್ವ ಶಕ್ತಿವಂತ ಯಾರು ಪ್ರತಿಯೊಂದು ಜೀವ ಪ್ರಾಣಿಯ ಮಾಲೀಕನಾಗಿದ್ದಾರೆ ಯಾವಾಗ ಅವರು ಪ್ರಾಕ್ಟಿಕಲ್ ನಲ್ಲಿ ಈ ಕರ್ಮ ಕ್ಷೇತ್ರದಲ್ಲಿ ಬಂದಿದ್ದಾರೆ ಆಗ ಇಡೀ ಸೃಷ್ಟಿ ಹ್ಯಾಪಿ ಹೌಸ್(ಆನಂದದ ಮನೆ) ಆಗಿಬಿಡುತ್ತದೆ. ಈ ಸಮಯ ಅದೇ ಜೀವ ಪ್ರಾಣಿಯರ ಮಾಲೀಕ ಅವ್ಯಕ್ತ ರೀತಿಯಲ್ಲಿ ಸೃಷ್ಟಿಯನ್ನು ನಡೆಸುತ್ತಿದ್ದಾರೆ. ಆದರೆ ಯಾವಾಗ ಅವರು ಪ್ರತ್ಯಕ್ಷ ರೂಪದಲ್ಲಿ ದೇಹಧಾರಿಯಾಗಿ ಮಾಲೀಕತನದಿಂದ ಕರ್ಮ ಕ್ಷೇತ್ರದಲ್ಲಿ ಬರುತ್ತಾರೆ ಆಗ ಸತ್ಯುಯುಗ ತ್ರೇತಾ ದಲ್ಲಿ ಎಲ್ಲಾ ಜೀವ ಪ್ರಾಣಿಗಳು ಸುಖಿಯಾಗಿ ಬಿಡುತ್ತಾರೆ. ಅಲ್ಲಿ ಸತ್ಯತೆಯ ದರ್ಬಾರು ತೆರೆದಿರುತ್ತದೆ. ಯಾರು ಈಶ್ವರೀಯ ಸುಖ ಪ್ರಾಪ್ತಿ ಮಾಡಿಕೊಳ್ಳುವ ಅರ್ಥ ಪುರುಷಾರ್ಥ ಮಾಡಿದ್ದಾರೆ ಅವರಿಗೆ ಅಲ್ಲಿ ಸದಾ ಕಾಲಕ್ಕಾಗಿ ಸುಖದ ಪ್ರಾಪ್ತಿಯಾಗುತ್ತದೆ. ಈ ಸಮಯ ಎಲ್ಲಾ ಜೀವ ಪ್ರಾಣಿಗಳಿಗೆ ಸುಖದ ದಾನ ಸಿಗುವುದಿಲ್ಲ, ಪುರುಷಾರ್ಥವೇ ಪ್ರಾಲಬ್ಧವನ್ನು ಸೆಳೆಯುತ್ತದೆ. ಯಾರಿಗೆ ಈಶ್ವರನೊಂದಿಗೆ ಯೋಗವಿದೆ ಅವರಿಗೆ ಈಶ್ವರನ ಮೂಲಕ ಸಂಪೂರ್ಣ ಸುಖದ ದಾನ ಸಿಗುತ್ತದೆ.

3) ಅಹೋ ನೀವು ಅದೇ ಶಕ್ತಿ ಆಗಿದ್ದೀರಿ ಯಾರು ತಮ್ಮ ಈಶ್ವರೀಯ ಶಕ್ತಿಯ ರಂಗನ್ನು ತೋರಿಸುವುದಕ್ಕಾಗಿ ಈ ಅಸೂರಿ ಪ್ರಪಂಚದ ವಿನಾಶ ಮಾಡಿ ದೈವಿ ಪ್ರಪಂಚವನ್ನು ಸ್ಥಾಪನೆ ಮಾಡುತ್ತಿರುವಿರಿ, ನಂತರ ಎಲ್ಲಾ ಶಕ್ತಿಗಳ ಮಹಿಮೆಯಾಗುವುದು. ಈಗ ಆ ಎಲ್ಲಾ ಶಕ್ತಿಗಳು ನಿಮ್ಮಲ್ಲಿ ತುಂಬುತ್ತಿವೆ. ನೀವು ಸದಾ ತಮ್ಮ ಈಶ್ವರೀಯ ಬಲ ಹಾಗೂ ನಶೆಯ ಸ್ಥಿತಿಯಲ್ಲಿ ಇರಿ ಆಗ ಸದಾ ಅಪಾರ ಖುಷಿ ಇರುವುದು. ನಿತ್ಯ ಹರ್ಷಿತ ಮುಖ. ನಿಮಗೆ ನಶೆ ಇರಬೇಕು- ನಾನು ಯಾರಾಗಿದ್ದೇನೆ? ನಾವು ಯಾರದ್ದಾಗಿದ್ದೇವೆ? ನಾವು ಎಷ್ಟು ಸೌಭಾಗ್ಯಶಾಲಿ ಆಗಿದ್ದೇವೆ? ಎಷ್ಟು ದೊಡ್ಡ ಪದವಿಯಾಗಿದೆ? ಈಗ ನೀವು ಮೊದಲು ಸ್ವಯಂನ ಸ್ವರಾಜ್ಯದ ಪ್ರಾಪ್ತಿ ಮಾಡಿಕೊಳ್ಳುತ್ತೀರಿ ನಂತರ ಸತ್ಯಯುಗದಲ್ಲಿ ಯುವರಾಜ ಆಗುತ್ತೀರಿ. ಎಂದ ಮೇಲೆ ಎಷ್ಟು ನಶೆ ಇರಬೇಕು! ಈ ತಮ್ಮ ಭಾಗ್ಯವನ್ನು ನೋಡಿ ಖುಷಿಯಲ್ಲಿರಿ, ತಮ್ಮ ಅದೃಷ್ಟವನ್ನು ನೋಡಿ ಅದರಲ್ಲಿ ಎಷ್ಟು ಲಾಟರಿ ಸಿಗುತ್ತದೆ. ಅವು, ನಿಮ್ಮ ಅದೃಷ್ಟ ಎಷ್ಟು ಶ್ರೇಷ್ಠವಾಗಿದೆ, ಯಾವ ಅದೃಷ್ಟದಿಂದ ವೈಕುಂಠದ ಲಾಟರಿ ಸಿಕ್ಕಿಬಿಡುತ್ತದೆ. ತಿಳಿಯಿತೇ, ಲಕ್ಕಿ ಎಷ್ಟು ದೈವಿ ಹೂವು ಮಗು.

4) ಈ ಸುಮಧುರ ಸಂಗಮದ ಸಮಯದಲ್ಲಿ ಸ್ವಯಂ ನಿರಾಕಾರ ಪರಮಾತ್ಮನೇ ಸಾಕಾರದಲ್ಲಿ ಬಂದು ಈ ಈಶ್ವರೀಯ ಕಾರ್ಖಾನೆಯನ್ನು ತೆರೆದಿದ್ದಾರೆ, ಇಲ್ಲಿಂದ ಯಾವುದೇ ಮನುಷ್ಯ ತನ್ನ ವಿನಾಶ ಕಟುತನವನ್ನು ಕೊಟ್ಟು ಅವಿನಾಶಿ ಜ್ಞಾನ ರತ್ನವನ್ನು ತೆಗೆದುಕೊಳ್ಳಬಹುದು. ಈ ಅವಿನಾಶೀ ಜ್ಞಾನ ರತ್ನಗಳ ಖರೀದಿ ಬಹಳ ಸೂಕ್ಷ್ಮವಾಗಿದೆ, ಇದನ್ನು ಬುದ್ಧಿಯಿಂದ ಖರೀದಿ ಮಾಡಬೇಕು. ಇದು ಯಾವುದೇ ಸ್ಥೂಲ ವಸ್ತುವಲ್ಲ, ಈ ಕಣ್ಣುಗಳಿಂದ ಕಾಣಿಸುವುದಿಲ್ಲ ಆದರೆ ಅತಿ ಸೂಕ್ಷ್ಮ ಗುಪ್ತ ಅಡಗಿಕೊಂಡಿರುವ ಕಾರಣ ಇದನ್ನು ಯಾರು ಸಹ ಲೂಟಿ ಮಾಡಲು ಸಾಧ್ಯವಿಲ್ಲ. ಇಂತಹ ಸರ್ವೋತ್ತಮ ಜ್ಞಾನ ಖಜಾನೆ ಪ್ರಾಪ್ತಿ ಮಾಡಿಕೊಳ್ಳುವುದರಿಂದ ಪ್ರತಿ ಸ್ಸಂಕಲ್ಪ, ಸುಖದಾಯಕ ಸ್ಥಿತಿ ಇರುತ್ತದೆ. ಎಲ್ಲಿಯವರೆಗೂ ಈ ಜ್ಞಾನವನ್ನು ಖರೀದಿ ಮಾಡಿಲ್ಲ ಅಲ್ಲಿಯವರೆಗೂ ನಿಶ್ಚಿಂತ, ಚಿಂತಾ ಮುಕ್ತ, ನಿಸ್ಸಂಕಲ್ಪರಾಗಿರಲು ಸಾಧ್ಯವಿಲ್ಲ. ಆದ್ದರಿಂದ ಈ ಅವಿನಾಶೀ ಜ್ಞಾನರತ್ನಗಳ ಸಂಪಾದನೆ ಮಾಡಿ ತಮ್ಮ ಬುದ್ಧಿ ರೂಪೀ ಸೂಕ್ಷ್ಮ ತಿಜೋರಿಯಲ್ಲಿ ಧಾರಣೆ ಮಾಡಿಕೊಂಡು ನಿತ್ಯ ನಿಶ್ಚಿಂತವಾಗಿರಿ. ವಿನಾಶೀ ಧನದಲ್ಲಂತೂ ದುಃಖ ಸಮಾವೇಶವಾಗಿದೆ ಹಾಗೂ ಅವಿನಾಶಿ ಜ್ಞಾನ ಧನದಲ್ಲಿ ಸುಖ ಸಮಾವೇಶವಾಗಿದೆ.

5) ಹೇಗೆ ಸೂರ್ಯ ಸಾಗರದ ನೀರನ್ನು ಸೆಳೆಯುತ್ತಾನೆ ನಂತರ ಆ ನೀರು ಪರ್ವತದ ಮೇಲೆ ನೆಲೆಯಾಗುತ್ತದೆ, ಅದೇ ರೀತಿ ಇದು ಸಹ ಡೈರೆಕ್ಟ್ ಈಶ್ವರನ ಮೂಲಕ ಮಳೆ ಸುರಿಯುತ್ತದೆ. ಹೇಳುತ್ತಾರೆ ಶಿವನ ಜಟೆಯಿಂದ ಗಂಗೆ ಬರುತ್ತದೆ. ಈಗ ಇವರ ಮುಖ ಕಮಲದ ಮೂಲಕ ಜ್ಞಾನ ಅಮೃತ ಸುರಿಯುತ್ತಿದೆ, ಇದಕ್ಕೆ ಅವಿನಾಶಿ, ಈಶ್ವರೀಯಧಾರೆ ಎಂದು ಹೇಳಲಾಗುತ್ತದೆ. ಇದರಲ್ಲಿ ನೀವು ಭಗೀರಥ ಪುತ್ರ ಪಾವನರಾಗಿದ್ದೀರಿ, ಅಮರರಾಗುತ್ತಿದ್ದೀರಿ. ಇದು ಕಿರೀಟಧಾರಿಯಾಗುವ ಅದ್ಭುತ ಮಂಡಳಿಯಾಗಿದೆ, ಇಲ್ಲಿ ಯಾರೆಲ್ಲ ನರ ಹಾಗೂ ನಾರಿ ಬರುವರು ಅವರು ಕಿರೀಟಧಾರಿಯಾಗಿ ಬಿಡುವರು. ಪ್ರಪಂಚವನ್ನು ಸಹ ವೇದಿಕೆ ಎಂದು ಹೇಳಲಾಗುತ್ತದೆ. ಮಂಡಲ ಎಂದರೆ ಸ್ಥಾನ, ಈಗ ಈ ಮಂಡಲಿ ಎಲ್ಲಿ ನೆಲೆಯಾಗಿದೆ? ಓಂ ಆಕಾರದಲ್ಲಿ ಅರ್ಥಾತ್ ಅಹಂ ಸ್ವಧರ್ಮದಲ್ಲಿ ಹಾಗೂ ಇಡೀ ಪ್ರಪಂಚ ಸ್ವಧರ್ಮವನ್ನು ಮರೆತು ಪ್ರಕೃತಿಯ ಧರ್ಮದಲ್ಲಿ ನೆಲೆಯಾಗಿದೆ. ನೀವು ಶಕ್ತಿಯರು ಪ್ರಕೃತಿಯನ್ನು ಮರೆತು ತಮ್ಮ ಸ್ವಧರ್ಮದಲ್ಲಿ ನೆಲೆಯಾಗಿದ್ದೀರಿ.

6) ಈ ಪ್ರಪಂಚದಲ್ಲಿ ಎಲ್ಲಾ ಮನುಷ್ಯರು ನಿರಾಕಾರ ಈಶ್ವರನನ್ನು ನೆನಪು ಮಾಡುತ್ತಾರೆ, ಯಾರನ್ನು ತಮ್ಮ ನಯನಗಳಿಂದ ನೋಡಿಯೂ ಇಲ್ಲ ಆ ನಿರಾಕಾರನ ಮೇಲೆ ಅವರಿಗೆ ಅತಿಯಾದ ಪ್ರೀತಿ ಇರುತ್ತದೆ ಆದ್ದರಿಂದ ಹೇಳುತ್ತಾರೆ- ಹೇ ಈಶ್ವರ ನಮ್ಮನ್ನು ತಮ್ಮಲ್ಲಿ ಲೀನ ಮಾಡಿಕೊಳ್ಳಿ, ಆದರೆ ಎಂತಹ ಅದ್ಭುತವಾಗಿದೆ- ಯಾವಾಗ ಸ್ವಯಂ ಈಶ್ವರ ಸಾಕಾರದಲ್ಲಿ ಪ್ರತ್ಯಕ್ಷರಾಗಿದ್ದಾರೆ ಆಗ ಅವರನ್ನು ಗುರುತಿಸುತ್ತಿಲ್ಲ. ಈಶ್ವರನಿಗೆ ಅತಿ ಪ್ರಿಯ ಭಕ್ತರು ಈ ರೀತಿ ಹೇಳುತ್ತಾರೆ- ಎಲ್ಲಿ ನೋಡಿದರೂ ಅಲ್ಲಿ ನೀವೇ ನೀವು ಕಾಣಿಸುತ್ತೀರಿ, ಭಲೆ ಅವರು ನೋಡುತ್ತಾರೆ ಆದರೆ ಬುದ್ಧಿಯೋಗದಿಂದ ಇದನ್ನು ಅನುಭವ ಮಾಡುತ್ತಾರೆ ಈಶ್ವರ ಸರ್ವವ್ಯಾಪಿಯಾಗಿದ್ದಾರೆ. ಆದರೆ ನೀವು ಅನುಭವದಿಂದ ಹೇಳುತ್ತೀರಿ- ಸ್ವಯಂ ನಿರಾಕಾರ ಈಶ್ವರ ಪ್ರಾಕ್ಟಿಕಲ್ ಸಾಕಾರದಲ್ಲಿ ಇಲ್ಲಿ ಬಂದಿದ್ದಾರೆ. ಈಗ ಸಹಜವಾಗಿಯೇ ನೀವು ನನ್ನನ್ನು ಭೇಟಿ ಮಾಡಬಹುದು. ಆದರೆ ಹಲವಾರು ನನ್ನ ಮಕ್ಕಳು ಸಹ ಸಾಕಾರದಲ್ಲಿ ಪ್ರಭು ತಂದೆಯನ್ನು ಗುರುತಿಸುವುದಿಲ್ಲ. ಅವರಿಗೆ ನಿರಾಕಾರ ಅತೀ ಪ್ರಿಯರೇನಿಸುತ್ತಾರೆ ಆದರೆ ಆ ನಿರಾಕಾರ, ಯಾರು ಈಗ ಸಾಕಾರದಲ್ಲಿ ಪ್ರತ್ಯಕ್ಷರಾಗಿದ್ದಾರೆ, ಅವರನ್ನು ಒಂದು ವೇಳೆ ಗುರುತಿಸಿ ಬಿಟ್ಟರೆ ಎಷ್ಟು ಪ್ರಾಪ್ತಿಯನ್ನು ಮಾಡಬಹುದು. ಏಕೆಂದರೆ ಪ್ರಾಪ್ತಿಯಂತೂ ಸಾಕಾರನಿಂದಲೇ ಆಗುತ್ತದೆ. ಬಾಕಿ ಯಾರೆಲ್ಲಾ ಈಶ್ವರನನ್ನು ದೂರ ನಿರಾಕಾರ ಎಂದು ತಿಳಿಯುತ್ತಾರೆ ಹಾಗೂ ನೋಡುತ್ತಾರೆ, ಯಾರಿಗೆ ಯಾವುದೇ ಪ್ರಾಪ್ತಿ ಇಲ್ಲ ಅವರು ಭಕ್ತರಾಗಿದ್ದಾರೆ, ಅವರಿಗೆ ಯಾವುದೇ ಜ್ಞಾನವಿಲ್ಲ. ಈಗ ಸಾಕಾರ ಪ್ರಭು ತಂದೆಯನ್ನು ತಿಳಿದುಕೊಂಡವರು ಜ್ಞಾನಿ ಮಕ್ಕಳಾಗಿದ್ದಾರೆ, ಸರ್ವ ದೈವಿ ಗುಣಗಳ ಸುಗಂಧದಿಂದ ತುಂಬಿರುವಂತಹ ಮಧುರ ಹೂಗಳು ತನ್ನ ಪ್ರಭು ತಂದೆಯ ಮೇಲೆ ತಮ್ಮ ಜೀವನವನ್ನು ಸಮರ್ಪಣೆ ಮಾಡಿಬಿಡುತ್ತಾರೆ, ಇದರಿಂದ ಅವರಿಗೆ ಜನ್ಮ ಜನ್ಮಾಂತರ ಸಂಪೂರ್ಣ ದೇವತೆಯ ದಿವ್ಯಶೋಭನಿಕ ತನು ಪ್ರಾಪ್ತಿಯಾಗುತ್ತದೆ.

7) ಸ್ವಯಂ ಅನ್ನು ತಿಳಿದುಕೊಳ್ಳುವುದರಿಂದಲೇ ನಿಮಗೆ ಸರಿ ತಪ್ಪು, ಸತ್ಯ ಅಸತ್ಯದ ಪರಿಶೀಲನೆ ಮಾಡಲು ಸಾಧ್ಯ ಪರಿಶೀಲನೆ ಮಾಡಲು ಸಾಧ್ಯ. ಈ ಈಶ್ವರೀಯ ಜ್ಞಾನದಿಂದ ಸತ್ಯ ಮಾತುಗಳೆ ಹೊರಬರುತ್ತದೆ, ಇದರಿಂದ ಯಾರೊಂದಿಗೂ ಸಹ ಸಂಘದೋಷ ಬರಲು ಸಾಧ್ಯವಿಲ್ಲ, ಸಂಘದ ನೆರಳು ಅವರ ಮೇಲೆ ಬೀಳುತ್ತದೆ- ಯಾರು ಸ್ವಯಂ ಅಜ್ಞಾನ ವಶ ಆಗಿದ್ದಾರೆ. ಈ ಸಮಯ ಸತ್ಯ ಪ್ರಪಂಚ ಇಲ್ಲವೇ ಇಲ್ಲ ಆದ್ದರಿಂದ ಯಾರ ಮಾತಿನ ಮೇಲು ಭರವಸೆ ಇಡದೆ ಅವರಿಂದ ಲಿಖಿತವಾಗಿ ಬರೆಸಿಕೊಳ್ಳುತ್ತಾರೆ. ಮನುಷ್ಯರ ಮಾತುಗಳು ಅಸತ್ಯ ವಾಗಿವೆ, ಒಂದುವೇಳೆ ಸತ್ಯವಾಗಿದ್ದರೆ ಅವರ ಮಹಾ ವಾಕ್ಯಗಳು ಪೂಜಿಸಲ್ಪಡುತ್ತಿದ್ದವು. ನೋಡಿ ಹೇಗೆ ದಿವ್ಯ ತಂದೆಯ ಸತ್ಯ ಮಹಾವಾಕ್ಯಗಳ ಶಾಸ್ತ್ರಗಳನ್ನಾಗಿ ಮಾಡಲಾಗಿದೆ, ಯಾವುದರ ಗಾಯನ ಹಾಗೂ ಪೂಜೆ ನಡೆಯುತ್ತದೆ. ಅವರ ಸತ್ಯ ಮಹಾವಾಕ್ಯಗಳ ಧಾರಣೆ ಮಾಡುವುದರಿಂದ ಈಶ್ವರಿಯ ಗುಣಗಳು ಬಂದುಬಿಡುತ್ತದೆ. ಇಷ್ಟೆ ಅಲ್ಲದೆ ಕೆಲವರು ಓದುತ್ತಾ ಓದುತ್ತಾ ಶ್ರೀ ಕೃಷ್ಣನ, ಬ್ರಹ್ಮನ ಸಾಕ್ಷಾತ್ಕಾರವನ್ನು ಸಹ ಮಾಡುತ್ತಾರೆ.

ಅಹೋ, ಪವಿತ್ರ ಹೃದಯ ಕಮಲ, ಪವಿತ್ರ ಹಸ್ತ ಕಮಲ, ಪವಿತ್ರ ನಯನ ಕಮಲ ಮಗಳು ರಾಧೆ, ನಿನ್ನ ಎಲ್ಲಾ ಕಾಯ(ಶರೀರ) ಬದಲಾಗಿ ಕಮಲ ಪುಷ್ಪದ ಸಮಾನ ಕೋಮಲ ಕಂಚನವಾಗಿ ಹೋಯಿತು. ಆದರೆ ಮೊದಲು ಯಾವಾಗ ಆತ್ಮ ಕಂಚನವಾಗುತ್ತದೆ ಆಗ ಇಡೀ ತನು ಕಂಚನ ಪವಿತ್ರವಾಗಿಬಿಡುತ್ತದೆ. ಯಾವ ಪವಿತ್ರ ಕಮಲ ತನುವಿನಲ್ಲಿಯೇ ಅತಿಯಾದ ಸೆಳೆತ ತುಂಬಿರುತ್ತದೆ. ನೀವು ತನ್ನ ಪರಮೇಶ್ವರ ತಂದೆಯ ಮೂಲಕ ಅಜ್ಞಾನ ಬಾಯಾರಿಕೆಯನ್ನು ಅಳಿಸಿ ಜ್ಞಾನ ಬೆಳಕನ್ನು ದಾನ ಕೊಡುವ ಅರ್ಥವಾಗಿ ಈ ಸುಮಧುರ ಸಂಗಮ ಸಮಯದಲ್ಲಿ ನಿಮಿತ್ತರಾಗಿದ್ದೀರಿ. ನಿಮ್ಮ ಜಡ ಚಿತ್ರಗಳ ಮೂಲಕವೂ ಇಡೀ ಪ್ರಪಂಚಕ್ಕೆ ಶೀತಲತೆಯ ಹಾಗೂ ಶಾಂತಿಯ ದಾನ ಸಿಗುತ್ತಾ ಇರುತ್ತದೆ. ಈಗ ನೀವು ಇಡೀ ಸೃಷ್ಟಿಯನ್ನು ಸುಧಾರಣೆ ಮಾಡಿ ತಮ್ಮ ದಿವ್ಯ ತೇಜಸ್ಸನ್ನು ತೋರಿಸಿ ಹೊಸ ವೈಕುಂಠ ಸ್ವರ್ಣ ಹೂದೋಟದಲ್ಲಿ ಹೋಗಿ ವಿಶ್ರಾಮ ಮಾಡುವಿರಿ. ಒಳ್ಳೆಯದು.

ವರದಾನ:
”ಬಾಬಾ” ಎಂಬ ಒಂದು ಶಬ್ಧದ ಕೀಲಿ ಕೈ ನಿಂದ ಸರ್ವ ಖಜಾನೆಗಳನ್ನು ಪ್ರಾಪ್ತಿ ಮಾಡಿಕೊಳ್ಳುವಂತಹ ಭಾಗ್ಯವಾನ್ ಆತ್ಮ ಭವ.

ಜ್ಞಾನದ ವಿಸ್ತಾರವನ್ನು ಅರ್ಥ ಮಾಡಿಕೊಳ್ಳಲು ಅಥವಾ ತಿಳಿಸಲು ಸಾಧ್ಯವಿಲ್ಲವಾದರೂ “ಬಾಬಾ” ಎಂಬ ಒಂದು ಶಬ್ದ ಹೃದಯದಿಂದ ಒಪ್ಪಿಕೊಂಡು ಹೃದಯಪೂರ್ವಕವಾಗಿ ಬೇರೆಯವರಿಗೆ ಹೇಳಿದರೆ ವಿಶೇಷ ಆತ್ಮಗಳಾಗಿಬಿಡುವಿರಿ, ಪ್ರಪಂಚದ ಮುಂದೆ ಮಹಾನ್ ಆತ್ಮನ ಸ್ವರೂಪದಲ್ಲಿ ಗಾಯನಯೋಗ್ಯರಾಗುವಿರಿ ಏಕೆಂದರೆ “ಬಾಬಾ” ಎಂಬ ಒಂದು ಶಬ್ದ ಸರ್ವ ಖಜಾನೆಗಳ ಭಾಗ್ಯದ ಕೀಲಿಕೈ ಆಗಿದೆ. ಕೀಲಿಕೈ ಉಪಯೋಗಿಸುವ ವಿಧಿ ಆಗಿದೆ ಹೃದಯದಿಂದ ಒಪ್ಪಿಕೊಳ್ಳುವುದು ಮತ್ತು ತಿಳಿದುಕೊಳ್ಳುವುದು. ಹೃದಯದಿಂದ ಹೇಳಿ ಬಾಬಾ ಎಂದು ಹೇಳಿದಾಗ ಖಜಾನೆ ಸದಾ ಹಾಜಿರಾಗುತ್ತದೆ.

ಸ್ಲೋಗನ್:
ಬಾಪ್ದಾದಾರವರ ಜೊತೆ ಸ್ನೇಹದಲ್ಲಿ ಹಳೆಯ ಪ್ರಪಂಚವನ್ನು ಬಲಿಹಾರಿ ಮಾಡಿಬಿಡಿ.