24.06.26 Avyakt Bapdada
Kannada
Murli Om Shanti Madhuban
"ಈ ಕರ್ಮ ಕ್ಷೇತ್ರದಲ್ಲಿ
ಕರ್ಮ ಅನಾದಿ ವಸ್ತುವಾಗಿದೆ, ನೀವು ಕರ್ಮ ಬಿಡುವ ಹಾಗಿಲ್ಲ ಆದರೆ ಕರ್ಮ ಯೋಗಿ ಆಗಬೇಕು" (ಜಗದಂಬಾ
ತಾಯಿಯ ಸ್ಮೃತಿ ದಿವಸದಂದು ತಿಳಿಸುವುದಕ್ಕಾಗಿ, ಅವರ ಮೂಲಕ ಉಚ್ಚಾರವಾಗಿರುವಂತಹ ಮಧುರ ಮಹಾವಾಕ್ಯ)
ಈ ಸೃಷ್ಟಿ ಕರ್ಮದ ಹೊಲ
ಆಗಿದೆ, ಇದರಲ್ಲಿ ಪ್ರತಿಯೊಬ್ಬ ಮನುಷ್ಯ ಆತ್ಮ ತನ್ನ ತನ್ನ ಪಾತ್ರವನ್ನು ಅಭಿನಯಿಸುತ್ತಿದ್ದಾರೆ,
ಇದರಲ್ಲಿ ಪರಮಾತ್ಮನ ಪಾತ್ರವು ಇದೆ ಆದರೆ ಅವರು ಆತ್ಮನ ಸದೃಶ್ಯ ಜನ್ಮ ಮರಣದಲ್ಲಿ ಬರುವುದಿಲ್ಲ.
ಆತ್ಮಗಳ ರೀತಿ ಅವರ ಕರ್ಮದ ಖಾತೆ ಉಲ್ಟಾ ಆಗುವುದಿಲ್ಲ. ಅವರು ಹೇಳುತ್ತಾರೆ ನಾನಂತೂ ನಿಮ್ಮನ್ನು
ಮುಕ್ತಗೊಳಿಸಲು ಬರುತ್ತೇನೆ ಹಾಗಾಗಿ ನನಗೆ ಮುಕ್ತಿದಾತ, ಬಂಧನದಿಂದ ಬಿಡಿಸುವವರು, ಗತಿ-ಸದ್ಗತಿ
ದಾತ ಎಂದು ಹೇಳುತ್ತಾರೆ.
ಆತ್ಮದ ಮೇಲೆ ಮಾಯೆಯ ಯಾವ
ಬಂಧನ ಏರಿದೆ, ಅದನ್ನು ಇಳಿಸಿ ಪವಿತ್ರವನ್ನಾಗಿ ಮಾಡುತ್ತಾರೆ ಹಾಗೂ ಹೇಳುತ್ತಾರೆ - ನನ್ನ
ಕೆಲಸವಾಗಿದೆ ಆತ್ಮನನ್ನು ಸರ್ವ ಬಂಧನಗಳಿಂದ ಬಿಡಿಸಿ ವಾಪಸ್ ಕರೆದುಕೊಂಡು ಹೋಗುವುದು, ಸೃಷ್ಟಿಯ
ಯಾವ ಅನಾದಿ ನಿಯಮವಿದೆ ಹಾಗೂ ಕಾಯ್ದೆಗಳಿವೆ ಅದನ್ನು ಸಹ ತಿಳಿದುಕೊಳ್ಳಬೇಕು, ನಂತರ ಮನುಷ್ಯ
ಸೃಷ್ಟಿಯ ವೃದ್ಧಿ ಯಾವ ರೀತಿ ಆಗುತ್ತದೆ, ನಂತರ ಆ ಸಮಯವು ಬರುತ್ತದೆ ಯಾವಾಗ ಜನಸಂಖ್ಯೆ
ಕಡಿಮೆಯಾಗುತ್ತದೆ. ಹೀಗಲ್ಲ ವೃದ್ಧಿಯಾಗುತ್ತಿದೆ ಎಂದಮೇಲೆ ವೃದ್ಧಿ ಆಗುತ್ತಲೇ ಇರುತ್ತದೆ, ಇಲ್ಲ.
ಕಡಿಮೆ ಸಹ ಆಗುತ್ತದೆ. ಸೃಷ್ಟಿಯಲ್ಲಿ ಪ್ರತಿಯೊಂದು ವಸ್ತುವಿನ ನಿಯಮವಿದೆ. ನಮ್ಮ ಶರೀರದ ನಿಯಮವು
ಸಹ ಇದೆ, ಮೊದಲು ಬಾಲ್ಯ, ನಂತರ ಕಿಶೋರ, ನಂತರ ಯುವ ಅವಸ್ಥೆ, ನಂತರ ವೃದ್ಧಾವಸ್ಥೆ. ವೃದ್ಧ ಸಹ ಬೇಗ
ಅಲ್ಲ, ವೃದ್ಧರಾಗುತ್ತ ಆಗುತ್ತ ಜಡ ಜಡಿಭೂತ ಆಗಿ ಹೋಗುತ್ತಾರೆ, ಎಂದಮೇಲೆ ಪ್ರತಿಯೊಂದು ಮಾತಿನಲ್ಲಿ
ವೃದ್ಧಿಯಾಗುವುದು ನಂತರ ಅದರ ಅಂತ್ಯ ಆಗುವುದು, ಇದು ನಿಯಮವಾಗಿದೆ. ಇದೇ ರೀತಿ ಸೃಷ್ಟಿಯ ಜನರೇಶನ್ನ
ನಿಯಮವು ಸಹ ಇದೆ. ಜೀವನಕ್ಕೂ ಸಹ ಭಾಗಗಳಿವೆ ಹಾಗೂ ಜನ್ಮಗಳಲ್ಲೂ ಸಹ ಭಾಗಗಳಿವೆ, ಹಾಗೂ ಜನರೇಷನ್ ಸಹ
ಯಾವುದು ನಡೆದುಕೊಂಡು ಹೋಗುತ್ತಿದೆ, ಅದರದ್ದು ಭಾಗಗಳಿವೆ, ಇದೇ ರೀತಿ ಎಲ್ಲಾ ಧರ್ಮಗಳಲ್ಲೂ ಸಹ
ಸ್ಟೇಜಸ್ (ಭಾಗಗಳು) ಇದೆ. ಮೊದಲನೆಯ ಧರ್ಮ ಎಲ್ಲಕ್ಕಿಂತ ಶಕ್ತಿಶಾಲಿ ಆಗಿದೆ, ನಂತರ ನಿಧಾನ
ನಿಧಾನವಾಗಿ ಯಾರೆಲ್ಲ ಬರುತ್ತಾರೆ, ಅವರ ಶಕ್ತಿ ಕಡಿಮೆಯಾಗುತ್ತಾ ಹೋಗುತ್ತದೆ. ಎಂದರೆ ಧರ್ಮಗಳ
ವಿಭಜನೆ ಆಗುತ್ತದೆ, ಧರ್ಮದಲ್ಲಿ ನಡೆಯುವುದು, ಪ್ರತಿಯೊಂದು ಮಾತು ಸಹ ನಿಯಮದಂತೆ ಇರುತ್ತದೆ, ಈ
ಎಲ್ಲ ಮಾತುಗಳನ್ನು ಸಹ ತಿಳಿದುಕೊಳ್ಳಬೇಕು.
ಇದೇ ಲೆಕ್ಕದಲ್ಲಿ
ಬಾಬಾರವರು ಸಹ ಹೇಳುತ್ತಾರೆ - ನನ್ನದು ಸಹ ಇದರಲ್ಲಿ ಪಾತ್ರವಿದೆ. ನಾನು ಸಹ ಒಂದು ಆತ್ಮ
ನಾಗಿದ್ದೇನೆ, ನಾನು ಭಗವಂತ ಬೇರೆ ಯಾವುದೇ ವಸ್ತುವಲ್ಲ. ನಾನು ಸಹ ಆತ್ಮನಾಗಿದ್ದೇನೆ ಆದರೆ ನನ್ನ
ಕೆಲಸ ಬಹಳ ದೊಡ್ಡದಾಗಿದೆ ಹಾಗೂ ಶ್ರೇಷ್ಠವಾಗಿದೆ ಹಾಗಾಗಿ ನನ್ನನ್ನು ಭಗವಂತ ಎಂದು ಹೇಳುತ್ತಾರೆ.
ಹೇಗೆ ನೀವು ಆತ್ಮಗಳಾಗಿರುವಿರಿ ಅದೇ ರೀತಿ ನಾನು ಸಹ ಆತ್ಮನಾಗಿದ್ದೇನೆ. ಹೇಗೆ ನಿಮ್ಮ ಮಕ್ಕಳು ಸಹ
ಮನುಷ್ಯರಾಗಿದ್ದವರು, ಹಾಗೂ ನೀವು ಸಹ ಮನುಷ್ಯರಾಗಿದ್ದೀರಿ, ಇದರಲ್ಲಿ ಯಾವುದೇ ವ್ಯತ್ಯಾಸ ಇಲ್ಲ.
ಅಂದಮೇಲೆ ನಾನು ಆತ್ಮ ನಾಗಿದ್ದೇನೆ. ಆತ್ಮ ಹಾಗೂ ಇನ್ನೊಂದು ಆತ್ಮದಲ್ಲಿ ಯಾವುದೇ ಅಂತರ ಇಲ್ಲ ಆದರೆ
ಕರ್ತವ್ಯದಲ್ಲಿ ಬಹಳ ದೊಡ್ಡ ವ್ಯತ್ಯಾಸ ಇದೆ ಹಾಗಾಗಿ ಹೇಳಲಾಗುತ್ತದೆ, ನನ್ನ ಕರ್ತವ್ಯ ಎಲ್ಲರಿಗಿಂತ
ಭಿನ್ನವಾಗಿದೆ. ನಾನು ಯಾವುದೇ ಹದ್ದಿನ ಒಂದು ಧರ್ಮದ ಸ್ಥಾಪಕನಲ್ಲ, ನಾನಂತೂ ಪ್ರಪಂಚದ ರಚೈತ
ಆಗಿದ್ದೇನೆ, ಅವರು ಧರ್ಮದ ಸ್ಥಾಪಕರಾಗಿದ್ದಾರೆ. ಹೇಗೆ ಆ ಆತ್ಮಗಳು ಕೆಲಸವನ್ನು ತಮ್ಮ ಸಮಯದಲ್ಲಿ
ಮಾಡುತ್ತಾರೆ, ಅದೇ ರೀತಿ ನಾನು ಸಹ ನನ್ನ ಸಮಯದಲ್ಲಿ ಬರುತ್ತೇನೆ. ನನ್ನ ಕರ್ತವ್ಯ ವಿಶಾಲವಾಗಿದೆ,
ನನ್ನ ಕರ್ತವ್ಯ ಮಹಾನ್ ಆಗಿದೆ ಹಾಗೂ ಎಲ್ಲರಿಗಿಂತ ಭಿನ್ನವಾಗಿದೆ ಹಾಗಾಗಿ ಹೇಳುತ್ತಾರೆ ನಿಮ್ಮ
ಕೆಲಸ ಭಿನ್ನವಾಗಿದೆ ಎಂದು. ಅವರನ್ನು ಸರ್ವಶಕ್ತಿವಂತ ಎಂದು ಸಹ ಹೇಳುತ್ತಾರೆ, ಎಲ್ಲಕ್ಕಿಂತ
ಶಕ್ತಿಶಾಲಿ ಕೆಲಸವಾಗಿದೆ ಆತ್ಮನನ್ನು ಮಾಯೆಯ ಬಂಧನದಿಂದ ಬಿಡಿಸುವುದು ಹೊಸ ಪ್ರಪಂಚದ ಸಸಿ ನೆಡುವುದು
ಇದಕ್ಕೆ ಆಂಗ್ಲ ಭಾಷೆಯಲ್ಲಿ ಹೇಳುತ್ತಾರೆ "ಹೆವೆನ್ಲಿ ಗಾಡ್ ಫಾದರ್". ಹೇಗೆ ಕ್ರೈಸ್ತನನ್ನು
ಕ್ರಿಶ್ಚಿಯಾನಿಟಿಯ ಫಾದರ್ ಎಂದು ಹೇಳುತ್ತಾರೆ, ಹೆವೆನ್ಲಿ ಗಾಡ್ ಫಾದರ್ ಎಂದು ಹೇಳಲಾಗುವುದಿಲ್ಲ.
ಸ್ವರ್ಗದ ಸ್ಥಾಪಕ ಪರಮಾತ್ಮ ಆಗಿದ್ದಾರೆ. ಅಂದಮೇಲೆ ಸ್ವರ್ಣಿಮ ಪ್ರಪಂಚ ಆಯಿತಲ್ಲವೇ, ಸ್ವರ್ಗ ಕೇವಲ
ಒಂದು ಧರ್ಮ ಅಲ್ಲ. ಪರಮಾತ್ಮ ಸೃಷ್ಟಿಯ ಸ್ಥಾಪಕ ಆಗಿದ್ದಾರೆ ಹಾಗೂ ಆ ಸೃಷ್ಟಿಯಲ್ಲಿ ಒಂದು ಧರ್ಮ,
ಒಂದು ರಾಜ್ಯ ಇರುವುದು, ತತ್ವ ಇತ್ಯಾದಿ ಎಲ್ಲವೂ ಸಹ ಬದಲಾಗಿ ಬಿಡುತ್ತದೆ. ಅವರನ್ನೇ ಹೇಳುತ್ತಾರೆ
ಹೆವೆನ್ಲಿ ಗಾಡ್ ಫಾದರ್.
ಎರಡನೆಯದಾಗಿ ಪರಮಾತ್ಮ
ಸತ್ಯ ಎಂದು ಹೇಳುತ್ತಾರೆ, ಸತ್ಯ ಏನಾಗಿದೆ, ಯಾವುದರಲ್ಲಿ ಸತ್ಯ ಇದೆ? ಇದು ಸಹ ತಿಳಿದುಕೊಳ್ಳುವ
ಮಾತಾಗಿದೆ. ಕೆಲವರು ತಿಳಿದುಕೊಳ್ಳುತ್ತಾರೆ ಯಾರು ಸತ್ಯವನ್ನು ಮಾತನಾಡುತ್ತಾರೆ ಅವರೇ ಭಗವಂತ
ಆಗಿದ್ದಾರೆ. ಪರಮಾತ್ಮ ಬೇರೆ ಯಾರು ಅಲ್ಲ, ಕೇವಲ ಅವರು ಸತ್ಯವನ್ನೇ ಮಾತನಾಡಬೇಕು. ಆದರೆ ಹೀಗಲ್ಲ,
ಪರಮಾತ್ಮ ಸತ್ಯ ಇದರ ಅರ್ಥವೇ ಆಗಿದೆ - ಪರಮಾತ್ಮನೇ ಬಂದು ಎಲ್ಲಾ ಮಾತಿನ ಸತ್ಯವನ್ನು ಹೇಳುತ್ತಾರೆ,
ಅದರಲ್ಲಿಯೇ ಸತ್ಯತೆ ಇದೆ, ಆ ಕಾರಣದಿಂದಲೇ ಅವರನ್ನು ಜ್ಞಾನ ಪೂರ್ಣ ಎಂದು ಹೇಳುತ್ತಾರೆ. ಜ್ಞಾನ
ಸಾಗರ, ಆನಂದ ಸಾಗರ, ಪರಮಾತ್ಮನೇ ಬಲ್ಲವನು.... ಎಂದೆಲ್ಲ ಹೇಳುತ್ತಾರೆ, ಎಂದಮೇಲೆ ಅವಶ್ಯವಾಗಿ
ಇದೆಲ್ಲವನ್ನು ತಿಳಿದುಕೊಳ್ಳುವ ಮಾತಾಗಿದೆ. ಇದು ಯಾವ ಜ್ಞಾನವಾಗಿದೆ? ಈ ರೀತಿಯಲ್ಲ ಇವರು ಕಳ್ಳತನ
ಮಾಡಿದರು, ಪರಮಾತ್ಮನಿಗೆ ಇದು ಗೊತ್ತು. ಬಲೆ ಅವರು ಎಲ್ಲವನ್ನು ತಿಳಿದುಕೊಂಡಿದ್ದಾರೆ ಆದರೆ, ಅವರ
ಮಹಿಮೆ ಏನಿದೆ ಅದು - ನಮ್ಮ ಪ್ರಪಂಚ ಯಾವುದು ಕೆಳಗೆ ಬಿದ್ದಿದೆ ಅದು ಮತ್ತೆ ಹೇಗೆ ಮೇಲೆ ಏರುವುದು,
ಈ ಚಕ್ರದ ಮಾತುಗಳನ್ನು ಅವರು ತಿಳಿದುಕೊಂಡಿದ್ದಾರೆ ಹಾಗಾಗಿ ಹೇಳುತ್ತಾರೆ, ಪರಮಾತ್ಮನಿಗೆ ಗೊತ್ತು...
ಪರಮಾತ್ಮನ ಮಹಿಮೆ ಮನುಷ್ಯ ಏನನ್ನು ತಿಳಿದುಕೊಂಡಿದ್ದಾನೆ ಅದರಿಂದ ಭಿನ್ನವಾಗಿದೆ ಏಕೆಂದರೆ ಅವರನ್ನು
ತಿಳಿದುಕೊಳ್ಳುವುದು ಎಲ್ಲರಿಗಿಂತ ಭಿನ್ನವಾಗಿದೆ. ಮನುಷ್ಯನ ತಿಳುವಳಿಕೆ ಮಿತವಾಗಿದೆ, ಮನುಷ್ಯ
ಅಲ್ಪಜ್ಞ ಎಂದು ಹೇಳುತ್ತಾರೆ ಹಾಗೂ ಪರಮಾತ್ಮನಿಗಾಗಿ ಹೇಳುತ್ತಾರೆ ಅವರು ಸರ್ವಜ್ಞ ಎಂದು, ಇದನ್ನೇ
ಆಂಗ್ಲ ಭಾಷೆಯಲ್ಲಿ ನಾಲೆಜ್ಫುಲ್ ಎಂದು ಹೇಳುತ್ತಾರೆ, ಎಂದರೆ ಎಲ್ಲವನ್ನು ಬಲ್ಲವನು ಅಥವಾ
ತಿಳಿದುಕೊಂಡಿರುವವರು. ಯಾರು ಸರ್ವಜ್ಞ ಆಗಿದ್ದಾರೆ ಅವರೇ ಸತ್ಯವನ್ನು ತಿಳಿದುಕೊಂಡಿದ್ದಾರೆ, ಅವರ
ಬಳಿಯೇ ಯಥಾರ್ಥ ಜ್ಞಾನವಿದೆ, ಅವರೇ ಅವಶ್ಯವಾಗಿ ಎಲ್ಲರಿಗೂ ಜ್ಞಾನವನ್ನು ಕೊಡಬೇಕು. ಒಂದುವೇಳೆ
ತಾನಷ್ಟೇ ತಿಳಿದುಕೊಂಡು, ಅನ್ಯರಿಗೆ ತಿಳಿಸಿ ಕೊಡುವುದಿಲ್ಲ ಎಂದರೆ ಅದರಿಂದ ನಮಗೆ ಏನು ಲಾಭ! ಅವರು
ತಿಳಿದುಕೊಳ್ಳಲಿ. ಆದರೆ ಹೀಗಲ್ಲ. ಅವರ ಜ್ಞಾನದಿಂದ ನಮಗೆ ಯಾವುದೇ ಲಾಭವಾಗಿದೆ, ಆಗಲೇ ನಾವು ಅವರ
ಕ್ವಾಲಿಫಿಕೇಷನ್ ಗಾಯನ ಮಾಡುತ್ತೇವೆ. ಅವರ ಹಿಂದೆ ಬೀಳುತ್ತೇವೆ. ಯಾವಾಗಲೇ ಏನೇ ಆಗುತ್ತದೆ ಎಂದರೆ
ಹೇಳುತ್ತೇವೆ - ಹೇ ಭಗವಂತ! ನೀವು ಈ ರೀತಿ ಮಾಡಿ, ನಮ್ಮನ್ನು ನೋಡಿಕೊಳ್ಳಿ, ದಯೆ ತೋರಿಸಿ, ನಮ್ಮ
ದುಃಖವನ್ನು ದೂರ ಮಾಡಿ, ನಾವು ಅವರ ಬಳಿ ಬೇಡುತ್ತೇವೆ. ಅವರೊಂದಿಗೆ ಮಧುರ ಯಾವುದೋ ಸಂಬಂಧ ಇದೆ ಆ
ಕಾರಣದಿಂದಲೇ ಈ ರೀತಿ ಬೇಡುತ್ತೇವೆ, ನೆನಪು ಮಾಡುತ್ತೇವೆ, ಅವರು ನಮ್ಮ ಮೇಲೆ ಯಾವುದೋ ಉಪಕಾರ
ಮಾಡುವಂತೆ. ಒಂದುವೇಳೆ ಎಂದೂ ಮಾಡಿಯೇ ಇಲ್ಲ ಎಂದರೆ ನಾವು ಏಕೆ ಅವರ ಮುಂದೆ ತಲೆಬಾಗುತ್ತಿದ್ದೆವು?
ಯಾವಾಗ ಯಾರಾದರೂ ತೊಂದರೆಯ ಸಮಯದಲ್ಲಿ ಸಹಾಯ ಮಾಡುತ್ತಾರೆ ಎಂದರೆ ಹೃದಯದಲ್ಲಿ ಬರುತ್ತದೆ, ಇವರು
ಬಹಳ ದೊಡ್ಡ ತೊಂದರೆಯಲ್ಲಿ ಇದ್ದಾಗ ಸಹಾಯ ಮಾಡಿದರು. ಸಮಯದಲ್ಲಿ ನನ್ನ ರಕ್ಷಣೆ ಮಾಡಿದರು, ಅವರ
ಪ್ರತಿ ಹೃದಯದಲ್ಲಿ ಪ್ರೀತಿ ಬರುತ್ತದೆ, ಪರಮಾತ್ಮನ ಮೇಲು ಸಹ ನಮಗೆ ಇಂತಹದ್ದೇ ಪ್ರೀತಿ ಬರುತ್ತದೆ
- ಇವರು ಸಮಯದಲ್ಲಿ ನಮ್ಮ ಸಹಾಯ ಮಾಡಿದ್ದಾರೆ. ಆದರೆ ಈ ರೀತಿಯಲ್ಲ - ಎಂದಾದರೂ ಮನುಷ್ಯನಿಗೆ
ಒಳ್ಳೆಯದಾಯಿತು ಎಂದರೆ ಭಗವಂತ ಮಾಡಿದರು... ಭಗವಂತ ಇದೇ ಕೆಲಸ ಮಾಡುತ್ತಾ ಇರುತ್ತಾರೆ. ಆದರೆ
ಭಗವಂತನ ಕೆಲಸ ಬಹಳ ದೊಡ್ಡದಾಗಿದೆ, ಸೃಷ್ಟಿಯ ಕೆಲಸವಾಗಿದೆ, ಪ್ರಪಂಚದ ಸಂಬಂಧಿತ ಮಾತಾಗಿದೆ. ಬಾಕಿ
ಈ ರೀತಿಯಲ್ಲ ಯಾರಿಗಾದರೂ ಸ್ವಲ್ಪ ಹಣ ಸಿಕ್ಕಿತು, ಇದನ್ನು ಭಗವಂತ ಮಾಡಿದ್ದಾರೆ, ಒಳ್ಳೆಯ
ಕೆಲಸವನ್ನಂತೂ ನಾವು ಸಹ ಮಾಡುತ್ತೇವೆ, ಆ ಕರ್ಮದ ಫಲ ಸಿಗುತ್ತದೆ. ಒಳ್ಳೆಯ ಹಾಗೂ ಕೆಟ್ಟ ಕರ್ಮದ
ಲೆಕ್ಕಾಚಾರ ನಡೆಯುತ್ತಾ ಇರುತ್ತದೆ, ಅದರ ಫಲವನ್ನೇ ನಾವು ತಿನ್ನುತ್ತಾ ಇರುತ್ತೇವೆ ಆದರೆ ಪರಮಾತ್ಮ
ಬಂದು ಯಾವ ಕೆಲಸವನ್ನು ಕಲಿಸಿದ್ದಾರೆ ಅದರ ಫಲ, ಅದು ಭಿನ್ನವಾಗಿದೆ, ಅಲ್ಪಕಾಲದ ಸುಖ ಅಂತೂ
ಬುದ್ಧಿಯ ಆಧಾರದ ಮೇಲೆ ಸಹ ಸಿಗುತ್ತದೆ, ಆದರೆ ಪರಮಾತ್ಮ ಯಾವ ಜ್ಞಾನವನ್ನು ಕೊಡುತ್ತಾರೆ ಅದರಿಂದ
ನಾವು ಸದಾ ಸುಖವನ್ನು ಪಡೆಯುತ್ತೇವೆ. ಎಂದಮೇಲೆ ಪರಮಾತ್ಮನ ಕೆಲಸ ಭಿನ್ನ ಆಯಿತಲ್ಲವೇ, ಇದಕ್ಕಾಗಿ
ಹೇಳುತ್ತಾರೆ ನಾನೇ ಬಂದು ಕರ್ಮದ ಯಥಾರ್ಥ ಜ್ಞಾನವನ್ನು ಕಲಿಸುತ್ತೇನೆ - ಹಾಗಾಗಿ ಹೇಳುತ್ತಾರೆ
ಕರ್ಮ ಯೋಗ ಶ್ರೇಷ್ಠವಾಗಿದೆ. ಇದರಲ್ಲಿ ಕರ್ಮವನ್ನು ಅಥವಾ ಮನೆ ಗ್ರಹಸ್ಥವನ್ನು ಬಿಡುವ ಮಾತಿಲ್ಲ.
ಕೇವಲ ತಮ್ಮ ಕರ್ಮವನ್ನು ಹೇಗೆ ಪವಿತ್ರ ಮಾಡಿಕೊಳ್ಳುವುದು ಅದರ ಜ್ಞಾನವನ್ನು ಪರಮಾತ್ಮ
ತಿಳಿಸುತ್ತಾರೆ. ಕರ್ಮವನ್ನು ಮಾಡಬೇಕು, ಕರ್ಮವನ್ನು ಬಿಡಬಾರದು. ಕರ್ಮವಂತೂ ಅನಾದಿ ಆಗಿದೆ. ಈ
ಕರ್ಮ ಕ್ಷೇತ್ರವು ಸಹ ಅನಾದಿ ಆಗಿದೆ. ಮನುಷ್ಯ ಇದ್ದಾರೆ ಎಂದರೆ ಕರ್ಮವು ಇದೆ. ಆದರೆ ಆ ಕರ್ಮವನ್ನು
ಹೇಗೆ ಶ್ರೇಷ್ಠವಾಗಿ ಮಾಡಿಕೊಳ್ಳಬೇಕು ಅದನ್ನು ಬಂದು ಕಲಿಸುತ್ತಾರೆ, ಯಾವುದರಿಂದ ಮತ್ತೆ ನಿಮ್ಮ
ಕರ್ಮದ ಖಾತೆ ಅಕರ್ಮ ವಾಗುತ್ತದೆ. ಅಕರ್ಮದ ಅರ್ಥವಾಗಿದೆ ಯಾವುದೇ ಕೆಟ್ಟ ಖಾತೆ ಆಗುವುದಿಲ್ಲ.
ಬಾಬಾ ಹೇಳುತ್ತಾರೆ- ನಾನು
ಈ ಚಿಕ್ಕ ಸಂಗಮ ಯುಗದಲ್ಲಿ ನಿಮ್ಮ ದೇಶ, ಈ ಸಾಕಾರಿ ಪ್ರಪಂಚದಲ್ಲಿ ನಿಮಗಾಗಿ ಬಂದಿದ್ದೇನೆ, ಎಂದಮೇಲೆ
ಕನಿಷ್ಠ ಪಕ್ಷ ಎಷ್ಟು ಸಮಯ ಇದೆಯೋ ಅಷ್ಟು ಸಮಯವಾದರೂ ನಮ್ಮ ಕಾಳಜಿ ವಹಿಸಿ. ಬಾಬಾರವರ
ಮಕ್ಕಳಾಗಿದ್ದೀರಿ ಎಂದಮೇಲೆ ಕನಿಷ್ಠ ಪಕ್ಷ ಸ್ವಲ್ಪ ಸಮಯವಾದರೂ ಶುದ್ಧವಾಗಿ ಇರಿ. ನಂತರ ನಿಮ್ಮ
ಪ್ರಾರಬ್ಧ ಇಂತಹದ್ದಾಗಿ ಬಿಡುತ್ತದೆ - ಆ ಪ್ರಪಂಚದಲ್ಲಿ ನೀವು ಯಾವುದೇ ಪರಿಶ್ರಮ ಪಡುವ ಅವಶ್ಯಕತೆ
ಇರುವುದಿಲ್ಲ. ಈಗ ಸ್ವಲ್ಪ ಪರಿಶ್ರಮದ ಮಾತಾಗಿದೆ, ಈಗ ನೀವು ಹೇಗಾದರೂ ಮಾಡಿ, ಸಂಪೂರ್ಣ
ಪ್ರಯತ್ನಪಟ್ಟು ಪವಿತ್ರರಾಗುವ ಪ್ರತಿಜ್ಞೆಯನ್ನು ಮಾಡಿ. ತಮ್ಮ ಮೇಲೆ ದೃಢತೆಯನ್ನು ಇಟ್ಟುಕೊಳ್ಳಿ,
ತಮ್ಮ ಧಾರಣೆಯಲ್ಲಿ ಇರುವ ಸಂಪೂರ್ಣ ಪ್ರಯತ್ನ ಮಾಡಿ. ತಂದೆ ನಿಮಗೆ ಹೀಗೆ ಹೇಳುತ್ತಾರೆ - ಕೇವಲ
ಸ್ವಲ್ಪ ಸಮಯಕ್ಕಾಗಿ ನೀವು ಈ ಪರಿಶ್ರಮವನ್ನು ಮಾಡಿ. ನಾನು ನಿಮ್ಮಿಂದ ಬೇರೆ ಯಾವುದೇ ಪರಿಶ್ರಮವನ್ನು
ಮಾಡಿಸುವುದಿಲ್ಲ, ನಿಮಗೆ ಎಷ್ಟು ಸಿಗುತ್ತದೆ ಅದರ ಹೋಲಿಕೆಯಲ್ಲಿ ಇದು ಯಾವುದೇ ಪರಿಶ್ರಮವೇ ಅಲ್ಲ.
ಹೀಗಲ್ಲ ಕೇವಲ ಹೇಳುತ್ತಾ
ಇರುವುದು - ನಾನು ಹೀಗೆ ಮಾಡುತ್ತೇನೆ, ಹಾಗೆ ಮಾಡುತ್ತೇನೆ... ಪ್ರಪಂಚದವರು ಏನು ಹೇಳುತ್ತಾರೆ,
ಇವರೇನು ಹೇಳುತ್ತಾರೆ... ಪ್ರಪಂಚದವರು ಏನು ಹೇಳುತ್ತಾರೆ.. ಇದನ್ನು ಬಿಟ್ಟು ಬಿಡಿ. ಈಗ ಈ
ಪ್ರಪಂಚವೇ ಹೊರಟು ಹೋಗುವುದಿದೆ. ಈಗಂತೂ ಸಾವು ಸಮ್ಮುಖದಲ್ಲಿ ನಿಂತಿದೆ. ನೀವು ಇದೇನು
ವಿಸ್ತಾರವನ್ನು ಮಾಡಿಕೊಂಡು ಕುಳಿತಿದ್ದೀರಿ ಇದೆಲ್ಲವೂ ವ್ಯರ್ಥ ಮಾಡುತ್ತಿದ್ದೀರಿ. ಈಗ ತಂದೆ
ಹೇಳುತ್ತಾರೆ - ವ್ಯರ್ಥವನ್ನು ಉಳಿಸಿ. ಈ ಶರೀರ ನಿರ್ವಹಣೆಗಾಗಿ ಎಷ್ಟು ಬೇಕು ಅಷ್ಟು ಅವಶ್ಯವಾಗಿ
ಮಾಡಿ, ಎಷ್ಟು ನಿಮ್ಮ ರಚನೆಯೊಂದಿಗೆ ಲೆಕ್ಕಾಚಾರ ಇದೆಯೋ, ಅಷ್ಟು ಮಾಡಿ, ನಾನು ಎಲ್ಲಿ
ಸಂಭಾಲಿಸುವುದು? ಇದನ್ನು ನೀವೇ ಸಂಭಾಲನೆ ಮಾಡಬೇಕು. ಯಾವುದು ಅವಶ್ಯಕವಾಗಿದೆ ಅದನ್ನಂತೂ ಮಾಡಲು
ನಿಮ್ಮನ್ನು ಫ್ರೀ ಮಾಡುತ್ತೇನೆ, ಆದರೆ ಇದೇನು ನೀವು ಹೆಚ್ಚಿನ ರಚನೆಯನ್ನು ಮಾಡುತ್ತಿರುವಿರಿ
ಅದಕ್ಕಾಗಿ ನಿರಾಕರಿಸುತ್ತೇನೆ, ಏಕೆಂದರೆ ಈಗಂತೂ ಅದು ಬೀಳಲೇಬೇಕು ಏಕೆಂದರೆ ವ್ಯರ್ಥ ಸಮಯವನ್ನು
ಅದರಲ್ಲಿ ಕಳೆಯುತ್ತಿರಿ. ಈ ವ್ಯರ್ಥ ಜಂಜಾಟಗಳಿಂದ ನೀವು ದುಃಖಿ ಆಗಿದ್ದೀರಿ, ಈ ಜಂಜಾಟಗಳಿಂದ ನೀವು
ಹೇಗೆ ಬಿಡುಗಡೆಯಾಗುತ್ತಿರಿ? ಇದನ್ನೇ ನಾನು ನಿಮಗೆ ತಿಳಿಸುತ್ತೇನೆ. ಆದರೂ ಸಹ ಕುಳಿತುಕೊಂಡು ಅನೇಕ
ನೆಪಗಳನ್ನು ಹೇಳುವುದು, ಇದು ಎಲ್ಲಿಯ ರೀತಿ ಆಗಿದೆ? ನಂತರ ತಂದೆಯೂ ಸಹ ಹೇಳುತ್ತಾರೆ ನೋಡಿಕೊಳ್ಳಿ,
ಈಗ ನನಗೆ ಬೆರಳಿನ ಸಹಯೋಗ ಕೊಡುವುದಿಲ್ಲ, ಕೈಯನ್ನು ಕೊಡುವುದಿಲ್ಲ ಎಂದರೆ, ನಂತರ ನಾನು ನಿಮ್ಮ
ಮೂಗನ್ನು ಹಿಡಿದುಕೊಂಡು ಕರೆದುಕೊಂಡು ಹೋಗುತ್ತೇನೆ. ಮೂಗನ್ನು ಹಿಡಿಯುತ್ತಾರೆ ಎಂದರೆ ಉಸಿರು
ಕಟ್ಟುತ್ತದೆ, ನಂತರ ದುಃಖ ಆಗುತ್ತದೆ, ಶಿಕ್ಷೆಯನ್ನು ತಿನ್ನಬೇಕಾಗುತ್ತದೆ! ಹಾಗಾಗಿ ಹೇಳುತ್ತಾರೆ
- ಈಗ ಕೈಯಲ್ಲಿ ಕೈಹಿಡಿದುಕೊಂಡು ನೇರವಾಗಿ ಹೋಗುವ ಸಮಯ ಬಂದಿದೆ. ಒಂದುವೇಳೆ ಸರಿಯಾದ ಮಾರ್ಗದಲ್ಲಿ
ನಡೆಯುವುದಿಲ್ಲ ಎಂದರೆ ನನ್ನ ಕೈಯಲ್ಲಿ ನಿಮ್ಮ ಮೂಗು ಸಹ ಬರುವುದು, ನಂತರ ನೋಡಿಕೊಳ್ಳಿ ಏನಾಗುವುದು.
ನಂತರ ಆ ಸಮಯದಲ್ಲಿ ಏನು ಆಗುವುದಿಲ್ಲ. ಏನು ಮಾಡಲು ಆಗುವುದಿಲ್ಲ, ಹಾಗಾಗಿ ಬಾಬಾ ಹೇಳುತ್ತಾರೆ
ಮಕ್ಕಳೇ ಈಗ ನೀವು ನನ್ನವರಾಗಿ, ನನ್ನ ಬಳಿ ಬಂದು, ನನ್ನ ಮಾತುಗಳನ್ನು ಕೇಳಿ, ಏನೂ ಮಾಡಿಲ್ಲ ಎಂದರೆ
ಇದರ ಶಿಕ್ಷೆ ಬಹಳ ಕಠಿಣವಾಗಿರುತ್ತದೆ, ಯಾವ ಮಕ್ಕಳಿಗೆ ಗೊತ್ತಿಲ್ಲ ಅವರ ಮಾತಂತೂ ಭಿನ್ನವಾಗಿದೆ,
ಬಾಕಿ ಯಾರಿಗೆ ಗೊತ್ತಿದೆ, ಯಾರು ಕುಳಿತುಕೊಂಡು ಕೇಳಿಯೂ ಸಹ, ಆ ಮಾತುಗಳನ್ನು ನಿರ್ಲಕ್ಷಿಸುತ್ತಾರೆ
ಅವರಿಗಂತೂ ಯಾವುದೇ ಕ್ಷಮೆ ಇಲ್ಲ. ಹೇಗೆ 10 ರಷ್ಟು ಲಾಭ, ಅದೇ ರೀತಿ 10 ರಷ್ಟು ನಷ್ಟವು ಆಗುವುದು.
ಹಾಗಾಗಿ ಹೇಳುತ್ತಾರೆ- ತಮ್ಮ ನಷ್ಟವನ್ನು... ಚೆನ್ನಾಗಿ ತಿಳಿದುಕೊಳ್ಳಿ. ತಮ್ಮ ಬುದ್ಧಿಯನ್ನು
ಸ್ವಲ್ಪವಾದರೂ ಚೆನ್ನಾಗಿ ತೆರೆದುಕೊಳ್ಳಿ. ಈಗ ತಂದೆಯೊಂದಿಗೆ ಬುದ್ಧಿ ಯೋಗವನ್ನು ಜೋಡಿ ಸುತ್ತಿರಿ
ಎಂದರೆ ಶಕ್ತಿ ಸಿಗುವುದು. ಹಾಗಾದರೆ ಈ ಎಲ್ಲಾ ಮಾತುಗಳನ್ನು ತಿಳಿದುಕೊಳ್ಳಿ, ಮರೆಯಬೇಡಿ.
ಈಗ ಯಾವ ಸಮಯ
ನಡೆಯುತ್ತಿದೆ, ಇದನ್ನು ಪರಿಶೀಲಿಸಿ, ಸ್ವಲ್ಪ ಕಣ್ಣನ್ನು ತೆರೆಯಿರಿ, ಬುದ್ಧಿಯನ್ನು ತೆರೆಯಿರಿ
ಹಾಗೂ ಸಮಯದ ಸಂಪೂರ್ಣ ಲಾಭವನ್ನು ಪಡೆದುಕೊಳ್ಳಿ. ತಮ್ಮ ಸಂಪೂರ್ಣ ಅದೃಷ್ಟವನ್ನು ಬೆಳಗಿಸಿ.
ಹೇಳುತ್ತಾರೆ ಎಂತಹ ಸಂಘ - ಅಂತಹ ರಂಗು, ಯಾರಲ್ಲಿ ಈ ಧಾರಣೆ ಸಂಪೂರ್ಣವಾಗಿ ಇರುವುದಿಲ್ಲ ಅವರಲ್ಲಿ
ಮಾಯೆಯ ಸಂಘದ ರಂಗು ಹಿಡಿದು ಬಿಡುತ್ತದೆ. ಆದ್ದರಿಂದಲೇ ಹೇಳುತ್ತಾರೆ ಕೆಟ್ಟದ್ದನ್ನು ಕೇಳಬೇಡಿ,
ಕೆಟ್ಟದ್ದನ್ನು ನೋಡಬೇಡಿ, ಕೆಟ್ಟದ್ದನ್ನು ಮಾತನಾಡಬೇಡಿ... ಕೆಲವರು ಇಂತಹ ಕೆಟ್ಟವರು ಇದ್ದಾರೆ
ಅವರು ಇಲ್ಲಿಯೂ ಸಹ ಕೆಲವರನ್ನು ಬಿಡುವುದಿಲ್ಲ, ನಂತರ ಒಬ್ಬರು ಇನ್ನೊಬ್ಬರ ಸಂಘ ದೋಷದಲ್ಲಿ ಬಂದು
ಬಿಡುತ್ತಾರೆ. ಹಾಗಾಗಿ ಹೇಳುತ್ತಾರೆ ಇಂತಹ ಸಂಘ ದೋಷದಿಂದ ಎಚ್ಚರಿಕೆಯಿಂದ ಇರಿ. ಈ ರೀತಿ
ತಿಳಿದುಕೊಳ್ಳಬೇಡಿ - ಸಂಗದೋಷ ಹೊರಗಡೆ ಇದೆ, ಇಲ್ಲಿ ಇಲ್ಲ. ಇಲ್ಲ, ಇಲ್ಲಿಯೂ ಸಹ ಅವರು ಓಡಾಡುತ್ತಾ
ಇರುತ್ತಾರೆ, ಏಕೆಂದರೆ ಅವರದೇ ರಾಜ್ಯವಾಗಿದೆ, ಹಾಗಾಗಿ ಬಾಬಾ ಹೇಳುತ್ತಾರೆ ಚೆನ್ನಾಗಿ ಕವಚವನ್ನು
ಹಾಕಿಕೊಂಡು ಇರಿ. ಕವಚ ಇರುತ್ತದೆ ಎಂದರೆ ಅವರ ಗುಂಡು ತಗುಲುವುದಿಲ್ಲ. ಯೋಗದ ಕವಚವಾಗಿದೆ, ಜ್ಞಾನದ
ಖಡ್ಗವಾಗಿದೆ. ಈ ಎಲ್ಲಾ ಅಸ್ತ್ರ ಶಸ್ತ್ರಗಳನ್ನು ತಮ್ಮ ಬಳಿ ಚೆನ್ನಾಗಿ ಸಂಭಾಲನೆ ಮಾಡಿಕೊಂಡು
ಇಟ್ಟುಕೊಳ್ಳಿ.
ಹೇಳುತ್ತಾರೆ - ಯಾರು
ಮಾಡುತ್ತಾರೆ ಅವರು ಪಡೆದುಕೊಳ್ಳುತ್ತಾರೆ, ಇದಂತೂ ಭವಿಷ್ಯ ಪ್ರಾರಬ್ಧ ಮಾಡುವ ಮಾತಾಯಿತು. ಇಲ್ಲಂತೂ
ಪ್ರಾರಬ್ಧ ಭೋಗಿಸುವ ಹಾಗಿಲ್ಲ, ಇಲ್ಲಿ ಯಾರು ಗುರುವಾಗಿ ಕುಳಿತುಕೊಳ್ಳುವ ಹಾಗಿಲ್ಲ. ಇದರಲ್ಲಿ ಯಾರು
ತಪ್ಪು ತಿಳಿದುಕೊಳ್ಳಬೇಡಿ, ಆ ಕಾರಣದಿಂದ ಇದೆಲ್ಲವನ್ನು ತಿಳಿಸಿಕೊಡಲಾಗುತ್ತದೆ. ಈ ಎಲ್ಲಾ
ಮಾತುಗಳನ್ನು ಇಟ್ಟುಕೊಂಡು ತಮ್ಮನ್ನು ಸುರಕ್ಷಿತ ವಾಗಿ ಇಟ್ಟು ಕೊಳ್ಳಬೇಕಾಗಿದೆ. ಇಲ್ಲಿ ಯಾವುದೇ
ಖರ್ಚಿನ ಮಾತು ಇರಬಾರದು. ಈಗ ಈ ಎಲ್ಲಾ ಖರ್ಚನ್ನು ಅನ್ಯರ ಕಲ್ಯಾಣಾರ್ಥವಾಗಿ ಉಪಯೋಗಿಸಬೇಕು.
ಒಂದೊಂದು ಪೈಸೆಯನ್ನು ಎಲ್ಲರೂ ಈ ಕಾರ್ಯದಲ್ಲಿ ತೊಡಗಿಸಬೇಕು. ಒಳ್ಳೆಯದು.
ಇಂತಹ ಬಾಪ್ದಾದಾ ಹಾಗೂ
ತಾಯಿಯ ಮಧುರ ಮಧುರ ಬಹಳ ಒಳ್ಳೆಯ, ಎಚ್ಚರವಾಗಿರುವಂತಹ ಮಕ್ಕಳ ಪ್ರತಿ ನೆನಪು ಪ್ರೀತಿ ಶುಭೋದಯ.
ಒಳ್ಳೆಯದು.
ಪ್ರಶ್ನೆ:-
ಮಮ್ಮಾ ನಾವು
ನಡೆದಾಡುತ್ತಾ ಓಡಾಡುತ್ತಾ ಯೋಗದ ಶ್ರೇಷ್ಠ ಸ್ಥಿತಿಯಲ್ಲಿ ಹೇಗೆ ಸ್ಥಿತರಾಗಲು ಸಾಧ್ಯ?
ಉತ್ತರ:-
ವಾಸ್ತವದಲ್ಲಿ ನಮ್ಮ ಈ ಜೀವನ ನ್ಯಾಚುರಲ್ ಆಗಿ ಯೋಗದ ಜೀವನ ಆಗಿರಬೇಕು ಏಕೆಂದರೆ ಯೋಗ ನಿಶ್ಚಯವಾಗಿದೆ.
ಪ್ರತಿ ಕ್ಷಣ ನಿಶ್ಚಯವನ್ನು ಕಾಯಂ ಮಾಡಿಕೊಂಡು ಪ್ರಾಕ್ಟಿಕಲ್ ಆ ಸ್ವರೂಪ ಆಗಿ ಬಿಡಬೇಕು.
ನಿಶ್ಚಯರೂಪಿ ಆಗಿ ಕರ್ಮೇಂದ್ರಿಯಗಳಿಂದ ಕರ್ಮ ಮಾಡಿ. ಬಲೆ ಸ್ಥೂಲ ಕರ್ಮೇಂದ್ರಿಯಗಳು ಯಾವುದೇ ಕೆಲಸ
ಮಾಡುತ್ತಿದೆ ಆದರೆ ನಾವು ಆ ಸುಖ ಸ್ವರೂಪ ಸ್ಥಿತಿಯಲ್ಲಿ ಲವಲೀನ ಆಗಿರಬೇಕು. ನಿಮ್ಮ ಚಹರೆ ಸದಾ ಸುಖ
ಸ್ವರೂಪ ರಮಣಿಕವಾಗಿ ಕಾಣಿಸಬೇಕು. ಯಾವುದೇ ಅಶುದ್ಧ ಸಂಕಲ್ಪ ವಿಕಲ್ಪ ಇರಬಾರದು. ಈಶ್ವರೀಯ
ಆನಂದದಲ್ಲಿ, ಆಂತರಿಕ ಮಗ್ನ ಸ್ಥಿತಿಯಲ್ಲಿ ಇರುತ್ತೀರಿ ಎಂದರೆ ಯಾವುದೇ ಅಶುದ್ಧ ಸಂಕಲ್ಪ ವಿಕಲ್ಪ
ಉತ್ಪನ್ನ ಆಗುವುದಿಲ್ಲ. ಶುದ್ಧ ಪವಿತ್ರ ಭೂಮಿಯಲ್ಲಿ ಏನೆಲ್ಲಾ ಸಂಕಲ್ಪಗಳು ಉತ್ಪನ್ನವಾಗುತ್ತದೆ ಅದು
ಲೋಕ ಸಂಗ್ರಹ ಪ್ರತಿ ಅಥವಾ ತನ್ನ ಉನ್ನತಿಯ ಪ್ರತಿ ಇರುತ್ತದೆ. ಇದು ಪ್ರಿಯ ಸುಂದರ ಸ್ಥಿತಿಯಾಗಿದೆ,
ಯಾವುದು ಸಮಯದಲ್ಲಿ ಸಹಯೋಗ ಕೊಡುತ್ತದೆ. ಇಂತಹ ಈಶ್ವರೀಯ ಅಲೌಕಿಕ ಮಧುರ ಪವಿತ್ರ ಜೀವನವನ್ನು
ಮಾಡಿಕೊಳ್ಳುವ ಈಗಲೇ ಗೋಲ್ಡನ್ ಚಾನ್ಸ್ ಸಿಕ್ಕಿದೆ. ಇಂತಹ ಸ್ಥಿತಿಯನ್ನು ಮಾಡಿಕೊಳ್ಳುವುದಕ್ಕಾಗಿ
ಸ್ವಲ್ಪ ಪರಿಶ್ರಮ ಪಡಿ ಯಾವಾಗ ನಾವು ಯೋಗದಲ್ಲಿ ಕುಳಿತುಕೊಳ್ಳುತ್ತೇವೆ, ಆಗ ಮನಸ್ಸಿನಲ್ಲಿ ಮಂತ್ರ,
ಪೂಜೆ, ಜಪ ಇತ್ಯಾದಿ ಏನನ್ನು ಮಾಡುವುದಿಲ್ಲ, ಭಕ್ತಿ ಮಾರ್ಗದಲ್ಲಿ ಕೆಲವರು ಮನಸ್ಸಿನಲ್ಲಿ
ಪ್ರಾರ್ಥನೆ ಮಾಡುತ್ತಾರೆ, ಮಾಲೆಯನ್ನು ಜಪ ಮಾಡುತ್ತಾರೆ, ಮೂರ್ತಿಯನ್ನು ಸಮ್ಮುಖದಲ್ಲಿ ಇಟ್ಟುಕೊಂಡು
ಹೂವನ್ನು ಹಾಕುತ್ತಾರೆ, ಇದೆಲ್ಲವನ್ನು ಮನಸ್ಸಿನಲ್ಲಿಯೇ ಮಾಡುತ್ತಾರೆ, ಇದಕ್ಕೆ ಮನಸಾ ಪೂಜೆ ಎಂದು
ಹೇಳುತ್ತಾರೆ. ಆದರೆ ಇಲ್ಲಿ ನಾವು ಕೇವಲ ನಮ್ಮ ಸ್ವ-ಸ್ವರೂಪದಲ್ಲಿ ಸ್ಥಿತವಾಗಿ ಸುಖ ಸ್ವರೂಪ ಆಗಿ
ಬಿಡುತ್ತೇವೆ. ತಮ್ಮ ಮನಸ್ಸಿನ ಸಹಿತ ಎಲ್ಲಾ ಕರ್ಮೇಂದ್ರಿಯಗಳನ್ನು ಕಂಟ್ರೋಲ್ ಮಾಡಿ ಏಕಾಗ್ರಚಿತ್ತ
ಆಗಿ ಈಶ್ವರೀಯ ಸುಖ ಸ್ವರೂಪ ಆಗಿ ಬಿಡುತ್ತೇವೆ, ಇದಕ್ಕಾಗಿ ಯೋಗದ ಸಮಯ ಪರ್ಸನಲ್ ಆಗಿ ನಿಗದಿ
ಆಗಿರಬೇಕು. ಒಂದು ಕಡೆಯಲ್ಲಿ ಕುಳಿತುಕೊಂಡು ಅಭ್ಯಾಸ ಮಾಡಬೇಕು. ಕೇವಲ ವ್ಯಕ್ತ ಮಾತುಗಳಿಂದ
ಸಂಬಂಧವನ್ನು ಮುರಿದು ಹಾಕಿ ಅವ್ಯಕ್ತನೊಂದಿಗೆ ಸಂಬಂಧ ಜೋಡಿಸಬೇಕು ಆಗ ನೆನಪು ಸಹಜ ಆಗಿ ಬಿಡುವುದು.
ಒಳ್ಳೆಯದು. ಓಂ ಶಾಂತಿ.
ವರದಾನ:
ಬಾಪ್-ದಾದಾರವರ
ಜೊತೆಯ ಮಾಯೆಯನ್ನು ದೂರದಿಂದಲೇ ಮೂರ್ಛಿತಗೊಳಿಸುವ ಮಾಯಾಜೀತ, ಜಗತ್ಜೀತ ಭವ.
ಹೇಗೆ ತಂದೆಯ ಸ್ನೇಹಿ
ಆಗಿದ್ದೀರಿ ಹಾಗೆಯೇ ತಂದೆಯನ್ನು ಜೊತೆಗಾರ (ಸಂಗಾತಿ) ನನ್ನಾಗಿ ಮಾಡಿಕೊಳ್ಳುತ್ತೀರೆಂದರೆ, ಮಾಯೆಯು
ದೂರದಿಂದಲೇ ಮೂರ್ಛಿತವಾಗುತ್ತದೆ. ಮೊದ ಮೊದಲ ಪ್ರತಿಜ್ಞೆಯೇನಿದೆ - ನಿಮ್ಮೊಂದಿಗೇ ಆಹಾರ
ಸ್ವೀಕರಿಸುವೆನು, ನಿಮ್ಮೊಂದಿಗೇ ಕುಳಿತುಕೊಳ್ಳುವೆನು, ನಿಮ್ಮೊಂದಿಗೆ ವಾರ್ತಾಲಾಪ ಮಾಡುವೆನು....
ಇದೇ ಪ್ರತಿಜ್ಞೆಯನುಸಾರ ಇಡೀ ದಿನಚರಿಯಲ್ಲಿ, ಪ್ರತಿಯೊಂದು ಕಾರ್ಯವನ್ನು ತಂದೆಯ ಜೊತೆ
ಮಾಡುತ್ತೀರೆಂದರೆ, ಮಾಯೆಯು ತೊಂದರೆ ಮಾಡಲು ಸಾಧ್ಯವಿಲ್ಲ ಹಾಗೂ ಅದರ ವಿನಾಶವಾಗಿ ಬಿಡುತ್ತದೆ.
ಆದ್ದರಿಂದ ಜೊತೆಗಾರನನ್ನು ಸದಾ ಜೊತೆಯಿಟ್ಟುಕೊಳ್ಳಿರಿ, ಜೊತೆಯ ಶಕ್ತಿಯಿಂದ ಅಥವಾ ಮಿಲನದಲ್ಲಿ
ಮಗ್ನರಾಗಿ ಇರುವುದರಿಂದ ಮಾಯಾಜೀತ, ಜಗತ್ಜೀತರು ಆಗಿ ಬಿಡುತ್ತೀರಿ.
ಸ್ಲೋಗನ್:
ತಮ್ಮ ಶ್ರೇಷ್ಠ
ವೃತ್ತಿಯಿಂದ ಪ್ರವೃತ್ತಿಯ ಪರಿಸ್ಥಿತಿಗಳನ್ನು ಪರಿವರ್ತನೆ ಮಾಡಿರಿ.
ಅವ್ಯಕ್ತ ಸೂಚನೆಗಳು:-
ಸದಾ ಹರ್ಷಿತರಾಗಿರಲು ತಮ್ಮ ಸ್ವಭಾವವನ್ನು ಸರಳ ಮಾಡಿಕೊಳ್ಳಿರಿ, ಸಹನಶೀಲರಾಗಿರಿ.
ಅವ್ಯಕ್ತ ಸ್ಥಿತಿ ರೂಪಿ
ದರ್ಪಣವನ್ನು ಸ್ವಚ್ಛ ಮತ್ತು ಸ್ಪಷ್ಟ ಮಾಡುವುದಕ್ಕಾಗಿ ಸರಳತೆ, ಶ್ರೇಷ್ಠತೆ ಮತ್ತು ಸಹನಶೀಲತೆ ಈ
ಮೂರು ಮತುಗಳ ಮೇಲೆ ಗಮನ ಕೊಡಿ. ಒಂದುವೇಳೆ ಮೂರರಲ್ಲಿ ಒಂದು ಮಾತಿನ ಕಡಿಮೆಯಿದ್ದರೂ ದರ್ಪಣದಲ್ಲಿ
ಕಡಿಮೆ-ಕೊರತೆಯ ಕಲೆ ಕಾಣಿಸುವುದು ಇದಕ್ಕಾಗಿ ಯಾವುದೇ ಕಾರ್ಯ ಮಾಡುತ್ತೀರೆಂದರೆ, ಅದರಲ್ಲಿ
ಸಾಧಾರಣತೆ ಕಾಣಿಸುವುದಿಲ್ಲ. ಸಾಧಾರಣತನವನ್ನು ಶ್ರೇಷ್ಠತೆಯಲ್ಲಿ ಬದಲಾಯಿಸಿ, ಪ್ರತಿ ಕಾರ್ಯದಲ್ಲಿ
ಸಹನಶೀಲತೆ ಮತ್ತು ವಾಣಿಯಲ್ಲಿ ಸರಳತೆಯನ್ನು ಧಾರಣೆ ಮಾಡಿ ಆಗ ಸರ್ವೀಸ್ನಲ್ಲಿ ಸಫಲತೆ ಕಾಣಿಸುವುದು.