24.07.24 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ-
ತಂದೆಯೊಂದಿಗೆ ಹೋಲ್ಸೇಲ್ (ಸಗಟು) ವ್ಯಾಪಾರ ಮಾಡುವುದನ್ನು ಕಲಿಯಿರಿ, ಮನ್ಮನಾಭವ, ಆತ್ಮವೆಂದು
ತಿಳಿದು ತಂದೆಯನ್ನು ನೆನಪು ಮಾಡುವುದು ಮತ್ತು ಮಾಡಿಸುವುದು ಹೋಲ್ಸೇಲ್ ವ್ಯಾಪಾರವಾಗಿದೆ,
ಉಳಿದೆಲ್ಲವೂ ಚಿಲ್ಲರೆ ವ್ಯಾಪಾರವಾಗಿದೆ”
ಪ್ರಶ್ನೆ:
ತಂದೆಯು ತಮ್ಮ
ಮನೆಗೆ ಎಂತಹ ಮಕ್ಕಳನ್ನು ಸ್ವಾಗತಿಸುತ್ತಾರೆ?
ಉತ್ತರ:
ಯಾವ ಮಕ್ಕಳು
ಬಹಳ ಚೆನ್ನಾಗಿಯೂ ತಂದೆಯ ಮತದನುಸಾರ ನಡೆಯುತ್ತಾರೆ, ಮತ್ತ್ಯಾರನ್ನೂ ನೆನಪು ಮಾಡುವುದಿಲ್ಲವೋ,
ದೇಹಸಹಿತ ದೇಹದ ಎಲ್ಲಾ ಸಂಬಂಧಗಳಿಂದ ಬುದ್ಧಿಯೋಗವನ್ನು ತೆಗೆದು ಒಬ್ಬರ ನೆನಪಿನಲ್ಲಿರುತ್ತಾರೆಯೋ
ಅಂತಹ ಮಕ್ಕಳನ್ನು ತಂದೆಯು ತನ್ನ ಮನೆಗೆ ಬರಮಾಡಿಕೊಳ್ಳುತ್ತಾರೆ. ತಂದೆಯು ಈಗ ಮಕ್ಕಳನ್ನು
ಹೂಗಳನ್ನಾಗಿ ಮಾಡುತ್ತಾರೆ, ನಂತರ ಹೂಗಳಾದ ಮಕ್ಕಳನ್ನು ತನ್ನ ಮನೆಗೆ ಸ್ವಾಗತ ಮಾಡುತ್ತಾರೆ.
ಓಂ ಶಾಂತಿ.
ಮಕ್ಕಳು ತಮ್ಮ ತಂದೆ ಮತ್ತು ಶಾಂತಿಧಾಮ-ಸುಖಧಾಮದ ನೆನಪಿನಲ್ಲಿ ಕುಳಿತುಕೊಳ್ಳಬೇಕಾಗಿದೆ. ಆತ್ಮವು
ತಂದೆಯನ್ನೇ ನೆನಪು ಮಾಡಬೇಕು, ಈ ದುಃಖಧಾಮವನ್ನು ಮರೆತುಬಿಡಬೇಕಾಗಿದೆ. ಇದು ತಂದೆ ಮತ್ತು ಮಕ್ಕಳ
ಮಧುರ ಸಂಬಂಧವಾಗಿದೆ. ಇಷ್ಟು ಮಧುರಸಂಬಂಧವು ಬೇರೆ ಯಾರೆ ತಂದೆಯದಾಗಿರುವುದಿಲ್ಲ, ಒಂದೇ
ಸಂಬಂಧವಿರುತ್ತದೆ. ತಂದೆಯೊಂದಿಗೆ ನಂತರ ಶಿಕ್ಷಕ ಮತ್ತು ಗುರುಗಳೊಂದಿಗಿರುತ್ತದೆ. ಈಗ ಇಲ್ಲಿ ಈ
ಮೂರೂ ಸಂಬಂಧಗಳು ಒಬ್ಬರೇ ಆಗಿದ್ದಾರೆ. ಇದು ಬುದ್ಧಿಯಲ್ಲಿ ನೆನಪಿದ್ದರೂ ಸಹ ಖುಷಿಯ ಮಾತಲ್ಲವೆ.
ಒಬ್ಬರೇ ತಂದೆಯು ಸಿಕ್ಕಿದ್ದಾರೆ, ಅವರು ಬಹಳ ಸಹಜ ಮಾರ್ಗವನ್ನು ತಿಳಿಸುತ್ತಾರೆ ಅಂದಾಗ ತಂದೆಯನ್ನು,
ಶಾಂತಿಧಾಮ ಮತ್ತು ಸುಖಧಾಮವನ್ನು ನೆನಪು ಮಾಡಿ, ಈ ದುಃಖಧಾಮವನ್ನು ಮರೆತುಬಿಡಿ. ನಡೆದಾಡಿ-ತಿರುಗಾಡಿ
ಆದರೆ ಬುದ್ಧಿಯಲ್ಲಿ ಇದೇ ನೆನಪಿರಲಿ. ಇಲ್ಲಂತೂ ಯಾವುದೇ ವ್ಯವಹಾರದ ಜಂಜಾಟವಿರುವುದಿಲ್ಲ. ಮನೆಯಲ್ಲಿ
ಕುಳಿತಿದ್ದೀರಿ, ತಂದೆಯು ಕೇವಲ ಮೂರುಶಬ್ಧಗಳನ್ನು ನೆನಪು ಮಾಡಲು ಹೇಳುತ್ತಾರೆ. ವಾಸ್ತವದಲ್ಲಿ ಅದು
ಒಂದೇ ಶಬ್ಧವಾಗಿದೆ- ತಂದೆಯನ್ನು ನೆನಪು ಮಾಡಿ. ತಂದೆಯನ್ನು ನೆನಪು ಮಾಡಿದಾಗ ಸುಖಧಾಮ ಮತ್ತು
ಶಾಂತಿಧಾಮ ಎರಡೂ ಆಸ್ತಿಯು ನೆನಪಿಗೆ ಬಂದುಬಿಡುತ್ತದೆ. ಕೊಡುವವರು ತಂದೆಯಾಗಿದ್ದಾರೆ. ನೆನಪು
ಮಾಡುವುದರಿಂದ ಖುಷಿಯ ನಶೆಯೇರುತ್ತದೆ. ನೀವು ಮಕ್ಕಳ ಖುಷಿಯಂತೂ ಹೆಸರುವಾಸಿಯಾಗಿದೆ. ಮಕ್ಕಳ
ಬುದ್ಧಿಯಲ್ಲಿದೆ- ತಂದೆಯು ನಮ್ಮನ್ನು ಮನೆಗೆ ಸ್ವಾಗತ ಮಾಡುತ್ತಾರೆ, ಆಹ್ವಾನಿಸುತ್ತಾರೆ ಆದರೆ ಯಾರು
ಚೆನ್ನಾಗಿ ತಂದೆಯ ಶ್ರೀಮತದಂತೆ ನಡೆಯುವರೋ ಮತ್ತ್ಯಾರನ್ನೂ ನೆನಪು ಮಾಡುವುದಿಲ್ಲವೋ ಅವರನ್ನೇ
ಸ್ವಾಗತಿಸುತ್ತಾರೆ. ದೇಹಸಹಿತ ದೇಹದ ಸರ್ವಸಂಬಂಧಗಳಿಂದ ಬುದ್ಧಿಯೋಗವನ್ನು ತೆಗೆದು ನನ್ನೊಬ್ಬನನ್ನೇ
ನೆನಪು ಮಾಡಬೇಕಾಗಿದೆ. ಭಕ್ತಿಮಾರ್ಗದಲ್ಲಂತೂ ನೀವು ಬಹಳ ಸೇವೆ ಮಾಡಿದ್ದೀರಿ ಆದರೆ ಹೋಗುವ ಮಾರ್ಗವು
ಸಿಗುವುದೇ ಇಲ್ಲ. ಈಗ ತಂದೆಯು ಎಷ್ಟು ಸಹಜಮಾರ್ಗವನ್ನು ತಿಳಿಸುತ್ತಾರೆ! ಕೇವಲ ಈ ನೆನಪು ಮಾಡಿ-
ತಂದೆಯು ತಂದೆಯೂ ಆಗಿದ್ದಾರೆ, ಶಿಕ್ಷಕನೂ ಆಗಿದ್ದಾರೆ, ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಜ್ಞಾನವನ್ನು
ತಿಳಿಸುತ್ತಾರೆ, ಇದನ್ನು ಮತ್ತ್ಯಾರೂ ತಿಳಿಸಲು ಸಾಧ್ಯವಿಲ್ಲ. ತಂದೆಯು ತಿಳಿಸುತ್ತಾರೆ- ಈಗ ಮನೆಗೆ
ಹೋಗಬೇಕಾಗಿದೆ ನಂತರ ಮೊಟ್ಟಮೊದಲು ಸತ್ಯಯುಗದಲ್ಲಿ ಬರುತ್ತೀರಿ. ಈಗ ಛೀ ಛೀ ಪ್ರಪಂಚದಿಂದ
ಹೋಗಬೇಕಾಗಿದೆ. ಭಲೆ ಇಲ್ಲಿ ಕುಳಿತಿದ್ದೇವೆ ಆದರೆ ಇಲ್ಲಿಂದ ಹೊರಟೆವೆಂದರೆ ಹೊರಟೆವು. ತಂದೆಯೂ
ಖುಷಿಪಡುತ್ತಾರೆ ಏಕೆಂದರೆ ನೀವು ಮಕ್ಕಳು ತಂದೆಗೆ ಬಹಳ ಸಮಯದಿಂದಲೂ ನಿಮಂತ್ರಣ ನೀಡಿದ್ದಿರಿ. ಈಗ
ಮತ್ತೆ ತಂದೆಯನ್ನು ಆಮಂತ್ರಿಸಿದ್ದೀರಿ, ತಂದೆಯು ತಿಳಿಸುತ್ತಾರೆ- ನಾನು ನಿಮ್ಮನ್ನು ಹೂಗಳನ್ನಾಗಿ
ಮಾಡಿ ಮತ್ತೆ ಶಾಂತಿಧಾಮದಲ್ಲಿ ಆಮಂತ್ರಿಸುತ್ತೇನೆ ನಂತರ ನೀವು ನಂಬರ್ವಾರ್ ಹೊರಟುಹೋಗುತ್ತೀರಿ.
ಎಷ್ಟು ಸಹಜವಾಗಿದೆ! ಇಂತಹ ತಂದೆಯನ್ನು ಮರೆಯಬಾರದು ಅಲ್ಲವೆ. ಮಾತಂತೂ ಬಹಳ ಮಧುರ ಮತ್ತು ನೇರವಾಗಿದೆ.
ಒಂದನೆಯ ಮಾತು- ತಂದೆಯನ್ನು ನೆನಪು ಮಾಡಿ, ಭಲೆ ವಿಸ್ತಾರವಾಗಿ ತಿಳಿಸುತ್ತಾರೆ ಆದರೆ ಕೊನೆಯಲ್ಲಿ
ಹೇಳುತ್ತಾರೆ- ತಂದೆಯನ್ನು ನೆನಪು ಮಾಡಿ, ಮತ್ತ್ಯಾರೂ ಇಲ್ಲ. ನೀವು ಒಬ್ಬ ಪ್ರಿಯತಮನಿಗೆ
ಜನ್ಮ-ಜನ್ಮಾಂತರದ ಪ್ರಿಯತಮೆಯರಾಗಿದ್ದೀರಿ. ಬಾಬಾ, ತಾವು ಬಂದರೆ ನಾವು ನಿಮಗೆ
ಬಲಿಹಾರಿಯಾಗುತ್ತೇವೆಂದು ಹಾಡುತ್ತಾ ಬಂದಿದ್ದೀರಿ, ಈಗ ಅವರು ಬಂದಿದ್ದಾರೆ ಅಂದಮೇಲೆ ಆ ಒಬ್ಬ
ತಂದೆಗೆ ಬಲಿಹಾರಿಯಾಗಬೇಕು. ನಿಶ್ಚಯಬುದ್ದಿ ವಿಜಯಂತಿ, ರಾವಣನ ಮೇಲೆ ಜಯಗಳಿಸುತ್ತೀರಿ.ನಂತರ
ರಾಮರಾಜ್ಯದಲ್ಲಿ ಬರಬೇಕು. ಕಲ್ಪ-ಕಲ್ಪವೂ ನೀವು ರಾವಣನಮೇಲೆ ವಿಜಯ ಪ್ರಾಪ್ತಿಮಾಡಿಕೊಳ್ಳುವಿರಿ.
ಬ್ರಾಹ್ಮಣರಾದಿರಿ ನಂತರ ನೀವು ರಾವಣನ ಮೇಲೆ ವಿಜಯಗಳಿಸಿದ್ದೀರಿ. ರಾಮರಾಜ್ಯದ ಮೇಲೆ ನಿಮ್ಮ ಹಕ್ಕಿದೆ.
ತಂದೆಯನ್ನು ಅರಿತುಕೊಂಡಿರಿ ರಾಮರಾಜ್ಯದ ಮೇಲೆ ನಿಮ್ಮ ಹಕ್ಕಾಯಿತು ಬಾಕಿ ಶ್ರೇಷ್ಠಪದವಿಯನ್ನು
ಪಡೆಯುವ ಪುರುಷಾರ್ಥವನ್ನು ಮಾಡಬೇಕು. ವಿಜಯಮಾಲೆಯಲ್ಲಿ ಬರಬೇಕಾಗಿದೆ. ವಿಜಯಮಾಲೆಯು ದೊಡ್ಡದಾಗಿದೆ.
ರಾಜರಾಗುತ್ತೀರೆಂದರೆ ಎಲ್ಲವೂ ಸಿಗುವುದು, ದಾಸ-ದಾಸಿಯರೆಲ್ಲರೂ ನಂಬರ್ವಾರ್ ಆಗುತ್ತಾರೆ, ಎಲ್ಲರದೂ
ಒಂದೇ ರೀತಿಯ ದರ್ಜೆಯಿರುವುದಿಲ್ಲ. ಕೆಲವು ದಾಸಿಯರು ರಾಜ-ರಾಣಿಗೆ ಬಹಳ ಸಮೀಪವಿರುತ್ತಾರೆ.
ರಾಜ-ರಾಣಿಯರು ಏನನ್ನು ತಿನ್ನುವರೋ, ಭಂಡಾರದಲ್ಲಿ ಏನು ತಯಾರಾಗುವುದೋ ಅದೆಲ್ಲವೂ ದಾಸ-ದಾಸಿಯರಿಗೆ
ಸಿಗುವುದು, ಯಾವುದಕ್ಕೆ 36 ಪ್ರಕಾರದ ಭೋಜನವೆಂದು ಹೇಳಲಾಗುತ್ತದೆ. ರಾಜರಿಗೆ ಪದಮಾಪತಿ ಎಂದು
ಹೇಳಲಾಗುವುದು, ಪ್ರಜೆಗಳಿಗೆ ಪದಮಾಪತಿ ಎಂದು ಹೇಳುವುದಿಲ್ಲ. ಭಲೆ ಅಲ್ಲಿ ಹಣದ ಕೊರತೆಯಿರುವುದಿಲ್ಲ,
ಲೆಕ್ಕವಿಲ್ಲದಷ್ಟಿರುತ್ತದೆ ಆದರೆ ಈ ಲಕ್ಷಣವು ದೇವತೆಗಳದಾಗಿರುತ್ತದೆ. ಎಷ್ಟು ನೀವು ನೆನಪು
ಮಾಡುತ್ತೀರೋ ಅಷ್ಟು ಸೂರ್ಯವಂಶದಲ್ಲಿ ಬರುತ್ತೀರಿ. ಹೊಸ ಪ್ರಪಂಚದಲ್ಲಿ ಬರಬೇಕಲ್ಲವೇ
ಮಹಾರಾಜ-ಮಹಾರಾಣಿಯಾಗಬೇಕು ತಂದೆಯು ನರನಿಂದ-ನಾರಾಯಣನಾಗುವ ಜ್ಞಾನವನ್ನು ಕೊಡುತ್ತಾರೆ, ಇದಕ್ಕೆ
ರಾಜಯೋಗವೆಂದು ಹೇಳಲಾಗುತ್ತದೆ, ಬಾಕಿ ಭಕ್ತಿಮಾರ್ಗದ ಶಾಸ್ತ್ರಗಳನ್ನು ಎಲ್ಲರಿಗಿಂತ ಹೆಚ್ಚಿನದಾಗಿ
ನೀವು ಓದಿದ್ದೀರಿ, ಎಲ್ಲರಿಗಿಂತ ಹೆಚ್ಚಿನ ಭಕ್ತಿಯನ್ನು ನೀವು ಮಕ್ಕಳೇ ಮಾಡಿದ್ದೀರಿ, ಈಗ ಬಂದು
ತಂದೆಯೊಂದಿಗೆ ಮಿಲನ ಮಾಡಿದ್ದೀರಿ. ತಂದೆಯು ಬಹಳ ಸಹಜ ಮತ್ತು ನೇರವಾಗಿ ತಿಳಿಸುತ್ತಾರೆ- ಮಕ್ಕಳೇ,
ತಂದೆಯನ್ನು ನೆನಪು ಮಾಡಿ. ತಂದೆಯು ಮಕ್ಕಳೇ, ಮಕ್ಕಳೇ ಎಂದು ಹೇಳಿ ತಿಳಿಸಿಕೊಡುತ್ತಾರಲ್ಲವೆ.
ತಂದೆಯು ಮಕ್ಕಳಿಗೆ ಬಲಿಹಾರಿಯಾಗುತ್ತಾರೆ, ವಾರಸುಧಾರರದ್ದರಿಂದ ಬಲಿಹಾರಿಯಾಗಬೇಕಾಗುತ್ತದೆ. ಬಾಬಾ,
ತಾವು ಬಂದರೆ ನಾವು ಬಲಿಹಾರಿಯಾಗುತ್ತೇವೆ, ತನು-ಮನ-ಧನ ಸಹಿತವಾಗಿ ಬಲಿಹಾರಿಯಾಗುತ್ತೇವೆಂದು ನೀವೂ
ಸಹ ಹೇಳಿದ್ದಿರಿ. ನೀವೀಗ ಒಂದುಬಾರಿ ಬಲಿಹಾರಿಯಾದರೆ ತಂದೆಯು 21 ಬಾರಿ ಬಲಿಹಾರಿಯಾಗುತ್ತಾರೆ.
ತಂದೆಯು ಮಕ್ಕಳಿಗೆ ನೆನಪನ್ನೂ ತರಿಸುತ್ತಾರೆ, ಎಲ್ಲಾ ಮಕ್ಕಳು ನಂಬರ್ವಾರ್ ಪುರುಷಾರ್ಥದನುಸಾರವಾಗಿ
ತಮ್ಮ-ತಮ್ಮ ಭಾಗ್ಯವನ್ನು ತೆಗೆದುಕೊಳ್ಳಲು ಬಂದಿದ್ದಾರೆಂದೂ ಸಹ ತಿಳಿಯುತ್ತದೆ. ತಂದೆಯು
ತಿಳಿಸುತ್ತಾರೆ- ಮಧುರ ಮಕ್ಕಳೇ, ವಿಶ್ವದ ರಾಜ್ಯಭಾಗ್ಯವು ನಮ್ಮಜಹಗೀರಾಗಿದೆ. ಈಗ ಎಷ್ಟು
ಪುರುಷಾರ್ಥವನ್ನು ಬೇಕಾದರೂ ಮಾಡಿ, ಎಷ್ಟು ಪುರುಷಾರ್ಥ ಮಾಡುವಿರೋ ಅಷ್ಟು ಶ್ರೇಷ್ಟಪದವಿಯನ್ನು
ಪಡೆಯುತ್ತೀರಿ. ನಂಬರ್ವನ್ ಇದ್ದವರೇ ಈಗ ಕೊನೆಯ ನಂಬರಿನಲ್ಲಿದ್ದಾರೆ, ಈಗ ಮತ್ತೆ ಅವಶ್ಯವಾಗಿ
ನಂಬರ್ವನ್ನಲ್ಲಿ ಬರುತ್ತಾರೆ. ಎಲ್ಲವೂ ಪುರುಷಾರ್ಥದ ಮೇಲೆ ಆಧಾರಿತವಾಗಿದೆ. ತಂದೆಯು ಮಕ್ಕಳನ್ನು
ಮನೆಗೆ ಕರೆದುಕೊಂಡು ಹೋಗಲು ಬಂದಿದ್ದಾರೆ. ಈಗ ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು
ಮಾಡಿದರೆ ಪಾಪಗಳು ತುಂಡಾಗುತ್ತಾ ಹೋಗುತ್ತವೆ. ಅದು ಕಾಮಾಗ್ನಿಯಾಗಿದೆ, ಇದು ಯೋಗಾಗ್ನಿಯಾಗಿದೆ.
ಕಾಮಾಗ್ನಿಯಲ್ಲಿ ಸುಡುತ್ತಾ-ಸುಡುತ್ತಾ ನೀವು ಕಪ್ಪಾಗಿಬಿಟ್ಟಿದ್ದೀರಿ, ಸಂಪೂರ್ಣ
ಬೂದಿಯಾಗಿಬಿಟ್ಟಿದ್ದೀರಿ. ಈಗ ನಾನು ಬಂದು ನಿಮ್ಮನ್ನು ಜಾಗೃತಗೊಳಿಸುತ್ತೇನೆ. ತಮೋಪ್ರಧಾನರಿಂದ
ಸತೋಪ್ರಧಾನರಾಗುವ ಯುಕ್ತಿಯನ್ನು ತಿಳಿಸುತ್ತೇನೆ. ಇದು ಬಹಳ ಸರಳವಾಗಿದೆ. ನಾನಾತ್ಮನಾಗಿದ್ದೇನೆ,
ಇಷ್ಟೂ ಸಮಯ ದೇಹಾಭಿಮಾನದಲ್ಲಿದ್ದ ಕಾರಣ ನೀವು ತಲೆಕೆಳಕಾಗಿದ್ದೀರಿ, ಈಗ ಆತ್ಮಾಭಿಮಾನಿಯಾಗಿ
ತಂದೆಯನ್ನು ನೆನಪು ಮಾಡಿ ಮನೆಗೆ ಹೋಗಬೇಕಾಗಿದೆ, ತಂದೆಯು ಕರೆದುಕೊಂಡು ಹೋಗಲು ಬಂದಿದ್ದಾರೆ. ನೀವು
ನಿಮಂತ್ರಣ ಕೊಟ್ಟಿರಿ ತಂದೆಯು ಬಂದಿದ್ದಾರೆ. ಪತಿತರನ್ನು ಪಾವನರನ್ನಾಗಿ ಮಾಡಿ ಮಾರ್ಗದರ್ಶಕನಾಗಿ
ಎಲ್ಲಾ ಆತ್ಮಗಳನ್ನು ಮನೆಗೆ ಕರೆದುಕೊಂಡು ಹೋಗುತ್ತಾರೆ. ಆತ್ಮವೇ ಯಾತ್ರೆಗೆ ಹೋಗಬೇಕಾಗಿದೆ.
ನೀವು ಪಾಂಡವ ಸಂಪ್ರದಾಯದವರಾಗಿದ್ದೀರಿ. ಪಾಂಡವರ ರಾಜ್ಯವಿರಲಿಲ್ಲ, ಕೌರವರ ರಾಜ್ಯವಿತ್ತು, ಇಲ್ಲಂತೂ
ಈಗ ರಾಜ್ಯಭಾಗ್ಯವೂ ಸಮಾಪ್ತಿಯಾಗಿಬಿಟ್ಟಿದೆ. ಈಗ ಭಾರತದ ಸ್ಥಿತಿಯು ಎಷ್ಟು ಕಂಗೆಟ್ಟುಹೋಗಿದೆ. ನೀವು
ಪೂಜ್ಯರು,ವಿಶ್ವದ ಮಾಲೀಕರಾಗಿದ್ದೀರಿ, ಈಗ ಪೂಜಾರಿಯಾಗಿದ್ದಿರಿ ಆದ್ದರಿಂದ ವಿಶ್ವದ ಮಾಲೀಕರು ಯಾರೂ
ಇಲ್ಲ. ದೇವಿ-ದೇವತೆಗಳೇ ವಿಶ್ವದ ಮಾಲೀಕರಾಗುತ್ತಾರೆ. ವಿಶ್ವದಲ್ಲಿ ಶಾಂತಿಸ್ಥಾಪನೆ ಆಗಬೇಕೆಂದು
ಮನುಷ್ಯರು ಹೇಳುತ್ತಾರೆ, ನೀವು ಕೇಳಿ- ವಿಶ್ವದಲ್ಲಿ ಶಾಂತಿಯೆಂದು ಯಾವುದಕ್ಕೆ ಹೇಳುತ್ತೀರಿ?
ಯಾವಾಗ ವಿಶ್ವದಲ್ಲಿ ಶಾಂತಿಯು ನೆಲೆಸಿತ್ತು? ವಿಶ್ವದ ಇತಿಹಾಸ-ಭೂಗೋಳವು ಪುನರಾವರ್ತನೆಯಾಗುತ್ತಾ
ಇರುತ್ತದೆ, ಚಕ್ರವು ಸುತ್ತುತ್ತಾ ಇರುತ್ತಾರೆ. ತಿಳಿಸಿ, ವಿಶ್ವದಲ್ಲಿ ಯಾವಾಗ ಶಾಂತಿಯು
ನೆಲೆಸಿತ್ತು? ನೀವು ಯಾವ ಶಾಂತಿಯನ್ನು ಬಯಸುತ್ತೀರಿ? ಇದಕ್ಕೆ ಯಾರೂ ತಿಳಿಸುವುದಿಲ್ಲ. ತಂದೆಯೇ
ತಿಳಿಸುತ್ತಾರೆ- ವಿಶ್ವದಲ್ಲಿ ಸಂಪೂರ್ಣ ಶಾಂತಿಯು ಸ್ವರ್ಗದಲ್ಲಿತ್ತು, ಅದಕ್ಕೆ ಪ್ಯಾರಡೈಸ್ ಎಂದು
ಹೇಳಲಾಗುತ್ತದೆ. ಕ್ರಿಶ್ಚಿಯನ್ನರೂ ಸಹ ಹೇಳುತ್ತಾರೆ- ಕ್ರಿಸ್ತನಿಗೆ 3000 ವರ್ಷಗಳ ಮೊದಲು
ಅವಶ್ಯವಾಗಿ ಸ್ವರ್ಗವಿತ್ತು, ಕ್ರಿಶ್ಚಿಯನ್ನರದು ಸಂಪೂರ್ಣ ಪಾರಸಬುದ್ಧಿಯೂ ಆಗುವುದಿಲ್ಲ. ಸಂಪೂರ್ಣ
ಕಲ್ಲುಬುದ್ಧಿಯೂ ಆಗುವುದಿಲ್ಲ, ಭಾರತವಾಸಿಗಳು ಪಾರಸಬುದ್ಧಿ ಮತ್ತು ಕಲ್ಲುಬುದ್ಧಿಯವರಾಗುತ್ತಾರೆ.
ಹೊಸಪ್ರಪಂಚಕ್ಕೆ ಸ್ವರ್ಗವೆಂದು ಹೇಳಲಾಗುತ್ತದೆ, ಹಳೆಯದಕ್ಕೆ ಸ್ವರ್ಗವೆಂದು ಹೇಳುವುದಿಲ್ಲ.
ಮಕ್ಕಳಿಗೆ ತಂದೆಯು ಸ್ವರ್ಗ ಮತ್ತು ನರಕದ ರಹಸ್ಯವನ್ನು ತಿಳಿಸಿದ್ದಾರೆ. ಇದು ರೀಟೇಲ್
ವ್ಯಾಪಾರವಾಗಿದೆ. ಹೋಲ್ಸೇಲ್ನಲ್ಲಿ ಕೇವಲ ಒಂದು ಶಬ್ಧವನ್ನು ಹೇಳುತ್ತಾರೆ- ಮಕ್ಕಳೇ ನನ್ನೊಬ್ಬನನ್ನೇ
ನೆನಪು ಮಾಡಿ, ತಂದೆಯಿಂದಲೇ ಬೇಹದ್ದಿನ ಆಸ್ತಿಯು ಸಿಗುತ್ತದೆ. ಇದೂ ಸಹ ಹಳೆಯ ಮಾತಾಗಿದೆ, 5000
ವರ್ಷಗಳ ಮೊದಲು ಭಾರತದಲ್ಲಿ ಸ್ವರ್ಗವಿತ್ತು, ತಂದೆಯು ಮಕ್ಕಳಿಗೆ ಸತ್ಯ-ಸತ್ಯವಾದ ಕಥೆಯನ್ನು
ತಿಳಿಸುತ್ತಾರೆ, ಸತ್ಯನಾರಾಯಣನ ಕಥೆ, ಮೂರನೆಯ ನೇತ್ರದ ಕಥೆ, ಅಮರಕಥೆಯು ಪ್ರಸಿದ್ಧವಾಗಿದೆ. ನಿಮಗೂ
ಸಹ ಜ್ಞಾನದ ಮೂರನೆಯ ನೇತ್ರವು ಸಿಗುತ್ತದೆ, ಇದಕ್ಕೆ ಮೂರನೆಯ ನೇತ್ರದ ಕಥೆಯೆಂದು ಹೇಳಲಾಗುತ್ತದೆ.
ಅವರಂತೂ ಭಕ್ತಿಯ ಪುಸ್ತಕಗಳನ್ನು ರಚಿಸಿಬಿಟ್ಟಿದ್ದಾರೆ. ಈಗ ನೀವು ಮಕ್ಕಳಿಗೆ ಎಲ್ಲಾ ಮಾತುಗಳನ್ನು
ಚೆನ್ನಾಗಿ ತಿಳಿಸಲಾಗುತ್ತದೆ. ರೀಟೈಲ್ ಮತ್ತು ಹೋಲ್ಸೇಲ್ ಇರುತ್ತದೆಯಲ್ಲವೆ. ಇಷ್ಟು ಜ್ಞಾನವನ್ನು
ತಂದೆಯು ತಿಳಿಸುತ್ತಾರೆ ಸಾಗರವನ್ನು ಶಾಹಿಯನ್ನಾಗಿ ಮಾಡಿಕೊಂಡು ಬರೆದರೂ ಇದರ ಅಂತ್ಯವನ್ನು ತಲುಪಲು
ಸಾಧ್ಯವೇ ಇಲ್ಲ ಅಂದರೆ ಇದು ರೀಟೈಲ್ ಆಯಿತು. ಹೋಲ್ಸೇಲ್ನಲ್ಲಿ ಕೇವಲ ತಿಳಿಸುತ್ತಾರೆ- ಮಕ್ಕಳೇ,
ಮನ್ಮನಾಭವ ಶಬ್ಧವು ಒಂದೇ ಆಗಿದೆ, ಅದರ ಅರ್ಥವನ್ನು ನೀವು ತಿಳಿದುಕೊಂಡಿದ್ದೀರಿ, ಇದನ್ನು ಯಾರೂ
ತಿಳಿಸಲು ಸಾಧ್ಯವಿಲ್ಲ. ತಂದೆಯು ಯಾವುದೇ ಸಂಸ್ಕೃತದಲ್ಲಿ ಜ್ಞಾನ ಕೊಟ್ಟಿಲ್ಲ. ಅವರಂತೂ ಹೇಗೆ ರಾಜನೋ
ಅವನು ತನ್ನಭಾಷೆಯನ್ನು ನಡೆಸುತ್ತಾನೆ. ತಮ್ಮ ಭಾಷೆಯು ಹಿಂದಿಯೇ ಇರುತ್ತದೆ ಅಂದಮೇಲೆ
ಸಂಸ್ಕೃತವನ್ನೇಕೆ ಕಲಿಯಬೇಕು! ಇದನ್ನು ಕಲಿಯಲು ಎಷ್ಟೊಂದು ಹಣ ಖರ್ಚು ಮಾಡುತ್ತಾರೆ.
ನಿಮ್ಮ ಬಳಿ ಯಾರೇ ಬರಲಿ ಅವರಿಗೆ ತಿಳಿಸಿ- ತಂದೆಯು ತಿಳಿಸುತ್ತಾರೆ, ನನ್ನನ್ನು ನೆನಪು ಮಾಡಿದರೆ
ಶಾಂತಿಧಾಮ-ಸುಖಧಾಮದ ಆಸ್ತಿ ಸಿಗುತ್ತದೆ,ಇದನ್ನು ತಿಳಿಯಬೇಕೆಂದಿದ್ದರೆ ಕುಳಿತು ತಿಳಿದುಕೊಳ್ಳಿ,
ಬಾಕಿ ನಮ್ಮಬಳಿ ಬೇರೆ ಯಾವುದೇ ಮಾತಿಲ್ಲ. ತಂದೆಯ ಪರಿಚಯವನ್ನು ತಿಳಿಸುತ್ತಾರೆ- ತಂದೆಯಿಂದಲೇ
ಆಸ್ತಿಯು ಸಿಗುತ್ತದೆ. ತಂದೆಯನ್ನು ನೆನಪು ಮಾಡಿದರೆ ಪಾಪನಾಶವಾಗಿ ಪವಿತ್ರರಾಗಿ ಶಾಂತಿಧಾಮಕ್ಕೆ
ಹೊರಟುಹೋಗುತ್ತೀರಿ. ಶಾಂತಿದೇವ ಎಂದು ಹೇಳುತ್ತೀರಿ, ತಂದೆಯೇ ಶಾಂತಿಯ ಸಾಗರನಾಗಿದ್ದಾರೆ ಅಂದಮೇಲೆ
ಅವರನ್ನೇ ನೆನಪು ಮಾಡುತ್ತಾರೆ. ತಂದೆಯು ಯಾವ ಸ್ವರ್ಗದ ಸ್ಥಾಪನೆ ಮಾಡುವರೋ ಅದು ಇಲ್ಲಿಯೇ ಆಗುತ್ತದೆ.
ಸೂಕ್ಷ್ಮವತನದಲ್ಲಿ ಏನೂ ಇಲ್ಲ, ಇವು ಕೇವಲ ಸಾಕ್ಷಾತ್ಕಾರದ ಮಾತುಗಳಾಗಿವೆ ಈ ತರಹ ಫರಿಶ್ತೆಗಳಾಗಬೇಕು
ಮತ್ತು ಇಲ್ಲಿಯೇ ಆಗಬೇಕಾಗಿದೆ. ಫರಿಶ್ತೆಗಳಾಗಿ ಮತ್ತೆ ತಮ್ಮ ಮನೆಗೆ ಹೊರಟುಹೋಗುತ್ತೀರಿ.
ರಾಜಧಾನಿಯ ಆಸ್ತಿಯು ತಂದೆಯಿಂದಲೇ ಸಿಗುತ್ತದೆ. ಶಾಂತಿ ಮತ್ತು ಸುಖ ಎರಡೂ ಆಸ್ತಿಯು ತಂದೆಯಿಂದಲೇ
ಸಿಗುತ್ತದೆ. ತಂದೆಯ ವಿನಃ ಮತ್ತ್ಯಾರಿಗೂ ಸಾಗರನೆಂದು ಹೇಳಲು ಸಾಧ್ಯವಿಲ್ಲ. ಯಾವ ತಂದೆಯು
ಜ್ಞಾನಸಾಗರನಾಗಿದ್ದಾರೆಯೋ ಅವರೇ ಸದ್ಗತಿ ಮಾಡಲು ಸಾಧ್ಯ. ತಂದೆಯು ಪ್ರಶ್ನಿಸುತ್ತಾರೆ- ನಾನು
ನಿಮ್ಮ ತಂದೆ, ಶಿಕ್ಷಕ, ಗುರುವಾಗಿದ್ದೇನೆ. ನಿಮ್ಮ ಸದ್ಗತಿ ಮಾಡುತ್ತೇನೆ ಅಂದಮೇಲೆ ಮತ್ತೆ ನಿಮ್ಮ
ದುರ್ಗತಿಯನ್ನು ಯಾರು ಮಾಡುತ್ತಾರೆ? ರಾವಣ. ಇದು ದುರ್ಗತಿ ಮತ್ತು ಸದ್ಗತಿಯ ಆಟವಾಗಿದೆ. ಯಾರಾದರೂ
ತಬ್ಬಿಬ್ಬಾಗುತ್ತೀರೆಂದರೆ ಪ್ರಶ್ನೆಯನ್ನು ಕೇಳಬಹುದು. ಭಕ್ತಿಮಾರ್ಗದಲ್ಲಿ ಅನೇಕ ಪ್ರಶ್ನೆಗಳು
ಉದ್ಭವಿಸುತ್ತದೆ. ಜ್ಞಾನಮಾರ್ಗದಲ್ಲಿ ಪ್ರಶ್ನೆಯ ಮಾತಿಲ್ಲ, ಶಾಸ್ತ್ರಗಳಲ್ಲಿ ಶಿವತಂದೆಯಿಂದ ಹಿಡಿದು
ದೇವತೆಗಳಿಗೂ ಎಷ್ಟು ನಿಂದನೆ ಮಾಡಿಬಿಟ್ಟಿದ್ದಾರೆ, ಯಾರನ್ನೂ ಬಿಟ್ಟಿಲ್ಲ. ಇದೂ ಸಹ ನಾಟಕದಲ್ಲಿ
ಮಾಡಲ್ಪಟ್ಟಿದೆ, ಇದನ್ನು ಕಲ್ಪದ ನಂತರವೂ ಮಾಡುತ್ತಾರೆ. ತಂದೆಯು ತಿಳಿಸುತ್ತಾರೆ- ಈ ದೇವಿ-ದೇವತಾ
ಧರ್ಮವು ಬಹಳ ಸುಖ ಕೊಡುವಂತದ್ದಾಗಿದೆ ನಂತರ ಈ ದುಃಖವಿರುವುದಿಲ್ಲ. ತಂದೆಯು ನಿಮ್ಮನ್ನು ಎಷ್ಟು
ಬುದ್ಧಿವಂತರನ್ನಾಗಿ ಮಾಡುತ್ತಾರೆ, ಈ ಲಕ್ಷ್ಮೀ-ನಾರಾಯಣರು ಬುದ್ಧಿವಂತರಾಗಿದ್ದಾರೆ ಆದ್ದರಿಂದ
ವಿಶ್ವದ ಮಾಲೀಕರಾಗುತ್ತಾರೆ. ಬುದ್ಧಿಹೀನರು ವಿಶ್ವದ ಮಾಲೀಕರಾಗಲು ಸಾಧ್ಯವಿಲ್ಲ. ಮೊದಲಂತೂ ನೀವು
ಮುಳ್ಳುಗಳಾಗಿದ್ದಿರಿ, ಈಗ ಹೂಗಳಾಗುತ್ತಿದ್ದೀರಿ ಆದ್ದರಿಂದ ಬಾಬಾರವರೂ ಸಹ ಇಂತಹ ಹೂಗಳಾಗಬೇಕೆಂದು
ಗುಲಾಬಿ ಹೂಗಳನ್ನು ತೆಗೆದುಕೊಂಡು ಬರುತ್ತಾರೆ. ತಾವೇ ಬಂದು ಹೂದೋಟವನ್ನು ಮಾಡುತ್ತಾರೆ ನಂತರ
ರಾವಣನು ಮುಳ್ಳುಗಳ ಕಾಡನ್ನಾಗಿ ಮಾಡಲು ಬರುತ್ತಾನೆ. ಎಷ್ಟು ಸ್ಪಷ್ಟವಾಗಿದೆ. ಇದೆಲ್ಲವನ್ನೂ ಸ್ಮರಣೆ
ಮಾಡಬೇಕಾಗಿದೆ. ಒಬ್ಬರನ್ನು ನೆನಪು ಮಾಡುವುದರಿಂದ ಅದರಲ್ಲಿ ಎಲ್ಲವೂ ಬಂದುಬಿಡುತ್ತದೆ, ತಂದೆಯಿಂದ
ಆಸ್ತಿಯು ಸಿಗುತ್ತದೆ. ಇದು ಬಹಳ ದೊಡ್ಡ ಅಧಿಕಾರವಾಗಿದೆ. ಶಾಂತಿಯದೂ ಆಸ್ತಿ ಸಿಗುತ್ತದೆ ಏಕೆಂದರೆ
ಅವರೇ ಶಾಂತಿಯಸಾಗರ ಆಗಿದ್ದಾರೆ. ಲೌಕಿಕ ತಂದೆಗೆ ಎಂದೂ ಈ ರೀತಿಯ ಮಹಿಮೆ ಮಾಡುವುದಿಲ್ಲ.
ಶ್ರೀಕೃಷ್ಣನು ಎಲ್ಲರಿಗಿಂತ ಪ್ರಿಯನಾಗಿದ್ದಾನೆ. ಮೊಟ್ಟಮೊದಲಿನ ಜನ್ಮವೇ ಕೃಷ್ಣನದಾಗುತ್ತದೆ
ಆದ್ದರಿಂದ ಕೃಷ್ಣನನ್ನು ಎಲ್ಲರಿಗಿಂತ ಹೆಚ್ಚಿನದಾಗಿ ಪ್ರೀತಿ ಮಾಡುತ್ತಾರೆ. ತಂದೆಯು ಮಕ್ಕಳಿಗೇ
ಮನೆಯ ಪೂರ್ಣ ಸಮಾಚಾರವನ್ನು ತಿಳಿಸುತ್ತಾರೆ, ತಂದೆಯೂ ಸಹ ಪಕ್ಕಾ ವ್ಯಾಪಾರಿಯಾಗಿದ್ದಾರೆ. ಇಂತಹ
ವ್ಯಾಪಾರವನ್ನು ಕೆಲವರೇ ವಿರಳ ಮಾಡುತ್ತಾರೆ. ಹೋಲ್ಸೇಲ್ ವ್ಯಾಪಾರಿಗಳು ಕೆಲವರೇ ಆಗುತ್ತಾರೆ, ನೀವು
ಹೋಲ್ಸೇಲ್ ವ್ಯಾಪಾರಿಗಳಾಗಿದ್ದೀರಲ್ಲವೆ! ತಂದೆಯನ್ನು ನೆನಪು ಮಾಡುತ್ತಲೇ ಇರುತ್ತೀರಿ. ಕೆಲವರಂತೂ
ಚಿಲ್ಲರೆ ವ್ಯಾಪಾರ ಮಾಡಿ ಮತ್ತೆ ಮರೆತುಹೋಗುತ್ತಾರೆ. ತಂದೆಯು ತಿಳಿಸುತ್ತಾರೆ- ನಿರಂತರ ತಂದೆಯನ್ನು
ನೆನಪು ಮಾಡುತ್ತಾ ಇರಿ. ಆಸ್ತಿಯು ಸಿಕ್ಕಿತೆಂದರೆ ಮತ್ತೆ ನೆನಪು ಮಾಡುವ ಅವಶ್ಯಕತೆಯಿರುವುದಿಲ್ಲ.
ಲೌಕಿಕ ಸಂಬಂಧದಲ್ಲಿ ತಂದೆಯು ವೃದ್ಧರಾಗುತ್ತಾರೆಂದರೆ ಕೆಲಕೆಲವು ಮಕ್ಕಳು ಕೊನೆಯವರೆಗೂ ಸಹ ಸಹಾಯ
ಮಾಡುತ್ತಾರೆ. ಇನ್ನೂ ಕೆಲವರಂತೂ ಆಸ್ತಿಯು ಸಿಕ್ಕಿತೆಂದರೆ ಅದನ್ನು ಹಾರಿಸಿಕೊಂಡು ಸಮಾಪ್ತಿ
ಮಾಡಿಬಿಡುತ್ತಾರೆ. ಬಾಬಾರವರು ಎಲ್ಲಾ ಮಾತುಗಳ ಅನುಭವಿಯಾಗಿದ್ದಾರೆ ಆದ್ದರಿಂದಲೇ ಶಿವತಂದೆಯೂ ಸಹ
ಇವರನ್ನೇ ತಮ್ಮ ರಥವನ್ನಾಗಿ ಮಾಡಿಕೊಂಡಿದ್ದಾರೆ. ಬಡತನ, ಶ್ರೀಮಂತಿಕೆ ಎಲ್ಲದರಲ್ಲಿ
ಅನುಭವಿಯಾಗಿದ್ದಾರೆ. ಡ್ರಾಮಾನುಸಾರ ಇದೊಂದೇ ರಥವಾಗಿದೆ, ಇದು ಎಂದೂ ಬದಲಾಗುವುದಿಲ್ಲ. ನಾಟಕವು
ಮಾಡಲ್ಪಟ್ಟಿದೆ, ಇದೆಂದೂ ಬದಲಾವಣೆಯಾಗಲು ಸಾಧ್ಯವಿಲ್ಲ. ಈ ಎಲ್ಲಾ ಮಾತುಗಳನ್ನು ಹೋಲ್ಸೇಲ್ ಮತ್ತು
ರೀಟೈಲ್ ಆಗಿ ತಿಳಿಸಿ ಅಂತ್ಯದಲ್ಲಿ ತಂದೆಯು ಹೇಳಿಬಿಡುತ್ತಾರೆ- ಮನ್ಮನಾಭವ, ಮಧ್ಯಾಜೀಭವ.
ಮನ್ಮನಾಭವದಲ್ಲಿ ಎಲ್ಲವೂ ಬಂದುಬಿಡುತ್ತದೆ, ಇದು ಬಹಳ ದೊಡ್ಡ ಖಜಾನೆಯಾಗಿದೆ ಅದರಿಂದ ಜೋಳಿಗೆಯನ್ನು
ತುಂಬಿಸುತ್ತಾರೆ. ಅವಿನಾಶಿ ಜ್ಞಾನರತ್ನಗಳು ಒಂದೊಂದೂ ಸಹ ಲಕ್ಷಾಂತರ ರೂಪಾಯಿಗಳ ಬೆಲೆಬಾಳುತ್ತವೆ.
ನೀವು ಪದಮಾಪತಿ ಭಾಗ್ಯಶಾಲಿಗಳಾಗುತ್ತೀರಿ. ತಂದೆಯಂತೂ ಖುಷಿ ಮತ್ತು ಬೇಸರ ಎರಡರಿಂದಲೂ
ಭಿನ್ನರಾಗಿದ್ದಾರೆ. ಸಾಕ್ಷಿಯಾಗಿ ನಾಟಕವನ್ನು ನೋಡುತ್ತಿದ್ದಾರೆ. ನೀವು ಪಾತ್ರವನ್ನಭಿನಯಿಸುತ್ತೀರಿ,
ನಾನು ಪಾತ್ರವನ್ನಭಿನಯಿಸುತ್ತಲೂ ಸಾಕ್ಷಿಯಾಗಿದ್ದೇನೆ. ಜನನ-ಮರಣದಲ್ಲಿ ಬರುವುದಿಲ್ಲ. ನನ್ನ ವಿನಃ
ಮತ್ತ್ಯಾರೂ ಜನನ-ಮರಣದಿಂದ ಬಿಡುಗಡೆಯಾಗಲು ಸಾಧ್ಯವಿಲ್ಲ, ಮೋಕ್ಷವು ಸಿಗಲು ಸಾಧ್ಯವಿಲ್ಲ. ಇದು
ಅನಾದಿ ಮಾಡಿ-ಮಾಡಲ್ಪಟ್ಟಂತಹ ನಾಟಕವಾಗಿದೆ. ಇದು ಬಹಳ ವಿಚಿತ್ರವಾಗಿದೆ. ಇಷ್ಟು ಸೂಕ್ಷ್ಮಆತ್ಮದಲ್ಲಿ
ಎಲ್ಲವೂ ತುಂಬಲ್ಪಟ್ಟಿದೆ, ಈ ಅವಿನಾಶಿ ನಾಟಕವೆಂದೂ ವಿನಾಶ ಹೊಂದುವುದಿಲ್ಲ. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಮರಳಿ ಸಿಕ್ಕಿರುವಂತಹ ಮಕ್ಕಳ ಪ್ರತಿ ಮಾತಾ-ಪಿತಾ ಬಾಪ್ದಾದಾರವರ ಹೃದಯತುಂಬಿದ ಜೀವದ, ಪ್ರೀತಿ ಹಾಗೂ
ಪ್ರೇಮದಿಂದ ಸೇವಾಯೋಗ್ಯ ಮಕ್ಕಳಿಗೆ ನಂಬರ್ವಾರ್ ಪುರುಷಾರ್ಥನುಸಾರ ನೆನಪು, ಪ್ರೀತಿ ಹಾಗೂ
ಸುಪ್ರಭಾತ, ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಹೇಗೆ ತಂದೆಯು
ಮಕ್ಕಳಮೇಲೆ ಬಲಿಹಾರಿಯಾಗುತ್ತಾರೆ ಹಾಗೆಯೇ ಮಕ್ಕಳೂ ಸಹ ತನು-ಮನಸಹಿತ ಒಂದುಬಾರಿ ತಂದೆಗೆ
ಪೂರ್ಣಬಲಿಹಾರಿಯಾಗಿ 21 ಜನ್ಮಗಳ ಆಸ್ತಿಯನ್ನು ಪಡೆಯಬೇಕಾಗಿದೆ.
2. ತಂದೆಯು ಯಾವ ಅವಿನಾಶಿ
ಅಮೂಲ್ಯ ಖಜಾನೆಗಳನ್ನು ಕೊಡುತ್ತಾರೆಯೋ ಅದರಿಂದ ತಮ್ಮ ಜೋಳಿಗೆಯನ್ನು ಸದಾ
ಸಂಪನ್ನವಾಗಿಟ್ಟುಕೊಳ್ಳಬೇಕಾಗಿದೆ. ಸದಾ ಇದೇ ಖುಷಿ ಹಾಗೂ ನಶೆಯಲ್ಲಿರಬೇಕು- ನಾವು ಪದಮಾಪದಮ
ಭಾಗಶಾಲಿಗಳಾಗಿದ್ದೇವೆ.
ವರದಾನ:
ಬ್ರಾಹ್ಮಣ
ಜೀವನದ ಆಸ್ತಿ ಮತ್ತು ವ್ಯಕ್ತಿತ್ವದ ಅನುಭವ ಮಾಡುವ ಮತ್ತು ಮಾಡಿಸುವಂತಹ ವಿಶೇಷ ಆತ್ಮ ಭವ.
ಬಾಪ್ದಾದಾ ಎಲ್ಲಾ
ಬ್ರಾಹ್ಮಣ ಮಕ್ಕಳಿಗೆ ಸ್ಮೃತಿ ತರಿಸುತ್ತಾರೆ ಬ್ರಾಹ್ಮಣರಾಗುವುದೇ ಅಹೋ ಭಾಗ್ಯ! ಆದರೆ ಬ್ರಾಹ್ಮಣ
ಜೀವನದ ಆಸ್ತಿ, ಸ್ವತ್ತು ಸಂತುಷ್ಟತೆಯಾಗಿದೆ ಮತ್ತು ಬ್ರಾಹ್ಮಣ ಜೀವನದ ವ್ಯಕ್ತಿತ್ವ
ಪ್ರಸನ್ನತೆಯಾಗಿದೆ. ಈ ಅನುಭವದಿಂದ ಎಂದೂ ವಂಚಿತರಾಗಿರಬೇಡಿ. ಅಧಿಕಾಗಳಾಗಿರುವಿರಿ. ಯಾವಾಗ ದಾತ,
ವರದಾತ ತೆರೆದ ಹೃದಯದಿಂದ ಪ್ರಾಪ್ತಿಗಳ ಖಜಾನೆಗಳನ್ನು ಕೊಡುತ್ತಿರುವಾಗ ಅದನ್ನು ಅನುಭವದಲ್ಲಿ ತನ್ನಿ
ಮತ್ತು ಅನ್ಯರಿಗೂ ಸಹ ಅನುಭವಿಗಳನ್ನಾಗಿ ಮಾಡಿ ಆಗ ಹೇಳಲಾಗುತ್ತದೆ ವಿಶೇಷ ಆತ್ಮ.
ಸ್ಲೋಗನ್:
ಸಮಯದ
ಅಂತ್ಯವನ್ನು ಯೋಚಿಸುವ ಬದಲು ತಮ್ಮ ಅಂತಿಮ ಸ್ಥಿತಿಯ ಬಗ್ಗೆ ಯೋಚಿಸಿ.