24.11.24    Avyakt Bapdada     Kannada Murli    15.12.2002     Om Shanti     Madhuban


“ಸಮಯ ಪ್ರಮಾಣ ಲಕ್ಷ್ಯ ಮತ್ತು ಲಕ್ಷಣದ ಸಮಾನತೆಯ ಮೂಲಕ ತಂದೆಯ ಸಮಾನರಾಗಿ”


ಇಂದು ನಾಲ್ಕೂ ಕಡೆಯ ಎಲ್ಲಾ ಸ್ವಮಾನಧಾರಿ ಮಕ್ಕಳನ್ನು ನೋಡಿ ಹರ್ಷಿತರಾಗುತ್ತಿದ್ದಾರೆ. ಈ ಸಂಗಮದಲ್ಲಿ ತಾವು ಮಕ್ಕಳಿಗೆ ಯಾವ ಸ್ವಮಾನ ಸಿಗುತ್ತದೆ, ಇದಕ್ಕಿಂತ ದೊಡ್ಡ ಸ್ವಮಾನ ಇಡೀ ಕಲ್ಪದಲ್ಲಿ ಯಾವುದೇ ಆತ್ಮನಿಗೆ ಪ್ರಾಪ್ತಿ ಆಗಲು ಸಾಧ್ಯವಿಲ್ಲ, ಎಷ್ಟು ದೊಡ್ಡ ಸ್ವಮಾನವಾಗಿದೆ. ಇದನ್ನು ತಿಳಿದಿದ್ದೀರಾ? ಸ್ವಮಾನದ ನಶೆ ಎಷ್ಟು ದೊಡ್ಡದಿದೆ, ಇದು ನೆನಪಿನಲ್ಲಿ ಇರುತ್ತದೆಯೇ? ಸ್ವಮಾನದ ಮಾಲೆ ಬಹಳ ದೊಡ್ಡವಾಗಿ ಇರುತ್ತದೆ. ಒಂದೊಂದು ಮಣಿಯನ್ನು ಎಣಿಸುತ್ತಾ ಹೋಗಿ ಮತ್ತು ಸ್ವಮಾನದ ನಶೆಯಲ್ಲಿ ಲವಲೀನರಾಗಿ, ಈ ಸ್ವಮಾನ ಅರ್ಥಾತ್ ಬಿರುದುಗಳು ಸ್ವಯಂ ಬಾಪ್ದಾದಾರವರ ಮೂಲಕ ಸಿಕ್ಕಿದೆ. ಪರಮಾತ್ಮನ ಮುಖಾಂತರ ಸ್ವಮಾನ ಪ್ರಾಪ್ತಿಯಾಗಿದೆ. ಆದ್ದರಿಂದ ಈ ಸ್ವಮಾನದ ಆತ್ಮೀಯ ನಶೆಯನ್ನು ಅಲುಗಾಡಿಸಲು ಯಾರಿಗೂ ಶಕ್ತಿ ಇಲ್ಲ ಏಕೆಂದರೆ ಸರ್ವ ಶಕ್ತಿವಂತನ ಮೂಲಕ ಈ ಸ್ವಮಾನ ಪ್ರಾಪ್ತಿಯಾಗಿದೆ.

ಬಾಪ್ದಾದಾ ಇಂದು ಅಮೃತವೇಳೆಯಲ್ಲಿ ಇಡೀ ವಿಶ್ವದ ಎಲ್ಲಾ ಮಕ್ಕಳ ಕಡೆಗೆ ಸುತ್ತು ಹಾಕಿ ಪ್ರತಿಯೊಬ್ಬ ಮಗುವಿನ ಸ್ಮೃತಿಯಲ್ಲಿ ಎಷ್ಟು ಸ್ವಮಾನದ ಮಾಲೆ ಹಾಕಲ್ಪಟ್ಟಿದೆ ಎಂದು ನೋಡಿದರು. ಮಾಲೆಯನ್ನು ಧಾರಣೆ ಮಾಡುವುದು ಆರ್ಥಾತ್ ಸ್ಮೃತಿಯ ಮೂಲಕ ಆ ಸ್ಥಿತಿಯಲ್ಲಿ ಸ್ಥಿತರಾಗುವುದು. ಅಂದಾಗ ಈ ಸ್ಮೃತಿಯ ಸ್ಥಿತಿ ಎಲ್ಲಿಯವರೆಗೆ ಇರುತ್ತದೆ ಎಂದು ತಮ್ಮನ್ನು ತಾವು ಪರಿಶೀಲನೆ ಮಾಡಿಕೊಳ್ಳಿ. ಸ್ವಮಾನದ ನಿಶ್ಚಯ ಮತ್ತು ಅದರ ಆತ್ಮೀಯ ನಶೆ ಎರಡರ ಸಮತೋಲನ ಎಷ್ಟು ಇರುತ್ತದೆ? ಎಂದು ಬಾಪ್ದಾದಾ ನೋಡುತ್ತಿದ್ದರು. ನಿಶ್ಚಯವಾಗಿದೆ - ಜ್ಞಾನಪೂರ್ಣರಾಗುವುದು ಮತ್ತು ಆತ್ಮೀಯ ನಶೆಯಾಗಿದೆ - ಶಕ್ತಿಶಾಲಿ ಆಗುವುದು. ಜ್ಞಾನಪೂರ್ಣರಲ್ಲೂ ಸಹ ಎರಡು ಪ್ರಕಾರದವರನ್ನು ನೋಡಿದೆವು – ಒಂದನೆಯದು ಜ್ಞಾನಪೂರ್ಣ. ಎರಡನೆಯದು ಜ್ಞಾನಸ್ವರೂಪ ಅಂದಾಗ ನಿಮ್ಮನ್ನು ನೀವೇ ಕೇಳಿಕೊಳ್ಳಿ - ನಾನು ಯಾರು? ಬಾಪ್ದಾದಾರವರಿಗೆ ತಿಳಿದಿದೆ - ಮಕ್ಕಳ ಲಕ್ಷ್ಯ ಬಹಳ ಶ್ರೇಷ್ಠವಾಗಿದೆ, ಲಕ್ಷ್ಯ ಶ್ರೇಷ್ಠವಿದೆಯಲ್ಲವೇ, ಶ್ರೇಷ್ಠವಾಗಿದೆಯೇನು? ಎಲ್ಲರೂ ತಂದೆಯ ಸಮಾನನಾಗುತ್ತೇನೆ ಎಂದು ಹೇಳುತ್ತೀರಿ ಅಂದಾಗ ಹೇಗೆ ತಂದೆ ಶ್ರೇಷ್ಠಾತಿಶ್ರೇಷ್ಠವಾಗಿದ್ದಾರೆ ಹಾಗೆ ತಂದೆಯ ಸಮಾನರಾಗುವ ಲಕ್ಷ್ಯ ಎಷ್ಟು ಶ್ರೇಷ್ಠವಾಗಿದೆ! ಲಕ್ಷ್ಯವನ್ನು ನೋಡಿ ಬಾಪ್ದಾದಾ ಬಹಳ ಖುಷಿ ಪಡುತ್ತಾರೆ ಆದರೆ.... ಆದರೆ ಹೇಳಲೇನು? ಅದರೆ ಏನು? ಶಿಕ್ಷಕಿಯರು ಹೇಳುವುದೇ? ಡಬಲ್ ವಿದೇಶಿಯರು ಆದರೆ ಏನು, ಅದನ್ನು ಕೇಳುತ್ತೀರಾ? ತಿಳಿದಿರಬಹುದಲ್ಲವೇ? ಬಾಪ್ದಾದಾ ಲಕ್ಷ್ಯ ಮತ್ತು ಲಕ್ಷಣವನ್ನು ಸಮಾನ ಇರುವುದನ್ನು ಬಯಸುತ್ತಾರೆ. ಈಗ ನಿಮ್ಮೊಂದಿಗೆ ನೀವೇ ಕೇಳಿಕೊಳ್ಳಿ- ಲಕ್ಷ್ಯ ಮತ್ತು ಲಕ್ಷಣ ಅರ್ಥಾತ್ ಪ್ರತ್ಯಕ್ಷ ಸ್ಥಿತಿ ಸಮಾನವಾಗಿದೆಯೇ? ಏಕೆಂದರೆ ಲಕ್ಷ್ಯ ಮತ್ತು ಲಕ್ಷಣ ಸಮಾನವಾಗುವುದು ಇದೇ ತಂದೆಯ ಸಮಾನ ಆಗುವುದಾಗಿದೆ. ಸಮಯ ಪ್ರಮಾಣ ಈ ಸಮಾನತೆಯನ್ನು ಸಮೀಪ ತನ್ನಿ.

ವರ್ತಮಾನ ಸಮಯ ಬಾಪ್ದಾದಾ ಮಕ್ಕಳ ಒಂದು ಮಾತನ್ನು ನೋಡ ಬಯಸುವುದಿಲ್ಲ. ಕೆಲವು ಮಕ್ಕಳು ಭಿನ್ನ-ಭಿನ್ನ ಪ್ರಕಾರದ ತಂದೆಯ ಸಮಾನ ಆಗುವ ಪರಿಶ್ರಮ ಪಡುತ್ತಾರೆ. ತಂದೆಯ ಪ್ರೀತಿಯ ಮುಂದೆ ಪರಿಶ್ರಮ ಪಡುವ ಆವಶ್ಯಕತೆ ಇಲ್ಲ. ಎಲ್ಲಿ ಪ್ರೀತಿ ಇದೆ ಅಲ್ಲಿ ಪರಿಶ್ರಮವಿಲ್ಲ. ಯಾವಾಗ ಉಲ್ಟಾ ನಶೆ ದೇಹಾಭಿಮಾನದ ಸ್ವಭಾವವಾಗಿದೆ. ಅದು ಸ್ವಾಭಾವಿಕವಾಗಿದೆ. ದೇಹಾಭಿಮಾನದಲ್ಲಿ ಬರಲು ಪುರುಷಾರ್ಥ ಮಾಡಬೇಕೇನು? 63 ಜನ್ಮ ಪುರುಷಾರ್ಥ ಮಾಡಿದಿರೇನು? ಸ್ವಾಭಾವಿಕವಾಗಿದೆ, ಸ್ವಭಾವವಾಗಿದೆ. ಯಾವುದನ್ನು ಈಗಲೂ ಸಹ ಆಗಾಗ ಇದನ್ನೇ ಹೇಳುತ್ತೀರಿ - ದೇಹಿಗೆ ಬದಲಾಗಿ ದೇಹದಲ್ಲಿ ಬಂದುಬಿಡುತ್ತೀರಿ. ಹೇಗೆ ದೇಹಾಭಿಮಾನ ಸ್ವಾಭಾವಿಕ ಸ್ವಭಾವವಾಗಿದೆ ಹಾಗೆಯೇ ಈಗ ದೇಹೀ ಅಭಿಮಾನಿ ಸ್ಥಿತಿಯೂ ಸಹ ಸ್ವಾಭಾವಿಕವಾಗಿ ಮತ್ತು ಸ್ವಭಾವವಾಗಲಿ, ಸ್ವಭಾವದ ಬದಲಾವಣೆ ಮಾಡುವುದು ಕಷ್ಟವಾಗುತ್ತದೆ. ಈಗಲೂ ಸಹ ಹೇಳುತ್ತೀರಲ್ಲವೇ - ಆಗಾಗ ಹೇಳುತ್ತೀರಿ - ನನ್ನ ಭಾವವಲ್ಲ, ಸ್ವಭಾವವಾಗಿದೆ. ಆ ಸ್ವಭಾವವನ್ನು ಸ್ವಾಭಾವಿಕ ಮಾಡಿಕೊಂಡಿದ್ದೀರಿ, ಮತ್ತು ತಂದೆಯ ಸಮಾನ ಸ್ವಭಾವವನ್ನು ಸ್ವಾಭಾವಿಕ ಮಾಡಿಕೊಳ್ಳಲು ಸಾಧ್ಯವಿಲ್ಲವೇ! ಉಲ್ಟಾ ಸ್ವಭಾವದ ವಶವಾಗುತ್ತೀರಿ ಮತ್ತು ಯಥಾರ್ಥ ಸ್ವಭಾವ ತಂದೆಯ ಸಮಾನರಾಗುವುದು, ಇದರಲ್ಲಿ ಪರಿಶ್ರಮವೇಕೆ? ಬಾಪ್ದಾದಾ ಈಗ ಎಲ್ಲಾ ಮಕ್ಕಳ ದೇಹೀ ಅಭಿಮಾನಿಯಾಗಿರುವ ಸ್ವಾಭಾವಿಕ ಸ್ವಭಾವವನ್ನು ಬ್ರಹ್ಮಾ ತಂದೆಯನ್ನು ನೋಡಿದಿರಿ ನಡೆದಾಡುತ್ತಾ- ತಿರುಗಾಡುತ್ತಾ ಯಾವುದೇ ಕಾರ್ಯವನ್ನು ಮಾಡುತ್ತಾ ದೇಹೀ ಅಭಿಮಾನಿ ಸ್ಥಿತಿ ಸ್ವಾಭಾವಿಕವಾಗಿತ್ತು.

ಬಾಪ್ದಾದಾ ಸಮಾಚಾರ ಕೇಳಿದರು-ಇತ್ತೀಚಿಗೆ ದಾದಿಯರು ವಿಶೇಷವಾಗಿ ಈ ಆತ್ಮೀಕ ವಾರ್ತಾಲಾಪವನ್ನು ಮಾಡುತ್ತಾರೆ - ಫರಿಸ್ತಾ ಸ್ಥಿತಿ, ಕರ್ಮಾತೀತ ಅವಸ್ಥೆ, ತಂದೆಯ ಸಮಾನ ಅವಸ್ಥೆ ಸ್ವಾಭಾವಿಕ ಹೇಗೆ ಮಾಡಿಕೊಳ್ಳುವುದು? ಸ್ವಾಭಾವಿಕವಾಗಬೇಕು. ಈ ವಾರ್ತಾಲಾಪ ಮಾಡುತ್ತೀರಲ್ಲವೇ! ಮಾಡುತ್ತೀರಾ ದಾದಿರವರಿಗೂ ಸಹ ಇದು ಮತ್ತೆ-ಮತ್ತೆ ಬರುತ್ತದೆಯಲ್ಲವೇ, ಫರಿಸ್ತೆಗಳು ಆಗಬೇಕು, ಕರ್ಮಾತೀತರಾಗಬೇಕು, ತಂದೆಯ ಪ್ರತ್ಯಕ್ಷತೆ ಆಗಬೇಕು. ಅಂದಾಗ ಫರಿಸ್ತೆ ಆಗುವುದು ಅಥವಾ ನಿರಾಕಾರಿ ಕರ್ಮಾತೀತ ಅವಸ್ಥೆಯನ್ನು ಪಡೆಯುವ ವಿಶೇಷ ಸಾಧನವಾಗಿದೆ - ನಿರಹಂಕಾರಿ ಆಗುವುದು. ನಿರಹಂಕಾರಿಯೇ ನಿರಾಕಾರಿ ಆಗಲು ಸಾಧ್ಯ. ಆದ್ದರಿಂದ ತಂದೆಯು ಬ್ರಹ್ಮಾರವರ ಮುಖಾಂತರ ಕೊನೆಯ ಮಂತ್ರ ನಿರಾಕಾರಿಯ ಜೊತೆ ನಿರಹಂಕಾರಿ ಹೇಳಿದ್ದಾರೆ. ಕೇವಲ ತನ್ನ ದೇಹ ಅಥವಾ ಅನ್ಯರ ದೇಹದಲ್ಲಿ ಮುಳುಗುವುದು. ಇದಕ್ಕೆ ದೇಹದ ಅಹಂಕಾರ ಅಥವಾ ದೇಹಾಭಿಮಾನ ಎಂದು ಹೇಳುವುದಿಲ್ಲ. ದೇಹದ ಅಹಂಕಾರವೂ ಸಹ ಇದೆ. ದೇಹದ ಅಭಿಮಾನವಾಗಿದೆ. ತನ್ನ ದೇಹ ಅಥವಾ ಅನ್ಯರ ದೇಹದ ಪರಿವೆಯಲ್ಲಿ ಇರುವುದು, ಸೆಳೆತೆದಲ್ಲಿ ಇರುವುದು, ಇದರಲ್ಲಂತೂ ಮೆಜಾರಿಟಿ ತೇರ್ಗಡೆ ಆಗಿದ್ದೀರಿ. ಯಾರು ಪುರುಷಾರ್ಥದ ಲಗನ್ನಲ್ಲಿ ಇರುತ್ತಾರೆ, ಸತ್ಯ ಪುರುಷಾರ್ಥಿಗಳು ಆಗಿದ್ದಾರೆ ಅವರು ಈ ಹೊರ ರೂಪದಲ್ಲಿ ಭಿನ್ನರಾಗಿದ್ದಾರೆ, ಆದರೆ ದೇಹಭಾನದ ಅನೇಕ ಸೂಕ್ಷ್ಮ ರೂಪಗಳು ಇವೆ. ಇದರ ಲಿಸ್ಟನ್ನು ಪರಸ್ಪರ ಸೇರಿ ತೆಗೆಯಬೇಕು. ಬಾಪ್ದಾದಾ ಈ ದಿನ ಹೇಳುವುದಿಲ್ಲ. ಈ ದಿನ ಇಷ್ಟು ಸೂಚನೆಯು ಬಹಳಷ್ಟು ಆಯಿತು. ಏಕೆಂದರೆ ಎಲ್ಲರೂ ಬುದ್ಧಿವಂತರಾಗಿದ್ದೀರಿ. ತಮಗೆ ಎಲ್ಲಾ ಗೊತ್ತಿದೆ ತಾನೇ! ಒಂದುವೇಳೆ ಎಲ್ಲರನ್ನು ಕೇಳಿದರೆ, ಎಲ್ಲರೂ ಬಹಳ ಬುದ್ದಿವಂತಿಕೆಯಿಂದ ಹೇಳುತ್ತೀರಿ ಆದರೆ ಬಾಪ್ದಾದಾ ಚಿಕ್ಕ ಸಹಜ ಪುರುಷಾರ್ಥವನ್ನು ಹೇಳುತ್ತಾರೆ ಸದಾ ಮನ-ವಚನ-ಕರ್ಮ ಸಂಬಂಧ-ಸಂಪರ್ಕದಲ್ಲಿ ಕೊನೆಯ ಮೂರೂ ಮಂತ್ರಗಳ ಶಬ್ದವನ್ನು ಸದಾ ನೆನಪು ಇಟ್ಟುಕೊಳ್ಳಿ. ಸಂಕಲ್ಪ ಮಾಡಿದಾಗ ಪರಿಶೀಲನೆ ಮಾಡಿಕೊಳ್ಳಿ - ಮಹಾಮಂತ್ರದಿಂದ ಕೂಡಿದೆಯೇ? ಹಾಗೆಯೇ ವಚನ ಕರ್ಮ ಎಲ್ಲದರಲ್ಲಿ ಕೇವಲ ಮೂರು ಶಬ್ದವನ್ನು ನೆನಪು ಇಟ್ಟುಕೊಳ್ಳಿ ಹಾಗೂ ಸಮಾನತೆ ಮಾಡಿ. ಇದು ಸಹಜವಲ್ಲವೇ? ಇಡೀ ಮುರಳಿಯನ್ನು ನೆನಪು ಮಾಡಿ ಎಂದು ಹೇಳುವುದಿಲ್ಲ, ಮೂರು ಶಬ್ದ. ಈ ಮಹಾಮಂತ್ರವು ಸಂಕಲ್ಪವನ್ನೂ ಸಹ ಶ್ರೇಷ್ಠ ಮಾಡುತ್ತದೆ. ವಚನದಲ್ಲಿ ನಿರ್ಮಾಣತೆಯನ್ನು ತರುತ್ತದೆ. ಕರ್ಮದಲ್ಲಿ ಸೇವಾಭಾವವನ್ನು ತರುತ್ತದೆ. ಸಂಬಂಧದಲ್ಲಿ ಸದಾ ಶುಭಭಾವನೆ, ಶ್ರೇಷ್ಠ ಕಾಮನೆಯ ವೃತ್ತಿಯನ್ನು ಮಾಡಿಸುತ್ತದೆ.

ಬಾಪ್ದಾದಾ ಸೇವೆಯ ಸಮಾಚಾರವನ್ನೂ ಸಹ ಕೇಳುತ್ತಾರೆ, ಸೇವೆಯಲ್ಲಿ ಇತ್ತೀಚೆಗೆ ಭಿನ್ನ-ಭಿನ್ನ ಕೋರ್ಸ್ ಮಾಡುತ್ತೀರಿ ಆದರೆ ಈಗ ಒಂದು ಕೋರ್ಸ್ ಉಳಿದಿದೆ. ಅದು ಯಾವುದೆಂದರೆ ಆತ್ಮದಲ್ಲಿ ಯಾವ ಶಕ್ತಿ ಬೇಕು, ಆ ಶಕ್ತಿಯ ಕೋರ್ಸ್ ಕೊಡುವುದು. ಶಕ್ತಿಯನ್ನು ತುಂಬುವ ಕೋರ್ಸ್. ವಚನದ ಮೂಲಕ ಹೇಳುವ ಕೋರ್ಸಲ್ಲ, ವಚನದ ಜೊತೆ-ಜೊತೆಗೆ ಶಕ್ತಿಯನ್ನು ಕೋರ್ಸ್ ಇರಲಿ. ಇದರಿಂದ ಚೆನ್ನಾಗಿದೆ-ಚೆನ್ನಾಗಿದೆ ಎಂದು ಹೇಳುವುದಲ್ಲ. ಆದರೆ ಚೆನ್ನಾಗಿ ಆಗಬೇಕು. ಇಂದು ನನಗೆ ಶಕ್ತಿಯ ಹನಿ ಸಿಕ್ಕಿದೆ ಎಂದು ವರ್ಣಿಸಬೇಕು. ಹನಿಯಷ್ಟು ಅನುಭವವೂ ಆ ಆತ್ಮಗಳಿಗೆ ಬಹಳಷ್ಟು ಆಗುತ್ತದೆ. ಕೋರ್ಸ್ ಕೊಡಿ ಆದರೆ ಮೊದಲು ತಮಗೆ ಕೋರ್ಸನ್ನು ಕೊಟ್ಟುಕೊಂಡು ನಂತರ ಹೇಳಿ. ಅಂದಮೇಲೆ ಕೇಳಿದಿರಾ? ಬಾಪ್ದಾದಾರವರು ಏನು ಬಯಸುತ್ತಾರೆ? ಲಕ್ಷ್ಯ ಮತ್ತು ಲಕ್ಷಣವನ್ನು ಸಮಾನ ಮಾಡಿ. ಎಲ್ಲರ ಲಕ್ಷ್ಯವನ್ನು ನೋಡಿ ಬಾಪ್ದಾದಾ ಬಹಳ-ಬಹಳ ಖುಷಿ ಪಡುತ್ತಾರೆ. ಈಗ ಕೇವಲ ಸಮಾನ ಮಾಡಿ, ಆಗ ತಂದೆಯ ಸಮಾನ ಸಹಜವಾಗಿ ಆಗುತ್ತೀರಿ.

ಬಾಪ್ದಾದಾರವರು ಮಕ್ಕಳನ್ನು ಸಮಾನಕ್ಕಿಂತಲೂ ಶ್ರೇಷ್ಠರು, ತಮಗಿಂತಲೂ ಶ್ರೇಷ್ಠ ದೃಷ್ಟಿಯಲ್ಲಿ ನೋಡುತ್ತಾರೆ. ಸದಾ ಬಾಪ್ದಾದಾ ಮಕ್ಕಳನ್ನು ಶಿರದ ಕಿರೀಟ ಎಂದು ಹೇಳುತ್ತಾರೆ ಅಂದಮೇಲೆ ಕಿರೀಟವು ಶಿರಕ್ಕಿಂತಲೂ ಮೇಲಿರುತ್ತದೆ ತಾನೇ! ಶಿಕ್ಷಕಿಯರು ಶಿರದ ಕಿರೀಟವಲ್ಲವೇ?

ಶಿಕ್ಷಕಿಯರು ನಿಂತುಕೊಳ್ಳಿ- ನೋಡಿ ಎಷ್ಟೊಂದು ಶಿಕ್ಷಕಿಯರು ಇದ್ದಾರೆ. ನೋಡಿ. ಒಂದು ಗ್ರೂಪಿನಲ್ಲಿ ಯೇ ಇಷ್ಟೊಂದು ಶಿಕ್ಷಕಿಯರು ಇದ್ದರೆ ಪ್ರತಿಯೊಂದು ಗ್ರೂಪಿನಲ್ಲಿ ಎಷ್ಟು ಶಿಕ್ಷಕಿಯರು ಇರಬಹುದು! ಶಿಕ್ಷಕಿಯರು ಬಾಪ್ದಾದಾರವರ ಒಂದು ಆಸೆಯನ್ನು ಪೂರ್ಣ ಮಾಡುವ ಸಂಕಲ್ಪ ಮಾಡಿದ್ದಾರೆ ಆದರೆ ಇನ್ನೂ ಮುಂದೆ ತಂದಿಲ್ಲ. ಗೊತ್ತಿದೆಯೇ ಯಾವುದು ಎಂದು? ಗೊತ್ತಿದೆಯೇ ಯಾವುದು ಎಂದು? ಮೊದಲನೆಯದಾಗಿದೆ ಬಾಪ್ದಾದಾ ಹೇಳಿದ್ದಾರೆ ವಾರಸುದಾರರ ಮಾಲೆಯನ್ನು ಮಾಡಿ. ವಾರುಸುದಾರರ ಮಾಲೆ, ಸಾಧಾರಣ ಮಾಲೆಯಲ್ಲ. ಎರಡನೆಯದು - ಸಂಬಂಧ-ಸಂಪರ್ಕದವರನ್ನು ಮೈಕ್ ಮಾಡಿ. ನೀವು ಭಾಷಣವನ್ನು ಮಾಡಬೇಡಿ ಆದರೆ ಅವರನ್ನು ತಮ್ಮ ಕಡೆಯಿಂದ ಮಾಧ್ಯಮವನ್ನಾಗಿ ಮಡಿಕೊಳ್ಳಿ. ಮಾಧ್ಯಮ ಏನು ಮಾಡುತ್ತದೆ? ಶಬ್ದವನ್ನು ಹರಡುತ್ತದೆ ತಾನೇ! ಉಲ್ಟಾ ಅಥವಾ ಸುಲ್ಟಾ. ಮೈಕನ್ನು ಆ ರೀತಿ ತಯಾರು ಮಾಡಿ ಅವರು ಮಾಧ್ಯಮದ ಸಮಾನ ಪ್ರತ್ಯಕ್ಷತೆಯ ಶಬ್ದವನ್ನು ಹರಡಲಿ. ತಾವು ಹೇಳುತ್ತೀರಿ ಭಗವಂತ ಬಂದಿದ್ದಾರೆ, ಭಗವಂತ ಬಂದಿದ್ದಾರೆ. ಅದನ್ನು ಸಾಧಾರಣ ಎಂದು ತಿಳಿಯುತ್ತಾರೆ. ಆದರೆ ತಮ್ಮ ಕಡೆಯಿಂದ ಅನ್ಯರು ಹೇಳಲಿ, ಅಧಿಕಾರವುಳ್ಳವರು ಹೇಳಲಿ, ಮೊದಲು ತಾವು ಅವರಿಗೆ ಶಕ್ತಿಯರ ರೂಪದಲ್ಲಿ ಪ್ರತ್ಯಕ್ಷವಾಗಬೇಕು. ಯಾವಾಗ ಶಕ್ತಿಯರು ಪ್ರತ್ಯಕ್ಷವಾಗುತ್ತಾರೋ ಆಗ ತಂದೆಯ ಪ್ರತ್ಯಕ್ಷವಾಗುತ್ತದೆ. ಅಂದಮೇಲೆ ಮಾಡಿ, ಮಾಧ್ಯಮವನ್ನು [ಮೀಡಿಯಾ] ತಯಾರು ಮಾಡಿ. ಮಾಡಿದ್ದೀರಾ? ಮಾಲೆಯನ್ನು ಬಿಡಿ, ಬಳೆಯನ್ನಾದರೂ ಮಾಡಿದ್ದೀರಾ? ಕೈ ಎತ್ತಿ ಈ ರೀತಿ ಯಾರು ತಯಾರು ಮಾಡಿದ್ದೀರಿ? ಬಾಪ್ದಾದಾ ನೋಡುತ್ತಾರೆ ಯಾವುದನ್ನು ತಯಾರು ಮಾಡಿದ್ದೀರಿ, ಧೈರ್ಯವಂತೂ ಚೆನ್ನಾಗಿದೆ. ಕೇಳಿದಿರಾ ಶಿಕ್ಷಕಿಯರು ಏನು ಮಾಡಿದ್ದೀರಿ? ಶಿವರಾತ್ರಿಯಲ್ಲಿ ವಾರಸುದಾರರನ್ನು ತಯಾರು ಮಾಡಿ, ಮೈಕ್ ತಯಾರು ಮಾಡಿ ಆಗ ಮತ್ತೆ ಮುಂದಿನ ವರ್ಷ ಶಿವರಾತ್ರಿಯಲ್ಲಿ ಎಲ್ಲರ ಮುಖದಿಂದ ಶಿವತಂದೆ ಬಂದಿದ್ದಾರೆ ಎಂಬ ಶಬ್ದವೂ ಹರಡಲಿ. ಈ ರೀತಿ ಶಿವರಾತ್ರಿಯನ್ನು ಆಚರಿಸಿ. ಕಾರ್ಯಕ್ರಮಗಳಂತೂ ಬಹಳ ಚೆನ್ನಾಗಿ ಮಾಡಿದ್ದೀರಿ. ಕಾರ್ಯಕ್ರಮಗಳು ಎಲ್ಲರಿಗೂ ತಲುಪಿಸಿದ್ದೀರಲ್ಲವೇ. ಕಾರ್ಯಕ್ರಮಗಳಂತೂ ಚೆನ್ನಾಗಿ ಮಾಡಿದ್ದೀರಿ ಆದರೆ ಪ್ರತಿಯೊಂದು ಕಾರ್ಯಕ್ರಮದಿಂದ ಯಾರಾದರೂ ಮೈಕ್ ತಯಾರು ಆಗಲಿ, ಯಾರಾದರೂ ವಾರಸುದಾರರು ತಯಾರು ಆಗಲಿ. ಈ ಪುರುಷಾರ್ಥವನ್ನು ಮಾಡಿ, ಭಾಷಣ ಮಾಡಿ ಹೊರಟು ಹೋದರು, ಈ ರೀತಿ ಅಲ್ಲ. ಇದಂತೂ 60 ವರ್ಷಗಳು ಆಗಿದೆ ಹಾಗೂ 50 ವರ್ಷದ ಸೇವೆಯದನ್ನು ಆಚರಿಸಿದ್ದೀರಿ. ಈಗ ಶಿವರಾತ್ರಿಯ ವಜ್ರ ಮಹೋತ್ಸವವನ್ನು ಆಚರಿಸಿ. ಈ ಎರಡೂ ಪ್ರಕಾರದ ಆತ್ಮಗಳನ್ನು ತಯಾರು ಮಾಡಿ ನಂತರ ನೋಡಿ ನಗಾರಿ ಬಾರಿಸುತ್ತದೆಯೋ ಅಥವಾ ಇಲ್ಲವೋ. ನಗಾರಿಯು ತಾನೇ ಬಾರಿಸುತ್ತದೆಯೇನು ತಾವಂತೂ ದೇವಿಯರು ಆಗಿದ್ದೀರಿ, ಸಾಕ್ಷಾತ್ಕಾರ ಮಾಡಿಸುತ್ತೀರಿ. ನಗಾರಿ ಬಾರಿಸುವವರನ್ನು ತಯಾರಿ ಮಾಡಿ. ಅವರು ಪ್ರತ್ಯಕ್ಷವಾಗಿ ಗೀತೆ ಹಾಡಲಿ ಶಿವಶಕ್ತಿಯರು ಬಂದರು. ಕೇಳಿದಿರಾ. ಶಿವರಾತ್ರಿಯಲ್ಲಿ ಏನು ಮಾಡುತ್ತೀರಿ. ಹಾಗೆಯೇ ಭಾಷಣ ಮಾಡಿ ಪೂರ್ಣ ಮಾಡಬಾರದು. ನಂತರ ಬಾಬಾ 500 ಲಕ್ಷ ಜನ ಬಂದಿದ್ದರು ಬಂದಾಗ ಸಂದೇಶ ಕೊಟ್ಟೆವು ಎಂದು ಬರೆಯುತ್ತೀರಿ ಆದರೆ ವಾರಸದಾರರು ಎಷ್ಟಾದರು? ಮೈಕ್ ಎಷ್ಟು ಆದರು, ಈಗ ಈ ಸಮಾಚಾರವನ್ನು ಕೊಡಬೇಕು. ಇಲ್ಲಿಯತನಕ ಏನು ಮಾಡಿದ್ದೀರಿ ಧರಣಿಯನ್ನು ಮಾಡಿದ್ದೀರಿ. ಸಂದೇಶ ಕೊಟ್ಟಿದ್ದೀರಿ, ಅದಕ್ಕೆ ಬಾಬಾ ಒಳ್ಳೆಯದು ಎಂದು ಹೇಳುತ್ತಾರೆ. ಆ ಸೇವೆ ವ್ಯರ್ಥವಾಗಿ ಹೋಗಲಿಲ್ಲ. ಸಮರ್ಥವಾಯಿತು. ಪ್ರಜೆಗಳಂತೂ ಆದರು, ರಾಯಲ್ ಪರಿವಾರದವರಾದರು ಆದರೆ ರಾಜಾ-ರಾಣಿಯೂ ಸಹಬೇಕು. ರಾಜ್ಯದರ್ಬಾರು ಶೋಭೆಯಿಂದ ಇರಬೇಕು. ಕೇಳಿದಿರಾ ಶಿವರಾತ್ರಿಯಲ್ಲಿ ಏನು ಮಾಡಬೇಕು. ಪಾಂಡವರು ಕೇಳುತ್ತಿದ್ದೀರಾ. ಕೈ ಎತ್ತಿ. ಗಮನ ಕೊಟ್ಟಿದ್ದೀರಾ. ಒಳ್ಳೆಯದು. ದೊಡ್ಡ- ದೊಡ್ಡ ಮಾಹಾರಥಿಗಳು ಕುಳಿತಿದ್ದಾರೆ. ಒಳ್ಳೆಯದು ಬಾಪ್ದಾದಾರವರು ಖುಷಿಯಾಗುತ್ತಾರೆ. ಇದೂ ಸಹ ಅಂತರಾಳದ ಪ್ರೀತಿ ಆಗಿದೆ ಏಕೆಂದರೆ ತಾವೆಲ್ಲರ ಸಂಕಲ್ಪ ನಡೆಯುತ್ತಿದೆಯಲ್ಲವೇ, ಪ್ರತ್ಯಕ್ಷತೆ ಯಾವಾಗ ಆಗುತ್ತದೆ, ಯಾವಾಗ ಆಗುತ್ತದೆ. ಅಂದಮೇಲೆ ಖಾಪ್ ದಾದಾರವರೂ ಕೇಳಿಸಿಕೊಳ್ಳುತ್ತಿರುತ್ತಾರೆ. ಮಧುಬನದವರು ಏನು ಕೇಳಿದಿರಿ? ಮಧುಬನದವರು ಕೈ ಎತ್ತಿ. ಮಧುಬನದವರು ಎದ್ದೇಳಿ, ಮಧುಬನ, ಶಾಂತಿವನ, ಜ್ಞಾನಸರೋವರದವರು ಎಲ್ಲರೂ ಮಧುಬಸ ನಿವಾಸಿಗಳಾಗಿದ್ದಾರೆ. ಒಳ್ಳೆಯದು.

ಮಧುಬನದಿಂದ ನಗಾರಿ ಬಾರಿಸುವುದೋ, ಎಲ್ಲಿಂದ ಬಾರಿಸುತ್ತದೆ? ಎಲ್ಲಿಂದ ಬಾರಿಸುತ್ತದೆ ನಗಾರಿ? ಎಲ್ಲಿಂದ ಬಾರಿಸುತ್ತದೆ? ದೆಹಲಿಯಿಂದ ಮಧುಬನದಿಂದ ಅಲ್ಲವೇ. ನಾಲ್ಕೂ ಕಡೆಯಿಂದ ಎಂದು ಹೇಳಿರಿ. ಒಂದು ಕಡೆಯಿಂದ ಬಾರಿಸುವುದಿಲ್ಲ. ಮಧುಬನದಿಂದಲೂ ಬಾರಿಸುತ್ತದೆ. ಆಗ ನಾಲ್ಕೂ ಕಡೆಯಿಂದಲೂ ಬಾರಿಸುತ್ತದೆ ಆಗಲೇ ಕುಂಭಕರ್ಣರು ಎದ್ದೇಳುತ್ತಾರೆ. ಮಧುಬನದವರು ಕೇಳಿದಿರಾ. ಬಹಳ ಒಳ್ಳೆಯದು. ಹೇಗೆ ಸೇವೆಯಲ್ಲಿ ಸುಸ್ತು ಇಲ್ಲದ ರೀತಿಯಲ್ಲಿ ಸೇವೆಯ ಪಾತ್ರವನ್ನು ಮಾಡುತ್ತಿದ್ದೀರಲ್ಲವೇ, ಹಾಗೆಯೇ ಈ ಮನಸಾ ಸೇವೆಯನ್ನು ಮಾಡುತ್ತಾ ಇರಿ. ಕೇವಲ ಕರ್ಮಣ ಅಲ್ಲ ಮನಸಾ ವಾಚಾ ಕರ್ಮಣಾ ಮೂರೂ ಸೇವೆ, ಮಾಡುತ್ತಿದ್ದೀರಿ ಆದರೆ ಇನ್ನಷ್ಟು ಹೆಚ್ಚು ಮಾಡಬೇಕು. ಒಳ್ಳೆಯದು. ಮಧುಬನದವರು ಮರೆತಿಲ್ಲ. ಮಧುಬನದವರು ಯೋಚಿಸುತ್ತಾರೆ - ಬಾಬಾ ಮಧುಬನದಲ್ಲಿ ಬರುತ್ತಾರೆ ಆದರೆ ಮಧುಬನದ ಹೆಸರೇ ಹೇಳುವುದಿಲ್ಲ ಎಂದು ಮಧುಬನವಂತೂ ಸದಾ ನೆನಪು ಇದ್ದೇ ಇದೆ. ಮಧುಬನ ಇಲ್ಲದಿದ್ದರೆ ಇನ್ನೆಲ್ಲಿ ಬರುತ್ತಾರೆ? ತಾವು ಸೇವಾಧಾರಿಗಳು ಸೇವೆ ಮಾಡದಿದ್ದರೆ ಇವರು ಹೇಗೆ ಊಟ ಮಾಡುತ್ತಾರೆ. ಇರುತ್ತಾರೆ! ಅಂದಮೇಲೆ ಮಧುಬನದವರನ್ನು ಬಾಪ್ದಾದಾರವರೂ ಸಹ ಅಂತರಾಳದಿಂದ ನೆನಪು ಮಾಡುತ್ತಾರೆ ಹಾಗೂ ಆಶೀರ್ವಾದಗಳನ್ನು ನೀಡುತ್ತಾರೆ. ಈಗ ಕುಳಿತುಕೊಳ್ಳಿ, ಸುಸ್ತಾಗುತ್ತೀರಿ. ಶಿಕ್ಷಕಿಯರಂತೂ ಸುಸ್ತಾದರು. ಬಾಪ್ದಾದಾರವರು ನಿಂತು ಸುಸ್ತಾಗಿದ್ದನ್ನು ನೋಡಲಿಲ್ಲ. ಡ್ರಿಲ್ ಮಾಡಿದಿರಿ. ಕುಳಿತು-ಕುಳಿತು ಕಾಲು ಹಿಡಿದುಕೊಳ್ಳುತ್ತದೆ, ನಿಂತುಕೊಂಡಿದ್ದು ಸರಿ, ಶಿಕ್ಷಕಿಯರ ಜೊತೆ ಪ್ರೀತಿ ಇದೆ. ತಾನೆ. ಮಧುಬನದ ಮೇಲೆಯೂ ಪ್ರೀತಿಯಿದೆ. ಶಿಕ್ಷಕಿಯರೂ ಪ್ರಿಯರು. ಮಧುರಾತಿ ಮಧುರವಾದ ಮಾತೆಯರ ಜೊತೆಯಲ್ಲಿಯೂ ಪ್ರೀತಿ ಇದೆ, ಹಾಗೂ ಮಹಾವೀರ ಪಾಂಡವರ ಜೊತೆಯಲ್ಲಿಯೂ ಪ್ರೀತಿ ಇದೆ. ಪಾಂಡವರ ವಿನಃ ಗತಿ ಇಲ್ಲ. ಆದ್ದರಿಂದ ಚತುರ್ಭುಜ ರೂಪದ ಮಹಿಮೆ ಜಾಸ್ತಿ ಇದೆ. ಪಾಂಡವ ಹಾಗೂ ಶಕ್ತಿಯರ ಕಂಬೈಂಡ್ ರೂಪ ಚತುರ್ಭುಜ ವಿಷ್ಣು ಆಗಿದೆ.

ಮಧುಭನದಲ್ಲಿರುವ ಪಾಂಡವರು, ನಿಮ್ಮೆಲ್ಲರಿಗೆ ನಶೆಯಿದೆಯೇ? ವಿಜಯದ ನಶೆಯು ಇರಬೇಕು, ಬೇರೆ ನಶೆಯಲ್ಲ. ಒಳ್ಳೆಯದು. ಪಾಂಡವಭವನದಲ್ಲಿ ಪಾಂಡವರಿರುವುದಿಲ್ಲ, ಹೆಚ್ಚು ಪಾಂಡವರಿದ್ದಾರೆ ಅಂದಾಗ ತಮ್ಮೆಲ್ಲರಿಗೂ ಮಧುಬನದಲ್ಲಿ ಮಜಾ ಬರುವುದಿಲ್ಲ ಆದ್ದರಿಂದ ಯಾರು ತಮ್ಮನ್ನ ಮೋಜಿನಲ್ಲಿಂಸುತ್ತಾರೋ, ತಿನ್ನಿಸುತ್ತಾರೋ ಮತ್ತು ಹಾರಿಸುತ್ತಾರೋ ಅಂತರ ಮಧುಬನ ನಿವಾಸಿಗಳಿಗೆ ಬಲಿಹಾರಿಯಾಗುತ್ತೀರಿ. ಇಂದು ಬಾಪ್ದಾದಾ ಮಧುಬನದ ನಿವಾಸಿಗಳನ್ನು ಅಮೃತವೇಳೆಯಲ್ಲಿ ನೆನಪು ಮಾಡುತ್ತಿದ್ದರು. ಅವರು ಇಲ್ಲಿಯವರೇ ಆಗಿರಬಹುದು ಅಥವಾ ಮೇಲೆ ಕುಳಿತಿರುವವರೇ ಆಗಿರಬಹುದು. ಮಧುಬನದಲ್ಲಿರುವಂತಹವರು ಇಲ್ಲಿ ಯಾವುದೋ ಕೆಲಸದಲ್ಲಿರಬಹುದು ಆದರೆ ನಾಲ್ಕೂ ಕಡೆಯ ಮಧುಬನ ನಿವಾಸಿಗಳಿಗೆ ಬಾಪ್ದಾದಾ ಅಮೃತವೇಳೆಯಿಂದಲೇ ನೆನಪನ್ನು ಕೊಡುತ್ತಿದ್ದಾರೆ. ಒಳ್ಳೆಯದು.

ಬಾಪ್ದಾದಾ ಯಾವ ಆತ್ಮೀಯ ವ್ಯಾಯಾಮವನ್ನು ಕೊಟ್ಟಿದ್ದಾರೋ ಅದನ್ನು ಇಡೀ ದಿನದಲ್ಲಿ ಎಷ್ಟು ಬಾರಿ ಮಾಡುತ್ತೀರಿ ಮತ್ತು ಎಷ್ಟು ಸಮಯದಲ್ಲಿ ಮಾಡುತ್ತೀರಿ. ನಿರಾಕಾರಿ ಮತ್ತು ಫರಿಸ್ತಾ. ತಂದೆ ಮತ್ತು ಅಣ್ಣ ಈಗೀಗ ನಿರಾಕಾರಿ, ಈಗೀಗ ಫರಿಸ್ತಾ ಸ್ವರೂಪ ಎರಡರಲ್ಲೂ ದೇಹಭಾನವಿಲ್ಲ. ಅಂದಾಗ ದೇಹಭಾನದಿಂದ ಭಿನ್ನವಾಗಬೇಕಾದರೆ ಈ ಆತ್ಮೀಯ ವ್ಯಾಯಾಮವನ್ನು ಕರ್ಮ ಮಾಡುತ್ತಲೂ ತಮ್ಮ ಕೆಲಸವನ್ನು ಮಾಡುತ್ತಲೂ ಒಂದು ಸೆಕೆಂಡಿನಲ್ಲಿ ಅಭ್ಯಾಸವನ್ನು ಮಾಡಬಹುದು. ಈಗ ಈ ಒಂದು ಸ್ವಾಭಾವಿಕ ಅಭ್ಯಾಸವನ್ನು ಮಾಡಿಕೊಳ್ಳಿ. ಈಗೀಗ ನಿರಾಕಾರಿ, ಈಗೀಗ ಫರಿಸೆಗಳಾಗಿ. ಒಳ್ಳೆಯದು. (ಬಾಪ್ದಾದಾ ಡ್ರಿಲ್ ಮಾಡಿಸಿದರು)

ಈ ರೀತಿ ನಿರಂತರ ಭವ! ನಾಲ್ಕೂ ಕಡೆಯ ಬಾಪ್ ದಾದಾರವರ ನೆನಪಿನಲ್ಲಿ ಮಗ್ನರಾಗಿರುವಂತಹ ತಂದೆಯ ಸಮಾನರಾಗುವ ಲಕ್ಷ್ಯವನ್ನು ಲಕ್ಷಣದಲ್ಲಿ ಸಮಾನರಾಗುವಂತಹ ಯಾರು ಮೂಲೆ-ಮೂಲೆಯಲ್ಲಿ ವಿಜ್ಞಾನದ ಸಾಧನಗಳಿಂದ ಹಗಲು ಹಾಗೂ ರಾತ್ರಿ ಜಾಗೃತರಾಗಿ ಕುಳಿತಿದ್ದಾರೆ. ಆ ಮಕ್ಕಳಿಗೂ ಬಾಪ್ದಾದಾ ನೆನಪು, ಪ್ರೀತಿ ಹಾಗೂ ಶುಭಾಷಯ ಮತ್ತು ಮನಸ್ಸಿನ ಆಶೀರ್ವಾದವನ್ನು ಕೊಡುತ್ತಿದ್ದಾರೆ. ಬಾಪ್ದಾದಾ ಎಲ್ಲರ ಮನಸ್ಸಿನಲ್ಲಿ ಈ ಸಮಯದಲ್ಲಿ ದಿಲಾರಾಮಾ ತಂದೆಯ ನೆನಪು ಸಮಾವೇಶ ಆಗಿದೆಯೆಂದು ತಿಳಿದುಕೊಂಡಿದ್ದಾರೆ. ಪ್ರತಿಯೊಬ್ಬರು ಮೂಲೆ-ಮೂಲೆಯಲ್ಲಿ ಕುಳಿತಿರುವ ಮಕ್ಕಳಿಗೆ ಬಾಪ್ದಾದಾ ಪ್ರತ್ಯೇಕವಾಗಿ ಹೆಸರಿನಿಂದ ನೆನಪು, ಪ್ರೀತಿಯನ್ನು ಕೊಟ್ಟಿದ್ದಾರೆ. ಹೆಸರುಗಳ ಮಾಲೆಯನ್ನು ನೆನಪು ಮಾಡಿದರೆ ರಾತ್ರಿಯು ಪೂರ್ಣವಾಗುತ್ತದೆ. ಬಾಪ್ದಾದಾ ಎಲ್ಲಾ ಮಕ್ಕಳಿಗೂ ನೆನಪನ್ನು ಕೊಡುತ್ತಾರೆ. ಅವರು ಪುರುಷಾರ್ಥದಲ್ಲಿ ಯಾವುದೇ ನಂಬರ್ ಇರಲಿ ಆದರೂ ಬಾಪ್ದಾದಾ ಸದಾ ಪ್ರತಿಯೊಬ್ಬ ಮಕ್ಕಳಿಗೂ ಶ್ರೇಷ್ಠ ಸ್ವಮಾನದ ನೆನಪು, ಪ್ರೀತಿಯನ್ನು ಕೊಡುತ್ತಾರೆ ಮತ್ತು ನಮಸ್ತೆ ಮಾಡುತ್ತಾರೆ. ನೆನಪು, ಪ್ರೀತಿಯನ್ನು ಕೊಡುವ ಸಮಯದಲ್ಲಿ ಬಾಪ್ದಾದಾರವರ ನಾಲ್ಕೂ ಕಡೆಯ ಪ್ರತಿಯೊಬ್ಬ ಮಕ್ಕಳಿಗೆ ನೆನಪನ್ನು ಕೊಡುತ್ತಿದ್ದಾರೆ. ಯಾವುದೇ ಒಂದು ಮಗುವು ಯಾವುದೇ ಮೂಲೆಯಲ್ಲಿ, ಹಳ್ಳಿಯಲ್ಲಿ, ನಗರದಲ್ಲಿ, ದೇಶದಲ್ಲಿ, ವಿದೇಶದಲ್ಲಿ ಎಲ್ಲಿಯೇ ಇದ್ದರೂ ಬಾಪ್ದಾದಾರವರಿಗೆ ಸ್ವಮಾನವನ್ನು ನೆನಪು ಕೊಡಿಸುತ್ತಾ ನೆನಪು ಪ್ರೀತಿಯನ್ನು ಕೊಡುತ್ತಿದ್ದಾರೆ. ಎಲ್ಲರೂ ನೆನಪು ಪ್ರೀತಿಯ ಅಧಿಕಾರಿಗಳಾಗಿದ್ದೀರಿ ಏಕೆಂದರೆ ಬಾಬಾ ಹೇಳಿದರು ನೆನಪು ಪ್ರೀತಿಯ ಅಧಿಕಾರಿಗಳಾಗಿರಿ. ತಾವೆಲ್ಲಾ ಸನ್ಮುಖದಲ್ಲಿರುವಂತಹವರಿಗೆ ಬಾಪ್ದಾದಾ ಸ್ವಮಾನದ ಮಾಲಾಧಾರೀ ಸ್ವರೂಪದಲ್ಲಿ ನೋಡುತ್ತಿದ್ದಾರೆ. ಎಲ್ಲರಿಗೂ ತಂದೆಯ ಸಮಾನ ಸ್ವಮಾನ ಸ್ವರೂಪದಲ್ಲಿ ನೆನಪು, ಪ್ರೀತಿ ಹಾಗೂ ನಮಸ್ತೆ.

ದಾದಿಯವರ ಜೊತೆ – ಆರೋಗ್ಯವಾಗಿದ್ದೀರಲ್ಲವೇ, ಈಗ ಯಾವುದೇ ಖಾಯಿಲೆಯಿಲ್ಲವೇ. ಎಲ್ಲವೂ ಓಡಿಹೋಯಿತೇ. ಅದು ಕೇವಲ ತೋರಿಸುವುದಕ್ಕೋಸ್ಕರ ಬಂದಿತು. ಎಲ್ಲರೂ ನೋಡುತ್ತಿದ್ದರು. ಅದು ನಮ್ಮ ಬಳಿ ಬಂದರೂ ದೊಡ್ಡ ಮಾತೇನಿಲ್ಲ.

ಎಲ್ಲಾ ದಾದಿಯರು ಬಹಳ ಒಳ್ಳೆಯ ಪಾತ್ರವನ್ನು ಮಾಡುತ್ತಿದ್ದೀರಿ. ಎಲ್ಲರ ಪಾತ್ರವನ್ನು ನೋಡಿ ಬಾಪ್ದಾದಾ ಖುಷಿಪಡುತ್ತಿದ್ದಾರೆ. (ನಿರ್ಮಲಾ ಶಾಂತ ದಾದಿಯ ಜೊತೆ) ಆದಿ ರತ್ನವಾಗಿದ್ದಾರಲ್ಲವೇ. ಅದಿರತ್ನ ಅಲ್ಲವೇ! ಅನಾದಿ ರೂಪದಲ್ಲಿಯೂ ನಿರಾಕಾರ ತಂದೆಯ ಸಮೀಪರಾಗಿ ಜೊತೆ- ಜೊತೆಯಲ್ಲಿದ್ದೀರಿ ಮತ್ತು ಆದಿರೂಪದಲ್ಲಿಯ ರಾಜ್ಯ ದರ್ಬಾರಿನ ಜೊತೆಗಾರರಾಗಿದ್ದೀರಿ. ಸದಾ ಘನತೆಯ ಕುಟುಂಬದ ಘನತೆಯುಳ್ಳಂತಹವರಾಗಿದ್ದೀರಿ ಮತ್ತು ಸಂಗಮಯುಗದಲ್ಲಿ ಆದಿರತ್ನ ಆಗುವ ಭಾಗ್ಯವು ಸಿಕ್ಕಿದೆ. ಅಂದಾಗ ಬಹಳ ದೊಡ್ಡ ಭಾಗ್ಯವಾಗಿದೆ. ಭಾಗ್ಯವಿದೆಯಲ್ಲವೇ. ತಮ್ಮ ಪ್ರತ್ಯಕ್ಷವಾಗುವುದೇ ಎಲ್ಲರಿಗೂ ವರದಾನವಾಗಿದೆ. ಹೇಳಿ ಅಥವಾ ಹೇಳದಿರಿ, ಮಾಡಿ ಅಥವಾ ಮಾಡದಿರಿ. ಆದರೆ ತಾವು ಪ್ರತ್ಯಕ್ಷವಾಗಿರುವುದೇ ಎಲ್ಲರಿಗೂ ವರದಾನವಾಗಿದೆ. ಒಳ್ಳೆಯದು.

ವರದಾನ:
ಲೌಕಿಕ ಅಲೌಕಿಕ ಜೀವನದಲ್ಲಿ ಸದಾ ನ್ಯಾರಾ ಆಗಿ ಪರಮಾತ್ಮನ ಜೊತೆಯ ಅನುಭವದ ಮೂಲಕ ನಷ್ಟೋಮೋಹ ಭವ.

ಸದಾ ನ್ಯಾರಾ ಇರುವ ನಿಶಾನಿಯಾಗಿದೆ ಪ್ರಭು ಪ್ರೀತಿಯ ಅನುಭೂತಿ ಮತ್ತು ಎಷ್ಟು ಪ್ರೀತಿಯಿರುವುದು ಅಷ್ಟು ಜೊತೆ ಇರುವಿರಿ, ಬೇರೆಯಾಗುವುದಿಲ್ಲ. ಪ್ರೀತಿ ಎಂದು ಅವರಿಗೆ ಹೇಳಲಾಗುವುದು ಯಾರು ಜೊತೆಯಲ್ಲಿರುತ್ತಾರೆ. ಯಾವಾಗ ತಂದೆ ಜೊತೆ ಇರುತ್ತಾರೆ ಆಗ ಎಲ್ಲಾ ಹೊರೆಯನ್ನು ತಂದೆಗೆ ಕೊಟ್ಟು ಖುದ್ದು ನೀವು ಹಗುರವಾಗಿ ಬಿಡಿ. ಇದೇ ವಿಧಿಯಾಗಿದೆ ನಷ್ಟೋಮೋಹಿಳಾಗುವುದು. ಆದರೆ ಪುರುಷಾರ್ಥದ ಸಬ್ಜೆಕ್ಟ್ನಲ್ಲಿ ಸದಾ ಶಬ್ದವನ್ನು ಅಂಡರ್ಲೈನ್ ಮಾಡಿ. ಲೌಕಿಕ ಮತ್ತು ಅಲೌಕಿಕ ಜೀವನದಲ್ಲಿ ಸದಾ ನ್ಯಾರೆ ಆಗಿರಿ ಆಗ ಸದಾ ಜೊತೆಯ ಅನುಭವವಾಗುವುದು.

ಸ್ಲೋಗನ್:
ವಿಕಾರ ರೂಪಿ ಸರ್ಪವನ್ನು ತಮ್ಮ ಶಯ್ಯೆಯನ್ನಾಗಿ ಮಾಡಿಕೊಂಡಾಗ ಸಹಜಯೋಗಿಗಳಾಗಿ ಬಿಡುವಿರಿ.