25.03.25 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ನೀವು
ತಂದೆಯ ಮಕ್ಕಳೇ ಮಾಲೀಕರಾಗಿದ್ದೀರಿ, ನೀವೇನೂ ತಂದೆಯ ಬಳಿ ಆಶ್ರಯವನ್ನು (ಶರಣಾಗತಿ)
ತೆಗೆದುಕೊಂಡಿಲ್ಲ, ಮಗುವೆಂದೂ ತಂದೆಗೆ ಶರಣಾಗತನಾಗುವುದಿಲ್ಲ”
ಪ್ರಶ್ನೆ:
ಸದಾ ಯಾವ ಮಾತಿನ
ಸ್ಮರಣೆಯಿದ್ದರೆ ಮಾಯೆಯು ತೊಂದರೆ ಕೊಡುವುದಿಲ್ಲ?
ಉತ್ತರ:
ನಾವು ತಂದೆಯ ಬಳಿ
ಬಂದಿದ್ದೇವೆ, ಅವರು ನಮ್ಮ ತಂದೆಯೂ ಆಗಿದ್ದಾರೆ, ಶಿಕ್ಷಕನೂ ಆಗಿದ್ದಾರೆ, ಸದ್ಗುರುವೂ ಆಗಿದ್ದಾರೆ
ಆದರೆ ಅವರು ನಿರಾಕಾರನಾಗಿದ್ದಾರೆ. ನಾವು ನಿರಾಕಾರಿ ಆತ್ಮಗಳಿಗೆ ಓದಿಸುವವರು ನಿರಾಕಾರ
ತಂದೆಯಾಗಿದ್ದಾರೆ. ಇದು ಬುದ್ಧಿಯಲ್ಲಿ ಈ ಸ್ಮರಣೆಯಿದ್ದರೆ ಖುಷಿಯ ನಶೆಯೇರಿರುವುದು ಮತ್ತು ಮಾಯೆಯೂ
ತೊಂದರೆ ಕೊಡುವುದಿಲ್ಲ.
ಓಂ ಶಾಂತಿ.
ತ್ರಿಮೂರ್ತಿ ತಂದೆಯು ಮಕ್ಕಳಿಗೆ ತಿಳಿಸಿದ್ದಾರೆ. ತ್ರಿಮೂರ್ತಿ ತಂದೆಯಾಗಿದ್ದಾರಲ್ಲವೆ! ಮೂವರನ್ನು
ರಚಿಸುವಂತಹ ಅವರು ಸರ್ವರ ತಂದೆಯಾದರು ಏಕೆಂದರೆ ಸರ್ವಶ್ರೇಷ್ಠನು ತಂದೆಯೇ ಆಗಿದ್ದಾರೆ. ಈಗ ಮಕ್ಕಳ
ಬುದ್ಧಿಯಲ್ಲಿದೆ - ನಾವು ಆ ತಂದೆಯ ಮಕ್ಕಳಾಗಿದ್ದೇವೆ, ಹೇಗೆ ತಂದೆಯು ಪರಮಧಾಮದಲ್ಲಿರುವರೋ ಹಾಗೆಯೇ
ನಾವೂ ಸಹ ಅಲ್ಲಿನ ನಿವಾಸಿಗಳಾಗಿದ್ದೇವೆ. ತಂದೆಯು ಇದನ್ನೂ ತಿಳಿಸಿದ್ದಾರೆ - ಮಕ್ಕಳೇ, ಇದು
ಡ್ರಾಮವಾಗಿದೆ, ಏನೆಲ್ಲವೂ ನಡೆಯುತ್ತದೆಯೋ ಅದೆಲ್ಲವೂ ಡ್ರಾಮದಲ್ಲಿ ಒಮ್ಮೆ ಮಾತ್ರವೇ ನಡೆಯುತ್ತದೆ.
ತಂದೆಯೂ ಸಹ ಕಲ್ಪದಲ್ಲಿ ಒಂದೇಬಾರಿ ಓದಿಸಲು ಬರುತ್ತಾರೆ. ನೀವೇನೂ ಶರಣಾಗತರಾಗುವುದಿಲ್ಲ. ನಾನು
ನಿನಗೆ ಶರಣಾಗಿದ್ದೇನೆ ಎಂಬುದು ಭಕ್ತಿಮಾರ್ಗದ ಶಬ್ಧವಾಗಿದೆ. ಮಕ್ಕಳೆಂದಾದರೂ ತಂದೆಗೆ
ಶರಣಾಗತರಾಗುತ್ತಾರೆಯೇ! ಮಕ್ಕಳು ಮಾಲೀಕರಾಗುತ್ತಾರೆ, ನೀವು ಮಕ್ಕಳು ತಂದೆಗೆ ಶರಣಾಗತರಾಗಿಲ್ಲ.
ತಂದೆಯು ತಮ್ಮನ್ನು ತನ್ನವರನ್ನಾಗಿ ಮಾಡಿಕೊಂಡಿದ್ದಾರೆ. ಮಕ್ಕಳೂ ಸಹ ತಂದೆಯನ್ನು ತಮ್ಮವರನ್ನಾಗಿ
ಮಾಡಿಕೊಂಡಿದ್ದೀರಿ. ನೀವು ಮಕ್ಕಳೇ ತಂದೆಯನ್ನು ಕರೆಯುತ್ತೀರಿ - ಓ ತಂದೆಯೇ, ಬನ್ನಿ ಬಂದು ತಮ್ಮ
ಮನೆಗೆ ಕರೆದುಕೊಂಡು ಹೋಗಿ ಅಥವಾ ರಾಜ್ಯಭಾಗ್ಯವನ್ನು ಕೊಡಿ. ಒಂದು ಶಾಂತಿಧಾಮ, ಇನ್ನೊಂದು
ಸುಖಧಾಮವಾಗಿದೆ. ಸುಖಧಾಮವು ತಂದೆಯ ಆಸ್ತಿಯಾಗಿದೆ ಮತ್ತು ದುಃಖಧಾಮವು ರಾವಣನ ಆಸ್ತಿಯಾಗಿದೆ. 5
ವಿಕಾರಗಳಲ್ಲಿ ಸಿಕ್ಕಿಹಾಕಿಕೊಂಡಿರುವುದರಿಂದಲೇ ದುಃಖವೇ ದುಃಖವಿದೆ. ಈಗ ಮಕ್ಕಳಿಗೆ ತಿಳಿದಿದೆ -
ನಾವು ತಂದೆಯ ಬಳಿ ಬಂದಿದ್ದೇವೆ, ಅವರು ನಮ್ಮ ತಂದೆಯೂ ಆಗಿದ್ದಾರೆ, ಶಿಕ್ಷಕನೂ ಆಗಿದ್ದಾರೆ ಆದರೆ
ಅವರು ನಿರಾಕಾರನಾಗಿದ್ದಾರೆ. ನಾವು ನಿರಾಕಾರಿ ಆತ್ಮಗಳಿಗೆ ಓದಿಸುವವರೂ ಸಹ ನಿರಾಕಾರನಾಗಿದ್ದಾರೆ.
ಅವರು ಆತ್ಮಗಳ ತಂದೆಯಾಗಿದ್ದಾರೆ. ಈ ಸ್ಮರಣೆಯು ಸದಾ ಬುದ್ಧಿಯಲ್ಲಿದ್ದರೂ ಸಹ ಖುಷಿಯ ನಶೆಯೇರುವುದು.
ಇದನ್ನು ಮರೆಯುವುದರಿಂದಲೆ ಮಾಯೆಯು ತೊಂದರೆ ಕೊಡುತ್ತದೆ. ಈಗ ನೀವು ತಂದೆಯ ಬಳಿ ಕುಳಿತಿದ್ದೀರಿ
ಆದ್ದರಿಂದ ತಂದೆ ಮತ್ತು ಆಸ್ತಿಯ ನೆನಪು ಬರುತ್ತದೆ. ಗುರಿ-ಧ್ಯೇಯವಂತೂ ಬುದ್ಧಿಯಲ್ಲಿದೆಯಲ್ಲವೆ.
ಶಿವತಂದೆಯನ್ನೇ ನೆನಪು ಮಾಡಬೇಕಾಗಿದೆ. ಕೃಷ್ಣನನ್ನು ನೆನಪು ಮಾಡುವುದು ಬಹಳ ಸಹಜ ಆದರೆ
ಶಿವತಂದೆಯನ್ನು ನೆನಪು ಮಾಡುವುದರಲ್ಲಿಯೇ ಪರಿಶ್ರಮವಿದೆ. ತನ್ನನ್ನು ಆತ್ಮನೆಂದು ತಿಳಿದು
ತಂದೆಯನ್ನು ನೆನಪು ಮಾಡಬೇಕಾಗಿದೆ. ಒಂದುವೇಳೆ ಕೃಷ್ಣನಿದ್ದಿದ್ದೇ ಆದರೆ ಅವನ ಮೇಲೆ ಎಲ್ಲರೂ
ಮುತ್ತಿಗೆ ಹಾಕುತ್ತಿದ್ದರು. ವಿಶೇಷವಾಗಿ ಮಾತೆಯರು ಕೃಷ್ಣನಂತಹ ಮಗುವಾಗಲಿ, ಕೃಷ್ಣನಂತಹ ಪತಿ
ಸಿಗಲೆಂದು ಬಹಳ ಬಯಸುತ್ತಾರೆ. ಈಗ ತಂದೆಯು ತಿಳಿಸುತ್ತಾರೆ - ನಾನು ಬಂದಿದ್ದೇನೆ, ನಿಮಗೆ
ಕೃಷ್ಣನಂತಹ ಮಗು ಅಥವ ಪತಿಯೂ ಸಿಗುವರು ಅರ್ಥಾತ್ ಇವರಂತಹ ಗುಣವಂತ, ಸರ್ವಗುಣ ಸಂಪನ್ನ, 16
ಕಲಾಸಂಪೂರ್ಣ, ಸುಖ ಕೊಡುವಂತಹವರು ನಿಮಗೆ ಸಿಗುವರು. ಸ್ವರ್ಗ ಅಥವಾ ಕೃಷ್ಣಪುರಿಯಲ್ಲಿ ಸುಖವೇ
ಸುಖವಿರುವುದು. ಮಕ್ಕಳು ತಿಳಿದುಕೊಂಡಿದ್ದೀರಿ - ನಾವು ಕೃಷ್ಣಪುರಿಯಲ್ಲಿ ಹೋಗುವುದಕ್ಕಾಗಿ ಇಲ್ಲಿ
ಓದುತ್ತೇವೆ. ಎಲ್ಲರೂ ಸ್ವರ್ಗವನ್ನೇ ನೆನಪು ಮಾಡುತ್ತಾರಲ್ಲವೆ. ಯಾರಾದರೂ ಮರಣಹೊಂದಿದರೆ
ಸ್ವರ್ಗವಾಸಿಯಾದರೆಂದು ಹೇಳುತ್ತಾರೆ ಅಂದಮೇಲೆ ಇನ್ನೂ ಖುಷಿಯಾಗಬೇಕು, ಚಪ್ಪಾಳೆ ತಟ್ಟಬೇಕಲ್ಲವೆ
ಏಕೆಂದರೆ ನರಕದಿಂದ ಹೊರಬಂದು ಸ್ವರ್ಗದಲ್ಲಿ ಹೋದರೆಂದರೆ ಇನ್ನೂ ಒಳ್ಳೆಯದಾಯಿತು. ಯಾರಾದರೂ
ಸ್ವರ್ಗಸ್ಥರಾದರೆಂದು ಹೇಳಿದಾಗ ನೀವು ಕೇಳಿ - ಎಲ್ಲಿಂದ ಹೋದರು? ಅವಶ್ಯವಾಗಿ ನರಕದಿಂದ
ಹೋದರೆಂದರ್ಥ. ಇದರಲ್ಲಿ ಇನ್ನೂ ಖುಷಿಯ ಮಾತಾಗಿದೆ ಅಂದಮೇಲೆ ಎಲ್ಲರನ್ನೂ ಕರೆಸಿ ಟೋಲಿಯನ್ನು
ತಿನ್ನಿಸಬೇಕು. ಆದರೆ ಇದು ತಿಳುವಳಿಕೆಯ ಮಾತಾಗಿದೆ. 21 ಜನ್ಮಗಳಿಗಾಗಿ ಸ್ವರ್ಗಕ್ಕೆ ಹೋದರೆಂದು
ಹೇಳುವುದಿಲ್ಲ ಕೇವಲ ಸ್ವರ್ಗಕ್ಕೆ ಹೋದರೆಂದು ಹೇಳಿಬಿಡುತ್ತಾರೆ. ಒಳ್ಳೆಯದು. ಮತ್ತೆ ಅವರ
ಆತ್ಮವನ್ನು ಇಲ್ಲಿ ಏಕೆ ಕರೆಸುತ್ತೀರಿ? ನರಕದ ಭೋಜನವನ್ನು ತಿನ್ನಿಸುವುದಕ್ಕೋಸ್ಕರವೇ? ನರಕದಲ್ಲಂತೂ
ಕರೆಸಲೇಬಾರದು. ಇದನ್ನು ತಂದೆಯು ತಿಳಿಸಿಕೊಡುತ್ತಾರೆ. ಪ್ರತಿಯೊಂದೂ ಜ್ಞಾನದ ಮಾತಾಗಿದೆಯಲ್ಲವೆ.
ನಮ್ಮನ್ನು ಪತಿತರಿಂದ ಪಾವನ ಮಾಡಿ ಎಂದು ತಂದೆಯನ್ನು ಕರೆಯುತ್ತಾರೆ ಅಂದಮೇಲೆ ಅವಶ್ಯವಾಗಿ ಪತಿತ
ಶರೀರಗಳನ್ನು ಸಮಾಪ್ತಿ ಮಾಡಬೇಕಾಗುತ್ತದೆ. ಎಲ್ಲರೂ ಶರೀರಬಿಡುತ್ತಾರೆ ಮತ್ತೆ ಯಾರು ಯಾರಿಗಾಗಿ
ಅಳುತ್ತಾರೆ? ಈಗ ನೀವು ತಿಳಿದುಕೊಂಡಿದ್ದೀರಿ, ನಾವು ಈ ಶರೀರವನ್ನು ಬಿಟ್ಟು ನಮ್ಮ ಮನೆಗೆ
ಹೋಗುತ್ತೇವೆ. ಹೇಗೆ ಶರೀರ ಬಿಡುವುದೆಂದು ಈಗ ಅಭ್ಯಾಸ ಮಾಡುತ್ತೇವೆ. ಇಂತಹ ಪುರುಷಾರ್ಥವನ್ನು
ಪ್ರಪಂಚದಲ್ಲಿ ಯಾರಾದರೂ ಮಾಡುತ್ತಾರೆಯೇ!
ನಮ್ಮದು ಇದು ಹಳೆಯ
ಶರೀರವಾಗಿದೆಯೆಂದು ನೀವು ಮಕ್ಕಳಿಗೆ ಜ್ಞಾನವಿದೆ. ತಂದೆಯೂ ಸಹ ತಿಳಿಸುತ್ತಾರೆ - ನಾನು ಹಳೆಯ
ಪಾದರಕ್ಷೆಯನ್ನು ಲೋನ್ ಆಗಿ ಪಡೆಯುತ್ತೇನೆ. ಡ್ರಾಮದಲ್ಲಿ ಈ ರಥವೇ ನಿಮಿತ್ತವಾಗಿದೆ. ಇದು ಬದಲಾಗಲು
ಸಾಧ್ಯವಿಲ್ಲ. ಇದನ್ನು ಪುನಃ ನೀವು 5000 ವರ್ಷಗಳ ನಂತರವೇ ನೋಡುತ್ತೀರಿ. ಡ್ರಾಮದ ರಹಸ್ಯವನ್ನು
ಅರಿತುಕೊಂಡಿದ್ದೀರಲ್ಲವೆ. ಇದನ್ನು ತಂದೆಯ ವಿನಃ ಮತ್ತ್ಯಾರಲ್ಲಿಯೂ ತಿಳಿಸಿಕೊಡುವ ಶಕ್ತಿಯಿಲ್ಲ. ಈ
ಪಾಠಶಾಲೆಯು ಬಹಳ ವಿಚಿತ್ರವಾಗಿದೆ! ಇಲ್ಲಿ ವೃದ್ಧರೂ ಸಹ ನಾವು ಭಗವಾನ್-ಭಗವತಿಯಾಗಲು ಭಗವಂತನ
ಪಾಠಶಾಲೆಗೆ ಹೋಗುತ್ತೇವೆಂದು ಹೇಳುತ್ತಾರೆ. ಅರೆ! ವೃದ್ಧೆಯರು ಎಂದಾದರೂ ಶಾಲೆಯಲ್ಲಿ ಓದುತ್ತಾರೆಯೇ!
ನೀವು ಎಲ್ಲಿಗೆ ಹೋಗುತ್ತೀರಿ ಎಂದು ಯಾರಾದರೂ ನಿಮ್ಮನ್ನು ಕೇಳಿದರೆ ನಾವು ಈಶ್ವರೀಯ
ವಿಶ್ವವಿದ್ಯಾಲಯಕ್ಕೆ ಹೋಗುತ್ತೇವೆ, ಅಲ್ಲಿ ನಾವು ರಾಜಯೋಗವನ್ನು ಕಲಿಯುತ್ತೇವೆಂದು ಹೇಳಿ. ನಿಮ್ಮ
ಮಾತನ್ನು ಕೇಳಿದ ತಕ್ಷಣ ಅವರು ಚಕಿತರಾಗಿಬಿಡಬೇಕು. ನಾವು ಭಗವಂತನ ಪಾಠಶಾಲೆಯಲ್ಲಿ ಓದಲು
ಹೋಗುತ್ತೇವೆಂದು ಹೇಳುತ್ತಾರೆ. ವೃದ್ಧೆಯರೂ ಸಹ ಹೇಳುತ್ತಾರೆ. ಇದು ಇಲ್ಲಿ ಆಶ್ಚರ್ಯಕರವಾದ
ಮಾತಾಗಿದೆ. ನಾವು ಭಗವಂತನ ಬಳಿ ಓದಲು ಹೋಗುತ್ತೇವೆಂದು ಮತ್ತ್ಯಾರೂ ಹೇಳಲು ಸಾಧ್ಯವಿಲ್ಲ. ನಿರಾಕಾರ
ಭಗವಂತನೆಲ್ಲಿಂದ ಬಂದರು ಎಂದು ಕೇಳುತ್ತಾರೆ ಏಕೆಂದರೆ ಭಗವಂತನು ನಾಮ-ರೂಪದಿಂದ ಭಿನ್ನ ಎಂದು ಅವರು
ತಿಳಿದುಕೊಂಡಿದ್ದಾರೆ. ಈಗ ನೀವು ತಿಳುವಳಿಕೆಯಿಂದ ಹೇಳುತ್ತೀರಿ. ಪ್ರತಿಯೊಂದು ಮೂರ್ತಿಯ
ಚರಿತ್ರೆಯನ್ನು ನೀವು ತಿಳಿದುಕೊಂಡಿದ್ದೀರಿ. ಶ್ರೇಷ್ಠಾತಿಶ್ರೇಷ್ಠ ಶಿವತಂದೆಯಾಗಿದ್ದಾರೆ, ನಾವು
ಅವರ ಸಂತಾನರಾಗಿದ್ದೇವೆಂದು ಬುದ್ಧಿಯಲ್ಲಿ ಪಕ್ಕಾ ನಿಶ್ಚಯವಿರಬೇಕು. ಸೂಕ್ಷ್ಮವತನವಾಸಿ ಬ್ರಹ್ಮಾ,
ವಿಷ್ಣು, ಶಂಕರರೆಂದು ಸುಮ್ಮನೆ ನೀವು ಹೇಳುವುದಿಲ್ಲ. ನೀವಂತೂ ಬ್ರಹ್ಮಾರವರ ಮೂಲಕ ಸ್ಥಾಪನೆಯನ್ನು
ತಂದೆಯು ಹೇಗೆ ಮಾಡುತ್ತಾರೆಂದು ಯಥಾರ್ಥವಾಗಿ ಅರಿತುಕೊಳ್ಳುತ್ತೀರಿ. ನಿಮ್ಮ ವಿನಃ ಮತ್ತ್ಯಾರೂ
ಎಲ್ಲರ ಚರಿತ್ರೆಯನ್ನು ತಿಳಿಸಲು ಸಾಧ್ಯವಿಲ್ಲ. ತಮ್ಮ ಚರಿತ್ರೆಯೇ ಗೊತ್ತಿಲ್ಲವೆಂದರೆ ಅನ್ಯರದನ್ನು
ಹೇಗೆ ತಿಳಿದುಕೊಳ್ಳುತ್ತಾರೆ? ನೀವೀಗ ಎಲ್ಲವನ್ನೂ ತಿಳಿದುಕೊಂಡಿದ್ದೀರಿ. ತಂದೆಯು ತಿಳಿಸುತ್ತಾರೆ
- ನಾನೇನನ್ನು ತಿಳಿದಿದ್ದೇನೆಯೋ ಅದನ್ನು ನೀವು ಮಕ್ಕಳಿಗೂ ತಿಳಿಸುತ್ತೇನೆ. ತಂದೆಯ ವಿನಃ
ರಾಜ್ಯಭಾಗ್ಯವನ್ನೂ ಸಹ ಯಾರೂ ಕೊಡಲು ಸಾಧ್ಯವಿಲ್ಲ. ಈ ಲಕ್ಷ್ಮೀ-ನಾರಾಯಣರು ಯುದ್ಧದಿಂದ ರಾಜ್ಯವನ್ನು
ಪಡೆಯಲಿಲ್ಲ. ಸತ್ಯಯುಗದಲ್ಲಿ ಯುದ್ಧವಾಗುವುದೇ ಇಲ್ಲ. ಇಲ್ಲಂತೂ ಎಷ್ಟೆಲ್ಲಾ ಹೊಡೆದಾಡುತ್ತಾರೆ,
ಜಗಳವಾಡುತ್ತಾರೆ. ಎಷ್ಟೊಂದು ಮಂದಿ ಮನುಷ್ಯರಿದ್ದಾರೆ! ಈಗ ನೀವು ಮಕ್ಕಳ ಹೃದಯದಲ್ಲಿ ಬರಬೇಕು -
ನಾವು ದಾದಾರವರ ಮೂಲಕ ತಂದೆಯ ಆಸ್ತಿಯನ್ನು ಪಡೆಯುತ್ತಿದ್ದೇವೆ. ತಂದೆಯು ತಿಳಿಸುತ್ತಾರೆ -
ನನ್ನೊಬ್ಬನನ್ನೇ ನೆನಪು ಮಾಡಿ ಎಂದು. ನಾನು ಯಾರಲ್ಲಿ ಪ್ರವೇಶ ಮಾಡುತ್ತೇನೆಯೋ ಅವರನ್ನೂ ನೆನಪು
ಮಾಡಿ ಎಂದು ಹೇಳುವುದಿಲ್ಲ, ನನ್ನೊಬ್ಬನನ್ನೇ ನೆನಪು ಮಾಡಿ ಎಂದು ಹೇಳುತ್ತಾರೆ. ಆ ಸನ್ಯಾಸಿಗಳು
ತಮ್ಮ ಭಾವಚಿತ್ರವನ್ನು ಹೆಸರುಸಹಿತವಾಗಿ ಕೊಡುತ್ತಾರೆ. ಶಿವತಂದೆಯ ಭಾವಚಿತ್ರವನ್ನೇನು
ತೆಗೆಯುತ್ತೀರಿ? ಬಿಂದುವಿನ ಮೇಲೆ ಹೆಸರನ್ನೇನು ಬರೆಯುತ್ತೀರಿ! ಬಿಂದುವಿನ ಮೇಲೆ ಶಿವತಂದೆಯೆಂದು
ಹೆಸರು ಬರೆದಿದ್ದೇ ಆದರೆ ಬಿಂದುವಿಗಿಂತಲೂ ಹೆಸರೇ ದೊಡ್ಡದಾಗಿರುತ್ತದೆ. ಇದು ತಿಳುವಳಿಕೆಯ
ಮಾತಾಗಿದೆಯಲ್ಲವೆ! ಅಂದಾಗ ನಮಗೆ ಶಿವತಂದೆಯು ಓದಿಸುತ್ತಾರೆಂದು ಮಕ್ಕಳಿಗೆ ಬಹಳ ಖುಷಿಯಿರಬೇಕು.
ಆತ್ಮವೇ ಓದುತ್ತದೆಯಲ್ಲವೆ. ಆತ್ಮವೇ ಸಂಸ್ಕಾರವನ್ನು ತೆಗೆದುಕೊಂಡು ಹೋಗುತ್ತದೆ. ಈಗ ತಂದೆಯು
ಆತ್ಮದಲ್ಲಿ ಸಂಸ್ಕಾರವನ್ನು ತುಂಬುತ್ತಿದ್ದಾರೆ. ಅವರು ತಂದೆಯೂ ಆಗಿದ್ದಾರೆ, ಶಿಕ್ಷಕನೂ ಆಗಿದ್ದಾರೆ,
ಸದ್ಗುರುವೂ ಆಗಿದ್ದಾರೆ. ಆ ತಂದೆಯು ನಿಮಗೆ ಕಲಿಸುತ್ತಾರೆ, ನೀವು ಅನ್ಯರಿಗೂ ಇದನ್ನು ಕಲಿಸಿಕೊಡಿ,
ಸೃಷ್ಟಿಚಕ್ರವನ್ನು ನೆನಪು ಮಾಡಿ ಮತ್ತು ಮಾಡಿಸಿ. ಅವರಲ್ಲಿ ಯಾವ ಗುಣಗಳಿವೆಯೋ ಅವನ್ನು ಮಕ್ಕಳಿಗೆ
ಕೊಡುತ್ತಾರೆ. ತಿಳಿಸುತ್ತಾರೆ - ನಾನು ಜ್ಞಾನಸಾಗರ, ಸುಖದ ಸಾಗರನಾಗಿದ್ದೇನೆ, ನಿಮ್ಮನ್ನೂ ನನ್ನ
ಸಮಾನ ಮಾಡುತ್ತೇನೆ. ನೀವೂ ಸಹ ಎಲ್ಲರಿಗೆ ಸುಖವನ್ನು ಕೊಡಿ. ಮನಸಾ-ವಾಚಾ-ಕರ್ಮಣಾ ಯಾರಿಗೂ
ದುಃಖವನ್ನು ಕೊಡಬೇಡಿ. ಎಲ್ಲರ ಕಿವಿಯಲ್ಲಿ ಇದೇ ಮಧುರ ಮಾತುಗಳನ್ನು ತಿಳಿಸಿ - ಶಿವತಂದೆಯನ್ನು
ನೆನಪು ಮಾಡಿ ಆಗ ನೆನಪಿನಿಂದ ವಿಕರ್ಮಗಳು ವಿನಾಶವಾಗುತ್ತದೆ. ಈಗ ತಂದೆಯು ಬಂದಿದ್ದಾರೆ, ಅವರಿಂದ ಈ
ಆಸ್ತಿಯನ್ನು ಪಡೆಯಿರಿ, ಎಲ್ಲರಿಗೂ ಈ ಸಂದೇಶವನ್ನು ಕೊಡಬೇಕು. ಕೊನೆಗೆ ಪತ್ರಕರ್ತರೂ ಸಹ ಇದನ್ನು
ಹಾಕುತ್ತಾರೆ. ಇದಂತೂ ನಿಮಗೆ ತಿಳಿದಿದೆ - ಅಂತಿಮದಲ್ಲಿ ಎಲ್ಲರೂ ಈ ಮಾತನ್ನು ಹೇಳುತ್ತಾರೆ - ಅಹೋ
ಪ್ರಭು, ನಿನ್ನ ಲೀಲೆ ಅಪರಮಪಾರವಾಗಿದೆ..... ತಾವೇ ಎಲ್ಲರಿಗೆ ಸದ್ಗತಿಯನ್ನು ಕೊಡುತ್ತೀರಿ,
ದುಃಖದಿಂದ ಬಿಡಿಸಿ ಎಲ್ಲರನ್ನೂ ಶಾಂತಿಧಾಮಕ್ಕೆ ಕರೆದುಕೊಂಡು ಹೋಗುತ್ತೀರಿ. ಇದೂ ಸಹ
ಜಾದೂವಾಯಿತಲ್ಲವೆ. ಅವರದು ಅಲ್ಪಕಾಲಕ್ಕಾಗಿ ಜಾದುವಾಗಿದೆ, ಇಲ್ಲಂತೂ ತಂದೆಯು 21 ಜನ್ಮಗಳಿಗಾಗಿ
ಮನುಷ್ಯರನ್ನು ದೇವತೆಗಳನ್ನಾಗಿ ಮಾಡುತ್ತಾರೆ. ಈ ಮನ್ಮನಾಭವದ ಜಾದುವಿನಿಂದ ನೀವು ಲಕ್ಷ್ಮೀ -ನಾರಾಯಣರಾಗುತ್ತೀರಿ.
ಜಾದೂಗರ, ರತ್ನಾಗರ, ಇವೆಲ್ಲಾ ಹೆಸರುಗಳು ಶಿವತಂದೆಯದಾಗಿದೆಯೇ ಹೊರತು ಬ್ರಹ್ಮನದಲ್ಲ. ಈ
ಬ್ರಾಹ್ಮಣ-ಬ್ರಾಹ್ಮಿಣಿಯರೆಲ್ಲರೂ ಓದುತ್ತಾರೆ, ಓದಿ ಮತ್ತೆ ಓದಿಸುತ್ತಾರೆ. ತಂದೆಯೊಬ್ಬರೇ
ಓದಿಸುವುದಿಲ್ಲ. ತಂದೆಯು ನಿಮಗೆ ಒಟ್ಟಿಗೆ ಓದಿಸುತ್ತಾರೆ. ನೀವು ಮತ್ತೆ ಅನ್ಯರಿಗೆ ಓದಿಸಿ. ತಂದೆಯು
ರಾಜಯೋಗವನ್ನು ಕಲಿಸುತ್ತಿದ್ದಾರೆ, ಆ ತಂದೆಯೇ ರಚಯಿತನಾಗಿದ್ದಾರೆ. ಕೃಷ್ಣನು ರಚನೆಯಾಗಿದ್ದಾನಲ್ಲವೆ.
ಆಸ್ತಿಯು ರಚಯಿತನಿಂದ ಸಿಗುತ್ತದೆಯೇ ಹೊರತು ರಚನೆಯಿಂದಲ್ಲ. ಕೃಷ್ಣನಿಂದ ಆಸ್ತಿಯು ಸಿಗುವುದಿಲ್ಲ.
ವಿಷ್ಣುವಿನ ಎರಡು ರೂಪಗಳು ಈ ಲಕ್ಷ್ಮೀ-ನಾರಾಯಣರಾಗಿದ್ದಾರೆ. ಬಾಲ್ಯದಲ್ಲಿ ಇವರೇ
ರಾಧೆ-ಕೃಷ್ಣರಾಗಿರುತ್ತಾರೆ. ಈ ಮಾತುಗಳನ್ನು ಪಕ್ಕಾ ನೆನಪಿಟ್ಟುಕೊಳ್ಳಿ. ವೃದ್ಧರೂ ಸಹ
ತೀಕ್ಷ್ಣವಾಗಿ ಹೋದರೆ ಶ್ರೇಷ್ಠಪದವಿಯನ್ನು ಪಡೆಯುತ್ತಾರೆ. ವೃದ್ಧರಿಗೆ ಸ್ವಲ್ಪ ಮಮತ್ವವೂ ಇರುತ್ತದೆ.
ತಮ್ಮದೇ ರಚನಾರೂಪಿ ಜಾಲದಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ. ಅನೇಕರ ನೆನಪು ಬಂದುಬಿಡುತ್ತದೆ.
ಅವರಿಂದ ಬುದ್ಧಿಯೋಗವನ್ನು ತೆಗೆದು ಮತ್ತೆ ಒಬ್ಬ ತಂದೆಯೊಂದಿಗೆ ಜೋಡಿಸುವುದರಲ್ಲಿ ಪರಿಶ್ರಮವಿದೆ.
ಜೀವಿಸಿದ್ದಂತೆಯೇ ಸಾಯಬೇಕಾಗಿದೆ. ಬುದ್ಧಿಯಲ್ಲಿ ಒಂದುಬಾರಿ ಬಾಣವು ನಾಟಿಬಿಟ್ಟರೆ ಸಾಕು, ಮತ್ತೆ
ಅವರಿಂದ ಯುಕ್ತಿಯಿಂದ ನಡೆಯಬೇಕಾಗುತ್ತದೆ. ಯಾರೊಂದಿಗೂ ಮಾತನಾಡಬಾರದೆಂದಲ್ಲ. ಗೃಹಸ್ಥ
ವ್ಯವಹಾರದೊಂದಿಗೆ ಭಲೆ ಇರಿ. ಎಲ್ಲರೊಂದಿಗೆ ಭಲೆ ಇರಿ, ಅವರೊಂದಿಗೂ ಸಂಬಂಧವನ್ನಿಡಿ. ತಂದೆಯು
ತಿಳಿಸುತ್ತಾರೆ - ದಾನವು ಮನೆಯಿಂದಲೇ ಆರಂಭವಾಗಬೇಕು. ಒಂದುವೇಳೆ ಅವರೊಂದಿಗೆ ಸಂಬಂಧವನ್ನೇ
ಇಟ್ಟುಕೊಳ್ಳದಿದ್ದರೆ ಅವರ ಉದ್ಧಾರವನ್ನು ಹೇಗೆ ಮಾಡುತ್ತೀರಿ? ಎರಡೂ ಸಂಬಂಧಗಳನ್ನು
ನಿಭಾಯಿಸಬೇಕಾಗಿದೆ. ಬಾಬಾ, ವಿವಾಹ-ಸಮಾರಂಭಗಳಿಗೆ ಹೋಗುವುದೇ ಎಂದು ಕೇಳುತ್ತಾರೆ ಅದಕ್ಕೆ ತಂದೆಯು
ತಿಳಿಸುತ್ತಾರೆ - ಭಲೆ ಹೋಗಿ, ಕೇವಲ ತಂದೆಯು ತಿಳಿಸುವುದೇನೆಂದರೆ, ಕಾಮ ಮಹಾಶತ್ರುವಾಗಿದೆ. ಅದರ
ಮೇಲೆ ಜಯಗಳಿಸಿದರೆ ನೀವು ಜಗಜ್ಜೀತರಾಗಿಬಿಡುತ್ತೀರಿ. ಸತ್ಯಯುಗದಲ್ಲಿ ನಿರ್ವಿಕಾರಿಗಳೇ ಇರುತ್ತಾರೆ.
ಯೋಗಬಲದಿಂದ ಜನ್ಮವಾಗುತ್ತದೆ. ತಂದೆಯು ತಿಳಿಸುತ್ತಾರೆ - ನಿರ್ವಿಕಾರಿಗಳಾಗಿ. ಮೊದಲನೆಯದಾಗಿ ಇದು
ಪಕ್ಕಾ ಮಾಡಿಕೊಳ್ಳಿ, ನಾವು ಶಿವತಂದೆಯ ಬಳಿ ಕುಳಿತಿದ್ದೇವೆ. ಶಿವತಂದೆಯು ನಮಗೆ 84 ಜನ್ಮಗಳ
ಕಥೆಯನ್ನು ತಿಳಿಸುತ್ತಾರೆ. ಈ ಸೃಷ್ಟಿಚಕ್ರವು ಸುತ್ತುತ್ತಾ ಇರುತ್ತದೆ. ಮೊಟ್ಟಮೊದಲು ಸತೋಪ್ರಧಾನ
ದೇವಿ-ದೇವತೆಗಳೇ ಬರುತ್ತಾರೆ ಮತ್ತೆ ಪುನರ್ಜನ್ಮವನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ
ತಮೋಪ್ರಧಾನರಾಗುತ್ತಾರೆ. ಪ್ರಪಂಚವು ಪತಿತ ಹಳೆಯದಾಗುತ್ತದೆ. ಆತ್ಮವೇ ಪತಿತವಾಗಿದೆಯಲ್ಲವೆ.
ಇಲ್ಲಿಯ ಯಾವುದೇ ವಸ್ತುವಿನಲ್ಲಿ ಸಾರವಿಲ್ಲ. ಸತ್ಯಯುಗದ ಫಲ-ಪುಷ್ಪಗಳೆಲ್ಲಿ, ಇಲ್ಲಿನ
ಫಲ-ಪುಷ್ಫಗಳೆಲ್ಲಿ! ಅಲ್ಲೆಂದೂ ಹುಳಿ ವಾಸನೆಯ ಪದಾರ್ಥಗಳಿರುವುದಿಲ್ಲ. ನೀವು ಅಲ್ಲಿಯ
ಸಾಕ್ಷಾತ್ಕಾರವನ್ನು ಮಾಡಿ ಬರುತ್ತೀರಿ. ಈ ಹೂವು-ಹಣ್ಣುಗಳನ್ನು ತೆಗೆದುಕೊಂಡು ಹೋಗೋಣವೇ ಎಂದು
ನಿಮಗೆ ಮನಸ್ಸಾಗುತ್ತದೆ ಆದರೆ ಇಲ್ಲಿಗೆ ಬರುತ್ತೀರೆಂದರೆ ಎಲ್ಲವೂ ಮಾಯವಾಗಿಬಿಡುತ್ತದೆ. ತಂದೆಯು
ಇದೆಲ್ಲಾ ಸಾಕ್ಷಾತ್ಕಾರಗಳನ್ನು ಮಾಡಿಸಿ ತಂದೆಯು ಖುಷಿಪಡಿಸುತ್ತಾರೆ. ಇವರು ಆತ್ಮಿಕ
ತಂದೆಯಾಗಿದ್ದಾರೆ, ಇವರು, ನಿಮಗೆ ಓದಿಸುತ್ತಾರೆ. ಈ ಶರೀರದ ಮೂಲಕ ಆತ್ಮವೇ ಓದುತ್ತದೆ, ಶರೀರವಲ್ಲ.
ನಾನೂ ಸಹ ಈ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೇನೆ, ಸ್ವರ್ಗದ ಮಾಲೀಕನಾಗುತ್ತಿದ್ದೇನೆಂದು
ಆತ್ಮಕ್ಕೆ ಶುದ್ಧ ಅಭಿಮಾನವಿದೆ. ಸ್ವರ್ಗದಲ್ಲಂತೂ ಎಲ್ಲರೂ ಹೋಗುತ್ತಾರೆ ಆದರೆ ಎಲ್ಲರ ಹೆಸರು
ಲಕ್ಷ್ಮೀ-ನಾರಾಯಣ ಎಂದಿರುವುದಿಲ್ಲವಲ್ಲವೆ. ಆತ್ಮವೇ ಆಸ್ತಿಯನ್ನು ಪಡೆಯುತ್ತದೆ. ಈ ಜ್ಞಾನವನ್ನು
ತಂದೆಯ ವಿನಃ ಮತ್ತ್ಯಾರೂ ಕೊಡಲು ಸಾಧ್ಯವಿಲ್ಲ. ಇದು ವಿಶ್ವವಿದ್ಯಾಲಯವಾಗಿದೆ. ಇದರಲ್ಲಿ
ಚಿಕ್ಕಮಕ್ಕಳು, ಯುವಕರು, ವೃದ್ಧರು ಎಲ್ಲರೂ ಓದುತ್ತಾರೆ. ಇಂತಹ ಕಾಲೇಜನ್ನು ಎಂದಾದರೂ ನೋಡಿದ್ದೀರಾ?
ಅವರು ಮನುಷ್ಯರಿಂದ ವೈದ್ಯರು ಅಥವಾ ವಕೀಲರಾಗುತ್ತಾರೆ. ಇಲ್ಲಿ ನೀವು ಮನುಷ್ಯರಿಂದ
ದೇವತೆಗಳಾಗುತ್ತೀರಿ.
ಬಾಬಾ ನಮ್ಮ ಶಿಕ್ಷಕ,
ಸದ್ಗುರುವಾಗಿದ್ದಾರೆ ಅವರು ನಮ್ಮನ್ನು ಜೊತೆಯಲ್ಲಿ ಕರೆದುಕೊಂಡು ಹೋಗುತ್ತಾರೆಂಬುದು ನಿಮಗೆ
ತಿಳಿದಿದೆ. ನಂತರ ನಾವು ಓದಿನನುಸಾರ ಸುಖಧಾಮದಲ್ಲಿ ಬಂದು ಪದವಿಯನ್ನು ಪಡೆಯುತ್ತೇವೆ. ತಂದೆಯು
ನಿಮ್ಮನ್ನು ಸತ್ಯಯುಗದಲ್ಲಿ ನೋಡುವುದೂ ಇಲ್ಲ. ನಾನು ಸತ್ಯಯುಗವನ್ನು ನೋಡುತ್ತೇನೆಯೇ? ಎಂದು
ಶಿವತಂದೆಯು ಕೇಳುತ್ತಾರೆ. ನೋಡಬೇಕೆಂದರೆ ಶರೀರದ ಮೂಲಕ ನೋಡಬೇಕಾಗುತ್ತದೆ, ಅವರಿಗೆ ತನ್ನದೇ ಆದ
ಶರೀರವಿಲ್ಲ ಅಂದಮೇಲೆ ಹೇಗೆ ನೋಡುತ್ತಾರೆ. ಇದೆಲ್ಲವೂ ಹಳೆಯ ಪ್ರಪಂಚವಾಗಿದೆ, ಶರೀರವಿಲ್ಲದೆಯೇ
ನೋಡಲು ಸಾಧ್ಯವಿಲ್ಲ. ತಂದೆಯು ತಿಳಿಸುತ್ತಾರೆ - ನಾನು ಪತಿತ ಜಗತ್ತಿನಲ್ಲಿ, ಪತಿತ ಶರೀರದಲ್ಲಿ
ಬಂದು ನಿಮ್ಮನ್ನು ಪಾವನ ಮಾಡುತ್ತೇನೆ. ನಾನು ಸ್ವರ್ಗವನ್ನು ನೋಡುವುದೇ ಇಲ್ಲ. ಯಾರದೇ ಶರೀರದಲ್ಲಿ
ಬಚ್ಚಿಟ್ಟುಕೊಂಡು ನೋಡಿ ಬರುವುದಿಲ್ಲ, ಆ ರೀತಿ ಪಾತ್ರವೇ ಇಲ್ಲ. ನೀವು ಎಷ್ಟೊಂದು ಹೊಸ-ಹೊಸ
ಮಾತುಗಳನ್ನು ಕೇಳುತ್ತೀರಿ! ಈಗ ಈ ಹಳೆಯ ಪ್ರಪಂಚದೊಂದಿಗೆ ನಿಮ್ಮ ಮನಸ್ಸನ್ನಿಡಬೇಡಿ. ನೀವು ಎಷ್ಟು
ಪಾವನರಾಗುತ್ತೀರೋ ಅಷ್ಟು ಶ್ರೇಷ್ಠ ಪದವಿಯನ್ನು ಪಡೆಯುತ್ತೀರಿ. ಎಲ್ಲವೂ ನೆನಪಿನ ಯಾತ್ರೆಯನ್ನು
ಅವಲಂಭಿಸಿದೆ. ಯಾತ್ರೆಯಲ್ಲಿ ಮನುಷ್ಯರು ಪವಿತ್ರವಾಗಿರುತ್ತಾರೆ ನಂತರ ಮರಳಿ ಬಂದಾಗ ಮತ್ತೆ
ಅಪವಿತ್ರರಾಗಿಬಿಡುತ್ತಾರೆ. ನೀವು ಮಕ್ಕಳಿಗೆ ಬಹಳಷ್ಟು ಖುಷಿಯಾಗಬೇಕು, ಬೇಹದ್ದಿನ ತಂದೆಯಿಂದ
ಬೇಹದ್ದಿನ ಸ್ವರ್ಗದ ಆಸ್ತಿಯನ್ನು ತೆಗೆದುಕೊಳ್ಳುತ್ತೇವೆ ಎಂಬುದನ್ನು ತಿಳಿದಿದ್ದೀರಿ.ಅಂದಾಗ ಅವರ
ಶ್ರೀಮತದಂತೆ ನಡೆಯಬೇಕು. ತಂದೆಯ ನೆನಪಿನಿಂದಲೇ ಸತೋಪ್ರಧಾನರಾಗಬೇಕು. 63 ಜನ್ಮಗಳ ತುಕ್ಕು
ಹಿಡಿದಿದೆ, ಅದನ್ನು ಈ ಜನ್ಮದಲ್ಲಿಯೇ ಇಳಿಸಿಕೊಳ್ಳಬೇಕು ಮತ್ತೆ ಯಾವುದೇ ಕಷ್ಟದ ಮಾತಿಲ್ಲ.
ವಿಷವನ್ನು ಕುಡಿಯುವ ಯಾವ ಹಸಿವಿದೆ ಅದನ್ನು ಬಿಟ್ಟುಬಿಡಬೇಕಾಗಿದೆ. ಅದರ ಸಂಕಲ್ಪವನ್ನೂ ಮಾಡಬೇಡಿ
ಏಕೆಂದರೆ ಈ ವಿಕಾರಗಳಿಂದಲೇ ನೀವು ಜನ್ಮ-ಜನ್ಮಾಂತರದಿಂದ ದುಃಖಿಯಾಗಿದ್ದೀರಿ. ಕುಮಾರಿಯರ ಮೇಲಂತೂ
ಬಹಳ ದಯೆ ಬರುತ್ತದೆ. ಚಲನಚಿತ್ರಗಳನ್ನು ನೋಡುವುದರಿಂದ ಹಾಳಾಗಿಬಿಡುತ್ತಾರೆ, ಇದರಿಂದಲೇ ನರಕಕ್ಕೆ
ಹೊರಟುಹೋಗುತ್ತಾರೆ. ಭಲೆ ನೋಡಿದರೂ ಪರವಾಗಿಲ್ಲವೆಂದು ತಂದೆಯು ಕೆಲವರಿಗೆ ಹೇಳುತ್ತಾರೆ ಆದರೆ
ನಿಮ್ಮನ್ನು ನೋಡಿ ಅನ್ಯರು ನೋಡತೊಡಗುತ್ತಾರೆ ಆದ್ದರಿಂದ ನೀವು ಸಿನಿಮಾಗಳಿಗೆ ಹೋಗುವಂತಿಲ್ಲ. ಇವರು
ಭಗೀರಥ (ಬ್ರಹ್ಮಾ) ನಾಗಿದ್ದಾರೆ. ಭಾಗ್ಯಶಾಲಿ ರಥವಲ್ಲವೆ. ಇವರೇ ಡ್ರಾಮಾದಲ್ಲಿ ತಮ್ಮ ರಥವನ್ನು
ಲೋನ್ ಆಗಿ ಕೊಡಲು ನಿಮಿತ್ತರಾಗಿದ್ದಾರೆ. ತಂದೆಯು ಇವರಲ್ಲಿ ಬರುತ್ತಾರೆ ಎಂಬುದನ್ನು ನೀವು
ತಿಳಿದುಕೊಂಡಿದ್ದೀರಿ. ಇದು ಹುಸೇನನ ಕುದುರೆಯಾಗಿದೆ. ತಂದೆಯು ನಿಮ್ಮೆಲ್ಲರನ್ನೂ ಸುಂದರರನ್ನಾಗಿ
ಮಾಡುತ್ತಾರೆ. ತಂದೆಯು ಅತಿ ಸುಂದರನಾಗಿದ್ದಾರೆ, ಆದರೆ ಈ ಸಾಧಾರಣ ರಥವನ್ನು ಆಧಾರವಾಗಿ
ತೆಗೆದುಕೊಂಡಿದ್ದಾರೆ. ನಾಟಕದಲ್ಲಿ ಇವರ ಪಾತ್ರವೇ ಹೀಗಿದೆ. ಈಗ ಕಪ್ಪಾಗಿರುವ ಆತ್ಮಗಳನ್ನು ಮತ್ತೆ
ಪಾವನ ಮಾಡಬೇಕಾಗಿದೆ.
ತಂದೆಯು ಸರ್ವಶಕ್ತಿವಂತನೋ
ಅಥವಾ ನಾಟಕವೋ? ನಾಟಕವಾಗಿದೆ. ಅಂದಮೇಲೆ ಈ ನಾಟಕದಲ್ಲಿರುವ ಪಾತ್ರಧಾರಿಗಳಲ್ಲಿಯೂ ಸರ್ವಶಕ್ತಿವಂತರು
ಯಾರು? ಶಿವತಂದೆ ನಂತರ ರಾವಣ. ಅರ್ಧಕಲ್ಪ ರಾಮರಾಜ್ಯವಿರುತ್ತದೆ, ಇನ್ನರ್ಧಕಲ್ಪ ರಾವಣರಾಜ್ಯ.
ಪದೇ-ಪದೇ ತಂದೆಗೆ ಬರೆಯುತ್ತಾರೆ - ಬಾಬಾ, ನಾವು ನಿಮ್ಮ ನೆನಪು ಮರೆತುಹೋಗುತ್ತೇವೆ,
ಉದಾಸರಾಗಿಬಿಡುತ್ತೇವೆ ಎಂದು. ಅರೆ! ನಿಮ್ಮನ್ನು ಸ್ವರ್ಗದ ಮಾಲೀಕರನ್ನಾಗಿ ಮಾಡಲು ಬಂದಿದ್ದೇನೆ
ಅಂದಮೇಲೆ ನೀವು ಹೇಗೆ ಉದಾಸರಾಗಿಬಿಡುತ್ತೀರಿ. ಇದರಲ್ಲಿ ಪರಿಶ್ರಮ ಪಡಬೇಕು, ಪವಿತ್ರರಾಗಬೇಕಾಗಿದೆ.
ಪರಿಶ್ರಮವಿಲ್ಲದೆ ರಾಜತಿಲಕವನ್ನು ಕೊಟ್ಟುಬಿಡುವುದೇ! ತಮಗೆ ತಾವೇ ಜ್ಞಾನ ಮತ್ತು ಯೋಗದಿಂದ ರಾಜ್ಯ
ತಿಲಕವ್ನನಿಟ್ಟಿಕೊಳ್ಳುವುದಕ್ಕೆ ಯೋಗ್ಯರನ್ನಾಗಿ ಮಾಡಿಕೊಳ್ಳಬೇಕಾಗಿದೆ. ತಂದೆಯನ್ನು ನೆನಪು
ಮಾಡುತ್ತಾ ಇರುತ್ತೀರೆಂದರೆ ನೀವು ಸ್ವತಃ ರಾಜ್ಯತಿಲಕಕ್ಕೆ ಯೋಗ್ಯರಾಗಿಬಿಡುತ್ತೀರಿ. ಶಿವತಂದೆಯು
ನಮ್ಮ ಮಧುರ ತಂದೆ, ಶಿಕ್ಷಕ, ಸದ್ಗುರುವಾಗಿದ್ದಾರೆ. ನಮ್ಮನ್ನು ಮಧುರರನ್ನಾಗಿ ಮಾಡುತ್ತಾರೆಂಬುದು
ನಿಮ್ಮ ಬುದ್ಧಿಯಲ್ಲಿದೆ. ನಾವು ಕೃಷ್ಣಪುರಿಯಲ್ಲಿ ಅವಶ್ಯವಾಗಿ ಹೋಗುತ್ತೇವೆ, ಪ್ರತೀ 5000 ವರ್ಷಗಳ
ನಂತರ ಭಾರತವು ಅವಶ್ಯವಾಗಿ ಸ್ವರ್ಗವಾಗಬೇಕಾಗಿದೆ ಮತ್ತೆ ನರಕವಾಗುತ್ತದೆ ಎಂಬುದನ್ನೂ ಸಹ
ತಿಳಿದುಕೊಂಡಿದ್ದೀರಿ. ಧನವಂತರಿಗೆ ಇಲ್ಲಿಯೇ ಸ್ವರ್ಗವಿದೆ, ಬಡವರು ನರಕದಲ್ಲಿದ್ದಾರೆಂದು ಮನುಷ್ಯರು
ತಿಳಿಯುತ್ತಾರೆ ಆದರೆ ಹೀಗಂತೂ ಇಲ್ಲ. ಇದಂತೂ ಖಂಡಿತ ನರಕವಾಗಿದೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ
ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಚಲನಚಿತ್ರವು
(ಸಿನೆಮಾ) ನರಕದಲ್ಲಿ ಹೋಗುವ ಮಾರ್ಗವಾಗಿದೆ ಆದ್ದರಿಂದ ಸಿನೆಮಾ ನೋಡಬಾರದು. ನೆನಪಿನ ಯಾತ್ರೆಯಿಂದ
ಪಾವನರಾಗಿ ಶ್ರೇಷ್ಠ ಪದವಿಯನ್ನು ಪಡೆಯಬೇಕಾಗಿದೆ. ಈ ಹಳೆಯ ಪ್ರಪಂಚದೊಂದಿಗೆ ಮನಸ್ಸನ್ನಿಡಬಾರದು.
2. ಮನಸಾ-ವಾಚಾ-ಕರ್ಮಣಾ
ಯಾರಿಗೂ ದುಃಖವನ್ನು ಕೊಡಬಾರದು. ಎಲ್ಲರ ಕಿವಿಗಳಲ್ಲಿ ಮಧುರಾತಿ ಮಧುರ ಮಾತುಗಳನ್ನೇ ತಿಳಿಸಬೇಕಾಗಿದೆ.
ಎಲ್ಲರಿಗೆ ತಂದೆಯ ನೆನಪು ತರಿಸಬೇಕಾಗಿದೆ. ಬುದ್ಧಿಯೋಗವನ್ನು ಒಬ್ಬ ತಂದೆಯೊಂದಿಗೆ ಜೋಡಣೆ
ಮಾಡಿಸಬೇಕಾಗಿದೆ.
ವರದಾನ:
ಸ್ಮೃತಿಯ ಸ್ವಿಚ್
ಆನ್ ಮಾಡಿ ಸೆಕೆಂಡ್ನಲ್ಲಿ ಅಶರೀರಿ ಸ್ಥಿತಿಯ ಅನುಭವ ಮಾಡುವಂತಹ ಪ್ರೀತಿ ಬುದ್ಧಿ ಭವ
ಎಲ್ಲಿ ಪ್ರಭು
ಪ್ರೀತಿಯಿದೆ ಅಲ್ಲಿ ಅಶರೀರಿ ಆಗುವುದು ಒಂದು ಸೆಕೆಂಡ್ನ ಆಟದ ಸಮಾನವಾಗಿದೆ. ಹೇಗೆ ಸ್ವಿಚ್ ಆನ್
ಮಾಡುತ್ತಲೇ ಅಂಧಕಾರ ಸಮಾಪ್ತಿಯಾಗಿಬಿಡುತ್ತದೆ. ಈ ರೀತಿ ಪ್ರೀತಿಬುದ್ಧಿಯವರಾಗಿ ಸ್ಮೃತಿಯ ಸ್ವಿಚ್
ಆನ್ ಮಾಡಿದಾಗ ದೇಹ ಮತ್ತು ದೇಹದ ಪ್ರಪಂಚದ ಸ್ಮೃತಿಯ ಸ್ವಿಚ್ ಆಫ್ ಅಗಿಬಿಡುತ್ತದೆ. ಇದು ಸೆಕೆಂಡ್ನ
ಆಟವಾಗಿದೆ. ಬಾಯಿಂದ ಬಾಬಾ ಎಂದು ಹೇಳುವುದಕ್ಕೆ ಸಮಯ ಹಿಡಿಸುತ್ತದೆ ಆದರೆ ಸ್ಮೃತಿಯಲ್ಲಿ ತರುವಲ್ಲಿ
ಸಮಯ ಹಿಡಿಸುವುದಿಲ್ಲ. ಈ ಬಾಬಾ ಎನ್ನುವ ಶಬ್ಧವೇ ಹಳೆಯ ಪ್ರಪಂಚವನ್ನು ಮರೆಸುವಂತಹ ಆತ್ಮಿಕ ಬಾಂಬ್
ಆಗಿದೆ.
ಸ್ಲೋಗನ್:
ದೇಹ ಬಾನದ
ಮಣ್ಣಿನ ಹೊರೆಯಿಂದ ದೂರವಿದ್ದಾಗ ಡಬಲ್ ಲೈಟ್ ಫರಿಶ್ತಾ ಆಗಿಬಿಡುವಿರಿ.
ಅವ್ಯಕ್ತ ಸೂಚನೆ - ಸತ್ಯ
ಮತ್ತು ಸಭ್ಯತೆ ರೊಪಿ ಕಲ್ಚರ್(ಸಂಸ್ಕೃತಿಯನ್ನು) ತಮ್ಮದಾಗಿಸಿಕೊಳ್ಳಿರಿ
ಸತ್ಯತೆಯ
ಪರಿಶೀಲನೆಯಾಗಿದೆ - ಸಂಕಲ್ಪ, ಮಾತು, ಕರ್ಮ, ಸಂಬಂಧ ಸಂಪರ್ಕ ಎಲ್ಲದರಲ್ಲಿ ದಿವ್ಯತೆಯ ಅನುಭವ
ಆಗುವುದು. ಕೆಲವರು ಹೇಳುತ್ತಾರೆ ನಾನಂತೂ ಸದಾ ಸತ್ಯ ಹೇಳುತ್ತೇನೆ ಆದರೆ ಮಾತು ಅಥವಾ ಕರ್ಮದಲ್ಲಿ
ಒಂದುವೇಳೆ ದಿವ್ಯತೆ ಇಲ್ಲದಿದ್ದರೆ ಅನ್ಯರಿಗೆ ತಮ್ಮ ಸತ್ಯ, ಸತ್ಯ ಅನಿಸುವುದಿಲ್ಲ ಆದ್ದರಿಂದ
ಸತ್ಯತೆಯ ಶಕ್ತಿಯಿಂದ ದಿವ್ಯತೆಯನ್ನು ಧಾರಣೆ ಮಾಡಿ. ಏನೇ ಸಹನೆ ಮಾಡಬೇಕಾಗಿ ಬರಲಿ, ಗಾಬರಿಯಾಗಬೇಡಿ.
ಸತ್ಯ ಸಮಯ ಪ್ರಮಾಣ ಸ್ವಯಂ ಸಿದ್ಧವಾಗುವುದು.