25.06.24         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ- ಪಕ್ಕಾ-ಪಕ್ಕಾ ನಿಶ್ಚಯ ಮಾಡಿಕೊಳ್ಳಿ, ನಾವಾತ್ಮರಾಗಿದ್ದೇವೆ ಆತ್ಮವೆಂದು ತಿಳಿದು ಪ್ರತೀ ಕಾರ್ಯವನ್ನು ಆರಂಭ ಮಾಡಿ ಆಗ ತಂದೆಯ ನೆನಪೂ ಬರುವುದು, ಪಾಪವೂ ಆಗುವುದಿಲ್ಲ”

ಪ್ರಶ್ನೆ:
ಕರ್ಮಾತೀತ ಸ್ಥಿತಿಯನ್ನು ಪ್ರಾಪ್ತಿ ಮಾಡಿಕೊಳ್ಳಲು ಪ್ರತಿಯೊಬ್ಬರೂ ಯಾವ ಪರಿಶ್ರಮ ಪಡಬೇಕು? ಕರ್ಮಾತೀತ ಸ್ಥಿತಿಯ ಸಮೀಪತೆಯ ಚಿಹ್ನೆಗಳೇನು?

ಉತ್ತರ:
ಕರ್ಮಾತೀತರಾಗಲು ನೆನಪಿನ ಬಲದಿಂದ ತಮ್ಮ ಕರ್ಮೇಂದ್ರಿಯಗಳನ್ನು ವಶದಲ್ಲಿಟ್ಟುಕೊಳ್ಳುವ ಪರಿಶ್ರಮಪಡಿ, ಅಭ್ಯಾಸ ಮಾಡಿ- ನಾನು ನಿರಾಕಾರ ಆತ್ಮ, ನಿರಾಕಾರ ತಂದೆಯ ಸಂತಾನನಾಗಿದ್ದೇನೆ. ಎಲ್ಲಾ ಕರ್ಮೇಂದ್ರಿಯಗಳು ನಿರ್ವಿಕಾರಿಗಳಾಗಿಬಿಡಲಿ- ಇದೇ ಬಲಶಾಲಿ ಪರಿಶ್ರಮವಾಗಿದೆ. ಎಷ್ಟು ಕರ್ಮಾತೀತ ಸ್ಥಿತಿಗೆ ಬರುತ್ತಾ ಹೋಗುವಿರೋ ಅಷ್ಟು ಅಂಗ-ಅಂಗವು ಶೀತಲವು, ಸುಗಂಧಿತವಾಗುತ್ತಾ ಹೋಗುತ್ತದೆ, ಅದರಿಂದ ವಿಕಾರಿ ದುರ್ಗಂಧವು ಹೊರಟುಹೋಗುವುದು, ಅತೀಂದ್ರಿಯ ಸುಖದ ಅನುಭವವಾಗುತ್ತಾ ಇರುತ್ತದೆ.

ಓಂ ಶಾಂತಿ.
ಶಿವಭಗವಾನುವಾಚ- ಇದಂತೂ ಯಾರಪ್ರತಿ ಎಂದು ಮಕ್ಕಳಿಗೆ ಹೇಳಬೇಕಾಗಿಲ್ಲ ಏಕೆಂದರೆ ಮಕ್ಕಳಿಗೆ ಗೊತ್ತಿದೆ- ಶಿವತಂದೆಯು ಜ್ಞಾನಸಾಗರನಾಗಿದ್ದಾರೆ, ಮನುಷ್ಯಸೃಷ್ಟಿಯ ಬೀಜರೂಪನಾಗಿದ್ದಾರೆ ಅಂದಾಗ ಅವಶ್ಯವಾಗಿ ಆತ್ಮಗಳೊಂದಿಗೇ ಮಾತನಾಡುತ್ತಾರೆ. ಶಿವತಂದೆಯು ಓದಿಸುತ್ತಾರೆ ಎಂದು ಮಕ್ಕಳಿಗೆ ಗೊತ್ತಿದೆ, ಬಾಬಾ ಎಂಬ ಶಬ್ಧದಿಂದ ಪರಮಾತ್ಮನನ್ನೇ ಬಾಬಾ ಎಂದು ಹೇಳುತ್ತಾರೆಂದು ತಿಳಿಯುತ್ತೀರಿ. ಎಲ್ಲಾ ಮನುಷ್ಯಾತ್ಮರು ಆ ಪರಮಾತ್ಮನನ್ನೇ ತಂದೆಯೆಂದು ಹೇಳುತ್ತಾರೆ! ಆ ತಂದೆಯು ಪರಮಧಾಮದಲ್ಲಿರುತ್ತಾರೆ, ಮೊಟ್ಟಮೊದಲು ಈ ಮಾತುಗಳನ್ನು ಪಕ್ಕಾ ಮಾಡಿಕೊಳ್ಳಬೇಕು, ತಮ್ಮನ್ನು ಆತ್ಮ ನಿಶ್ಚಯ ಮಾಡಿಕೊಳ್ಳಬೇಕು ಮತ್ತು ಇದನ್ನು ಪಕ್ಕಾ ನಿಶ್ಚಯ ಮಾಡಿಕೊಳ್ಳಬೇಕು. ತಂದೆಯು ಏನನ್ನು ತಿಳಿಸುವರೋ ಅದನ್ನು ಆತ್ಮವೇ ಧಾರಣೆ ಮಾಡುತ್ತದೆ. ಯಾವ ಜ್ಞಾನವು ಪರಮಾತ್ಮನಲ್ಲಿದೆಯೋ ಅದು ಆತ್ಮದಲ್ಲಿಯೂ ಬರಬೇಕು. ಅದು ನಂತರ ಮುಖದಿಂದ ವರ್ಣನೆ ಮಾಡಲಾಗುತ್ತದೆ. ಏನೆಲ್ಲಾ ವಿದ್ಯೆಯನ್ನು ಓದುತ್ತದೆಯೋ ಅದು ಆತ್ಮವೇ ಓದುತ್ತದೆ, ಆತ್ಮವು ಹೊರಟುಹೋದರೆ ವಿದ್ಯೆ ಮೊದಲಾದವುಗಳ ಬಗ್ಗೆ ಏನೂ ತಿಳಿಯುವುದಿಲ್ಲ. ಆತ್ಮವು ಮೊದಲು ತಮ್ಮನ್ನು ಆತ್ಮವೆಂದು ಪಕ್ಕಾ-ಪಕ್ಕಾ ನಿಶ್ಚಯ ಮಾಡಿಕೊಳ್ಳಬೇಕು. ಈಗ ದೇಹಾಭಿಮಾನವನ್ನು ಬಿಡಬೇಕಾಗುತ್ತದೆ. ಆತ್ಮವೇ ಕೇಳುತ್ತದೆ, ಆತ್ಮವೇ ಧಾರಣೆ ಮಾಡುತ್ತದೆ ಇದರಲ್ಲಿ ಆತ್ಮವಿಲ್ಲದಿದ್ದರೆ ಶರೀರವು ಅಲುಗಾಡಲೂ ಸಾಧ್ಯವಿಲ್ಲ. ಈಗ ನೀವು ಮಕ್ಕಳು ಪಕ್ಕಾ-ಪಕ್ಕಾ ನಿಶ್ಚಯ ಮಾಡಿಕೊಳ್ಳಬೇಕು- ಪರಮಾತ್ಮ ಶರೀರದ ಮೂಲಕ ತಿಳಿಸುತ್ತಿದ್ದಾರೆ- ಇದೇ ಪದೇ-ಪದೇ ಮರೆತುಹೋಗುತ್ತದೆ. ದೇಹವು ನೆನಪಿಗೆ ಬರುತ್ತದೆ. ಇದೂ ಸಹ ತಿಳಿದಿದೆ- ಒಳ್ಳೆಯ ಹಾಗೂ ಕೆಟ್ಟಸಂಸ್ಕಾರವು ಆತ್ಮದಲ್ಲಿಯೇ ಇರುತ್ತದೆ. ಮಧ್ಯಪಾನ ಮಾಡುವುದು, ಕೊಳಕು ಮಾತುಗಳನ್ನಾಡುವುದು..... ಇದೂ ಸಹ ಆತ್ಮವೇ ಕರ್ಮೇಂದ್ರಿಯಗಳ ಮೂಲಕ ಮಾಡುತ್ತದೆ. ಆತ್ಮವೇ ಈ ಕರ್ಮೇಂದ್ರಿಯಗಳ ಮೂಲಕ ಇಷ್ಟೊಂದು ಪಾತ್ರವನ್ನಭಿನಯಿಸುತ್ತದೆ. ಮೊಟ್ಟಮೊದಲು ಅವಶ್ಯವಾಗಿ ಆತ್ಮಾಭಿಮಾನಿಯಾಗಬೇಕು. ತಂದೆಯು ಆತ್ಮಗಳಿಗೇ ಓದಿಸುತ್ತಾರೆ, ಆತ್ಮವೇ ಮತ್ತೆ ಈ ಜ್ಞಾನವನ್ನು ಸಂಸ್ಕಾರದಲ್ಲಿ ತೆಗೆದುಕೊಂಡು ಹೋಗುತ್ತದೆ. ಹೇಗೆ ಪರಮಧಾಮದಲ್ಲಿ ಪರಮಾತ್ಮನು ಜ್ಞಾನಸಹಿತವಾಗಿರುತ್ತಾರೆ ಹಾಗೆಯೇ ತಾವಾತ್ಮರೂ ಸಹ ಈ ಜ್ಞಾನವನ್ನು ಜೊತೆ ತೆಗೆದುಕೊಂಡು ಹೋಗುತ್ತೀರಿ. ನೀವು ಮಕ್ಕಳನ್ನು ನಾನು ಈ ಜ್ಞಾನಸಹಿತ ಕರೆದುಕೊಂಡು ಹೋಗುತ್ತೇನೆ. ಮತ್ತೆ ನೀವಾತ್ಮರು ಈ ಪಾತ್ರದಲ್ಲಿ ಬರಬೇಕಾಗುತ್ತದೆ, ನಿಮ್ಮ ಪಾತ್ರವು ಹೊಸಪ್ರಪಂಚದಲ್ಲಿ ಪ್ರಾಲಬ್ಧವನ್ನು ಭೋಗಿಸುವುದಾಗಿದೆ, ಜ್ಞಾನವು ಮರೆತುಹೋಗುತ್ತದೆ. ಇದೆಲ್ಲವನ್ನೂ ಬಹಳ ಚೆನ್ನಾಗಿ ಧಾರಣೆ ಮಾಡಬೇಕಾಗಿದೆ. ಮೊಟ್ಟಮೊದಲು ಬಹಳ-ಬಹಳ ಪಕ್ಕಾ ಮಾಡಿಕೊಳ್ಳಬೇಕು- ನಾನಾತ್ಮನಾಗಿದ್ದೇನೆ, ಅನೇಕರು ಇದನ್ನೇ ಮರೆತುಬಿಡುತ್ತಾರೆ, ತಮ್ಮಜೊತೆ ತುಂಬಾ-ತುಂಬಾ ಪರಿಶ್ರಮಪಡಬೇಕು. ವಿಶ್ವದ ಮಾಲೀಕರಾಗಬೇಕೆಂದರೆ ಪರಿಶ್ರಮವಿಲ್ಲದೆ ಆಗುತ್ತೀರೇನು? ಪದೇ-ಪದೇ ಈ ಅಂಶವನ್ನೇ ಮರೆತುಹೋಗುತ್ತಾರೆ ಏಕೆಂದರೆ ಇದು ಹೊಸ ಜ್ಞಾನವಾಗಿದೆ. ಯಾವಾಗ ತಮ್ಮನ್ನು ಆತ್ಮವೆನ್ನುವುದನ್ನು ಮರೆತು ದೇಹಾಭಿಮಾನದಲ್ಲಿ ಬರುತ್ತೀರೋ ಆಗ ಯಾವುದಾದರೊಂದು ಪಾಪವಾಗುತ್ತದೆ. ದೇಹೀ-ಅಭಿಮಾನಿಯಾಗುವುದರಿಂದ ಎಂದಿಗೂ ಪಾಪವಾಗುವುದಿಲ್ಲ, ಪಾಪಗಳು ತುಂಡಾಗುತ್ತವೆ ನಂತರ ಅರ್ಧಕಲ್ಪ ಯಾವುದೇ ಪಾಪಗಳಾಗುವುದಿಲ್ಲ ಅಂದಾಗ ಈ ನಿಶ್ಚಯ ಇಟ್ಟುಕೊಳ್ಳಬೇಕು- ನಾವಾತ್ಮಗಳು ಓದುತ್ತೇವೆ, ದೇಹವಲ್ಲ. ಮೊದಲು ದೈಹಿಕ-ಮನುಷ್ಯರ ಮತ ಸಿಗುತ್ತಿತ್ತು. ಈಗ ತಂದೆಯು ಶ್ರೀಮತ ಕೊಡುತ್ತಿದ್ದಾರೆ. ಇದು ಹೊಸ ಪ್ರಪಂಚದ ಸಂಪೂರ್ಣ ಹೊಸ ಜ್ಞಾನವಾಗಿದೆ, ನೀವೆಲ್ಲರೂ ಹೊಸಬರಾಗಿಬಿಡುತ್ತೀರಿ. ಇದರಲ್ಲಿ ತಬ್ಬಿಬ್ಬಾಗುವ ಮಾತೇ ಇಲ್ಲ. ಅನೇಕಾನೇಕ ಬಾರಿ ಹಳಬರಿಂದ ಹೊಸಬರು, ಹೊಸಬರಿಂದ ಹಳಬರಾಗುತ್ತಾ ಬಂದಿದ್ದೀರಿ. ಆದುದರಿಂದ ಒಳ್ಳೆಯ ಪುರುಷಾರ್ಥ ಮಾಡಬೇಕಾಗಿದೆ.

ನಾವಾತ್ಮಗಳು ಕರ್ಮೇಂದ್ರಿಯಗಳ ಮೂಲಕ ಈ ಕೆಲಸ ಮಾಡುತ್ತೇವೆ. ಕಛೇರಿ ಮೊದಲಾದವರುಗಳಲ್ಲಿಯೂ ಸಹ ತಮ್ಮನ್ನು ಆತ್ಮವೆಂದು ತಿಳಿದು ಕರ್ಮೇಂದ್ರಿಯಗಳಿಂದ ಕೆಲಸ ಮಾಡುತ್ತಿದ್ದರೆ ಕಲಿಸುವಂತಹ ತಂದೆಯೂ ಸಹ ಅವಶ್ಯವಾಗಿ ನೆನಪಿಗೆ ಬರುತ್ತಾರೆ. ಭಲೆ ನಾವು ಭಗವಂತನನ್ನು ನೆನಪು ಮಾಡುತ್ತೇವೆಂದು ಮೊದಲೂ ಹೇಳುತ್ತಿದ್ದಿರಿ ಆದರೆ ತಮ್ಮನ್ನು ಸಾಕಾರದೇಹವೆಂದು ತಿಳಿದು ನಿರಾಕಾರನನ್ನು ನೆನಪು ಮಾಡುತ್ತಿದ್ದೀರಿ. ತಮ್ಮನ್ನು ನಿರಾಕಾರ ಆತ್ಮವೆಂದು ತಿಳಿದು ನಿರಾಕಾರ ತಂದೆಯನ್ನು ನೆನಪು ಮಾಡಬೇಕು. ಇದು ಬಹಳ ವಿಚಾರಸಾಗರ ಮಂಥನ ಮಾಡುವ ಮಾತಾಗಿದೆ. ಭಲೆ ಕೆಲವರು ನಾವು 2 ಗಂಟೆಗಳ ಕಾಲ ನೆನಪಿನಲ್ಲಿರುತ್ತೇವೆಂದು ಬರೆಯುತ್ತಾರೆ, ಇನ್ನೂ ಕೆಲವರು ನಾವು ಸದಾ ಶಿವತಂದೆಯನ್ನು ನೆನಪು ಮಾಡುತ್ತೇವೆಂದು ಹೇಳುತ್ತಾರೆ ಆದರೆ ಸದಾ ನೆನಪು ಮಾಡಲು ಸಾಧ್ಯವಿಲ್ಲ. ಒಂದುವೇಳೆ ನೆನಪು ಮಾಡುತ್ತಿದ್ದರೆ ಮೊದಲೇ ಕರ್ಮಾತೀತ ಸ್ಥಿತಿಯಾಗಿಬಿಡುತ್ತಿತ್ತು. ಕರ್ಮಾತೀತ ಸ್ಥಿತಿಯಂತೂ ಬಹಳ ದೊಡ್ಡ ಪರಿಶ್ರಮದಿಂದಲೇ ಆಗುತ್ತದೆ. ಇದರಲ್ಲಿ ಎಲ್ಲಾ ಕರ್ಮೇಂದ್ರಿಯಗಳು ವಶವಾಗಿಬಿಡುತ್ತವೆ. ಸತ್ಯಯುಗದಲ್ಲಿ ಎಲ್ಲಾ ಕರ್ಮೇಂದ್ರಿಯಗಳು ನಿರ್ವಿಕಾರಿಯಾಗಿರುತ್ತವೆ, ಅಂಗ-ಅಂಗವೂ ಸುಗಂಧಿತವಾಗಿರುತ್ತದೆ. ಈಗಂತೂ ದುರ್ಗಂಧ, ಛೀ-ಛೀ ಅಂಗವಾಗಿದೆ. ಸತ್ಯಯುಗಕ್ಕೆ ಬಹಳ ಪ್ರಿಯಮಹಿಮೆಯಿದೆ. ಅದಕ್ಕೆ ಸ್ವರ್ಗ, ಹೊಸ ಪ್ರಪಂಚ, ವೈಕುಂಠವೆಂದು ಹೇಳಲಾಗುತ್ತದೆ. ಅಲ್ಲಿನ ಮುಖಲಕ್ಷಣಗಳು, ಕಿರೀಟ ಮೊದಲಾದವುಗಳನ್ನು ಇಲ್ಲಿ ಯಾರೂ ಸಹ ಮಾಡಲು ಸಾಧ್ಯವಿಲ್ಲ. ಭಲೇ ನೀವು ನೋಡಿಕೊಂಡೂ ಸಹ ಬರುತ್ತೀರಿ, ಆದರೂ ಇಲ್ಲಿ ಅದನ್ನು ಮಾಡಲು ಸಾಧ್ಯವಿಲ್ಲ. ಅಲ್ಲಂತೂ ಸ್ವಾಭಾವಿಕ ಸೌಂದರ್ಯವಿರುತ್ತದೆ ಅಂದಮೇಲೆ ಈಗ ನೀವು ಮಕ್ಕಳು ನೆನಪಿನಿಂದಲೇ ಪಾವನರಾಗಬೇಕೆಂದರೆ ಬಹಳ-ಬಹಳ ನೆನಪಿನ ಯಾತ್ರೆ ಮಾಡಬೇಕಾಗಿದೆ. ಇದರಲ್ಲಿಯೇ ಪರಿಶ್ರಮವಿದೆ. ನೆನಪು ಮಾಡುತ್ತಾ-ಮಾಡುತ್ತಾ ಕರ್ಮಾತೀತ ಸ್ಥಿತಿಯನ್ನು ಪಡೆದುಕೊಂಡರೆ ಎಲ್ಲಾ ಕರ್ಮೇಂದ್ರಿಯಗಳು ಶೀತಲವಾಗಿಬಿಡುತ್ತವೆ. ಅಂಗ-ಅಂಗವೂ ಸುಗಂಧಿತವಾಗಿಬಿಟ್ಟರೆ ದುರ್ವಾಸನೆಯಿರುವುದಿಲ್ಲ. ಈಗಂತೂ ಎಲ್ಲಾ ಕರ್ಮೇಂದ್ರಿಯಗಳಲ್ಲಿ ದುರ್ಗಂಧವಿದೆ, ಈ ಶರೀರವು ಏನೂ ಕೆಲಸಕ್ಕೆ ಬರುವುದಿಲ್ಲ. ನಿಮ್ಮ ಆತ್ಮವು ಈಗ ಪವಿತ್ರವಾಗುತ್ತಿದೆ, ಶರೀರವಂತೂ ಪವಿತ್ರವಾಗಲು ಸಾಧ್ಯವಿಲ್ಲ. ಯಾವಾಗ ನಿಮಗೆ ಹೊಸಶರೀರವು ಸಿಗುವುದೋ ಅದು ಪವಿತ್ರವಾಗಿರುತ್ತದೆ. ಅಂಗ-ಅಂಗದಲ್ಲಿ ಸುಗಂಧ- ಈ ಮಹಿಮೆಯು ದೇವತೆಗಳದಾಗಿದೆ. ನೀವು ಮಕ್ಕಳಿಗೆ ಬಹಳ ಖುಷಿಯಿರಬೇಕು. ತಂದೆಯು ಬಂದಿದ್ದಾರೆಂದರೆ ಖುಷಿಯ ನಶೆಯೇರಿಬಿಡಬೇಕು.

ತಂದೆಯು ತಿಳಿಸುತ್ತಿದ್ದಾರೆ- ನನ್ನನ್ನು ನೆನಪು ಮಾಡಿ ಅದರಿಂದ ವಿಕರ್ಮಗಳು ವಿನಾಶವಾಗಿಬಿಡುತ್ತವೆ. ಗೀತೆಯ ಶಬ್ಧವು ಎಷ್ಟು ಸ್ಪಷ್ಟವಾಗಿದೆ. ತಂದೆಯೂ ಹೇಳಿದ್ದಾರೆ- ಯಾರು ನನ್ನ ಭಕ್ತರಿದ್ದಾರೆಯೋ ಗೀತಾಪಾಠಿಗಳಿದ್ದಾರೆಯೋ ಅವರು ಅವಶ್ಯವಾಗಿ ಕೃಷ್ಣನ ಪೂಜಾರಿಗಳಾಗಿರುತ್ತಾರೆ ಆದ್ದರಿಂದ ತಂದೆಯು ತಿಳಿಸುತ್ತಾರೆ- ದೇವತೆಗಳ ಪೂಜಾರಿಗಳಿಗೆ ಹೋಗಿ ತಿಳಿಸಿ, ಮನುಷ್ಯರು ಶಿವನ ಪುಜೆ ಮಾಡುತ್ತಾರೆ ಮತ್ತು ಸರ್ವವ್ಯಾಪಿಯೆಂದು ಹೇಳಿಬಿಡುತ್ತಾರೆ. ನಿಂಧನೆ ಮಾಡುತ್ತಿದ್ದರೂ ಪ್ರತಿನಿತ್ಯ ಮಂದಿರಗಳಿಗೆ ಹೋಗುತ್ತಾರೆ. ಶಿವನ ಮಂದಿರಕ್ಕೆ ಬಹಳ ಜನರು ಹೋಗುತ್ತಾರೆ. ಬಹಳ ಮೆಟ್ಟಿಲುಗಳನ್ನು ಏರಿ ಮೇಲೆ ಹೋಗುತ್ತಾರೆ. ಶಿವನ ಮಂದಿರವನ್ನು ಮೇಲೆ ಮಾಡಲಾಗುತ್ತದೆ. ಶಿವತಂದೆಯು ಬಂದು ಈ ಮೆಟ್ಟಿಲುಗಳ ಬಗ್ಗೆ ತಿಳಿಸುತ್ತಾರಲ್ಲವೆ! ಅವರ ನಾಮವೂ ಶ್ರೇಷ್ಠ, ಧಾಮವೂ ಶ್ರೇಷ್ಠವಾಗಿದೆ. ಎಷ್ಟೊಂದು ಮೇಲೆ ಹೋಗುತ್ತಾರೆ. ಬದರೀನಾಥ, ಅಮರನಾಥದಲ್ಲಿ ಶಿವನ ಮಂದಿರವಿದೆ. ಅವರು ಮೇಲೆ ಕರೆದುಕೊಂಡು ಹೋಗುತ್ತಾರೆ. ತಂದೆಯು ಮೇಲೆ ಕರೆದುಕೊಂಡು ಹೋಗುವವರು ಶ್ರೇಷ್ಠರನ್ನಾಗಿ ಮಾಡುವವರಾಗಿದ್ದಾರೆ ಆದ್ದರಿಂದಲೇ ಅವರ ಮಂದಿರವನ್ನು ಬಹಳ ಎತ್ತರದಲ್ಲಿ ಕಟ್ಟಿಸುತ್ತಾರೆ. ಇಲ್ಲಿ ಗುರುಶಿಖರದ ಮಂದಿರವನ್ನೂ ಸಹ ಅತಿದೊಡ್ಡ ಬೆಟ್ಟದ ಮೇಲೆ ಕಟ್ಟಿಸಲಾಗಿದೆ. ಶ್ರೇಷ್ಠ ತಂದೆಯು ಕುಳಿತು ನಿಮಗೆ ಓದಿಸುತ್ತಾರೆ. ಪ್ರಪಂಚದಲ್ಲಿ ಶಿವತಂದೆಯೇ ಬಂದು ಓದಿಸುತ್ತಾರೆಂದು ಮತ್ತ್ಯಾರಿಗೂ ಗೊತ್ತಿಲ್ಲ, ಅವರಂತೂ ತಂದೆಯನ್ನು ಸರ್ವವ್ಯಾಪಿ ಎಂದು ಹೇಳಿಬಿಡುತ್ತಾರೆ. ಈಗ ನಿಮ್ಮ ಸನ್ಮುಖದಲ್ಲಿ ಗುರಿ-ಉದ್ದೇಶವೂ ಇದೆ. ಇದು ನಿಮ್ಮ ಗುರಿ-ಉದ್ದೇಶವಾಗಿದೆ ಎಂದು ತಂದೆಯನ್ನು ಬಿಟ್ಟು ಮತ್ತ್ಯಾರೂ ಹೇಳುತ್ತಾರೆ? ಇದನ್ನು ತಂದೆಯೇ ನೀವು ಮಕ್ಕಳಿಗೆ ತಿಳಿಸಿಕೊಡುತ್ತಾರೆ. ನೀವು ಸತ್ಯನಾರಾಯಣನ ಕಥೆಯನ್ನೂ ಕೇಳುತ್ತೀರಿ. ಸತ್ಯನಾರಾಯಣರಕಾಲವು ಕಳೆದುಹೋಗುತ್ತದೆ, ಮೊದಲು ಏನೇನಾಯಿತೆಂದು ಅವರ ಕಥೆಗಳನ್ನು ತಿಳಿಸುತ್ತಾರೆ. ಅದಕ್ಕೆ ಕಥೆಯೆಂದು ಹೇಳಲಾಗುತ್ತದೆ. ಈ ಶ್ರೇಷ್ಠಾತಿಶ್ರೇಷ್ಠ ತಂದೆಯು ಶ್ರೇಷ್ಠಕಥೆಯನ್ನು ತಿಳಿಸುತ್ತಾರೆ. ಈ ಕಥೆಯು ನಿಮ್ಮನ್ನು ಬಹಳ ಶ್ರೇಷ್ಠರನ್ನಾಗಿ ಮಾಡುವಂತದ್ದಾಗಿದೆ. ಇದನ್ನು ಸದಾ ನೆನಪಿಟ್ಟುಕೊಳ್ಳಬೇಕು ಮತ್ತು ಅನ್ಯರಿಗೂ ತಿಳಿಸಬೇಕು. ಈ ಕಥೆಯನ್ನು ತಿಳಿಸುವುದಕ್ಕಾಗಿಯೇ ನೀವು ಪ್ರದರ್ಶನಿ ಅಥವಾ ಮ್ಯೂಜಿûಯಂಗಳನ್ನು ತೆರೆಯುತ್ತೀರಿ. 5ಂಂಂ ವರ್ಷಗಳ ಮೊದಲು ಭಾರತವೇ ಇತ್ತು, ಇದರಲ್ಲಿ ದೇವತೆಗಳು ರಾಜ್ಯ ಮಾಡುತ್ತಿದ್ದರು. ಇದು ಸತ್ಯ-ಸತ್ಯ ಕಥೆಯಾಗಿದೆ. ಇದನ್ನು ಬೇರೆ ಯಾರೂ ತಿಳಿಸಲು ಸಾಧ್ಯವಿಲ್ಲ. ಇದು ಸತ್ಯಕಥೆಯಾದ್ದರಿಂದ ಚೈತನ್ಯ ವೃಕ್ಷಪತಿ ತಂದೆಯೇ ಕುಳಿತು ತಿಳಿಸುತ್ತಾರೆ, ಇದರಿಂದ ನೀವು ದೇವತೆಗಳಾಗುತ್ತೀರಿ. ಇದರಲ್ಲಿ ಪವಿತ್ರತೆಯು ಮುಖ್ಯವಾಗಿದೆ. ಪವಿತ್ರವಾಗದಿದ್ದರೆ ಧಾರಣೆಯೂ ಆಗುವುದಿಲ್ಲ. ಹುಲಿಯ ಹಾಲಿಗೆ ಚಿನ್ನದ ಪಾತ್ರೆಯೇ ಬೇಕು. ಆಗಲೇ ಧಾರಣೆಯಾಗಲು ಸಾಧ್ಯ. ಈ ಕಿವಿಯು ಪಾತ್ರೆಯ ಹಾಗೆಇದೆಯಲ್ಲವೆ. ಇದು ಚಿನ್ನದ ಪಾತ್ರೆಯಾಗಬೇಕು. ಈಗ ಕಲ್ಲಿನದಾಗಿದೆ. ಚಿನ್ನದ್ದು ಆದಾಗಲೇ ಧಾರಣೆಯಾಗುತ್ತದೆ. ಬಹಳ ಗಮನವಿಟ್ಟು ಕೇಳಬೇಕು ಮತ್ತು ಧಾರಣೆ ಮಾಡಬೇಕಾಗಿದೆ. ಕಥೆಯಂತೂ ಬಹಳ ಸಹಜವಾಗಿದೆ. ಯಾವುದನ್ನು ಗೀತೆಯಲ್ಲಿ ಬರೆದಿದ್ದಾರೆ ಅವರು ಈ ಕಥೆಗಳನ್ನು ತಿಳಿಸಿ ಸಂಪಾದನೆ ಮಾಡಿಕೊಳ್ಳುತ್ತಾರೆ. ಕೇಳುವವರಿಂದ ಅವರ ಸಂಪಾದನೆಯಾಗುತ್ತದೆ. ಇಲ್ಲಿ ನಿಮ್ಮದೂ ಸಂಪಾದನೆಯಿದೆ ಎರಡೂ ಸಂಪಾದನೆ ನಡೆಯುತ್ತಿರುತ್ತದೆ. ಎರಡೂ ವ್ಯಾಪಾರವಾಗಿದೆ, ಓದಿಸುತ್ತಾರೆ ಹಾಗೂ ತಿಳಿಸುತ್ತಾರೆ- ಮಕ್ಕಳೇ, ಮನ್ಮನಾಭವ. ಪವಿತ್ರರಾಗಿ, ಹೀಗೆ ಮತ್ತ್ಯಾರೂ ಹೇಳುವುದಿಲ್ಲ, ಅವರು ಮನ್ಮನಾಭವ ಆಗಿರುವುದೂ ಇಲ್ಲ. ಯಾವುದೇ ಮನುಷ್ಯರು ಇಲ್ಲಿ ಪವಿತ್ರರಾಗಲು ಸಾಧ್ಯವಿಲ್ಲ ಏಕೆಂದರೆ ಎಲ್ಲರದೂ ಭ್ರಷ್ಟಾಚಾರದ ಜನ್ಮವಾಗಿದೆ. ರಾವಣರಾಜ್ಯ ಕಲಿಯುಗದ ಅಂತ್ಯದವರೆಗೂ ನಡೆಯುತ್ತದೆ, ಅದರಲ್ಲಿ ಪಾವನರಾಗಬೇಕಾಗಿದೆ. ದೇವತೆಗಳಿಗೆ ಪಾವನರೆಂದು ಹೇಳುತ್ತಾರೆ ಮನುಷ್ಯರಿಗಲ್ಲ. ಸನ್ಯಾಸಿಗಳೂ ಮನುಷ್ಯರಾಗಿದ್ದಾರೆ. ಅವರದು ನಿವೃತ್ತಿಮಾರ್ಗದ ಧರ್ಮವಾಗಿದೆ. ನನ್ನನ್ನು ನೆನಪು ಮಾಡಿದರೆ ನೀವು ಪವಿತ್ರರಾಗಿಬಿಡುತ್ತೀರೆಂದು ತಂದೆಯು ತಿಳಿಸುತ್ತಾರೆ. ಭಾರತದಲ್ಲಿ ಪ್ರವೃತ್ತಿಮಾರ್ಗದವರ ರಾಜ್ಯವೇ ನಡೆದಿದೆ, ನಿವೃತ್ತಿಮಾರ್ಗದವರೊಂದಿಗೆ ನಿಮ್ಮದು ಯಾವುದೇ ಸಂಬಂಧವಿಲ್ಲ. ಇಲ್ಲಂತೂ ಸ್ತ್ರೀ-ಪುರುಷ ಇಬ್ಬರೂ ಪವಿತ್ರರಾಗಬೇಕಾಗಿದೆ. ಎರಡೂ ಚಕ್ರಗಳೂ ನಡೆದಾಗ ಸರಿಯಾಗಿರುತ್ತದೆ, ಇಲ್ಲವೆಂದರೆ ಜಗಳವಾಗುತ್ತದೆ ಪವಿತ್ರತೆಯಮೇಲೆಯೇ ಜಗಳವಾಗುತ್ತದೆ. ಮತ್ತ್ಯಾವುದೇ ಸತ್ಸಂಗದಲ್ಲಿ ಪವಿತ್ರತೆಯನ್ನು ಕುರಿತು ಜಗಳವಾಯಿತೆಂಬುದನ್ನು ಎಂದೂ ಕೇಳಿರುವುದಿಲ್ಲ. ಇದು ಒಂದೇ ಬಾರಿ ಯಾವಾಗ ತಂದೆಯುಬರುತ್ತಾರೋ ಆಗ ಜಗಳವಾಗುತ್ತದೆ ಅಬಲೆಯರ ಮೇಲೆ ಅತ್ಯಾಚಾರವಾಗುತ್ತದೆ ಎಂದು ಸಾಧು ಸಂತರು ಎಂದಾದರೂ ಹೇಳುತ್ತಾರೆಯೇ. ಇಲ್ಲಿ ಕನ್ಯೆಯರು ಬಾಬಾ ನಮ್ಮನ್ನು ರಕ್ಷಿಸಿ ಎಂದು ಕೂಗುತ್ತಾರೆ. ತಂದೆಯು ಸಹ ಕೇಳುತ್ತಾರೆ- ನೀವು ಅಪವಿತ್ರರಂತೂ ಆಗುತ್ತಿಲ್ಲತಾನೆ, ಏಕೆಂದರೆ ಕಾಮ ಮಹಾಶತ್ರುವಾಗಿದೆಯಲ್ಲವೆ. ಒಮ್ಮೆಲೆ ಬೀಳುತ್ತಾರೆ. ಈ ಕಾಮವಿಕಾರವು ಎಲ್ಲರನ್ನೂ ಬೆಲೆಯಿಲ್ಲದವರನ್ನಾಗಿ ಮಾಡಿಬಿಟ್ಟಿದೆ. ತಂದೆಯು ತಿಳಿಸುತ್ತಾರೆ- ನೀವು 63 ಜನ್ಮಗಳು ವೇಶ್ಯಾಲಯದಲ್ಲಿರುತ್ತೀರಿ ಈಗ ಪಾವನರಾಗಿ ಶಿವಾಲಯದಲ್ಲಿ ಹೋಗಬೇಕಾಗಿದೆ. ಈ ಒಂದು ಜನ್ಮ ಪವಿತ್ರರಾಗಿ ಶಿವತಂದೆಯನ್ನು ನೆನಪು ಮಾಡಿದರೆ ಶಿವಾಲಯ, ಸ್ವರ್ಗದಲ್ಲಿ ಹೋಗುತ್ತೀರಿ ಆದರೂ ಸಹ ಕಾಮವಿಕಾರವು ಎಷ್ಟು ಶಕ್ತಿಶಾಲಿಯಾಗಿದೆ. ಎಷ್ಟು ತೊಂದರೆ ಕೊಡುತ್ತದೆ, ಆಕರ್ಷಣೆಯಾಗುತ್ತದೆ. ಆ ಆಕರ್ಷಣೆಯನ್ನು ತೆಗೆಯಬೇಕು. ನಾವು ಹಿಂತಿರುಗಿ ಹೋಗಬೇಕಾಗಿದೆಯೆಂದ ಮೇಲೆ ಅವಶ್ಯವಾಗಿ ಪವಿತ್ರರಾಗಬೇಕು. ಶಿಕ್ಷಕರು ಇಲ್ಲಿಯೇ ಕುಳಿತಿರುತ್ತಾರೇನು! ವಿದ್ಯೆಯು ಸ್ವಲ್ಪಸಮಯ ನಡೆಯುತ್ತದೆ. ತಂದೆಯು ತಿಳಿಸಿಕೊಡುತ್ತಾರೆ- ಇದು ನನ್ನ ರಥವಾಗಿದೆಯಲ್ಲವೆ. ರಥದ ಆಯಸ್ಸೆಂದು ಹೇಳುತ್ತಾರೆ. ತಂದೆಯು ತಿಳಿಸುತ್ತಾರೆ- ನಾನಂತೂ ಸದಾ ಅಮರನಾಗಿದ್ದೇನೆ, ನನ್ನ ಹೆಸರೇ ಆಗಿದೆ ಅಮರನಾಥ. ನಾನು ಪುನರ್ಜನ್ಮವನ್ನು ತೆಗೆದುಕೊಳ್ಳುವುದಿಲ್ಲ ಆದ್ದರಿಂದ ಅಮರನಾಥನೆಂದು ಹೇಳಲಾಗುತ್ತದೆ. ನಿಮ್ಮನ್ನು ಅರ್ಧಕಲ್ಪಕ್ಕಾಗಿ ಅಮರರನ್ನಾಗಿ ಮಾಡುತ್ತೇನೆ, ಆದರೂ ಸಹ ನೀವು ಪುನರ್ಜನ್ಮವನ್ನು ತೆಗೆದುಕೊಳ್ಳುತ್ತೀರಿ ಆದ್ದರಿಂದ ಈಗ ನೀವು ಮಕ್ಕಳು ಮೇಲೆ ಹೋಗಬೇಕಾಗಿದೆ. ಅಂದಾಗ ಮುಖವನ್ನು ಆ ಕಡೆ ಕಾಲುಗಳು ಈ ಕಡೆ ಮಾಡಬೇಕಾಗಿದೆ. ಮತ್ತೆ ಮುಖವನ್ನು ಏಕೆ ಈ ಕಡೆ ತಿರುಗಿಸುತ್ತೀರಿ? ಬಾಬಾ ಮರೆತುಹೋಯಿತು, ಮುಖ ಈ ಕಡೆ ತಿರುಗಿಬಿಟ್ಟಿತು ಎಂದು ಹೇಳುತ್ತಾರೆ ಅಂದರೆ ಉಲ್ಟಾ ಆಗಿಬಿಡುತ್ತಾರೆ.

ನೀವು ತಂದೆಯನ್ನು ಮರೆತು ದೇಹಾಭಿಮಾನಿಗಳಾಗಿಬಿಡುತ್ತೀರಿ ಅಂದರೆ ಉಲ್ಟಾ ಆಗಿಬಿಡುತ್ತೀರಿ. ತಂದೆಯು ಎಲ್ಲದರ ತಿಳುವಳಿಕೆ ನೀಡುತ್ತಾರೆ. ಬಾಬಾ ಶಕ್ತಿ ಕೊಡು, ಬಲ ಕೊಡು ಎಂದು ತಂದೆಯಿಂದ ಏನನ್ನೂ ಬೇಡಬಾರದು. ತಂದೆಯಂತೂ ಮಾರ್ಗವನ್ನು ತಿಳಿಸಿಕೊಡುತ್ತಾರೆ- ಮಕ್ಕಳೇ, ಯೋಗಬಲದಿಂದ ಈ ರೀತಿ ಆಗಬೇಕು. ನೀವು ಯೋಗಬಲದಿಂದ ಇಷ್ಟೂ ಸಾಹುಕಾರರಾಗುತ್ತೀರಿ ಅದರಿಂದ 21 ಜನ್ಮಗಳವರೆಗೆ ಎಂದೂ ಯಾರೊಂದಿಗೂ ಬೇಡುವ ಅವಶ್ಯಕತೆಯಿರುವುದಿಲ್ಲ. ನೀವು ತಂದೆಯಿಂದ ಇಷ್ಟೊಂದನ್ನು ಪಡೆಯುತ್ತೀರಿ. ನೀವೂ ಸಹ ತಿಳಿಯುತ್ತೀರಿ- ತಂದೆಯು ಬಹಳಷ್ಟು ಸಂಪಾದನೆಯನ್ನು ಮಾಡಿಸುತ್ತಾರೆ, ಏನು ಬೇಕೋ ಅದನ್ನು ಪಡೆಯಿರಿ ಎಂದು ಹೇಳುತ್ತಾರೆ. ಈ ಲಕ್ಷ್ಮೀ-ನಾರಾಯಣರು ಬಹಳ ಶ್ರೇಷ್ಠರಾಗಿದ್ದಾರೆ ಅಂದಮೇಲೆ ಈಗ ಏನುಬೇಕೋ ಅದನ್ನು ಪಡೆಯಿರಿ. ಪೂರ್ಣ ಓದಲಿಲ್ಲವೆಂದರೆ ಪ್ರಜೆಗಳಲ್ಲಿ ಹೊರಟುಹೋಗುತ್ತೀರಿ. ನೀವು ಪ್ರಜೆಗಳನ್ನೂ ಮಾಡಿಕೊಳ್ಳಬೇಕು. ಮುಂದೆಹೋದಂತೆ ಬಹಳಷ್ಟು ಮ್ಯೂಜಿûಯಂಗಳು ತೆರೆಯುತ್ತಾ ಹೋಗುತ್ತವೆ ಮತ್ತು ನಿಮಗೆ ದೊಡ್ಡ-ದೊಡ್ಡ ಹಾಲ್ ಸಿಗುತ್ತವೆ, ಕಾಲೇಜುಗಳು ಸಿಗುತ್ತವೆ ಅದರಲ್ಲಿ ನೀವು ಸರ್ವೀಸ್ ಮಾಡುತ್ತೀರಿ. ವಿವಾಹಕ್ಕಾಗಿ ಯಾವ ಹಾಲ್ಗಳನ್ನು ಮಾಡಿಸುತ್ತಾರೆಯೋ ಅದು ಅವಶ್ಯವಾಗಿ ಸಿಗುತ್ತವೆ. ಶಿವಭಗವಾನುವಾಚ- ನಾನು ನಿಮ್ಮನ್ನು ಇಂತಹ ಪವಿತ್ರರನ್ನಾಗಿ ಮಾಡುತ್ತೇನೆ ಎಂದು ತಂದೆಯೂ ಹೇಳುತ್ತಾರೆಂದು ತಿಳಿಸಿದಾಗ ಟ್ರಸ್ಟಿಗಳು ಹಾಲ್ ಕೊಟ್ಟುಬಿಡುತ್ತಾರೆ. ತಿಳಿಸಿ, ಭಗವಾನುವಾಚ- ಕಾಮ ಮಹಾಶತ್ರುವಾಗಿದೆ, ಇದರಿಂದ ದುಃಖವನ್ನು ಪಡೆದಿದ್ದೇವೆ. ಈಗ ಪಾವನರಾಗಿ ಪಾವನಪ್ರಪಂಚಕ್ಕೆ ಹೋಗಬೇಕಾಗಿದೆ. ಇದನ್ನು ಯಥಾರ್ಥವಾಗಿ ತಿಳಿಸಿದಾಗ ಆವರು ನಿಮಗೆ ಹಾಲ್ ಕೊಟ್ಟುಬಿಡುತ್ತಾರೆ ನಂತರ ಬಹಳ ತಡವಾಯಿತೆಂದು ಹೇಳುತ್ತೀರಿ. ತಂದೆಯು ಹೇಳುತ್ತಾರೆ- ನಾನು ಸುಮ್ಮನೆ ತೆಗೆದುಕೊಳ್ಳುವುದಿಲ್ಲ ಏಕೆಂದರೆ ಮತ್ತೆ ನಾನು ಅದಕ್ಕೆ ಪ್ರತಿಯಾಗಿ ಕೊಡಬೇಕಾಗುತ್ತದೆ ಆದ್ದರಿಂದ ಮಕ್ಕಳ ಒಂದೊಂದು ಪೈಸೆಯಿಂದಲೇ ಸೇವೆಯು ನಡೆಯುತ್ತದೆ. ಉಳಿದೆಲ್ಲರದು ಮಣ್ಣುಪಾಲಾಗಿಬಿಡುತ್ತದೆ. ತಂದೆಯು ಎಲ್ಲರಿಗಿಂತ ದೊಡ್ಡ ಅಕ್ಕಸಾಲಿಗ, ಅಗಸ, ಶಿಲ್ಪಿಯೂ ಆಗಿದ್ದಾರೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತ-ಪಿತ ಬಾಪ್ದಾದಾ ಅವರ ನೆನಪು ಪೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ತಂದೆಯು ಯಾವ ಸತ್ಯ-ಸತ್ಯವಾದ ಕಥೆಯನ್ನು ತಿಳಿಸುತ್ತಾರೆಯೋ ಅದನ್ನು ಗಮನವಿಟ್ಟು ಕೇಳಬೇಕು ಮತ್ತು ಧಾರಣೆಯೂ ಮಾಡಬೇಕಾಗಿದೆ. ತಂದೆಯಿಂದ ಏನನ್ನೂ ಬೇಡಬಾರದು. 21 ಜನ್ಮಗಳಿಗಾಗಿ ತಮ್ಮ ಸಂಪಾದನೆಯನ್ನು ಜಮಾ ಮಾಡಿಕೊಳ್ಳಬೇಕಾಗಿದೆ.

2. ಹಿಂತಿರುಗಿ ಮನೆಗೆ ಹೋಗಬೇಕಾಗಿದೆ ಆದ್ದರಿಂದ ಶರೀರದ ಆಕರ್ಷಣೆಯನ್ನು ಸಮಾಪ್ತಿ ಮಾಡಿಕೊಳ್ಳಬೇಕು. ಕರ್ಮೇಂದ್ರಿಯಗಳನ್ನು ಶೀತಲವನ್ನಾಗಿ ಮಾಡಿಕೊಳ್ಳಬೇಕಾಗಿದೆ. ಈ ದೇಹದ ಅಭಿಮಾನವನ್ನು ಬಿಡುವ ಪುರುಷಾರ್ಥ ಮಾಡಬೇಕಾಗಿದೆ.

ವರದಾನ:
ಒಂದೇ ಸ್ಥಾನದಲ್ಲಿರುತ್ತಾ ಅನೇಕ ಆತ್ಮಗಳ ಸೇವೆ ಮಾಡುವಂತಹ ಲೈಟ್-ಮೈಟ್ ಸಂಪನ್ನ ಭವ.

ಹೇಗೆ ಲೈಟ್ ಹೌಸ್ ಒಂದೇ ಸ್ಥಾನದಲ್ಲಿ ಸ್ಥಿತವಾಗಿರುತ್ತಾ ದೂರ-ದೂರದ ವರೆಗೆ ಸೇವೆ ಮಾಡುತ್ತದೆ. ಅದೇ ರೀತಿ ನೀವೆಲ್ಲಾ ಒಂದೇ ಸ್ಥಾನದಲ್ಲಿರುತ್ತಾ ಅನೇಕರನ್ನು ಸೇವಾರ್ಥ ನಿಮಿತ್ತ ಮಾಡಬಹುದು ಇದರಲ್ಲಿ ಕೇವಲ ಲೈಟ್-ಮೈಟ್ನಿಂದ ಸಂಪನ್ನರಾಗುವ ಅವಶ್ಯಕತೆಯಿದೆ. ಮನಸ್ಸು-ಬುದ್ಧಿ ಸದಾ ವ್ಯರ್ಥ ಯೋಚಿಸುವುದರಿಂದ ಮುಕ್ತರಾಗಿರುವುದು, ಮನ್ಮನಾಭವ ಮಂತ್ರದ ಸಹಜ ಸ್ವರೂಪ ಮನಸ್ಸಿನಿಂದ ಶುಭ ಬಾವನೆ, ಶ್ರೇಷ್ಠ ಕಾಮನೆ, ಶ್ರೇಷ್ಠ ವೃತ್ತಿ ಮತ್ತು ಶ್ರೇಷ್ಠ ವೈಬ್ರೇಷನ್ ನಿಂದ ಸಂಪನ್ನರಾಗಿರುವ ಈ ಸೇವೆ ಸಹಜವಾಗಿ ಮಾಡುವಿರಿ. ಇದೇ ಮನಸಾ ಸೇವೆಯಾಗಿದೆ.

ಸ್ಲೋಗನ್:
ಈಗ ತಾವು ಬ್ರಾಹ್ಮಣ ಆತ್ಮರು ಮೈಟ್(ಶಕ್ತಿಶಾಲಿ) ಆಗಿರಿ ಮತ್ತು ಅನ್ಯ ಆತ್ಮರನ್ನು ಮೈಕ್ಗಳಾಗಿ ಮಾಡಿರಿ.