25.09.24         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ಬೇಹದ್ದಿನ ಸ್ಕಾಲರ್ಷಿಪ್ ತೆಗೆದುಕೊಳ್ಳಬೇಕೆಂದರೆ ಅಭ್ಯಾಸ ಮಾಡಿ - ಒಬ್ಬ ತಂದೆಯ ವಿನಃ ಮತ್ಯಾರು ಸಹ ನೆನಪಿಗ ಬರದಿರಲಿ”

ಪ್ರಶ್ನೆ:
ತಂದೆಯವರಾದ ನಂತರವು ಸಹ ಖುಷಿ ಇರುವುದಿಲ್ಲ ಅಂದಾಗ ಅದರ ಕಾರಣ ಏನಾಗಿದೆ?

ಉತ್ತರ:
1. ಬುದ್ದಿಯಲ್ಲಿ ಪೂರ್ಣ ಜ್ಞಾನ ಇರುವುದಿಲ್ಲ. 2. ತಂದೆಯನ್ನು ಯಥಾರ್ಥ ರೀತಿ ನೆನಪು ಮಾಡುವುದಿಲ್ಲ. ನೆನಪು ಮಾಡದಿರುವ ಕಾರಣ ಮಾಯೆ ಮೋಸ ಮಾಡುತ್ತದೆ ಇದರಿಂದ ಖುಷಿ ಇರುವುದಿಲ್ಲ. ನೀವು ಮಕ್ಕಳ ಬುದ್ಧಿಯಲ್ಲಿ ನಶೆ ಇರಲಿ - ತಂದೆ ನಮ್ಮನ್ನು ವಿಶ್ವದ ಮಾಲಿಕರನ್ನಾಗಿ ಮಾಡುತ್ತಾರೆ, ಅಂದಾಗ ಸದಾ ಉಲ್ಲಾಸ ಮತ್ತು ಖುಷಿ ಇರಲಿ. ತಂದೆಯ ಯಾವ ಆಸ್ತಿ ಇದೆ - ಪವಿತ್ರತೆ, ಸುಖ ಮತ್ತು ಶಾಂತಿ, ಇದರಲ್ಲಿ ಸಂಪೂರ್ಣರಾದರೆ ಆಗ ಖುಷಿ ಇರುವುದು.

ಓಂ ಶಾಂತಿ.
ಓಂ ಶಾಂತಿಯ ಅರ್ಥವಂತು ಮಕ್ಕಳಿಗೆ ಚೆನ್ನಾಗಿ ಗೊತ್ತಿದೆ - ನಾನು ಆತ್ಮ, ಇದು ನನ್ನ ಶರೀರ. ಈ ಮಾತನ್ನು ಚೆನ್ನಾಗಿ ನೆನಪು ಮಾಡಬೇಕು. ಭಗವಂತ ಎಂದರೆ ಆತ್ಮಗಳ ತಂದೆ ನಮಗೆ ಓದಿಸುತ್ತಾರೆ. ಹೀಗೆ ಎಂದಾದರೂ ಕೇಳೀದೀರಾ? ಅವರಂತು ತಿಳಿದುಕೊಳ್ಳುತ್ತಾರೆ ಶ್ರೀಕೃಷ್ಣ ಓದಿಸುತ್ತಾರೆಂದು, ಆದರೆ ಅವರದು ನಾಮ-ರೂಪವಿದೆಯಲ್ಲವೇ. ಇಲ್ಲಂತು ಓದಿಸುವವರು ನಿರಾಕಾರ ತಂದೆಯಾಗಿದ್ದಾರೆ. ಆತ್ಮವು ಕೇಳುತ್ತದೆ ಮತ್ತು ಪರಮಾತ್ಮ ತಿಳಿಸುತ್ತಾರೆ. ಇದು ಹೊಸ ಮಾತಲ್ಲವೇ. ವಿನಾಶವಂತು ಆಗಲೇಬೇಕಲ್ಲವೇ. ಒಂದಾಗಿದೆ ವಿನಾಶಕಾಲೇ ವಿಪರೀತ ಬುದ್ಧಿ, ಇನ್ನೊಂದಾಗಿದೆ ವಿನಾಶಕಾಲೇ ಪ್ರೀತ ಬುದ್ಧಿ. ಮೊದಲು ನೀವು ಸಹ ಹೇಳುತ್ತಿದ್ದೀರಿ ಈಶ್ವರ ಸರ್ವವ್ಯಾಪಿ, ಕಲ್ಲು ಮುಳ್ಳುಗಳಲ್ಲಿದ್ದಾರೆಂದು. ಈ ಎಲ್ಲಾ ಮಾತುಗಳನ್ನು ಚೆನ್ನಾಗಿ ತಿಳಿದುಕೊಳ್ಳಬೇಕು. ತಿಳಿಸುತ್ತಾರೆ ಆತ್ಮ ಅವಿನಾಶಿ, ಶರೀರ ವಿನಾಶಿಯಾಗಿದೆ. ಆತ್ಮ ಎಂದೂ ದೊಡ್ಡದು-ಚಿಕ್ಕದು ಆಗುವುದಿಲ್ಲ. ಅದು ಇಷ್ಟು ಚಿಕ್ಕ ಆತ್ಮ, ಇಷ್ಟು ಚಿಕ್ಕ ಆತ್ಮನಲ್ಲಿ 84 ಜನ್ಮವನ್ನು ತೆಗೆದುಕೊಂಡು ಎಲ್ಲಾ ಪಾತ್ರವನ್ನು ಅಭಿನಯಿಸುತ್ತದೆ. ಆತ್ಮ ಶರೀರವನ್ನು ನಡೆಸುತ್ತದೆ. ಶ್ರೇಷ್ಠಾತಿ ಶ್ರೇಷ್ಠ ತಂದೆಯು ಓದಿಸುತ್ತಾರೆಂದರೆ ಪದವಿಯು ಸಹ ಅವಶ್ಯವಾಗಿ ಶ್ರೇಷ್ಠವಾಗಿರುವುದೇ ಸಿಗುವುದು. ಆತ್ಮವೇ ಓದಿಕೊಂಡು ಪದವಿಯನ್ನು ಪಡೆಯುತ್ತದೆ. ಆತ್ಮವನ್ನು ಯಾರು ನೋಡಲಾಗುವುದಿಲ್ಲ. ಆತ್ಮವು ಹೇಗೆ ಬರುವುದು, ಎಲ್ಲಿಂದ ಹೋಗುತ್ತದೆ ಎಂದು ನೋಡಲು ಬಹಳ ಪ್ರಯತ್ನ ಪಡುತ್ತಾರೆ, ಆದರೆ ಗೊತ್ತಾಗುವುದಿಲ್ಲ. ನೋಡಿದರು ಸಹ ಯಾರಿಗೂ ತಿಳಿಯುವುದಿಲ್ಲ. ನೀವು ತಿಳಿದುಕೊಂಡಿದ್ದೀರಿ ಆತ್ಮವೇ ಶರೀರದಲ್ಲಿ ನಿವಾಸ ಮಾಡುತ್ತದೆ. ಆತ್ಮ ಬೇರೆಯಾಗಿದೆ, ಜೀವ (ಶರೀರ) ಬೇರೆಯಾಗಿದೆ. ಆತ್ಮ ದೊಡ್ಡದು –ಚಿಕ್ಕದು ಆಗುವುದಿಲ್ಲ. ಜೀವ(ಶರೀರ) ಚಿಕ್ಕದಿಂದ ದೊಡ್ಡದು ಆಗುತ್ತದೆ. ಆತ್ಮವೇ ಪತಿತ ಮತ್ತು ಪಾವನ ಆಗುತ್ತದೆ. ಆತ್ಮವೇ ತಂದೆಯನ್ನು ಕರೆಯುತ್ತದೆ - ಹೇ ಪತಿತ ಆತ್ಮರನ್ನು ಪಾವನ ಮಾಡುವಂತಹ ಬಾಬಾ ಬನ್ನಿ. ಇದನ್ನು ಸಹ ತಿಳಿಸಿಕೊಡಲಾಗಿದೆ – ಎಲ್ಲಾ ಆತ್ಮರು ವಧು (ಸೀತೆಯರಾಗಿದ್ದಾರೆ) ಮತ್ತು ಅವರು ರಾಮ, ವರ ಒಬ್ಬರೇ. ಆ ಜನರಂತು ಎಲ್ಲರಿಗೆ ವರ ಎಂದು ಹೇಳಿಬಿಡುತ್ತಾರೆ. ಈಗ ವರ ಎಲ್ಲರಲ್ಲಿ ಪ್ರವೇಶ ಮಾಡುತ್ತಾರೆ, ಇದಂತು ಸಾಧ್ಯವಿಲ್ಲ. ಈ ಬುದ್ಧಿಯಲ್ಲಿ ಉಲ್ಟಾ ಜ್ಞಾನವಿರುವ ಕಾರಣ ಕೆಳಗಡೆ ಬಿಳುತ್ತಾ ಬಂದರು ಏಕೆಂದರೆ ಬಹಳ ಗ್ಲಾನಿ ಮಾಡುತ್ತ, ಪಾಪ ಮಾಡುತ್ತ, ನಿಂದನೆ ಮಾಡುತ್ತಾರೆ. ತಂದೆಯದ್ದು ಬಹಳ ನಿಂದನೆ ಮಾಡಿದ್ದಾರೆ. ಮಕ್ಕಳು ಎಂದಾದರೂ ತಂದೆಯ ಗ್ಲಾನಿಯನ್ನು ಮಾಡುತ್ತಾರೇನು! ಆದರೆ ಇತ್ತೀಚೆಗೆ ಹಾಳಾಗಿದ್ದಾರೆ ಅದಕ್ಕೆ ತಂದೆಗೂ ನಿಂದನೆ ಮಾಡುತ್ತಾರೆ. ಇವರಂತು ಬೇಹದ್ದಿನ ತಂದೆಯಾಗಿದ್ದಾರೆ. ಆತ್ಮವೇ ಬೇಹದ್ದಿನ ತಂದೆಯ ಗ್ಲಾನಿ ಮಾಡುತ್ತದೆ - ಬಾಬಾ ನೀವು ಮೀನು-ಮೊಸಳೆಯ ಅವತಾರರಾಗಿದ್ದೀರಿ. ಶ್ರೀಕೃಷ್ಣನಿಗೂ ಗ್ಲಾನಿ ಮಾಡುತ್ತಾರೆ – ರಾಣಿಯರನ್ನು ಓಡಿಸಿಕೊಂಡು ಹೋದ, ಇದನ್ನು ಮಾಡಿದನು, ಬೆಣ್ಣೆ ಕದ್ದನು. ಬೆಣ್ಣೆಯನ್ನು ಕದಿಯುವಂತಹ ಅವಶ್ಯಕತೆ ಅವರಿಗೇನಿದೆ? ಎಷ್ಟು ತಮೋಪ್ರಧಾನ ಬುದ್ಧಿಯವರಾಗಿದ್ದಾರೆ. ತಂದೆಯು ತಿಳಿಸುತ್ತಾರೆ ನಾನು ಬಂದು ನಿಮಗೆ ಪಾವನರಾಗುವಂತಹ ಬಹಳ ಸಹಜ ಯುಕ್ತಿಯನ್ನು ತಿಳಿಸುತ್ತೇನೆ. ತಂದೆಯೇ ಪತಿತ-ಪಾವನ ಸರ್ವಶಕ್ತಿವಂತರಾಗಿದ್ದಾರೆ ಸರ್ವಶಕ್ತಿಗಳ ಅಧಿಕಾರಿಯಾಗಿದ್ದಾರೆ. ಹೇಗೆ ಸಾಧು-ಸಂತರು ಇತ್ಯಾದಿಗಳಿದ್ದಾರೆ, ಅವರನ್ನು ಶಾಸ್ತ್ರಗಳ ಅಧಿಕಾರಿಯೆಂದು ಹೇಳಲಾಗುತ್ತದೆ. ಶಂಕರಾಚಾರ್ಯರಿಗೂ ವೇದ-ಶಾಸ್ತ್ರ ಇತ್ಯಾದಿಗಳ ಅಧಿಕಾರಿಯೆಂದು ಹೇಳುತ್ತಾರೆ, ಅವರದು ಎಷ್ಟು ಆಡಂಬರದ ಪ್ರದರ್ಶನವಾಗುತ್ತದೆ. ಶಿವಾಚಾರ್ಯದಂತು ಯಾವುದೇ ಆಡಂಬರವಿಲ್ಲ, ಇವರೊಂದಿಗೆ ಯಾವುದೇ ಚಿಕ್ಕ ಗುಂಪಿನ ತುಕಡಿಯು ಸಹ ಇಲ್ಲ. ಇವರಂತು ಕುಳಿತಲೇ ಎಲ್ಲಾ ವೇದ-ಶಾಸ್ತ್ರಗಳ ಸಾರವನ್ನು ತಿಳಿಸುತ್ತಾರೆ. ಒಂದುವೇಳೆ ಶಿವಬಾಬಾರವರು ಆಡಂಬರ ಮಾಡಿದರೆ ಮೊದಲು ಇವರದು (ಬ್ರಹ್ಮಾರವರದು) ಆಡಂಬರ ಬೇಕಾಗುತ್ತದೆ. ಆದರೆ ಇಲ್ಲ. ತಂದೆಯು ಹೇಳುತ್ತಾರೆ ನಾನು ನೀವು ಮಕ್ಕಳ ಸೇವಕನಾಗಿದ್ದೇನೆ. ತಂದೆಯು ಇವರಲ್ಲಿ ಪ್ರವೇಶಮಾಡಿ ಮಕ್ಕಳಿಗೆ ತಿಳಿಸುತ್ತಾರೆ- ಮಕ್ಕಳೇ ನೀವು ಪತಿತರಾಗಿದ್ದೀರಿ. ನೀವು ಪಾವನರಾಗಿ ನಂತರ 84 ಜನ್ಮಗಳ ನಂತರ ಪತಿತರಾಗಿ ಬಿಟ್ಟಿದ್ದೀರಿ. ಇವರದೇ ಇತಿಹಾಸ-ಭೂಗೋಳವು ಪುನರಾವರ್ತನೆಯಾಗುತ್ತದೆ. ಇವರೇ 84 ಜನ್ಮಗಳನ್ನು ಪಡೆದುಕೊಂಡಿದ್ದಾರೆ. ನಂತರ ಅವರೇ ಸತೋಪ್ರಧಾನರಾಗುವ ಯುಕ್ತಿಯನ್ನು ತಿಳಿಸುತ್ತಾರೆ. ತಂದೆಯೇ ಸರ್ವಶಕ್ತಿವಂತರಾಗಿದ್ದಾರೆ. ಬ್ರಹ್ಮಾರವರ ಮೂಲಕ ಎಲ್ಲಾ ವೇದ-ಶಾಸ್ತ್ರಗಳ ಸಾರವನ್ನು ತಿಳಿಸುತ್ತಾರೆ. ಚಿತ್ರಗಳಲ್ಲಿ ಬ್ರಹ್ಮಾರವರಿಗೆ ಶಾಸ್ತ್ರಗಳನ್ನು ತೋರಿಸಿದ್ದಾರೆ. ಆದರೆ ವಾಸ್ತವದಲ್ಲಿ ಶಾಸ್ತ್ರಗಳ ಇತ್ಯಾದಿಗಳ ಮಾತಿಲ್ಲ. ಬಾಬಾರವರ ಹತ್ತಿರ ಶಾಸ್ತ್ರಗಳಿಲ್ಲ, ಇವರ ಹತ್ತಿರವೂ ಇಲ್ಲ, ನಿಮ್ಮ ಹತ್ತಿರವು ಇಲ್ಲ. ಇವರಂತು ನಿತ್ಯ ಹೊಸ-ಹೊಸ ಮಾತುಗಳನ್ನು ತಿಳಿಸುತ್ತಾರೆ. ಇದಂತು ತಿಳಿದುಕೊಂಡಿದ್ದೀರಿ ಎಲ್ಲವೂ ಭಕ್ತಿ ಮಾರ್ಗದ ಶಾಸ್ತ್ರಗಳಾಗಿವೆ. ನಾನು ಯಾವುದೇ ಶಾಸ್ತ್ರವನ್ನು ತಿಳಿಸುವುದಿಲ್ಲ. ನಾನಂತು ನಿಮಗೆ ಮುಖದಿಂದ ತಿಳಿಸುತ್ತೇನೆ. ನಿಮಗೆ ರಾಜಯೋಗವನ್ನು ಕಲಿಸುತ್ತೇನೆ, ಯಾವುದನ್ನು ನಂತರ ಭಕ್ತಿ ಮಾರ್ಗದಲ್ಲಿ ಗೀತೆ ಎಂದು ಹೆಸರಿಟ್ಟರು. ನನ್ನ ಹತ್ತಿರ ಅಥವಾ ನಿಮ್ಮ ಹತ್ತಿರ ಗೀತೆ ಇದೆಯೇ? ಇದಂತು ವಿದ್ಯೆಯಾಗಿದೆ. ವಿದ್ಯೆಯಲ್ಲಿ ಅಧ್ಯಾಯ, ಸ್ಲೋಕ ಇತ್ಯಾದಿಗಳು ಇರುವುದಿಲ್ಲ. ನಾನು ನೀವು ಮಕ್ಕಳಿಗೆ ಓದಿಸುತ್ತೇನೆ, ಕಲ್ಪ-ಕಲ್ಪವೂ ಇದೇ ರೀತಿ ಓದಿಸುತ್ತಿರುತ್ತೇನೆ. ಎಷ್ಟು ಸಹಜ ಮಾತನ್ನು ತಿಳಿಸುತ್ತೇನೆ- ತಮ್ಮನ್ನು ಆತ್ಮ ಎಂದು ತಿಳಿದುಕೊಳ್ಳಿ. ಈ ಶರೀರವಂತು ಮಣ್ಣಾಗಿ ಬಿಡುತ್ತದೆ. ಆತ್ಮ ಅವಿನಾಶಿಯಾಗಿದೆ, ಶರೀರವು ಪದೇ-ಪದೇ ಸುಡುತ್ತಿರುತ್ತದೆ. ಆತ್ಮ ಒಂದು ಶರೀರವನ್ನು ಬಿಟ್ಟು ಇನ್ನೊಂದು ಶರೀರವನ್ನು ತೆಗೆದುಕೊಳ್ಳುತ್ತದೆ.

ತಂದೆಯು ಹೇಳುತ್ತಾರೆ ನಾನಂತು ಒಂದೇ ಬಾರಿ ಬರುತ್ತೇನೆ. ಶಿವರಾತ್ರಿಯನ್ನು ಆಚರಿಸುತ್ತಾರೆ. ವಾಸ್ತವದಲ್ಲಿ ಶಿವ ಜಯಂತಿಯಾಗಬೇಕು. ಆದರೆ ಜಯಂತಿ ಎಂದು ಹೇಳುವುದರಿಂದ ತಾಯಿಯ ಗರ್ಭದಿಂದ ಜನ್ಮವಾಗುತ್ತದೆ, ಅದಕ್ಕೆ ಶಿವರಾತ್ರಿ ಎಂದು ಹೇಳುತ್ತಾರೆ. ದ್ವಾಪರ-ಕಲಿಯುಗದ ರಾತ್ರಿಯಲ್ಲಿ ನನ್ನನ್ನು ಹುಡುಕುತ್ತಾರೆ. ಸರ್ವವ್ಯಾಪಿ ಎಂದು ಹೇಳುತ್ತಾರೆ. ಹಾಗಾದರೆ ನಿಮ್ಮಲ್ಲಿಯು ಇದ್ದಾರಲ್ಲವೇ, ಮತ್ತೇ ಪೆಟ್ಟನ್ನು ಏಕೆ ತಿನ್ನುತ್ತೀರಿ. ಒಮ್ಮೆಲೇ ದೇವತೆಗಳಿಂದ ಆಸುರೀ ಸಂಪ್ರದಾಯದವರಾಗಿ ಬಿಡುತ್ತಾರೆ. ದೇವತೆಗಳು ಎಂದಾದರೂ ಮದ್ಯಪಾನವನ್ನು ಮಾಡುತ್ತಾರೆಯೇ? ಅದೇ ಆತ್ಮರು ಕಳಗೆ ಇಳಿದಾಗ ಮದ್ಯಪಾನ ಇತ್ಯಾದಿಗಳನ್ನು ಮಾಡಲು ಆರಂಭಿಸಿದ್ದಾರೆ. ತಂದೆಯು ಹೇಳುತ್ತಾರೆ ಈ ಹಳೆಯ ಪ್ರಪಂಚದ ವಿನಾಶವೂ ಅವಶ್ಯವಾಗಿ ಆಗುತ್ತದೆ. ಹಳೆಯ ಪ್ರಪಂಚದಲ್ಲಿ ಅನೇಕ ಧರ್ಮಗಳಿವೆ, ಹೊಸ ಪ್ರಪಂಚದಲ್ಲಿ ಒಂದೇ ಧರ್ಮವಿರುತ್ತದೆ. ಒಂದರಿಂದ ಅನೇಕ ಆಗಿದೆ ಮತ್ತೆ ಪುನಃ ಒಂದು ಅವಶ್ಯವಾಗಿ ಆಗುತ್ತದೆ. ಮನುಷ್ಯರು ಕಲಿಯುಗದಲ್ಲಿ ಇನ್ನೂ 40 ಸಾವಿರ ವರ್ಷವಿದೆ ಎಂದು ಹೇಳುತ್ತಾರೆ, ಇದಕ್ಕೆ ಹೇಳಲಾಗುತ್ತದೆ ಘೋರ ಕತ್ತಲು. ಜ್ಞಾನ ಸೂರ್ಯ ಪ್ರಕಟ, ಅಜ್ಞಾನದ ಕತ್ತಲು ವಿನಾಶವಾಯಿತು. ಮನುಷ್ಯರಲ್ಲಿ ಬಹಳಷ್ಟು ಅಜ್ಞಾನವಿದೆ. ತಂದೆಯು ಜ್ಞಾನ ಸೂರ್ಯ, ಜ್ಞಾನ ಸಾಗರ ಬರುತ್ತಾರೆಂದರೆ ನಿಮ್ಮ ಭಕ್ತಿ ಮಾರ್ಗದ ಅಜ್ಞಾನ ದೂರವಾಗಿ ಬಿಡುತ್ತದೆ. ನೀವು ತಂದೆಯನ್ನು ನೆನಪು ಮಾಡುತ್ತಾ-ಮಾಡುತ್ತಾ ಪವಿತ್ರರಾಗಿ ಬಿಡುತ್ತೀರಿ, ತುಕ್ಕು ಬಿಟ್ಟು ಹೋಗುತ್ತದೆ. ಇದಾಗಿದೆ ಯೋಗ ಅಗ್ನಿ. ಕಾಮ ಅಗ್ನಿ ಕಪ್ಪಾಗಿ ಮಾಡಿಬಿಡುತ್ತದೆ. ಯೋಗಾಗ್ನಿ ಅರ್ಥಾತ್ ಶಿವಬಾಬಾರವರ ನೆನಪು ಸುಂದರವಾಗಿ ಮಾಡುತ್ತದೆ. ಶ್ರೀಕೃಷ್ಣನ ಹೆಸರೂ ಆಗಿದೆ - ಶ್ಯಾಮ ಸುಂದರ. ಆದರೆ ಅರ್ಥವನ್ನು ತಿಳಿದುಕೊಂಡಿಲ್ಲ. ತಂದೆಯು ಬಂದು ಅರ್ಥವನ್ನು ತಿಳಿಸುತ್ತಾರೆ. ಮೊಟ್ಟಮೊದಲು ಸತ್ಯಯುಗದಲ್ಲಿ ಎಷ್ಟು ಸುಂದರವಾಗಿದ್ದರು. ಈಗ ಈ ಹಳೆಯ ಪ್ರಪಂಚದ ವಿನಾಶ ಅವಶ್ಯವಾಗಿ ಆಗುತ್ತದೆ. ಎಲ್ಲಾ ತಯಾರಿಗಳು ನಡೆಯುತ್ತಿವೆ. ಭಾರತವಾಸಿಗಳು ಇಷ್ಟೊಂದು ತಿಳಿದುಕೊಳ್ಳುವುದಿಲ್ಲ, ಎಷ್ಟು ಅವರು ತಿಳಿಯುತ್ತಾರೆ ನಾವು ನಮ್ಮದೇ ಕುಲದ ವಿನಾಶ ಮಾಡುತ್ತಿದ್ದೇವೆ. ಯಾರೋ ಪ್ರೇರಕರಿದ್ದಾರೆ. ವಿಜ್ಞಾನದ ಮೂಲಕ ನಾವು ನಮ್ಮದೇ ವಿನಾಶ ಮಾಡಿಕೊಳ್ಳುತ್ತೇವೆ. ಇದನ್ನು ಸಹ ತಿಳಿದಿದ್ದಾರೆ ಕ್ರೈಸ್ತನ 3 ಸಾವಿರ ವರ್ಷ ಮೊದಲು ಸ್ವರ್ಗವಿತ್ತು. ಭಗವಾನ-ಭಗವತಿಯರ ರಾಜ್ಯವಿತ್ತು. ಭಾರತವೇ ಪ್ರಾಚೀನವಾಗಿತ್ತು. ಈ ರಾಜಯೋಗದಿಂದ ಲಕ್ಷ್ಮೀ-ನಾರಾಯಣರು ಈ ರೀತಿಯಾಗಿದ್ದರು. ಆ ರಾಜಯೋಗವನ್ನು ತಂದೆಯೇ ಕಲಿಸಲು ಸಾಧ್ಯ. ಸನ್ಯಾಸಿಗಳು ಕಲಿಸಲು ಸಾಧ್ಯವಿಲ್ಲ. ಇತ್ತೀಚೆಗೆ ಎಷ್ಟು ಮೋಸ ಮಾಡುತ್ತಾರೆ. ಹೊರಗಡೆ ಹೋಗಿ ತಿಳಿಸುತ್ತಾರೆ - ನಾವು ಭಾರತದ ಪ್ರಾಚೀನ ರಾಜಯೋಗವನ್ನು ಕಲಿಸುತ್ತೇವೆ. ಮತ್ತೆ ಹೇಳುತ್ತಾರೆ ಮೊಟ್ಟೆಯನ್ನು ತಿನ್ನಿ, ಮಧ್ಯಪಾನ ಇತ್ಯಾದಿ ಮಾಡಿ, ಏನಾದರೂ ಮಾಡಿ. ಅಂತಹವರು ಹೇಗೆ ರಾಜಯೋಗವನ್ನು ಕಲಿಸಲು ಸಾಧ್ಯ. ಮನುಷ್ಯರನ್ನು ಹೇಗೆ ದೇವತೆಗಳನ್ನಾಗಿ ಮಾಡುತ್ತಾರೆ. ತಂದೆಯು ತಿಳಿಸುತ್ತಾರೆ ಆತ್ಮ ಎಷ್ಟು ಶ್ರೇಷ್ಠವಾಗಿದೆ ನಂತರ ಪುನರ್ಜನ್ಮವನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ಸತೋಪ್ರಧಾನದಿಂದ ತಮೋಪ್ರಧಾನವಾಗಿ ಬಿಡುತ್ತದೆ. ಈಗ ನೀವು ಪುನಃ ಸ್ವರ್ಗದ ಸ್ಥಾಪನೆ ಮಾಡುತ್ತಿದ್ದಾರೆ. ಅಲ್ಲಿ ಬೇರೆ ಯಾವುದೇ ಧರ್ಮವು ಇರುವುದಿಲ್ಲ. ಈಗ ತಂದೆಯು ಹೇಳುತ್ತಾರೆ ನರಕದ ವಿನಾಶ ಅವಶ್ಯವಾಗಿ ಆಗುವುದು. ಇಲ್ಲಿಯವರೆಗೆ ಯಾರು ಬಂದಿದ್ದಾರೆ ಅವರು ಮತ್ತೆ ಸ್ವರ್ಗದಲ್ಲಿ ಅವಶ್ಯವಾಗಿ ಬರುತ್ತಾರೆ. ಶಿವಬಾಬಾರವರು ಸ್ವಲ್ಪ ಜ್ಞಾನವನ್ನು ಕೇಳಿದರೂ ಸ್ವರ್ಗದಲ್ಲಿ ಅವಶ್ಯವಾಗಿ ಬರುವವರು. ಎಷ್ಟು ಓದುವರು, ತಂದೆಯನ್ನು ನೆನಪು ಮಾಡುವರು ಅಷ್ಟು ಶ್ರೇಷ್ಠ ಪದವಿಯನ್ನು ಪಡೆಯುತ್ತಾರೆ. ಈಗ ವಿನಾಶ ಕಾಲ ಎಲ್ಲರದೂ ಇದೆ. ವಿನಾಶ ಕಾಲೇ ಪ್ರೀತಿ ಬುದ್ಧಿಯವರಿದ್ದಾರೆ, ತಂದೆಯನ್ನು ಬಿಟ್ಟು ಬೇರೆ ಯಾರನ್ನು ನೆನಪು ಮಾಡುವುದಿಲ್ಲ, ಅವರೇ ಶ್ರೇಷ್ಠ ಪದವಿಯನ್ನು ಪಡೆದುಕೊಳ್ಳುತ್ತಾರೆ. ಇದಕ್ಕೆ ಹೇಳಲಾಗುತ್ತದೆ ಬೇಹದ್ದಿನ ಸ್ಕಾಲರ್ಶಿಪ್, ಇದರಲ್ಲಿ ಓಟ ನಡೆಸಬೇಕಲ್ಲವೇ. ಇದು ಈಶ್ವರೀಯ ಲಾಟರಿಯಾಗಿದೆ. ಒಂದು ನೆನಪು, ಇನ್ನೊಂದು ದೈವೀಗುಣಗಳನ್ನು ಧಾರಣೆ ಮಾಡಬೇಕಾಗಿದೆ ಮತ್ತು ರಾಜಾ-ರಾಣಿಯರಾಗಬೇಕು, ಪ್ರಜೆಗಳನ್ನು ಮಾಡಿಕೊಳ್ಳಬೇಕು. ಕೆಲವರು ಬಹಳಷ್ಟು ಪ್ರಜೆಗಳನ್ನು ಮಾಡಿಕೊಳ್ಳುತ್ತಾರೆ, ಕೆಲವರು ಕಡಿಮೆ. ಸರ್ವೀಸ್ನಿಂದ ಪ್ರಜೆಗಳಾಗುತ್ತಾರೆ. ಮ್ಯೂಜಿಯಂ, ಪ್ರದರ್ಶನಿ ಇತ್ಯಾದಿಗಳಲ್ಲಿ ಅನೇಕ ಪ್ರಜೆಗಳಾಗುತ್ತಾರೆ. ಈ ಸಮಯ ನೀವು ಓದುತ್ತಿದ್ದೀರಿ ನಂತರ ಸೂರ್ಯವಂಶಿ-ಚಂದ್ರವಂಶಿ ವಂಶಾವಳಿಯಲ್ಲಿ ಹೋಗಿಬಿಡುತ್ತಾರೆ. ಇದಾಗಿದೆ ನಿಮ್ಮ ಬ್ರಾಹ್ಮಣರ ಕುಲ. ತಂದೆ ಬ್ರಾಹ್ಮಣ ಕುಲವನ್ನು ದತ್ತು ತೆಗೆದುಕೊಂಡು ಅವರಿಗೆ ಓದಿಸುತ್ತಾರೆ. ತಂದೆ ಹೇಳುತ್ತಾರೆ ನಾನು ಒಂದು ಕುಲ ಮತ್ತು ಎರಡು ವಂಶಾವಳಿಯನ್ನು ಮಾಡುತ್ತೇನೆ. ಸೂರ್ಯವಂಶಿ ಮಹಾರಾಜಾ-ಮಹಾರಾಣಿ, ಚಂದ್ರವಂಶಿ ರಾಜಾ-ರಾಣಿ. ಇವರಿಗೆ ಡಬಲ್ ಕಿರೀಟಧಾರಿ ಎಂದು ಹೇಳಲಾಗುತ್ತದೆ ನಂತರ ಯಾವಾಗ ವಿಕಾರಿ ರಾಜರಿರುತ್ತಾರೆ ಆಗ ಅವರಿಗೆ ಲೈಟ್ನ ಕಿರೀಟವಿರುವುದಿಲ್ಲ. ಡಬಲ್ ಕಿರೀಟದವರ ಮಂದಿರವನ್ನು ಮಾಡಿ ಅವರನ್ನು ಪೂಜಿಸುತ್ತಾರೆ. ಪವಿತ್ರತೆಯ ಮುಂದೆ ತಲೆ ಬಾಗುತ್ತಾರೆ. ಸತ್ಯಯುಗದಲ್ಲಿ ಈ ಮಾತುಗಳು ಇರುವುದಿಲ್ಲ. ಅದಾಗಿದೆ ಪಾವನ ಪ್ರಪಂಚ, ಅಲ್ಲಿ ಪತಿತರಾಗುವುದಿಲ್ಲ. ಅದಕ್ಕೆ ಸುಖಧಾಮ, ನಿರ್ವಿಕಾರಿ ಪ್ರಪಂಚ ಎಂದು ಹೇಳಲಾಗುತ್ತದೆ. ಇದಕ್ಕೆ ವಿಕಾರಿ ಪ್ರಪಂಚ ಎಂದು ಹೇಳಲಾಗುತ್ತದೆ. ಒಬ್ಬರು ಪಾವನರಿಲ್ಲ. ಸನ್ಯಾಸಿ ಮನೆ-ಮಠವನ್ನು ಬಿಟ್ಟು ಓಡುತ್ತಾರೆ, ರಾಜಾ ಗೋಪಿಚಂದನ ಉದಾಹರಣೆಯಿದೆಯಲ್ಲವೇ. ನೀವು ತಿಳಿದುಕೊಂಡಿದ್ದೀರಿ ಯಾವುದೇ ಮನುಷ್ಯ ಒಬ್ಬರಿನ್ನೊಬ್ಬರಿಗೆ ಗತಿ-ಸದ್ಗತಿಯನ್ನು ಕೊಡಲು ಸಾಧ್ಯವಿಲ್ಲ. ಸರ್ವರ ಸದ್ಗತಿದಾತಾ ನಾನಾಗಿದ್ದೇನೆ. ನಾನು ಬಂದು ಎಲ್ಲರನ್ನು ಪಾವನರನ್ನಾಗಿ ಮಾಡುತ್ತೇನೆ. ಒಂದು ಪವಿತ್ರರಾಗಿ ಶಾಂತಿಧಾಮಕ್ಕೆ ಹೊರಟು ಹೋಗುವರು ಮತ್ತು ಇನ್ನೊಂದು ಪವಿತ್ರರಾಗಿ ಸುಖಧಾಮದಲ್ಲಿ ಹೋಗುವರು. ಇದಾಗಿದೆ ಅಪವಿತ್ರ ದುಃಖಧಾಮ. ಸತ್ಯಯುಗದಲ್ಲಿ ಕಾಯಿಲೆ ಇತ್ಯಾದಿ ಏನು ಇರುವುದಿಲ್ಲ. ನೀವು ಆ ಸುಖಧಾಮದ ಮಾಲೀಕರಾಗಿದಿರಿ ನಂತರ ರಾವಣರಾಜ್ಯದಲ್ಲಿ ದುಃಖಧಾಮದ ಮಾಲೀಕರಾಗಿದ್ದೀರಿ. ತಂದೆ ಹೇಳುತ್ತಾರೆ ಕಲ್ಪ-ಕಲ್ಪ ನೀವು ನನ್ನ ಶ್ರೀಮತದ ಮೇಲೆ ಸ್ವರ್ಗ ಸ್ಥಾಪನೆ ಮಾಡುತ್ತೀರಿ. ಹೊಸ ಪ್ರಪಂಚದ ರಾಜ್ಯವನ್ನು ಮಾಡುತ್ತೀರಿ. ನಂತರ ಪತಿತ ನರಕವಾಸಿಗಳಾಗುತ್ತೀರಿ. ದೇವತೆಗಳೇ ನಂತರ ವಿಕಾರಿಗಳಾಗುತ್ತಾರೆ. ವಾಮ ಮಾರ್ಗದಲ್ಲಿ ಹೋಗುತ್ತಾರೆ. ಮಧುರಾತಿ ಮಧುರ ಮಕ್ಕಳಿಗೆ ತಂದೆ ಬಂದು ಪರಿಚಯವನ್ನು ಕೊಟ್ಟಿದ್ದಾರೆ ನಾನು ಒಂದೇ ಬಾರಿ ಪುರುಷೋತ್ತಮ ಸಂಗಮಯುಗದಲ್ಲಿ ಬರುತ್ತೇನೆ. ನಾನು ಯುಗ-ಯುಗದಲ್ಲಿ ಬರುವುದೇ ಇಲ್ಲ. ಕಲ್ಪದ ಸಂಗಮಯುಗದಲ್ಲಿ ಬರುತ್ತೇನೆ, ಯುಗ-ಯುಗದಲ್ಲಿ ಬರುವುದಿಲ್ಲ. ಕಲ್ಪದ ಸಂಗಮದಲ್ಲಿ ಏಕೆ ಬರುತ್ತೇನೆ? ಏಕೆಂದರೆ ನರಕವನ್ನು ಸ್ವರ್ಗ ಮಾಡುತ್ತೇನೆ. ಪ್ರತಿ 5 ಸಾವಿರ ವರ್ಷದ ನಂತರ ಬರುತ್ತೇನೆ. ಕೆಲ ಮಕ್ಕಳು ಬರೆಯುತ್ತಾರೆ - ಬಾಬಾ, ನಮಗೆ ಖುಷಿಯಿರುವುದಿಲ್ಲ, ಉಲ್ಲಾಸ ಇರುವುದಿಲ್ಲ. ಅರೇ! ತಂದೆಯು ನಿಮ್ಮನ್ನು ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆ, ಇಂತಹ ತಂದೆಯನ್ನು ನೆನಪು ಮಾಡಿ ನಿಮಗೆ ಖುಷಿಯಿರುವುದಿಲ್ಲವೇ! ನೀವು ಪೂರ್ಣ ನೆನಪು ಮಾಡುವುದಿಲ್ಲ ಅದಕ್ಕೆ ಖುಷಿಯು ಇರುವುದಿಲ್ಲ. ಪತಿಯನ್ನು ನೆನಪು ಮಾಡುತ್ತಾ ಖುಷಿಯಾಗಿರುತ್ತೀರಿ, ಯಾರು ನಿಮ್ಮನ್ನು ಪತಿತರನ್ನಾಗಿ ಮಾಡುತ್ತಾರೆ ಮತ್ತು ಯಾವ ತಂದೆಯು ಡಬಲ್ ಕಿರೀಟಧಾರಿಯನ್ನಾಗಿ ಮಾಡುತ್ತಾರೆ, ಅವರನ್ನು ನೆನಪು ಮಾಡಿ ಖುಷಿಯಿರುವುದಿಲ್ಲ. ತಂದೆಯ ಮಕ್ಕಳಾಗಿದ್ದೀರಿ ಆದರೂ ಹೇಳುತ್ತೀರಿ ಖುಷಿಯಿಲ್ಲವೆಂದು. ಪೂರ್ಣ ಜ್ಞಾನ ಬುದ್ಧಿಯಲ್ಲಿ ಇಲ್ಲ. ನೆನಪು ಮಾಡುವುದಿಲ್ಲ ಅದಕ್ಕೆ ಮಾಯೆ ಮೊಸ ಮಾಡುತ್ತದೆ. ಮಕ್ಕಳಿಗೆ ಎಷ್ಟು ಚೆನ್ನಾಗಿ ತಿಳಿಸಿ ಕೊಡುತ್ತಾರೆ. ಕಲ್ಪ-ಕಲ್ಪ ತಿಳಿಸುತ್ತಾರೆ. ಆತ್ಮರು ಯಾರು ಕಲ್ಲುಬುದ್ಧಿಯವರಾಗಿದ್ದಾರೆ, ಅವರನ್ನು ಪಾರಸಬುದ್ಧಿಯನ್ನಾಗಿ ಮಾಡುತ್ತೇನೆ. ಜ್ಞಾನಪೂರ್ಣ ತಂದೆಯೇ ಬಂದು ಜ್ಞಾನವನ್ನು ಕೊಡುತ್ತಾರೆ. ಅವರು ಪ್ರತಿಯೊಂದು ಮಾತಿನಲ್ಲಿ ಪೂರ್ಣ(ಫುಲ್)ರಾಗಿದ್ದಾರೆ. ಪವಿತ್ರತೆಯಲ್ಲಿ ಫುಲ್, ಪ್ರೀತಿಯಲ್ಲಿ ಫುಲ್. ಜ್ಞಾನ ಸಾಗರ, ಸುಖದ ಸಾಗರ, ಪ್ರೀತಿಯ ಸಾಗರರಾಗಿದ್ದಾರಲ್ಲವೇ. ಇಂತಹ ತಂದೆಯಿಂದ ನಿಮ್ಮ ಈ ಆಸ್ತಿ ಸಿಗುತ್ತದೆ. ಈ ರೀತಿ ಆಗಲು ನೀವು ಬರುತ್ತೀರಿ. ಬಾಕಿ ಆ ಸತ್ಸಂಗ ಇತ್ಯಾದಿಗಳೆಲ್ಲವೂ ಭಕ್ತಿ ಮಾರ್ಗ ಆಗಿದೆ. ಅವರಲ್ಲಿ ಗುರಿ ಉದ್ದೇಶ ಏನು ಇರುವುದಿಲ್ಲ. ಇದನ್ನು ಗೀತಾ ಪಾಠಶಾಲೆ ಎಂದು ಹೇಳಲಾಗುತ್ತದೆ, ವೇದ ಪಾಠಶಾಲೆಯಲ್ಲ. ಗೀತೆಯಿಂದ ನರನಿಮ್ದ ನಾರಾಯಣರಾಗುತ್ತೀರಿ. ಅವಶ್ಯವಾಗಿ ತಂದೆಯೇ ಮಾಡುತ್ತಾರಲ್ಲವೇ. ಮನುಷ್ಯ, ಮನುಷ್ಯನನ್ನು ದೇವತೆಯನ್ನಾಗಿ ಮಾಡಲು ಸಾಧ್ಯವಿಲ್ಲ. ತಂದೆ ಪದೇ-ಪದೇ ಮಕ್ಕಳಿಗೆ ತಿಳಿಸುತ್ತಾರೆ – ಮಕ್ಕಳೇ, ತಮ್ಮನ್ನು ಆತ್ಮವೆಂದು ತಿಳಿದುಕೊಳ್ಳಿ. ನೀವು ಯಾವುದೇ ದೇಹವಲ್ಲ. ಆತ್ಮ ಹೇಳುತ್ತದೆ ನಾನು ಒಂದು ದೇಹವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳುತ್ತೇನೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳ ಪ್ರತಿ ಮಾತಾಪಿತ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ಸುಪ್ರಭಾತ, ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಹೇಗೆ ಶಿವಬಾಬಾರದು ಯಾವುದೇ ತೋರ್ಪಡಿಸುವಿಕೆ ಇಲ್ಲ. ಸೇವಕರಾಗಿ ಮಕ್ಕಳಿಗೆ ಓದಿಸಲು ಬಂದಿದ್ದಾರೆ, ಹಾಗೆ ಅಥೋರಿಟಿ ಇದ್ದರೂ ಸಹ ನಿರಹಂಕಾರಿಯಾಗಿರಬೇಕು. ಪಾವನರಾಗಿ ಪಾವನ ಮಾಡುವ ಸೇವೆಯನ್ನು ಮಾಡಬೇಕಾಗಿದೆ.

2. ವಿನಾಶ ಕಾಲದ ಸಮಯ ಈಶ್ವರೀಯ ಲಾಟರಿ ತೆಗೆದುಕೊಳ್ಳಲು ಪ್ರೀತಿ ಬುದ್ಧಿಯವರಾಗಿ ನೆನಪಿನಲ್ಲಿ ಇರುವ ಅಥವಾ ದೈವಿ ಗುಣಗಳನ್ನು ಧಾರಣೆ ಮಾಡುವ ರೇಸ್ ಮಾಡಬೇಕಾಗಿದೆ.

ವರದಾನ:
ಶುದ್ಧ ಸಂಕಲ್ಪಗಳ ಮುತ್ತಿಗೆಯ ಮೂಲಕ ಸುರಕ್ಷಿತತೆಯ ಅನುಭವ ಮಾಡುವಂತಹ ಮತ್ತು ಮಾಡಿಸುವಂತಹ ಶಕ್ತಿಶಾಲಿ ಆತ್ಮ ಭವ.

ಶಕ್ತಿಶಾಲಿ ಆತ್ಮ ಯಾರೆಂದರೆ ಯಾರು ಧೃಡತೆಯ ಶಕ್ತಿಯ ಮುಖಾಂತರ ಸೆಕೆಂಡ್ಗಿಂತಲೂ ಕಡಿಮೆ ಸಮಯದಲ್ಲಿ ವ್ಯರ್ಥವನ್ನು ಸಮಾಪ್ತಿ ಮಾಡುವಂತಹವರು. ಶುದ್ಧ ಸಂಕಲ್ಪದ ಶಕ್ತಿಯನ್ನು ಗುರುತಿಸಿ, ಒಂದು ಶುದ್ಧ ಹಾಗೂ ಶಕ್ತಿಶಾಲಿ ಸಂಕಲ್ಪ ಬಹಳ ಕಮಾಲ್ ಮಾಡಿಸುತ್ತದೆ. ಕೇವಲ ಯವುದೇ ಧೃಡಸಂಕಲ್ಪ ಮಾಡಿ ಆಗ ಧೃಡತೆ ಸಫಲತೆಯನ್ನು ತರುತ್ತದೆ. ಎಲ್ಲರಿಗಾಗಿ ಶುದ್ಧಸಂಕಲ್ಪಗಳ ಬಂಧನ, ಮುತ್ತಿಗೆ ಈ ರೀತಿ ಬಂಧಿಸಿ ಇದರಿಂದ ಯಾರಾದರೂ ಸ್ವಲ್ಪ ಬಲಹೀನರಾಗಿದ್ದರೂ ಸಹ, ಅವರಿಗೂ ಸಹ ಈ ಮುತ್ತಿಗೆ ಒಂದು ಛತ್ರಛಾಯೆಯಾಗಿಬಿಡುತ್ತದೆ, ಸುರಕ್ಷಿತತೆಯ ಸಾಧನ ಅಥವಾ ಕೋಟೆಯಾಗಿಬಿಡುತ್ತದೆ.

ಸ್ಲೋಗನ್:
ಎಲ್ಲಕ್ಕಿಂತಲೂ ಶ್ರೇಷ್ಠ ಭಾಗ್ಯ ಇವರದೇ ಆಗಿದೆ ಯಾರಿಗೆ ಭಗವಂತನಿಂದ ನೇರ ಪಾಲನೆ, ವಿದ್ಯೆ ಮತ್ತು ಶ್ರೇಷ್ಠ ಜೀವನಕ್ಕೆ ಶ್ರೀಮತ ಸಿಗುತ್ತದೆ.