25.10.24         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ತಂದೆಯ ಒಂದೇ ಒಂದು ದೃಷ್ಟಿಯು ಸಿಗುವುದರಿಂದ ಇಡೀ ವಿಶ್ವದ ಮನುಷ್ಯ ಮಾತ್ರರೆಲ್ಲರೂ ಸಂತುಷ್ಟರಾಗಿಬಿಡುತ್ತಾರೆ ಆದ್ದರಿಂದ ದೃಷ್ಟಿಯಿಂದ ಸಂತುಷ್ಟರಾಗುವುದು ಎಂದು ಕರೆಯಲಾಗುತ್ತದೆ”

ಪ್ರಶ್ನೆ:
ನೀವು ಮಕ್ಕಳ ಹೃದಯದಲ್ಲಿ ಖುಷಿಯ ವಾದ್ಯಗಳು ಮೊಳಗಬೇಕು - ಏಕೆ?

ಉತ್ತರ:
ಏಕೆಂದರೆ ಎಲ್ಲರನ್ನೂ ಜೊತೆಯಲ್ಲಿ ಕರೆದುಕೊಂಡು ಹೋಗಲು ತಂದೆಯು ಬಂದಿದ್ದಾರೆ ಎಂಬುದನ್ನು ನೀವು ತಿಳಿದಿದ್ದೀರಿ. ಈಗ ನಾವು ನಮ್ಮ ತಂದೆಯ ಜೊತೆ ಹಿಂತಿರುಗಿ ಮನೆಗೆ ಹೋಗುತ್ತೇವೆ. ಹಾಹಾಕಾರದ ನಂತರ ಜಯಜಯಕಾರವಾಗುತ್ತದೆ. ತಂದೆಯ ಒಂದು ದೃಷ್ಟಿಯಿಂದ ಇಡೀ ವಿಶ್ವಕ್ಕೆ ಮುಕ್ತಿ-ಜೀವನ್ಮುಕ್ತಿಯ ಆಸ್ತಿ ಸಿಗುವುದಿದೆ. ಇಡೀ ವಿಶ್ವವು ಸಂಪನ್ನವಾಗಿಬಿಡುತ್ತದೆ.

ಓಂ ಶಾಂತಿ.
ಆತ್ಮಿಕ ಶಿವತಂದೆ ಕುಳಿತು ತನ್ನ ಆತ್ಮೀಯ ಮಕ್ಕಳಿಗೆ ತಿಳಿಸಿಕೊಡುತ್ತಾರೆ - ಮೂರನೆಯ ನೇತ್ರವೂ ಸಹ ಇರುತ್ತದೆ ಎಂಬುದು ತಿಳಿದಿದೆ. ಇಡೀ ವಿಶ್ವದ ಯಾರೆಲ್ಲಾ ಆತ್ಮರಿದ್ದಾರೆಯೋ ಎಲ್ಲರಿಗೂ ನಾನು ಆಸ್ತಿಯನ್ನು ನೀಡಲು ಬಂದಿದ್ದೇನೆ ಎಂಬುದನ್ನು ತಂದೆಯು ತಿಳಿದಿದ್ದಾರೆ. ಲೌಕಿಕ ತಂದೆಯ ಮನಸ್ಸಿನಲ್ಲಿಯೂ ನಾನು ಮಕ್ಕಳಿಗೆ ಆಸ್ತಿಯನ್ನು ಕೊಡುತ್ತೇನೆಂದು ನೆನಪಿರುತ್ತದೆ. ಮಕ್ಕಳಿಲ್ಲವೆಂದರೆ ಆಸ್ತಿಯನ್ನು ಯಾರಿಗೆ ಕೊಡುವುದೆಂದು ತಬ್ಬಿಬ್ಬಾಗುತ್ತಾರೆ ನಂತರ ದತ್ತು ಮಾಡಿಕೊಳ್ಳುತ್ತಾರೆ. ಇಲ್ಲಿ ತಂದೆಯು ಕುಳಿತಿದ್ದಾರೆ, ಇವರಿಗೆ ಇಡೀ ಜಗತ್ತಿನ ಯಾರೆಲ್ಲಾ ಆತ್ಮಗಳಿದ್ದಾರೆಯೋ ಅವರೆಲ್ಲರ ಕಡೆಯೂ ದೃಷ್ಟಿಹರಿಯುತ್ತದೆ. ಇವರೆಲ್ಲರಿಗೂ ನಾನೇ ಆಸ್ತಿಯನ್ನು ಕೊಡುತ್ತೇನೆ ಎಂಬುದು ತಿಳಿದಿದೆ. ಭಲೆ ಇಲ್ಲಿಯೇ ಕುಳಿತಿದ್ದರೂ ದೃಷ್ಟಿಯು ಇಡೀ ವಿಶ್ವದ ಮೇಲೆ ಮತ್ತು ಇಡೀ ವಿಶ್ವದ ಮನುಷ್ಯ ಮಾತ್ರರ ಮೇಲಿರುತ್ತದೆ ಏಕೆಂದರೆ ಇಡೀ ವಿಶ್ವವನ್ನು ಸಂಪನ್ನ ಮಾಡಬೇಕಾಗಿದೆ. ಇದು ಪುರುಷೋತ್ತಮ ಸಂಗಮಯುಗವಾಗಿದೆ ಎಂದು ತಂದೆಯು ತಿಳಿಸುತ್ತಾರೆ. ತಂದೆಯು ಎಲ್ಲರನ್ನೂ ಶಾಂತಿಧಾಮ, ಸುಖಧಾಮದಲ್ಲಿ ಕರೆದುಕೊಂಡು ಹೋಗಲು ಬಂದಿದ್ದಾರೆ ಎಂಬುದನ್ನು ನೀವು ಮಕ್ಕಳು ತಿಳಿದಿದ್ದೀರಿ. ಎಲ್ಲರೂ ಸಂಪನ್ನರಾಗುವವರಿದ್ದಾರೆ. ಡ್ರಾಮಾದ ಪ್ಲಾನನುಸಾರ ಕಲ್ಪ-ಕಲ್ಪವೂ ಮುಕ್ತರಾಗುತ್ತಾರೆ. ತಂದೆಯು ಎಲ್ಲಾ ಮಕ್ಕಳನ್ನೂ ನೆನಪು ಮಾಡುತ್ತಾರೆ. ದೃಷ್ಟಿಯಂತೂ ಹರಿಯುತ್ತದೆಯಲ್ಲವೆ! ಎಲ್ಲರೂ ಓದುವುದಿಲ್ಲ, ಡ್ರಾಮಾ ಪ್ಲಾನನುಸಾರ ಎಲ್ಲರೂ ಮರಳಿ ಹೋಗಬೇಕಾಗಿದೆ ಏಕೆಂದರೆ ನಾಟಕ ಪೂರ್ಣವಾಗುತ್ತಾ ಇದೆ. ಸ್ವಲ್ಪ ಮುಂದೆ ಹೋದಾಗ ಈಗ ವಿನಾಶವಾಗುತ್ತಿದೆ ಎಂದು ತಮಗೂ ತಿಳಿಯುತ್ತದೆ. ಈಗ ಹೊಸ ಪ್ರಪಂಚದ ಸ್ಥಾಪನೆಯಾಗಲಿದೆ ಏಕೆಂದರೆ ಆತ್ಮವು ಚೈತನ್ಯವಾಗಿದೆಯಲ್ಲವೆ. ತಂದೆಯು ಬಂದಿದ್ದಾರೆ ಎಂಬುದು ಬುದ್ಧಿಯಲ್ಲಿ ಬರುತ್ತದೆ. ಪ್ಯಾರಡೈಸ್ (ಸ್ವರ್ಗ) ಸ್ಥಾಪನೆಯಾಗುತ್ತದೆ ಮತ್ತು ನಾವು ಶಾಂತಿಧಾಮದಲ್ಲಿ ಹೊರಟುಹೋಗುತ್ತೇವೆ. ಎಲ್ಲರೂ ಮುಕ್ತಿಯಲ್ಲಿ ಹೋಗುತ್ತಾರೆ, ನಿಮ್ಮದು ಸದ್ಗತಿ (ಜೀವನ್ಮುಕ್ತಿ) ಆಗುತ್ತದೆ. ಈಗ ತಂದೆಯು ಬಂದಿದ್ದಾರೆ, ನಾವು ಸ್ವರ್ಗದಲ್ಲಿ ಹೋಗುತ್ತೇವೆ, ಜಯಜಯಕಾರವಾಗುವುದು. ಈಗಂತೂ ಬಹಳ ಹಾಹಾಕಾರವಿದೆ. ಕೆಲವೊಂದೆಡೆ ಬರಗಾಲವುಂಟಾಗುತ್ತಿದೆ, ಕೆಲವೊಂದೆಡೆ ಯುದ್ಧಗಳು ನಡೆಯುತ್ತಿದೆ, ಇನ್ನೂ ಕೆಲವೆಡೆ ಭೂಕಂಪಗಳಾಗುತ್ತವೆ. ಸಾವಿರಾರು ಮಂದಿ ಸಾವನ್ನಪ್ಪುತ್ತಾರೆ, ಮೃತ್ಯುವಂತೂ ಆಗಲೇಬೇಕಾಗಿದೆ. ಸತ್ಯಯುಗದಲ್ಲಿ ಈ ಮಾತುಗಳಿರುವುದಿಲ್ಲ. ತಂದೆಗೆ ಗೊತ್ತಿದೆ, ಈಗ ನಾನು ಹಿಂತಿರುಗಿ ಹೋಗುತ್ತೇನೆ ನಂತರ ಇಡೀ ವಿಶ್ವದಲ್ಲಿ ಜಯಜಯಕಾರವಾಗುತ್ತದೆ. ನಾನು ಭಾರತದಲ್ಲಿಯೇ ಬರುತ್ತೇನೆ, ಇಡೀ ವಿಶ್ವದ ಲೆಕ್ಕದಲ್ಲಿ ಭಾರತವು ಗ್ರಾಮವಾಗಿದೆ. ತಂದೆಗಾಗಿ ಇದು ಸ್ವಂತಗ್ರಾಮವಾಗಿದೆ. ಇಲ್ಲಿ ಬಹಳ ಕಡಿಮೆ ಜನಸಂಖ್ಯೆಯಿರುತ್ತದೆ, ಸತ್ಯಯುಗದಲ್ಲಿ ಇಡೀ ವಿಶ್ವವು ಒಂದು ಚಿಕ್ಕಹಳ್ಳಿಯಂತಿತ್ತು. ಈಗಂತೂ ಎಷ್ಟೊಂದು ವೃದ್ಧಿಯಾಗಿಬಿಟ್ಟಿದೆ. ತಂದೆಯ ಬುದ್ಧಿಯಲ್ಲಿ ಎಲ್ಲವೂ ಇದೆಯಲ್ಲವೆ! ಈಗ ಈ ಶರೀರದ ಮೂಲಕ ಮಕ್ಕಳಿಗೆ ತಿಳಿಸಿಕೊಡುತ್ತಿದ್ದಾರೆ, ಕಲ್ಪ-ಕಲ್ಪವೂ ಯಾವ ಪುರುಷಾರ್ಥವು ನಡೆದಿತ್ತೋ ಈಗಲೂ ನಿಮ್ಮದು ಅದೇ ಪುರುಷಾರ್ಥವು ನಡೆಯುತ್ತದೆ. ತಂದೆಯೂ ಸಹ ಕಲ್ಪವೃಕ್ಷದ ಬೀಜರೂಪನಾಗಿದ್ದಾರೆ. ಇದು ಸಾಕಾರಿ ವೃಕ್ಷವಾಗಿದೆ, ಮೇಲೆ (ಪರಮಧಾಮ) ನಿರಾಕಾರಿ ವೃಕ್ಷವಿದೆ. ಇದು ಹೇಗೆ ಮಾಡಲ್ಪಟ್ಟಿದೆ ಎಂಬುದನ್ನು ತಿಳಿದುಕೊಂಡಿದ್ದೀರಿ. ಈ ತಿಳುವಳಿಕೆಯು ಮತ್ತ್ಯಾವ ಮನುಷ್ಯರಲ್ಲಿಯೂ ಇಲ್ಲ. ಬುದ್ಧಿವಂತ ಮತ್ತು ಬುದ್ಧಿಹೀನರ ಅಂತರವನ್ನು ನೋಡಿ! ಬುದ್ಧಿವಂತರು ಸ್ವರ್ಗದಲ್ಲಿ ರಾಜ್ಯ ಮಾಡುತ್ತಿದ್ದರು, ಅದಕ್ಕೆ ಸತ್ಯಖಂಡ, ಸ್ವರ್ಗವೆಂದು ಹೇಳಲಾಗುತ್ತದೆ.

ಈಗ ನೀವು ಮಕ್ಕಳಲ್ಲಿ ಬಹಳ ಖುಷಿಯಿರಬೇಕು. ತಂದೆಯು ಬಂದಿದ್ದಾರೆ, ಈ ಹಳೆಯ ಪ್ರಪಂಚವಂತೂ ಅವಶ್ಯವಾಗಿ ಬದಲಾಗುವುದು. ಎಷ್ಟೆಷ್ಟು ನೀವು ಪುರುಷಾರ್ಥ ಮಾಡುವಿರೋ ಅಷ್ಟು ಪದವಿಯನ್ನು ಪಡೆಯುತ್ತೀರಿ. ತಂದೆಯಂತೂ ಓದಿಸುತ್ತಿದ್ದಾರೆ, ಈ ನಿಮ್ಮ ಶಾಲೆಯು ಬಹಳ ವೃದ್ಧಿ ಹೊಂದುತ್ತಾ ಇರುವುದು. ಅನೇಕರು ಬಂದುಬಿಡುವರು. ಎಲ್ಲರ ಶಾಲೆಯು ಒಟ್ಟಿಗೆ ಇರುವುದಿಲ್ಲ, ಹಾಗಿದ್ದರೆ ಇಷ್ಟೊಂದು ಮಂದಿ ಎಲ್ಲಿರುವುದು ಆದ್ದರಿಂದ ನಿಧಾನ-ನಿಧಾನವಾಗಿ ವೃದ್ಧಿಯಾಗುತ್ತದೆ. ಈಗ ನಾವು ಸುಖಧಾಮಕ್ಕೆ ಹೋಗುತ್ತೇವೆಂದು ನೀವು ಮಕ್ಕಳಿಗೆ ನೆನಪಿದೆ. ಹೇಗೆ ಯಾರಾದರೂ ವಿದೇಶಕ್ಕೆ ಹೋಗುತ್ತಾರೆಂದರೆ 8-10 ವರ್ಷಗಳ ಕಾಲ ಹೋಗಿ ಇರುತ್ತಾರಲ್ಲವೆ ಮತ್ತೆ ಭಾರತಕ್ಕೆ ಬರುತ್ತಾರೆ. ಭಾರತವಂತೂ ಬಡದೇಶವಾಗಿದೆ. ವಿದೇಶಿಯರಿಗೆ ಇಲ್ಲಿ ಸುಖವೆನಿಸುವುದಿಲ್ಲ ಹಾಗೆಯೇ ನೀವು ಮಕ್ಕಳಿಗೂ ಸಹ ಇಲ್ಲಿ ಸುಖವಿಲ್ಲ. ನಿಮಗೆ ತಿಳಿದಿದೆ, ನಾವು ಬಹಳ ಶ್ರೇಷ್ಠ ವಿದ್ಯೆಯನ್ನು ಓದುತ್ತಿದ್ದೇವೆ. ಇದರಿಂದ ನಾವು ಸ್ವರ್ಗದ ಮಾಲೀಕರು, ದೇವತೆಗಳಾಗುತ್ತೇವೆ. ಅಲ್ಲಿ ಎಷ್ಟೊಂದು ಸುಖಿಯಾಗಿರುತ್ತೀರಿ, ಆ ಸುಖವನ್ನು ಎಲ್ಲರೂ ನೆನಪು ಮಾಡುತ್ತಾರೆ. ಈ ಹಳ್ಳಿ (ಕಲಿಯುಗ) ಯಂತೂ ನೆನಪಿಗೂ ಬರಲು ಸಾಧ್ಯವಿಲ್ಲ ಏಕೆಂದರೆ ಇಲ್ಲಿ ಅಪಾರ ದುಃಖವಿದೆ. ಈ ರಾವಣರಾಜ್ಯ ಪತಿತ ಪ್ರಪಂಚದಲ್ಲಿ ಇಂದು ಅಪರಂಪಾರ ದುಃಖವಿದೆ, ನಾಳೆ ಅಪರಮಪಾರ ಸುಖವಿರುತ್ತದೆ. ನಾವು ಯೋಗಬಲದಿಂದ ಅಪಾರ ಸುಖದ ಪ್ರಪಂಚವನ್ನು ಸ್ಥಾಪನೆ ಮಾಡುತ್ತಿದ್ದೇವೆ. ಇದು ರಾಜಯೋಗವಾಗಿದೆಯಲ್ಲವೆ! ಸ್ವಯಂ ತಂದೆಯೇ ತಿಳಿಸುತ್ತಾರೆ - ನಾನು ನಿಮ್ಮನ್ನು ರಾಜಾಧಿರಾಜರನ್ನಾಗಿ ಮಾಡುತ್ತೇನೆ ಅಂದಮೇಲೆ ಆ ರೀತಿ ಮಾಡುವಂತಹ ಶಿಕ್ಷಕರನ್ನು ನೆನಪು ಮಾಡಬೇಕಲ್ಲವೆ! ಶಿಕ್ಷಕರಿಲ್ಲದೆ ವಕೀಲರು, ಇಂಜಿನಿಯರ್ ಮುಂತಾದ ಪದವಿಗಳನ್ನು ಪಡೆಯಲು ಸಾಧ್ಯವೆ! ಇಲ್ಲಂತೂ ಇದು ಹೊಸಮಾತಾಗಿದೆ. ಆತ್ಮಗಳು ಪರಮಪಿತ ಪರಮಾತ್ಮನ ಜೊತೆ ಯೋಗವನ್ನು ಇಡಬೇಕಾಗಿದೆ, ಇವರಿಂದಲೇ ಬಹಳ ಸಮಯ ಅಗಲಿದ್ದೀರಿ. ಬಹುಕಾಲವೆಂದರೇನು? ಅದನ್ನೂ ಸಹ ತಂದೆಯು ತಾವಾಗಿಯೇ ತಿಳಿಸುತ್ತಿರುತ್ತಾರೆ. ಮನುಷ್ಯರಂತೂ ಲಕ್ಷಾಂತರ ವರ್ಷಗಳ ಆಯಸ್ಸೆಂದು ಹೇಳುತ್ತಾರೆ ಆದರೆ ತಂದೆಯು ತಿಳಿಸುತ್ತಾರೆ - ಇಲ್ಲ, ಇದಂತೂ ಪ್ರತೀ 5000 ವರ್ಷಗಳ ನಂತರ ನೀವು ಮೊಟ್ಟಮೊದಲು ಯಾರು ಅಗಲಿದ್ದೀರೋ ಅವರೇ ಬಂದು ತಂದೆಯೊಂದಿಗೆ ಮಿಲನ ಮಾಡುತ್ತೀರಿ, ನೀವೇ ಪುರುಷಾರ್ಥ ಮಾಡಬೇಕಾಗಿದೆ. ಮಧುರಾತಿ ಮಧುರ ಮಕ್ಕಳಿಗೆ ಯಾವುದೇ ಕಷ್ಟವನ್ನು ಕೊಡುವುದಿಲ್ಲ. ಕೇವಲ ತಿಳಿಸುತ್ತಾರೆ - ತಮ್ಮನ್ನು ಆತ್ಮನೆಂದು ತಿಳಿಯಿರಿ, ಜೀವಾತ್ಮರಲ್ಲವೆ. ಆತ್ಮವು ಅವಿನಾಶಿ, ಜೀವ ವಿನಾಶಿಯಾಗಿದೆ. ಆತ್ಮವು ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳುತ್ತದೆ. ಆತ್ಮವೆಂದೂ ಹಳೆಯದಾಗುವುದಿಲ್ಲ, ಆಶ್ಚರ್ಯವಲ್ಲವೆ. ಓದಿಸುವವರೂ ವಿಚಿತ್ರ, ವಿದ್ಯೆಯೂ ವಿಚಿತ್ರವಾಗಿದೆ. ಇದು ಯಾರಿಗೂ ನೆನಪಿಲ್ಲ ಮರೆತು ಹೋಗುತ್ತದೆ. ಹಿಂದಿನ ಜನ್ಮದಲ್ಲಿ ಏನು ಓದುತ್ತಿದ್ದೆವು ಎಂದು ಯಾರಿಗಾದರೂ ನೆನಪಿದೆಯೇ? ಈ ಜನ್ಮದಲ್ಲಿ ನೀವು ಇದರ ಫಲಿತಾಂಶವು ಹೊಸ ಪ್ರಪಂಚದಲ್ಲಿ ಸಿಗುತ್ತದೆ. ಇದು ಕೇವಲ ನೀವು ಮಕ್ಕಳಿಗೆ ತಿಳಿದಿದೆ. ಈಗ ಇದು ಪುರುಷೋತ್ತಮ ಸಂಗಮಯುಗವಾಗಿದೆ, ನಾವು ಹೊಸ ಪ್ರಪಂಚದಲ್ಲಿ ಹೋಗುವವರಿದ್ದೇವೆಂದು ನೆನಪಿರಬೇಕು. ಈ ನೆನಪಿದ್ದರೂ ಸಹ ನಿಮಗೆ ತಂದೆಯ ನೆನಪಿರುವುದು. ನೆನಪು ಮಾಡುವುದಕ್ಕಾಗಿಯೇ ತಂದೆಯು ಅನೇಕ ಉಪಾಯಗಳನ್ನು ತಿಳಿಸುತ್ತಾರೆ. ಇವರು ತಂದೆಯೂ ಆಗಿದ್ದಾರೆ, ಶಿಕ್ಷಕರೂ ಆಗಿದ್ದಾರೆ, ಸದ್ಗುರುವೂ ಆಗಿದ್ದಾರೆ. ಮೂರೂ ರೂಪಗಳಲ್ಲಿಯೂ ನೆನಪು ಮಾಡಿ. ನೆನಪು ಮಾಡಲು ಎಷ್ಟೊಂದು ಯುಕ್ತಿಗಳನ್ನು ತಿಳಿಸುತ್ತಾರೆ ಆದರೆ ಮಾಯೆಯು ಮರೆಸಿಬಿಡುತ್ತದೆ. ತಂದೆಯು ಹೊಸ ಪ್ರಪಂಚವನ್ನು ಸ್ಥಾಪನೆ ಮಾಡುತ್ತಾರೆ. ತಂದೆಯೇ ತಿಳಿಸಿದ್ದಾರೆ - ಇದು ಪುರುಷೋತ್ತಮ ಸಂಗಮಯುಗವಾಗಿದೆ, ಇದನ್ನು ನೆನಪು ಮಾಡಿ ಆದರೂ ಸಹ ನೆನಪೇಕೆ ಮಾಡುವುದಿಲ್ಲ! ನೆನಪಿನ ಯುಕ್ತಿಗಳನ್ನು ತಿಳಿಸುತ್ತಾರೆ ಮತ್ತೆ ಜೊತೆಜೊತೆಗೆ ಇದನ್ನೂ ಹೇಳುತ್ತಾರೆ - ಮಾಯೆಯು ಬಹಳ ಶಕ್ತಿಶಾಲಿಯಾಗಿದೆ, ಪದೇ-ಪದೇ ನಿಮಗೆ ಮರೆಸಿಬಿಡುತ್ತದೆ ಮತ್ತು ದೇಹಾಭಿಮಾನಿಗಳನ್ನಾಗಿ ಮಾಡಿಬಿಡುತ್ತದೆ ಆದ್ದರಿಂದ ಎಷ್ಟು ಸಾಧ್ಯವೋ ಅಷ್ಟು ನೆನಪು ಮಾಡುತ್ತಾ ಇರಿ. ಏಳುತ್ತಾ-ಕುಳಿತುಕೊಳ್ಳುತ್ತಾ, ನಡೆಯುತ್ತಾ-ತಿರುಗಾಡುತ್ತಾ ದೇಹಕ್ಕೆ ಬದಲಾಗಿ ನಿಮ್ಮನ್ನು ದೇಹೀ ಎಂದು ತಿಳಿಯಿರಿ. ಇದರಲ್ಲಿ ಪರಿಶ್ರಮವಿದೆ. ಜ್ಞಾನವು ಬಹಳ ಸಹಜ, ಎಲ್ಲಾ ಮಕ್ಕಳು ಹೇಳುತ್ತಾರೆ - ನೆನಪು ಸ್ಥಿರವಾಗಿರುವುದಿಲ್ಲ. ನೀವು ತಂದೆಯನ್ನು ನೆನಪು ಮಾಡುತ್ತೀರಿ ಮತ್ತೆ ಮಾಯೆಯು ತನ್ನಕಡೆ ಸೆಳೆಯುತ್ತದೆ. ಇದರ ಮೇಲೆಯೇ ಈ ಆಟವು ಮಾಡಲ್ಪಟ್ಟಿದೆ. ನೀವೂ ಸಹ ತಿಳಿಯುತ್ತೀರಿ - ನಮ್ಮ ಬುದ್ಧಿಯೋಗವು ಯಾವ ತಂದೆಯ ಮತ್ತು ವಿದ್ಯೆಯ ಸಬ್ಜೆಕ್ಟ್ನಲ್ಲಿರಬೇಕೋ ಅದು ಇರುವುದಿಲ್ಲ ಮರೆತುಹೋಗುತ್ತೇವೆ ಆದರೆ ನೀವಿದನ್ನು ಮರೆಯಬಾರದು. ವಾಸ್ತವದಲ್ಲಿ ಈ ಚಿತ್ರಗಳ ಅವಶ್ಯಕತೆಯೂ ಇಲ್ಲ ಆದರೆ ಓದಿಸುವ ಸಮಯದಲ್ಲಿ ಮುಂದೆ ಏನಾದರೂ ಬೇಕಲ್ಲವೆ! ಎಷ್ಟೊಂದು ಚಿತ್ರಗಳಾಗುತ್ತಿರುತ್ತವೆ, ಪಾಂಡವಸರ್ಕಾರದ ಯುಕ್ತಿ ನೋಡಿ ಹೇಗಿದೆ! ಆ ಸರ್ಕಾರದ ಯುಕ್ತಿಗಳೂ ಇವೆ, ನೀವು ತಿಳಿದುಕೊಂಡಿದ್ದೀರಿ – ಹೊಸ ಪ್ರಪಂಚದಲ್ಲಿ ಕೇವಲ ಭಾರತವೇ ಇತ್ತು, ಬಹಳ ಚಿಕ್ಕದಾಗಿತ್ತು, ಇಡೀ ಭಾರತವು ವಿಶ್ವದ ಮಾಲೀಕನಾಗಿತ್ತು, ಎಲ್ಲವೂ ಹೊಸದಾಗಿರುತ್ತದೆ. ಪ್ರಪಂಚವು ಒಂದೇ, ಪಾತ್ರಧಾರಿಗಳೂ ಅವರೇ ಕೇವಲ ಚಕ್ರವು ಸುತ್ತುತ್ತಾ ಹೋಗುತ್ತದೆ. ನೀವು ಎಣಿಕೆ ಮಾಡುತ್ತೀರಿ - ಎಷ್ಟು ಸೆಕೆಂಡ್, ಎಷ್ಟು ಗಂಟೆಗಳು, ದಿನ, ವರ್ಷಗಳು ಪೂರ್ಣವಾಗಿ ಮತ್ತೆ ಚಕ್ರವು ಸುತ್ತುತ್ತಾ ಇರುತ್ತದೆ. ಇಂದು-ನಾಳೆ ಎನ್ನುತ್ತಾ -ಎನ್ನುತ್ತಾ 5000 ವರ್ಷಗಳು ಕಳೆದುಹೋಗಿವೆ. ಎಲ್ಲಾ ದೃಶ್ಯಗಳು ಆಟ-ಪಾಠಗಳು ಆಗುತ್ತಾ ಬರುತ್ತವೆ. ಎಷ್ಟು ದೊಡ್ಡ ಬೇಹದ್ದಿನ ವೃಕ್ಷವಾಗಿದೆ, ವೃಕ್ಷದ ಎಲೆಗಳನ್ನು ಎಣಿಸಲಾಗುವುದಿಲ್ಲ. ಇದು ವೃಕ್ಷವಾಗಿದೆ, ಇದರ ತಳಹದಿಯು ದೇವಿ-ದೇವತಾ ಧರ್ಮವಾಗಿದೆ. ಇದರಿಂದ ಮತ್ತೆ ಮುಖ್ಯವಾಗಿ ಮೂರು ಶಾಖೆಗಳು (ಧರ್ಮ) ಹೊರಬಂದಿವೆ ಬಾಕಿ ವೃಕ್ಷದ ಎಲೆಗಳಂತೂ ಬಹಳಷ್ಟಿವೆ. ಇವನ್ನು ಎಣಿಸುವಷ್ಟು ಶಕ್ತಿಯು ಯಾರಿಗೂ ಇಲ್ಲ, ಈ ಸಮಯದಲ್ಲಿ ಎಲ್ಲಾ ಧರ್ಮಗಳ ವೃಕ್ಷವು ವೃದ್ಧಿಯನ್ನು ಪಡೆದಿದೆ. ಇದು ಬೇಹದ್ದಿನ ದೊಡ್ಡ ವೃಕ್ಷವಾಗಿದೆ ಮತ್ತೆ ಇವೆಲ್ಲಾ ಧರ್ಮಗಳು ಕೊನೆಯಲ್ಲಿಯೂ ಇರುವುದಿಲ್ಲ. ಈಗ ಇಡೀ ವೃಕ್ಷವು ಹೆಮ್ಮರವಾಗಿ ನಿಂತಿವೆ ಬಾಕಿ ತಳಹದಿಯೇ ಇಲ್ಲ. ಇದಕ್ಕೆ ಆಲದ ಮರದ ಉದಾಹರಣೆಯು ಬಹಳ ನಿಖರವಾಗಿದೆ, ಇದೊಂದೇ ಅದ್ಭುತವಾದ ವೃಕ್ಷವಾಗಿದೆ. ತಂದೆಯು ತಿಳಿಸಿಕೊಡಲು ನಾಟಕದಲ್ಲಿ ಈ ದೃಷ್ಟಾಂತವನ್ನಿಟ್ಟಿದ್ದಾರೆ, ಇದಕ್ಕೆ ತಳಹದಿಯೇ ಇಲ್ಲ ಅಂದಾಗ ಇದು ತಿಳಿದುಕೊಳ್ಳುವ ಮಾತಾಗಿದೆ. ತಂದೆಯು ನಿಮ್ಮನ್ನು ಎಷ್ಟು ಬುದ್ಧಿವಂತರನ್ನಾಗಿ ಮಾಡಿದ್ದಾರೆ. ಈಗ ದೇವಿ-ದೇವತಾ ಧರ್ಮದ ತಳಹದಿಯು ಇಲ್ಲವೇ ಇಲ್ಲ. ಹಿಟ್ಟಿನಲ್ಲಿ ಉಪ್ಪಿನಷ್ಟು ಸಾಕ್ಷಿಗಳಿವೆ ಅಂದಾಗ ಮಕ್ಕಳ ಬುದ್ಧಿಯಲ್ಲಿ ಇದೆಲ್ಲಾ ಜ್ಞಾನವು ಬರಬೇಕು. ತಂದೆಯ ಬುದ್ಧಿಯಲ್ಲಿಯೂ ಜ್ಞಾನವಿದೆಯಲ್ಲವೆ! ನಿಮಗೂ ಸಹ ಪೂರ್ಣಜ್ಞಾನವನ್ನು ಕೊಟ್ಟು ತಮ್ಮ ಸಮಾನರನ್ನಾಗಿ ಮಾಡುತ್ತಿದ್ದಾರೆ. ತಂದೆಯು ಬೀಜರೂಪನಾಗಿದ್ದಾರೆ ಮತ್ತು ಇದು ತಲೆಕೆಳಕಾದ ವೃಕ್ಷವಾಗಿದೆ. ಇದು ಬಹಳ ಬೇಹದ್ದಿನ ನಾಟಕವಾಗಿದೆ. ಈಗ ನಿಮ್ಮ ಬುದ್ಧಿಯು ಮೇಲೆ ಹೊರಟುಹೋಗಿದೆ. ನೀವು ತಂದೆ ಮತ್ತು ರಚನೆಯನ್ನು ಅರಿತುಕೊಂಡಿದ್ದೀರಿ. ಋಷಿ-ಮುನಿಗಳು ಹೇಗೆ ಅರಿತುಕೊಳ್ಳುವರೆಂದು ಭಲೆ ಶಾಸ್ತ್ರಗಳಲ್ಲಿದೆ. ಒಬ್ಬರು ಅರಿತುಕೊಂಡಿದ್ದರೂ ಸಹ ಪರಂಪರೆಯಿಂದ ನಡೆಯುತ್ತಿತ್ತು ಆದರೆ ಅವಶ್ಯಕತೆಯೇ ಇಲ್ಲ. ಯಾವಾಗ ಸದ್ಗತಿಯಾಗಿಬಿಡುತ್ತದೆಯೆಂದರೆ ಮಧ್ಯದಲ್ಲಿಯೇ ಯಾರೂ ಸಹ ಹಿಂತಿರುಗಿ ಹೋಗಲು ಸಾಧ್ಯವಿಲ್ಲ. ನಾಟಕವು ಮುಕ್ತಾಯವಾಗುವವರೆಗೆ, ತಂದೆಯು ಇಲ್ಲಿರುವವರೆಗೆ ಎಲ್ಲಾ ಪಾತ್ರಧಾರಿಗಳು ಇಲ್ಲಿರಬೇಕು. ಯಾವಾಗ ಪರಮಧಾಮದಲ್ಲಿ ಎಲ್ಲಾ ಆತ್ಮಗಳು ಖಾಲಿಯಾಗಿಬಿಡುವರೋ ಆಗ ಶಿವನ ಮೆರವಣಿಗೆಯೂ ಹೋಗುವುದು. ಅದಕ್ಕೆ ಮುಂಚೆಯೇ ಹೋಗಿ ಕುಳಿತುಕೊಳ್ಳುವುದಿಲ್ಲ ಅಂದಾಗ ತಂದೆಯು ಪೂರ್ಣಜ್ಞಾನವನ್ನು ಕೊಡುತ್ತಾರೆ - ಈ ಸೃಷ್ಟಿಯ ಚಕ್ರವು ಹೇಗೆ ಪುನರಾವರ್ತನೆಯಾಗುತ್ತದೆ. ಸತ್ಯಯುಗ, ತ್ರೇತಾ, ದ್ವಾಪರ, ಕಲಿಯುಗ........ ನಂತರ ಸಂಗಮವಾಗುತ್ತದೆ. ಗಾಯನವಿದೆ ಆದರೆ ಯಾವಾಗ ಸಂಗಮಯುಗವಾಗುತ್ತದೆ ಎಂಬುದು ಯಾರಿಗೂ ತಿಳಿದಿಲ್ಲ.

ನೀವು ಮಕ್ಕಳು ಅರಿತಿದ್ದೀರಿ - ನಾಲ್ಕುಯುಗಗಳಿವೆ, ಇದು ಅತೀ ಚಿಕ್ಕದಾದ ಯುಗವಾಗಿದೆ ಅದಕ್ಕೆ ಸಂಗಮವೆಂದು ಹೇಳಲಾಗುತ್ತದೆ. ಕೃಷ್ಣನನ್ನೂ ಸಹ ನಡುವೆ ತೋರಿಸುತ್ತಾರೆ ಅಂದಾಗ ಇದು ಜ್ಞಾನವಾಗಿದೆ. ಈ ಜ್ಞಾನವನ್ನು ತಲೆಕೆಳಗು ಮಾಡಿ ಭಕ್ತಿಯಲ್ಲಿ ಏನು ಮಾಡಿಬಿಟ್ಟಿದ್ದಾರೆ! ಜ್ಞಾನದ ಸೂತ್ರವೇ ಗಂಟುಬಿದ್ದಿದೆ, ಅದನ್ನು ತಿಳಿಸುವವರು ಒಬ್ಬರೇ ತಂದೆಯಾಗಿದ್ದಾರೆ. ಪ್ರಾಚೀನ ರಾಜಯೋಗವನ್ನು ಕಲಿಯಲು ವಿದೇಶಕ್ಕೆ ಹೋಗುತ್ತಾರೆ ಆದರೆ ಅದಂತೂ ಈ ರಾಜಯೋಗವೇ ಆಗಿದೆಯಲ್ಲವೆ. ಪ್ರಾಚೀನ ಎಂದರೆ ಮೊಟ್ಟಮೊದಲಿನದು. ಸಹಜ ರಾಜಯೋಗವನ್ನು ಕಲಿಸಲು ತಂದೆಯು ಬಂದಿದ್ದಾರೆ. ಎಷ್ಟೊಂದು ಗಮನವಿರುತ್ತದೆ. ಸ್ವರ್ಗ ಸ್ಥಾಪನೆಯಾಗಲಿ ಎಂದು ನೀವೂ ಸಹ ಬಹಳಷ್ಟು ಗಮನವಿಡುತ್ತೀರಿ, ಆತ್ಮಕ್ಕೆ ನೆನಪಂತೂ ಬರುತ್ತದೆಯಲ್ಲವೆ. ತಂದೆಯು ತಿಳಿಸುತ್ತಾರೆ - ಈಗ ನಾನು ನಿಮಗೆ ಯಾವ ಜ್ಞಾನವನ್ನು ಕೊಡುತ್ತೇನೆಯೋ ನಂತರವೂ ಸಹ ನಾನೇ ಬಂದು ಕೊಡುತ್ತೇನೆ. ಇದು ಹೊಸ ಪ್ರಪಂಚಕ್ಕಾಗಿ ಹೊಸ ಜ್ಞಾನವಾಗಿದೆ. ಈ ಜ್ಞಾನವು ಬುದ್ಧಿಯಲ್ಲಿದ್ದರೂ ಬಹಳ ಖುಷಿಯಾಗುತ್ತದೆ. ಇನ್ನು ಸ್ವಲ್ಪವೇ ಸಮಯವಿದೆ, ಈಗ ಹೋಗಬೇಕಾಗಿದೆ. ಒಂದುಕಡೆ ಖುಷಿಯಾಗುತ್ತದೆ, ಇನ್ನೊಂದುಕಡೆ ನೋವಾಗುತ್ತದೆ. ಅರೆ! ಇಂತಹ ಮಧುರ ತಂದೆಯನ್ನು ನಾವು ಮತ್ತೆ ಕಲ್ಪದ ನಂತರವೇ ನೋಡುತ್ತೇವೆ. ತಂದೆಯೇ ಮಕ್ಕಳಿಗೆ ಇಷ್ಟೊಂದು ಸುಖ ಕೊಡುತ್ತಾರಲ್ಲವೆ. ತಂದೆಯು ಬರುವುದೇ ಶಾಂತಿಧಾಮ, ಸುಖಧಾಮದಲ್ಲಿ ಕರೆದುಕೊಂಡು ಹೋಗಲು. ನೀವು ಶಾಂತಿಧಾಮ, ಸುಖಧಾಮವನ್ನು ನೆನಪು ಮಾಡಿದರೆ ತಂದೆಯೂ ನೆನಪಿಗೆ ಬರುವರು. ಈ ದುಃಖಧಾಮವನ್ನು ಮರೆತುಹೋಗಿ, ಬೇಹದ್ದಿನ ತಂದೆಯು ಬೇಹದ್ದಿನ ಮಾತನ್ನು ತಿಳಿಸುತ್ತಾರೆ. ಹಳೆಯ ಪ್ರಪಂಚದಿಂದ ನಿಮ್ಮ ಮಮತ್ವವು ಹೊರಟು ಹೋದಂತೆ ಖುಷಿಯೂ ಆಗುವುದು. ಅದಕ್ಕೆ ಪ್ರತಿಯಾಗಿ ನೀವು ಸುಖಧಾಮದಲ್ಲಿ ಹೋಗುತ್ತೀರಿ, ಸತೋಪ್ರಧಾನರಾಗುತ್ತಾ ಹೋಗುತ್ತೀರಿ. ಕಲ್ಪ-ಕಲ್ಪವೂ ಯಾರಾಗಿದ್ದರೋ ಅವರೇ ಆಗುತ್ತಾರೆ. ಮತ್ತು ಅವರಿಗೇ ಖುಷಿಯಾಗುತ್ತದೆ. ನಂತರ ಈ ಹಳೆಯ ಶರೀರವನ್ನು ಬಿಟ್ಟುಹೋಗುತ್ತಾರೆ ಮತ್ತೆ ಹೊಸ ಶರೀರವನ್ನು ತೆಗೆದುಕೊಂಡು ಹೊಸ ಪ್ರಪಂಚದಲ್ಲಿ ಬರುತ್ತಾರೆ. ಈ ಜ್ಞಾನವು ಸಮಾಪ್ತಿಯಾಗಿಬಿಡುತ್ತದೆ, ಬಹಳ ಸಹಜ ಮಾತುಗಳಾಗಿವೆ. ರಾತ್ರಿ ಮಲಗುವ ಸಮಯದಲ್ಲಿ ಈ ಮಾತುಗಳನ್ನು ಸ್ಮರಣೆ ಮಾಡಿದರೂ ಸಹ ಬಹಳ ಖುಷಿಯಿರುವುದು. ನಾವು ಈ ರೀತಿ ಆಗುತ್ತಿದ್ದೇವೆ, ಇಡೀ ದಿನದಲ್ಲಿ ನಾವು ಯಾವುದೇ ತಪ್ಪು ಮಾಡಲಿಲ್ಲವೆ? 5 ವಿಕಾರಗಳಲ್ಲಿ ಯಾವುದೇ ವಿಕಾರವು ನಮ್ಮನ್ನು ಸತಾಯಿಸಲಿಲ್ಲವೇ? ಲೋಭವು ಬರಲಿಲ್ಲವೇ? ಎಂದು ತಮ್ಮ ಪರಿಶೀಲನೆ ಮಾಡಿಕೊಳ್ಳಬೇಕು. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ನಮಸ್ತೆ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಯೋಗಬಲದಿಂದ ಅಪಾರ ಸುಖದ ಪ್ರಪಂಚವನ್ನು ಸ್ಥಾಪನೆ ಮಾಡಬೇಕಾಗಿದೆ. ಈ ದುಃಖದ ಪ್ರಪಂಚವನ್ನು ಮರೆಯಬೇಕಾಗಿದೆ. ಖುಷಿಯಿರಲಿ - ನಾವು ಸತ್ಯಖಂಡದ ಮಾಲೀಕರಾಗುತ್ತಿದ್ದೇವೆ.

2. ಪ್ರತಿನಿತ್ಯವೂ ತಮ್ಮ ಪರಿಶೀಲನೆ ಮಾಡಿಕೊಳ್ಳಬೇಕು - ಇಡೀ ದಿನದಲ್ಲಿ ಯಾವುದೇ ವಿಕಾರವು ಸತಾಯಿಸಲಿಲ್ಲವೆ? ಯಾವುದೇ ಕೆಟ್ಟಕೆಲಸವನ್ನಂತೂ ಮಾಡಲಿಲ್ಲವೇ? ಲೋಭಕ್ಕೆ ವಶವಾಗಲಿಲ್ಲವೇ?

ವರದಾನ:
ವರದಾತನ ಮುಖಾಂತರ ಸರ್ವ ಶ್ರೇಷ್ಠ ಸಂಪತ್ತಿಯ ಪ್ರಾಪ್ತಿ ಮಾಡಿಕೊಳ್ಳುವಂತಹ ಸಂಪತ್ತಿವಾನ್ ಭವ

ಯಾರ ಬಳಿಯಾದರೂ ಒಂದುವೇಳೆ ಸ್ಥೂಲ ಸಂಪತ್ತು ಇದ್ದರೂ ಸಹಾ ಸದಾ ಸಂತುಷ್ಠರಾಗಿ ಇರುವುದು ಸಾಧ್ಯವಿಲ್ಲ. ಸ್ಥೂಲ ಸಂಪತ್ತಿನ ಜೊತೆ ಒಂದುವೇಳೆ ಸರ್ವ ಗುಣಗಳ ಸಂಪತ್ತು, ಸರ್ವ ಶಕ್ತಿಗಳ ಸಂಪತ್ತು ಮತ್ತು ಜ್ಞಾನದ ಶ್ರೇಷ್ಠ ಸಂಪತ್ತು ಇಲ್ಲದೇ ಹೋದರೆ ಸಂತುಷ್ಠತೆ ಸದಾ ಇರಲು ಸಾಧ್ಯವಿಲ್ಲ. ನಿಮ್ಮಲ್ಲರ ಬಳಿಯಂತೂ ಈ ಎಲ್ಲಾ ಶ್ರೇಷ್ಠ ಸಂಪತ್ತುಗಳಿವೆ. ಪ್ರಪಂಚದವರು ಕೇವಲ ಸ್ಥೂಲ ಸಂಪತ್ತುಳ್ಳವರನ್ನು ಸಂಪತ್ತಿವಾನ್ ಎಂದು ತಿಳಿಯುತ್ತಾರೆ ಆದರೆ ವರದಾತಾ ತಂದೆಯ ಮೂಲಕ ನೀವು ಮಕ್ಕಳಿಗೆ ಸರ್ವ ಶ್ರೇಷ್ಠ ಸಂಪತ್ತಿವಾನ್ ಭವದ ವರದಾನ ಸಿಕ್ಕಿದೆ.

ಸ್ಲೋಗನ್:
ಸತ್ಯ ಸಾಧನೆಯ ಮೂಲಕ ಹಾಯ್-ಹಾಯ್ ಅನ್ನು ವ್ಹಾ-ವ್ಹಾ ಎನ್ನುವಲ್ಲಿ ಪರಿವರ್ತನೆ ಮಾಡಿ.